Categories
ಕರಾವಳಿ

ಮೇರು ನಟಿ ಲೀಲಾವತಿ ವಿದಾಯ!

ಮೇರು ನಟಿ ಲೀಲಾವತಿ ವಿದಾಯ!
– ತುಳು ನಾಡಿನ ಪ್ರತಿಭೆಯ ಸಾಧನೆಯ ಹಾದಿ
– ಇಂದು ಅಂತ್ಯಕ್ರಿಯೆ: ಸಿನಿಮಾ ರಂಗದ ಕಣ್ಣೀರು
– ತಾಯಿ ಮಗನ ಸಂಬಂಧಕ್ಕೆ ಇವರೇ ಸ್ಪಷ್ಟ ನಿದರ್ಶನ!

NAMMUR EXPRESS NEWS
ಮಂಗಳೂರು: ಬಹುಭಾಷಾ ನಟಿ, ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದು ಶನಿವಾರ ಅಂತ್ಯಕ್ರಿಯೆ ನಡೆಯಲಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಸಿನಿಮಾ, ರಾಜಕೀಯ, ಎಲ್ಲಾ ಕ್ಷೇತ್ರದ ಗಣ್ಯರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 2:30ಕ್ಕೆ ನೆಲಮಂಗಲದ ಸೋಲದೇವನಹಳ್ಳಿಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕರಾವಳಿಯ ಮೇರು ಕಲಾವಿದೆ

ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾದ ಲೀಲಾವತಿ ಅವರು ಹುಟ್ಟಿದ್ದು 1937 ರಲ್ಲಿ ಚಿಕ್ಕವಯಸ್ಸಿನಿಂದಲೇ ನಾಟಕ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿ ಹಲವಾರು ನಾಟಕಗಳಲ್ಲಿ ಬಣ್ಣಹಚ್ಚಿದ್ದರು. ಬಳಿಕ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿದ ಅವರು, ಅಲ್ಲಿಯೂ ಸಹ ಹಲವಾರು ನಾಟಕದಲ್ಲಿ ನಟಿಸಿದರು. ಮೈಸೂರಿನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ ಅವರು ಸಿನಿರಂಗದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮುನ್ನ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಈ ಮೂಲಕ ಜೀವನ ಸಾಗಿಸುತ್ತಿದ್ದರು.

ಸಿನಿಮಾಕ್ಕೂ ಸೈ.. ಸಿನಿಮಾ ನಿರ್ಮಾಣಕ್ಕೂ ಸೈ!

ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದಾರೆ. ಲೀಲಾವತಿ ಕೇವಲ ನಟಿಯಾಗಿ ಅಷ್ಟೇ ಅಲ್ಲದೇ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು. ಅವರು ‘ಅಷ್ಟಲಕ್ಷ್ಮೀ ಕಂಬೈನ್ಸ್’ ‘ಲೀಲಾವತಿ ಕಂಬೈನ್ಸ್’ ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಸಮಾಜ ಸೇವೆಯಲ್ಲಿ ಮುಂಚೂಣಿ

ಲೀಲಾವತಿ ಹಾಗೂ ಅವರ ಮಗ ತೋಟಗಾರಿಕೆ ಮತ್ತು ಕೃಷಿ ಚಟುವಟಿಗಳಲ್ಲಿ ಸಕ್ರಿಯರಾಗಿದ್ದರು. ಸಮಾಜ ಸೇವೆಯಲ್ಲಿ ತಾಯಿ-ಮಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು ಇತ್ತೀಚೆಗಷ್ಟೇ ಲೀಲಾವತಿ ಅವರ ಕನಸಿನ ಕನಸಿನ ಪಶು ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿತ್ತು.

ತುಳು ಸಿನಿಮಾಕ್ಕೂ ತಮ್ಮದೇ ಕೊಡುಗೆ

ಖ್ಯಾತ ನಟಿ ಆದರೂ ತಾಯಿ ನೆಲದ ಮೇಲಿನ ಒಲವು , ತುಳು ಭಾಷೆಯ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ :
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ “ಲೀಲಾಕಿರಣ್ ಅವರು ಕಂಕನಾಡಿಯಲ್ಲಿರುವ ಸೈಂಟ್ ಜೋಸೆಫ್ ಎಲಿಮೆಂಟರಿ ಸ್ಕೂಲ್‌ನಲ್ಲಿ 2ನೇ ತರಗತಿ ವರೆಗೆ ಕಲಿತವರು. ಕಡು ಬಡತನದಲ್ಲಿ ಬೆಳೆದ ಇವರು ಕನ್ನಡ ಸಿನೆಮಾದಲ್ಲಿ ಅವರು ತೊಡಗಿಸಿಕೊಂಡ ಬಳಿಕ, ಮಾತೃ ನೆಲದ ಭಾಷೆಯ ಪ್ರೀತಿಯಲ್ಲಿ ತುಳು ಭಾಷಾ ಚಲನಚಿತ್ರದ ಆರಂಭಕ್ಕೆ ಲೀಲಾವತಿ ಅವರು ಮೊದಲು ಸಹಾಯಹಸ್ತ ನೀಡಿದ್ದರು. ತುಳುವಿನ “ದಾರೆದ ಬುಡೆದಿ’ಯಿಂದ ಆರಂಭವಾಗಿ ಹಲವು ತುಳು ಸಿನೆಮಾಗಳ ನಿರ್ಮಾಣಕ್ಕೆ ತನದೇ ಆದ ರೀತಿಯಲಿ ಬೆಂಬಲ-ಸಹಾಯ ನೀಡಿದರು

