Categories
ತೀರ್ಥಹಳ್ಳಿ

ಕಾಡಿನಲ್ಲಿ ಕದ್ದು ಕುಳಿತ ಕಳ್ಳ ಸಿಕ್ಕಿಬಿದ್ದ…!

ಕಾಡಿನಲ್ಲಿ ಕದ್ದು ಕುಳಿತ ಕಳ್ಳ ಸಿಕ್ಕಿಬಿದ್ದ…!
– ಕಾಡಲ್ಲೇ ಅಡಗಿ ಕುಳಿತು ಯಾಮಾರಿಸುತ್ತಿದ್ದ ಕಳ್ಳ ಕಾಡಲ್ಲಿ ಸಿಕ್ಕಿಬಿದ್ದ…!
– ಕಳ್ಳನಿಗೆ ಒಬ್ಬ ಕಳ್ಳ ಅಸಿಸ್ಟೆಂಟ್ ಅಂತೆ…!
– ಮರಕ್ಕೆ ಕಟ್ಟುಹಾಕಿ ಸ್ಥಳೀಯರಿಂದ ಧರ್ಮದೇಟು…

NAMMUR EXPRESS NEWS – ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ವಾಟೆಮನೆ ಬಸ್ ನಿಲ್ದಾಣದ ಸಮೀಪದ ಮುಳುಬಾಗಿಲು ವ್ಯಾಪ್ತಿಗೆ ಒಳಪಡುವ ವಾಟೆಮನೆ ದೇವಸ್ಥಾನ ಕಳ್ಳತನ ಮಾಡಲು ಯತ್ನ ಮೂವರ ಕಳ್ಳರ ಬಂಧನ .
ವಾಟೆಮನೆ ದೇವಸ್ಥಾನದಲ್ಲಿ ಬೆಲೆಬಾಳುವ ಗಂಟೆ, ದೀಪ, ಕಾಣಿಕೆ ಹುಂಡಿ,ಪೂಜಾ ಸಾಮಗ್ರಿಗಳನ್ನ ಕಳ್ಳತನ ಮಾಡಲು ಮೂವರು ನಿನ್ನೆ ಹೊಂಚುಹಾಕಿ ಸಂಜೆಯ ಒಳಗೆ ರಾಜ ರೋಷವಾಗಿ ಬಂದಿದ್ದರು. ಸ್ಥಳೀಯರು ಅವರನ್ನು ಗಮನಿಸಿ ವಿಚಾರಿಸುವ ವೇಳೆ ಇಬ್ಬರು ಕಳ್ಳರು ಸಿಕ್ಕಾಕಿಕೊಂಡಿದ್ದರು. ಮರದ ಕಂಬಕ್ಕೆ ಕಟ್ಟಿಹಾಕಿ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ದೂರು ನೀಡಿದರು.

ಮರುದಿನ ಬೆಳಗ್ಗೆ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗಿದ್ದ ಕಳ್ಳ ಬೆಳಗಿನಜಾವದ ಸಮಯದಲ್ಲಿ ಸಿಕ್ಕಿಬಿದ್ದ ಸ್ಥಳೀಯರಿಂದ ಧರ್ಮದೇಟು ತಿಂದಿದ್ದಾರೆ. ಕಳ್ಳರಲ್ಲಿ ಕಳ್ಳ ಒಬ್ಬ ಹೆಡ್ ಅಂತೆ ಅವನು ಹೇಳಿದ ಕಡೆಯಲ್ಲ ಕಳ್ಳತನ ಮಾಡಲು ಇವರು ಇಬ್ಬರು ಹೋಗ್ತಿದ್ರಂತೆ ಕಾಡಿನಲ್ಲಿ ಅವಿತು ಕುಳಿತು ಪ್ಲಾನ್ ಮಾಡ್ತಿದ್ರಂತೆ. ಹಲವು ದಿನಗಳಿಂದ ಮಲೆನಾಡಿನಲ್ಲಿ ಕಳ್ಳರ ಕಾಟ ಹೆಚ್ಚಾಗಿತ್ತು. ಭಯದ ವಾತಾವರಣದಲ್ಲಿದ್ದ ಮಲೆನಾಡಿನ ಜನತೆ ನಿಟ್ಟಿಸಿರು ಬಿಟ್ಟಿದ್ದಾರೆ.

Categories
ಶಿವಮೊಗ್ಗ

ಇಂದು ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಇಂದು ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ
– ನಗರದೆಲ್ಲೆಡೆ ಕಟ್ಟೆಚ್ಚರ: ಪೊಲೀಸ್ ಬಿಗಿ ಬಂದೋಬಸ್ತ್ ಗೆ ವ್ಯವಸ್ಥೆ
– ಎಸ್ ಪಿ ಮಿಥುನ್ ಕುಮಾರ್ ಮಾಹಿತಿ: ಏನೇನು ಬಂದೋಬಸ್ತ್?

NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಗುರುವಾರ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ನಡೆಯಲಿದ್ದು ನಗರದ ಕೋಟೆ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣಪತಿಯ ವಿಸರ್ಜನಾ ಮೆರವಣಿಗೆಯ ರಾಜಬೀದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಭಾರೀ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ವಿಷಯವಾಗಿ ಮಾಧ್ಯಮಗಳಿಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಗಣಪತಿ ಮೆರವಣಿಗೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ನಗರದ ವಿವಿದೆಡೆ 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಹಾಗೂ 2500 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 05 ಹೆಚ್ಚುವರಿ ಪೊಲೀಸ್ ಅಧೀಕ್ಷಕರು 14 ಪೊಲೀಸ್ ಉಪಾಧೀಕ್ಷಕರು, 40 ಪೋಲಿಸ್ ನಿರೀಕ್ಷಕರು, 75 ಪೊಲೀಸ್ ಉಪನಿರೀಕ್ಷಕರು, 2,500 ಎಎಸ್‌ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು, 10 ಡಿಎಆರ್ ತುಕಡಿ, 15 ಕೆಎಸ್‌ಆರ್.ಪಿ ತುಕಡಿ, 02 ಆರ್.ಎ.ಎಫ್ ಕಂಪನಿಗಳು 100 ವಿಡಿಯೋ ಕ್ಯಾಮರಾಗಳು ಮತ್ತು 08 ದ್ರೋಣ್ ಕ್ಯಾಮರಾಗಳನ್ನು ನಿಯೋಜಿಸಲಾಗಿರುತ್ತದೆ ಹಾಗೂ ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮೆರವಣಿಗೆ ಮಾರ್ಗ ಹೇಗೆ?:

ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ಎಸ್.ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧೀ ಬಜಾರ್ ಮುಖ್ಯ ರಸ್ತೆ ಎಸ್.ಎನ್. ಸರ್ಕಲ್, ಬಿ.ಹೆಚ್ ರಸ್ತೆ ಮುಖಾಂತರ ಎ.ಎ ಸರ್ಕಲ್, ನೆಹರು ರಸ್ತೆ ಮುಖಾಂತರವಾಗಿ ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯ ರಸ್ತೆಯಿಂದ ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ ಶಿವಮೂರ್ತಿ ಸರ್ಕಲ್, ಸವಳಂಗ ಮುಖ್ಯ ರಸ್ತೆ ಮಾರ್ಗವಾಗಿ ಮಹಾವೀರ್ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಬಿ.ಹೆಚ್ ರಸ್ತೆ, ಪೊಲೀಸ್ ಕಾರ್ನರ್, ಕೋಟೆ ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಬಳಿಯ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗತ್ತದೆ.

Categories
ಮಾಹಿತಿ

ಇನ್ಮುಂದೆ ಜನನ ಪ್ರಮಾಣ ಪತ್ರ ಕಡ್ಡಾಯ..!

ಇನ್ಮುಂದೆ ಜನನ ಪ್ರಮಾಣ ಪತ್ರ ಕಡ್ಡಾಯ..!
– ಅ.1ರಿಂದ ಜನನ, ಮರಣ ನೋಂದಣಿ ಕಾಯ್ದೆ ಜಾರಿಗೆ
– ಏನಿದು ಹೊಸ ನಿಯಮ..? ನೋಂದಣಿ ಹೇಗೆ…?

NAMMUR EXPRESS NEWS
ದೇಶದಲ್ಲಿ ಅಕ್ಟೋಬರ್ 1ರಿಂದ ಜನನ ಮತ್ತು ಮರಣ ನೋಂದಣಿ ಕಾಯ್ದೆ 2023 ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಸಂಸತ್ತಿನಲ್ಲಿ, ಕಳೆದ ತಿಂಗಳು ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಜನನ ಮತ್ತು ಮರಣ ನೋಂದಣಿ ಮಸೂದೆಯನ್ನು ಎರಡೂ ಸದನಗಳು ಅಂಗೀಕರಿಸಿದ್ದವು. ಇದರಲ್ಲಿ 1969ರ ಕಾಯಿದೆಗೆ ತಿದ್ದುಪಡಿ ತರಬೇಕೆಂಬ ಬೇಡಿಕೆ ಇತ್ತು. ಇನ್ಮುಂದೆ ಶಾಲೆ, ಕಾಲೇಜುಗಳಲ್ಲಿ ನೋಂದಣಿ ಸಂದರ್ಭದಲ್ಲಿ, ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಆಧಾರ್ ನೋಂದಣಿ, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುತ್ತದೆ. ಜನನ ಮತ್ತು ಮರಣ ಪ್ರಮಾಣ ಪತ್ರ ಕಾಯ್ದೆ ಜಾರಿಯಾದ ನಂತರ ಆಧಾರ್‍ನಿಂದ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಜನನ ಪ್ರಮಾಣಪತ್ರದ ಪ್ರಾಮುಖ್ಯತೆಯೂ ಹೆಚ್ಚಾಗುತ್ತದೆ.

ಈ ಮಸೂದೆಯನ್ನು ಲೋಕಸಭೆಯಲ್ಲಿ ಆಗಸ್ಟ್ 1 ರಂದು ಮತ್ತು ರಾಜ್ಯಸಭೆಯಲ್ಲಿ 7 ಆಗಸ್ಟ್ 2023 ರಂದು ಅಂಗೀಕರಿಸಲಾಯಿತು. ಇದಾದ ಬಳಿಕ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 1ರಿಂದ ನಿಯಮಗಳನ್ನು ಜಾರಿಗೆ ತರುವುದಾಗಿ ಅಧಿಸೂಚನೆ ಹೊರಡಿಸಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಆನ್ ಲೈನ್ ವಂಚನೆ: 4.99 ಲಕ್ಷ ಹೋಯ್ತು!
– ಡೆಬಿಟ್ ಕಾರ್ಡ್ ಮಾಹಿತಿ ಎಗರಿಸಿ 4.99 ಲಕ್ಷ ರೂ ವಂಚನೆ
– ಬೈಂದೂರು: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ
– ಉಪ್ಪಿನಂಗಡಿ: ಮೇಸ್ತ್ರಿಗೆ ಒಲಿಯಿತು ಕೇರಳ ಲಾಟರಿ 50 ಲಕ್ಷ ರೂ..!
– ಕುಂಬಳೆ: ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ!

