Categories
ಚಿತ್ರದುರ್ಗ

ಒಡಿಶಾದಿಂದ ಬೆಂಗಳೂರಿಗೆ ರೈಲಿನಲ್ಲಿ ಗಾಂಜಾ!

ಒಡಿಶಾದಿಂದ ಬೆಂಗಳೂರಿಗೆ ರೈಲಿನಲ್ಲಿ ಗಾಂಜಾ!

– ರೈಲಿನಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಸಾಗಾಟ: ವಶ
– ಚಿತ್ರದುರ್ಗ ಬಳಿ ಜಪ್ತಿ ಮಾಡಿದ ಪೊಲೀಸರು
– ದಾವಣಗೆರೆ ಪೊಲೀಸರ ತನಿಖೆ: ಬೃಹತ್ ಜಾಲ ಪತ್ತೆ!?

NAMMUR EXPRESS NEWS
ಚಿತ್ರದುರ್ಗ: ಒಡಿಶಾದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಬರೋಬ್ಬರಿ 34 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಟಾಟಾ ನಗರ’ ರೈಲಿನಲ್ಲಿ ದಾವಣಗೆರೆ ರೈಲ್ವೇ ಪೊಲೀಸರು ದಾಳಿ ನಡೆಸಿ, ಚಿತ್ರದುರ್ಗ ಬಳಿ ರೈಲಿನ ಬೋಗಿಯಲ್ಲಿ ಎರಡು ಬ್ಯಾಗುಗಳಲ್ಲಿದ್ದ 34 ಕೆ.ಜಿ.ಗಾಂಜಾ ಪತ್ತೆ ಮಾಡಿದ್ದಾರೆ.

ಒಂದು ಬೋಗಿಯಲ್ಲಿ ಗಾಂಜಾ ಇದ್ದ ಬ್ಯಾಗುಗಳನ್ನು ಇಟ್ಟು, ಮತ್ತೊಂದು ಬೋಗಿಯಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಗಾಂಜಾ ಬ್ಯಾಗುಗಳನ್ನು ವಶಕ್ಕೆ ಪಡೆದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಪರಾರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ರೈಲ್ವೇ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಇತ್ತೀಚಿಗೆ ರಾಜ್ಯದಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದ್ದೂ ಯುವ ಸಮುದಾಯದ ಬದುಕು ಬಲಿಯಾಗುತ್ತಿದೆ. ಬೆಂಗಳೂರು, ಮಂಗಳೂರು ಈ ಗಾಂಜಾ ಸೆಂಟರ್ ಆಗುತ್ತಿವೆ. ಅಪರಾಧ ಹೆಚ್ಚುತ್ತಿದೆ. ಈ ನಡುವೆ ಈ ದಾಳಿ ಮಹತ್ವ ಪಡೆದಿದ್ದು, ಉತ್ತರ ಭಾರತದ ಕಡೆಯಿಂದ ಗಾಂಜಾ ಪೂರೈಕೆ ಬಯಲಾಗಿದೆ. ಸರ್ಕಾರ ಈ ದಂಧೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯ ಕತ್ತಲಾಗಲಿದೆ.

Categories
ಶಿವಮೊಗ್ಗ

ಮಲೆನಾಡಲ್ಲಿ ಹೆಚ್ಚಿದ ಗಾಂಜಾ ಘಾಟು!

ಮಲೆನಾಡಲ್ಲಿ ಹೆಚ್ಚಿದ ಗಾಂಜಾ ಘಾಟು!

– ಒಂದೇ ತಿಂಗಳಲ್ಲಿ 61 ಗಾಂಜಾ ಪ್ರಕರಣ ದಾಖಲು
– ಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಚರಣೆ

ಶಿವಮೊಗ್ಗ: ಮಾದಕ ವ್ಯಸನ ಮುಕ್ತ ದಿನದ ಅಂಗವಾಗಿ ಜೂ.26 ರಂದು ಅಂತರಾಷ್ಟ್ರೀಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಜೂ 8 ರಿಂದ ಇಲ್ಲಿಯವರೆಗೆ ಗಾಂಜಾ ತಡೆಯುವ ನಿಟ್ಟಿನಲ್ಲಿ 61 ಪ್ರಕರಣ ದಾಖಲಿಸಿ 5,56,560 ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ತಡೆಗೆ ಇಲಾಖೆ ಪಣತೊಟ್ಟಿದೆ. ಏರಿಯಾ ಡಾಮಿನೇಷನ್ ನಲ್ಲು ಗಾಂಜಾ ಪತ್ತೆಯಾಗಿದೆ. 450 ಪಿಟಿಕೇಸ್ ನಲ್ಲಿ 54 ಗಾಂಜಾ ಪಾಸಿಟಿವ್ ಬಂದಿದೆ ಎಂದರು. ಸಾರ್ವಜನಿಕರು ತಮ್ಮ ಸುತ್ತಮುತ್ತ ಗಾಂಜಾ ಸೇವನೆ ಮಾರಾಟ ಕಂಡುಬಂದರೆ, ವ್ಯಕ್ತಿಗಳು ಅನುಮಾನಾಸ್ಪದವಾಗಿ ಕಂಡು ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿದ ಎಸ್ಪಿ ಅವರು ಎಲ್ಲಾ ಪ್ರಕರಣಗಳಲ್ಲಿ ಗಾಂಜಾ ಬೆಂಗಳೂರಿನಿಂದ ತರಲಾಗುತ್ತಿರುವುದು ಪತ್ತೆಯಾಗಿದೆ ಎಂದರು.

