Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಸುಳ್ಯದಲ್ಲಿ 10 ಅಡಿ ಉದ್ದ ಕುಸಿದ ಭೂಮಿ!
– ಭೂಮಿ ಬಿರುಕೋ… ಕಳಪೆ ಕಾಮಗಾರಿಯೋ..?
– ಉಡುಪಿ: ರಾಮ ಮಂದಿರದಲ್ಲಿ ಕಳ್ಳತನಕ್ಕೆ ಯತ್ನ!
– ಪಡುಬಿದ್ರೆ: ಭೀಕರ ರಸ್ತೆ ಅಪಘಾತ: ಓರ್ವ ಸಾವು
– ಉಜಿರೆ: ಗೃಹಿಣಿ ಶವ ಬಾವಿಯಲ್ಲಿ ಪತ್ತೆ: ಗಂಡ ಅರೆಸ್ಟ್

NAMMUR EXPRESS NEWS
ಸುಳ್ಯದ ಹೋಟೆಲ್ ಮುಂಭಾಗದಲ್ಲಿ ಏಕಾಏಕಿ ಕುಸಿದ ಭೂಮಿ ಫೋಟೋ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಇಲ್ಲಿ ಅವೈಜ್ಞಾನಿಕ ಕಾಮಗಾರಿಯ ಶಂಕೆ ವ್ಯಕ್ತವಾಗಿದೆ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಕುಸಿದ ಭೂಮಿ ಇದರ ಪರಿಣಾಮ ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಏಕಾಏಕಿ ಭೂಮಿ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಶಂಕ ವ್ಯಕ್ತವಾಗಿದೆ ಸುಳ್ಯದಲ್ಲಿ ಜೋರಾದ ಮಳೆ ಸುರಿದಿದ್ದು, ಈ ಹಿನ್ನಲೆಯಲ್ಲಿ ಭೂಕುಸಿತ ಆಗಿದೆ ಎನ್ನುವುದು ಕೆಲವರ ಹೇಳಿಕೆ.

ಆದರೆ ಇಂಟರ್ ಲಾಕ್ ಅಳವಡಿಸಿರುವ ಭೂಮಿಯಡಿ ನೀರು ರಭಸವಾಗಿ ನುಗ್ಗದಿದ್ದರೂ ಭೂಕುಸಿತ ಹೇಗೆ ಸಂಭವಿಸಿತು ಎನ್ನುವುದು ಪ್ರಶ್ನೆ ಎದುರಾಗಿದೆ. ಭೂಕುಸಿತವಾದ ಪಕ್ಕದಲ್ಲೇ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಇತ್ತು. ಭೂಕುಸಿತವಾದ ಜಾಗದಲ್ಲಿ ಟ್ರಾನ್ಸ್‌ಫಾರ್ಮ‌ರ್ ಧರಾಶಾಯಿಯಾಗಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ಬೀಳುವ ಸಂದರ್ಭ ಪವರ್ ಕಟ್ ಆಗಿದ್ದ ಕಾರಣ ದುರಂತ ತಪ್ಪಿದೆ. ಪ್ರತಿ ದಿನವೂ ಹೋಟೆಲ್ ಗೆ ಬರುವ ಕಾರುಗಳು ಅಲ್ಲಿ ಕೂಡ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ ಇಂದು ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಪಡುಬಿದ್ರೆ: ಭೀಕರ ರಸ್ತೆ ಅಪಘಾತ: ಓರ್ವ ಸಾವು

ಪಡುಬಿದ್ರೆ: ಪಡುಬಿದ್ರೆ ಪೇಟೆಯ ಬಸ್ ನಿಲ್ದಾಣದ ಬಳಿ ನಡೆದ ಅಪಘಾತ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಮೃತಪಟ್ಟವನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ.ಮಂಗಳೂರು ಕಡೆಗೆ ತೆರಳುವ ಖಾಸಗಿ ಬಸ್, ಪಡುಬಿದ್ರೆ ಪೇಟೆಯ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿತ್ತು. ಈ ವೇಳೆ ಹಿಂದಿನಿಂದ ಬಂದ ಬೈಕ್, ಬಸ್ ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಪ್ರಜ್ವಲ್‌ ರಸ್ತೆಗೆ ಎಸೆಯಲ್ಪಟ್ಟಿದ್ದರು.ಈ ಸಮಯ ಟ್ಯಾಂಕ‌ ಹರಿದ ಪರಿಣಾಮ ಪ್ರಜ್ವಲ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ರಾಮ ಮಂದಿರದಲ್ಲಿ ಹೆಲ್ಮೆಟ್ ಧರಿಸಿ ಕಳ್ಳತನಕ್ಕೆ ಯತ್ನ!

ಉಡುಪಿ: ತಲೆಗೆ ಹೆಲೆಟ್‌ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿದ ಘಟನೆ ಮರವಂತೆಯ ಶ್ರೀ ರಾಮ ಮಂದಿರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮಂದಿರದ ಎದುರಿನ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿ ಬೀಗ ಮುರಿಯಲು ಸಾಧ್ಯವಾಗದೆ ವಾಪಾಸ್ಸಾಗಿದ್ದಾನೆ. ಕಳ್ಳತನ ಮಾಡಲು ಬಂದ ವ್ಯಕ್ತಿ ತಲೆಗೆ ಹೆಲೆಟ್‌ ಧರಿಸಿದ್ದು ಸಿ.ಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು ವ್ಯಕ್ತಿ ಯಾರೆಂಬುದು ಪತ್ತೆಯಾಗಿಲ್ಲ.

ಗೃಹಿಣಿ ಶವ ಬಾವಿಯಲ್ಲಿ ಪತ್ತೆ : ಪತಿ ಬಂಧನ!

