Categories
ಮಲ್ನಾಡ್ ಶಿವಮೊಗ್ಗ

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
ಈಶ್ವರಪ್ಪ ಪುತ್ರ ಕಾಂತೇಶ್ ಪೆನ್ ಡ್ರೈವ್ ಭೀತಿ!
• ಸುದ್ದಿ ಪ್ರಸಾರ ತಡೆ ಕೋರಿ ಕೋರ್ಟ್ ಸ್ಟೇ ತಂದ ಕಾಂತೇಶ್
– ಶಿವಮೊಗ್ಗ : ಕೇಂದ್ರ ಕಾರಾಗೃಹದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ!
– ಸಾಗರ : ಪ್ರೀತ್ಸೆ ಅಂತಾ ಕಾಡಿದ, ಮದುವೆಯಾಗುವಂತೆ ಪೀಡಿಸಿದವನಿಗೆ 5 ವರ್ಷ ಜೈಲು
– ತೀರ್ಥಹಳ್ಳಿ: ಅಪಘಾತ, ತರೀಕೆರೆಯ ಇಬ್ಬರಿಗೆ ಗಾಯ
– ತರೀಕೆರೆ : ರೈಲು ಹತ್ತುವಾಗ ಕೆಳಕ್ಕೆ ಬಿದ್ದು ಸಾವು

NAMMUR EXPRESS NEWS
ಶಿವಮೊಗ್ಗ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್‌ಗೂ ಸಹ ಅಶ್ಲೀಲ ಸಿಡಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂತೇಶ್, ಮಾಧ್ಯಮಗಳಿಗೆ ನಿರ್ಬಂಧ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದು, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ಹೊರಡಿಸಿದೆ. ಲೋಕಸಭೆ ಚುನಾವಣೆ ವೇಳೆ ತಮ್ಮ ಹೆಸರಿಗೆ ಮಸಿ ಬಳಿಯುವ ಯತ್ನ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತವಾಗಿ ಕಾಂತೇಶ್ ಅವರು ಮಾಧ್ಯಮಗಳಲ್ಲಿ ಮಾನಹಾನಿಕರ ದೃಶ್ಯ ಪ್ರಸಾರಕ್ಕೆ ನಿರ್ಬಂಧ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿದೆ. ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಅವರು ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿರುವ ಕೆಎಸ್ ಈಶ್ವರಪ್ಪ ಯಡಿಯೂರಪ್ಪ ಹಾಗೂ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಶಿವಮೊಗ್ಗದಲ್ಲಿ ಬಿಎಸ್‌ವೈ ಪುತ್ರ ರಾಘವೇಂದ್ರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.

– ಶಿವಮೊಗ್ಗ : ಕೇಂದ್ರ ಕಾರಾಗೃಹದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ

ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಶಿವಮೊಗ್ಗದ ರಾಜೀವಗಾಂಧಿ ಬಡಾವಣೆ ನಿವಾಸಿ ಪರಶುರಾಮ ಅಲಿಯಾಸ್ ಚಿಂಗಾರಿಗೆ ಹೊಟ್ಟೆನೋವಿನ ಕಾರಣಕ್ಕೆ ಮಾ.28 ರಂದು ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದರೆ ಹೊಟ್ಟೆನೋವು ಜಾಸ್ತಿ ಆದ ಕಾರಣ ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆತರಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಪರಶುರಾಮ ಕಲ್ಲು ನುಂಗಿರಬಹುದು ಎಂದು ಶಂಕಿಸಿದ್ದಾರೆ. ಏ. 1 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿಗೆ ಕಳುಹಿಸಲಾಗಿದೆ.

ಏ.3 ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಯಿಂದದ ಚಿಕಿತ್ಸೆ ಕೊಡಿಸಿ ಅವರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಏಪ್ರಿಲ್‌ 25 ರಂದು ಶಸ್ತ್ರ ಚಿಕಿತ್ಸೆ ನಡೆಸಿ ಕೈದಿಯ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರ ತೆಗೆಯಲಾಗಿದೆ. ಜೈಲಿನಲ್ಲಿ ನಿಷೇಧಿತ ವಸ್ತು ಮೊಬೈಲ್ ಫೋನ್ ಕೈದಿಯ ಹೊಟ್ಟೆಯಲ್ಲಿ ದೊರೆತಿರುವುದರಿಂದ ಆತನ ವಿರುದ್ಧ ಶಿವಮೊಗ್ಗ ಕಾರಾಗೃಹದ ಅಧೀಕ್ಷಕರು ಇಲ್ಲಿನ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

– ಸಾಗರ : ಪ್ರೀತ್ಸೆ ಅಂತಾ ಕಾಡಿದ, ಮದುವೆಯಾಗುವಂತೆ ಪೀಡಿಸಿದವನಿಗೆ 5 ವರ್ಷ ಜೈಲು

ಸಾಗರ : ಮದುವೆಯಾಗುವಂತೆ ಒತ್ತಾಯಿಸಿ, ನಿರಾಕರಿಸಿದ್ದಕ್ಕೆ ಮಾನಸಿಕ ಕಿರುಕುಳ ನೀಡಿ ಯುವತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಭಟ್ಕಳ ತಾಲ್ಲೂಕಿನ ಮಾರುಕೇರಿ ಗ್ರಾಮದ ಓಂಕಾರ್ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ, 7 ಸಾವಿರ ರೂ. ದಂಡ ವಿಧಿಸಿದೆ. ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ, ಆಕೆಯ ತಂದೆ ದೂರು ನೀಡಿದ್ದರು. ತನಿಖೆ ನಡೆಸಿದ ರಿಪ್ಪನ್‌ಪೇಟೆ ಪೊಲೀಸರು ಓಂಕಾರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಭಾವತಿ ಜಿ. ಅವರು, ಆರೋಪ ಸಾಬೀತಾದ ಹಿನ್ನೆಲೆ ಓಂಕಾರ್‌ಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ ವಾದಿಸಿದ್ದರು. ಭಟ್ಕಳದ ಓಂಕಾರ್‌ಗೆ ಇನ್‌ಸ್ಟಾಗ್ರಾಂನಲ್ಲಿ ಹೊಸನಗರದ ಯುವತಿಯ ಪರಿಚಯವಾಗಿತ್ತು.

ಆಕೆಯ ಮೊಬೈಲ್ ನಂಬರ್‌ ಪಡೆದು, ಮದುವೆ ಆಗುವಂತೆ ಪೀಡಿಸುತ್ತಿದ್ದ. 2021ರ ಮಾರ್ಚ್ 12 ರಂದು ಆಕೆ ಓದುತ್ತಿದ್ದ ಕಾಲೇಜಿಗೆ ತೆರಳಿದ್ದ ಓಂಕಾರ್, ಆಕೆಯ ಕೈ ಹಿಡಿದು ಎಳೆದಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದ. ಅಲ್ಲದೆ ತಂದೆ, ತಾಯಿಗೆ ವಿಷಯ ತಿಳಿಸುವುದಾಗಿ ಬೆದರಿಸಿದ್ದ. ಕಳೆನಾಶಕ ಸೇವಿಸಿ ಆತ್ಮಹತ್ಯೆ: ಹೆದರಿದ ಯುವತಿ ಅದೇ ದಿನ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಳು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 2021ರ ಮಾರ್ಚ್ 19 ರಂದು ಆಕೆ ಮೃತಪಟ್ಟಿದ್ದಳು. ಅಲ್ಲದೆ ತನ್ನ ಸಾವಿಗೆ ಓಂಕಾರ್‌ ಕಿರುಕುಳ ಕಾರಣ ಎಂದು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಳು. ಯುವತಿ ಮೃತಪಟ್ಟ ಬಳಿಕ ಆಕೆಯ ತಂದೆ ಓಂಕಾರ್ ವಿರುದ್ಧ ದೂರು ನೀಡಿದ್ದರು.

