Categories
ಉಡುಪಿ ಕರಾವಳಿ

ಫೆ.17 ರಂದು ಉಡುಪಿಯಲ್ಲಿ ರೈತ ಸಮಾವೇಶ

ಫೆ.17 ರಂದು ಉಡುಪಿಯಲ್ಲಿ ರೈತ ಸಮಾವೇಶ
– ಕೃಷಿ ಸಂಬಂಧಿ ಪುಸ್ತಕಗಳು ಮಳಿಗೆಯಲ್ಲಿ ಲಭ್ಯ
– ಕೃಷಿ ಜಾಗ್ರತೆಗಾಗಿ ಕಾರ್ಯಕ್ರಮ

NAMMUR EXPRESS NEWS
ಉಡುಪಿ: ನಗರಗಳಲ್ಲದೆ ಹಳ್ಳಿಗಳಲ್ಲಿ ಕೂಡಾ ಕೃಷಿಯಿಂದ ವಿಮುಖವಾಗುತ್ತಿರುವ ಕೃಷಿಕರಿಗೆ ಹಾಗೂ ಕೃಷಿ ಆಸಕ್ತ ರಿಗೆ ಕಡಿಮೆ ಖರ್ಚಿನಲ್ಲಿ ಸುಲಭದ ಕೃಷಿ, ಹೈನುಗಾರಿಕೆ, ಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳನ್ನು, ಜಿಲ್ಲೆ ಯಲ್ಲಿ ಗ್ರಾಮ ಸಮಿತಿಗಳ ಮೂಲಕ ಕೃಷಿ ತಜ್ಞರು -ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಜಿಲ್ಲಾ ಕೃಷಿಕ ಸಂಘವು ಆಯೋಜಿಸಿರುವ ಜಿಲ್ಲಾ ರೈತ ಸಮಾವೇಶ ಇದೇ ಫೆ.17ರ ಶನಿವಾರ ಬೆಳಗ್ಗೆ 9:30ರಿಂದ ಸಂಜೆ 3 ಗಂಟೆಯವರೆಗೆ ಉಡುಪಿ ಕುಂಜಿಬೆಟ್ಟು ಶ್ರೀಶಾರದಾ ಮಂಟಪ ಅವರಣದಲ್ಲಿ ನಡೆಯಲಿದೆ. ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ರೈತ ಸಮಾವೇಶ-2024ನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದ ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಎಜಿಎಂ ಬಿ.ರಾಜ ಗೋಪಾಲ್ ಭಾಗವಹಿಸಲಿದ್ದಾರೆ ಎಂದರು.

ಏನೆಲ್ಲ ಕಾರ್ಯಕ್ರಮ ನಡೆಯಲಿದೆ:

ಕೃಷಿ ವಿಚಾರದ ತಾಂತ್ರಿಕ ಸಮಾವೇಶದಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಕೀಟ ರೋಗಗಳ ನಿಯಂತ್ರಣ ಬಗ್ಗೆ ಕಾಸರಗೋಡು ಸಿ.ಪಿ.ಸಿ.ಆರ್.ಐ ವಿಜ್ಞಾನಿ ಡಾ.ರವಿ ಭಟ್, ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಡಾ.ಎಚ್.ಎಸ್. ಚೈತನ್ಯ. ಉತ್ತಮ ಗೇರು ತಳಿಗಳು ಮತ್ತು ಬೆಳೆ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್ ಮಾತನಾಡಲಿದ್ದಾರೆ. ಇನ್ನು ಮಲ್ಲಿಗೆ ಬೆಳೆಯ ನಿರ್ವಹಣಾ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ.ಧನಂಜಯ ಹೈನುಗಾರಿಕೆಯಲ್ಲಿ ಮುಂಜಾಗೃತ ಕ್ರಮಗಳ ಬಗ್ಗೆ ಮಣಿಪಾಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ, ಕೃಷಿ ಪದವಿಯ ಅಗತ್ಯತೆ ಬಗ್ಗೆ ಬ್ರಹ್ಮಾವರ ಡಿಪ್ಲೋಮ ಕೃಷಿ ಮಹಾ ವಿದ್ಯಾಲಯದ ಡಾ.ಸುಧೀರ್ ಕಾಮತ್, ಕೃಷಿ ಇಲಾಖೆಯಿಂದ ಸಿಗುವ ಸರಕಾರಿ ಸೌಲಭ್ಯಗಳ ಬಗ್ಗೆ ಉಡುಪಿಯ ಜಂಟಿ ಕೃಷಿ ನಿರ್ದೇಶಕಿ ಎಂ. ಸೀತಾ; ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಉಡುಪಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಮತ್ತು ವಿದ್ಯುತ್ ಗ್ರಾಹಕರಿಗೆ ಅಗತ್ಯ ಮಾಹಿತಿಗಳನ್ನು ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ ನೀಡಲಿದ್ದಾರೆ.

