Categories
ಚಿಕ್ಕಮಗಳೂರು ಶಿವಮೊಗ್ಗ

14ರ ಬಾಲಕಿ ಜತೆ 38ರ ಡ್ರೈವರ್ ಲವ್!

14ರ ಬಾಲಕಿ ಜತೆ 38ರ ಡ್ರೈವರ್ ಲವ್!
– ಸ್ಕೂಲ್‌ ಬಸ್‌ ಚಾಲಕನ ಪ್ರೇಮದಾಟ: ವಿದ್ಯಾರ್ಥಿನಿ ಜತೆ ಆತ್ಮಹತ್ಯೆ!
– ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಘಟನೆ
 ಬಂದೂಕು ಹಿಡಿದು ಹೆದ್ದಾರಿಯಲ್ಲಿ ಹುಚ್ಚಾಟ..!
– ಏರ್‌ಗನ್‌ನಿಂದ ಗಾಳಿಯಲ್ಲಿ ಗುಂಡು.!
– ಚಿಕ್ಕಮಗಳೂರು ಸಿರಗನಹಳ್ಳಿಯ ಇಬ್ಬರು ಅರೆಸ್ಟ್

NAMMUR EXPRESS NEWS
ಚಿಕ್ಕಮಗಳೂರು: ಸ್ಕೂಲ್‌ ಬಸ್‌ ಚಾಲಕನೊಬ್ಬ ಎಂಟನೇ ತರಗತಿ ವಿದ್ಯಾರ್ಥಿನಿ ಜತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರಂತ ಎಂದರೆ ಸಣ್ಣ ವಯಸ್ಸಿನ ಬಾಲಕಿಯನ್ನು ಪ್ರೇಮದಾಟದಲ್ಲಿ ಸಿಲುಕಿಸಿ ಅಂತಿಮವಾಗಿ ತಾನು ಸತ್ತಿದ್ದಲ್ಲದೆ ಆಕೆಯ ಬಾಳಿಗೂ ಕೊಳ್ಳಿ ಇಟ್ಟಿದ್ದಾನೆ. ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ. ಶಾಲೆ ಬಸ್‌ನ ಡ್ರೈವರ್ ಸಂತೋಷ್‌ (38) ಕೇವಲ 14 ವರ್ಷದ ಬಾಲಕಿ ಜಾಹ್ನವಿಯನ್ನು ತನ್ನ ಜತೆಗೆ ಬಲಿ ಕೊಟ್ಟಿದ್ದಾನೆ. ಅವರಿಬ್ಬರೂ ರೈಲಿಗೆ ಅಡ್ಡಲಾಗಿ ನಿಂತು ಪ್ರಾಣ ಬಿಟ್ಟಿದ್ದಾರೆ.

ಏನಿದು ಘಟನೆ?

ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಜಾಹ್ನವಿ ವ್ಯಾಸಂಗ ಮಾಡುತ್ತಿದ್ದಳು. 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಜಾಹ್ನವಿಯನ್ನು ಪ್ರೀತಿಸುವಂತೆ ಬಸ್ ಡ್ರೈವರ್ ಸಂತೋಷ ಪೀಡಿಸುತ್ತಿದ್ದ ಎನ್ನಲಾಗಿದೆ. ಸಂತೋಷ ಕಳೆದ ಮೂರು ವರ್ಷಗಳಿಂದ ಬಸ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಆಗಿನಿಂದಲೇ ಎಳೆ ಹುಡುಗಿಯ ಮೇಲೆ ಕಣ್ಣಿಟ್ಟಿದ್ದ ಸಂತೋಷ. ಬಸ್ ಡ್ರೈವರ್ ಕಿರುಕುಳದ ಬಗ್ಗೆ ಈ ಹಿಂದೆಯೇ ಪೋಷಕರು ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಬಂದೂಕು ಹಿಡಿದು ಹೆದ್ದಾರಿಯಲ್ಲಿ ಹುಚ್ಚಾಟ..!

ಶಿವಮೊಗ್ಗ: ನಗರದ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗ ತುಂಗಾ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಸಿರಗನಹಳ್ಳಿಯ ಹರ್ಷ ಪಟೇಲ್ (23) ಮತ್ತು ಅಜ್ಜಂಪುರದ ಅಭಿಷೇಕ್ (23) ಬಂಧಿತರು. ಏನಿದು ಘಟನೆ?: ಡಿ.26ರಂದು ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಮೀಪ ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ನಡೆದಿದ್ದ ಘಟನೆ. ಕಾರಿನಲ್ಲಿ ಬಂದಿದ್ದ ಆರೋಪಿಗಳು ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಕೆಳಗಿಳಿದು ಕುಣಿದು ಕುಪ್ಪಳಿಸಿದ್ದರು.

