Categories
ಬೆಂಗಳೂರು

ಚೈತ್ರಾ ಸೇರಿ ಮೂವರಿಗೆ ಜಾಮೀನು!

ಚೈತ್ರಾ ಸೇರಿ ಮೂವರಿಗೆ ಜಾಮೀನು!
– ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
– ಇಂದು ಪರಪ್ಪನ ಅಗ್ರಹಾರದ ಜೈಲಿಂದ ಬಿಡುಗಡೆ

NAMMUR EXPRESS NEWS
ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೋಟೆಲ್ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟ್ಯಂತರ ರೂ. ಹಣ ವಂಚಿಸಿದ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಚೈತ್ರಾ ಸೇರಿ ಇಬ್ಬರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಇದರಿಂದಾಗಿ ಅವರು ಬಂಧನ ಮುಕ್ತರಾಗಲಿದ್ದಾರೆ. ಆರೋಪಿ ಚೈತ್ರಾ ಹಾಗೂ ಏಳನೇ ಆರೋಪಿಯಾಗಿರುವ ಶ್ರೀಕಾಂತ್‌ಗೆ 3ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮಂಗಳವಾರ ಪರಪ್ಪನ ಅಗ್ರಹಾರದ ಕಾರಾಗೃಹದಿಂದ ಈ ಇಬ್ಬರು ಬಿಡುಗಡೆಯಾಗಲಿದ್ದಾರೆ. ಈ ಪೈಕಿ ಪ್ರಕರಣ ಸಂಬಂಧ ಮೂವರಿಗೆ ಜಾಮೀನು ಸಿಕ್ಕಿದ್ದಂತಾಗುತ್ತದೆ.

ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ಚೈತ್ರಾ, ಗಗನ್ ಕಡೂರು, ಹಾಲಶ್ರೀ ಸ್ವಾಮೀಜಿ, ಧನರಾಜ್, ಚನ್ನನಾಯ್, ಪ್ರಜ್ವಲ್, ಶ್ರೀಕಾಂತ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿ ಇತ್ತೀಚೆಗೆ ಈ ಒಂಭತ್ತು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲೂ ಭಾರೀ ಸಂಚಲನ ಮೂಡಿಸಿತ್ತು.

ಏನಿದು ಕೇಸ್…?

ಉದ್ಯಮಿ ಗೋವಿಂದ ಬಾಬು ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಸೆಪ್ಟೆಂಬರ್ 13 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಗೋವಿಂದ ಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು 5 ಕೋಟಿ ರೂ. ಹಣ ಪಡೆದಿದ್ದಳು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಮತ್ತು ಗ್ಯಾಂಗ್ ಹಣ ನೀಡದೇ ವಂಚಿಸಿತ್ತು. ಈ ಬಗ್ಗೆ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು.

Categories
ಅಡಿಕೆ-ದರ ಶಿವಮೊಗ್ಗ

ಅಡಿಕೆ ದರ ಎಷ್ಟಿದೆ..?

ಅಡಿಕೆ ದರ ಎಷ್ಟಿದೆ..?
– ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟು?

ಬೆಟ್ಟೆ -37000-52960
ಗೊರಬಲು- 18000-36782
ರಾಶಿ- 36579-47009
ಸರಕು- 50040-76996
ರಾಶಿ ನ್ಯೂ – 44509-46899
ಸಿಪ್ಪೆಗೋಟು – 14669-21200
ಚಾಲಿ- 35809-38699
ಕೋಕಾ 19499-34699
ಕರಿ ಗೋಟು- 31129-34600
ಬಿಳಿ ಗೋಟು- 12099-34899

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಮಹಾ ಮೃತ್ಯುಂಜಯ ಹೋಮ, ಧನ್ವಂತರಿ ಮಹಾವಿಷ್ಣುಯಾಗ