ಕೃಷಿ ಮಾಹಿತಿ-ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಸಮಾವೇಶದಲ್ಲಿ ಇರಲಿವೆ. ಕೃಷಿ ಆಸಕ್ತರು, ಕೃಷಿಕ ಬಾಂಧವರು ಈ ರೈತ ಸಮಾವೇಶದಲ್ಲಿ ಭಾಗವಹಿಸಿ, ಕಡಿಮೆ ಖರ್ಚು, ಶ್ರಮ ಬಳಸಿ ಅಧಿಕ ಇಳುವರಿ-ಲಾಭ ಪಡೆಯುವ ಕೃಷಿ-ತಂತ್ರಜ್ಞಾನಗಳ ಮಾಹಿತಿ ಪಡೆಯುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Categories
ರಾಜ್ಯ

ಪಾಪ್‌ಕಾರ್ನ್ ನಲ್ಲಿದೆ ಅಪಾಯಕಾರಿ ಅಂಶ…!

ಪಾಪ್‌ಕಾರ್ನ್ ನಲ್ಲಿದೆ ಅಪಾಯಕಾರಿ ಅಂಶ…!
– ಪಾಪ್‌ಕಾರ್ನ್ ತಿನ್ನುವುದರಿಂದ ಶ್ವಾಸಕೋಶಕ್ಕೆ ಹಾನಿ
– ಸಂಶೋಧನೆ ಮಾಹಿತಿ

NAMMUR EXPRESS NEWS
ವೈದ್ಯಕೀಯವಾಗಿ ಬ್ರಾಂಕಿಯೋಲಿಟಿಸ್‌ ಆಬ್ಲಿಟೆರನ್ಸ್ ಎಂದು ಕರೆಯಲ್ಪಡುವ ಪಾಪ್‌ಕಾರ್ನ್ ಶ್ವಾಸಕೋಶದ ಕಾಯಿಲೆಯ ಅಪರೂಪದ ರೂಪವಾಗಿದ್ದು, ಇದು ಶ್ವಾಸಕೋಶದಲ್ಲಿ ಕಲೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಇದು ನಿಮಗೆ ಉಸಿರಾಡಲು ತುಂಬಾ ಕಷ್ಟವಾಗುತ್ತದೆ ಎನ್ನಲಾಗಿದೆ. ಈ ನಡುವೆ ತಜ್ಞರ ಪ್ರಕಾರ, ಇದು ಮೈಕ್ರೋವೇವ್ ಪಾಸ್ಕಾರ್ನ್ ಪರಿಮಳಗಳಲ್ಲಿ ಕಂಡುಬರುವ ಕೃತಕ ಬೆಣ್ಣೆ-ರುಚಿಯ ಘಟಕಾಂಶವಾದ ಡಯಾಸಿಟೈಲ್ನಂತಹ ಹಾನಿಕಾರಕ ರಾಸಾಯನಿಕಗಳೊಂದಿಗೆ ಸಂಬಂಧ ಹೊಂದಿದೆ. ಆಹಾರ ಮತ್ತು ಔಷಧ ಆಡಳಿತವು ಡಯಾಸಿಟೈಲ್ ತಿನ್ನಲು ಸುರಕ್ಷಿತವೆಂದು ಪರಿಗಣಿಸಿದರೂ, ಉಸಿರಾಡುವಾಗ ಇದು ಅತ್ಯಂತ ಅಪಾಯಕಾರಿಯಾಗಿ ಕೆಲಸ ಮಾಡುತ್ತದೆಯಂತೆ. ಅಂದ ಹಾಗೇ ಡಯಾಸಿಟೈಲ್ ರುಚಿಯ ಕಾಫಿ, ಪ್ಯಾಕ್ ಮಾಡಿದ ಹಣ್ಣಿನ ಪಾನೀಯಗಳು, ಕ್ಯಾರಮೆಲ್ ಮತ್ತು ಅಂಗಡಿಯಲ್ಲಿ ಖರೀದಿಸಿದ ಕೆಲವು ಡೈರಿ ಉತ್ಪನ್ನಗಳಲ್ಲಿಯೂ ಕಂಡುಬರುತ್ತದೆ.

