Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಬ್ಯಾಂಕ್‌ ಉದ್ಯೋಗ ಹುಡುಕುತ್ತಿದ್ದೀರಾ?

ಬ್ಯಾಂಕ್‌ ಉದ್ಯೋಗ ಹುಡುಕುತ್ತಿದ್ದೀರಾ?
-ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಲ್ಲಿದೆ ಸುವರ್ಣಾವಕಾಶ
– 1,025 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
-ಫೆಬ್ರವರಿ 25ರೊಳಗೆ ಅರ್ಜಿ ಸಲ್ಲಿಸಿ

NAMMUR EXPRESS NEWS
ಬೆಂಗಳೂರು: ಪಂಜಾಬ್ ನ್ಯಾಷನಲ್‌ ಬ್ಯಾಂಕ್ ನಿಮಗೆ ಸುವರ್ಣಾವಕಾಶ ಒದಗಿಸುತ್ತಿದೆ. ಪಂಜಾಬ್ ನ್ಯಾಷನಲ್‌ ಬ್ಯಾಂಕ್ ದೇಶದಾದ್ಯಂತ ತನ್ನ ವಿವಿಧ ಬ್ರ್ಯಾಂಚ್‌ಗಳಲ್ಲಿ ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ . ಕ್ರೆಡಿಟ್ / ಮ್ಯಾನೇಜರ್ ಫಾರೆಕ್ಸ್, ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಸೇರಿ ಬರೋಬ್ಬರಿ 1,025 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಫೆಬ್ರವರಿ 25.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕ್ರೆಡಿಟ್‌ ಆಫೀಸರ್‌ – 1,000, ಮ್ಯಾನೇಜರ್‌-ಫಾರೆಕ್ಸ್‌ – 15, ಮ್ಯಾನೇಜರ್‌ – ಸೈಬರ್‌ ಸೆಕ್ಯುರಿಟಿ – 5, ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ- 5 ಹುದ್ದೆಗಳಿವೆ. ಹುದ್ದೆಗಳಿಗೆ ಸಂಬಂಧಿತ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ / ಸಿಎ / ಸಿಎಂಎ / ಐಡಿಡಬ್ಲ್ಯುಎ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ

ಮ್ಯಾನೇಜರ್‌ ಫಾರೆಕ್ಸ್‌- ಕನಿಷ್ಠ: 25 ವರ್ಷ, ಗರಿಷ್ಠ: 35 ವರ್ಷ
ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ- ಕನಿಷ್ಠ: 25 ವರ್ಷ, ಗರಿಷ್ಠ: 35
ಸೀನಿಯರ್‌ ಮ್ಯಾನೇಜರ್‌ ಸೈಬರ್‌ ಸೆಕ್ಯುರಿಟಿ- ಕನಿಷ್ಠ: 27 ವರ್ಷ, ಗರಿಷ್ಠ: 38
ಆಫೀಸರ್‌ ಕ್ರೆಡಿಟ್‌- ಕನಿಷ್ಠ: 21 ವರ್ಷ, ಗರಿಷ್ಠ: 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಸಾಮಾನ್ಯ ವಿಭಾಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 1,180 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 59 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ವಿವಿಧ ಹಂತಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆರಂಭದಲ್ಲಿ ಆನ್‌ಲೈನ್‌ ಮೂಲಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 200 ಅಂಕಗಳನ್ನು ಒಳಗೊಂಡ ಈ ಪರೀಕ್ಷೆಗೆ 2 ಗಂಟೆಗಳ ಸಮಯಾವಕಾಶ ಇರುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಸಂದರ್ಶನ ನಡೆಸಲಾಗುತ್ತದೆ. ಇದಕ್ಕೆ 50 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಬಳಿಕ ಅಭ್ಯರ್ಥಿಗಳ ಡಾಕ್ಯುಮೆಂಟ್‌ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

Categories
ಕರಾವಳಿ ಕಾರ್ಕಳ ಯಶಸ್ಸಿನ ಕಥೆಗಳು ರಾಜ್ಯ

ಒಂದು ವರ್ಷದ ಮಗುವಿನ ಸಾಧನೆ

ಒಂದು ವರ್ಷದ ಮಗುವಿನ ಸಾಧನೆ
– ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ.
– ಒಂದನೇ ವರ್ಷದಲ್ಲೆ ದಾಖಲೆ ನಿರ್ಮಿಸಿದ ಕಾರ್ಕಳದ ಮಗು!

