Categories
ಕೊಪ್ಪ

ಕೊಪ್ಪದ ಕುಂಚೂರು ರಥೋತ್ಸವ ರಂಗು!

ಕೊಪ್ಪದ ಕುಂಚೂರು ರಥೋತ್ಸವ ರಂಗು!
– ದಿನೇ ದಿನೇ ದೇವಸ್ಥಾನ ಅಭಿವೃದ್ಧಿ ಹೆಚ್ಚಳ
– ಭಕ್ತರ ಆಗಮನ: ಸಂಭ್ರಮದ ಸಿದ್ಧತೆ

NAMMUR EXPRESS NEWS
ಕೊಪ್ಪ: ಕೊಪ್ಪ ಸಮೀಪದ ಶ್ರೀ ಕ್ಷೇತ್ರ ಕುಂಚೂರು ದುರ್ಗಾಪರಮೇಶ್ವರಿ ಅಮ್ಮನವರ ರಥೋತ್ಸವ ಫೆಬ್ರವರಿ 15 ರಂದು ನೆರವೇರಲಿದೆ. ಈ ಅಂಗವಾಗಿ ಫೆ. 14ರಿಂದ ಫೆ. 19 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ತಾ. 14 ರಂದು ಶ್ರೀ ಗಣಪತಿ ಹೋಮ, ರಾಶಿಪೂಜೆ ಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ತಾ. 15 ರಂದು ಮಧ್ಯಾಹ್ನ ರಥಾರೋಹಣ, ರಾತ್ರಿ 8 ಗಂಟೆಗೆ ರಥೋತ್ಸವ ನೆರವೇರಲಿದ್ದು, ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಮಂದಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಫೆ. 16 ರಂದು ತುಲಾಭಾರ, ರಾತ್ರಿ ಯಕ್ಷಗಾನ ನಡೆಯಲಿದೆ.

ಫೆ.17ರಂದು ಶ್ರೀ ದುರ್ಗಿ ಸಮಾರಾಧನೆ, ಸಾಮೂಹಿಕ ಸತ್ಯನಾರಾಯಣ ವ್ರತ, ರಾತ್ರಿ ಮಾರಿ ಹಾಗೂ ಭೂತನ ಪೂಜೆ ನಡೆಯುತ್ತವೆ. ಫೆಬ್ರವರಿ 18 ರಂದು ಮಾರಿ ಪೂಜೆ ನಡೆಯಲಿದ್ದು, ತಾ. 19 ರಂದು ಸಂಪ್ರೋಕ್ಷಣೆಯೊಂದಿಗೆ ಕುಂಚೂರು ಜಾತ್ರೆಗೆ ತೆರೆ ಬೀಳಲಿದೆ. ಇತ್ತೀಚಿನ ವರ್ಷಗಳಲ್ಲಿ ಶ್ರೀ ಕ್ಷೇತ್ರ ಕುಂಚೂರು ಅಭಿವೃದ್ಧಿ ಹೊಂದಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಇಮ್ಮಡಿಯಾಗಿದೆ. ಶ್ರೀ ಕ್ಷೇತ್ರದ ಮುಖ್ಯಸ್ಥರಾದ ಕುಂಚೂರು ಶ್ರೀನಿವಾಸ್ ಹಾಗೂ ಗ್ರಾಮಸ್ಥರು ರಥೋತ್ಸವ, ಜಾತ್ರೆ, ಮಾರಿ ಹರಕೆಗಳನ್ನು ವಿಶೇಷ ಪರಿಶ್ರಮದಿಂದ ನಿರ್ವಹಿಸಿ ಜನ ಮನ್ನಣೆ ಪಡೆದಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಬಾಲಿವುಡ್‌ ನಟಿ, ಮಾಡೆಲ್‌ ಪೂನಂ ಪಾಂಡೆ ಕ್ಯಾನ್ಸರಿಗೆ ಬಲಿ!

ಬಾಲಿವುಡ್‌ ನಟಿ, ಮಾಡೆಲ್‌ ಪೂನಂ ಪಾಂಡೆ ಕ್ಯಾನ್ಸರಿಗೆ ಬಲಿ!
– ಗರ್ಭಕಂಠ ಕ್ಯಾನ್ಸರ್‌ಗೆ ಬಲಿ: ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ
– ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ, ಹೇಳಿಕೆ ಯಿಂದಲೇ ಫೇಮಸ್

