Categories
ತೀರ್ಥಹಳ್ಳಿ

ಡಿ.12ರಂದು ತೀರ್ಥಹಳ್ಳಿಯಲ್ಲಿ ಕರೆಂಟ್ ಇಲ್ಲ

ಡಿ.12ರಂದು ತೀರ್ಥಹಳ್ಳಿಯಲ್ಲಿ ಕರೆಂಟ್ ಇಲ್ಲ
– ಹಲವು ಕಡೆ ವಿದ್ಯುತ್ ಸಂಪೂರ್ಣ ಬಂದ್
– ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ಸಮಸ್ಯೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕೆಲವು ಭಾಗಗಳಲ್ಲಿ ಡಿ.12ರಂದು ವಿದ್ಯುತ್ ಇರುವುದಿಲ್ಲ. 110/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಹೊಸಂಗಂಡಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ 110/11 ಕೆವಿ ತೀರ್ಥಹಳ್ಳಿ ಮತ್ತು 110/11 ಕೆವಿ ಕಮ್ಮರಡಿ ವಿದ್ಯುತ್‌ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಅಡಚಣೆ ಉಂಟಾಗಿರುವುದರಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ , ಕುಡುಮಲ್ಲಿಗೆ, ಅರಳಸುರಳಿ, ಆರಗ, ನೆರಟೂರು, ನೊಣಬೂರು, ಸಾಲೂರು, ಆಗುಂಬೆ, ಹೆಗ್ಗೋಡು, ಅರೇಹಳ್ಳಿ, ಮೇಗರವಳ್ಳಿ, ನಾಲೂರು, ಬಿದರಗೋಡು, ತೀರ್ಥಮುತ್ತೂರು, ಅರಳಾಪುರ, ಬಸವಾನಿ, ದೇವಂಗಿ, ಪಾರೋಗೊಳಿಗೆ, ಪೆದ್ದೂರು, ಮೇಳಿಗೆ, ಮೇಲಿನ ಕುರುವಳ್ಳಿ, ಮುಳುಬಾಗಿಲು, ಸಾಲ್ಗಡಿ, ಶೇಡ್ಗಾರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ಡಿಸೆಂಬರ್ 12ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ವಿದ್ಯುತ್‌ ಸರಬರಾಜು ಇರುವುದಿಲ್ಲ. ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಇಂಜಿನಿಯ‌ರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Categories
ಬೆಂಗಳೂರು

ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದಾತ ಈಗ ಬಿಗ್ ಬ್ಯುಸಿನೆಸ್ ಮ್ಯಾನ್!

ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದಾತ ಈಗ ಬಿಗ್ ಬ್ಯುಸಿನೆಸ್ ಮ್ಯಾನ್!
– 150ಕ್ಕೂ ಹೆಚ್ಚು ಜನರಿಗೆ ಉದ್ಯೋಗಿಗಳಿಗೆ ಅನ್ನದಾತ
– ಪ್ಲಾಸ್ಟಿಕ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ ಸ್ವಂತ ಉದ್ಯಮ ಆರಂಭಿಸಿದ ಕನ್ನಡಿಗ!

NAMMUR EXPRESS NEWS
ಬೆಂಗಳೂರು: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಸತತವಾಗಿ ಪ್ರಯತ್ನಪಟ್ಟರೆ ಸಾಧಿಸಲು ಸಾಧ್ಯ ಎಂದು ಹಿರಿಯರು ಹೇಳುತ್ತಾರೆ. ಇದು ನಿಜ ಅನ್ನೋದನ್ನು ಹಲವು ಉದ್ಯಮಿಗಳು ಸಾಬೀತುಪಡಿಸಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ಉದ್ಯಮಿ ರೇಣುಕಾ ಆರಾಧ್ಯ. ಜೀವನೋಪಾಯಕ್ಕಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವರು. ತಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಇಂದು 40 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ. ರೇಣುಕಾ ಆರಾಧ್ಯ, ಕರ್ನಾಟಕದ ಬೆಂಗಳೂರು ಸಮೀಪದ ಸಣ್ಣ ಹಳ್ಳಿಯಿಂದ ಬಂದವರು. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಅವರ ಕುಟುಂಬದ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿತ್ತು, ಆರಾಧ್ಯ ತನ್ನ 10ನೇ ತರಗತಿಯನ್ನು ಮುಗಿಸಿದ ನಂತರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹಲವು ಮನೆಗಳಿಗೆ ಕೆಲಸ ಮಾಡಲು ಹೋಗಬೇಕಾಯಿತು. ರೇಣುಕಾ ಆರಾಧ್ಯ, ಕ್ರಮೇಣ ಅರ್ಚಕರಾಗಿ ಕೆಲಸ ಮಾಡಲು ಆರಂಭಿಸಿದರು.

