Categories
ಚಿಕ್ಕಮಗಳೂರು ತೀರ್ಥಹಳ್ಳಿ

ಕಾಡು ಉಳಿಸಲು ಹೋಗಿ ಜೀವ ಬಿಟ್ಟವನ ಪ್ರತಿಮೆ!

ಕಾಡು ಉಳಿಸಲು ಹೋಗಿ ಜೀವ ಬಿಟ್ಟವನ ಪ್ರತಿಮೆ!
– ಸಕಲೇಶಪುರದಲ್ಲಿ ಕಾಡ್ಗಿಚ್ಚಿಗೆ ಬಲಿಯಾಗಿದ್ದ ಸುಂದರೇಶ್
– ತೀರ್ಥಹಳ್ಳಿ ತಾಲೂಕಿನ ಹೊಸಮನೆ ಗ್ರಾಮದಲ್ಲಿ ಪುತ್ತಳಿ ಅನಾವರಣ

NAMMUR EXPRESS NEWS
ತೀರ್ಥಹಳ್ಳಿ: ಪಶ್ಚಿಮ ಘಟ್ಟದ ಸಕಲೇಶಪುರದ ಕಾಡುಮನೆ ಅರಣ್ಯದಲ್ಲಿ ಕಾಡ್ಗಿಚ್ಚು ನಂದಿಸಿ ಸಸ್ಯಸಂಕುಲ ಮತ್ತು ಪ್ರಾಣಿಪಕ್ಷಿಗಳ ಜೀವ ಉಳಿಸಲು ಅರಣ್ಯ ಇಲಾಖೆಯ ಅರಣ್ಯ ರಕ್ಷಕ ತೀರ್ಥಹಳ್ಳಿ ಮೂಲದ ಸುಂದರೇಶ್(ಮಾಣಿ) ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಹುತಾತ್ಮರಾಗಿದ್ದರು. ಕಾಡಿನ ಕಿಚ್ಚು ಆರಿಸುವಾಗ ಸುಳಿಗಾಳಿ ಬೆಂಕಿ ಅವರನ್ನು ಸುಟ್ಟಿತ್ತು. ಬೆಂಗಳೂರಿನ ಸಂತ ಜಾನ್ ಆಸ್ಪತ್ರೆಯಲ್ಲಿ 2-3 ದಿನ ಜೀವನ್ಮರಣದ ಜತೆ ಹೋರಾಡಿ ಜೀವ ಬಿಟ್ಟಿದ್ದರು. ಇದೀಗ ಅವರ ಸೇವೆ, ಛಲ,ತ್ಯಾಗ ವ್ಯರ್ಥವಾಗದೆ ಸಮಾಜಕ್ಕೆ ಮಾದರಿ ಆಗಲಿ ಎನ್ನುವ ಸದುದ್ದೇಶದಿಂದ ಅವರ ಪುತ್ತಳಿಯನ್ನು ಸುಂದರೇಶ್ ಅವರ ತವರಲ್ಲಿ ನಿರ್ಮಿಸಿ ಅನಾವರಣ ಗೊಳಿಸಲಾಗಿದೆ.

ಇಡೀ ಊರಿಗೆ ಊರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ಫೆ.18ರಂದು ತೀರ್ಥಹಳ್ಳಿ ತಾಲೂಕು ಸಾಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ತೆಂಗಿನಕೊಪ್ಪ, ಹೊಸಮನೆಯ ಸರ್ಕಲ್ ನಲ್ಲಿ ಸಂಜೆ 5 ಗಂಟೆಗೆ ಪುತ್ತಳಿ ಅನಾವರಣ ಕಾರ್ಯಕ್ರಮ ಹಾಗೂ ಅವರ ಜೊತೆ, ಅವರ ಕುಟುಂಬದ ಜೊತೆ ನಿಂತ ಕೆಲವು ಮಹನೀಯರನ್ನು ಸನ್ಮಾನಿಸಲಾಯಿತು. ಯುವ ಪ್ರಮುಖರಾದ ಪೂರ್ಣೇಶ್ ಮಲೇಬೈಲ್ ಹೊಸನಗರ ಮತ್ತು ಅನೇಕ ಸ್ನೇಹಿತರು, ಗ್ರಾಮಸ್ತರು ಈ ಮಹಾ ಕಾರ್ಯಕ್ಕೆ ಕೈ ಜೋಡಿಸಿದ್ದರು.

ಅರಣ್ಯ ಇಲಾಖೆಗೆ ಸ್ಫೂರ್ತಿ ಎಂದ ಆರಗ

ನೈಸರ್ಗಿಕ ಸಂಪತ್ತು ಉಳಿಸಲು ಪ್ರಾಣ ತೆತ್ತ ಹಸಿರು ಯೋಧ ಸುಂದರೇಶ ಎಸ್‌.ಜೆ. ಅರಣ್ಯ ಇಲಾಖೆಗೆ ಸ್ಫೂರ್ತಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಹೊಸಮನೆಯಲ್ಲಿ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ‘ನಾನು ಗೃಹಸಚಿವನಾಗಿದ್ದ ಅವಧಿಯಲ್ಲಿ ನಡೆದ ಈ ಅವಘಡವನ್ನು ಮರೆಯಲು ಸಾಧ್ಯವಿಲ್ಲ. ಪ್ರಾಣ ಉಳಿಸಬೇಕು ಎಂದು ವೈದ್ಯರನ್ನು ಅತೀವವಾಗಿ ಕಾಡಿದ್ದೆ. ಚಿಕಿತ್ಸೆಗಾಗಿ ಹಾಸನದಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಆದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ದುಃಖ ನನಗಿದೆ’ ಎಂದು ಮರುಗಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಮುಖಂಡರಾದ ಚಂದುವಳ್ಳಿ ಸೋಮಶೇಖರ್‌, ಬಾಳೇಹಳ್ಳಿ ಪ್ರಭಾಕರ್‌, ಸಿರಿಬೈಲು ಧರ್ಮೇಶ್‌, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಟಿ.ಎಲ್.‌ಸುಂದರೇಶ್‌, ಹಾಲಗದ್ದೆ ಉಮೇಶ್‌, ಅಪೂರ್ವ ಶರಧಿ ಇದ್ದರು

Categories
ಮಲ್ನಾಡ್

ಮಲೆನಾಡಿನಲ್ಲಿ ಹೆಚ್ಚಾದ ಅನಾರೋಗ್ಯ!

