Categories
ಅಡಿಕೆ-ದರ

ಇಂದಿನ ಅಡಿಕೆ ದರ ಹೇಗಿದೆ?

ಇಂದಿನ ಅಡಿಕೆ ದರ ಹೇಗಿದೆ?
– ಬೆಟ್ಟೆ, ಸರಕು, ಗೊರಬಲು ದರ ಏನಾಗಿದೆ?

NAMMUR EXPRESS NEWS

ಬೆಟ್ಟೆ: 47499 – 53009

ಸರಕು: 55599 – 79470

ಗೊರಬಲು: 18009- 29009

ರಾಶಿ: 31001- 51500

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಮಲ್ಪೆ ಬಂದರ್ ಮೀನು ಕಳ್ಳರಿಗೆ, ಬೋಟ್‌ ಕಾರ್ಮಿಕರ ಕೈಗೆಯಿಂದ ಧರ್ಮದೇಟು!
– ಉಳ್ಳಾಲ: ಲಾರಿ-ಬೈಕ್ ಅಪಘಾತ ಮೆಡಿಕಲ್ ಮಾಲೀಕ ದಾರುಣ ಸಾವು!.
– ಮಂಗಳೂರು : ನಿಷೇಧಿತ ಡ್ರಗ್ಸ್‌ ಸೇವನೆ ಮೂವರು ಪೊಲೀಸ್ ವಶ

NAMMUR EXPRESS NEWS
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಮೀನು ತುಂಬಿರುವ ಬೋಟ್‌ನಲ್ಲಿ ಕಳ್ಳರು ಸುಮಾರು 15 ಸಾವಿರ ರೂ. ಬೆಲೆ ಬಾಳುವ ಉತ್ತಮ ಜಾತಿಯ ಮೀನನ್ನು ಎಗರಿಸಲು ಮುಂದಾಗಿದ್ದ ವೇಳೆ ಬೋಟ್‌ನ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಘಟನೆ ಸಂಭವಿಸಿದೆ. ರಾತ್ರಿ ಸುಮಾರು 12 ಗಂಟೆ ವೇಳೆಗೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟ್‌ಗೆ ಮೂವರು ಬಂದು ಬೋಟ್‌ನ ಕಾರ್ಮಿಕರು ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿ ಬೋಟ್‌ನ ಸ್ಟೋರೇಜ್‌ನ ಮುಚ್ಚಳ ತೆರೆದು ಅದರೊಳಗೆ ಒಬ್ಬನನ್ನು ಇಳಿಸಿದ್ದರು. ಅಲ್ಲಿಂದ ಕಳವು ಮಾಡುವಾಗ ಬೋಟ್‌ನ ಕಾರ್ಮಿಕನೋರ್ವನಿಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದ. ಬೋಟ್‌ನ ಮೇಲೆ ಇದ್ದವರಲ್ಲಿ ಇಬ್ಬರು ಓಡಿ ಹೋಗಿದ್ದು, ಒಬ್ಬ ಸ್ಟೋರೇಜ್‌ನ ಒಳಗೆ ಸಿಕ್ಕಿ ಹಾಕಿಕೊಂಡಿದ್ದ. ಬೋಟ್‌ನ ಕಾರ್ಮಿಕರು ಆತನನ್ನು ಹಿಡಿದು ವಿಚಾರಿಸಿ ಬೋಟು ಮಾಲಕರಿಗೆ ಒಪ್ಪಿಸಿದ್ದಾರೆ. ಈ ಮೂವರು ಗದಗ ಮೂಲದವರೆಂದು ತಿಳಿದು ಬಂದಿದೆ.

– ಉಳ್ಳಾಲ: ಲಾರಿ-ಬೈಕ್ ಅಪಘಾತ ಮೆಡಿಕಲ್ ಮಾಲೀಕ ದಾರುಣ ಸಾವು!.

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪ ಲಾರಿ-ಬೈಕ್ ಅಪಘಾತದಲ್ಲಿ ಮೆಡಿಕಲ್ ಮಾಲೀಕ ದಾರುಣವಾಗಿ ಮೃತಪಟ್ಟ ಘಟನೆ ನಾಟೆಕಲ್ ಹತ್ತಿರದ ತಿಬ್ಲಪದವು ಎಂಬಲ್ಲಿ ಈ ಘಟನೆ ನಡೆದಿದೆ. ದೇರಳಕಟ್ಟೆ ನಿವಾಸಿ ಮೆಡಿಕಲ್ ಸೆಂಟರ್ ಮಾಲೀಕ ಜಲೀಲ್ ಎಂಬವರ ಪುತ್ರ ಹಾಜಿರಾ ಮೆಡಿಕಲ್ ಮಾಲೀಕ ಅವ್ಸಾಫ್ (25) ಮೃತಪಟ್ಟವರು. ಜ. 6ರಂದು ಸೋಮವಾರ ಮಧ್ಯಾಹ್ನ ದೇರಳಕಟ್ಟೆ ಕಡೆಯಿಂದ ತಿಬ್ಲಪದವು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ತಿಬ್ಲಪದವಿನ ಡಿವೈಡರ್ ಸಮೀಪ ಲಾರಿಯೊಂದು ಹಠಾತ್ತನೆ ತಿರುಗಿದ ಪರಿಣಾಮ ಲಾರಿ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಅವ್ಸಾಫ್ ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಕಲಿಕೆ ಮುಗಿಸಿ ಅವ್ಸಾಫ್ ದೇರಳಕಟ್ಟೆ ಜಂಕ್ಷನ್‌ನಲ್ಲಿ ಮೆಡಿಕಲ್ ಅಂಗಡಿಯ ನಡೆಸುತ್ತಾ ಬಂದಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತ ಸಿಸಿಟಿವಿ ವಿಡಿಯೋ ಸೆರೆಯಾಗಿದೆ.

