Categories
ಕರಾವಳಿ

ಹೆಬ್ರಿ ಅಮೃತಭಾರತಿ ವಿದ್ಯಾಲಯದಲ್ಲಿ ರಾಜ್ಯೋತ್ಸವ ಸಂಭ್ರಮ

ಹೆಬ್ರಿ ಅಮೃತಭಾರತಿ ವಿದ್ಯಾಲಯದಲ್ಲಿ ರಾಜ್ಯೋತ್ಸವ ಸಂಭ್ರಮ
– ಪ್ರೌಢ ಶಾಲಾ ವಿಭಾಗದ ಮಕ್ಕಳಿಗೆ ವಿವಿಧ ಸ್ಪರ್ಧೆ
– ಕನ್ನಡ ಹಬ್ಬದ ಸಂಭ್ರಮದ ಆಚರಣೆ

NAMMUR EXPRESS NEWS
ಹೆಬ್ರಿ: ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕನ್ನಡ ಶಿಕ್ಷಕ ಮಹೇಶ್ ಹೈಕಾಡಿ ಮಾತನಾಡಿ, ಕನ್ನಡ ಭಾಷೆಗೆ ನೂರಾರು ವರ್ಷಗಳ ಇತಿಹಾಸ ಇದೆ. ನಮ್ಮ ಋಷಿ ಮುನಿಗಳಿಂದ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಭಾಷೆಯಾಗಿದೆ. ಕನ್ನಡವನ್ನು ಸಂರಕ್ಷಣೆ ಮಾಡುವ ದೀಕ್ಷೆ ನಮ್ಮ ಮೇಲಿದೆ. ಅಲ್ಲದೆ ಕನ್ನಡ ರಾಜ್ಯದ ಉದಯವಾಗಲು ಕನ್ನಡಿಗರ ಹೋರಾಟ ನಡೆದಿದೆ, ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು ಎಂದರು.

ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಆಂಗ್ಲ ಭಾಷಾ ಶಿಕ್ಷಕಿ ಸಾವಿತ್ರಿ ಮಾತಾಜಿ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರೂಜಿ ಮಾತಾಜಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿ ಸವಿತಾ ಮಾತಾಜಿ, ವೇದವ್ಯಾಸ ತಂತ್ರಿ ಮಡಾಮಕ್ಕಿ ಬಹುಮಾನ ಪಟ್ಟಿ ವಾಚಿಸಿದರು.

Categories
ತೀರ್ಥಹಳ್ಳಿ

ರಾಜ್ಯ ಮಟ್ಟದಲ್ಲಿ ಬಂಡೆ ವೆಂಕಟೇಶ್ ಅವರಿಗೆ ಹುದ್ದೆ!

ರಾಜ್ಯ ಮಟ್ಟದಲ್ಲಿ ಬಂಡೆ ವೆಂಕಟೇಶ್ ಅವರಿಗೆ ಹುದ್ದೆ!
– ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಉಪಾಧ್ಯಕ್ಷರಾಗಿ ಬಂಡೆ ವೆಂಕಟೇಶ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಭಾವಿ ನಾಯಕ, ತಮ್ಮ ಸಂಘಟನೆ ಮೂಲಕ ಗಮನ ಸೆಳೆದಿರುವ ಬಂಡೆ ವೆಂಕಟೇಶ್ ಅವರಿಗೆ ರಾಜ್ಯ ಮಟ್ಟದಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿ ತೀರ್ಥಹಳ್ಳಿ ಮೇಲಿನ ಕುರುವಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಂಡೆ ವೆಂಕಟೇಶ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದಕಾಡ ಶೆಟ್ಟಿಹಳ್ಳಿ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಒಕ್ಕೂಟದ ಮಹಾಸಭೆಯಲ್ಲಿ ಬಂಡೆ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಬಂಡೆ ವೆಂಕಟೇಶ್ ಅವರ ಆಯ್ಕೆಗೆ ಅವರ ಅಭಿಮಾನಿಗಳು, ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ

Categories
ಮಲ್ನಾಡ್

ಮಲ್ನಾಡ್ ಟಾಪ್ ನ್ಯೂಸ್

ಹೊತ್ತಿ ಉರಿಯುತ್ತಿದ್ದ ಮನೆಯೊಳಗೆ ನುಗ್ಗಿ ಇಬ್ಬರ ಜೀವ ಉಳಿಸಿದ ಮಹಿಳೆಯರು!
– ಕಡೂರಿನಲ್ಲಿ ನಡೆದ ಘಟನೆ: ಮಗು, ತಂದೆ ಪಾರು
– ಹೊಸನಗರ : ತಾಲ್ಲೂಕಿನಲ್ಲಿ ಭೀಕರ ಅಪಘಾತ
– ಭದ್ರಾವತಿ: ಕದ್ದ ಬೈಕ್ ಓಡಿಸಿ ಸಿಕ್ಕಿಬಿದ್ದ ಕಳ್ಳ!
– ಬಾಳೆಹೊನ್ನೂರು : ಹಾವು ಕಚ್ಚಿ ವ್ಯಕ್ತಿ ಸಾವು