ತೀರ್ಥಹಳ್ಳಿಯಲ್ಲಿ ಮಹಾ ಮೃತ್ಯುಂಜಯ ಹೋಮ, ಧನ್ವಂತರಿ ಮಹಾವಿಷ್ಣುಯಾಗ
– ರಾಮೇಶ್ವರ ದೇವಸ್ಥಾನದಲ್ಲಿ ಯಾಗ
– ಸಾವಿರಾರು ಭಕ್ತಾದಿಗಳು ಭಾಗಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನಸಂತರ್ಪಣಾ ಮತ್ತು ಧಾರ್ಮಿಕ ಸೇವಾಸಮಿತಿ ಇವರು ನಡೆಸುತ್ತಿರುವ ನಿತ್ಯ ಅನ್ನಸಂತರ್ಪಣಾ ಕಾರ್ಯದ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನವಗ್ರಹ ಶಾಂತಿ ಸಹಿತ ಮಹಾ ಮೃತ್ಯುಂಜಯ ಹೋಮ” ಹಾಗೂ ”ಧನ್ವಂತರಿ ಮಹಾವಿಷ್ಣು’ ಮಂತ್ರಯಾಗವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಎಲ್ಲಾ ಧಾರ್ಮಿಕ ಕಾರ್ಯಕ್ರಮವು ನೆರವೇರಿತು.

ಸೋಮವಾರ ಬೆಳಗ್ಗೆ ಗಂಟೆ 8-00 ರಿಂದ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಹಾಗೂ ಅಪಮೃತ್ಯು ರೋಗ-ರುಜಿನ ಗ್ರಹಚಾರ ದೋಷ ನಿವಾರಣಾರ್ಥ ಸಮಸ್ತ ಭಕ್ತ ಜನರ ಶ್ರೇಯೋಭಿವೃದ್ಧಿ ಹಾಗೂ ಆರೋಗ್ಯ ಆಯುಷ್ಯ ಪ್ರಾಪ್ತಿಗಾಗಿ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಸುಸಂಕಲ್ಪದ ಸಲುವಾಗಿ “ ನವಗ್ರಹ ಶಾಂತಿ ಸಹಿತ ಮಹಾ ಮೃತ್ಯುಂಜಯ ಹೋಮ” ಹಾಗೂ ”ಧನ್ವಂತರಿ ಮಹಾವಿಷ್ಣು ‘ ಮಂತ್ರಯಾಗವನ್ನು ನಡೆಸುವುದಾಗಿ ಸಂಕಲ್ಪಿಸಿದ ನಂತರ ಲಕ್ಷ್ಮೀಶ ತಂತ್ರಿಗಳ ಸಾರಥ್ಯದಲ್ಲಿ ಹೋಮವನ್ನು ನೆರವೇರಿಸಿ ನಂತರ ಪೂರ್ಣ ಮತ್ತು ಕಾರ್ಯಕ್ರಮ ನಡೆದು ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ, ಹಾಗೂ ನಿತ್ಯ ಅನ್ನಸಂತರ್ಪಣ ಕೊಠಡಿಯಲ್ಲಿ ಅನ್ನಪೂರ್ಣೇಶ್ವರಿಯ ಪೂಜೆ ನಡೆಸಿ ನಂತರ ಭಕ್ತಾದಿಗಳಿಗೆ ಅನ್ನಸಂಪರ್ಪಣೆಯನ್ನು ನಡೆಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀರಾಮೇಶ್ವರನ ಕೃಪೆಗೆ ಪಾತ್ರರಾದರು.

Categories
ಹಾಸನ

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ!

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ!
– ಕಾಡಾನೆ ಸೆರೆ ಹಿಡಿಯುವ ವೇಳೆ ನಡೆದ ದುರ್ಘಟನೆ
– ಸಕಲೇಶಪುರದಲ್ಲಿ ಘಟನೆ: ಹೇಗಾಯ್ತು ದುರಂತ..?

