ಕನ್ನಂಗಿ ಭಾಗದಲ್ಲಿ ಬ್ಯಾಂಕ್ ವಂಚನೆ ಗುಸು ಗುಸು!?
– ಸಿಬ್ಬಂದಿಯಿಂದಲೇ ಅನೇಕ ಗ್ರಾಹಕರ ಹಣ ವಂಚನೆ ಆರೋಪ
– ಏನಿದು ಹಣ ಗುಳುಂ ಕಥೆ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕನ್ನಂಗಿ ಸಮೀಪದ ಸ್ಥಳೀಯ ಬ್ಯಾಂಕಿನಲ್ಲಿ ಕೆಲ ಬ್ಯಾಂಕ್ ಖಾತೆದಾರರ ಹಣ ವಂಚನೆ ಆಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯರು ಗುಸು ಗುಸು ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಕೋಣಂದೂರು, ಯಡೂರು ಬ್ಯಾಂಕ್ ಒಂದರಲ್ಲಿ ಹಗರಣ ನಡೆದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು, ಲಕ್ಷ ಲಕ್ಷ ಹಣ ವಂಚನೆ ಆಗಿದೆ ಎನ್ನಲಾಗಿದೆ. ಬ್ಯಾಂಕ್ ಮುಖ್ಯ ಕಚೇರಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಇತ್ತೀಚಿಗೆ ಬ್ಯಾಂಕ್ ವ್ಯವಹಾರ ಕೂಡ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದ್ದು ಹಲವು ಅನುಮಾನ ವ್ಯಕ್ತವಾಗುತ್ತಿದೆ.