Categories
ಬೆಂಗಳೂರು ರಾಜ್ಯ

ಶಾಲಾ-ಕಾಲೇಜು ಗಳಲ್ಲಿ ‘ಧಾರ್ಮಿಕ ಹಬ್ಬ’ಗಳನ್ನು ಆಚರಿಸುವಂತಿಲ್ಲ

ಶಾಲಾ-ಕಾಲೇಜು ಗಳಲ್ಲಿ ‘ಧಾರ್ಮಿಕ ಹಬ್ಬ’ಗಳನ್ನು ಆಚರಿಸುವಂತಿಲ್ಲ
•ರಾಜ್ಯ ಸರ್ಕಾರ ಮಹತ್ವದ ಆದೇಶ
• ಒಂದು ವೇಳೆ ಆಚರಿಸಿದರೆ ಪ್ರಾಂಶುಪಾಲರು, ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ

NAMMUR EXPRESS NEWS
ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ನಿಗದಿತ ರಾಷ್ಟ್ರೀಯ ಹಬ್ಬ, ನಾಡಹಬ್ಬವನ್ನು ಮಾತ್ರವೇ ಆಚರಿಸಬೇಕು. ಅದರ ಹೊರತಾಗಿ ಬೇರೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡುವಂತಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ಖಡಕ್ ಆದೇಶ ಮಾಡಿದೆ. ಈ ಸಂಬಂಧ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಸುತ್ತೋಲೆ ಹೊರಡಿಸಲಾಗಿದೆ. ಅದರಲ್ಲಿ ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡುವಂತಿಲ್ಲ. ನಿಗದಿತ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರವೇ ಆಚರಿಸುವಂತೆ ತಿಳಿಸಲಾಗಿದೆ.

ಈ ಸುತ್ತೋಲೆಯನ್ನು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಅವರ ಸೂಚನೆಯ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಘ ಹೊರಡಿಸಿದೆ. ಆ ಸುತ್ತೋಲೆಯಲ್ಲಿ 10 ಅನುಮೋದಿತ ರಾಷ್ಟ್ರೀಯ ಹಬ್ಬಗಳನ್ನು ಮಾತ್ರವೇ ಶಾಲೆ, ಕಾಲೇಜುಗಳಲ್ಲಿ ಆಚರಿಸಬೇಕು. ಧಾರ್ಮಿಕ ಹಬ್ಬ ಆಚರಿಸದಂತೆ ಸೂಚಿಸಲಾಗಿದೆ.

ಒಂದು ವೇಳೆ ಈ ಆದೇಶ ಉಲ್ಲಂಘಿಸಿ ಧಾರ್ಮಿಕ ಹಬ್ಬಗಳನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸಿದ್ರೇ ಪ್ರಾಂಶುಪಾಲರು, ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಅಂದಹಾಗೇ ಕ್ರಿಸ್ಮಸ್, ಈದ್ ಮಿಲಾದ್, ಸಂಕ್ರಾಂತಿ, ಯುಗಾದಿ, ರಂಜಾನ್ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬಗಳನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸುವಂತಿಲ್ಲ ಎಂಬುದಾಗಿ ಸುತ್ತೋಲೆಯ ಆದೇಶದಲ್ಲಿ ತಿಳಿಸಲಾಗಿದೆ.

Categories
ಶಿವಮೊಗ್ಗ ಸಿನಿಮಾ

ಪ್ರೇಕ್ಷಕನ ಮನ ಗೆಲ್ಲಲು ಶಾಖಾಹಾರಿ ಸಿನಿಮಾ ಸಜ್ಜು

ಪ್ರೇಕ್ಷಕನ ಮನ ಗೆಲ್ಲಲು ಶಾಖಾಹಾರಿ ಸಿನಿಮಾ ಸಜ್ಜು
– ಫೆ.16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ
– ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಣ
– ಚಂದನ ವನದ ಹೊಸ ಭರವಸೆ
– ಪ್ರಮುಖ ಪಾತ್ರಗಳಲ್ಲಿ ಶಿವಮೊಗ್ಗ, ತೀರ್ಥಹಳ್ಳಿ ಕಲಾವಿದರು!

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದವರೇ ಪ್ರಮುಖವಾಗಿರುವ ಹೊಸ ಭರವಸೆ ಮೂಡಿಸಿರುವ ಶಾಖಾಹಾರಿ ಸಿನಿಮಾ ಫೆ.16ರಂದು ತೆರೆ ಕಾಣಲಿದೆ. ಶಿವಮೊಗ್ಗದವರೇ ಆದ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಮಾಹಿತಿ ನೀಡಿ, ಶಾಖಾಹಾರಿ ಚಿತ್ರವು ಒಂದು ಭರವಸೆ ಮೂಡಿಸುವ ಚಿತ್ರವಾಗಿದೆ. ಶಿವಮೊಗ್ಗದವರೇ ಆದ ರಂಗ ಕಲಾವಿದ ಎಸ್.ಆರ್. ಗಿರೀಶ್‍ರವರ ನಾಟಕದ ತುಣುಕೊಂದನ್ನು ಇಟ್ಟುಕೊಂಡು ಅದನ್ನು ವಿಸ್ತರಿಸಿ ಅದಕ್ಕೊಂದು ರೂಪ ಕೊಟ್ಟು, ಕೌತುಕ ಸನ್ನಿವೇಶಗಳನ್ನು ಸೃಷ್ಠಿಸಿ ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ. ಫೆ.16ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಇದೊಂದು ತಂಡದ ಶ್ರಮವಾಗಿದೆ. ಸಿನಿಮಾ ತಯಾರಾಗುವವರೆಗು ಅದೊಂದು ಆರ್ಟ್ ಆಮೇಲೆ ಅದು ಪ್ರಾಡಕ್ಟ್ ನಂತರ ಮಾರ್ಕೇಟಿಂಗ್ ಹೀಗೆ ಎಲ್ಲಾ ವಿಷಯಗಳು ಇದರಲ್ಲಿ ನಡೆಯುತ್ತವೆ.