– ಮಂಗಳೂರು : ನಿಷೇಧಿತ ಡ್ರಗ್ಸ್‌ ಸೇವನೆ ಮೂವರು ಪೊಲೀಸ್ ವಶ

ಮಂಗಳೂರು: ನಿಷೇಧಿತ ಡ್ರಗ್ಸ್‌ಗಳಾದ ಕೊಕೇನ್ ಮತ್ತು ಚರಸ್ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಪಿಕಾಡ್‌ನ ಕುರುಂಬಯ್ಯ (29) ಎಂಬತನನ್ನು ವಶಕ್ಕೆ ಪಡೆದಿದ್ದಾರೆ. ಬಿಜೈ ಕಾಪಿಕಾಡ್ ಕುಂಟಿಕಾನದಲ್ಲಿ ಕೊಕೇನ್ ಸೇವನೆ ಮಾಡಿದ್ದಾನೆ ಎನ್ನಲಾದ ಈತ ಕೊಕೇನ್ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ಅತ್ತಾವರ ಕಟ್ಟೆ ಬಳಿ ಕೊಂಚಾಡಿಯ ಶುಭಂ (24) ಮತ್ತು ಬೋಳೂರಿನ ರೋಶನ್ ಪಿ.ಎಸ್ (22) ಎಂಬವರನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಗಳು ಗೋವಾದಿಂದ ಕೊಕೇನ್ ಮತ್ತು ಚರಸ್ ಖರೀದಿಸಿ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

Categories
ಮಲ್ನಾಡ್

ಮಲೆನಾಡ ಅದೃಷ್ಟ ದಂಪತಿಗಳಾಗಿ ಅರುಣ್ ಸೀಕೊಪ್ಪ ಮತ್ತು ಆಶಿಕಾ

ಮಲೆನಾಡ ಅದೃಷ್ಟ ದಂಪತಿಗಳಾಗಿ ಅರುಣ್ ಸೀಕೊಪ್ಪ ಮತ್ತು ಆಶಿಕಾ
– ಸಹ್ಯಾದ್ರಿ ಸಂಘದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಯುವ ದಂಪತಿ
– ದಂಪತಿಗಳಿಗೆ ಶುಭ ಕೋರಿದ ಸ್ನೇಹಿತರು

NAMMUR EXPRESS NEWS
ಬೆಂಗಳೂರು: ಬೆಂಗಳೂರಲ್ಲಿ ನಡೆದ ಸಹ್ಯಾದ್ರಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಮಲೆನಾಡ ಅದೃಷ್ಟ ದಂಪತಿಗಳಾಗಿ ಯುವ ಮುಖಂಡರಾದ ಅರುಣ್ ಸಿಕೊಪ್ಪ ಮತ್ತು ಆಶಿಕಾ ಗೆಲುವು ಸಾಧಿಸಿದ್ದಾರೆ. ಅನೇಕ ದಂಪತಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗಣ್ಯರು ಪ್ರಶಸ್ತಿಯನ್ನು ವಿತರಣೆ ಮಾಡಿದರು. ದಂಪತಿಗಳಿಗೆ ಸ್ನೇಹಿತರು ಶುಭ ಕೋರಿದ್ದಾರೆ.

Categories
ತೀರ್ಥಹಳ್ಳಿ

ಮಠದ ವತಿಯಿಂದ ರೈತರ ಭೂಮಿ ಮೋಸ!?

ಮಠದ ವತಿಯಿಂದ ರೈತರ ಭೂಮಿ ಮೋಸ!?
– ರೈತರ ಗೇಣಿ ಜಮೀನು ಕಬಳಿಸಲು ಸಂಚು ಆರೋಪ: ಪ್ರತಿಭಟನೆ
– ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ವಿರುದ್ಧ ರೈತರಿಂದ ಪ್ರತಿಭಟನೆ

NAMMUR EXPRESS NEWS
ತೀರ್ಥಹಳ್ಳಿ: ಆಲಗೇರಿ ಗ್ರಾಮದ ಸರ್ವೇ ನಂಬರ್ 8 ರಲ್ಲಿ ರೈತರ ಗೇಣಿ ಜಮೀನು ಕಬಳಿಸಲು ಸಂಚು ಹೂಡಿರುವುದಾಗಿ ಆರೋಪಿಸಿ ಭೀಮನಕಟ್ಟೆ ಮಠದ ವಿರುದ್ಧ ರೈತರು ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲದೆ, ಗೇಣಿಹಕ್ಕು ಜಮೀನಿಗೆ ಸುಳ್ಳು ನಕ್ಷೆ ದಾಖಲೆ ಸೃಷ್ಟಿಸಿರುವ ಕಂದಾಯ ಇಲಾಖೆ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಂದಾಯ ಇಲಾಖೆಯ ಒಳಗೆ ಇರುವ ಕೆಲವು ಭ್ರಷ್ಟ ನೌಕರರು ತಾಲೂಕಿನ ಭೀಮನಕಟ್ಟೆ ಮಠದೊಂದಿಗೆ ಶಾಮೀಲಾಗಿ ಮಠದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಆರ್ಟಿಸಿ ದಾಖಲೆಗಳಲ್ಲಿ ನಮೂದಿಸಿದ್ದನ್ನು ಬಹಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಗೇಣಿಹಕ್ಕು ಜಮೀನಿಗೆ ಸುಳ್ಳು ನಕ್ಷೆ ದಾಖಲೆ ಸೃಷ್ಟಿಸಿ ಮಠಕ್ಕೆ ಸಹಕರಿಸುತ್ತಿರುವ ಕಂದಾಯ ಇಲಾಖೆ ಗುಮಾಸ್ತರು ಮತ್ತಿತರ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಾನೂನು ಬಾಹಿರವಾಗಿ 2022ನೇ ಇಸವಿಯಲ್ಲಿ ತಯಾರಿಸಿದ ಸರ್ವೇ ಸ್ಕೆಚ್ ರದ್ದುಗೊಳಿಸಬೇಕು. ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ಪ್ರತಿಭಟನಾಕಾರರು ತಹಶೀಲ್ದಾರ್ ರಂಜಿತ್ ಎಸ್. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ, ಮಲೆನಾಡು ಸಂಘರ್ಷ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್, ಹಿರಿಯ ಸಮಾಜವಾದಿ ಸುಬ್ರಹ್ಮಣ್ಯ ಭಟ್, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಕೆಸ್ತೂರು ಮಂಜುನಾಥ್, ತಾಲೂಕು ನಿರ್ದೇಶಕ ಬಾಳೇಹಳ್ಳಿ ಪ್ರಭಾಕರ್, ಯುವ ಜನತಾದಳದ ಅಧ್ಯಕ್ಷ ತಲಬಿ ರಾಘವೇಂದ್ರ ಭಾಗವಹಿಸಿದ್ದರು.