ಉಜಿರೆ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ಎಂಬಲ್ಲಿ ವಿವಾಹಿತ ಮಹಿಳೆಯ ಮೃತದೇಹ ಶುಕ್ರವಾರ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆನಡೆಸುತ್ತಿದ್ದಾರೆ. ಬೆಳಾಲು ಗ್ರಾಮದ ಮಾಚಾರು ಕೆಂಪನೊಟ್ಟು ನಿವಾಸಿ ಶಶಿಕಲಾ (27) ಮೃತಪಟ್ಟವರು. ಪತಿ ಸುಧಾಕರ ನಾಯ್ಕ (30)ನನ್ನು ಬಂಧಿಸಲಾಗಿದೆ. ಶಶಿಕಲಾ ಹಾಗೂ ಸುಧಾಕರ್ ನಾಯ್ಕ ಸಂಬಂಧಿಕರಾಗಿದ್ದು, ಪ್ರೀತಿಸಿ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ. ಇವರಿಬ್ಬರು ಇಲ್ಲಿನ ತೋಟದ ಮನೆಯಲ್ಲಿಯೇ ವಾಸಿಸುತ್ತಿದ್ದರು. ದಂಪತಿಗೆ 6 ವರ್ಷದ ಮಗಳು ಅಜ್ಜಿಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Categories
ತೀರ್ಥಹಳ್ಳಿ

ಬಿ.ಎಸ್.ಎನ್.ಎಲ್ ನೆಟ್ವರ್ಕ್ ಅವಾಂತರ!

ಬಿ.ಎಸ್.ಎನ್.ಎಲ್ ನೆಟ್ವರ್ಕ್ ಅವಾಂತರ!
– ಹೊದಲದಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ..ಯಾವ ಕೆಲಸವೂ ಆಗುತ್ತಿಲ್ಲ
– ಬ್ಯಾಂಕ್, ಗ್ರಾಮ ಪಂಚಾಯಿತಿಯಲ್ಲಿ ಸರ್ವರ್ ಸಮಸ್ಯೆ
– ಮಲ್ನಾಡಲ್ಲಿ ಬಿಎಸ್ಎನ್ಎಲ್ ಸಮಸ್ಯೆ ಕೇಳೋರು ಯಾರು?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಜನರು ಪರದಾಡುವಂತಾಗಿದೆ. ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದ ಕಾರಣ ಬ್ಯಾಂಕು, ಗ್ರಾಮ ಪಂಚಾಯಿತಿ ಸೇರಿ ಅನೇಕ ಸರ್ಕಾರಿ ಕಚೇರಿಗಳ ಕೆಲಸ ಆಗುತ್ತಿಲ್ಲ. ಇದರಿಂದ ಜನತೆ ದಿನವಿಡಿ ಸರ್ಕಾರಿ ಕಚೇರಿಗಳ ಮುಂದೆ ಪರದಾಡುವಂತಾಗಿದೆ. ಇನ್ನು ನೆಟ್ವರ್ಕ್ ಸಮಸ್ಯೆ ಇರುವುದರಿಂದ ಜನರಿಗೆ ಯಾವುದೇ ತುರ್ತು ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆಗಳಾದಾಗ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಿಎಸ್ಎನ್ಎಲ್ ತೀರ್ಥಹಳ್ಳಿ ಕಚೇರಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆ ಹರಿದಿಲ್ಲ.

ಕಳೆದ ವರ್ಷ ಮುರಿದು ಬಿದ್ದಿದ್ದ ಟವರ್!

ಇನ್ನೂ ಕಳೆದ ವರ್ಷ ಟವರ್ ಮುರಿದು ಬಿದ್ದಿದ್ದು, ಆ ಟವರ್ ಅನ್ನು ಸರಿಪಡಿಸಲಾಗಿದೆ. ಆದರೆ ಅದರ ತಂತ್ರಜ್ಞಾನ ಹಾಗೂ ನಿರ್ವಹಣೆ ವ್ಯವಸ್ಥೆಯನ್ನು ಬಿಎಸ್ಎನ್ಎಲ್ ನೋಡಿಕೊಳ್ಳುತ್ತಿಲ್ಲ. ಇದರಿಂದಾಗಿ ಗ್ರಾಹಕರು ಕಷ್ಟಪಡುವಂತಾಗಿದೆ. ಹೀಗಾಗಿ ಗ್ರಾಮಸ್ಥರು ಹೋರಾಟದ ಹಾದಿ ತುಳಿಯಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಚೇರಿ ಮುತ್ತಿಗೆ ನಿರ್ಧಾರಕ್ಕೆ ಸಿದ್ಧತೆ

ಬಿಎಸ್ಎನ್ಎಲ್ ನೆಟ್ವರ್ಕ್ ಸಿಗದ ಕಾರಣ ವಿದ್ಯಾರ್ಥಿಗಳು, ವರ್ಕ್ ಫ್ರಮ್ ಹೋಂ ಕೆಲಸದಲ್ಲಿರುವವರು ಹಾಗೂ ಸರ್ಕಾರಿ ಅಧಿಕಾರಿಗಳು ಪಟ್ಟಣವನ್ನು ಆಶ್ರಯಿಸಬೇಕಾಗಿದೆ. ಇದರಿಂದಾಗಿ ಅವರ ದುಡಿಮೆಯ ಅರ್ಧ ಭಾಗವನ್ನು ವ್ಯಯ ಮಾಡುವಂತಾಗಿದೆ. ಹೀಗಾಗಿ ಮೊದಲ ಸುತ್ತಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಇಲ್ಲವಾದಲ್ಲಿ ಬಿಎಸ್ಎನ್ಎಲ್ ತೀರ್ಥಹಳ್ಳಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಯುವ ಮುಖಂಡ, ಹೋರಾಟಗಾರ ಹೊದಲ ಶಿವು ಎಚ್ಚರಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಶಾಸಕರು, ಸಂಸದರು ಈ ಬಗ್ಗೆ ಗಮನಿಸಬೇಕಿದೆ.

