Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ..

ಶೃಂಗೇರಿಯಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ..
– ಜಗದ್ಗುರ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಶಿಬಿರ
– ಸುಮಾರು 93 ಯುನಿಟ್ ರಕ್ತ ಸಂಗ್ರಹ,ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು

NAMMUR EXPRESS NEWS
ಶೃಂಗೇರಿ: ತಾಲೂಕಿನ ಕಾರ್ಮಿಕ ಮಿತ್ರ ವೃಂದ,ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್,ಶ್ರೀಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್,ಶ್ರೀಭಾರತೀ ತೀರ್ಥ ಸದ್ಬಕ್ತ ಸಂಘ,ಜೆಸಿಐ ಘಟಕ,ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘ,ಕ.ಸಾ.ಪ ಮಹಿಳಾ ಘಟಕ,ಆಟೋ ಚಾಲಕರು ಮತ್ತು ಮಾಲೀಕರ ಸಂಘ ಇವರುಗಳ ಸಹಯೋಗದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಶ್ರೀಮಠದ ಶಾರದಾ ಕೃಪಾ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗತ್ತು. ಈ ಶಿಬಿರವನ್ನು ಶ್ರೀ ಶಾರದಾ ಪೀಠದ ಶ್ರೀಜಗದ್ಗರುಗಳ ಆಪ್ತ ಸಹಾಯಕರಾದ ವೇದಬ್ರಹ್ಮ ಶ್ರೀ ಶಂ ನ ಕೃಷ್ಣಮೂರ್ತಿಗಳವರು ಉದ್ಘಾಟಿಸಿದರು. ಶಿಬಿರದಲ್ಲಿ ಶ್ರೀಮಠದ ಭಕ್ತರು,ಎಲ್ಲಾ ಸಂಘ,ಸಂಸ್ಥೆಗಳ ಕಾರ್ಯಕರ್ತರು,ಪದಾಧಿಕಾರಿಗಳು ಅತಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ಒಟ್ಟು 93 ಯುನಿಟ್‌ಗಳಷ್ಟು ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ. ಈ ಶಿಬಿರ ಯಶಸ್ವಿಯಾಗಿದ್ದು ಸಹಕರಿಸಿದ ಮತ್ತು ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೂ ಆಯೋಜಕರು ಧನ್ಯವಾದಗಳನ್ನು ತಿಳಿಸಿದರು.

Categories
ಉಡುಪಿ

ಕ್ರಿಯೇಟಿವ್ ನುಡಿಹಬ್ಬ, ವಾರ್ಷಿಕೋತ್ಸವ ಕ್ರಿಯೇಟಿವ್ ಆವಿರ್ಭವ ಸೂಪರ್

ಕ್ರಿಯೇಟಿವ್ ನುಡಿಹಬ್ಬ, ವಾರ್ಷಿಕೋತ್ಸವ ಕ್ರಿಯೇಟಿವ್ ಆವಿರ್ಭವ ಸೂಪರ್
– ಸಾಹಿತಿ ಬಿ ಆರ್ ಲಕ್ಷ್ಮಣರಾವ್, ಡಾ. ನಾ ಸೋಮೇಶ್ವರ ಮೊದಲಾದ ದಿಗ್ಗಜರು ಭಾಗಿ
– ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನರು ಫಿದಾ

