Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಮಂಗಳೂರು : ಯುವವೈದ್ಯ ಸಮುದ್ರಪಾಲು
– ಬೆಳ್ತಂಗಡಿ : ಕಾರು-ಬೈಕ್ ನಡುವೆ ಅಪಘಾತ ಸವಾರನ ಮೃತ್ಯು
– ಮಂಗಳೂರು : ಯುವಕನಿಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು..!!
– ಉಡುಪಿ: ಶ್ರೀಕೃಷ್ಣ ಮಠಕ್ಕೆ ನಟ ರಿಷಬ್ ಶೆಟ್ಟಿ ಬೇಟಿ
– ಮಂಗಳೂರು: ಡ್ರಗ್ಸ್ ಜಾಲದ ಕಿಂಗ್ ಪಿನ್ ನೈಜೀರಿಯಾ ಮೂಲದ ಯುವತಿ ಅರೆಸ್ಟ್.

ಮಂಗಳೂರು: ಉಳ್ಳಾಲ ಸೋಮೇಶ್ವರದ ರುದ್ರಪಾದೆಗೆ ಸಮುದ್ರ ವಿಹಾರಕ್ಕೆ ಬಂದ ವೈದ್ಯ ಸಮುದ್ರಪಾಲು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತರಬೇತಿ ನಡೆಸುತ್ತಿರುವ ಡಾ. ಆಶೀಕ್ ಗೌಡ (30) ತನ್ನ ಐವರು ಸ್ನೇಹಿತರರೊಂದಿಗೆ ಭಾನುವಾರ ರಾತ್ರಿ ಉಳ್ಳಾಲ ಸೋಮೇಶ್ವರ ರುದ್ರಪಾದಕ್ಕೆ ಸಮುದ್ರವಿಹಾರ ಮಾಡಲು ಬಂದಿದ್ದರು.
ಈ ಸಮಯದಲ್ಲಿ ಜೊತೆಗಿದ್ದ ಡಾ.ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಬಿದ್ದಿದರು ಇವರ ರಕ್ಷಣೆಗೆ ಪ್ರಯತ್ನಿಸಿದ್ದ ಡಾ.ಆಶೀಶ್ ಗೌಡ ಕಾಲುಜಾರಿ ಸಮುದ್ರಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಆದರೆ ಕಲ್ಲುಗಳ ಆಸರೆ ಪಡೆದಿದ್ದ ಡಾ. ಪ್ರದೀಪ ಮೇಲೆ ಬಂದಿದ್ದಾರೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು-ಬೈಕ್ ನಡುವೆ ಅಪಘಾತ ಸವಾರನ ಮೃತ್ಯು

ಬೆಳ್ತಂಗಡಿ : ಇನೋವಾ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಸಿದೆ. ಅಪಘಾತದಲ್ಲಿ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ಕಾಪಿನಡ್ಕದಲ್ಲಿ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಈದು ಗ್ರಾಮದ ಸುಧೀರ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಅಳದಂಗಡಿ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಬೈಕ್‌ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರು ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಯುವಕನಿಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು..!!

ಮಂಗಳೂರು: ಆಟವಾಡಿ ಮನೆಗೆ ಹಿಂತಿರುಗುತ್ತಿದ್ದ ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ಭಾನುವಾರ ಸಂಜೆ ವರದಿಯಾಗಿದೆ. ಬಜ್ಜೆ ಕಳವಾರು ಶಾಂತಿಗುಡ್ಡೆ ನಿವಾಸಿ ಸಾನ್(23) ಗಾಯಗೊಂಡಿದ್ದು, . ಇರಿತದ ಪರಿಣಾಮ ಅಬ್ದುಲ್ ಸಫ್ಘಾನ್ ಕೈಗೆ, ಕುತ್ತಿಗೆಗೆ ಗಾಯಗಳಾಗಿವೆ. ಗಾಯಾಳುವನ್ನು ಬಜ್ಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಬಳಿ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಬ್ದುಲ್ ಸಫ್ಘಾನ್ ಗೆ ಚೂರಿ ಇರಿದ ಅಪರಾಧಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವಾರಿನ ಪ್ರಶಾಂತ್ @ ಪಚ್ಚು (28), ಧನರಾಜ್ (23), ಯಾಜ್ಞೆಶ್ (22) ಎಂದು ಗುರುತಿಸಲಾಗಿದೆ. ಅಬ್ದುಲ್ ಸಫ್ಘಾನ್ (23) ಚೂರಿ ಇರಿತಕ್ಕೊಳಗಾದವರು. ಆರೋಪಿಗಳೆಲ್ಲರೂ ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ ಈ ಹಲ್ಲೆಯನ್ನು ನಡೆಸಿದ್ದಾರೆ ಎನ್ನಲಾಗಿದ್ದು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಕೃಷ್ಣ ಮಠಕ್ಕೆ ನಟ ರಿಷಬ್ ಶೆಟ್ಟಿ ಬೇಟಿ

ಉಡುಪಿ: ಶ್ರೀಕೃಷ್ಣಮಠಕ್ಕೆ ಕಾಂತಾರ ಖ್ಯಾತಿಯ ಚಿತ್ರನಟರಾದ ರಿಷಬ್ ಶೆಟ್ಟಿ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ಡ್ರಗ್ಸ್ ಜಾಲದ ಕಿಂಗ್ ಪಿನ್ ನೈಜೀರಿಯಾ ಮೂಲದ ಯುವತಿ ಅರೆಸ್ಟ್.

