Categories
ಆರೋಗ್ಯ ತೀರ್ಥಹಳ್ಳಿ ಹವಾಮಾನ ಸುದ್ದಿ

ಚಳಿಗಾಲ ಜೋರು: ಕಾಯಿಲೆಗಳು ಉಲ್ಬಣ..!

ಚಳಿಗಾಲ ಜೋರು: ಕಾಯಿಲೆಗಳು ಉಲ್ಬಣ..!
– ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
– ಆರೋಗ್ಯದ ಮೇಲೆ ಇರಲಿ ಎಚ್ಚರ!

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿ ಒಂದು ತಿಂಗಳಗಳೇ ಕಳೆದಿದೆ. ಆಗಲೇ ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿದೆ. ಶೀತ, ಜ್ವರ, ಚರ್ಮದ ಕಾಯಿಲೆ, ಅಸ್ತಮಾ, ಸಂದಿವಾತ, ವೈರಸ್ ಸೋಂಕಿನ ಬಾಧೆ ಜನರನ್ನು ಕಾಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ 1 ತಿಂಗಳಿನಿಂದ ವೈರಾಣು ಸೋಂಕಿಗೆ ಚಿಕಿತ್ಸೆ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹೆಚ್ಚಾಗಿದೆ. ಜತೆಗೆ ಶ್ವಾಸಕೋಶ ಸೋಂಕು, ತೀವ್ರ ಗಂಟಲಿನ ಸೋಂಕು ಹೆಚ್ಚಾಗಿರುವುದು ವರದಿಯಾಗುತ್ತಿದೆ.ವಾತಾವರಣದಲ್ಲಿ ಶುಷ್ಕ ಗಾಳಿಯಿಂದ ಜ್ವರ, ಗಂಟಲು ಕೆರೆತ ಹಾಗೂ ಕೆಮ್ಮು ಸಾಮಾನ್ಯವಾಗಿದೆ. ಮಾಮೂಲಿ ದಿನಗಳಿಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಅಧಿವಾಗಿದೆ

Categories
ತೀರ್ಥಹಳ್ಳಿ

ಕಸದ ತೊಟ್ಟಿಗಳಾಗುತ್ತಿವೆ ಕೆರೆಗಳು!

ಕಸದ ತೊಟ್ಟಿಗಳಾಗುತ್ತಿವೆ ಕೆರೆಗಳು!
– ತಿರಳೆ ಬೈಲು ಕೆರೆಯಲ್ಲಿ ಕಸದ ರಾಶಿ, ಪ್ಲಾಸ್ಟಿಕ್
– ಬಹುತೇಕ ಕೆರೆಗಳಿಗೆ ಕಸ ಎಸೆತ: ಮಾಹಿತಿ ಫಲಕ ಇಲ್ಲ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ಹೊರ ವಲಯದ ಕೆರೆಗಳು ಈಗಾಗಲೇ ಒತ್ತುವರಿಯಾಗಿ ಕೆಲವೇ ಭಾಗ ಉಳಿದಿದೆ. ಆದರೆ ಇದೀಗ ಆ ಕೆರೆಗಳಿಗೂ ಕಸ ಕಂಟಕ ಎದುರಾಗಿದೆ. ಕೆರೆಗಳಿಗೆ ಕಸ, ಪ್ಲಾಸ್ಟಿಕ್ ಎಸೆದು ಕೆರೆಯನ್ನು ಮಾಲಿನ್ಯ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಆಡಳಿತ ಮಾತ್ರ ನಮಗೆ ಸಂಬಂಧ ಇಲ್ಲ ಎಂದು ಕುಳಿತಿದೆ. ತೀರ್ಥಹಳ್ಳಿ ಕೊಪ್ಪ ಮಾರ್ಗದ ತಿರಳೆಬೈಲು ಕೆರೆಯಲ್ಲಿ ಯತೇಚ್ಛವಾಗಿ ಜನ ಕಸದ ವಿಲೇವಾರಿಗಾಗಿ ಬಳಸಿಕೊಂಡ ರೀತಿ ಮಾತ್ರ ತುಂಬಾ ಖೇದ ಉಂಟು ಮಾಡುತ್ತಿದೆ.