ಶ್ವಾಸಕೋಶವು ಅಪರೂಪದ ಕಾಯಿಲೆಯಾಗಿದ್ದರೂ, ಇದು ಯಾರಿಗಾದರೂ ಸಂಭವಿಸಬಹುದು ಏಕೆಂದರೆ ಇದು ಸೋಂಕಿನಿಂದ ಅಥವಾ ಕೆಲವು ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಶ್ವಾಸಕೋಶದ ಕಸಿಗೆ ಒಳಗಾದ ಜನರಲ್ಲಿ ಬ್ರಾಂಕಿಯೋಲಿಟಿಸ್ ಆಬ್ಲಿಟೇರನ್ ಗಳು ಒಡ್ಡಿಕೊಳ್ಳದೆಯೂ ಸಂಭವಿಸಬಹುದು ಎನ್ನಲಾಗಿದೆ. ಶ್ವಾಸಕೋಶ ಕಸಿ ಮಾಡಿಸಿಕೊಂಡವರಲ್ಲಿ ಸುಮಾರು 50 ಪ್ರತಿಶತದಷ್ಟು ಜನರು ತಮ್ಮ ಕಾರ್ಯವಿಧಾನದ ಐದು ವರ್ಷಗಳಲ್ಲಿ ಬ್ರಾಂಕಿಯೋಲಿಟಿಸ್‌ ಒಬ್ಲಿಟೆರನ್ಸ್ ಸಿಂಡೋಮ್ ಅನ್ನು ಅಭಿವೃದ್ಧಿಪಡಿಸಬಹುದು ಎಂದು ವೈದ್ಯರು ಹೇಳುತ್ತಾರೆ. ದಾನಿ ಮಜ್ಜೆಯನ್ನು ಸ್ವೀಕರಿಸುವವರಲ್ಲಿ ಸುಮಾರು 10 ಪ್ರತಿಶತದಷ್ಟು ಜನರು ಐದು ವರ್ಷಗಳಲ್ಲಿ ಬ್ರಾಂಕಿಯೋಲಿಟಿಸ್‌ ಒಬ್ಲಿಟೆರನ್ಸ್ ಸಿಂಡೋಮ್ ಅನ್ನು ಸಹ ಅಭಿವೃದ್ಧಿಪಡಿಸಬಹುದು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಆಗುಂಬೆ ಸರ್ಕಲ್ ನಲ್ಲಿ ಭೀಕರ ಅಪಘಾತ.!

ತೀರ್ಥಹಳ್ಳಿಯ ಆಗುಂಬೆ ಸರ್ಕಲ್ ನಲ್ಲಿ ಭೀಕರ ಅಪಘಾತ.!
– ಗ್ಯಾಸ್ ಲಾರಿ ಹಾಗೂ ಟ್ರ್ಯಾಕ್ಟರ್ ನಡುವೆ ಸಿಲುಕಿಕೊಂಡ ಬೈಕ್ ಸವಾರ
– ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಸರ್ಕಲ್ ಪೂರ್ವಿಕ ಮೊಬೈಲ್ಸ್ ಎದುರು ಬುಧುವಾರ ಮಧ್ಯಾಹ್ನ ಗ್ಯಾಸ್ ಲಾರಿ ಹಾಗೂ ಸೌದೆ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತವಾಗಿದ್ದು, ಮಧ್ಯದಲ್ಲಿ ಬೈಕ್ ಸವಾರನು ಸಿಕ್ಕಿಹಾಕಿಕೊಂಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೊತ್ತಿದ್ದರೂ ಚರ್ಚ್ ರೋಡಿನಿಂದ ಆಗುಂಬೆ ಸರ್ಕಲ್ ಬಳಿ ಒನ್ ವೇ ರೂಟ್ ನಲ್ಲಿ ಹೊರಟ ಟ್ರ್ಯಾಕ್ಟರ್ ಗೆ ಆಗುಂಬೆ ಸರ್ಕಲ್ ಕಡೆಯಿಂದ ಗ್ಯಾಸ್ ಲಾರಿಯು ಡಿಕ್ಕಿ ಹೊಡೆದಿದ್ದು ಮಧ್ಯದಲ್ಲಿ ಬೈಕ್ ಸವಾರ ನೊಬ್ಬನು ಸಿಕ್ಕಿಹಾಕಿಕೊಂಡು ಭೀಕರ ಅಪಘಾತದಲ್ಲಿ ಬೈಕ್ ಸವಾರ ಪಾರಾಗಿದ್ದಾನೆ. ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯವಾಗದೆ ಬೈಕಿಗೆ ಸಣ್ಣಪುಟ್ಟ ಹಾನಿಯಾಗಿದೆ.