ಈ ವೇಳೆ ಇನ್ನೊಬ್ಬ ಆರೋಪಿ ಏರ್ ಗನ್ ಹಿಡಿದುಕೊಂಡಿದ್ದು ಅದರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಏಕಾಏಕಿ ನಡೆದ ಘಟನೆಯಿಂದ ಗುಂಡಿನ ಶಬ್ದ ಕೇಳಿ ರಸ್ತೆಯಲ್ಲಿ ಓಡಾಡುತ್ತಿದ್ದವರು ಕೆಲ ಕಾಲ ಆತಂಕಕ್ಕೀಡಾಗಿದ್ದರು. ಕೆಲವರು ಇದು ಗುಂಡಿನ ದಾಳಿ ಎಂದು ಆತಂಕದಲ್ಲಿ ಓಡಿದ್ದರು. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಬಳಿಕ ಪರಿಶೀಲನೆ ನಡೆಸಿದ್ದ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಜಾಗರೂಕತೆ ಮತ್ತು ಬೇಜವಾಬ್ದಾರಿ ತೋರಿದ ಹಿನ್ನೆಲೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಿಕೊಂಡು ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇದೀಗ ಚಿಕ್ಕಮಗಳೂರು ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ
– ಸಿಎಂ ಯೋಗಿ ಆದಿತ್ಯನಾಥ್ ಗೆ ಬಾಂಬ್ ಬೆದರಿಕೆ ಇ-ಮೇಲ್.!
-ಯುಪಿ ಪೊಲೀಸರಿಂದ ತನಿಖೆ!

NAMMUR EXPRESS NEWS
ನವದೆಹಲಿ: ಇನ್ನೇನು ಕೆಲ ದಿನಗಳಲ್ಲಿಯೇ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ಒಂದು ಸಂದೇಶವುಳ್ಳ ಇ-ಮೇಲ್ ಆತಂಕ ಸೃಷ್ಟಿಸುವಂತೆ ಮಾಡಿದೆ. ಹೌದು, ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ದಾಳಿ ಮೂಲಕ ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಒಂದು ಬಂದಿದೆ. ಈ ಸಂದೇಶದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್ ಅವರ ಬಗ್ಗೆಯೂ ಬರೆಯಲಾಗಿದೆ. ಇ-ಮೇಲ್ ಕಳುಹಿಸಿದ ವ್ಯಕ್ತಿ ತನಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಸಂಬಂಧ ಇದೆ ಎಂದೂ ತಿಳಿಸಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಯುಪಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಆಕ್ಷೇಪಾರ್ಹ ಭಾಷೆಯನ್ನು ಬಳಸಿ ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ರವಾನಿದ್ದಾನೆ. ಇನ್ನು ಇ-ಮೇಲ್ ಕಳುಹಿಸಿದ ವ್ಯಕ್ತಿ ತನ್ನನ್ನು ಜುಬೈರ್ ಹುಸೇನ್ ಖಾನ್ ಎಂದು ಹೇಳಿಕೊಂಡಿದ್ದು, ಐಎಸ್‌ಐ ಜತೆಗೂ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ದೇವೇಂದ್ರ ತಿವಾರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆಯೂ ಸಹ ಇಂತಹ ಬೆದರಿಕೆ ಮೇಲ್ ಬಂದಿರುವುದಾಗಿ ತಿವಾರಿ ತಿಳಿಸಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಡಿಜಿ ಅಮಿತಾಬ ಯಶ್ ಹಾಗೂ ದೇವೇಂದ್ರ ತಿವಾರಿ ಅವರನ್ನು ಬೆದರಿಕೆ ಇ-ಮೇಲ್‌ನಲ್ಲಿ ಗೋಸೇವಕರು ಎಂದು ಬರೆದುಕೊಂಡಿದ್ದಾನೆ. ಬೆದರಿಕೆಯ ಇ-ಮೇಲ್ ಸಂದೇಶ ಕಳೆದ 2 ದಿನದ ಹಿಂದೆ ದೇವೇಂದ್ರ ಅವರ ಮೇಲ್ ಐಡಿಗೆ ಬಂದಿದೆ. ಉಳಿದ ಮಾಹಿತಿಗಳು ತನಿಖೆಯ ನಂತರವೇ ಲಭ್ಯವಾಗಬೇಕಿದೆ.

Categories
ಮಂಗಳೂರು

ಪಶ್ಚಿಮ ವಲಯದ ನೂತನ ಡಿಐಜಿ ಅಮಿತ್ ಸಿಂಗ್

ಪಶ್ಚಿಮ ವಲಯದ ನೂತನ ಡಿಐಜಿ ಅಮಿತ್ ಸಿಂಗ್
– ಹೊಸ ವರ್ಷದಂದು ಅಧಿಕಾರ ಸ್ವೀಕಾರ!