ಮಲೆನಾಡಿನಲ್ಲಿ ಹೆಚ್ಚಾದ ಅನಾರೋಗ್ಯ!
– ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳ ಸಂಖ್ಯೆ
– ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ
– 100ರ ಗಡಿ ದಾಟಿದ ಮಂಗನ ಕಾಯಿಲೆ

NAMMUR EXPRESS NEWS
ಮಲೆನಾಡು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದಂತೆ ವೈರಸ್ ರೋಗಗಳು ಉಲ್ಬಣಗೊಂಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಂತೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಲೆ ಇದ್ದು ಆಸ್ಪತ್ರೆ ರೋಗಿಗಳಿಂದ ತುಂಬಿ ಹೋಗಿದೆ. ಶೀತ, ಜ್ವರ, ಅನಾರೋಗ್ಯ, ಯೂರಿನ್ ಇನ್ಸ್ಪೆಕ್ಷನ್ ಸೇರಿದಂತೆ ಹತ್ತು ಹಲವು ರೋಗಗಳು ಜನರನ್ನು ಕಾಡುತ್ತಿವೆ. ಬದಲಾದ ಆಹಾರ ಪದ್ಧತಿ, ಪರಿಸರ ಇದೀಗ ಜನರನ್ನು ಹಾಸಿಗೆ ಹಿಡಿಯುವಂತೆ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಇದ್ದು ಅನೇಕ ತಾಲೂಕುಗಳಲ್ಲಿ ವೈದ್ಯರು, ನರ್ಸ್, ಸಿಬ್ಬಂದಿ, ತಂತ್ರಜ್ಞರು ಇಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ದುಬಾರಿ ವೆಚ್ಚ ಆಗಿ ಬದುಕು ಭಾರ ಆಗುತ್ತಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಜನರು ಬರುತ್ತಾರೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸ ಬೇಕು ಎಂಬ ಅಗ್ರಹ ಹೆಚ್ಚಿದೆ.

ಹೆಚ್ಚುತ್ತಿರುವ ರೋಗಗಳು!

ರಾಜ್ಯದಲ್ಲಿ ಬಿಸಿಲು ಬೇಗೆ ಹೆಚ್ಚುತ್ತಿದ್ದಂತೆ ಋುತುಮಾನದ ಕಾಯಿಲೆಗಳಾದ ಕಾಲರಾ, ವಿಷಮಶೀತ ಜ್ವರ, ಕಣ್ಣಿನ ತೊಂದರೆ, ವೈರಲ್ ಸೋಂಕು, ನಿರ್ಜಲೀಕರಣ, ಹೊಟ್ಟೆ ನೋವು, ಡೆಂಗೆ, ಚಿಕನ್ ಫಾಕ್ಸ್ ಬಿಸಿನಿಲಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆಗಳು ಹೆಚ್ಚಾಗಿ ಜನರನ್ನು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ಕ್ಯೂ ನಿಲ್ಲುವ ಸ್ಥಿತಿ ತಲುಪಿದೆ.

ಮಂಗನ ಕಾಯಲೆ ಹೆಚ್ಚಳ!

ಬಿಸಿಲ ಝಳ ಏರುತ್ತಿರುವಂತೆಯೇ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿವರ್ಷವೂ ಚಳಿಗಾಲ, ಬೇಸಿಗೆಯಲ್ಲಿ ಮಲೆನಾಡಿನ ಒಂದಲ್ಲ ಒಂದು ಭಾಗದಲ್ಲಿ ಇದೇ ಕಣ್ಣೀರ ಕತೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಂತೂ ಮಂಗನ ಕಾಯಿಲೆ ಸಂಖ್ಯೆ 100ರ ಗಡಿದಾಟಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಹಲವು ದಶಕಗಳಿಂದ ನಿಗೂಢವಾಗಿರುವ ಮಂಗನ ಕಾಯಿಲೆಯನ್ನು ಮಣಿಸಲು ಪ್ರಬಲ ಇಚ್ಛಾಶಕ್ತಿ ಬೇಕಿದೆ. ಇಲ್ಲದಿದ್ದರೆ ಪ್ರತಿವರ್ಷವೂ ಜೀವಹಾನಿ, ವೈದ್ಯಕೀಯ ವೆಚ್ಚ, ಜಾಗೃತಿ, ನಿಯಂತ್ರಣ ಎಂದೆಲ್ಲಾ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳು ವ್ಯಯವಾಗುತ್ತಲೇ ಇರುತ್ತವೆ.

Categories
ತೀರ್ಥಹಳ್ಳಿ

ದೇವಂಗಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಸಂಭ್ರಮ!

ದೇವಂಗಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಸಂಭ್ರಮ!
– ದೇವಂಗಿ ವೃತ್ತ, ಮೊರಾರ್ಜಿ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ
– ಸಾಂಸ್ಕೃತಿಕ ಕಲರವ: ಗ್ರಾಮಸ್ಥರ ಸಹಯೋಗ