– ತೀರ್ಥಹಳ್ಳಿ: ಅಪಘಾತ, ತರೀಕೆರೆಯ ಇಬ್ಬರಿಗೆ ಗಾಯ

ತೀರ್ಥಹಳ್ಳಿ : ಮುಡುಬದಲ್ಲಿ ಕಾಲು ನೋವಿಗೆ ನಾಟಿ ಔಷಧಿ ಪಡೆದು, ಶೃಂಗೇರಿಗೆ ತೆರಳುತ್ತಿದ್ದಾಗ ಗೂಡ್ಸ್‌ ವಾಹನ ಡಿಕ್ಕಿ ಹೊಡೆದು, ತರೀಕೆರೆಯ ಇಬ್ಬರು ಬೈಕ್‌ ಸವಾರರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ತುಡುಕಿ ಬಳಿ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತರೀಕೆರೆಯ ಮಣಿಕಂಠ ಮತ್ತು ಯೋಗೇಶ್‌ ಎಂಬುವವರು ಗಾಯಗೊಂಡಿದ್ದಾರೆ. ಅಪಘಾತಪಡಿಸಿದ ಗೂಡ್ಸ್‌ ವಾಹನ ಸ್ಥಳದಲ್ಲಿ ನಿಲ್ಲದೆ ತೆರಳಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯೋಗೇಶ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ತರೀಕೆರೆ : ರೈಲು ಹತ್ತುವಾಗ ಕೆಳಕ್ಕೆ ಬಿದ್ದು ಸಾವು

ತರೀಕೆರೆ ರೈಲುನಿಲ್ದಾಣದಲ್ಲಿ ಸುಮಾರು 30-35 ವರ್ಷದ ಅಪರಿಚಿತ ವ್ಯಕ್ತಿಯು ಚಲಿಸುತ್ತಿರುವ ರೈಲುಗಾಡಿಯನ್ನು ಹತ್ತಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಈತನ ವಾರಸ್ಸುದಾರರು, ವಿಳಾಸ ಪತ್ತೆಯಾಗಿರುವುದಿಲ್ಲ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈತನ ಚಹರೆ ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ, ದಪ್ಪಮೂಗು, 2 ಇಂಚು ಉದ್ದದ ಕಪ್ಪು ತಲೆಕೂದಲು, ಗಡ್ಡ,ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ಕನ್ನಡ ಅಕ್ಷರದಲ್ಲಿ ಅಮ್ಮ ಎಂದು ಹಾಗು ಎಡಗೈಯಲ್ಲಿ ರಾಕಿ ಮತ್ತು ಇಂಗ್ಲೀಷ್‍ನಲ್ಲಿ ಆರ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಮೈಮೇಲೆ ನಕ್ಷತ್ರಾಕಾರದ ಚುಕ್ಕೆಗಳುಳ್ಳ ಗುಲಾಬಿ ಬಣ್ಣದ ಉದ್ದತೋಳಿನ ಅಂಗಿ, ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕೊರಳಲ್ಲಿ ಮತ್ತು ಎಡಗೈಯಲ್ಲಿ ಕೇಸರಿ ಬಣ್ಣದ ದಾರ ಕಟ್ಟಿಕೊಂಡಿರುತ್ತಾನೆ.

Categories
ಕೊಪ್ಪ

ಪ್ರಜ್ವಲ್‌ಗೆ ಶಿಕ್ಷೆಗೆ ಕೊಪ್ಪ ಯುವ ಕಾಂಗ್ರೆಸ್ ಪಟ್ಟು!

ಪ್ರಜ್ವಲ್‌ಗೆ ಶಿಕ್ಷೆಗೆ ಕೊಪ್ಪ ಯುವ ಕಾಂಗ್ರೆಸ್ ಪಟ್ಟು!
– ದೇಶದ ಜನರನ್ನು ತಲೆ ತಗ್ಗಿಸುವಂತೆ ಮಾಡಿದ ಪ್ರಕರಣ
– ಕೊಪ್ಪ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್ ಮತ್ತು ಸದಸ್ಯರ ಅಗ್ರಹ

NAMMUR EXPRESS NEWS
ಕೊಪ್ಪ: ಹಾಸನ ಸಂಸದ ಹಾಗೂ ಲೋಕಸಭಾ ಕ್ಷೇತ್ರದ ಜೆಡಿಎಸ್‌- ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪೆನ್ ಡ್ರೈವ್ ವಿಚಾರ ರಾಜ್ಯ ಮಾತ್ರವಲ್ಲದೆ ದೇಶದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್ ಹೇಳಿದ್ದಾರೆ. ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅವರು, ಯಾವುದೇ ಪಕ್ಷಗಳ ಸೈದ್ಧಾಂತಿಕ ವಿಚಾರಗಳು ಬೇರೆ ಇದ್ದರೂ, ಪ್ರಜ್ವಲ್ ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ, ಕಿರಿಯ ಸಂಸದ, ಸಂಸತ್‌ನಲ್ಲಿ ಕರ್ನಾಟಕದ ಧ್ವನಿಯಾಗಬಲ್ಲರು ಎಂದು ಯುವ ಜನರು ಹೆಮ್ಮೆಪಟ್ಟಿದ್ದರು. ಆದರೆ ದೇಶ ಹಾಗೂ ರಾಜ್ಯವನ್ನು ಮಾತ್ರವಲ್ಲದೆ ಪ್ರಕೃತಿ ಹಾಗೂ ನದಿ, ತೊರೆಗಳನ್ನು ಮಹಿಳೆಯರ ಹೆಸರಿನಿಂದಲೇ ಕರೆದು ಗೌರವಿಸುವ ಕನ್ನಡಿಗ ಸಹಸ್ರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ತನ್ನ ಖಾಸಗಿ ಫೋನಿನಲ್ಲಿ ಚಿತ್ರೀಕರಿಸಿಕೊಂಡಿರುವ ಪ್ರಜ್ವಲ್ ಕೃತ್ಯ ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ಅವರನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.

ಎಸ್.ಐ.ಟಿ. ರಚಿಸಿರುವುದು ಸ್ವಾಗತಾರ್ಹವಾಗಿದೆ. 3 ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾದ ಪ್ರಜ್ವಲ್ ಅವರ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು. ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಸಂತೋಷ್ ಕುಲಾಸೋ, ಮುಖಂಡರಾದ ವಿಜಯಾನಂದ, ಗುರುನಂದನ್, ನರ್ತನ್, ಲೇಖನ್, ಮನೋಜ್, ಅವಿನಾಶ್‌ ಮತ್ತಿತರರು ಇದ್ದರು.

Categories
ತೀರ್ಥಹಳ್ಳಿ ರಾಜಕೀಯ

ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ!

ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ!
– ಮೋದಿ ವಿರುದ್ಧ ಸುಧೀರ್ ಕುಮಾರ್ ಮುರೊಳ್ಳಿ ವಾಗ್ದಾಳಿ
– 10 ವರ್ಷದಲ್ಲಿ ದೇಶದಲ್ಲಿ ಸಾವಿರಾರು ಕೋಟಿ ಹಗರಣ
– ಮೋದಿ ಡ್ರೆಸ್, ಇರಾನಿ ತೂಕ ಬಿಟ್ರೆ ದೇಶದ ಅಭಿವೃದ್ಧಿ ಆಗಿಲ್ಲ
– ಬಿಜೆಪಿ, ಬಿಜೆಪಿ ಸ್ನೇಹಿತರ ಪೆನ್ ಡ್ರೈವ್ ಹೊರ ಬರೋದು ಏಕೆ?

NAMMUR EXPRESS NEWS
ತೀರ್ಥಹಳ್ಳಿ: ಪ್ರಧಾನಿ ಮೋದಿ ಅವರ ಪ್ರಣಾಳಿಕೆಯಂತೆ ಎಂದಿಗೂ ಆಡಳಿತ ನಡೆಸಿಲ್ಲ. ದೇಶದ ಅಭಿವೃದ್ಧಿ ಆಗಿದೆ ಎಂಬಂತೆ ಬಿಂಬಿಸಿಕೊಂಡು ಬಿಜೆಪಿ ಜನರನ್ನು ಮೋಸಕ್ಕೆ ತಳ್ಳುತ್ತಿದೆ. ಮೋದಿ ಗ್ಯಾರಂಟಿ ಕೂಡ ಕಾಂಗ್ರೆಸ್ ಇಂದ ಕದ್ದಿದ್ದು, ಇಡೀ ಭಾರತದ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಂಡಿದ್ದಾರೆ. ಉದ್ಯಮ ಮಾರಿದ್ದಾರೆ. ಇಡೀ ದೇಶದಲ್ಲಿ ಈಗ ಆರಾಜಕತೆ ಸೃಷ್ಟಿ ಆಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾದ ಸುಧೀರ್ ಕುಮಾರ್ ಮುರೋಳ್ಳಿ ಆರೋಪಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2019ರ ಪ್ರಣಾಳಿಕೆಯಲ್ಲಿ ಹೇಳಿದಂತೆ ಇಡೀ ದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಕ ಮಾಡಿಕೊಂಡು ಸೈನಿಕರಾಗುವ ಯುವ ಜನತೆ ಬದುಕಲ್ಲಿ ಬದುಕಿನ ಆಸೆಯನ್ನೇ ತೆಗೆದಿದ್ದಾರೆ. ಉದ್ಯೋಗ ಸೃಷ್ಟಿ ಮಾಡದೆ ಬರೀ ಇವರ ಸೂಟು ಬೂಟಿಗೆ ಹಣ ಖರ್ಚು ಮಾಡುತ್ತಿದ್ದಾರೆ. ಮೋದಿ ಕೀ ಗ್ಯಾರಂಟಿ ಅವರ ಗ್ಯಾರಂಟಿ ಅಲ್ಲ, ಅದು ಕಾಂಗ್ರೆಸ್ ಕದ್ದಿದ್ದು. ಏಕಚತ್ರಾಧಿಪತಿ ವ್ಯವಸ್ಥೆ ಇಡೀ ದೇಶವನ್ನು ಹಾಳು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡದ ಏಕೈಕ ಪ್ರಧಾನಿ ಮೋದಿ. ಇಲೆಕ್ಟ್ರಾನಿಕ್ ಬಾಂಡ್ ವಿವರ ಕೊಡಿ ದಾಖಲೆ ಕೊಡಿ ಎಂದರೆ ಜೂ.30ರ ಸಮಯ ಪಡೆದಿದ್ದಾರೆ. ಇಡೀ ದೇಶದಲ್ಲಿ ಚರ್ಚೆ ಬದಲು ಮಾಡಲು ಆಮ್ ಆದ್ಮಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಜನರ ಗಮನ ಬೇರೆಡೆ ಸೆಳೆದು ಇವರು ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.

ದೇಶದಲ್ಲಿ ಸಾವಿರಾರು ಕೋಟಿ ಹಗರಣ!

ಮೋದಿ ಅವರ ಎರಡು ಅವಧಿಯಲ್ಲಿ ಲಕ್ಷ ಲಕ್ಷ ಕೋಟಿ ಹಗರಣ ನಡೆದಿದೆ. ಕರೋನಾ ಲಸಿಕೆ ಅವ್ಯವಹಾರ ಮಾಡಿ ಆ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ. ಗುಜರಾತ್ ಲಾಠಿ ಕಿಂಗ್ ಪಿನ್ ಮಾಫಿಯಾದಿಂದ ಹಣ ಪಡೆದಿದ್ದಾರೆ. ಸೇತುವೆ ಕಳಪೆ ಕಾಮಗಾರಿ, ಪಾಕಿಸ್ತಾನ ಸಹಭಾಗಿತ್ವದ ಕಂಪನಿಯಿಂದ ಕಪ್ಪು ಹಣವನ್ನು ಇಲೆಕ್ಟ್ರಾನಿಕ್ ಬಾಂಡ್ ಮೂಲಕ ಪಡೆದಿದ್ದಾರೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.

ಡೂಪ್ಲಿಕೇಟ್ ಕರೋನಾ ಲಸಿಕೆ ಕೊಟ್ಟು ಈಗ ಸೈಡ್ ಎಫೆಕ್ಟ್!

50 ವರ್ಷದಲ್ಲಿ ಕಾಂಗ್ರೆಸ್ ಎಲ್ಲಾ ಲಸಿಕೆ ಕೊಟ್ಟು ಜನರನ್ನು ಬದುಕಿಸಿದೆ. ಆದರೆ ಕರೋನಾ ಲಸಿಕೆ ಕೊಟ್ಟು ಪ್ರಚಾರವನ್ನು ಬಿಜೆಪಿ ಪಡೆದಿದೆ. ಆದರೆ ಈಗ ಅಡ್ಡ ಪರಿಣಾಮದಿಂದ ಪುನೀತ್ ಅಂತ ಸಾವಿರಾರು ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ. ಲಕ್ಷ ಲಕ್ಷ ಜನರ ಬದುಕು ಹೋಗುತ್ತಿದೆ. ಆದರೆ ಅದೇ ಕಂಪನಿಯಿಂದ ಮೋದಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಮುರೊಳ್ಳಿ ಆರೋಪಿಸಿದರು

