Categories
ರಾಷ್ಟ್ರೀಯ ವಾರ್ತೆ

ರೂಪದರ್ಶಿಗಳಾಗಿ ನಟಿಸುತ್ತಿದ್ದ ನಟರಿಗೆ ಶಾಕ್..!

ರೂಪದರ್ಶಿಗಳಾಗಿ ನಟಿಸುತ್ತಿದ್ದ ನಟರಿಗೆ ಶಾಕ್..!
– ಶಾರೂಕ್, ಅಕ್ಷಯ್, ಅಜಯ್‌ ದೇವಗನ್ ಅವರಿಗೆ ನೋಟಿಸ್
– ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಶಿಕ್ಷೆ?!

NAMMUR EXPRESS NEWS
ಗುಟ್ಕಾ ಜಾಹೀರಾತುಗಳಲ್ಲಿ ರೂಪದರ್ಶಿಗಳಾಗಿ ಕಾಣಿಸಿಕೊಂಡಿರುವ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ತಂಬಾಕು ಉತ್ಪನ್ನದ ಬಳಕೆಯನ್ನು ಉತ್ತೇಜಿಸಿರುವುದನ್ನು ಪ್ರಶ್ನಿಸಿ ಕೇಂದ್ರೀಯ ಗ್ರಾಹಕ ರಕ್ಷಣೆ ಪ್ರಾಧಿಕಾರ ಅಕ್ಟೋಬರ್ 20ರಂದು ನೋಟಿಸ್‌ ಜಾರಿ ಮಾಡಿದೆ ಎಂದು ಕೇಂದ್ರ ಸರ್ಕಾರದ ಡೆಪ್ಯಟಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಅಲಹಾಬಾದ್ ಹೈಕೋರ್ಟ್‌ ಲಖನೌ ಪೀಠಕ್ಕೆ ತಿಳಿಸಿದ್ದಾರೆ.

ಪದ್ಮ ಪ್ರಶಸ್ತಿಗಳನ್ನು ಪಡೆದಿರುವ ಸೆಲೆಬ್ರಿಟಿಗಳು ಮತ್ತು ಸಿನೆಮಾ ಕಲಾವಿದರು ತಂಬಾಕು ಬಳಕೆ ಉತ್ತೇಜಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಯುವ ಸಮುದಾಯದ ದಿಕ್ಕು ತಪ್ಪಿಸುತ್ತಿರುವುದನ್ನು ಆಕ್ಷೇಪಿಸಿ ಅಡ್ವೊಕೇಟ್ ಮೋತಿಲಾಲ್ ಯಾದವ್‌ ಎನ್ನುವವರು ದಾವೆ ಹೂಡಿದ್ದಾರೆ.ಈ ದಾವೆಗೆ ಪ್ರತಿಕ್ರಿಯೆ ಸಲ್ಲಿಸರುವ ದುಬೆ ಈಗಾಗಲೇ ಶಾರೂಕ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್‌ಗೆ ಶೋಕಾಸ್‌ ನೋಟಿಸ್‌ ಜಾರಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸರ್ಕಾರಿ ಬಸ್ ಡ್ರೈವರ್ ಮೇಲೆ ಹಲ್ಲೆ!

ತೀರ್ಥಹಳ್ಳಿಯಲ್ಲಿ ಸರ್ಕಾರಿ ಬಸ್ ಡ್ರೈವರ್ ಮೇಲೆ ಹಲ್ಲೆ!
– ಖಾಸಗಿ ಬಸ್ ಮಾಲೀಕನಿಂದ ಹಲ್ಲೆ: ಕೇಸ್
– ಆಗುಂಬೆ ಘಾಟಿಯಲ್ಲಿ ಸಿಕ್ಕ ಶವ: ಆಗಿದ್ದು ಕೊಲೆ!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ ಮಾಲೀಕನೊಬ್ಬ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ತೀರ್ಥಹಳ್ಳಿಯಲ್ಲಿ ವರದಿಯಾಗಿದೆ. ಶಿವಮೊಗ್ಗ – ತೀರ್ಥಹಳ್ಳಿಗೆ ಬಂದಿದ್ದ ಸರ್ಕಾರಿ ಬಸ್ ಚಾಲಕನ ಮೇಲೆ ಖಾಸಗಿ ಬಸ್ ಮಾಲೀಕ ದುರ್ವರ್ತನೆ ನಡೆಸಿ ದರ್ಪ ತೋರಿದ್ದಾನೆ. ಇದೀಗ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ನಡೆದಿದ್ದು ಏನು?:

ಶನಿವಾರ ಬೆಳಿಗ್ಗೆ 9-10ಕ್ಕೆ ತೀರ್ಥಹಳ್ಳಿಯ ಮುಖ್ಯ ಬಸ್‌ ನಿಲ್ದಾಣಕ್ಕೆ ಸರ್ಕಾರಿ ಬಸ್ ಬಂದಿದೆ. ತೀರ್ಥಹಳ್ಳಿ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್ಸಿನ ಮಾಲೀಕರಾದ ಮಧು ಎಂಬುವವರು ಸರ್ಕಾರಿ ಬಸ್ ಅನ್ನು ಅಡ್ಡಕಟ್ಟಿ ಕೆಎಸ್‌ಆರ್ಟಿಸಿ ಬಸ್ ಡ್ರೈವರ್ ಅನ್ನು ಕೆಳಗೆ ಇಳಿಸಿ ಬಸ್ ಕೀಯನ್ನು ತೆಗೆದುಕೊಂಡು ಡ್ರೈವ‌ರ್ ಹಾಗೂ ಕಂಡೆಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಶಕ್ತಿ ಯೋಜನೆ ಉಪಯೋಗಿಸಿಕೊಂಡು ನಮ್ಮ ಬಸ್ ಗೆ ನಷ್ಟ ಉಂಟು ಮಾಡುತ್ತಿದ್ದೀರಾ ಎಂದು ರಂಪಾಟ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಬಸ್ ಚಾಲಕನ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನ ದಾಖಲು ಪಡಿಸಲಾಗಿದೆ.

