Categories
ಕರಾವಳಿ ಶಿಕ್ಷಣ

ಹೆಬ್ರಿಯಲ್ಲಿ ಎಸ್‌ಆರ್‌ ಸಂಸ್ಥೆಯಿಂದ ಶೈಕ್ಷಣಿಕ ಕ್ರಾಂತಿ..!

ಹೆಬ್ರಿಯಲ್ಲಿ ಎಸ್‌ಆರ್‌ ಸಂಸ್ಥೆಯಿಂದ ಶೈಕ್ಷಣಿಕ ಕ್ರಾಂತಿ..!
– ನಿರಂತರ ಶೇಕಡ 100ರ ಫಲಿತಾಂಶ ಹೆಗ್ಗಳಿಕೆ
– ಕಳೆದ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಸಂಸ್ಥೆ

NAMMUR EXPRESS NEWS
ಹೆಬ್ರಿ: ಹೆಬ್ರಿ ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಯು ಆರಂಭಗೊಂಡು 25 ವರ್ಷ ಕಳೆಯಿತು. ಕೇವಲ ನಾಲ್ಕು ಜನ ವಿದ್ಯಾರ್ಥಿಗಳಿಂದ ಆರಂಭವಾದ ಎಸ್ ಆರ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಎರಡುವರೆ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೌಲ್ಯಯುತ, ಶಿಸ್ತುಬದ್ಧ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯೂ ಒಂದಾಗಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಆಗುಂಬೆಯಿಂದ ಮಣಿಪಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಹೆಬ್ರಿಯ ಕಿನ್ನಿಗುಡ್ಡೆ ಎಂಬಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎಸ್‌ಆರ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಎಲ್‌ಕೆಜಿಯಿಂದ ಪಿಯುಸಿ ತನಕ 2,500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿ ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಂಸ್ಥೆ ಹೆಸರನ್ನು ರಾರಾಜಿಸಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿಯನ್ನು ಪಡೆದು ವ್ಯಾಸಂಗವನ್ನು ಮುಂದುವರಿಸುತ್ತಿದ್ದಾರೆ. ಇನ್ನು ಅನೇಕ ಹಳೆ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವೃತ್ತಿ ಜೀವನವನ್ನು ನಡೆಸುತ್ತಿದ್ದು ಉನ್ನತ ಸ್ಥಾನಕ್ಕೇರಿದ್ದು ನಮ್ಮ ಸಂಸ್ಥೆಗೆ ಗೌರವವನ್ನು ತಂದು ಕೊಟ್ಟಿದೆ.

ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ :

ಸುಸಜ್ಜಿತ ಕಟ್ಟಡಗಳೊಂದಿಗೆ ಕ್ಯಾಂಪಸ್‌ನಲ್ಲಿಯೇ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯ ಅತ್ಯಾಧುನಿಕ ಕೊಠಡಿ, ಶೌಚಗೃಹವನ್ನು ಹೊಂದಿದೆ. ವಿದ್ಯಾರ್ಥಿನಿಯರ ಸುರಕ್ಷತೆಗೆ ಕಾಳಜಿವಹಿಸುವ ಸಂಸ್ಥೆಯಾಗಿ, ಡೈನಿಂಗ್ ಹಾಲ್, ಪೌಷ್ಟಿಕ ಸ್ವಾದಿಷ್ಟ ಆಹಾರ ಮತ್ತು ವಿಶೇಷವಾಗಿ ಶುಚಿತ್ವದ ಕಡೆ ಹೆಚ್ಚಿನ ಗಮನ ವಹಿಸಲಾಗುತ್ತದೆ. ಪ್ರತಿ ವಾರಕ್ಕೆ ಮೂರು ಬಾರಿ ವೈದ್ಯರ ಭೇಟಿ, ಬೆಳಗ್ಗೆ ಹಾಗೂ ರಾತ್ರಿ ಅಧ್ಯಯನಕ್ಕೆ ವಿಶೇಷ ಅವಧಿಯನ್ನು ಕಾಯ್ದಿರಿಸಲಾಗಿದೆ. ವಿದ್ಯಾರ್ಥಿನಿಯರ ಹಾಸ್ಟೆಲ್ ನ ಸಂಪೂರ್ಣ ಜವಾಬ್ದಾರಿಯನ್ನು ಸಂಸ್ಥೆಯ ಕಾರ್ಯದರ್ಶಿ ಅಡ್ವಕೇಟ್ ಸ್ವಪ್ನಾ ಎನ್ ಶೆಟ್ಟಿ ನಿರ್ವಹಿಸುತ್ತಿರುವುದು ಸಂಸ್ಥೆಯ ವಿಶೇಷತೆಗಳಲ್ಲೊಂದು.

ತಜ್ಞ ಶಿಕ್ಷಕರ ತಂಡ :

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ವಿಷಯ ತಜ್ಞ ಉಪನ್ಯಾಸಕರ ತಂಡವನ್ನು ಹೊಂದಿದೆ. KCET / NEET | JEE MAIN ಮುಂತಾದ ತರಬೇತಿಯ ಶಿಕ್ಷಣವನ್ನು ನೀಡಲಾಗುತ್ತಿದೆ.

ಕೆಸಿಇಟಿ ಪರೀಕ್ಷೆಯಲ್ಲಿ ರ‍್ಯಾಂಕ್:

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ರ‍್ಯಾಂಕ್ ಪಡೆದಿರುವುದು ಸಂಸ್ಥೆಯ ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ. ವಿಜ್ಞಾನ ವಿಭಾಗದಲ್ಲಿ ರಾಯಿಸಾ ರಾಜ್ಯಕ್ಕೆ 3ನೇ ಸ್ಥಾನ ಉಡುಪಿ ಪ್ರಥಮ ಪಡೆದು ಜಿಲ್ಲೆಗೆ ಸ್ಥಾನಿಯಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ತಸ್ಮಿಯಾ ರಾಜ್ಯಕ್ಕೆ ಐದನೇ ಸ್ಥಾನ ಪಡೆದು, ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಎಸ್‌ಆರ್‌ ಶಿಕ್ಷಣ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದ ಫಲವಾಗಿ ಅದಿತಿ ಎನ್. ಪೈ, ಕೆಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 22ನೇ ರ‍್ಯಾಂಕ್ ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆ. ರೋಹಿತ್ ಕಾರಂತ್ 2022ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಮಾಡಿದ್ದಕ್ಕೆ ಸಂತೋಷವಿದೆ. ಇ ಲೈಬ್ರರಿ ವಿದ್ಯಾರ್ಥಿಗಳ ಕಲಿಯುವಿಕೆಗೆ ಇನ್ನಷ್ಟು ಅವಕಾಶ ನೀಡುತ್ತದೆ. ಕೇವಲ ನಾಲ್ಕು ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 2500 ವಿದ್ಯಾರ್ಥಿಗಳಿದ್ದಾರೆ. ಸಂಸ್ಥೆ ಸದಾ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಮಕ್ಕಳ ಭವಿಷ್ಯವನ್ನು ಬೆಳಗಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಿದ ಹೆತ್ತವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ಕೊರೋನ ಸಂದರ್ಭದಲ್ಲಿ ಸಿಇಟಿಯಲ್ಲಿ ರಾಜ್ಯಕ್ಕೆ 22ನೇ ರ‍್ಯಾಂಕ್ ಪಡೆದಿರುವುದು ಶ್ಲಾಘನೀಯ. ಪ್ರತಿ ವರ್ಷ ಎಸ್ ಎಸ್ ಎಲ್ ಸಿ, ಸಿಬಿಎಸ್‌ಸಿ ವಿಭಾಗದಲ್ಲಿ ಶೇಕಡ 100 ಫಲಿತಾಂಶ ಪಡೆದಿರುವುದು ದಾಖಲೆಯಾಗಿರುತ್ತದೆ.