ತೀರ್ಥಹಳ್ಳಿ ತಾಲೂಕು ಪ್ರಕೃತಿ ಹಾಗೂ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಪ್ರಕೃತಿ ಬಗೆಗೆ ಇಷ್ಟೊಂದು ನಿರ್ಲಕ್ಷ ಹೊಂದಿದ ಜನರು ಜೊತೆಗೆ ಆಡಳಿತ ವ್ಯವಸ್ಥೆ ಇನ್ನೂ ಇದೆ ಅಂತ ಯೋಚಿಸಿ ಕೊಳ್ಳಬೇಕಾದ ಸ್ಥಿತಿ ಇನ್ನೂ ಇದೆ.ಪ್ರಕೃತಿಯ ಉಳಿವು ನಮ್ಮೆಲ್ಲರ ಕರ್ತವ್ಯ ಆಗಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನನಾಯಕರು, ಗ್ರಾಮದ ಪ್ರತಿ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂಬುದೇ ನಮ್ಮೂರ ಎಕ್ಸ್ಪ್ರೆಸ್ ಕಾಳಜಿ.

Categories
ಉದ್ಯೋಗ ಸುದ್ದಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ

ಶಿವಮೊಗ್ಗ ಜಿಲ್ಲೆ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ
-14 ಗ್ರಾಮ ಪಂಚಾಯಿತಿಯಲ್ಲಿ ಭರ್ತಿಗೆ ಅವಕಾಶ
– ಅರ್ಜಿ ಸಲ್ಲಿಸಲು ಫೆ.23 ಕೊನೆಯ ದಿನ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 251 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಪ್ರಸ್ತುತ ಖಾಲಿ ಇರುವ 14 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ, ಹೋತನಕಟ್ಟೆ, ತಾಳಗುಂದ, ಮಾರವಳ್ಳಿ, ಅಗ್ರಹಾರ ಮುಚುಡಿ, ಸೊರಬ ತಾಲ್ಲೂಕಿನ ಅಂಡಿಗೆ, ಮುಟುಗುಪ್ಪೆ, ಭದ್ರಾವತಿ ತಾಲ್ಲೂಕಿನ ಹನುಮಂತಾಪುರ, ಸನ್ಯಾಸಿ ಕೋಡಮಗ್ಗೆ, ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ, ರಿಪ್ಪನ್‍ಪೇಟೆ, ಶಿವಮೊಗ್ಗ ತಾಲ್ಲೂಕಿನ ತುಪ್ಪೂರು, ತೀರ್ಥಹಳ್ಳಿ ತಾಲ್ಲೂಕಿನ ತೂದೂರು, ಸಾಗರ ತಾಲ್ಲೂಕಿನ ಭೀಮನಕೋಣೆ ಇಲ್ಲಿ ಮೀಸಲಾತಿಯನ್ವಯ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಫೆ.23 ಕೊನೆಯ ದಿನ. ಅರ್ಜಿಯನ್ನು ಸಂಬಂಧಿಸಿದ 14 ಗ್ರಾಮ ಪಂಚಾಯಿತಿ ಮತ್ತು ವೆಬ್‍ಸೈಟ್ https://shimoga.nic.in ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ದೃಢೀಕರಿಸಿದ ಅಗತ್ಯ ದಾಖಲೆ ಸಹಿತ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಸಲ್ಲಿಸಬೇಕು ಎಂದು ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯನ್ನು ಸಂಪರ್ಕಿಸಬಹುದು.

Categories
ಬೆಂಗಳೂರು ರಾಜ್ಯ

ಸರ್ಕಾರಿ ಕಾರ್ಯಕ್ರಮದ ಆರಂಭದಲ್ಲೇ ನಾಡಗೀತೆ ಕಡ್ಡಾಯ

ಸರ್ಕಾರಿ ಕಾರ್ಯಕ್ರಮದ ಆರಂಭದಲ್ಲೇ ನಾಡಗೀತೆ ಕಡ್ಡಾಯ
– ರಾಜ್ಯ ಸರ್ಕಾರ ಮಹತ್ವದ ಆದೇಶ
– ಏನಿದು ಬದಲಾವಣೆ… ಇಲ್ಲಿದೆ ಮಾಹಿತಿ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲೇ ನಾಡಗೀತೆ ಹಾಡೋದು ಕಡ್ಡಾಯ ಎಂಬುದಾಗಿ ಸರ್ಕಾರ ಆದೇಶ ಮಾಡಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ರಾಷ್ಟ್ರಕವಿ ಕುವೆಂಪು ರಚಿತ ಜಯಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರ, ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಅರೆ ಸರ್ಕಾರಿ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಆರಂಭದಲ್ಲಿ ಹಾಡಬೇಕು ಎಂಬುದಾಗಿ ಆದೇಶ ಹೊರಡಿಸಿದೆ.