ಟ್ರಾಫಿಕ್ ನಿಯಮವನ್ನು ಪಾಲಿಸದ ಕಾರಣ ರಾಂಗ್ ಸೈಡ್ ನಲ್ಲಿ ಬಂದಿದ್ದೆ ಈ ಅಪಘಾತಕ್ಕೆ ಕಾರಣವಾಗಿದೆ. ಇಂತಹ ಅಪಘಾತ ಮರುಕಳಿಸದಂತೆ ವಾಹನ ಸವಾರರು ವಾಹನ ಚಾಲನೆ ಮಾಡಬೇಕು ಹಾಗೂ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಬೇಕು ಎಂದು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಕಳಕಳಿ ಮಾಡಿದೆ.

Categories
ಕರಾವಳಿ ಕಾರ್ಕಳ ಶಿಕ್ಷಣ

ಜೆ.ಇ.ಇ ಮೈನ್ಸ್‌ ಫಲಿತಾಂಶದಲ್ಲೂ ಕ್ರಿಯೇಟಿವ್ ಕಾಲೇಜು ಮೇಲುಗೈ!

ಜೆ.ಇ.ಇ ಮೈನ್ಸ್‌ ಫಲಿತಾಂಶದಲ್ಲೂ ಕ್ರಿಯೇಟಿವ್ ಕಾಲೇಜು ಮೇಲುಗೈ!
– 26 ವಿದ್ಯಾರ್ಥಿಗಳಿಗೆ ಶೇ.95ಕ್ಕೂ ಅಧಿಕ ಸಾಧನೆ, 81 ವಿದ್ಯಾರ್ಥಿಗಳು ಶೇ.90ರಷ್ಟು ಸಾಧನೆ
– ಉಡುಪಿ, ಹಾಸನದಲ್ಲೂ ಅತ್ಯುತ್ತಮ ಫಲಿತಾಂಶ

NAMMUR EXPRESS NEWS
ಕಾರ್ಕಳ: ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ ನಡೆಸುವ ಜೆ.ಇ.ಇ ಮೈನ್ಸ್‌ ನ ಮೊದಲ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್‌ ಕಾಲೇಜಿನ 26 ವಿದ್ಯಾರ್ಥಿಗಳು 95 ಪರ್ಸಂಟೈಲ್‌ ಗಿಂತ ಅಧಿಕ ಅಂಕಗಳಿಸಿದ್ದಾರೆ 81 ವಿದ್ಯಾರ್ಥಿಗಳು 90 ಪರ್ಸಂಟೈಲ್‌ ಗಿಂತ ಅಧಿಕ ಅಂಕ ಗಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳು :

ವಿದ್ಯಾರ್ಥಿಗಳಾದ ಪ್ರಣವ್‌ ಟಿ. ಎಂ ಶೇ.98.63, ಯುವರಾಜ್‌ ಬಿ. ಕೆ ಶೇ.98.28, ಸತೀಶಗೌಡ ಶೇ.97.91, ಅನನ್ಯ ಡಿ. ಜೆ ಗೌಡ ಶೇ.97.73, ಕಾರ್ತಿಕ್‌ ಎ.ಎಸ್‌ ಶೇ. 97.44, ಕದಂಬ ಸಿದ್ದಾಂತ್‌. ಎಸ್‌ ಶೇ.97.34, ಸುಜಿತ್‌ ಡಿ.ಕೆ ಶೇ.97.23 ಹಾಗೂ ಪ್ರೇಮ್‌ಸಾಗರ್‌ ಪಾಟೀಲ್‌ ಶೇ.97.1615 ಪರ್ಸಂಟೈಲ್‌ ಗಳಿಸಿದ್ದಾರೆ. ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಜೆ ಇ ಇ ಸಂಯೋಜಕರಾದ ನಂದೀಶ್‌ ಹೆಚ್‌. ಬಿ ಶ್ಲಾಘಿಸಿ ಅಭಿನಂದಿಸಿದ್ದಾರೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಉಡುಪಿ, ಹಾಸನದಲ್ಲೂ ಅತ್ಯುತ್ತಮ ಫಲಿತಾಂಶ ದಾಖಲಾಗಿದೆ.

Categories
ಅಡಿಕೆ-ದರ

ಇಂದಿನ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ

ಅಡಿಕೆ ದರ 
14-02-2024
ಗೊರಬಲು 14119 36099
ಬೆಟ್ಟೆ 42609 54569
ರಾಶಿ 28200 48399
ಸರಕು 14119 36099
Nammur Express

Categories
ಬೆಂಗಳೂರು ರಾಜ್ಯ

ವಾಹನಗಳಿಗೆ ಎಚ್.ಎಸ್. ಆರ್.ಪಿ ನಂಬರ್ ಪ್ಲೇಟ್ ದಿನಾಂಕ 3 ತಿಂಗಳು ವಿಸ್ತರಣೆ!