ನಿರಂತರ ಶೇಕಡ 100 ಫಲಿತಾಂಶ :

ಎಸ್‌ಆರ್‌ ಆರಂಭ ದಿನಗಳಿಂದಲೂ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿದೆ. ಸಂಸ್ಥೆ ಪದವಿ ಪೂರ್ವ ಕಾಲೇಜು, ಪಬ್ಲಿಕ್ ಸ್ಕೂಲ್ (ಸಿಬಿಎಸ್‌ಇ), ಪ್ರೌಢಶಾಲೆ(ರಾಜ್ಯ ಸಿಲೆಬಸ್) ವಿಭಾಗಗಳನ್ನು ಹೊಂದಿದ್ದು, ಎನ್‌ಟಿಎಸ್‌ಇ/ ಜೆಇಇ ಫೌಂಡೇಶನ್ ತರಗತಿಗಳನ್ನು 6-10ನೇ ತರಗತಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸಲಾಗುತ್ತಿದೆ. ರಾಜ್ಯ ಹಾಗೂ ದೇಶದ ಭಾಗಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವೈದ್ಯರಾಗಿ ಹಾಗೂ ಇಂಜಿನಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಾದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಎಜೆ ಮೆಡಿಕಲ್ ಕಾಲೇಜು, ಹಾಸನ ಮೆಡಿಕಲ್ ಕಾಲೇಜು, ಏಮ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಾದ ಆರ್‌ವಿ ಇಂಜಿನಿಯರಿಂಗ್ ಕಾಲೇಜು ನಿಟ್ಟೆ ಕಾಲೇಜಿನಲ್ಲಿ ಸರಕಾರಿ ಕೋಟದಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಅಟಲ್ ಟಿಂಕರಿಂಗ್ ಲ್ಯಾಬ್ :

6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟದ ವೃದ್ಧಿಗಾಗಿ ಸ್ಪರ್ಧಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಸಲಕರಣೆಯೊಂದಿಗೆ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆ ಮಾಡಲಾಗಿದೆ.

ಇ-ಲೈಬ್ರರಿ: 80 ಲಕ್ಷ ರೂಪಾಯಿ ವೆಚ್ಚದಲ್ಲಿ ಇ ಲೈಬ್ರರಿಯನ್ನು ತೆರೆಯಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗಲಿದೆ.

ಹೆಚ್ ನಾಗರಾಜ ಶೆಟ್ಟಿ, ಅಧ್ಯಕ್ಷರು.
ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ.
ಸಂಪರ್ಕ: ಮೊಬೈಲ್: 9448373109, 9448604417,
9448724251,
ಇಮೇಲ್: srpuchebri@gmail.com
ವೆಬ್ ಸೈಟ್ : www.sreduhebri.in
ಫೇಸ್ಬುಕ್ : srpuchebri

Categories
ಜಾತಕ

ಶುಭ ಶುಕ್ರವಾರ ನಿಮ್ಮ ಜಾತಕ ಫಲ ಹೇಗಿದೆ?!

ಶುಭ ಶುಕ್ರವಾರ ನಿಮ್ಮ ಜಾತಕ ಫಲ ಹೇಗಿದೆ?!
– ಯಾವ ರಾಶಿಗೆ ಏನೇನ್ ಕಾರ್ಯಗಳು ಇವೆ..!
– ಯಾರಿಗೆ ಕಷ್ಟ…? ಯಾರಿಗೆ ನಷ್ಟ…?

NAMMUR EXPRESS NEWS
2024 ಮಾರ್ಚ್ 29ರ ಶುಕ್ರವಾರ ದಿನ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ..? ನಿಮ್ಮ ಜಾತಕದಲ್ಲಿ ಏನಿದೆ… ಇಲ್ಲಿದೆ ನೋಡಿ ಜಾತಕ ಫಲ..!.

* ಮೇಷ

ದೂರ ಪ್ರಯಾಣದ ಸೂಚನೆಗಳಿವೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವಾಹನ ವ್ಯಾಪಾರಿಗಳಿಗೆ ಸ್ವಲ್ಪ ಅನುಕೂಲಕತೆ ಕಡಿಮೆ ಇರುತ್ತದೆ.

* ವೃಷಭ

ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಶ್ರಮ ಉಂಟಾಗುತ್ತದೆ. ಬಾಲ್ಯದ ಗೆಳೆಯರೊಂದಿಗೆ ವಿವಾದಗಳಿರುತ್ತವೆ. ಪ್ರಯಾಣಗಳು ಇದ್ದಕ್ಕಿದ್ದಂತೆ ಮುಂದೂಡಲ್ಪಡುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಅನಿರೀಕ್ಷಿತ ಕಿರಿಕಿರಿಗಳು ಹೆಚ್ಚಾಗುತ್ತವೆ.

* ಮಿಥುನ

ದೂರದ ಬಂಧುಗಳಿಂದ ಶುಭ ಸುದ್ದಿದೊರೆಯುತ್ತದೆ. ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತೀರಿ. ಮನೆಯ ಹೊರಗೆ ಗೌರವ ಮತ್ತು ಘನತೆ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ಇರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ವ್ಯಾಪಾರದಲ್ಲಿ ನಿರ್ಧಾರಗಳು ಕೂಡಿ ಬರುತ್ತವೆ.

* ಕಟಕ

ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ಪ್ರಮುಖ ವ್ಯಕ್ತಿಗಳಿಂದ ಆಹ್ವಾನಗಳು ದೊರೆಯುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬ ಸದಸ್ಯರೊಂದಿಗಿನ ವಿವಾದಗಳು ಇತ್ಯರ್ಥವಾಗುತ್ತವೆ ಮತ್ತು ನಿರುದ್ಯೋಗ ಪ್ರಯತ್ನಗಳಲ್ಲಿ ಅನುಕೂಲತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನಿರುದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ.

*ಸಿಂಹ

ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಬಂಧು ಮಿತ್ರರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಕೆಲವು ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕ ಫಲಿತಾಂಶಗಳು ದೊರೆಯುವುದಿಲ್ಲ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಲ್ಪ ವಿಚಿತ್ರವಾದ ವಾತಾವರಣಗಳಿರುತ್ತವೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಿ ವಿಶ್ರಾಂತಿ ಇರುವುದಿಲ್ಲ.

* ಕನ್ಯಾ

ಕೈಗೆತ್ತಿಕೊಂಡ ಕೆಲಸದಲ್ಲಿ ಆತುರ ಒಳ್ಳೆಯದಲ್ಲ. ಪ್ರಯಾಣದಲ್ಲಿ ತೊಂದರೆ ಉಂಟಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

*ತುಲಾ

ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ಥಿರಾಸ್ತಿ ವಿವಾದಗಳು ಒಂದು ಹಂತಕ್ಕೆ ಬರುತ್ತವೆ. ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಹೊಸ ವಾಹನದ ಖರೀದಿಸುತ್ತೀರಿ. ಪಾಲುದಾರಿಕೆ ವ್ಯಾಪಾರ ವಿಸ್ತರಣೆಯಲ್ಲಿ ಪ್ರಗತಿ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹವನ್ನು ಪಡೆಯುತ್ತೀರಿ.

* ವೃಶ್ಚಿಕ

ಬಂಧುಗಳಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಕೌಟುಂಬಿಕ ವಾತಾವರಣ ಸ್ವಲ್ಪ ಅಸ್ತವ್ಯಸ್ತವಾಗಿರುತ್ತದೆ. ಕೆಲವು ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ. ವ್ಯಾಪಾರದಲ್ಲಿ ನಿರ್ಧಾರಗಳು ನಿರಾಶಾದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ.