NAMMUR EXPRESS NEWS
ಕಾರ್ಕಳ : ಇಂಡಿಯ ಬುಕ್ ಆಫ್ ರೆಕಾರ್ಡ್ಸ್ನಲ್ಲಿ 1 ವರ್ಷ 7 ತಿಂಗಳ ಮಗು ಆರುಷ್ ಧೀರಜ್ ದಾಖಲೆ ನಿರ್ಮಿಸಿದ್ದಾರೆ. ಆರುಷ್ ಉಡುಪಿ ಪಂದುಬೆಟ್ಟುವಿನ ಅಕ್ಷಿತ ಮತ್ತು ಧೀರಜ್ ಅವರ ಪುತ್ರ. ಆರುಷ್‌, ಇಂಗ್ಲಿಷ್ ಅಕ್ಷರಗಳು(26), 1 ರಿಂದ 10 ಅಂಕೆಗಳು, 27 ಪ್ರಾಣಿಗಳು, 27 ಪಕ್ಷಿಗಳು, 26 ಹಣ್ಣುಗಳು, 25 ತರಕಾರಿಗಳು, 18 ದೇಹದ ಅಂಗಗಳು, 9 ಗ್ಯಾಜೆಟ್ಸ್ 47 ದಿನ ಬಳಕೆಯ ವಸ್ತುಗಳು, 14 ಬಣ್ಣಗಳು, 10 ತಿಂಡಿಗಳು, 27 ಆಟದ ಸಾಮಗ್ರಿಗಳು, 8 ಭಾವನೆಗಳು, 27 ವಾಹನಗಳು, 20 ಹೂವುಗಳು, 33 ಕ್ರಿಯಾಪದಗಳು, 6 ಆಕಾರಗಳು ಸೇರಿದಂತೆ 350 ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಮೂಲಕ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಗಾಧ ಸಾಧಕರಾಗಿದ್ದಾರೆ .

Categories
ತೀರ್ಥಹಳ್ಳಿ

ಇನ್ನು ಆಸ್ತಿ ದಾಖಲೆ ಇನ್ನು ಡಿಜಿಟಲ್!

ಇನ್ನು ಆಸ್ತಿ ದಾಖಲೆ ಇನ್ನು ಡಿಜಿಟಲ್!
– ತೀರ್ಥಹಳ್ಳಿಗೆ ಭೂ ರಕ್ಷಣಾ ಗಣಿಕಾ ಯಂತ್ರ ಭಾಗ್ಯ
– ತಾಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ
– ಈಗ ದಾಖಲೆ ಭದ್ರತೆ ಶಾಶ್ವತ: ನೇರ ಸುಲಭ ಲಭ್ಯತೆ

NAMMUR EXPRESS NEWS
ತೀರ್ಥಹಳ್ಳಿ: ಆಸ್ತಿ ದಾಖಲೆ ತಿದ್ದುವ ಮೂಲಕ ನಡೆಯುತ್ತಿರುವ ವಂಚನೆ, ಪೋರ್ಜರಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ ರಾಜ್ಯಾದ್ಯಂತ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅದರಂತೆ ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರಾದ ಆರಗ ಜ್ಞಾನೇಂದ್ರ ಅವರು ಭೂ ದಾಖಲೆಗಳ ಸಂಗ್ರಹಕ್ಕಾಗಿ ಸರ್ಕಾರದಿಂದ ಹತ್ತು ಗಣಕಯಂತ್ರಗಳನ್ನು ಮಂಜೂರು ಮಾಡಿಸಿ, ತೀರ್ಥಹಳ್ಳಿಯಲ್ಲಿ ಬುಧವಾರ ತಾಲೂಕು ಕಚೇರಿಯಲ್ಲಿ 10 ನೂತನ ಭೂ ದಾಖಲೀಕರಣ ಯಂತ್ರವನ್ನು ಶಾಸಕ ಆರಗ ಜ್ಞಾನೇಂದ್ರ ಅವರಿಂದ ಲೋಕಾರ್ಪಣೆಗೊಳಿಸಲಾಯಿತು.

ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಈಗಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ದಾಖಲಿಸಿ ಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿ ತಹಶೀಲ್ದಾರ್ ಅವರಿಗೆ ತಾಲೂಕು ಕಚೇರಿಯ ಬ್ರೋಕರ್ ಹಾವಳಿ ತಡೆಗಟ್ಟಿ ಜನಸಾಮಾನ್ಯರ ಕೆಲಸಗಳನ್ನು ಆದಷ್ಟು ಬೇಗ ಮಾಡಿಕೊಡಿ ಎಂದು ಹೇಳಿದರು.