ಕಾಲೇಜಿನ ಸರೌಂಡಿಂಗ್ಸ್ ನಲ್ಲಿ ಗಾಂಜಾ ಅವೇರ್ ನೆಸ್ ಮೂಡಿಸಲಾಗುತ್ತಿದೆ. ಬೀಟ್ ಮೀಟಿಂಗ್ ಸಹ ಮಾಡಲಾಗುತ್ತಿದೆ. ಪಿಯು ಕಾಲೇಜಿನ್ನ ಟಾರ್ಗೆಟ್ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. 20-25 ರ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಗಾಂಜಾ ಸೇವನೆಗೆ ತುತ್ತಾಗುತ್ತಿದ್ದಾರೆ. ಕೂಲಿ ಕೆಲಸ ಮಾಡಿದವರು ಹೆಚ್ಚು ಸೇವನೆ ಮಾಡುತ್ತಿರುವುದು ಪತ್ತೆಯಾಗಿದೆ ಎಂದರು.
ಹೊಸಮನೆಯಲ್ಲಿ ಗಾಂಜಾ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಮಗನ ವಿರುದ್ಧವೇ ಪೋಷಕರು ಬಂದು ಗಮನಕ್ಕೆ ತಂದಿದ್ದರು. ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ರೀತಿ ಪೋಷಕರು ತಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ಬಂದರೆ ಕ್ರಮ ವಹಿಸಲಾಗುವುದು. ಎಂಡಿಎಂ ಸಹ ಸಾಗರದಲ್ಲಿ ಪತ್ತೆಯಾಗಿತ್ತು ಅದರ ಬಗ್ಗೆಯೂ ಜಾಗೃತಿ ಮೂಡಿಸಲಾಗಿದೆ ಎಂದರು.

15 ದಿನದಲ್ಲಿ 61 ಕೇಸ್!

15 ದಿನಗಳ ಗಾಂಜಾ ಡ್ರೈವ್ ನಲ್ಲಿ ಜಿಲ್ಲೆಯಲ್ಲಿ ಗಾಂಜಾ ಸೇವನೆ 54, ಗಾಂಜಾ ಮಾರಾಟ 6, ಹಸಿ ಗಾಂಜಾ 1 ಸೇರಿ ಒಟ್ಟು 61 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 79 ಜನ ಆರೋಪಿಗಳು ಪತ್ತೆಯಾಗಿದ್ದಾರೆ. ಒಟ್ಟು 15.363 ಗ್ರಾಂ ಗಾಂಜಾ ಪತ್ತೆಯಾಗಿದೆ 5,56,560 ರೂ. ಹಣ ಮೌಲ್ಯ ಕಟ್ಟಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Categories
ಕರಾವಳಿ

ಕಾಪಾಡಿ ಫಲ್ಗುಣಿ ನದಿ ಒಡಲು!!

ಕಾಪಾಡಿ ಫಲ್ಗುಣಿ ನದಿ ಒಡಲು!!

– ಕಾರ್ಖಾನೆಗಳಿಂದ ಸೇರುತ್ತಿದೆ ರಾಸಾಯನಿಕ ತ್ಯಾಜ್ಯ!
– ದೊಡ್ಡ ದೊಡ್ಡ ಕಾರ್ಖಾನೆ ಲಾಬಿಗೆ ಅಧಿಕಾರಿಗಳು ಮಣಿದರೇ?

NAMMUR EXPRESS NEWS
ಮಂಗಳೂರು: ನದಿ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಈ ನಡುವೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕಾರ್ಖಾನೆಯೊಂದು ಫಲ್ಗುಣಿ ನದಿಗೆ ನೇರವಾಗಿ ಕಾರ್ಖಾನೆ ತ್ಯಾಜ್ಯ ನೀರು ಹರಿ ಬಿಡುತ್ತಿದೆ. ಜತೆಗೆ ಹಲವು ಕಾರ್ಖಾನೆಗಳು ನದಿ ನೀರನ್ನು ಮಲಿನ ಮಾಡುತ್ತಿವೆ.

ಬೈಕಂಪಾಡಿ ಸುತ್ತಲ ಹಲವು ಕೈಗಾರಿಕಾ ಘಟಕಗಳೂ ಶುದ್ದೀಕರಿಸದ ಕೈಗಾರಿಕಾ ತ್ಯಾಜ್ಯವನ್ನು ಫಲ್ಗುಣಿಗೆ ಹರಿಸುತ್ತಿವೆ. ಈ ಕುರಿತು ಮಾಲಿನ್ಯ ನಿಯಂತ್ರ ಮಂಡಳಿ, ಜಿಲ್ಲಾಡಳಿತದ ಗಮನಕ್ಕೆ ತಂದು ವಾರ ಕಳೆದಿದೆ. ಆದರೆ, ಈ ದಿನವೂ ರಾಜಾರೋಷವಾಗಿ ಕೈಗಾರಿಕಾ ತ್ಯಾಜ್ಯ ಜೀವನದಿ ಫಲ್ಗುಣಿಯ ಒಡಲು ಸೇರುತ್ತಿದೆ. ವರ್ಷಗಳಿಂದ ಈ ಕುರಿತು ಧ್ವನಿ ಎತ್ತುತ್ತಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಕನಿಷ್ಟ ಕಾಳಜಿಯನ್ನೂ ವಹಿಸುತ್ತಿಲ್ಲ. ಜೀವನದಿ ಫಲ್ಗುಣಿ ಸಾಯುತ್ತಿದ್ದಾಳೆ ಎಂದು ನಾಗರಿಕ ಹೋರಾಟ ಸಮಿತಿ ಪ್ರಮುಖ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

Categories
ಜಾತಕ

ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿಮ್ಮ ರಾಶಿ ಭವಿಷ್ಯ ಹೇಗಿದೆ?

– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?
– ಯಾರಿಗೆ ಹೊಸ ಮನೆ ಖರೀದಿ ಭಾಗ್ಯ.. ಯಾರಿಗೆ ಮದುವೆ ಲಗ್ನ?

NAMMUR EXPRESS NEWS
2024 ಜೂನ್ 24ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ ರಾಶಿ :
ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಇದ್ದರೂ ಅದನ್ನು ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ದೂರ ಪ್ರಯಾಣದಲ್ಲಿ ವಾಹನ ತೊಂದರೆಗಳನ್ನು ಒಳಗೊಂಡಿರುತ್ತದೆ. ವೃತ್ತಿಪರ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದಾಗಿ, ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ.

** ವೃಷಭ ರಾಶಿ :
ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರಗಳು ಒಳ್ಳೆಯದಲ್ಲ. ಕುಟುಂಬದ ಸದಸ್ಯರ ವರ್ತನೆಯು ಮಾನಸಿಕ ಕಿರಿಕಿರಿಹೆಚ್ಚಾಗುತ್ತದೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಹಣಕಾಸಿನ ವ್ಯವಹಾರಗಳು ಸ್ವಲ್ಪ ನಿಧಾನವಾಗುತ್ತವೆ. ನಿರುದ್ಯೋಗಿಗಳ ಕಷ್ಟ ಫಲಿಸುವುದಿಲ್ಲ. ವ್ಯಾಪಾರ ಉದ್ಯೋಗಗಳಲ್ಲಿ ಸ್ಥಿರತೆ ಇರುವುದಿಲ್ಲ.