ಆಗುಂಬೆ ಘಾಟಿಯಲ್ಲಿ ಸಿಕ್ಕ ಶವ ಕೊಲೆ ಆಗಿದ್ದು!

ಆಗುಂಬೆ ಘಾಟಿಯಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಪುತ್ತೂರು ಸಂಪ್ಯ ಪೊಲೀಸ್ ಸ್ಟೇಷನ್​ನ ಪೊಲೀಸರು ಈ ಶವವನ್ನು ಪತ್ತೆ ಹಚ್ಚಿದ್ದಾರೆ. ಮೂಲತಃ ಬಾಗಲಕೋಟೆಯ ಜಿಲ್ಲೆ ಬಾದಾಮಿ ಮೂಲದ ವ್ಯಕ್ತಿಯ ಶವ ಇದಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಇಲ್ಲಿನ ಹನುಮಂತಪ್ಪ (22) ಎಂಬ ಯುವಕನ ಕೊಳೆತ ಶವ ಶುಕ್ರವಾರ ಪತ್ತೆಯಾಗಿತ್ತು. ಕುಂಬ್ರದಲ್ಲಿರುವ ಅರ್ಥ್ ಮೂವರ್ಸ್ ಕಂಪನಿಯೊಂದರಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನವೆಂಬರ್​ 17ರಂದು ನಾಪತ್ತೆಯಾಗಿದ್ದ. ಈತನ ಪತ್ತೆಗಾಗಿ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ.

ಈ ಸಂಬಂಧ ಬಾದಾಮಿ ತಾಲೂಕಿನ ಡಂಕಶಿರೂರು ಗ್ರಾಮದ ಶಿವಪ್ಪ ಹನುಮಪ್ಪ ಮಾದರ, ಮಂಜುನಾಥ ಹನು ಮಾದಪ್ಪ ಮಾದರ, ದುರ್ಗಪ್ಪ ಮಾದರನನ್ನ ಬಂಧಿಸಿದ್ದರು. ಅವರ ವಿಚಾರಣೆ ವೇಳೆ ಆರೋಪಿಗಳು ಶಂಕಿತರು ಹನುಮಂತಪ್ಪನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದರಷ್ಟೆ ಅಲ್ಲದೆ ಶವವನ್ನು ವಿಲೇವಾರಿ ಮಾಡಿದ ಸ್ಥಳವನ್ನು ಬಹಿರಂಗಪಡಿಸಿದ್ದರು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಉಳ್ಳಾಲ: ಪಿಯುಸಿ ವಿದ್ಯಾರ್ಥಿಗಳಿಬ್ಬರು ನೀರುಪಾಲು
ಬಡಗನ್ನೂರು: ರಕ್ತ ವಾಂತಿ ಮಾಡಿಕೊಂಡು ವ್ಯಕ್ತಿ ಸಾವು
ಸುರತ್ಕಲ್: ಟೋಲ್ ಗೇಟ್ ಗೆ ಡಿಕ್ಕಿ ಹೊಡೆದ ಟ್ರಕ್!
ಹೆಬ್ರಿ : ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ

NAMMUR EXPRESS NEWS
ಉಳ್ಳಾಲ : ಸೋಮೇಶ್ವರ ಸಮುದ್ರದ ನೀರಿನಲ್ಲಿ ಆಡಲು ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಸೋಮೇಶ್ವರ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್(17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್ (17) ಸಮುದ್ರಪಾಲಾದವರು. ಶನಿವಾರ ಮಧ್ಯಾಹ್ನ ಬಳಿಕ ನಾಲ್ವರು ವಿದ್ಯಾರ್ಥಿಗಳು ಸೋಮೇಶ್ವರ ಸೋಮನಾಥ ದೇವಸ್ಥಾನಕ್ಕೆ ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಕಡಲ ಕಿನಾರೆಗೆ ಹೋಗಿ ನೀರಾಟದಲ್ಲಿ ತೊಡಗಿದ್ದರು. ಈ ಸಂದರ್ಭ ಬಂದ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿದ ಯಶ್ವಿತ್ ಮತ್ತು ಯುವರಾಜ್ ಸಮುದ್ರಪಾಲಾದರು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಈಜು ತಜ್ಞರು ಸ್ಥಳಕ್ಕೆ ಧಾವಿಸಿ ನೀರುಪಾಲಾದ ವಿದ್ಯಾರ್ಥಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಕ್ತ ವಾಂತಿ ಮಾಡಿಕೊಂಡು ವ್ಯಕ್ತಿ ಸಾವು

ಬಡಗನ್ನೂರು : ಇಲ್ಲಿನ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಮಾಡಿ ಡಿ. 9ರಂದು ದಿಢೀರ್ ಅಸ್ವಸ್ಥಗೊಂಡು ವೆನ್ಹಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಡಿ. 8ರಂದು ಮೈಂದನಡ್ಕದಲ್ಲಿ ನಡೆದಿದ್ದ ವಾಲಿಬಾಲ್ ಪಂದ್ಯಾಟವೊಂದರಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಬಂದಿದ್ದ ಅವರು ದಿಢೀರ್ ರಕ್ತವಾಂತಿ ಮಾಡಲಾರಂಭಿಸಿದ್ದರು. ಡಿ. 9ರಂದು ಬೆಳಗ್ಗೆ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಬಡಗನ್ನೂರು ಗ್ರಾಮ ಪಂಚಾಯತ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಒಂದು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಇವರು, ಕೋಟಿ ಚೆನ್ನಯ ಯುವಕ ಮಂಡಲ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು

ಟೋಲ್ ಗೇಟ್ ಗೆ ಡಿಕ್ಕಿ ಹೊಡೆದ ಟ್ರಕ್!