* ಧನಸ್ಸು

ದೂರದ ಬಂಧುಗಳ ಆಗಮನ ಸಂತಸ ತರುತ್ತದೆ. ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಮನೆಯಲ್ಲಿ ಸಹೋದರರ ಮದುವೆಯ ಪ್ರಸ್ತಾಪವಿರುತ್ತದೆ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳು ತಮ್ಮ ಕಾರ್ಯ ವೈಖರಿಯಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ.

* ಮಕರ

ಬಂಧು ಮಿತ್ರರಿಂದ ಅನಿರೀಕ್ಷಿತ ಮಾತುಗಳನ್ನು ಕೇಳ ಬೇಕಾಗುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಶ್ರಮ ಪಟ್ಟರೂ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಪ್ರಮುಖ ವ್ಯವಹಾರಗಳು ಅಡೆತಡೆಗಳಿರುತ್ತವೆ. ಉದ್ಯೋಗಿಗಳಿಗೆ ಅಧಿಕಾರಿಗಳೊಂದಿಗಿನ ಚರ್ಚೆಗಳು ವಿಫಲಗೊಳ್ಳುತ್ತದೆ. ಆರ್ಥಿಕ ವಾತಾವರಣ ಋಣಾತ್ಮಕ ವಾತಾವರಣ ಇರುತ್ತದೆ.

* ಕುಂಭ

ಕೈಗೊಂಡ ವ್ಯವಹಾರಗಳಲ್ಲಿ ಅಡಚಣೆಗಳು ದೂರವಾಗುತ್ತವೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಹೊಸ ವಾಹನ ಖರೀದಿಸಲಾಗುತ್ತದೆ. ವ್ಯಾಪಾರದಲ್ಲಿ ನಿರ್ಧಾರಗಳು ಉತ್ಸಾಹದಾಯಕವಾಗಿರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ.

* ಮೀನ

ಹಣಕಾಸಿನ ಪರಿಸ್ಥಿತಿಯು ಆಶಾದಾಯಕವಾಗಿರುತ್ತದೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ ಮತ್ತು ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿ ದೊರೆಯುತ್ತದೆ.

Categories
ತೀರ್ಥಹಳ್ಳಿ

ಹರಿವು ನಿಲ್ಲಿಸಿದ ತೀರ್ಥಹಳ್ಳಿ ತುಂಗಾ ನದಿ!

ಹರಿವು ನಿಲ್ಲಿಸಿದ ತೀರ್ಥಹಳ್ಳಿ ತುಂಗಾ ನದಿ!
– ಮಲೆನಾಡಿಗೆ ಎದುರಾಗಿದೆ ಜಲಾಘಾತದ ಆತಂಕ
– ತುಂಗಾ ನದಿ ಕಳೆದ ವರ್ಷದಿಂದ ನೀರಿನ ಹರಿವು ನಿಲ್ಲಿಸಿದೆ!
– ನೀರು ನಿಂತರೂ ಮರಳು ಅಗೆಯೋದು ಬಿಡುತ್ತಿಲ್ಲ!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಬರದ ಬೇಗೆಗೆ ಜಲಮೂಲಗಳು ಬತ್ತಲು ಆರಂಭಿಸಿದೆ. ಮಲೆನಾಡಿನ ನದಿಗಳು, ಹಳ್ಳಗಳು ಬತ್ತಿವೆ. ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ತೀರ್ಥಹಳ್ಳಿ ತುಂಗಾ ನದಿ ಬತ್ತಿ ಹೋಗಿದ್ದು, ಹರಿವು ನಿಲ್ಲಿಸಿದೆ.
ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಶತಮಾನಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಕಳೆದ ವರ್ಷ ಹಲವೆಡೆ ಹರಿವು ನಿಲ್ಲಿಸಿತ್ತು. ಆದರೆ ಈ ವರ್ಷ ಈಗಾಗಲೇ ಅನೇಕ ಭಾಗದಲ್ಲಿ ನದಿ ಹರಿವು ಕಡಿತಗೊಂಡಿದೆ. ಪರಿಣಾಮವಾಗಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.

ಮಂಡಗದ್ದೆ ಹೋಬಳಿ, ಹೆದ್ದೂರು, ಹೊಸಹಳ್ಳಿ, ದಬ್ಬಣಗದ್ದೆ ಭಾಗಗಳಲ್ಲಿ ತುಂಗಾ ನದಿ ನೀರು ಹರಿಯುವುದನ್ನು ನಿಲ್ಲಿಸಿದೆ. ಬೇಸಿಗೆ ಆರಂಭದಲ್ಲಿ ನದಿ ನೀರು ಬತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಮಾರ್ಚ್ ತಿಂಗಳಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಮಾರ್ಚ್ ತಿಂಗಳ ಕೊನೆಯಲ್ಲಿಯೇ ನೀರು ಹರಿಯುವುದು ನಿಂತಿದೆ. ಕುಡಿಯಲು ಕೂಡ ನೀರು ಸಿಗುತ್ತಿಲ್ಲ, ಅಡಿಕೆ ಗಿಡಗಳು ಸುಟ್ಟು ಹೋಗುತ್ತಿವೆ. ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು ನಿಂತರೂ ಮರಳು ಮಾಫಿಯಾ ನಿಂತಿಲ್ಲ!

ತುಂಗಾ, ಮಾಲತಿ, ಶರಾವತಿ ಸೇರಿ ನೂರಾರು ಹಳ್ಳಗಳಲ್ಲಿ ನೀರು ನಿಂತರೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ. ನದಿಯು ಬರಿದಾದ ಮೇಲು ಕೂಡ ರಾಜಾರೋಷವಾಗಿ ಅಕ್ರಮ ಮರಳನ್ನು ಸಾಗಾಟ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಎಲ್ಲಾ ಸೌಲಭ್ಯಗಳು ಇದ್ದು ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಿ ಅಕ್ರಮ ಮರಳು ಗಣಿಗಾರಿಕೆಗೆ ತಡೆ ಹಾಕದಿದ್ದರೆ ಮುಂದೊಂದು ದಿನ ಮಲೆನಾಡಿನ ಜನರು ಕುಡಿಯಲು ನೀರಿಲ್ಲದೆ ಸಾಯುವ ದುಸ್ಥಿತಿ ಎದುರಾಗಲಿದೆ.

Categories
ತೀರ್ಥಹಳ್ಳಿ

ಆರಗ ಮಾರಿಕಾಂಬ ಜಾತ್ರೆಗೆ ತೆರೆ…!

ಆರಗ ಮಾರಿಕಾಂಬ ಜಾತ್ರೆಗೆ ತೆರೆ…!
– ಮಾರಿಕಾಂಬಾ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು
– ಶಿವಧೂತಗುಳಿಗ ನಾಟಕ ಪ್ರದರ್ಶನಕ್ಕೆ 4 ಸಾವಿರಕ್ಕೂ ಹೆಚ್ಚು ಜನರ ಆಗಮನ

NAMMUR EXPRESS NEWS
ತೀರ್ಥಹಳ್ಳಿ: ಆರಗದ ಮರಿಕಾಂಬ ಜಾತ್ರೆಗೆ ಬುಧವಾರ ತೆರೆ ಬಿದ್ದಿದೆ. ಮಾರ್ಚ್ 19ರಿಂದ ಆರಂಭಗೊಂಡ ಮಾರಿಕಾಂಬಾ ಜಾತ್ರೆ ಮಾರ್ಚ್ 27ರ ಬುಧವಾರ ಸಮಾಪ್ತಿಯಾಗಿದೆ. ಪ್ರತಿ ದಿನ ವಿಶೇಷ ಪೂಜೆ ಮತ್ತು ಭಜನೆಗಳಲ್ಲಿ ಸಾವಿರಾರು ಸಂಖ್ಯೆಯ ಮಹಿಳಾ ಭಕ್ತರು ಪಾಲ್ಗೊಂಡರು. ಜಾತ್ರೆಯ ಪ್ರಯುಕ್ತ ಮಂಗಳೂರಿನ ಕಲಾಸಂಗಮ ನಾಟಕ ಸಂಘದ ವಿಶೇಷ ಕನ್ನಡ ನಾಟಕ ಶಿವಧೂತ ಗುಳಿಗ ನಾಟಕ ಪ್ರದರ್ಶನಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ವೀಕ್ಷಕರು ಆಗಮಿಸಿದ್ದರು. ಆರಗದ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಿಂದ ಆರಂಭಗೊಂಡ ಮಾರಿಕಾಂಬಾ ಜಾತ್ರೆಯ ಮೆರವಣಿಗೆಯಲ್ಲಿ ಮಂಗಳೂರಿನ ವಿಶೇಷ ಕೀಲು ಕುದುರೆ ತಂಡ, ಚಂಡವಾದನ , ತೀರ್ಥಹಳ್ಳಿಯ ನಾಸಿಕ್ ಬ್ಯಾಂಡ್ ತಂಡ ಪಾಲ್ಗೊಂಡಿತ್ತು. ಹತ್ತು ಹಲವಾರು ಛದ್ಮವೇಷಧಾರಿಗಳು ಭಕ್ತರನ್ನು ರಂಜಿಸಿದರು.