ಉತ್ತಮ ಹಾಡುಗಳು ಒಳ್ಳೆಯ ಪೋಟೋಗ್ರಫಿ ತಂತ್ರಜ್ಞಾನ ಈ ಚಿತ್ರದಲ್ಲಿ ಬಳಕೆಯಾಗಿದೆ. ಈ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿರುವವರು ಶಿವಮೊಗ್ಗದವರು ನಮ್ಮೂರಿನವರು ಎಂಬ ಹೆಮ್ಮೆ ನಮ್ಮದು ಎಂದರು. ಮಲೆನಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನಗಳ ಸುತ್ತ ಈ ಚಿತ್ರ ಸಾಗಿದೆ. ಕುತೂಹಲವಿದೆ ಒಳ್ಳೆಯ ಹಾಡುಗಳು ಇವೆ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆಯಂತವರು ಚಿತ್ರದಲ್ಲಿ ನಟಿಸಿದ್ದಾರೆ. ಕತೆಯೇ ಇದರ ನಾಯಕ. ಈ ಇಬ್ಬರು ಮಹಾ ನಟರ ಜೊತೆಗೆ ಸುಜಯ್ ಶಾಸ್ತ್ರಿ ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷಗೋಭಟ್ಟ, ನಿಧಿಹೆಗಡೆ ಮುಂತಾದವರು ಅಭಿನಯಿಸಿದ್ದಾರೆ ಎಂದರು.

ಇಬ್ಬರು ನಿರ್ಮಾಪಕರು

ನಿರ್ಮಾಪಕ ರಾಜೇಶ್ ಕೀಳಂಬಿ ಮಾತನಾಡಿ, ನನ್ನ ಜೊತೆಗೆ ರಂಜಿನಿ ಪ್ರಸನ್ನ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಮಾಡುವುದೇ ಒಂದು ಅವಿಸ್ಮರಣೀಯ ಕ್ಷಣವಾಗಿದೆ. ಸಿನಿಮಾ ವೀಕ್ಷಕನಾದ ನಾನು ಚಿತ್ರಕ್ಕೆ ಬಂಡವಾಳ ಹೂಡುವಾಗ ಸಾಕಷ್ಟು ಯೋಜನೆ ಮಾಡಿದ್ದೇನೆ ಎಂದರು. ಪ್ರಮುಖವಾಗಿ ಬೆಂಗಳೂರು ಕೇಂದ್ರಿಕೃತವಾಗಿರುವ ಈ ಸಿನಿಮಾ ಉದ್ಯಮ ಬೇರೆ ಬೇರೆ ಜಿಲ್ಲೆಗಳತ್ತ ಸಾಗಬೇಕಾಗಿದೆ. ಶಿವಮೊಗ್ಗದಲ್ಲಿಯೂ ಸಹ ಅನೇಕ ಯುವಕರು ಸಿನಿಮಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹಾಗಾಗಿ ಶಿವಮೊಗ್ಗವು ಕೂಡ ಸಿನಿಮಾದ ಬ್ರ್ಯಾಂಚ್ ಆಫೀಸ್ ತರಹ ಹೆಸರಾಗಬೇಕು, ಹಲವರಿಗೆ ಉದ್ಯೋಗ ಸಿಗಬೇಕು, ಪ್ರತಿಭೆಗಳಿಗೆ ಅವಕಾಶವಾಗಬೇಕು. ಇಲ್ಲಿ ಬರಹಗಾರರಿದ್ದಾರೆ, ತಂತ್ರಜ್ಞರು ಇದ್ದಾರೆ, ಬಂಡವಾಳ ಹಾಕುವವರು ಇದ್ದಾರೆ. ಹಾಗಾಗಿ ಶಿವಮೊಗ್ಗ ಒಂದು ಸಿನಿಮಾ ಉದ್ಯಮದ ಕ್ಷೇತ್ರವಾಗಬೇಕು ಎಂದರು.

ನಟ ಗೋಪಾಲದೇಶ ಪಾಂಡೆ, ನಿರ್ಮಾಪಕಿ ರಂಜಿನಿ, ನಿರ್ದೇಶಕ ಸಂದೀಪ್ ತಂದೆ ಶಿವಮೂರ್ತಿ, ವಿನಯ್ ಸೇರಿದಂತೆ ಹಲವರಿದ್ದರು. ತೀರ್ಥಹಳ್ಳಿ ಹಾಗೂ ಮೇಳಿಗೆ ಗ್ರಾಮದಲ್ಲಿ ಚಿತ್ರೀಕರಣಗೊಂಡ ಈ ಸಿನೆಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರು ನಟಿಸಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನರವರು ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಶಾಖಾಹಾರಿ ಚಿತ್ರವನ್ನು ನಿರ್ಮಿಸಿದ್ದಾರೆ. ಫೆಬ್ರವರಿ 16ಕ್ಕೆ ಕರ್ನಾಟಕದಾದ್ಯಂತ ಚಿತ್ರ ತೆರೆಕಾಣಲಿದ್ದು. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸತನದ ಈ ಹೊಸಬರ ಚಿತ್ರಕ್ಕೆ ಚಿತ್ರಕಥೆಯೇ ಜೀವಾಳವಾಗಿದೆ, ಮರ್ಡರ್ ಮಿಸ್ಟರಿ ಸಿನೆಮಾ ಇದಾಗಿದ್ದು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಚಿತ್ರತಂಡದ್ದು.