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗುಮ್ಮನಹಳ್ಳಿ ಸಮೀಪದ ಬೋವಿ ಕಾಲೋನಿಯಲ್ಲಿ ಸಾವೊಂದು ಸಂಭವಿಸಿತ್ತು. ಆ ವ್ಯಕ್ತಿಯ ಅಂತ್ಯಕ್ರಿಯೆಗೆ ಅಲ್ಲಿದ್ದವರೆಲ್ಲಾ ತೆರಳಿದ್ದರು, ಮನೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಷ್ಟೆ ಉಳಿದುಕೊಂಡಿದ್ದರು. ಅಷ್ಟೊತ್ತಿಗೆ ಇದ್ದಕ್ಕಿದ್ದ ಹಾಗೆ ಒಂದು ಮನೆ ಹೊತ್ತಿ ಉರಿಯಲು ಆರಂಭವಾಗಿತ್ತು. ಗೃಹಚಾರಕ್ಕೆ ಆ ಮನೆಯಲ್ಲಿ ಒಬ್ಬ ಯಜಮಾನ ಮಲಗಿದ್ದ, ಮದ್ಯಪಾನ ಮಲಗಿದ್ದ ಆತನಿಗೆ ಎಚ್ಚರಿಕೆ ಇರಲಿಲ್ಲ. ಇನ್ನೊಂದೆಡೆ ಪುಟ್ಟ ಮಗುವೊಂದು ಮಲಗಿತ್ತು. ಈ ಕಡೆ ಉರಿ ಆವರಿಸಿ, ಇಡೀ ಮನೆ ಧಗಧಗ ಅನ್ನಲು ಆರಂಭವಾಯ್ತು. ಅದೇನೂ ಅದೃಷ್ಟವೋ ಏನೋ ಊರಲ್ಲಿದ್ದ ಮಹಿಳೆಯರೇ ಓಡಿ ಬಂದರು. ಒಂದಿಬ್ಬರು ಮನೆಯೊಳಗೆ ಜೀವದ ಹಂಗು ತೊರೆದು ನುಗ್ಗಿದ್ದಾರೆ.. ಹೇಳಿಕೇಳಿ ಗುಡಿಸಲು ಜೋಪಡಿ ಮನೆ, ಕೆಲವೇ ನಿಮಿಷಗಳಲ್ಲಿ ಬೂದಿಯಾಗುತ್ತಿದ್ದ ಮನೆಯೊಳಗೆ ನುಗ್ಗಿದ ಮಹಿಳೆಯರು ಮಗುವನ್ನ ಹೊರಕ್ಕೆ ಎತ್ತಿಕೊಂಡು ಬಂದಿದ್ದಾರೆ. ಯಜಮಾನನ್ನ ಎಳೆದು ತಂದು ಜೀವ ಉಳಿಸಿದ್ದಾರೆ. ಕಲ್ಲೇಶ್ ಎಂಬುವರ ಗುಡಿಸಿಲಿನಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋದರು ಸಹ ಊರಿನ ಹೆಂಗಸರ ಸಾಹಸದಿಂದ ಎರಡು ಜೀವ ಉಳಿಯಿತು. ಅಷ್ಟರಲ್ಲಿ ವಿಷಯ ತಿಳಿದು ವಾಪಸ್​ ಆದ ಪುರುಷರು ಬೆಂಕಿ ಹರಡುವುದನ್ನ ತಪ್ಪಿಸಿದರು.

ಹಾವು ಕಚ್ಚಿ ಕಾರ್ಮಿಕನೊರ್ವ ಸಾವು..!

ಬಾಳೆಹೊನ್ನೂರು: ಹಾವು ಕಚ್ಚಿ ಕಾರ್ಮಿಕನೊರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಮಾಗುಂಡಿಯಲ್ಲಿ ನಡೆದಿದೆ. ಹನೀಫ್ (37) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಬಟ್ಟೆಯನ್ನು ಬಿಸಿಲಿಗೆ ಒಣ ಹಾಕುವ ಸಂದರ್ಭದಲ್ಲಿ ಬಲಗಾಲಿಗೆ ಹಾವು
ಕಚ್ಚಿದ್ದು, ಆ ಸಂದರ್ಭದಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ನನಗೆ ಕರೆ ಮಾಡಿ ತಿಳಿಸಿದರು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ರವಾನಿಸುವಾಗ
ಸಾವನ್ನಪ್ಪಿದ್ದಾರೆ ಎಂದು ಅವರ ಪತ್ನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಮೃತಪಟ್ಟ ಹನೀಫ್ ಮಾಗುಂಡಿ ಪಂಚಾಯಿತಿಯ ತಾತ್ಕಾಲಿಕ ಕಸ ವಿಲೇವಾರಿ ವಾಹನದ ಚಾಲಕನಾಗಿದ್ದರು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಗುಂಡಿಯಲ್ಲಿ ಘಟನೆ ನಡೆದಿದೆ.