** ಮಿಥುನ ರಾಶಿ :
ಆರ್ಥಿಕ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಹೊಂದುತ್ತೀರಿ. ಹಳೆಯ ಮನಸ್ತಾಪಗಳು ಬಗೆಹರಿಯುತ್ತವೆ. ಹೊಸ ಪರಿಚಯಗಳಿಂದ ಆರ್ಥಿಕ ಲಾಭಗಳು ಉಂಟಾಗುತ್ತವೆ. ಇತರರೊಂದಿಗೆ ಜಾಗರೂಕರಾಗಿರಿ. ಕುಟುಂಬ ಸದಸ್ಯರ ವಿರೋಧ ಹೆಚ್ಚಾಗುತ್ತದೆ ಮತ್ತು ವೃತ್ತಿಪರ ಉದ್ಯೋಗದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ.

** ಕಟಕ ರಾಶಿ :
ಒಂದು ವ್ಯವಹಾರದಲ್ಲಿ ಮನೆಯ ಹೊರಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ದೂರದ ಸ್ಥಳಗಳಿಂದ ಅಪರೂಪದ ಮಾಹಿತಿ ಸಿಗುತ್ತದೆ. ಆದಾಯ ಅಷ್ಟಾಗಿ ಇರುವುದಿಲ್ಲ. ಬಾಲ್ಯದ ಗೆಳೆಯರೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳಿರುತ್ತವೆ. ಉದ್ಯೋಗದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಮಕ್ಕಳ ಆರೋಗ್ಯ ವಿಷಯದಲ್ಲಿ ಶ್ರದ್ಧೆ ವಹಿಸಬೇಕು.

** ಸಿಂಹ ರಾಶಿ :
ಬಂಧು ಮಿತ್ರರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಹಠಾತ್ ಧನ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಒಳ್ಳೆಯ ಸುದ್ದಿ ಇರುತ್ತದೆ. ಹೊಸ ವ್ಯಾಪಾರಕ್ಕೆ ನಿಕಟ ಸ್ನೇಹಿತರಿಂದ ಹೂಡಿಕೆಗಳು ದೊರೆಯುತ್ತವೆ. ಸೋದರ ಸಂಬಂಧಿಗಳೊಂದಿಗಿನ ಆಸ್ತಿ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ.

** ಕನ್ಯಾ ರಾಶಿ :
ಸುತ್ತ ಮುತ್ತಲಿನವರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಹಣದ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ. ಮಕ್ಕಳ. ಉದ್ಯೋಗ ಪ್ರಯತ್ನಗಳು, ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ಪಾಲುದಾರಿಕೆ ವ್ಯವಹಾರಗಳನ್ನು ಸೀಮಿತವಾಗಿರುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ.

** ತುಲಾ ರಾಶಿ :
ಹಣಕಾಸಿನ ಸ್ಥಿತಿಯು ಆಶಾದಾಯಕವಾಗಿರುತ್ತದೆ ಮತ್ತು ಅಗತ್ಯಕ್ಕೆ ಆತ್ಮೀಯರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಕುಟುಂಬದ ಸದಸ್ಯರು ಪ್ರಮುಖ ವಿಷಯಗಳಲ್ಲಿ ಸಹಾಯ ಮಾಡುತ್ತಾರೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸುತ್ತೀರಿ. ದೈವಿಕ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

** ವೃಶ್ಚಿಕ ರಾಶಿ :
ದೂರದಲ್ಲಿರುವ ಬಂಧುಗಳಿಂದ ಮಹತ್ವದ ಸಮಾಚಾರ ದೊರೆಯುತ್ತವೆ. ಕೈಗೊಂಡ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಆಸ್ತಿ ವಿವಾದಗಳಲ್ಲಿ ಸಹೋದರರೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಆರ್ಥಿಕ ಸ್ಥಿತಿಯು ಹಿಂದಿಗಿಂತ ಸುಧಾರಿಸುತ್ತದೆ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತಾರೆ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಹೆಚ್ಚಾಗುತ್ತದೆ.

** ಧನಸ್ಸು ರಾಶಿ :
ಯೋಜಿತ ಕಾರ್ಯಗಳು ದೈವಾನುಗ್ರಹದಿಂದ ಪೂರ್ಣಗೊಳಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿನ ವಿವಾದಗಳು ಬಗೆಹರಿಯುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಉತ್ಸಾಹದೊಂದಿಗೆ ಲಾಭವನ್ನು ಪಡೆಯುತ್ತೀರಿ. ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ದೊರೆಯುತ್ತವೆ. ಪ್ರಯಾಣದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ.

** ಮಕರ ರಾಶಿ :
ಕುಟುಂಬ ಸದಸ್ಯರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಆರೋಗ್ಯದ ವಿಷಯದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಮನೆಯ ಹೊರಗಿನ ಕೆಲವು ಪರಿಸ್ಥಿತಿಗಳು ಹೆಚ್ಚು ಕಿರಿಕಿರಿಯುಂಟು ಮಾಡುತ್ತವೆ. ಉದ್ಯೋಗಿಗಳು ಅಧಿಕಾರಿಗಳೊಂದಿಗೆ ಹೆಚ್ಚು ಜಾಗರೂಕರಾಗಿರಬೇಕು. ಹಣಕಾಸಿನ ತೊಂದರೆಗಳಿಂದ ಒತ್ತಡ ಹೆಚ್ಚಾಗುತ್ತವೆ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ.

** ಕುಂಭ ರಾಶಿ :
ಉದ್ಯೋಗದಲ್ಲಿನ ಹೆಚ್ಚುವರಿ ಜವಾಬ್ದಾರಿಗಳಿಂದ ಸ್ವಲ್ಪ ಪರಿಹಾರ ದೊರೆಯುತ್ತದೆ. ಪ್ರಯಾಣದ ಸಮಯದಲ್ಲಿ ಹೊಸ ಸ್ನೇಹಿತರ ಪರಿಚಯ ಹೆಚ್ಚಾಗುತ್ತದೆ. ಆರ್ಥಿಕ ವಾತಾವರಣ ಅನುಕೂಲಕರವಾಗಿರುತ್ತದೆ. ಹಳೆ ಸಾಲಗಳು ಇತ್ಯರ್ಥವಾಗುತ್ತವೆ. ಗೃಹ ನಿರ್ಮಾಣ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ವ್ಯಾಪಾರಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಲಾಭವನ್ನು ಪಡೆಯುತ್ತೀರಿ.