ಫೆಬ್ರವರಿ 10ರ ಶನಿವಾರದಂದು ಗೋಪಾಲಗೌಡರ ರಂಗಮಂದಿರದಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಇದುವರೆಗೆ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳದೆ ಇದ್ದವರು ಕೂಡ ದಾಖಲೆಗಳನ್ನು ತಂದು ನೋಂದಾವಣಿ ಮಾಡಿಕೊಳ್ಳಲು ತಿಳಿಸಿದರು. ತಹಶೀಲ್ದಾರ್ ಜೆ ಬಿ ಜಕ್ಕಣ್ಣ ಗೌಡರು, ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೈಲಾ, ಶಿರಸ್ತೆದಾರ್ ಸತ್ಯಮೂರ್ತಿ, ಕಸಬಾ ರೆವೆನ್ಯೂ ಅಧಿಕಾರಿ ಸುಧೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಮಾದರಿ ಆಯ್ತು ತೀರ್ಥಹಳ್ಳಿ ಮಲ್ನಾಡ್ ಕ್ಲಬ್!

ಮಾದರಿ ಆಯ್ತು ತೀರ್ಥಹಳ್ಳಿ ಮಲ್ನಾಡ್ ಕ್ಲಬ್!
– ಮನೋರಂಜನೆ ಜತೆಗೆ ಒಂದಲ್ಲ ಒಂದು ಸಾಮಾಜಿಕ ಕೆಲಸ
– 38 ಗ್ರಾಮ ಪಂಚಾಯಿತಿಗೆ ಪುಸ್ತಕ ವಿತರಣೆ
– 7 ಲಕ್ಷ ಮೌಲ್ಯದ ಪುಸ್ತಕ ಹಂಚಿಕೆ: ಗಣ್ಯರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ಮನೋರಂಜನೆ ಜತೆಗೆ ಒಂದಲ್ಲ ಒಂದು ಸಾಮಾಜಿಕ ಕೆಲಸವನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚಿಗೆ ಮಲ್ನಾಡ್ ಕ್ಲಬ್ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ 38 ಗ್ರಾಮ ಪಂಚಾಯಿತಿಗೆ ಪುಸ್ತಕ ವಿತರಣೆ ಮಾಡಲಾಗಿದೆ. ಸುಮಾರು 7 ಲಕ್ಷ ಮೌಲ್ಯದ ಪುಸ್ತಕ ಹಂಚಿಕೆ ಮಾಡಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಪಂಚಾಯಿತಿ, ಮಲ್ನಾಡ್ ಕ್ಲಬ್ ತೀರ್ಥಹಳ್ಳಿ, ಅಜೀಮ್ ಪ್ರೇಮ್ ಜಿ ಫೌಂಡೇಶನ್, ವಿಹಂಗಮ ಪರಿಸರ ಅಧ್ಯಯನ ಕೇಂದ್ರ ಹಾಗೂ ವಿವಿಧ ದಾನಿಗಳ ಸಹಯೋಗದಲ್ಲಿ ತಾಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಲೈಬ್ರರಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