NAMMUR EXPRESS NEWS
ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ವೇಳೆ ಹೋರಾಡಿದ ಅರ್ಜುನ ಪ್ರಾಣ ಬಿಟ್ಟಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ ಪ್ರಾರಂಭವಾಯಿತು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿ ಮಾಡಿದೆ.

ಒಂಟಿ ಸಲಗ ದಾಳಿ ಮಾಡಿದ್ದರಿಂದ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಸಾಕಾನೆ ಅರ್ಜುನ ಒಂಟಿಯಾಗಿ ಕಾಳಗಕ್ಕಿಳಿದಿದ್ದ ಈ ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದ್ದಾನೆ. ಈ ಎರಡು ಆನೆಗಳು ಕಾಳಗಕ್ಕೆ ಬೀಳುವಂತೆ ಅರ್ಜುನನ ಮೇಲಿನಿಂದ ಮಾವು ಇಳಿದು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Categories
Uncategorized

ಸಾಕು ಬೆಕ್ಕು ಕಚ್ಚಿ ತಂದೆ-ಮಗ ಸಾವು!

ಸಾಕು ಬೆಕ್ಕು ಕಚ್ಚಿ ತಂದೆ-ಮಗ ಸಾವು!
– ಒಂದೇ ವಾರದ ಅವಧಿಯಲ್ಲಿ ಇಬ್ಬರು ಬಲಿ!

NAMMUR EXPRESS NEWS
ನವದೆಹಲಿ: ಉತ್ತರ ಪ್ರದೇಶದ ಕಾನಪುರದಲ್ಲಿ ತಂದೆ ಮತ್ತು ಮಗ ಡೆಡ್ಲಿ ರೆಬೀಸ್ ಗೆ ಬಲಿಯಾಗಿದ್ದಾರೆ. ಮೃತರ ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಕಾನ್ಫುರ ನಗರದ ಅಕ್ಬರ್ ಪುರದಲ್ಲಿ ಮೃತರ ನಿವಾಸ ಇತ್ತು. ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು. ತುಂಬಾ ಮುದ್ದಿನಿಂದ ಬೆಕ್ಕನ್ನು ಸಾಕಿದ್ದರು. ಒಂದು ದಿನ ಆ ಬೆಕ್ಕಿಗೆ ಬೀದಿ ನಾಯಿಯೊಂದು ಕಚ್ಚಿತ್ತು.
ಕಚ್ಚಿದ್ದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್ ಲಕ್ಷಗಳು ಕಾಣಿಸಿಕೊಂಡಿದ್ದವು.

ಎಂದಿನಂತೆ ಬೆಕ್ಕಿನ ಜೊತೆ ಮನೆಯ ಸದಸ್ಯರು ಆಟವಾಡುತ್ತಿರುವಾಗ ಒಂದು ದಿನ ಅದು ತನ್ನ ಮಾಲೀಕನ ಮಗನಿಗೆ ಗಾಯ ಮಾಡಿತ್ತು. ಕೆಲ ದಿನಗಳ ಬೆನ್ನಲ್ಲೇ ಆತನ ಆರೋಗ್ಯ ಹದಗೆಡಲು ಶುರುವಾಯಿತು. ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿ ಮೃತಪಟ್ಟಿದ್ದ. ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಯ್ತು. ಅವರೂ ಕೂಡ ರೇಬಿಸ್‌ನಿಂದ ಸಾವನ್ನಪ್ಪಿದರು. ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ. ಜೊತೆಗೆ ಆ ಪ್ರದೇಶದಲ್ಲಿ ಓಡಾಡೋದಕ್ಕೂ ಅಂಜುತ್ತಿದ್ದಾರೆ. ಸದ್ಯ ಉಳಿದಿರುವ ಅವರ ಕುಟುಂಬಸ್ಥರನ್ನು ಕಾನ್ಫುರಕ್ಕೆ ಕಳುಹಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