ತೀರ್ಥಹಳ್ಳಿ, ಹೊಸನಗರ ತಾಲೂಕಲ್ಲಿ ಬಗೆಹರಿಯದ ಸಮಸ್ಯೆ!

ತೀರ್ಥಹಳ್ಳಿಯ ಹಲವು ಹಳ್ಳಿಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಇದೆ. ಟವರ್ ಇದ್ದರೂ ಅದರ ನಿರ್ವಹಣೆ ಇಲ್ಲ. ಬಿಎಸ್ಎನ್ಎಲ್ ಇಲಾಖೆಗೆ ದೂರು ಕೊಟ್ಟರೂ ಗಮನಿಸುವವರಿಲ್ಲ. ತಾಲೂಕು ಹಾಗೂ ಹೊಸನಗರ ಭಾಗದ ಜನ ಈ ಸಮಸ್ಯೆಯಿಂದ ದಿನವಿಡೀ ಸಮಸ್ಯೆಗೆ ಒಳಗಾಗಿದ್ದಾರೆ. ಆದರೆ ಇತ್ತೀಚೆಗೆ ಸಂಸದರು ಹಾಗೂ ಶಾಸಕರು ಬಿಎಸ್ಎನ್ಎಲ್ ಕುಂದು ಕೊರತೆ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಈ ಬಗ್ಗೆ ದೂರುಗಳನ್ನು ನೀಡಿದರರೂ ಕೂಡ ಸರಿಯಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೀಗಾಗಿ ತಕ್ಷಣ ಸಂಸದರು ಮತ್ತು ಶಾಸಕರು ಬಿಎಸ್ಎನ್ಎಲ್ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಹಳ್ಳಿಗಳ ಜನ ಸಂಕಷ್ಟದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದ ಕಾರಣ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಹಾಗೂ ಸರ್ಕಾರಿ ಕಚೇರಿಗಳು ಕೆಲಸ ಮಾಡುತ್ತಿಲ್ಲ. ಬ್ಯಾಂಕ್ ಹಾಗೂ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಮೂಲ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಬಿಎಸ್ಎನ್ಎಲ್ ಗ್ರಾಹಕರ ಒತ್ತಾಯವಾಗಿದೆ.

Categories
ಸಿನಿಮಾ

ಶಿವಣ್ಣ ಆರೋಗ್ಯದಲ್ಲಿ ಏರುಪೇರು!.. ಈಗ ಓಕೆ!

ಶಿವಣ್ಣ ಆರೋಗ್ಯದಲ್ಲಿ ಏರುಪೇರು!.. ಈಗ ಓಕೆ!
– ಭಯ ಪಡುವ ಅಗತ್ಯವಿಲ್ಲ ಎಂದ ವೈದ್ಯರು
– ಶೂಟಿಂಗ್ ವೇಳೆ ಮಳೆಯಲ್ಲಿ ನೆನೆದಿದ್ದಕ್ಕೆ ಅನಾರೋಗ್ಯ

NAMMUR EXPRESS NEWS
ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ (Hospital) ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಶಿವಣ್ಣ ಪಾಲ್ಗೊಂಡಿದ್ದರು. ಮಳೆಯಲ್ಲಿ ನೆನೆದಿದ್ದರಿಂದ ಹೆಚ್ಚು ಸುಸ್ತಾಗಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಶಿವಣ್ಣ ತೀವ್ರ ಸುಸ್ತಾಗುತ್ತಿದ್ದಂತೆಯೇ ಅವರನ್ನು ಕೂಡಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರು ಅವರಿಗೆ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದ್ದಾರೆ. ಸದ್ಯ ಮನೆಯಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ತಪಾಸಣೆ ನಂತರ ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ವೈದ್ಯರೇ ಸ್ಪಷ್ಟ ಪಡಿಸಿದ್ದಾರೆ.

ಈ ಹಿಂದೆ ಶಿವಣ್ಣಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಮೂಡಿತ್ತು. ಸದ್ಯ ಶಿವಣ್ಣ ಆರಾಮಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

Categories
ಅಪಘಾತ ಚಿಕ್ಕಮಗಳೂರು

ಪ್ರಪಾತಕ್ಕೆ ಉರುಳಿದ ಬಸ್: ಮಹಿಳೆ ಸಾವು

ಪ್ರಪಾತಕ್ಕೆ ಉರುಳಿದ ಬಸ್: ಮಹಿಳೆ ಸಾವು
– ಐದಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ
– ಮೂಡಿಗೆರೆಯ ಚೀಕನಹಳ್ಳಿ ಕ್ರಾಸ್ ಬಳಿ ಘಟನೆ

NAMMUR EXPRESS NEWS
ಮೂಡಿಗೆರೆ: ಖಾಸಗಿ ಬಸ್ಸು ಪ್ರಪಾತಕ್ಕೆ ಉರುಳಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ ಕ್ರಾಸ್ ಬಳಿ ನ.4ರ ಶನಿವಾರ ನಡೆದಿದೆ. ಬೆಂಗಳೂರಿನ ಯಲಹಂಕ ನಿವಾಸಿ ಸುರೇಖಾ (45) ಮೃತ ಮಹಿಳೆ.ಬೆಂಗಳೂರಿನಿಂದ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರ ಬಸ್ ನಲ್ಲಿ ಸುಮಾರು 48ಕ್ಕೂ ಹೆಚ್ಚು ಪ್ರವಾಸಿಗರಿದ್ದು, ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ಹೋಗುತ್ತಿದ್ದ ಬಸ್ ಇದಾಗಿದೆ. ಶನಿವಾರ ಬೆಳಗಿನ ಜಾವ 4:45 ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಐವರಿಗೆ ಮೂಡಿಗೆರೆ, ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಿಗೆರೆ ಭಾಗದಲ್ಲಿ ಪದೇ ಪದೇ ಘಟನೆ

ಮೂಡಿಗೆರೆ ಭಾಗದಲ್ಲಿ ಪದೇ ಪದೇ ಇಂತಹ ದುರಂತ ನಡೆಯುತ್ತಿದ್ದೂ ಸಂಬಂಧಪಟ್ಟ ಇಲಾಖೆ ಗಮನಿಸಬೇಕಿದೆ.