ಸುಮಾರು ಒಂದು ತಿಂಗಳಿಂದ ವೈಭವದ ಶ್ರೀ ಮಾರಿಕಾಂಬಾ ಜಾತ್ರೆಯ ಸಿದ್ಧತೆಗೆ ಮಾರಿಕಾಂಬ ದೇವಸ್ಥಾನ ಜಾತ್ರಾ ಸಮಿತಿಯ ಕಾರ್ಯದರ್ಶಿಗಳು, ಖಜಾಂಚಿ ಮತ್ತು ಎಲ್ಲಾ ಸದಸ್ಯರುಗಳು, ಅರಗ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು, ಕಲಾನಾಥೇಶ್ವರ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷರು ಮತ್ತು ಸದಸ್ಯರುಗಳು, ನಿವೃತ್ತ ನೌಕರರು, ಆರಗ ಸುತ್ತಮುತ್ತಲಿನ ಗ್ರಾಮಸ್ಥರು, ಅರ್ಚಕರು, ಆರಗದ ಸುತ್ತಮುತ್ತಲ ಮಹಿಳಾ ಮಂಡಳಿಗಳು, ಭಜನಾ ಮಂಡಳಿಯ ಮಹಿಳಾ ಸದಸ್ಯರುಗಳು ಜಾತ್ರೆಗೆ ಸಹಕರಿಸಿದ್ದು, ಆರಗದ ಶ್ರೀ ಮಾರಿಕಾಂಬೆಯ ಎಲ್ಲಾ ಭಕ್ತಾದಿಗಳು ತುನು ಮನ ಧನ ಸಹಕಾರ ಮಾಡಿದ್ದಾರೆ. ಅತ್ಯಂತ ವೈಭವದ ಮಾರಿಕಾಂಬೆ ಜಾತ್ರೆಗೆ ಸಹಕರಿಸಿದ ಎಲ್ಲರಿಗೂ ಮಾರಿಕಾಂಬ ಜಾತ್ರಾ ಸಮಿತಿಯ ಅಧ್ಯಕ್ಷ ಕಡೇಗದ್ದೆ ಕೃಷ್ಣಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.

 

Categories
ಉಡುಪಿ ಕರಾವಳಿ

ಕರಾವಳಿ ಟಾಪ್ 5 ನ್ಯೂಸ್..!

– ಉಡುಪಿ: ಕಾರು ಢಿಕ್ಕಿ, ಸ್ಕೂಟ‌ರ್ ಸವಾರ ಆಸ್ಪತ್ರೆಗೆ!
– ಉದ್ಯಾವರ : ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ!
– ಅಕ್ರಮ ಆಸ್ತಿಗಳಿಕೆ ಪ್ರಕರಣ: ವಿವಿಧೆಡೆ ಲೋಕಾಯುಕ್ತ ದಾಳಿ!
– ಮಾದರಿ ನೀತಿ ಸಂಹಿತೆ ಉಲ್ಲಂಘನೆ; ವಿವಿಧೆಡೆ ಪ್ರಕರಣ ದಾಖಲು
– ಆಂಧ್ರದಿಂದ ಮಂಗಳೂರಿಗೆ ಗಾಂಜಾ ಸಾಗಿಸಿ ಮಾರಾಟ: ಆರೋಪಿ ಅರೆಸ್ಟ್!

NAMMUR EXPRESS NEWS
ಉಡುಪಿ: ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಅಂಬಾಗಿಲು- ಕಲ್ಸಂಕ ರಸ್ತೆಯಲ್ಲಿ ಸಂಭವಿಸಿದೆ. ಅಂಬಾಗಿಲಿನ ಪ್ರಶಾಂತ್‌ ತನ್ನ ಸ್ಕೂಟರ್‌ನಲ್ಲಿ ಕಲ್ಸಂಕದಿಂದ ಅಂಬಾಗಿಲಿನತ್ತ ತೆರಳುತ್ತಿದ್ದಾಗ ಎದುರುಗಡೆಯಿಂದ ಅತಿವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಾಯಗೊಂಡಿರುವ ಪ್ರಶಾಂತ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರ : ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ:

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಜಂಕ್ಷನ್ ಬಳಿಯ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರ ಸೂಚನೆಯಂತೆ ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಮಹಿಳೆ ಗಾಯಗೊಂಡ ಘಟನೆ ಮಾ. 26ರಂದು ಸಂಜೆ ಸಂಭವಿಸಿದೆ. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಸಂಪತ್ ಅವರ ಪತ್ನಿ, ಬ್ಯಾಂಕ್ ಆಫ್ ಬರೋಡಾ ಪಾಂಗಾಳ ಶಾಖೆ ಸಿಬಂದಿ ರೇಣುಕಾ ಗಾಯಗೊಂಡವರು. ಬ್ಯಾಂಕ್‌ ಆಫ್‌ ಬರೋಡಾ ಮ್ಯಾನೇಜರ್ ಸಂಪತ್ ಅವರ ಪತ್ನಿ, ಬ್ಯಾಂಕ್ ಆಫ್ ಬರೋಡಾ ಪಾಂಗಾಳ ಶಾಖೆ ಸಿಬಂದಿ ರೇಣುಕಾ ಗಾಯಗೊಂಡವರು. ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ರೇಣುಕಾ ಅವರ ಬಲಗಾಲಿನ ಮಂಡಿ, ಕತ್ತು ಹಾಗೂ ಬೆನ್ನಿನ ಭಾಗಕ್ಕೆ ಏಟಾಗಿದ್ದು, ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಆಸ್ತಿಗಳಿಕೆ ಪ್ರಕರಣ: ವಿವಿಧೆಡೆ ಲೋಕಾಯುಕ್ತ ದಾಳಿ:

ಉಡುಪಿ: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬುಧವಾರ ವಿವಿಧೆಡೆ ದಾಳಿ ನಡೆಸಿದ್ದಾರೆ. ಎರಡು ವರ್ಷಗಳಿಂದ ಉಡುಪಿಯಲ್ಲಿ ಅಬಕಾರಿ ಇಲಾಖೆಯ ಉಪಆಯುಕೆಯಾಗಿದ್ದು, ಪ್ರಸ್ತುತ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೂಪಾ ಅವರ ಬೆಂಗಳೂರಿನಲ್ಲಿರುವ ಎರಡು ಮನೆಗಳು, ಶಿವಮೊಗ್ಗದಲ್ಲಿರುವ ಒಂದು ತೋಟದ ಮನೆ, ಕಾರವಾರದಲ್ಲಿರುವ ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದಲ್ಲಿ ಆಸ್ತಿ ಗಳಿಕೆ ಮಾಡಿರುವ ವಿಚಾರ ಲಭಿಸಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ದ.ಕ. ಲೋಕಾಯುಕ್ತ ಎಸ್‌ಪಿ (ಪ್ರಭಾರ) ಮಲ್ಲಿಕ್ ಸಿ. ನೇತೃತ್ವದಲ್ಲಿ ಉಡುಪಿ ಡಿವೈಎಸ್‌ಪಿ. ಪಿ.ಪ್ರಕಾಶ್, ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ರಫಿಕ್ ಅವರನ್ನೊಳಗೊಂಡ 3 ತಂಡಗಳನ್ನು ರಚಿಸಲಾಗಿತ್ತು. ಸ್ಥಳೀಯ ಲೋಕಾಯುಕ್ತ ಪೊಲೀಸರು ಸಹಕರಿಸಿದರು.

ಉಡುಪಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆ; ವಿವಿಧೆಡೆ ಪ್ರಕರಣ ದಾಖಲು:

ಉಡುಪಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ 4.51 ಲಕ್ಷ, ಶಿರೂರು ಚೆಕ್‌ ಪೋಸ್ಟ್‌ನಲ್ಲಿ 3.50 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 7 ಎಫ್‌ಐಆರ್ ದಾಖಲಾಗಿದ್ದು, ಅದರಲ್ಲಿ 4 ಚುನಾವಣೆಗೆ ಸಂಬಂಧಿಸಿದ್ದಾಗಿದೆ.

ಆಂಧ್ರದಿಂದ ಮಂಗಳೂರಿಗೆ ಗಾಂಜಾ ಸಾಗಿಸಿ ಮಾರಾಟ: ಆರೋಪಿ ನಿಶಾಂತ್ ಶೆಟ್ಟಿ ಅರೆಸ್ಟ್..!

ಮಂಗಳೂರು : ಆಂಧ್ರಪ್ರದೇಶದಿಂದ ಮಂಗಳೂರಿಗೆ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು 6.325 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಾಮಂಜೂರು ಸಮೀಪದ ಕುಡುಪು ಪೆದಮಲೆಯ ನಿಶಾಂತ್ ಶೆಟ್ಟಿ (36) ಬಂಧಿತ ಆರೋಪಿಯಾಗಿದ್ದಾನೆ. ಈತ ಸಣ್ಣ ಸಣ್ಣ ಪ್ಯಾಕೆಟ್‌ನಲ್ಲಿ ರೈಲಿನಲ್ಲಿ ಸಾಗಾಟ ಮಾಡಿಕೊಂಡು ಬಂದು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ತೊಕ್ಕೊಟ್ಟು ಒಳಪೇಟೆಯ ಕೃಷ್ಣನಗರ ಪರಿಸರದಲ್ಲಿ ಗೂಡ್ಸ್ ಟೆಂಪೋವೊಂದರಲ್ಲಿ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ ಗೂಡ್ಸ್‌ ಟೆಂಪೋ. 1.50 ಲಕ್ಷ ರೂ.ಮೌಲ್ಯದ 6 ಕೆಜಿ 325 ಗ್ರಾಂ ಗಾಂಜಾ, 2 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪಕ ಮತ್ತಿತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 9,11,500 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Categories
ರಾಜಕೀಯ ರಾಜ್ಯ ಶಿವಮೊಗ್ಗ

ಮಾಜಿ ಸಚಿವ ಈಶ್ವರಪ್ಪ ಬಂಡಾಯ ಫಿಕ್ಸ್!

ಮಾಜಿ ಸಚಿವ ಈಶ್ವರಪ್ಪ ಬಂಡಾಯ ಫಿಕ್ಸ್!
• ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
– ಏ.12ಕ್ಕೆ ನಾಮಪತ್ರ: ಸಮರಕ್ಕೆ ಸಿದ್ಧ
– ಮೋದಿಯಲ್ಲ ಬ್ರಹ್ಮ ಬಂದು ಹೇಳಿದರೂ ನಾನು ಚುನಾವಣೆಗೆ ನಿಲ್ಲುವುದು ಶತಸಿದ್ದ

NAMMUR EXPRESS NEWS
ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರ ಕಾಂತೇಶನಿಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕರ ಮನವೊಲಿಕೆಯ ಮಾತಿಗೂ ಬಗ್ಗದೇ ಸ್ಪರ್ಧೆಯನ್ನು ಖಚಿತಪಡಿಸಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಯಾರು ಏನೇ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

25 ಸಾವಿರ ಜನರ ಸಮ್ಮುಖದಲ್ಲಿ ನಾಮಪತ್ರ

ಏಪ್ರಿಲ್ 12ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 25,000 ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಈಶ್ವರಪ್ಪ ಘೋಷಿಸಿದ್ದಾರೆ. ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಸೋಲಿನ ಭೀತಿ ಹೆಚ್ಚಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಗೆಲುವಿಗಾಗಿ ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಿದ್ದರು. ಅದರಂತೆ ಹೊಂದಾಣಿಕೆ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಹೊಂದಾಣಿಕೆ ರಾಜಕೀಯ ಯಶಸ್ವಿಯಾಗಲ್ಲ. ನಾನು 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.

– ಮೋದಿಯಲ್ಲ ಬ್ರಹ್ಮ ಬಂದು ಹೇಳಿದರೂ ನಿರ್ಧಾರ ಬದಲಿಸಲ್ಲ

ಕ್ಷೇತ್ರದ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ನನಗಾದ ಅನ್ಯಾಯವನ್ನು ಕಂಡು ಹೋದೆಡೆಯೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಚುನಾವಣಾ ಕಚೇರಿ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು, ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಇರುವುದು ಜನರಿಗೂ ಸಹ ಇಷ್ಟವಿಲ್ಲ. ಹಿಂದುತ್ವದ ಪರವಾಗಿ ಹೋರಾಟ ಮಾಡಿದ ಎಲ್ಲರಿಗೂ ಅನ್ಯಾಯವಾಗಿದೆ. ಅನೇಕ ಕಾರ್ಯಕರ್ತರು ತಮಗಾದ ನೋವನ್ನು ನನ್ನ ಬಳಿ ತೋಡಿಕೊಂಡಿದ್ದು, ನನ್ನ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಪಕ್ಷ ನಿಷ್ಠೆ, ಹಿಂದುತ್ವದ ಹೋರಾಟ ಬೆಂಬಲಿಸಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ ಎಂದರು.

ನನ್ನ ನಿರ್ಧಾರ ಬೆಂಬಲಿಸಿ ನಮ್ಮ ಕಾರ್ಯಕರ್ತರು ಮಾತ್ರವಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಹಳಷ್ಟು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಗೆಲುವಿನ ನಂತರ ಮೋದಿ ಮತ್ತೆ ಪ್ರಧಾನಿಯಾಗಲು ಕ್ಷೇತ್ರದ ಮತದಾರರ ಪರವಾಗಿ ಕೈ ಎತ್ತುತ್ತೇನೆ. ಮೋದಿ ಹೇಳಿದ ಕೂಡಲೇ ನಾಮಪತ್ರ ವಾಪಾಸ್ಸು ಪಡೆಯಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮೋದಿಯಲ್ಲ ಬ್ರಹ್ಮ ಬಂದು ಹೇಳಿದರು ನಾನು ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂದರು. ಕ್ಷೇತ್ರದಲ್ಲಿ ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ. ಭದ್ರಾವತಿ, ಶಿಕಾರಿಪುರ, ಸಾಗರ ಆಶ್ಚರ್ಯಕರ ರೀತಿಯಲ್ಲಿ ಬೈಂದೂರು ಮತ್ತು ಶಿವಮೊಗ್ಗ ಗ್ರಾಮಾಂತರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಭೇಟಿಯಾದ ಎಲ್ಲಾ ಗುರುಗಳಿಗೂ ನನಗೆ ಆಶೀರ್ವಾದ ಮಾಡಿದ್ದಕ್ಕೆ ಕೆಲವರು ಅಸಹನೆ ವ್ಯಕ್ತಪಡಿಸಿದ್ದಾರೆ ಎಂದರು.