.ತುಳುವಿನ “ದಾರೆದ ಬುಡೆದಿ’ಯಿಂದ ಆರಂಭವಾಗಿ ಹಲವು ತುಳು ಸಿನೆಮಾಗಳ ನಿರ್ಮಾಣಕ್ಕೆ ತನ್ನದೇ ಆದ ರೀತಿಯಲ್ಲಿ ಬೆಂಬಲ-ಸಹಾಯ ನೀಡಿದ್ದರು.ತುಳು 2ನೇ ಸಿನೆಮಾ 1971ರಲ್ಲಿ ತೆರೆಕಂಡ “ದಾರೆದ ಬುಡೆದಿ’, 1972ರಲ್ಲಿ ತೆರೆಕಂಡ “ಪಗೆತ ಪುಗೆ’ ಹಾಗೂ ಬಿಸತ್ತಿ ಬಾಬು, 1973ರಲ್ಲಿ ತೆರೆಕಂಡ “ಯಾನ್ ಸನ್ಯಾಸಿ ಆಪೆ’. 1976ರಲ್ಲಿ ಬಂದ “ಸಾವಿರಡೊರ್ತಿ ಸಾವಿತ್ರಿ’, 1981ರಲ್ಲಿ “ಭಾಗ್ಯವಂತೆದಿ’, 1983ರಲ್ಲಿ “ಬಲ್ಕೆರೆ ಬುಡ್ಡೆ’ ಹಾಗೂ 1984ರಲ್ಲಿ “ದಾರೆದ ಸೀರೆ’ ಸಿನೆಮಾಗಳಲ್ಲಿ ಅದ್ಭುತವಾಗಿ ಅಭಿನಯಿಸಿ ತುಳುನಾಡಿನ ಮನಸ್ಸು ಗೆದ್ದವರು.

“ಮನೆಯಲ್ಲಿಯೂ ಅವರು ತುಳುವಿನಲ್ಲಿಯೇ ಹೆಚ್ಚಾಗಿ ಮಾತನಾಡುತ್ತ ತುಳು ಭಾಷಾ ಪ್ರೇಮ ಮೆರೆದವರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ.ಪ್ರತೀ ಸಿನೆಮಾದಲ್ಲಿಯೂ ತನ್ನ ಅಭಿನಯದ ಮೂಲಕವೇ ಮನಸೆಳೆದ ಲೀಲಾವತಿ ಅವರು ಕರಾವಳಿಯಲ್ಲಿ ನಡೆದ ತುಳು ಭಾಷಾ ಕುರಿತಾದ ಕೆಲವು ಕಾರ್ಯಕ್ರಮ, ತುಳು ಸಿನೆಮಾ ಸಂಭ್ರಮದಲ್ಲಿ ಹಿಂದೆ ಭಾಗವಹಿಸಿದ್ದರು. ಹಲವು ವರ್ಷಗಳ ಹಿಂದೆ ನಿರಂತರವಾಗಿ ಕರಾವಳಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು.

ಗಣ್ಯರ ದರ್ಶನ: ಸಾಂತ್ವನ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಸಿನಿಮಾ ಕ್ಷೇತ್ರದ ಗಣ್ಯರು ಆಗಮಿಸಿ ದರ್ಶನ ಪಡೆದಿದ್ದಾರೆ.

ತಾಯಿ ಮಗನ ಸಂಬಂಧಕ್ಕೆ ಇವರೇ ಸ್ಪಷ್ಟ ನಿದರ್ಶನ!

ಲೀಲಾವತಿ -ವಿನೋದ್ ರಾಜ್ ತಾಯಿ ಮಗನಾಗಿ ಎಲ್ಲರಿಗೂ ಮಾದರಿ. ಕ್ಷಣ ಕ್ಷಣವೂ ಅಮ್ಮ ಮಗ ಒಟ್ಟಿಗೆ ಇದ್ದರು. ಇಬ್ಬರ ಅಸೆ, ಕನಸಿಗೆ ಇಬ್ಬರೂ ಜತೆಯಾಗಿದ್ದರು. ತಾಯಿ ಮಗನ ಸಂಬಂಧ ಆದರ್ಶಮಯ ವ್ಯಕ್ತಿತ್ವ ಇವರದ್ದಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಬಂದಿದ್ದ ಡಾ.ಬ್ರೋ!

ತೀರ್ಥಹಳ್ಳಿಗೆ ಬಂದಿದ್ದ ಡಾ.ಬ್ರೋ!
– ಆಗುಂಬೆ ಕಾಡ ಬಳಿ ಟಾಪ್ ಯೂಟ್ಯೂಬರ್ಸ್
– ಡಾ.ಬ್ರೋ, ಪ್ಲೇಯಿಂಗ್ ಪಾಸ್ಪೋರ್ಟ್, ಗ್ಲೋಬಲ್ ಕನ್ನಡಿಗ ಭೇಟಿ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್ಸ್ ತೀರ್ಥಹಳ್ಳಿಗೆ ಭೇಟಿ ನೀಡಿ, ತೀರ್ಥಹಳ್ಳಿ ತಾಲೂಕಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪ್ರಸಿದ್ಧ ಯೂಟ್ಯೂಬರ್ ಡಾ.ಬ್ರೋ, ಪ್ಲೇಯಿಂಗ್ ಪಾಸ್ಪೋರ್ಟ್, ಗ್ಲೋಬಲ್ ಕನ್ನಡಿಗ ತಂಡ ಭೇಟಿ ನೀಡಿ ಇಲ್ಲಿನ ಪರಿಸರ ನೋಡಿ ಖುಷಿಪಟ್ಟರು. ಆಗುಂಬೆ ಸಮೀಪದ ಗುಡ್ಡೇಕೇರಿ ಹಿಂಗಾರ ಹೋಂ ಸ್ಟೇ ಅಲ್ಲಿ ತಂಗಿದ್ದ ಅವರು ಅಲ್ಲಿನ ಪರಿಸರ ಹಾಗೂ ಆಗುಂಬೆಯ ಸುತ್ತಮುತ್ತ ಭೇಟಿ ನೀಡಿ ತಮ್ಮ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ರಾಜ್ಯದ ಪ್ರಸಿದ್ಧ ಯುಟ್ಯೂಬರ್ ಆಗಿರುವ ಡಾ. ಬ್ರೋ, ಫ್ಲೈಯಿಂಗ್ ಪಾಸ್ಪೋರ್ಟ್ ಕಿರಣ್ ಮತ್ತು ಆಶಾ ದಂಪತಿ, ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲರಾಮ್ ಕೂಡ ಭೇಟಿ ನೀಡಿದ್ದರು.