Categories
ತೀರ್ಥಹಳ್ಳಿ

ಉದ್ಯಮಿ ಶ್ರೀಧರ್ ಶೆಟ್ಟಿ ಮನೆಗೆ ರವಿಶಂಕರ್ ಗುರೂಜಿ!

ಉದ್ಯಮಿ ಶ್ರೀಧರ್ ಶೆಟ್ಟಿ ಮನೆಗೆ ರವಿಶಂಕರ್ ಗುರೂಜಿ!
– ತೀರ್ಥಹಳ್ಳಿ ರಾಮಕೊಂಡಕ್ಕೆ ಭೇಟಿ ನೀಡುವ ಮುನ್ನ ಭೇಟಿ
– ರವಿಶಂಕರ್ ಗುರೂಜಿ ಆಪ್ತರಾಗಿರುವ ಶ್ರೀಧರ್ ಶೆಟ್ಟಿ
– ರಾಮಕೊಂಡಕ್ಕೆ ಎರಡನೇ ಬಾರಿಗೆ: ಪುಣ್ಯ ತೀರ್ಥ ಸೇವನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ಉದ್ಯಮಿ ಬಾಳಗಾರು ಶ್ರೀಧರ್ ಶೆಟ್ಟಿ ಮನೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಆಶೀರ್ವಾದ ಮಾಡಿದರು. ತೀರ್ಥಹಳ್ಳಿ ರಾಮಕೊಂಡಕ್ಕೆ ಭೇಟಿ ನೀಡುವ ಮುನ್ನ ಫಾರ್ಮಾ ಕ್ಷೇತ್ರದ ಪ್ರಮುಖ ಉದ್ಯಮಿಯಾಗಿರುವ ಶ್ರೀಧರ್ ಶೆಟ್ಟಿ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರು. ಶ್ರೀಧರ್ ಶೆಟ್ಟಿ ದಂಪತಿಗಳ ಅತಿಥ್ಯ ಸ್ವೀಕರಿಸಿದರು. ಈ ವೇಳೆ ಶ್ರೀಧರ್ ಶೆಟ್ಟಿ ಪತ್ನಿ ವಾಣಿಶ್ರೀ, ಸಂಬಂಧಿ ಹಾಗೂ ಉದ್ಯಮಿ, ಖಂಡಿಲ್ ಮೋಟರ್ಸ್ ಮಾಲೀಕ ಸುನೀಲ್ ಶೆಟ್ಟಿ ಹಾಗೂ ಅವರ ಪತ್ನಿ ಶೈಲಾ ಹಾಗೂ ಕುಟುಂಬದವರು ಇದ್ದರು. ರವಿಶಂಕರ್ ಗುರೂಜಿ ಆಪ್ತರಾಗಿರುವ ಶ್ರೀಧರ್ ಶೆಟ್ಟಿ ಅವರು ತೀರ್ಥಹಳ್ಳಿಯ ಬಾಳಗಾರಿನವರು.

2ನೇ ಬಾರಿಗೆ ರಾಮಕೊಂಡ ಭೇಟಿ: ತೀರ್ಥ ಸ್ವೀಕಾರ!

ತೀರ್ಥಹಳ್ಳಿ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮ ಕೊಂಡಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್ ಗುರೂಜಿ ಎರಡನೇ ಬಾರಿಗೆ ಭೇಟಿ ನೀಡಿದರು. ಕೊಲ್ಲೂರು ಮುಕಾಂಬಿಕೆ ದರ್ಶನ ಮಾಡಿ ವಾಪಾಸ್ ಆಗುವ ವೇಳೆ ತೀರ್ಥಹಳ್ಳಿಗೆ ಭೇಟಿ ನೀಡಿದ ಅವರು ಪಾಪ ಪರಿಹಾರದ ಸಂಕೇತವಾದ ಪ್ರಸಿದ್ಧ ರಾಮ ಕೊಂಡದ ನೀರನ್ನು ಪ್ರೊಕ್ಷಣೆ ಮಾಡಿಕೊಂಡು ಪುನೀತರಾದರು. 2021ರಲ್ಲಿ ಒಮ್ಮೆ ಗುರೂಜಿ ರಾಮಕೊಂಡ ಮತ್ತು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

Categories
ಚಿಕ್ಕಮಗಳೂರು

ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ 3 ದಿನ ನಿರ್ಬಂಧ

ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ 3 ದಿನ ನಿರ್ಬಂಧ
– ದತ್ತಮಾಲಾ ಅಭಿಯಾನ ಹಿನ್ನೆಲೆ: ಎಲ್ಲೆಡೆ ಹೈ ಅಲರ್ಟ್
– ನ.4,5,6ಕ್ಕೆ ಪ್ರವಾಸಿಗರ ನಿರ್ಬಂಧ: ಬಂದವರು ವಾಪಸ್

NAMMUR EXPRESS NEWS
ಚಿಕ್ಕಮಗಳೂರು: ಶ್ರೀರಾಮಸೇನೆ ಕಾರ್ಯಕರ್ತರಿಂದ ದತ್ತಮಾಲಾ ಅಭಿಯಾನ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ 3 ದಿನ ನಿರ್ಬಂಧ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚಂದ್ರದ್ರೋಣ ಪವರ್ತದ ಸಾಲಿನ ಪ್ರವಾಸಿತಾಣಗಳಿಗೆ ಮೂರು ದಿನ ನಿರ್ಬಂಧ ವಿಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಕೈಮರ ಚೆಕ್ ಪೋಸ್ಟ್ ಬಳಿ ವಾಹನ ತಡೆದು ವಾಪಸ್ ಕಳಿಸಲಾಗುತ್ತಿದೆ. ವೀಕೆಂಡ್ ಹಿನ್ನೆಲೆ ಸಾವಿರಾರು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಬಂದಿದ್ದಾರೆ. ಸದ್ಯ ನಿರ್ಬಂಧ ಹಿನ್ನೆಲೆ ಪ್ರವಾಸಿಗರನ್ನು ವಾಪಸ್ ಕಳಿಸಲಾಗುತ್ತಿದೆ.

ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ 20ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಮಾಲಾಧಾರಿಗಳಾಗಿ, 7 ದಿನಗಳ ಕಾಲ ವ್ರತಾಚರಣೆಯಲ್ಲಿದ್ದು, ನವೆಂಬರ್ 5ರಂದು ದತ್ತಪೀಠದಲ್ಲಿ ವಿಶೇಷ ಹೋಮ-ಹವನ ನಡೆಸಲಿದ್ದಾರೆ. ಈ ವರ್ಷದ ದತ್ತಮಾಲಾ ಅಭಿಯಾನಕ್ಕೆ ನಾಗಸಾಧು ಕೂಡ ಆಗಮಿಸಲಿದ್ದಾರೆ. ಹೀಗಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಪೊಲೀಸ್ ಇಲಾಖೆ ಕೂಡ ದತ್ತಪೀಠ ಹಾಗೂ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಮುಂಜಾಗೃತ ಕ್ರಮವಾಗಿ ಎಸ್ಪಿ ವಿಕ್ರಂ ದತ್ತಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನವೆಂಬರ್ 4ರಿಂದ 6ರವರೆಗೂ ಚಂದ್ರದ್ರೋಣ ಪವರ್ತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರನ್ನ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧ ವಿಧಿಸಿದೆ.

ಬಂದವರು ವಾಪಾಸ್!

ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಯಿಂದ ಪ್ರವಾಸಕ್ಕೆ ಬಂದವರನ್ನು ಪೊಲೀಸರು ವಾಪಾಸ್ ಕಳುಹಿಸುತ್ತಿರುವ ದೃಶ್ಯ ಶನಿವಾರ ಎಲ್ಲೆಡೆ ಕಂಡು ಬಂತು. ಚಂದ್ರದ್ರೋಣ ಪವರ್ತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಅವರನ್ನು ಪೊಲೀಸರು ತಡೆದು ವಾಪಾಸ್ ಕಳುಹಿಸಿದ್ದಾರೆ. ಹೀಗಾಗಿ ಪ್ರವಾಸಿಗರು ಹೊರನಾಡು, ಆಗುಂಬೆ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ, ಕರಾವಳಿ ಕಡೆ ಪಯಣ ಬೆಳೆಸಿದ್ದಾರೆ.

Categories
ಚಿಕ್ಕಮಗಳೂರು

ಖಾಂಡ್ಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ

ಖಾಂಡ್ಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ
– ಧರ್ಮಸ್ಥಳ ಯೋಜನೆಯ ಆಶ್ರಯದಲ್ಲಿ ತಪಾಸಣೆ
– ಯಾರು ತಪಾಸಣೆ ಮಾಡಿಸಿಕೊಳ್ಳಬೇಕು…?

NAMMUR EXPRESS NEWS
ಖಾಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಇವರ ಸಹಯೋಗದೊಂದಿಗೆ ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರ ಸ್ತನ ಕ್ಯಾನ್ಸರ್ (ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ನ.7ಕ್ಕೆ ನಡೆಯಲಿದೆ. ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚುವುದೇ ಸೂಕ್ತ ಎಂಬ ಜಾಗೃತಿಯಡಿ 7ನೇ ನವೆಂಬರ್ 2023 (ಮಂಗಳವಾರ) 1 ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ವರೆಗೆ ನೆಡೆಯುತ್ತದೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಖಾಂಡ್ಯ ಹೋಬಳಿ ಆಶ್ರಯದಲ್ಲಿ ನಡೆಯುತ್ತಿದೆ.

ಯಾರು ತಪಾಸಣೆ ಮಾಡಿಸಿಕೊಳ್ಳಬೇಕು

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಉಚಿತ ತಪಾಸಣೆ ಮಾಡಿಸಿಕೊಳ್ಳಿ ನಿಮ್ಮ ವಯಸ್ಸು 40 ದಾಟಿದ್ದರೆ | ಸ್ತನ ಕ್ಯಾನ್ಸರ್‌ನ ಮೊದಲ ಹಂತದ ಸಂಬಂಧವನ್ನು ಹೊಂದಿದ್ದರೆ ಹಾಗೂ ಸ್ತನ ಭಾಗದಲ್ಲಿ ಗಟ್ಟಿಯಾಗುವಿಕೆ ಅಥವಾ ಗಂಟು ಇದ್ದರೆ 1 ಸ್ತನದ ಆಕಾರದಲ್ಲಿ ಅಥವಾ ಗಾತ್ರದಲ್ಲಿ ಬದಲಾವಣೆ ನಿರ್ದಿಷ್ಟವಾಗಿ ಒಳಹೋದಂತೆ ಆಗುವುದು ಅಥವಾ ಅನಿಯಮಿತ ಆಕಾರ ಹೊಂದಿದ್ದರೆ ಸ್ತನದಿಂದ ರಕ್ತಸಾವ ಕಂಡುಬಂದರೆ | ಸ್ತನ ತೊಟ್ಟುಗಳಲ್ಲಿ ಅಥವಾ ಅದರ ಸುತ್ತ ಬಿರುಕುಗಳು ಇದ್ದರೆ ಕಂಕುಳಿನ ಭಾಗದಲ್ಲಿ ಊತ ಅಥವಾ ಗಂಟು ಕಂಡುಬಂದರೆ ಉಚಿತ ಚಿಕಿತ್ಸೆ ಪಡೆಯಿರಿ
ಹೆಚ್ಚಿನ ಮಾಹಿತಿಗಾಗಿ: – 94825 33816, 9481577101, 9980948895

Categories
ಬೆಂಗಳೂರು

ನಾಯಿ, ಬೆಕ್ಕು ಸಾಕ್ತೀರಾ..?, 10 ಸಾವಿರ ಕಟ್ಟಬೇಕು!