Categories
ಬೆಂಗಳೂರು ಶಿಕ್ಷಣ

ಪ್ರಥಮ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಪ್ರಥಮ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
– ಪರೀಕ್ಷೆ ಮೇ 20 ರಿಂದ 31ರವರೆಗೆ
– ಮಾರ್ಚ್ 30ಕ್ಕೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟ

NAMMUR EXPRESS NEWS
ಬೆಂಗಳೂರು : ಪ್ರಥಮ ಪಿಯು ಪೂರಕ ಪರೀಕ್ಷೆ ಮೇ 20 ರಿಂದ 31ರವರೆಗೆ ನಡೆಯಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಶೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿಯ ಪ್ರಕಟನೆಯನ್ನು ಮಾಡಿದ್ದು, ಜೂನ್ ‍6 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಬೇಕೆಂದು ಸೂಚನೆಯನ್ನು ನೀಡಿದೆ.

ಪಿಯುಸಿ ಪೂರಕ ಪರೀಕ್ಷೆಯನ್ನು ನಡೆಸಿಕೊಡುವ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗಿದೆ. ಮಾರ್ಚ್ 30ಕ್ಕೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದು ಈ ಸಮಯದಲ್ಲಿ ಪೂರಕ ಪರೀಕ್ಷೆಗೆ ಶುಲ್ಕ ಕಟ್ಟಲು ಅನುವಾಗುವಂತೆ ಪ್ರತಿಯೊಂದು ಕಾಲೇಜುಗಳ ಸೂಚನ ಫಲಕದಲ್ಲಿ ಪೂರಕ ಪರೀಕ್ಷೆಗಳ ವಿವರಣೆಗಳನ್ನು ಪ್ರಕಟಿಸುವಂತೆ ಕೆಎಸ್ ಇಎಬಿ ಸೂಚನೆಯನ್ನು ನೀಡಿದೆ. ದ್ವಿತಿಯ ಪಿಯುಸಿ ಪರೀಕ್ಷೆ ಮಾರ್ಚ್ 22ರಂದು ಪೂರ್ಣಗೊಂಡಿದ್ದು, ಮೌಲ್ಯಮಾಪನ ಪರೀಕ್ಷೆ ಈಗಾಗಲೇ ಪ್ರಾರಂಭವಾಗಿದೆ. ಈ ಬಾರಿ ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಅದಕ್ಕೂ ಮುಂಚೆ ಫಲಿತಾಂಶ ಪ್ರಕಟವಾಗುವ ಸಾದ್ಯತೆ ಇದೆ.

Categories
ತೀರ್ಥಹಳ್ಳಿ

ಲೋಕ ಸಮರಕ್ಕೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿ!

ಲೋಕ ಸಮರಕ್ಕೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿ!
– 28 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು: ಶಾಸಕ ಜ್ಞಾನೇಂದ್ರ
– ಹೈಕಮಾಂಡ್ ಸಂದೇಶವನ್ನು ಚಾಚು ತಪ್ಪದೇ ಪ್ರಾಮಾಣಿಕವಾಗಿ ದುಡಿಯುತ್ತೇವೆ: ಜೆಡಿಎಸ್ ಅಧ್ಯಕ್ಷ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಲಿದೆ.
ತೀರ್ಥಹಳ್ಳಿಯ ನೂತನ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದು ಶಾಸಕ ಆರಗ ಜ್ಞಾನೇಂದ್ರ ಹಾಗೂ ಎಲ್ಲಾ ಬಿಜೆಪಿ ನಾಯಕರು, ಜೆಡಿಎಸ್ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ಸೇರಿ ಎರಡು ಪಕ್ಷದ ಗಣ್ಯರು ಹಾಜರಿದ್ದರು. ಪತ್ರಿಕಾಗೋಷ್ಠಿಯಲ್ಲಿ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ನಾಯಕರು ಪ್ರೆಸ್ ಮೀಟ್ ನಡೆಯುತ್ತಿದೆ. ಈ ಚುನಾವಣೆ ಮೋದಿಯವರ ಚುನಾವಣೆ 28 ಕ್ಷೇತ್ರಕ್ಕೆ 28 ಕ್ಷೇತ್ರವನ್ನು ಗೆಲ್ಲಿಸಲೇಬೇಕು. ಜಿಲ್ಲೆ ಹಾಗೂ ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಎರಡು ಪಕ್ಷದ ಕಾರ್ಯಕರ್ತರ ಸಮನ್ವಯತೆ ಹಾಗೂ ವಿಶ್ವಾಸದಿಂದ ಈ ಚುನಾವಣೆಯನ್ನು ನಡೆಸುವಂತ ಸಂಕಲ್ಪವನ್ನು ನಾವು ತೊಟ್ಟಿದ್ದೇವೆ ಎಂದರು.

ಹತ್ತು ವರ್ಷಗಳ ಮೋದಿಯ ಆಡಳಿತದಲ್ಲಿ ಈ ದೇಶ ಜನರಿಗೆ ಸುರಕ್ಷತೆಯನ್ನು ಕೊಟ್ಟಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಬಲಶಾಲಿಯಾದಂತ ಸೈನ್ಯವನ್ನು ಕಟ್ಟಿದ್ದೇವೆ. ರೈಲ್ವೆ, ವಿಮಾನ ನಿಲ್ದಾಣಗಳು, ಕೋವಿಡ್ ನಲ್ಲೂ ಕೂಡ ಜನರಿಗೆ ವ್ಯಾಕ್ಸಿನ್ ಅನ್ನು ಉಚಿತವಾಗಿ ಕೊಟ್ಟು ರಕ್ಷಣೆಯನ್ನು ಕೊಟ್ಟಿರುವುದು ಹೀಗೆ ಅನೇಕ ಜನಪರ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ಜನರಿಗೆ ಆಮಿಷ ಒಡ್ಡಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂತು. ಅದರಲ್ಲಿ ಸಾಧನೆ ಏನಿಲ್ಲ, ಬಿಜೆಪಿ ವಿರೋಧ ಪಕ್ಷದಲ್ಲಿ ಇದೆ. ಅಭಿವೃದ್ಧಿಯನ್ನು ಬಲಿ ಕೊಟ್ಟು ಅಧಿಕಾರದಲ್ಲಿ ಕಾಂಗ್ರೆಸ್‌ ಕೂತಿದೆ, ಕಳೆದ ಒಂಬತ್ತು ತಿಂಗಳಲ್ಲಿ ಒಂಬತ್ತು ಪೈಸೆಯೂ ಕೂಡ ಬಂದಿಲ್ಲ. ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಆರ್ಥಿಕ ಸ್ಥಿತಿ ದಿವಾಳಿ ಎದ್ದು ಹೋಗಿದೆ. ಕರ್ನಾಟದಲ್ಲಿ ಬರದಲ್ಲಿ ನೀರು ಕೊಡಲು ಆಗದೇ ಕೇಂದ್ರ ಸರಕಾರದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಕಳೆದ ಬಾರಿ 26 ಕ್ಷೇತ್ರವನ್ನು ಗೆದ್ದಿದ್ದೆವು. ಈ ಬಾರಿ 28 ಕ್ಷೇತ್ರವನ್ನು ಗೆಲ್ಲಿಸಿ ಮೋದಿ ಕೈ ಬಲಪಡಿಸೋಕೆ ತಯಾರಾಗಿದ್ದೇವೆ. ಜಿಲ್ಲೆಗೆ ಸಾವಿರಾರು ಕೋಟಿ ತಂದು ಬಿ ವೈ ರಾಘವೇಂದ್ರ ಅಭಿವೃದ್ಧಿ ಮಾಡಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಮಾತನಾಡಿ, ಪ್ರಧಾನ ಮಂತ್ರಿಗಳು ಹಾಗೂ ಮಾಜಿ ಪ್ರಧಾನ ಮಂತ್ರಿಗಳು ಸೇರಿ ತೆಗೆದುಕೊಂಡ ನಿರ್ಣಯ ಇದಾಗಿದೆ. ದೇಶಕ್ಕೆ ಬಿಜೆಪಿಯಿಂದ ಸಾಕಷ್ಟು ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಆಗಿದೆ. ಒಂದು ಒಳ್ಳೆಯ ನಾಯಕತ್ವವನ್ನು ಬಿಜೆಪಿ ದೇಶಕ್ಕೆ ಕೊಡುಗೆಯಾಗಿ ನೀಡಿರುವುದರಿಂದ ಬಿಜೆಪಿಯನ್ನು ಪ್ರಬಲವಾಗಿದೆ. ನಾವೆಲ್ಲರೂ ಈ ಬಾರಿ ಬಿಜೆಪಿಯ ನಾಯಕತ್ವವನ್ನು ನೋಡಿ, ರಾಘವೇಂದ್ರ ಅವರಿಗೆ ಮತ ನೀಡೋಣ. ಹೈಕಮಾಂಡ್ ಸಂದೇಶವನ್ನು ಚಾಚು ತಪ್ಪದೇ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು, ಜೆಡಿಎಸ್ ನಾಯಕರಾದ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿಯಾದ ಗುರುದತ್ತ್, ಜೆಡಿಎಸ್ ಮಹಿಳಾ ವಿಭಾಗದ ಅಧ್ಯಕ್ಷರಾದ ಶೈಲಾ ನಾಗರಾಜ್, ಪಕ್ಷದ ಮುಖಂಡರಾದ ಸಾಲೆಕೊಪ್ಪ ರಾಮಚಂದ್ರ, ಚಂದುವಳ್ಳಿ ಸೋಮಶೇಖರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್, ಬಿಜೆಪಿ ಹಿಂದುಳಿದ ಮೋರ್ಚಾದ ನಾಯಕರಾದ ಬೇಗುವಳ್ಳಿ ಸತೀಶ್, ಶಿವಮೊಗ್ಗ ಗ್ರಾಮಾಂತರ ಮಾಜಿ ಬಿಜೆಪಿ ಅಧ್ಯಕ್ಷರಾದ ರತ್ನಾಕರ್ ಸೇರಿದಂತೆ ಪ್ರಮುಖರು ಹಾಜರಿದ್ದರು.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಲೋಕಸಭಾ ಚುನಾವಣೆ: ಗಡಿಗಳಲ್ಲಿ ಚೆಕ್ ಪೋಸ್ಟ್ ಅವಾಂತರ!