Categories
ಅಡಿಕೆ-ದರ

ಇಂದಿನ ಅಡಿಕೆ ರೇಟ್

ಇಂದಿನ ಅಡಿಕೆ ರೇಟ್

ಅಡಿಕೆ ದರ 
15-02-2024 
ಸರಕು 45500 83396
ಬೆಟ್ಟೆ 41000 53659
ರಾಶಿ 25099 48299
ಗೊರಬಲು 20019 38000
Nammur Express

 

Categories
ಉಡುಪಿ ಕರಾವಳಿ

ಕರಾವಳಿ ಟಾಪ್ ನ್ಯೂಸ್

–  ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ!
– ಡಾಮರು ಸಾಗಾಟದ ಲಾರಿಯಲ್ಲಿ ಬೆಂಕಿ!
– ಅಕ್ರಮ ಮರಳು ಸಾಗಾಟ ಲಾರಿ ವಶ!

NAMMUR EXPRESS NEWS
ಬಂಟ್ವಾಳ: ಚಲಿಸುತ್ತಿದ್ದ ರೈಲಿನಿಂದಲೇ ನೇತ್ರಾವತಿ ನದಿಗೆ ಹಾರಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ 6.20 ಕ್ಕೆ ನಡೆದಿದೆ. ತುಮಕೂರು ಮೂಲದ ನಯನ್ ಎಂ.ಜಿ.(27) ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು ಎಂದು ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರ ಬ್ಯಾಗ್ ನಲ್ಲಿ ದೊರೆತಿರುವ ಆಧಾರ್ ಕಾರ್ಡ್ ನಲ್ಲಿದ್ದ ಹೆಸರಿನ ಆಧಾರದ ಮೇಲೆ ರೈಲ್ವೆ ಪೊಲೀಸರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿರುವ ಯುವತಿಯು ಬಿ.ಸಿ.ರೋಡ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ರೈಲು ಬರುತ್ತಿದ್ದಂತೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕುಳಿತಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿ ಬಿ.ಸಿ.ರೋಡಿನ ಕಚೇರಿಗೆ ನೀಡಿ ವಿಚಾರ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಹಾಗೂ ಆಕೆಯ ವಿಳಾಸ ವಿವರ ಇನ್ನಷ್ಟೇ ತಿಳಿಯಬೇಕಿದೆ. ನದಿಯಲ್ಲಿ ತೇಲಾಡುತ್ತಿದ್ದ ಮೃತದೇಹವನ್ನು ಸ್ಥಳೀಯ ಮುಳುಗು ತಜ್ಞರಾದ ಮಹಮ್ಮದ್ ಅವರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಡಾಮರು ಸಾಗಾಟದ ಲಾರಿಯಲ್ಲಿ ಬೆಂಕಿ

ಉಪ್ಪಿನಂಗಡಿ: ದಿಢೀ‌ರ್ ಬೆಂಕಿ ಕಾಣಿಸಿಕೊಂಡ ಕಾರಣ ಡಾಮರು ಸಾಗಿಸುತ್ತಿದ್ದ ಲಾರಿ ಭಾಗಶಃ ಸುಟ್ಟು ಹೋದ ಘಟನೆ ಫೆ.13ರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಲಾರಿಯು ಉದನೆ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಅಪಾಯದ ಅರಿವಾಗುತ್ತಿದಂತೆ ಚಾಲಕ ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಪಾರಾಗಿದ್ದಾರೆ. ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಯ ಕಾರ್ಮಿಕರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ.

ಪೆರಿಯಡ್ಕ ನೆಡುತೋಪಿಗೆ ಬೆಂಕಿ ಉಪ್ಪಿನಂಗಡಿ ಇಲ್ಲಿನ ಪೆರಿಯಡ್ಕ ಸಮೀಪದ ಸರ್ವೋದಯ ಪ್ರೌಢಶಾಲೆಗೆ ಹೋಗುವ ದಾರಿ ಬಳಿಯ ಅರಣ್ಯ ಇಲಾಖೆಯ ನೆಡುತೋಪಿ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಫೆ.14ರಂದು ಸಂಜೆ ಸುಮಾರು 6.30ರ ಸುಮಾರಿಗೆ ಅಕೇಶಿಯಾ ನೆಡುತೋಪು ಇರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತು.

ಅಕ್ರಮ ಮರಳು ಸಾಗಾಟ ಲಾರಿ ವಶ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸರು ಫೆ. 13ರಂದು ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅಕ್ರಮ ಮರಳು ಸಾಗಾಟ ಕಂಡುಬಂದಿದ್ದು, ಲಾರಿ ಸಹಿತ ಮರಳನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್ ಹಾಗೂ ಸಿಬಂದಿ ಗಸ್ತು ತಿರುಗುತ್ತಿದ್ದಾಗ ಪೊಳಲಿ ಕಡೆಯಿಂದ ಟಿಪ್ಪರ್ ಲಾರಿ ಆಗಮಿಸಿದ್ದು, ತಡೆದು ವಿಚಾರಿಸಿದಾಗ ಪರವಾನಿಗೆ ರಹಿತ ಮರಳು ಸಾಗಾಟ ಬೆಳಕಿಗೆ ಬಂದಿದೆ. ಅಡೂXರು ಹೊಳೆಯಿಂದ ಮರಳು ತುಂಬಿಸಿ ಬಂದಿರುವುದಾಗಿ ಚಾಲಕ ಮೋಹನ್ ಕೆ. ತಿಳಿಸಿದ್ದಾನೆ. ಪೊಲೀಸರು 5 ಲಕ್ಷ ರೂ. ಮೌಲ್ಯದ ಲಾರಿ ಹಾಗೂ 5 ಸಾವಿರ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದಿದ್ದಾರೆ.