ರಿಪ್ಪಿನಪೇಟೆಯಲ್ಲಿ ಅಪಘಾತ: ಗಾಯ

ರಿಪ್ಪನಪೇಟೆ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅರಸಾಳು ಬಳಿಯಲ್ಲಿ ಗುರುವಾರ ಖಾಸಗಿ ಬಸ್ ಹಾಗೂ ಒಮಿನಿ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವನಿಗೆ ಗಾಯಗವಾಗಿದೆ. ರಿಪ್ಪನ್​ಪೇಟೆಯ ಸಮೀಪದ ಅರಸಾಳು ಬಳಿ ಘಟನೆ ನಡೆದಿದ್ದು ರಿಪ್ಪನ್​ಪೇಟೆಯಿಂದ ಶಿವಮೊಗ್ಗದ ಕಡೆಗೆ ಖಾಸಗಿ ಬಸ್ ಹೋಗುತ್ತಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗದಿಂದ ರಿಪ್ಪನ್​ಪೇಟೆಗೆ ಮಾರುತಿ ಒಮಿನಿ ಬರುತ್ತಿತ್ತು. ಅರಸಾಳು ಕೆರೆಯ ಬಳಿ ಸಿಗುವ ಟರ್ನಿಂಗ್​ನಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಒಮಿನಿ ಚಾಲಕ ಗಾಗೊಂಡಿದ್ದು, ಆತನನ್ನು ಗರ್ತಿಕೆರೆ ಮೂಲದವನು ಎಂದು ತಿಳಿದುಬಂದಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇನ್ನೂ ಘಟನೆಯಲ್ಲಿ ಕಾರು ಬಹುತೇಕ ಜಖಂಗೊಂಡಿದೆ.

ಸ್ನೇಹಿತನ ಕಾರು ಪಡೆದು ಪರಾರಿ!

ಶಿವಮೊಗ್ಗ : ಪತ್ನಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಕೇಳಿದ ವ್ಯಕ್ತಿಗೆ , ತನ್ನ ಕಾರನ್ನ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಏರಿಯಾದಲ್ಲಿ ಟಿ ಅಂಗಡಿ ನಡೆಸ್ತಿದ್ದ ವ್ಯಕ್ತಿಯೊಬ್ಬರ ಪರಿಚಯದಲ್ಲಿದ್ದರು. ಪರಿಚಯಸ್ತ ವ್ಯಕ್ತಿಯು ತನ್ನ ಹೆಂಡತಿಗೆ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಬೇಕು ಹೀಗಾಗಿ ನಿಮ್ಮ ಕಾರನ್ನ ಸ್ವಲ್ಪ ಕೊಡಿ ಎಂದು ಟಿ ಕುಡಿಯಲು ಬಂದಿದ್ದ ವೇಳೆ ದೂರುದಾರರಿಗೆ ಹೇಳಿದ್ದಾರೆ. ಇದನ್ನ ನಂಬಿದ ಸಂತ್ರಸ್ತರು ತಮ್ಮ ಕಾರನ್ನು ತಾವೆ ಖುದ್ದಾಗಿ ತೆಗೆದುಕೊಂಡು ಹೋಗಿ ಕೊಟ್ಟಿದ್ದರು. ಆದರೆ ಟೀ ಅಂಗಡಿಯವ ಕಾರನ್ನ ವಾಪಸ್​ ಅದರ ಮಾಲಿಕರಿಗೆ ಮುಟ್ಟಿಸಲಿಲ್ಲ. ಇದರಿಂದ ಅನುಮಾನಗೊಂಡು ಫೋನ್ ಮಾಡಿದರು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವುದು ಗೊತ್ತಾಗಿದೆ. ವಾಹನ ಜಿಪಿಎಸ್ ಚೆಕ್ ಮಾಡಿದರೆ, ಅದು ನೆರೆಯ ಜಿಲ್ಲೆಯಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ತಮ್ಮ ಕಾರನ್ನ ಯಾರಿಗೋ ಮಾರಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಭದ್ರಾವತಿ : ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸ್ತಿದ್ದ ವೇಳೆ ದ್ವಿಚಕ್ರ ವಾಹನವೊಂದರಲ್ಲಿ ಬಂದವ ಪೊಲೀಸರ ಚೆಕ್ಕಿಂಗ್ ನೋಡುತ್ತಲೇ ಹತ್ತಿರ ಬಂದವನು ಬೈಕ್​ ತಿರುಗಿಸಿ ಓಡಲು ಆರಂಭಿಸಿದ್ದಾನೆ. ಆತ ಹಾಗೂ ಆತನಿದ್ದ ಬೈಕ್​ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ತಕ್ಷಣ ಹಿಂಬಾಲಿಸಿ ಆತನನ್ನ ಹಿಡಿದಿದ್ದಾರೆ. ಈ ವೇಳೆ ಮೊದಲು ತನ್ನದೇ ಬೈಕ್​ ಡಾಕ್ಯುಮೆಂಟ್ ಮನೆಯಲ್ಲಿ ಇಟ್ಟಿದ್ದೇನೆ ಎಂದಿದ್ದಾನೆ. ಆನಂತರ ಕಳೆದುಹೋಗಿದೆ ಎಂದಿದ್ದಾನೆ. ಬಳಿಕ ಜೋರು ಮಾಡಿದ ಮೇಲೆ ಸಾರ್ ಬೈಕ್ ಕದ್ದಿದ್ದು ಮಾರೋದಕ್ಕೆ ತರ್ತಿದ್ದೇನೆ ಎಂದಿದ್ದಾನೆ. ತಕ್ಷಣ ಅಲರ್ಟ್​ ಆದ ಪೊಲೀಸರು ಆತನನ್ನು ಸ್ಟೇಷನ್​ಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೇ ಬಂಧಿತ ವ್ಯಕ್ತಿ ಉಮೇಶ ಅಲಿಯಾಸ್ ಮುದ್ದ ಬಿನ್ ಹರಿಹರಪ್ಪ ನಡೆಸಿದ ನಾಲ್ಕು ಕಳ್ಳತನ ಪ್ರಕರಣಗಳು ಬಯಲಾಗಿದೆ.