NAMMUR EXPRESS NEWS
ಉಡುಪಿ: ಎಸ್‌.ಬಿ.ಐ ಡೆಬಿಟ್ ಕಾರ್ಡನ್ನು ಆಕ್ಟಿವೇಶನ್ ಮಾಡುವುದಾಗಿ ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಓಟಿಪಿ ಪಡೆದು 4.99 ಲಕ್ಷ ರೂ. ವಂಚಿಸಿದ್ದಾನೆ. ಅಬ್ದುಲ್ ಕರೀಮ್ ಎಂಬ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮಣಿಪಾಲ ಶಾಖೆ ಎಸ್.ಬಿ ಖಾತೆ ಯಿಂದ ರೂ.49999 ರಂತೆ ಕ್ರಮಾವಾಗಿ 10 ಸಲ ವ್ಯವಹಾರ ನಡೆಸಿ ಒಟ್ಟು ರೂ. 4,99,990 ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ

ಬೈಂದೂರು: ಬೈಂದೂರು ಶಿರೂರು ನೆರೆಗುದ್ದೆ ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾಸ್ಥಿತಿಯಲ್ಲಿ ಬಿದ್ದಿದ್ದ ಯುವಕನೊಬ್ಬನನ್ನು ಆಂಬ್ಯುಲೆನ್ಸ್ ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ತೋರಿಸಿ ಪ್ರಾಣ ಉಳಿಸಿರುವ ಘಟನೆ ಮಂಗಳವಾರ ರಾತ್ರಿ 10:00ಗೆ ರೈಲ್ವೆ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಆರೋಗ್ಯ ಕವಚ 108 ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರೈಲ್ವೇ ಸುರಂಗ ಮಾರ್ಗದೊಳಗೆ ಸುಮಾರು 3ಕಿ.ಮೀ ನಡೆದು ಕೊಂಡು ಹೋಗಿ ಹಳಿಯ ಪಕ್ಕದಲ್ಲಿ ಬಿದ್ದ ವ್ಯಕ್ತಿಯನ್ನು ಸ್ವಚ್ಚರ್ ನಲ್ಲಿ ತಂದು ಸಿಎಸ್ಸಿ ಬೈಂದೂರ್ ಆಸ್ಪತ್ರೆಗೆ ದಾಖಲು ಮಾಡಿದರು.ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ಸರ್ಕಾರಿ ಆಸ್ಪತ್ರೆ ಕುಂದಾಪುರ ದಾಖಲು ಮಾಡಿದ್ದಾರೆ. ಆಂಬ್ಯುಲೆನ್ಸ್ ಪೈಲೆಟ್ ಶರಣಬಸವ, ಇ ಎಂ ಟಿ ಪ್ರತಿಭಾ ಆಸ್ಪತ್ರೆಗೆ ದಾಖಲು ಮಾಡಿ ಕರ್ತವ್ಯ ನಿಷ್ಠೆ ತೋರಿಸಿದ್ದಾರೆ.

ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ

ಉಪ್ಪಿನಂಗಡಿ: ಬಡತನ ವಿದ್ದರೂ ನಿಷ್ಠೆ, ಪ್ರಾಮಾಣಿಕತೆ ಯಿಂದ ದುಡಿದು ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಇಳಂತಿಲ ಗ್ರಾಮದ ಏನ್ಮಾಡಿಯ ಚಂದ್ರಯ್ಯ ಕುಂಬಾರ ಅವರನ್ನು ಕೊನೆಗೂ ಅದೃಷ್ಟ ಲಕ್ಷ್ಮೀ ಕೈ ಹಿಡಿದಿದ್ದು, ಕೇರಳ ರಾಜ್ಯ ಲಾಟರಿ ಯಲ್ಲಿ 50 ಲಕ್ಷ ರೂ. ಗೆದ್ದಿದ್ದಾರೆ. ವ್ಯಕ್ತಿಯಲ್ಲಿ ಮೇಸ್ತ್ರಿ ಯಾಗಿರುವ ಅವರು ಕಾನತ್ತೂರಿನ ಶ್ರೀ ನಾಲ್ವರ್ ದೈವಸ್ಥಾನ ಕ್ಷೇತ್ರಕ್ಕೆ ಹೋದಾಗ 500 ರೂಪಾಯಿಯ ಓಣಂ ಬಂಪರ್ ಲಾಟರಿ ಟಿಕೇಟ್ ಖರೀದಿಸಿದ್ದರು. ಅದರ ಬಂಪರ್ ಬಹುಮಾನ 25 ಕೋಟಿ ಆಗಿದ್ದು, ಇವರು ಮೂರನೇ ಬಹುಮಾನ ಗೆದ್ದುಕೊಂಡಿದ್ದಾರೆ.

ಅಣ್ಣ ತಂಗಿಯರ ಪುತ್ರಿಯರು ನಾಪತ್ತೆ

ಕುಂಬಳೆ : ಸೆ. 24ರಂದು ವರ್ಕಾಡಿ ನಿವಾಸಿ 15ರ ಹರೆಯದ ಬಾಲಕಿಯ ಹೆತ್ತವರು ಉಳ್ಳಾಲದಲ್ಲಿ ನಡೆದಿದ್ದ ವಿವಾಹಕ್ಕೆ ತೆರಳಿದ್ದರು. ಇಬ್ಬರು ಹೆಣ್ಮಕ್ಕಳ ಸಹಿತ ನಾಲ್ವರು ಮಕ್ಕಳು ಮನೆಯಲ್ಲಿ ಉಳಿದುಕೊಂಡಿದ್ದರು. ಸಂಜೆ ಮನೆಗೆ ವಾಪಸಾದಾಗ ಮಗಳು ನಾಪತ್ತೆಯಾಗಿದ್ದಳು. ಉಳಿದ ಮಕ್ಕಳಲ್ಲಿ ಪ್ರಶ್ನಿಸಿದಾಗ ಬಾಲಕಿ ಮುಟ್ಟಿಂಗೆ ತೆರಳಿರುವುದಾಗಿ ತಿಳಿಸಿದ್ದಾರೆ.
ಬಾಲಕಿಯ ತಂದೆ ಮುಟ್ಟಂನಲ್ಲಿರುವ ಸಹೋದರಿಯ ಮನೆಗೆ ಕರೆ ಮಾಡಿ ವಿಚಾರಿಸಿದಾಗ ತನ್ನ 22ರ ಹರೆಯದ ಯುವತಿಯೂ ನಾಪತ್ತೆಯಾಗಿದ್ದಾಳೆಂದು ತಿಳಿಸಿ ದ್ದಾರೆ. ಈ ಇಬ್ಬರು ಜತೆಯಾಗಿ ಹೋಗಿರಬಹುದೆಂದು ಶಂಕಿಸಿ ಇತರೆಡೆ ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಮತ್ತು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಇವರಿಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ.ಇವರ ಪತ್ತೆಗೆ ವಿವಿಧ ಸ್ಥಳಗಳಲ್ಲಿರುವ ಸಿಸಿಟಿವಿ ಕೆಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಅಭಿಯಾನ

ತೀರ್ಥಹಳ್ಳಿ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಅಭಿಯಾನ
– ದೇಶಾದಲ್ಲಿ 1,56,000 ಅಂಚೆ ಕಚೇರಿಗಳ ಕಾರ್ಯನಿರ್ವಹಣೆ
– ಅಂಚೆ ಇಲಾಖೆಯಲ್ಲಿ ನೂರಕ್ಕೂ ಹೆಚ್ಚು ಸೇವೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅಂಚೆ ಕಚೇರಿಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ನಡೆಯಿತು. ಪೋಸ್ಟ್ ಆಫೀಸ್ ನಲ್ಲಿರುವ ಸೌಲಭ್ಯ ಹಾಗೂ ಸ್ಕೀಮ್ ಗಳ ಬಗ್ಗೆ ಜಲಸಾಮಾನ್ಯರಿಗೆ ತಲುಪಬೇಕು ಎನ್ನುವ ದೃಷ್ಟಿಯಿಂದ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರದಲ್ಲಿ ಅಂಚೆ ಇಲಾಖೆ ಈ ಮೊದಲು ಸಂಪರ್ಕ ಸಾಧನೆಗೆ ಮಾತ್ರ ಮೀಸಲಾಗಿತ್ತು. ಈ ಇಲಾಖೆ ಇದೀಗ ನೂರಕ್ಕೂ ಹೆಚ್ಚು ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಜಗತ್ತಿನಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವುದು ಹೆಮ್ಮೆಯ ವಿಷಯ. ರಾಷ್ಟ್ರದ ಪ್ರತಿ ಊರುಗಳಲ್ಲಿ ಅಂಚೆ ಕಚೇರಿಗಳಿದ್ದು, 1,56,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ ಎಂದು ಅಂಚೆ ಇಲಾಖೆ ಮುಖ್ಯಸ್ಥರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಾಗರಾಜ್, ದಂತ ವೈದ್ಯರಾದ ಡಾ. ಗುರುರಾಜ್, ಕೆ ಎಸ್ ಕೃಷ್ಣಮೂರ್ತಿ, ಮುಖ್ಯಧೀಶರಾದ ಜಯರಾಮ್ ಶೆಟ್ಟಿ, ಹರೀಶ್ ಕೆ ಎಸ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಅಂಚೆ ಇಲಾಖೆಯಲ್ಲಿ ಏನೇನು ಸೇವೆ?

ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಹಾರದಲ್ಲಿ ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ,ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ.

Categories
ಚಿಕ್ಕಮಗಳೂರು

ಸಾಲ ಬಾಧೆ: ನದಿಗೆ ಹಾರಿ ಆತ್ಮಹತ್ಯೆ!

ಸಾಲ ಬಾಧೆ: ನದಿಗೆ ಹಾರಿ ಆತ್ಮಹತ್ಯೆ!
– ಎನ್. ಆರ್. ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಘಟನೆ
– ಚಿಕ್ಕಮಗಳೂರು ಕರವೇ ಜಿಲ್ಲಾಧ್ಯಕ್ಷ ಕ್ಯಾನ್ಸರ್ ರೋಗಕ್ಕೆ ಬಲಿ: ಗಣ್ಯರ ಸಂತಾಪ

NAMMUR EXPRESS NEWS
ಎನ್. ಆರ್. ಪುರ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನರಸಿಂಹರಾಜಪುರ, ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿ ಕೊಪ್ಪದ ಕಾಗಲದಿಬ್ಬದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಂತೋಷ್ ಕುಮಾರ್ 32 ಸಾಲಬಾಧೆ ತಾಳಲಾರದೆ ಭದ್ರಾಹಿನ್ನೀರಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ ಕುಮಾರ್ ಸೋಮವಾರ ಸಂಜೆ ಮನೆ ಬಿಟ್ಟು ಹೋದವರು ಹಿಂತಿರುಗಿ ಬಂದಿರಲಿಲ್ಲ. ಮಂಗಳವಾರ ಮೆಣಸೂರು ಸೇತುವೆ ಬಳಿ ಸಂತೋಷ್ ಕುಮಾರ್ ಬೈಕ್‌ ಪತ್ತೆಯಾಗಿದೆ. ನಂತರ ಆತನ‌ ತಂದೆ‌ ಮಂಜಪ್ಪಗೌಡ ಹಾಗೂ ಸಹೋದರ ಮೆಣಸೂರು ಭದ್ರಾ ಹಿನ್ನೀರಿನ ಬಳಿ ಹುಡುಕಾಟ ಮಾಡಿದ್ದಾರೆ. ಆಗ ಚೆಕ್ ಡ್ಯಾಂ ಬಳಿ ಶವ ಪತ್ತೆಯಾಗಿದೆ. ಸಂತೋಷ್ ಕುಮಾರ್ ಬ್ಯಾಂಕ್ ಹಾಗೂ ಖಾಸಗಿ ಯಾಗಿ ರೂ.4ಲಕ್ಷ‌ಸಾಲ‌ಮಾಡಿದ್ದು ಸಾಲ‌ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪೊಲೀಸರು ರೈತ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ನಿಧನ

ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ಅವರು ಮಂಗಳವಾರ ತಡರಾತ್ರಿ ನಿಧನ ಹೊಂದಿದ್ದು ಕಾಪಿ ನಾಡು ದೊಡ್ಡ ಹೋರಾಟಗಾರನನ್ನು ಕಳೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನ್ನಡ ನಾಡು, ನುಡಿ, ನೆಲ-ಜಲ ಪರವಾದ ಹೋರಾಟ ಹಾಗೂ ಸಂಘಟನಾ ಕಾರ್ಯಗಳಲ್ಲಿ ಜನ ಜಾಗೃತಿ ಮತ್ತು ಅರಿವು ಮೂಡಿಸುವಲ್ಲಿ ಶ್ರಮಿಸಿದ್ದರು ಮ್ ಇವರ ಅಕಾಲಿಕ ಮರಣದಿಂದ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ. ಜಗದೀಶ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯವಾಗಿಯೇ ಇದ್ದ ಅವರು ಈಗ್ಗೆ ಕೆಲ ತಿಂಗಳ ಹಿಂದೆ ಇದ್ದಕ್ಕಿದಂತೆ ಅನಾರೋಗ್ಯಕ್ಕೀಡಾಗಿದ್ದರು. ಅವರು ಮೆದುಳು ಸಂಬಧಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬುಧವಾರ ಅಂತ್ಯಕ್ರಿಯೆ ನಡೆಯಿತು.

Categories
ಮಾಹಿತಿ

ಗೂಗಲ್ ಬರ್ತ್ ಡೇ…!

ಗೂಗಲ್ ಬರ್ತ್ ಡೇ…!
– 25ರ ಸಂಭ್ರಮ: ಡಿಜಿಟಲ್ ವಿಶ್ವಕೋಶಕ್ಕೆ ಧನ್ಯವಾದ
– ಜಗತ್ತನ್ನೇ ಕೈಯಲ್ಲಿಟ್ಟ ಮಹಾನ್ ಬ್ರಾಂಡ್

NAMMUR EXPRESS NEWS
ಚಂದದ ಡೂಡಲ್‌ನ ಜತೆಗೆ “ವಾಕ್ ಡೌನ್ ಮೆಮೊರಿ ಲೇನ್” ಎಂದು ಹಿಂದಿನ 25 ವರ್ಷಗಳ ತನ್ನ ಜನ್ಮದಿನದ ವಿಭಿನ್ನ ಡೂಡಲ್‌ಗಳನ್ನು ಪ್ರದರ್ಶಿಸಿದೆ. ಲೇಟೆಸ್ಟ್‌ ಡೂಡಲ್ ʼGoogle’ ಬದಲಿಗೆ ʼG25gle’ ಆಗಿ ಬರೆಯಲಾಗಿದೆ. ಇದು GIF ಆಗಿದ್ದು, ಅದನ್ನು ನೀವು ಕ್ಲಿಕ್ಕಿಸಿದರೆ ಮೇಲಿನಿಂದ ಬಣ್ಣದ ಕಾಗದಗಳ ಮಳೆಯಾಗುತ್ತದೆ. ಎಲ್ಲರ ಮೆಚ್ಚಿನ ಸರ್ಚ್ ಇಂಜಿನ್ ಗೂಗಲ್‌ಗೆ ಬುಧವಾರ 25 ವರ್ಷ ತುಂಬಿದೆ. ಗೂಗಲ್ ಚಂದದ ಡೂಡಲ್ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಡಿದೆ.
ಗೂಗಲ್ ಕಂಪನಿಯು ಮೊದಲ ಏಳು ವರ್ಷಗಳಲ್ಲಿ ತನ್ನ ಜನ್ಮದಿನವನ್ನು ಸೆಪ್ಟೆಂಬರ್ 4ರಂದು ಆಚರಿಸಿತು. ನಂತರ ಸರ್ಚ್ ಇಂಜಿನ್ ಇಂಡೆಕ್ಸಿಂಗ್ ಮಾಡುತ್ತಿರುವ ದಾಖಲೆ ಸಂಖ್ಯೆಯ ಪುಟಗಳ ಪ್ರಕಟಣೆಯೊಂದಿಗೆ ಹೊಂದಿಕೆಯಾಗುವಂತೆ ಆಚರಣೆಗಳನ್ನು ಸೆಪ್ಟೆಂಬರ್ 27ಕ್ಕೆ ಬದಲಾಯಿಸಲು ನಿರ್ಧರಿಸಿತು.