Categories
ಬೆಂಗಳೂರು ರಾಜ್ಯ

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್
• ಏಪ್ರಿಲ್ 1ರಿಂದ BPL, APL ಕಾರ್ಡ್​ ವಿತರಣೆ
– ಅಕ್ಕಿಯ ಹಣ ಬರದೇ ಇದ್ದವರಿಗೆ ಶೀಘ್ರದಲ್ಲಿ ಪರಿಹಾರ.

NAMMUR EXPRESS NEWS
ಬೆಂಗಳೂರು : ರಾಜ್ಯದ ಜನತೆಗೆ ಆಹಾರ ಇಲಾಖೆ ಸಿಹಿ ಸುದ್ದಿ ಒಂದನ್ನು ನೀಡಿದ್ದು ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 1 ರಿಂದ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು. ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್​ಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿತ್ತು. ಆದರೆ ನಾವು ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ ವಿತರಿಸಿದ್ದೇವೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ.

ಇನ್ನು 5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ 100ಕ್ಕೆ 90ರಷ್ಟು ಪಡಿತರ ಕಾರ್ಡ್‌ದಾರರಿಗೆ ಐದು ಕೆಜಿ ಅಕ್ಕಿಯ ಹಣ ಕೊಟ್ಟಿದ್ದೇವೆ. ಶೇ 5 ರಷ್ಟು ಏರುಪೇರು ಇದರಲ್ಲಿ ಇದೆ, ಅದನ್ನೂ ಸರಿಪಡಿಸುತ್ತೇವೆ. ಹೊಸ ಕಾರ್ಡ್​ಗಳಿಗೆ ಅರ್ಜಿ ಬಂದರೆ ತಡ ಮಾಡದೆ ಒಂದು ವಾರದೊಳಗೆ ಕಾರ್ಡ್ ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Categories
ಕೊಪ್ಪ ಶಿವಮೊಗ್ಗ

ಕಾಫಿ ನಾಡಲ್ಲಿ ಹೆಚ್ಚಿದ ಮಂಗನ ಕಾಯಲೆ!

ಕಾಫಿ ನಾಡಲ್ಲಿ ಹೆಚ್ಚಿದ ಮಂಗನ ಕಾಯಲೆ!
– ಕೊಪ್ಪ, ಶೃಂಗೇರಿ, ನರಸಿಂಹರಾಜಪುರದಲ್ಲಿ ಹೆಚ್ಚಿದ ಮಂಗನ ಕಾಯಲೆ
– ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಳ: ಬೇಕು ಅಲರ್ಟ್

NAMMUR EXPRESS NEWS
ಎನ್.ಆರ್.ಪುರ: ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮೂವರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ಕಾನೂರು, ಗುಬ್ಬಿಗಾ, 8ನೇ ಮೈಲಿಕಲ್ಲು ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗನ ಕಾಯಿಲೆ ಇರುವ ಪ್ರಕರಣ ಪತ್ತೆಯಾಗಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಹೇಳಿದರು.

ಕೊಪ್ಪದಲ್ಲಿ ಒಬ್ಬರಿಗೆ ಮಂಗನ ಕಾಯಲೆ

ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮದ ಒಬ್ಬರಿಗೆ ಕೆ.ಎಫ್‌.ಡಿ ಪತ್ತೆಯಾಗಿದೆ. ಇವರ ರಕ್ತ ಮಾದರಿಯನ್ನು ಮಂಗಳವಾರದಂದು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬುಧವಾರ ಪಾಸಿಟಿವ್ ವರದಿ ಬಂದಿದ್ದು, ಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಳ

ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಮಂಗನ ಕಾಯಲೆ ಹೆಚ್ಚಾಗಿದ್ದು, ದಿನೇ ದಿನೇ ಏರಿಕೆ ಆಗುತ್ತಿದೆ. ಈ ಬಗ್ಗೆ ಜನ ಮತ್ತು ಸರ್ಕಾರ ಗಮನ ವಹಿಸುವುದು ಅಗತ್ಯವಾಗಿದೆ.

Categories
ಬೆಂಗಳೂರು ಮಲ್ನಾಡ್ ರಾಜ್ಯ

ಸಿಎಂ ಭೇಟಿ ಮಾಡಿದ ಆರಗ ಜ್ಞಾನೇಂದ್ರ!

ಸಿಎಂ ಭೇಟಿ ಮಾಡಿದ ಆರಗ ಜ್ಞಾನೇಂದ್ರ!
– ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ತಡೆಗೆ ಹಣ ಮೀಸಲು ಇಡಲು ಮನವಿ
– ಮಲೆನಾಡ ದೊಡ್ಡ ಸಮಸ್ಯೆಗೆ ಸಿಗುತ್ತಾ ಪರಿಹಾರ?