ನಾಯಿ, ಬೆಕ್ಕು ಸಾಕ್ತೀರಾ..?, 10 ಸಾವಿರ ಕಟ್ಟಬೇಕು!
– ಬೆಂಗಳೂರಿನ ಅಪಾರ್ಟ್ಮೆಂಟ್ ಅಲ್ಲಿ ನಿಯಮ
– ಏನಿದು… ಯಾಕೆ ಶುಲ್ಕ ಕಟ್ಟಬೇಕು… ನೋಡಿ…!

NAMMUR EXPRESS NEWS
ಬೆಂಗಳೂರು: ಸಾಕು ಪ್ರಾಣಿಗಳನ್ನು ಹೊಂದಿರುವ ಎಲ್ಲರೂ 10,000 ರೂ. ಶುಲ್ಕ ಪಾವತಿಸಬೇಕು. ಈ ಸುದ್ದಿ ನೋಡಿ ಗಾಬರಿಯಾಗಬೇಡಿ…! ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಅಪಾರ್ಟ್ಮೆಂಟ್ ಒಂದು ಇಂತಹ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯಿಂದ ಸಾಕು ಪ್ರಾಣಿ ಪ್ರಿಯರಿಗೆ ಶಾಕ್ ಆಗಿದೆ. ಇತ್ತೀಚಿಗೆ ಬೆಂಗಳೂರಿನ ಬಿಬಿಎಂಪಿ ಸಾಕು ನಾಯಿಗಳ ನೋಂದಣಿ ಕಡ್ಡಾಯ ಮತ್ತು ನೋಂದಣಿ ಶುಲ್ಕ ನಿಗದಿಪಡಿಸಿದ ಬೆನ್ನಲ್ಲೇ ಈ ಸುದ್ದಿ ಭಾರೀ ಚರ್ಚೆ ಮಾಡಿದೆ. 1,000ಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ಎಲೆಕ್ಟ್ರಾನಿಕ್ಸ್ ಸಿಟಿಯ ಮಹಾವೀರ್ ಅಪಾರ್ಟ್ಮೆಂಟ್ ಸಂಕೀರ್ಣವು ಕಳೆದ ವಾರ ಆಂತರಿಕ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ನವೆಂಬರ್ 15ರೊಳಗೆ 10,000 ರೂ.ಶುಲ್ಕ ಪಾವತಿಸಬೇಕು. ಒಂದು ಶುಲ್ಕ ಪಾವತಿಸುವಲ್ಲಿ ವಿಫಲವಾದರೆ ದಿನಕ್ಕೆ 100ರೂ ರಂತೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಮುಂಜಾನೆ 6-7, ಮಧ್ಯಾಹ್ನ 1-2 ಮತ್ತು ರಾತ್ರಿ 10-11 ಈ ಸಮಯಗಳಲ್ಲಿ ಮಾತ್ರ ತಮ್ಮ ತಮ್ಮ ಶ್ವಾನಗಳನ್ನು ಹೊರಗಡೆ ಕರೆದುಕೊಂಡು ಹೋಗಬಹುದು ಎಂದು ನಿರ್ಬಂಧ ವಿಧಿಸಿದೆ.

ಸಾಕು ಪ್ರಾಣಿ ಪ್ರಿಯರು ಖಂಡಿತವಾಗಿ ಪರವಾನಗಿ ಪಡೆಯಬೇಕು ಹಾಗೂ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕು. ಇತರ ನಿವಾಸಿಗಳಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ ಎಂದು ಇಟ್ಟಿನ ಮಹಾವೀರ್ ಅಪಾರ್ಟೆಂಟ್ ಮಾಲೀಕರ ಸಂಘದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಹೇಳಿದ್ದಾರೆ.
ಅಪಾರ್ಟ್ಮೆಂಟ್ ನ ಈ ನೂತನ ಪ್ರಕಟಣೆ ವೈರಲ್ ಆಗಿದ್ದು, ಅಲ್ಲಿನ್ ನಿವಾಸಿಗಳು ಹಾಗೂ ಅನೇಕ ಪೆಟ್ ಲವರ್ಸ್ ಗಳ ಅಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಪ್ರಾಣಿ ದಯಾ ಸಂಘಟನೆಗಳು ಹಾಗೂ ಬಿಬಿಎಂಪಿ ಇದು ಕಾನೂನು ಬಾಹಿರ ನಿಯಮ ಎಂದಿದೆ.