ನಂತರ ಮನೆ ಮನೆಗೆ ತೆರಳಿ ಅಕ್ಕಿ, ಹಿಟ್ಟು, ಬೇಳೆಕಾಳುಗಳನ್ನು ಭಿಕ್ಷೆ ಬೇಡಬೇಕಾಯಿತು. ಆದರೂ ಜೀವನ ನಿರ್ವಹಿಸುವುದು ಕಷ್ಟವಾಗ್ತಿತ್ತು. ಹೀಗಾಗಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಜಾಯಿನ್ ಆದರು. ಆ ಬಳಿಕ ಕಾರ್ಖಾನೆಯೊಂದರಲ್ಲಿ ಕೆಲಸವನ್ನು ಪಡೆದರು. ಪ್ಲಾಸ್ಟಿಕ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ ಸ್ವಂತ ಉದ್ಯಮ ಆರಂಭಿಸಿದ ಕನ್ನಡಿಗ : ಅದರ ನಂತರ, ಅವರು ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಮದುವೆಯಾಗಲು ನಿರ್ಧರಿಸಿದಾಗ ರೇಣುಕಾಗೆ ಕೇವಲ 20 ವರ್ಷ. ಮದುವೆಯಾದರೆ, ಹೆಚ್ಚುವರಿ ಜವಾಬ್ದಾರಿ, ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಅವರು ನಂಬಿದ್ದರು. ಹೀಗಾಗಿ ಸೂಕ್ತ ಹುಡುಗಿಯನ್ನು ಮದುವೆಯಾದರು.

ಪ್ಲಾಸ್ಟಿಕ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಸ್ವಂತ ಉದ್ಯಮ ಆರಂಭಿಸುವ ಯೋಚನೆ ಬಂತು. ಸೂಟ್‌ಕೇಸ್‌ ಕವರ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದರು. ಆದರೆ ಕೆಲಸಗಳು ಅವರು ಅಂದುಕೊಂಡಂತೆ ನಡೆಯಲ್ಲಿಲ್ಲ. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತ ಸುಮಾರು 30,000 ರೂ ನಷ್ಟವನ್ನು ಅನುಭವಿಸಿದರು. ಆದರೆ ಹಣ ವಸೂಲಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಡೈವಿಂಗ್ ಕಲಿತು ಟ್ರಾವೆಲ್ ಏಜೆನ್ಸಿಯಲ್ಲಿ ಡ್ರೈವರ್ ಕೆಲಸ ಗಿಟ್ಟಿಸಿಕೊಂಡರು. ವಿದೇಶಿ ಪ್ರವಾಸಿಗರನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಿದ್ದರು. 4 ವರ್ಷಗಳ ಕಾಲ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಿದ ಬಳಿಕ, ಸ್ವತಃ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಲು ನಿರ್ಧರಿಸಿದರು.

ಪ್ರವಾಸಿ ಕ್ಯಾಬ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡಿದರು ಮತ್ತು ಕೆಲವು ಬ್ಯಾಂಕ್‌ಗಳ ಸಹಾಯವನ್ನು ಪಡೆದರು. ಒಂದು ಕಾರು ಖರೀದಿಸಿ ಟ್ರಾವೆಲ್ ಏಜೆನ್ಸಿ ಆರಂಭಿಸಿದವರು ಈಗ ಕೋಟ್ಯಾಧಿಪತಿ ಮೊದಲಿಗೆ ಒಂದು ಕಾರನ್ನು ಖರೀದಿಸಿದರು. ಒಂದು ವರ್ಷದ ನಂತರ ಮತ್ತೊಂದು ಕಾರು ಖರೀದಿಸಿದರು. ಇದೇ ವೇಳೆ ಟ್ರಾವೆಲ್ ಏಜೆನ್ಸಿಯೊಂದು ತನ್ನ ವ್ಯಾಪಾರವನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದು ಅವರಿಗೆ ತಿಳಿಯಿತು. ರೇಣುಕಾ ಆರಾಧ್ಯ ಅದನ್ನು 6 ಲಕ್ಷಕ್ಕೆ ಖರೀದಿಸಿದರು. ಆ ಸಮಯದಲ್ಲಿ ಕಂಪೆನಿ 35 ಕ್ಯಾಬ್‌ಗಳನ್ನು ಹೊಂದಿತ್ತು.ಇಲ್ಲಿಂದ ರೇಣುಕಾರ ಅದೃಷ್ಟ ಬದಲಾಯಿತು.

