Categories
ಉಡುಪಿ ಉದ್ಯೋಗ ಸುದ್ದಿ ಕರಾವಳಿ ಮಂಗಳೂರು

ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!

ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!
– ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ
– ರುಡ್ ಸೆಟ್ ವತಿಯಿಂದ ವಿವಿಧ ಕೋರ್ಸ್

NAMMUR EXPRESS NEWS
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ರುಡ್‌ ಸೆಟ್ ಸಂಸ್ಥೆಯ ಮೂಲಕ ವಿವಿಧ ಉಚಿತ ತರಬೇತಿಗಳನ್ನು ಸ್ವ ಉದ್ಯೋಗಾಕಾಂಕ್ಷಿಗಳಿಗೆ ನೀಡಲಾಗುತ್ತಿದೆ. ಇದೀಗ ವಿವಿಧ ಕೋರ್ಸ್ ಗಳಿಗೆ ಉಚಿತ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ರುಡ್ ಸೆಟ್ ಸಂಸ್ಥೆಯಿಂದ ಮಾಹಿತಿ ನೀಡಲಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಎಸ್‌ ಡಿಎಮ್‌ಇ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಜೊತೆಯಾಗಿ ಸ್ಥಾಪಿಸಿರುವ ರುಡ್‌ಸೆಟ್ ಸಂಸ್ಥೆ ಇದೀಗ ದೇಶಾದ್ಯಂತ ಇರುವ ನಿರುದ್ಯೋಗ ಯುವಕ ಯುವತಿಯರಿಗೆ ಮತ್ತು ಉದ್ಯೋಗವನ್ನು ಅರಸುತ್ತಿರುವವರಿಗೆ, ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿದೆ ಎಂದಿದೆ.

ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ವಿವಿಧ ಬ್ಯಾಂಕುಗಳಿಂದ ರುಡ್‌ಸೆಟ್‌ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತದೆ. ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದಿದೆ.

ಈ ಕೆಳಕಂಡ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ

1. ಕೃತಕ ಆಭರಣಗಳ ತಯಾರಿಕೆ – ದಿನಾಂಕ 18.12.2023 ರಿಂದ 30.12.2023 (13 ದಿನ )
2. ಮೋಟಾರ್ ರಿವೈಂಡಿಂಗ್ – ದಿನಾಂಕ 04.01.2024 ರಿಂದ 02.02.2024ರವರೆಗೆ (30 ದಿನಗಳು)
3. ಜೇನು ಸಾಕಾಣಿಕೆ 08.01.2024 ರಿಂದ 17.01.202483 (10)
4. ಎಸಿ ಮತ್ತು ಫ್ರಿಡ್ಜ್ ರಿಪೇರಿ 19.01.2024 ರಿಂದ 17.02.20248 (30 ದಿನ)
5. ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ದಿನಾಂಕ 05.02.2024 ರಿಂದ 17.02.2024838 (13 ದಿನಗಳು)

ಈ ತರಬೇತಿಗಳು ನಡೆಯಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಮೊಬೈಲ್ ಫೋನ್ ರಿಪೇರಿ, ಮೆನ್ಸ್ ಪಾರ್ಲರ್, ಮೋದಲಾದ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ ಯುವತಿಯರು ರುಡ್ ಸೆಟ್ ಸಂಸ್ಥೆಯ email – ujirerudseti@gmail.com ಗೆ ಅರ್ಜಿ ಸಲ್ಲಿಸಿ ಅಥವಾ ವಾಟ್ಸಪ್‌ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್‌ ನಂ. 6364561982 ಗೆ ಸಲ್ಲಿಸಬಹುದು.
ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ನಿರ್ದೇಶಕರು ರುಡ್‌ಸೆಟ್‌ ಸಂಸ್ಥೆ, ಸಿದ್ಧವನ ಉಜಿರೆ 574240, ಇವರಿಗೆ ಕಳ್ಳಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9591044014, 9902594791

Categories
ಉಡುಪಿ ಮಂಗಳೂರು

ಮಂಗಳೂರು ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ!

