Categories
ಮಂಗಳೂರು ರಾಜ್ಯ

ಮೋದಿ ರೋಡ್ ಶೋ: ಜೇನುಗೂಡು ಇರಂಗಿಲ್ಲ!

ಮೋದಿ ರೋಡ್ ಶೋ: ಜೇನುಗೂಡು ಇರಂಗಿಲ್ಲ!
– ಮೋದಿ ಮಂಗಳೂರು ರೋಡ್‌ ಶೋ: ಹೈ ಅಲರ್ಟ್!
– ಜೇನುಗೂಡು ತೆರವುಗೊಳಿಸಲು ಪೊಲೀಸ್‌ ಆಯುಕ್ತರಿಂದ ಪತ್ರ

NAMMUR EXPRESS NEWS
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಂಗಳೂರಿಗೆ ಆಗಮಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್‌ ಶೋ ನಡೆಯಲಿದೆ. ಆದರೆ ಪ್ರಧಾನಿ ಮೋದಿ ಅವರ ಆಗಮನದ ಹಿನ್ನಲೆಯಲ್ಲಿ ಇದೀಗ ಭದ್ರತೆ ದೃಷ್ಟಿಯಿಂದ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದ್ದು, ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಕ್ಕೆ ಪೊಲೀಸರು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ, ಮೋದಿ ಅವರು ರೋಡ್‌ಶೋ ನಡೆಸಲಿರುವ ರಸ್ತೆಗಳಲ್ಲಿರುವ ಬೃಹತ್‌ ಕಟ್ಟಡ, ಅಂಗಡಿ-ಮುಂಗಟ್ಟುಗಳವರಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ನಡುವೆ ಮಂಗಳೂರಿಗೆ ಮೋದಿ ಆಗಮನದ ಮೊದಲು ಹಾಗೂ ನಂತರದ ಕೆಲವು ದಿನ ಬುಕ್‌ ಆಗುವ ರೂಂಗಳ ವಿವರ ಸೇರಿದಂತೆ ಭದ್ರತೆ ದೃಷ್ಟಿಯಿಂದ ಬಹಳ ಮಹತ್ವಪೂರ್ಣ ಮಾಹಿತಿಯನ್ನು ಕೂಡ ಮೋದಿಯವರ ಭದ್ರತೆಗೆ ನಿಯೋಜನೆಗೊಂಡಿರುವ ಭದ್ರತಾ ತಂಡಗಳ ಜತೆ ಮಂಗಳೂರು ನಗರ ಪೊಲೀಸರು ಹಂಚಿಕೊಳ್ಳಬೇಕಾಗುತ್ತದೆ.

ಆದರೆ ಮೋದಿ ರೋಡ್‌ಶೋ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ವಾರಸ್ಯಕರ ಸಂಗತಿಯೆಂದರೆ, ಮೋದಿ ರೋಡ್‌ಶೋ ಮಾಡುವ ಮಾರ್ಗದಲ್ಲಿರುವ ಎಲ್ಲ ಜೇಣುನೊಣಗಳ ಗೂಡುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ಪತ್ರ ಬರೆದಿದ್ದಾರೆ ನಗರದ ನಾರಾಯಣಗುರು ವೃತ್ತದಿಂದ ನವಭಾರತ್‌ ಸರ್ಕಲ್‌ವರೆಗಿನ ರೋಡ್‌ಶೋ ನಡೆಯುವ ಸ್ಥಳ, ವಾಹನ ನಿಲುಗಡೆ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್‌, ಸೇಫ್‌ ಹೌಸ್‌ ಮತ್ತು ಸೇಫ್‌ ಆಸ್ಪತ್ರೆಗಳಾದ ಎಜೆ ಆಸ್ಪತ್ರೆ, ವೆನ್ಲಾಕ್‌ ಆಸ್ಪತ್ರೆ, ಕೆಎಂಸಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ, ಸರ್ಕ್ಯೂಟ್‌ ಹೌಸ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಣ್ಯರು ಸಂಚರಿಸುವ ಕಾರ್ಯಕ್ರಮದ ಸ್ಥಳದವರೆಗಿನ ಎಲ್ಲ ಮಾರ್ಗಗಳಲ್ಲಿ ಜೇನುಗೂಡುಗಳನ್ನು ತೆರವುಗೊಳಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಈ ಪತ್ರದ ಬಗ್ಗೆ ಪರಿಸರವಾದಿಗಳು ಸೇರಿದಂತೆ ಕೆಲವರು ಈಗಾಗಲೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ನಾರಾಯಣಗುರು ವೃತ್ತದಿಂದ ನವಭಾರತ್‌ ಸರ್ಕಲ್‌ವರೆಗೆ ಮಾತ್ರ ರೋಡ್‌ಶೋ ಮಾಡುವುದಕ್ಕೆ ಎಸ್‌ಪಿಜಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ

Categories
ಉಡುಪಿ

ನಾಲ್ವರ ಕಗ್ಗೊಲೆ: ಹಂತಕನ ಬಗ್ಗೆ ಸಾಕ್ಷಿಗಳ ವಿಚಾರಣೆ!

ನಾಲ್ವರ ಕಗ್ಗೊಲೆ: ಹಂತಕನ ಬಗ್ಗೆ ಸಾಕ್ಷಿಗಳ ವಿಚಾರಣೆ!
– ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ
– ಏನಿದು ಕೇಸ್… ವಿಚಾರಣೆ ಹೇಗೆ..?