NAMMUR EXPRESS NEWS
ಬಾಲಿವುಡ್‌ ನಟಿ, ರೂಪದರ್ಶಿ ಪೂನಂ ಪಾಂಡೆ (32) ಅವರು ನಿಧನರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಲ ತಿಂಗಳಿಂದ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ (ಫೆಬ್ರವರಿ 2) 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಪೂನಂ ಪಾಂಡೆ ಅವರ ಮ್ಯಾನೇಜರ್‌ ತಿಳಿಸಿದ್ದಾರೆ. ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬೋಲ್ಡ್‌ ಫೋಟೊಗಳು, ಬೋಲ್ಡ್‌ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದ ಪೂನಂ ಪಾಂಡೆ ಅವರು ಬಿಹಾರದವರು. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಇವರು ಮೊದಲು ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದರು. 2013ರಲ್ಲಿ ನಶಾ ಎಂಬ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಪೂನಂ ಪಾಂಡೆ, ಭೋಜ್‌ಪುರಿಯ ಅದಾಲತ್‌, ತೆಲುಗಿನಲ್ಲಿ ಮಾಲಿನಿ & ಕೊ., ಹಿಂದಿಯ ಜಿಎಸ್‌ಟಿ-ಗಲ್ತಿ ಸಿರ್ಫ್‌ ತುಮ್ಹಾರಿ ಹಾಗೂ ದಿ ಜರ್ನಿ ಆಫ್‌ ಕರ್ಮ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ ಛಾಪು ಇದೆ. ಅವರು 2014ರಲ್ಲಿ ಬಿಡುಗಡೆಯಾದ ಲವ್‌ ಈಸ್‌ ಪಾಯ್ಸನ್‌ ಕನ್ನಡ ಸಿನಿಮಾದಲ್ಲಿ ಹಾಡೊಂದಿಗೆ ಹೆಜ್ಜೆ ಹಾಕಿದ್ದರು. 2011ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಇದಾದ ಬಳಿಕವೂ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

Categories
ತೀರ್ಥಹಳ್ಳಿ ಬೆಂಗಳೂರು

ಕಿಮ್ಮನೆಗೆ ಗ್ಲೋಬಲ್ ಅಚೀವರ್ಸ್ ಅವಾರ್ಡ್: ಅಭಿನಂದನೆ

ಕಿಮ್ಮನೆಗೆ ಗ್ಲೋಬಲ್ ಅಚೀವರ್ಸ್ ಅವಾರ್ಡ್: ಅಭಿನಂದನೆ
– ಬೆಂಗಳೂರಲ್ಲಿ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕರು

NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ವಿಶ್ವವಾಣಿ ಮತ್ತು ವಿಯೆಟ್ನಾಂ ಹಾನರರಿ ಕಾನ್ಸುಲೇಟ್ ವತಿಯಿಂದ “ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರಶಸ್ತಿಗೆ ಭಾಜನರಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ತೀರ್ಥಹಳ್ಳಿ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮುಖಂಡರುಗಳಾದ ವಿಜಕುಮಾರ್ ಸಂತೆಕಡೂರು ( ದನಿ ) , ಆಮ್ರಪಾಲಿ ಸುರೇಶ್ , ಮಾಜಿ ತಾ.ಪಂ ಸದಸ್ಯರಾದ ಚಂದ್ರಮೌಳಿ ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ , ಕುರುವಳ್ಳಿ ನಾಗೇಂದ್ರ , ವಿನಯ್ ಕುರುವಳ್ಳಿ , ಟಿ ಡಿ ರವಿ ಉಪಸ್ಥಿತರಿದ್ದರು.

Categories
ಬೆಂಗಳೂರು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸೀರೆ ಭಾಗ್ಯ!

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸೀರೆ ಭಾಗ್ಯ!
– 1.36 ಲಕ್ಷ ಮಂದಿಗೆ ಸೀರೆ ವಿತರಿಸಲು ಸಂಪುಟ ನಿರ್ಧಾರ
– ಪ್ರತಿಭಟನಾ ನಿರತರಿಗೆ ಸರ್ಕಾರದ ಭರವಸೆ?

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತರಿಗೆ ಸೀರೆ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿರುವ 1.37 ಲಕ್ಷ ಅಂಗನವಾಡಿ ಕಾರ್ಯಕರ್ತರು, ಸಹಾಯಕಿರಿಗೆ ತಲಾ 500 ರೂ.ಗಳ ಎರಡು ಸೀರೆಗಳಂತೆ 12.75 ಕೋಟಿ ರೂ. ವೆಚ್ಚದಲ್ಲಿ 2.74 ಲಕ್ಷ ಸೀರೆ ಖರೀದಿಸಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 2023-24 ನೇ ಸಾಲಿಗೆ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ 104 ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳಿಗೆ 60 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ.