ಇದರ ನಂತರ, ಅಮೆಜಾನ್ ಇಂಡಿಯಾ ತನ್ನ ಕಂಪನಿಯನ್ನು ತನ್ನ ಪ್ರಚಾರಕ್ಕಾಗಿ ಆಯ್ಕೆ ಮಾಡಿತು. ವಾಲ್‌ಮಾರ್ಟ್ ಮತ್ತು ಜನರಲ್ ಮೋಟಾರ್ಸ್‌ನಂತಹ ಕಂಪನಿಗಳು ಸಹ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದವು. ಕ್ರಮೇಣ ಕಂಪನಿಯ ವಹಿವಾಟು ಹೆಚ್ಚಾಗತೊಡಗಿ 40 ಕೋಟಿ ರೂ. ವರೆಗೂ ತಲುಪಿತು. ಇಂದು ರೇಣುಕಾ ಆರಾಧ್ಯ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ.

Categories
ತೀರ್ಥಹಳ್ಳಿ

ರಕ್ತದಾನ ಮಾಡಿದ ವಿದ್ಯಾರ್ಥಿಗಳು!

ರಕ್ತದಾನ ಮಾಡಿದ ವಿದ್ಯಾರ್ಥಿಗಳು!
– ಸರ್ಕಾರಿ ಡಿಗ್ರಿ ಕಾಲೇಜಲ್ಲಿ ರಕ್ತದಾನ ಶಿಬಿರ
– 109 ವಿದ್ಯಾರ್ಥಿಗಳಿಂದ ರಕ್ತದಾನ

NAMMUR EXPRESS NEWS
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಪ್ರಶಂಸಾರ್ಹ ಯಶಸ್ವಿ ರಕ್ತದಾನ ಶಿಬಿರ ಇತ್ತೀಚಿಗೆ ನಡೆಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಳೆಬೈಲ್, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ಇವರು ರೋಟರಿ ಕ್ಲಬ್, ರೋಟರಿ ಐಎಮ್ಎ ರಕ್ತನಿಧಿ ಕೇಂದ್ರ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಳೆಬೈಲಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಡಾ. ಗಣೇಶ್ ಭಟ್, ವೈದ್ಯಾಧಿಕಾರಿಗಳು, ಜೆಸಿ ಆಸ್ಪತ್ರೆ ತೀರ್ಥಹಳ್ಳಿ ಇವರು ರಕ್ತದಾನ ಮಹತ್ವವನ್ನು ಮತ್ತು ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳು ರಕ್ತದಾನ ದ ಮೂಲಕ ಭಾಗವಹಿಸಬೇಕೆಂದು ತಿಳಿಸಿದರು

. ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಣ್ಣ ಹೆಚ ಡಿ,ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರು ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಮತ್ತು ಅವಶ್ಯಕತೆಯನ್ನು ರೊ. ಕೆ ಪಿ ಎಸ್ ಸ್ವಾಮಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ರೆಡ್ ಕ್ರಾಸ್ ಇದರ ಕಾರ್ಯದರ್ಶಿ ಇವರು ತಮ್ಮ ಅನುಭವದ ಮೂಲಕ ಮತ್ತು ರಕ್ತದಾನದಿಂದ ಆಗುವ ಸಮಾಜ ಸೇವೆ ,ಆರೋಗ್ಯ ವೃದ್ಧಿ ಮುಂತಾದ ವಿಷಯಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದರು. ರಕ್ತದಾನವನ್ನು ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ ಹುರಿದುಂಬಿಸಲು ಹೆಚ್. ಡಿ .ಎಫ್ .ಸಿ ಬ್ಯಾಂಕ್ ಇವರು ಸಹ ಸಹಾಯವನ್ನುನೀಡಿದರು.