ಜನರ ದನಿ ಕೇಳುವ ಏಕೈಕ ನಾಯಕ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಪ್ರೇರಣೆ ಕಿಮ್ಮನೆ ರತ್ನಾಕರ್. ಮೋದಿ, ಅವರು ನೇಮಿಸಿದ್ದ ಉನ್ನತ ಅಧಿಕಾರಿಗಳ ಮಾತನ್ನೇ ಕೇಳುವುದಿಲ್ಲ. ಇನ್ನು ಜನರ ದನಿ ಎಲ್ಲಿ ಕೇಳುತ್ತಾರೆ?
ರಾಷ್ಟ್ರೀಯ ಭದ್ರತೆ ಎಂಬುದು ಅವರ ರಾಜಕೀಯ ದಾಳ. ಮಣಿಪುರದಲ್ಲಿ ಭದ್ರತಾ ವೈಫಲ್ಯ ಅಲ್ಲವಾ? ಪುಲ್ವಮ, ಚೀನಾ ಗಡಿಯಲ್ಲಿ ಏನಾಗಿದೆ? 2014ಕ್ಕಿಂತ ಮೊದಲು ಈ ದೇಶದಲ್ಲಿ ಎಲ್ಲವೂ ಆಗಿತ್ತು. ಈಗ ದೇಶ ಅಭಿವೃದ್ಧಿ ಎನ್ನುವ ಮೋದಿ ತಮ್ಮ ಡ್ರೆಸ್ ಅಭಿವೃದ್ಧಿ ಆಗಿದೆ, ಸ್ಮೃತಿ ಇರಾನಿ ತೂಕ ಹೆಚ್ಚಾಗಿದೆ ಅಷ್ಟೇ ಮತ್ತೇನೂ ಆಗಿಲ್ಲ ಎಂದು ಟೀಕಿಸಿದರು. ಜನರ ನೆಮ್ಮದಿಯೇ ದೇಶದ ಅಭಿವೃದ್ಧಿ, ಜನರ ಬದುಕಿನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಬರೀ ಭಾಷಣ ಅಲ್ಲ, ಮೋದಿಗೆ ಇಂಗ್ಲಿಷ್ ಬರಲ್ಲ, ವಿದೇಶಿ ನಿಯಮ ಅರ್ಥ ಆಗಲ್ಲ. ಬಡವರ ಕಷ್ಟ ಗೊತ್ತಿಲ್ಲ ಎಂದರು.

ಪೆನ್ ಡ್ರೈವ್ ಎಲ್ಲೆಲ್ಲಿತ್ತು?

ಕುಮಾರ ಸ್ವಾಮಿ ಜೇಬಲ್ಲಿ ಇತ್ತು ಪೆನ್ ಡ್ರೈವ್, ರೇವಣ್ಣ ರಾಜಕೀಯವಾಗಿ ಮುಗಿಸಲು ಕುಮಾರಸ್ವಾಮಿ ಪ್ಲಾನ್ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್. ಹೆಣ್ಣು ಮಕ್ಕಳ ಬದುಕನ್ನು ಹಾಳು ಮಾಡಿರುವ ಆ ಪ್ರಕರಣದ ಬಗ್ಗೆ ಮಾತನಾಡುವುದೇ ಹೇಸಿಗೆ ಎಂದು ಬೇಸರ ವ್ಯಕ್ತಪಡಿಸಿದ ಮುರೊಳ್ಳಿ, ಬಿಜೆಪಿ ಅಂಡ್ ಬಿಜೆಪಿ ಸ್ನೇಹಿತರದ್ದೇ ಪೆನ್ ಡ್ರೈವ್ ಬರೋದು ಏಕೆ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರೇ ಸ್ಟೇ ತರೋದು. ದೇಶದಲ್ಲಿ ಮೋದಿ ಅಂತಹ ಪ್ರಧಾನಿ ಇರುವವರೆಗೆ ಮಹಿಳೆಯರಿಗೆ ಭದ್ರತೆ ಇಲ್ಲ. ಪ್ರಜ್ವಲ್ ಬಗ್ಗೆ ಮಾತನಾಡಲು ಶೋಭಾ, ಸಿ. ಟಿ. ರವಿ ಎಲ್ಲಿ ಹೋದರು. ಅವರೊಬ್ಬ ವಿಕೃತ ವ್ಯಕ್ತಿ ಎಂದರು.

ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ!

ಪತ್ನಿ ಬೆಲೆ ಗೊತ್ತಿಲ್ಲದ ವ್ಯಕ್ತಿ ತಾಳಿ ಬಗ್ಗೆ ಮಾತನಾಡುತ್ತಾರೆ. ದೇಶವನ್ನು ಅಳುವವ ಕರಿಮಣಿ ಮಾಲೀಕನೂ ಅಲ್ಲ, ಮೌಲಿಕನೂ ಅಲ್ಲ ಎಂದು ಕುಟುಕಿದರು. ಗ್ಯಾರಂಟಿಯಲ್ಲಿ ಯಾವುದೇ ಜಾತಿ, ಧರ್ಮ ನೋಡಿಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮತ ನೀಡಿ ಎಂದರು. ಕಿಮ್ಮನೆ ರತ್ನಾಕರ್, ರಾಜೇಗೌಡ, ಆದರ್ಶ ಹುಂಚದಕಟ್ಟೆ ಇತರರು ಇದ್ದರು.

Categories
ತೀರ್ಥಹಳ್ಳಿ ರಾಜಕೀಯ ರಾಜ್ಯ ಶಿವಮೊಗ್ಗ

ಆರಗ ವಿರುದ್ಧ ದೇಶ ದ್ರೋಹದ ಕೇಸ್?!

ಆರಗ ವಿರುದ್ಧ ದೇಶ ದ್ರೋಹದ ಕೇಸ್?!
– ಭಾರತ ದೇಶವನ್ನೇ ಭಿಕ್ಷುಕರ, ಹಾವಡಿಗರ ದೇಶ ಎಂದು ಅವಹೇಳನ: ಸುಧೀರ್ ಕುಮಾರ್ ಮುರೊಳ್ಳಿ
– ಕೊಪ್ಪ ನ್ಯಾಯಾಲಯದಲ್ಲಿ ದೂರು ದಾಖಲು
– ಕುಮಾರಸ್ವಾಮಿ ವಿರುದ್ಧ ರಾಜೇಗೌಡ ಕಿಡಿ

NAMMUR EXPRESS NEWS
ತೀರ್ಥಹಳ್ಳಿ: ಭಾರತ ದೇಶವನ್ನೇ ಭಿಕ್ಷುಕರ, ಹಾವಡಿಗರ ದೇಶ ಎಂದು ಇಡೀ ದೇಶವನ್ನೇ ಅವಮಾನ ಮಾಡಿದ, ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅವಹೇಳನ ಮಾಡಿರುವ ತೀರ್ಥಹಳ್ಳಿ ಶಾಸಕರು, ಮಾಜಿ ಗೃಹ ಮಂತ್ರಿ, ಬಿಜೆಪಿ ಪಕ್ಷದ ಹಿರಿಯ ನಾಯಕ ಆರಗ ಜ್ಞಾನೇಂದ್ರ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ನೀಡಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ, ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಲೋಕ ಸಭಾ ಚುನಾವಣೆ ಪ್ರಚಾರದ ವೇಳೆ ಕೊಪ್ಪದಲ್ಲಿ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇವರನ್ನೇ ಹೀಯಾಳಿಸುವ, ನಮ್ಮ ದೇಶವನ್ನು ಭಿಕ್ಷುಕರ, ಹಾವಡಿಗರ ದೇಶ ಎಂಬ ಹೇಳಿಕೆ ನೀಡಿದ ಜ್ಞಾನೇಂದ್ರ ಇಡೀ ದೇಶವನ್ನೇ ಅವಮಾನ ಮಾಡಿದ್ದಾರೆ. ಬ್ರಿಟಿಷ್ ಮನಸ್ಥಿತಿ ಇರುವ ಆರಗ ಜ್ಞಾನೇಂದ್ರ ಇಡೀ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.