Categories
ಬೆಂಗಳೂರು

ಮಂಡ್ಯದಲ್ಲಿ ಈ ಸಲ ಕನ್ನಡ ಸಾಹಿತ್ಯ ಹಬ್ಬ

ಮಂಡ್ಯದಲ್ಲಿ ಈ ಸಲ ಕನ್ನಡ ಸಾಹಿತ್ಯ ಹಬ್ಬ
– ಜೂನ್ 7,8,9ರಂದು ಮಂಡ್ಯದಲ್ಲಿ ಆಯೋಜನೆಗೆ ತೀರ್ಮಾನ
– ಕನ್ನಡ ರಥ ಜಾಥಾ, 87 ಸಾಧಕರಿಗೆ ಸನ್ಮಾನ, ಮೂರು ದಿನ‌ ವಿಚಾರ ಗೋಷ್ಠಿ

NAMMUR EXPRESS NEWS
ಬೆಂಗಳೂರು: ಮಂಡ್ಯದಲ್ಲಿ ಜೂನ್ 7, 8 ಮತ್ತು 9ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಅದ್ದೂರಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಸಮ್ಮೇಳನ ಹಮ್ಮಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು. ಮಂಡ್ಯ ಜಿಲ್ಲಾಡಳಿತದ ಸಹಕಾರ ಪಡೆದು ಸಮ್ಮೇಳನ ಆಯೋಜಿಸಬೇಕು. ‌

ಕನ್ನಡ ಸಂಘಟನೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹಿರಿಯರು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದವರನ್ನು ಪರಿಗಣಿಸಬೇಕು’ ಎಂದೂ ಮುಖ್ಯಮಂತ್ರಿ ಸೂಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ಸಮ್ಮೇಳನದಲ್ಲಿ ಕನ್ನಡ ರಥ ಜಾಥಾ, 87 ಸಾಧಕರಿಗೆ ಸನ್ಮಾನ, ಮೂರು ದಿನ‌ ವಿಚಾರ ಗೋಷ್ಠಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು. ಅಲ್ಲದೆ, ಸಮ್ಮೇಳನಕ್ಕೆ ₹30 ಕೋಟಿ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿಗೆ ಅವರು ಮನವಿ ಸಲ್ಲಿಸಿದರು

Categories
ಮಲ್ನಾಡ್ ಶಿವಮೊಗ್ಗ ಹೊಸನಗರ

ಟಾಪ್ ನ್ಯೂಸ್ ಮಲ್ನಾಡ್

ಟ್ರೈನ್​ ನಿಂದ ಕೆಳಕ್ಕೆ ಬಿದ್ದು ಮಹಿಳೆ ಸಾವು!
– ಕೊಲೆಯೋ… ಆಕಸ್ಮಿಕ ಸಾವೋ…?
– ಹೊಸನಗರದಲ್ಲಿ ಮನೆ ದರೋಡೆ: 5 ಲಕ್ಷದ ಚಿನ್ನ ಕಳ್ಳತನ
– ಹಾಫ್‌ ಹೆಲ್ಮೆಟ್‌, ಕರ್ಕಶ ಶಬ್ದದ ಸೈಲೆನ್ಸರ್‌ಗಳ ಮೇಲೆ ರೋಲರ್‌ ಹತ್ತಿಸಿದ ಶಿವಮೊಗ್ಗ ಪೊಲೀಸರು!
– ಶೃಂಗೇರಿ: ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ
– ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿ ವಶ

NAMMUR EXPRESS NEWS
ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಕೆಲಸ ಮಾಡಿ ವಾಪಸ್ ಬೆಂಗಳೂರು ಟ್ರೈನ್​ನಲ್ಲಿ ಹೋಗುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಮೂಲದ ಮಹಿಳೆಯೊಬ್ಬರ ಸಾವು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಲ್ಲಿರುವ ಅರಣ್ಯ ಭವನದ ಸಿಬ್ಬಂದಿಯಾಗಿರುವ ಮಹಿಳೆ ಮೃತದೇಹ ತುಮಕೂರು ಸಮೀಪ ರೈಲ್ವೆ ಹಳಿ ಬಳಿ ಬಿದ್ದಿದೆ. ತುಮಕೂರು ಸಮೀಪದ ಹಿರೇಹಳ್ಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯ ಹೆಸರು ಅನ್ನಪೂರ್ಣ, ವಯಸ್ಸು 50 . ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನವರು. ಬೆಂಗಳೂರು ಅರಣ್ಯ ಭವನದಲ್ಲಿ ಕೆಲಸ.ಶಿವಮೊಗ್ಗದಲ್ಲಿ ನಡೆದ ಡಿಎಅರ್ ಪರೀಕ್ಷೆಯ ಮೇಲ್ವಿಚಾರಕಿಯಾಗಿ ಕೆಲಸ ನಿರ್ವಹಿಸಿ ವಾಪಸ್​ ಶಿವಮೊಗ್ಗ-ಬೆಂಗಳೂರು ಟ್ರೈನ್ ​ನಲ್ಲಿ ತೆರಳುತ್ತಿದ್ದರು.

ಬೆಂಗಳೂರು ಮಲ್ಲೇಶ್ವರಂ ನಲ್ಲಿ ವಾಸವಿದ್ದ ಇವರು ಜನವರಿ 30 ರಂದು ಬೆಂಗಳೂರುಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಅವರ ಸಹೋದರ ಕೂಡ ಟ್ರೈನ್​ನಲ್ಲಿದ್ದರು. ಸಹೋದರ ರಿಸರ್ವೇಶನ್​ ಭೋಗಿಯಲ್ಲಿದ್ದರು. ಮೃತ ಅನ್ನಪೂರ್ಣರವರು ಜನರಲ್ ಕಂಪಾರ್ಟ್​ಮೆಂಟ್​ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಹೋದರ ಇಳಿದು ಅನ್ನಪೂರ್ಣ ರಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರು ಕಾಣದೆ ಇದ್ದಾಗ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಪ್ರತಿ ಸ್ಟೇಷನ್​ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗಲೂ ಯಾವುದೇ ವಿಷಯ ಪತ್ತೆಯಾಗಿಲ್ಲ.