NAMMUR EXPRESS NEWS
ಮಂಗಳೂರು: ಪಶ್ಚಿಮ ವಲಯದ ನೂತನ ಡಿಐಜಿಯಾಗಿ ಅಮಿತ್ ಸಿಂಗ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಡ್ರಗ್ಸ್ ಕೋಮುವಾದ ಸಹಿತ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು. ಸೆಂಟ್ರಲ್ ಕ್ರೇಡರ್‌ನಲ್ಲಿ ಕೆಲಸ ಮಾಡುವ ಅನುಭವ ವಿಭಿನ್ನವಾಗಿದ್ದು, ಇದೀಗ ಮತ್ತೆ ಮರಳಿ ಈ ಹುದ್ದೆಗೆ ಬಂದಿರುವುದು ಮರಳಿ ತವರಿಗೆ ಬಂದ ಅನುಭವವಾಗಿದೆ.

ಮಂಗಳೂರಿಗೆ ಹೋಲಿಸಿದರೆ, 10 ವರ್ಷಗಳ ಹಿಂದಿನ ಅನುಭವಕ್ಕೂ ಈಗಲಿಗೂ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಅಪರಾಧ ಪ್ರಕರಣಗಳೂ ಸಾಕಷ್ಟು ಬದಲಾಗಿದ್ದು, ಇಂದು ಕಳ್ಳತನ ಸೈಬರ್ ಕ್ರೈನಂತಹ ವೈಟ್ ಕಾಲರ್ ಅಪರಾಧಗಳು ಹೆಚ್ಚಿವೆ. ಇಲ್ಲಿನ ಎಸ್‌ಪಿ, ಇನ್ಸ್‌ಪೆಕ್ಟ‌ರ್ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಮಯದಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್‌ ಉಪಸ್ಥಿತರಿದ್ದರು.

Categories
ಬೆಂಗಳೂರು

ರಾಜ್ಯದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭ

ರಾಜ್ಯದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭ
-2ನೇ ಡೋಸ್ ಪಡೆದು ಆರು ತಿಂಗಳಾದವರಿಗೆ ಲಸಿಕೆ!
– ಯಾವ ಜಿಲ್ಲೆಗೆ ಎಷ್ಟು ಕಾರ್ಬೆವ್ಯಾಕ್ಸ್ ಡೋಸ್ ಹಂಚಿಕೆ?

NAMMUR EXPRESS NEWS
ಬೆಂಗಳೂರು: ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ 2ನೇ ಲಸಿಕೆ ಪಡೆದವರಿಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಸರಬರಾಜು ಮಾಡಿದೆ. ಈ ಲಸಿಕೆಯನ್ನು ವಿಜಾತಿ (ಹೆಟೆರೊಲಾಗಸ್) ಮುನ್ನೆಚ್ಚರಿಕೆಯಾಗಿ ನೀಡಬಹುದು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಈ ಲಸಿಕೆ ನೀಡಬಹುದು. 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು. ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.

ಯಾವ ಜಿಲ್ಲೆಗೆ ಎಷ್ಟು ಕಾರ್ಬೆವ್ಯಾಕ್ಸ್ ಡೋಸ್ ಹಂಚಿಕೆ

ಬೆಂಗಳೂರು ನಗರ-840, ಬೆಂಗಳೂರು ಗ್ರಾಮಾಂತರ-480, ಬಿಬಿಎಂಪಿ-5,680, ಚಿಕ್ಕಬಳ್ಳಾಪುರ-520, ಕೋಲಾರ-680, ರಾಮನಗರ-440, ತುಮಕೂರು-1,300, ಬೆಳಗಾವಿ-2,280, ಧಾರವಾಡ-920, ಹಾವೇರಿ-780, ಉತ್ತರ ಕನ್ನಡ-660, ಬಳ್ಳಾರಿ-640, ಚಿತ್ರದುರ್ಗ-720, ದಾವಣಗೆರೆ-740, ಶಿವಮೊಗ್ಗ-820, ವಿಜಯನಗರ-560, ಬಾಗಲಕೋಟೆ-900, ವಿಜಯಪುರ-1,000, ಗದಗ-500, ಕೊಪ್ಪಳ-520, ಚಾಮರಾಜನಗರ-440, ಹಾಸನ-720, ಕೊಡಗು-220, ಮಂಡ್ಯ-720, ಮೈಸೂರು-1,360, ಚಿಕ್ಕಮಗಳೂರು-480, ದಕ್ಷಿಣ ಕನ್ನಡ-1,140, ಉಡುಪಿ-520, ಬೀದರ್-840, ಕಲಬುರಗಿ-1,280, ರಾಯಚೂರು-820, ಯಾದಗಿರಿ-480 ಡೋಸ್ ಹಂಚಲಾಗಿದೆ. ಒಟ್ಟು 30,000 ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿದೆ.

