Categories
ಶಿವಮೊಗ್ಗ

ಶಿವಮೊಗ್ಗದಲ್ಲಿ2 ತಿಂಗಳ ಹಿಂದೆ ಎಚ್‌ಎಂಪಿವಿ ವೈರಸ್‌ ಪತ್ತೆ

ಶಿವಮೊಗ್ಗದಲ್ಲಿ2 ತಿಂಗಳ ಹಿಂದೆ ಎಚ್‌ಎಂಪಿವಿ ವೈರಸ್‌ ಪತ್ತೆ
– ಸೋಂಕು ದೃಢಪಟ್ಟ ಐದು ಜನ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖ
– ಇದು ಜೀವಕ್ಕೆ ಮಾರಕವಾದ ವೈರಾಣು ಅಲ್ಲ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ: ಡಾ. ಧನಂಜಯ್ ಸರ್ಜಿ

NAMMUR EXPRESS NEWS
ಶಿವಮೊಗ್ಗ : ಚೀನಾದಲ್ಲಿ ತಲ್ಲಣ ಮೂಡಿಸಿರುವ ಹ್ಯೂಮನ್‌ ಮೆಟಾಪ್‌ನ್ಯೂಮೊವೈರಸ್‌ (ಎಚ್‌ಎಂಪಿವಿ) ಸೋಂಕು ಜಿಲ್ಲೆಯ ಐದು ಮಕ್ಕಳಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಪತ್ತೆಯಾಗಿತ್ತು ಎಂದು ಮಕ್ಕಳ ತಜ್ಞ ವೈದ್ಯ, ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು. ಆರು ತಿಂಗಳಿಂದ 4 ವರ್ಷದ ಮಕ್ಕಳಲ್ಲಿ ಸಾಮಾನ್ಯ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡಾಗ ಅವರ ಸ್ವ್ಯಾಬ್ ಮಾದರಿಯನ್ನು ಇನ್‌ಫ್ಲುಯೆಂಜಾ ಪರೀಕ್ಷೆಗೆಂದು ಕಳುಹಿಸಿದಾಗ ಎಚ್‌ಎಂಪಿವಿ ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಸೋಂಕು ದೃಢಪಟ್ಟ ಐದು ಜನ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದು ಜೀವಕ್ಕೆ ಮಾರಕವಾದ ವೈರಾಣು ಅಲ್ಲ. ಹೀಗಾಗಿ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಅದರ ಬದಲು ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ ರೋಗ ನಿರೋಧ ಶಕ್ತಿ ಕಡಿಮೆ ಇರುವ ಮಕ್ಕಳು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು, ಹಿರಿಯರು ಎಚ್ಚರಿಕೆ ವಹಿಸಬೇಕು. ಸೋಂಕು ದೃಢಪಟ್ಟವರು ಫೇಸ್‌ ಮಾಸ್ಕ್‌ ಬಳಸಿದರೆ ಸಾಕು. ಗಾಬರಿಯಾಗುವ ಅವಶ್ಯಕತೆ ಇಲ್ಲ’ ಎಂದರು.

– ಎಚ್‌ಎಂಪಿವಿಯ ಲಕ್ಷಣಗಳು :

ಕೆಮ್ಮು, ಜ್ವರ, ಮೂಗು ಸೋರುವಿಕೆ/ ಉಸಿರುಗಟ್ಟುವಿಕೆ, ಗಂಟಲು ಕೆರೆತ, ಉಬ್ಬಸ, ಉಸಿರಾಟದ ತೊಂದರೆ, ನಿಮ್ಮ ದೇಹದಾದ್ಯಂತ ದದ್ದುಗಳು, ಎಚ್‌ಎಂಪಿವಿ ಹೊಂದಿರುವವರೊಂದಿಗೆ ನೇರ ಸಂಪರ್ಕದಿಂದ ಅಥವಾ ವೈರಸ್‌ನಿಂದ ಕಲುಷಿತಗೊಂಡ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಹರಡುತ್ತದೆ. ಎಚ್‌ಎಂಪಿವಿ ಇರುವ ವ್ಯಕ್ತಿ ಕೆಮ್ಮು, ಸೀನುವಿಕೆ ಕೈ ಕುಲುಕುವುದು, ತಬ್ಬಿಕೊಳ್ಳುವುದು ಅಥವಾ ಚುಂಬಿಸುವುದು, ಫೋನ್‌ಗಳು, ಡೋರ್‌ ಹ್ಯಾಂಡಲ್‌ಗಳು, ಕೀ-ಬೋರ್ಡ್‌ಗಳು ಅಥವಾ ಆಟಿಕೆಗಳಂತಹ ಮೇಲೈಗಳು ಅಥವಾ ವಸ್ತುಗಳನ್ನು ಸ್ಪರ್ಶಿಸುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

– ಎಚ್‌ಎಂಪಿವಿ ತಡೆಗಟ್ಟುವ ವಿಧಾನ:

ಮಾಸ್ಕ್ ಧರಿಸುವುದು, ಆಗಾಗೆ ಕೈ ತೊಳೆಯುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಸೊಂಕಿನ ಅಪಾಯವನ್ನು ಕಡಿಮೆ ಮಾಡಲು ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು. ಎಚ್‌ಎಂಪಿವಿ ಚಿಕಿತ್ಸೆಗಾಗಿ ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಬೇಕು.

– ಎಚ್‌ಎಂಪಿವಿ ಮುನ್ನಚ್ಚರಿಕೆ ಕ್ರಮಗಳು:

ಶೀತ, ನೆಗಡಿ, ಕೆಮ್ಮು ಇದ್ದರೆ ಕರವಸ್ತ್ರ ಅಥವಾ ಮಾಸ್ಕ್‌ನಿಂದ ಮೂಗು, ಬಾಯಿಯನ್ನು ಮುಚ್ಚಿಕೊಳ್ಳಬೇಕು. ಆಗಾಗೆ ಸೋಪ್‌ ಅಥವಾ ಸ್ಯಾನಿಟೈಸರ್‌ ಬಳಸಿ ಕೈ ಸ್ವಚ್ಛಗೊಳಿಸಬೇಕು. ಹೆಚ್ಚಿನ ಜನರೊಂದಿಗೆ ಗುಂಪು ಸೇರಬಾರದು. ಜನದಟ್ಟಣೆ ಹೆಚ್ಚಾಗಿರುವ ಜಾಗಗಳಲ್ಲಿಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನವಶ್ಯಕವಾಗಿ ಮನೆಯಿಂದ ಹೊರಬರಬಾರದು. ಹೆಚ್ಚು ನೀರು ಕುಡಿಯಬೇಕು ಮತ್ತು ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸಬೇಕು.

– ಏನು ಮಾಡಬಾರದು?

ಬಳಸಿದ ಕರವಸ್ತ್ರ/ ಮಾಸ್ಕನ್ನು ಬಳಸಬಾರದು, ಶೀತ, ನೆಗಡಿ, ಕೆಮ್ಮು ಇರುವವರಿಂದ ಅಂತರ ಕಾಯ್ದುಕೊಳ್ಳಬೇಕು, ಸದಾ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು, ಸಾರ್ವಜನಿಕ ಸ್ಥಳಗಳಲ್ಲಿಉಗುಳಬಾರದು, ವೈದ್ಯರನ್ನು ಸಂಪರ್ಕಿಸದೇ ಸ್ವ-ಔಷಧಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

Categories
ರಾಜ್ಯ

ಎಂಟು ಜಿಲ್ಲೆಯಲ್ಲಿ ಎಂಟು ಅಧಿಕಾರಿಗಳ ಮೇಲೆ ಧಿಡೀರ್ ಲೋಕಾಯುಕ್ತ ದಾಳಿ!