– ಗೇಣಿ ಹಕ್ಕಿಗಾಗಿ ಚಳವಳಿಯ ಎಚ್ಚರಿಕೆ

ರೈತರ ತಾಳ್ಮೆ ಪರೀಕ್ಷಿಸುವುದು ಬೇಡ. ಗೇಣಿ ಹಕ್ಕಿಗಾಗಿ ಹೊಸ ಚಳವಳಿ ರೂಪಿಸುತ್ತೇವೆ. ಸುಳ್ಳು ದಾಖಲೆ ಸೃಷ್ಟಿಗೆ ಸಹಕರಿಸಿದವರನ್ನು ಕೂಡಲೇ ಬಂಧಿಸಬೇಕು. ಕೋಣಂದೂರಿನಲ್ಲಿ ಸರಕಾರಿ ಶಾಲೆ, ಮುಖ್ಯ ರಸ್ತೆಯ ಇಕ್ಕೆಲಗಳ ಸ್ವಾಧೀನಾನುಭವ ಜಮೀನು, ದಿಂಡ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಾಲನಿ ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ ಎಚ್ಚರಿಕೆ ಆರೋಪಿಸಿದರು.

ತಪ್ಪಿತಸ್ಥರ ಗಡಿಪಾರಿಗೆ ಒತ್ತಾಯ

ಕಿರುಕುಳಕ್ಕೆ ರೈತರು ಧೃತಿಗೆಡಲ್ಲ. ಕಾನೂನಿಗೆ ಗೌರವ ಕೊಡುವುದು ರೈತರಿಗೆ ಗೊತ್ತಿದೆ. ಕಾನೂನಿನ ಹೆಸರಲ್ಲಿ ಭೂ ಮಾಫಿಯಾ ನಡೆಸುತ್ತಿದ್ದು, ತಪ್ಪಿತಸ್ಥರನ್ನು ಸರಕಾರ ತಾಲೂಕಿನಿಂದ ಗಡಿಪಾರು ಮಾಡಬೇಕು ಎಂದು ಮಲೆನಾಡು ಸಂಘರ್ಷ ಹೋರಾಟ ಸಮಿತಿಯ ಶಿವಮೊಗ್ಗ ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್ ಒತ್ತಾಯಿಸಿದ್ದಾರೆ.

Categories
ಚಿಕ್ಕಮಗಳೂರು

ಟಾಪ್ 4 ನ್ಯೂಸ್ ಚಿಕ್ಕಮಗಳೂರು

ಟಾಪ್ 4 ನ್ಯೂಸ್ ಚಿಕ್ಕಮಗಳೂರು
– ಚಿಕ್ಕಮಗಳೂರು: ಕಾಡಾನೆ ಕೊಂದು ದಂತ ಅಪಹರಣ ಪ್ರಕರಣ – ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು
– ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
– ಮೂಡಿಗೆರೆ: ಹುಲಿ ದಾಳಿಗೆ ಹಸು ಬಲಿ
– ಚಿಕ್ಕಮಗಳೂರು: 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ

ನಾಳೆಯೇ ನಡೆಯಲಿದೆಯೇ ಶರಣಾಗತಿ ಪ್ರಕ್ರಿಯೆ

NAMMUR EXPRESS NEWS
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ ಹಿನ್ನೀರು ಪ್ರದೇಶವಾಗಿರುವ ಭೈರಾಪುರ ಅರಣ್ಯ ವಲಯದಲ್ಲಿ ಆನೆಯನ್ನು ಕೊಂದು ದಂತ ಅಪಹರಣ ಮಾಡಿರುವ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿಯೇ ಭಾಗಿಯಾಗಿರುವ ಆರೋಪದ ಮೇರೆಗೆ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣದ ತನಿಖೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಫಾರೆಸ್ಟ್ ಗಾರ್ಡ್ ದೇವರಾಜ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕುಮಾ‌ರ್ ನಾಯಕ್ ಅವರನ್ನು ಅಮಾನತು ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರು ಆದೇಶಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಆನೆ ಕಳೇಬರ ಭದ್ರಾ ಹುಲಿ ಮೀಸಲು ಅರಣ್ಯದಲ್ಲಿ ಕಂಡುಬಂದಿದೆ. ಇದನ್ನು ಮೇಲಾಧಿಕಾರಿಗಳಿಗೆ ತಿಳಿಸದೇ ದಂತ ಕಳವು ಮಾಡಿರುವ ಸಾಧ್ಯತೆ ಇರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಆನೆ ಕಳೇಬರದ ಮರಣೋತ್ತರ ಪರೀಕ್ಷೆಯನ್ನು ಕಾಟಾಚಾರಕ್ಕೆ ಮಾಡಿಸಿ ಹೆಣ್ಣು ಆನೆ ಎಂದು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ಮಾಡಿದ ಆರೋಪವಿದೆ.

– ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗಲಿ 30 ಲಕ್ಷ ರೂ. ಗಿಂತ ಅಧಿಕ ನಷ್ಟ ಸಂಭವಿಸಿರುವ ಘಟನೆ ಮಲವಂತಿಗೆ ಗ್ರಾಮದ ಎಳನೀರು ಎಂಬಲ್ಲಿ ನಡೆದಿದೆ. ಪ್ರಶಾಂತ್ ವೈ. ಆರ್ ಅವರ ಮನೆಯಲ್ಲಿ ಘಟನೆ ಈ ನಡೆದಿದ್ದು, ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೊತ್ತದ ಅಡಕೆ, ಒಂದು ಲಕ್ಷ ರೂ ಮೌಲ್ಯದ ಕಾಫಿ ಬೀಜ, 50 ಸಾವಿರ ರೂ. ಮೊತ್ತದ ಕಾಳು ಮೆಣಸು, ಬಟ್ಟೆ ಬರೆ, ಪಾತ್ರೆ, ದಾಖಲೆ ಇತ್ಯಾದಿಗಳು ನಾಶವಾಗಿವೆ.ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದು, ಪ್ರಸ್ತುತ ಇವರಿಗೆ ನೆಲೆಸಲು ಮನೆ ಇಲ್ಲದಂತಾಗಿದೆ. ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ವಿಎ, ಪಿಡಿಒ ಇವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಮಲವಂತಿಗೆ ಗ್ರಾಪಂ ಅಧ್ಯಕ್ಷ ಪ್ರಕಾಶ್ ಜೈನ್, ಕಳಸ ಮೆಸ್ಕಾಂ ಉಪ ವಿಭಾಗದ ಎಇ ಕೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