Categories
ತೀರ್ಥಹಳ್ಳಿ

ಹೆಬ್ರಿ ಎಸ್ ಆರ್ ಸಂಸ್ಥೆಗೆ 25ನೇ ವರ್ಷದ ಸಂಭ್ರಮ!

ಹೆಬ್ರಿ ಎಸ್ ಆರ್ ಸಂಸ್ಥೆಗೆ 25ನೇ ವರ್ಷದ ಸಂಭ್ರಮ!
– ಸಂಸ್ಥೆಯ ಮುಖ್ಯಸ್ಥ ನಾಗರಾಜ್ ಶೆಟ್ಟಿ ಅವರಿಂದ ಶಿಕ್ಷಣ ಸಚಿವರಿಗೆ ಆಹ್ವಾನ
– ಜನವರಿ 13ರಂದು ಕಾರ್ಯಕ್ರಮ; ಸರ್ವರಿಗೂ ಆಹ್ವಾನ

NAMMUR EXPRESS NEWS
ತೀರ್ಥಹಳ್ಳಿ : ಹೆಬ್ರಿಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಎಸ್ ಆರ್ ಶಿಕ್ಷಣ ಸಂಸ್ಥೆಯ 25ನೇ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 13ರಂದು ಕರಾವಳಿ ಹಾಗೂ ಮಲೆನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಬ್ರಿಯ ಎಸ್ ಆರ್ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ 25ನೇ ವರ್ಷದ ಸಂಭ್ರಮಾಚರಣೆ ನಡೆಯಲಿದ್ದು ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಜೊತೆಗೆ ಹಳೆಯ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲು ಇತ್ತೀಚಿಗೆ ತೀರ್ಥಹಳ್ಳಿ ಹೊಸನಗರ ತಾಲೂಕಿನ ಯಡೂರು ಬಳಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಎಸ್ ಆರ್ ಎಸ್ ಶಿಕ್ಷಣ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ್ ಶೆಟ್ಟಿ ಅವರು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದರು. ಜೊತೆಗೆ ಈ ಸಂದರ್ಭದಲ್ಲಿ ಶಿಕ್ಷಣದ ವಿವಿಧ ಅಭಿವೃದ್ಧಿ ಹಾಗೂ ಕಾಲೇಜಿನ ಬಗ್ಗೆ ಮಾತುಕತೆ ನಡೆಸಿದರು. ಸಚಿವರು ಎಸ್ ಆರ್ ಎಸ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಈ ವೇಳೆ ಸಹಕಾರಿ ನಾಯಕ ಡಾ. ಆರ್ ಎಂ ಮಂಜುನಾಥ್ ಗೌಡ ಅವರಿಗೂ ಕೂಡ ಆಹ್ವಾನ ನೀಡಲಾಯಿತು. ಈ ವೇಳೆ ಪ್ರಮುಖರಾದ, ಸಹಕಾರಿ ಯುವ ಮುಖಂಡರಾದ ರಾಘವೇಂದ್ರ ಶೆಟ್ಟಿ, ಶಚ್ಛೀಂದ್ರ ಹೆಗಡೆ, ಡಾ.ಸುಂದರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜನವರಿ 13ರಂದು ನಡೆಯಲಿರುವ ಈ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ್ ಶೆಟ್ಟಿಯವರು ಸರ್ವರನ್ನೂ ಸ್ವಾಗತಿಸಿದ್ದಾರೆ.

Categories
ಬೆಂಗಳೂರು

ರಾಜ್ಯಮಟ್ಟದ ಉದ್ಯೋಗ ಮೇಳ!

ರಾಜ್ಯಮಟ್ಟದ ಉದ್ಯೋಗ ಮೇಳ!
– ಸರಕಾರಿ ಉದ್ಯೋಗ ಮೇಳ ಆಯೋಜನೆ.!
– ನಿರುದ್ಯೋಗ ಶಮನ ಭರವಸೆ ಈಡೇರಿಕೆ.!

NAMMUR EXPRESS NEWS
ಬೆಂಗಳೂರು: ಯುವಜನತೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗುವಂತೆ ರಾಜ್ಯ ಸರ್ಕಾರ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಭರವಸೆ ಗಳಲ್ಲಿ ಒಂದಾದ ನಿರುದ್ಯೋಗ ಶಮನ ಭರವಸೆ ಈಡೇರಿಕೆ ಅನುಷ್ಠಾನಗೊಳ್ಳಲಿದೆ. ಈ ಬೃಹತ್ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಹೇಗೆ ನೆರವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರು ಮಹಾನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದ ಕುರಿತು ಸಿ ಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಬೃಹತ್ ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸಲು ಸಹಾಯವಾಗುವಂತೆ ವಿವಿಧ ಇಲಾಖೆಯ ಸಚಿವರಾದ ಎಂ ಬಿ ಪಾಟೀಲ್‌, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್‌ ಪಾಟೀಲ್, ಡಾ. ಎಂ ಸಿ ಸುಧಾಕರ್, ಸಚಿವ ಬಿ ನಾಗೇಂದ್ರ, ಸಂತೋಷ್ ಲಾಡ್ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಒಳಗೊಂಡ 7 ಜನರ ಸಚಿವ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ.