NAMMUR EXPRESS NEWS
ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಏ.13ರಿಂದ ಸಾಕ್ಷಿಗಳ ವಿಚಾರಣೆ ಆರಂಭಗೊಳ್ಳಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಏ.10ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ವಿಚಾರಣೆಗೆ ಒಳಪಡುವ ಸಾಕ್ಷಿಗಳ ಹೆಸರನ್ನು ನಮೂದಿಸುವ ಮೆಮೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಮಧ್ಯೆ ಆರೋಪಿ ಪರ ವಕೀಲ ರಾಜೇಶ್ ಕೆ.ಎಸ್., ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆದುದರಿಂದ ಸಾಕ್ಷಿಗಳ ವಿಚಾರಣೆ ಆರಂಭಿಸಬಾರದು ಎಂದು ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶ ದಿನೇಶ್ ಹೆಗ್ಡೆ, ಈ ಸಂಬಂಧ ಹೈಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆ ಆದೇಶ ಬಂದಿಲ್ಲ. ಹಾಗಾಗಿ ವಿಚಾರಣೆ ಮುಂದುವರಿಸಲಾಗುವುದೆಂದು ಅಭಿಪ್ರಾಯಪಟ್ಟರು. ಅದರಂತೆ ನ್ಯಾಯಾಧೀಶರು ಜೂ.13ರಂದು ಪ್ರಕರಣದ ದೂರುದಾರರು, ಜೂ.14 ಮತ್ತು 15ರಂದು ತಲಾ ಇಬ್ಬರು ಸೇರಿದಂತೆ ಒಟ್ಟು ಐದು ಸಾಕ್ಷಿಗಳ ವಿಚಾರಣೆ ದಿನಾಂಕ ನಿಗದಿ ಪಡಿಸಿ ಆದೇಶ ನೀಡಿದ್ದಾರೆ

Categories
ರಾಜ್ಯ

ಮತ್ತೆ ಮೊಳಗಲಿದೆ ಜೈ ಶ್ರೀರಾಮ್ ಘೋಷ!

ಮತ್ತೆ ಮೊಳಗಲಿದೆ ಜೈ ಶ್ರೀರಾಮ್ ಘೋಷ!
– ಏ.ಪ್ರಿಲ್ 17ಕ್ಕೆ ಶ್ರೀ ರಾಮ ನವಮಿ ಸಂಭ್ರಮ
– ಬಿಜೆಪಿಗೆ ಈ ರಾಮ ನವಮಿ ಲಾಭ ಆಗುತ್ತಾ?

NAMMUR EXPRESS NEWS
ಏ.ಪ್ರಿಲ್ 17ಕ್ಕೆ ಶ್ರೀ ರಾಮನವಮಿ. ಪ್ರತಿ ವರ್ಷವೂ ರಾಮನವಮಿಯನ್ನು ದೇಶದ ಬೀದಿ ಬೀದಿಯಲ್ಲಿ ಆಚರಿಸಲಾಗುತ್ತದೆ . ಪಾನಕ – ಮಜ್ಜಿಗೆ ಹಂಚುವ ಮೂಲಕ ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿ, ಸಂಭ್ರಮ ಸಡಗರದಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿಯ ರಾಮನವಮಿ ಬಿಜೆಪಿಯ ಪಾಲಿಗೆ ಮಹತ್ತರ ನವಮಿಯಾಗಲಿದೆ. ಜನವರಿ 22 2024 ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆಗೊಳಿಸಿದ ದಿನ. ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ದಿನ. ಬಹುದೊಡ್ಡ ಶತಮಾನಗಳ ಹೋರಾಟವೊಂದಕ್ಕೆ ಫಲ ಸಿಕ್ಕದಿನ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ , ಆ ಭರವಸೆಯನ್ನು ಈಡೇರಿಸಿದ್ದ ದಿನ. ಹೀಗಾಗಿ ಈ ರಾಮ ನವಮಿ ವಿಶೇಷವಾಗಿದೆ.

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ , ದೇಶದಲ್ಲಿ ಚುನಾವಣೆ ನಡೆದಿದ್ದರೆ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವರದಿಗಳು ಭಾರಿ ಸದ್ದು ಮಾಡಿದ್ದವು . ಆದರೆ ನಂತರದಲ್ಲಿ ರಾಮನ ಅಲೆ ಸ್ವಲ್ಪ ಕುಗ್ಗಿದ ಹಾಗೆ ಭಾಸವಾಗಿತ್ತು . ಇದೀಗ ಏಪ್ರಿಲ್ 17ರಂದು ರಾಮನವಮಿ ಆಚರಣೆ ಬಿಜೆಪಿಯ ಪಾಲಿಗೆ ವರವಾಗಿ ಪರಿಣಮಿಸುವ ಸಾಧ್ಯತೆಗಳು ಕಂಡುಬರುತ್ತಿದೆ.

ಜನವರಿಯಲ್ಲಿ ಇದ್ದ ಆ ರಾಮನ ಅಲೆಯನ್ನ ಮತ್ತೆ ಸೃಷ್ಟಿಸಿ ಚುನಾವಣೆಯಲ್ಲಿ ಅದರ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ , ಬಿಜೆಪಿ ಏಪ್ರಿಲ್ 17ರಂದು ದೇಶದ ಗಲ್ಲಿ ಗಲ್ಲಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಮಾಡಿ , ರಾಮನವಮಿ ಆಚರಿಸಲು ಬಿಜೆಪಿ ಮುಂದಾಗಿದೆ. ರಾಮ ನಾಮ ಜಪದ ಮೂಲಕವೇ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮತ ಕಸಿದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ ಎಂದು ಹೇಳಲಾಗುತ್ತಿದೆ.

Categories
ಜಾತಕ

ನಿಮ್ಮ ರಾಶಿ ಫಲ ಹೇಗಿದೆ?