Categories
ತೀರ್ಥಹಳ್ಳಿ ಸಿನಿಮಾ

ತೀರ್ಥಹಳ್ಳಿಯಲ್ಲಿ ಅರ್ಧಂಬರ್ಧ ಪ್ರೇಮ ಕಥೆ ಪ್ರದರ್ಶನ

ತೀರ್ಥಹಳ್ಳಿಯಲ್ಲಿ ಅರ್ಧಂಬರ್ಧ ಪ್ರೇಮ ಕಥೆ ಪ್ರದರ್ಶನ
– ರಾಜ್ಯದ್ಯಂತ ಉತ್ತಮ ಪ್ರದರ್ಶನ
– ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ: ನೀವೂ ನೋಡಿ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ನಟಿ ದಿವ್ಯ ಉರುಡುಗ ನಟನೆಯ ಅರ್ಧಂಬರ್ಧ ಪ್ರೇಮ ಕಥೆ ಚಿತ್ರ ಡಿ.1ರಂದು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ತೀರ್ಥಹಳ್ಳಿಯ ವೆಂಕಟೇಶ್ವರ ಚಿತ್ರಮಂದಿರ ಸೇರಿದಂತೆ ಮಲೆನಾಡಿನ ಹಲವೆಡೆ ತೆರೆ ಕಂಡಿದೆ. ಬಿಗ್ ಬಾಸ್ ಜೋಡಿಯ ಈ ಚಿತ್ರಕ್ಕೆ ಎಲ್ಲೆಡೆ ಪ್ರೇಕ್ಷಕರು ಮೆಚ್ಚುಗೆ ನೀಡಿದ್ದಾರೆ. ಯಾವುದೇ ಪ್ರೇಮಕಥೆಗೆ ಸುಖಾಂತ್ಯ ಅಥವಾ ದುಃಖಾಂತ್ಯ ಸಿಕ್ಕರೆ ಅಲ್ಲಿಗೆ ಆ ಪ್ರೇಮಕಥೆ ಮುಗಿದು ಹೋದಂತೆ! ಆದರೆ ನಿಜವಾದ ಪ್ರೇಮಕಥೆ ಎಂದಿಗೂ ಮುಗಿಯುವುದಿಲ್ಲ. ಅದು ನಡೆಯುತ್ತಲೇ ಇರುತ್ತದೆ ಎಂದು ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾದ ಟೈಟಲ್‌ನಲ್ಲಿ ಇರುವಂತೆ, ಇದು ನಿಜಕ್ಕೂ “ಅರ್ಧಂಬರ್ಧ ಪ್ರೇಮಕಥೆ’ಯ ಸಿನಿಮಾ ಎಂದು ಖಂಡಿತವಾಗಿಯೂ ಹೇಳಬಹುದು. ಇಂದಿನ ಜನರೇಶನ್‌ನ ಹುಡುಗ-ಹುಡುಗಿಯರ ಬದುಕಿನ ದೃಷ್ಟಿ, ಪ್ರೀತಿ, ಪ್ರೇಮದ ಬಗ್ಗೆ ಅವರ ವ್ಯಾಖ್ಯಾನ ಎಲ್ಲವನ್ನೂ ತಮ್ಮದೇ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಇದು ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು. ಇನ್ನು ಇಡೀ ಸಿನಿಮಾದ ಬಹುಭಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಜೋಡಿಯ ಸುತ್ತಾಟ ಆವರಿಸಿಕೊಂಡಿದ್ದು, ದಿವ್ಯಾ ತಮ್ಮ ಲವಲವಿಕೆಯ ಅಭಿನಯ ದಲ್ಲಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಇನ್ನೂ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಜನರು ಆಗಮಿಸಿ ವೀಕ್ಷಿಸಬೇಕೆಂದು ಅವರ ಅಭಿಮಾನಿಗಳು ಕೋರಿದ್ದಾರೆ.