NAMMUR EXPRESS NEWS
ಕಾರ್ಕಳ: ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ಕ್ರಿಯೇಟಿವ್ ನುಡಿಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭ ಕ್ರಿಯೇಟಿವ್ ಆವಿರ್ಭವವು ” ವಿವಿಧತೆಯಲ್ಲಿ ಏಕತೆ ” ಎಂಬ ಪರಿಕಲ್ಪನೆಯೊಂದಿಗೆ ಬಹಳ ವೈಭವಪೂರ್ಣವಾಗಿ ಮೂಡಿಬಂದಿತು. ಪ್ರೇಮಕವಿ ಎಂದೇ ಕರೆಯಲ್ಪಡುವ ಖ್ಯಾತ ಸಾಹಿತಿಗಳಾದ ಬಿ ಆರ್ ಲಕ್ಷ್ಮಣರಾವ್ ಹಾಗೂ ನಡೆದಾಡುವ ಗ್ರಂಥಾಲಯ ಎಂದೇ ಪ್ರಸಿದ್ಧರಾದ ಡಾ. ನಾ ಸೋಮೇಶ್ವರ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎರಡು ಹಂತಗಳಲ್ಲಿ ಸಂವಾದ ಕಾರ್ಯಕ್ರಮವು ಖ್ಯಾತ ನಿರೂಪಕ ಅವಿನಾಶ್ ಕಾಮತ್ ರವರ ಮುಖೇನ ನಡೆಸಲ್ಪಟ್ಟಿತು. ” ಕವಿತೆ ಹುಟ್ಟುವ ಸಮಯ ” ಸಂವಾದ ಕಾರ್ಯಕ್ರಮದಲ್ಲಿ ಬಿ ಆರ್ ಲಕ್ಷ್ಮಣರಾವ್ ರವರು ಸಂವಾದ ನಡೆಸುತ್ತಾ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಹಾಡುಗಳ ನಿರಂತರತೆಗೆ ಕಾರಣ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳು ಎಂದರು. ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ಬಿ ಆರ್ ಲಕ್ಷ್ಮಣರಾವ್ ವಿರಚಿತ ಕವಿತೆಗಳ ಗಾಯನ ಕಾರ್ಯಕ್ರಮ ಜರುಗಿತು. ಪ್ರಖ್ಯಾತ ವೈದ್ಯ, ಕ್ವಿಜ್ ಮಾಸ್ಟರ್, ಲೇಖಕರು ಹಾಗೂ ಅಂಕಣಕಾರರಾದ ಡಾ. ನಾ ಸೋಮೇಶ್ವರರವರು ಸಂವಾದ ಕಾರ್ಯಕ್ರಮದಲ್ಲಿ ” ಪುಸ್ತಕ ಪ್ರೀತಿಯಿಂದ ಬದುಕು ಸಂಪ್ರೀತ ” ಎಂಬ ವಿಚಾರದ ಕುರಿತು ಮಾತನಾಡುತ್ತಾ ಮೆದುಳು, ಮನಸ್ಸು ಹಾಗೂ ಆತ್ಮಕ್ಕೆ ಸೂಕ್ತ ವ್ಯಾಯಾಮ ನೀಡುವುದು ಪುಸ್ತಕ ಮಾತ್ರ. ಆದ್ದರಿಂದ ಪಠ್ಯವಾಗಲಿ, ಸಾಹಿತ್ಯವಾಗಲಿ ಪ್ರೀತಿಯಿಟ್ಟು ಓದಿದರೆ ಮಾತ್ರ ಗುರಿ ಮುಟ್ಟಲು ಸುಲಭಸಾಧ್ಯ ಎಂದರು. “ವನಿತಾ ಸುಗ್ಗಿ” ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಪುಸ್ತಕಮನೆ ವತಿಯಿಂದ 5 ಜನ ಲೇಖಕಿಯರ ಪುಸ್ತಕ ಬಿಡುಗಡೆಯಾಯಿತು. ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಹಾಗೂ ಮೂಡುಬಿದಿರೆ ಶಾಖೆಯಲ್ಲಿ ” ಪರಸ್ಪರ ” ಕಾರ್ಯಕ್ರಮದಲ್ಲಿ ಓದುಗ – ಲೇಖಕ ಜೊತೆಯಾಗುವ, ಪುಸ್ತಕಗಳಿಗೆ ಸಹಿ ಪಡೆಯುವ, ಸೆಲ್ಫಿ ತೆಗೆದುಕೊಳ್ಳುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿತ್ತು. ಅಪರಾಹ್ನ 2.30ರಿಂದ 2023-24ನೇ ಶೈಕ್ಷಣಿಕ ಸಾಲಿನ “ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ” ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರಿಯೇಟಿವ್ ವಿದ್ಯಾರ್ಥಿಗಳ ಸಾಧನೆಯಿಂದ ಕಾರ್ಕಳ ತಾಲೂಕು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ವಿಭಾಗದ ಉಪನಿರ್ದೇಶಕರಾದ ಶ್ರೀ ಮಾರುತಿರವರು ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ವಿಭಾಗಗಳಲ್ಲಿ ಮುಂಚೂಣಿಯಲ್ಲಿದ್ದು, ಹೆಸರಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸೃಜನಾತ್ಮಕವಾಗಿ ಮಾರ್ಪಡಿಸುತ್ತಿರುವ ಸಂಸ್ಥೆ ಇನ್ನಷ್ಟು ಏಳಿಗೆಯನ್ನು ಕಾಣಲಿ ಎಂದು ಶುಭಹಾರೈಸಿದರು. 2023-24ನೇ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ವಿತರಣೆಯು ನಡೆಯಿತು. ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಸಂಸ್ಥಾಪಕ ವರ್ಗದವರು, ಎಲ್ಲಾ ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಯ ಸಂಜೆ 6:30 ರಿಂದ “ವಿವಿಧತೆಯಲ್ಲಿ ಏಕತೆ” ಪರಿಕಲ್ಪನೆಯ ‘ಕ್ರಿಯೇಟಿವ್ ಆವಿರ್ಭವ’ ವು ಬಹಳ ಸುಂದರವಾಗಿ ಮೂಡಿಬಂದು ಸಾಂಸ್ಕೃತಿಕ ಕಾರ್ಯಕ್ರಮವು ಸಾವಿರಾರು ಮಂದಿ ಪ್ರೇಕ್ಷಕರ ಮನಸೂರೆಗೊಂಡಿತು.

Categories
ಮಲ್ನಾಡ್

ಮಲೆನಾಡ ಅದೃಷ್ಟ ದಂಪತಿಗಳಾಗಿ ಅರುಣ್ ಅಸಿಕೊಪ್ಪ ಮತ್ತು ಆಶಿಕಾ

ಮಲೆನಾಡ ಅದೃಷ್ಟ ದಂಪತಿಗಳಾಗಿ ಅರುಣ್ ಅಸಿಕೊಪ್ಪ ಮತ್ತು ಆಶಿಕಾ
– ಸಹ್ಯಾದ್ರಿ ಸಂಘದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಯುವ ದಂಪತಿ
– ದಂಪತಿಗಳಿಗೆ ಶುಭ ಕೋರಿದ ಸ್ನೇಹಿತರು

NAMMUR EXPRESS NEWS
ಬೆಂಗಳೂರು: ಬೆಂಗಳೂರಲ್ಲಿ ನಡೆದ ಸಹ್ಯಾದ್ರಿ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಮಲೆನಾಡ ಅದೃಷ್ಟ ದಂಪತಿಗಳಾಗಿ ಯುವ ಮುಖಂಡರಾದ ಅರುಣ್ ಅಸಿಕೊಪ್ಪ ಮತ್ತು ಆಶಿಕಾ ಗೆಲುವು ಸಾಧಿಸಿದ್ದಾರೆ. ಅನೇಕ ದಂಪತಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗಣ್ಯರು ಪ್ರಶಸ್ತಿಯನ್ನು ವಿತರಣೆ ಮಾಡಿದರು. ದಂಪತಿಗಳಿಗೆ ಸ್ನೇಹಿತರು ಶುಭ ಕೋರಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲೊಂದು ವಿಭಿನ್ನ ಹೊಸ ವರ್ಷ!

ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲೊಂದು ವಿಭಿನ್ನ ಹೊಸ ವರ್ಷ!
– ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
– ಜನತಾ ಬಡಾವಣೆಯಲ್ಲಿ ಮೊಳಗಿದ ಹೊಸ ವರ್ಷದ ಹರ್ಷ..!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಜನತಾ ಕಾಲೋನಿ ಇದೀಗ ಹೊಸ ವರ್ಷದಿಂದ ಜನತಾ ಬಡಾವಣೆಯಾಗಿ ಮಾರ್ಪಟ್ಟಿದ್ದು ಬಡಾವಣೆಯ ಜನರೆಲ್ಲಾ ಸೇರಿ ಹೊಸ ವರ್ಷವನ್ನ ಸ್ವಾಗತಿಸಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗಮನ ಸೆಳೆದರು. ರಾಘವೇಂದ್ರ ಎಸ್ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಎಸ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ರಾಘವೇಂದ್ರ ಎಲ್ ಅವರು ಕಾರ್ಯಕ್ರಮದ ಸಾರಥ್ಯವನ್ನು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಹುತೇಕ ಜನತಾ ಬಡಾವಣೆಯ ಎಲ್ಲಾ ಮನೆಯ ಜನತೆ ಭಾಗವಹಿಸಿದ್ದು ಈ ಬಡಾವಣೆಯ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ವಿವಿಧ ಆಟೋಟಗಳನ್ನು ನಡೆಸಲಾಯಿತು. ಹಾಗೆ ಪಟಾಕಿಗಳನ್ನ ಸಿಡಿಸಿ,ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಜೊತೆಗೆ ಇಡೀ ಬಡಾವಣೆಯ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ಬಡಾವಣೆಯ ಎಲ್ಲರೂ ಸೇರಿ ಹೊಸ ವರ್ಷ ಆಚರಣೆ ಮಾಡಿರುವುದು ಗಮನ ಸೆಳೆಯಿತು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಯಿತು.
ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹಾಗೂ ವಿಶೇಷ ಲಕ್ಕಿ ಡ್ರಾ ಯೋಜನೆ ಮಾಡಿ ಬಂಗಾರದ ಬಹುಮಾನ ವಿತರಣೆ ಮಾಡಿ ಹೊಸ ವರ್ಷ ಆಚರಣೆ ಮಾಡಲಾಯಿತು. ಸಹಕರಿಸಿದ ಸರ್ವರಿಗೂ ಆಯೋಜಕರು ಧನ್ಯವಾದ ಅರ್ಪಿಸಿದ್ದಾರೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಅಡಿಕೆ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

NAMMUR EXPRESS NEWS

ಸರಕು
55599-79470

ಬೆಟ್ಟೆ
47699-52100-53009

ರಾಶಿ
44699-49900-51500

ಗೊರಬಲು
18129-27500-29009

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ಕರ್ನಾಟಕ
– ಕರ್ನಾಟಕಕ್ಕೂ ಕಾಲಿಟ್ಟ ಎಚ್‌ಎಂಪಿವಿ ವೈರಸ್‌
– ಬೆಂಗಳೂರು : 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್‌ ಪತ್ತೆ
– ಬೆಂಗಳೂರು : ತಾಯಿಯನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಗ..!
– ನಾಗಮಂಗಲ: ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಯಲ್ಲಿ ಜಗಳ
– ಕೊಪ್ಪಳ : ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!

NAMMUR EXPRESS NEWS
ಬೆಂಗಳೂರು : 8 ತಿಂಗಳ ಮಗುವಿಗೆ ಎಚ್‌ಎಂಪಿವಿ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿಂತೆಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‌ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ.

– ಬೆಂಗಳೂರು : ತಾಯಿಯನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಗ..!

ಬೆಂಗಳೂರು : ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ನಡೆದಿದೆ. ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ. ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ದರು. ಆದ್ರೆ, ಮಗ ಕುಡಿದುಬಂದು ತಾಯಿ ಜೊತೆ ಜಗಳ ಮಾಡುತ್ತಿದ್ದ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೊಬೈಲ್​ ಚಾರ್ಜರ್​ ವೈರ್​ನಿಂದ ತಾಯಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗ ಕುಡಿದು ಬಂದು ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊಬೈಲ್ ಚಾರ್ಜಿಂಗ್ ವೈರ್‌ನಿಂದ ಕುತ್ತಿಗೆಗೆ ಬಿಗಿದು ತಾಯಿ ಹತ್ಯೆ ಮಾಡಿದ್ದಾನೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರ ಮತ್ತು ಬೆಂಗಳೂರು ಗ್ರಾಮಾಂತರ ಎಎಸ್‌ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ದೇಹಗಳನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.