ಜನವರಿ.7ರಂದು ಹೊರಡಿಸಿದ್ದ ಸರ್ಕಾರಿ ಆದೇಶದಲ್ಲಿ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಕ, ಇತರೆ ಅಧಿಕೃತ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವಂತ ಆದೇಶದಲ್ಲಿ ತಿಳಿಸಿದ್ದಾರೆ.

Categories
ರಾಜಕೀಯ ರಾಷ್ಟ್ರೀಯ ವಾರ್ತೆ

ರಾಜಕಾರಣಕ್ಕೆ ದಳಪತಿ ವಿಜಯ್!

ರಾಜಕಾರಣಕ್ಕೆ ದಳಪತಿ ವಿಜಯ್!
– ತಮಿಳಗ ವೆಟ್ರಿ ಕಳಗಂ’ ಹೊಸ ಪಕ್ಷ ಘೋಷಣೆ
– ರಜನೀಕಾಂತ್ ಎಂಟ್ರಿ ಅಗ್ತಾರಾ?

NAMMUR EXPRESS NEWS
ಚೆನ್ನೈ: ತಮಿಳಿನ ಹೆಸರಾಂತ ನಟ ದಳಪತಿ ವಿಜಯ್ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದು, ‘ತಮಿಳಗ ವೆಟ್ರಿ ಕಳಗಂ’ ಹೆಸರಿನ ಹೊಸ ರಾಜಕೀಯ ಪಕ್ಷ ಆರಂಭಿಸಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.ಈ ಘೋಷಣೆ ಹೊರಬೀಳುತ್ತಿದ್ದಂತೆಯೆ ಅವರ ಅಭಿಮಾನಿಗಳು ಸಂಭ್ರಮಿಸಿದ್ದು ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಶುರುವಾಗಿದೆ. ಭ್ರಷ್ಟಾಚಾರ ಮತ್ತು ಜಾತಿ, ಧರ್ಮದ ಭೇದಗಳಿಲ್ಲದ ನಿಸ್ವಾರ್ಥ, ಪಾರದರ್ಶಕ, ದೂರದೃಷ್ಟಿಯ ಹಾಗೂ ದಕ್ಷ ಆಡಳಿತಕ್ಕೆ ದಾರಿ ಮಾಡಿಕೊಡುವ ರಾಜಕೀಯ ಆಂದೋಲನಕ್ಕಾಗಿ ತಮಿಳುನಾಡಿನ ಜನರು ಹಂಬಲಿಸುತ್ತಿದ್ದಾರೆ ಎಂದಿರುವ ವಿಜಯ್ ಈಗಾಗಲೇ ಪಕ್ಷವನ್ನು ನೋಂದಣಿ ಕೂಡ ಮಾಡಿದ್ದಾರೆ.

ಎಂ.ಜಿ. ರಾಮಚಂದ್ರನ್, ಜೆ.ಜಯಲಲಿತಾ ಮತ್ತು ವಿಜಯಕಾಂತ್ ಅವರು ಚಿತ್ರರಂಗದಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ರೀತಿಯೇ ವಿಜಯ್‌ ಕೂಡ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಈಗ ಅದು ನಿಜವಾಗಿದೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ವಿಜಯ್‌, ತಮಿಳುನಾಡಿನ ಜನರು ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಡಿಎಂಕೆ ಸರ್ಕಾರದ ಅವಧಿ 2026ರಲ್ಲಿ ಕೊನೆಗೊಳ್ಳಲಿದೆ.