ನಿಮ್ಮ ರಾಶಿ ಫಲ ಹೇಗಿದೆ?
– ಯಾವ ರಾಶಿಗೆ ಏನೇನಿದೆ..?
– ಅರೋಗ್ಯ ಉದ್ಯೋಗ, ಶಿಕ್ಷಣ ಯಾವುದು ಸಿಗುತ್ತೆ?

NAMMUR EXPRESS NEWS
2024 ಎಪ್ರಿಲ್ 13ರ ಶನಿವಾರ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಲಾಭ .? ಯಾವ ರಾಶಿಯವರು ನಷ್ಟ .?

* ಮೇಷ ರಾಶಿ :
ದೂರ ಪ್ರಯಾಣದ ಸೂಚನೆಗಳಿವೆ. ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ. ಕುಟುಂಬ ಸದಸ್ಯರೊಂದಿಗೆ ದೈವಿಕ ದರ್ಶನಗಳನ್ನು ಪಡೆಯುತ್ತೀರಿ ಮತ್ತು ವೃತ್ತಿಪರ ವ್ಯವಹಾರದಲ್ಲಿ ನಿರ್ಧಾರಗಳು ಕೂಡಿ ಬರುವುದಿಲ್ಲ. ಉದ್ಯೋಗಿಗಳಿಗೆ ಸ್ಥಾನ ಸೂಚನೆಗಳಿವೆ. ಆರೋಗ್ಯ ವಿಷಯಗಳಿಗೆ ವೈದ್ಯಕೀಯ ಸಮಾಲೋಚನೆ ಅಗತ್ಯ.

* ವೃಷಭ ರಾಶಿ :
ಆಪ್ತ ಸ್ನೇಹಿತರ ಸಹಾಯ ಸಹಕಾರಗಳು ದೊರೆಯುತ್ತವೆ. ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಕಾರ್ಯ ಸಿದ್ದತೆ ಉಂಟಾಗುತ್ತದೆ. ಆದಾಯ ತೃಪ್ತಿಕರವಾಗಿರುತ್ತದೆ. ಬಂಧುಗಳೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿಪರ ಉದ್ಯೋಗಗಳು ಅನುಕೂಲಕರ ವಾತಾವರಣ ಇರುತ್ತದೆ.

* ಮಿಥುನ ರಾಶಿ :
ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಸಹೋದರರೊಂದಿಗೆ ವಿವಾದ ಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ.

* ಕಟಕ ರಾಶಿ :
ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಆದಾಯ ಚೆನ್ನಾಗಿರಲಿದೆ. ಸ್ನೇಹಿತರ ಸಹಕಾರದಿಂದ ದೀರ್ಘಕಾಲದಿಂದ ಪೂರ್ಣಗೊಳ್ಳದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಸ್ಥಿರಾಸ್ತಿ ವಿವಾದಗಳು ಒಂದು ಹಂತಕ್ಕೆ ಬರುತ್ತವೆ. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಉದ್ಯೋಗಿಗಳು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ.

* ಸಿಂಹ ರಾಶಿ :
ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಉಂಟಾಗುತ್ತವೆ. ದೂರ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಹೊಸ ಸಾಲ ಪ್ರಯತ್ನಗಳನ್ನು ಮಾಡುತ್ತೀರಿ. ಕೈಗೊಂಡ ಕಾರ್ಯಕ್ರಮಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯವಹಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ನಷ್ಟ ಅನುಭವಿಸುತ್ತೀರಿ. ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

* ಕನ್ಯಾ ರಾಶಿ :
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ, ಲಾಭವನ್ನು ಪಡೆಯುತ್ತೀರಿ. ಮನೆಯ ಹೊರಗೆ ನಿಮ್ಮ ನಿರ್ಧಾರಗಳು ಎಲ್ಲರಿಗೂ ಸಂತೋಷವನ್ನು ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಆಪ್ತ ಸ್ನೇಹಿತರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ.

* ತುಲಾ ರಾಶಿ :
ಬಾಲ್ಯದ ಸ್ನೇಹಿತರೊಂದಿಗೆ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕೆಲವು ವ್ಯವಹಾರಗಳಲ್ಲಿ ಪ್ರಮುಖ ವ್ಯಕ್ತಿಗಳಿಂದ ಪ್ರಮುಖ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ. ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. ವ್ಯಾಪಾರದಲ್ಲಿ ಅನುಕೂಲತೆ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹವನ್ನು ಪಡೆಯುತ್ತೀರಿ. ಹಠಾತ್ ಧನಲಾಭ ಉಂಟಾಗುತ್ತದೆ.

*ವೃಶ್ಚಿಕ ರಾಶಿ :
ಹಳೆಯ ಸಾಲ ತೀರಿಸಲು ಹೊಸ ಸಾಲ ಮಾಡಲಾಗುತ್ತದೆ. ವ್ಯವಹಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡುವುದು ಉತ್ತಮ. ಆದಾಯದ ಮಾರ್ಗಗಳು ಕಡಿಮೆಯಾಗುತ್ತವೆ. ಮನೆಯ ವಾತಾವರಣವು ಕಿರಿಕಿರಿಯುಂಟುಮಾಡುತ್ತದೆ. ಹೆಚ್ಚುವರಿ ಜವಾಬ್ದಾರಿಗಳಿಂದ ಉದ್ಯೋಗಿಗಳಿಗೆ ವಿಶ್ರಾಂತಿ ಇರುವುದಿಲ್ಲ.