NAMMUR EXPRESS NEWS
ತೀರ್ಥಹಳ್ಳಿ: ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷದ ನಿಮಿತ್ತ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ದೇವಂಗಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮೊರಾರ್ಜಿ ಶಾಲೆ ಮತ್ತು ದೇವಂಗಿ ವೃತ್ತದಲ್ಲಿ ದೇವಂಗಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಯಿತು. ವಾಟಗಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬ್ಯಾಂಡ್ ಸೆಟ್ ಮುಖಾಂತ ದೇವಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ವೇಷ ಭೂಷಣದೊಂದಿಗೆ ಗ್ರಾಮ ಪಂಚಾಯಿತಿಯ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಮಕ್ಕಳು ಹಾಗೂ ಜ್ಞಾನ ದರ್ಶಿನಿ ಶಾಲೆ ಹುಲಿಮಂಡೆ ಮುಖ್ಯೋಪಾಧ್ಯಾಯರು ಶಿಕ್ಷಕರು ಮಕ್ಕಳೊಂದಿಗೆ ಮತ್ತು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸಾರ್ವಜನಿಕರೊಂದಿಗೆ ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕ‌ರ್ ಮತ್ತು ಮಹಾತ್ಮಗಾಂಧೀಜಿಯವರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪ ನಮನವನ್ನು ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜಾ ಕುಮಾರ್ ಉದ್ಘಾಟಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಎಂ ರೇಣುಕಾರಾಧ್ಯ ಸರ್ವರನ್ನು ಸ್ವಾಗತಿಸಿದರು ಮತ್ತು ವಾಟಗಾರರು ಸರ್ಕಾರಿ ಶಾಲೆ ಶಿಕ್ಷಕಿ ಭಾಗ್ಯ ಇವರು ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ದೇವಂಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅನ್ನಪೂರ್ಣ ವಿಜಯ್, ಸದಸ್ಯರಾದ ಅಶೋಕ್ ಕೆಕೆ, ನಾಗರಾಜ್, ಅಮೂಲ್ಯ ಪ್ರದೀಪ್, ಪೂರ್ಣಿಮಾ, ಸರೋಜಾ, ಬಿಕೆ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಸತೀಶ್ ತಡಿ, ರಾಜೇಂದ್ರ ಪ್ರಸಾದ್, ಪ್ರಾಂಶುಪಾಲರಾದ ಉಮೇಶ್, ಸಿ ಆರ್ ಪಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಕುರಿತಾದ ಸಾಕ್ಷ ಚಿತ್ರ ಪ್ರದರ್ಶಿಸಲಾಯಿತು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು. ಸಂವಿಧಾನ ಕುರಿತಾಗಿ ಸಂಕ್ಷಿಪ್ತವಾಗಿ ಶಿಕ್ಷಕರಾದ ಶರತ್ ಕೆ ಸಿ, ಅಣ್ಣಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಕೆ. ಕೆ ಮಾತನಾಡಿದರು. ಸಂವಿಧಾನ ಜಾಗೃತಿ ಜಾಥದ ಗ್ರಾಮ ಪಂಚಾಯಿತಿ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ವಂದನಾರ್ಪಣೆಯನ್ನು ಮುಖ್ಯ ಶಿಕ್ಷಕರಾದ ಭಾರತೀ ಕೆ ಎಸ್ ನೆರವೇರಿಸಿದರು. ನಿರೂಪಣೆಯನ್ನು ಶಿಕ್ಷಕರಾದ ಅನುಪಮ ಹಾಗೂ ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಸವಿತಾ ಎಂ ಆರ್ ಹಾಗೂ ಸಿಬ್ಬಂದಿ ವರ್ಗ, ನಾಗರಾಜ್ ಯು ಎಸ್, ಮೇಘ ಐ ಎಸ್, ಕಾರ್ತಿಕ್ ಎಚ್ ಡಿ,ಮಯ್ಯದ್ಧಿ, ಚಂದ್ರು, ಶಶಾಂಕ್ ಹಾಗೂ ಇತರರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Categories
ತೀರ್ಥಹಳ್ಳಿ

ಕನ್ನಂಗಿ ಗ್ರಾಮ ಪಂಚಾಯತಿಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ

ಕನ್ನಂಗಿ ಗ್ರಾಮ ಪಂಚಾಯತಿಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ
– ಅಂಬೇಡ್ಕರ್, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ
– ಶಾಲಾ ಮಕ್ಕಳ ವೇಷಭೂಷಣ: ಸಂಭ್ರಮದ ಸ್ವಾಗತ

NAMMUR EXPRESS NEWS
ಕನ್ನಂಗಿ ಗ್ರಾಮ ಪಂಚಾಯಿತಿಯಲ್ಲಿ ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷ ನಿಮಿತ್ತ ಭಾನುವಾರ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಕನ್ನಂಗಿಯಲ್ಲಿ ಜಾಗೃತಿ ಜಾಥಾ ವಾಹನಗಳ ಮುಖಾಂತರ ಶಾಲಾ ಮಕ್ಕಳ ವೇಷಭೂಷಣ ಹಾಗೂ ಬಲೂನ್ ಮತ್ತು ರಾಷ್ಟ್ರಧ್ವಜಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿ ಆವರಣದವರೆಗೆ ಜಾಥಾದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಪ್ರೀತಾ ರವೀಂದ್ರ ಅವರು ಉದ್ಘಾಟಿಸಿದರು. ಕನ್ನಂಗಿ ಗ್ರಾಮ ಪಂಚಾಯತಿ ಪಿ ಡಿ ಓ ಗಳಾದ ಸುರೇಶ್ ಎಂ ರವರು ಸ್ವಾಗತಿಸಿದರು. ಕನ್ನಡ ಪಂಡಿತರ ಸಂವಿಧಾನ ಪೀಠಿಕೆ ದಿವಾಕರ ಆಬಾರ್ಸಂ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನದ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಿ . ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೂ ಅಭಿನಂದನಾ ಪತ್ರ ಮತ್ತು ಬಹುಮಾನವನ್ನು ನೀಡಲಾಯಿತು. ವಂದನಾರ್ಪಣೆಯನ್ನ ಸುರೇಶ್ ಎಂ ಮಾಡಿದ್ದರು.

ಉಪಾಧ್ಯಕ್ಷರಾದ ಸುಧಾ ಶ್ರೀಧರ, ಶಾಲಾ ಮುಖ್ಯೋಪಾಧ್ಯಾಯರು,ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಂ ಪಂಚಾಯತಿ ಎಲ್ಲಾ ಸದಸ್ಯರು, ಕನ್ನಂಗಿ ಶಾಲಾ ಸಿಬ್ಬಂದಿ , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.ಸುಸಜ್ಜಿತ ವಾದ ಕಟ್ಟಡ ವ್ಯವಸ್ಥೆ ಯನ್ನು ಒದಗಿಸಿ ಕೊಟ್ಟು ಶಾಲೆಯ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಹೆಚ್ ರವರು ಸಹ ಸಹಕರಿಸಿದ್ದಾರೆ.