ಮಂಗಳೂರು: ಡ್ರಗ್ಸ್ ಜಾಲದ ಕಿಂಗ್ ಪಿನ್ ನೈಜೀರಿಯಾ ಮೂಲದ ಮಹಿಳೆಯನ್ನು ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ . ಬಂಧಿತ ಮಹಿಳೆಯನ್ನು ನೈಜಿರಿಯಾ ಮೂಲದ ಅಡೆವೊಲೆ ಅಡೆಟುಡು ಆನು(33) ಎಂದು ಗುರುತಿಸಲಾಗಿದೆ. ಈಕೆಯನ್ನು ಬೆಂಗಳೂರಿನ ಯಲಹಂಕದ ಚೊಕ್ಕನ ಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ. ಇವಳೇ ಡ್ರಗ್ಸ್ ಜಾಲಕ್ಕೆ ಇವಳೇ ಕಿಂಗ್ ಪಿನ್ ಎಂದು ಎಲ್ಲ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ ಮಹಿಳೆಯ ಬೆಂಗಳೂರಿನ ಮನೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಲಾಗಿತ್ತು. ದಾಳಿ ವೇಳೆ 400 ಗ್ರಾಂ ತೂಕದ 20 ಲಕ್ಷ ರೂಪಾಯಿ ಮೌಲ್ಯದ MDMA ಮತ್ತು ನಗದು, ಐಫೋನ್ ಮೊಬೈಲ್ ಸೇರಿದಂತೆ ಒಟ್ಟು 20 ಲಕ್ಷ ಮೌಲ್ಯದ 52 ಸಾವಿರ ಮೌಲ್ಯದ ಸೊತ್ತುಗಳ ವಶಕ್ಕೆ ಪಡೆಯಲಾಗಿದೆ.

ಈ ಬಂಧಿತ ಮಹಿಳೆ ನೈಜೀರಿಯಾ ದೇಶದಿಂದ ವ್ಯಾಸಂಗ ವೀಸಾದಡಿ ಭಾರತಕ್ಕೆ ಬಂದಿದ್ದರು. ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ. ಬಳಿಕ ಈ 7 ದಂಧೆಗೆ ಇಳಿದಿದ್ದಾರೆ. ಇನ್ನು ಆರೋಪಿಯ ವಿರುದ್ಧ ಈಗಾಗಲೇ ಮಂಗಳೂರಿನಲ್ಲಿ ಒಟ್ಟು 7 ಪ್ರಕರಣ ದಾಖಲಾಗಿದೆ. ಇನ್ನು ಇದುವರೆಗೂ ಪೊಲೀಸರು ಬಂಧಿಸಿದ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಕೂಡ ಈಕೆಯಿಂದಲೇ ಮಾದಕ ವಸ್ತು ಖರೀದಿ ಮಾಡಿದ್ದರಂತೆ. ಸದ್ಯ ಆರೋಪಿ ಮಹಿಳೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Categories
ರಾಷ್ಟ್ರೀಯ ವಾರ್ತೆ

ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿ.!

ಉಚಿತ ಕೊಡುಗೆಗಳಿಂದ ದೇಶಕ್ಕೆ ಹಾನಿ.!
– ಸರ್ಕಾರದ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅಗತ್ಯ
– ಮತ್ತೆ ‘ಪ್ರಧಾನಿ ಮೋದಿ’ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆ

NAMMUR EXPRESS NEWS
ನವದೆಹಲಿ: ಸರ್ಕಾರದ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅತ್ಯಂತ ಅಗತ್ಯ, ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತಿನ ಬಗ್ಗೆ ಪ್ರಜ್ಞೆ ಹೊಂದಿರಬೇಕು. ಉಚಿತ ಯೋಜನೆಗಳು ತಾತ್ಕಾಲಿಕ ರಾಜಕೀಯ ಲಾಭ ತರಬಹುದು. ಆದರೇ ಉಚಿತ ಕೊಡುಗೆಗಳು ದೇಶಕ್ಕೆ ಹಾನಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನೇರವಾಗೇ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಬೇಜವಾಬ್ದಾರಿತದನ ಹಣಕಾಸು ನೀತಿಗಳು ಹಾಗೂ ಜನಪ್ರಿಯ ಕಾರ್ಯಕ್ರಮಗಳು ಅಲ್ಪಾವಧಿಯಲ್ಲಿ ರಾಜಕೀಯ ಲಾಭವನ್ನು ತಂದುಕೊಡಬಲ್ಲವು. ಆದರೇ ಇಂತಹ ಕೊಡುಗೆಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದಾಗಿ ಪರೋಕ್ಷವಾಗಿ ಉಚಿತ ಯೋಜನಗಳ ವಿರುದ್ಧ ಹರಿಹಾಯ್ದಿದ್ದಾರೆ.
ಜಾಗತಿಕ ಸಾಲದ ಬಿಕ್ಕಟ್ಟಿನ ಕುರಿತು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ವಿತ್ತೀಯ ಶಿಸ್ತಿನ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಸಾಲದ ಬಿಕ್ಕಟ್ಟು, ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಶೀಲ ದೇಶಗಳಿಗೆ ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಸಾಲದ ಬಿಕ್ಕಟ್ಟಿಗೆ ಸಿಲುಕಿರುವ, ಬಿಕ್ಕಟ್ಟು ಅನುಭವಿಸುತ್ತಿರುವ ದೇಶಗಳು ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