** ಮೀನ ರಾಶಿ :
ಸಹೋದರರ ಸಹಕಾರದಿಂದ ಹೊಸ ಕಾರ್ಯಗಳಿಗೆ ಚಾಲನೆ ದೊರೆಯುತ್ತದೆ. ಮನೆಯ ಹೊರಗೆ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ಹೊಸ ವ್ಯವಹಾರಗಳು ಯಶಸ್ವಿಯಾಗುತ್ತವೆ. ನಿರುದ್ಯೋಗಿಗಳಿಗೆ ಅಪ್ರಯತ್ನ ಕಾರ್ಯ ಸಿದ್ದತೆ ಉಂಟಾಗುತ್ತದೆ. ಆರ್ಥಿಕ ಪರಿಸ್ಥಿತಿಯು ಆಶಾದಾಯಕವಾಗಿರುತ್ತದೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– 83 ಸಾವಿರ ದಾಟಿದ ಸರಕು: ರಾಶಿಗೆಷ್ಟು?

NAMMUR EXPRESS NEWS
ಸರಕು – 58009 – 83140
ಬೆಟ್ಟೆ – 50009 – 53609
ರಾಶಿ – 43609 – 52609
ಗೊರಬಲು – 30009 – 34099

ಮಾಹಿತಿ: ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ತೀರ್ಥಹಳ್ಳಿ

Categories
ಚಿಕ್ಕಮಗಳೂರು

ಶೃಂಗೇರಿ: ಕುಂಚೇಬೈಲು ಸರ್ಕಾರಿ ಶಾಲೆಯಲ್ಲಿ ಪುಸ್ತಕ ವಿತರಣೆ

ಶೃಂಗೇರಿ: ಕುಂಚೇಬೈಲು ಸರ್ಕಾರಿ ಶಾಲೆಯಲ್ಲಿ ಪುಸ್ತಕ ವಿತರಣೆ

– ಕನ್ನಡ ಜಾನಪದ ಪರಿಷತ್ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಶಶಾಂಕ್ ನೇತೃತ್ವ
– ಜಿಲ್ಲಾ ಅಧ್ಯಕ್ಷರಾದ ಓಣಿತೋಟ ರತ್ನಾಕರ್ ಉದ್ಘಾಟನೆ, ಮುರೊಳ್ಳಿ ಉಪನ್ಯಾಸ

NAMMUR EXPRESS NEWS
ಶೃಂಗೇರಿ: ಕನ್ನಡ ಜಾನಪದ ಪರಿಷತ್ ಶೃಂಗೇರಿ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಶಶಾಂಕ್ ಅಧ್ಯಕ್ಷತೆಯಲ್ಲಿ ಕುಂಚೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಬುಕ್ ಹಾಗು ಜಾನಪದ ಪರಿಕರಗಳನ್ನು ಕೊಡುವ ಕಾರ್ಯಕ್ರಮ ಶನಿವಾರ ನಡೆಯಿತು. ಕ.ಜಾ.ಪ ಜಿಲ್ಲಾ ಅಧ್ಯಕ್ಷರು ಓಣಿ ತೋಟ ರತ್ನಾಕರ್ ಕಾಯಕ್ರಮವನ್ನು ಉದ್ಘಾಟಿಸಿದರು. ವಿಶೇಷ ಉಪನ್ಯಾಸವನ್ನು ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ನಡೆಸಿಕೊಟ್ಟರು. ಹಾಗೂ ಎಸ್ ಡಿ ಎಂ ಸಿ ಆಧ್ಯಕ್ಷರು ಶಾಲೆ ಮುಖ್ಯ ಉಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು ಜಾನಪದ ಪರಿಷತ್ ಪದಾಧಿಕಾರಿಗಳು,ಸದಸ್ಯರು ಇದ್ದರು.ಅಂಕಿತ ಮತ್ತು ತಂಡ ಮಹಿಳಾ ಘಟಕ ಪದಾಧಿಕಾರಿಗಳು, ಕಣದಮನೆ ಜಗದೀಶ್ ಹಾಗೂ ಗ್ರಾಮದ ಸಮಸ್ತ ಗ್ರಾಮಸ್ಥರು ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಆಶಿಶ್ ದೇವಾಡಿಗ ಕ.ಜಾ.ಪ ತಾಲ್ಲೂಕು ಘಟಕದ ಅದ್ಯಕ್ಷರು, ಜ್ಯೋತಿ ಮಂಜುನಾಥ ಕ.ಜಾ.ಪ ಮಹಿಳಾ ಘಟಕ ಅಧ್ಯಕ್ಷರು, ಸುಕೇಶ್ ಕೆ.ಎನ್ ಎಸ್.ಡಿ.ಎಮ್.ಸಿ ಅದ್ಯಕ್ಷರು, ಶ್ರೀಮತಿ ಭಾಗ್ಯ ಕೌಶಿಕ್ ಉಪಾಧ್ಯಕ್ಷರು ಮೆಣಸೆ ಗ್ರಾಂ.ಪ, ಅಶೋಕ್ ಗ್ರಾಂ.ಪ ಸದಸ್ಯರು, ಉಪಸ್ತಿತರಿದ್ದರು.

Categories
ಮಂಗಳೂರು

ಕಟಪಾಡಿಯಲ್ಲಿ ಎರಡು ದಿನದ ಹಲಸು ಮೇಳ!

ಕಟಪಾಡಿಯಲ್ಲಿ ಎರಡು ದಿನದ ಹಲಸು ಮೇಳ!

– ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಆಯೋಜನೆ
– ಹಲಸು ಖಾದ್ಯ ಸೇರಿ ಅನೇಕ ಆಕರ್ಷಣೆ

NAMMUR EXPRESS NEWS
ಮಂಗಳೂರು : ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು( ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ) ಇದರ ಸಹಯೋಗದೊಂದಿಗೆದ್ವಿತೀಯ ವರ್ಷದ ಹಲಸುಮೇಳ 2024 ಜೂನ್ 22-23 ರಂದು ನಡೆಯುತ್ತಿದೆ.
9.00 ಬೆಳಿಗ್ಗೆ ಯಿಂದ 9.00 ರಾತ್ರಿಯವರೆಗೆ ಎಸ್.ವಿ.ಎಸ್ ಹೈಸ್ಕೂಲ್, ಕಟಪಾಡಿ, ಉಡುಪಿಯಲ್ಲಿ ಹಲಸಿನ ಮೇಳ ನಡೆಯುತ್ತಿದೆ.