ಆ ಬಳಿಕ ರೈಲ್ವೆ ಹಳಿಗಳ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರೇಹಳ್ಳಿ ಸಮೀಪ ಅನ್ನಪೂರ್ಣರವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಯೇ ಸಮೀಪದಲ್ಲಿ ಅವರ ಬ್ಯಾಗ್ ಸಹ ಪತ್ತೆಯಾಗಿದೆ. ಅನ್ನಪೂರ್ಣರವರು ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆಕಸ್ಮಿಕವಾಗಿ ಕೆಳಕ್ಕೆ ಬಿದ್ದರೋ ಅಥವಾ ಅವರನ್ನ ರೈಲಿನಿಂದ ತಳ್ಳಲಾಗಿದೆಯೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಈ ಸಂಬಂಧ ಕುಟುಂಬಸ್ಥರು ಅನುಮಾನವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.

ಹಾಫ್‌ ಹೆಲ್ಮೆಟ್‌, ಸೈಲೆನ್ಸರ್‌ಗಳ ಮೇಲೆ ರೋಲರ್‌ ಹತ್ತಿಸಿದ ಪೊಲೀಸರು!

ಶಿವಮೊಗ್ಗ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳು ಮತ್ತು ಹಾಫ್‌ ಹೆಲ್ಮೆಟ್‌ಗಳ ಮೇಲೆ ಸಂಚಾರ ಠಾಣೆ ಪೊಲೀಸರು ರೋಡ್‌ ರೋಲರ್‌ ಹರಿಸಿ ನಾಶ ಪಡಿಸಿದ ಘಟನೆ ಈಗ ವೈರಲ್ ಆಗಿದೆ. ಸಾರ್ವಜನಿಕರಿಗೆ ಇವುಗಳ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ ಗೋಪಿ ಸರ್ಕಲ್‌ನಲ್ಲಿ ರೋಡ್‌ ರೋಲರ್‌ ಹತ್ತಿಸಿ ನಾಶಪಡಿಸಲಾಯಿತು. ಸುಮಾರು 3 ಸಾವಿರ ಹಾಫ್‌ ಹೆಲ್ಮೆಟ್‌ಗಳು, 70 ಸೈಲೆನ್ಸರ್‌ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಸರ್ಕಲ್‌ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ ಅವುಗಳ ಮೇಲೆ ರೋಡ್‌ ರೋಲರ್‌ ಹತ್ತಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು.

ಮನೆಗೆ ನುಗ್ಗಿ ರೂ.4.65ಲಕ್ಷದ ಚಿನ್ನಾಭರಣ ಕಳ್ಳತನ

ಹೊಸನಗರ: ಮನೆಗೆ ನುಗ್ಗಿ ರೂ.4.65 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಗಳನ್ನು 24 ಗಂಟೆಯೊಳಗೆ ಆಭರಣ ಸಹಿತ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೂಲಿಗ್ಗೇರಿ ನಿವಾಸಿಗಳಾದ ಸುಹಾನ್ 21, ಅಶೋಕ 24, ಗಣೇಶ 30 ಬಂಧಿತ ಆರೋಪಿಗಳು. ನೂಲಿಗ್ಗೇರಿ ನಿವಾಸಿ ರಾಜಮ್ಮ ಮನೆಯಲ್ಲಿರದ ವೇಳೆ ಗಮನಿಸಿ ರಾತ್ರಿ ಮನೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಚಿನ್ನದ ಸರ, ಉಂಗುರ, ಬ್ರಾಸ್ ಲೇಟ್ ಸೇರಿದಂತೆ ರೂ.4.65 ಲಕ್ಷ ಮೌಲ್ಯದ 94 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದರು. ರಾಜಮ್ಮ ಮನೆಗೆ ವಾಪಾಸಾಗಿ ನೋಡುತ್ತಿದ್ದಂತೆ ಕಳ್ಳತನ ಆಗಿದ್ದು ತಿಳಿದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಗಜಾನನ ವಿ ಸುತಾರ, ಸಿಪಿಐ ಗುರಣ್ಣ ಎಸ್ ಹೆಬ್ಬಾಳ ಮತ್ತು ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಿಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿತ್ತು. ಪ್ರಕರಣದ ವರದಿ ದಾಖಲಾಗಿ 24 ಗಂಟೆಯೊಳಗೆ ಮೂವರು ಆರೋಪಿಗಳ‌ ಜೊತೆಗೆ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದೆ. ಆರೋಪಿಗಳನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಎಂ.ಜಿ, ವೆಂಕಟೇಶ್, ಪ್ರವೀಣ್ ಕುಮಾರ್, ಕಿರಣ್ ಕುಮಾರ್, ವಿಶ್ವನಾಥ್, ಶಾಂತಪ್ಪ ಭಾಗವಹಿಸಿದ್ದರು. ಕ್ಷಿಪ್ರವಾಗಿ ಪ್ರಕರಣ ಬೇಧಿಸಿ ಚಿನ್ನಾಭರಣ ವಶಕ್ಕೆ ತೆಗೆದುಕೊಂಡ ಪೊಲೀಸರ ಕಾರ್ಯಾಚರಣೆಯನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿ ಗಜಾನನ ವಿ ಸುತಾರ ನಗರ ಠಾಣೆಗೆ ಆಗಮಿಸಿ ಪೊಲೀಸರನ್ನು ಅಭಿನಂದಿಸಿದ್ದಾರೆ.