Categories
ಮಲ್ನಾಡ್

ಮಳೆ ಇಲ್ಲ: ಮತ್ತೆ ಹಳೆ ಸಂಪ್ರದಾಯಕ್ಕೆ ಮೊರೆ!

ಮಳೆ ಇಲ್ಲ: ಮತ್ತೆ ಹಳೆ ಸಂಪ್ರದಾಯಕ್ಕೆ ಮೊರೆ!
ಹಳೆ ಸಂಪ್ರದಾಯದಂತೆ ಮಳೆರಾಯನಿಗೆ 37 ವರ್ಷಗಳ ನಂತರ ಬೆಟ್ಟ ಹತ್ತಿ ವಿಶೇಷ ಪೂಜೆ
– ಮಲೆನಾಡಿನ ಮೇಲೆ ಮುನಿಸಿಕೊಂಡ ವರುಣದೇವ

NAMMUR EXPRESS NEWS – ಮಲೆನಾಡು : ಮಳೆಗಾಗಿ ಮಲೆನಾಡಿನ ಜನರು ಹಿಂದಿನ ಸಂಪ್ರದಾಯಕ್ಕೆ ಮಾರು ಹೋಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆಲವು ಗ್ರಾಮಗಳ ಜನತೆ ಹಿಂದಿನ ಸಂಪ್ರದಾಯ ಆಚರಣೆಗೆ ಮುಂದಾಗಿದ್ದಾರೆ. ನರಸಿಂಹರಾಜಪುರ ತಾಲೂಕಿನ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಗ್ರಾಮದ ಜನತೆ ಮಳೆಗಾಗಿ ಪ್ರಾರ್ಥಿಸಿ ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತುತ್ತಿದ್ದಾರೆ ಕಳೆದ 37 ವರ್ಷಗಳ ಹಿಂದೆ ಇದೇ ರೀತಿ ಮಳೆ ಅಭಾವ ಉಂಟಾಗಿತ್ತು. ಬರದ ಛಾಯೆ ಮೂಡಿತ್ತು ಇಂತಹ ವೇಳೆಯಲ್ಲಿ ಇಲ್ಲಿನ ಜನರು ಬೆಟ್ಟ ಹತ್ತಿ ದೇವರದಲ್ಲಿ ಪ್ರಾರ್ಥಿಸಿದ್ದರು. ಗಂಗೇಗಿರಿ ಬೆಟ್ಟ ಹತ್ತಿ ಅಲ್ಲಿ ಪೂಜೆ ಸಲ್ಲಿಸಿದರೇ ಮಳೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಗಿರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕಳಸದಲ್ಲಿ ಅಲ್ಲಿನ ನೀರು ತಂದು, ಪೂಜೆ ಮಾಡಬೇಕು.

9 ದಿನಗಳ ಕಾಲ ಮಡಿಯಿಂದ ಇದ್ದು ಪೂಜೆ ಮಾಡಬೇಕು ಎಂಬ ಪ್ರತೀತಿ ಇದ್ದು, ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಜನರು ಮಳೆಗಾಗಿ ಪ್ರಾರ್ಥಿಸಿ ಬೆಟ್ಟ ಏರುತ್ತಿದ್ದಾರೆ. ಈ ವರ್ಷ ಮಳೆ ಕೈಕೊಟ್ಟಿದೆ ಮಲೆನಾಡಿನಲ್ಲೇ ಮಳೆ ಕೊರತೆ ಉಂಟಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬಿತ್ತಿದ ಬೆಳೆ ಕೈ ಸೇರುತ್ತೋ ಇಲ್ಲವೋ ಎಂಬ ಆತಂಕ ಮನೆ ಮಾಡಿದ್ದು, ಹಿಂದಿನ ಸಂಪ್ರದಾಯಗಳ ಕಡೆ ಮುಖ ಮಾಡಿದ್ದಾರೆ.

Categories
ರಾಜ್ಯ ಶಿಕ್ಷಣ

ಗುರುಗಳಿಗೆ ಶಿಷ್ಯಂದಿರ ನಮನ.!