ಹಲಸಿನ ಹಣ್ಣಿನ ವಿವಿಧ ಬಗೆಯ ವಸ್ತುಗಳು ಹಾಗೆ ಹೀಗೆ ತಿನಿಸುಗಳು ಕೂಡ ಇಲ್ಲಿ ಲಭ್ಯವಿದೆ. ವಿವಿಧ ಬಗೆಯ ಹಲಸಿನ ಹಣ್ಣಿನ ಮಾರಾಟ, ಆಯುರ್ವೇದಿಕ್ ಗಿಡಮೂಲಿಕೆ ಬಳಸಿ ತಯಾರಿಸಲಾದ ವಸ್ತುಗಳು, ಶುದ್ಧವಾದ ಅಂತಹ ಜೇನುತುಪ್ಪ, ಸ್ವದೇಶಿ ಖಾದಿ ಬಟ್ಟೆಗಳು ಸೀರೆಗಳು, ಪರಿಸರ ಸ್ನೇಹಿ ಉತ್ಪನ್ನಗಳು, ಅಲಂಕಾರಿಕ ಗಿಡಗಳು ತೆಂಗಿನ ಗಿಡಗಳು, ಗೋ ಉತ್ಪನ್ನಗಳು, ಸಾವಯವ ಗೊಬ್ಬರ ವಿವಿಧ ಬಗೆಯ ಗಿಡಗಳು, ದೇಸಿ ತರಕಾರಿ ಬೀಜ, ಆಯುರ್ವೇದಿಕ್ ಉತ್ಪನ್ನಗಳು ಹಾಗೂ ಇನ್ನಿತರ ಸಾವಯವ ಉತ್ಪನ್ನಗಳು ಇದ್ದವು ಹಾಗೆಯೇ ಅನೇಕ ವಸ್ತುಗಳನ್ನು ಇಲ್ಲಿರುವಂತಹ ಜನರು ಪಡೆದುಕೊಳ್ಳಲು ಮುಂದಾಗಿದ್ದರು.

ಹಲಸಿನ ಖಾದ್ಯಕ್ಕೆ ಡಿಮ್ಯಾಂಡ್ ಡಿಮ್ಯಾಂಡ್!

ಹಲಸಿನ ಖಾದ್ಯಗಳಾದ ಹಲಸಿನ ಹೋಳಿಗೆ, ಹಲ್ವಾ, ಚಿಪ್ಸ್, ಮಾಂಬಳ, ಹಲಸಿನ ಗಟ್ಟಿ, ಐಸ್ ಕ್ರೀಮ್, ಮಿಲ್ಕ್ ಶೇಕ್, ಹಾಗೂ ಹಲಸಿನ ಹಣ್ಣಿನ ಕಬಾಬ್, ಗೋಬಿ ಹಾಗು ಇನ್ನಿತರ ಖಾದ್ಯಗಳು ಹಾಗೂ ವಸ್ತುಗಳು ಈ ಹಲಸಿನ ಮೇಳದಲ್ಲಿ ಬಂದಿದೆ ಸಾಕಷ್ಟು ಜನ ಈ ಹಲಸಿನ ಮೇಳದಲ್ಲಿ ಭಾಗವಹಿಸಿದ್ದು ವಿವಿಧ ಖಾದ್ಯ ಸೇವಿಸಿ ಸಂಭ್ರಮಪಟ್ಟರು.

Categories
ಕಾರ್ಕಳ

ಮೂಡುಬಿದಿರೆಯ ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್

ಮೂಡುಬಿದಿರೆಯ ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್

– ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳ ಕನಸು ನನಸಾಗಿಸುತ್ತಿರುವ ಸಂಸ್ಥೆ
– ಪ್ರಸಕ್ತ ವರ್ಷ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್

NAMMUR EXPRESS NEWS
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಾದ ನೀಟ್ ಪರೀಕ್ಷೆಯನ್ನು ಬರೆದು ಮೊದಲ ಪ್ರಯತ್ನದಲ್ಲೇ ವೈದ್ಯಕೀಯ ಸೀಟ್ ಪಡೆಯಲು ಬೇಕಾದಷ್ಟು ಅಂಕಗಳಿಸಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಪಿಯುಸಿಯ ಬೋರ್ಡ್ ಪರೀಕ್ಷೆ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಇವೆರಡನ್ನು ಒಟ್ಟಿಗೆ ಬರೆದು ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗದೇ ಇರಬಹುದು. ಮೊದಲ ಪ್ರಯತ್ನದಲ್ಲೇ ನಿಮ್ಮ ಕನಸಿನ ಕೋರ್ಸಿಗೆ ಸೀಟ್ ಪಡೆಯಲು ಅರ್ಹರಾಗಿಲ್ಲ ಎಂದಾಕ್ಷಣ ಇನ್ನು ಮುಂದೆ ನೀವು ಆತಂಕ ಪಡಬೇಕಿಲ್ಲ. ನಿಮ್ಮ ಕನಸನ್ನು ನನಸಾಗಿಸುವ ಸಲುವಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಕಾಶಿ ಎಂದು ಪ್ರಸಿದ್ದಿ ಪಡೆದಿರುವ ಮೂಡುಬಿದಿರೆಯ ಕಲ್ಲಬೆಟ್ಟುವಿನ ಪ್ರಶಾಂತ ಪರಿಸರದಲ್ಲಿ ಕಳೆದೆರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ವೈಬ್ರೆಂಟ್ ಅಕಾಡೆಮಿ ಫಾರ್ ಇನ್ನೋವೇಟಿವ್ ಲರ್ನಿಂಗ್ ಸಂಸ್ಥೆಯು ಪಿಯುಸಿ ನಂತರ ಒಂದು ವರ್ಷದ ನೀಟ್ ಲಾಂಗ್ ಟರ್ಮ್ ತರಬೇತಿ ನೀಡುವ ಮೂಲಕ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ, ಪ್ರಥಮ ನೀಟ್ ಲಾಂಗ್ ಟರ್ಮ್ ಫಲಿತಾಂಶದಲ್ಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಸಂಸ್ಥೆಯಾಗಿದೆ.