ಎಂಟು ಜಿಲ್ಲೆಯಲ್ಲಿ ಎಂಟು ಅಧಿಕಾರಿಗಳ ಮೇಲೆ ಧಿಡೀರ್ ಲೋಕಾಯುಕ್ತ ದಾಳಿ!
– ಅಕ್ರಮ ಆಸ್ತಿ ಪ್ರಕರಣಗಳ ತನಿಖೆಗೆ ಕಾರ್ಯಾಚರಣೆ
– 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ

NAMMUR EXPRESS NEWS
ಬೆಂಗಳೂರು: ಎಂಟು ಜಿಲ್ಲೆಗಳ ಎಂಟು ಸರ್ಕಾರಿ ಅಧಿಕಾರಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ಜ. 8ರಂದು ಏಕಕಾಲಕ್ಕೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಪ್ರಕರಣಗಳ ತನಿಖೆಗೆ ಭಾಗವಾಗಿರುವ ಕಾರ್ಯಾಚರಣೆಯು ಈ ಅಧಿಕಾರಿಗಳಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ. ಲೋಕಾಯುಕ್ತ ಮೂಲಗಳ ಪ್ರಕಾರ ಬೆಂಗಳೂರು, ಮಂಡ್ಯ, ಬೀದ‌ರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ದಾಳಿ ನಡೆಯುತ್ತಿದೆ. ಶೋಭಾ – ಜಂಟಿ ಆಯುಕ್ತರು, ಬೆಂಗಳೂರು ಸಾರಿಗೆ ಇಲಾಖೆ; ಎಸ್ ಎನ್ ಉಮೇಶ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕಡೂರು; ರವೀಂದ್ರ – ನಿರೀಕ್ಷಕರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬೀದ‌ರ್, ಪ್ರಕಾಶ ಶ್ರೀಧರ ಗಾಯಕವಾಡ – ತಹಶೀಲ್ದಾರ್, ಖಾನಾಪುರ; ಎಸ್‌ ರಾಜು – ನಿವೃತ್ತ ಆರ್ಟಿಒ ಅಧಿಕಾರಿ, ತುಮಕೂರು; ಹುಚ್ಚೇಶ್ ಅಲಿಯಾಸ್ ಹುಚ್ಚಪ್ಪ – ಸಹಾಯಕ ಕಾರ್ಯಾಲಯದಲ್ಲಿ, ಗದಗಪಾಲ; ಆರ್ ಎಚ್ ಲೋಕೇಶ್- ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆ, ಬಳ್ಳಾರಿ; ಮತ್ತು ಹುಲಿರಾಜ – ಜೂನಿಯರ್ ಇಂಜಿನಿಯರ್ (ಇಟಿಕ್ಲಿಕ್), ರಾಯಚೂರು ಇವರಿಗೆ ಆಸ್ತಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Categories
ತೀರ್ಥಹಳ್ಳಿ

ತುಳುನಾಡ ಸಿರಿ ಸೊಸೈಟಿ ಯಶಸ್ವಿ ಉಚಿತ ಶ್ರವಣ ತಪಾಸಣೆ

ತುಳುನಾಡ ಸಿರಿ ಸೊಸೈಟಿ ಯಶಸ್ವಿ ಉಚಿತ ಶ್ರವಣ ತಪಾಸಣೆ
– 50ಕ್ಕೂ ಹೆಚ್ಚು ಮಂದಿಯಿಂದ ತಪಾಸಣೆ: ಎಲ್ಲರಿಗೂ ಸಮಾಲೋಚನೆ
– ಮತ್ತೆ ಮಾದರಿಯಾದ ತುಳುನಾಡ ಸಿರಿ ಸಹಕಾರಿ

ಪತ್ರಕರ್ತರ ಸಂಘದಿಂದ ದಿ. ಲಕ್ಷ್ಮೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ

NAMMUR EXPRESS NEWS
ತೀರ್ಥಹಳ್ಳಿ: ತುಳುನಾಡ ಸಿರಿ ಸೌಹಾರ್ದ ಸಹಕಾರಿ, ಮತ್ತು ತೀರ್ಥಹಳ್ಳಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ತೀರ್ಥಹಳ್ಳಿ ಇವರುಗಳ ವತಿಯಿಂದ ಸೊಪ್ಪುಗುಡ್ಡೆ ಮಾರಿಕಾಂಬಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಚಿತ ಶ್ರವಣ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರ ಉದ್ಘಾಟನೆಗೊಳಿಸಿ ಮಾತನಾಡಿದ ತುಳುನಾಡ ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಅರೋಗ್ಯ ಸೇವೆ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತುಳುನಾಡ ಸಿರಿ ಸಹಕಾರಿ ನಿರಂತರವಾಗಿ ಉಚಿತ ಅರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಯಾವುದೇ ಸಂಘ ಸಂಸ್ಥೆ ಬೆಳೆದು ನಿಲ್ಲಲು ಜನರ ವಿಶ್ವಾಸ ಮುಖ್ಯ ಹಾಗೆ ಬೆಳೆದಾಗ ಕೇವಲ ಲಾಭದ ಕಡೆ ನೋಡದೆ ಜನಪರವಾಗಿ ಕೂಡ ಯೋಚಿಸಬೇಕು ಎನ್ನುವುದು ನಮ್ಮ ಧ್ಯೇಯ. ಈ ಶಿಬಿರಕ್ಕೆ ದೂರದ ದಾವಣಗೆರೆಯಿಂದ ಕೂಡ ಆಸಕ್ತಿಯುಳ್ಳವರು ಬಂದಿರುವುದು ಶಿಬಿರ ಎಷ್ಟು ಮಹತ್ವದ್ದು ಎನ್ನುವುದನ್ನು ಮನದಟ್ಟು ಮಾಡಿದೆ ಮತ್ತು ನಮ್ಮೆಲ್ಲರಲ್ಲಿ ಸಾರ್ಥಕ ಭಾವನೆ ಮೂಡಿಸಿದೆ ಮುಂದು ಈ ರೀತಿ ಜನಪರ ಕಾರ್ಯಕ್ರಮಗಳು ನಿರಂತರವಾಗಿ ತುಳುನಾಡ ಸಿರಿ ಸಹಕಾರಿಯಿಂದ ಮೂಡಿ ಬರಲಿವೆ ಎಂದು ನುಡಿದರು
ಕಾರ್ಯಕ್ರಮದಲ್ಲಿ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು,ತುಳುನಾಡ ಸಿರಿ ಸೊಸೈಟಿ ಉಪಾಧ್ಯಕ್ಷ ವೈ ಗಣಪತಿ ನಿರ್ದೇಶಕರಾದ ವಿಶಾಲ್ ಕುಮಾರ್, ಸುರೇಶ್ ಶೆಟ್ಟಿ, ಬೆಟಮಕ್ಕಿ ರಾಘವೇಂದ್ರ ಶೆಟ್ಟಿ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವಿನಿ, ರಾಘವೇಂದ್ರ ಭಟ್, ವಿಶ್ವಹರ್ತ ಆಸ್ಪತ್ರೆ ತಜ್ಞ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಶ್ರವಣ ತಜ್ಞರು, ಉಡುಪಿಯ ವಿಶ್ವ ಹರ್ತ ಶ್ರವಣ ಆಸ್ಪತ್ರೆಯ ಲವಕುಮಾರ್ ಇದ್ದರು. ಸಮಯದ ಅಭಾವದ ಕಾರಣ ಮೂವತ್ತು ಮಂದಿಗೆ ಮಾತ್ರ ತಪಾಸಣೆಗೆ ಅವಕಾಶ ಕಲ್ಪಿಸಿಲಾಗಿತ್ತು ಆದರೆ ಅದಕ್ಕೂ ಹೆಚ್ಚಿನ ಮಂದಿ ಶಿಬಿರದ ಪ್ರಯೋಜನ ಪಡೆದರು.