Categories
ಅಪಘಾತ

ಒಂದೇ ಬೈಕಲ್ಲಿ ಒಂದೇ ಕುಟುಂಬದ 5 ಮಂದಿ ಸಾವು!

ಒಂದೇ ಬೈಕಲ್ಲಿ ಒಂದೇ ಕುಟುಂಬದ 5 ಮಂದಿ ಸಾವು!
– ಲಾರಿ ಡಿಕ್ಕಿಯಾಗಿ ಐವರು ಸಾವು: ಕಲಬುರಗಿಯಲ್ಲಿ ನಡೆದ ಘಟನೆ
– ಲಾರಿ ಹತ್ತಿ ಇಬ್ಬರು ಮಹಿಳೆಯರ ದುರ್ಮರಣ

NAMMUR EXPRESS NEWS
ಕಲಬುರಗಿ: ಒಂದು ಬೈಕ್‌ನಲ್ಲಿ ಮೂರು ಜನರು ತಿರುಗಾಡುವುದನ್ನೇ ಭಾರತದಲ್ಲಿ ನಿಷೇಧಿಸಲಾಗಿದೆ. ದೇಶದ ಅನೇಕ ನಗರಗಳಲ್ಲಿ ಬೈಕ್ ನಲ್ಲಿ ಕುಳಿತುಕೊಳ್ಳುವ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ರಸ್ತೆ ಅಪಘಾತಗಳು ಸಂಭವಿಸಿ ಜೀವಗಳು ಬಲಿಯಾಗುತ್ತಿವೆ. ಹೀಗಿರುವಾಗ ಒಂದೇ ಬೈಕ್‌ನಲ್ಲಿ ಐವರು ಸಂಚಾರ ಮಾಡಿ, ಅಕಸ್ಮಾತ್ ಅಪಘಾತ ಸಂಭವಿಸಿದರೆ ಏನಾಗಬಹುದು? ಕಲಬುರಗಿಯಲ್ಲಿ ನಡೆದ ಘಟನೆ ಸಂಚಾರ ನಿಯಮವನ್ನು ಮತ್ತೆ ಎತ್ತಿಹಿಡಿದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ದುದನಿಯಿಂದ ಅಫಪೂರ ಕಡೆಗೆ ಬರುತ್ತಿದ್ದ ಬೈಕ್‌ಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಬೈಕ್‌ನಲ್ಲಿ ಕುಳಿತಿದ್ದ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ನೇಪಾಳ ಮೂಲದ ಈ ಕುಟುಂಬವು ಹಲವು ವರ್ಷಗಳಿಂದ ಅಫಜಲಪುರದಲ್ಲಿ ನೆಲೆಸಿದ್ದು, ಅಲ್ಲಿ ಫಾಸ್ಟ್ ಫುಡ್ ಹೋಟೆಲ್ ಇಟ್ಟುಕೊಂಡಿದ್ದರು. ಹಳ್ಳೋಳ್ಳಿ ಕ್ರಾಸ್ ಬಳಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಾದಚಾರಿ ಮಹಿಳೆಯರ ಮೇಲೆ ಹರಿದ ಲಾರಿ: ಇಬ್ಬರು ಮೃತ್ಯು

ಆಸ್ಪತ್ರೆಗೆ ಹೋಗಲು ರಸ್ತೆ ದಾಟುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಯಮಸ್ವರೂಪಿ ಲಾರಿಯೊಂದು ಹರಿದ ಪರಿಣಾಮ ಭೀಕರವಾಗಿ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಹೊಸೂರು ರಸ್ತೆಯ ಬೊಮ್ಮಸಂದ್ರದ ಬಳಿ ನಡೆದಿದೆ.
ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗದಲ್ಲಿ ಇಬ್ಬರು ಮಹಿಳೆಯರ ರಸ್ತೆ ದಾಟುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಲಾರಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಲಾರಿಯ ಚಕ್ರಗಳು ಮಹಿಳೆಯರ ದೇಹದ ಮೇಲೆ ಹರಿದಿವೆ. ಪರಿಣಾಮ ಮಹಿಳೆಯರ ದೇಹಗಳು ಛಿದ್ರಗೊಂಡಿವೆ. ಒಂದು ಮಹಿಳೆಯ ದೇಹ ರಸ್ತೆಗೆ ಅಪ್ಪಚ್ಚಿಯಾಗಿದ್ದು, ಇನ್ನೊಂದು ಮಹಿಳೆಯ ಅರ್ಧ ದೇಹವೇ ತುಂಡಾಗಿ ಹೋಗಿದೆ. ಈ ಮಹಿಳೆಯರು ವೈಟ್ ಫೀಲ್ಡ್‌ನಿಂದ ಬಂದಿದ್ದರೆಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದಾದ ಬಳಿಕ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು, ಲಾರಿ ಚಾಲಕನನ್ನು ವಶಕ್ಕೆ ಪಡೆದರು.