ಶೃಂಗೇರಿ: ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಶೃಂಗೇರಿ ತಾಲೂಕಿನ 79 ವರ್ಷದ ವ್ಯಕ್ತಿ ಹಾಗೂ ಕೊಪ್ಪ ತಾಲೂಕು ಭತ್ರಹಳ್ಳಿ ಜೋಗಿಸರದ 35 ವರ್ಷದ ಖಾಸಗಿ ಶಾಲಾ ಶಿಕ್ಷಕಿಗೆ ಮಂಗನ ಕಾಯಿಲೆ ಪತ್ತೆಯಾಗಿದೆ. ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಂಬಂಧಿಸಿದ ಗ್ರಾಮಗಳ ವ್ಯಾಪ್ತಿಯಲ್ಲಿ ಉಣ್ಣೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕಿ ಚಿಕ್ಕಮಗಳೂರು ನಗರದಲ್ಲಿ ತರಬೇತಿಗೆ ಹೋಗಿ ಬಂದಿದ್ದನ್ನು ಹೊರತುಪಡಿಸಿದರೇ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ತಿಳಿದು ಬಂದಿದೆ. ಗ್ರಾಮದಲ್ಲಿನ ಪ್ರಾಣಿಗಳಲ್ಲಿನ ಉಣ್ಣೆಯಿಂದ ಸೋಂಕು ಬಂದಿರಬಹುದೆಂದು ಅಂದಾಜಿಸಲಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ರಮ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿ ವಶ

ರಿಪ್ಪನ್‌ಪೇಟೆ : ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪೊಲೀಸ್‌ ಪಿಎಸ್ ಐ ಪ್ರವೀಣ್ ಎಸ್ ಪಿ ನೇತೃತ್ವದ ತಂಡ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪಟ್ಟಣದ ಪಿಎಸ್ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ತುಂಬಿಕೊಂಡು ಕೋಡೂರು ಮಾರ್ಗವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಾಳಿ ನಡೆಸಿ ಮೂರು ಟಿಪ್ಪರ್ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಚ್ ಸಿ ಉಮೇಶ್, ಶಿವಕುಮಾರ್ ನಾಯ್ಕ ಹಾಗೂ ಮಧುಸೂಧನ್‌ ಇದ್ದರು.

Categories
ಮಲ್ನಾಡ್

ಮಲೆನಾಡ ಪ್ರವಾಸೋದ್ಯಮ ಹೈ ಸ್ಪೀಡ್..!

ಮಲೆನಾಡ ಪ್ರವಾಸೋದ್ಯಮ ಹೈ ಸ್ಪೀಡ್..!
– ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಯಿಂದ ಪ್ರವಾಸಿಗರ ಆಗಮನ
– ಶಿವಮೊಗ್ಗ, ಚಿಕಮಗಳೂರು ಈಗ ಫೇಮಸ್
– ದೇವಸಸ್ಥಾನ, ನೈಸರ್ಗಿಕ ತಾಣಗಳು ಈಗ ಫುಲ್