ಈ ಸಂದರ್ಭದಲ್ಲಿ ರಶ್ಮಿ ಹೆಚ್ ಡಿ ಎಫ್ ಸಿ ಬ್ಯಾಂಕ್ ತೀರ್ಥಹಳ್ಳಿ. ಇವರು ಉಪಸ್ಥಿತರಿದ್ದರು ಮೆಗ್ಗಾನ್ ಆಸ್ಪತ್ರೆಯ ವೈದ್ಯರು,, ರೊ ಬಿ ವಿ ಶ್ರೀಧರ್, ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಮಾರುತಿ ಮತ್ತು ಇಕ್ಬಾಲ್, ಶೋಭಾ ಕೆ ಮತ್ತು ಲತಾ ಎಲ್ ಸಿ, ಬಗ್ಗೆಸಂಯೋಜನಾಧಿಕಾರಿಗಳು ರಾಷ್ಟ್ರೀಯ ಸ್ವಯ ಸೇವಾ ಯೋಜನೆ,, ಸರ್ಕಾರಿ ಕಾಲೇಜಿನ ರೇಂಜರ್ಸ್, ರೋವರ್ಸ್ ಏನ್ ಎಸ್ ಎಸ್ ಯುವರ್ ರೆಡ್ ಕ್ರಾಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರೋಟರಿ ಐಎಂಎ ರಕ್ತನಿಧಿ ಕೇಂದ್ರ ಮತ್ತು ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಶಿವಮೊಗ್ಗ ದತಂತ್ರಜ್ಞರು ರಕ್ತದಾನ ಶಿಬಿರದಲ್ಲಿ ಸಹಕರಿಸಿದರು .109 ಯೂನಿಟ್ ರಕ್ತವನ್ನು ಪಡೆಯಲಾಯಿತು.

Categories
ಉದ್ಯೋಗ ಸುದ್ದಿ ಚಿಕ್ಕಮಗಳೂರು ತೀರ್ಥಹಳ್ಳಿ ಶಿವಮೊಗ್ಗ

ರಾಹುಲ್ ಹ್ಯುಂಡೈ ಶೋ ರೂಂನಲ್ಲಿ ಉದ್ಯೋಗ

ರಾಹುಲ್ ಹ್ಯುಂಡೈ ಶೋ ರೂಂ ನಲ್ಲಿ ಉದ್ಯೋಗ
– ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಕಡೂರು, ಚಿಕ್ಕಮಗಳೂರಲ್ಲಿ ಉದ್ಯೋಗ
– ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ಡೀಟೇಲ್!

NAMMUR EXPRESS JOB NEWS
ಮಲೆನಾಡಿನ ಪ್ರಸಿದ್ಧ ಹುಂಡೈ ಕಾರ್ ಡೀಲರ್ ಆದ ರಾಹುಲ್ ಹುಂಡೈ ಕಾರ್ ಶೋರೂಂ ನಲ್ಲಿ ಉದ್ಯೋಗವಕಾಶ

ಹುದ್ದೆ: ಫೈನಾನ್ಸ್ ಎಕ್ಸಿಕ್ಯೂಟಿವ್
ಎಲ್ಲಿದೆ ಉದ್ಯೋಗ ಅವಕಾಶ :– ಸಾಗರ ಮತ್ತು ತೀರ್ಥಹಳ್ಳಿ

ಹುದ್ದೆ : ಸರ್ವಿಸ್ ಅಡ್ವೈಸರ್
ಎಲ್ಲಿದೆ ಉದ್ಯೋಗಾವಕಾಶ : ಶಿವಮೊಗ್ಗ

ಹುದ್ದೆ: ಸೇಲ್ಸ್ ಕನ್ಸಲ್ಟೆಂಟ್
ಎಲ್ಲಿದೆ ಉದ್ಯೋಗಾವಕಾಶ: ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು, ಸಾಗರ, ಶಿಕಾರಿಪುರ, ಕಡೂರು.

ಹೊಸಬರು ಹಾಗೂ ಮಾರ್ಕೆಟಿಂಗ್ ಅನುಭವ ಇರುವವರು ( ವಿದ್ಯಾರ್ಹತೆ ಶೈಕ್ಷಣಿಕ ಹಂತದಲ್ಲಿ ತೇರ್ಗಡೆ ಹಾಗೂ ಯಾವುದೇ ಪದವಿ )

hr@grouprahul.in
9448397066
RAHUL HYUNDAI

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮಂಗಳೂರು ಬೀಚ್ ಬಳಿ ಕೊಲೆ!
– ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಕೊಲೆ
– ಕಾರ್ಕಳ: ಭೀಕರ ಅಪಘಾತ: ಓರ್ವನ ಸಾವು
– ಕೋಟಾ: ಬೈಕ್ ಅಪಘಾತ: ಇಬ್ಬರಿಗೆ ಗಾಯ