ಮಲೆನಾಡಿನ ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ಇಲ್ಲಿನ ವಿಶೇಷತೆಗಳ ಬಗ್ಗೆ ಕೂಡ ಮಾಹಿತಿಯನ್ನು ಪಡೆದುಕೊಂಡರು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಅನೇಕರು ಅವರನ್ನು ಭೇಟಿ ಮಾಡಲು ಗುಡ್ಡೇಕೇರಿಗೆ ತೆರಳಿದ್ದರು, ಅನೇಕರ ಜೊತೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಂಡು ಸಂತಸ ಪಟ್ಟರು. ಶೀಘ್ರದಲ್ಲಿ ಮಲೆನಾಡಿನ ವಿಡಿಯೋಗಳು ಪ್ರಸಿದ್ಧ ಯೂಟ್ಯೂಬ್ ವಾಲ್ ಗಳಲ್ಲಿ ಕಾಣಿಸಿಕೊಳ್ಳಲಿದೆ.

Categories
ಬೆಂಗಳೂರು

ಡಿ.10ಕ್ಕೆ ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಮಾವೇಶ

ಡಿ.10ಕ್ಕೆ ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಮಾವೇಶ
– ಸಮುದಾಯವನ್ನು ಸ್ವಾಗತಿಸಿದ ರೇಣುಕಾನಂದ ಸ್ವಾಮೀಜಿ
– ತೀರ್ಥಹಳ್ಳಿ, ಹೊಸನಗರದ ಮುಳುಗಡೆ ರೈತರಿಗೆ ನ್ಯಾಯಕ್ಕೆ ಪಟ್ಟು
– ಶಿವಮೊಗ್ಗ ಜಿಲ್ಲೆಯಿಂದ 400 ಬಸ್, 4 ಲಕ್ಷ ಜನ ಸೇರುವ ನಿರೀಕ್ಷೆ

NAMMUR EXPRESS NEWS
ತೀರ್ಥಹಳ್ಳಿ: ಡಿ.10ಕ್ಕೆ ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಮಾವೇಶ ನಡೆಯಲಿದ್ದು ಸಮುದಾಯವನ್ನು ಶ್ರೀ ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆರ್ಯ ಈಡಿಗ ಜನಾಂಗದಲ್ಲಿ ಒಟ್ಟು 26 ಒಳ ಪಂಗಡಗಳಿದ್ದು ಅವುಗಳನ್ನು ಒಂದು ಮಾಡುವ ದೃಷ್ಠಿಯಿಂದ ಡಿಸೆಂಬರ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಬೃಹತ್‌ ಜಾಗೃತ ಸಮಾವೇಶ ಇಟ್ಟುಕೊಂಡಿದ್ದೇವೆ.ಆರ್ಯ ಈಡಿಗರ ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಡಿಸೆಂಬರ್ 10, 2023ರ ಭಾನುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ.

ಈ ಸಮಾವೇಶವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು, ಮಾಜಿ ಸಚಿವರು ಸಮಾಜದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪನವರು, ಖ್ಯಾತ ಚಲನಚಿತ್ರ ನಟ ಡಾ. ಶಿವರಾಜ್‌ಕುಮಾರ್‌ರವರು, ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು, ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಗಳು, ಕಾರ್ತಿಕೇಯ ಪೀಠದ ಶ್ರೀ ಶ್ರೀ ಯೋಗೇಂದ್ರ ಅವಧೂತರು, ಶ್ರೀಕ್ಷೇತ್ರ ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಪ್ಪನವರು ಹಾಗೂ ಸಚಿವ ಸಂಪುಟದ ಮಾನ್ಯ ಸಚಿವರುಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಡಾ|| ಎಂ. ತಿಮ್ಮೆಗೌಡರವರು ವಹಿಸಲಿದ್ದಾರೆ.

ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರು, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಎಸ್‌. ಕುಮಾರ ಬಂಗಾರಪ್ಪನವರು, ಹೆಚ್‌. ಹಾಲಪ್ಪನವರು, ಮಾಜಿ ಶಾಸಕರುಗಳಾದ ಬಿ. ಸ್ವಾಮಿರಾವ್‌ರವರು ಮತ್ತು ಡಾ| ಜಿ.ಡಿ. ನಾರಾಯಣಪ್ಪನವರು ಹಾಗೂ ನಮ್ಮ ಸಮಾಜದ ಹಿರಿಯ ಮುಖಂಡರುಗಳು ಈ ಐತಿಹಾಸಿಕ ಸಮಾವೇಶದಲ್ಲಿ ಪಕ್ಷಾತೀತವಾಗಿ ಉಪಸ್ಥಿತರಿರಲಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆಯಿಂದ 400 ಬಸ್