– ಮೂಡಿಗೆರೆ: ಹುಲಿ ದಾಳಿಗೆ ಹಸು ಬಲಿ

ಮೂಡಿಗೆರೆ: ತಾಲ್ಲೂಕಿನ ನಿಡುವಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರ್ಕಲ್ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಹಸು ನರೇಂದ್ರೇಗೌಡ ಎಂಬುವರಿಗೆ ಸೇರಿದ್ದು. ಮೇಯಲು ಹೋದ ಹಸು ಸಂಜೆಯಾದರೂ ಮನೆಗೆ ಬಾರದಿದ್ದನ್ನು ಕಂಡು, ಹುಡುಕಾಟ ನಡೆಸಿದಾಗ, ಕಾಫಿ ತೋಟದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ. ಹಸುವಿನ ದೇಹದ ಒಂದು ಭಾಗವನ್ನು ಹುಲಿ ತಿಂದು ಹಾಕಿದೆ. ಪಶು ವೈದ್ಯಾಧಿಕಾರಿ ಉದಯ್‌, ಅರಣ್ಯ ಅಧಿಕಾರಿ ಗಿರೀಶ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮರ್ಕಲ್, ನಿಡುವಾಳೆ ಭಾಗದಲ್ಲಿ ಹುಲಿ ಸಂಚಾರದ ಬಗ್ಗೆ ಸ್ಥಳೀಯರಲ್ಲಿ ಆತಕ ಎದುರಾಗಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

– ಚಿಕ್ಕಮಗಳೂರು: 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ ನಾಳೆಯೇ ನಡೆಯಲಿದೆಯೇ ಶರಣಾಗತಿ ಪ್ರಕ್ರಿಯೆ

ಚಿಕ್ಕಮಗಳೂರು: ನಕ್ಸಲ್ ನಾಯಕ ವಿಕ್ರಂಗೌಡನ ಎನ್ ಕೌಂಟರ್ ಬೆನ್ನಲ್ಲೇ ಕಾಫಿನಾಡ ಕಾಡಲ್ಲಿ ಆಲ್ ಮೋಸ್ಟ್ ನಕ್ಸಲರ ಯುಗಾಂತ್ಯವಾಗಿದೆ. ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ನಕ್ಸಲರು ಶರಣಾಗತಿ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ ಮಾಜಿ ನಕ್ಸಲ್ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ ಪ್ರಮುಖರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ. ವನಜಾಕ್ಷಿ, ಸುಂದರಿಣ ಮಾರೆಪ್ಪ, ವಸಂತ, ಜೀಶ್ ಶರಣಾಗಲಿರುವ ಇತರ ನಕ್ಸಲರು ಎಂದು ಹೇಳಲಾಗಿದೆ. ಸರ್ಕಾರ ರಚನೆ ಮಾಡಿರುವ ಜಿಲ್ಲಾ ಕಮಿಟಿ ಮುಂದೆ ಇವರು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಶರಣಾಗತಿ ನಡೆಯಲಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್.ಪಿ.ವಿಕ್ರಮ ಅಮಟೆ ಮುಂದೆ ನಕ್ಸಲರು ಶರಣಾಗಲಿದ್ದಾರೆ ಎಂದು ತಿಳಿದು ಬಂದಿದೆ.

Categories
ಕರಾವಳಿ

ಇನ್ನು ಮುಂದೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸುಲಭ!

ಇನ್ನು ಮುಂದೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸುಲಭ!
– ನೂತನ ”ಶ್ರೀಸಾನಿಧ್ಯ ಕ್ಯೂ ಕಾಂಪ್ಲೆಕ್ಸ್‌’ ಉದ್ಘಾಟನೆ
– ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಿಂದ ಲೋಕಾರ್ಪಣೆ
– ಏನಿದು ‘ಶ್ರೀಸಾನಿಧ್ಯ’ ಕ್ಯೂ ಕಾಂಪ್ಲೆಕ್ಸ್‌?

NAMMUR EXPRESS NEWS
ಧರ್ಮಸ್ಥಳ: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇಶದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜ. 7 ರಂದು ಭೇಟಿ ನೀಡಲಿದ್ದಾರೆ.
ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಶ್ರೀಸಾನಿಧ್ಯ’ ಅತ್ಯಾಧುನಿಕ ಸರತಿ ಸಾಲು ವ್ಯವಸ್ಥೆಯ ಕಟ್ಟಡವನ್ನು ಭಕ್ತರ ಅನುಕೂಲಕ್ಕಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ದೇವರ ದರ್ಶನಕ್ಕಾಗಿ ಕಾಯುವ ಸಮಯ ಮತ್ತು ವಿಧಾನವನ್ನು ಸರಳೀಕರಿಸಬೇಕು ಅನ್ನುವ ಯೋಚನೆಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಮಾದರಿಯ ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ರೂಪಿಸಿದರು. ಇದು ಡಿ 7ರಂದು ಸಾಕಾರಗೊಂಡಿದ್ದು ಲೋಕಾರ್ಪಣೆಗೊಳ್ಳಲಿದೆ.

* ಏನಿದು ‘ಶ್ರೀಸಾನಿಧ್ಯ’ ಕ್ಯೂ ಕಾಂಪ್ಲೆಕ್ಸ್‌?

ಶ್ರೀಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಡಚಣೆಯಿಲ್ಲದೆ ದೇವರ ದರ್ಶನ ಸಾಧ್ಯವಾಗಬೇಕು ಅನ್ನುವ ಹಿನ್ನೆಲೆಯಲ್ಲಿ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆಯನ್ನು ದಶಕಗಳ ಹಿಂದೆಯೇ ಕಾಂಪ್ಲೆಕ್ಸ್-ನಲ್ಲಿ ಹೆಚ್ಚು ಹೊತ್ತು ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಹೀಗೆ ಕಾಯುವ ಭಕ್ತಾದಿಗಳಿಗೆ ನೀರು, ಪಾನೀಯ, ಆಹಾರದ ವ್ಯವಸ್ಥೆಯನ್ನು ಕ್ಷೀತ್ರದ ವತಿಯಿಂದ ಯೋಜನೆಯನ್ನು ರೂಪಿಸಿದ್ದಾರೆ.

Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
– ಹೊಳೆಹೊನ್ನೂರು : ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು
– ಹೊಸನಗರ : ಹುಲಿಕಲ್‌ನಲ್ಲಿ ಬಸ್‌ ವೊಂದು ನಿಯಂತ್ರಣ ತಪ್ಪಿ ತಿರುವಿನಲ್ಲಿ ಬ್ರೇಕ್‌ ಫೇಲ್‌ ಆಗಿ ಕಂದಕಕ್ಕೆ ಉರುಳಿದೆ.
– ಶಿವಮೊಗ್ಗ : ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಕಂಟ್ರೋಲ್‌ ತಪ್ಪಿ ಇನ್ನೋವಾ ಕಾರು ಪಲ್ಟಿ
– ಭದ್ರಾವತಿ: ಆಕಸ್ಮಿಕ ಬೆಂಕಿ, ಮನೆಯ ಗೃಹಬಳಕೆ ವಸ್ತು ಬೆಂಕಿಗೆ ಆಹುತಿ
– ಸೊರಬ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಪತ್ತೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ

NAMMUR EXPRESS NEWS
ಹೊಳೆಹೊನ್ನೂರು: ಅಡಕೆ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಘಟನೆ, ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಕನಸಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ದರ್ಶನ್ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಈತ ಹೊಳೆಹೊನ್ನೂರು ಸರ್ಕಾರಿ ಕಾಲೇಜ್ ನಲ್ಲಿ, ಅಂತಿಮ ವರ್ಷದ ಬಿಕಾಂ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಭಾನುವಾರ ಕಾಲೇಜ್ ಗೆ ರಜೆಯಿದ್ದ ಕಾರಣದಿಂದ, ಸಂಜೆ 4. 30 ರ ಸುಮಾರಿಗೆ ತಮ್ಮ ಅಡಕೆ ತೋಟಕ್ಕೆ ನೀರು ಹಾಯಿಸಲೆಂದು ದರ್ಶನ್ ತೆರಳಿದ್ದು, ನಂತರ ಮನೆಗೆ ಆಗಮಿಸಿರಲಿಲ್ಲ. ಈ ನಡುವೆ ಸಂಜೆ 6. 50 ರ ಸುಮಾರಿಗೆ ತೋಟಕ್ಕೆ ಅವರ ಸಂಬಂಧಿಯೋರ್ವರು ತೆರಳಿದ್ದ ವೇಳೆ, ಪಂಪ್ ಸೆಟ್ ಸ್ವಿಚ್ ಬೋರ್ಡ್ ಬಳಿ ದರ್ಶನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ದರ್ಶನ್ ನನ್ನು ವಾಹನವೊಂದರಲ್ಲಿ ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ದರ್ಶನ್ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ತೋಟದಲ್ಲಿ ಪಂಪ್ ಸೆಟ್ ಆನ್ ಮಾಡುವ ವೇಳೆ, ವಿದ್ಯುತ್ ಶಾಕ್ ನಿಂದ ದರ್ಶನ್ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

– ಹೊಸನಗರ : ಹುಲಿಕಲ್‌ನಲ್ಲಿ ಬಸ್‌ ವೊಂದು ನಿಯಂತ್ರಣ ತಪ್ಪಿ ತಿರುವಿನಲ್ಲಿ ಬ್ರೇಕ್‌ ಫೇಲ್‌ ಆಗಿ ಕಂದಕಕ್ಕೆ ಉರುಳಿದೆ.

ಹೊಸನಗರ : ತಾಲ್ಲೂಕು ಹುಲಿಕಲ್‌ನಲ್ಲಿ ಬಸ್‌ ವೊಂದು ನಿಯಂತ್ರಣ ತಪ್ಪಿ ತಿರುವಿನಲ್ಲಿ ಕಂದಕಕ್ಕೆ ಬಿದ್ದ ಘಟನೆ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಹುಲಿಕಲ್‌ ಘಾಟಿ ಟರ್ನಿಂಗ್‌ನಲ್ಲಿ ಕಳೆದ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಮಾರು 60 ಅಡಿ ಆಳಕ್ಕೆ ದುರ್ಗಾಂಬಾ ಬಸ್‌ ಬ್ರೇಕ್‌ ಫೇಲ್‌ ಆಗಿ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ ಈ ವೇಳೆ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅದೃಷ್ಟಕ್ಕೆ ಯಾರಿಗೂ ಈ ಘಟನೆಯಲ್ಲಿ ದೊಡ್ಡ ಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳಿಂದ ಬಚಾವ್‌ ಪ್ರಯಾಣಿಕರಿಗೆ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್‌ ದಾವಣಗೆರೆಯಿಂದ ಮಂಗಳೂರಿಗೆ ಹೋಗುತ್ತಿತ್ತು.

– ಶಿವಮೊಗ್ಗ : ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಕಂಟ್ರೋಲ್‌ ತಪ್ಪಿ ಇನ್ನೋವಾ ಕಾರು ಪಲ್ಟಿ

ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರ್ ವೊಂದು ಪಲ್ಟಿಯಾದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಶಿವಮೊಗ್ಗ ನಗರದಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿ ಸಿಗುವ ಅರಕೆರೆ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಎದುರುಗಡೆ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಕಂಟ್ರೋಲ್‌ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಶಿವಮೊಗ್ಗ ನಗರದ ಉಮರ್‌ ಮತ್ತವರ ಸ್ನೇಹಿತರು ತೀರ್ಥಹಳ್ಳಿಗೆ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