ಏನಿದು ಪಕ್ಷದ ಅರ್ಥ

‘ತಮಿಳಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಎಂದರ್ಥ. ‘ತಂದೆ–ತಾಯಿಯ ನಂತರ, ಹೆಸರು ಮತ್ತು ಕೀರ್ತಿ ತಂದುಕೊಟ್ಟ ರಾಜ್ಯದ ಜನತೆಗೆ ಮನಃಪೂರ್ವಕವಾಗಿ ಸಹಾಯ ಮಾಡಬೇಕೆನ್ನುವುದು ಬಹುದಿನಗಳ ಬಯಕೆಯಾಗಿತ್ತು’ ಎಂದು ಹೆಸರಾಂತ ಸಿನಿಮಾ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರ ಪುತ್ರರೂ ಆದ ವಿಜಯ್, ಪಕ್ಷ ಸ್ಥಾಪನೆಯ ಹಿಂದಿರುವ ಉದ್ದೇಶವನ್ನು ತೆರೆದಿಟ್ಟರು.ಪಕ್ಷದ ಅಧ್ಯಕ್ಷರಾಗಿ ವಿಜಯ್‌ ಜವಾಬ್ದಾರಿ ಹೊತ್ತಿದ್ದಾರೆ. ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ’ ಎಂದೂ ವಿಜಯ್‌ ಹೇಳಿದ್ದಾರೆ. ಆಡಳಿತ ಕುಸಿತ, ಭ್ರಷ್ಟಾಚಾರ ಮತ್ತು ಏಕತೆಗೆ ಧಕ್ಕೆ ತರುವ ವಿಭಜಕ ರಾಜಕಾರಣದಿಂದ ತುಂಬಿರುವ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ 49ರ ಹರೆಯದ ನಟ ವಿಜಯ್‌ ತೀವ್ರ ಕಳವಳ ವ್ಯಕ್ತಪಡಿಸಿದರು.

ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆ

‘ಪಕ್ಷದ ನೋಂದಣಿಗೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿ) ಅರ್ಜಿ ಸಲ್ಲಿಸಲಾಗಿದೆ’ ಎಂದು ವಿಜಯ್‌ ತಿಳಿಸಿದ್ದಾರೆ. ಕಳೆದ ಜನವರಿ 25ರಂದು ನಡೆದ ಪಕ್ಷದ ಸಾಮಾನ್ಯ ಮಂಡಳಿ ಮತ್ತು ಕಾರ್ಯಕಾರಿ ಮಂಡಳಿಯ ಸಭೆಗಳಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪಕ್ಷದ ಸಂವಿಧಾನ ಮತ್ತು ಬೈಲಾಗಳನ್ನು ಸಹ ಅಂಗೀಕರಿಸಲಾಯಿತು. ಇಸಿ ಮಾನ್ಯತೆ ಸಿಕ್ಕಿದ ನಂತರ ಪಕ್ಷದ ನೀತಿಗಳು, ಧ್ವಜ, ಚಿಹ್ನೆ ಮತ್ತು ಇತರ ಯೋಜನೆಗಳನ್ನು ನಂತರ ಅಂತಿಮಗೊಳಿಸಲಾಗುವುದು. ಈಗಾಗಲೇ ಒಪ್ಪಿಕೊಂಡಿರುವ ಚಿತ್ರವನ್ನು ಪಕ್ಷದ ಕೆಲಸಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಲು ಮತ್ತು ಸಾರ್ವಜನಿಕ ಸೇವೆಯ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿರುವುದಾಗಿಯೂ ಹೇಳಿದರು.

Categories
ಬೆಂಗಳೂರು ರಾಜ್ಯ

ಬೇಳೂರು ಅಧಿಕಾರ ಸ್ವೀಕಾರ ಸಂಭ್ರಮ!

ಬೇಳೂರು ಅಧಿಕಾರ ಸ್ವೀಕಾರ ಸಂಭ್ರಮ!
– ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ
– ಆರ್.ಎಂ, ಕಿಮ್ಮನೆ, ಶ್ರೀಕಾಂತ್ ಸೇರಿ ಗಣ್ಯರ ಭೇಟಿ: ಶುಭಾಶಯ

NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂ ವನವಿಕಾಸ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಶಿವಮೊಗ್ಗ ಜಿಲ್ಲೆಯ ಡೈನಾಮಿಕ್ ನಾಯಕರಲ್ಲಿ ಒಬ್ಬರಾದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಿಎಂ, ಡಿಸಿಎಂ ಸೇರಿ ಅನೇಕ ರಾಜ್ಯ ನಾಯಕರು ಶುಭ ಕೋರಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ, ಎಂ ಶ್ರೀಕಾಂತ್, ಹಮೀದ್ ಪಾಳ್ಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕುರುವಳ್ಳಿ ನಾಗರಾಜ್ ಸುಕೇಶ್ ಕೊಣಂದೂರು, ಕುಮಾರಸ್ವಾಮಿ ಜಾವಗಲ್, ಲೋಕೇಶ್ ಕರಕುಚ್ಚಿ ಕಚೇರಿಗೆ ತೆರಳಿ ಶುಭಾಶಯಗಳು ಕೋರಿ ಗೌರವಿಸಿದರು.