Categories
ತೀರ್ಥಹಳ್ಳಿ

ಹಣಗೆರೆಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ

ಹಣಗೆರೆಯಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ
– ಶಾಲಾ ಮಕ್ಕಳ ವೇಷಭೂಷಣ: ಸಂಭ್ರಮದ ಸ್ವಾಗತ
– ಅಂಬೇಡ್ಕರ್, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ

NAMMUR EXPRESS NEWS
ಹಣಗೆರೆ ಗ್ರಾಮ ಪಂಚಾಯಿತಿಯಲ್ಲಿ ಭಾರತ ಸಂವಿಧಾನ ಜಾರಿಗೆ ಬಂದ 75 ವರ್ಷ ನಿಮಿತ್ತ ಭಾನುವಾರ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಹಣಗೆರೆ ಯಲ್ಲಿ ಜಾಗೃತಿ ಜಾಥಾ ವಾಹನಗಳ ಮುಖಾಂತರ ಶಾಲಾ ಮಕ್ಕಳ ವೇಷಭೂಷಣ ಹಾಗೂ ಬಲೂನ್ ಮತ್ತು ರಾಷ್ಟ್ರಧ್ವಜಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿ ಆವರಣದವರೆಗೆ ಜಾಥಾದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಸರೋಜಮ್ಮನವರು ಉದ್ಘಾಟಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಿ ಎಸ್ ಧರ್ಮಪ್ಪನವರು ಸ್ವಾಗತಿಸಿದರು.

ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಪಿ ಆರ್ ಪಿ ಉಮೇಶ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನದ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಿ ಬಹುಮಾನ ನೀಡಲಾಯಿತು. ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೂ ಅಭಿನಂದನಾ ಪತ್ರ ಮತ್ತು ಬಹುಮಾನವನ್ನು ನೀಡಲಾಯಿತು. ವಂದನಾರ್ಪಣೆಯನ್ನ ಅಭಿವೃದ್ಧಿ ಅಧಿಕಾರಿಗಳಾದ ಬಿ. ಎಸ್ ಧರ್ಮಪ್ಪನವರು ಮಾಡಿದ್ದರು. ಸದಸ್ಯರಾದ ಶ್ರೀಮತಿ ಸರೋಜಮ್ಮ, ಅಶೋಕ, ಸುಮಲತಾ, CRP ಉಮೇಶ್ , ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎನ್ ಆರ್ ಎಲ್ ಎಮ್ ಒಕ್ಕೂಟದ ಸಿಬ್ಬಂದಿ ವರ್ಗ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.

Categories
ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್

ಮಲ್ನಾಡ್ ಟಾಪ್ ನ್ಯೂಸ್..!

ಬಾಲಕಿಗೆ ಮುತ್ತು ಕೊಟ್ಟವನಿಗೆ 3 ವರ್ಷ ಜೈಲು ಶಿಕ್ಷೆ..!
– ಕಡೂರು: ಬರ್ಬರ ಹತ್ಯೆ: ಆರೋಪಿಗಳು ಅರೆಸ್ಟ್
– ಭದ್ರಾವತಿಯಲ್ಲಿ ರಸ್ತೆ ಅಪಘಾತ: ವಾಹನ ಹಾನಿ
– ಮೂಡಿಗೆರೆ: ನಾಪತ್ತೆಯಾಗಿದ್ದವ ಶವವಾಗಿ ಪತ್ತೆ
– ತೀರ್ಥಹಳ್ಳಿಯಲ್ಲಿ ಅಪಘಾತ: ಇಬ್ಬರಿಗೆ ಗಾಯ

NAMMUR EXPRESS NEWS
ಮೂಡಿಗೆರೆ: ಬಾಲಕಿಯೊಬ್ಬಳಿಗೆ ಮುತ್ತು ಕೊಟ್ಟವನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಪ್ರತಾಪ್‌ (28) ಎಂಬಾತನಿಗೆ ಕೋರ್ಟ್ ಈ ಶಿಕ್ಷೆ ನೀಡಿದೆ. 2014 ರ ಅ.26 ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪ್ರಾಪ್ತಿಯನ್ನು (ಸಂತ್ರಸ್ತೆ) ಹಿಡಿದುಕೊಂಡಿದ್ದ ಪ್ರತಾಪ್‌, ಪಕ್ಕದ ಶಿಥಿಲಾವಸ್ಥೆಯ ಶೌಚಾಲಯಕ್ಕೆ ಎಳೆದೊಯ್ದಿದ್ದ. ನಾನು ನಿನ್ನ ಪ್ರೀತಿಸುತ್ತಿದ್ದು ನೀನೂ ನನ್ನ ಪ್ರೀತಿಸುತ್ತಿದ್ದೀಯಾ ಎಂದು ಪ್ರಶ್ನಿಸಿ, ಸಂತ್ರಸ್ತೆಯನ್ನು ಕಳೆಗೆ ಕೆಡೆವಿ, ಕೆನ್ನೆ ಹಾಗೂ ಕತ್ತಿನ ಭಾಗಕ್ಕೆ ಮುತ್ತಿಟ್ಟಿದ್ದ. ಎದೆ ಭಾಗವನ್ನು ಸ್ಪರ್ಶಿಸಿ, ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಆತನ ಕೈಗಳಿಂದ ತಪ್ಪಿಸಿಕೊಂಡಿದ್ದ ಸಂತ್ರಸ್ತೆ ಮನೆಗೆ ಸೇರಿದ್ದಳು. ಆಕೆಯ ತಂದೆ ಚಿಕ್ಕಮಗಳೂರಿನ ಬಾಲೂರು ಠಾಣೆಗೆ ದೂರು ನೀಡಿದ್ದರು.