NAMMUR EXPRESS NEWS
ಮಂಗಳೂರು: ದೋಣಿ ನಿರ್ಮಾಣ ಕಾರ್ಮಿಕರಿಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಸಾವನ್ನಪ್ಪಿದ ಘಟನೆ ತಣ್ಣೀರುಬಾವಿ ಬೀಚ್ ಬಳಿ ನಡೆದಿದೆ. ಕೇರಳದ ಕೊಲ್ಲಂ ನಿವಾಸಿ ಬಿನು (41) ವೃತ್ತಿಪರ ಕಾರ್ಮಿಕ. ತಣ್ಣೀರುಬಾವಿ ತಣ್ಣೀರ್ ಬಾವಿ ಬೀಚ್ ಬಳಿ ದೋಣಿ ದುರಸ್ತಿ ಕಾರ್ಯದಲ್ಲಿ ನಿರತನಾಗಿದ್ದ ಕೇರಳದ ತಳ್ಳಿಪರಂಬ ನಿವಾಸಿಗಳಾದ ಬಿನೋಯ್ (52), ಹಾಗೂ ಜಾನ್ಸನ್ ನಡುವೆ ಶನಿವಾರ ಸಂಜೆ ಸಣ್ಣ ವಿಚಾರಕ್ಕೆ ವಾಗ್ವಾದ ನಡೆಯಿತು. ಅದೇ ದಿನ ರಾತ್ರಿ ಮದ್ಯದ ಅಮಲಿನಲ್ಲಿ ಜಾನ್ಸನ್ ಬಿನು ಅನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳದ ಕೆದಿಂಜೆಯಲ್ಲಿ ಅಪಘಾತ:

ಸ್ಥಳದಲ್ಲೇ ಓರ್ವ ಮೃತ್ಯು ,12 ಮಂದಿಗೆ ಗಾಯ , ಇಬ್ಬರ ಸ್ಥಿತಿ ಗಂಭೀರಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೊಲೆರೋ ಡಿಕ್ಕಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕೆದಿಂಜೆ ಎಂಬಲ್ಲಿ ಭಾನುವಾರ ಸಂಭವಿಸಿದೆ.ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೆದಿಂಜೆ ಎಂಬಲ್ಲಿ ನಂದಳಿಕೆ ಕಡೆಯಿಂದ ಬರುತ್ತಿದ್ದ ಮಹೀಂದ್ರಾ ಬೋಲೆರೊ ಜೀಪ್ ಕಾರ್ಕಳ ಕಡೆಯಿಂದ ಮುಂಬಯಿಗೆ ಹೋಗುತ್ತಿದ್ದ ರೇಷ್ಮಾ ಹೆಸರಿನ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಜಯಪುರ ನಿವಾಸಿ ಶಿವಪ್ಪ ಸ್ಥಳದಲ್ಲೇ ಮೃತಪಟ್ಟರೆ, ಮಂಜು , ಸುಜಯ ಎಂಬುವರ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ತಾಲೂಕಿನ ನಂದಳಿಕೆಯ ತಮ್ಮ ಕುಟುಂಬದ ಮನೆಗೆ ದೇವರ ಕೆಲಸ ಮುಗಿಸಿ ಬರುವಾಗ ಈ ಘಟನೆ ಸಂಭವಿಸಿದೆ ಅಪಘಾತದಲ್ಲಿ ಮೃತರಾದ ಕುಟುಂಬ ಗುರಿಕಾರ ಶಿವಪ್ಪನವರೇ ಮುಂದೆ ನಿಂತು ದೈವದ ಕೆಲಸದ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದರು ಎಂದು ತಿಳಿದು ಬಂದಿದೆ.ಬಸ್ಸಿನಲ್ಲಿದ್ದ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೈಕ್‌ ಸವಾರರಿಬ್ಬರು ಗಂಭೀರ ಗಾಯ

​ಕೋಟ: ಬೈಕ್‌ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಪರಿಣಾಮ ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಪೇಟೆಯ ಸರ್ಕಲ್ ನಲ್ಲಿ ಭಾನುವಾರ ರಾತ್ರಿ 11:15ರ ಸುಮಾರಿಗೆ ನಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರರಿಬ್ಬರು ಸ್ಥಳೀಯ ಪಡುಮುಂಡು ಸಾಯಿಬ್ರಕಟ್ಟೆಯ ಸತೀಶ್ ಎಸ್ (27) ಹಾಗೂ ಇನ್ನೊರ್ವ ಸಹಸವಾರ ಎಂದು ತಿಳಿದು ಬಂದಿದೆ. ಬೆಂಗಳೂರುನಿಂದ ಪ್ರವಾಸಕ್ಕೆ ಹೊರಟ್ಟಿದ್ದ ಟೆಂಪೋ ಟ್ರಾವೆಲರ್ ವಾಹನವು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುರುಡೇಶ್ವರದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದು ಅದೇ ಮಾರ್ಗವಾಗಿ ಕುಂದಾಪುರ ದಿಂದ ಕೋಟ ಕಡೆಗೆ ಬರುತ್ತಿದ್ದ ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಬೈಕ್‌ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುತ್ತಾರೆ.