ಪತ್ರಕರ್ತರ ಸಂಘದಿಂದ ದಿ. ಲಕ್ಷ್ಮೀಶ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ

ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇತ್ತೀಚಿಗೆ ನಿಧನರಾದ ಲಕ್ಷ್ಮೀಶ್ ಪತ್ರಿಕೆ ಸಂಪಾದಕರು, ಹಿರಿಯ ಪತ್ರಕರ್ತರು ಆದ ಲಕ್ಷ್ಮೀಶ್ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಸಭೆ ನಡೆಯಿತು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುನ್ನೂರು ಮೋಹನ್ ಶೆಟ್ಟಿ, ಹಿರಿಯ ಪತ್ರಕರ್ತರಾದ ರಮೇಶ್ ಶೆಟ್ಟಿ, ಶಿವಾನಂದ ಕರ್ಕಿ, ಡಾನ್ ರಾಮಣ್ಣ ಶೆಟ್ಟಿ, ಮೇಗರವಳ್ಳಿ ರಾಘವೇಂದ್ರ, ಸತ್ಯನಾರಾಯಣ, ಜಗದೀಶ್ ಪ್ರಭು, ಕೃಷ್ಣಮೂರ್ತಿ, ಮನುಕುಮಾರ್, ನಿರಂಜನ್, ಗಾಯತ್ರಿ ಶೇಷಗಿರಿ, ಸಂತೋಷ್, ಪ್ರಸನ್ನ, ಪಾರ್ಥ, ಕೃಷ್ಣಮೂರ್ತಿ ನಮ್ಮೂರ್ ಎಕ್ಸ್ ಪ್ರೆಸ್ ಸೇರಿ ಎಲ್ಲಾ ಪತ್ರಕರ್ತರು ಹಾಜರಿದ್ದರು.

Categories
ರಾಜ್ಯ

ಕರ್ನಾಟಕದ 25 ವರ್ಷದ ನಕ್ಸಲ್ ಸಾಮ್ರಾಜ್ಯ ಯುಗಾಂತ್ಯಕ್ಕೆ ಕ್ಷಣಗಣನೆ..!!??

ಕರ್ನಾಟಕದ 25 ವರ್ಷದ ನಕ್ಸಲ್ ಸಾಮ್ರಾಜ್ಯ ಯುಗಾಂತ್ಯಕ್ಕೆ ಕ್ಷಣಗಣನೆ..!!??
– ಕರ್ನಾಟಕದ ಮೋಸ್ಟ್ ವಾಂಟೆಡ್ ಸೇರಿ 6 ನಕ್ಸಲರು ಶರಣಾಗತಿ
– ಶಾಂತಿಗಾಗಿ ನಾಗರೀಕ ವೇದಿಕೆ ಮುಖಾಂತರ ಜಿಲ್ಲಾಡಳಿತದ ಮುಂದೆ ಶರಣಾಗತಿ

NAMMUR EXPRESS NEWS
ಚಿಕ್ಕಮಗಳೂರು: ದಕ್ಷಿಣ ಭಾರತದ 6 ಮೋಸ್ಟ್ ವಾಂಟೆಡ್ ನಕ್ಸಲರು ಇಂದು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಈ ಮೂಲಕ ಕರ್ನಾಟಕದ ನಕ್ಸಲ್ ಚಟುವಟಿಕೆಯ ಯುಗಾಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಾಂತಿಗಾಗಿ ನಕ್ಸಲರು ಶಾಂತಿಗಾಗಿ ನಾಗರೀಕ ವೇದಿಕೆಗೆ ಪತ್ರ ಬರೆದಿದ್ದು ಅದರಂತೆ ಶರಣಾದ ನಕ್ಸಲರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಶಾಂತಿಗಾಗಿ ನಾಗರೀಕ ವೇದಿಕೆ ರಾಜ್ಯಸರ್ಕಾರ ಹಾಗೂ ಗೃಹ ಇಲಾಖೆಗೆ ಮನವಿ ಮಾಡಿದೆ. ನಕ್ಸಲರ ಶರಣಾಗತಿ ಸಂಬಂಧ ಸರ್ಕಾರ ಒಪ್ಪಿಗೆ ಸೂಚಿಸಿ,ಎಲ್ಲ ಪ್ರಯಕ್ರಿಯೆ ಪೂರ್ಣಗೊಳಿಸಿದೆ ಎನ್ನಲಾಗಿದೆ. ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ಬಿ.ಟಿ ಲಲಿತಾ ನಾಯಕ್ ಸಮ್ಮುಖದಲ್ಲಿ ಕರ್ನಾಟಕದ ನಕ್ಸಲ್ ತುಂಗಾದಳದ ನಕ್ಸಲ್ ನಾಯಕಿ ಮುಂಡುಗಾರು ಲತಾ,ವನಜಾಕ್ಷಿ,ಸುಂದರಿ,ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ,ಆಂಧ್ರಪ್ರದೇಶದ ಕೆ.ವಸಂತ್,ಕೇರಳದ ಮಾರಪ್ಪ ಆರೋಲಿ ಇಂದು 12 ಗಂಟೆಗೆ ಜಿಲ್ಲಾಡಳಿತ ಮುಂದೆ ಶರಣಾಗಲಿರೋ ನಕ್ಸಲರು. ನಕ್ಸಲರ ಶರಣಾಗತಿ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದ್ದು,ಜೊತೆಗೆ ಸೆಂಟ್ರಲ್ ಇಂಟೆಲಿಜೆನ್ಸ್ ತಂಡ ಕೂಡ ಅಲರ್ಟ್ ಆಗಿ ಮಾಹಿತಿ ಕಲೆ ಹಾಕಿದೆ.