Categories
ಬೆಂಗಳೂರು

ಈಡಿಗರ ಸಂಘಕ್ಕೆ ಅಮೃತ ಮಹೋತ್ಸವ ಸಂಭ್ರಮ

ಈಡಿಗರ ಸಂಘಕ್ಕೆ ಅಮೃತ ಮಹೋತ್ಸವ ಸಂಭ್ರಮ
– ಡಿ.10ರಂದು ರಾಜಧಾನಿಯಲ್ಲಿ ಬೃಹತ್ ಕಾರ್ಯಕ್ರಮ, ಸಮುದಾಯದ ಜಾಗೃತ ಸಮಾವೇಶ
– ಈಡಿಗ ಸಮುದಾಯದ 25 ಉಪ ಪಂಗಡಗಳ ಸಮಾಗಮ

NAMMUR EXPRESS NEWS
ಬೆಂಗಳೂರು: ರಾಜ್ಯ ಈಡಿಗರ ಸಂಘಕ್ಕೆ ಅಮೃತ ಮಹೋತ್ಸವ ಸಂಭ್ರಮ. ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧತೆ ನಡೆದಿದೆ. ಡಿ.10ರಂದು ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ಬೃಹತ್ ಕಾರ್ಯಕ್ರಮ, ಸಮುದಾಯದ ಜಾಗೃತ ಸಮಾವೇಶ ನಡೆಯಲಿದ್ದು, ಈಡಿಗ ಸಮುದಾಯದ 25 ಉಪ ಪಂಗಡಗಳ ಸಮಾಗಮವಾಗಲಿದೆ.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ನೇತೃತ್ವದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ನಡೆಯಲಿದೆ. ಈಡಿಗ, ಬಿಲ್ಲವ, ಪೂಜಾರಿ, ದೀವರ, ಭಂಡಾರಿ, ಬೆಲ್ಲದ್, ಹಾಲಕ್ಷತ್ರಿಯ, ದೇಶ ಭಂಡಾರಿ, ದೇವರ, ದೇವರ ಮಕ್ಕಳು ದೀವರ ಮಕ್ಕಳು, ಎಳಿಗ, ಎಳವ, ಗಾಮಲ್ಲ, ಗೌಂಡ, ಹಳೇಪೈಕರು, ಹಳೇಪೈಕ್, ಇಲ್ಲಾವನ್, ಕಲಾಲ್, ಮಲೆಯಾಳಿ ಬಿಲ್ಲವ, ನಾಡರ್, ನಾಮಧಾರಿ, ರಿಯಾನ್ ಹಿಯ್ಯ, ಇಳಿಗ, ಗೊಂಡ್ಲತಿಯನ್-ಥಿಯ್ಯಾನ್ ಸೇರಿ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶಕ್ಕೆ ಎಲ್ಲರನ್ನು ಸ್ವಾಗತಿಸಲಾಗಿದೆ.

ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆರ್ಯ ಈಡಿಗ ಸಂಘಗಳು ಈಡಿಗ ಹಾಗೂ 25 ಪಂಗಡಗಳ ಸಮಸ್ತ ಸಮಾಜ ಬಾಂಧವರು, ಆರ್ಯ ಈಡಿಗ ಮಹಾಸಂಸ್ಥಾನ,ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್, ಆರ್.ಎಲ್. ಜಾಲಪ್ಪ ಅಕಾಡೆಮಿ, ಬೆಂಗಳೂರು ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ, ಕರ್ನಾಟಕ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.),ಜೆ.ಪಿ. ಪ್ರತಿಷ್ಠಾನ / ಜೆ.ಪಿ. ಫೌಂಡೇಶನ್, ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ, ಬಿಲ್ಲವ ಅಸೋಸಿಯೇಷನ್, ಬಿಲ್ಲವ ಮಹಾ ಮಂಡಲ, ಕರ್ನಾಟಕ ನಾಡಾರ್ ಸಂಘ, ನಾಮದಾರಿ ಕ್ಷೇಮಾಭಿವೃದ್ಧಿ ಸಂಘ,ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪ್ರತಿಷ್ಠಾನ,ತಿಯಾಸ್ ಸಂಘ (ರಿ ),ತಿಯಾನ್ ಸಂಘ (ರಿ ),ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ),ಶ್ರೀ ನಾರಾಯಣ ಗುರು ವಿಸ್ತಾರ ವೇದಿಕೆ (ರಿ),ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ರಿ.) ಕರ್ನಾಟಕ ಹಿಂದು ನಾಡಾರ್ ಸಂಘ (ರಿ.) ಎಸ್.ಎನ್.ಡಿ.ಪಿ ಯೋಗಂ ಸಂಘ (ರಿ.)ನಾರಾಯಣ ಗುರು ಕ್ಷೇಮಾಭಿವೃದ್ಧಿ ಸಂಘ (ರಿ.),ನಾರಾಯಣಗುರು ಸಮಿತಿ (ರಿ.),ಈಳವ ಸಂಘ (ರಿ.)ದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿ ಸಮುದಾಯದವರು ಈ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದಾರೆ.