ಈ ಸಚಿವರ ತಂಡವು ಉದ್ಯೋಗದಾತ ಕಂಪನಿಯವರೊಂದಿಗೆ ಸಭೆ ನಡೆಸಿ, ಚರ್ಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಲಿದೆ. ಜೊತೆಗೆ ಕೈಗಾರಿಕೆಗಳೊಂದಿಗೆ ಚರ್ಚಿಸಲಿದೆ ಮತ್ತು ವಿದೇಶದಲ್ಲಿರುವ ಉದ್ಯೋಗಾವಕಾಶದ ಕುರಿತು ಪರಿಶೀಲನೆ ನಡೆಸಲಿದೆ. ಪತ್ರಕರ್ತರೊಡನೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಇದೇ ಜನವರಿ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

ಇದೇ ರೀತಿ ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲಾ ಮತ್ತು ವಲಯವಾರು ಉದ್ಯೋಗ ಮೇಳ ನಡೆಸಲಾಗುವುದು ಎಂದು ತಿಳಿಸಿದ್ದು ನಗರ ಹಾಗೂ ಗ್ರಾಮೀಣ ಭಾಗದ ಯುವ ಜನತೆಗೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳನ್ನು ಒದಗಿಸುವುದು ಈ ಬೃಹತ್ ಉದ್ಯೋಗ ಮೇಳದ ಉದ್ದೇಶವಾಗಿದೆ. ಎಸ್ ಎಸ್ ಎಲ್ ಸಿ ಯಿಂದ ಉನ್ನತ ಶಿಕ್ಷಣದವರೆಗೂ ಎಲ್ಲ ಹಂತದ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೂ ಇಲ್ಲಿ ಅವಕಾಶ ಸಿಗಲಿದೆ. ರಾಜ್ಯ, ದೇಶ ಮಾತ್ರವಲ್ಲದೇ ವಿದೇಶಗಳ ಉದ್ಯೋಗಾವಕಾಶಗಳು ಕೂಡ ಈ ಮೇಳದಲ್ಲಿ ಆಯೋಜನೆ ಆಗಲಿವೆ ಎನ್ನಲಾಗುತ್ತಿದೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆಗೆ ಕರ್ನಾಟಕದ ಕಾಣಿಕೆ!

ಅಯೋಧ್ಯೆಗೆ ಕರ್ನಾಟಕದ ಕಾಣಿಕೆ!
– ಮೈಸೂರಿನ ಶಿಲ್ಪಿ ಕೆತ್ತಿದ ಶ್ರೀರಾಮ ವಿಗ್ರಹ!
– ಹೆಚ್ ಡಿ ಕೋಟೆಯ ಕಲ್ಲು ಬಳಕೆ!

NAMMUR EXPRESS NEWS
ಬೆಂಗಳೂರು: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಇದೇ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಘಳಿಗೆಗಾಗಿ ದೇಶ ವಿದೇಶಗಳೂ ಎದುರು ನೋಡುತ್ತಿವೆ. ಇಂತಹ ಪುಣ್ಯ ಕ್ಷೇತ್ರಕ್ಕೆ ನಮ್ಮ ಕರ್ನಾಟಕದಿಂದಲೂ ಕಾಣಿಕೆ ಮತ್ತು ಅಳಿಲು ಸೇವೆಗಳನ್ನು ಸಲ್ಲಿಸಲಾಗಿದೆ. ಇದೀಗ ಆ ಸೇವೆಯೊಂದಿಗೆ ಅತ್ಯುತ್ತಮ ಸೇರ್ಪಡೆಯಾಗಿ ಕರ್ನಾಟಕದ ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಶ್ರೀ ರಾಮಮಂದಿರದ ರಾಮನ ಮೂರ್ತಿಯನ್ನು ಕೆತ್ತಿರುವುದು! ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಶ್ರೀರಾಮ ವಿಗ್ರಹದ ಕೆತ್ತನೆಗೆ ಬಳಸಲಾದ ಕಲ್ಲು ಕೂಡ ನಮ್ಮ ಕರ್ನಾಟಕದ ಹೆಚ್ ಡಿ ಕೋಟೆಯದು ಎಂಬುದು ಅತ್ಯಂತ ಹೆಮ್ಮೆಯ ಮತ್ತು ಸಂತಸದ ಸಂಗತಿಯಾಗಿದೆ.