– ನಾಗಮಂಗಲ: ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಯಲ್ಲಿ ಜಗಳ

ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಬೀದಿ ಜಗಳ ಮುಂದುವರಿದಿದೆ. ಪಾಂಡವಪುರ ಠಾಣೆ ಬಳಿ ನಡೆದ ಜಟಾಪಟಿ ಮಾಸುವ ಮುನ್ನವೇ ನಾಗಮಂಗಲದಲ್ಲಿ ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಜಗಳವಾಗಿ ನಡುಬೀದಿಯಲ್ಲಿ ಹೊರಳಾಡಿರುವ ಘಟನೆ ನಡೆದಿದೆ. ತಾಯಿಯೊಬ್ಬರು ಮಗನ ವಿರುದ್ಧ ಕಿರುಕುಳ ನೀಡುತ್ತಿರುವ ಕುರಿತು ದೂರು‌ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ಯಲು ಬಂದ ಎ.ಎಸ್.ಐ ಜೊತೆಗೆ ಆರೋಪಿಯು ಹೊಡೆದಾಡಿಕೊಂಡಿದ್ದು, ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ. ಪಟ್ಟಣದ ಟಿ.ಬಿ.ವೃತ್ತದ ಬಳಿಯ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಆರೋಪಿ ಮಜ್ಜನಕೊಪ್ಪಲು ಪೂಜಾರಿ ಕೃಷ್ಣನನ್ನು ಅವನ ತಾಯಿ ಮರಿಯಮ್ಮ ನೀಡಿರುವ ದೂರಿನ ಮೇರೆಗೆ ವಿಚಾರಣೆ ನಡೆಸಲು ಠಾಣೆಗೆ ಕರೆದೊಯ್ಯಲು ಗ್ರಾಮಾಂತರ ಠಾಣೆಯ ಎ.ಎಸ್.ಐ ರಾಜು ಬಂದಿದ್ದಾರೆ. ಆರೋಪಿಯು ಬರಲು ಒಪ್ಪದಿದ್ದಾಗ ಬಲವಂತವಾಗಿ ಆಟೊ ಹತ್ತಿಸಲು ಎ.ಎಸ್.ಐ ಮುಂದಾದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಆರೋಪಿ ಮತ್ತು ಪೊಲೀಸ್ ಅಧಿಕಾರಿಯು ಪರಸ್ಪರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಆರೋಪಿಯು “ದೂರು ಬಂದಿದ್ದರೆ ಎಫ್.ಐ.ಆರ್ ಹಾಕಿ ನಾನು ಠಾಣೆಗೆ ಬರುವುದಿಲ್ಲ” ಎಂದು ಎ.ಎಸ್.ಐ ಗೆ ಬೈದಿದ್ದಾನೆ ಎನ್ನಲಾಗಿದೆ. ನಂತರ ಇಬ್ಬರು ಕೊರಳಪಟ್ಟಿ ಹಿಡಿದು ಹೊಡೆದಾಟ ನಡೆಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಿ ಎಳೆದಾಡಿದ ಪೂಜಾರಿ ಕೃಷ್ಣನಿಗೆ ತರಾಟೆ ತೆಗೆದುಕೊಂಡು ಜಗಳವನ್ನು ಬಿಡಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಳಿಕ ಪೂಜಾರಿ ಕೃಷ್ಣನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

– ಕೊಪ್ಪಳ : ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!

ಕೊಪ್ಪಳ : ಆಕೆ ಮುದ್ದು ಮುಖದ ತಾವರೆಯಂತಿದ್ದಳು. ಮನೆಯಲ್ಲಿ ಚೆನ್ನಾಗಿ ಸಾಕಿದ್ದ ಹೆತ್ತವರು,ಗಿಣಿಯಂತೆ ಇದ್ದ ಮಗಳನ್ನು ಮದುವೆ ಮಾಡಿ, ಆಕೆಯ ಸಂಸಾರದ ಬಾಳು ಆನಂದಸಾಗರವಾಗಲಿ ಅಂತ ಹರಿಸಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಮುದ್ದಾದ ಹೆಣ್ಣು ಮಗು ಕೂಡಾ ಹುಟ್ಟಿತ್ತು. ಮದುವೆಯಾದ ಮಗಳು ಚೆನ್ನಾಗಿರಲಿ ಅಂತ ಹೆತ್ತವರು ಸಾಕಷ್ಟು ವರದಕ್ಷಿಣೆ ನೀಡಿದ್ದರು. ಅಳಿಯ ಕೇಳಿದಾಗ ಮತ್ತೆ ಹಣ ಕೂಡಾ ನೀಡಿದ್ದರು. ಆದ್ರೆ ಇಂತಹ ಮುದ್ದಾದ ಮಗಳು, ಬಾರದ ಲೋಕಕ್ಕೆ ಹೋಗಿದ್ದ ಸುದ್ದಿ ಕೇಳಿ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದ್ದು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ. ಕೊಪ್ಪಳದಲ್ಲಿ ಹೆತ್ತವರ ಆಕ್ರೋಶ, ಆಕ್ರಂಧನಕ್ಕೆ ಕಾರಣ,ತಮ್ಮ ಮಗಳು ಬಾರದ ಲೋಕಕ್ಕೆ ಹೋಗಿದ್ದು. ಕೊಪ್ಪಳ ನಗರದ ಭಾಗ್ಯ ನಗರದಲ್ಲಿರುವ ಜನತಾ ಕಾಲೋನಿಯ ನಿವಾಸಿಯಾಗಿದ್ದ ರೇಣುಕಾ ಸಂಗಟಿ ಅನ್ನೋ ಇಪ್ಪತ್ತೈದು ವರ್ಷದ ಮಹಿಳೆ ಇಂದು ನಸುಕಿನ ಜಾವದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ರೇಣುಕಾಳ ಪತಿ, ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಹೇಳಿದ್ರೆ, ಇತ್ತ ಹೆತ್ತವರು ಮಾತ್ರ ಮಗಳ ಶವ ನೋಡಿ, ಇದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅಂತ ಆರೋಪಿಸುತ್ತಿದ್ದಾರೆ. ರೇಣುಕಾಳ ಪತಿ ಅನೀಲ್ ಸಂಗಟಿ ಮತ್ತು ಆತನ ಕುಟುಂಬದವರು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

Categories
ಚಿಕ್ಕಮಗಳೂರು

ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ..

ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ..
– ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಸುರೇಂದ್ರ ಯಡದಾಳ್
– ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ ಆದಿಚುಂಚನಗಿರಿ ಶ್ರೀಗಳು

NAMMUR EXPRESS NEWS
ಶೃಂಗೇರಿ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ,ಚಿಕ್ಕಮಗಳೂರು ಹಾಗೂ ತಾಲೂಕು ಘಟಕ,ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ -2025 ರ ಆಹ್ವಾನ ಪತ್ರಿಕೆಯನ್ನು ಶ್ರೀಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ ಇಲ್ಲಿನ ಪೀಠಾಧೀಶರಾದ ಶ್ರೀಶ್ರೀಗುಣನಾಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಓಟಿತೋಟ ರತ್ನಾಕರ್,ತಾಲೂಕು ಘಟಕದ ಅಧ್ಯಕ್ಷರಾದ ಆಶೀಶ್ ದೇವಾಡಿಗ,ಸ್ವಾಗತ ಸಮಿತಿ ಅಧ್ಯಕ್ಷರಾದ ಎ.ಎಸ್ ನಯನ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಓಟಿತೋಟ ರತ್ನಾಕರ್‌ರವರು ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು ಮೊದಲಿಗೆ ರಾಷ್ಟ್ರ ಧ್ವಜಾರೋಹಣವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿಯವರು ನೆರವೇರಿಸಲಿದ್ದು ನಂತರ ನಾಡ ಧ್ವಜಾರೋಹಣವನ್ನು ಸಮ್ಮೇಳನದ ಸ್ವಾಗತ ಸಮಿಯ ಅಧ್ಯಕ್ಷರಾದ ಎ.ಎಸ್ ನಯನರವರು ನೆರವೇರಿಸಲಿದ್ದಾರೆ ನಂತರ ಜಾನಪದ ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಓಟಿತೋಟ ರತ್ನಾಕರ್ ರವರು ನೆರವೇರಿಸಲಿದ್ದಾರೆ, ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಶೃಂಗೇರಿ ತಾಲೂಕಿನ ಹಿರಿಯ ಜಾನಪದ ಕಲಾವಿದರಾದ ಶ್ರೀ ಸುರೇಂದ್ರ ಯಡದಾಳ್‌ರವರು ಆಯ್ಕೆಯಾಗಿರುವುದಾಗಿ ತಿಳಿಸಿದರು.
9:00 ಗಂಟೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಶ್ರೀಮಠದ ಆವರಣದಿಂದ ಶಂಕರಾಚಾರ್ಯ ವೃತ್ತದವರೆಗೆ ನಡೆಯಲಿದೆ. 10:30 ಕ್ಕೆ ಜಾನಪದ ಪರಿಷತ್ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶಾಸಕ ರಾಜೇಗೌಡ ಸಮ್ಮೇಳನದ ಉದ್ಘಾಟಿಸಲಿದ್ದಾರೆ.
12ಗಂಟೆಯಿಂದ ರಾಜ್ಯ ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿಗಳಾದ ಕೆ.ಎಸ್ ಕೌಜಲಗಿ ಅಧ್ಯಕ್ಷತೆಯಲ್ಲಿ ಜಾನಪದ ಗೋಷ್ಠಿ ನಡೆಯಲಿದ್ದು ರಂಗೋಲಿಯಲ್ಲಿ ಪರಿಸರ ಪ್ರಜ್ಞೆ ವಿಷಯವಾಗಿ ಡಾ.ಭಾರತಿ ಮರವಂತೆ, ಮಲೆನಾಡಿನ ಜಾನಪದ ಕಲೆಗಳು ಎಂಬ ವಿಷಯವಾಗಿ ಸುಧೀರ್ ಕುಮಾರ್ ಮುರೊಳ್ಳಿ, ಮಹಿಳಾ ಜಾನಪದ ಎಂಬ ವಿಷಯವಾಗಿ ಎಸ್ ಎನೊ ಚಂದ್ರಕಲಾರವರುಗಳು ಉಪನ್ಯಾಸ ನೀಡಲಿದ್ದಾರೆ.
2ಗಂಟೆಯಿಂದ ಜಿಲ್ಲಾ ಮಟ್ಟದ ಜಾನಪದ ಕಲಾ ಪ್ರದರ್ಶನ ನಡೆಯಲಿದ್ದು, ಸಂಜೆ 4 ಗಂಟೆಯಿಂದ ಜಾನಪದ ಬಹಿರಂಗ ಅಧಿವೇಶನ ನಡೆಯಲಿದೆ. 5 ಗಂಟೆಯಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರಾದ ಜಾನಪದ ಕಲಾವಿದರಾದ ಕೊಪ್ಪದ ಬಲಗಾರು ಗಣೇಶ್ ಹಾಗೂ ವೀರಗಾಸೆ ಕಲಾವಿದರಾದ ಕಡೂರಿನ ನವೀನ್ ಕುಮಾರ್ ಅರೇಹಳ್ಳಿಯವರಿಗೆ “ಜಾನಪದ ಪ್ರಪಂಚ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 7 ಗಂಟೆಯಿಂದ ನಡೆಯಲಿರುವ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಮೂಲ ಕಲೆಯಾದ ಅಂಟಿಕೆ ಪಿಂಟಿಕೆ ಪ್ರದರ್ಶನ ನಡೆಯಲಿದೆ. ಅಕ್ಷರ ಮ್ಯೂಸಿಕಲ್‌ರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವನ್ನು ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ, ಚಿಕ್ಕಮಗಳೂರು ಜಿಲ್ಲಾ ಹಾಗೂ ಶೃಂಗೇರಿ ತಾಲೂಕು ಕಜಾಪ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಕೋರಿದ್ದಾರೆ.