1998ರಲ್ಲಿ ಸ್ಥಾಪನೆಯಾದ ಗೂಗಲ್‌ನ ಮೊಟ್ಟಮೊದಲ ಡೂಡಲ್, ನೆವಾಡಾದ ಬ್ಲಾಕ್ ರಾಕ್ ಸಿಟಿಯ ದೀರ್ಘಾವಧಿಯ “ಬರ್ನಿಂಗ್ ಮ್ಯಾನ್” ಕಾರ್ಯಕ್ರಮದ ಬಗ್ಗೆ ಆಗಿತ್ತು. ಸರ್ಚ್ ಇಂಜಿನ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಅಕ್ಟೋಬರ್ 24, 2015ರಂದು ಕಂಪನಿಯ ನಿರ್ವಹಣೆ ವಹಿಸಿಕೊಂಡರು. ಡಿಸೆಂಬರ್ 3, 2019ರಂದು ಪಿಚೈ ಆಲ್ಫಾಬೆಟ್‌ನ ಸಿಇಒ ಕೂಡ ಆದರು. ಕಳೆದ ತಿಂಗಳು, ಗೂಗಲ್ ಸಿಇಒ ಸುಂದರ್ ಪಿಚೈ ಕಂಪನಿಯು ತನ್ನ 25ನೇ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಬ್ಲಾಗ್ ಪೋಸ್ಟ್ ಬರೆದಿದ್ದರು. ಮೊದಲ ಕಾಲು ಶತಮಾನವನ್ನು ಪ್ರತಿಬಿಂಬಿಸುತ್ತಾ ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಲು AI ಜೊತೆಗಿನ ಅವಕಾಶಗಳ ಕುರಿತು ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದರು”ಈ ತಿಂಗಳು, ಗೂಗಲ್ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಮೈಲಿಗಲ್ಲನ್ನು ತಲುಪುವುದು ದೊಡ್ಡ ಸಾಧನೆ.

ನಮ್ಮ ಉತ್ಪನ್ನವನ್ನು ಬಳಸುವ ಜನರು ನಾವೀನ್ಯತೆಯನ್ನು ಮುಂದುವರಿಸಲು ನಮಗೆ ಸವಾಲು ಒಡ್ಡುತ್ತಾರೆ. ಆ ಉತ್ಪನ್ನವನ್ನು ನಿರ್ಮಿಸಲು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನೂರಾರು ಸಾವಿರ ಗೂಗ್ಲರ್‌ಗಳು ಮತ್ತು ನಮ್ಮ ಪಾಲುದಾರರಿಗೆ ಇದು ಕೃತಜ್ಞತೆ ಸಲ್ಲಿಸುವ ಸಮಯ. ನಾವೀನ್ಯತೆ ಅತ್ಯಗತ್ಯ ಸತ್ಯವೆಂದರೆ ತಂತ್ರಜ್ಞಾನದ ಗಡಿಯನ್ನು ಮೀರುವ ಕ್ಷಣ. ಗೂಗಲ್ ನಮ್ಮಯಶಸ್ಸನ್ನು ಎಂದಿಗೂ ಲಘುವಾಗಿ ತೆಗೆದುಕೊಂಡಿಲ್ಲ. ನಾವಿನ್ನೂ ಹುಡುಕಾಟದಲ್ಲಿದ್ದೇವೆ. ಇನ್ನೂ ಹೆಚ್ಚಿನದನ್ನು ಮಾಡಬೇಕಾದಅಗತ್ಯವಿದೆ. ಖಂಡಿತವಾಗಿಯೂ ಗೂಗಲ್ ಇಂದು ಸರ್ಚ್ ಇಂಜಿನ್‌ಗಿಂತ ಹೆಚ್ಚಿನದಾಗಿದೆ. ನಾವು 15 Google ಉತ್ಪನ್ನಗಳನ್ನು ಹೊಂದಿದ್ದೇವೆ. ಪ್ರತಿಯೊಂದೂ ಐವತ್ತು ಕೋಟಿಗಿಂತ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿದೆ’ ಎಂದು ಪಿಚೈ ನುಡಿದಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಾ.ಬಿ.ಎಸ್. ವಿಶ್ವನಾಥ ಅವರಿಗೆ ಶ್ರದ್ಧಾಂಜಲಿ

ತೀರ್ಥಹಳ್ಳಿಯಲ್ಲಿ ಡಾ.ಬಿ.ಎಸ್. ವಿಶ್ವನಾಥ ಅವರಿಗೆ ಶ್ರದ್ಧಾಂಜಲಿ
– ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಅಂತಿಮ ನಮನ
– ಮೇಲಿನಕುರುವಳ್ಳಿಯಲ್ಲಿ ಶ್ರದ್ಧಾಂಜಲಿ ಸಭೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಹಲವೆಡೆ ಹಿರಿಯ ಸಹಕಾರಿ, ಸಹಕಾರಿ ರತ್ನ ಡಾ.ಬಿ.ಎಸ್. ವಿಶ್ವನಾಥ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಲಾಯಿತು. ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಸಹಕಾರಿ ರತ್ನ ಡಾ|| ಬಿ.ಎಸ್. ವಿಶ್ವನಾಥನ್ ರವರಿಗೆ ಭಾವಪೂರ್ವ ಶ್ರದ್ಧಾಂಜಲಿಯನ್ನು ಪುಷ್ಪ ನಮನ ಸಲ್ಲಿಸುವುದರ ಮೂಲಕ ನಡೆಸಲಾಯಿತು. ಸಹಕಾರಿ ಕ್ಷೇತ್ರದ ಹಿರಿಯ ಮುಖಂಡರಾದ ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಸ್.ವಿಶ್ವನಾಥನ್ ರವರು ಭಾನುವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಇದರ ಅಂಗವಾಗಿ ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾವನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಬೋಧಕ ವೃಂದದವರು ಪುಷ್ಪನಮನವನ್ನು ಸಲ್ಲಿಸುವುದರ ಮೂಲಕ ಸಂತಾಪವನ್ನು ಸೂಚಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಗದೀಶ್ ಕೆ.ಎಸ್ ( ಜಗ್ಗಣ್ಣ ) ಮಾತನಾಡಿ ಸಂಸ್ಥೆಗೆ ಬಿ.ಎಸ್.ವಿ ಅವರಿಂದಾದ ಸಹಕಾರ ಮತ್ತು ಪ್ರೋತ್ಸಾಹವನ್ನು ಸ್ಮರಿಸಿದರು. ಭವಿಷ್ಯದಲ್ಲಿ ಇಂತಹ ಅನರ್ಘ್ಯ ರತ್ನ ಸಿಗುವುದು ಅಪರೂಪ ಎನ್ನುವ ವಿಷಾದವನ್ನು ವ್ಯಕ್ತಪಡಿಸಿದರು. ಮೌನಾಚರಣೆಯ ಮೂಲಕ ಕಾರ್ಯಕ್ರವನ್ನು ಮುಕ್ತಾಯಗೊಳಿಸಲಾಯುತು.