ವಾಹನಗಳಿಗೆ ಎಚ್.ಎಸ್. ಆರ್.ಪಿ ನಂಬರ್ ಪ್ಲೇಟ್ ದಿನಾಂಕ 3 ತಿಂಗಳು ವಿಸ್ತರಣೆ!
– ಅಧಿವೇಶನದಲ್ಲಿ ಸಾರಿಗೆ ಸಚಿವರ ಹೇಳಿಕೆ
– ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ ಎಫೆಕ್ಟ್

NAMMUR EXPRESS NEWS
ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಅವಕಾಶವನ್ನು ರಾಜ್ಯದಲ್ಲಿ ಇನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‌ಗೆ ಚಾಲನೆ ನೀಡಿದರು. ಸದಸ್ಯ ಮಧು.ಜಿ ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆದೇಶ ರಾಜ್ಯದಲ್ಲಿ ಇದುವರೆಗೂ 18 ಲಕ್ಷ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ನಂಬ‌ರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದುನಡೆಯಬೇಕಾಗಿರುವುದರಿಂದ ಮೂರು ತಿಂಗಳು ವಿಸ್ತರಣೆಯಾಗಲಿದೆ ಎಂದು ಹೇಳಿದರು. ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ.

ವಾಹನಗಳನ್ನು ಅಪರಾಧ ಎಸಗುವುದನ್ನು ತಡೆಗಟ್ಟುವುದರ ಜೊತೆಗೆ ರಸ್ತೆಯ ಮೇಲೆ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಯೋಜನೆ ಸಂಪೂರ್ಣವಾಗಿ ಪಾರದರ್ಶಕ ಮತ್ತು ಅಧಿಕೃತ ವೆಬ್‌ಸೈಟ್‌ ಸೈಟ್ ಆನ್‌ಲೈನ್ ಮೂಲಕವೇ ವಾಹನ ಸವಾರರು ನೋಂದಣಿ ಮಾಡಿಕೊಳ್ಳಬಹುದೆಂದು ಸಚಿವ ರಾಮಲಿಂಗಾರೆಡ್ಡಿ. ಯಾವುದೇ ಕಾರಣಕ್ಕಾಗಿ ವಾಹನ ಸವಾರರು, ಆರ್‌ಟಿಒ ಕಚೇರಿ ಇಲ್ಲವೇ ಬೇರೊಂದು ಕಡೆ ನಗದುಕೊಟ್ಟು ನಂಬ‌ರ್ ಪ್ಲೇಟ್ ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಮೋಸ ಮಾಡಿದಲ್ಲಿ ಕಟ್ಟಿನ ಕ್ರಮ ಇದು ನಗದು ರಹಿತ ಮತ್ತು ಆನ್‌ಲೈನ್ ಮೂಲಕ ನಡೆಯುವ ಪ್ರಕ್ರಿಯೆಯಾಗಿದೆ. ಒಂದು ವೇಳೆ ಯಾರಾದರೂ ನಕಲಿ ವೆಬ್ ಸೈಟ್ ನೋಂದಣಿ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟರು.

ನಮ್ಮೂರ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು

ನಮ್ಮೂರ್ ಎಕ್ಸ್ ಪ್ರೆಸ್ ಈ ವಂಚನೆ ಬಗ್ಗೆ ವಿಶೇಷ ವರದಿ ಪ್ರಕಟ ಮಾಡಿತ್ತು. ಇದು ರಾಜ್ಯದಲ್ಲಿ ಗಮನ ಸೆಳೆದಿತ್ತು.

Categories
ಉಡುಪಿ

ಉಡುಪಿ ಕುಟುಂಬ ನಾಲ್ವರ ಕೊಲೆ: ದೋಷಾರೋಪ ಪಟ್ಟಿ ಸಲ್ಲಿಕೆ

ಉಡುಪಿ ಕುಟುಂಬ ನಾಲ್ವರ ಕೊಲೆ: ದೋಷಾರೋಪ ಪಟ್ಟಿ ಸಲ್ಲಿಕೆ
– ದೋಷ ಆರೋಪ ಪಟ್ಟಿಯಲ್ಲಿ ಏನೇನಿದೆ..?
– ಹುಡುಗಿ ಹಿಂದೆ ಬಿದ್ದು ಐವರನ್ನು ಕೊಂದಿದ್ದ ಹಂತಕ!