Categories
ಚಿಕ್ಕಮಗಳೂರು

ಸಿಗಂದೂರು ಚೌಡೇಶ್ವರಿ ದೇವಿ ಜಾತ್ರೋತ್ಸವಕ್ಕೆ ಸಜ್ಜು!

ಸಿಗಂದೂರು ಚೌಡೇಶ್ವರಿ ದೇವಿ ಜಾತ್ರೋತ್ಸವಕ್ಕೆ ಸಜ್ಜು!
– ಜ.14, 15ರಂದು ಮಕರ ಸಂಕ್ರಮಣ ಜಾತ್ರೋತ್ಸವ
– ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

ವರದಿ: ಪ್ರಾಪ್ತಿ ಸಾಗರ

NAMMUR EXPRESS NEWS
ಸಾಗರ: ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ಜಾತ್ರೆ ಜನವರಿ 14 ಮತ್ತು 15 ರಂದು ನಡೆಯಲಿದೆ. ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಎರಡು ದಿನಗಳ ಸಂಕ್ರಾಂತಿ ಜಾತ್ರೆಯು ವಿಜೃಂಭಣೆಯಿಂದ ಜನವರಿ 14 ಮತ್ತು 15 ರಂದು ಜಾತ್ರೆಯು ಆರಂಭವಾಗಲಿದ್ದು ಸರ್ವರನ್ನು ದೇವಸ್ಥಾನ ಆಡಳಿತ ಮಂಡಳಿ ಸ್ವಾಗತಿಸಿದೆ.
ದೇವಿಯ ಮೂಲ ಸ್ಥಳವಾದ ಸೀಗೆಕಣಿವೆಯಲ್ಲಿ ವಿವಿಧ ಪೂಜೆ ಹಾಗೂ ಹೋಮಗಳನ್ನ ನೆರವೇರಿಸಲಾಗುತ್ತದೆ. ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಸಿಗಂದೂರು ಆಲಯಶುದ್ದಿಯೊಂದಿಗೆ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಧರ್ಮದರ್ಶಿಗಳು ಡಾ. ರಾಮಪ್ಪನವರ ನೇತೃತ್ವದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸುವವರು. ಚಂಡಿಕಾ ಹೋಮ, ನವಚಂಡಿಕಾ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತದೆ. ಬೆಳಗ್ಗೆ 10 ಗಂಟೆಯ ನಂತರ ದೇವಿಯ ಸನ್ನಿಧಾನದಲ್ಲಿ ಪೂಜೆಗಳು ನೆರವೇರುತ್ತದೆ. ಅಖಂಡ ಜ್ಯೋತಿಯ ಮೂಲಕ ಶ್ರೀದೇವಿಗೆ ವಿಶೇಷ ರಥದ ಮೂಲಕ ಸಿಗಂದೂರಿಗೆ ಆಗಮಿಸುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

Categories
ಮಲ್ನಾಡ್

ನಾಲ್ಕು ಕಾಲಿನ ಕೋಳಿ ಮರಿ.‌.!!?

ನಾಲ್ಕು ಕಾಲಿನ ಕೋಳಿ ಮರಿ.‌.!!?
– ಕುತೂಹಲ ಮೂಡಿಸಿದ ಕೋಳಿ ಮರಿ
– ವಿಸ್ಮಯ ಕೋಳಿ ಮರಿ ನೋಡಲು ಸ್ಥಳೀಯರ ಆಗಮ

NAMMUR EXPRESS NEWS
ಎನ್ ಆರ್ ಪುರ: ಎರಡು ಕಾಲಿನ ಕೋಳಿ ಎಲ್ಲೆಡೆ ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಕೋಳಿ ಮರಿಯೊಂದು ಎಲ್ಲರ ಗಮನ ಸೆಳೆದಿದೆ. ಹೌದು.. ಎನ್ ಆರ್ ಪುರ ತಾಲೂಕಿನ ಸಿಂಸೆಯ ಗಣೇಶ್ ಎಂಬುವರ ಮನೆಯಲ್ಲಿ ಒಂದುವಾರದ ಹಿಂದೆ ಕೋಳಿಯೊಂದು ಮೊಟ್ಟೆ ಇಟ್ಟು ಕಾವು ನೀಡಿದೆ. ಮೊಟ್ಟೆಯಿಂದ ಹೊರ ಬಂದ ಮರಿ ಅಪರೂಪವಾಗಿದ್ದು ನಾಲ್ಕು ಕಾಲುಗಳನ್ನು ಹೊಂದಿದೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದು,ಈ ವಿಶೇಷ ವಿಸ್ಮಯದ ಕೋಳಿಮರಿಯನ್ನು ನೋಡಲು ಸ್ಥಳೀಯರು ಗಣೇಶ್‌ರವರ ಮನೆಗೆ ಭೇಟಿ ನೀಡುತ್ತಿದ್ದಾರೆ.

Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲ ಗಂಟೆಗಳಲ್ಲಿಯೇ ಮಹಿಳೆ ಸಾವು..!
– ಶಿರಾಳಕೊಪ್ಪ : ಬೈಕ್ ಕಳ್ಳತನ ಪ್ರಕರಣದಲ್ಲಿ ಓರ್ವನ ಬಂಧನ!
– ಶಿವಮೊಗ್ಗ : ಡಾ.ಸರ್ಜಿ ಹೆಸರಿನಲ್ಲಿ ಸಿಹಿ ಕಳುಹಿಸಿದ ಆರೋಪಿಗೆ ನ್ಯಾಯಾಂಗ ಬಂಧನ
– ಶಿಕಾರಿಪುರ: ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯ ಬಂಧನ
– ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರವನ್ನು ಕಿತ್ತ ದುಷ್ಕರ್ಮಿಗಳು

NAMMUR EXPRESS NEWS
ಶಿವಮೊಗ್ಗ : ರಾಜ್ಯದ ವಿವಿಧೆಡೆ ಬಾಣಂತಿರ ಸಾವು ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ, ಹೆರಿಗೆಯಾದ ಕೆಲ ಗಂಟೆಗಳಲ್ಲಿಯೇ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಶೀಪುರ ನಿವಾಸಿಯಾದ ಕವಿತಾ (24) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಜಿಲ್ಲೆಯ ಮೈದೊಳಲು ಮಲ್ಲಾಪುರ ಗ್ರಾಮದಲ್ಲಿದ್ದ ಕವಿತಾ ಅವರು, ಎರಡನೇ ಹೆರಿಗಾಗಿ ಜನವರಿ 1 ರಂದು ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಗೆ ದಾಖಲಾಗಿದ್ದರು. ಜ. 3 ರಂದು ಬೆಳಿಗ್ಗೆ ಸುಮಾರು 8. 25 ಕ್ಕೆ ಕವಿತಾ ಅವರಿಗೆ ಸಹಜ ಹೆರಿಗೆಯಾಗಿತ್ತು. 3. 5 ಕೆಜಿ ತೂಕದ ಮಗು ಜನಿಸಿತ್ತು. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದರು. ತದನಂತರ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು’ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕರಾದ ಡಾ. ತಿಮ್ಮಪ್ಪ ಅವರು ತಿಳಿಸಿದ್ದಾರೆ. ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಹೆರಿಗೆಯಾದ ಎರಡು ಗಂಟೆ ನಂತರ, ದಿಢೀರ್ ಆಗಿ ಅವರಲ್ಲಿ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಸಾಕಷ್ಟು ವೈದ್ಯೋಪಚಾರದ ನಡುವೆಯೂ ಅವರು ಬದುಕುಳಿಯಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಕವಿತಾ ಅವರು ಹೆರಿಗೆಗೆ ದಾಖಲಾದ ವೇಳೆ ಹಾಗೂ ಹೆರಿಗೆ ಪೂರ್ವದ ತಪಾಸಣೆ ವೇಳೆಯಲ್ಲಿ ಅವರ ಬಿಪಿ, ಪಲ್ಸ್, ರಕ್ತಕ್ಕೆ ಸಂಬಂಧಿಸಿದ ಹಿಮೋಗ್ಲೊಬಿನ್, ಪ್ಲೆಟೇಟ್, ಅಲ್ಟ್ರಾಸೌಂಡ್ ಸೇರಿದಂತೆ ಮತ್ತೀತರ ಪರೀಕ್ಷೆಗಳು ನಾರ್ಮಲ್ ಆಗಿತ್ತು. ಆರೋಗ್ಯವಾಗಿಯೇ ಇದ್ದರು. ಆದರೆ ದಿಢೀರ್ ಕಾಣಿಸಿಕೊಂಡ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ, ತದನಂತರ ಉಂಟಾದ ಹೃದಯಾಘಾತದಿಂದ ಮೃತಪಡುವಂತಾಗಿದೆ’ ಎಂದು ಹೇಳಿದ್ದಾರೆ.

– ಶಿರಾಳಕೊಪ್ಪ : ಬೈಕ್ ಕಳ್ಳತನ ಪ್ರಕರಣದಲ್ಲಿ ಓರ್ವನ ಬಂಧನ!

ಶಿರಾಳಕೊಪ್ಪ : ಬೈಕ್ ಕಳವು ಮಾಡಿದ್ದ ಆರೋಪದ ಮೇರೆಗೆ ಓರ್ವನನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಸೊರಬ ತಾಲೂಕಿನ ಹುಣಸವಳ್ಳಿ ಗ್ರಾಮದ ನಿವಾಸಿ ವೀರಭದ್ರಪ್ಪ (40) ಬಂಧಿತ ಆರೊಪಿ ಎಂದು ಗುರುತಿಸಲಾಗಿದೆ. 4-1-2025 ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಆರೋಪಿ ಬಂಧನದಿಂದ ಶಿರಾಳಕೊಪ್ಪ ಹಾಗೂ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ತಲಾ ಒಂದೊಂದು ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. 60 ಸಾವಿರ ರೂ. ಮೌಲ್ಯದ ಸ್ಟಾರ್ ಸಿಟಿ ಬೈಕ್ ಹಾಗೂ 35 ಸಾವಿರ ರೂ. ಮೌಲ್ಯದ ಫ್ಯಾಷನ್ ಪ್ರೋ ಬೈಕ್ ನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಶಿಕಾರಿಪುರ ನಗರ ವೃತ್ತದ ಇನ್ಸ್’ಪೆಕ್ಟರ್ ರುದ್ರೇಶ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಪುಷ್ಪ ನೇತೃತ್ವದಲ್ಲಿ ಹೆಚ್ ಸಿ ಗಳಾದ ಸಂತೊಷ್ ಕುಮಾರ್, ಪಿಸಿಗಳಾದ ಸಲ್ಮಾನ್ ಖಾನ್, ಕಾರ್ತಿಕ್, ಕಾಂತೇಶ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