NAMMUR EXPRESS NEWS
ಬೆಂಗಳೂರು: ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿಯಾಗಿ ಅಡಿಕೆ ಎಲೆ ಚುಕ್ಕಿ ರೋಗದ ಕುರಿತಾದ ಸಂಶೋಧನೆ ನಡೆಸಲು ಅಡಿಕೆ ಬೆಳೆ ಹಿತ ಕಾಯಲು ಇನ್ನಿತರ ಕಾರ್ಯಗಳಿಗೆ ಬಜೆಟ್ಟಿನಲ್ಲಿ ಹಣ ಮೀಸಲಿಡುವಂತೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.
ಮಲೆನಾಡು ಭಾಗದ ದೊಡ್ಡ ಸಮಸ್ಯೆ ಆಗಿರುವ ಎಲೆ ಚುಕ್ಕಿ ರೋಗಕ್ಕೆ ಪರಿಹಾರ ಬೇಕಿದೆ. ಈ ಹಿನ್ನೆಲೆಯಲ್ಲಿ ಆರಗ ಅವರ ಭೇಟಿ ಮಹತ್ವ ಪಡೆದಿದೆ.

Categories
ಕರಾವಳಿ ರಾಜ್ಯ ಶಿಕ್ಷಣ

ಜೆಇಇ ಮೇನ್ಸ್‌ನಲ್ಲಿ ವೈಬ್ರೆಂಟ್ ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ

ಜೆಇಇ ಮೇನ್ಸ್‌ನಲ್ಲಿ ವೈಬ್ರೆಂಟ್ ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ
– ಚಂದನ್‌ 99.60 ಪರ್ಸೆಂಟೈಲ್ ಫಲಿತಾಂಶದ ಮೂಲಕ ಟಾಪರ್
ಮೊದಲ ವರ್ಷದಲ್ಲೇ ಸರ್ವ ಶ್ರೇಷ್ಠ ಸಾಧನೆ

NAMMUR EXPRESS NEWS: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ರಾಷ್ಟ್ರ ಮಟ್ಟದಲ್ಲಿ ನಡೆಸಿದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾರಂಭದ ವರ್ಷದ ಪ್ರಥಮ ಜೆಇಇ ಪರೀಕ್ಷೆಯಲ್ಲಿಯೇ ಅಪ್ರತಿಮ ಸಾಧನೆ ಮಾಡುವ ಮೂಲಕ ಸರ್ವಶ್ರೇಷ್ಠ ಫಲಿತಾಂಶವನ್ನು ದಾಖಲಿಸಿದೆ. ಕಳೆದೆರಡು ವರ್ಷದಿಂದ ಮೂಡುಬಿದಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜು ಪಿಯು ವಿಜ್ಞಾನ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅತ್ಯುತ್ತಮ ಪೂರಕ ತರಬೇತಿಯನ್ನು ನೀಡುತ್ತಿದೆ ಎಂಬುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ.

ವಿದ್ಯಾರ್ಥಿ ಚಂದನ್ ಆರ್. 99.60 ಪರ್ಸೆಂಟೈಲ್ (ಭೌತಶಾಸ್ತ್ರ 99.80. ರಸಾಯನಶಾಸ್ತ್ರ 99.97, ಗಣಿತಶಾಸ್ತ್ರ 96.50), ಪಡೆಯುವ ಮೂಲಕ ಮೂಡುಬಿದಿರೆಗೆ ಅತಿ ಹೆಚ್ಚು ಪರ್ಸೆಂಟೈಲ್ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

ಸಂಸ್ಥೆಯಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ, 34 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದಿರುತ್ತಾರೆ. ಹಾಗೆಯೇ ವೈಯಕ್ತಿಕ ವಿಷಯಗಳಲ್ಲಿ ಭೌತಶಾಸ್ತ್ರ 60 ವಿದ್ಯಾರ್ಥಿಗಳು, ರಸಾಯನಶಾಸ್ತ್ರ 73 ವಿದ್ಯಾರ್ಥಿಗಳು, ಗಣಿತಶಾಸ್ತ್ರ 16 ವಿದ್ಯಾರ್ಥಿಗಳು 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್‌ನ್ನು ಗಳಿಸಿರುತ್ತಾರೆ.

ಮಹೇಶ್ 99.05 ಪರ್ಸೆಂಟೈಲ್ (ಭೌತಶಾಸ್ತ್ರ 98.98, ರಾಸಾಯನಶಾಸ್ತ್ರ 99.71, ಗಣಿತಶಾಸ್ತ್ರ 87.46),

ಅಶ್ವಿನ್ ಉಪಾಧ್ಯ 98.9 ಪರ್ಸೆಂಟೈಲ್(ಭೌತಶಾಸ್ತ್ರ 96.62. ರಸಾಯನಶಾಸ್ತ್ರ 98,98, ಗಣಿತಶಾಸ್ತ್ರ 98.67),

ಸಿಂಚನಾ ಅರಸ್ 98.34 ಪರ್ಸೆಂಟೈಲ್ (ಭೌತಶಾಸ್ತ್ರ 98.98, ರಸಾಯನಶಾಸ್ತ್ರ 98.28, ಗಣಿತಶಾಸ್ತ್ರ 82.98),