ಮಂಗಳೂರು ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ!
– ಡಿಸೆಂಬರ್ 6ರಿಂದ 10ರವರೆಗೆ ಕಾರ್ಯಕ್ರಮ
– ಡಾನ್ಸ್, ಫ್ಯಾಷನ್ ಷೋ, ಫುಡ್ ಫೆಸ್ಟಿವಲ್
– ಬೇಝೋನ್‌ ಡ್ಯಾನ್ಸ್‌ ಅಕಾಡೆಮಿ, ರೋಹನ್‌ ಕಾರ್ಪೊರೇಶನ್‌ ಸಹಯೋಗದಲ್ಲಿ ಆಯೋಜನೆ

NAMMUR EXPRESS NEWS
ಉಡುಪಿ: ಮಂಗಳೂರಿನ ಹೆಸರಾಂತ ಡ್ಯಾನ್ಸ್‌ ಸಂಸ್ಥೆಯಾಗಿ 23 ವರ್ಷಗಳಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸುತ್ತಾ, ಮನೋರಂಜನೆ ನೀಡುತ್ತಿರುವ ಬೇಝೋನ್‌ ಡ್ಯಾನ್ಸ್‌ ಅಕಾಡೆಮಿ ಪ್ರಾಯೋಜಕತ್ವದಲ್ಲಿ ರೋಹನ್‌ ಕಾರ್ಪೊರೇಶನ್‌ ಸಹಭಾಗಿತ್ವದಲ್ಲಿ ಡಿ. 6ರಿಂದ 10ರ ವರೆಗೆ ಮಂಗಳೂರಿನ ತಣ್ಣಿರುಬಾವಿ ಬೀಚ್‌ನಲ್ಲಿ “ಬೀಚ್‌ ಉತ್ಸವ-2023′ ನಡೆಯಲಿದೆ.

ಉತ್ಸವದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಫುಡ್ ಫೆಸ್ಟಿವಲ್, ಆಟೋ ಕಾರ್ನಿವಲ್, ಡ್ಯಾನ್ಸ್, ಸಂಗೀತ, ಫ್ಯಾಶನ್ ಶೋ ಇರಲಿದೆ. ಆಕರ್ಷಕ ವೇದಿಕೆಯಲ್ಲಿ ಡಿಜಿಟಲ್ ಸೌಂಡ್ಸ್ ಮತ್ತು ಲೈಟ್ ಗಳ ಸಮ್ಮಿಲನದೊಂದಿಗೆ ವಿವಿಧ ಮನೋರಂಜನೆಗಳು ಮನ ರಂಜಿಸಲಿವೆ. ಕನ್ನಡ ಮತ್ತು ತುಳು ಚಿತ್ರರಂಗದ ಪ್ರಸಿದ್ದ ನಟ, ನಟಿಯರು ಭಾಗವಹಿಸುವರು. ಕಾರ್ ಸ್ಟಾಲ್, ಎಲೆಕ್ನಿಕ್ ಬೈಕ್ ಸ್ಟಾಲ್‌ಗಳು ತೆರೆಯಲಿದ್ದು, ಯುವಜನರ ಅತ್ಯಾಕರ್ಷಕ ಸಾಂಸ್ಕೃತಿಕ ವೈಭವವಾಗಿ ಬೀಚ್ ಉತ್ಸವ ನೆರವೇರಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ

Categories
ರಾಜ್ಯ

ಇನ್ಮುಂದೆ ಪೊಲೀಸರಿಗೂ ಮೂಗುದಾರ?!

ಇನ್ಮುಂದೆ ಪೊಲೀಸರಿಗೂ ಮೂಗುದಾರ?!
– ನೀವು ಸ್ಟಾರ್ ರೇಟಿಂಗ್ ಕೊಡಬಹುದು..
– ಪೊಲೀಸರ ಕಾರ್ಯವೈಖರಿಗೆ ಕ್ಯೂಆರ್ ಕೋಡ್
– ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಬಲ

NAMMUR EXPRESS NEWS
ಪೊಲೀಸ್ ಸೇವೆ ದೇಶದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡುತ್ತಿದೆ. ಕಾನೂನು ಸುವ್ಯವಸ್ಥೆ ಎಲ್ಲರಿಗೂ ಬೇಕು. ಈ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ ನಿಮ್ಮನ್ನು ಯಾವ ರೀತಿಯಾಗಿ ನಡೆಸಿಕೊಳ್ಳಲಾಯಿತು? ಪೊಲೀಸರು ನೀಡಿದ್ದ ಸೇವೆ ಇಷ್ಟವಾಯಿತೋ, ಇಲ್ಲೋ? ಹೀಗೆ ಏನೇ ಇದ್ರೂ ಈಗ ಸುಲಭವಾಗಿ ಮೇಲಾಧಿಕಾರಿಗಳಿಗೆ ತಿಳಿಸುವ ಅವಕಾಶವನ್ನ ಪೊಲೀಸ್ ಇಲಾಖೆ ಕಲ್ಪಿಸಿದೆ. ಯೋಜನೆಯ ಜಾರಿಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಯಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದೆ.

ಕ್ಯೂಆರ್ ಕೋಡ್ ಅಳವಡಿಕೆ

ಈಗಾಗಲೇ ರಾಜ್ಯದ ಹಲವು ಠಾಣೆಗಳಲ್ಲಿ ಠಾಣೆಯಲ್ಲಿನ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು ನೀಡಿದ ಸೇವೆ ಬಗ್ಗೆ ತಿಳಿಸುವಂತಹ ಫೀಡ್ ಬ್ಯಾಕ್ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಗಳನ್ನ ಅಳವಡಿಸಲಾಗಿದೆ. ಈ ಮೂಲಕ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸಲು ಇಲಾಖೆ ಮುಂದಾದರೆ, ಸಾರ್ವಜನಿಕರು ತಮ್ಮ ಅನುಭವವನ್ನು ಹಂಚಿಕೊಳ್ಳಬಹುದಾಗಿದೆ.

ಇದ್ರಿಂದ ಏನು ಲಾಭ?

ಸದ್ಯ ಎಲ್ಲಾ ಪೊಲೀಸ್‌ ಠಾಣೆಗಳ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಅನ್ನು ಪ್ರದರ್ಶಿಸಲಾಗಿದ್ದು, ಠಾಣೆಗೆ ಭೇಟಿ ನೀಡುವವರು ಪೊಲೀಸರ ಸೇವೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದಾಗಿದೆ. ಪೊಲೀಸ್‌ ಠಾಣೆಗೆ ಬರುವ ಜನರು ಅಥವಾ ದೂರುದಾರರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಿಬ್ಬಂದಿ ವರ್ತನೆ, ದೂರುಗಳನ್ನು ಸ್ವೀಕರಿಸುವುದು, ಪ್ರತಿಕ್ರಿಯೆ ಮತ್ತು ಇತರ ಸಮಸ್ಯೆಗಳ ಕುರಿತು ಫೀಡ್ ಬ್ಯಾಕ್ ನೀಡಬಹುದು. ಈ ದೂರು, ವಿಮರ್ಶೆ ಅಥವಾ ಕಾಮೆಂಟ್‌ಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಒಟ್ಟಿನಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಿದ್ದು ಜನಸಾಮಾನ್ಯರು ಕೂಡಾ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸೇವೆ ಬಳಸಿಕೊಳ್ಳಬಹುದಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ನೆಲ್ಲಿಸರ ಕ್ಯಾಂಪ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೊಂಕು!