ಕಿಮ್ಮನೆ ಭೇಟಿ: ಅಭಿನಂದನೆ

ಸಾಗರ ಶಾಸಕರಿಗೆ ನೂತನ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಪ್ರಮುಖರಾದ ಅಮ್ರಪಾಲಿ ಸುರೇಶ,ಮುಡುಬ ರಾಘವೇಂದ್ರ, ಅಮರನಾಥ ಶೆಟ್ಟಿ, ವಿಜಯಕುಮಾರ್, ಚಂದ್ರ ಮೌಳಿ, ವಿನಯ್ ಸೇರಿದಂತೆ ಹಲವರು ಇದ್ದರು.

Categories
ಬೆಂಗಳೂರು

ಕಾಟೇರ ಹವಾ ಜೋರು!

ಕಾಟೇರ ಹವಾ ಜೋರು!
– 196 ಥಿಯೇಟರ್‌, 63 ಮಲ್ಟಿಪ್ಲೆಕ್ಸ್‌ ಥಿಯೇಟರ್‌ನಲ್ಲಿ ಸಿನಿಮಾ
– ದರ್ಶನ್ ನಟನೆಗೆ ಜನ ಫಿದಾ: ಎಲ್ಲೆಡೆ ಫುಲ್ ಫುಲ್
– ಯಶ್ ಫ್ಯಾನ್ಸ್ ದುರಂತ: ಪರಿಹಾರ ಕೊಟ್ಟ ಯಶ್‌!

NAMMUR EXPRESS NEWS
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. 2023ರ ಡಿಸೆಂಬರ್‌ನಲ್ಲಿ ರಿಲೀಸ್ ಆದರೂ ಜನವರಿಯಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಇನ್ನು ತನ್ನ ಓಟ ಕಾಯ್ದುಕೊಂಡಿದೆ. ಸಿನಿಮಾ ಹೆಚ್ಚು ಕಡಿಮೆ ಇದೀಗ 36 ದಿನಗಳನ್ನ ಕಳೆದಿದೆ. ಅಂದ್ರೆ 6 ವಾರಕ್ಕೆ ಕಾಲಿಟ್ಟಿರೋ ಕಾಟೇರ ಸಿನಿಮಾ, ಸಿಂಗಲ್ ಥೀಯೇಟರ್ ನಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲೂ ಓಡುತ್ತಿದೆ. 100 ಕೋಟಿ ಕ್ಲಬ್ ಸೇರಿ ಎರಡನೂರು ಕೋಟಿ ದಾಟಿ ದಾಖಲೆ ಮಾಡಿದೆ. ಟಿಕೆಟ್ ವಿಚಾರದಲ್ಲಿ ಹೊಸ ದಾಖಲೆಗಳನ್ನೆ ಮಾಡಿದೆ. ದರ್ಶನ್ ಚಿತ್ರ ಜೀವನದಲ್ಲಿ ಕಾಟೇರ ಸಿನಿಮಾ ವಿಶೇಷವಾಗಿಯೇ ಇದೆ. ಈ ಚಿತ್ರ ಓಟಕ್ಕೆ ಪರ ಭಾಷೆಯ ಸಿನಿಮಾಗಳು ಪಕ್ಕಕ್ಕೆ ಸರಿದಿದ್ದವು. ಕರ್ನಾಟಕದಲ್ಲಿ ಅಷ್ಟು ಕ್ರೇಜ್ ಹುಟ್ಟುಹಾಕಿದ್ದ ಕನ್ನಡದ ಕಾಟೇರ ಸಾಕಷ್ಟು ಗಳಿಕೆ ಮಾಡಿದೆ. ದಾಖಲೆ ಮೇಲೆ ದಾಖಲೆಯನ್ನೂಮಾಡಿದೆ. ಈ ಮೂಲಕ ಕಾಟೇರ ಇದೀಗ 6 ನೇ ವಾರಕ್ಕೆ ಕಾಲಿಟ್ಟಿದೆ.

ಯಶ್ ಫ್ಯಾನ್ಸ್ ದುರಂತ: ಗಾಯಾಳುಗಳಿಗೆ ಒಂದು ಲಕ್ಷ ರೂ. ಪರಿಹಾರ ಕೊಟ್ಟ ಯಶ್‌!