ಗುರುಗಳಿಗೆ ಶಿಷ್ಯಂದಿರ ನಮನ.!
– ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲು ಎಲ್ಲಾಕಡೆ ಸಿದ್ಧತೆ
– ಅಕ್ಷರ ಕಲಿಸಿದ ಗುರುಗಳಿಗೆ ವಂದನೆ

NAMMUR EXPRESS NEWS
ಗುರುವಿನ ಆಶಿರ್ವಾದದಿಂದ ಮಾತ್ರ ನಾವು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗಲು ಸಾಧ್ಯ. ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜದ ಸಮರ್ಥ ವ್ಯಕ್ತಿನ್ನಾಗಿ ರೂಪಿಸುವವರು ಶಿಕ್ಷಕರು. ನಮ್ಮ ಉಜ್ವಲ ಭವಿಷ್ಯವನ್ನು ರೂಪಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ನಮ್ಮ ಜೀವನದಲ್ಲಿ ಗುರುವಿಗೆ ಬಹಳ ಮಹತ್ವವಿದೆ. ಗುರುವಿಲ್ಲದೆ ಜ್ಞಾನವನ್ನು ಪಡೆಯುವುದು ಅಸಾಧ್ಯ. ಗುರುವಿನ ಆಶೀರ್ವಾದದಿಂದ ನಾವು ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತೇವೆ. ಗುರುಗಳಿಂದ ಪಡೆದ ಜ್ಞಾನ ಮತ್ತು ಮಾರ್ಗದರ್ಶನದಿಂದ ಮಾತ್ರ ನಾವು ಯಶಸ್ಸಿನ ಶಿಖರವನ್ನು ತಲುಪಬಹುದು. ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇಂತಹ ಅದ್ಭುತ ಶಿಕ್ಷಕರಲ್ಲಿ ಒಬ್ಬರಾದ, ಶ್ರೇಷ್ಠ ಶಿಕ್ಷಣ ತಜ್ಞ, ವಿದ್ವಾಂಸ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆಯು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಶಿಕ್ಷಕರನ್ನು ಗೌರವಿಸುವ ದಿನವಾಗಿದೆ.

ಶಿಕ್ಷಕರ ದಿನವನ್ನು ಏಕೆ ಆಚರಿಸಲಾಗುತ್ತದೆ:

ಶಿಕ್ಷಣ ತಜ್ಞರಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಶಿಕ್ಷಣ ನೀಡಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಿತ್ತುವುದರಲ್ಲಿ ಕಳೆದರು. ಶಿಕ್ಷಣಕ್ಕಾಗಿ ಅವರ ಮಹಾನ್ ಕೊಡುಗೆಯನ್ನು ಗೌರವಿಸಲು ಮತ್ತು ರಾಷ್ಟ್ರದ ಮಾರ್ಗದರ್ಶಕ ಶ್ರೇಣಿಯಲ್ಲಿ ನಿಂತಿರುವ ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲೆಯ ತರಗತಿ ಕೊಠಡಿಗಳನ್ನು ವಿಶೇಷವಾಗಿ ಅಲಂಕಾರ ಮಾಡಿ, ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಶಾಲೆಯ ಸಭಾಂಗಣವನ್ನು ಪರಿಸರ ಸ್ನೇಹಿತ ವಸ್ತ್ರಗಳಿಂದ ಅಲಂಕರಿಸಲು ಸಿದ್ಧತೆ ನಡೆಯುತ್ತಿದ್ದು, ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳು ಹಾಗೂ ಭರತನಾಟ್ಯ, ಮಿಮಿಕ್ರಿ, ಏಕವ್ಯಕ್ತಿ ನೃತ್ಯ ಸೇರಿದಂತೆ ಮೆಗಾ ಸಾಂಸ್ಕೃತಿಕ ಸಂಭ್ರಮ ನಡೆಸಲು ತಯಾರಿ ನಡೆಯುತ್ತಿದೆ.

Categories
ಚಿಕ್ಕಮಗಳೂರು

ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಎಂಪಿ ಟಿಕೆಟ್?!

ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಎಂಪಿ ಟಿಕೆಟ್?!
– ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅಭಿಮಾನಿಗಳ ಪಟ್ಟು
– ಬಿಜೆಪಿಯಲ್ಲಿ ಯಾರು…?… ನಾಲ್ವರ ಹೆಸರು
– ಜೆಡಿಎಸ್ ಇಂದ ಸುಧಾಕರ್ ಶೆಟ್ಟಿ ಮತ್ತೆ ಬರ್ತಾರಾ?

NAMMUR EXPRESS NEWS
ಉಡುಪಿ/ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಇದೀಗ ಚುನಾವಣೆ ರಾಜಕೀಯ ಜೋರಾಗಿದೆ. ಇದೀಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕುತೂಹಲ ಮೂಡಿಸಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಈ ಸಾರಿ ಯುವ ಅಭ್ಯರ್ಥಿ ಹಾಗೂ ಉತ್ತಮ ಅಭ್ಯರ್ಥಿ ಆಯ್ಕೆಗೆ ಹೈಕಮಾಂಡ್ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಖ್ಯಾತ ವಕೀಲ, ನ್ಯಾಯವಾದಿ, ವಾಗ್ಮಿ ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸಫಲರಾಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಇವರಿಗೆ ಚಿಕ್ಕಮಗಳೂರು, ಉಡುಪಿ ಭಾಗದ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಹಾಗೂ ಪಕ್ಷದವರ ಒತ್ತಡ ಹೆಚ್ಚಾಗಿದೆ. ಇನ್ನು ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಸುಧೀರ್ ಕುಮಾರ್ ಮುರೊಳ್ಳಿ ಅವರ ಹೆಸರು ಮುಂಚೂಣಿಯಲ್ಲಿದ್ದು ಎಸಿಸಿ ಮುಖಂಡರಾದ ಸಂದೀಪ್ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಇನ್ನು ಜಯಪ್ರಕಾಶ್ ಹೆಗ್ಡೆ ಅವರನ್ನು ಮನವೊಲಿಸುವ ಕೆಲಸ ಕೂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಅಖಾಡ ಸಜ್ಜುಗೊಳ್ಳುತ್ತಿದೆ.