ಶರಣಾಗೋ ನಕ್ಸಲರ ಬೇಡಿಕೆಗಳೇನು..!??
– ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಗೌರವಯುತ ಆಗಿರಬೇಕು.
– ಶರಣಾಗತಿ ಬಳಿಕ ಜೈಲುಗಳಲ್ಲಿ ಕೊಳೆಯುವಂತೆ ಆಗಬಾರದು.
– ಮೊಕದ್ದಮೆಗಳು ಒಂದೇ ಕೋರ್ಟ್‌ನಲ್ಲಿ ತ್ವರಿತ ವಿಚಾರಣೆ ಆಗಬೇಕು.
– ಶರಣಾದವರ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು.
– ಅತಂತ್ರ ಬದುಕು ಕೊನೆಗಾಣಿಸಿ ಸುಭದ್ರಗೊಳಿಸಬೇಕು.
– ಕರ್ನಾಟಕ, ಕೇರಳ, ತಮಿಳುನಾಡು ನಮ್ಮ ಬೇಡಿಕೆಯನ್ನು ಒಪ್ಪಬೇಕು

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕನ ಆಶೀರ್ವಾದದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವ ದಿನವಾಗಿರುತ್ತದೆ. ಇಂದು ಕುಟುಂಬದ ಯಾವುದೇ ಸದಸ್ಯರ ಆರೋಗ್ಯದಲ್ಲಿ ಏನಾದರೂ ತೊಂದರೆಯಾದರೆ, ಅದಕ್ಕಾಗಿ ನೀವು ಹೆಚ್ಚು ಓಡಬೇಕಾಗುತ್ತದೆ. ನಿಮ್ಮ ಯಾವುದೇ ಕಾನೂನು ವಿಷಯವು ನಿಮಗೆ ತಲೆನೋವಾಗಿ ಪರಿಣಮಿಸುತ್ತದೆ, ಏಕೆಂದರೆ ನೀವು ದೀರ್ಘಕಾಲ ಅದರಲ್ಲಿ ನಿರ್ಲಕ್ಷ್ಯ ವಹಿಸಿದ್ದೀರಿ.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಇಂದು ಮಹತ್ವದ ದಿನವಾಗಲಿದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಕೆಲವು ದೊಡ್ಡ ಸಾಧನೆಗಳನ್ನು ಪಡೆಯಬಹುದು. ನಿಮ್ಮ ಭುಜದ ಮೇಲೆ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ನಿಮ್ಮ ಜೀವನ ಸಂಗಾತಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾರೆ. ಕುಟುಂಬದ ಯಾವುದೇ ಸದಸ್ಯರೊಂದಿಗೆ ಯಾವುದೇ ಘರ್ಷಣೆ ನಡೆಯುತ್ತಿದ್ದರೆ, ಅದೂ ದೂರವಾಗುತ್ತದೆ. ನಿಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರು ನಿಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ಸಹಾಯ ಮಾಡುತ್ತಾರೆ.

** ಮಿಥುನ ರಾಶಿ :
ಇಂದು ನಿಮಗೆ ಶುಭ ದಿನವಾಗಲಿದೆ. ಇಂದು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ವೈವಾಹಿಕ ಜೀವನದಲ್ಲಿ ಸಂತೋಷದ ಸಮೃದ್ಧಿ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ಆಲೋಚನೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ನೀವು ಕೆಲಸಕ್ಕಾಗಿ ಯಾರೊಬ್ಬರಿಂದ ಹಣವನ್ನು ಸಾಲ ಪಡೆದಿದ್ದರೆ, ಅವರು ನಿಮ್ಮನ್ನು ಮರಳಿ ಕೇಳಬಹುದು. ನಿಮ್ಮ ವ್ಯಾಪಾರವನ್ನು ವಿದೇಶಕ್ಕೆ ಕೊಂಡೊಯ್ಯುವ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರಿಗೆ, ಇಂದು ನಿಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸುವ ದಿನವಾಗಿದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಆದ್ದರಿಂದ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ ಮತ್ತು ನಿಮ್ಮ ಉಳಿತಾಯವನ್ನು ಆದ್ಯತೆಯಾಗಿ ಮಾಡಿ. ಉತ್ತಮ ಸ್ಥಿತಿಯಲ್ಲಿರಿ. ಸಾಕಷ್ಟು ವಿಶ್ರಾಂತಿ ಮತ್ತು ವ್ಯಾಯಾಮವನ್ನು ಪಡೆಯಿರಿ.

** ಸಿಂಹ ರಾಶಿ :
ಹಿಂದಿನ ಹೂಡಿಕೆಗಳಿಂದ ಆದಾಯವೂ ಹೆಚ್ಚಾಗುತ್ತದೆ. ಇಂದು ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ ಮತ್ತು ತರಾತುರಿಯಲ್ಲಿ ಏನನ್ನೂ ಮಾಡಬೇಡಿ. ಅಧಿಕೃತ ಸಭೆಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಇಂದು ನಿಮ್ಮ ಅಭಿಪ್ರಾಯವನ್ನು ಪ್ರಶಂಸಿಸಲಾಗುತ್ತದೆ. ನೀವು ಕೆಲಸದಲ್ಲಿ ಸಣ್ಣ ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.

** ಕನ್ಯಾ ರಾಶಿ :
ಇಂದು ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆಗೆ ಅವಕಾಶಗಳನ್ನು ಒದಗಿಸುತ್ತದೆ. ಇಂದು ನಿಮ್ಮ ಹಣಕಾಸಿನ ಅಂಶವೂ ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ದಿನವು ಉತ್ತಮವಾಗಿರುತ್ತದೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ. ಪ್ರೇಮ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳಿರುವುದಿಲ್ಲ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರುತ್ತದೆ, ಸಾಕಷ್ಟು ಪ್ರಮಾಣದ ನಿದ್ರೆ ಪಡೆಯಿರಿ.

** ತುಲಾ ರಾಶಿ :
ಇಂದು ನೀವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ನಿಮ್ಮ ಬಗ್ಗೆ ವಿಶ್ವಾಸವಿರಲಿ ಮತ್ತು ಕೆಲವು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಇಂದು ನೀವು ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಆದ್ದರಿಂದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಿ. ಇಂದು ನಿಮ್ಮ ಹಣಕಾಸಿನ ಅಂಶವು ಬಲವಾಗಿರುತ್ತದೆ, ಆದರೆ ಸಹೋದರ ಸಹೋದರಿಯರ ನಡುವೆ ಹಣದ ವಿವಾದಗಳು ಹೆಚ್ಚಾಗಬಹುದು.

** ವೃಶ್ಚಿಕ ರಾಶಿ :
ಇಂದು ನೀವು ಆಶಾವಾದಿಯಾಗಿರುತ್ತೀರಿ ಮತ್ತು ಹೊಸ ಸವಾಲುಗಳಿಗೆ ಸಿದ್ಧರಾಗಿರುತ್ತೀರಿ. ಇಂದು ಬದಲಾವಣೆಯ ದಿನ. ಹೊಸ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಇದು ಜೀವನದಲ್ಲಿ ಪ್ರಗತಿ ಮತ್ತು ಯಶಸ್ಸಿಗೆ ದಾರಿ ತೆರೆಯುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಖಂಡಿತವಾಗಿಯೂ ನಿಮ್ಮ ಆತ್ಮಸಾಕ್ಷಿಯನ್ನು ಆಲಿಸಿ. ಇಂದು ಪ್ರಗತಿಯ ಪೂರ್ಣ ದಿನ. ಆದ್ದರಿಂದ, ನಿಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಇರಿಸಿ ಮತ್ತು ಧನಾತ್ಮಕವಾಗಿರಿ.