* ಧನುಸ್ಸು ರಾಶಿ :
ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಸಮಸ್ಯೆಗಳಿರುತ್ತವೆ. ಸಂಬಂಧಿಕರೊಂದಿಗೆ ಅನಿರೀಕ್ಷಿತ ವಿವಾದಗಳು ಉದ್ಭವಿಸುತ್ತವೆ. ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಪ್ರಯಾಣವನ್ನು ಮುಂದೂಡುವುದು ಉತ್ತಮ.

* ಮಕರ ರಾಶಿ :
ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ಆಪ್ತ ಸ್ನೇಹಿತರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಕುಟುಂಬದ ಸದಸ್ಯರಿಂದ ಅಗತ್ಯಕ್ಕೆ ತಕ್ಕಂತೆ ಆರ್ಥಿಕ ನೆರವು ದೊರೆಯುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಆರ್ಥಿಕ ಅನುಕೂಲತೆ ಉಂಟಾಗುತ್ತದೆ. ಉದ್ಯೋಗಿಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ.

* ಕುಂಭ ರಾಶಿ :
ಉದ್ಯೋಗದಲ್ಲಿ ಅಧಿಕಾರಿಗಳ ಜೊತೆಗಿನ ಚರ್ಚೆಗಳು ಫಲ ನೀಡುತ್ತವೆ. ಸಹೋದರರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ವಿಸ್ತಾರವಾಗುತ್ತದೆ. ನಿಮ್ಮ ಒಳ್ಳೆಯ ಮಾತಿನಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭ ಗಳಿಸುತ್ತೀರಿ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

* ಮೀನ ರಾಶಿ :
ಸೋದರ ಸಂಬಂಧಿಗಳೊಂದಿಗೆ ಹಠಾತ್ ವಿವಾದಗಳಿರುತ್ತವೆ. ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಗಳಿರುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ವ್ಯಾಪಾರ ಉದ್ಯೋಗಗಳು ಮತ್ತಷ್ಟು ನಿಧಾನವಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ನಿರಾಸೆಯಾಗುವುದು ಖಂಡಿತ. ಬಾಲ್ಯದ ಗೆಳೆಯರೊಂದಿಗೆ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ.

Categories
ಅಡಿಕೆ-ದರ

ಅಡಿಕೆ ದರ 12-04-2024

ಅಡಿಕೆ ದರ
12-04-2024
ಸರಕು 46100 84300
ಬೆಟ್ಟೆ 45069 55000
ರಾಶಿ 30108 49599
ಗೊರಬಲು 17069 37509
Nammur Express
Categories
ರಾಜಕೀಯ ಶಿವಮೊಗ್ಗ

30 ಸಾವಿರ ಬೆಂಬಲಿಗರೊಂದಿಗೆ ಈಶ್ವರಪ್ಪ ನಾಮಪತ್ರ!

30 ಸಾವಿರ ಬೆಂಬಲಿಗರೊಂದಿಗೆ ಈಶ್ವರಪ್ಪ ನಾಮಪತ್ರ!
– ನನ್ನ ಸ್ಪರ್ಧೆ ಬಗ್ಗೆ ಅನುಮಾನ ಅಂದವರಿಗೆ ಮೆರವಣಿಗೆಯೇ ಸಾಕ್ಷಿ
– ಶಿವಮೊಗ್ಗದಲ್ಲಿ ಸಂಚಲನ ಮೂಡಿಸಿದ ಕೆ.ಎಸ್.ಈಶ್ವರಪ್ಪ
– ಮೋದಿ ಫೋಟೋ ಬಳಸಿ ಮೆರವಣಿಗೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಭಾರೀ ಜನಸ್ತೋಮದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿ.ಸಿ ಗುರುದತ್ತ ಹೆಗಡೆ ಅವರಿಗೆ ಕೆ.ಎಸ್.ಈಶ್ವರಪ್ಪ ಅವರು ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಕೆ.ಎಸ್.ಈಶ್ವರಪ್ಪ ಪತ್ನಿ ಸೇರಿದಂತೆ ಇತರರಿದ್ದರು. ಶಿವಮೊಗ್ಗದಲ್ಲಿ ಕೇಸರಿ ಬಾವುಟದೊಂದಿಗೆ ಸಾವಿರಾರು ಜನರು ಸೇರಿದ್ದರು. ಇದು ಇಡೀ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮೋದಿ ಫೋಟೋ ಜತೆ ಈಶ್ವರಪ್ಪ ಶಕ್ತಿ ಪ್ರದರ್ಶನ

ನಾಮಪತ್ರ ಸಲ್ಲಿಕೆಗೂ ಮುನ್ನ ಕೆ.ಎಸ್.ಈಶ್ವರಪ್ಪ ಅವರು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು. ವಾಹನಕ್ಕೆ ಮೋದಿ ಹಾಗೂ ಈಶ್ವರಪ್ಪ ಅವರ ಭಾವಚಿತ್ರವಿದ್ದ ಬೃಹತ್ ಪ್ಲೆಕ್ಸ್ ಹಾಕಲಾಗಿತ್ತು. ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆಗೆ ಸಮಯ ವಿಳಂಬವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೆರವಣಿಗೆಯಿಂದ ಅರ್ಧಕ್ಕೆ ನಿರ್ಗಮಿಸಿದ ಈಶ್ವರಪ್ಪ ಅವರು ಕಾರಿನಲ್ಲಿ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಂತರ ಮೆರವಣಿಗೆಯಲ್ಲಿ ಭಾಗಿಯಾದರು. ಬೆಂಬಲಿಗರ ಮೂಲಕವೂ ಸಲ್ಲಿಕೆ : ಇದಕ್ಕೂ ಮುನ್ನ ಕೆ.ಎಸ್.ಈಶ್ವರಪ್ಪ ಅವರು ಬೆಂಬಲಿಗರ ಮೂಲಕವೂ ಒಂದು ಸೆಟ್ ಉಮೇದುವಾರಿಕೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಅವರ ಬೆಂಬಲಿಗ ಹಾಗೂ ಸೂಚಕರಾದ ವಿಶ್ವಾಸ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಗಿತ್ತು.