ತನಿಖೆ ನಡೆಸಿದ್ದ ಪೊಲೀಸರು, ಪೋಕ್ಸ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್ 357 (ಆಕ್ರಮಣ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ, ತಂದೆ ಮತ್ತು ತಾಯಿಯ ಸಾಕ್ಷ್ಯ ಪರಸ್ಪರ ತದ್ವಿರುದ್ಧವಾಗಿದೆ. ಘಟನೆ ಭಾನುವಾರ ನಡೆದಿದೆ. ಘಟನಾ ಸ್ಥಳದ ಪಕ್ಕದಲ್ಲೇ ಕಾರ್ಮಿಕರ ಮನೆಗಳಲ್ಲಿದ್ದವು. ಸಂತ್ರಸ್ತೆಯ ಕಿರುಚಾಟ ಕೇಳಿ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಹಾಗಾಗಿ, ಸಂತ್ರಸ್ತೆಯ ಸಾಕ್ಷ್ಯ ನಂಬಲಾರ್ಹವಾಗಿಲ್ಲ ಎಂದು ತೀರ್ಮಾನಿಸಿದ್ದ ಚಿಕ್ಕಮಗಳೂರು ಪೋಕೋ ವಿಶೇಷ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ 2017 ರ ಜ.30 ರಂದು ಆದೇಶಿಸಿತ್ತು. ಇದರಿಂದ ಪೊಲೀಸರು ಹೈಕೋರ್ಟ್‌ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಕೊಲೆ: ನಾಲ್ವರು ಆರೋಪಿಗಳ ಬಂಧನ

ಕಡೂರು: ತಾಲೂಕಿನ ಹುಲಿಗೊಂದಿ ಹೊಸೂರು ಬಳಿ ರಸ್ತೆ ಬದಿಯ ಕಾಲುವೆಯಲ್ಲಿ ಯುವಕನ ಶವ ಪತ್ತೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದರ್ಶನ್ (21) ಎಂಬಾತನನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.

ಏನಿದು ಘಟನೆ:

ಮೃತ ದರ್ಶನ್ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ದರ್ಶನ್ ಮೇಲೆ ಇತ್ತೀಚೆಗೆ ಕೊಲೆ ಯತ್ನ ಕೇಸ್ ದಾಖಲಾಗಿತ್ತು. 15 ದಿನಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ ಬಳಿಕ ತನ್ನ ಇಬ್ಬರು ಸ್ನೇಹಿತರ ಜೊತೆ ದರ್ಶನ್ ಕಡೂರಿನ ಮಾಡಾಳು ಗ್ರಾಮದ ತನ್ನ ತಾತನ ಮನೆಗೆ ಬಂದಿದ್ದನು. ಈತನೊಂದಿಗೆ ಬಂದವರು ವಾರದ ಹಿಂದೆ ಬೆಂಗಳೂರಿಗೆ ವಾಪಸ್‌ ಹೋಗಿದ್ದರು.

ಗುರುವಾರ (ಫೆ.15) ರಾತ್ರಿ ಬೆಂಗಳೂರಿನಿಂದ ಮತ್ತೆ ಬಂದ ದರ್ಶನ್ ಸ್ನೇಹಿತರು, ಆತನನ್ನು ಕಾರಿನಲ್ಲಿ ಕರೆದೊಯ್ದಿದ್ದರು. ಬೆಂಗಳೂರಿನಿಂದ ಸ್ನೇಹಿತರು ಬಂದಿದ್ದಾರೆ, ಅವರ ಜೊತೆ ಹೊಲದ ಶೆಡ್ ನಲ್ಲಿ ಮಲಗುತ್ತೇನೆ ಎಂದು ದರ್ಶನ್ ತನ್ನ ತಾತನಿಗೆ ಹೇಳಿದ್ದ. ಆದರೆ, ತಾತ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ ನಲ್ಲಿ ಯಾರೂ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿದ್ದಾನೆ ಎಂದು ತಿಳಿದ ತಾತ, ಮನೆಗೆ ಬಂದು ಮಲಗಿದ್ದರು. ಆದರೆ, ದರ್ಶನ್ ಬೆಳಗ್ಗೆ ಮನೆಗೆ ಬಾರದಿದ್ದಾಗ ಹುಡುಕಾಡಿದ್ದು, ಆತನ ಮೃತದೇಹ ಹುಲಿಗೊಂದಿ ಹೊಸೂರು ರಸ್ತೆ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿತ್ತು.ತನಿಖೆ ಕೈಗೊಂಡ ಕಡೂರು ಪೊಲೀಸರು 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವೈಯಕ್ತಿಕ ನಿಂದನೆ ಘಟನೆಗೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ. ತನಿಖಾ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.

ಭದ್ರಾವತಿಯಲ್ಲಿ ರಸ್ತೆ ಅಪಘಾತ:

ಭದ್ರಾವತಿ: ಭದ್ರಾವತಿಯಲ್ಲಿ ಸರಣಿ ಅಪಘಾತವಾಗಿದೆ. ಘಟನೆ ನಡೆದಿದೆ. ಘಟನೆಯಲ್ಲಿ ಒಂದು ಆಟೋ ಹಾಗೂ ಬಸ್ ಜಖಂಗೊಂಡಿದೆ.ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ. ಅಲ್ಲದೆ ಆಟೋ ಸಂಪೂರ್ಣ ಜಖಂಗೊಂಡಿದೆ. ಒಂದರ ಹಿಂದೆ ಒಂದು ವಾಹನ ಜಖಂಗೊಂಡ ಕಾರಣ ನಾಲ್ಕು ವಾಹನಗಳಿಗೆ ಹಾನಿಯಾಗಿದೆ. ಭದ್ರಾವತಿ ನಿವಾಸಿಯೊಬ್ಬರು ಕಾರು ಓಡಿಸಿಕೊಂಡು ಬಂದಿದ್ದು ಕುಡಿದ ಮತ್ತಿನಲ್ಲಿ ಈ ಅಪಘಾತವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿಯೇ ಡ್ರೈವರ್ ಸಿಲುಕಿಕೊಂಡಿದ್ದಾರೆ. ಕಾರಿನ ಮುಂಭಾಗ ಕೂಡ ಜಖಂಗೊಂಡಿದ್ದು, ಸ್ಥಳಕ್ಕೆ ಬಂದ ಭದ್ರಾವತಿ ಪೊಲಿಸರು ವಾಹನಗಳನ್ನು ಸ್ಥಳಾಂತರಿಸಿ ಪ್ರಕರಣ ದಾಖಲಿಸಿದ್ದಾರೆ. ಭದ್ರಾವತಿ ಖಾಸಗಿ ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು ಅದೃಷ್ಟಕ್ಕೆ ಯಾರಿಗೂ ಹೆಚ್ಚಿನ ಅಪಾಯ ಉಂಟಾಗಿಲ್ಲ.

ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

ಮೂಡಿಗೆರೆ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಕಿತ್ತಲೆಗಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿತ್ತಲೆಗಂಡಿ ಗ್ರಾಮದ ಕೂಲಿ ಕಾರ್ಮಿಕ ಶಂಕರ್ (36 ವರ್ಷ) ಎಂಬ ವ್ಯಕ್ತಿ ಗುರುವಾರದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದರೆ ಇಂದು ಬೆಳಿಗ್ಗೆ ಕಿತ್ತಲೆಗಂಡಿ ಹೇಮಾವತಿ ಸೇತುವೆಯಿಂದ ಸ್ವಲ್ಪ ಮೇಲ್ಬಾಗದಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ನಂತರ ಪರಿಶೀಲಿಲಿಸಿದ್ದಾಗ ಅದು ನಾಪತ್ತೆಯಾಗಿದ್ದ ಶಂಕ‌ರ್ ಅವರ ಶವವಾಗಿತ್ತು. ಮೂಡಿಗೆರೆ ತಾಲ್ಲೂಕಿನ ಕಿತ್ತಲೆಗಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿತ್ತಲೆಗಂಡಿ ಗ್ರಾಮದ ಕೂಲಿ ಕಾರ್ಮಿಕ ಶಂಕರ್ (36 ವರ್ಷ) ಎಂಬ ವ್ಯಕ್ತಿ ಗುರುವಾರದಿಂದ ನಾಪತ್ತೆಯಾಗಿದ್ದರು.

ಈ ಬಗ್ಗೆ ಅವರ ಪತ್ನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದರೆ ಇಂದು ಬೆಳಿಗ್ಗೆ ಕಿತ್ತಲೆಗಂಡಿ ಹೇಮಾವತಿ ಸೇತುವೆಯಿಂದ ಸ್ವಲ್ಪ ಮೇಲ್ಬಾಗದಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ನಂತರ ಪರಿಶೀಲಿಲಿಸಿದ್ದಾಗ ಅದು ನಾಪತ್ತೆಯಾಗಿದ್ದ ಶಂಕ‌ರ್ ಅವರ ಶವವಾಗಿತ್ತು. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಮತ್ತು ಸಮಾಜ ಸೇವಕ ಫಿಶ್ ಮೋಣು ತಂಡದವರ ಸಹಾಯದಿಂದ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಶವವನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ ಬಳಿ ಅಪಘಾತ : ತಾಯಿ ಮಗ ಮಣಿಪಾಲ ಆಸ್ಪತ್ರೆಗೆ ರವಾನೆ:

ತೀರ್ಥಹಳ್ಳಿ: ತಾಯಿ ಮಗ ಎಂಫಿಲ್ಡ್ ಬೈಕಲ್ಲಿ ಹೋಗುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಭಾನುವಾರ ತೀರ್ಥಹಳ್ಳಿ ತಾಲೂಕು ರಾಮಕೃಷ್ಣಪುರ ಬಳಿ ಸಂಭವಿಸಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ನಾದನಿರಂತರ ಸುಗಮ ಸಂಗೀತ ಶಾಲೆಯಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ.

ತೀರ್ಥಹಳ್ಳಿಯ ನಾದನಿರಂತರ ಸುಗಮ ಸಂಗೀತ ಶಾಲೆಯಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ.
– ವಿದ್ಯಾರ್ಥಿಗಳಿಂದ ದಸರಾ ಭಜನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ನಾದನಿರಂತರ ಸುಗಮಸಂಗೀತ ಶಾಲೆಯಲ್ಲಿ ಇತ್ತೀಚೆಗೆ ಪುರಂದರ ದಾಸರ ಆರಾಧನಾ ಮಹೋತ್ಸವವನ್ನು ತಮ್ಮ ಸಂಗೀತ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಶ್ರೀಮತಿ ಉಷಾ ಬಾಳೆಬೈಲು ಇವರ ಸಮ್ಮುಖದಲ್ಲಿ ನಡೆಯಿತು. ಪುರಂದರ ದಾಸರ ಪರಿಚಯವನ್ನು ವಿದ್ಯಾರ್ಥಿಗಳಾದ ಕುಮಾರಿ ದೀಕ್ಷಾ ,ಕುಮಾರಿ ಸ್ವರ್ಣಶ್ರಿ, ಕುಮಾರಿ ಪೂಜ್ಯ ಇವರುಗಳು ಮಾತನಾಡಿ ನಂತರ ಎಲ್ಲ ವಿದ್ಯಾರ್ಥಿಗಳು ದಾಸರ ಭಜನೆಯೊಂದಿಗೆ ಕಾರ್ಯಕ್ರಮವನ್ನು ಚಂದಗಾಣಿಸಿ ಮೆರಗುಗೊಳಿಸಿದರು.