ಅನುಭವಿ ಶಿಕ್ಷಕರು ಕಟ್ಟಿ ಬೆಳೆಸಿದ ವೈಬ್ರೆಂಟ್ ಅಕಾಡೆಮಿ.!

ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಆರು ಜನ ನುರಿತ ಉಪನ್ಯಾಸಕರ ತಂಡವು 2022ರಲ್ಲಿ ವೈಬ್ರೆಂಟ್ ಅಕಾಡೆಮಿ ಫಾರ್ ಇನ್ನೊವೇಟಿವ್ ಲರ್ನಿಂಗ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಈ ಸಂಸ್ಥೆಯಲ್ಲಿಂದು ದೇಶದ ಬೇರೆ ಬೇರೆ ರಾಜ್ಯದಲ್ಲಿ ಸೇವೆ ಸಲ್ಲಿಸಿರುವ 30ಕ್ಕೂ ಹೆಚ್ಚು ವಿಷಯ ಪರಿಣಿತ ಉಪನ್ಯಾಸಕರು ಬೋಧಕರಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ. ಇವರೆಲ್ಲರೂ ಸೇರಿ, ಸರ್ಕಾರಿ ವೈದ್ಯಕೀಯ ಸೀಟ್ ಪಡೆದು ಡಾಕ್ಟರ್ ಆಗಬೇಕೆಂಬ ಹೆಬ್ಬಯಕೆಯ ವಿದ್ಯಾರ್ಥಿಗಳಿಗೆ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡುತ್ತಾ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದ್ದಾರೆ.

ಏನಿದು ನೀಟ್ ಲಾಂಗ್ ಟರ್ಮ್?

ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯ ನಂತರ ನಡೆಯುವ ವೈದ್ಯಕೀಯ ಕೋರ್ಸ್‌ನ ಪ್ರವೇಶ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಪಡೆದು ವೈದ್ಯಕೀಯ ಸೀಟ್ ಪಡೆಯುವಲ್ಲಿ ವಿಫಲರಾದಾಗ ಅಂತಹ ವಿದ್ಯಾರ್ಥಿಗಳು ಒಂದು ವರ್ಷ ತ್ಯಾಗ ಮತ್ತು ಪರಿಶ್ರಮದ ಮೂಲಕ ನೀಟ್ ಕೋಚಿಂಗ್ ಪಡೆದು ಮೆಡಿಕಲ್ ಸೀಟ್ ಪಡೆದುಕೊಳ್ಳಬಹುದಾಗಿದೆ. ಇದೇ ನೀಟ್ ಲಾಂಗ್(ದೀರ್ಘಾವಧಿ) ಟರ್ಮ್ ಕೋಚಿಂಗ್ ಅಥವಾ ನೀಟ್ ರಿಪೀಟರ್ ಬ್ಯಾಚ್.

ಲಾಂಗ್ ಟರ್ಮ್ ನೀವ್ ಕೋಚಿಂಗ್‌ನ ಅವಶ್ಯಕತೆ

ಪಿಯುಸಿ ಬೋರ್ಡ್ ಪರೀಕ್ಷೆಯ ಜೊತೆಗೆ ನೀಟ್ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಿ ಉತ್ತಮ ಬ್ಯಾಂಕ್ ಗಳಿಸಲು ಸಾಧ್ಯವಾಗದೇ ಇರಲು ಅನೇಕ ಕಾರಣಗಳಿರಬಹುದು. ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ಕುರಿತು ಸೂಕ್ತವಾದ ಮಾರ್ಗದರ್ಶನದ ಕೊರತೆ, ತಾವು ಕಲಿತ ಪಿಯು ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅವಶ್ಯಕವಾದ ತರಬೇತಿ ಮತ್ತು ಉತ್ತಮ ಶಿಕ್ಷಕರ ಕೊರತೆ, ವಿದ್ಯಾರ್ಥಿಗೆ ವಿಷಯದ ಬಗ್ಗೆ ಇರುವ ಗೊಂದಲ, ಕಲಿಕೆಗೆ ಪೂರಕವಾದ ವಾತಾವರಣದ ಕೊರತೆ, ಆರೋಗ್ಯದ ಸಮಸ್ಯೆ ಅಥವಾ ಪ್ರೌಢಶಾಲಾ ಮತ್ತು ಕಾಲೇಜು ಹಂತದಲ್ಲಿ ಉತ್ತಮ ಮೂಲಭೂತ ಜ್ಞಾನ ಲಭಿಸದೇ ಇರುವುದು ಹೀಗೆ ಮೊದಲಾದ ಕಾರಣಗಳಿರಬಹುದು. ಇವೆಲ್ಲದಕ್ಕೂ ಪರಿಹಾರವನ್ನು ಒದಗಿಸಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತಮ್ಮ ನಿರ್ದಿಷ್ಟ ಉದ್ದೇಶವನ್ನು ಸಾಧಿಸಲು ಸಹಕಾರಿಯಾಗುವಂತೆ ವೈಬ್ರಂಟ್ ಲಾಂಗ್ ಟರ್ಮ್ ಕೋಚಿಂಗ್ ಅತ್ಯಂತ ಅವಶ್ಯಕವಾಗಿದೆ.