ಸುರತ್ಕಲ್ : ಶನಿವಾರ ರಾತ್ರಿ ಮಳೆಗೆ ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ಗೆ ಟ್ರಕ್ ವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಟೋಲ್ ಸಂಗ್ರಹ ನಿಂತ ಬಳಿಕ ಅಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಕತ್ತಲಲ್ಲಿ ದಿಢೀ‌ರ್ ಎದುರಾಗುವ ಟೋಲ್ ಕಂಬಗಳು ಅಪಘಾತದ ಸ್ಪಾಟ್ ಆಗಿ ಬದಲಾಗಿದೆ. ಅಪಘಾತದ ಪರಿಣಾಮ ಕಂಬಗಳು ಜಾರಿ ಕುಸಿಯುವ ಭೀತಿ ಮೂಡಿಸಿದೆ.

ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ

ಹೆಬ್ರಿ : ಹಿರಿಯಡಕ ಪೊಲೀಸ್ ಠಾಣಾ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪ‌ರ್ ವಾಹನದಲ್ಲಿ ಹಿರಿಯಡಕ ಜಂಕ್ಷನ್‌ನಿಂದ ಮಣಿಪಾಲ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿಯಾದ ಘಟನೆ ನಡೆದಿದೆ. ಟಿಪ್ಪ‌ರ್ ವಾಹನವನ್ನು ಪರಿಶೀಲಿಸಿದಾಗ ಸುಮಾರು 12 ಸಾವಿರ ರೂ. ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನ ಮಾಡಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ವಾಹನ ಸಹಿತ ವಶಪಡಿಸಿಕೊಂಡು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Categories
ತೀರ್ಥಹಳ್ಳಿ

ಬೆಟ್ಟಮಕ್ಕಿ, ಮಿಲ್ಕೇರಿಯಲ್ಲಿ ದೀಪೋತ್ಸವ ಸಂಭ್ರಮ!

ಬೆಟ್ಟಮಕ್ಕಿ, ಮಿಲ್ಕೇರಿಯಲ್ಲಿ ದೀಪೋತ್ಸವ ಸಂಭ್ರಮ!
– ತೀರ್ಥಹಳ್ಳಿಯಲ್ಲಿ ದೀಪೋತ್ಸವ: ಸರ್ವರಿಗೂ ಸ್ವಾಗತ
– ಡ್ಯಾನ್ಸ್ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬೆಟಮಕ್ಕಿ ಭೂತರಾಯಸ್ವಾಮಿ ಮತ್ತು ಪರಿವಾರ ದೇವರುಗಳ ಸಾನಿಧ್ಯದಲ್ಲಿ ದೀಪೋತ್ಸವ ಡಿ.10ಕ್ಕೆ ನಡೆಯಲಿದೆ. ಭಾನುವಾರ ಸಂಜೆ 5:00 ಗಂಟೆಯಿಂದ ಭೂತರಾಯನ ಸಾನಿಧ್ಯದಲ್ಲಿ ಕಲಾ ಹೋಮ – ಸತ್ಯನಾರಾಯಣ ಪೂಜೆ, ತದನಂತರ ಸಾನಿಧ್ಯದಲ್ಲಿ ಏಳು ಗಂಟೆಗೆ ಸ್ವಾಮಿಗೆ ಕಾರ್ತಿಕ ದೀಪೋತ್ಸವ ನಡೆಯಲಿದ್ದು ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.

ಡ್ಯಾನ್ಸ್ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮ

ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಟ್ಟಮಕ್ಕಿಯ ಭೂತರಾಯ ಸ್ವಾಮಿ ರಂಗಮಂದಿರದಲ್ಲಿ ಮಂಗಳೂರು ಗೀತ ಸಂಗೀತ್ ಮೆಲೋಡಿಯಸ್ ಇವರಿಂದ ಡ್ಯಾನ್ಸ್ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ಕಲಾ ರಸಿಕರ ಮನಸುರೆಗೊಂಡಿತು.

ಮಿಲ್ ಕೇರಿ ಭೂತರಾಯ ಸ್ವಾಮಿ ದೇಗುಲದಲ್ಲಿ ದೀಪೋತ್ಸವ

ತೀರ್ಥಹಳ್ಳಿಯ ಮಿಲ್ಕೆರಿ ಭೂತರಾಯ ಸ್ವಾಮಿ ದೇಗುಲದಲ್ಲಿ ಡಿ.10ರ ಸಂಜೆ ನಡೆಯಲಿದೆ. ಸಮಿತಿ ವತಿಯಿಂದ ಸರ್ವರನ್ನು ಸ್ವಾಗತಿಸಲಾಗಿದೆ.

Categories
inspiration ತೀರ್ಥಹಳ್ಳಿ ಮಲ್ನಾಡ್ ರಾಜ್ಯ

ರಾಜ್ಯಕ್ಕೆ ಮಾದರಿಯಾಯ್ತು ‘ಸಮರ್ಪಣ’ ತಂಡ!

ರಾಜ್ಯಕ್ಕೆ ಮಾದರಿಯಾಯ್ತು ‘ಸಮರ್ಪಣ’ ತಂಡ!
– ತಮ್ಮ ಗ್ರಾಮದ ಅಭಿವೃದ್ಧಿಗೆ ಜೀವನ ಸಮರ್ಪಣೆ
– ಹತ್ತು ಹಲವು ಅಭಿವೃದ್ಧಿ ಕೆಲಸಕ್ಕೆ 7 ಮಂದಿಯ ಪ್ರೇರಣೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ರಾಮಕೃಷ್ಣಪುರ ಸಮೀಪದ ಸಮರ್ಪಣ ತಂಡ ಇದೀಗ ತನ್ನ ಊರಿನ ಅಭಿವೃದ್ಧಿ ಕೆಲಸಕ್ಕೆ ತಮ್ಮ ಗಳಿಕೆಯ ಒಂದಷ್ಟು ಹಣ ಮೀಸಲಿಟ್ಟು ಅದನ್ನು ವಿವಿಧ ಅಭಿವೃದ್ಧಿ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. 7 ಮಂದಿ ಸಮಾಜಪರ ಚಿಂತನೆಯ ಯುವಕರು ಮತ್ತು ವಿವಿಧ ಕೆಲಸ ಮಾಡುವವರ ತಂಡ ಸೇರಿ ತಮ್ಮ ಊರಿನ ಅನೇಕ ಅಭಿವೃದ್ಧಿ ಕೆಲಸಗಳಿಗೆ ತಮ್ಮ ತಿಂಗಳಿನ ಆದಾಯದಲ್ಲಿ ಒಂದಷ್ಟು ಹಣವನ್ನು ಒಟ್ಟುಗೂಡಿಸಿ ಆ ಕೆಲಸವನ್ನು ತಿಂಗಳ ಒಂದು ದಿನದಲ್ಲಿ ಮಾಡುವ ಮೂಲಕ ಹೊಸ ಕಲ್ಪನೆಯೊಂದಿಗೆ ಈಗಾಗಲೇ ಹತ್ತಾರು ಕೆಲಸ ಮಾಡಿದ್ದಾರೆ.