ತೀರ್ಥಹಳ್ಳಿಯಿಂದ ನೂರಾರು ಧೀಮಂತರು ದೇಶಕ್ಕೆ ಕೊಡುಗೆ ನೀಡಿದ್ದಾರೆ. 2014ಕ್ಕಿಂತ ಮುಂಚೆ ಎಲ್ಲವನ್ನು ಕಾಂಗ್ರೆಸ್ ಮಾಡಿದೆ. ಜ್ಞಾನೇಂದ್ರ ಅವರೇ ನಿಮ್ಮ ಕುಟುಂಬದವರು ಈ ಹಿಂದೆ ಭಿಕ್ಷುಕರಾಗಿದ್ದಾರಾ? ಹಾವಾಡಿಗರರಾಗಿದ್ದಾರಾ? ಇವರೆಲ್ಲ 2014ಕ್ಕಿಂತ ಮುಂಚೆ ಬಂದವರು.ತೀರ್ಥಹಳ್ಳಿ ಕ್ಷೇತ್ರದಲ್ಲಿ ಇದ್ದವರೆಲ್ಲ ಹವಾಡಿಗಾರಾ? ನಿಮ್ಮನ್ನು ಬೆಳೆಸಿದ ಆರ್ ಎಸ್ ಎಸ್ ನಾಯಕರು ಭಿಕ್ಷುಕರಾ? ದೇಶಕ್ಕೆ ಅವಮಾನ ಮಾಡಿದ ಕಾರಣ ದೇಶ ದ್ರೋಹ ದೂರು ದಾಖಲು ಮಾಡುತ್ತೇವೆ. ಕೊಪ್ಪ ನ್ಯಾಯಾಲಯದಲ್ಲಿ ದೂರು ದಾಖಲು ಮಾಡುತ್ತೇವೆ.

ನಮ್ಮ ದೇಶ ವಿಶ್ವಕ್ಕೆ ಅನೇಕ ಹಿರಿಮೆ, ಸಂಸ್ಕೃತಿ, ವೇದ ಉಪನಿಷತ್ ಕೊಟ್ಟ ದೇಶವನ್ನು ಅವಮಾನ ಮಾಡಿದ್ದಾರೆ.
ಮೋದಿ ಬಂದ ಮೇಲೆ ದೇಶ, ಅಭಿವೃದ್ಧಿ ಎಂದರೆ ಆರಗ ಮನೆ ರಸ್ತೆ, ಮೋರಿ, ಅವ್ರು ಓದಿದ್ದು ಶಾಲೆ ಎಲ್ಲವೂ ಮೋದಿ ಕಟ್ಟಿದ್ದಾ?. ಬಾಯಲ್ಲಿ ಅಭಿವೃದ್ಧಿ ಹೇಳೋದು ಮಾತ್ರವಲ್ಲ, ನಿಮ್ಮ ಹಿಂದಿನ ಜೀವನ ಒಮ್ಮೆ ನೋಡಿ ಎಂದರು.
ಬಿಜೆಪಿಯು ದೇಶದಲ್ಲಿ ಸಂವಿಧಾನ ಇರಬಾರದು. ಒಬ್ಬ ಸಾಮಾನ್ಯನ ಮಗ ಇಂಜಿನಿಯರ್ ಆಗಬಾರದು. ಬಡವರು ಶ್ರೀಮಂತರಾಗಬಾರದು. ರೈತ ಉದ್ದಾರವಾಗಬಾರದು ಎಂದು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಕಸ್ತೂರಿ ರಂಗನ್ ವರದಿ ಸಮಸ್ಯೆಗೆ ಬಿಜೆಪಿ ಸಂಸದರೇ ಕಾರಣ!

ಮಲೆನಾಡು ಪ್ರತಿನಿಧಿಸುತ್ತಿದ್ದ ನಮ್ಮ ಸಂಸದರು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಹಳ ದೊಡ್ಡ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಾರೆ. ಶರದ್ ಪವಾರ ಅಂತ ಹಿರಿಯ ನಾಯಕರು ಆ ಸಭೆಗೆ ಹಾಜರಾಗಿದ್ರು. ಆದರೆ ರಾಘವೇಂದ್ರ, ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಸಭೆಗೆ ಹೋಗಿಲ್ಲ. ಈ ಕಾರಣ ಇವತ್ತು ಜನ ತೊಂದರೆ ಅನುಭವಿಸುತ್ತಿದ್ದಾರೆ. ಅನಂತ ಹೆಗ್ಡೆ ಆಶೀಸರ ಎಂಬ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಇಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ರೈತರು, ಬಡವರ ಬದುಕಿಗೆ ಕೈ ಹಾಕಿದರೆ ನಾವು ಬಿಡುವುದಿಲ್ಲ ಎಂದರು.

ಜಯಪ್ರಕಾಶ್ ಹೆಗ್ದೆ ಗೆಲ್ತಾರೆ…

ಪಕ್ಷದ ನಾಯಕತ್ವಕ್ಕೆ ನಾವೆಲ್ಲರೂ ಬದ್ದ. ಜಯಪ್ರಕಾಶ್ ಹೆಗ್ಡೆ ಅವರು ಉತ್ತಮ ಜನಪರ ಕೆಲಸ ಮಾಡಿದವರು. ಜ್ಞಾನ ಉಳ್ಳವವರು. ನನಗೆ ಅವಕಾಶ ಸಿಗದಿರುವುದೇ ನನಗೆ ಒಳ್ಳೆಯದಾಯಿತು. ಜಯಪ್ರಕಾಶ್ ಹೆಗ್ಡೆ ಅಂತಹ ಸಂಸದ ದೆಹಲಿಯಲ್ಲಿ ದನಿ ಎತ್ತಬೇಕು. ಹೀಗಾಗಿ ನಾವೆಲ್ಲರೂ ಸೇರಿ ಅವರನ್ನು ಬೆಂಬಲಿಸಿದ್ದೇವೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಶೋಭಾ ಕರಂದ್ಲಾಜೆ, ಸದಾನಂದ ಗೌಡ ಇಬ್ಬರೂ ಏನೂ ಮಾಡಿರಲಿಲ್ಲ. ಶೋಭಾ ಬೆಂಗಳೂರಲ್ಲಿ ಸೋತರೆ ಅದು ಕರ್ನಾಟಕದ ಗೆಲುವು.ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಕುಮಾರಸ್ವಾಮಿ ವಿರುದ್ಧ ರಾಜೇಗೌಡ ಕಿಡಿ

ಶೃಂಗೇರಿ ಶಾಸಕ ರಾಜೇಗೌಡ ಮಾತನಾಡಿ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶೆ ಆಗಿರುವುದು ಕಾಣುತ್ತೇವೆ. ಆದರೆ ಒಮ್ಮೆ ಸಿಎಂ ಆದವರು ಕುಮಾರಸ್ವಾಮಿ ಗ್ಯಾರಂಟಿ ಯೋಜನೆಯನ್ನು ಪೆನ್ ಡ್ರೈವ್ ಹೋಲಿಕೆ ಮಾಡಿದ್ದಾರೆ. ರಾಜ್ಯವನ್ನು ಆಳಿದವರು ಇಂತಹ ಹೇಳಿಕೆ ನೀಡಬಾರದು ಎಂದರು.

ಬಿಜೆಪಿಗರಿಗೆ ಕಿಮ್ಮನೆ ಸವಾಲು!

ನಮ್ಮ ಜನಪ್ರಿಯ ಗ್ಯಾರಂಟಿ ಯೋಜನೆಯನ್ನು ಯಾವುದೇ ಬಿಜೆಪಿ ವ್ಯಕ್ತಿ ತಿರಸ್ಕಾರ ಮಾಡಿಲ್ಲ. ತಾಕತ್ತು, ದಮ್ಮು ಇದ್ದರೆ ಎಲ್ಲಾ ಯೋಜನೆಯನ್ನು ಗ್ಯಾರಂಟಿ ರದ್ದು ಮಾಡುತ್ತೇವೆ ಎಂದು ಘೋಷಣೆ ಮಾಡಿ ಚುನಾವಣೆ ಎದುರಿಸಲಿ ಎಂದು ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.