– ಶಿವಮೊಗ್ಗ : ಡಾ.ಸರ್ಜಿ ಹೆಸರಿನಲ್ಲಿ ಸಿಹಿ ಕಳುಹಿಸಿದ ಆರೋಪಿಗೆ ನ್ಯಾಯಾಂಗ ಬಂಧನ

ಶಿವಮೊಗ್ಗ : ಎಂಎಲ್ ಸಿ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಕಹಿ ಸಿಹಿ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಕೋಟೆ ಪೊಲೀಸರು‌ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತಂತೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್ ಸೌಹಾರ್ದ್ ಪಟೇಲ್ ಎಂಬ ಭದ್ರಾವತಿ ಯುವಕನನ್ನ ಕೋಟೆ ಪೊಲೀಸರು ನ್ಯಾಯಾಂಗ ಬಂಧಕ್ಕೆ ಕಳುಹಿಸಿರುವುದಾಗಿ ತಿಳಿಸಿದರು. ಶಿವಮೊಗ್ಗದ ಕಾನೂನು ಕಾಲೇಜಿನಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಸೌಹಾರ್ಧ ಪಟೇಲ್ ಗೆ ಎನ್ ಇ ಎಸ್ ಸಂಸ್ಥೆಯ ಸೆಕ್ರೆಟರಿ ನಾಗರಾಜ್ ಹಾಗೂ ಕೆಲವರು ಸೇರಿ ಬುದ್ಧಿವಾದ ಹೇಳಿದ್ದರು. ಪಟೇಲ್ ಅವರ ತಂದೆ ತಾಯಿ ಹತ್ತಿರ ವಿಷಯ ಮಾತನಾಡಿ ಆ ಹುಡುಗಿ ತಂಟೆಗೆ ಹೋಗದಂತೆ ನೋಡಿಕೊಂಡಿದ್ದರು. ಆ ನಂತರ ಹುಡುಗಿ ಬೇರೆ ಒಬ್ಬರ ಜೊತೆ ಮದುವೆಯಾದಾಗ ಈತನಿಗೆ ಇವರ ಮೇಲೆ ದ್ವೇಷ ಶುರುವಾಗಿತ್ತು ಕಾರ್ಯಕ್ರಮವೊಂದರಲ್ಲಿ ಡಾ.ಸರ್ಜಿ ಮತ್ತು ನಾಗರಾಜ್ ಅವರನ್ನ ನೋಡಿದ ಪಟೇಲ್ ಗೆ ಅವರ ಭಾಷಣದ ಬಗ್ಗೆನೂ ದ್ವೇಷ ತುಂಬಿಸಿಕೊಂಡಿದ್ದ. ಇವರ ವಿರುದ್ಧ ರೈವಲ್ವರಿ ಹಿನ್ನಲೆಯಲ್ಲಿ ಮಾತ್ರೆಗಳನ್ನ ಖರೀದಿಸಿ ನಾಗರಾಜ್ ಮತ್ತು ಇತರೆ ಇಬ್ಬರು ವೈದ್ಯರಿಗೆ ಸಿಹಿಯ ಮೇಲೆ ಮಾತ್ರೆಗಳನ್ನ ಉದುರಿಸಿ ಕಳುಹಿಸಿದ್ದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಜಿ ಅವರ ಫ್ಯಾನ್ ಫಾಲೋ ಸಹ ಈ ಪಟೇಲ್ ಆಗಿದ್ದ.

– ಶಿಕಾರಿಪುರ: ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯ ಬಂಧನ

ಶಿಕಾರಿಪುರ : ಮನೆಯೊಂದರಲ್ಲಿ ಕಳವು ನಡೆಸಿದ್ದ ಆರೋಪಿಯನ್ನು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ. ಶಿಕಾರಿಪುರ ತಾಲೂಕು ಚುರ್ಚುಗುಂಡಿ ಗ್ರಾಮ ಸಾಲೂರು ಬೀದಿ ನಿವಾಸಿ ನಿವಾಸಿ ಶಿವರಾಜ್ ಪಿ ಎಸ್ ಯಾನೆ ಶಿವು (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. 3-1-2025 ರಂದು ಈತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 6,30,000 ರೂ. ಮೌಲ್ಯದ 90.4 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 6,000 ರೂ. ಮೌಲ್ಯದ 60 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗು ಕೃತ್ಯಕ್ಕೆ ಬಳಸಿದ 80,000 ರೂ. ಮೌಲ್ಯದ ಹಿರೋ ಹೆಚ್.ಎಫ್.ಡಿಲೆಕ್ಸ್ ಬೈಕ್ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಅಂದಾಜು 7,16,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಜ. 4 ರಂದು ಬಿಡುಗಡೆ ಮಾಡಿದೆ. ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಆರ್ ಆರ್ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಶೋಭಾರಾಣಿ, ಅಕ್ಬರ್ ಮುಲ್ಲಾ, ಸಿಬ್ಬಂದಿಗಳಾದ ಹೆಚ್.ಸಿ. ಗಳಾದ ನಾಗರಾಜ್, ರಾಘವೇಂದ್ರ, ಪಿಸಿಗಳಾದ ಪ್ರಶಾಂತ್, ಹಜರತ್ ಅಲಿ, ಜಾಫರ್, ಶೇಖರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

– ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರವನ್ನು ಕಿತ್ತ ದುಷ್ಕರ್ಮಿಗಳು

ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಅಂದಾಜು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಪರಾರಿಯಾದ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀಬಾಯಿ ಸರ ಕಳೆದುಕೊಂಡವರು. ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರುಳುತ್ತಿದ್ದ ವೇಳೆ ಮಹಿಳೆಯನ್ನು ದಾರಿಯಲ್ಲಿ ತಡೆದ ಇಬ್ಬರು ಅಪರಿಚಿತ ವ್ಯಕ್ತಿಗಳು, ಈ ಕೃತ್ಯ ಎಸಗಿದ್ದಾರೆ. ಪ್ರಕರಣ ಸೊರಬ ಠಾಣೆಯಲ್ಲಿ ದಾಖಲಾಗಿದೆ.