ಓದುವ ಹವ್ಯಾಸ ಬೆಳೆಸೋಣ…

ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ, ಇಲ್ಲಿ ಇರುವವರೆಲ್ಲ ಓದಬೇಕು ಎನ್ನುವುದಕ್ಕಿಂತ ಓದುವವರಿಗೆ ತಲುಪಿಸಬೇಕು ಎಂದರು. ನಮ್ಮ ರಾಜ್ಯದಲ್ಲಿ ಲೈಬ್ರರಿಗೆ ಒಂದು ದಿನದಲ್ಲಿ ಒಬ್ಬರು ಬರದೇ ಇರುವಂತಹ ಲೈಬ್ರರಿಗಳು ಇದ್ದಾವೆ. ಪ್ರತಿಯೊಂದು ಪಂಚಾಯಿತಿಗೆ ಒಂದೊಂದು ಲೈಬ್ರರಿ ಇದೆ. ಒಂದು ಸರಿ ಓದುವ ಹವ್ಯಾಸ ರೂಢಿಸಿಕೊಂಡರೆ ಮತ್ತೆ ಮತ್ತೆ ಓದುತ್ತಿರುತ್ತಾರೆ. ಶಾಲೆಗಳಲ್ಲಿ ಪುಸ್ತಕಗಳನ್ನು ಓದಿಸಲು ಪ್ರಯತ್ನ ಮಾಡಬೇಕು, ಕೆಲವೊಂದು ಶಾಲೆಗಳ ಲೈಬ್ರೆರಿಯಲ್ಲಿ ಪುಸ್ತಕಗಳು ಓರಲೇ ಹಿಡಿದು ಹೋಗಿದೆ. ಶಾಲೆಯಲ್ಲಿಯೇ ಮಕ್ಕಳಿಗೆ ಪುಸ್ತಕ ಓದಿಸದಿದ್ದರೆ ಇನ್ನು ಎಲ್ಲಿ ಓದಿಸಲು ಸಾಧ್ಯ ಎಂದು ಹೇಳಿದರು. ಪುಸ್ತಕಗಳನ್ನು ಓದುವವರಿಗೆ ಒಂದು ಮೆಸೇಜ್ ಕೊಡುವ ಹಾಗೆ 38 ಗ್ರಾಮ ಪಂಚಾಯಿತಿಗಳನ್ನು ಇದನ್ನು ಮಾಡಬೇಕು, ಹೀಗೆ ಮಾಡಿದಾಗ ಲೈಬ್ರರಿ ಕಡೆ ಜನರ ಗಮನ ಬರುತ್ತದೆ ಎಂದು ಗ್ರಂಥಪಾಲಕರಿಗೆ ವಿನಂತಿ ಮಾಡಿದರು.

ತೀರ್ಥಹಳ್ಳಿ ಮಾದರಿ ಆಗಬೇಕು

ಸಹಕಾರಿ ನಾಯಕ ಡಾ. ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ನಾವು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ನಮ್ಮ ತೀರ್ಥಹಳ್ಳಿ ಬೇರೆ ಊರುಗಳಿಗೆ ಮಾದರಿಯಾಗಬೇಕು. ಈ ತಾಲೂಕಿನಲ್ಲಿ ಪುಸ್ತಕಕ್ಕೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿರುವಂತಹ ವ್ಯಕ್ತಿಗಳು ಇದ್ದಾರೆ. ರಾಮಾಯಣಂ ದರ್ಶನಂ ನಲ್ಲಿ ಮಲೆನಾಡಿನ ಚಿತ್ರಣಗಳನ್ನು ವರ್ಣಿಸಿದ್ದರೆ. ಅಂದಿನ ಮಲೆನಾಡಿನ ಚಿತ್ರಣಗಳನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಒಂದು ಇತಿಹಾಸವಾಗಿ ಉಳಿದಿದೆ. ಆದ್ದರಿಂದ ಇತಿಹಾಸ ಸೃಷ್ಟಿಯಾಗುವುದೇ ಪುಸ್ತಕಗಳಿಂದ ಇಂದು ಹೇಳಲಾಗುತ್ತದೆ ಎಂದು ಹೇಳಿದರು.