ತೀರ್ಥಹಳ್ಳಿ ನೆಲ್ಲಿಸರ ಕ್ಯಾಂಪ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೊಂಕು!
– ರಸ್ತೆ ಮಾರ್ಗದಲ್ಲಿ ಹಲವರ ಬದುಕು ಬೀದಿಗೆ
– ಸರ್ವೇ ಸರಿಯಾಗಿ ನಡೆದಿಲ್ಲ ಎಂಬ ಆರೋಪ
– ಸಂಸದರು,ಶಾಸಕರ ಅಭಿವೃದ್ಧಿ ಯೋಜನೆ ಆಗುತ್ತಾ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯನ್ನು ಚತುಷ್ಪಥವಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸರ್ಕಾರದಿಂದ 540 ಕೋಟಿ ರೂ ಮಂಜೂರಾಗಿದ್ದು ಇದೀಗ ಈ ಯೋಜನೆ ಹಲವು ಕಷ್ಟ ಎದುರಿಸಬೇಕಾಗಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಸರ್ವೆ, ಅಲೈನ್‌ಮೆಂಟ್ ಕೆಲಸಗಳು ಭರದಿಂದ ನಡೆಯುತ್ತಿದೆ. ಆದ್ರೆ ಕೆಲವು ಕಡೆ ಈ ಯೋಜನೆಯ ಸರ್ವೇ ಸರಿಯಾಗಿ ನಡೆದಿಲ್ಲ. ನೂರಾರು ಮನೆಗಳು ತಮ್ಮ ವಾಸ ಸ್ಥಳ ಬಿಡಬೇಕಾಗಿ ಬರಲಿದೆ ಎಂಬ ಕಾರಣಕ್ಕೆ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನು ರಸ್ತೆ ಯೋಜನೆಯನ್ನು ತಡೆಯುವ ಪ್ರಯತ್ನ ನಡೆಸಿದ್ದು ಸ್ಥಳೀಯರನ್ನು ಎತ್ತಿಕಟ್ಟಿ ಸರ್ವೆಗೆ ಅಡ್ಡಿಪಡಿಸುವುದು.

ಯೋಜನೆ ಕುರಿತು ಸುಳ್ಳುಪುಕಾರುಗಳನ್ನು ಹಬ್ಬಿಸುವ ಕೆಲಸ ನಡೆದಿದೆ ಎನ್ನಲಾಗಿದೆ. ತೀರ್ಥಹಳ್ಳಿ ಕೊಪ್ಪ ಸರ್ಕಲ್ ಇಂದ ಈ ರಸ್ತೆ ಶುರುವಾಗಲಿದೆ. ಶಿವಮೊಗ್ಗ ಕ್ರಿಯಾಶೀಲ ಸಂಸದ ಬಿ.ವೈ.ರಾಘವೇಂದ್ರ. ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರರ ಸಹಕಾರ ಮಾಗದರ್ಶನದೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯೊಂದರಿಂದಲೇ ತೀರ್ಥಹಳ್ಳಿ ಕ್ಷೇತ್ರಕ್ಕೆ ಹತ್ತಿರ 1500 ಕೋಟಿ ಅನುದಾನ ಕಲ್ಪಿಸಿದ್ದಾರೆ ತೀರ್ಥಹಳ್ಳಿ-ಶೃಂಗೇರಿ ರಸ್ತೆ, ತೀರ್ಥಹಳ್ಳಿ-ಮಲ್ಪೆರಸ್ತೆ, ತೀರ್ಥಹಳ್ಳಿ-ಶಿವಮೊಗ್ಗ ರಸ್ತೆ ಅವರ ಕಾಳಜಿಯಿಂದ ಅದ್ಭುತವಾಗಿ ನಿರ್ಮಾಣಗೊಳ್ಳುತ್ತಿದೆ. ಸುಗಮ ಸಂಚಾರಕ್ಕೆ, ಅಪಘಾತ-ಪ್ರಾಣ ಹಾನಿ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ದೇಶದೆಲ್ಲೆಡೆ ಉತ್ತಮ ಗುಣ ಮಟ್ಟದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

Categories
ತೀರ್ಥಹಳ್ಳಿ

ಶೌರ್ಯ ತಂಡದಿಂದ ಅಹೋ ರಾತ್ರಿ ಭಜನೆ

ಶೌರ್ಯ ತಂಡದಿಂದ ಅಹೋ ರಾತ್ರಿ ಭಜನೆ
– ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿ
– ಬಸವಾನಿ ಶೌರ್ಯ ತಂಡದ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ: ಶೌರ್ಯ ವಿಪತ್ತು ನಿರ್ವಹಣಾ ಘಟಕ, ಬಸವಾನಿ. ಬಸವಾನಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಮತ್ತು ಅಹೊ ರಾತ್ರಿ ಭಜನಾ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಮೂಡಿ ಬಂದಿದ್ದು,ಒಂದು ಸಾವಿರಕ್ಕೂ ಹೆಚ್ಚು ಜನ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಯೋಜನಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸರ್ವರೂ, ಗ್ರಾಮಸ್ಥರು ಹಾಜರಿದ್ದರು.