Categories
ತೀರ್ಥಹಳ್ಳಿ

ಮಲ್ನಾಡ್ ಕ್ಲಬ್ಬಲ್ಲಿ ಜೆ.ಟಿ.ಸುಂದರೇಶ್ ನುಡಿ ನಮನ

ಮಲ್ನಾಡ್ ಕ್ಲಬ್ಬಲ್ಲಿ ಜೆ.ಟಿ.ಸುಂದರೇಶ್ ನುಡಿ ನಮನ
– ಗಣ್ಯರ ಸಂತಾಪ: ಶ್ರದ್ದಾಂಜಲಿ ಸಭೆ
– ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಪ್ರಿನ್ಸಿಪಾಲ್ ಆಗಿ 32 ವರ್ಷಗಳ ಸುಧೀರ್ಘ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಜೆ.ಟಿ.ಸುಂದರೇಶ್ ಅವರಿಗೆ ಇಡೀ ಮಲೆನಾಡು ಕಂಬನಿ ವ್ಯಕ್ತಪಡಿಸುತ್ತಿದೆ. ಮಲ್ನಾಡ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳಾದ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ತೀರ್ಥಹಳ್ಳಿ, ಇಂಜಿನಿಯರ್ ಅಸೋಸಿಯೇಷನ್ ತೀರ್ಥಹಳ್ಳಿ, ಬಾಲ್ ಬ್ಯಾಟ್ಮಿಟ್ಟನ್ ಕ್ಲಬ್, ತುಂಗಾ ವಿದ್ಯಾವರ್ಧಕ ಸಂಸ್ಥೆ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್, ಕುಟುಂಬದವರು, ಬಂಧು ಮಿತ್ರರು, ಕ್ಲಬ್ ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರುಗಳ ಉಪಸ್ಥಿತಿಯಲ್ಲಿ ಜಿ ಟಿ ಸುಂದರೇಶ್ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಯಿತು. ಪ್ರೋ. ಜಿ ಟಿ ಸುಂದರೇಶ್ ರವರು 1983 ರಲ್ಲೇ ಸಿವಿಲ್ ಇಂಜಿನಿಯರ್ ಪದವಿ ಪಡೆದು ಒಂದು ವರ್ಷ ಲ್ಯಾಂಡ್ ಆರ್ಮಿ ಲಿ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

1985ರಲ್ಲಿ 26ನೇ ವಯಸ್ಸಿನಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 32 ವರ್ಷ ಸುಧೀರ್ಘ ಅವಧಿಯ ಸೇವೆ ಸಲ್ಲಿಸಿದ್ದಾರೆ.ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ , ಹಾಲಿ ತುಂಗಾ ವಿದ್ಯಾ ವರ್ಧಕ ಸಂಸ್ಥೆಯ ಖಜಾಂಚಿಯಾಗಿ, ಮಲ್ನಾಡ್ ಕ್ಲಬ್ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಮಲ್ನಾಡ್ ಕ್ಲಬ್ ಅವರ ಅಧಿಕಾರವಧಿಯಲ್ಲಿ ಅತೀ ಹೆಚ್ಚು ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ನಡೆದಿರುವುದು ಉಲ್ಲೇಖನಿಯ. ಕ್ಲಬ್ ಕುರಿತಾಗಿ ಅವರ ಕಲ್ಪನೆ ಹಾಗೂ ದೂರದೃಷ್ಟಿ ಪ್ರಶಂಸನಾರ್ಹ. ಅವರ ಜೀವಿತಾವಧಿಯಲ್ಲಿ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಲೇ ಗೌರವಾನ್ವಿತವಾಗಿ ಬದುಕಿದ ಹಾಗೂ ನೂರಾರು ಜನಕ್ಕ     ( ವಿದ್ಯಾರ್ಥಿಗಳಿಗೆ ) ಬದುಕನ್ನು ಕಲ್ಪಿಸಿದ ಶ್ರೇಯಸ್ಸು ಸಲ್ಲುತ್ತದೆ.

ಮಲ್ನಾಡ್ ಕ್ಲಬ್ ವತಿಯಿಂದ ಕಡಿದಾಳ್ ದಯಾನಂದ್ ವಿಹಂಗಮ, ಹೆಚ್. ಆರ್. ತಪಸ್ವಿ, ಸಹಕಾರಿ ನಾಯಕ ಡಾ.ಆರ್.ಎಂ. ಮಂಜುನಾಥ್ ಗೌಡ, ಟೇಬಲ್ ಟೆನಿಸ್ ವತಿಯಿಂದ ಡಾ. ಯು.ಕೆ. ನಂದಕಿಶೋರ್ ರಾಜ್ ಕುಮಾರ್, ಆದಾಯ ತೆರಿಗೆ ಇಲಾಖೆ, ಬಾಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಸುಧೀರ್ ಪಿ ರಾವ್ ಎಂ‌.ಎನ್. ಶ್ರೀಧರ ಮೂರ್ತಿ, ಕ್ಲಬ್ ಆಡಳಿತ ಮಂಡಳಿ ವತಿಯಿಂದ ಎಸ್‌. ರಾಘವೇಂದ್ರ ಕಾರ್ಯದರ್ಶಿ ಪ್ರಸಿಲ್ಲಾ ಎನ್. ಪಿಂಟೋ ನಿರ್ದೇಶಕರು, ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಅನಿತಾ ನಾಗರಾಜ್ ಆಡಳಿತ ಮಂಡಳಿ ಪ್ರಶಾಂತ್ ಹೆಗ್ಗಾರ್ ಹಳೆ ವಿದ್ಯಾರ್ಥಿ ಮುಕುಂದ ಸಹೋದ್ಯೋಗಿಗಳ ವತಿಯಿಂದ ತುಂಗಾ ವಿದ್ಯಾವರ್ಧಕ ಸಂಘದ ವತಿಯಿಂದ ಡಾನ್ ರಾಮಣ್ಣ, ಕುಟುಂಬದವರಿಂದ ಕೆ.ಸಿ. ದಿನೇಶ್ ಕಡ್ತೂರು, ಶಿವಪ್ಪ, ಕೆ.ಆರ್. ಪ್ರಕಾಶ್ ಕಡಿದಾಳು, ಲಯನ್ಸ್ ಕ್ಲಬ್ ವತಿಯಿಂದ ಕಾರ್ತಿಕ್ ಬೊಬ್ಬಿ ಕಾರ್ಯದರ್ಶಿ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂತೋಶ್ ಪೂಜಾರಿ ಹಾಗೂ ಮಲ್ನಾಡ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು ಹಾಜರಿದ್ದರು.

Categories
ಅಡಿಕೆ-ದರ

ಅಡಿಕೆ ರೇಟ್

ಅಡಿಕೆ ರೇಟ್

ಅಡಿಕೆ ದರ
(19-02-2024)
ಸರಕು 46010 81396
ಬೆಟ್ಟೆ 46069 54799
ರಾಶಿ 34179 47950
ಗೊರಬಲು 17050 32299
Nammur Express

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ ಉತ್ಸವ!

ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ ಉತ್ಸವ!
– ಮಾ.12 ರಿಂದ ಮಾ.20ರವರೆಗೆ ಧಾರ್ಮಿಕ ಕಾರ್ಯಕ್ರಮ
– ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಮಾ.12 ರಿಂದ ಮಾ.20ರವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಭಕ್ತರು ಪ್ರತಿ ನಿತ್ಯ ಭಾಗವಹಿಸಲಿದ್ದಾರೆ.