Categories
ಮಲ್ನಾಡ್

ಕುಪ್ಪಳಿಯಲ್ಲಿ ‘ನಾಯಕತ್ವ’ ಕುರಿತ ತರಬೇತಿ ಶಿಬಿರ

ಕುಪ್ಪಳಿಯಲ್ಲಿ ‘ನಾಯಕತ್ವ’ ಕುರಿತ ತರಬೇತಿ ಶಿಬಿರ
– ಡಿ.16, ಡಿ.17 ಎರಡು ದಿನ ಶಿಬಿರ:
– ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಆಯೋಜನೆ

NAMMUR EXPRESS NEWS
ಕೊಪ್ಪ: ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿನ ಹೇಮಾಂಗಣದಲ್ಲಿ ಡಿ.16 ಶನಿವಾರ ಮತ್ತು ಡಿ.17ರ ಭಾನುವಾರ 2 ದಿನಗಳ ಕಾಲ ‘ನಾಯಕತ್ವ’ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಸುಧೀರ್‌ಕುಮಾರ್‌ ಮೂರೊಳ್ಳಿ ತಿಳಿಸಿದ್ದಾರೆ. ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಈ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಲೆನಾಡು ಕರಾವಳಿ ಜನಪರ ಒಕ್ಕೂಟ ಎಂದರೆ ಮಲೆನಾಡು ಜನರ ಬದುಕು, ಭಾವನೆ, ಶ್ರದ್ದೆ ನಂಬಿಕೆಗಳ ಗಟ್ಟಿ ಧ್ವನಿಯಾಗಿದೆ.

ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಭಾಗಗಳು ಒಕ್ಕೂಟದ ವ್ಯಾಪ್ತಿಯಲ್ಲಿ ಬರುತ್ತವೆ. ಇದೊಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾಗಿದ್ದು ಪ್ರಜಾಪ್ರಭುತ್ವ, ಸಂವಿಧಾನಿಕ ಸಂಘಟನೆಯಲ್ಲಿ ಅಚಲ ನಂಬಿಕೆ ಯುಳ್ಳ ಒಕ್ಕೂಟ. 2 ದಿನಗಳ ನಾಯಕತ್ವ ತರಬೇತಿ ಶಿಬಿರ ಉಪಯುಕ್ತ ಕಾರ್ಯಕ್ರಮವಾಗಿದೆ. ಹೆಚ್ಚಿನ ಮಾಹಿತಿಗೆ: 8277066108, 9448245172, 9448241148 ಈ ನಂಬರ್ ಸಂಪರ್ಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ

Categories
ಕರಾವಳಿ

ಸಾಂಸ್ಕೃತಿಕ ಹಬ್ಬ ಆಳ್ವಾಸ್ ವಿರಾಸತ್!

ಸಾಂಸ್ಕೃತಿಕ ಹಬ್ಬ ಆಳ್ವಾಸ್ ವಿರಾಸತ್!
– ಡಿ.14ರಿಂದ 17ರವರೆಗೆ ಆಳ್ವಾಸ್‌ ವಿರಾಸತ್
– ಸಾಂಸ್ಕೃತಿಕ ರಥ, ರಥಾರತಿ, ಬೃಹತ್ ಪ್ರದರ್ಶನ ಮಳಿಗೆಗಳು
– ರಾಜ್ಯಪಾಲರಿಂದ ಉದ್ಘಾಟನೆ: ಏನೇನಿದೆ ವಿಶೇಷ?
– 3 ಸಾವಿರಕ್ಕೂ ಅಧಿಕ ಕಲಾವಿದರು ಭಾಗಿ