** ಧನಸ್ಸು ರಾಶಿ :
ಇಂದು ನಿಮ್ಮ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಕಲೆ ಅಥವಾ ಸಂಗೀತದಂತಹ ಸೃಜನಶೀಲ ಮಾಧ್ಯಮಗಳ ಮೂಲಕ ನಿಮ್ಮನ್ನು ವ್ಯಕ್ತಪಡಿಸಲು ಹಿಂಜರಿಯದಿರಿ. ಹೊಸ ಮತ್ತು ಅಸಾಂಪ್ರದಾಯಿಕ ವ್ಯಾಯಾಮ ಅಥವಾ ಸ್ವಯಂ-ಆರೈಕೆಯನ್ನು ಪ್ರಯತ್ನಿಸಲು ಇದು ಒಳ್ಳೆಯ ಸಮಯ.

** ಮಕರ ರಾಶಿ :
ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರು ನಿಮ್ಮ ಹೊಸ ವಿಧಾನವನ್ನು ಮೆಚ್ಚಬಹುದು. ಹೊಸ ಸಾಧ್ಯತೆಗಳನ್ನು ಯೋಚಿಸಲು ಮತ್ತು ಅನ್ವೇಷಿಸಲು ಇದು ಉತ್ತಮ ಸಮಯ. ನಿಮ್ಮ ಆಲೋಚನೆಗಳು ಅನಿರೀಕ್ಷಿತ ಹಣಕಾಸಿನ ಅವಕಾಶಗಳಿಗೆ ಕಾರಣವಾಗಬಹುದು. ಹೂಡಿಕೆ ಮತ್ತು ಹಣಕಾಸಿನ ಅಪಾಯಗಳನ್ನು ತೆಗೆದುಕೊಳ್ಳುವಲ್ಲಿ ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ. ಪರ್ಯಾಯ ಆದಾಯದ ಮೂಲಗಳನ್ನು ಅನ್ವೇಷಿಸಲು ಮತ್ತು ಹಣವನ್ನು ಗಳಿಸಲು ಸೃಜನಶೀಲ ಮಾರ್ಗಗಳನ್ನು ಅನ್ವೇಷಿಸಲು ಇದು ಉತ್ತಮ.

** ಕುಂಭ ರಾಶಿ :
ಇಂದು ನಿಮಗೆ ಹಠಾತ್ ಲಾಭದ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಯಾವುದೇ ವಿಷಯದ ಬಗ್ಗೆ ನೀವು ಜಗಳವಾಡುತ್ತಿದ್ದರೆ, ಅದು ದೂರವಾಗುತ್ತದೆ. ನೀವು ಬಹಳ ಸಮಯದ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಯಾವುದೇ ಹೊಸ ಕೆಲಸದಲ್ಲಿ ನಿಮ್ಮ ತಂದೆಯ ಸಲಹೆಯನ್ನು ಪಾಲಿಸಿದರೆ ನಿಮಗೆ ಉತ್ತಮವಾಗಿರುತ್ತದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ನೀವು ಸಮನ್ವಯವನ್ನು ಕಾಪಾಡಿಕೊಳ್ಳಬೇಕು.

** ಮೀನ ರಾಶಿ :
ಇಂದು ನಿಮ್ಮ ವ್ಯಕ್ತಿತ್ವವನ್ನು ಆನಂದಿಸಲು ಮತ್ತು ನಿಮ್ಮ ಧ್ವಜವನ್ನು ಹಾರಿಸಲು ದಿನವಾಗಿದೆ. ನಿಮ್ಮ ಅನನ್ಯ ಶೈಲಿ ಮತ್ತು ದೃಷ್ಟಿಕೋನವನ್ನು ವ್ಯಕ್ತಪಡಿಸುವಲ್ಲಿ ನೀವು ಆತ್ಮವಿಶ್ವಾಸದ ಉಲ್ಬಣವನ್ನು ಅನುಭವಿಸಬಹುದು, ಇದು ಅತ್ಯಾಕರ್ಷಕ ಹೊಸ ಅವಕಾಶಗಳಿಗೆ ಕಾರಣವಾಗಬಹುದು. ನಿಮ್ಮ ಚಮತ್ಕಾರಿ ಸ್ವಭಾವವನ್ನು ಸ್ವೀಕರಿಸಿ ಮತ್ತು ನಿಮ್ಮ ವ್ಯಕ್ತಿತ್ವವು ಸರಿಯಾದ ಜನರನ್ನು ಮತ್ತು ಸಂದರ್ಭಗಳನ್ನು ಆಕರ್ಷಿಸುತ್ತದೆ ಎಂದು ನಂಬಿರಿ. ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯದಿರಿ.

Categories
ರಾಜ್ಯ

ಕರ್ನಾಟಕ ಟಾಪ್ ನ್ಯೂಸ್

ಕರ್ನಾಟಕ ಟಾಪ್ ನ್ಯೂಸ್
– ತುಮಕೂರು: ಚಿರತೆ ಹಿಡಿದು ಯುವಕನ ಸಾಹಸ, ಶಾಕ್‌ ಆದ ಅರಣ್ಯ ಇಲಾಖೆ!
– ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್​ಐಆರ್!
– ಹೊಸನಗರ: 60 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್: ಹಲವರಿಗೆ ಗಾಯ!
– ತುಮಕೂರು: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು!

NAMMUR EXPRESS NEWS
ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ನಡೆದಿದೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಜ. 7ರಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗಲಿಲ್ಲ. ಈ ವೇಳೆ ಗ್ರಾಮದ ಆನಂದ್ ಎಂಬವರು ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ. 5 ವರ್ಷದ ಚಿರತೆಯನ್ನು ಯುವಕ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಆನಂದ್ ಸಾಹಸಕ್ಕೆ ಇಡೀ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

– ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್​ಐಆರ್!

ಬೆಂಗಳೂರು: ಕಾಣೆಯಾದ ಬೀದಿ ನಾಯಿಗಾಗಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ವರದಿಯಗಿದೆ. ಕಲ್ಯಾಣ ನಗರದ ಹೆಚ್​ಆರ್​ಬಿಆರ್ ಲೇಔಟ್​ ನಿವಾಸಿ ಡಾ. ಪುನೀತಾ ರಂಗಸ್ವಾಮಿಯವರು ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ.
ಬೀದಿ ನಾಯಿಗೆ ಹಿಂಸೆ ನೀಡಿ, ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ಪುನೀತಾ ತಮ್ಮದೇ ಲೇಔಟ್​ನ ಅನಿಲ್ ಎಂಬವರು ವಿರುದ್ಧ ಆರೋಪ ಮಾಡಿದ್ದಾರೆ.
ನಾಯಿ ಎಲ್ಲಿ ಹೋಯ್ತು ಅಂತ ತಿಳಿಯಲು ಅನಿಲ್ ಅವರ ಬಳಿ ಪುನೀತಾ ಅವರು ಡಿಸೆಂಬರ್ 14ರ ರಾತ್ರಿ 11 ಗಂಟೆಯಿಂದ 15ರ ಮಧ್ಯಾಹ್ನ 12 ಗಂಟೆವರೆಗಿನ ಸಿಸಿಟಿವಿ ದೃಶ್ಯಾವಳಿ ಕೇಳಿದ್ದಾರೆ. ಆದರೆ, ಅನಿಲ್ ಸಿಸಿಟಿವಿ ದೃಶ್ಯ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಅನಿಲ್ ಮೇಲೆ ಅನುಮಾನವಿದೆ. ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದಾರೆ.

– ಹೊಸನಗರ: 60 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್: ಹಲವರಿಗೆ ಗಾಯ!