NAMMUR EXPRESS NEWS
ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಸೋಮವಾರ ಇಲ್ಲಿನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ತನಿಖಾ ತಂಡವು 90 ದಿನಗಳ ಅವಧಿಯೊಳಗೆ ಆರೋಪಪಟ್ಟಿ ಸಲ್ಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಏಕೈಕ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಕಳೆದ ವರ್ಷ ನವೆಂಬರ್ 12 ರಂದು ಉಡುಪಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಮನೆಯೊಳಗೆ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದೆ.

ಖಾಸಗಿ ಏರ್‌ಲೈನ್ ಕಂಪನಿಯೊಂದರ ಕ್ಯಾಬಿನ್ ಸಿಬ್ಬಂದಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದ ಚೌಗುಲೆ, ಸಂತ್ರಸ್ತರಲ್ಲಿ ಒಬ್ಬರಾದ ಅಯಾಜ್ ಮೊಹಮ್ಮದ್ (21) ಎಂಬ ಟ್ರೈನಿ ಗಗನಸಖಿ, ಈ ಹಿಂದೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಪೊಲೀಸರು ಆತನ “ಸ್ವಾಮ್ಯಶೀಲತೆ” ಮತ್ತು “ಅವರ ಸಂಬಂಧದಲ್ಲಿನ ಸಮಸ್ಯೆಗಳು” ಆಕೆಯ ಮೇಲೆ ದಾಳಿ ಮಾಡಿದ ಆರೋಪದ ಉದ್ದೇಶವೆಂದು ಉಲ್ಲೇಖಿಸಿದ್ದಾರೆ. ಐನಾಜ್ ಅವರ ತಾಯಿ ಹಸೀನಾ (47), ಅಕ್ಕ ಅಫ್ಘಾನ್ (23) ಮತ್ತು ಸಹೋದರ ಅಸೀಮ್ (14) ಮೃತ ದುರ್ದೈವಿಗಳು. ಚೌಗುಲೆ ಐನಾಜ್ ಮೇಲೆ ದಾಳಿ ಮಾಡಲು ಬಂದಾಗ ಅವರು ಮನೆಯಲ್ಲಿದ್ದರು ಮತ್ತು ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸೀನಾಳ ಅತ್ತೆ ಹಕೀರಾ ಅವರ ಮೇಲೂ ಹಲ್ಲೆ ನಡೆದಿದ್ದು, ಶೌಚಾಲಯಕ್ಕೆ ಬೀಗ ಹಾಕಿಕೊಂಡು ಬದುಕುಳಿದಿದ್ದಾರೆ. ಅಪರಾಧ ನಡೆದ ಎರಡು ದಿನಗಳ ನಂತರ ಚೌಗುಲೆಯನ್ನು ಬಂಧಿಸಲಾಗಿದ್ದು, ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.ನ್ಯಾಯಾಲಯವು ಈ ಹಿಂದೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಈ ತಿಂಗಳ ಆರಂಭದಲ್ಲಿ ನಿಧನರಾದ ಅವರ ಸಹೋದರನ ಅಂತಿಮ ವಿಧಿಗಳಿಗೆ ಹಾಜರಾಗಲು ಪೆರೋಲ್‌ಗಾಗಿ ಇತ್ತೀಚಿನ ಅರ್ಜಿಯನ್ನು ತಿರಸ್ಕರಿಸಿತ್ತು.

Categories
ಉಡುಪಿ ಕರಾವಳಿ ಕಾರ್ಕಳ ಬೆಂಗಳೂರು ಮಂಗಳೂರು

ಸದನದಲ್ಲಿ ಪರಶುರಾಮ ಮೂರ್ತಿ ಅಕ್ರಮ ಕೇಸ್ ಸದ್ದು!

ಸದನದಲ್ಲಿ ಪರಶುರಾಮ ಮೂರ್ತಿ ಅಕ್ರಮ ಕೇಸ್ ಸದ್ದು!
– ಕಾರ್ಕಳದಲ್ಲಿ ಪರಶುರಾಮ ವಿಗ್ರಹ ದೋಷ ಪೂರಿತ ವಿವಾದ
– ಸದನದಲ್ಲಿ ಭಾರೀ ಚರ್ಚೆ: ಏನಿದು ವಿವಾದ..?!