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಸದ್ಯ ಚಳಿ ಜೋರಾಗಿದೆ. ಈ ಚಳಿಯ ವಾತಾವರಣಕ್ಕೆ ಇಬ್ಬನಿ ಮತ್ತಷ್ಟು ತಂಪು ನೀಡುತ್ತಿದೆ. ಗಿಡ ಮರಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹೂವುಗಳ ಸೌಂದರ್ಯಕ್ಕೆ ಮತ್ತಷ್ಟು ಅಂದ ಬಂದಿದೆ. ಮಲೆನಾಡಿನ ಜನ ಈ ವಾತಾವರಣವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಇಬ್ಬನಿ ನಡುವೆ ಮಲೆನಾಡಿನ ಅಂದ ಅನುಭವಿಸಲು ಇತ್ತ ಹೆಜ್ಜೆ ಹಾಕ್ತಿರೋ ಪ್ರವಾಸಿಗರು ಕ್ಯಾಮರಾ ಕಣ್ಣಲ್ಲಿ ಅದನ್ನ ಸೆರೆ ಹಿಡಿಯುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಮಸ್ತಿ ಮಾಡ್ತಿದ್ದಾರೆ. ಒಟ್ಟಿನಲ್ಲಿ, ಮಲೆನಾಡಿನ ಪ್ರಕೃತಿ ಸೌಂದರ್ಯವನ್ನ ನೋಡೋದೇ ರೋಮಾಂಚನ. ಇದರ ಜೊತೆಗೆ ಕಳೆದ ಹಲವು ದಿನಗಳಿಂದ ನಗರದಲ್ಲಿ ಇಬ್ಬನಿ ಸೃಷ್ಟಿಸಿರೋ ಹೊಸ ಲೋಕಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇಂತಹ ಅದ್ಭುತ ಮಲೆನಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ಊರುಗಳಿಂದ ಜನರು ಮಲೆನಾಡಿಗೆ ಬರುತ್ತಿದ್ದಾರೆ. ಮಲೆನಾಡು ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದ್ದು, ಅದನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಂಕಿ–ಅಂಶಗಳೇ ದೃಢಪಡಿಸುತ್ತವೆ.

ಜೋಗದ ವೈಭವ, ಆಗುಂಬೆ ಪ್ರಕೃತಿ ಸಿರಿ!

ಜೋಗದ ವೈಭವ, ಆಗುಂಬೆಯ ಸಿರಿ, ಸಿಗಂದೂರು ಚೌಡೇಶ್ವರಿ ಕ್ಷೇತ್ರ, ಗುಡವಿ-ಮಂಡಗದ್ದೆಯ ಪಕ್ಷಿಗಳ ಕಲರವ, ಸಕ್ರೆಬೈಲು, ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ, ಚಂದ್ರಗುತ್ತಿ, ಕೆಳದಿ, ಕೊಡಚಾದ್ರಿ, ಕವಲೇ ದುರ್ಗಾ, ಕುಪ್ಪಳ್ಳಿ, ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ, ಶೃಂಗೇರಿ, ಸಿರಿಮನೆ ಫಾಲ್ಸ್ ಸೇರಿದಂತೆ ಮಲೆನಾಡಿನ ಪ್ರವಾಸಿ ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಈಗ ಸಕ್ಕತ್ ಫೇಮಸ್ ಆಗಿದೆ.

ಚಾರಣಕ್ಕೆ ಅನುಮತಿ ಇಲ್ಲ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪರ್ವತಗಳಿಗೆ ಸರ್ಕಾರ ಅನುಮತಿ ಪಡೆದರೆ ಮಾತ್ರ ಅವಕಾಶ ನೀಡುತ್ತಿದೆ. ಈ ಬಗ್ಗೆ ಪ್ರವಾಸಿಗರು ಮಾಹಿತಿ ಪಡೆದುಕೊಂಡು ಪಯಣಿಸಬೇಕಿದೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ? ಕಡಿಮೆ ಆಯ್ತಾ? ಜಾಸ್ತಿ ಆಯ್ತಾ?

ಅಡಿಕೆ ದರ ಎಷ್ಟಿದೆ? ಕಡಿಮೆ ಆಯ್ತಾ? ಜಾಸ್ತಿ ಆಯ್ತಾ?
– ಕಾಳು ಮೆಣಸಿನ ದರ ಎಷ್ಟು?… ರಾಶಿ ಕಡಿಮೆ

ಅಡಿಕೆ ದರ
01-02-2024
ಬೆಟ್ಟೆ 46569 55219
ಗೊರಬಲು 16509 41891
ರಾಶಿ 30010 48799
ಸರಕು 53599 81880
ಸಿಪ್ಪೆಗೋಟು 10000 19599
ಚಾಲಿ 23199 37610
ಕೋಕಾ 11899 31599
ಕರೆ ಗೋಟು 25399 37099
ಬಿಳೆ ಗೋಟು 20199 29199
Nammur Express
Categories
ತೀರ್ಥಹಳ್ಳಿ

ಮತ್ತೆ ಚಾಲ್ತಿಗೆ ಬಂದ ಬಹುಗ್ರಾಮ ನೀರಿನ ಯೋಜನೆ!