ಬಿಜೆಪಿಯಲ್ಲಿ ಯಾರು?..ನಾಲ್ವರ ನಡುವೆ ಸ್ಪರ್ಧೆ!

ಉಡುಪಿ, ಚಿಕ್ಕಮಗಳೂರು ಪ್ರಸ್ತುತ ಸಂಸದೆ ಶೋಭಾ ಕರಂದ್ಲಾಜೆ ಕೃಷಿ ಸಚಿವರಾಗಿಯು ಕೆಲಸ ಮಾಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಹೆಚ್ಚಿನ ಸಂಪರ್ಕ ಇಲ್ಲದಿರುವುದು ಅವರಿಗೆ ನೆಗೆಟಿವ್ ಆಗಿದೆ. ಇನ್ನು ಹೊಸ ಅಭ್ಯರ್ಥಿಯನ್ನು ಬಿಜೆಪಿ ಹುಡುಕುತ್ತಿದ್ದು ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೆಸರು ಮುನ್ನೆಲೆಗೆ ಬಂದಿದೆ. ಉಡುಪಿಯ ಪ್ರಮೋದ್ ಮದ್ವರಾಜ್ ಕೂಡ ನಾನು ಟಿಕೆಟ್ ಸ್ಪರ್ಧೆಯಲ್ಲಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆ ಕೂಡ ಸಾಧ್ಯತೆ ಇದೆ.

ಜೆಡಿಎಸ್ ಸುಧಾಕರ್ ಶೆಟ್ಟಿ ಮತ್ತೆ ಬರ್ತಾರಾ?

ಜೆಡಿಎಸ್ ಪಕ್ಷ ಈ ಚುನಾವಣೆಯಲ್ಲಿ ಮೈತ್ರಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಮೈತ್ರಿ ಆಗದಿದ್ದಲ್ಲಿ ಶೃಂಗೇರಿ ವಿಧಾನ ಸಭೆಯಲ್ಲಿ ಕೆಲವೇ ದಿನದಲ್ಲಿ ಒಳ್ಳೆಯ ಹೆಸರು ಮಾಡಿ ಮೋಡಿ ಮಾಡಿರುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಸ್ಪರ್ಧೆ ಮಾಡುವ ಬಗ್ಗೆ ಈ ಹಿಂದೆ ಹೇಳಿದ್ದರು.

Categories
ಹೊಸನಗರ

ಹೊಸನಗರ, ಸಾಗರದ ಇಬ್ಬರು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ!

ಹೊಸನಗರ, ಸಾಗರದ ಇಬ್ಬರು ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ!
– ಹೊಸನಗರ ಮಾದಾಪುರ ಶಾಲೆಯ ಫೌಜಿಯಾ ಸರವತ್, ಸಾಗರದ ತ್ಯಾಗರ್ತಿ ಹೈಸ್ಕೂಲಿನ ವಿಜಯಾನಂದ ರಾವ್​ ಅವರಿಗೆ ಪ್ರಶಸ್ತಿ

NAMMUR EXPRESS NEWS
ಹೊಸನಗರ/ಸಾಗರ: ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಈ ಸಲದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಸಾಗರ ತಾಲೂಕು ತ್ಯಾಗರ್ತಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯಾನಂದ ರಾವ್ ಮತ್ತು ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಫೌಜಿಯಾ ಸರವತ್ ಲಭಿಸಿದೆ. ಸೆಪ್ಟೆಂಬರ್​ 5 ರಂದು ಶಿಕ್ಷಕರ ದಿನಾಚರಣೆ ಹಿನ್ನೆಯಲ್ಲಿಈ ಪ್ರಶಸ್ತಿ ನೀಡಲಾಗುತ್ತದೆ.

ವಿಜ್ಞಾನ ಮಾಷ್ಟ್ರು ವಿಜಯಾನಂದ ಸಾಧನೆ

ವಿಜಯಾನಂದ ರಾವ್ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕೆಲಸ ಮಾಡಿದವರು. ಅಲ್ಲಿಂದ ಹೊಸನಗರ ತಾಲೂಕಿನ ಕಾರಣಗಿರಿಗೆ ಬಂದು 8 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ತ್ಯಾಗರ್ತಿಯಲ್ಲಿ ಕಳೆದ 12 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ವಿಜೂಸ್ ಕ್ಲಾಸಸ್ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಅದರ ಮೂಲಕ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಮೇಲಾಗಿ ಯೂಟ್ಯೂಬ್ ಚಾನಲ್ ಮೂಲಕ ಆಧುನಿಕ ವಿಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ತರಬೇತಿ ಕ್ಲಾಸ್ ತೆಗೆದುಕೊಂಡಿದ್ಧಾರೆ.