NAMMUR EXPRESS NEWS
ಬೆಂಗಳೂರು: ಕಾರ್ಕಳದಲ್ಲಿ ಪರಶುರಾಮ ವಿಗ್ರಹ ದೋಷ ಪೂರಿತವಾಗಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್ ಪ್ರಸ್ತಾಪ ಮಾಡಿದರು. ಅಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಹಿಂದಿನ ಸರ್ಕಾರದಲ್ಲಾದ ಎಡವಟ್ಟನ್ನು ಸರ್ಕಾರ ಬಯಲು ಮಾಡಿದೆ ಎಂದರು. ಪ್ರತಿಮೆ ನಿರ್ಮಾಣದಲ್ಲಿನ ಅಕ್ರಮದ ಬಗ್ಗೆ ಆ ಊರಿನ ಯುವಕರು ದೂರು ನೀಡಿದ್ದರು. ಪ್ರತಿಮೆ ಅರ್ಧ ಭಾಗ ಕಂಚು, ಇನ್ನರ್ಧ ಭಾಗ ಫೈಬರ್‌ನದ್ದಾಗಿತ್ತು.

ಪರಶುರಾಮನ ಮೇಲೆ ಆ ಊರಿನ ಭಾಗದ ಜನರಿಗೆ ನಂಬಿಕೆ ಇದೆ. ಆದರೆ ದೇವರ ಹೆಸರು ಹೇಳಿ ಹಣ ಕಬಳಿಸುವ ಕೆಲಸ ಆಗಿದೆ ಎಂದು ಆರೋಪಿಸಿದರು ಈ ವೇಳೆ ಬಿಜೆಪಿ ಸದಸ್ಯರು ತನಿಖೆ ಮಾಡಿ, ಪೇಪ‌ರ್ ನಲ್ಲಿರೋದನ್ನ ಹೇಳಬೇಡಿ ಎಂದರು. ಇದು ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲ, ಹಿಂದಿನ ಸರ್ಕಾರದಲ್ಲಿ ಆಗಿದ್ದು. ನ್ಯಾ.ನಾಗಮೋಹನ ದಾಸ್ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಅವರಿಗೆ ದೂರು ನೀಡಿದ್ದರು ಎಂದು ತಂಗಡಗಿ ಹೇಳಿದಾಗ ಪ್ರಕರಣದ ಬಗ್ಗೆ ತನಿಖೆ ಮಾಡಿ ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು. ಹೀಗೆ ವಾಕ್ ಸಮರದ ಮೂಲಕ ಸದಸ್ಯರು ಆಕ್ರೋಶ ಹೊರಹಾಕಿದರು.

Categories
ತೀರ್ಥಹಳ್ಳಿ

ಕಸದ ಅವ್ಯವಸ್ಥೆ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮೌನ!

ಕಸದ ಅವ್ಯವಸ್ಥೆ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮೌನ!
– ಸಂತೆ ಮುಗಿದು ಎರಡು ದಿನ ಕಳೆದರೂ ಕಸದ ರಾಶಿ
– ರೋಗ ಹರಡುವ ಭೀತಿ: ಸಾರ್ವಜನಿಕರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ : ಸಮರ್ಪಕವಾದ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮೇಲೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತೆ ಮುಗಿದು ಎರಡು ದಿನ ಕಳೆದರೂ ಕೂಡ ಕಸದ ರಾಶಿಗಳು ಅಲ್ಲಲ್ಲೇ ಬಿದ್ದಿದ್ದು, ರಸ್ತೆಯಲ್ಲಿ ಓಡಾಡುವ ಪಾದಚಾರಿಗಳಿಗೆ ಸಂಪೂರ್ಣ ಕೊಳಕುಮಯ ಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ಓಡಾಡಲು ಅಸಹ್ಯಪಡುವಂತಾಗಿದೆ. ರಾಜ್ಯದಲ್ಲಿ ಈಗಾಗಲೇ ಹಲವು ವೈರಸ್ ರೋಗಗಳು ಉಲ್ಬಣಗೊಂಡಿದ್ದು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚಿರುವಾಗ ಸಂತೆ ಮುಗಿದು ಎರಡು ದಿನ ಕಳೆದರೂ ನಿರ್ವಹಣೆ ಇಲ್ಲದ ರಸ್ತೆಯಲ್ಲಿ ಓಡಾಡುವಾಗ ಮಕ್ಕಳಿಗೆ, ಸಾರ್ವಜನಿಕರಿಗೆ ರೋಗಗಳ ಭೀತಿ ಎದುರಾಗಿದೆ.

ಬರೀ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೆ ಅಷ್ಟೇ ಸಾಲದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿಯನ್ನು ಕೂಡ ನಿರ್ಲಕ್ಷ್ಯ ವಹಿಸದೆ ನಿರ್ವಹಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಸಂತೆ ಮುಗಿದ ಮರು ದಿನವೇ ಅಂದರೆ ಸಂತೆ ನಡೆದ ಜಾಗದಲ್ಲಿ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಪ್ರಮುಖ ಭಾಗಗಳಲ್ಲಿ ಕಸದ ಅವ್ಯವಸ್ಥೆ ಹೆಚ್ಚಾಗಿದ್ದು ಜನರೂ ಕೂಡ ತಮ್ಮ ಜವಾಬ್ದಾರಿ ಮೆರೆಯಬೇಕಿದೆ.