ಮತ್ತೆ ಚಾಲ್ತಿಗೆ ಬಂದ ಬಹುಗ್ರಾಮ ನೀರಿನ ಯೋಜನೆ!
– ಯೋಜನೆ ಬೇಡ ಎನ್ನುವವರ ಹಿಂದೆ ಯಾರೋ ಇದ್ದಾರೆ: ಟಿ. ಜೆ ಅನಿಲ್
– ಹಳ್ಳಿಗಳಿಗೆ ನೀರು ಬೇಕು, ಯಾರದ್ದೋ ಲಾಭಿ ಇದೆ

NAMMUR EXPRESS NEWS
ತೀರ್ಥಹಳ್ಳಿ : ಬಹುಗ್ರಾಮ ನೀರಿನ ಯೋಜನೆ ಅವೈಜ್ಞಾನಿಕ ಎಂದು ಕೆಲವರು ಸಚಿವರ ಬಳಿ ಮನವಿ ಕೊಟ್ಟು ಯೋಜನೆ ರದ್ದು ಮಾಡಲು ಹೊರಟಿದ್ದಾರೆ. ಈ ಯೋಜನೆಯಲ್ಲಿ ಭ್ರಷ್ಟಾಚಾರ ಆಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆ ಯೋಜನೆ ಬಗ್ಗೆ ತಿಳಿಯದೆ ಇವರೇ ಇಂಜಿನಿಯ‌ರ್ ಆಗುತ್ತಿದ್ದಾರೆ. ಇದು ಯಾರಿಗೆ ಲಾಭ ಆಗುತ್ತಿದೆ ಗೊತ್ತಿಲ್ಲ ಆದರೆ ಇದರ ಹಿಂದೆ ಯಾರೋ ಇದ್ದಾರೆ ಎಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷರಾಗಿರುವ ಟಿ. ಜೆ ಅನಿಲ್ ಹೇಳಿದರು. ಗುರುವಾರ ಪಟ್ಟಣದ ತಾಲೂಕು ಪಂಚಾಯತ್‌ ಕಟ್ಟಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಈಗಾಗಲೇ ಜಾಗವನ್ನು ಬದಲಾವಣೆ ಮಾಡಿ ದೊಡ್ಡಿನಮನೆಯಲ್ಲಿ ಜಾಕ್ ವೆಲ್ ಮಾಡಲು ತೀರ್ಮಾನಿಸಿದೆ. ಆದರೆ ಟೀಟ್ ಮೆಂಟ್ ಪ್ಲಾಂಟ್ ಕೂಡ ಬದಲಾವಣೆ ಮಾಡಲು ಕೆಲವರು ಹೇಳುತ್ತಿದ್ದಾರೆ.

ಇದು ವೀಕೆಂದ್ರಿಕರಣ ವ್ಯವಸ್ಥೆಗೆ ಹೊಡೆತ ಬೀಳಲಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರೀಟ್ ಮೆಂಟ್ ಪ್ಲಾಂಟ್ ಕಟ್ಟಿ ನೀರು ಕೊಡಲು ಹೇಳುತ್ತಾರೆ. ಇರುವ ಟ್ರೇಟ್ ಮೆಂಟ್ ಪ್ಲಾಂಟ್ ಸರಿಪಡಿಸಲು ಆಗುತ್ತಿಲ್ಲ ಎಂದರು. ನಮ್ಮ ಬಳಿ ನೀರಿಲ್ಲ. ಪ್ರತಿಯೊಂದು ಗ್ರಾಮಪಂಚಾಯಿತಿ ಕೂಡ ಪ್ರತಿ ತಿಂಗಳು ಬೋರ್ ಗಾಗಿ 1 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡುತ್ತಿದ್ದೇವೆ. ಈ ವಿಷಯದಲ್ಲಿ ಇಲ್ಲಿಯವರೆಗೆ ಜಾಸ್ತಿ ಒತ್ತಡ ಹಾಕಿಲ್ಲ, ಇನ್ನು ಮುಂದೆ ಹೋರಾಟ ಮಾಡುವುದಾದರೂ ಸರಿ, ಹಾಗೂ ಸಚಿವರ ಬಳಿ ಮನವಿ ಸಲ್ಲಿಸುವುದಾದರು ಸರಿ, ಒಟ್ಟಿನಲ್ಲಿ ಈ ವಿಚಾರದಲ್ಲಿ ರೈತರ ಮುಗ್ಧತೆ ಬಳಸಿ ಯಾರೋ ಲಾಭ ಮಾಡಿಕೊಳ್ಳಿತ್ತಿದ್ದಾರೆ, ಇದು ತಾಲೂಕಿನ ಜನತೆಗೆ ಮಾಡುತ್ತಿರುವ ದ್ರೋಹ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನಂಬಳ ಮುರುಳಿ, ಬಂಡೆ ವೆಂಕಟೇಶ್, ರಾಘವೇಂದ್ರ ಪವಾರ್, ಸುಪ್ರಿತಾ, ಜಯಪ್ರಕಾಶ್, ಚಂದ್ರಶೇಖರ, ನಾಗರಾಜ್ ಸೇರಿ ಹಲವರು ಉಪಸ್ಥಿತರಿದ್ದರು.

Categories
ಮಾಹಿತಿ ರಾಜ್ಯ ರಾಷ್ಟ್ರೀಯ ವಾರ್ತೆ

ಕೇಂದ್ರದಿಂದಲೂ ಜನತೆಗೆ ಭರ್ಜರಿ ಯೋಜನೆ!