Categories
ತೀರ್ಥಹಳ್ಳಿ

ಮೇ 2ಕ್ಕೆ ತೀರ್ಥಹಳ್ಳಿಗೆ ರಾಘವೇಂದ್ರ, ಕುಮಾರ್ ಬಂಗಾರಪ್ಪ

ಮೇ 2ಕ್ಕೆ ತೀರ್ಥಹಳ್ಳಿಗೆ ರಾಘವೇಂದ್ರ, ಕುಮಾರ್ ಬಂಗಾರಪ್ಪ
– ದೇವಂಗಿಯಲ್ಲಿ ಬೃಹತ್ ಕುಪ್ಪಳಿ ಮಹಾ ಶಕ್ತಿ ಕೇಂದ್ರದ ಸಭೆ
– ಕುರುವಳ್ಳಿಯಲ್ಲಿ ವೃತ್ತಿ ನಿರತರು, ಸಂಘ ಸಂಸ್ಥೆಗಳ ಸಮಾವೇಶ

NAMMUR EXPRESS NEWS
ತೀರ್ಥಹಳ್ಳಿ: ಲೋಕಸಭಾ ಚುನಾವಣೆ ಚುರುಕು ಪಡೆದುಕೊಂಡಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ತೀರ್ಥಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಹಾಗೂ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಚುನಾವಣಾ ಪ್ರಚಾರ ಸಭೆ 02-05-2024, ಬೆಳಿಗ್ಗೆ 11 ಗಂಟೆಗೆ ಅಂಕಿನಕಟ್ಟೆ ಮೈದಾನ, ದೇವಂಗಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳಾದ ಶ್ರೀ ಬಿ.ವೈ ರಾಘವೇಂದ್ರ ಶಾಸಕರೂ, ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮಾಜಿ ಶಾಸಕರೂ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಮತ್ತು ಪಕ್ಷದ ಮುಖಂಡರುಗಳು ಆಗಮಿಸಿ ಮತಯಾಚನೆ ಮಾಡಲಿದ್ದಾರೆ.

ವೃತ್ತಿ ನಿರತರು ಮತ್ತು ಸಂಘ ಸಂಸ್ಥೆಗಳ ಸಮಾವೇಶ

02 ಮೇ 2024, ಗುರುವಾರ ಮಧ್ಯಾಹ್ನ 2-30ಕ್ಕೆ ಆರ್.ಎಸ್.ಬಿ ಸಭಾಭವನ ಪುತ್ತಿಗೆ ಮಠದ ಹಿಂಭಾಗ ಕುರುವಳ್ಳಿ ತೀರ್ಥಹಳ್ಳಿಯಲ್ಲಿ ನಡೆಯಲಿದೆ.ವೃತ್ತಿನಿರತರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಸಕಾಲದಲ್ಲಿ ಆಗಮಿಸಲುಕೋರಲಾಗಿದೆ.

Categories
ತೀರ್ಥಹಳ್ಳಿ ಶಿವಮೊಗ್ಗ

ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಶ್ವರಪ್ಪ ಮಿಂಚಿನ ಸಂಚಾರ!

ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಶ್ವರಪ್ಪ ಮಿಂಚಿನ ಸಂಚಾರ!
– ಕೌದಳ್ಳಿ ದೇವಾಲಯಕ್ಕೆ ಭೇಟಿ: ಗುರುಗಳ ಆಶೀರ್ವಾದ
– ಮಂಡಗದ್ದೆ, ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ ದೇವಂಗಿ, ಮೇಲಿನಕುರುವಳ್ಳಿ, ಕೋಣಂದೂರಲ್ಲಿ ಸಭೆ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್. ಈಶ್ವರಪ್ಪ ಅವರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ನಡೆಸಿದರು. ಮಂಡಗದ್ದೆ, ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ ದೇವಂಗಿ, ಮೇಲಿನಕುರುವಳ್ಳಿ, ಕೋಣಂದೂರಲ್ಲಿ ಸಾರ್ವಜನಿಕ ಸಭೆ ನಡೆಸಿ ಅವರು ಮತ ಯಾಚನೆ ಮಾಡಿದರು.

ಎಲ್ಲಾ ಹೋಬಳಿಯಲ್ಲೂ ಸಭೆ

ತೀರ್ಥಹಳ್ಳಿ ತಾಲೂಕಿನ ಎಲ್ಲಾ ಹೋಬಳಿಯಲ್ಲೂ ಸಭೆ ನಡೆಸಿದ ಅವರು, ಕೋಣಂದೂರಲ್ಲಿ 300ಕ್ಕೂ ಹೆಚ್ಚು ಮಂದಿ ಸೇರಿದ್ದರು.

ಯಡಿಯೂರಪ್ಪ ಕುಟುಂಬದಿಂದ ನನಗೆ ಮೋಸ ಆಗಿದೆ

ಎಲ್ಲಾ ಬಹಿರಂಗ ಸಭೆಗಳಲ್ಲಿ ಮಾತನಾಡಿದ ಈಶ್ವರಪ್ಪ ಅವರು ನನಗೆ ಆದ ಮೋಸ ಇನ್ನು ಯಾರಿಗೂ ಆಗಬಾರದು. ಕುಟುಂಬ ರಾಜಕಾರಣದಿಂದ ಎಲ್ಲರಿಗೂ ತೊಂದರೆಯಾಗಲಿದೆ. ನನಗೆ ಒಮ್ಮೆ ಮತ ನೀಡಿ. ನಿಮ್ಮ ಜತೆ ನಾನು ಸದಾ ಇರುತ್ತೇನೆ ಎಂದರು.

ಕೌದಳ್ಳಿ ದೇವಾಲಯಕ್ಕೆ ಭೇಟಿ: ಆಶೀರ್ವಾದ

ಶ್ರೀ ನಾಗರಕ್ತೇಶ್ವರಿ ಅಮ್ಮನವರ ಸನ್ನಿಧಿಗೆ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಿರುವ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಅವರು ಅಮ್ಮನವರಿಗೆ ಪೂಜೆ ಸಲ್ಲಿಸಿ ಧರ್ಮದರ್ಶಿಗಳಾದ ಮಂಜುನಾಥ್ ಅವರ ಆಶೀರ್ವಾದ ಪಡೆದರು. ಈ ವೇಳೆ ಗಣೇಶ್, ಸೇರಿದಂತೆ ಸ್ಥಳೀಯ ಮುಖಂಡರೂ ಹಾಜರಿದ್ದರು.

Categories
ರಾಜ್ಯ

ಬಿಸಿಲಿನ ನಡುವೆ ರಾಜಕೀಯದ ಬಿಸಿ..!

ಬಿಸಿಲಿನ ನಡುವೆ ರಾಜಕೀಯದ ಬಿಸಿ..!
– ಹಳ್ಳಿ ಹಳ್ಳಿಯಲ್ಲೂ ಪ್ರಚಾರಕ್ಕೆ ಅಡ್ಡಿ
– ಬಿಸಿಲಿನ ಶಾಖಕ್ಕೆ ಕಾರ್ಯಕರ್ತರು ಸುಸ್ತೋ ಸುಸ್ತು!