ಡಾ.ಜೆ. ಕೆ. ರಮೇಶ್ ಅವರು ಮಾತನಾಡಿ ಪುಸ್ತಕಗಳನ್ನು ಜೀವಂತವಾಗಿ ಇಡುವವರು ಗ್ರಂಥಪಾಲಕರು. ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಂಥಾಲಯದ ಪಾತ್ರ ಮಹತ್ವವಾದದ್ದು, ಹಳ್ಳಿಗಳಲ್ಲಿ ಗ್ರಂಥಾಲಯ ಇದ್ದರೆ ಗ್ರಂಥಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಕಾರ್ಯನಿರ್ವಹಣಾಧಿಕಾರಿಗಳಾದ ಶೈಲಾ ಎನ್ ರವರು ಮಾತನಾಡಿ, ಒಂದು ಅತ್ಯುತ್ತಮ ಕೆಲಸಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ನೆಲೆಯಲ್ಲಿ, ಕುವೆಂಪುರವರ ತಾಣದಲ್ಲಿ ಸಾಹಿತ್ಯ ಲೋಕಕ್ಕೆ ಮಹನೀಯರು ಕೊಟ್ಟಂತ ಕೊಡುಗೆಯನ್ನು ಸ್ಮರಿಸುತ್ತ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ಮಲ್ನಾಡ್ ಕ್ಲಬ್ ಅಧ್ಯಕ್ಷರಾದ ಜೆ ಟಿ ಸುಂದರೇಶ್, ಮಾತನಾಡಿ ಈ ಕಾರ್ಯಕ್ರಮ ಇಷ್ಟೊಂದು ಯಶಸ್ವಿಯಾಗಿರುವುದು ಬಹಳ ಹೆಮ್ಮೆ ನಮಗೆ. ಕೆಲವೊಂದು ಪುಸ್ತಕಗಳು ತುಂಬಾ ಇಂಟರೆಸ್ಟಿಂಗ್ ಆಗಿದೆ ನಾನು ನಾಲ್ಕು ಐದು ಬಾರಿ ಓದಿರುವ ಪುಸ್ತಕಗಳು ಕೂಡ ಇದ್ದಾವೆ ಎಂದು ಹೇಳಿದರು. ಮುರುಳಿ ಅವರು ಮಾತನಾಡಿ ನಮ್ಮ ಅಜ್ಜ ಕೂಡ ಒಂದು ಲೈಬ್ರರಿಯನ್ನು ಇಟ್ಟುಕೊಂಡಿದ್ದರು ಅದು ಅವರು ಒಂದು ಒಳ್ಳೆಯ ಸ್ಥಾನವನ್ನು ಪಡೆಯಲು ಕಾರಣವಾಯಿತು. ಇವತ್ತಿನ ಕಾಲಘಟ್ಟಕ್ಕೆ ಪುಸ್ತಕಗಳು ಇನ್ನೂ ಓದುವವರು ಸಂಖ್ಯೆ ಕಡಿಮೆಯಾಗಿದೆ.

ಪುಸ್ತಕಗಳ ಅಭಿವೃದ್ಧಿಯನ್ನು ಬೆಳೆಸುವಂತಹ ಕಾರ್ಯಆಗಬೇಕು. ಪ್ರತಿ ಗ್ರಾಮ ಪಂಚಾಯಿತಿನಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಆಚರಿಸುವುದರ ಮೂಲಕ ಪುಸ್ತಕ ಅಭಿವೃದ್ಧಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಮಲ್ನಾಡ್ ಕ್ಲಬ್ ಕಾರ್ಯದರ್ಶಿ ಎಸ್ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಸ್ವಾಗತಿಸಿದರು ಹಾಗೂ ನಾಗರಾಜ್ ಕಾರ್ಯಕ್ರಮವನ್ನು ವಂದಿಸಿದರು. ವಿಹಂಗಮ ಪರಿಸರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಕಡಿದಾಳ್ ದಯಾನಂದ ಸೇರಿದಂತೆ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಪಿಡಿಒ, ಗ್ರಂಥ ಪಾಲಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Categories
ಬೆಂಗಳೂರು

ಬೆಂಗಳೂರಿಗರಿಗೆ ಗುಡ್ ನ್ಯೂಸ್..!

ಬೆಂಗಳೂರಿಗರಿಗೆ ಗುಡ್ ನ್ಯೂಸ್..!
– ಇನ್ಮುಂದೆ ದಿನದ 24 ಗಂಟೆಯೂ ಹೋಟೆಲ್ ಓಪನ್ ..!
– ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ

NAMMUR EXPRESS NEWS
ಬೆಂಗಳೂರು: ಇನ್ಮುಂದೆ ದಿನದ 24 ಗಂಟೆಯೂ ಹೋಟೆಲ್ ಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿದೆ .ದಿನದ 24 ಗಂಟೆ ಹೋಟೆಲ್ ಓಪನ್ ಮಾಡೋದಕ್ಕೆ ಸರ್ಕಾರ ಅನುಮತಿ ನೀಡುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೋಟೆಲ್ ಗಳನ್ನ ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡುವಂತೆ ಹೋಟೆಲ್ ಅಸೋಸಿಯೇಷನ್ ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದು, ಈ ಬಾರಿ ಕಾಂಗ್ರೆಸ್‌ ಸರ್ಕಾರ ಇವರ ಬೇಡಿಕೆಯನ್ನ ಈಡೇರಿಸಲು ಮುಂದಾಗಿದ್ದು, ಇದಕ್ಕೆ ಅನುಮತಿ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ.