ಗದಗ: ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್‌ ಗಾತ್ರದ ಕಟೌಟ್‌ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್‌ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು. ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಮೃತ ಯುವಕನ ಕುಟುಂಬಕ್ಕೆ ಪರಿಹಾರದ ಚೆಕ್​ ನೀಡಿದ್ದರು.

ಅದೇ ವೇಳೆ ಗಾಯಾಳುಗಳ ಬ್ಯಾಂಕ್ ಮಾಹಿತಿ ಪಡೆದು ಪರಿಹಾರದ ಭರವಸೆ ನೀಡಿ ಹೋಗಿದ್ದರು. ಇದೀಗ ನಾಲ್ಕು ಜನ ಗಾಯಾಳುಗಳ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಬ್ಯಾಂಕ್‌ ಖಾತೆಗೆ ನೇರವಾಗಿ ಹಾಕಿದ್ದಾರೆ. ಯಶ್‌ ಅವರು ಮೃತಪಟ್ಟ ಮೂವರು ಅಭಿಮಾನಿಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಭಿಮಾನಿಗಳು ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಅಭಿಮಾನವನ್ನು ಬ್ಯಾನರ್‌, ಕಟೌಟ್‌ಗಳ ಮೂಲಕ ತೋರಿಸುವ ಬದಲು ಒಳ್ಳೆಯ ಕೆಲಸದ ಮೂಲಕ, ಒಳ್ಳೆಯ ಬದುಕಿನ ಮೂಲಕ ತೋರಿಸಬೇಕು ಎಂದು ಯಶ್‌ ಈ ಹಿಂದೆ ಮನವಿ ಮಾಡಿದ್ದರು.

Categories
ಬೆಂಗಳೂರು

ಸಾಲಗಾರರ ಕಾಟಕ್ಕೆ ಬೇಸತ್ತು ಪುರುಷ ಹೆಣ್ಣಾದ!

ಸಾಲಗಾರರ ಕಾಟಕ್ಕೆ ಬೇಸತ್ತು ಪುರುಷ ಹೆಣ್ಣಾದ!
– ಸಾಲದ ಕಾಟ ತಪ್ಪಿಸಿಕೊಳ್ಳಲು ಲಿಂಗ ಪರಿವರ್ತನೆ
– ಬಿಗ್ ಬಾಸ್ ಶೋ ಇಂದ ಬಯಲಾಯ್ತು ಭಯಾನಕ ಕಥೆ!

NAMMUR EXPRESS NEWS
ರಾಮನಗರ: 2017ರಲ್ಲಿ ಮನೆ ಬಿಟ್ಟು ಹೋಗಿದ್ದ ಗಂಡ, ಇದೀಗ ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಿ ಪತ್ತೆಯಾಗಿದ್ದಾನೆ. ಈತನನ್ನು ಕಂಡ ಕುಟುಂಬಸ್ಥರು ಆಘಾತಗೊಂಡಿದ್ದು, ಗಂಡನನ್ನು ಆ ರೂಪದಲ್ಲಿ ಕಂಡ ಹೆಂಡತಿ ಆಘಾತಕ್ಕೀಡಾಗಿದ್ದಾರೆ. ಮೂಲಗಳ ಪ್ರಕಾರ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ ಎಂಬುವರು 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮದುವೆ ಆದ ಎರಡೇ ವರ್ಷಕ್ಕೆ ಅಂದರೆ 2017ರಲ್ಲಿ ಲಕ್ಷ್ಮಣ್ ಸಾಲದ ವಿಚಾರಕ್ಕೆ ಮನೆಯಿಂದ ನಾಪತ್ತೆಯಾಗಿದ್ದ. ಗಂಡನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಪತ್ನಿ ಐಜೂರು ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು.

ಗೊತ್ತಾಗಿದ್ದು ಹೇಗೆ?