Categories
ಹೊಸನಗರ

ಹೊಸ ನಗರ ತಾಲೂಕಿಗೆ ಬರುತ್ತೆ ಮತ್ತಷ್ಟು ಸರ್ಕಾರಿ ಬಸ್

ಹೊಸ ನಗರ ತಾಲೂಕಿಗೆ ಬರುತ್ತೆ ಮತ್ತಷ್ಟು ಸರ್ಕಾರಿ ಬಸ್
– ಮಣಿಪಾಲಕ್ಕೂ ನೇರ ಬಸ್ ವ್ಯವಸ್ಥೆ
– ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

NAMMUR EXPRESS NEWS
ಹೊಸನಗರ: ತಾಲೂಕಿನಲ್ಲಿ ಕೆಂಪು ಬಸ್ಸುಗಳ ಕೊರತೆ ಇದೆ. ಈ ಬಗ್ಗೆ ಸಾಕಷ್ಟು ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಆ ಕೊರತೆಯನ್ನು ನೀಗಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಷ ಬೇಳೂರು ಭರವಸೆ ನೀಡಿದರು. ಪಟ್ಟಣದ ಈಡಿಗರ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ಯೋಜನೆಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ 40 ಸರ್ಕಾರಿ ಬಸ್ಸುಗಳಿಗಾಗಿ ಬೇಡಿಕೆ ಸಲ್ಲಿಸಿದ್ದೇನೆ. ಸರ್ಕಾರ 40 ಬಸ್ಸುಗಳನ್ನು ನೀಡುವ ಸಾಧ್ಯತೆ ಇದ್ದು ಅದರಲ್ಲಿ 20 ಬಸ್ಸುಗಳನ್ನು ಹೊಸನಗರಕ್ಕೆ ನೀಡಲಾಗುವುದು ಎಂದರು. ಅಲ್ಲದೇ ಈ ಭಾಗದಲ್ಲಿ ಮಣಿಪಾಲ್ ಗೆ ತೆರಳುವವರು ಸಾಕಷ್ಟು ಜನರಿದ್ದು ಅಲ್ಲಿಗೂ ಶೀಘ್ರ ಬಸ್ಸಿಗೆ ಅವಕಾಶ ನೀಡಲಾಗುವುದು ಎಂದರು. ಹೊಸನಗರ ತಾಲೂಕಿನ ವಿವಿಧ ಅಭಿವೃದ್ಧಿಗಾಗಿ ರೂ.280 ಕೋಟಿ ಅನುದಾನ ತರಲಾಗಿದೆ. ಮುಂದಿನದಿನದಲ್ಲಿ ತಾಲೂಕಿನ ಯಾವುದೇ ಭಾಗಕ್ಕು ಕೊರತೆ ಆಗದಂತೆ ಕುಡಿಯುವ ನೀರಿನ ಯೋಜನೆ ಕಲ್ಪಿಸಲಾಗುವುದು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿಪಕ್ಷಗಳು ಟೀಕಿಸುತ್ತಿವೆ.

ಆದರೆ ರಾಜ್ಯದ ಜನ ಜನರು ಗ್ಯಾರಂಟಿಯಿಂದ ಸಂತಸರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಭಾಗ್ಯಲಕ್ಷ್ಮೀ ಯೋಜನೆ ತಂದಾಗ ಚನ್ನಾಗಿತ್ತಾ ಎಂದು ಪ್ರಶ್ನಿಸಿದ ಅವರು, ಬಡವರ ಪೂರಕ ಯೋಜನೆಗಳು ಏನೇ ಬರಲಿ ಯಾರೇ ತರಲಿ ಅದನ್ನು ಸ್ವಾಗತಿಸುವ ಮನೋಭಾವ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು. ಈ ವೇಳೆ ತಹಶೀಲ್ದಾರ್ ರಶ್ಮೀ ಹಾಲೇಶ್, ತಾಪಂ‌ ಇಒ ನರೇಂದ್ರಕುಮಾರ್, ಬಿಇಒ ಹೆಚ್.ಆರ್.ಕೃಷ್ಷಮೂರ್ತಿ, ಸಿಪಿಐ ಗುರಣ್ಷ ಹೆಬ್ಬಾಳ್, ಗ್ರಾಪಂ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಸಂಚಾಲಕ ಚಿದಂಬರ್ ಮಾರುತಿಪುರ, ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಭಾಗವಹಿಸಿದ್ದರು.