ಹೊಸನಗರ: ತಾಲೂಕಿನ ಹುಲಿಕಲ್ ಘಾಟ್ ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದ ಬಸ್ ಬ್ರೇಕ್ ಫೈಲ್ ಆಗಿ ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಉರುಳಿರುವ ಘಟನೆ ಸಂಭವಿಸಿದೆ. ದಾವಣಗೆರೆಯಿಂದ ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್ ಭಾನುವಾರ ರಾತ್ರಿ 1.45 ಗಂಟೆಗೆ ಘಾಟಿ ರಸ್ತೆಯ ಶಿವಮೊಗ್ಗ ಜಿಲ್ಲೆ ಗಡಿ ಭಾಗದ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಪ್ರಪಾತಕ್ಕೆ ಉರುಳಿದೆ. ಬಸ್‌ನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರಿದ್ದರು. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

– ತುಮಕೂರಿನಲ್ಲಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಸಾವು

ತುಮಕೂರು: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರು ಘಟನೆ ತುಮಕೂರು ತಾಲೂಕಿನ ಕೋರ ಹತ್ತಿರದ ಓಬಳಾಪುರ ಗೇಟ್ ಬಳಿ ಜ. 7 ರಂದು ಬೆಳಗಿನ ಜಾವ ಸಂಭವಿಸಿದೆ. ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ಮಮ್ತಾಜ್ (38) ಶಾಖೀರ್ ಹುಸೇನ್ (48), ಮಹ್ಮದ್ ಆಸೀಫ್ (12) ಮೃತರು. ತುಮಕೂರಿನಿಂದ ಮಧುಗಿರಿ ಕಡೆಗೆ ಹೋಗುವಾಗ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್ ಪಿ ಕೆ.ಆರ್‌. ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ದಟ್ಟ ಮಂಜಿನ ಕಾರಣ ದಾರಿ ಕಾಣದೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Categories
ಚಿಕ್ಕಮಗಳೂರು

ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆಗೆ ಭರ್ಜರಿ ತಯಾರಿ..!!

ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆಗೆ ಭರ್ಜರಿ ತಯಾರಿ..!!
– ಶೃಂಗೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಬೃಹತ್ ಕಾರ್ಯಕ್ರಮ
– ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾದ ಸ್ವರ್ಣ ಸಂಭ್ರಮದ ಕಾರ್ಯಕ್ರಮ
– ಸುಮಾರು 50,000 ಕ್ಕೂ ಅಧಿಕ ಭಕ್ತರಿಂದ ಏಕಕಾಲಕ್ಕೆ ಏಕಸ್ವರದಲ್ಲಿ ನಡೆಯಲಿರುವ ಸ್ತೋತ್ರ ಪಠಣ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕರಿಸಿ 50 ವರ್ಷ ಪೂರೈಸಿದ ಸ್ವರ್ಣ ಸಂಭ್ರಮದ ಹಿನ್ನೆಲೆಯಲ್ಲಿ “ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆ” ಎಂಬ ಐತಿಹಾಸಿಕ ಸ್ತೋತ್ರ ಪಠಣ ಕಾರ್ಯಕ್ರಮವು ಜನವರಿ 11 ನೇ ತಾರೀಖಿನ ಶನಿವಾರದಂದು ಶ್ರೀಮಠದ ನರಸಿಂಹವನದಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಶ್ರೀಮಠದಿಂದ ಪೂರ್ವಸಿದ್ಧತೆಗಳು ಭರದಿಂದ ಸಾಗಿದೆ,ಸುಮಾರು 12 ಎಕರೆ ಪ್ರದೇಶದಲ್ಲಿ ಸ್ತೋತ್ರ ಸಮರ್ಪಣೆ ನಡೆಯಲಿದ್ದು ಈ ಜಾಗದಲ್ಲಿ ಪೆಂಡಾಲ್,ವಿದ್ಯುತ್ ದೀಪ,ಸಿಸಿ ಕ್ಯಾಮರ,ಚಪ್ಪರ,ಅಲಂಕಾರ ಕಾರ್ಯಗಳು ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು,ಮಹಿಳೆಯರು, ಸೇರಿದಂತೆ ಸುಮಾರು 50,000 ಕ್ಕೂ ಅಧಿಕ ಜನ ಭಕ್ತರು ಸ್ತೋತ್ರ ಪಠಣೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಭಕ್ತರ ಆಗಮನಕ್ಕಾಗಿ ವಿವಿಧ ತಾಲೂಕಿನಿಂದ ಸುಮಾರು 700 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಬಂದ ವಾಹನಗಳ ಪಾರ್ಕಿಂಗ್ ನಿರ್ವಹಣೆಗಾಗಿ 500,ಬಂದ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಗಾಗಿ 250 ಕೌಂಟರ್, 2000 ಜನ ಸ್ವಯಂಸೇವಕರ ನಿಯೋಜನೆಯಾಗಿದೆ.ಇದಕ್ಕಾಗಿ ಹಲವು ಸಭೆಗಳು ನಡೆದಿದ್ದು,ಶೃಂಗೇರಿ ಮದುವಣಗಿತ್ತಿಯಂತೆ ಸಿದ್ಧಗೊಳ್ಳುತ್ತಿದೆ. ಈ ಮೂಲಕ ಶೃಂಗೇರಿ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು,ಜಿಲ್ಲೆಯ ಎಲ್ಲಾ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದಿಂದ ಮನವಿ ಮಾಡಿದೆ.

Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ಚಿನ್ನ ಮಾತ್ರವಲ್ಲ, ಬೆಳ್ಳಿಗೂ ಹಾಲ್‌ ಮಾರ್ಕ್‌!?

ಇನ್ಮುಂದೆ ಚಿನ್ನ ಮಾತ್ರವಲ್ಲ, ಬೆಳ್ಳಿಗೂ ಹಾಲ್‌ ಮಾರ್ಕ್‌!?
– ಹಾಲ್‌ಮಾರ್ಕ್ ಕೋಡ್ ಅನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ

NAMMUR EXPRESS NEWS
ನವದೆಹಲಿ : ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಬೆಳ್ಳಿ ಮತ್ತು ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೆ ತರಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪರಿಗಣಿಸಬೇಕು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಹೇಳಿದ್ದಾರೆ. “ಬೆಳ್ಳಿಯ ಹಾಲ್‌ಮಾರ್ಕ್‌ಗಾಗಿ ಗ್ರಾಹಕರಿಂದ ಬೇಡಿಕೆಯಿದೆ. ನೀವು (BIS) ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಜೋಶಿ 78 ನೇ BIS ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಉತ್ಪನ್ನದ ದೃಢೀಕರಣವನ್ನು ಖಾತರಿಪಡಿಸುವ ಉದ್ದೇಶದಿಂದ ಸರ್ಕಾರವು ಪ್ರಸ್ತುತ ಚಿನ್ನ ಮತ್ತು ಚಿನ್ನದ ಆಭರಣಗಳಿಗೆ ಮಾತ್ರ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ಅಸ್ತಿತ್ವದಲ್ಲಿರುವ ಹಾಲ್‌ಮಾರ್ಕಿಂಗ್ ವ್ಯವಸ್ಥೆಯು ವಿಶಿಷ್ಟವಾದ ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ (HUID) ಅನ್ನು ಒಳಗೊಂಡಿದೆ, ಇದು ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುತ್ತದೆ. ಬೆಳ್ಳಿಯ ಹಾಲ್‌ಮಾರ್ಕಿಂಗ್‌ಗೆ ಸಂಭಾವ್ಯ ವಿಸ್ತರಣೆಯು ಭಾರತದ ಅಮೂಲ್ಯ ಲೋಹಗಳ ಗುಣಮಟ್ಟ ನಿಯಂತ್ರಣ ಕ್ರಮಗಳ ಗಮನಾರ್ಹ ವಿಸ್ತರಣೆಯನ್ನು ಗುರುತಿಸುತ್ತದೆ.