ವೈಬ್ರಂಟ್ ನೀಟ್ ಲಾಂಗ್ ಟರ್ಮ್‌ನ ವಿಶೇಷತೆ

ನೀಟ್ ರಿಪೀಟರ್ಸ್ ವಿದ್ಯಾರ್ಥಿಗಳ ಮನೋವಿಜ್ಞಾನ ಹಾಗೂ ಅವರ
ಬೇಡಿಕೆಗಳ ಸ್ವರೂಪವನ್ನು ಅರಿತು ಅವರಿಗೆ ಬೋಧಿಸಿದ ನುರಿತ ಅನುಭವುಳ್ಳವರು ಹಾಗೂ ಪ್ರತಿಷ್ಠಿತ ಬೇರೆ ಬೇರೆ ಸಂಸ್ಥೆಗಳಲ್ಲಿ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಉಪನ್ಯಾಸಕರು ಇಲ್ಲಿದ್ದಾರೆ. ಫಿಸಿಕ್ಸ್ 400 ಗಂಟೆ, ಕೆಮಿಸ್ಟ್ರಿ 300 ಗಂಟೆ. ಮತ್ತು ಬಯಾಲಜಿಗೆ 300 ಗಂಟೆಯನ್ನಿರಿಸಲಾಗಿದೆ. ಪ್ರತಿಯೊಂದು ವಿಷಯಕ್ಕೂ 25 ವರ್ಷಕ್ಕೂ ಹೆಚ್ಚು ಬೋಧನಾನುಭವ ಇರುವ ಸುಮಾರು 30 ಉಪನ್ಯಾಸಕರ ತಂಡವೇ ಇದೆ. ದಿನಂಪ್ರತಿ ಅನುಭವಿ ಉಪನ್ಯಾಸಕರ ಸಮ್ಮುಖದಲ್ಲಿ 5 ಗಂಟೆಗಳ ಸ್ಟಡಿ ಹವರ್, 60ಕ್ಕೂ ಹೆಚ್ಚು ಪೂರ್ಣಪಠ್ಯದ ಟೆಸ್ಟ್ ಗಳು, ನಮ್ಮ ಸಂಸ್ಥೆಯದೇ ಅಪ್ ಟು ಡೇಟ್ ಸ್ಟಡಿ ಮೆಟೀರಿಯಲ್ಸ್, ಅಪರಿಮಿತ ಕೊಶ್ಚನ್ ಬ್ಯಾಂಕ್ ಕೂಡ ಲಭ್ಯವಿದೆ. ಅಲ್ಲದೆಯೇ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಕೊಠಡಿಗಳಲ್ಲಿ ಕೋಚಿಂಗ್ ವ್ಯವಸ್ಥೆಯನ್ನು ನೀಡಲಾಗುತ್ತದೆ.

ಉತ್ತಮ ಗುಣಮಟ್ಟದ ತರಬೇತಿಗೆ ನಮ್ಮ ಫಲಿತಾಂಶಗಳೇ ಸಾಕ್ಷಿ!

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್: 2023-24ರಲ್ಲಿ ನಮ್ಮ ಸಂಸ್ಥೆಯಿಂದ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಮಾಡಿರುತ್ತಾರೆ. ಈವರಗಿನ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ವೈಬ್ರಂಟ್ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಸಂಸ್ಥೆಗೆ ಸೇರಿದ ನಂತರ ಸರ್ಕಾರಿ ವೈದ್ಯಕೀಯ ಸೀಟ್ ಪಡೆಯಲು ಬೇಕಾಗುವಷ್ಟು ಅಂಕಗಳನ್ನು ಗಳಿಸಿರುತ್ತಾರೆ. ಸಂಸ್ಥೆಯಿಂದ ಪರೀಕ್ಷೆ ಬರೆದ 2001ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪಡೆಯಲು ಅರ್ಹರಾಗಿದ್ದಾರೆ. ಕಳೆದ ವರ್ಷ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಸೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು:

ಸಂಸ್ಥೆಯಿಂದ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಪಡೆದು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಪ್ರಜ್ವಲ್ 662(509), ಜಿ.ಟಿ. ಸೃಷ್ಟಿ ಕೋಟಿ 661(388), ಬೆನಕ ಟಿ.ಎಸ್ 648(210), ಸೂರಜ್ ಎಂ ಸಾಗರ್ 643(493), ಐರೋಲ್ ಡೀನ ರೋಡ್ರಿಗನ್ 642(443), ಸುಜಯ್ ಪಿ ವಿ 632, ಅಕ್ಷತಾ ಪಿ ಬಿರಾದರ್ 632(229), ಇ ಧನುಶ್ರೀ 631, ಎಂ ಸುಹಾಸ್ 630(347), ಕೆ ಪ್ರಗತಿ 630(347), ವಿಕಾಸ್ ಬಿ ಆರ್ 630(419), ಪ್ರೀತಮ್ ನಾಯ್ಕ್ 627(413), ಹೆಚ್‌ಎಸ್ ಪ್ರಜ್ವಲ್ 620(355), ಎನ್ಎಸ್ ಹರ್ಷಿತ್ 620(432), ವಿಶಾಲ್ ವಿ ಪಟ್ಟಣಶೆಟ್ಟಿ 617(348), ಬೀರಪ್ಪ ಎಂ.ಕೆ 615(314), ಪಿಎಸ್ ಚಂದನ್ ಕುಮಾರ್ 612(474), ಮಹಮ್ಮದ್ ರುಹೈಬ್ 611(392), ಅಶ್ವಿನ್ ಸಿ ನಾಯ್ಕ್ 609(301), ಅಭಿಷೇಕ್ ಶೇಟ್ 606(212), ಅನಿಲ್ ಕುಮಾರ್ 606(411), ಮಲ್ಲಿಕಾರ್ಜುನ್ ಜೆ. ಕಂಬಾರ್ 604(388), ಕಾರ್ತಿಕ್ ಕರೋಲಿ 600(333),650ಕ್ಕಿಂತ ಹೆಚ್ಚು ಅಂಕಗಳನ್ನು 2 ವಿದ್ಯಾರ್ಥಿಗಳು, 600ಕ್ಕಿಂತ ಹೆಚ್ಚು ಅಂಕ 22, 550ಕ್ಕಿಂತ ಹೆಚ್ಚು ಅಂಕ 80, 500ಕ್ಕಿಂತ ಹೆಚ್ಚು ಅಂಕ 156 ವಿದ್ಯಾರ್ಥಿಗಳು ಪಡೆದಿರುತ್ತಾರೆ.

ಸಂಸ್ಥೆಯಲ್ಲಿ ಜೆಇಇ ಲಾಂಗ್ ಟರ್ಮ್ ಕೋಚಿಂಗ್ ಲಭ್ಯ:

ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಾದ ನೀಟ್ ಲಾಂಗ್ ಟರ್ಮ್ ಕೋಚಿಂಗ್ ವ್ಯವಸ್ಥೆಯೊಂದಿಗೆ ದೇಶದ ಪ್ರತಿಷ್ಠಿತ IIT ಮತ್ತು NIT ಪ್ರವೇಶ ಪರೀಕ್ಷೆಯಾದ ಜೆಇಇ ಪರೀಕ್ಷೆಗೆ ಸಂಪೂರ್ಣ ಪ್ರತ್ಯೇಕವಾದ ಒಂದು ವರ್ಷದ ಜೆಇಇ ದೀರ್ಘಾವಧಿ ಕೋಚಿಂಗ್ ವ್ಯವಸ್ಥೆಯು ಲಭ್ಯವಿದೆ.

ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ

ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಸುಸಜ್ಜಿತವಾದ ಮನೆಯ ವಾತಾವರಣದ ವಿಶಾಲವಾದ ಹಾಸ್ಟೆಲ್‌ಗಳು, ಪರಿಶುದ್ಧ ಮತ್ತು ಶುಚಿ, ರುಚಿಯಾದ ಆರೋಗ್ಯಕರವಾದ ಆಹಾರ ವ್ಯವಸ್ಥೆ, ಅನುಭವಿ ವಾರ್ಡನ್ಸ್ ಮತ್ತು ಕ್ಷೇಮಪಾಲನಾಧಿಕಾರಿಗಳು, ದಿನವೂ ವಾಸಸ್ಥಾನದ ನಿರ್ವಹಣೆ, ನಿರಂತರ ಬಿಸಿ ನೀರಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7411417028, 7411649881

Categories
ರಾಜ್ಯ

ನಟ ದರ್ಶನ್ ಮತ್ತು ತಂಡಕ್ಕೆ ಜು.4ರವರೆಗೆ ಜೈಲು!

ನಟ ದರ್ಶನ್ ಮತ್ತು ತಂಡಕ್ಕೆ ಜು.4ರವರೆಗೆ ಜೈಲು!

– ರಾಜ್ಯದ ಇತಿಹಾಸದಲ್ಲೇ ಮಹತ್ವದ ತನಿಖೆ
– ತನಿಖೆಗಾಗಿ 3 ಬಾರಿ ಕಸ್ಟಡಿಗೆ ಈಗ ಸಂಕಷ್ಟ

NAMMUR EXPRESS NEWS
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ ನಾಲ್ವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಈ ಹಿನ್ನೆಲೆ ದರ್ಶನ್ & ಗ್ಯಾಂಗ್ ನ್ನು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಅವರ ಆಪ್ತರಾದ ವಿನಯ್, ಪ್ರದೋಶ್, ಧನರಾಜ್ ಅವರನ್ನು ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ಬಾರಿ ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಶೆಡ್ ನಲ್ಲಿ ಬರ್ಬರವಾಗಿ ಕೊಂದು ನಂತರ ಶವ ಬಿಸಾಡಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಿ ಬಟ್ಟೆ, ಹಲ್ಲೆಗೆ ಬಳಸಿದ್ದ ಲಾಠಿ, ಶವ ಬಿಸಾಡಲು ಬಳಸಿದ್ದ ಕಾರು, ಆರೋಪಿಗಳ ಮೊಬೈಲ್, ಶೂ, ಮರದ ಪೀಸುಗಳು ಸೇರಿ ಸುಮಾರು 139 ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣದಲ್ಲಿ ಇದುವರೆಗೆ 28 ಕಡೆ ಸ್ಥಳ ಮಹಜರು ಮಾಡಲಾಗಿದೆ, ದರ್ಶನ್ ಸೇರಿ ಎಲ್ಲಾ ಆರೋಪಿಗಳ ನಿವಾಸ ಹಾಗೂ ಬೇರೆ ಕಡೆ 11 ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ . ಪಾರ್ಟಿ ಮಾಡಿದ್ದ ಸ್ಟೋನಿಬ್ರೂಕ್ ರೆಸ್ಟೋರೆಂಟ್ ಸೇರಿ ಹಲವು ಕಡೆ ಮಹಜರು ಮಾಡಲಾಗಿದೆ.

Categories
ಬೆಂಗಳೂರು

ನಟ ದರ್ಶನ್ ಮತ್ತು ತಂಡಕ್ಕೆ ಜು.4ರವರೆಗೆ ಜೈಲು!

ನಟ ದರ್ಶನ್ ಮತ್ತು ತಂಡಕ್ಕೆ ಜು.4ರವರೆಗೆ ಜೈಲು!

– ರಾಜ್ಯದ ಇತಿಹಾಸದಲ್ಲೇ ಮಹತ್ವದ ತನಿಖೆ
– ತನಿಖೆಗಾಗಿ 3 ಬಾರಿ ಕಸ್ಟಡಿಗೆ ಈಗ ಸಂಕಷ್ಟ

NAMMUR EXPRESS NEWS

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ ನಾಲ್ವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಈ ಹಿನ್ನೆಲೆ ದರ್ಶನ್ & ಗ್ಯಾಂಗ್ ನ್ನು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಅವರ ಆಪ್ತರಾದ ವಿನಯ್, ಪ್ರದೋಶ್, ಧನರಾಜ್ ಅವರನ್ನು ಪೊಲೀಸರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗಾಗಲೇ ಪ್ರಕರಣದ ತನಿಖೆಗಾಗಿ ಮೂರು ಬಾರಿ ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಶೆಡ್ ನಲ್ಲಿ ಬರ್ಬರವಾಗಿ ಕೊಂದು ನಂತರ ಶವ ಬಿಸಾಡಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಿ ಬಟ್ಟೆ, ಹಲ್ಲೆಗೆ ಬಳಸಿದ್ದ ಲಾಠಿ, ಶವ ಬಿಸಾಡಲು ಬಳಸಿದ್ದ ಕಾರು, ಆರೋಪಿಗಳ ಮೊಬೈಲ್, ಶೂ, ಮರದ ಪೀಸುಗಳು ಸೇರಿ ಸುಮಾರು 139 ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ 28 ಕಡೆ ಸ್ಥಳ ಮಹಜರು ಮಾಡಲಾಗಿದೆ, ದರ್ಶನ್ ಸೇರಿ ಎಲ್ಲಾ ಆರೋಪಿಗಳ ನಿವಾಸ ಹಾಗೂ ಬೇರೆ ಕಡೆ 11 ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ . ಪಾರ್ಟಿ ಮಾಡಿದ್ದ ಸ್ಟೋನಿಬ್ರೂಕ್ ರೆಸ್ಟೋರೆಂಟ್ ಸೇರಿ ಹಲವು ಕಡೆ ಮಹಜರು ಮಾಡಲಾಗಿದೆ.