ಸಮಸ್ತ ಸಮುದಾಯವನ್ನು ಈಡಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸ್ವಾಗತಿಸಿದ್ದಾರೆ.

ದಿನಾಂಕ : 10-12-2023ರ ಭಾನುವಾರ
ಸಮಯ: ಬೆಳಗ್ಗೆ : 11 :00 ಗಂಟೆಗೆ
ಸ್ಥಳ: ಅರಮನ ಮೈದಾನ, ಬೆಂಗಳೂರು

Categories
ಬೆಂಗಳೂರು ಹವಾಮಾನ ಸುದ್ದಿ

ಮಿಚುಂಗ್ ಚಂಡಮಾರುತ ಎಫೆಕ್ಟ್: ಮತ್ತೆ ಮಳೆ!

ಮಿಚುಂಗ್ ಚಂಡಮಾರುತ ಎಫೆಕ್ಟ್: ಮತ್ತೆ ಮಳೆ!
– ರಾಜ್ಯದಲ್ಲೂ ಇನ್ನೆರಡು ದಿನ ಮಳೆ ಸಾಧ್ಯತೆ
– ಬೆಂಗಳೂರು ಸೇರಿ ಎಲ್ಲೆಡೆ ಮಳೆ ವಾತಾವರಣ

NAMMUR EXPRESS NEWS
ಬೆಂಗಳೂರು: ಮಿಚುಂಗ್ ಚಂಡಮಾರುತ ಎಫೆಕ್ಟ್ ಹಿನ್ನೆಲೆ ರಾಜ್ಯದಲ್ಲೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಕರಾವಳಿ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

ದಕ್ಷಿಣ ಕನ್ನಡಸೇರಿ ಕರಾವಳಿ ಭಾಗದಲ್ಲಿಯೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.ಮಿಚುಂಗ್ ಚಂಡಮಾರುತ ಮೂರು ರಾಜ್ಯಗಳಿಗೆ ಕಟ್ಟೆಚ್ಚರ ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಗಂಟೆಗೆ 100 – 130 ಕಿಮೀ ವೇಗದಲ್ಲಿ ಮಿಚುಂಗ್ ಚಂಡಮಾರುತ ಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ.

Categories
ಆರೋಗ್ಯ ಬೆಂಗಳೂರು

ಹೊರಗೆ ಔಷಧಿ ಖರೀದಿಸಲು ಬರೆದರೆ ವೈದ್ಯರು ಸಸ್ಪೆಂಡ್.!