ಕಳೆದ ತಿಂಗಳು, ಸರ್ಕಾರಿ ಮೂಲಗಳು ಬೆಳ್ಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ಯೋಜನೆಯು ಪ್ರಸ್ತುತ ಪರಿಗಣನೆಯಲ್ಲಿದೆ ಮತ್ತು ಅನುಷ್ಠಾನದ ವಿಷಯದಲ್ಲಿ ಹಲವಾರು ಸಮಸ್ಯೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿತ್ತು. ಇತರ ಸಮಸ್ಯೆಗಳ ಪೈಕಿ, ಬೆಳ್ಳಿಯ ಆಭರಣಗಳ ಮೇಲೆ HUID ಗಳ ಬಾಳಿಕೆ (ಹಾಲ್‌ಮಾರ್ಕ್ ವಿಶಿಷ್ಟ ಗುರುತು) ಬಗ್ಗೆ ಚರ್ಚೆ ಮಾಡಬೇಕಾಗಿದೆ. ಚಿನ್ನದ ಮೇಲೆ ಹಾಕಲಾಗುವ HUID ದೀರ್ಘಕಾಲ ಬಾಳಿಕೆ ಬರುತ್ತದೆ. ಅದೇ ರೀತಿ ಬೆಳ್ಳಿಯ ಮೇಲೆ ಹಾಕಿದಲ್ಲಿ ವರ್ಷಗಳು ಕಳೆದ ಹಾಗೆ ಅದು ಅಳಿಸಿಹೋಗಬಹುದು, ತನ್ನ ಗುರುತನ್ನೂ ಕಳೆದುಕೊಳ್ಳಬಹುದು. ಅದೆಷ್ಟೇ ವರ್ಷವಾದರೂ HUID ಅಳಿಸಿ ಹೋಗದೇ ಇರುವ ರೀತಿಯಲ್ಲಿ ಬೆಳ್ಳಿಯ ಆಭರಣದ ಮೇಲೆ ಹೇಗೆ ಎಂಬೋಸ್‌ ಮಾಡಬಹದು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದೆ.

Categories
ರಾಜ್ಯ

ಜನಮನ ಸೆಳೆದ ರಾಜಧಾನಿಯ ಸಹ್ಯಾದ್ರಿ ಸಂಘದ ಕ್ರೀಡಾಕೂಟ!

ಜನಮನ ಸೆಳೆದ ರಾಜಧಾನಿಯ ಸಹ್ಯಾದ್ರಿ ಸಂಘದ ಕ್ರೀಡಾಕೂಟ!
– 1500ಕ್ಕೂ ಹೆಚ್ಚು ಮಲೆನಾಡಿಗರ ಸಮಾಗಮ: ಯಶಸ್ವಿ ಕ್ರೀಡಾಕೂಟ
– ಮಕ್ಕಳ ಡ್ಯಾನ್ಸ್, ಆಟ ಸೂಪರ್: ಬಹುಮಾನ ವಿತರಣೆ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರ ಪ್ರಾತಿನಿಧಿಕ ಸಂಸ್ಥೆ ‘ಸಹ್ಯಾದ್ರಿ ಸಂಘ ಭಾನುವಾರ ತನ್ನ 21ನೆಯ ವಾರ್ಷಿಕ ಕ್ರೀಡಾಕೂಟವನ್ನು ಸುಂಕದ ಕಟ್ಟೆಯ ಒಕ್ಕಲಿಗರ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ನಡೆಸಿದ್ದು ಸಾವಿರಾರು ಮಂದಿ ಮಲೆನಾಡಿಗರು ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಖುಷಿ ಪಟ್ಟರು. ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಅಂಕಿತಾ ಅಮರ್, ಹಾಗೂ ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಗೌಡ, ಕಾರ್ಯದರ್ಶಿ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮಕ್ಕಳು, ಮಹಿಳೆಯರು, ಪುರುಷರು ಆಟ ಆಡಿ ಸಂಭ್ರಮಿಸಿದರು. ಕಬ್ಬಡ್ಡಿ, ವಾಲಿಬಾಲ್ ಥ್ರೋಬಾಲ್ ಗಮನ ಸೆಳೆಯಿತು. ಅತ್ಯುತ್ತಮ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಸಿಐಡಿ ಸೂಪರಿಡೆಟೆಂಟ್ ಆಫ್ ಪೋಲೀಸ್ ಎಂ.ಡಿ.ಶರತ್, ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲೆಯ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್, ಚಿಕ್ಕಮಗಳೂರು ಜಿಲ್ಲೆ ನಿರ್ದೇಶಕರಾದ ಪೂರ್ಣೇಶ್, ಅಧ್ಯಾತ್ಮಿಕ ಚಿಂತಕರಾದ ಡಾ.ಸುಬ್ರಹ್ಮಣ್ಯ, ಸಂಘದ ಅಧ್ಯಕ್ಷರಾದ ಪುರುಷೋತ್ತಮ ಗೌಡ, ಕಾರ್ಯದರ್ಶಿ ಜಯಪ್ರಕಾಶ್ ಎಚ್. ಸಿ, ಆಧ್ಯಾತ್ಮಿಕ ಚಿಂತಕರಾದ ಸುಬ್ರಮಣ್ಯ ಉಡುಪ, ಸಂಘದ ಪದಾಧಿಕಾರಿಗಳಾದ ಗುರು ದೇವ ಪ್ರಸಾದ್ ಕಾಳಮ್ಮನಗುಡಿ, ಮಲ್ಲಪ್ಪಗೌಡ, ಇ.ವಿ.ಸತ್ಯನಾರಾಯಣ, ಗಂಗಪ್ಪ ಗೌಡ, ಭಾಗ್ಯ ಟ್ಯಾಗೂರ್, ಕೆ.ಟಿ.ನಾಗರಾಜ್ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು. ಎಲ್ಲಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಂಜುನಾಥ್ ಶೃಂಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಡಾನ್ಸ್ ಗಮನ ಸೆಳೆಯಿತು. ಮಲೆನಾಡಿನವರೆಲ್ಲರೂ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು. ಎಡಿಬಿ ದೊನ್ನೆ ಬಿರಿಯಾನಿ ಭೋಜನ ಮಾಡಿದ್ದರು. ಸರ್ವರಿಗೂ ಸಹ್ಯಾದ್ರಿ ಸಂಘದ ಗೌರವಾಧ್ಯಕ್ಷರಾದ ಜಿ.ಎ.ಪುರುಷೋತ್ತಮ ಗೌಡ ಮತ್ತು ಕಾರ್ಯದರ್ಶಿ ಎಚ್.ಸಿ.ಜಯಪ್ರಕಾಶ್ ಸೇರಿ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಧನ್ಯವಾದ ಅರ್ಪಿಸಿದ್ದಾರೆ.