ನನಗಾದ ಅನ್ಯಾಯಕ್ಕೆ ತಕ್ಕ ಉತ್ತರ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 25-30 ಸಾವಿರ ಬೆಂಬಲಿಗರೊಂದಿಗೆ ಆಗಮಿಸಿ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದರು ಈಶ್ವರಪ್ಪ. ಇಂದು ಆಗಮಿಸಿದ ಬೆಂಬಲಿಗರು ನನಗೆ ಬಲ ನೀಡಿದ್ದು, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ. ನನಗೆ ಆಗಿರುವ ಅನ್ಯಾಯದ ಕುರಿತಾಗಿ ನಮ್ಮ ಕಾರ್ಯಕರ್ತರು ಪ್ರತಿ ಮನೆಮನೆಗೂ ತೆರಳಿ ಮನವರಿಕೆ ಮಾಡಿಕೊಡಲಿದ್ದಾರೆ. ಈಶ್ವರಪ್ಪ ಯಾಕೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ? ಏನು ಅನ್ಯಾಯವಾಗಿದೆ? ಯಾಕೆ ಪಕ್ಷ ಒಂದೇ ಕುಟುಂಬದ ಕೈಯಲ್ಲಿದೆ ಎಂಬ ವಿಚಾರಗಳನ್ನು ಮನೆ ಮನೆಗೆ ತೆರಳಿ ನಮ್ಮ ಕಾರ್ಯಕರ್ತರು ತಿಳಿಸಲಿದ್ದಾರೆ. ನನಗೆ ಶೇ.100ರಷ್ಟು ಗೆಲ್ಲುವ ವಿಶ್ವಾಸವಿದೆ. ನನ್ನ ಸ್ಪರ್ಧೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಇಂದಿನ ನಮ್ಮ ಮೆರವಣಿಗೆಯೇ ಸಾಕ್ಷಿ ಎಂದುಹೇಳುವ ಮೂಲಕ ಸೂಕ್ಷ್ಮವಾಗಿ ಚಾಟಿ ಬೀಸಿದರು.

Categories
ತೀರ್ಥಹಳ್ಳಿ

ಯಡೂರು ಕ್ರಿಕೆಟ್ ಲೀಗ್ ಹಬ್ಬ!

ಯಡೂರು ಕ್ರಿಕೆಟ್ ಲೀಗ್ ಹಬ್ಬ!
– ಚಿತ್ರ ಸಾಹಿತಿ ಕವಿರಾಜ್ ಅವರಿಗೆ ಕಾರ್ಯಕ್ರಮ ಅರ್ಪಣೆ
– ಎ.13 ಮತ್ತು 14ರಂದು ಯಡೂರಿನಲ್ಲಿ ಆಯೋಜನೆ
– ಖ್ಯಾತ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮ

NAMMUR EXPRESS NEWS
ಯಡೂರು: ಹೊಸನಗರ ತಾಲೂಕು ಯಡೂರು ಕ್ರಿಕೆಟ್ ಲೀಗ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ತಮ್ಮ ಅತ್ಯುತ್ತಮ ಸಂಘಟನೆ, ಸಾಮಾಜಿಕ ಕಾರ್ಯಗಳ ಮೂಲಕ ಮಲೆನಾಡಿನಲ್ಲೇ ಖ್ಯಾತಿ ಗಳಿಸಿರುವ ಯಡೂರು ಪ್ರೇಮ್, ಸುಂದ್ರೇಶ್ ಯಡೂರು, ವಿನಯ್, ಚಂದನ್ ಹಾಗೂ ಸಮಸ್ತ ಯಡೂರು ಸ್ನೇಹಿತರು ಸೇರಿ ಈ ಟೂರ್ನಿ ಆಯೋಜನೆ ಮಾಡಿದ್ದಾರೆ.
ದಿನಾಂಕ: 13-04-2024 ರ ಶನಿವಾರ ಮತ್ತು 14-04-2024 ರ ಯಡೂರಿನ ವಿಟಿ ಗ್ರೌಂಡ್ ನಲ್ಲಿ ಯಡೂರು ಕ್ರಿಕೆಟ್ ಲೀಗ್ 2024 ನಡೆಯಲಿದೆ.