ಲೋಕಸಭಾ ಚುನಾವಣೆ: ಗಡಿಗಳಲ್ಲಿ ಚೆಕ್ ಪೋಸ್ಟ್ ಅವಾಂತರ!
– ಚುನಾವಣೆ ಹೆಸರಲ್ಲಿ ಜನ ಸಾಮಾನ್ಯರಿಗೆ ತೊಂದರೆ
– ಅಡಿಕೆ ಮಾರಿ ತಂದ ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು!
– ಚೆಕ್ ಪೋಸ್ಟ್ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ/ ಕೊಪ್ಪ: ಲೋಕ ಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಎಲ್ಲೆಡೆ ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಚುನಾವಣೆಯ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಇದೀಗ ಈ ನಿಯಮ ಬಡವರು, ರೈತರು, ಜನ ಸಾಮಾನ್ಯರಿಗೆ ಭಾರೀ ತೊಂದರೆ ಆಗುತ್ತಿದೆ. ಚೆಕ್ ಪೋಸ್ಟ್ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನವೀಯತೆ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ವಾಹನವನ್ನು ತಪಾಸಣೆಗೊಳಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದ ತಾಲೂಕಿನ ಎಲ್ಲಾ ಗಡಿಭಾಗದಲ್ಲಿರುವ ಅಧಿಕಾರಿಗಳು ಪ್ರತಿಯೊಂದು ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ.

ಆದರೆ ಈಗ ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ರೈತರು ಅಡಿಕೆ ಕೊಯ್ಲು ಮುಗಿಸಿ ಅಡಿಕೆ ಮಾರುವ ಸಮಯವಾಗಿದ್ದು ಅಡಿಕೆ ಮಾರಿ ಬಂದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಐವತ್ತು ಸಾವಿರ ಒಂದು ಲಕ್ಷದ ಹಣವನ್ನೆಲ್ಲ ರೈತರು ತಮ್ಮ ತುರ್ತು ಪರಿಸ್ಥಿತಿಗಾಗಿ ಮನೆ ಮಾಡಲು, ಇಲ್ಲವೇ ಮಕ್ಕಳ ಮದುವೆ, ಸಾಲ ತೀರಿಸಲು, ಅಥವಾ ಇನ್ನಾವುದೇ ಶುಭ ಸಮಾರಂಭ ಮಾಡಲೊ ಅಥವಾ ಯಾವುದೇ ಅನಾರೋಗ್ಯ ಪರಿಸ್ಥಿತಿಯಿಂದಲೂ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದ್ಯಾವುದಕ್ಕೂ ಬಿಲ್ ತೆಗೆದುಕೊಂಡು ಹೋಗಲು ಆಗುತ್ತಿಲ್ಲ, ಇದರಿಂದ ಬಡವರಿಗೆ ಕಷ್ಟದಲ್ಲಿರುವವರಿಗೆ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಚುನಾವಣೆಯಿಂದಾಗಿ ಜನರು ತುರ್ತು ಸಂದರ್ಭದಲ್ಲಿ ಕೂಡ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿಲ್ಲ. ಇದು ಜನಸಾಮಾನ್ಯರಿಗೆ ಬಹಳ ಗೊಂದಲಕ್ಕೀಡು ಮಾಡಿದೆ.

ಅಧಿಕಾರಿಗಳು, ಪೊಲೀಸರಿಗೆ ದಿನಕ್ಕೆ ಇಷ್ಟು ವಾಹನಗಳನ್ನು ತಪಾಸಣೆ ಮಾಡಿದ್ದೇವೆ ಎನ್ನುವ ಮಾಹಿತಿ ಕೊಡಬೇಕು. ಜನರ ಸಮಸ್ಯೆ ಅವರಿಗೆ ಗೊತ್ತಿರುವುದಿಲ್ಲ. ಜನರಿಗೆ ಇಷ್ಟೆಲ್ಲ ಸಮಸ್ಯೆ ಇರುವಾಗ ಅವರು ಜನರ ತುರ್ತು ಪರಿಸ್ಥಿತಿಯನ್ನು ಪರಿಶೀಲಿಸಿ, ಯಾವ ಕಾರಣಕ್ಕಾಗಿ ಜನರು ಹಣವನ್ನು ಸಾಗಿಸುತ್ತಿದ್ದಾರೆ ಎಂದು ತಿಳಿದು ನಂತರ ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಜನಸಾಮಾನ್ಯರಿಗೆ ಚುನಾವಣೆಯಿಂದ ತೊಂದರೆಯಾಗುತ್ತಿದೆ. ಕೊಪ್ಪ ತೀರ್ಥಹಳ್ಳಿ ಗಡಿಕಲ್ ಅಲ್ಲಿ ಬುಧವಾರ ರೈತನೊಬ್ಬನ ಹಣ ವಶಕ್ಕೆ ಪಡೆದು ಆತ ಚಿಕ್ಕಮಗಳೂರಿಗೆ ಹೋಗಿ ಹಣ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ.

ನಿಯಮವೇ ಗೊತ್ತಿಲ್ಲದ ಅಧಿಕಾರಿಗಳು!