NAMMUR EXPRESS NEWS
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈ ಸಾಲಿನ ಆಳ್ವಾಸ್ ವಿರಾಸತ್-2023 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿ.14ರಿಂದ 17ರವರೆಗೆ ಮೂಡುಬಿದಿರೆಯಲ್ಲಿ ಸಪ್ತಮೇಳಗಳ ಮೆರುಗಿನೊಂದಿಗೆ ನಡೆಯಲಿದೆ. ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿರುವ ವಿರಾಸತ್ ಅನ್ನು ಇತ್ತೀಚೆಗೆ ಹುತಾತ್ಮರಾದ ವೀರಯೋಧ ಕ್ಯಾ.ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾಹಿತಿ ನೀಡಿ, ಡಿ.14ರಂದು ಸಂಜೆ ರಾಜ್ಯಪಾಲ ಥಾವರ್‌ಚಂದ್ ಗೆಲ್ಲೋಟ್ ವಿರಾಸತ್ ಉದ್ಘಾಟಿಸುವರು. ಸಂಜೆ 6.35ಕ್ಕೆ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಡಿ.15ರಂದು ಸಂಜೆ 6ರಿಂದ 8ರ ವರೆಗೆ ಚಲನಚಿತ್ರ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ಗಾನ ವೈಭವ, ಡಿ.16ರಂದು ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಭಾವ ಲಹರಿ ನಡೆಯಲಿದೆ ಎಂದು ತಿಳಿಸಿದರು.

ಮೂವರಿಗೆ ವಿರಾಸತ್ ಪ್ರಶಸ್ತಿ

ಡಿ. 17ರಂದು ಸಂಜೆ ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ ನಡೆಯಲಿದೆ. ವಯಲಿನ್ ವಾದಕ ಡಾ.ಮೈಸೂರು   ಮಂಜುನಾಥ್, ಬಾನ್ಸುರಿ ಮಾಂತ್ರಿಕ ಡಾ. ಪ್ರವೀಣ್ ಗೋಲ್ಕಿ0ಡಿ, ಹಾಗೂ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಈ ಮೂವರಿಂದ ತಾಳ-ವಾದ್ಯ- ಸಂಗೀತ, ರಾತ್ರಿ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಇರಲಿದೆ.

750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ, ಮಾರಾಟ

ವಿರಾಸತ್‌ನಲ್ಲಿ ಬೆಳಗ್ಗೆ 9ರಿಂದ ರಾತ್ರಿ 1ರ ವರೆಗೆ ಅನ್ವೇಷಣಾತ್ಮಕ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳ ವಿಶೇಷ ಆಕರ್ಷಣೆಯಾಗಿದೆ. ಮೊದಲ ಬಾರಿಗೆ ಸಾಂಸ್ಕೃತಿಕ ಮೆರವಣಿಗೆಯ ಬಳಿಕ ಸಾಂಸ್ಕೃತಿಕ ರಥ ಹಾಗೂ ಅದಕ್ಕೆ ವಾರಾಣಸಿಯ 10 ಮಂದಿಯ ತಂಡದಿಂದ ರಥಾರತಿ ಸಲ್ಲಿಕೆ ಈ ಸಲದ ವಿರಾಸತ್ ವಿಶೇಷತೆಯಾಗಿದೆ. ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಎಂಬ ಸಪ್ತಮೇಳಗಳನ್ನು ಹಮ್ಮಿಕೊಳ್ಳಲಾಗುವುದು.

Categories
ರಾಜ್ಯ ಹವಾಮಾನ ಸುದ್ದಿ

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ!

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ!
– ಹವಾಮಾನ ಇಲಾಖೆ ಮುನ್ಸೂಚನೆ
– ರೈತರಿಗೆ ಮಹತ್ವದ ಮಾಹಿತಿ: ಯಾವತ್ತು ಎಲ್ಲೆಲ್ಲಿ ಮಳೆ?

NAMMUR EXPRESS NEWS
ರಾಜ್ಯದಲ್ಲಿ ಮೂರು ದಿನ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಹವಾಮಾನ ಇಲಾಖೆ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ಮೂರು ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ಉಡುಪಿ, ದ.ಕನ್ನಡ, ಉ.ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕೋಲಾರ ಮತ್ತು ರಾಮನಗರದಲ್ಲಿ ಡಿ.10ರಿಂದ ಡಿ.12ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಇನ್ನೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಮುಂದಿನ 2-3 ದಿನಗಳಲ್ಲಿ ಮತ್ತೊಂದು ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು, ಕೇರಳ, ತಮಿಳುನಾಡಿನಲ್ಲಿ ಆಲಿಕಲ್ಲು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಬಹುತೇಕ ಕಡೆ ಕೃಷಿ ಚಟುವಟಿಕೆ ಗರಿಗೆದರಿದ್ದು ಮಳೆ ಅತಂಕ ಸೃಷ್ಟಿ ಮಾಡಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಸ್, ಲಾರಿ ನಡುವೆ ಅಪಘಾತ!