ಬರೋಬ್ಬರಿ ಆರು ವರ್ಷಗಳ ಬಳಿಕ ಇದೀಗ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ. ಆದರೆ, ಸುಳಿವು ನೀಡಿದ್ದು ಮಾತ್ರ ಕನ್ನಡದ ರಿಯಾಲಿಟಿ ಷೋ ಬಿಗ್ ಬಾಸ್. ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿ ನೀತು ವನಜಾಕ್ಷಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನಲ್ಲಿ ತೃತೀಯ ಲಿಂಗಿಗಳು ಅವರನ್ನು ಸ್ವಾಗತಕ್ಕೆ ತೆರಳಿ ಸನ್ಮಾನಿಸಿದ್ದರು. ಈ ವೇಳೆ ತೃತೀಯ ಲಿಂಗಿ ರಶ್ಮಿಕಾ ಮಾಡಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಹೆಣ್ಣಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು ವೈರಲ್ ಆಗಿದ್ದ ರೀಲ್ಸ್‌ನಲ್ಲಿ ಕಾಣೆಯಾದ ಮಗನ ಹೋಲಿಕೆ ಇತ್ತು.

ಹೀಗಾಗಿ ಕುಟುಂಬಸ್ಥರಿಗೂ ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿತ್ತು. ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಶ್ಮಿಕಾ ಹೆಸರಿನ ರೀಲ್ಸ್ ಪ್ರೊಫೈಲ್ ಪರಿಶೀಲಿಸಿದಾಗ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪಿಸಿದ್ದಾರೆ.ಲಕ್ಷ್ಮಣ್ ಹುಡುಕಿ ಪೊಲೀಸರು ನೀವು ಲಕ್ಷ್ಮಣ್ ಅಲ್ಲವೇ ಎಂದು ಕೇಳಿದಾಗ ಎಷ್ಟೇ ಪ್ರಯತ್ನಿಸಿದರೂ ತಾನು ವಿಜಯಲಕ್ಷ್ಮೀ ಎಂದು ಲಕ್ಷ್ಮಣ್ ಪಟ್ಟು ಹಿಡಿದಿದ್ದು, ಲಕ್ಷ್ಮಣ್ ನಿಮ್ಮ ಹಾಗೆಯೇ ಕಾಣಿಸಿದ ಕಾರಣ ವಿಚಾರಿಸಲು ಬಂದೆವು. ನೀವು ವಾಪಾಸ್ ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ವಾಪಾಸ್ ಹೋಗೊ ವೇಳೆ, ಜೋರಾಗಿ ಲಕ್ಷ್ಮಣ್ ಎಂದು ಇನ್ಸ್ ಪೆಕ್ಟರ್ ಕೂಗಿದ್ದಾರೆ.

ಕೂಡಲೇ ಹಾಂ… ಎಂಬ ಪ್ರತ್ಯುತ್ತರ ವಿಜಯಲಕ್ಷ್ಮೀ ಬಾಯಿಯಿಂದ ಬಂದಿದೆ! ಪತಿಯ ವೇಷ ನೋಡಿ ಮೂರ್ಛ ಹೋದ ಪತ್ನಿ ಪೊಲೀಸರಿಗೆ ಎಲ್ಲವೂ ಖಾತ್ರಿಯಾಗಿ ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. 2017ರಲ್ಲಿ ರಾಮನಗರ ಬಿಟ್ಟು ಹೋಗಿದ್ದ ಲಕ್ಷ್ಮಣ್ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಆತನನ್ನು ನೋಡಿದ ಬಳಿಕ ಕುಟುಂಬಸ್ಥರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಠಾಣೆಗೆ ಆಗಮಿಸಿದಾಗ ಗಂಡ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕಂಡು ಪತ್ನಿ ಮೂರ್ಛೆ ಹೋಗಿದ್ದಾರೆ. ‘ನಿನಗೆ ಹೆಂಡತಿ ಮಕ್ಕಳು ಬೇಡವೇ” ಎಂದು ಪ್ರಶ್ನಿಸಿದಾಗ, ‘ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ಹೆಂಡತಿ ಮಕ್ಕಳು ಬೇಡ, ನಿಮ್ಮ ತಂಟೆಗೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸಿದ್ದಾರೆ.

Categories
ಬೆಂಗಳೂರು ರಾಜ್ಯ

18 ವರ್ಷ ಆಗ್ದಿದ್ರೆ ಬೈಕ್, ಕಾರು ಓಡ್ಸಿದ್ರೆ ಹುಷಾರ್!