Categories
ರಾಜ್ಯ

ದೀಪಾವಳಿ ಹಬ್ಬಕ್ಕೆ ಬಂತು ನಿಯಮ!

ದೀಪಾವಳಿ ಹಬ್ಬಕ್ಕೆ ಬಂತು ನಿಯಮ!
– ದಿನಕ್ಕೆ 2 ಗಂಟೆ ಮಾತ್ರ ಪಟಾಕಿ ಸಿಡಿಸಿಸಲು ಅವಕಾಶ
– ರಾತ್ರಿ 8ರಿಂದ 10 ಗಂಟೆಯವರೆಗೆ ಅವಕಾಶ
– ಪಟಾಕಿ ಸಿಡಿಸಲು ನಿಯಮಗಳು ಏನೇನು..?

NAMMUR EXPRESS NEWS
ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಿದ್ದು, ದಿನಕ್ಕೆ 2 ಗಂಟೆ ಮಾತ್ರ ಸುಡುಮದ್ದು ಸಿಡಿಸಲು ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಸುಡುಮದ್ದು ಸಿಡಿಸಲು ಅವಕಾಶವಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಅದರಂತೆಯೇ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದ ಆದೇಶದ ಅನುಸಾರ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದ್ದು ಉಳಿದ ಅವಧಿಯಲ್ಲಿ ನಿಷೇಧ ಹೇರಲಾಗಿದೆ.
ಹಬ್ಬದ ಆಚರಣೆ ವೇಳೆ ನಿಗದಿತ ಗುಣ ಮಾಪನಗಳಿಗೆ ಸರಿಹೊಂದುವ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಯಾವುದೇ ಪ್ರಾಣಿ-ಪಕ್ಷಿ, ಮಕ್ಕಳು, ವೃದ್ಧರಿಗೆ ತೊಂದರೆಯಾಗದಂತೆ ಗಮನಿಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ನಿಷೇಧಿತ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ಹೇಳಲಾಗಿದೆ.

Categories
ತೀರ್ಥಹಳ್ಳಿ

ಪಿ.ಬಿ.ಮಹಿಷಿ ತವರಲ್ಲಿ ನ.4ಕ್ಕೆ ಶ್ರದ್ದಾಂಜಲಿ ಸಭೆ

ಪಿ.ಬಿ.ಮಹಿಷಿ ತವರಲ್ಲಿ ನ.4ಕ್ಕೆ ಶ್ರದ್ದಾಂಜಲಿ ಸಭೆ
– ರಾಜ್ಯದ ಹಿರಿಯ ಅಧಿಕಾರಿ ತವರು ಮಹಿಷಿಯಲ್ಲಿ ನೆನಪು
– ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಮಹಿಷಿ

NAMMUR EXPRESS NEWS
ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ಅವರು ಇತ್ತೀಚಿಗೆ ನಿಧನರಾಗಿದ್ದು, ಅವರ ಮೂಲ ಊರು ತೀರ್ಥಹಳ್ಳಿಯ ಮಹಿಷಿಯಲ್ಲಿ ನ.4ಕ್ಕೆ ಗ್ರಾಮಸ್ಥರಿಂದ ಶ್ರದ್ದಾಂಜಲಿ ಸಭೆ ನಡೆಯಲಿದೆ. ಅ.16ರಂದು ತಮ್ಮ 75 ರ ಇಳಿ ವಯಸ್ಸಿನಲ್ಲಿ ನಮ್ಮನ್ನೆಲ್ರನ್ನು ಅಗಲಿದ್ದು ದೇಶದ ಅತ್ಯುನ್ನತ ಹುದ್ದೆಯಾದ ಭಾರತ ಸರ್ಕಾರ ದ ಪ್ರಧಾನ ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ, ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹೆಮ್ಮೆಯ ಸಾಧಕರಾಗಿ ಮಹಿಷಿ ಹೆಸರನ್ನು ಬೆಳಗಿಸಿದವರು.
ಪಿ . ಬಿ. ಮಹಿಷಿ ಅವರು ಮಾಜಿ ಲೋಕಸಭೆ ಯ ಸದಸ್ಯರಾಗಿದ್ದ ” ಸರೋಜಿನಿ ಮಹಿಷಿ” ಅವರ ಸಹೋದರ ಹಾಗೂ ದೇಶದ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿಯವರ ಹತ್ತಿರದ ಒಡನಾಟ ವಿದ್ದ ಕುಟುಂಬವು ಹೌದು.