ಪ್ರಜ್ವಲ್ ಎಮ್ . 96.43 ಪರ್ಸೆಂಟೈಲ್,

ಅನಿಲ್ ಕುಮಾರ್ 96.21 ಪರ್ಸೆಂಟೈಲ್,

ಅಭಿಷೇಕ್ ಶೇಟ್ 95.85 ಪರ್ಸಂಟೈಲ್,

ಆಕಾಶ್ ಮಲ್ಲಪ್ಪ 95.78 ಪರ್ಸೆಂಟೈಲ್,

ಸುಜಯ್ ಪಿ.ವಿ. 95.73 ಪರ್ಸೆಂಟೈಲ್,

ಐರೋಲ್ ಡೀನಾ ರೋಡ್ರಿಗಸ್ 95.04 ಪರ್ಸೆಂಟೈಲ್,

ಸಿಂಚನಾ ವಿ.ವೈ. 95.01 ಪರ್ಸೆಂಟೈಲ್,

ಎನ್.ಎಸ್. ಹರ್ಷಿತ್ 94.87 ಪರ್ಸೆಂಟೈಲ್,

ಜಿ.ಎಚ್. ವಿನಾಯಕ್ 94.76 ಪರ್ಸೆಂಟೈಲ್,

ಕಲ್ಪಿತಾ ಕೃಷ್ಣ ಘಾಟಿ 94.74 ಪರ್ಸೆಂಟೈಲ್,

ಹೆಚ್.ಜಿ. ಚಿರಂತನ್ 94.48 ಪರ್ಸೆಂಟೈಲ್,

ಅಶ್ವಿನ್ ಸಿ. ನ್ಯಾಕ್ 94.26 ಪರ್ಸೆಂಟೈಲ್,

ಪ್ರಜ್ವಲ್ 94.04 ಪರ್ಸೆಂಟೈಲ್,

ಪ್ರತೀಕ್ 94.01 ಪರ್ಸೆಂಟೈಲ್,

ಸಮೃದ್ ಎಸ್. ಕುಂದರಗಿ 93.89 ಪರ್ಸೆಂಟೈಲ್,

ಆದಿತ್ಯ ಎನ್. ಶೆಣೈ 93.83 ಪರ್ಸೆಂಟೈಲ್,

ನೂತನ್ ಪ್ರಸಾದ್ 93.33 ಪರ್ಸೆಂಟೈಲ್,

ತುಷಾರ್ ರವೀಂದ್ರ ಪಾವಸ್ಕರ್ 92.73 ಪರ್ಸೆಂಟೈಲ್,

ಮಹೇಂದ್ರ ರೆಡ್ಡಿ 92.57 ಪರ್ಸೆಂಟೈಲ್,

ಶ್ರೀರಕ್ಷಾ 92.53 ಪರ್ಸೆಂಟೈಲ್,

ಪ್ರಗತಿ ಕೆ 92.27 ಪರ್ಸೆಂಟೈಲ್,

ಬೆನಕ ಜಿ ಎಸ್ 92.09 ಪರ್ಸೆಂಟೈಲ್,

ಪಲ್ಲವಿ 91.83 ಪರ್ಸೆಂಟೈಲ್,

ಜ್ಞಾನವಿ ಆರ್. 91.74 ಪರ್ಸೆಂಟೈಲ್,

ಧನುಶ್ರೀ 91.64 ಪರ್ಸೆಂಟೈಲ್,

ಸೂರಜ್ ಎಂ. ಸಾಗರ್ 91.31 ಪರ್ಸೆಂಟೈಲ್,

ನಿತೇಶ್ ಹರಸೂರ್ 90.77 ಪರ್ಸೆಂಟೈಲ್.

ಸಿಮ್ರಾನ್ ತಾನೆದರ್ 90.66 ಪರ್ಸೆಂಟೈಲ್,

ವರ್ಷಿಣಿ ಎ. 90.59 ಪರ್ಸೆಂಟೈಲ್,

ಆದಿತ್ಯ ಬಿ.ಎಸ್. 90.38 ಪರ್ಸೆಂಟೈಲ್

ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Categories
ಅಪಘಾತ ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಆಕ್ಸಿಡೆಂಟ್ ಆಕ್ಸಿಡೆಂಟ್..!

ತೀರ್ಥಹಳ್ಳಿಯಲ್ಲಿ ಆಕ್ಸಿಡೆಂಟ್ ಆಕ್ಸಿಡೆಂಟ್..!
– ಒಂದೇ ತಿಂಗಳಿನಲ್ಲಿ ಸುಮಾರು 15 ಅಪಘಾತ
– ಆಕ್ಸಿಡೆಂಟ್ ಝೋನ್ ಆಗುತ್ತಿದೆಯಾ ತೀರ್ಥಹಳ್ಳಿ?
– ವಾಹನ ಸವಾರರೇ, ನಿಧಾನವಾಗಿ ಚಲಿಸಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ದಿನೇ ದಿನೇ ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಸಂಚಾರಿ ಪೋಲೀಸರು ಅಪಘಾತ ತಡೆಗೆ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ತಂದರೂ ಇದಕ್ಕೆ ಬ್ರೇಕ್‌ ಹಾಕಲಾಗುತ್ತಿಲ್ಲ. ಈ ಹಿನ್ನಲೆ ಒಂದೇ ತಿಂಗಳಿನಲ್ಲಿ ತೀರ್ಥಹಳ್ಳಿಯಲ್ಲಿ 15ಕ್ಕೂ ಹೆಚ್ಚು ಅಪಘಾತ ಆಗಿದೆ. 10ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ರಸ್ತೆ ಅಪಘಾತಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬದಲಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.ದಿನೇ ದಿನೇ ಅಪಘಾತಗಳ ಪ್ರಮಾಣ ಜಾಸ್ತಿಯಾಗುತ್ತಿದೆ.