ಶ್ರೀರಾಮನ ಭಂಟ ಹನುಮ ಜನಿಸಿದ ನೆಲ ಕರ್ನಾಟಕ. ಇಲ್ಲಿಂದಲೇ ಮೂರ್ತಿಯ ಕೆತ್ತನೆಯಾಗಿರುವುದು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗಿದೆ. ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಯೋಗಿರಾಜ್ ಹಾಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಅವರ ತಂಡದವರಿಗೆ ಇಡೀ ಕನ್ನಡ ನೆಲ ಅಭಿನಂದಿಸುತ್ತದೆ.

Categories
ತೀರ್ಥಹಳ್ಳಿ

ನ್ಯಾಷನಲ್ ಸಂಸ್ಥೆ, ಮನೆಗಳ ಮೇಲೆ ಐಟಿ ದಾಳಿ!

ನ್ಯಾಷನಲ್ ಸಂಸ್ಥೆ, ಮನೆಗಳ ಮೇಲೆ ಐಟಿ ದಾಳಿ!
– ಬೆಳ್ಳಂಬೆಳಗ್ಗೆ ಕಾರುಗಳಲ್ಲಿ ತೀರ್ಥಹಳ್ಳಿಗೆ ಆಗಮಿಸಿದ ಐಟಿ ಅಧಿಕಾರಿಗಳು: ಮನೆ, ಕಚೇರಿ, ಪರಿಶೀಲನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಖ್ಯಾತ ಉದ್ಯಮವಾದ ನ್ಯಾಷನಲ್ ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ ಮಾಡಲಾಗಿದೆ. ಮಂಗಳವಾರ ಬೆಳ್ಳಂಬೆಳಿಗ್ಗೆ 5ಕ್ಕೂ ಹೆಚ್ಚು ಕಾರುಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳ ತಂಡ ನ್ಯಾಷನಲ್ ಸಂಸ್ಥೆಗಳ ಕಚೇರಿ, ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ಮನೆಗಳ ಮೇಲೆ ದಾಳಿ ಮಾಡಿ ದಾಖಲೆ ಪತ್ರ ಪರಿಶೀಲನೆ ಮಾಡುತ್ತಿದೆ. ಏನೆಲ್ಲಾ ಮಾಹಿತಿ ಕಲೆ ಹಾಕಲಾಗಿದೆ. ಏನೆಲ್ಲಾ ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ರಾಜ್ಯದ ಪ್ರತಿಷ್ಠಿತ ಕನ್ಸ್ಟ್ರಕ್ಷನ್ ಸಂಸ್ಥೆಯಾದ ನ್ಯಾಷನಲ್ ತನ್ನ ಸೇವೆ ಜತೆಗೆ ಉದ್ಯಮದಲ್ಲೂ ಹೆಸರು ಮಾಡಿರುವ ಸಂಸ್ಥೆಯಾಗಿದೆ.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ 01-01-2024

ಹೊಸ ವರ್ಷಾಚರಣೆ: ಕೇಕ್​ ತರಲು ಹೋಗಿದ್ದ ಯುವಕನ ಕೊಲೆ
– ಭದ್ರಾವತಿ: ಅಪಘಾತಕ್ಕೆ ಇಬ್ಬರು ಬಲಿ!
– ಕುಡಿದ ಅಮಲಿನಲ್ಲಿ ಯುವಕನ ಶರ್ಟ್ ಹರಿದು ಹಲ್ಲೆ!
– ಕೊಲೆ ಮಾಡಿ 30 ವರ್ಷ ಎಸ್ಕೇಪ್ ಆಗಿದ್ದವ ಅರೆಸ್ಟ್!
– ಎಣ್ಣೆ ಏಟಲ್ಲಿ ಎಸ್ ಪಿ ಪುತ್ರನಿಗೆ ಹೊಡೆದರು!

NAMMUR EXPRESS NEWS
ಹೊಸವರ್ಷದ ಆಗಮನದ ಹೊಸ್ತಿಲಿನಲ್ಲಿ ಅನಾಹುತಗಳು ಸಂಭವಿಸುತ್ತಿರುತ್ತವೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಹೊಸವುರುಷ ವೆಲಕಮ್ ಮಾಡುವ ಸಡಗರದ ನಡುವೆ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲ್ಲೂಕು ಹೊನ್ನವಿಲೆ ಗ್ರಾಮದ ಯುವಕರು ಹುಟ್ಟುಹಬ್ಬದ ಪಾರ್ಟಿ ಮಾಡುವ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್‌ ನಲ್ಲಿ ನಡೆದ ಇನ್ಸಿಡೆಂಟ್‌ನಲ್ಲಿ ಯುವಕರ ಬೈಕ್‌ ಬೊಲೆರೊ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಹೊಸ ವರ್ಷಾಚರಣೆ: ಕೇಕ್​ ತರಲು ಹೋಗಿದ್ದ ಯುವಕನ ಕೊಲೆ