ಶತಮಾನಗಳ ಹಿಂದೆಯೇ ಇವರ ಪೂರ್ವಜರು ಮಹಿಷಿ ಇಂದ ದೂರದ ಧಾರವಾಡಕ್ಕೆ ಹೋಗಿ ನೆಲಸಿದ್ದರು ಕೂಡ ತನ್ನ ಮೂಲತಃ ಊರದ ಮಹಿಷಿ ಯನ್ನು ಮರೆಯದೆಅದೆಷ್ಟೋ ವರ್ಷಗಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಾಳೂರು – ಮಹಿಷಿ ರಸ್ತೆ ಮತ್ತು ಮಹಿಷಿ – ಹೆದ್ದೂರ್ ಸಂಪರ್ಕಿಸುವ ಸೇತುವೆಯ ಕಾಮಗಾರಿಯನ್ನು ತಮ್ಮ (2007) ಸೇವಿತ ಅವಧಿಯಲ್ಲಿ ಅಡಿಪಾಯವನ್ನು ಹಾಕಿದ ನಿರ್ಮಾತೃಪಿ . ಬಿ. ಮಹಿಷಿಯವರ ಅಗಲಿಕೆಯು ಮಹಿಷಿಯ ಸುತ್ತಮುತ್ತಲಿನ ಗ್ರಾಮಕ್ಕೂ , ತೀರ್ಥಹಳ್ಳಿ ಯ ಜನತೆಗೂ ತುಂಬಲಾರದ ನಷ್ಟವಾಗಿದೆ.ಇವರ ಸವಿನೆನಪಿಗೆ ಹುಟ್ಟೂರಾದ ಮಹಿಷಿಯಲ್ಲಿ
ನ.4ರ ಸಂಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಹಿಷಿ ಯ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸರ್ವರನ್ನು ಸ್ವಾಗತಿಸಲಾಗಿದೆ.

ತೀರ್ಥಹಳ್ಳಿ ಮೂಲದ ಅಧಿಕಾರಿಯ ಸಾಧನೆ

ಪಿ.ಬಿ.ಮಹಿಷಿ ಅವರು 31-12-2006 ರಿಂದ 07-02-2008 ರವರೆಗೆ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 1972ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಪತ್ನಿ ಮೀನಾಕ್ಷಿ ಅವರನ್ನು ಅಗಲಿದ್ದಾರೆ. ಚಂದ್ರಶೇಖರ್ ಭಾರತದ ಪ್ರಧಾನ ಮಂತ್ರಿಗಳಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರಹ್ಲಾದ್ ಮಹಿಷಿ 1972ನೆಯ ಸಾಲಿನ ಐಎಎಸ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. 2006ರಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಮಹತ್ವದ ಹೊಣೆಗಾರಿಕೆ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ವಿದ್ಯುತ್ ನಿಗಮವನ್ನು ಲಾಭದ ಕಡೆಗೆ ಕರೆತಂದ ಹೆಗ್ಗಳಿಕೆ ಇವರದ್ದಾಗಿತ್ತು. ತಮ್ಮ ವರದಿಯ ಮೂಲಕ ಕನ್ನಡಕ್ಕೆ ಮಹತ್ವದ ಸ್ಥಾನಮಾನ ನೀಡಿದ ಹೆಗ್ಗಳಿಕೆಯ ಸರೋಜಿನಿ ಮಹಿಷಿಯವರ ಸೋದರರಾಗಿದ್ದರು. ಸದಾ ಅಧ್ಯಯನಶೀಲರಾಗಿದ್ದು ಅಪಾರವಾದ ಗ್ರಂಥ ಭಂಡಾರ ಪ್ರೇಮ ಹೊಂದಿದ್ದರು. ಅದರ ಪರಿಣಾಮವೇ ಅವರಲ್ಲಿ ಹಲವು ಮಹತ್ವದ ಗ್ರಂಥಗಳ ಸಂಗ್ರಹವಿತ್ತು. ಚಿತ್ರರಂಗದ ಬಗ್ಗೆ ಕೂಡ ಅಪಾರ ಆಸಕ್ತಿ ಹೊಂದಿದ್ದು ಹಲವು ಅಪರೂಪದ ಚಲನಚಿತ್ರಗಳನ್ನು ತಮ್ಮ ಸಂಗ್ರಹದಲ್ಲಿ ಹೊಂದಿದ್ದರು. ಪ್ರಹ್ಲಾದ್ ಮಹಿಷಿ ಪತ್ನಿ ಡಾ.ಮೀನಾ ದೇಶಪಾಂಡೆಯವರು ಪ್ರಸ್ತುತ ಭಾರತೀಯ ವಿದ್ಯಾ ಭವನದ ಗಾಂಧಿ ಕೇಂದ್ರದ ನಿರ್ದೇಶಕರಾಗಿದ್ದು ಮಹಾತ್ಮ ಗಾಂಧಿ ಸಂಪುಟಗಳು ಕನ್ನಡಕ್ಕೆ ಬರುವಲ್ಲಿ ಮುಖ್ಯ ಪಾತ್ರವಹಿಸಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮಕೊಂಡಕ್ಕೆ ಭೇಟಿ ನೀಡಿದ ರವಿಶಂಕರ್ ಗುರೂಜಿ!