Categories
ಬೆಳಗಾವಿ

ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು!

ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು!
– ಅಡಿಕೆ ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಸರ್ಕಾರ
– ಅಡಿಕೆ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ?

NAMMUR EXPRESS NEWS
ಬೆಳಗಾವಿ: ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್‌ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ ಅವರು ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉತ್ತರಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಪರಿಷತ್ ಸದಸ್ಯ ರುದ್ರೇಗೌಡ, ಎಲೆ ಚುಕ್ಕಿ ರೋಗದಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸರ್ಕಾರ ರೋಗ ನಿಯಂತ್ರಣ ಮಾಡಲು ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರ ನೀಡಿದ್ದು, ಈ ಎಲೆ ಚುಕ್ಕೆ ರೋಗ ರೈತರಿಗೆ ತೊಂದರೆ ಕೊಡುತ್ತಿದೆ. ಇದರಿಂದ ಸಾಕಷ್ಟು ಹಾನಿಯಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ತೊಡೆದುಹಾಕಲು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ರೋಗದಿಂದ ತೊಂದರೆಗೆ ಒಳಗಾದ ರೈತರಿಗೆ ಈಗಾಗಲೇ ಸರ್ಕಾರದಿಂದ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು. ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.

ಸಂಶೋಧನೆಗೆ 43 ಲಕ್ಷ ರೂ. ಬಿಡುಗಡೆ ಮಾಡಿದ್ದ ಸರ್ಕಾರ

ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವನ್ನು ಈಚೆಗೆ ನೀಡಿತ್ತು. ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ ಸಂಶೋಧನೆಯ ಉದ್ದೇಶಕ್ಕಾಗಿಯೇ 43.61 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು.

Categories
ಮಂಗಳೂರು ಮುಲ್ಕಿ

ಮಿಸ್ ಇಂಡಿಯಾ ಸ್ಪರ್ಧೆಗೆ ಕರಾವಳಿ ಬಾಲಕಿ!

ಮಿಸ್ ಇಂಡಿಯಾ ಸ್ಪರ್ಧೆಗೆ ಕರಾವಳಿ ಬಾಲಕಿ!
– ಮೂಲ್ಕಿ ತಾಲ್ಲೂಕಿನ ಶಿಖಾ ಸುಶೀಲ್ ಸಾಧನೆ
– ಮಿಸ್ ಕರ್ನಾಟಕ ಸ್ಟೈಲ್ ಐಕಾನ್ ಸ್ಪರ್ಧೆಯಲ್ಲಿ ಗೆಲುವು

NAMMUR EXPRESS NEWS
ಮೂಲ್ಕಿ: ಬೆಂಗಳೂರಿನಲ್ಲಿ ನಡೆದ ಮಿಸ್ ಕರ್ನಾಟಕ ಸ್ಟೈಲ್ ಐಕಾನ್ ಸ್ಪರ್ಧೆಯಲ್ಲಿ ಕರಾವಳಿಯ ಸುಂದರಿ ಶಿಖಾ ಮೈಲುಗೈ ಸಾಧಿಸಿದ್ದಾರೆ  ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಲಯನ್ಸ್ ಕ್ಲಬ್‌ ಅಧ್ಯಕ್ಷೆ ಶೀತಲ್ ಸುಶೀಲ್ ಹಾಗೂ ಸುಶೀಲ್ ಬಂಗೇರ ದಂಪತಿಯ ಅವರ ಪುತ್ರಿ. ಶಿಖಾ ಸುಶೀಲ್ ಅವರು ಇತ್ತೀಚೆಗೆ ನಡೆದ ಮಿಸ್ ಕರ್ನಾಟಕ ಸ್ಟೈಲ್ ಐಕಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಫಸ್ಟ್ ರನ್ನರ್ ಅಪ್ ಆಗಿ ಮುಂದಿನ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರಾವಳಿಯ ಈ ಪ್ರತಿಭೆಗೆ ಎಲ್ಲಾ ಕಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Categories
ವಿಜಯಪುರ

ಮೆಕ್ಕೆಜೋಳ ಚೀಲಗಳು ಬಿದ್ದು ಮೂವರ ದುರ್ಮರಣ!