ಯುವ ಮುಖಂಡ ಪಣಿರಾಜ್ ಕಟ್ಟೆಹಕ್ಕಲು ಆಕ್ರೋಶ

ತೀರ್ಥಹಳ್ಳಿ ತಾಲೂಕಿನ ಗಡಿಕಲ್ಲಿನಲ್ಲಿ ನಡೆದಿದ್ದು ಅಡಿಕೆ ಮಾರಿ ರೈತ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಅಧಿಕಾರಿಗಳು ವಶಪಡಿಸಿಕೊಂಡು ಜಿಲ್ಲಾ ಕೇಂದ್ರಕ್ಕೆ ಕೊಟ್ಟಿದ್ದಾರೆ. ಅವರಿಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದು, ಅದನ್ನು ವಾಪಸ್ ತೆಗೆದುಕೊಳ್ಳಲು ತೊಂದರೆ ಅನುಭವಿಸುವ ಸ್ಥಿತಿ ಬಂದಿದೆ. ಚುನಾವಣೆ ದೃಷ್ಟಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಚುನಾವಣೆಯು ಪ್ರತಿ ವರ್ಷವೂ ನಡೆಯುತ್ತದೆ, ಆದರೆ ಇವರ ಸ್ವಾರ್ಥದಿಂದ ಬಡ ಜನರಿಗೆ, ಸಾಮಾನ್ಯ ಜನರಿಗೆ, ರೈತರಿಗೆ ತುರ್ತು ಸಂದರ್ಭದಲ್ಲಿ ಕೂಡ ತೊಂದರೆಯಾಗುತ್ತಿದೆ. ತಕ್ಷಣ ಜಿಲ್ಲಾಡಳಿತ, ಚುನಾವಣಾ ಆಯೋಗ ಮತ್ತು ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಗಮನಿಸಿ ರೆಗುಲೇಷನ್ ಪಾಸ್ ಮಾಡಬೇಕು ಎಂದು ತೀರ್ಥಹಳ್ಳಿ ಯುವ ಮುಖಂಡ ಪಣಿರಾಜ್ ಕಟ್ಟೆಹಕ್ಕಲು ಆಗ್ರಹಿಸಿದ್ದಾರೆ.

Categories
ಕರಾವಳಿ ಕಾರ್ಕಳ ಕೃಷಿ ರಾಜ್ಯ

ಕರಾವಳಿ ಕೃಷಿಕರಿಗೆ ಮಿಶ್ರಫಲ..!

ಕರಾವಳಿ ಕೃಷಿಕರಿಗೆ ಮಿಶ್ರಫಲ..!
– ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ
– ಗೇರು ಧಾರಣೆ ಕುಸಿತ, ಅಡಕೆ ರೇಟ್ ಚೇತರಿಕೆ!

NAMMUR EXPRESS NEWS
ಮಂಗಳೂರು: ಸಾಮಾನ್ಯವಾಗಿ ಕರಾವಳಿಯ ಕೃಷಿಕರು ವಾಣಿಜ್ಯ ಬೆಳೆಯಾದ ಅಡಕೆಗೆ ಪ್ರಥಮ ಪ್ರಾಶಸ್ತ್ರ ನೀಡಿ, ಉಳಿದ ಜಾಗದಲ್ಲಿ ಇತರ ಬೆಳೆ ಬೆಳೆಯುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಿಶ್ರಬೆಳೆಗೂ ಆದ್ಯತೆ ನೀಡುತ್ತಿರುವ ಪರಿಣಾಮ, ಅಂಥ ಕೃಷಿಕರ ಮೊಗದಲ್ಲೀಗ ಮಂದಹಾಸ. ಕಾರಣ, ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿ ಕೆ.ಜಿ.ಗೆ 200 ರೂ. ದಾಟಿದೆ. ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಏರಿದ್ದು, ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 205ಕ್ಕೆ ಖರೀದಿಯಾಗಿದೆ. ಒಣ ಕೊಕ್ಕೊಗೆ ಎರಡು ದಿನಗಳ ಹಿಂದೆ ಇದ್ದ ಧಾರಣೆಯನ್ನು ಗಮನಿಸಿದರೆ ಕೆ.ಜಿ.ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿದೆ. ಅಲ್ಲದೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನೂ ಮಾರುಕಟ್ಟೆ ನೀಡಿದೆ. ಕೊಕ್ಕೊ ಉತ್ತಮ ಮಿಶ್ರಬೆಳೆ. ಆದರೆ ಹಲವು ವರ್ಷಗಳಿಂದ ಅಡಕೆ ಜೊತೆಯಾಗಿ ಕೊಕ್ಕೊ ಬೆಳೆಯುತ್ತಿದ್ದರೂ ಅಡಕೆಗೆ ಧರ ಏರಿದಾಗಲೂ ಕೊಕ್ಕೊ 60ರೂ ಆಸುಪಾಸಿನಲ್ಲೇ ಇತ್ತು. ಇದರಿಂದ ನಿಧಾನವಾಗಿ ಕೃಷಿಕರು ಕೊಕ್ಕೊವನ್ನು ಬದಿಗೆ ಸರಿಸಿ, ಅಡಕೆಯತ್ತ ಮನ ಮಾಡಿದರು. ಪರಿಣಾಮ, ಕಂಡಕಂಡಲ್ಲೆಲ್ಲಾ ಅಡಕೆ ಸಸಿಗಳು ಕಾಣಿಸುತ್ತಿದ್ದರೆ, ಉಳಿದೆಲ್ಲಾ ಗಿಡಗಳು ಗೌಣವಾಗುತ್ತಿವೆ. ಇಂಥ ಹೊತ್ತಿನಲ್ಲೇ ಕೊಕ್ಕೊ ಧಾರಣೆ ಏರುಹಾದಿ ಕಾಣಿಸುತ್ತಿದೆ.

ಹೊಸ ಅಡಕೆ ಧಾರಣೆ ಹೆಚ್ಚಳ:

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ. ಏರಿದೆ. ಸಿಂಗಲ್‌ಚೋಲ್, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿದೆ. ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 345-365 ರೂ. ದಾಖಲಾಗಿದೆ. ಹೊರ ಮಾರುಕಟ್ಟೆಯಲ್ಲಿ 370 ರೂ. ತನಕವೂ ಇತ್ತು.

ಇಳಿಹಾದಿಯಲ್ಲಿ ಗೇರು ಬೀಜದ ದರ:

ಒಂದು ಕಾಲದಲ್ಲಿ ಸೀಸನ್ ನಲ್ಲಿ ಕೆ.ಜಿ.ಗೆ 120 ರೂವರೆಗೆ ಇದ್ದ ಗೇರು ಈಗ 95 ರೂಗೆ ಇಳಿದಿದೆ. ಹವಾಮಾನ ವೈಪರೀತ್ಯದಿಂದ ಗೇರು ಹೂವಿನ ಮೊಗ್ಗು ಕರಗುವುದರಿಂದ ಉತ್ಪಾದನೆಯೂ ಕಡಿಮೆಯಾಗಿದೆ. ಈ ವರ್ಷಾರಂಭದಲ್ಲಿ ಕೆ.ಜಿ.ಗೆ 100 ರೂ ಇದ್ದ ಗೇರುದರ, ಇದೀಗ 90 ರೂಗೆ ಇಳಿಕೆಯಾಗಿದೆ. ಕಳೆದ ವರ್ಷ ಕೇರಳದಲ್ಲಿ ಬೆಂಬಲ ಬೆಲೆಯೊಂದಿಗೆ ಬೀಜ ಖರೀದಿಯಾಗಿತ್ತು. ಈ ವರ್ಷವೂ ಡಿಸೆಂಬ‌ರ್, ಜನವರಿ ತಿಂಗಳಲ್ಲಿ ಅಕಾಲಿಕ ಮೋಡ ಕವಿದು ಮಳೆಯಾಗಿತ್ತು.