ಜನ ಜಾಗೃತಿ ಜಾಥಾ, ಗಾಂಧಿ ಜಯಂತಿ ಆಚರಣೆ
– ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ದೇಶ ಉಳಿಸಿ: ಶಾಸಕ ಆರಗ ಜ್ಞಾನೇಂದ್ರ ಕರೆ
– ವಿಪತ್ತು ಘಟಕದ ಸಾಧಕರಿಗೆ ಸನ್ಮಾನದ ಹೆಮ್ಮೆ
NAMMUR EXPRESS NEWS
ತೀರ್ಥಹಳ್ಳಿ: ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕಗಳು ಹಾಗೂ ನವ ಜೀವನ ಸಮಿತಿ ತೀರ್ಥಹಳ್ಳಿ ತಾಲೂಕು ಇವರ ಸಹಯೋಗದಲ್ಲಿ ಮಾಧವ ಮಂಗಲ ಸಭಾಭವನದಲ್ಲಿ ಜನಜಾಗೃತಿ ಜಾಥಾ,ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನುಶಾಸಕರಾದ ಆರಗ ಜ್ಞಾನೇಂದ್ರ ನೆರವೇರಿಸಿದ್ದು ಜಾಥಾ ಉದ್ಘಾಟನೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗೀತಾ ರಮೇಶ್ ನೆರವೇರಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ವಹಿಸಿದ್ದು, ಮತ್ತೆ ವ್ಯಸನಕ್ಕೆ ಮರಳದಿರಿ ಉಪನ್ಯಾಸವನ್ನು ಮನೋವೈದ್ಯರಾದ ಡಾ ಎಸ್ ಪವಿತ್ರ ನೀಡಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗಾಂಧಿ ಭಕ್ತರಾಗಿದ್ದರೆ ಸ್ವದೇಶಿ ವಸ್ತುಗಳನ್ನು ಬಳಸಿ. ನಾವು ಸ್ವದೇಶಿ ವಸ್ತುಗಳನ್ನು ಬಳಸದೆ, ವಿದೇಶಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ನೀಡುತ್ತಿದ್ದೇವೆ ಎಂದರೆ ನಾವು ಗಾಂಧಿ ಮಾತನ್ನು ಪಾಲಿಸುತ್ತಿಲ್ಲ ಎಂದು. ಗಾಂಧಿ ಹೇಳಿದಂತೆ ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ದೇಶವನ್ನು ಬೆಳೆಸೋಣ ಎಂದು ಜನರಿಗೆ ಕರೆ ನೀಡಿದರು. ತಾಲೂಕಿನಲ್ಲಿ 14 ಮಧ್ಯವರ್ಜನರ ಶಿಬಿರವನ್ನು ಆಯೋಜಿಸಿದ್ದು ಅದರಲ್ಲಿ ಸುಮಾರು ಒಂದುವರೆ ಸಾವಿರ ಮಧ್ಯ ವ್ಯಾಸನೀಯರು ಈ ಶಿಬಿರದಿಂದಾಗಿ ಕುಡಿತದ ಚಟದಿಂದ ಹೊರ ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ವಿಪತ್ತು ಘಟಕದ ಸಾಧಕರಿಗೆ ಸನ್ಮಾನ
ಮೇಲಿನ ಕುರುವಳ್ಳಿ ಘಟಕದಿಂದ ಪ್ರಮೋದ್ ಹಾಗೂ ಹೊದಲ ರವಿ ಆಚಾರ್ಯ ಅವರಿಗೆ ಸನ್ಮಾನಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನಿರ್ದೇಶಕರಾದ ಚಂದ್ರಶೇಖರ್ ಜೆ, ಪೂಜ್ಯಪಾದ ಚಿಕಿತ್ಸಾಲಯ ವೈದ್ಯರಾದ ಡಾ. ಜೀವಂಧರ್ ಜೈನ್, ಪೊಲೀಸ್ ಉಪ ಅಧೀಕ್ಷಕರಾದ ಗಜಾನನ ವಾಮನ ಸುತಾರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅಶೋಕ್ ಮೂರ್ತಿ, ಜಿಲ್ಲಾ ಜಿಲ್ಲಾ ಜಾಗೃತಿ ವೇದಿಕೆ ಸದಸ್ಯರಾದ ಮುದ್ದಣ್ಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿನುತಾ ಮುರಳಿಧರ್, ಆಶಾ ಸತೀಶ್, ಆಶಾ ಶ್ರೀನಿವಾಸ್, ಮಧ್ಯ ವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದವಳ್ಳಿ ಸೋಮಶೇಖರ್, ಮಾಸ್ಟರ್ ಶೌರ್ಯ ವಿಪತ್ತು ಘಟಕದ ಸುರೇಶ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.