ಫೌಜಿಯಾ ಮಕ್ಕಳ ಮೆಚ್ಚಿನ ಟೀಚರ್!

ಹೊಸನಗರ ತಾಲೂಕು ಅರಸಾಳು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಮುಸ್ಲಿಂ ಯುವತಿ ಫೌಜಿಯ ಸರವತ್​ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ಯಾರಜಾನ್ ಹಾಗೂ ಕೌಸರ್ ಫಾತಿಮಾ ದಂಪತಿಗಳ ಪುತ್ರಿ ಪೌಜಿಯ 2007 ರಿಂದ 2016 ರ ವರೆಗೂ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೇಲುಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

2016ರಿಂದ 2022 ರ ವರೆಗೂ ತೀರ್ಥಹಳ್ಳಿ ತಾಲೂಕು ಕಲ್ಲು ಗುಡ್ಡ ಪ್ರಾಥಮಿಕ ಶಾಲೆಯಲ್ಲಿ ಹಾಗೂ 2022 ರಿಂದ ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೌಜಿಯಾ ಸರವತ್ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್ ಮೂಲಕ ಹಲವು ಕಾರ್ಯಕ್ರಮ ನೀಡಿದ್ದಾರೆ. ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ, ಶಾಲೆಗೆ ಅನೇಕ ಸಾಮಗ್ರಿ ಕೊಡಿಸಿದ್ದಾರೆ. ಯೂಟ್ಯೂಬ್ ಚಾನಲ್ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Categories
ತೀರ್ಥಹಳ್ಳಿ

ವಿಶ್ವದ ಸುಂದರ ತಾಣ ಆಗುಂಬೆ ಕೊಳಕು, ಕಸ!

ವಿಶ್ವದ ಸುಂದರ ತಾಣ ಆಗುಂಬೆ ಕೊಳಕು, ಕಸ!
– ಎಲ್ಲಿ ನೋಡಿದರೂ ಕಸ, ಎಲ್ಲಿ ನೋಡಿದರೂ ಹಾಳು ಬಿದ್ದ ಕಟ್ಟಡಗಳು
– ಜಿಲ್ಲಾಡಳಿತ, ತಾಲೂಕು ಆಡಳಿತ, ಪ್ರವಾಸೋದ್ಯಮ ಇಲಾಖೆಗೆ ಕಣ್ಣಿಲ್ಲವೇ…?!

NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಎಂದಾಕ್ಷಣ ಒಮ್ಮೆ ಮೈ ರೋಮಾಂಚನಗೊಳ್ಳುತ್ತದೆ. ವಿಶ್ವದ ಪ್ರಸಿದ್ಧ ಸೌಂದರ್ಯ ತಾಣಗಳಲ್ಲಿ ಆಗುಂಬೆಯು ಒಂದು. ಇಲ್ಲಿನ ವೈವಿಧ್ಯಮಯ ಪರಿಸರ, ನಿಸರ್ಗ, ಸೂರ್ಯಾಸ್ತಮಾನ, ಸೂರ್ಯನ ಉದಯ, ಕಾಡು ಮೇಡು, ಇಲ್ಲಿನ ಮಳೆ ಎಲ್ಲರಿಗೂ ಇಷ್ಟವಾಗುವಂತದ್ದು. ಆದರೆ ಇಲ್ಲಿನ ಪರಿಸರ ಇತ್ತೀಚೆಗೆ ಕೊಳಕಾಗಿರುವುದು ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಲಕ್ಷ ಹಾಗೂ ತಾಲೂಕು ಆಡಳಿತ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ. ಕರಾವಳಿ ಹಾಗೂ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ರಾಜ್ಯ ಹಾಗೂ ದೇಶದಲ್ಲೇ ಪ್ರಸಿದ್ಧಿ, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಕರಾವಳಿಗೆ ಬರುವ ಪ್ರಯಾಣಿಕರು ಕೂಡ ವಾಹನಗಳು ಹಾಗೂ ಬಸ್ಗಳಲ್ಲಿ ಸಾಗುತ್ತಾರೆ. ಆದರೆ ಇಲ್ಲಿಯ ವಾತಾವರಣ ಅಸಹ್ಯ ಹುಟ್ಟಿಸುವಂತಿದೆ.

ಹಾಳು ಬಿದ್ದ ಕಟ್ಟಡಗಳ ಸ್ವಾಗತ!