Categories
ಹುಬ್ಬಳ್ಳಿ

ಬಿ.ಪಿ.ಎಲ್ ಕಾರ್ಡ್ ವಿತರಣೆ ಪುನರಾರಂಭ

ಬಿ.ಪಿ.ಎಲ್ ಕಾರ್ಡ್ ವಿತರಣೆ ಪುನರಾರಂಭ
– ನ.3ರಿಂದ ರಾಜ್ಯದಲ್ಲಿ ವಿತರಣೆ: ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ
– ನಕಲಿ ಕಾರ್ಡ್ ಬಗ್ಗೆ ಸರ್ಕಾರ ಅಲರ್ಟ್

NAMMUR EXPRESS NEWS
ಹುಬ್ಬಳ್ಳಿ: ವಿವಿಧ ಕಾರಣಗಳಿಂದ ಹಿಂದಿನ ಸರಕಾರ ಸ್ಥಗಿತಗೊಳಿಸಿದ್ದ ಬಿಪಿಎಲ್‌ ಕಾರ್ಡ್‌ ವಿತರಣೆ ಕಾರ್ಯ ನ.3ರಿಂದ ಪುನರಾರಂಭವಾಗಿದೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಚುನಾವಣೆ ಸಹಿತ ಇತರ ಕಾರಣಗಳಿಂದ ಹೊಸ ಬಿಪಿಎಲ್‌ ಕಾರ್ಡ್‌ಗಳ ವಿತರಣೆಯನ್ನು ಸ್ಥಗಿತಗೊಳಿಸಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇದನ್ನು ಗಂಭೀರವಾಗಿ ಪರಿಗಣಿಸಿ ಪುನರಾರಂಭಿಸಲಾಗಿದೆ. ಇದುವರೆಗೆ ಬಿಪಿಎಲ್‌ ಕಾರ್ಡ್‌ಗಳಿಗೆ ಸುಮಾರು 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ ಅರ್ಹರಿಗೆ ವಿತರಿಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವವರಿಗೆ ಕಾರ್ಡ್‌ಗಳು ದೊರೆಯಬೇಕಾಗಿದೆ. ನಕಲಿ ಕಾರ್ಡ್‌ಗಳ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಹೊಸ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಈ ಮೂಲಕ ಸರ್ಕಾರ ಸಿಹಿ ಸುದ್ದಿ ನೀಡಿದೆ.

Categories
ಕಾರ್ಕಳ

ಮಾಳ ಘಾಟ್, ಅಗುಂಬೆ ಘಾಟ್ ಅಗಲೀಕರಣಕ್ಕೆ ಸಜ್ಜು!

ಮಾಳ ಘಾಟ್, ಅಗುಂಬೆ ಘಾಟ್ ಅಗಲೀಕರಣಕ್ಕೆ ಸಜ್ಜು!
– ಕರಾವಳಿ, ಮಲೆನಾಡು ಸಂಪರ್ಕದ ಘಾಟಿಗಳಿಗೆ ಅಭಿವೃದ್ಧಿ ಭಾಗ್ಯ
– ಶೀಘ್ರದಲ್ಲಿ ಕಾಮಗಾರಿ ಶುರು ಸಾಧ್ಯತೆ?

NAMMUR EXPRESS NEWS
ಕಾರ್ಕಳ: ಬಯಲು ಸೀಮೆ, ಮಲೆನಾಡು ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಘಾಟಿ ರಸ್ತೆಗಳ ಅಗಲೀಕರಣಕ್ಕೆ ಕಾರ್ಯಕ್ಕೆ ಪೂರ್ವ ಸಿದ್ದತ ಚಟುವಟಿಕೆ ಗಳು ಅಂತಿಮ ಹಂತದಲ್ಲಿದೆ. ಎನ್ ಎಚ್ 66ಎ ರಸ್ತೆ ಅಗಲೀಕರಣ ಕಾಮಗಾರಿಯು ವೇಗ ಪಡೆಯುತಿದ್ದು ಎರಡನೆ ಹಂತದ ಅಗಲೀಕರಣಕ್ಕೆ ಡಿಪಿಅರ್ (ಪೂರ್ವ ಸಿದ್ದತಾ ಯೋಜನಾ ವರದಿ) ಸಿದ್ದಪಡಿಸಲಾಗುತ್ತಿದೆ. ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ಎನ್ ಎಚ್ 66 ರಾಷ್ಟ್ರೀಯ ಹೆದ್ದಾರಿಯು ಮಲ್ಪೆ, ಉಡುಪಿ ಮಣಿಪಾಲ‌, ಹಿರಿಯಡ್ಕ ಪೆರ್ಡೂರು , ಹೆಬ್ರಿ ಸೋಮೇಶ್ವರ ಅಗುಂಬೆ ಮಾರ್ಗವಾಗಿ ಶಿವಮೊಗ್ಗ ಮೂಲಕ ಮೊಣಕಾಲ್ಮೂರು ಸಂಪರ್ಕಿಸುತ್ತದೆ

ಎರಡನೆ ಹಂತದ ರಸ್ತೆ ಅಗಲೀಕರಣಕ್ಕೆ ಡಿ ಪಿ ಆರ್!

ಹೆಬ್ರಿ ಸೋಮೇಶ್ವರ ದಿಂದ ಅಗುಂಬೆವರೆಗೆ ಸುಮಾರು 21 ಕಿಮೀ ಉದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ  ಡಿ ಪಿ ಅರ್  ಸಿದ್ದಪಡಿಸಲಾಗುತ್ತಿದೆ. ಈಗಾಗಲೇ ಪೂರ್ವ ಸಿದ್ದತಾ ಯೋಜನಾ ವರದಿ ಮಾಹಿತಿಯನ್ನು ಪಡೆಯಲು ತಜ್ಞರ ಸಲಹೆ ಯನ್ನು ಪಡೆಯಲಾಗುತ್ತಿದೆ . ಹೆಬ್ರಿಯಿಂದ ಮಲ್ಪೆವರೆಗಿನ 1500 ಮರ ತೆರವು ಮಾಡಲಾಗಿದ್ದು,  ರಾಷ್ಟ್ರೀಯ ಹೆದ್ದಾರಿ ಇಲಾಖೆ 2.70 ಕೋಟಿ ರೂ. ಹಣವನ್ನು ಅರಣ್ಯ ಇಲಾಖೆಗೆ ಪಾವತಿ ಮಾಡಿದೆ. ಹೆಬ್ರಿಯಿಂದ  ಮಲ್ಪೆ ಬಂದರುವರೆಗೆ ಸುಮಾರು  39.ಕಿಮೀ  ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ತೀರ್ಥಹಳ್ಳಿಯಿಂದ ಮಲ್ಪೆ ಬಂದರು ವರೆಗಿನ ರಸ್ತೆಯು 2013 ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗಿತ್ತು.