– ಭದ್ರಾವತಿ: ಆಕಸ್ಮಿಕ ಬೆಂಕಿ, ಮನೆಯ ಗೃಹಬಳಕೆ ವಸ್ತು ಬೆಂಕಿಗೆ ಆಹುತಿ

ಭದ್ರಾವತಿ : ಭೋವಿ ಕಾಲೋನಿಯ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗೃಹ ಬಳಕೆಯ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮುಕ್ಕೂರಮ್ಮ ಎಂಬುವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಮನೆಯಲ್ಲಿರುವ ಗೃಹ ಬಳಕೆ ವಸ್ತುಗಳಿಗೆ ಹಾಗೂ ಟಿವಿ ಫ್ರಿಜ್ ಗೃಹ ಬಳಕೆಯ ಪಾತ್ರಗಳು ಹಾಗೂ ದಿನಸಿ ಧಾನ್ಯಗಳು ಬಟ್ಟೆಗಳು ದಿವಾನ್ ಕಟ್ ಹಾಗೂ ಎಲ್ಲಾ ಎಲೆಕ್ಟ್ರಿಕ್ ವೈಯರ್‌ಗಳು ಸ್ವಲ್ಪ ಆಭರಣ ಹಾಗೂ ನಗದು ಹಾಗೂ ಮನೆ ರೆಕಾರ್ಡ್ಸ್ ಮತ್ತು ಮನೆಯ ಹೆಂಚು ಇತರೆ ವಸ್ತುಗಳಿಗೆ ಬೆಂಕಿಯಿಂದ ಹಾನಿಯಾಗಿದೆ. ಅಪಾರ ನಷ್ಟವಾಗಿರುವ ಮುಕ್ಕೂರಮ್ಮನವರಿಗೆ ಇನ್ನೊಂದು ಮನೆಯಿದ್ದು ಆ ಹೊಸ ಮನೆಗೆ ಇನ್ನೂ ಶಿಫ್ಟ್ ಆಗಿರಲಿಲ್ಲ. ಅಷ್ಟರಲ್ಲೇ ಈ ಬೆಂಕಿ‌ ಅನಾಹುತ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಅಗ್ನಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀ ವಸಂತಕುಮಾರ್ ಎನ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ನಾಗೇಂದ್ರ ಜಿ ಜಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ, ಸಿಬ್ಬಂದಿಗಳಾದ ಆನಂದ, ಅರುಣ್ ಕುಮಾರ್, ಸುರೇಶ್, ಮಂಜುನಾಥ, ಸಂತೋಷ್, ಶಬ್ಬೀರ್ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

– ಸೊರಬ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಪತ್ತೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ

ಸೊರಬ: ಗೃಹಣಿಯೊಬ್ಬರು‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರ ಕುಟುಂಬ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದೆ. ಘಟನೆ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೈಲಜಾ (28) ಎಂಬ ಮಹಿಳೆ ಮೃತ ದುರ್ದೈವಿಯಾಗಿದ್ದು, ಘಟನೆ ಸೊರಬ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಆದರೆ ಶೈಲಜಾಳನ್ನು ಪತಿ ಹಾಗು ಅವರ ಅತ್ತೆ ಹೊಡೆದು ನೇಣು ಹಾಕಿದ್ದಾರೆ ಶೈಲಜಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ‌ಕುಟುಂಬಸ್ಥರ ಆಗ್ರಹಿಸಿದ್ದು, ಘಟನೆ ‌ಕುರಿತು ಸೊರಬ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಚಿಕ್ಕಮಗಳೂರು

ಮನೆಯಲ್ಲಿಯೇ ಗಾಂಜಾ ಬೆಳೆದವ ಜೈಲಿಗೆ..!!

ಮನೆಯಲ್ಲಿಯೇ ಗಾಂಜಾ ಬೆಳೆದವ ಜೈಲಿಗೆ..!!
– ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಗಾಂಜಾ ಗುಂಗು
– ಗಾಂಜಾ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಂತೆ ಸಾರ್ವಜನಿಕರ ಆಗ್ರಹ

NAMMUR EXPRESS NEWS
ಮೂಡಿಗೆರೆ: ಬೇಲೂರು ರಸ್ತೆಯಲ್ಲಿರುವ ತನ್ನ ಮನೆಯ ಟೆರೆಸ್ ಮೇಲೆಯೇ ಗಾಂಜಾ ಗಿಡವೊಂದನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿ ಅಬಕಾರಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ಬಂಧಿತ ಯುವಕ. ತನ್ನ ಮನೆಯಲ್ಲಿಯೇ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಅಧೀಕ್ಷಕರಾದ ಕೀರ್ತಿ ಕುಮಾರ್,ಅಬಕಾರಿ ನಿರೀಕ್ಷಕರಾದ ಲೋಕೇಶ.ಸಿ ರವರುಗಳ ನೇತೃತ್ವದ ತಂಡ ಯುವಕನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಪೋಲೀಸ್ ತಂಡಕ್ಕೆ ಮನೆಯ ಟೆರೇಸ್ ಮೇಲೆ ಬೆಳೆಯಲಾಗಿದ್ದ 707 ಗ್ರಾಂ ತೂಕದ ಗಾಂಜಾ ಗಿಡವನ್ನು ವಶಕ್ಕೆ ಪಡೆದು ಆರೋಪಿ ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ವಿರುದ್ಧ ಎನ್.ಡಿ.ಪಿ.ಎಸ್ ಕಾಯಿದೆ ಅಡಿ ದೂರು ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಗಾಂಜಾ ಗುಂಗು ಜೋರಾಗಿಯೇ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಪೊಲೀಸರು ಇನ್ನು ಸಕ್ರೀಯರಾಗಿ ಕರ್ತವ್ಯ ನಿರ್ವಹಿಸಿ ಗಾಂಜಾ ಪ್ರಕರಣವನ್ನು ಬೇರು ಸಮೇತ ಕಿತ್ತು ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಆರ್ಥಿಕ ದೃಷ್ಟಿಯಿಂದ ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಆರ್ಥಿಕ ಲಾಭವಿದೆ. ಯಾವುದೇ ಹಳೆಯ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಆದರೆ ಯಾರೊಂದಿಗೂ ಜಗಳಕ್ಕೆ ಇಳಿಯಬೇಡಿ. ಇಂದು ನಿಮ್ಮ ಎಲ್ಲಾ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಇಂದು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.