9 ವಿವಿಧ ಕ್ಷೇತ್ರದ ಕೆಲಸ!

ಸೇವಾ ಮನೋಭಾವದ ತಂಡ ಎಲ್ಲಾ ಗ್ರಾಮಕ್ಕೂ ಮಾದರಿಯಾಗಿದ್ದು, ಈಗ ಎಲ್ಲೆಡೆ ಈ ತರದ ಕಲ್ಪನೆಗಳು ಹುಟ್ಟಿಕೊಳ್ಳಲು ಸಹಕಾರಿಯಾಗಿದೆ. ಸಮರ್ಪಣ ತಂಡದ ಏಳು ಮಂದಿ ಕೂಡ ವಿವಿಧ ಇಲಾಖೆ ಹಾಗೂ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಸಮಯ ಹಾಗೂ ಹಣವನ್ನು ಪ್ರತಿ ತಿಂಗಳು ಒಗ್ಗೂಡಿಸಿದ್ದಾರೆ. ಇನ್ನೂ ಗ್ರಾಮದ ನೈರ್ಮಲ್ಯ, ಅಭಿವೃದ್ಧಿ, ಸ್ವಚ್ಛತೆ, ಕನ್ನಡ ಕಾರ್ಯಕ್ರಮಗಳು, ಪ್ರಾಣಿ ಸೇವಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಮಾಡಿದ 9 ಕಾರ್ಯಕ್ರಮದಲ್ಲೂ ತಮ್ಮ ವಿಭಿನ್ನತೆಯನ್ನು ತೋರಿಸಿದ್ದಾರೆ. ಈ ಮೂಲಕ ಅವರು ತಮ್ಮ ಸಮಾಜ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಗುರಿಯನ್ನು ಹೊಂದಿದ್ದಾರೆ.

ಸಮಾಜದ ಸಮಸ್ಯೆಗೆ ಮೂಲದಲ್ಲೇ ಪರಿಹಾರ!

ಸಮರ್ಪಣ ತಂಡದಲ್ಲಿ ಒಬ್ಬರಾದ ರಾಮಕೃಷ್ಣಪುರದ ಶಿಕ್ಷಕ ನಾಗರಾಜ್ ಅವರು ಮಾತನಾಡಿ ಸಮರ್ಪಣ ತಂಡವು ತಮ್ಮ ಜೀವನದ ಕೆಲವು ಸಮಯವನ್ನು ಸಮಾಜಕ್ಕೆ ಸಮರ್ಪಣೆ ಮಾಡುವುದಾಗಿದೆ. ಇಂಥ ಕಲ್ಪನೆಯೊಂದಿಗೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಸಮರ್ಪಣ ತಂಡದ ಈ ಕಾರ್ಯಕ್ರಮ ಎಲ್ಲೆಡೆ ಎಲ್ಲ ಗ್ರಾಮಗಳಲ್ಲೂ ಶುರುವಾಗಬೇಕೆಂಬುದು ನಮ್ಮ ಆಸೆ. ಏಕೆಂದರೆ ಈ ಮೂಲಕ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಜೊತೆಗೆ ಸಣ್ಣ ಸಣ್ಣ ಸಮಸ್ಯೆಗಳಿಗೆ ಮೂಲದಲ್ಲಿಯೇ ಪರಿಹಾರ ಸಿಗುತ್ತದೆ. ಹೀಗಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಗ್ರಾಮದ ಅಭಿವೃದ್ಧಿಗೆ ಹಲವು ಪ್ಲಾನ್..!

ಅಪಘಾತ ತಪ್ಪಿಸಲು ರಸ್ತೆಗಳಲ್ಲಿ ವೇಗ ತಡೆ, ಜಾನುವಾರುಗಳಿಗೆ ರೇಡಿಯಂ ಬೆಲ್ಟ್, ಪ್ರತಿಭಾವಂತರ ಮನೆಗೆ ತೆರಳಿ ಸನ್ಮಾನ, ವನ ಮಹೋತ್ಸವ, ಬಸ್ ನಿಲ್ದಾಣ ಸ್ವಚ್ಛತೆ, ಕನ್ನಡ ದೀಪೋತ್ಸವ, ಮಕ್ಕಳಿಗೆ ರಾಮಾಯಣ ಪರೀಕ್ಷೆ , ಪ್ರಾಣಿಗಳಿಗೆ ರೇಬಿಸ್ ಚಿಕಿತ್ಸೆ, ಬೀದಿ ನಾಯಿಗಳ ಸಂತಾನ ಹರಣ, ಬಸ್ ಸ್ಟ್ಯಾಂಡ್ ಸ್ವಚ್ಛತೆ, ಪ್ಲಾಸ್ಟಿಕ್ ನಿಷೇಧಕ್ಕಾಗಿ ಬಟ್ಟೆ ಚೀಲ ವಿತರಣೆ, ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಮರ್ಪಣ ತಂಡ ಇದುವರೆಗೂ ಮಾಡಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲನ್ನು ಎದುರಿಸಲು ಪ್ರಶ್ನಾಕೋಠಿ ತಯಾರಿಸಿ ಪರೀಕ್ಷೆಗಳನ್ನು ನಡೆಸಲು ಇದೀಗ ಸಿದ್ಧತೆ ನಡೆಸುತ್ತಿದ್ದಾರೆ…

ಒಟ್ಟಿನಲ್ಲಿ ಇವರ ಕೆಲಸಗಳಿಗೆ ಶುಭಾಶಯ ಸಲ್ಲಿಸುತ್ತಾ ಇಂತಹ ಸಮಾನ ಮನಸ್ಕರ ತಂಡ ಪ್ರತೀ ಊರಿನಲ್ಲಿಯೂ ಆದಾಗ ಊರಿನ ಬೆಳವಣಿಗೆ ಖಂಡಿತಾ ಸಾಧ್ಯ ಎಂಬುದು ನಮ್ಮ ಆಶಯ.