ಮೇಲಿನಕುರುವಳ್ಳಿಯಲ್ಲಿ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನ ಹೊಂದಿದ ವಿಶ್ವನಾಥರವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಚಿಂತಕ ನೆಂಪೆ ದೇವರಾಜ್ ಮಾತನಾಡಿ ಬಿ. ಎಸ್ ವಿಶ್ವನಾಥರವರ ಜೀವನ, ಬದುಕು, ಸಾಧನೆಗಳ ಬಗ್ಗೆ ಅಪರೂಪದ ಮಾಹಿತಿ ಹಂಚಿಕೊಂಡರು. ಗ್ರಾಂ. ಪಂ ಸದಸ್ಯರಾದ ನಿಶ್ಚಲ್ ಜಾದೂಗಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಆನಂದ್ ಸಿ ವಂದಿಸಿದರು. ಗ್ರಾಂ. ಪಂ ಅಧ್ಯಕ್ಷರಾದ ಯು. ಡಿ ವೆಂಕಟೇಶ್, ಉಪಾಧ್ಯಕ್ಷರಾದ ಅನಿತ ಪ್ರವೀಣ್, ಮಾಜೀ ಅಧ್ಯಕ್ಷರಾದ ರವಿ,ಭವ್ಯ,ಗೀತಾ ರಾಘವೇಂದ್ರ, ದೊರೆ, ಸ್ವಾಮಿನಾಥ್ ಸಿದ್ದ, ಸ. ಪ. ಪೂ. ಕಾಲೇಜು ಪ್ರಾಂಶುಪಾಲರಾದ ಸುಧಾ, ಸೇವಾದಳದ ಪ್ರಸನ್ನ ತಿರಳೇಬೈಲ್, ಆರ್ಮುಗಂ, ಪ್ರವೀಣ್ ಮತ್ತಿತರರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ

ತೀರ್ಥಹಳ್ಳಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ
– ವಿಶ್ವ ಹಿಂದೂ ಪರಿಷತ್, ಭಜರಂಗದಳದ ಆಯೋಜನೆ
– ತೀರ್ಥಹಳ್ಳಿಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ಆಗಮನ
– ರಸ್ತೆ ಯುದ್ಧಕ್ಕೂ ಘೋಷಣೆ: ಜೈ ಭಜರಂಗಿ

NAMMUR EXPRESS NEWS
ತೀರ್ಥಹಳ್ಳಿ: ಧರ್ಮ ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳವು ಶೌರ್ಯ ಜಾಗರಣ ರಥಯಾತ್ರೆಯನ್ನು ಚಿತ್ರದುರ್ಗದಿಂದ ಪ್ರಾರಂಭಿಸಿದ್ದು ಬುಧವಾರ ಬೆಳಗ್ಗೆ 10:30ಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬಂದು ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ಬಳಿ ನಗರ ರಸ್ತೆಯಿಂದ ಆಗಮಿಸಿದ ರಥ ತೀರ್ಥಹಳ್ಳಿಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ಆಗಮಿಸಿತು. ರ್‍ಯಾಲಿಯಲ್ಲಿ ನೂರಾರು ಸಂಖ್ಯೆಯ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದು ರಸ್ತೆ ಯುದ್ಧಕ್ಕೂ ಘೋಷಣೆ ಕೂಗುತ್ತಾ ರಥಯಾತ್ರೆಯಲ್ಲಿ ಪಾಲ್ಗೊಂಡರು. ನಂತರ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ರಥಕ್ಕೆ ಪೂಜೆ ನೆರವೇಸಿದರು. ನಂತರ ಸಭೆಯನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಪ್ರಮುಖರಾದ ರಾಮಚಂದ್ರ ಹೊರಣೆಬೈಲು ಮಾತನಾಡಿ, ಪ್ರತಿ ವ್ಯಕ್ತಿಯಲ್ಲಿ ಧರ್ಮದ ಬಗ್ಗೆ ಅರಿವನ್ನು ಮೂಡಿಸುವಂತಹ, ಸಂಸ್ಕಾರವನ್ನು ಬೆಳೆಸುವಂತಹ ಪ್ರಕ್ರಿಯೆ ಮಾಡುತ್ತ ಧಾರ್ಮಿಕ ಶ್ರದ್ಧೆಯನ್ನು ಸಮಾಜದಲ್ಲಿ ನೀಡಲಿಕ್ಕಾಗಿ ಇರುವಂತಹ ವಿಶ್ವಮಾನವ ಸಂಘಟನೆ ಇದಾಗಿದೆ.