ಆಗುಂಬೆ ಪಟ್ಟಣಕ್ಕೆ ಎಂಟ್ರಿ ಆಗುತ್ತಿದ್ದಂತೆ ಬಿದ್ದ ಕಟ್ಟಡಗಳು, ಮುರಿದು ಬಿದ್ದ ಪೊಲೀಸ್ ಠಾಣೆ, ಜೊತೆಗೆ ಕಪ್ಪುಮಸುಕಾಗಿರುವ ಬೋರ್ಡ್ ಗಳು ಕಾಣಸಿಗುತ್ತವೆ. ಆದರೆ ಇದನ್ನು ಸ್ವಚ್ಛಪಡಿಸುವಲ್ಲಿ ಒಂದು ಸುಂದರವಾದ ತಾಣವನ್ನು ಮಾಡುವಲ್ಲಿ ಸ್ಥಳೀಯ ಆಗುಂಬೆ ಗ್ರಾಮ ಪಂಚಾಯಿತಿ, ತೀರ್ಥಹಳ್ಳಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಕಳೆದ 5 ವರ್ಷಗಳಿಂದಲೂ ನಮ್ಮೂರ್ ಎಕ್ಸ್ ಪ್ರೆಸ್ ಹಲವು ಬಾರಿ ವಿಶೇಷ ವರದಿ ಮಾಡಿದೆ. ಆದರೆ ಇದು ಅಧಿಕಾರಿಗಳ ನಿರ್ಲಕ್ಷ ಜನಪ್ರತಿನಿಧಿಗಳ ಜಡ್ಡುತನಕ್ಕೆ ಸಾಕ್ಷಿಯಾಗಿದೆ.

ಕ್ಲೀನ್ ಆಗುಂಬೆ ಆಗುವುದು ಯಾವಾಗ?

ಆಗುಂಬೆ ತೀರ್ಥಹಳ್ಳಿಯ ಪ್ರಸಿದ್ಧ ಪ್ರವಾಸೋದ್ಯಮ ಕ್ಷೇತ್ರ ಇಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂ ವಹಿವಾಟು ನಡೆಯುತ್ತದೆ. ಜೊತೆಗೆ ತೀರ್ಥಹಳ್ಳಿಯ ಹೆಮ್ಮೆ ಕೂಡ ಆದರೆ ಇದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಲ್ಲಿ ಆಡಳಿತ ವಿಫಲವಾಗಿರುವುದು ಅನೇಕರ ಕೋಪಕ್ಕೆ ಗುರಿಯಾಗಿದೆ. ಇಲ್ಲಿಯ ಪ್ರವಾಸಿಗರು ಹಾಗೂ ಕೆಲ ಸ್ಥಳೀಯರು ಈ ಬಗ್ಗೆ ನಮ್ಮೂರ ಎಕ್ಸ್ಪ್ರೆಸ್ ಗೆ ದೂರು ನೀಡಿದ್ದು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಅಲ್ಲದೆ ಅನೇಕ ಸೇವಾ ಸಂಸ್ಥೆಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು ಈ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರೂ ತಾಲೂಕು ಆಡಳಿತ, ಸ್ಥಳೀಯ ಆಡಳಿತದ ನಿರ್ಲಕ್ಷ ಮತ್ತೆ-ಮತ್ತೆ ಇಲ್ಲಿ ಕಾಣುತ್ತದೆ.

ಹಳೆ ಪೊಲೀಸ್ ಠಾಣೆ ಆಗುಂಬೆಗೆ ಕಳಂಕ!

ಆಗುಂಬೆಯಲ್ಲಿರುವ ಹಳೆ ಪೊಲೀಸ್ ಠಾಣೆ ರಸ್ತೆಗೆ ಎದುರಾಗಿದೆ. ಯಾವುದೇ ಪ್ರಯಾಣಿಕ ಪ್ರವಾಸಿಗ ಬಂದರೆ ಅದೇ ಕಟ್ಟಡ ಎದುರಾಗುತ್ತದೆ, ಅಲ್ಲಿರುವ ಹಂಚಿನ ಕಟ್ಟಡ ಬಿದ್ದು ಹಳೆಯ ಜಾಗದಂತೆ ಭಾಸವಾಗುತ್ತಿದೆ. ಇದರಿಂದಾಗಿ ಆಗುಂಬೆ ಸೌಂದರ್ಯಕ್ಕೆ ಕುಂದುಂಟಾಗಿದೆ, ಹೀಗಾಗಿ ತಕ್ಷಣ ಇಲ್ಲಿಯ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಿ ಇಲ್ಲವೇ ಹಳೆ ವಸ್ತುಗಳು, ಆಗುಂಬೆ ಪರಿಸರವನ್ನು ಪರಿಚಯಿಸುವ ಕಲಾ ಕೇಂದ್ರವನ್ನಾಗಿ ಮಾಡಬೇಕೆನ್ನುವುದು ಕಲಾ ರಸಿಕರ ಒತ್ತಾಯವಾಗಿದೆ. ತಕ್ಷಣ ಈ ಬಗ್ಗೆ ಆಡಳಿತಗಳು ಸರಿಪಡಿಸಬೇಕು ಶಾಸಕರು ಈ ಬಗ್ಗೆ ಗಮನಿಸಬೇಕು ಎಂಬ ಒತ್ತಾಯ ಪ್ರವಾಸಿಗರಿಂದ ಹಾಗೂ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.

Categories
ಮಾಹಿತಿ

ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬೇಕಾ?

-ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬೇಕಾ?
-ಕೆಳಗಡೆ ಲಿಂಕ್ ಕ್ಲಿಕ್ ಮಾಡಿ…

NAMMUR EXPRESS NEWS : ಈ ಮೂಲಕ ತಾಲ್ಲೂಕಿನ ಪಡಿತರ ಚೀಟಿದಾರರಿಗೆ ತಿಳಿಯಪಡಿಸುವುದೇನೆಂದರೆ,
1. ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ದಿನಾಂಕ: 01/09/2023 ಅಂದ 10/09/2023 ರವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಸರ್ಕಾರವು ಅವಕಾಶ ಕಲ್ಪಿಸಿರುತ್ತದೆ.
2, ಆದರಂತೆ, ಪಡಿತರ ಚೀಟಿಯಲ್ಲಿನ ಫಲಾನುಭವಿಗಳು ಮಾಹಿತಿಯ ತಿದ್ದುಪಡಿ ಹಾಗೂ
ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರ್ಪಡೆ ಮಾಡಲು
https://ahara.kar.nic.in ವೆಬ್‌ ಸೈಟ್‌ನಲ್ಲಿ ಅವಕಾಶ ಇರುತ್ತದೆ.

ಪಡಿತರ ಚೀಟಿದಾರರು ತಾಲ್ಲೂಕಿನ ಗ್ರಾಮ ಒನ್, ಕರ್ನಾಟಕ ಒನ್‌ ಹಾಗೂ ನಾಗರೀಕ ಸೇವಾ ಕೇಂದ್ರ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಪಡಿತರ ಚೀಟಿ ತಿದ್ದುಪಡಿ ಮತ್ತು ಸೇರ್ಪಡೆ ಆನ್‌ ಲೈನ್‌ ಮುಖಾಂತರ ಸಕಾಲದಲ್ಲಿ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿರುತ್ತದೆ. ಮೇಲ್ಕಂಡಂತೆ ಸೌಲಭ್ಯವನ್ನು ನಿಗದಿತ ಸಮಯದೊಳಗಾಗಿ ಸದುಪಯೋಗಪಡಿಸಿ ಕೊಳ್ಳಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆ ನೀಡಿದೆ.

Categories
ಬೆಂಗಳೂರು

ಚಂದ್ರಯಾನ-3ರ ಕೌಂಟ್‌ಡೌನ್ ಧ್ವನಿ ಇನ್ನು ಕೇಳಲ್ಲ!

ಚಂದ್ರಯಾನ-3ರ ಕೌಂಟ್‌ಡೌನ್ ಧ್ವನಿ ಇನ್ನು ಕೇಳಲ್ಲ!
– ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ
– ಭಾರತದ ಚಂದ್ರಯಾನದ ಯಶಸ್ಸಿನಲ್ಲಿ ಇವರದೂ ಪಾಲಿತ್ತು!

NAMMUR EXPRESS NEWS
ಬೆಂಗಳೂರು: ಚಂದ್ರಯಾನ-3 ಉಪಗ್ರಹ ಉಡಾವಣೆಯ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀಹರಿಕೋಟಾದಿಂದ ಚಂದ್ರಯಾನ3 ಉಡಾವಣೆಗೂ ಮುನ್ನಿನ ಕೌಂಟ್ ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನರಾಗಿದ್ದಾರೆ. ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಶನಿವಾರ ಮೃತಪಟ್ಟಿದ್ದಾರೆ. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ವಲರ್ಮತಿ ಅವರು ಭಾಜನರಾಗಿದ್ದರು.

ಇಸ್ರೋ ಮಾಜಿ ನಿರ್ದೇಶಕ ಪಿ.ವಿ ವೆಂಕಟಕೃಷ್ಣನ್ ಅವರು ಖಾತೆಯಲ್ಲಿ,’ಶ್ರೀಹರಿಕೋಟಾದಿಂದ ಇಸ್ರೋ ಭವಿಷ್ಯದ ಮಿಷನ್‌ಗಳ ಕ್ಷಣಗಣನೆಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3ರ ಅಂತಿಮ ಕ್ಷಣಗಣನೆ ಅವರ ಕೊನೆಯ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು’ ಎಂದು ಬರೆದುಕೊಂಡಿದ್ದಾರೆ.

Categories
ಹವಾಮಾನ ಸುದ್ದಿ

ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಭಾರೀ ಮಳೆ!

ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಭಾರೀ ಮಳೆ!
-ಮುಂದಿನ 2 ದಿನ ಮಳೆಯಾಗುವ ಸಾಧ್ಯತೆ.
– ಯೆಲ್ಲೋ ಅಲರ್ಟ್ ಘೋಷಣೆ.

NAMMUR EXPRESS NEWS
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ವೇಳೆ ಗಾಳಿಯ ವೇಗವು ಗಂಟೆಗೆ 30, 40 ಕಿ.ಮೀ ವೇಗದಲ್ಲಿ ಬೀಸಲಿದೆ.

ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಜೋರಾಗಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಅದರಂತೆ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಜೋರಾಗಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಅಲ್ಲೂ ಕೂಡ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಕರಾವಳಿಯ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.