ಹೊರಗೆ ಔಷಧಿ ಖರೀದಿಸಲು ಬರೆದರೆ ವೈದ್ಯರು ಸಸ್ಪೆಂಡ್.!
– ಸರ್ಕಾರಿ ವೈದ್ಯರುಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ
– ಯಾವುದೇ ತಪ್ಪುಗಳನ್ನು ಮಾಡುತ್ತಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಲು ಸುತ್ತೋಲೆ

NAMMUR EXPRESS NEWS
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಔಷಧಗಳನ್ನು ಆರೋಗ್ಯ ಇಲಾಖೆಯ ಔಷಧಾಲಯದಿಂದ ಸರಬರಾಜು ಮಾಡಲಾಗುತ್ತಿದೆ. ಹೀಗಿದ್ದರೂ ಹೊರಗಡೆ ಔಷಧಿ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದು ಕಳುಹಿಸಿದರೆ ಅವರನ್ನು ಕೂಡಲೇ ಅಮಾನತುಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್ ಹೇಳಿದ್ದಾರೆ. ಇದಲ್ಲದೆ ನಾವು ರೋಗಿಗಳಿಗೆ ಔಷಧಿ ಖರೀದಿಸಲು ಹೊರಗಡೆಗೆ ಚೀಟಿ ಬರೆದು ಕಳುಹಿಸುತ್ತಿಲ್ಲ ಹಾಗೂ ಹೊರಗಿನ ಖಾಸಗಿ ಔಷಧಿ ಮಳಿಗೆಗಳ ಚೀಟಿಯಲ್ಲಿ ವೈದ್ಯ ಸಲಹೆ ಬರೆಯುವುದು ಮತ್ತಿತರ ತಪ್ಪುಗಳನ್ನು ಮಾಡುತ್ತಿಲ್ಲ ಎಂದು ಕೂಡಲೆ ಪ್ರಮಾಣ ಪತ್ರ ಸಲ್ಲಿಸಲು ಎಲ್ಲಾ ವೈದ್ಯರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಜೊತೆಗೆ ಈ ರೀತಿಯ ಪ್ರಮಾಣ ಪತ್ರ ನೀಡಿದ ನಂತರವೇ ಜುಲೈ ತಿಂಗಳ ವೇತನ ನೀಡಲು ಆಯಾ ಜಿಲ್ಲೆಗಳ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೊರಗಡೆ ಔಷಧ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದುಕೊಡುವುದನ್ನು ಸರ್ಕಾರ ನಿಷೇಧಿಸಿದೆ ಕೆಲ ಆಸ್ಪತ್ರೆಗಳು ಆಸ್ಪತ್ರೆ ಫಾರ್ಮಸಿಸ್ಟ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೋಗಿಗಳಿಗೆ ಔಷಧಗಳನ್ನು ಬರೆದುಕೊಡುವುದು ಹಾಗೂ ಹೊರಗಿನಿಂದ ಔಷಧಿಗಳನ್ನು ಖರೀದಿಸಲು ಒತ್ತಾಯಿಸುತ್ತಿರುವುದು ತುಮಕೂರಿನ ಕೊರಟಗೆರೆ ಆಸ್ಪತ್ರೆಗೆ ಭೇಟಿ ನೀಡಿದಾಗ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರಿಂದ ನಾವು ತಪ್ಪು ಕೆಲಸಗಳಲ್ಲಿ ತೊಡಗಿಲ್ಲ ಎಂದು ಸ್ವಯಂಘೋಷಿತ ಪತ್ರ ಪಡೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಸೂಚನೆ ನೀಡಿದ್ದಾರೆ.

Categories
ತೀರ್ಥಹಳ್ಳಿ

ಉಗ್ರರ ನಕ್ಷೆಗೆ ತೀರ್ಥಹಳ್ಳಿ ಸೇರಿಸಲು ಐಸಿಸ್ ಪ್ಲಾನ್!