ಇದು 1964ರಲ್ಲಿ ಕೃಷ್ಣಾಷ್ಟಮಿ ದಿನ ಮುಂಬೈಯ ಸಾಂದೀಪನಿ ಆಶ್ರಮದಲ್ಲಿ ಸ್ಥಾಪನೆಗೊಂಡಿದ್ದು ಎನ್ನುವಂಥದ್ದು ನಮ್ಮೆಲ್ಲರಿಗೂ ಗೊತ್ತಿದೆ. ಇದು ಪ್ರಾರಂಭವಾಗಿ 60ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಅನೇಕ ಸಾಮಾಜಿಕ, ಸೇವಾ, ಧಾರ್ಮಿಕ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಮಂಚೂರಿಯಲ್ಲಿ ನಿಂತುಕೊಂಡು ಮಾಡಿದೆ. ಸಮಾಜದಲ್ಲಿ ಎಲ್ಲಾ ಭೇದ ಭಾವಗಳನ್ನು ಹೋಗಲಾಡಿಸುವಂತಹ ಕೆಲಸಕ್ಕೆ ಬದ್ಧವಾದ ಸಂಘಟನೆ ನಮ್ಮ ಸಂಘಟನೆ. ಹಿಂದುಗಳ ರಕ್ಷಣೆಯೇ ನಮ್ಮ ಗುರಿ, ಹಿಂದುಗಳೆಲ್ಲ ಒಂದು ಎಂದು ಭಾವಿಸಿ ಭೇದ ಭಾವಗಳನ್ನು ಹೋಗಲಾಡಿಸುವುದೇ ನಮ್ಮ ಗುರಿ ಎಂದರು.
ಹಿಂದುಗಳಿಗಾದ ಅಪಮಾನ ತೊಡೆದು ಹಾಕುವ ಮೊದಲ ಹೆಜ್ಜೆಯಾಗಿ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿ ದುಷ್ಟರು ರಚಿಸಿದ ಕಳಂಕಿತ ಕಟ್ಟಡವನ್ನು ರಾಮಭಕ್ತರು ಶೌರ್ಯ ಪ್ರದರ್ಶನದ ಮೂಲಕ 1992 ಡಿಸೆಂಬರ್ 6 ರಂದು ಕೆಡವಿ ಹಾಕಿ ಇತಿಹಾಸ ನಿರ್ಮಿಸಿದರು. ಹೋರಾಟದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ತಮ್ಮ ಬಲಿದಾನವನ್ನು ಮಾಡಿದ್ದಾರೆ.

ಸಮಾಜವನ್ನು ಸಂಘಟನೆ ಮಾಡುವ ಕೆಲಸ ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ. ಈ ಪೀಳಿಗೆಗೆ ಸಂಘಟನೆಗೆ ಹೊರಡುವಂತಹ ಕೆಲಸ ಮಾಡುವ ಅಗತ್ಯತೆ ಇದೆ. ಧಾರ್ಮಿಕ ಭಾವವನ್ನು ಜಾಗೃತಿ ಮಾಡುತ್ತಾ, ಸಮಾಜಕ್ಕೆ ಪೂರಕವಾದ ಸಂಸ್ಕಾರವನ್ನು ಕೊಡುತ್ತ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ವ್ಯಕ್ತಿಗಳಿಗೆ ಉತ್ತರ ರೂಪಿಯಾಗಿ ನಿಲ್ಲಬೇಕಾದಂತಹ ಅಗತ್ಯ ಹಿಂದೇಂದಿಗಿಂತಲೂ ಹೆಚ್ಚಿದೆ. ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎಂದು ಹೊರಟಂತಹ ದ್ರೋಹಿಗಳಿಗೆ, ಧರ್ಮ ವಂಚಕರಿಗೆ ಉತ್ತರ ಕೊಡಬೇಕಾದ ಅಗತ್ಯತೆ ಇದೆ ಎಂದರು. ರಥ ಯಾತ್ರೆಯ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಆರ್ ಎಸ್ ಎಸ್ ಪ್ರಮುಖರು ಪಾಲ್ಗೊಂಡಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಸಿಂಗನಬಿದಿರೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ!

ತೀರ್ಥಹಳ್ಳಿಯ ಸಿಂಗನಬಿದಿರೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ!
– 2022- 23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ
– ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಕುಳ್ಳು0ಡೆ ಮತ್ತು ಸದಸ್ಯರ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ 2022-23ರ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ರಾಜ್ಯದ 233 ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿವೆ. ನಾಲ್ಕು ಗ್ರಾಮಗಳಿಗೆ ವಿಶೇಷ ಗಾಂಧಿ ಗ್ರಾಮ ಪುರಸ್ಕಾರ ಸಂದಿದೆ. ಪ್ರತೀ ತಾಲೂಕಿನ ಒಂದೊಂದು ಗ್ರಾಮವನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ :25-09-2023 ರಂದು ನಡೆದ 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳ ಆಯ್ಕೆಯನ್ನಅಂತಿಮಗೊಳಿಸಲಾಗಿದ್ದು ತೀರ್ಥಹಳ್ಳಿ ತಾಲೂಕಿನಿಂದ ಸಿಂಗನಬಿದಿರೆ ಗ್ರಾಮ ಪಂಚಾಯಿತಿಗೆ ಬಂದಿದೆ.

ಸರಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್‌ರಾಜ್) ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಗ್ರಾಮಗಳ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಸೇರಿದಂತೆ ಅಧಿಕಾರಿಗಳು ಭಾಗಿಯಾಗಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪುರಸ್ಕರಿಸಲಿದ್ದಾರೆ.

ಸಿಂಗನಂಬಿದರೆ ಗ್ರಾಮ ಪಂಚಾಯತ್ ಮಾದರಿ

ಗಾಂಧಿ ಗ್ರಾಮ ಪುರಸ್ಕಾರಕ್ಕೆ ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗಳ ಪೈಕಿ ಸಿಂಗನಬಿದಿರೆ ಗ್ರಾಮ ಪಂಚಾಯತ್ ಆಯ್ಕೆ ಆಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಕುಳ್ಳು0ಡೆ, ಸುಜಾತ ಉಪಾಧ್ಯಕ್ಷರು, ಕುಸುಮ ಸದಸ್ಯರು, ತಿಮಪ್ಪ ಸದಸ್ಯರು, ಸದೇಶ ಸದಸ್ಯರು, ದಿವ್ಯ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಕಾರಣರಾದ ಸಮಸ್ತ ಗ್ರಾಮಸ್ಥರು, ಅಧಿಕಾರಿಗಳು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.