ಮೆಕ್ಕೆಜೋಳ ಚೀಲಗಳು ಬಿದ್ದು ಮೂವರ ದುರ್ಮರಣ!
– ವಿಜಯಪುರದಲ್ಲಿ ಘೋರ ದುರಂತ: ಮೂವರ ಶವ ಹೊರಕ್ಕೆ
– ಇನ್ನಷ್ಟು ಮಂದಿಯ ರಕ್ಷಣೆ ಕಾರ್ಯಾಚರಣೆ

NAMMUR EXPRESS NEWS
ವಿಜಯಪುರ: ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಜೋಳ ಏಕಾಏಕಿ ಕುಸಿದು ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ ಘಟನೆ ವಿಜಯಪುರ ಕೈಗಾರಿಕಾ ಪ್ರದೇಶದ ರಾಜಗುರು ಇಂಡಸ್ಟ್ರೀಸ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ರಾಜೇಶ್ ಮುಖಿಯಾ(25), ರಾಮರಾಜ್ ಮುಖಿಯಾ(29), ಸಂಬೂ ಮುಖಿಯಾ(26) ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ದುರಂತದಲ್ಲಿ ಮೃತಪಟ್ಟವರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿ 6-7 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಉಳಿದವರನ್ನು ಹೊರ ತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾಧಿಕಾರಿ ಭೂಬಾಲನ್, ಎಸ್.ಪಿ. ಹೃಷಿಕೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಚೀಲಗಳ ರಾಶಿ ಕುಸಿದು ದುರಂತ ಸಂಭವಿಸಿದೆ. ಈವರೆಗೂ ಮೂವರು ಕಾರ್ಮಿಕರ ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Categories
ಚಿಕ್ಕಮಗಳೂರು

ನಾಯಿ ವಿಷ್ಯದಲ್ಲಿ ಗಲಾಟೆ: ಆಸಿಡ್‌ ದಾಳಿ..!

ನಾಯಿ ವಿಷ್ಯದಲ್ಲಿ ಗಲಾಟೆ: ಆಸಿಡ್‌ ದಾಳಿ..!
– ನರಸಿಂಹರಾಜಪುರದಲ್ಲಿ ನಡೆದ ಘಟನೆ
– ಡಿ. 24 ರಿಂದ 26ರವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ
– ದತ್ತಜಯಂತಿ ಕಾರ್ಯಕ್ರಮ ಆಚರಣೆ ಹಿನ್ನೆಲೆ ಆದೇಶ

NAMMUR EXPRESS NEWS
ಎನ್.ಆ‌ರ್ ಪುರ: ಪಕ್ಕದ ಮನೆಯವರೊಂದಿಗೆ ನಾಯಿ ಬೊಗಳುವ ವಿಷಯಕ್ಕೆ ಆರಂಭವಾದ ಜಗಳವು ಆಸಿಡ್ ಎರಚುವ ಮಟ್ಟಕ್ಕೆ ತಿರುಗಿದ ಘಟನೆ ಎನ್.ಆರ್. ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ. ಈ ಗಲಾಟೆಯಲ್ಲಿ ಸುಂದರ್ ರಾಜ್ ಆಸಿಡ್ ದಾಳಿಗೆ ಒಳಗಾಗಿದ್ದು, ಆಸಿಡ್ ಎರಚಿದ ಜೇಮ್ಸ್ ಹಾಗೂ ಮರಿಯಮ್ಮ ನಾಪತ್ತೆಯಾಗಿದ್ದಾರೆ. ಸುಂದರ್ ರಾಜ್ ನಾಯಿಯೊಂದನ್ನು ಸಾಕಿದ್ದು, ಅದು ಬೊಗಳುವ ವಿಷಯಕ್ಕೆ ಸದಾ ಗಲಾಟೆ ನಡೆಯುತ್ತಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಸುಂದರ್ ರಾಜ್, ಜೇಮ್ಸ್ ಹಾಗೂ ಮರಿಯಮ್ಮಗೆ ನಾಯಿಯ ಹೆಸರಿನಲ್ಲಿ ಬೈಯುತ್ತಿದ್ದರು.