ತೀರ್ಥಹಳ್ಳಿಯಲ್ಲಿ ಬಸ್, ಲಾರಿ ನಡುವೆ ಅಪಘಾತ!
– ಮುಂಜಾನೆ ಮಂಜಿಗೆ ರಸ್ತೆ ಕಾಣದೆ ಅಪಘಾತ
– ಬಿಗ್​ ಬಾಸ್ ಕಾರ್ಯಕ್ರಮದ ವಿರುದ್ಧ ಡಿಜಿಪಿಗೆ ಪತ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಿನ ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ಇದೀಗ ಸರ್ಕಾರಿ ಬಸ್ ಹಾಗೂ ಹತ್ತು ಚಕ್ರದ ಲಾರಿಯ ನಡುವೆ ಸೋಮವಾರ ಬೆಳ್ಳಂ ಬೆಳಗ್ಗೆ ಆರಗದಲ್ಲಿ ಅಪಘಾತವಾಗಿದೆ. ಬೆಂಗಳೂರಿನಿಂದ ತೀರ್ಥಹಳ್ಳಿ ಮಾರ್ಗವಾಗಿ ಹುಂಚಕ್ಕೆ ಹೋಗುತ್ತಿದ್ದ ಕೆಎಸ್‌ಆರ್ಟಿಸಿ ಬಸ್‌ ಹಾಗೂ ಲಾರಿಯೊಂದರ ನಡುವೆ ಅಪಘಾತವಾಗಿದ್ದು ಬಸ್‌ ಜಖಮ್ ಗೊಂಡಿದೆ. ಮಂಜಿನ ವಾತಾವರಣ ಇದ್ದ ಕಾರಣಕ್ಕೆ ಎದುರಿಂದ ಬಂದ ವಾಹನ ಕಾಣಿಸದೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಡಿಜಿಪಿಗೆ ಪತ್ರ

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ತಾಲ್ಲೂಕು ಚಾಮರಾಜಪೇಟೆಯ ವಕೀಲರು ಕೆ.ವಿ. ಪ್ರವೀಣ್​ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಖಾಸಗಿ ಕನ್ನಡ ಮನರಂಜನಾ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಅಶ್ಲೀಲ ಮತ್ತು ಆವಾಚ್ಯ ಪದಗಳ ಬಳಕೆ ಹಾಗೂ ಅತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ” ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮನರಂಜನಾ ಚಾನಲ್‌ನಲ್ಲಿ ಕಾರ್ಯಕ್ರಮವು ಬಿತ್ತರಗೊಳ್ಳುತ್ತಿದ್ದು ಇದು ಸ್ಪರ್ದಿಗಳ ನಡುವೆ ಅಶ್ಲೀಲ ಸಂಭಾಷಣೆ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆ ನಡೆಯುತ್ತಿದೆ.

ಅಲ್ಲದೇ ಸ್ಪರ್ದಿಗಳು ಚಪ್ಪಲಿಯಲ್ಲಿ ಹೊಡೆದುಕೊಳ್ಳುವ ದೃಶ್ಯಗಳು ಸಹ ಅತಿ ರೋಚಕವಾಗಿ ಬಿತ್ತರಗೊಳ್ಳುತ್ತಿವೆ. ಈ ಮೂಲಕ ಕುಟುಂಬ, ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬೀರುವ ಕಾರ್ಯಕ್ರಮವಾಗಿದೆ. ಅಲ್ಲದೆ ಈ ಕಾರ್ಯಕ್ರಮವು ನೈತಿಕ ಮಟ್ಟವು ಕುಸಿಯುವಂತಹ ಕಾರ್ಯಕ್ರಮವಾಗಿದೆ. ಇದರ ಚಿತ್ರೀಕರಣವು ಬಿಡದಿಯಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ತಾವುಗಳು ಕಲ್ಲರ್ಸ್ ಕನ್ನಡ ಮನರಂಜನಾ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಅಶ್ಲೀಲ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ಕಾರ್ಯಕ್ರಮವನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ..?

ಅಡಿಕೆ ದರ ಎಷ್ಟಿದೆ..?
– ಬೆಟ್ಟೆ ಎಷ್ಟು… ರಾಶಿ ಎಷ್ಟು..?

ಸರಕು – 61009 – 75029
ಬೆಟ್ಟೆ –   47509 – 50009
ರಾಶಿ –   45009 – 47709
ಗೊರಬಲು – 35009 – 36709

ಅಡಿಕೆ ದರ ಮಾಹಿತಿ:

ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ತೀರ್ಥಹಳ್ಳಿ