ರಸ್ತೆ ಜಾಗೃತಿ ಮೂಡಿಸಿದರೂ ಫಲ ನೀಡುತ್ತಿಲ್ಲ!

ರಸ್ತೆ ಸುರಕ್ಷತೆ ಬಗ್ಗೆ ಪೊಲೀಸ್‌ ಇಲಾಖೆಯವರು ನಿರಂತರವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರ ಸಹಕಾರ ಇಲ್ಲವಾದರೆ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಆದರೂ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಆದರೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ. ಒನ್ ವೇನಲ್ಲಿ ಚಲಿಸುತ್ತಾರೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಆದರೆ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಅರ್ಧ ಹೆಲ್ಮೆಟ್ ಬಳಸಿ ವಾಹನ ಚಲಾಯಿಸುತ್ತಾರೆ. ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಸವಾರರು ಜವಬ್ದಾರಿಯುತವಾಗಿ ವಾಹನ ಚಲಾಯಿಸಿದಾಗ ಮಾತ್ರ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವ ಮೂಲಕ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬೇಕು.

ತೀರ್ಥಹಳ್ಳಿ ಪಟ್ಟಣದಲ್ಲಿ ಅಪಘಾತ ಹೆಚ್ಚಾಯ್ತು!

ತೀರ್ಥಹಳ್ಳಿ ಪಟ್ಟಣದಲ್ಲಿ ದಿನೇ ದಿನೇ ಅಪಘಾತ ಹೆಚ್ಚಳವಾಗಿದೆ. ಬುಧವಾರ ಆಗುಂಬೆ ಬಸ್ ನಿಲ್ದಾಣದಲ್ಲಿ ಲಾರಿ ಮತ್ತು ಕಟ್ಟಿಗೆ ಹೊಡೆಯುವ ಟ್ರಾಕ್ಟರ್ ಮಧ್ಯ ಬೈಕ್ ಸಿಲುಕಿ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಸವಾರ ಪಾರಾಗಿದ್ದಾನೆ. ಇನ್ನು ಕೊಪ್ಪ ಸರ್ಕಲ್ ಬಳಿ ಬೈಕ್ ಡಿಕ್ಕಿಯಾಗಿದೆ. ಬೆಜ್ಜವಳ್ಳಿಯಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಓರ್ವ ಗಂಭೀರಗೊಂಡಿದ್ದಾನೆ.

Categories
ಕೃಷಿ ಬೆಂಗಳೂರು ರಾಜ್ಯ

ರೈತರಿಗೆ ಹೊರೆಯಾದ ಮುದ್ರಾಂಕ ಶುಲ್ಕ ಏರಿಕೆ.!

ರೈತರಿಗೆ ಹೊರೆಯಾದ ಮುದ್ರಾಂಕ ಶುಲ್ಕ ಏರಿಕೆ.!
– ವಿವಿಧ ಬಾಂಡ್‌ಗಳಿಗೆ ದುಪ್ಪಟ್ಟು ಮೊತ್ತ
– ದರ ಪಟ್ಟಿಯನ್ನು ಕಡಿಮೆಗೊಳಿಸುವಂತೆ ಮನವಿ
– ಐದು ಪಟ್ಟು ಏರಿಕೆಯಾದ ರಿಜಿಸ್ಟರ್ ಶುಲ್ಕ

NAMMUR EXPRESS NEWS
ಬೆಂಗಳೂರು: ಸರ್ಕಾರ ವಿವಿಧ ಯೋಜನೆಗಳನ್ನು ತರುವುದರ ಜೊತೆಗೆ ಆ ಯೋಜನೆಗಳ ಅನುಷ್ಠಾನಕ್ಕೆ ಮತ್ತೆ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸುವ ಮೂಲಗಳನ್ನು ಹುಡುಕುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಹಾಗೆಯೇ ಹೆಚ್ಚಿನ ಆದಾಯ ಸಂಗ್ರಹಿಸುವ ಗುರಿಯೊಂದಿಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ, ಇದು ರೈತಾಪಿ ವರ್ಗಕ್ಕೆ ಭಾರಿ ಹೊರೆಯಾಗಿ ಪರಿಣಮಿಸಿದೆ ಎಂದು ಹಲವು ರೈತರು ಅಳಲು ತೋಡಿಕೊಂಡಿದ್ದರು.

ಬರದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿ ರೈತರು ಕಂಗಾಲಾಗಿರುವ ನಡುವೆಯೇ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕ ಹೆಚ್ಚಿಸಿರುವುದು ರೈತ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿವಿಧ ಸರ್ಕಾರಿ ಯೋಜನೆಗಳಿಗೆ ಮತ್ತು ಕೃಷಿ ಚಟುವಟಿಕೆಗೆ ಅಗತ್ಯವಿರುವ ಮುಚ್ಚಳಿಕೆ ಪತ್ರ, ಪ್ರಮಾಣಪತ್ರ, ವಿವಿಧ ರೀತಿಯ ಬಾಂಡ್‌ಗಳನ್ನು ಖರೀದಿಸಲು ದುಪ್ಪಟ್ಟು ಹಣ ಪಾವತಿಸುವ ಅನಿವಾರ್ಯ ರೈತರಿಗೆ ಎದುರಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಸರ್ಕಾರ ಹಲವು ಸ್ಟ್ಯಾಂಪ್ ದರಗಳ ಏರಿಕೆ ಮಾಡಿದ್ದರ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇತರೆ ಇಲಾಖೆಗಳ ಫಲಾನುಭವಿಯಾಗಲು, ಸಬ್ಸಿಡಿ ಪಡೆಯಲು ಮತ್ತು ಹೊಲ-ಗದ್ದೆಯನ್ನು ಸಹೋದರ ಸಂಬಂಧಿಕರ ನಡುವೆ ಇಬ್ಬಾಗ ಮಾಡಿಕೊಳ್ಳಲು ರೈತರು ವಿವಿಧ ರೀತಿಯ ವ್ಯವಹಾರಕ್ಕೆ ವಿವಿಧ ಇಲಾಖೆಗೆ ಬಾಂಡ್‌, ಮುಚ್ಚಳಿಕೆ ಪತ್ರ, ಪ್ರಮಾಣಪತ್ರ ಸಲ್ಲಿಸಬೇಕು. ಮೊದಲೇ ಬರದ ಹಿನ್ನೆಲೆಯಲ್ಲಿ ರೈತರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ನಡುವೆ ಸ್ಟಾಂಪ್ ದರಗಳನ್ನು ಸರ್ಕಾರ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಹಿಸ್ಸಾ (ಪಾಲುದಾರಿಕೆ) ದುಪ್ಪಟ್ಟು