Inspiration Story

Categories
ಬೆಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಮಲೆನಾಡು ಮಿತ್ರ ವೃಂದಕ್ಕೆ ಪ್ರದೀಪ್ ಹೆಗ್ಗೋಡು ಸಾರಥಿ!

ಮಲೆನಾಡು ಮಿತ್ರ ವೃಂದಕ್ಕೆ ಪ್ರದೀಪ್ ಹೆಗ್ಗೋಡು ಸಾರಥಿ!
– ಬೆಂಗಳೂರಿನ ಮಲೆನಾಡು ಸಂಘಟನೆಯ ಸಂಸ್ಥೆ
– ಮಲೆನಾಡಿಗರ ದನಿಯಾಗಿ, ಸಾಂಸ್ಕೃತಿಕ, ಕ್ರೀಡಾ ಕೆಲಸ
– ಜ.14ಕ್ಕೆ ಮಲೆನಾಡಿಗರ ಕ್ರೀಡಾಕೂಟ: ಸರ್ವರಿಗೂ ಸ್ವಾಗತ

NAMMUR EXPRESS NEWS
ಬೆಂಗಳೂರು: ಮಲೆನಾಡಿಗರ ದನಿಯಾಗಿ, ಸಾಹಿತ್ಯ, ಸಾಂಸ್ಕೃತಿಕ , ಸಂಘಟನೆ, ಕ್ರೀಡೆ ಹೀಗೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಲೆನಾಡಿಗರ ಸಂಘಟನೆ ಮಲೆನಾಡು ಮಿತ್ರವೃಂದದ ನೂತನ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಸಮಾಜಪರ ಚಿಂತನೆಯುಳ್ಳ ಪ್ರದೀಪ್ ಹೆಗ್ಗೋಡು ಆಯ್ಕೆಯಾಗಿದ್ದಾರೆ. ಮಲೆನಾಡಿನ ಜನರ ಪರವಾಗಿ ಬೆಂಗಳೂರಿನಲ್ಲಿ ಮಲೆನಾಡು ಮಿತ್ರ ವೃಂದ ಕೆಲಸ ಮಾಡುತ್ತಿದೆ. ಈ ಹಿಂದೆ ಅನೇಕರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಪ್ರದೀಪ್ ಹೆಗ್ಗೋಡು ಅಧ್ಯಕ್ಷರಾಗಿದ್ದಾರೆ.

ಉದ್ಯಮಿಯ ಸಾಮಾಜಿಕ ಹೆಜ್ಜೆ…!

ಪ್ರದೀಪ್ ಹೆಗ್ಗೋಡು ಕೊಡಚಾದ್ರಿ ಚಿಟ್ಸ್ ಸಂಸ್ಥೆ ಮಾಲೀಕರಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೊಸ ಛಾಪು ಮೂಡಿಸಿದ್ದಾರೆ. ಕೊಡಚಾದ್ರಿ ಚಿಟ್ಸ್, ಆಸರೆ ಹೋಟೆಲ್ ಸೇರಿ ಅನೇಕ ಉದ್ಯಮ ಸಂಸ್ಥೆಗಳನ್ನು ತೆರೆದು ಸಾವಿರಾರು ಮಂದಿಗೆ ಬದುಕು ನೀಡಿದ್ದಾರೆ. ರಾಜ್ಯದೆಲ್ಲೆಡೆ ತಮ್ಮ ಚಿಟ್ಸ್ ಸಂಸ್ಥೆಯ ಮೂಲಕ ಸಾವಿರಾರು ಮಂದಿಗೆ ಕೆಲಸವನ್ನು ನೀಡಿದ್ದಾರೆ. ತೀರ್ಥಹಳ್ಳಿಯ ಹೆಮ್ಮೆಯ ಉದ್ಯಮಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ಸಂಘಟನೆಗೆ ಮತ್ತಷ್ಟು ಬಲ ಬಂದಿದೆ.

ನೂತನ ತಂಡಕ್ಕೆ ಯುವ ಸಂಘಟಕರು

ಬೆಂಗಳೂರಿನ ಮಲೆನಾಡ ಸಂಘಟನೆ ಮಲೆನಾಡು ಮಿತ್ರವೃಂದದ ಅಧ್ಯಕ್ಷರಾಗಿ ಪ್ರದೀಪ್ ಹೆಗ್ಗೋಡು, ಉಪಾಧ್ಯಕ್ಷರಾಗಿ ಹರೀಶ್ ಹಿಂಬರವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಂದೇಶ್ ಹಂದಿಗೋಡು, ಖಜಾಂಚಿಯಾಗಿ ಸುಧಾಕರ್ ಯಡದಾಳು,
ಸಹ ಕಾರ್ಯದರ್ಶಿಯಾಗಿ ಕೃಷ್ಣ ಮೂರ್ತಿ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಸ್ಲೆ ಹಾಗೂ ದಿನೇಶ್ ಹೊಸನಗರ ಆಯ್ಕೆಯಾಗಿದ್ದಾರೆ. ಈ ಎಲ್ಲರೂ ದಶಕಗಳಿಂದ ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಲೆನಾಡಿನ ಮೂಲದ ಉದ್ಯಮಿಗಳು, ಸಂಘಟಕರು ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಅವರು ಕೂಡ ಮಲೆನಾಡಿನ ಜನರ ದನಿಯಾಗಿ ರಾಜಧಾನಿಯಲ್ಲಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸಮಸ್ತ ಮಲೆನಾಡಿಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಜ.14ಕ್ಕೆ ಮಲೆನಾಡು ಮಿತ್ರ ವೃಂದದ ಕ್ರೀಡಾಕೂಟ