** ವೃಷಭ ರಾಶಿ :
ವ್ಯಾಪಾರದ ದೃಷ್ಟಿಯಿಂದ ಸ್ವಲ್ಪ ದುರ್ಬಲವಾಗಿರುತ್ತದೆ. ನಿಮ್ಮ ಕೆಲವು ಸ್ನೇಹಿತರು ನಿಮ್ಮ ಶತ್ರುಗಳಾಗಬಹುದು. ಹಾಗಾಗಿ ಅವರಿಂದ ನೀವು ಜಾಗರೂಕರಾಗಿರಬೇಕು. ಹಾಗೂ ನಿಮ್ಮ ಇಂದಿನ ಜವಾಬ್ದಾರಿಯಿಂದ ಹಿಂದೆ ಸರಿಯಬೇಡಿ. ಯೋಚಿಸದೆ ಯಾವುದೇ ಕೆಲಸದಲ್ಲಿ ಕೈ ಚಾಚಿದರೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಕುಟುಂಬ ಸದಸ್ಯರ ಆಶೀರ್ವಾದದಿಂದ ಆರ್ಥಿಕ ಲಾಭ ಪಡೆಯಬಹುದು. ಕುಟುಂಬದ ಸದಸ್ಯರ ವಿವಾಹ ಯೋಜನೆ ಇಂದು ಅಂತಿಮಗೊಳ್ಳಬಹುದು.

** ಮಿಥುನ ರಾಶಿ :
ಇಂದು ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾರೆ ಮತ್ತು ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ನೀವು ರಾಜಕೀಯದಲ್ಲಿ ಚಿಂತನಶೀಲವಾಗಿ ಮುಂದುವರಿಯಬೇಕು, ಏಕೆಂದರೆ ಅಲ್ಲಿ ನಿಮಗೆ ಸಮಸ್ಯೆಗಳು ಸಿದ್ಧವಾಗಿವೆ. ವ್ಯಾಪಾರ ಮಾಡುವವರು ಇಂದು ಯಾರಿಗಾದರೂ ಸಾಲದ ಮೇಲೆ ಸರಕುಗಳನ್ನು ನೀಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬಹುದು.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ಇಂದ ಮಧ್ಯಮ ಫಲಪ್ರದವಾಗಲಿದೆ. ಆದರೆ ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಬೇಕು. ವ್ಯವಹಾರದಲ್ಲಿನ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ, ಏಕೆಂದರೆ ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು. ನೀವು ಕೆಲವು ಸರ್ಕಾರಿ ಟೆಂಡರ್ ಪಡೆಯಬಹುದು. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತೀರಿ.

** ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಈ ದಿನ ಸಂತೋಷಕರವಾಗಿರುತ್ತದೆ. ನಿಮ್ಮ ಮನೆಗೆ ಅತಿಥಿಯ ಆಗಮನದಿಂದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಇಂದು ನೀವು ವಾಹನಗಳನ್ನು ಎಚ್ಚರಿಕೆಯಿಂದ ಬಳಸಿದರೆ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ನೀವು ಕೆಲವು ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು, ಈ ಕಾರಣದಿಂದಾಗಿ ನೀವು ಭಯಪಡುವ ಅಗತ್ಯವಿಲ್ಲ.

** ಕನ್ಯಾ ರಾಶಿ :
ಕೆಲಸದ ವಿಷಯದಲ್ಲಿ ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಬಯಸಿದರೆ, ನೀವು ಬೇರೆಲ್ಲಿಯಾದರೂ ಅರ್ಜಿ ಸಲ್ಲಿಸಬಹುದು, ಆದರೆ ನಿಮ್ಮ ಮಾತಿನ ಸೌಮ್ಯತೆಯನ್ನು ಕಾಪಾಡಿಕೊಳ್ಳಿ. ಕೆಲವು ಕೆಲಸದ ಕಾರಣ ನೀವು ಇದ್ದಕ್ಕಿದ್ದಂತೆ ಪ್ರವಾಸಕ್ಕೆ ಹೋಗಬೇಕಾಗಬಹುದು. ನಿಮ್ಮ ಹೆತ್ತವರ ಆಶೀರ್ವಾದದಿಂದ, ನಿಮ್ಮ ಯಾವುದೇ ಬಾಕಿ ಕೆಲಸವು ಪೂರ್ಣಗೊಳ್ಳುತ್ತದೆ.

** ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಸಂತೋಷದ ಸಾಧನಗಳು ಹೆಚ್ಚಾಗುತ್ತವೆ. ಯಾವುದೇ ಕೌಟುಂಬಿಕ ಸಮಸ್ಯೆ ನಿಮ್ಮನ್ನು ದೀರ್ಘಕಾಲ ಕಾಡುತ್ತಿದ್ದರೆ ಅದೂ ದೂರವಾಗುತ್ತದೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯವನ್ನು ಮೋಜು ಮಾಡುವಿರಿ. ಮನೆಯವರ ಜೊತೆಗೆ ಯಾರೊಂದಿಗಾದರೂ ಘರ್ಷಣೆ ನಡೆಯುತ್ತಿದ್ದರೆ ಅದೂ ಮಾತುಕತೆಯ ಮೂಲಕ ಬಗೆಹರಿಯುತ್ತದೆ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ಆತುರದಿಂದ ಅಥವಾ ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಗೌರವ ಹೆಚ್ಚಾದಂತೆ ನಿಮ್ಮ ಸಂತೋಷಕ್ಕೆ ಮಿತಿಯಿಲ್ಲ. ನೀವು ಕೆಲವು ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮಗೆ ಹಳೆಯ ಸ್ನೇಹಿತನ ನೆನಪಾಗಬಹುದು. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ.