ಕವಿರಾಜ್ ಅವರಿಗೆ ಈ ಟೂರ್ನಿ ಅರ್ಪಣೆ: ಸಾಂಸ್ಕೃತಿಕ ಕಾರ್ಯಕ್ರಮ

ರಾಜ್ಯದ ಖ್ಯಾತ ಚಿತ್ರ ಸಾಹಿತಿಯಾದ ಕವಿರಾಜ್ ಅವರಿಗೆ ಈ ವರ್ಷದ ಟೂರ್ನಿ ಅರ್ಪಣೆ ಮಾಡಲಾಗಿದೆ. ದಿನಾಂಕ: 14-04-2024 ನೇ ಭಾನುವಾರ ರಾತ್ರಿ 8.30 ಕ್ಕೆ ಕವಿತೆಯ ರಾಜನೊಂದಿಗೆ ಮಾತು ಕ(ವಿ)ತೆ, ಎದೆ ತುಂಬಿ ಹಾಡುವೆನು ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತೆ ಉಷಾ ಬಾಳೆಬೈಲು ಇವರಿಂದ ಹಾಡುಗಾರಿಕೆ ಹಾಗೂ ಕರ್ನಾಟಕದ ಸುಪ್ರಸಿದ್ಧ ನೃತ್ಯ ತಂಡ ಈ ಟಿವಿ ತೆಲುಗು ಡಿ ಜೂನಿಯರ್ ಖ್ಯಾತಿಯ ಕೃತಿ ಆರ್ ಸನಿಲ್ ಅರ್ಪಿಸುವ ವೀರ ಡ್ಯಾನ್ಸ್ ಕಂಪನಿ ಉಡುಪಿ ಇವರಿಂದ ಮ್ಯೂಸಿಕಲ್ ನೈಟ್ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಯಡೂರು ಕ್ರಿಕೆಟ್ ಲೀಗ್ ಗೆ ಭಾಗವಹಿಸುವ ತಂಡಗಳು :

– ವರಾಹಿ ಟೈಗರ್, ಮಾಲಿಕರು : ವೈಕೆ ವೆಂಕಟೇಶ್ ಹೆಗಡೆ
– ಹೆಗ್ಡೆ ಬುಲ್ಸ್, ಮಾಲೀಕರು: ಸಂದೀಪ್ ಹೆಗ್ಡೆ
– ಕೆ ಯು ಜಿ ಕ್ರಿಕೆಟರ್ಸ್, ಮಾಲೀಕರು: ವಾಸುದೇವ ಮತ್ತು ಅಣ್ಣಪ್ಪ
– ಯಡೂರು ಲಯನ್ಸ್, ಮಾಲೀಕರು: ಮಹೇಶ್ ಬಂಕರಬೀಡು
– ಹನಿ ಸ್ಟ್ರೈಕರ್ಸ್, ಮಾಲಿಕರು: ಇಬ್ರಾಹಿಂ ಬ್ರದರ್ಸ್ ಮತ್ತು ಅಮ್ಜದ್
– ಮಲ್ನಾಡ್ ಫಾರ್ಮರ್ಸ್, ಮಾಲೀಕರು: ಅಂಬರೀಶ್ ಉಳುಕೊಪ್ಪ
– ಲಚ್ಚಿ ಬ್ರದರ್ಸ್, ಮಾಲೀಕರು: ದಿನೇಶ್ ಪೂಜಾರಿ ಮತ್ತು ಶಶಿಕುಮಾರ್
– ಆರ್‌ಸಿಬಿ ಯಡೂರು, ಮಾಲೀಕರು: ಅರುಣ್ ಮೊಗವೀರ ಮತ್ತು ಮಂಜು ಸಿ
– ನಿಮ್ದೇ ಟೀಮ್, ಮಾಲೀಕರು ಚಿದಾನಂದ ಯಡೂರು ಮತ್ತು ಅರುಣ್ ಶೆಟ್ಟಿಕೊಪ್ಪ
– ಆಯುಷ್ ಅಟಾಕರ್ಸ್, ಮಾಲೀಕರು: ಆದರ್ಶ ಮತ್ತು ದೀಕ್ಷಿತ್ ಉಳುಕೊಪ್ಪ

Categories
ತೀರ್ಥಹಳ್ಳಿ ಮಲ್ನಾಡ್

ಮಲೆನಾಡಲ್ಲಿ ಮೊದಲ ಮಳೆ!

ಮಲೆನಾಡಲ್ಲಿ ಮೊದಲ ಮಳೆ!
– ಮೋಡ ಕವಿದ ವಾತಾವರಣದ ಜೊತೆ ತಂಪು ತಂಪು ಗಾಳಿ
– ಆಲಿಕಲ್ಲು ಸಮೇತ ಮಳೆ: ಜನರ ಖುಷಿ

NAMMUR EXPRESS NEWS
ತೀರ್ಥಹಳ್ಳಿ: ಬಿಸಿಲ ತಾಪಮಾನದಿಂದ ಕಂಗೆಟ್ಟಿದ್ದ ತೀರ್ಥಹಳ್ಳಿ ಜನತೆಗೆ ಮೊದಲ ಮಳೆ ಸಿಂಚನ ಸಂತಸ ತಂದಿದೆ.
ತೀರ್ಥಹಳ್ಳಿ ತಾಲೂಕಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿದ್ದು ತಂಪು ತಂಪು ಗಾಳಿ ಬೀಸುತ್ತಿದೆ. ತೀರ್ಥಹಳ್ಳಿ, ಕೊಪ್ಪ ಸೇರಿ ಮಲೆನಾಡಿನ ಹಲವೆಡೆ ಮಳೆ ಆಗುತ್ತಿದೆ. ಬಿಸಿಲಿನಿಂದ ತತ್ತರಿಸಿದ್ದ ಜನತೆಗೆ ಮಳೆ ಹೊಸ ಭರವಸೆ ಮೂಡಿಸಿದೆ.

ತೀರ್ಥಹಳ್ಳಿ ತಾಲೂಕಿನ ಹಲವೆಡೆ ಭಾರಿ ಮಳೆ..!

ತೀರ್ಥಹಳ್ಳಿ ತಾಲೂಕಿನ ಅಲ್ಮನೆ, ಕಟ್ಟಹಕ್ಕಲು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ತೀರ್ಥಹಳ್ಳಿ ಪಟ್ಟಣದಲ್ಲಿ ಮಳೆ ಆಗಿದೆ.

 

Categories
ಬೆಂಗಳೂರು ರಾಜ್ಯ

ನಾಯಿ ಸಾಕಾಣಿಕೆ ನಿಷೇಧದ ಆದೇಶ ರದ್ದು!