NAMMUR EXPRESS NEWS
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಅಭ್ಯರ್ಥಿಗಳಿಗೆ ಗೆಲುವಿನ ಒತ್ತಡ ನಿದ್ದೆಗೆಡುವಂತೆ ಮಾಡಿದರೆ, ಹಗಲಿನಲ್ಲಿ ಉರಿ ಬಿಸಿಲು, ರಾತ್ರಿ ಧಗೆ ಕಾರ್ಯಕರ್ತರ ನಿದ್ದೆಗೆಡೆಸಿದೆ. ಈಗಾಗಲೇ ಏ.26ರಂದು ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಮುಗಿದಿದೆ. ಇನ್ನು 14 ಕ್ಷೇತ್ರಗಳಲ್ಲಿ ಮೇ 7ಕ್ಕೆ ಮತದಾನ ನಡೆಯಲಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ಉರಿ ಬಿಸಿಲಲ್ಲಿ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೇಸಿಗೆ ಧಗೆಯಲ್ಲೇ ಚುನಾವಣಾ ಕಾವು ಹೆಚ್ಚಿಸಿದೆ. ಕಾರ್ಯಕರ್ತರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರು ತಣ್ಣೀರು ಹಾಗೂ ಮಜ್ಜಿಗೆ ಕುಡಿಯುತ್ತ ಪ್ರಚಾರ ಮಾಡುತ್ತಿದ್ದಾರೆ.

ಮದ್ಯಾಹ್ನದ ನಂತರ ಸಂಜೆ 5 ಗಂಟೆಯ ನಂತರವೇ ಪ್ರಚಾರ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆಯಲ್ಲೇ ಪ್ರಚಾರ ಸಭೆಗಳು ನಡೆಯುತ್ತಿವೆ. ಬೆಳಿಗ್ಗೆ 8 ಗಂಟೆ ವೇಳೆಗೆ ಧಗೆ ಆವರಿಸಿಕೊಳ್ಳುತ್ತಿದೆ. ಟವಾಲು, ಟೊಪ್ಪಿಗೆ, ಪೇಟ ಹಾಗೂ ನೀರಿನ ಬಾಟಲಿ ಇಲ್ಲದೆ ಮನೆಗಳಿಂದ ಹೊರಗೆ ಬೀಳುವುದು ಕಷ್ಟವಾಗಿದೆ. ಧಗೆಗೆ ಮೈಮೇಲಿನ ಬಟ್ಟೆಗಳು ಹಾಗೂ ರುಮಾಲುಗಳು ತೊಯ್ದು ತೊಪ್ಪೆಯಾಗುತ್ತಿವೆ. ಚುನಾವಣೆ ಪ್ರಚಾರದಿಂದ ಕಾರ್ಯ ಕರ್ತರಿಗೆ ಸುಸ್ತೊ ಸುಸ್ತು ಆಗುತ್ತಿದೆ. ಒಂದು ತಾಸು ಬಿಸಿಲಲ್ಲಿ ತಿರುಗಾಡಿದರೆ ತಲೆ ಸುತ್ತು ಬರುತ್ತಿದೆ. ಬಿಸಿಲು ಪ್ರಚಾರಕ್ಕೂ ತೊಡಕು ಉಂಟು ಮಾಡಿದೆ.

ಮಹಿಳೆಯರು ಚಕ್ಕರ್!

ಮಹಿಳೆಯರಂತೂ ಪ್ರಚಾರಕ್ಕೆ ಬರುತ್ತಿಲ್ಲ. ಅಪರೂಪಕ್ಕೆ ಎನ್ನುವಂತೆ ಪ್ರಚಾರದ ತಂಡಗಳಲ್ಲಿ ಒಬ್ಬರೋ, ಇಬ್ಬರೋ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯರು ಆರೋಗ್ಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಯುವಕರೇ ಸಂಜೆ ವೇಳೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಸಿ ಧಗೆ ಅವರನನ್ನೂ ಸುಸ್ತೋ ಸುಸ್ತಾಗಿ ಮಾಡಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ತಂಪು ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳಕ್ಕೆ ತಂದ ಕೆಲವೇ ಕ್ಷಣಗಳಲ್ಲೇ ಅವು ಖಾಲಿಯಾಗುತ್ತಿವೆ.

Categories
ಶಿವಮೊಗ್ಗ

ಶಿವಮೊಗ್ಗಕ್ಕೆ ಮೇ 2ಕ್ಕೆ ರಾಹುಲ್ ಗಾಂಧಿ

ಶಿವಮೊಗ್ಗಕ್ಕೆ ಮೇ 2ಕ್ಕೆ ರಾಹುಲ್ ಗಾಂಧಿ
– ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮನ
– ಸಿನಿ ನಟ ನಟಿಯರ ಬಳಿಕ ಈಗ ರಾಜಕೀಯ ಸ್ಟಾರ್ ಪ್ರಚಾರ

NAMMUR EXPRESS NEWS
ಶಿವಮೊಗ್ಗ: ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಲೋಕ ಸಭಾ ಕ್ಷೇತ್ರ ಈಗ ಭಾರೀ ಕೂತೂಹಲ ಘಟ್ಟಕ್ಕೆ ಬಂದಿದೆ. ಇದೀಗ ಸಿನಿಮಾ ನಟ ನಟಿಯರ ದಂಡು ಆಗಮಿಸಿದ್ದು, ಇದೀಗ ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾ ಶಿವರಾಜ್‌ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಮೇ 2ರಂದು ಮಧ್ಯಾಹ್ನ 12 ರಿಂದ 1:30ರವರೆಗೆ ರಾಹುಲ್ ಗಾಂಧಿಯವರು ಸಮಯ ನೀಡಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ ಮತ್ತು ಶಿವಮೊಗ್ಗ ನಗರ ನಾಲ್ಕು ತಾಲ್ಲೂಕುಗಳ ಮತದಾರರು ಆಗಮಿಸಲಿದ್ದಾರೆ.

ಸಿನಿಮಾ ನಟ ನಟಿಯರ ಪ್ರಚಾರ

ಗೀತಾ ಪರ ಪ್ರಚಾರಕ್ಕೆ ಅನೇಕ ನಟ ನಟಿಯರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದು, ಇನ್ನೂ ಅನೇಕ ಚಿತ್ರರಂಗದ ಪ್ರಮುಖರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ನಟ ದುನಿಯಾ ವಿಜಿ, ಡಾಲಿ ಧಜಂಜಯ್, ಸತ್ಯ, ಚಿಕ್ಕಣ್ಣ, ವಿಜಯರಾಘವೇಂದ್ರ, ನೆನಪಿರಲಿ ಪ್ರೇಮ್, ನಿಶ್ವಿಕಾನಾಯ್ಡು, ಚಂದನಶೆಟ್ಟಿ, ಅನುಶ್ರೀ, ಅಕುಲ್‌ಬಾಲಾಜಿ ಸೇರಿದಂತೆ ಅನೇಕರು ಈಗಾಗಲೇ ಅನೇಕ ಕಡೆ ಪ್ರಚಾರ ಮಾಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ನ್ಯೂಸ್: ಎಲ್ಲೆಲ್ಲಿ ಏನೇನು?