ದಿನದ 24 ಗಂಟೆಯೂ ಹೋಟೆಲ್ ಗಳನ್ನು ಓಪನ್ ಮಾಡುವ ಬಗ್ಗೆ ಕೆಲವೇ ದಿನಗಳಲ್ಲಿ ಸರ್ಕಾರ ಮಾರ್ಗಸೂಚಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೇರಳದಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ಇದ್ದು, ಅದರಂತೆ ಬೆಂಗಳೂರಿನಲ್ಲಿ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. ಸರ್ಕಾರ ಇದಕ್ಕೆ ಅನುಮತಿ ನೀಡಿದರೆ ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹೋಗುವವರಿಗೆ, ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ಒಳ್ಳೆಯದಾಗುತ್ತದೆ. ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಉದ್ಯೋಗ ಕೂಡ ಸೃಷ್ಟಿಯಾಗುತ್ತದೆ ಎಂಬುದು ಹೋಟೆಲ್ ಮಾಲೀಕರ ಮಾತಾಗಿದೆ.

Categories
ಶಿವಮೊಗ್ಗ

ವಾಹನ ಡಿಕ್ಕಿ; ಚಿರತೆ ಸಾವು!

ವಾಹನ ಡಿಕ್ಕಿ; ಚಿರತೆ ಸಾವು!
– ಆಯನೂರು ಸಮೀಪ ಘಟನೆ
– ಅರಣ್ಯ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಎಚ್ಚರ!

NAMMUR EXPRESS NEWS
ಶಿವಮೊಗ್ಗ: ಚಿರತೆಯೊಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಆಯನೂರು ಸಮೀಪದ ಕಲ್ಲುಕುರ್ಚಿ ಬಳಿ ನಡೆದಿದೆ. ಸೋಮವಾರ ರಾತ್ರಿ ಘಟನೆ ನಡೆದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.‌ ಆಯನೂರು – ಹಣಗೆರೆ ಕಟ್ಟೆ – ಬೆಜ್ಜವಳ್ಳಿ ಮಾರ್ಗದಲ್ಲಿ ಈ ಘಣನೆ ನಡೆದಿದೆ. ಒಂದೂವರೆ ವರ್ಷದ ಗಂಡು ಚಿರತೆ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ವಾಹನ ಅಪ್ಪಳಿಸಿದ್ದು ಚಿರತೆಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದೆ. ಸುದ್ದಿ ತಿಳಿದು ಹಣಗೆರೆಕಟ್ಟೆ ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಅರಣ್ಯಪ್ರದೇಶಗಳಲ್ಲಿ ರಸ್ತೆ ದಾಟುವಾಗ ಜಿಂಕೆ, ಚಿರತೆ, ಕಾಡುಕೋಣಗಳ ಬಗ್ಗೆ ಎಚ್ಚರಿಕೆ ಹೊಂದುವುದು ಅಗತ್ಯವಾಗಿದೆ.

Categories
ಬೆಂಗಳೂರು ರಾಜ್ಯ

ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ.!

ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ.!
– ಆಹಾರ ಧಾನ್ಯಗಳಿಗೆ ಬರಗಾಲ!
– ತೀವ್ರ ಅಭಾವ, ಬೆಲೆ ಹೆಚ್ಚಳ ಸಾಧ್ಯತೆ!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಆಹಾರ ಧಾನ್ಯಗಳಿಗೆ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಬರಗಾಲದ ಪರಿಣಾಮ ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆ ಶೇಕಡ 40ಕ್ಕೂ ಅಧಿಕ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಯಿದ್ದು, ರಾಗಿ, ಮೆಕ್ಕೆಜೋಳ, ಶೇಂಗಾ, ತೊಗರಿ ಎಲ್ಲವೂ ಕುಂಠಿತವಾಗಲಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೆಲವು ಕಡೆ ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ. ರಾಜ್ಯದಲ್ಲಿ 114.27 ಲಕ್ಷ ಹೆಕ್ಟ‌ರ್ ವಿಸ್ತೀರ್ಣದಲ್ಲಿ ಕೃಷಿ ಬೆಳೆ ಬಿತ್ತನೆ, 148.16 ಲಕ್ಷ ಮೆಟ್ರಿಕ್‌ ಟನ್ ಉತ್ಪಾದನೆ ಗುರಿ ಹೊಂದಲಾಗಿತ್ತು.