** ಧನಸ್ಸು ರಾಶಿ :
ಧನು ರಾಶಿಯವರಿಗೆ ಇಂದು ತಾಳ್ಮೆ ಮತ್ತು ಧೈರ್ಯದಿಂದ ಕೆಲಸ ಮಾಡುವ ದಿನವಾಗಿರುತ್ತದೆ. ನೀವು ಯಾವುದೇ ಕೆಲಸದಲ್ಲಿ ಆತುರ ತೋರಿಸಿದರೆ, ನೀವು ಅದರಲ್ಲಿ ನಷ್ಟ ಎದುರಿಸಬಹುದು. ಕೆಲಸದ ಕ್ಷೇತ್ರದಲ್ಲಿ ನೀವು ಕೆಲವು ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು. ಕೌಟುಂಬಿಕ ವಿಷಯಗಳ ಬಗ್ಗೆ ನಿಮ್ಮ ತಂದೆಯೊಂದಿಗೆ ಮಾತನಾಡಬೇಕಾಗುತ್ತದೆ. ಮಗುವಿನ ಕೆಲಸದಲ್ಲಿ ಏನಾದರೂ ಅಡೆತಡೆಗಳಿದ್ದರೆ, ಅದನ್ನು ಸಹ ತೆಗೆದುಹಾಕಲಾಗುತ್ತದೆ.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ನೀವು ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ಮಾಡಬೇಕಾದರೆ ನಿಮ್ಮ ಆತಂಕ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಯಾವುದೇ ಆಸ್ತಿ ಸಂಬಂಧಿತ ವ್ಯವಹಾರಗಳು ದೀರ್ಘಕಾಲದವರೆಗೆ ಬಾಕಿ ಉಳಿದಿದ್ದರೆ, ಅದನ್ನು ಅಂತಿಮಗೊಳಿಸಬಹುದು. ಆನ್‌ಲೈನ್ ವ್ಯಾಪಾರ ಮಾಡುವ ಜನರು ಸ್ವಲ್ಪ ಗಮನ ಹರಿಸಬೇಕು, ಏಕೆಂದರೆ ಅವರಿಗೆ ಕೆಲವು ವಂಚನೆಗಳು ಸಂಭವಿಸಬಹುದು.

** ಕುಂಭ ರಾಶಿ :
ಇಂದು ಕುಂಭ ರಾಶಿಯ ಜನರಿಗೆ ನಾಳೆ ಆಹ್ಲಾದಕರ ಫಲಿತಾಂಶಗಳನ್ನು ತರಲಿದೆ. ಯಾವುದಾದರೊಂದು ಯೋಜನೆಯಿಂದ ಉತ್ತಮ ಲಾಭ ಪಡೆದರೆ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ನಿಮ್ಮ ಕಳೆದುಹೋದ ಹಣವನ್ನು ಸಹ ನೀವು ಮರಳಿ ಪಡೆಯಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾಗುವುದು. ಇಂದು ನಿಮ್ಮ ಯಾವುದೇ ಆಸೆಗಳು ಈಡೇರಬಹುದು.ನಿಮ್ಮ ಜೀವನ ಸಂಗಾತಿಯೊಂದಿಗೆ ಶಾಪಿಂಗ್ ಇತ್ಯಾದಿಗಳಿಗೆ ಹೋಗಲು ನೀವು ಯೋಜಿಸಬಹುದು.

** ಮೀನ ರಾಶಿ :
ಮೀನ ರಾಶಿಯವರಿಗೆ ನಾಳೆ ಉತ್ತಮ ದಿನವಾಗಲಿದೆ. ಯಾವುದೇ ಕೆಲಸದ ವಿಚಾರದಲ್ಲಿ ನಿಮಗೆ ಟೆನ್ಷನ್ ಇದ್ದಲ್ಲಿ ಅದೂ ದೂರವಾಗುತ್ತದೆ. ಕುಟುಂಬದ ಜನರು ನಿಮ್ಮ ಮಾತಿಗೆ ಪೂರ್ಣ ಪ್ರಾಮುಖ್ಯತೆ ನೀಡುತ್ತಾರೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ತಂದೆಯಿಂದ ಕೆಲವು ಸಲಹೆಗಳನ್ನು ನೀವು ತೆಗೆದುಕೊಳ್ಳಬಹುದು. ನೀವು ಚಿಕ್ಕ ಮಕ್ಕಳೊಂದಿಗೆ ಸ್ವಲ್ಪ ಸಮಯ ಮೋಜು ಮಾಡುತ್ತೀರಿ. ಕೆಲವು ಹೊಸ ಕೆಲಸವನ್ನು ಮಾಡುವ ನಿಮ್ಮ ಬಯಕೆಯು ಜಾಗೃತಗೊಳ್ಳಬಹುದು.

Categories
ಶಿವಮೊಗ್ಗ

ವಾತ್ಸಲ್ಯ ಇಂಟರ್ ನ್ಯಾಷನಲ್ ಸ್ಕೂಲ್ ವಾತ್ಸಲ್ಯೊತ್ಸವ!

ವಾತ್ಸಲ್ಯ ಇಂಟರ್ ನ್ಯಾಷನಲ್ ಸ್ಕೂಲ್ ವಾತ್ಸಲ್ಯೊತ್ಸವ!
* 11ನೇ ವರ್ಷದ ಸಂಸ್ಥಾಪನಾ ಉತ್ಸವ ಅದ್ದೂರಿ ತೆರೆ
* ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು: ಪೋಷಕರ ಮೆಚ್ಚುಗೆ

NAMMUR EXPRESS NEWS
ಶಿವಮೊಗ್ಗ:
ಆಯನೂರು ವಾತ್ಸಲ್ಯ ಇಂಟರ್‌ನ್ಯಾಶನಲ್ ಶಾಲೆಯ ಕೆ.ವಿ. ಕೃಷ್ಣಮೂರ್ತಿ ಓಪನ್ ಆಡಿಟೋರಿಯಂನಲ್ಲಿ ವಾತ್ಸಲ್ಯೊತ್ಸವ, 11ನೇ ವರ್ಷದ ಸಂಸ್ಥಾಪನಾ ಉತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಹುಂಚದಕಟ್ಟೆ ಶಿಕ್ಷಣ ಟ್ರಸ್ಟ್ (ರಿ) ಅಧ್ಯಕ್ಷರಾದ ಶೈಲಾ ಕೃಷ್ಣಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ವಾಭಿಮಾನಿ ಬಳಗದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಇನ್ಸೈಟ್ ಐ. ಎ. ಎಸ್ ನ ಸ್ಥಾಪಕ ಮತ್ತು ನಿರ್ದೇಶಕರು ಜಿ.ಬಿ. ವಿನಯ್ ಕುಮಾರ್ ಹಾಗೂ ಹುಂಚದಕಟ್ಟೆ ಶಿಕ್ಷಣ ಟ್ರಸ್ಟ್ (ಆರ್.) ಆಶ್ರಯ ಹೊನ್ನೇಕಟ್ಟೆ ಇವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಿಧ ವೇಷ ಭೂಷಣಗಳಿಂದ ಸಾಂಸ್ಕೃತಿಕ ರಂಗನ್ನು ಹೆಚ್ಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಪೋಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಯನ್ನ ಕೂಡ ಪಡೆಯಿತು.