ತೀರ್ಥಹಳ್ಳಿ ನ್ಯೂಸ್: ಎಲ್ಲೆಲ್ಲಿ ಏನೇನು?
ಮೇಲಿನ ಕುರುವಳ್ಳಿಯಲ್ಲಿ ಕಾಂಗ್ರೆಸ್ ಪ್ರಚಾರ
– ಬಂಡೆ ವೆಂಕಟೇಶ್, ನಾಗರಾಜ್ ನೇತೃತ್ವದಲ್ಲಿ ಮನೆ ಮನೆಗೆ

NAMMUR EXPRESS NEWS
ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರವಾಗಿ ಮತ ನೀಡುವಂತೆ ಮನೆ ಮನೆಗೆ ಕಾಂಗ್ರೆಸ್ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ನೀಡಿ ಮತಯಾಚನೆ ಮಾಡಲಾಯಿತು ಕಾರ್ತಿಕ್ ಗೌಡ ಹೆಗ್ಗೆಬೈಲ್, ಮೇಲಿನಕುರುವಳ್ಳಿ ರಾಜ ಇತರರು ಇದ್ದರು.

ತೀರ್ಥಹಳ್ಳಿ ಪೋಸ್ಟ್ ಮಾಸ್ಟರ್ ಕೃಷ್ಣಮೂರ್ತಿ ನಿವೃತ್ತಿ
– 40 ವರ್ಷಗಳ ಸುದೀರ್ಘ ಸೇವೆಗೆ ಎಲ್ಲೆಡೆ ಮೆಚ್ಚುಗೆ

ತೀರ್ಥಹಳ್ಳಿ: ತೀರ್ಥಹಳ್ಳಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಮೂರ್ತಿ ಕೆ.ಎಸ್ ಅವರು ನಿವೃತ್ತಿಯಾಗಿದ್ದು ಅವರನ್ನು ಆತ್ಮೀಯವಾಗಿ ಬೀಳ್ಕೊಡುಗೆ ಮಾಡಲಾಯಿತು. ತಂದೆ ಶಾಂತಪ್ಪ ಗೌಡ, ತಾಯಿ ರತ್ನಮ್ಮ, ಪತ್ನಿ ಪವಿತ್ರ ಮಕ್ಕಳಾದ ಶರತ್, ಭರತ್ ಅವರ ಸುಖಿ ಕುಟುಂಬದೊಂದಿಗೆ ನಿವೃತ್ತ ಜೀವನ ಕಳೆಯಲಿದ್ದಾರೆ. ತೀರ್ಥಹಳ್ಳಿ ತಾಲೂಕು ಕಾವೇರಿ ಮೂಲದ ಕೃಷ್ಣಮೂರ್ತಿ ಅವರ ಕೊಪ್ಪ ಅಂಚೆ ಇಲಾಖೆಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭ ಮಾಡಿ ಬಳಿಕ ಆಗುಂಬೆ, ಮೇಗರವಳ್ಳಿ, ಬೆಜ್ಜವಳ್ಳಿ, ತೂದೂರು,ಮಂಡಗದ್ದೆ, ದೇವಂಗಿಇನ್ನಿತರ ಸ್ಥಳಗಳಲ್ಲಿ ಸುದೀರ್ಘ 40 ವರ್ಷಕಾಲ ಕಾರ್ಯ ನಿರ್ವಹಿಸಿದ್ದಾರೆ.ತುಂಬಾ ಸರಳ ಸಜ್ಜನಿಕೆ ವ್ಯಕ್ತಿ ನಿವೃತ್ತಿ ಜೀವನ ವನ್ನು ತೀರ್ಥಹಳ್ಳಿ ಪೋಸ್ಟ್ ಮಾಸ್ಟರ್ ನಿವೃತ್ತಿಯಾಗಿದ್ದಾರೆ..ಅಂಚೆ ಇಲಾಖೆ ಸಿಬ್ಬಂದಿ ವರ್ಗದವರು ಅವರ ನಿವೃತ್ತಿ ಜೀವನಕ್ಕೆ ಶುಭಾಶಯ ಕೋರಿದ್ದಾರೆ.

ಡಾ.ಆನಂದ್‌ಗೆ ಉತ್ತಮ ಪಶು ವೈದ್ಯ ಪ್ರಶಸ್ತಿ
– ಪಶುವೈದ್ಯಕೀಯ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಕೋಣಂದೂರು: ಹಿರಿಯ ಪಶುವೈದ್ಯಾಧಿಕಾರಿ ಡಾ. ಆನಂದ್ ಅವರಿಗೆ 2024ನೇ ಸಾಲಿನ ಉತ್ತಮ ಪಶುವೈದ್ಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಸಭಾಂಗಣ ಹೆಬ್ಬಾಳದಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಶನಿವಾರ ಏರ್ಪಡಿಸಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹೆಚ್.ಸಿ.ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಸಿ.ವೀರಣ್ಣ, ನವೀನ್ ಪಶುಪತಿ, ಪ್ರೊ.ಎಂ. ನಾರಾಯಣಸ್ವಾಮಿ, ಡಾ.ಟಿ.ತಿಪ್ಪೇಸ್ವಾಮಿ, ಡಾ.ಟಿ.ಚಂದ್ರಶೇಖರ್ ಇದ್ದರು.

Categories
ಕರಾವಳಿ

ಮೂಡುಬಿದಿರೆಯಲ್ಲಿ ಪುಸ್ತಕ ಮನೆ!

ಮೂಡುಬಿದಿರೆಯಲ್ಲಿ ಪುಸ್ತಕ ಮನೆ!
– ಮೇ5ರಂದು ಮೂಡುಬಿದಿರೆಯಲ್ಲಿ ಉದ್ಘಾಟನೆ
– ಕರಾವಳಿಯಲ್ಲಿ ಎರಡನೇ ಪುಸ್ತಕ ಮಳಿಗೆ

NAMMUR EXPRESS NEWS
ಮೂಡುಬಿದಿರೆ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಪುಸ್ತಕ ಮನೆ ಇದೀಗ ತನ್ನ ಎರಡನೇ ಪುಸ್ತಕ ಮನೆ ಮಳಿಗೆಯಲನ್ನು ಮೂಡುಬಿದಿರೆಯಲ್ಲಿ ಮೇ 5ಕ್ಕೆ ಶುರು ಮಾಡಲಿದೆ. ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ ಪುಸ್ತಕ ಮನೆ ರಾಜ್ಯದಲ್ಲೇ ಗ್ರಾಹಕರ ಅಚ್ಚುಮೆಚ್ಚಿನ ಪುಸ್ತಕ ಮಳಿಗೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಓದಿನ ಕಡೆ ಸೆಳೆಯುತ್ತಿದೆ. ಜೊತೆಗೆ ಪುಸ್ತಕ ಬರಹಗಾರರು, ಪುಸ್ತಕ ಪ್ರೇಮಿಗಳನ್ನು ಬೆಳೆಸುವ ದೊಡ್ಡ ಪರಿಕಲ್ಪನೆ ಹೊಂದಿದೆ. ಇದೀಗ ತನ್ನ ಶಾಖೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಗೆ ವಿಸ್ತರಿಸಿದ್ದು ದಿನಾಂಕ: 05-05-2024 ರಂದು ಮೂಡುಬಿದಿರೆಯ ಪಂಚರತ್ನ ಬಿಲ್ಡಿಂಗ್ ನಲ್ಲಿ ಬೆಳಗ್ಗೆ 10 ಗಂಟೆಗೆ ಪುಸ್ತಕ ಮನೆ ಶಾಖೆಯು ಉದ್ಘಾಟನೆಗೊಳ್ಳಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಹಾಗೂ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಎಲ್ಲಾ ಸಂಸ್ಥಾಪಕರು ಹಾಜರಿರಲಿದ್ದಾರೆ.

ಮೊ : 9035061849
www.pustakamane.com