ಉಡುಪಿ ನಗರದಲ್ಲಿ  ಒಟ್ಟು 8 ಕಿ.ಮೀ. ದೂರದ ರಸ್ತೆ ಮೊದಲೆ ಅಗಲಿಕರಣಗೊಂಡಿದ್ದು ಈಗ 206 ಕೋಟಿ ರೂ. ವೆಚ್ಚದಲ್ಲಿ 29 ಕಿ.ಮೀ.ದೂರದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ.   ರಾಷ್ಟ್ರೀಯ ಹೆದ್ದಾರಿ 66ಎ  ಮಲ್ಪೆ -ಉಡುಪಿ ,ಮಣಿಪಾಲ- ಹೆಬ್ರಿ ವರೆಗಿನ ಕಾಮಗಾರಿ ಮುಂದಿನ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ  ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಮಾಳ ಘಾಟ್ ಅಗಲೀಕರಣ ಸಿದ್ದತೆ!

ಮಾಳ ಘಾಟ್ ಶೃಂಗೇರಿವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 540 ಕೋಟಿ  ರೂಪಾಯಿ ಗಳ ಡಿ ಪಿ ಅರ್ ಸಿದ್ದ ಪಡಿಸಲಾಗಿದೆ. ಈಗಿರುವ 3.5 ಮೀ ಹೆದ್ದಾರಿಯನ್ನು 10 ಮೀ ಅಗಲೀಕರಣ ಗೊಳಿಸಲಾಗುತ್ತದೆ. ಮಾಳ ಗೇಟ್ ನಿಂದ ತನಿಕೋಡು  ಗೇಟ್ ವರೆಗಿನ ಸುಮಾರು  50 ಕಿಮೀ ರಸ್ತೆ ಯು ನಿರ್ಮಾಣ ಗೊಂಡು ಮೇಲ್ದರ್ಜೆಗೆ ಏರಿಸಲಾಗುತ್ತದೆ
ಈಗಿರುವ ಮಾಳ ಗೇಟ್  ನಿಂದ ಕಾರ್ಕಳ ಬೈಪಾಸ್ ವರೆಗೆ ಸುಮಾರು 15.27 ಕಿಮೀ ರಸ್ತೆಯನ್ನು 177.4 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆಯನ್ನು ಚತುಷ್ಪತ ರಸ್ತೆ ರಸ್ತೆಯನ್ನಾಗಿ ಪರಿವರ್ತಿಸಿ ಕಾಮಗಾರಿ ನಡೆಯುತ್ತಿದೆ. ಕಾರ್ಕಳ ಬೈಪಾಸ್ ನಿಂದ ಮಂಗಳೂರಿನ ಬಿಕರ್ನಕಟ್ಟೆವರೆಗೆ ಖಾಸಗಿ ಕಂಪೆನಿಯೊಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸವನ್ನು ಗುತ್ತಿಗೆ ಪಡೆದುಕೊಂಡಿದ್ದು  ರಸ್ತೆ ಕಾಮಗಾರಿ ವೇಗ ಪಡೆಯುತ್ತಿದೆ.ಈ ರಾಷ್ಟ್ರೀಯ ಹೆದ್ದಾರಿ ಮಂಗಳೂರು  ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಆಗುಂಬೆ ಘಾಟಿ ಡಿಪಿಆರ್ ಸಿದ್ಧ!

ಆಗುಂಬೆ ಘಾಟ್ ನ  ವಿವರವಾದ ಯೋಜನಾ ವರದಿಯನ್ನು ತಯಾರಿಸಲು  ಎಜೆನ್ಸಿ ನೇಮಕ ಮಾಡುವ ಟೆಂಡರ್ ತಾಂತ್ರಿಕ ಬಿಡ್  ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ  ರಿಜನಲ್ ಅಫಿಸ್   ಮಟ್ಟದಲ್ಲಿ ಪರಿಶೀಲನೆಯಲ್ಲಿದೆ.  ಎಜೆನ್ಸಿ ನೇಮಕವಾದ ಬಳಿಕ ಅಧ್ಯಯನ ಮಾಡಿ ತಾಂತ್ರಿಕ ವಿಷಯಗಳನ್ನು ಆಧರಿಸಿ ವಿವರವಾದ ಯೋಜನಾ ವರದಿ ಸಿದ್ದವಾಗಲಿದೆ.

ಅಧಿಕಾರಿಗಳು ಹೇಳೋದೇನು..?

ಮಾಳ ಘಾಟ್ ನಿಂದ ತನಿಕೋಡು ಗೇಟ್ ವರೆಗಿನ  ರಾಷ್ಟ್ರೀಯ ಹೆದ್ದಾರಿಯು ಕುದುರೆ ಮುಖ ವನ್ಯಜೀವಿ ವಿಭಾಗದಲ್ಲಿ ಹಾದುಹೋಗುತಿದ್ದು ರಾಜ್ಯ ವನ್ಯಜೀವಿ  ವಿಭಾಗದಲ್ಲಿ ಅನುಮೋದನೆ ದೊರಕಿದ್ದು  ನಂತರ  ವಿವರವಾದ ಯೋಜನಾ ವರದಿಯನ್ನು  ಏಜೆನ್ಸಿಯ ವರದಿಯನ್ನು ಆಧರಿಸಿ ಎರಡನೆ ಹಂತದಲ್ಲಿ   ರಾಷ್ಟ್ರೀಯ ವನ್ಯಜೀವಿ ದೆಹಲಿಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗುತ್ತಿದೆ ಮಂಜುನಾಥ ಕೆವಿ  ಆಭಿಯಂತರರು ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಶೃಂಗೇರಿ ತಿಳಿಸಿದ್ದಾರೆ.