ಯಾವತ್ತು ಏನೇನು..?

ಮಾರ್ಚ್ 12 ಮಂಗಳವಾರದಿಂದ ಮಾರ್ಚ್ 20 ರ ಬುಧವಾರದವರೆಗೆ ಪ್ರತಿದಿನ ಬೆಳಿಗ್ಗೆಯಿಂದ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನ ಟಿ.ಎ.ಪಿ.ಸಿ.ಎಂ.ಎಸ್. ಸುವರ್ಣ ಸಹಕಾರ ಭವನದಲ್ಲಿ ಅನ್ನ ಸಂತರ್ಪಣೆ ಸಂಜೆ 6.00 ರಿಂದ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಮಾರ್ಚ್ 12ರ ಮಂಗಳವಾರ : ಮಹಾಪೂಜೆ, ಮಹಾಮಂಗಳಾರತಿ, ದೇವಿ ದರ್ಶನ, ಜಾತ್ರೆ ಸಾರುವುದು

ಮಾರ್ಚ್ 13ರ ಬುಧವಾರ : ಪಾರಾಯಣ. ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಡ್ಯಾನ್ಸ್ ಪ್ಯಾಲೇಸ್ ‘ಕು’ ತೀರ್ಥಹಳ್ಳಿ “ನೃತ್ಯ ಸಂಭ್ರಮ” , ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ ಗೀತ-ಸಾಹಿತ್ಯ-ಸಂಭ್ರಮ

ಮಾರ್ಚ್ 14ರ ಗುರುವಾರ: ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ರಾತ್ರಿ “ರಂಗಪೂಜೆ, ಪ್ರೊ. ಕೃಷ್ಣಗೌಡ ಮತ್ತು ಸಂಗಡಿಗರಿಂದ “ನಗೆ ನೈವೇದ್ಯ”

ಮಾರ್ಚ್ 15ರ ಶುಕ್ರವಾರ: ಪಾರಾಯಣ, ಜಾತ್ರಾ ವಿಶೇಷ ಪೂಜೆ. ಮಹಾಪೂಜೆ, ಮಹಾಮಂಗಳಾರತಿ, ರಾಷ್ಟ್ರ “ರಂಗಪೂಜೆ” ಸುಪ್ರೀತ್ ಸಫಲಿಗ ಮತ್ತು ಬಳಗ, ಮಂಗಳೂರು ಇವರಿಂದ “ಸಂಗೀತ ಸೌರಭ”

ಮಾರ್ಚ್ 16ರ ಶನಿವಾರ: ‘ಚಂಡಿಕಾ ಹೋಮ” ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ರಾತ್ರಿ ರಂಗಪೂಜೆ ಅಂತರಾಷ್ಟ್ರೀಯ ಖ್ಯಾತಿಯ ಜನಪ್ರಿಯ ನಾಯಕಿ ಶ್ರೀಮತಿ ಸವಿತಾ ಗಣೇಶ್ ಪ್ರಸಾದ್ ಅರ್ಪಿಸುವ “ಸವಿತಕ್ಕನ ಅಜ್ಜಿ ಬ್ಯಾಂಡ್” ತಂಡದಿಂದ “ಸಂಗೀತ ರಸಸಂಜೆ ”

ಮಾರ್ಚ್ 17 ರ ಭಾನುವಾರ: ಪಾರಾಯಣ ಜಾತ್ರಾ ವಿಶೇಷ ಪೂಜೆಗಳು, ಮಹಾಪೂಜೆ, ಮಹಾಮಂಗಳಾರತಿ. ತೀರ್ಥಹಳ್ಳಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರುಗಳಿಂದ “ನೃತ್ಯ ವೈಭವ”

ಮಾರ್ಚ್ 18 ರ ಸೋಮವಾರ: ಕಲ್ಲೋಕ್ತ ಪೂಜೆ, ಸಹಸ್ರನಾಮ ಜಾತ್ರಾ ವಿಶೇಷ ಪೂಜೆಗಳು, ಮಹಾಮಂಗಳಾರತಿ, ಖ್ಯಾತ ಯಕ್ಷ ಕಲಾವಿದ “ಪಟ್ಲ ಸತೀಶ್ ಶೆಟ್ಟಿ” ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತ ಪ್ರಸ್ತುತ ಪಡಿಸುವ ‘ಅಯೋಧ್ಯಾ ದೀಪ” ಕಾಲಮಿತಿ ಯಕ್ಷಗಾನ

ಮಾರ್ಚ್ 19ರ ಮಂಗಳವಾರ : ಜಾತ್ರಾ ವಿಶೇಷ ಪೂಜೆಗಳು, ಮಹಾ ಮಂಗಳಾರತಿ ಎಣ್ಣೆಭಂಡಾರ ಪೂಜೆ ಸಂಪ್ರದಾಯದಂತೆ ಗೊಂಬೆಪೂಜೆ, ಮೆರವಣಿಗೆ ಮೂಲಕ ದೇವಸ್ಥಾನದ ಆವರಣದಲ್ಲಿ ಗೊಂಬೆಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು.

ಮಾರ್ಚ್ 20ರ ಬುಧವಾರ: ರಾಜಬೀದಿ ಉತ್ಸವದೊಂದಿಗೆ ಗೊಂಬೆ ವಿಸರ್ಜನೆ, ಜಾತ್ರಾ ಸಂದರ್ಭದಲ್ಲಿ ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲಾಗುವುದು.

ಈ ಸಲ ಕ್ರೀಡಾ ರಂಗು

ಜಾತ್ರೆಯ ಪ್ರಯುಕ್ತ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಎ.ಪಿ.ಎಂ.ಸಿ. ಪಕ್ಕದಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣದಲ್ಲಿ ದಿನಾಂಕ 14-03-2024 ರಿಂದ 17-03-2024ರವರೆಗೆ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ “ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿ’ ಸರ್ವರಿಗೂ ಆದರದ ಸುಸ್ವಾಗತ