ಜನವರಿ 14,2024 ಭಾನುವಾರದಂದು ಪ್ರತಿ ವರ್ಷದಂತೆ ಬೆಂಗಳೂರಿನ ಹೆಚ್ಎಂಟಿ ಆಟದ ಮೈದಾನದಲ್ಲಿ ಮಲೆನಾಡಿಗರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಮಲೆನಾಡಿಗರು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ನೀವು ಬನ್ನಿ ಸ್ನೇಹಿತರನ್ನು ಕರೆತನ್ನಿ. 2024ರ ಕ್ಯಾಲೆಂಡರ್ ಅನ್ನು ವಿತರಿಸಲಾಗುವುದು ಎಂದು ನೂತನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Categories
Uncategorized

ಅಂಗವಿಕಲ ಕುಟುಂಬಕ್ಕೆ ಬೇಕಿದೆ “ಸಹಾಯ ಹಸ್ತ”!

ಅಂಗವಿಕಲ ಕುಟುಂಬಕ್ಕೆ ಬೇಕಿದೆ “ಸಹಾಯ ಹಸ್ತ”!
– ಮನೆಯಲ್ಲಿರುವ ಮೂವರು ಕೂಡ ಅಂಗವಿಕಲರು
– ದುಡಿಯಲು ಆಗದೆ ಬದುಕು ಸಾಗಿಸಲು ಸಂಕಷ್ಟ

NAMMUR EXPRESS NEWS
ತೀರ್ಥಹಳ್ಳಿ: ಮನೆಯಲ್ಲಿ ಮೂವರು ಅಂಗವಿಕಲರು. ದುಡಿಯಲು ಕೂಡ ಆಗುತ್ತಿಲ್ಲ. ಇದಲ್ಲದೆ ದಿನ ನಿತ್ಯದ ಖರ್ಚು, ಅರೋಗ್ಯ ನಿರ್ವಹಣೆಗಾಗಿ ಮಾಡಿದ ಸಾಲ. ಈಗ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಇದೀಗ ಈ ಕುಟುಂಬ ಸಹಾಯಕ್ಕಾಗಿ ಇದೀಗ ದಾನಿಗಳ ನೆರವನ್ನು ಕೋರಿದ್ದಾರೆ.

ಹೌದು. ತೀರ್ಥಹಳ್ಳಿಯ ಸರ್ಕಾರಿ ಪಿಯು ಕಾಲೇಜ್ ಹಿಂಭಾಗದಲ್ಲಿರುವ ರಾಜೇಶ್ ಎಂಬುವರ ಕುಟುಂಬ ಈಗ ಸಂಕಷ್ಟದಲ್ಲಿದೆ. ರಾಜೇಶ್, ಆತನ ಅಕ್ಕ ಅಂಗವಿಕಲರು. ರಾಜೇಶ್ ಕಾಲು ಅಂಗವಿಕಲರಾಗಿದ್ದರೂ ಅಲ್ಲಿ ಇಲ್ಲಿ ಕೆಲಸ ಮಾಡಿ ಅಕ್ಕ, ತಾಯಿಯನ್ನು ಸಾಕುತ್ತಿದ್ದಾರೆ. ದಿನೇ ದಿನೇ ಬದುಕು ಭಾರ ಆಗುತ್ತಿದೆ. ಬೇರೆಯವರ ಆಟೋವನ್ನು ದಿನದ ಬಾಡಿಗೆ ಆಧಾರದಲ್ಲಿ ಓಡಿಸುತ್ತಿರುವ ರಾಜೇಶ್ ಕೂಡ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಅಕ್ಕ ಕೂಡ ಕಾಲು ಸ್ವಾಧೀನ ಕಳೆದುಕೊಂಡಿದ್ದು ಅಂಗವಿಕಲರಾಗಿ ಕಳೆದ ಅನೇಕ ದಶಕಗಳಿಂದ ಜೀವನ ಮಾಡುತ್ತಿದ್ದಾರೆ. ತಾಯಿ ವಯಸಸ್ಸಿನ ಕಾರಣ ಕೆಲಸ ಮಾಡಲಾಗುತ್ತಿಲ್ಲ. ಆದರೆ ಇತ್ತೀಚೆಗೆ ಅವರಿಗೆ ದುಡಿಮೆ ಇಲ್ಲದ ಕಾರಣ ಬದುಕು ಸಾಗಿಸಲು ಸಂಕಷ್ಟವಾಗಿದ್ದು. ಇದೀಗ ಅವರು ಸಹಕಾರವನ್ನು ಕೋರಿದ್ದಾರೆ. ಇರುವ ಮನೆಯೂ ಬೀಳುವ ಹಂತದಲ್ಲಿದೆ. ಒಂದು ಹೊತ್ತು ಊಟಕ್ಕೂ ಕೂಡ ಕಷ್ಟಕರ ಪರಿಸ್ಥಿತಿ ಇದ್ದು, ಇದರ ನಡುವೆ ಅನಾರೋಗ್ಯ ಕಾಡುತ್ತಿದೆ. ಬದುಕು ಸಾಗಿಸಲು ಸಂಘ ಸಂಸ್ಥೆಗಳಲ್ಲಿ ಮಾಡಿದ ಸಾಲ ಇಡೀ ಕುಟುಂಬವನ್ನು ಪ್ರತಿ ಕ್ಷಣ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.

ತಮ್ಮ ಕೈಯಲ್ಲಾದ ಸಹಾಯ ಮಾಡಿರಿ

ಅಂಗವಿಕಲ ಕುಟುಂಬದ ನೋವಿಗೆ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಬೇಕಿದೆ. ಸಂಘ ಸಂಸ್ಥೆಗಳು, ಎನ್. ಜಿ. ಓ, ಉದ್ಯಮಿಗಳು, ಜನಪ್ರತಿನಿಧಿಗಳು, ದಾನಿಗಳು ಮಾನವೀಯತೆಯ ನೆಲೆಯಲ್ಲಿ ಸಹಾಯ ಮಾಡಬೇಕು ಎಂದು ಮಾಡಬಹುದಾಗಿದೆ.