Categories
ರಾಜ್ಯ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ
– ಚಾಮರಾಜನಗರ : ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು
– ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ
– ಬೆಳಗಾವಿ : ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತನೆ
– ಬೆಂಗಳೂರು : ಇಬ್ಬರ ಮಕ್ಕಳ ಕೊಂದು ಸಾವಿಗೆ ಶರಣಾದ ದಂಪತಿ
– ಬಳ್ಳಾರಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ

NAMMUR EXPRESS NEWS
ಚಾಮರಾಜನಗರ: ಚಾಮರಾಜನಗರದಲ್ಲಿ ದಾರುಣ ಘಟನೆ ನಡೆದಿದ್ದು, ಏಕಾಏಕಿ ಕುಸಿದುಬಿದ್ದು ಮೂರನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಏಕಾಏಕಿ ಕುಸಿದುಬಿದ್ದಿದ್ದಳು. ಕೂಡಲೇ ತೇಜಸ್ವಿನಿಯನ್ನು ಶಾಲಾ ಸಿಬ್ಬಂದಿ ಜೆಎಸ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ದುರದೃಷ್ಟವಶಾತ್ ಅದಾಗಲೇ ತೇಜಸ್ವಿನಿ ಮೃತಪಟ್ಟಿದ್ದಳು. ಇನ್ನು ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ವಯಸ್ಕರು ಬಲಿಯಾಗುತ್ತಿದ್ದರು. ಆದರೆ ಇದೀಗ ಹೃದಯಾಘಾತಕ್ಕೆ ಚಿಕ್ಕ ಮಕ್ಕಳು ಬಲಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಇದ್ದ ಒಬ್ಬಳೆ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

– ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ

ಬೆಂಗಳೂರು: ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ನಡೆದಿದೆ. ಕೇರಳ ಮೂಲದ ಸುನೀಲ್ ಜೋಸೆಫ್, ವಿಷ್ಣು ಜಯರಾಜ್ ಎಂಬವರು ಗಾಯಗೊಂಡಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆ ಗೋಡೆಗಳು, ಕಿಟಕಿ, ಬಾಗಿಲು ಛಿದ್ರವಾಗಿವೆ. ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳಿಗೂ ಹಾನಿಯಾಗಿದೆ. ಸ್ಫೋಟಕ್ಕೆ ಕಾರಣ ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

– ಬೆಳಗಾವಿ : ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತನೆ

ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮೂರು ಮಕ್ಕಳ ಸಮೇತ 7 ಜನರನ್ನು ಮನೆಯಿಂದ ಹೊರಹಾಕಿದ್ದು, ಚಳಿಯಲ್ಲಿ ಹಸಿಗೂಸಿನ ಜೊತೆ ಬಾಣಂತಿ ಹೊರ ಮಲಗಿದ್ದಾರೆ. ಸಾಲ ಮರುಪಾವತಿ ಮಾಡಿಲ್ಲವೆಂದು ಮನೆ ಸೀಜ್ ಮಾಡಲಾಗಿದೆ. ಸೈದಪ್ಪ ಅವರು ಚಿಕ್ಕೋಡಿಯ ಇಕ್ವಿಟಾಸ್ ಫೈನಾನ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು. ಅವರು ಎರಡೂವರೆ ವರ್ಷದ ಹಿಂದೆ ಹೈನುಗಾರಿಕೆಗಾಗಿ 5 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಖರೀದಿಸಿದ್ದ ಎರಡು ಎಮ್ಮೆ ಸಾವು ಕಂಡಿದ್ದವು. ಹೀಗಿದ್ದರೂ ಮಾಸಿಕ 14397 ರೂ.ನಂತೆ 27 ಕಂತುಗಳನ್ನು ಪಾವತಿಸಿದ್ದರು. ಮಗಳ ಹೆರಿಗೆಗೆ 85,000 ರೂ. ಖರ್ಚು ಮಾಡಿದ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ರೈತ ಸೈದಪ್ಪ ಕಂತು ಕಟ್ಟಿರಲಿಲ್ಲ. ಆದರೆ ಇದುವರೆಗೂ ಕಟ್ಟಿದ್ದ ಹಣ ಕಂಪನಿಗೆ ಮುಟ್ಟಿಲ್ಲ. 5 ಲಕ್ಷ ರೂ. ಸಾಲ ಕಟ್ಟುವಂತೆ ವಕೀಲರ ಮೂಲಕ ನೋಟಿಸ್ ನೀಡಿ ಮನೆ ಸೀಜ್ ಮಾಡಲಾಗಿದೆ. ಮೂಡಲಗಿ ಠಾಣೆ ಪೊಲೀಸರ ಮೂಲಕ ಮನೆ ಸೀಜ್ ಮಾಡಿದ್ದು, ಹಣ ಕಟ್ಟಲು ಸಮಯ ಕೇಳಿದರೂ ಅಮಾನವೀಯವಾಗಿ ವರ್ತಿಸಲಾಗಿದೆ. ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತಿಸಿ ಹಸುಗೂಸು ಸೇರಿ ಬಾಣಂತಿ ಮಕ್ಕಳು, ಮನೆಯವರನ್ನು ಫೈನಾನ್ಸ್ ಸಿಬ್ಬಂದಿ ಮತ್ತು ಪೊಲೀಸರು ಹೊರಗೆ ಹಾಕಿದ್ದಾರೆ.

– ಬೆಂಗಳೂರು : ಇಬ್ಬರ ಮಕ್ಕಳ ಕೊಂದು ಸಾವಿಗೆ ಶರಣಾದ ದಂಪತಿ

ಬೆಂಗಳೂರು : ಇಬ್ಬರ ಮಕ್ಕಳ ಕೊಂದು ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಪತಿ ಅನೂಪ್ ಕುಮಾರ್, ಪತ್ನಿ ರಾಖಿ ಆತ್ಮಹತ್ಯೆ ಮಾಡಿಕೊಂಡವರು. ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತರು ಉತ್ತರ ಪ್ರದೇಶದ ಮೂಲದವರಾಗಿದ್ದು, ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ಬಳ್ಳಾರಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಬಳ್ಳಾರಿ: ಪ್ರೀತಿಸಿದ ಯುವತಿ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿದ ಭಗ್ನ ಪ್ರೇಮಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಚರ್ಚ್ ಶಾಲೆ ರಸ್ತೆ ಬಳಿ ನಡೆದಿದೆ. ಪಿ.ಕೆ.ಹಳ್ಳಿ ಮೂಲದ ನವೀನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ನವೀನ್ ಕುಮಾರ್ ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿಯ ಅಣ್ಣ ಗಂಭೀರವಾಗಿ ಗಾಯಗೊಂಡಿದ್ದರೆ, ಯುವತಿ ಹಾಗೂ ಆಕೆಯ ತಾಯಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೋರಣಗಲ್ ಜಿಂದಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಬಳಿಕ ಯುವಕ ನವೀನ್ ಕುಮಾರ್ ಯಶವಂತನಗರ ಬಳಿ ತನ್ನ ಕಾರನ್ನು ಬಿಟ್ಟು ಹೋಗಿದ್ದಾನೆ. ಹಲ್ಲೆ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯಶವಂತನಗರ ಬಳಿಯ ರೈಲ್ವೆ ಹಳಿ ಮೇಲೆ ಯುವಕನ ಶವ ಪತ್ತೆಯಾಗಿದೆ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.