ಆದರೆ, ಮುಂಗಾರಿನಲ್ಲಿ 92.87 ಲಕ್ಷ ಮೆಟ್ರಿಕ್ ಟನ್, ಹಿಂಗಾರಿನಲ್ಲಿ 19.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ನಿರೀಕ್ಷಿಸಲಾಗಿದ್ದು, ಒಟ್ಟಾರೆ 112.33 ಲಕ್ಷ ಮೆಟ್ರಿಕ್ ಟನ್‌ ಆಹಾರ ಧಾನ್ಯ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. 36 ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಆಹಾರ ಧಾನ್ಯಗಳ ಕೊರತೆಯಾಗಲಿದ್ದು, ಹಿಂಗಾರು, ಮುಂಗಾರಿನ ಕೊರತೆಯಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಬರಗಾಲದ ಪರಿಣಾಮ ಜಲಾಶಯಗಳಲ್ಲಿ ನೀರಿಲ್ಲ. ಜಲಾಶಯಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸದ ಪರಿಣಾಮ ರೈತರು ಭತ್ತ ಬೆಳೆದಿಲ್ಲ. ಹೀಗಾಗಿ ಅಕ್ಕಿ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಮಾತ್ರವಲ್ಲದೆ, ರಾಗಿ, ಮೆಕ್ಕೆಜೋಳ, ಶೇಂಗಾ, ತೊಗರಿ ಕೂಡ ಉತ್ಪಾದನೆ ಕುಸಿತವಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Categories
ಬೆಂಗಳೂರು ರಾಜ್ಯ

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್..!

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್..!
– ವಾರದಲ್ಲಿ ಎರಡು ದಿನ ಮೊಟ್ಟೆ, ಶಾಲೆಗಳಿಗೆ ಉಚಿತ ವಿದ್ಯುತ್‌

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ನವೆಂಬರ್ ತಿಂಗಳಿಂದ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ಪೂರೈಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿನೀಡಿದರು. ಇದೇ ವೇಳೆ ಅವರು ಮಾತನಾಡುತ್ತ, ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದರೆ, ವಿದ್ಯಾರ್ಥಿಗಳಿಗೆ, ಶಿಕ್ಷಕರುಗಳಿಗೆ ಅನುಕೂಲವಾಗಲಿದೆ. ಎಷ್ಟೋ ಶಾಲೆಗಳು ವಿದ್ಯುತ್ ಬಿಲ್‌ಗೆ ಹೆದರುವ ಅಗತ್ಯವಿಲ್ಲ ಅಂತ ಹೇಳಿದರು . ಇನ್ನೂ ಶಾಲಾ ಮಕ್ಕಳಿಗೆ ಇನ್ನು ಮುಂದೆ ಎರಡು ಮೊಟ್ಟೆ ನೀಡಲಾಗುವದು, ಕ್ಷೀರ ಭಾಗ್ಯ ಪಾಲಿನಲ್ಲಿ ರಾಜ್ಯ ಮಾಲ್ಟ್ ಕೊಡುತ್ತೇವೆ. ಕ್ಷೀರ ಭಾಗ್ಯ ಪಾಲಿನಲ್ಲಿ ರಾಗಿ ಮಾಲ್ಟ್ ಹಾಕಿ, ಮೈಸೂರಿನ ಸಿಎಫ್ ಟಿಆರ್‌ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಮಕ್ಕಳ ಪೌಷ್ಟಿಕಾಂಶ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಅಂತ ಹೇಳಿದರು.

Categories
ಉಡುಪಿ ಚಿಕ್ಕಮಗಳೂರು

ಮತ್ತೆ ನಕ್ಸಲ್ ಹೆಜ್ಜೆ!?

ಮತ್ತೆ ನಕ್ಸಲ್ ಹೆಜ್ಜೆ!?
– ಬೈಂದೂರು: ಶಸ್ತ್ರ ಹಿಡಿದ ನಕ್ಸಲರ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರು
– ಕೇರಳ, ಕರ್ನಾಟಕ ಗಡಿಯಲ್ಲಿ ಎಚ್ಚರಿಕೆ
– ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೈ ಅಲರ್ಟ್‌