ಕೇಂದ್ರದಿಂದಲೂ ಜನತೆಗೆ ಭರ್ಜರಿ ಯೋಜನೆ!
– ಕೇಂದ್ರ ಬಜೆಟ್‌: ಮಹಿಳೆಯರಿಗೆ ಬಂಪರ್ ಯೋಜನೆ
– ಮನೆ ಇಲ್ಲದವರಿಗೆ 2 ಕೋಟಿ ಮನೆ ನಿರ್ಮಾಣ
– ಮಹಿಳೆಯರಿಗೆ ಸಾಲ: ರೈತರಿಗೆ ವಿಮೆ

NAMMUR EXPRESS NEWS
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ 2024 ಮಂಡಿಸಿದ್ದಾರೆ.

2 ಕೋಟಿ ಬಡವರಿಗೆ ಮನೆ

ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಬಡವರಿಗೆ 2 ಕೋಟಿ ಮನೆ ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. “ಪಿಎಂ ಆವಾಸ್‌ ಯೋಜನೆ ಅಡಿಯಲ್ಲಿ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಇನ್ನೂ 2 ಕೋಟಿ ಮನೆ ನಿರ್ಮಿಸಲಾಗುತ್ತದೆ” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ಕೃಷಿ ಕ್ಷೇತ್ರಕ್ಕೆ ಕೊಡುಗೆ

ಸುಗ್ಗಿಯ ನಂತರದ ಚಟುವಟಿಕೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಹೂಡಿಕೆ, ಹೈನುಗಾರರಿಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ತಿಳಿಸಿದೆ. ಕಾಲು ಬಾಯಿ ರೋಗವನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನ, ಪಿಎಂ ಫಸಲ್ ಬಿಮಾ ಅಡಿಯಲ್ಲಿ 4 ಕೋಟಿ ರೈತರಿಗೆ ಬೆಳೆ ವಿಮೆ, ಐದು ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪನೆ, ಜಲಕೃಷಿಯನ್ನು ಉತ್ತೇಜಿಸಲು ಬ್ಲೂ ಎಕಾನಮಿ 2.0 ಅನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೋಟಿ ಮನೆಗಳಿಗೆ ವಿದ್ಯುತ್‌ ಉಚಿತ

ದೇಶದ ಒಂದು ಕೋಟಿ ಮನೆಗಳ ಚಾವಣಿ ಮೇಲೆ ಉಚಿತವಾಗಿ ಸೋಲಾರ್‌ ಅಳವಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಿಂದ ಮಾಸಿಕ 300 ಯುನಿಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದ್ದು, ಜನರಿಗೆ ಉಚಿತವಾಗಿ ವಿದ್ಯುತ್‌ ಲಭ್ಯವಾಗಿದೆ. ಹಾಗೆಯೇ, “ಬಳಕೆಯಾಗದ ವಿದ್ಯುತ್‌ಅನ್ನು ಸರ್ಕಾರಕ್ಕೆ ಮಾರಾಟ ಮಾಡಿ ಹಣ ಗಳಿಸಬಹುದು” ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಬಾಲಕಿಯರಿಗೆ ಉಚಿತ ಲಸಿಕೆ

ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈಗ ಗರ್ಭಕಂಠ ಕ್ಯಾನ್ಸರ್‌ ನಿರೋಧಕ ವ್ಯಾಕ್ಸಿನ್‌ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್‌ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ.

ಜನಸಾಮಾನ್ಯರಿಗೆ ಮತ್ತಷ್ಟು ಯೋಜನೆಗಳು

ಸ್ಕಿಲ್‌ ಇಂಡಿಯಾ ಮಿಷನ್‌ ಯೋಜನೆ ಅಡಿಯಲ್ಲಿ 1.4 ಕೋಟಿ ಯುವಕರಿಗೆ ಉದ್ಯೋಗ ತರಬೇತಿ.44 ಸಾವಿರ ರೈಲು ಬೋಗಿಗಳನ್ನು ವಂದೇ ಭಾರತ್‌ ರೈಲು ಬೋಗಿ ರೀತಿ ಮೇಲ್ದರ್ಜೆಗೇರಿಸುವುದು. ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ 78 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸು ನೆರವು. ಲಕ್‌ಪತಿ ದೀದಿʼಯ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸುವುದು. ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಕಾರ್ಯಕ್ರಮ ಮೂಲಕ ಪೌಷ್ಟಿಕಾಂಶ, ಬಾಲ್ಯದ ಆರೈಕೆ ವೃದ್ಧಿ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೂ ಆಯುಷ್ಮಾನ್‌ ಭಾರತ್‌ ಯೋಜನೆ ಅನ್ವಯ. ಎಲ್ಲ ಜಿಲ್ಲೆಗಳಲ್ಲೂ ಇನ್ನೂ ಹೆಚ್ಚಿನ ಸರ್ಕಾರಿ ಆಸ್ಪತ್ರೆ ಸ್ಥಾಪನೆ, ಮೆಡಿಕಲ್‌ ಕಾಲೇಜುಗಳ ಸ್ಥಾಪನೆಗೆ ಕ್ರಮ.