ಈಡಿಗರ ಸಮಾವೇಶವು 1995ರಲ್ಲಿ ನಡೆದಿದ್ದು ಇಲ್ಲಿಯವರೆಗೆ ಯಾವುದೇ ಸಮಾವೇಶ ನಡೆಸಲಿಲ್ಲ. ನಮ್ಮ ಜನಾಂಗವನ್ನು ಒಂದು ಮಾಡುವ ಪ್ರಯತ್ನ ನಡೆಸಿಲ್ಲ. ಒಂದು ಮಾಡುವ ಉದ್ದೇಶದಿಂದಲೇ ಈ ಸಮಾವೇಶ ನಡೆಸಲಾಗುತ್ತಿದ್ದು ಸುಮಾರು 4 ಲಕ್ಷ ಜನ ಸೇರಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ 400 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ತೀರ್ಥಹಳ್ಳಿಯಿಂದ 25 ಬಸ್‌ಗಳು ಹೋಗಲಿದೆ. ಹೊಸನಗರ ತಾಲ್ಲೂಕಿನ ಎಲ್ಲ ಈಡಿಗರ ಸಮುದಾಯಗಳು ಒಂದುಗೂಡಿಸಿಕೊಂಡು ಈ ಸಮಾವೇಶಕ್ಕೆ ಆಗಮಿಸಿ ಈ ಬೃಹತ್ ಜಾಗೃತ ಸಮಾವೇಶವನ್ನು ಉಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

ಮುಳುಗಡೆ ಸಂತ್ರಸ್ಥರಿಗೆ ಭೂಮಿ ನೀಡುವಂತೆ ಒತ್ತಾಯ:

ತೀರ್ಥಹಳ್ಳಿ, ಹೊಸನಗರದ ಕೆಲವು ಊರುಗಳು ಮುಳುಗಡೆ ಪ್ರದೇಶವಾಗಿದ್ದು ದೀಪದ ಕೆಳಗೆ ಕತ್ತಲೆಯಂಬಂತೆ ನೂರಾರು ವರ್ಷಗಳಿಂದ ಮುಳುಗಡೆ ಪ್ರದೇಶದ ರೈತರು ಸರ್ಕಾರಕ್ಕೆ ಸಾವಿರಾರು ಮನವಿ ಪತ್ರ ಸಲ್ಲಿಸಿದರೂ ಇಲ್ಲಯವರೆಗೆ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಸಿಗಲಿಲ್ಲ. ಈ ವಿಷಯವನ್ನು ಸಮಾವೇಶದಲ್ಲಿ ಪ್ರಾಸ್ತಾಪಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಈ ಸುದ್ದಿಗೋಷ್ಟಿಯಲ್ಲಿ ಈಡಿಗರ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ, ಪ್ರಮುಖರಾದ ಮುಡುಬ ರಾಘವೇಂದ್ರ, ಹೊದಲ ಶಿವು, ವಿಶಾಲ್ ಕುಮಾ‌ರ್, ಟೆಂಕಬೈಲು ಲೋಕೇಶ್ ಸೇರಿ ಹಲವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಇಲ್ಲ!

ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಇಲ್ಲ!
– ಅರ್ಜಿ ಕಡತಕ್ಕೆ ತಿಂಗಳುಗಟ್ಟಲೆ ಧೂಳು
– ತುರ್ತು ಕೆಲಸವೂ ವಿಳಂಬ: ಜನರ ಪರದಾಟ
– ಜನ ನಾಯಕರಿಗೆ ಜನರ ಕಷ್ಟ ಗೊತ್ತಾಗುತ್ತಿಲ್ವಾ?!

NAMMUR EXPRESS NEWS
ತೀರ್ಥಹಳ್ಳಿ: ಆಡಳಿತದಲ್ಲಿ ಮಾತೃಸ್ಥಾನ ಹೊಂದಿ ಸಮಗ್ರ ಜವಾಬ್ದಾರಿ ನಿರ್ವಹಿಸುವ ಕಂದಾಯ ಇಲಾಖೆ ತಾಲೂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ತಾಲೂಕು ಕಚೇರಿ, ಅಟಲ್ ಜನಸ್ನೇಹಿ ಕೇಂದ್ರದಲ್ಲಿ (ನಾಡಕಚೇರಿ) ಸಾರ್ವಜನಿಕರ ತುರ್ತು ಕೆಲಸಗಳಿಗೆ ವಿಳಂಬದ ಕಂಟಕ ಎದುರಾಗಿದೆ. ಹೀಗಾಗಿ ಪ್ರತಿ ದಿನ ನೂರಾರು ಮಂದಿ ತೊಂದರೆಗೆ ಒಳಗಾಗುತ್ತಿದ್ದಾರೆ. ಹತ್ತಾರು ಬಾರಿ ಕಚೇರಿ ಅಲೆದರೂ ನಿರೀಕ್ಷಿತ ಮಟ್ಟದಲ್ಲಿ ಮಹತ್ವದ ಸೇವೆ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ, ಸರಕಾರ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಇತರೆ ಇಲಾಖೆಗೆ ರವಾನೆ ಆಗುವ ಕಡತಗಳು ತಿಂಗಳುಗಟ್ಟಲೆ ಕಚೇರಿಯಲ್ಲಿ ಧೂಳು ಹಿಡಿಯುವಂತಹ ದಟ್ಟ ದಾರಿದ್ಯ ಸ್ಥಿತಿ ನಿರ್ಮಾಣವಾಗಿದೆ.

ಸಿಬ್ಬಂದಿ ಖಾಲಿ ಖಾಲಿ.. ಇದ್ದವರದ್ದು ಬೇರೆಯೇ ವರಸೆ!