NAMMUR EXPRESS NEWS
ಚಿಕ್ಕಮಗಳೂರು/ಉಡುಪಿ: ಮತ್ತೆ ನಕ್ಸಲ್ ಹೆಜ್ಜೆ ರಾಜ್ಯದಲ್ಲಿ ಕಾಣುವ ಬಗ್ಗೆ ಪೊಲೀಸ್ ಇಲಾಖೆ ಸುಳಿವು ನೀಡಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ನಕ್ಸಲರ ಓಡಾಟದ ಸುಳಿವು ಸಿಕ್ಕಿದೆ. ಬೈಂದೂರು ತಾಲೂಕಿನ ಕೊಲ್ಲೂರು, ಮುದ್ದುರು, ಜಡ್ಕಲ್, ಬೆಳ್ಳಲ್ ಗ್ರಾಮಗಳ ಹಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಶಸ್ತ್ರ ಸಜ್ಜಿತ ನಕ್ಸಲರು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನಕ್ಸಲರು ಸಕ್ರಿಯ ಆಗಿದ್ದಾರೆ ಎನ್ನಲಾಗಿದೆ.

ಕೇರಳದಿಂದ ನಕ್ಸಲರು ಎಂಟ್ರಿ ಆದ್ರಾ?

ಕೇರಳದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಪರಿಣಾಮ ಅಲ್ಲಿನ ನಕ್ಸಲರು ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು ಯಾರೇ ಅಪರಿಚಿತರು ಗ್ರಾಮದಲ್ಲಿ ಓಡಾಟ ನಡೆಸಿದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಅಲರ್ಟ್ ನಕ್ಸಲ್ ನಾಯಕ ಸಾಕೇತ್ ರಾಜನ್ ಸತ್ತು ಫೆ.6ಕ್ಕೆ 19 ವರ್ಷ ಕಳೆದಿದೆ. ಹೀಗಾಗಿ ರೆಡ್ ಸಲ್ಯೂಟ್ ಎಂಬ ಕಾರ್ಯಕ್ರಮ ನಕ್ಸಲರಲ್ಲಿ ಆಚರಣೆಯಲ್ಲಿದೆ. ಈ ಉದ್ದೇಶದಿಂದ ಮಲೆನಾಡು ಮೂಲದ ವಿಕ್ರಂ ಗೌಡನ ತಂಡ ಕೊಲ್ಲೂರು ಸಮೀಪ ಬಂದಿರಬಹುದು ಎಂದು ಅಂದಾಜಿಸಲಾಗಿ ಎಂಬ ಮಾಹಿತಿ ಉನ್ನತ ಮೂಲದಿಂದ ದೊರಕಿದೆ.

ಮಲೆನಾಡು, ಕರಾವಳಿಯಲ್ಲಿ ಕೂಂಬಿಂಗ್ ಚುರುಕು

ಕರಾವಳಿ ಭಾಗದಲ್ಲಿ ನಕ್ಸಲರ ಓಡಾಟದ ಮಾಹಿತಿ ಬಂದ ಹಿನ್ನಲೆ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಚುರುಕುಕೊಳಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕ್ಯಾಂಪ್ ಗಳಿದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ 5 ದಿನಗಳ ಕಾಲ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ನಕ್ಸಲ್ ನಿಗ್ರಹ ದಳದ ಎಸ್ಪಿ ಜಿತೇಂದ್ರ ಕುಮಾರ್ ದಯಮ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶೃಂಗೇರಿ ಮೂಲದ ಬಿ ಜಿ ಕೃಷ್ಣಮೂರ್ತಿಯನ್ನು ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಬಂಧಿಸಲಾಗಿದ್ದು ಆತನ ವಿಚಾರಣೆ ಶಿವಮೊಗ್ಗದಲ್ಲಿ ನಡೆಯುತ್ತಿರುವಾಗಲೇ ಈ ಸುದ್ದಿ ಹೊರ ಬಿದ್ದಿದೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಮತ್ತಷ್ಟು ಕಡಿಮೆ ಆಯ್ತು ರಾಶಿ
– ಗೊರಬಲು ದರ ಎಷ್ಟಿದೆ?

ಅಡಿಕೆ ದರ
07-02-2024
ಬೆಟ್ಟೆ 40099 55199
ಗೊರಬಲು 18000 36000
ರಾಶಿ 28299 48699
ಸರಕು 46659 82500
ಸಿಪ್ಪೆಗೋಟು 10000 19599
ಚಾಲಿ 23199 37610
ಕೋಕಾ 11899 31599
ಕರೆ ಗೋಟು 25399 37099
ಬಿಳೆ ಗೋಟು 20199 29199
Nammur Express