ಬಳ್ಳಾರಿ: ಬಳ್ಳಾರಿಯ ವಡ್ಡರಬಂಡಿ ಪ್ರದೇಶದಲ್ಲಿ ಹೊಸ ವರ್ಷಾಚರಣೆಗೆ ಕೇಕ್​ ತರಲು ಹೋಗಿದ್ದ ಸೈದುಲ್ಲಾ ಎಂಬ ಯುವಕನನ್ನು ಕೊಲೆ ಮಾಡಿದ್ದಾರೆ. ಸೈದುಲ್ಲಾ ಅವರು ಹೊಸ ವರ್ಷಾಚರಣೆಗೆ ಕೇಕ್​ ಖರೀದಿಸಲು ಹೋಗಿದ್ದರು. ಈ ವೇಳೆ ಸೈದುಲ್ಲಾ ಹಾಗೂ ಇತರ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸೈದುಲ್ಲಾ ಅವರನ್ನು ಕೊಲೆ ಮಾಡಿದ್ದಾರೆ. ಇದೇ ವೇಳೆ ಹಲ್ಲೆಗೊಳಗಾದ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಇವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬ್ರೂಸ್​ಪೇಟೆ ಠಾಣೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಆರೋಪಿ ರಾಜೇಶ್​ನನ್ನು ಬ್ರೂಸ್​ಪೇಟೆ ಪೊಲೀಸರು ಬಂಧಿಸಿದ್ದಾರೆ.

ಬೈಕ್-ಆಟೋ ಡಿಕ್ಕಿ; ಇಬ್ಬರು ದುರ್ಮರಣ!

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಹೊಸಲ್ಲಹಳ್ಳಿ ಬಳಿ ಭೀಕರ ಅಪಘಾತ ನಡೆದಿದೆ. ಬೈಕ್ ಹಾಗೂ ಆಟೋ ನಡುವೆ ಆಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಬೈಕ್ ಹಿಂಬದಿ ಕುಳಿತಿದ್ದ ಶಿಲ್ಪಾ, ಆಟೋದಲ್ಲಿದ್ದ ಬರ್ಕತ್ ಅಲಿ ಮೃತ ಪಟ್ಟಿದ್ದು, ಸವಾರ ಸೇರಿ ಮೂವರು ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಕುಡಿದ ಅಮಲಿನಲ್ಲಿ ಯುವಕನ ಶರ್ಟ್ ಹರಿದು ಹಲ್ಲೆ!

ಆನೇಕಲ್: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಳಿ ಯುವಕನ ಶರ್ಟ್ ಹರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಯುವಕನ ಶರ್ಟು ಹರಿದು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕ ಕೂಡ ಪಾನಮತ್ತನಾಗಿದ್ದ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾಗಿ ರಸ್ತೆ ಬದಿ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಸ್ ಪಿ ಪುತ್ರನ ಮೇಲೆ ಹಲ್ಲೆ ಮಾಡಿರುವ ಆರೋಪ!

ಬೆಂಗಳೂರು: ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಕಾಲೇಜು ಬಳಿ ಜನವರಿ 1ರಂದು ಈ ಘಟನೆ ನಡೆದ್ದಿದ್ದು, ನ್ಯೂ ಇಯರ್​ ಪಾರ್ಟಿಗೆಂದು ಯುವಕ ಸ್ಟಾಲಿನ್​ ಕೇರಳದಿಂದ ಬೆಂಗಳೂರಿಗೆ ಬಂದಿದ್ದಾನೆ. ಸ್ಟಾಲಿನ್​ ತನ್ನ ಗೆಳೆಯರ ಜೊತೆ ಪಬ್​ನಲ್ಲಿ ಪಾರ್ಟಿ ಮಾಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಸ್ಟಾಲಿನ್​​ ಗೆಳೆಯರು ಪಬ್​ನಿಂದ ಹೊರಗೆ ಬಂದಿದ್ದಾರೆ. ಹೀಗೆ ಹೊರಗೆ ಬಂದವರು ಯುವತಿಯನ್ನು ಟಚ್​ ಮಾಡಿದ್ದಾರೆ ಎಂದು ಸ್ಟಾಲಿನ್​ ಗೆಳಯರ ಜೊತೆ ಇಬ್ಬರು ಯುವಕರು ಜಗಳ ತೆಗೆದಿದ್ದಾರೆ. ಇದನ್ನು ತಿಳಿದ ಸ್ಟಾಲಿನ್,​ ಏನಾಯ್ತು ಎಂದು ಘಟನಾ ಸ್ಥಳಕ್ಕೆ ಬಂದು ನೋಡುತ್ತಿದ್ದಾಗ ಆ ಇಬ್ಬರು ಯುವಕರು ಸ್ಟಾಲಿನ್ ಮೇಲೂ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಸ್ಟಾಲಿನ್​ ಅವರ ಹಲ್ಲು ಮುರಿದಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ತಡೆದಿದ್ದಾರೆ. ಬಳಿಕ ಪೊಲೀಸರು ವಿಚಾರಿಸಿದಾಗ ತಾನು ಕೇರಳದ ಎಸ್ಪಿ ಎಜೆ ಬಾಬು ಪುತ್ರ ಎಂದು ಸ್ಟಾಲಿನ್​ ಹೇಳಿದ್ದಾರೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Categories
ತೀರ್ಥಹಳ್ಳಿ