ಕಂದಾಯ ಇಲಾಖೆಗೆ ಸೇರಿದ ತಾಲೂಕು ಕಚೇರಿ, ನಾಡಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದಲ್ಲಿ ಒಟ್ಟು 108 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 47 ಹುದ್ದೆ ಖಾಲಿ ಇದೆ. ಸಿಬ್ಬಂದಿ ಕೊರತೆ ನಡುವೆ ಸರಕಾರ ನೇರವಾಗಿ ನಿಯಮ ಉಲ್ಲಂಘಿಸಿ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜನೆ ಮಾಡಿದೆ. ಸುಮಾರು 4 ತಿಂಗಳಿನಿಂದ ಗ್ರೇಡ್ -2 ತಹಸೀಲ್ದಾ‌ರ್ ಹುದ್ದೆ ಖಾಲಿಯಾಗಿದ್ದು, ಇತರೆ ಸಿಬ್ಬಂದಿ ಇಲ್ಲದೆ ಇಡೀ ತಾಲೂಕು ಕಚೇರಿ ಭಣಗುಡುತ್ತಿದೆ. ಎಲ್ಲಾ ಇಲಾಖೆಯಲ್ಲೂ ಖಾಲಿ ಖಾಲಿ ಇದೆ. ಕೆಲವು ಪಿಡಿಓಗಳು ಎರಡು ಎರಡು ಕಡೆ ಕೆಲಸ ಮಾಡಲಾಗುತ್ತಿದೆ. ಇದರಿಂದ ಜನರಿಗೆ ನ್ಯಾಯ ಕೊಡಲು ಆಗುತ್ತಿಲ್ಲ. ಜನ ತೊಂದರೆಗೆ ಸಿಲುಕಿದ್ದಾರೆ.

ಯಾವ ಸರ್ಕಾರ ಬಂದರೂ ಇಷ್ಟೇ ಕಥೆ!

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಆದಾಯ, ವಾಸಸ್ಥಳ, ಭೂ ಹಿಡುವಳಿ, ಮರಣ, ಕೃಷಿ ಕಾರ್ಮಿಕ, ಜನನ, ಸರಕಾರಿ ನೌಕರಿ ಇಲ್ಲದ ಬಗ್ಗೆ, ಸಾಲ ತೀರಿಸುವ ಶಕ್ತಿ, ಜನಸಂಖ್ಯಾ, ನಾಗರಿಕ ನೋಂದಣಿ ಪ್ರಮಾಣ ಪತ್ರ, ಗೇಣಿ ರಹಿತ, ಮೃತರ ಕುಟುಂಬ ಸದಸ್ಯರ, ಅಧಿಕೃತ ವ್ಯವಸಾಯಗಾರರಿಗೆ, ಸಣ್ಣ, ಅತಿಸಣ್ಣ ರೈತರಿಗೆ ನೀಡುವ, ಜಮೀನು ಇಲ್ಲದಿರುವ, ನಿರುದ್ಯೋಗಿ, ಮರು ವಿವಾಹವಾಗದಿರುವ, ವಿಧವೆ, ಜೀವಂತಸದಸ್ಯರ, ವ್ಯವಸಾಯಗಾರ ಕುಟುಂಬ, ಬೋನೋಫೈಡ್ ದಾಖಲೆ ನೀಡುವ ಅಧಿಕಾರ ನಾಡಕಚೇರಿಗೆ ಸೇರಿದೆ.

ಮಾಸಾಶನ ಮಂಜೂರಾತಿ, ದರಖಾಸ್ತು ರೆಕಾರ್ಡ್‌ಗಳ ತಯಾರಿಕೆ, ಸರಕಾರಿ ಬಾಕಿ ವಸೂಲಾತಿ, ಜಮಾ, ಡಿ.ಸಿ.ಬಿ.ಲೆಕ್ಕಗಳ ನಿರ್ವಹಣೆ, ಪ್ರವಾಹ, ಮುಜರಾಯಿ ಸಂಸ್ಥೆಗಳ ನಿರ್ವಹಣೆ ಮತ್ತು ತನಿಖೆ, ಗ್ರಾಮ ಲೆಕ್ಕಿಗರ ಮತ್ತು ಕಂದಾಯ ನಿರೀಕ್ಷಕರ ತನಿಖೆ, ಪಡಿತರ ಕಾರ್ಡ್, ಸ್ವಾಧೀನ ಪ್ರಕರಣಗಳ ಕಡತಗಳ ತಯಾರಿಕೆ, ಜನನ, ಮರಣ ದಾಖಲೆ ನಿರ್ವಹಣೆ, ಗ್ರಾಮಲೆಕ್ಕಿಗರು ಮತ್ತು ಸ್ವಾಧೀನದಲ್ಲಿರುವ ಮತ್ತಿತರರಿಗೆ ಸಾಂದರ್ಭಿಕ ರಜೆ, ಕರ್ನಾಟಕ ಭೂ ಕಂದಾಯ ಕಾಯಿದೆ ಕಲಂ 94, 104,127,129, ಮತ್ತು 164ರಡಿ ಕ್ರಮ ತೆಗೆದುಕೊಳ್ಳುವ, ಪಹಣಿ ಪತ್ರಿಕೆ,ಮ್ಯುಟೇಷನ್, ಪ್ರಕೃತಿ ವಿಕೋಪಗಳ ಮುನ್ಸೂಚನೆ, ಬರಪರಿಸ್ಥಿತಿ, ಮಳೆ ಮಾಪನ ನಿರ್ವಹಣೆ ಇತ್ಯಾದಿ ಮಹತ್ವದ ಅಧಿಕಾರ ನಾಡಕಚೇರಿ ಉಪತಹಸೀಲ್ದಾರ್ ವ್ಯಾಪ್ತಿಯಲ್ಲಿದ್ದು, ಸೇವೆ ಪಡೆಯುವುದು ಸಾರ್ವಜನಿಕರ ಪಾಲಿಗೆ ಕಷ್ಟಕರವಾಗಿದೆ.