ಇದರಿಂದ ಸಿಟ್ಟಿಗೆದ್ದು ಆಸಿಡ್ ಎರಚಿದ್ದಾರೆ ಎನ್ನಲಾಗಿದೆ. ಆಸಿಡ್‌ ದಾಳಿಯಿಂದ ಗಂಭೀರ ಗಾಯಗೊಂಡ ಸುಂದರ್ ರಾಜ್ ರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಎನ್‌. ಆ‌ರ್.ಪುರ. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮ ಆಚರಣೆ ಹಿನ್ನೆಲೆ ಇದೇ 24 ರಿಂದ 26 ರವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಡಿ. 24 ರ ಬೆಳಿಗ್ಗೆ 6 ಗಂಟೆ ಯಿಂದ 26ರ ಮಧ್ಯ ರಾತ್ರಿ 12 ರವರೆಗೆ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ ಅಧಿನಿಯಮ 1965 ವಿಧಿ 21ರಂತೆ ಎಲ್ಲ ನಮೂನೆ ಮದ್ಯದ ಅಂಗಡಿಗಳನ್ನು ಮುಚ್ಚುವಂತೆಯೂ ಹಾಗೂ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹುಚ್ಚನ ಹುಚ್ಚಾಟ..!

ತೀರ್ಥಹಳ್ಳಿಯಲ್ಲಿ ಹುಚ್ಚನ ಹುಚ್ಚಾಟ..!
– ರಸ್ತೆಯಲ್ಲಿ ಸಿಕ್ಕವರಿಗೆ ಕಿರಿಕಿರಿ: ಯುವತಿಯರಿಗೆ ಕೀಟಲೆ
– ಬಸ್ ನಿಲ್ದಾಣದಲ್ಲಿ ಹೆಚ್ಚಾಯ್ತು ಕುಡುಕರ ಕಾಟ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಹುಚ್ಚನೊಬ್ಬ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಹುಚ್ಚಾಟ ಮೆರೆಯುತ್ತಿದ್ದಾನೆ. ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಿರಿಕಿರಿ ಮಾಡುತ್ತಿದ್ದಾನೆ. ಇದರಿಂದ ಪಟ್ಟಣದಲ್ಲಿ ಓಡಾಡಲು ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಮಧ್ಯ ನಿಂತು ಕೂಗಾಡುತ್ತಾ, ಇನ್ನು ಯುವತಿಯರಿಗೆ ಕೂಡ ಕೀಟಲೆ ನೀಡುತ್ತಿದ್ದು, ಇದರಿಂದ ಯುವತಿಯರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಈತನ ಅಸಭ್ಯ ವರ್ತನೆಯಿಂದ ಯುವತಿಯರು ಹಾಗೂ ಮಹಿಳೆಯರು ಪಟ್ಟಣದಲ್ಲಿ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಸಂಬಂಧಪಟ್ಟವರು ಗಮನಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.

ಬಸ್ ನಿಲ್ದಾಣದಲ್ಲಿ ಕುಡುಕರ ಕಾಟ!

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಕುಡುಕರು, ಕೆಲ ಯುವಕರ ಕಿರಿಕಿರಿ ಹೆಚ್ಚಾಗಿದೆ. ಮದ್ಯ, ಗಾಂಜಾ ಸೇವನೆ ಮಾಡಿ ಅಸಭ್ಯ ವರ್ತನೆ ಹೆಚ್ಚಾಗಿದೆ ಎಂದು ಸ್ಥಳೀಯ ವರ್ತಕರು ಆರೋಪಿಸಿದ್ದಾರೆ. ಈ ಬಗ್ಗೆ ತಕ್ಷಣ ಪೊಲೀಸ್ ಇಲಾಖೆ ಗಮನಿಸಬೇಕಿದೆ.