ಉಗ್ರರ ನಕ್ಷೆಗೆ ತೀರ್ಥಹಳ್ಳಿ ಸೇರಿಸಲು ಐಸಿಸ್ ಪ್ಲಾನ್!
– ಭಟ್ಕಳ ಮಾದರಿಯಲ್ಲೇ ಉಗ್ರರ ಕೇಂದ್ರವಾಗಿಸಲು ಯೋಜನೆ
– ಮೂವರು ಉಗ್ರರ ಅರೆಸ್ಟ್: ಇನ್ನೋರ್ವ ನಾಪತ್ತೆ
– ಉನ್ನತ ತನಿಖೆ ವಿಚಾರಣೆ ವೇಳೆ ವಿಷಯ ಬಹಿರಂಗ

NAMMUR EXPRESS NEWS
ಬೆಂಗಳೂರು: ಮಲೆನಾಡನ್ನು ಉಗ್ರರ ಕೇಂದ್ರ ಮಾಡಿಕೊಳ್ಳಲು ಪ್ಲಾನ್ ನಡೆದಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಭಟ್ಕಳ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಐಸಿಸ್ ಪಣತೊಟ್ಟಿದ್ದ ಅಘಾತಕಾರಿ ಮಾಹಿತಿಯನ್ನು ಶಂಕಿತ ಐಸಿಸ್ ಉಗ್ರ ಆರಾಫತ್ ಆಲಿ ರಾಷ್ಟ್ರೀಯ ತನಿಖಾ ದಳದ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರಾಫತ್ ಅಲಿಯನ್ನು ದೆಹಲಿಯಲ್ಲಿ ಬಂಧಿಸಿದ್ದ ಎನ್.ಐ.ಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಸಂಚುರೂಪಿಸುತ್ತಿರುವ ಐಸಿಸ್, ಭಟ್ಕಳ ಮಾದರಿಯಲ್ಲಿ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಪಣತೊಟ್ಟಿತ್ತು ಎಂದು ಹೇಳಿದ್ದಾನೆ. ಈ ಕುರಿತಂತೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಐಸಿಸ್ ನಿರ್ದೇಶನದಂತೆ ಕಾರ್ಯಾಚರಣೆ ನಡೆಸುತ್ತಿದ್ದ ಆಫತ್ ಅಲಿ ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚುರೂಪಿಸಿದ್ದ. ಈ ಹಿಂದೆ ರಿಯಾಜ್ ಭಟ್ಕಳ ಮತ್ತು ಯಾಸಿನ್ ಭಟ್ಕಳ, ಇಕ್ಬಾಲ್ ಭಟ್ಕಳ ಸಹೋದರರಿಂದ ಭಟ್ಕಳ ತಾಲೂಕು ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇದೇ ರೀತಿ ತೀರ್ಥಹಳ್ಳಿ ಮೂಲದವರಾದ ಮಾಜ್ ಮುನೀರ್, ಶರೀಫ್ ಆರಾಫತ್ ಅಲಿ, ಅಬ್ದುಲ್ ಮತಿನ್ ನಾಲ್ವರು

ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚುರೂಪಿಸಿದ್ದರು ಎನ್ನಲಾಗಿದೆ. ಆರಾಫತ್ ಈ ವಿಚಾರವನ್ನು ಪದೇಪದೇ ಮಾಜ್ ಹಾಗೂ ಶಾರುಕ್ ಹೇಳುತ್ತಿದ್ದ. ಈ ಬಗ್ಗೆ ಎನ್ ಐ ಎ ಗೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತ್ತು ಆರಾಫತ್ ಅಲಿಯ ತಲೆಯಲ್ಲಿ ತುಂಬುತ್ತಿದ್ದ. ಸದ್ಯ ಮೂವರನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದು, ಅಬ್ದುಲ್ ಮತಿನ್ ಬಂಧನ ಆಗಬೇಕಿದೆ. ಈ ನಾಲ್ವರು ಭಟ್ಕಳ ಸಹೋದರರಂತೆ ತೀರ್ಥಹಳ್ಳಿ ಬ್ರದರ್ಸ್ ಎಂದು ಕುಖ್ಯಾತಿ ಪಡೆಯುವ ಹುನ್ನಾರ ರೂಪಿಸಿದ್ದರು ಎಂದು ಹೇಳಲಾಗಿದೆ.