ಈ ಹಿಂದೆ ತೀರ್ಥಹಳ್ಳಿ ಶಾಸಕರೇ ಗೃಹ ಮಂತ್ರಿ ಆಗಿದ್ದರು. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಇಬ್ಬರು ಪ್ರಭಾವಿ ನಾಯಕರಿದ್ದಾರೆ. ಆದ್ರೆ ಯಾರೇ ಇದ್ರೂ ಜನರ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ತಿಲ್ಲ ಎಂಬ ದೂರು ಕೇಳಿ ಬಂದಿದೆ

Categories
ಕರಾವಳಿ

ಕನ್ನಡ ಕಲಾ ಲೋಕಕ್ಕೆ ಮತ್ತೊಂದು ಶಾಕ್!

ಕನ್ನಡ ಕಲಾ ಲೋಕಕ್ಕೆ ಮತ್ತೊಂದು ಶಾಕ್!
– ನಾಟಕ ಲೋಕದ ಮೇರು ಕಲಾವಿದ ಮೂರು ಮುತ್ತು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

NAMMUR EXPRESS NEWS
ಕುಂದಾಪುರ: ಕನ್ನಡ ಕಲಾ ಲೋಕಕ್ಕೆ ಶುಕ್ರವಾರ ಕರಾಳ ದಿನವಾಗಿದೆ. ಒಂದು ಕಡೆ ಹಿರಿಯ ನಟಿ ಲೀಲಾವತಿ ಮೃತರಾಗಿದ್ದು ಇಡೀ ಸಿನಿಮಾ ಕ್ಷೇತ್ರಕ್ಕೆ ನೋವು ತಂದಿತ್ತು. ಇತ್ತ ನಾಟಕ ಲೋಕದ ಹಾಸ್ಯ ಕಲಾವಿದ ರೂಪಕಲಾ ನಾಟಕ ತಂಡದ ಮೂರುಮುತ್ತು ಖ್ಯಾತಿಯ ಅಶೋಕ್ ಶಾನಭಾಗ್ ರವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಿಂದ ಮಿಂಚಿದ್ದರು.

ಇವರ ಅಗಲಿಕೆಯ ಸುದ್ದಿ ಅಪಾರ ಅಭಿಮಾನಿಗಳಿಗೆ ದುಃಖ ಉಂಟುಮಾಡಿದೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ಬೆಳಗ್ಗೆ ಕುಂದಾಪುರದಲ್ಲಿ ನಡೆಯಲಿದೆ. ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನಾಟಕ ಪ್ರದರ್ಶನ ಮಾಡುತ್ತಿದ್ದರು. ಮೂರು ಮುತ್ತು ನಾಟಕದ ಮೂಲಕ ಪ್ರತಿ ಊರಲ್ಲಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಪಡೆದಿದ್ದರು.

Categories
ಬೆಂಗಳೂರು ರಾಜ್ಯ ಸಿನಿಮಾ

ಸಿನಿಮಾ ರಂಗದ ತಾಯಿ ಇನ್ನಿಲ್ಲ!

ಸಿನಿಮಾ ರಂಗದ ತಾಯಿ ಇನ್ನಿಲ್ಲ!
– ಖ್ಯಾತ ನಟಿ ಲೀಲಾವತಿ ಅನಾರೋಗ್ಯದಿಂದ ನಿಧನ
– 50 ವರ್ಷದ ಸಿನಿಮಾ ಸೇವೆ: ಸಿನಿಮಾ ರಂಗದ ಕಂಬನಿ!

NAMMUR EXPRESS NEWS
ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ಅವರು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಖ್ಯಾತ ನಟಿಯಾಗಿ, ಹಿರಿಯ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸೇವೆ ನೀಡಿದ್ದಾರೆ. 87 ವರ್ಷದ ಲೀಲಾವತಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ. ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದರು.

50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ರಾಜ್‌ಕುಮಾರ್, ವಿಷ್ಣುವರ್ಧನ್ ಮುಂತಾದ ನಟರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದ್ದ ಲೀಲಾವತಿ ನಿಧನಕ್ಕೆ ಅಭಿಮಾನಿಗಳು ಸಿನಿಮಾ, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಪುತ್ರ ವಿನೋದ್ ರಾಜ್ ಅವರನ್ನು ಲೀಲಾವತಿ ಅಗಲಿದ್ದಾರೆ.

ಸಾಮಾಜಿಕ ಕಾಳಜಿಯ ವ್ಯಕ್ತಿತ್ವ

ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು. ಆ ಆಸ್ಪತ್ರೆ ಉದ್ಘಾಟನೆ ಆದ ಕೆಲವೇ ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ.

Categories
ಮಾಹಿತಿ

ಏರ್‌ ಇಂಡಿಯಾದಲ್ಲಿ 828 ಹುದ್ದೆಗಳು ಖಾಲಿ

ಏರ್‌ ಇಂಡಿಯಾದಲ್ಲಿ 828 ಹುದ್ದೆಗಳು ಖಾಲಿ
– ನೇರ ಸಂದರ್ಶನದ ಮೂಲಕ ಆಯ್ಕೆ
– ಹೇಗೆ ಅರ್ಜಿ ಸಲ್ಲಿಸುವುದು ಇಲ್ಲಿದೆ ಮಾಹಿತಿ

NAMMUR EXPRESS NEWS
ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸೆಸ್ ಲಿಮಿಟೆಡ್ ಅಥವಾ ಏಐ ಏರ್ ಪೋರ್ಟ್ ಸರ್ವೀಸ್ ಲಿಮಿಟೆಡ್ ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ

ಒಟ್ಟು ಹುದ್ದೆಗಳ ಸಂಖ್ಯೆ: 828

ಆಯ್ಕೆ ವಿಧಾನ: ನೇರ ಸಂದರ್ಶನ

ಹುದ್ದೆಗಳ ವಿವರ ಹಾಗೂ ಹುದ್ದೆ ಸಂಖ್ಯೆ:

ಡೆಪ್ಯೂಟಿ ಮ್ಯಾನೇಜರ್ ರ್ಯಾಂಪ್ / ಮೇಂಟೆನೆನ್ಸ್ : 07
ಡೆಪ್ಯೂಟಿ ಮ್ಯಾನೇಜರ್-ರ್ಯಾಂಪ್ : 28
ಜೂನಿಯರ್ ಆಫೀಸರ್ ಟೆಕ್ನಿಕಲ್ : 24
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ : 138
ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ : 167
ಡ್ಯೂಟಿ ಮ್ಯಾನೇಜರ್ – ಪ್ಯಾಸೆಂಜರ್ : 19
ಡ್ಯೂಟಿ ಆಫೀಸರ್- ಪ್ಯಾಸೆಂಜರ್ : 30
ಡ್ಯೂಟಿ ಮ್ಯಾನೇಜರ್ – ಕಾರ್ಗೊ : 03
ಡ್ಯೂಟಿ ಆಫೀಸರ್- ಕಾರ್ಗೊ: 08
ಜೂನಿಯರ್ ಆಫೀಸರ್- ಕಾರ್ಗೊ : 09
ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 178
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 217

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 55 ವರ್ಷ ಮೀರಿರಬಾರದು.

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ, ಐಟಿಐ, ಪದವಿ, ಇಂಜಿನಿಯರಿಂಗ್, ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

ಸಂದರ್ಶನ ದಿನಾಂಕ : ಡಿಸೆಂಬರ್ 18, 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಾ.ಅಂಬೇಡ್ಕರ್ ನೆನಪು

ತೀರ್ಥಹಳ್ಳಿಯಲ್ಲಿ ಡಾ.ಅಂಬೇಡ್ಕರ್ ನೆನಪು
– ಅಂಬೇಡ್ಕರ್ ಅವರ 67ನೇ ಪರಿನಿಬ್ಬಣ ದಿನ
– ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಆಚರಣೆ

NAMMUR EXPRESS NEWS
ತೀರ್ಥಹಳ್ಳಿ: ಡಾ. ಬಿ ಅರ್ ಅಂಬೇಡ್ಕರ್ ಅವರ 67ನೇ ಪರಿನಿಬ್ಬಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಆಚರಣೆ ಮಾಡಲಾಯಿತು. ಜಿಲ್ಲಾ ಸಂಘಟನೆ ಸಂಚಾಲಕರಾದ ವಿಶ್ವನಾಥ್ ಹಾರೋಗೊಳಿಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಸಾದಿ ಭಾಗವಹಿಸಿದ್ದರು ಮತ್ತು ಮಂಜುಳಾ ನಾಗೇಂದ್ರ ಪಂಚಾಯತಿ ಸದಸ್ಯರು ಹಾಗೂ ತಾಲೂಕ್ ಮಹಿಳಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ವರಲಕ್ಷ್ಮಿ ಹಾಗೂ ತಾಲೂಕು ಸಂಚಾಲಕರಾದ ಯಲ್ಲಪ್ಪ ಶಶಿಕಲಾ ಚಂದ್ರಶೇಖರ್ ರಮೇಶ್ ಭಾಗವಹಿಸಿದ್ದರು.

Categories
ತೀರ್ಥಹಳ್ಳಿ

ರಾಷ್ಟ್ರ ಮಟ್ಟಕ್ಕೆ ತೀರ್ಥಹಳ್ಳಿ ಹಳ್ಳಿ ಹುಡುಗಿಯರು!

ರಾಷ್ಟ್ರ ಮಟ್ಟಕ್ಕೆ ತೀರ್ಥಹಳ್ಳಿ ಹಳ್ಳಿ ಹುಡುಗಿಯರು!
– ಕಬಡ್ಡಿಯಲ್ಲಿ ಶ್ರೀ ತಿಪ್ಪೇಸ್ವಾಮಿ ಪ್ರಾಢಶಾಲೆ ಅರನಲ್ಲಿ ಮಕ್ಕಳು ರಾಷ್ಟ್ರ ಮಟ್ಟಕ್ಕೆ
– ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿದ ಶಿಕ್ಷಣ ಇಲಾಖೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಶ್ರೀ ತಿಪ್ಪೇಸ್ವಾಮಿ ಪ್ರಾಢಶಾಲೆ, ಅರನಲ್ಲಿ ಶಾಲೆಯ ವಿದ್ಯಾರ್ಥಿನಿಯರು ಕಬಡ್ಡಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಗ್ರಾಮಸ್ತರು, ತೀರ್ಥಹಳ್ಳಿ ಶಿಕ್ಷಣ ಅಧಿಕಾರಿಗಳಾದ ಗಣೇಶ್, ಶಾಲಾ ಶಿಕ್ಷಕರು ಸೇರಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದ್ದಾರೆ. ಜನವರಿ 5ರಂದು ರಾಜಸ್ತಾನದ ಜಯಪುರದಲ್ಲಿ ಈ ಸ್ಪರ್ಧೆ ನಡೆಯಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇಸಿಓ ಗಣೇಶ್,ಟಿಪಿಒ ಚಂದ್ರಪ್ಪ ಹಾಗೂ ದೈಹಿಕ. ಶಿ. ಸಂಘದ ಅಧ್ಯಕ್ಷರಾದ ರಮೇಶ್ ಮಳಲಿಮಕ್ಕಿ ಶಾಲೆಗೆ ಭೇಟಿ ನೀಡಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ,ತರಬೇತುದಾರರಿಗೆ ಸನ್ಮಾನಿಸಿ ರಾಷ್ಟ್ರ ಮಟ್ಟಕ್ಕೆ ಶುಭಾಶಯ ಕೋರಿದರು.