ನಾಯಿ ಸಾಕಾಣಿಕೆ ನಿಷೇಧದ ಆದೇಶ ರದ್ದು!
– ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
– ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರ
– ಯಾವ ನಾಯಿ ತಳಿ ಮಾರಾಟ ಮಾಡುವ ಹಾಗಿಲ್ಲ?!

NAMMUR EXPRESS NEWS
ಬೆಂಗಳೂರು: ಮಾನವರ ಜೀವಕ್ಕೆ ಅಪಾಯಕಾರಿ ಎನ್ನಲಾಗಿರುವ ಪಿಟ್‌ಬುಲ್‌ ಟೆರಿಯರ್‌, ಅಮೆರಿಕನ್‌ ಬುಲ್‌ಡಾಗ್‌, ಕಂಗಾಲ್‌, ರಷ್ಯನ್‌ ಶೆಫರ್ಡ್‌ ಸೇರಿದಂತೆ 20ಕ್ಕೂ ಹೆಚ್ಚು ಶ್ವಾನ ತಳಿಗಳ ಮಾರಾಟ, ಸಾಕಾಣಿಕೆ ಹಾಗೂ ಅವುಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಪಶು ಸಂಗೋಪನೆ ಇಲಾಖೆ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಕೇಂದ್ರದ ಆದೇಶವನ್ನು ಪ್ರಶ್ನಿಸಿ, ಬೆಂಗಳೂರಿನ ಕಿಂಗ್ ಸೋಲ್ಮನ್ ಡೇವಿಡ್ ಹಾಗೂ ಮರ್ಡೋನಾ ಜಾನ್ ಎಂಬುವರು ಸಲ್ಲಿಸಿದ್ದ ಆಕ್ಷೇಪಾರ್ಹ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರುಳ್ಳ ಪೀಠ, ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಏ. 6ರಂದು ಇದೇ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿತ್ತು. ಏ. 10ರಂದು ಈ ಪ್ರಕರಣದ ತೀರ್ಪು ನೀಡಿರುವ ಹೈಕೋರ್ಟ್, ಕೇಂದ್ರ ಸರ್ಕಾರ ಮಾ. 12ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.

– ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರಕ್ಕೆ ಕಾರಣವೇನು?

ದೇಶದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿಯಾದ ಶ್ವಾನ ತಳಿಗಳನ್ನು ನಿಷೇಧಿಸುವಂತೆ ಖ್ಯಾತ ಪ್ರಾಣಿ ದಯಾ ಸಂಘ (ಪೆಟಾ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿತ್ತು. ಆದರೆ, ಆ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್, ಮೊದಲು ಈ ಕುರಿತಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಅಲ್ಲಿ ಈ ವಿಚಾರ ಇತ್ಯರ್ಥವಾಗದಿದ್ದ ಪಕ್ಷದಲ್ಲಿ ನ್ಯಾಯಾಲಯಕ್ಕೆ ಬರಬಹುದು. ಸರ್ಕಾರವನ್ನು ಸಂಪರ್ಕಿಸದೇ ನೇರವಾಗಿ ನ್ಯಾಯಾಲಯಕ್ಕೆ ಬರುವುದು ಸರಿಯಲ್ಲ ಎಂದು ಹೇಳಿತ್ತು. ಆ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿತ್ತು.

ಅದರಂತೆ, ಮಾ. 13ರಂದು ಸಾರ್ವಜನಿಕ ಸುತ್ತೋಲೆ ಹೊರಡಿಸಿದ್ದ, ಕೇಂದ್ರ ಪಶುಸಂಗೋಪನಾ ಇಲಾಖೆ, ಜನರು ಬಹುದಿನಗಳಿಂದ ಸಲ್ಲಿಸುತ್ತಿದ್ದ ಮನವಿಯ ಆಧಾರದ ಮೇರೆಗೆ ಹಾಗೂ ಪೆಟಾ ಸಂಸ್ಥೆ ಸಲ್ಲಿಸಿರುವ ಮನವಿಯ ಆಧಾರದ ಮೇರೆಗೆ ದೇಶದಲ್ಲಿರುವ 23 ಅಪಾಯಕಾರಿ ಶ್ವಾನ ತಳಿಗಳನ್ನು ಮಾರಾಟ ಮಾಡುವುದು, ಅವುಗಳನ್ನು ಪೋಷಿಸುವುದು ಹಾಗೂ ಅವುಗಳ ಸಂತಾನೋತ್ಪತ್ತಿ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಾಗಿ ತಿಳಿಸಿತ್ತು.

ಮಾ 12ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಪಿಟ್‌ಬುಲ್‌ ಟೆರಿಯರ್‌, ಟೋಸಾ ಇನು, ಅಮೆರಿಕನ್‌ ಸ್ಟಾಫರ್ಡ್‌ಶೈರ್‌ ಟೆರಿಯರ್‌, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್‌ ಬುಲ್‌ಡಾಗ್‌, ರಷ್ಯನ್‌ ಶೆಫರ್ಡ್‌, ಟೊರ್ನ್‌ಜಾಕ್‌, ಸಪ್‌ರ್‍ಲಾನಿನಾಕ್‌, ಜಪಾನೀಸ್‌ ಟೋಸಾ ಮತ್ತು ಅಕಿಟಾ, ಮಾಸ್ಟಿಫ್, ರಾಟ್‌ವೀಲರ್‌, ಟೆರಿಯರ್‌ಗಳು ರಿಡ್ಜ್‌ಬ್ಯಾಕ್‌, ಬೋರ್‌ಬೋಯಲ್‌, ಕಂಗಾಲ್‌, ವೂಲ್ಫ್ ಡಾಗ್ಸ್‌, ಕೆನರಿಯೊ, ಅಕ್ಬಾಶ್‌, ಮಾಸ್ಕೊ ಗಾರ್ಡ್‌ , ಕೇನ್‌ ಕೊರ್ಸೊ ಶ್ವಾನ ತಳಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

– ನಿಷೇಧಕ್ಕೆ ಕಾರಣವೇನು?

ದೇಶದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿಯಾದ ಶ್ವಾನ ತಳಿಗಳನ್ನು ನಿಷೇಧಿಸುವಂತೆ ಖ್ಯಾತ ಪ್ರಾಣಿ ದಯಾ ಸಂಘ (ಪೆಟಾ) ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿತ್ತು. ಆದರೆ, ಆ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್, ಮೊದಲು ಈ ಕುರಿತಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ಅಲ್ಲಿ ಈ ವಿಚಾರ ಇತ್ಯರ್ಥವಾಗದಿದ್ದ ಪಕ್ಷದಲ್ಲಿ ನ್ಯಾಯಾಲಯಕ್ಕೆ ಬರಬಹುದು. ಸರ್ಕಾರವನ್ನು ಸಂಪರ್ಕಿಸದೇ ನೇರವಾಗಿ ನ್ಯಾಯಾಲಯಕ್ಕೆ ಬರುವುದು ಸರಿಯಲ್ಲ ಎಂದು ಹೇಳಿತ್ತು.

ಆ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿತ್ತು. ಅದರಂತೆ, ಮಾ. 13ರಂದು ಸಾರ್ವಜನಿಕ ಸುತ್ತೋಲೆ ಹೊರಡಿಸಿದ್ದ, ಕೇಂದ್ರ ಪಶುಸಂಗೋಪನಾ ಇಲಾಖೆ, ಜನರು ಬಹುದಿನಗಳಿಂದ ಸಲ್ಲಿಸುತ್ತಿದ್ದ ಮನವಿಯ ಆಧಾರದ ಮೇರೆಗೆ ಹಾಗೂ ಪೆಟಾ ಸಂಸ್ಥೆ ಸಲ್ಲಿಸಿರುವ ಮನವಿಯ ಆಧಾರದ ಮೇರೆಗೆ ದೇಶದಲ್ಲಿರುವ 23 ಅಪಾಯಕಾರಿ ಶ್ವಾನ ತಳಿಗಳನ್ನು ಮಾರಾಟ ಮಾಡುವುದು, ಅವುಗಳನ್ನು ಪೋಷಿಸುವುದು ಹಾಗೂ ಅವುಗಳ ಸಂತಾನೋತ್ಪತ್ತಿ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಾಗಿ ತಿಳಿಸಿತ್ತು.

Categories
ತೀರ್ಥಹಳ್ಳಿ ಬೆಂಗಳೂರು ರಾಜ್ಯ

ತೀರ್ಥಹಳ್ಳಿಯ ಇಬ್ಬರು ಶಂಕಿತರು ಅರೆಸ್ಟ್!?

ತೀರ್ಥಹಳ್ಳಿಯ ಇಬ್ಬರು ಶಂಕಿತರು ಅರೆಸ್ಟ್!?
– ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳು
– ಪಶ್ಚಿಮ ಬಂಗಾಳ ನಿಗೂಢ ಸ್ಥಳದಲ್ಲಿದ್ದ ಶಂಕಿತರು
– ಬಾಲ್ ಬಿದ್ದು ಏರ್ ಗನ್ ಶಾಟ್: ಬಾಲಕ ಸಾವು
– ಚಿಕ್ಕಮಗಳೂರಿನಲ್ಲಿ ನಡೆದ ಘಟನೆ

NAMMUR EXPRESS NEWS
ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲಾದ ಇಬ್ಬರನ್ನು ಪಶ್ಚಿಮ ಬಂಗಾಳ ನಿಗೂಢ ಸ್ಥಳದಲ್ಲಿ ಎನ್ಐಎ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ತೀರ್ಥಹಳ್ಳಿಯ ಶರೀಫ್ ಹಾಗೂ ಮತೀನ್ ಥಾಹ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟ ವಾಗಬೇಕಿದೆ. ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ತಪಾಸಣೆ ನಡೆಸಿದ್ದರು.

– ಏರ್ ಗನ್ ನಿಂದ ಶೂಟ್ ಮಾಡಿಕೊಂಡು ಬಾಲಕ ಸಾವು

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಏ‌ರ್ ಗನ್ ನಲ್ಲಿ ಶೂಟ್ ಮಾಡಿಕೊಂಡು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.ಇನ್ನೊಬ್ಬ ಬಾಲಕನೊಂದಿಗೆ ಕೊಠಡಿಯಲ್ಲಿ ಆಟವಾಡುವಾಗ ಅಚಾನಕ್ಕಾಗಿ ಬಾಲ್ಸ್ ಬಿದ್ದಿದೆ. ಇದರಿಂದ ಗನ್ ಟ್ರಿಗರ್ ಆಗಿ ದುರಾದೃಷ್ಟವಶಾತ್ ಬಾಲಕ ಸಾವನ್ನಪ್ಪಿದ್ದಾನೆ. ದುರ್ಘಟನೆಯ ವೇಳೆ ಬಾಲಕನ ಪಾಲಕರು ಮನೆಯಲ್ಲಿಯೇ ಇದ್ದರು. ಪಾಲಕರ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎನ್ನಾಲಾಗುತ್ತಿದೆ.