18 ವರ್ಷ ಆಗ್ದಿದ್ರೆ ಬೈಕ್, ಕಾರು ಓಡ್ಸಿದ್ರೆ ಹುಷಾರ್!
– 18 ವರ್ಷ ಮೀರದ ಮಕ್ಕಳಿಂದ ವಾಹನ ಚಾಲನೆ
– ಒಂದೇ ದಿನ 1800 ಮಕ್ಕಳ ಪೋಷಕರಿಗೆ ದಂಡ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 18 ವರ್ಷ ವಯಸ್ಸಾಗದ, ಚಾಲನಾ ಪರವಾನಗಿ ಹೊಂದಿಲ್ಲದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಬೈಕ್ ರೈಡ್ ಮಾಡಿದ ವಿಚಾರವಾಗಿ ಒಂದೇ ದಿನದಲ್ಲಿ ನಗರದಲ್ಲಿ 1800 ಮಕ್ಕಳ ಪೋಷಕರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಶಾಲಾ ಕಾಲೇಜುಗಳ ಬಳಿಯೇ ಹೋಗಿ ವಿದ್ಯಾರ್ಥಿಗಳು ತಂದ ವಾಹನಗಳನ್ನು ತಡೆದು ಡಿಎಲ್ ಹಾಗೂ ವಯಸ್ಸು ತಪಾಸಣೆ ಮಾಡಿದ್ದಾರೆ. ನಗರದ ಒಟ್ಟು 150ಕ್ಕೂ ಹೆಚ್ಚು ಶಾಲೆಗಳಲ್ಲಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 1500ಕ್ಕೂ ಹಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರೋದು ಪತ್ತೆಯಾಗಿದೆ. ಬಳಿಕ ಅವರ ಪೋಷಕರನ್ನು ಕರೆಸಿ ದಂಡ ವಿಧಿಸಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಪೋಷಕರನ್ನು ಕರೆಸಿ ದಂಡ ವಿಧಿಸಿದ ಪೊಲೀಸರು, ಪುನಃ ಇದೇ ರೀತಿ ಮಾಡಿದರೆ ಎಫ್‌ಐಆ‌ರ್ ದಾಖಲಿಸುವುದಾಗಿ ಪೋಷಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಅಲ್ಲದೆ, ಶಾಲೆಗಳಿಂದ ಸುತ್ತೋಲೆ ಕೂಡ ಹೊರಡಿಸಲು ಸೂಚನೆ ನೀಡಿದ್ದಾರೆ.
ಶಾಲಾ ಮಕ್ಕಳು ಬೈಕ್ ರೈಡ್ ಮಾಡಿಕೊಂಡು ತೆರಳುತ್ತಿರವುದು ಅಪಘಾತಗಳಿಗೂ ಕಾರಣವಾಗುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಸಂಚಾರ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.

Categories
ತೀರ್ಥಹಳ್ಳಿ

ಹೊನ್ನೆತಾಳು ಸೊಸೈಟಿಗೆ ನಾಬಳ ಶಚ್ಚೀಂದ್ರ ಹೆಗ್ಡೆ ಸಾರಥಿ!

ಹೊನ್ನೆತಾಳು ಸೊಸೈಟಿಗೆ ನಾಬಳ ಶಚ್ಚೀಂದ್ರ ಹೆಗ್ಡೆ ಸಾರಥಿ!
– ಹಿರಿಯ ಸಹಕಾರಿ, ಸಂಘಟಕನಿಗೆ ಒಲಿದ ಹುದ್ದೆ
– ಸ್ನೇಹಿತರು, ಷೇರುದಾರರ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರಿ, ನಾಬಳ ಶಚ್ಚೀಂದ್ರ ಹೆಗ್ಡೆ ಆಯ್ಕೆ ಆಗಿದ್ದಾರೆ. ತುಳುನಾಡು ಸೌಹಾರ್ದ ಸಹಕಾರಿ ನಿರ್ದೇಶಕರಾಗಿ, ಹೊನ್ನೇತ್ತಾಳು ಗ್ರಾಮಪಂಚಯತ್ ಅಧ್ಯಕ್ಷರಾಗಿ, ತೀರ್ಥಹಳ್ಳಿ ಕಾಂಗ್ರೇಸ್ ಪಕ್ಷದ ನಾಯಕರಾಗಿ,, ಸಾರ್ವಜನಿಕ ಜೀವನದಲ್ಲಿ ಉತ್ತಮ ಹೆಸರನ್ನು ಸಂಪಾದನೆ ಮಾಡಿರುವ ಇವರಿಗೆ ಈ ಬಾರಿ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ಸ್ನೇಹಿತ ವರ್ಗ ಶುಭಾಶಯ ಸಲ್ಲಿಸಿದೆ.