ಹೊಸ ವರ್ಷ ಅದ್ಧೂರಿಯಾಗಿ ಸ್ವಾಗತಿಸಿದ ತೀರ್ಥಹಳ್ಳಿ ಜನ!

ಹೊಸ ವರ್ಷ ಅದ್ಧೂರಿಯಾಗಿ ಸ್ವಾಗತಿಸಿದ ತೀರ್ಥಹಳ್ಳಿ ಜನ!
– ಹೊಸ ವರ್ಷಾಚರಣೆ: ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮ
– ಮಲ್ನಾಡ್ ಕ್ಲಬ್, ಕುಂದಾದ್ರಿ ಮಿಸ್ಟ್, ನೆಸ್ಟ್ ಸೇರಿ ಹಲವೆಡೆ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಹೊಸ ವರ್ಷ ತಮ್ಮೆಲ್ಲರಿಗೂ ಹೊಸ ಹರುಷವ ತರಲಿ. 2024ರ ಹೊಸ ವರ್ಷವನ್ನು ರಾಜ್ಯದೆಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಒಂದೆಡೆ ಬಹುತೇಕರು ಪೂಜೆ ಮೂಲಕ ಶಾಸ್ರೋಕ್ತವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಮತ್ತೊಂದೆಡೆ ಪಾರ್ಟಿ, ಡ್ಯಾನ್ಸ್‌, ಪಟಾಕಿ ಸಂಭ್ರಮದ ಮೂಲಕ ಅದ್ದೂರಿ ಹೊಸ ವರ್ಷಾಚರಣೆಯೂ ಮನೆ ಮಾಡಿತ್ತು. ಮಲ್ನಾಡ್ ಕ್ಲಬ್, ಕುಂದಾದ್ರಿ ಮಿಸ್ಟ್, ನೆಸ್ಟ್, ವಿಹಂಗಮ ಸೇರಿ ಹಲವೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಪಟಾಕಿ ಸಿಡಿಸಿ ಸಂಭ್ರಮ

ತೀರ್ಥಹಳ್ಳಿ ಸೇರಿ ಸುತ್ತಮುತ್ತಲಿನ ತಾಲೂಕಿನ ಹಲವು ಕಡೆ ಪಾರ್ಟಿ, ಡಿಜೆ ಮ್ಯೂಸಿಕ್, ಡ್ಯಾನ್ಸ್, ಸಂಗೀತ ರಸ ಸಂಜೆ, ಹಾಸ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡುವ ಮೂಲಕ ಹೊಸ ವರ್ಷ ಹೊಸ ಹರುಷದೊಂದಿಗೆ ಸಂಭ್ರಮಿಸಿದರು. ಇನ್ನು ನಮ್ಮ ಮಲೆನಾಡಿದಂತು ಪ್ರವಾಸಿಗರಿಂದ ತುಂಬಿ ತುಳುತ್ತಿದ್ದು, ಎಲ್ಲೆಡೆ ಹೊಸ ವರ್ಷಚಾರಣೆ ಸಂಭ್ರಮ ಕಂಡುಬಂದಿತ್ತು. ಪಟ್ಟಣ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ಕೂಡ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು.

ಕೆಲಸದ ನಡುವೆ ಹೊಸ ವರ್ಷ ಆಚರಿಸಿದ ಪೊಲೀಸರು!

ತೀರ್ಥಹಳ್ಳಿ ತಾಲೂಕಲ್ಲಿ ಪೊಲೀಸರು ಹೊಸ ವರ್ಷವನ್ನು ಕರ್ತವ್ಯದ ನಡುವೆ ಆಚರಿಸಿದರು. ಡಿವೈಎಸ್ಪಿ ಗಜಾನನ ವಾಮನ ಸುತಾರ, ಸರ್ಕಲ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಸೇರಿ ಆಗುಂಬೆ, ಮಾಳೂರು ಸೇರಿ ಎಲ್ಲೆಡೆ ಪೊಲೀಸರು ಕರ್ತವ್ಯ ಮೆರೆದರು.