ರೈತರು ಹೊಲ-ಗದ್ದೆಗಳ ಪಾಲುದಾರಿಕೆ ಪಡೆಯಲು ಈ ಮೊದಲು ಎಕರೆ ಲೆಕ್ಕದಲ್ಲಿ 200 ರೂ. ನಿಂದ 1000 ರೂ. ವರೆಗೆ ಸ್ಟಾಂಪ್ ಶುಲ್ಕ ಪಾವತಿಸಬೇಕಿತ್ತು. ಈಗ ಪ್ರತಿ ಹಿಸ್ಸಾಗೆ (ಪ್ರತಿ ಪಾಲುದಾರಿಕೆ) 1,000 ರೂ. ನಿಂದ 5,000 ರೂ. ವರೆಗೆ ಪಾವತಿಸಬೇಕಿದೆ. ಈ ಶುಲ್ಕದಲ್ಲಿ ಶೇ.20 ರಷ್ಟು ಏರಿಕೆ ಆಗಿದೆ.

ದರ ದುಪ್ಪಟ್ಟು:

ಸಾಮಾನ್ಯ ಅಫಿಡವಿಟ್ ಪಡೆಯಲು ಈ ಮೊದಲು 20 ರೂ. ಸ್ಟಾಂಪ್ ಬಳಸಲಾಗುತ್ತಿತ್ತು. ಹೊಸ ದರದ ಅನ್ವಯ 100 ರೂ. ಸ್ಟ್ಯಾಂಪ್ ಕಡ್ಡಾಯವಾಗಿದೆ. ಕೃಷಿ, ಕಂದಾಯ, ಶಿಕ್ಷಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸ್ಟ್ಯಾಂಪ್ ಬಳಕೆಯಾಗುತ್ತಿದ್ದು, ವಿಶೇಷವಾಗಿ ಕೃಷಿ ಇಲಾಖೆಯಲ್ಲಿ ರೈತರು ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಮುಚ್ಚಳಿಕೆ ಪತ್ರ ನೀಡುವುದು ಕಡ್ಡಾಯ. ರಾಶಿ ಯಂತ್ರ, ಬಿತ್ತುವ ಕೂರಗಿ, ನೇಗಿಲು ಸೇರಿದಂತೆ ವಿವಿಧ ಪರಿಕರಗಳನ್ನು ಸಹಾಯ ಧನದಲ್ಲಿ ಪಡೆಯಲು 20 ರೂ. ಬದಲಾಗಿದೆ 100 ರೂ. ಸ್ಟಾಂಪ್ (ನೋಟರಿ) ಮಾಡಿಸಬೇಕಿದೆ.

ಜಮೀನಿನ ಖರೀದಿ, ವಚನಪತ್ರಗಳಿಗೆ ಜಮೀನಿನ ಮೂಲ ಮಾರುಕಟ್ಟೆ ದರಕ್ಕೆ ಶೇ.01 ರಷ್ಟು ಭರಿಸಬೇಕಿದ್ದ ದರವನ್ನು ಈಗ ಶೇ 0.5ರಷ್ಟು ಭರಿಸಬೇಕಿದೆ. ಈ ಬೆಲೆ ಲಕ್ಷಕ್ಕೂ ಅಧಿಕವಾಗುವುದರಿಂದ ರೈತರು ಸೇರಿದಂತೆ ಎಲ್ಲ ವರ್ಗಕ್ಕೂ ಹೊರೆ ಆಗಲಿದೆ. ವಿವಿಧ ಪ್ರಾಧಿಕಾರದಿಂದ ಕೇಳಲ್ಪಡುವ ಮುಚ್ಚಳಿಕೆ ಪತ್ರ, ದತ್ತಕ ಪತ್ರ, ಜನನ ಪ್ರಮಾಣಪತ್ರ, ಮೂಲ ದಾಖಲೆ ಪಡೆಯಲು. ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ಇನ್ಮುಂದೆ 100 ರೂ. ಸ್ಟಾಂಪ್ ಕಡ್ಡಾಯ. ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕ ಏರಿಕೆ ಮರುಪರಿಶೀಲಿಸಬೇಕು. ರೈತರಿಗೆ ಪ್ರತ್ಯೇಕ, ಕಡಿಮೆ ಮೊತ್ತದ ದರ ನಿಗದಿ ಮಾಡುವುದು ಅಗತ್ಯವಿದೆ.