ಕಳೆದ ತಿಂಗಳು ಬೆಂಗಳೂರು ವಿಭಾಗ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಕುಮಾರಿ ಸಿಂಚನ ಹೆಚ್ ಪಡೆದಿದ್ದರು. ಸಾಧನ,ನಾಗಶ್ರೀ ದೀಕ್ಷಿತಾ ,ಸಪ್ನ , ಉಷಾ, ನಮಿತಾ, ಜ್ಞಾನ, ಶ್ರಾವ್ಯ, ಐಶ್ವರ್ಯ, ದೀಕ್ಷಾ ಮತ್ತು ಸಂಜನಾ ಭಾಗವಹಿಸಿದ್ದು, ವ್ಯವಸ್ಥಾಪಕರಾಗಿ‌ ಗೀತಾ ಮತ್ತು ಕೋಚ್ ರೇವಣಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು. ರಾಷ್ಟ್ರ ಮಟ್ಟದ ತಂಡದಲ್ಲಿ ಸಿಂಚನಾ ,ಸಾಧನ, ದೀಕ್ಷೀತಾ, ನಾಗಶ್ರೀ, ಸ್ವಪ್ನಾ ಇಟ್ಟಿಗೆಹಳ್ಳಿ ಆಡಲಿದ್ದಾರೆ.

Categories
ಕರಾವಳಿ

ಕೊರಗಜ್ಜನಿಗೆ 1002 ಬಾಟಲಿ ಮದ್ಯ ಅರ್ಪಿಸಿದ ಭಕ್ತ!

ಕೊರಗಜ್ಜನಿಗೆ 1002 ಬಾಟಲಿ ಮದ್ಯ ಅರ್ಪಿಸಿದ ಭಕ್ತ!
– ಕರಾವಳಿಯ ಕಾರ್ಣಿಕದ ದೈವ ಕೊರಗಜ್ಜನ ಪವಾಡ
– ಒಂದು ವರ್ಷದಿಂದ ಹರಕೆಗೆ ಸಿದ್ಧತೆ: ಏನಿದು ಹರಕೆ?

NAMMUR EXPRESS NEWS
ತುಳುನಾಡ ಕೊರಗಜ್ಜ ಸ್ವಾಮಿಗೆ ಮದ್ಯದ ಸಮಾರಾಧನೆ ಎಂದರೆ ಬಹಳ ಅಚ್ಚುಮೆಚ್ಚು ಜೊತೆಗೆ ಚಕ್ಕುಲಿ, ಬೀಡಾ ಕೊಟ್ಟರಂತೂ ಇನ್ನೂ ಪ್ರೀತಿ. ವ್ಯಕ್ತಿಯೊಬ್ಬರು ತಾನು ಹೊತ್ತ ಹರಕೆ ಈಡೇರಿಸಿದರು ಎಂಬ ಕಾರಣಕ್ಕೆ ಕೊರಗಜ್ಜನಿಗೆ ಬರೋಬ್ಬರಿ 1002 ಬಾಟಲಿ ಮದ್ಯದ ಸಮಾರಾಧನೆ ಮಾಡಿದ್ದಾರೆ!. ಉಡುಪಿಯಲ್ಲಿ ನಡೆದ ಅಪರೂಪದ ಹರಕೆ ತೀರಿಸುವ ಕಾರ್ಯಕ್ರಮ ಇದೀಗ ಗಮನ ಸೆಳೆದಿದೆ. ಕರಾವಳಿಯ ದೈವರಾದನೆಯು ಜನರ ನಂಬಿಕೆಯ ಮೇಲೆ ನಿಂತಿದೆ. ಭಕ್ತರ ಬೇಡಿಕೆಯನ್ನು ಕ್ಷಣಮಾತ್ರದಲ್ಲಿ ಈಡೇರಿಸುವ ಕಾರ್ಣಿಕ ಮೆರೆಯುತ್ತಿರುವ ತುಳುನಾಡಿನ ಮೆಚ್ಚಿನ ದೈವ, ಸ್ವಾಮಿ ಕೊರಗಜ್ಜನಿಗೆ ಭಕ್ತರ ಹರಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕರಾವಳಿ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸ್ವಾಮಿ ಕೊರಗಜ್ಜರ ಭಕ್ತರು ಕ್ಷೇತ್ರಗಳಿಗೆ ಬರುತ್ತಾರೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ರವಿಚಂದ್ರ ಅವರು ಈ ಕೊರಗಜ್ಜ ಸನ್ನಿಧಿಯ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಹರಕೆ ಸಲ್ಲಿಸಲು ಸುಮಾರು ಒಂದು ವರ್ಷ ಹಿಡಿಸಿದೆ. ಹಣ ಹೊಂದಿಸಿಕೊಂಡು ನಿಧಾನವಾಗಿ ಮದ್ಯದ ಬಾಟಲಿಗಳನ್ನು ಒಟ್ಟುಗೂಡಿಸಿಕೊಂಡು ದೇವರಿಗೆ ಸಲ್ಲಿಸಿದ್ದಾರೆ. ಕುಟುಂಬ ಸಮೇತವಾಗಿ ಬಂದು ಹರಕೆಯನ್ನು ಸಲ್ಲಿಸಿದ್ದಾರೆ. ಕೊರಗಜ್ಜ ಸನ್ನಿಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಮದ್ಯದ ಹರಕೆ ಸಲ್ಲಿಕೆ ಆಗಿರುವುದು ಇದೇ ಮೊದಲ ಬಾರಿಯಾಗಿದೆ.