ತೀರ್ಥಹಳ್ಳಿ ರಾಮಕೊಂಡಕ್ಕೆ ಭೇಟಿ ನೀಡಿದ ರವಿಶಂಕರ್ ಗುರೂಜಿ!
– ಕೊಲ್ಲೂರು ದೇವಿ ದರ್ಶನದ ಬಳಿಕ ತೀರ್ಥಹಳ್ಳಿ ಭೇಟಿ
– ತುಂಗೆ ನೀರನ್ನು ಪ್ರೊಕ್ಷಣೆ ಮಾಡಿಕೊಂಡ ಶ್ರೀಗಳು

NAMMUR EXPRESS NEWS
ತೀರ್ಥಹಳ್ಳಿ : ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮ ಕೊಂಡಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್ ಗುರೂಜಿ ಭೇಟಿ ನೀಡಿದರು. ಕೊಲ್ಲೂರು ಮುಕಾಂಬಿಕೆ ದರ್ಶನ ಮಾಡಿ ವಾಪಾಸ್ ಆಗುವ ವೇಳೆ ತೀರ್ಥಹಳ್ಳಿಗೆ ಭೇಟಿ ನೀಡಿದ ಅವರು ಪಾಪ ಪರಿಹಾರದ ಸಂಕೇತವಾದ ಪ್ರಸಿದ್ಧ ರಾಮ ಕೊಂಡದ ನೀರನ್ನು ಪ್ರೊಕ್ಷಣೆ ಮಾಡಿಕೊಂಡು ಪುನೀತರಾದರು. ಕೊಲ್ಲೂರು ಇಂದ ಬಾಳಗಾರಲ್ಲಿ ಒಬ್ಬರ ಮನೆಗೆ ಭೇಟಿಕೊಟ್ಟು ಬಳಿಕ
ತೀರ್ಥಹಳ್ಳಿ ರಾಮಕುಂಡದಲ್ಲಿ ತುಂಬಾ ಹೊತ್ತು ಕಾಲ ಕಳೆದರು.

ಕಾರಿನ ಕೀ, ಮೊಬೈಲ್ ನೀರಲ್ಲಿ ಬಿತ್ತು!

ಸ್ವಾಮೀಜಿ ಅವರ ಬಿಎಂಡಬ್ಲ್ಯೂ ಕಾರಿನ ಕೀ ಮತ್ತು ಮತ್ತೋರ್ವರ ಮೊಬೈಲ್ ತುಂಗೆ ನದಿ ನೀರಿಗೆ ಬಿದ್ದ ಘಟನೆ ನಡೆದಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಲವರ್ ಪಿಜಿಗೆ ಕಲ್ಲೆಸೆದ ಪಾಗಲ್ ಪ್ರೇಮಿ!
– ತನ್ನ ಜತೆ ಹೊರಗೆ ಬರಲಿಲ್ಲ ಎಂದು ಸಿಟ್ಟು: ಮಂಗಳೂರಿನಲ್ಲಿ ಘಟನೆ
ಮಂಗಳೂರು: ಅಪಾರ್ಟ್‌ಮೆಂಟ್‌ ಮ್ಯಾನೇಜರ್ ಆತ್ಮಹತ್ಯೆ

NAMMUR EXPRESS NEWS
ಮಂಗಳೂರು : ತನ್ನ ಲವರ್ ಔಟಿಂಗಿಗೆ ಕರೆದರೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಯುವಕ ಆಕೆಯ ಪಿಜಿಗೆ ಕಲ್ಲು ತೂರಿದ ಘಟನೆ ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜು ಬಳಿ ನಡೆದಿದೆ., ಕಲ್ಲು ಹೊಡೆದ ಯುವಕನನ್ನು ಸುಳ್ಯ ನಿವಾಸಿ ವಿವೇಕ್ (18) ಎಂದು ಗುರುತಿಸಲಾಗಿದೆ. ಈತ ಸೆಂಟ್ ಆಗ್ನೆಸ್ ಕಾಲೇಜ್ ಬಳಿ ಇರುವ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆಗೆ ಔಟಿಂಗ್ ಗೆ ಬರಲು ಹೇಳಿದಾಗ ಯುವತಿ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ ನನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಾರ್ಟ್ಮೆಂಟ್ ಮ್ಯಾನೇಜರ್ ಆತ್ಮಹತ್ಯೆ

ಮಂಗಳೂರು: ಮಂಗಳೂರು ನಗರದ ಕದ್ರಿ ಕಂಬಳದಲ್ಲಿರುವ ಅಪಾರ್ಟ್‌ಮೆಂಟ್ ವೊಂದರ ಫೆಸಿಲಿಟಿ ಮ್ಯಾನೇಜರ್, ಬಂಟ್ವಾಳ ನಿವಾಸಿ ಹರೀಶ್ ಕುಮಾರ್ (38) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್‌ ಕುಮಾರ್‌ ಅವರ ಮೃತದೇಹ ಸೋಮವಾರ ಮಧ್ಯಾಹ್ನದ ವೇಳೆ ಅಪಾರ್ಟ್‌ ಮೆಂಟ್‌ನ ಅವರ ಕೊಠಡಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ಡಾ.ಆರ್. ಎಂ.ಮಂಜುನಾಥ ಗೌಡರಿಗೆ ಸನ್ಮಾನಕ್ಕೆ ಸಜ್ಜು!

ಡಾ.ಆರ್. ಎಂ.ಮಂಜುನಾಥ ಗೌಡರಿಗೆ ಸನ್ಮಾನಕ್ಕೆ ಸಜ್ಜು!
– ನ.6ಕ್ಕೆ ತೀರ್ಥಹಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮ
– ಪಟ್ಟಣ ಸೇರಿ ಹಳ್ಳಿಗಳ ಎಲ್ಲಾ ಕಡೆ ಬ್ಯಾನರ್

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ 10ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಸಹಕಾರಿ, ಸಹಕಾರ ರತ್ನ ಡಾ.ಆರ್.ಎಂ ಮಂಜುನಾಥ್ ಗೌಡರಿಗೆ ನ.6ರಂದು ತೀರ್ಥಹಳ್ಳಿಯಲ್ಲಿ ತಾಲೂಕು ಸರ್ವ ಸಹಕಾರಿಗಳ ಪರವಾಗಿ ತೌರೂರ ಸಂಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ನ.6ರಂದು ಗೋಪಾಲಗೌಡ ರಂಗಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಪಟ್ಟಣದ ಬಹುತೇಕ ಕಡೆ ಬ್ಯಾನರ್ ಹಾಕಲಾಗಿದೆ. ಹಳ್ಳಿಗಳಲ್ಲಿ ಕೂಡ ಬ್ಯಾನರ್ ಹಾಕಲಾಗುತ್ತಿದೆ. ಸಹಕಾರಿ ವೇದಿಕೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಹಕಾರಿಗಳು ಸೇರಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅದ್ದೂರಿ ಮೆರವಣಿಗೆ, ಬೈಕ್ ರ್ಯಾಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 5000ಕ್ಕೂ ಹೆಚ್ಚು ಮಂದಿ ಭಾಗವಸುವ ನಿರೀಕ್ಷೆ ಇದೆ. ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ.

Categories
ಉದ್ಯೋಗ ಸುದ್ದಿ

ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ

ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ

NAMMUR EXPRESS NEWS
ಮಧ್ಯ ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್ಸಿ) 67 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಕ್ರೀಡಾ ಕೋಟಾ ಡ್ರೈವ್ ಅಡಿಯಲ್ಲಿ ಲಭ್ಯವಿದೆ. ನೀವು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ವಿವಿಧ ಹಂತಗಳಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ ಭಾರತೀಯ ರೈಲ್ವೆಯ ಭಾಗವಾಗಲು ನಿಮಗೆ ಸುವರ್ಣಾವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನವೆಂಬರ್ 27, 2023 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ ಅಧಿಕೃತ ಪಿಡಿಎಫ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಹೆಚ್ಚುವರಿ ಕ್ರೀಡಾ ಸಾಧನೆಗಳೊಂದಿಗೆ 10 ನೇ / 12 ನೇ / ಪದವಿ ಸೇರಿದಂತೆ ಕೆಲವು ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಅಕ್ಟೋಬರ್ 28, 2023

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-11-2023

ಶೈಕ್ಷಣಿಕ ಅರ್ಹತೆ

ಲೆವೆಲ್-1: ಮಾನ್ಯತೆ ಪಡೆದ ಶಾಲೆ ಅಥವಾ ಯಾವುದೇ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಐಟಿಐ.

ಹಂತ-2/3: 12ನೇ ತರಗತಿ ಪಾಸ್ (+2 ಹಂತ)

ಲೆವೆಲ್-4/5: ಅಭ್ಯರ್ಥಿಗಳು ಪದವಿ ಪಡೆದಿರಬೇಕು.

ವಯಸ್ಸಿನ ಮಿತಿ
ಆರ್‌ಆರ್ಸಿ ದಕ್ಷಿಣ ರೈಲ್ವೆ ನೇಮಕಾತಿ 2023 ಗಾಗಿ, ಅಭ್ಯರ್ಥಿಯ ವಯಸ್ಸು 18-25 ವರ್ಷಗಳು.

ಸಂಬಳ
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000 ರಿಂದ 29,000 ರೂ.ವರೆಗೆ ವೇತನ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ? ಆರ್‌ಆರ್ಸಿ ದಕ್ಷಿಣ ರೈಲ್ವೆ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು, ಈ ಹಂತಗಳನ್ನು ಅನುಸರಿಸಿ: ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಕೋಶದ https://www.rrcmas.in/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಮುಖಪುಟದಲ್ಲಿ “ಆರ್‌ಆರ್ಸಿ ದಕ್ಷಿಣ ರೈಲ್ವೆ ನೇಮಕಾತಿ 2023” ಲಿಂಕ್ ಅನ್ನು ಕ್ಲಿಕ್ ಮಾಡಿ. ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ಇದರ ನಂತರ, “ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಮಾಡಿ. ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಿ. ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.