ಬ್ಯಾಂಕ್ ಮತ್ತು ಡಿಜಿಟಲ್ ಖಾತೆ ಮಾಹಿತಿ

Name: Rajesh
Bank Name: Indian Overseas Bank
Account Number : 331701000000648
IFSC Code : IOBA0003317
Branch : Thirthahalli

Categories
ಚಿಕ್ಕಮಗಳೂರು

ಪ್ರವಾಸಕ್ಕೆಂದು ಬಂದು ಪ್ರಪಾತಕ್ಕೆ ಬಿದ್ದು ಸಾವು!

ಪ್ರವಾಸಕ್ಕೆಂದು ಬಂದು ಪ್ರಪಾತಕ್ಕೆ ಬಿದ್ದು ಸಾವು!
– 3 ಸಾವಿರ ಅಡಿ ಕೆಳಗೆ ಶವ ಪತ್ತೆ: ಏನಿದು ಘಟನೆ?
– ಶಿಕಾರಿಪುರ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
– ಇಬ್ಬರು ಪ್ರಾಥಮಿಕ ಶಾಲೆ ಶಿಕ್ಷಕರು ಸಸ್ಪೆಂಡ್

NAMMUR EXPRESS NEWS
ಮೂಡಿಗೆರೆ: ರಾಜಧಾನಿಯಿಂದ ಪ್ರವಾಸಕ್ಕೆಂದು ಬಂದು ಕಣ್ಮರೆಯಾಗಿದ್ದ ಯುವಕನ ಶವ 3 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂ ಪಾಯಿಂಟ್ ಬಳಿ ನಡೆದಿದೆ. ಬೆಂಗಳೂರು ಮೂಲದ ಯುವಕ ಭರತ್ (30) ಪ್ರವಾಸಕ್ಕೆಂದು ಕಣ್ಮರೆಯಾಗಿದ್ದು, ದುರ್ಗದಹಳ್ಳಿ ಸಮೀಪ ಇರುವ ರಾಣಿಜರಿ ವ್ಯೂಪಾಯಿಂಟ್ ಬಳಿ ಬೈಕ್ ನಿಲ್ಲಿಸಿ ಬೈಕ್ ಹಿಂಬದಿಯಲ್ಲಿ ತನ್ನ ಐಡಿ ಕಾರ್ಡ್ ಸಿಕ್ಕಿಸಿ, ಬ್ಯಾಗನ್ನು ಇಟ್ಟು, ಟೀ ಶರ್ಟ್ ನೇತು ಹಾಕಿ ಯುವಕ ನಾಪತ್ತೆಯಾಗಿದ್ದ.  ಈ ಸಂಬಂಧ ಪೊಲೀಸ್‌ ಇಲಾಖೆ ಹಾಗೂ ಸಮಾಜ ಸೇವಕ ಆರೀಫ್ ಶೋಧ ಕಾರ್ಯ ನಡೆಸಿ, ಕಣ್ಮರೆಯಾದ ಭರತ್ 3 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಆತ್ಮಹತ್ಯೆಯೋ..?, ಆಕಸ್ಮಿಕವೋ ತನಿಖೆಯಿಂದ ತಿಳಿದು ಬರಬೇಕಿದೆ. ಪೊಲೀಸ್‌ ಇಲಾಖೆ, ಊರಿನ ಗ್ರಾಮಸ್ಥರು, ಧರ್ಮಸ್ಥಳ ಶೌರ್ಯ ವಿಪತ್ತು, ಸಮಾಜ ಸೇವಕ ಆರೀಫ್‌, ಇದ್ದರು

ವಿದ್ಯಾರ್ಥಿಯರಿಗೆ ಲೈಂಗಿಕ ಕಿರುಕುಳ: ಇಬ್ಬರು ಅಮಾನತು

ಶಿಕಾರಿಪುರ: ಶಾಲಾ ವಿದ್ಯಾರ್ಥಿನಿಯರಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲು ಡಿಡಿಪಿಐ ಆದೇಶಿಸಿದ್ದಾರೆ. ಶಿಕಾರಿಪುರ ಸೊಪ್ಪಿನಕೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಾಯಕ ಶಿಕ್ಷಕ ಶಾಂತಕುಮಾರ್ ಹಾಗೂ ಮುಖ್ಯ ಶಿಕ್ಷಕ ನಾಗರಾಜ್ ಕೋರಿ ಅವರನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕ ಶಾಂತಕುಮಾರ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದ್ದು, ಪ್ರಕರಣದ ಬಗ್ಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆಪಾದನೆಯಿಂದಾಗಿ ಮುಖ್ಯ ಶಿಕ್ಷಕನನ್ನೂ ಅಮಾನತು ಮಾಡಲಾಗಿದೆ.

ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿತ್ತು. ಈ ನಡುವೆ ಬಂದ ಆರೋಪಗಳ ಅಧಾರದ ಮೇಲೆ ಬಿಇಒ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಡಿಡಿಪಿಐ ಅವರಿಗೆ ವರದಿ ನೀಡಿದ್ದರು. ಇದರ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿದೆ.

Categories
ತೀರ್ಥಹಳ್ಳಿ ಬೆಂಗಳೂರು

ನಟಿ ಲೀಲಾವತಿ ಅಳಿಯ ತೀರ್ಥಹಳ್ಳಿಯವರು..!

ನಟಿ ಲೀಲಾವತಿ ಅಳಿಯ ತೀರ್ಥಹಳ್ಳಿಯವರು..!
– ಲೀಲಾವತಿ ಅವರ ಸಾಕು ಮಗಳು ಶಾಂತದೇವಿ
– ಅಗಳಬೈಲು ನಾಗರಾಜ್ ಲೀಲಾವತಿ ಅಳಿಯ

NAMMUR EXPRESS NEWS
ತೀರ್ಥಹಳ್ಳಿ/ಬೆಂಗಳೂರು: ಕನ್ನಡದ ಖ್ಯಾತ ನಟಿ ಲೀಲಾವತಿ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ನಡೆದಿದೆ. ತಮ್ಮ ಬದುಕಿನ ಉದ್ದಕ್ಕೂ ಸೇವೆ ಮೂಲಕ ಗಮನ ಸೆಳೆದಿರುವ ಲೀಲಾವತಿ ಅವರ ಆರೋಗ್ಯ ಸೇವೆಯಲ್ಲಿ ಪುತ್ರ ವಿನೋದ್ ರಾಜ್ ಕುಮಾರ್ ಅವರ ಜತೆ ಅಳಿಯ ನಾಗರಾಜ್ ಗೌಡ ಕೂಡ ಸಾಥ್ ನೀಡಿದ್ದಾರೆ. ಲೀಲಾವತಿ ಅವರ ಅರೋಗ್ಯ ಕಾಪಾಡುವಲ್ಲಿ ಅಳಿಯ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಳಿಯ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನವರು. ಕನ್ನಡ ಹೋರಾಟಗಾರ ನಾಗರಾಜ್ ಅಗಳಬೈಲು ಅವರು ಲೀಲಾವತಿ ಅವರ ಸಾಕು ಮಗಳ ಗಂಡ. ಲೀಲಾವತಿ ಅವರಿಗೆ ಗಂಡು ಮಗ ಮಾತ್ರ ಇದ್ದು, ಅನಾಥ ಮಗು ಶಾಂತದೇವಿ ಎಂಬುವರನ್ನು ಸಾಕು ಮಗಳಾಗಿ ಸಾಕಿದ್ದರು.

ಅವರನ್ನು ನಾಗರಾಜ್ ಗೌಡ ಅವರು ಮದುವೆಯಾಗಿದ್ದರು. ಅವರಿಗೆ ಒಬ್ಬಳು ಮಗಳಿದ್ದಾಳೆ. ನಾಗರಾಜ್ ಗೌಡ ತೀರ್ಥಹಳ್ಳಿಯ ಮೇಗರವಳ್ಳಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಮಲೆನಾಡು ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಲೀಲಾವತಿ ನಿಧನದ ಬಳಿಕ ಎಲ್ಲಾ ಕಾರ್ಯದಲ್ಲೂ ಮುತುವರ್ಜಿಯಿಂದ ನೋಡಿಕೊಂಡಿದ್ದಾರೆ.

Categories
ಅಪರಾಧ ತೀರ್ಥಹಳ್ಳಿ

ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಅರೆಸ್ಟ್!

ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಅರೆಸ್ಟ್!
– ತೀರ್ಥಹಳ್ಳಿಯ ತೂದೂರು ಬಳಿ ನಡೆದ ಘಟನೆ
– ಸೈಲೆನ್ಸರ್ ಪೈಪಿನಿಂದ ಹೊಡೆದು ಹಲ್ಲೆ
– ಆಗುಂಬೆ: ಘಾಟಿಯಲ್ಲಿ ಪತ್ತೆಯಾಯಿತು ಶವ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ತೂದೂರು ಬಳಿ ಶಿವಮೊಗ್ಗದಿಂದ ಬರುತ್ತಿದ್ದ ಬಸ್ ನಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿ ಒಬ್ಬ ಕಂಡಕ್ಟರ್ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ದು ಆತನನ್ನು ಮಾಳೂರು ಪೊಲೀಸರು ಬಂಧಿಸಿದ್ದಾರೆ. ಡಿ.7 ರಂದು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಸಹ್ಯಾದ್ರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತೂದೂರು ಸಮೀಪದ ಹಳ್ಳಿಬೈಲು ರವೀಂದ್ರ ಎಂಬಾತ ಬಸ್ ಕಂಡಕ್ಟರ್ ಕುದುರೆ ಗುಂಡಿ ಮೂಲದ ಅಭಿಷೇಕ್ ಎಂಬುವವರ ಜತೆ ಬಸ್ ಇಳಿಸುವ ವಿಚಾರದಲ್ಲಿ ಗಲಾಟೆ ತೆಗೆದಿದ್ದು, ಬಳಿಕ ಕೈಯಲ್ಲಿದ್ದ ತಮ್ಮ ಗೂಡ್ಸ್ ಆಟೋದ ಸೈಲೆನ್ಸರ್ ಪೈಪ್ ವಿನಾಕಾರಣ ಹಲ್ಲೆ ಮಾಡಿದ್ದಾರೆ.

ಈ ಘಟನೆಯಲ್ಲಿ ಅಭಿಷೇಕ್ ಅವರಿಗೆ ಏಳಕ್ಕೂ ಹೆಚ್ಚು ಹೊಲಿಗೆ ಹಾಕಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಗೆ ತೆರಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ದೂರು ದಾಖಲುಗೊಂಡ ಪರಿಣಾಮ ರವೀಂದ್ರ ಹಳ್ಳಿಬೈಲು ಎಂಬುವವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಬಸ್ ಒಳಗೆ ಗಲಾಟೆ ಮಾಡಿದ್ದ ರವೀಂದ್ರ ಹಳ್ಳಿಬೈಲು ಅವರು ತಮ್ಮ ಬಳಿ ಇದ್ದ ಸೈಲೆನ್ಸರ್ ಪೈಪ್ ನಿಂದ ಏಕಾಏಕಿ ಹಲ್ಲೆ ಮಾಡಿದ್ದು, ಮಾರಣಾಂತಿಕವಾಗಿ ಹಲ್ಲೆಯಾಗಿದ್ದು ಅಭಿಷೇಕ್ ರವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಪದೇಪದೇ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಗಲಾಟೆಗಳು ನಡೆಯುತ್ತಿದ್ದು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟವರು ಗಮನಿಸಬೇಕಿದೆ.

ಆಗುಂಬೆ ಘಾಟಿಯಲ್ಲಿ ಪತ್ತೆಯಾಯಿತು ಶವ..!

ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಅನಾಮಧೇಯ ವ್ಯಕ್ತಿಯ ನಾಪತ್ತೆ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ಶವ ಆಗುಂಬೆ ಘಾಟಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು. ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ.