Categories
ರಾಜ್ಯ

ಗ್ಯಾರಂಟಿ ಅವಾಂತರ: ಇಂದೇ ‘ಸಾರಿಗೆ ಬಸ್‌ ಟಿಕೆಟ್ ದರ’ ಏರಿಕೆ!

ಗ್ಯಾರಂಟಿ ಅವಾಂತರ: ಇಂದೇ ‘ಸಾರಿಗೆ ಬಸ್‌ ಟಿಕೆಟ್ ದರ’ ಏರಿಕೆ!

* ರಾಜ್ಯ ಸರ್ಕಾರದ ಅಧಿಕೃತ ಆದೇಶ
* ಶೇ.15ರಷ್ಟು ಪ್ರಯಾಣದರ ಏರಿಕೆ

NAMMUR EXPRESS NEWS
ಬೆಂಗಳೂರು:
ಪ್ರಯಾಣ ದರ ಪರಿಷ್ಕರಣೆಗಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ ಇಂಧನ ವೆಚ್ಚ ಮತ್ತು ನಿರ್ವಹಣಾ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಪುಸ್ತುತ ರೂ. 9.56 ಕೋಟಿ ಮೊತ್ತವನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗುತ್ತಿದೆ. ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3, 650 ಕೋಟಿ ನಿಗಮಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ ಶೇ.15ರಷ್ಟು ಪ್ರಯಾಣದರ ಒಟ್ಟು ಸಭೆಯನ್ನು ನಿರ್ಣಯಿಸಿ, ಅದರಂತೆ ಪುಸ್ತಕವನ್ನು ಸಲ್ಲಿಸಲು ಸೂಚಿಸಲಾಗಿದೆ.
ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಸುಮಾರು ಅರವತ್ನಾಲ್ಕು ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಾಲ್ಕು ನಿಗಮಗಳು ಸುಮಾರು 1,01,648 ಸಿಬ್ಬಂದಿಗಳನ್ನು ಹೊಂದಿದ್ದು, ಆಯಾನಿಗಮಗಳು ಸದರಿ ಸಿಬ್ಬಂದಿಗಳ ಸಂಬಳ ಮತ್ತು ಭತ್ಯೆಗಳನ್ನು ನಿಗಮಗಳ ಆದಾಯದ ಮೂಲಕ ಮಾತ್ರ ಪಾವತಿಸುತ್ತಿದ್ದಾರೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ 2024-25ನೇ ಆರ್ಥಿಕ ವರ್ಷ 1ನೇ ಏಪ್ರಿಲ್‌ನಿಂದ 30ನೇ ನವೆಂಬರ್‌ವರೆಗೆ ಒಟ್ಟು ಆದಾಯ ರೂ. 8418.46 ಕೋಟಿ, ನಾಲ್ಕು ಸಂಸ್ಥೆಗಳು ಒಟ್ಟು ರೂ.9511.41 ಕೋಟಿ ವೆಚ್ಚವನ್ನು ಮಾಡುತ್ತವೆ. ಪ್ರಸ್ತುತ 2024-25ನೇ ಆರ್ಥಿಕ ವರ್ಷದ ನಿವ್ವಳ ಕೊರತೆಯು ರೂ.1092.95 ಕೋಟಿಗಳಷ್ಟಿದೆ.ರಸ್ತೆ ನಾಲ್ಕು ಸಾರಿಗೆ ಸಂಸ್ಥೆಗಳು ಪ್ರಸ್ತುತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ.

* ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ!

ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಕೆಲವು ಮಹಾನಗರಗಳ ಸಂಪೂರ್ಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಇನ್ನೂ ಕೆಲವು ಮಹಾನಗರಗಳ ಅನುಸೂಚಿಗಳನ್ನು ಕಡಿಮೆಗೊಳಿಸಿರುವ ನಿಗಮಗಳು ಒಟ್ಟು 24 ಮಹಾನಗರಗಳವರೆಗೆ ಶೂನ್ಯದಿಂದ ಕಡಿಮೆ ಆದಾಯವನ್ನು ಗಳಿಸಿವೆ. ಈ ರೀತಿ ಯಾವುದೇ ಆದಾಯವಿಲ್ಲದ ಕಾರಣ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ.85/- ರಿಂದ ರೂ.90/-ವರೆಗೆ ಮತ್ತು ಇತರ ಶಾಸನಬದ್ಧ ಪಾವತಿಗಳು ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ, ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್‌ ಸರಬರಾಜು ಬಿಲ್‌, ವಾಹನದ ವಾಹನ ಪಾವತಿ ಮಾಡಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಉಂಟಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ 31-12-2024ರ ಅಂತ್ಯಕ್ಕೆ ರೂ.6520.14 ಕೋಟಿಗಳ ಆರ್ಥಿಕ ಹೊಣೆಗಾರಿಕೆ ಕೋಡಿಕೃತವಾಗಿದೆ.
ಮುಂದುವರೆದು, 01.03.2023ರಂದು ನಿಗಮಗಳ ಸಿಬ್ಬಂದಿಗಳ ವೇತನ ಪರಿಷ್ಕರಣೆಯನ್ನು ಶೇಕಡ 15ರಷ್ಟು ಪರಿಷ್ಕರಿಸಲಾಗಿದೆ.
ನೌಕರರ ವೇತನ ಪರಿಷ್ಕರಣೆಯಿಂದಾಗಿ ದೈನಂದಿನ ವೇತನದ ವೆಚ್ಚವು ರೂ.12.85 ಕೋಟಿಗಳಿಂದ ರೂ.18.36 ಕೋಟಿಗಳಿಗೆ ಹೆಚ್ಚಾಗಿದ್ದು, ಪ್ರತಿ ದಿನಕ್ಕೆ ರೂ.5.51 ಕೋಟಿ ಹೆಚ್ಚುವರಿ ಹೊರೆಯಾಗಿರುತ್ತದೆ. ಜೊತೆಗೆ, ಸಾರಿಗೆ ನೌಕರರು ಇತ್ತೀಚೆಗೆ ಮತ್ತೊಮ್ಮೆ ವೇತನ ಪರಿಷ್ಕರಣೆಗಾಗಿ ಬೇಡಿಕೆ ಸಲ್ಲಿಸುತ್ತಾರೆ. ಸಾರಿಗೆ ನಿಗಮಗಳಿಂದ ಆಚರಣೆ ಮಾಡುತ್ತಿರುವ ವಿವಿಧ ಮಾದರಿಯ ಬಸ್‌ಗಳಿಗೆ ಹಾಲಿ ಪ್ರತಿ ಕಿ.ಮೀ.ಗೆ ವಿಧಿಸುತ್ತಿರುವ ದರಗಳನ್ನು ನೆರೆ ರಾಜ್ಯಗಳಿಗೆ ಹೋಲಿಸಿದಾಗ ದರ ಕಡಿಮೆಯಾಗಿದೆ, ತುಲನಾತ್ಮಕ ಕೋಶಕ ಈ ಕೆಳಕಂಡಂತಿದೆ.

Categories
ಚಿಕ್ಕಮಗಳೂರು

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್..!

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್..!
* ಶೃಂಗೇರಿಯಿಂದ ದರ್ಶನ ಮುಗಿಸಿ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರು
* ಸರಿಯಾದ ಸೂಚನಾಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ

NAMMUR EXPRESS NEWS
ಕೊಪ್ಪ:
ಬೆಂಗಳೂರು ಮೂಲದ ಪ್ರವಾಸಿಗರು ಶೃಂಗೇರಿ ಶ್ರೀ ಶಾರದಾಂಬೆ ದರ್ಶನ ಮುಗಿಸಿ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗುವಾಗ ಪ್ರಯಾಣಿಕರಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ತಾಲೂಕಿನ ಅಗಳಗಂಡಿ ಗ್ರಾಮದ ಬೆಳವಿನ ಕುಂಬ್ರಿ ಎಂಬಲ್ಲಿ ನಡೆದಿದೆ.
ಬಸ್‌ನಲ್ಲಿ 16 ಜನ ಪ್ರಯಾಣಿಸುತ್ತಿದ್ದು ರಸ್ತೆಯಲ್ಲಿ ಸೂಕ್ತ ಸೂಚನಾಫಲಕ ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ದಿನ ನಿತ್ಯ ನೂರಾರು ಪ್ರವಾಸಿ ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಸರಿಯಾದ ‌ಸೂಚನಾಫಲಕಗಳನ್ನು ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

– ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೆಸರಲ್ಲಿ ವಿಷಪೂರಿತ ಸಿಹಿತಿಂಡಿ ರವಾನೆ!
– ಭದ್ರಾವತಿ : ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕ ಅರೆಸ್ಟ್‌
– ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ: ಅಪಾಯದಿಂದ ಪಾರು
– ರಿಪ್ಪನ್ ಪೇಟೆ : ಅರಣ್ಯದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳ ಕಡಿತ
– ಆಯನೂರು : ಬೈಕ್‌ ಕಾರು ಡಿಕ್ಕಿ: ಬೈಕ್‌ ಸವಾರನಿಗೆ ಗಂಭೀರ ಗಾಯ

NAMMUR EXPRESS NEWS
ಶಿವಮೊಗ್ಗ:
ಹೊಸ ವರ್ಷಾಚರಣೆಯಂದು ಬಿಜೆಪಿ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ವಿಷಪೂರಿತ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಮೂವರಿಗೆ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಹಿತಿಂಡಿಗಳ ಬಾಕ್ಸ್ ಸ್ವೀಕರಿಸಿದ ಮೂವರಲ್ಲಿ ನ್ಯಾಷನಲ್ ಎಜುಕೇಶನ್‌ ಸೊಸೈಟಿ ಕಾರ್ಯದರ್ಶಿ ಎಸ್ ಎನ್ ನಾಗರಾಜ್‌ ಸಹ ಒಬ್ಬರಾಗಿದ್ದಾರೆ. ಜನವರಿ 1ರಂದು ಅಜ್ಞಾತ ವ್ಯಕ್ತಿಗಳು ಡಾ. ಸರ್ಜಿ ಅವರ ಹೆಸರನ್ನು ಬಳಸಿಕೊಂಡು, ಡಿಟಿಡಿಸಿ ಕೊರಿಯ‌ರ್ ಮೂಲಕ ಹೊಸ ವರ್ಷದ ಶುಭಾಶಯ ಪತ್ರದ ಜೊತೆಗೆ ಸಿಹಿತಿಂಡಿಗಳ ಬಾಕ್ಸ್ ಕಳುಹಿಸಿದ್ದಾರೆ. ಬಾಕ್ಸ್ ಸ್ವೀಕರಿಸಿದ ನಾಗರಾಜ್‌ ಅವರು ಸಿಹಿತಿಂಡಿಗಳನ್ನು ಸೇವಿಸಿದ್ದಾಗ ಅದು ತೀವ್ರ ಕಹಿಯಾಗಿತ್ತು. ಕೂಡಲೇ ನಾಗರಾಜ್ ಅವರು ಡಾ.ಸರ್ಜಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಸರ್ಜಿ ತಾನು ಯಾರಿಗೂ ಸಿಹಿತಿಂಡಿಗಳನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗ ಇದು ಅವರ ಹೆಸರಿನಲ್ಲಿ ಬೇರೆ ಯಾರೋ ಕಳುಹಿಸಲಾದ ಸಿಹಿತಿಂಡಿಗಳಾಗಿದ್ದು, ವಿಷಕಾರಿ ಪದಾರ್ಥ ಕಲಬೆರಕೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಸಿಹಿತಿಂಡಿ ಕಳುಹಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಕೋಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಸಿಹಿತಿಂಡಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದೇ ರೀತಿಯ ಸಿಹಿತಿಂಡಿಯನ್ನು ಅರವಿಂದ್ ಮತ್ತು ಪವಿತ್ರಾ ಎಂಬ ಇಬ್ಬರು ವೈದ್ಯರಿಗೆ ಕಳುಹಿಸಲಾಗಿದೆ. ಭದ್ರಾವತಿಯಿಂದ ಕೊರಿಯರ್ ಕಳುಹಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

– ಭದ್ರಾವತಿ : ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕ ಅರೆಸ್ಟ್‌

ಭದ್ರಾವತಿ : ಗಾಂಧಿ ಪಾರ್ಕ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈದಾಡುತ್ತಿದ್ದ ಯುವಕನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆತ ಗಾಂಜಾ ಸೇವಿಸಿರುವುದು ದೃಢವಾದ ಹಿನ್ನೆಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್‌ ಅಲಿಯಾಸ್‌ ಭೂತ ಎಂದು ಗುರುತಿಸಲಾಗಿದೆ. ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ

ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮದ ಬೆಳವಿನ ಕುಂಬ್ರಿ ಎಂಬಲ್ಲಿ ನಡೆದಿದೆ. ಬೆಂಗಳೂರು ಮೂಲದ ಯಾತ್ರಾರ್ತಿ ಗಳು ಶೃಂಗೇರಿ ಶಾರದಾಂಬೆ ದರ್ಶನ್ ಮುಗಿಸಿ ಹೊರನಾಡಿಗೆ ಪ್ರಯಾಣಿಸುವಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ನಲ್ಲಿ ಇದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

– ರಿಪ್ಪನ್ ಪೇಟೆ : ಅರಣ್ಯದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳ ಕಡಿತ

ರಿಪ್ಪನ್‌ಪೇಟೆ : ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿತಲೆ ಮಾಡಲಾಗಿದೆ. ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಮರಗಳನ್ನು ಕಡಿದಿರುವ ಮಾಹಿತಿ ಲಭ್ಯವಾದ ಹಿನ್ನೆಲೆ ಅರಣ್ಯಾಧಿಕಾರಿಗಳು ಮರ ಕಡಿದಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಸ್ಥಳದಲ್ಲಿ ಬೃಹದಾಕಾರದ 5 ಸಾಗವಾನಿ ಮರಗಳನ್ನು ಕಡಿದಿರುವುದು ಕಂಡುಬಂದಿದೆ. ಬೇರೆಡೆಗೆ ಸಾಗಿಸಲು ಇರಿಸಿದ್ದ 16 ತುಂಡುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಶರಣಪ್ಪ, ಡಿಆರ್‌ಎಫ್‌ಒ ಮಹೇಶ್ ನಾಯ್ಕ, ಅರಣ್ಯ ರಕ್ಷಕ ಕುಮಾರ್ ಮಾಂಗ್, ಅನಿಲ, ಸಿಬ್ಬಂದಿ ಪಾಲ್ಗೊಂಡಿದ್ದರು.

– ಆಯನೂರು : ಬೈಕ್‌ ಗೆ ಕಾರು ಡಿಕ್ಕಿಯಾಗಿ ಬೈಕ್‌ ಸವಾರನಿಗೆ ಗಂಭೀರ ಗಾಯ.

ಆಯನೂರು : ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ ಸವಾರ ಸಂಜಯ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೆ ಸಂಜಯ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದ್ಯಾವಿನಕೆರೆ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಮಲ್ನಾಡ್

ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆ

ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆ
– ಗಾನಾಂಜಲಿ ಕೋಣಂದೂರು ತೀರ್ಥಹಳ್ಳಿ ಇವರ ಪ್ರಸ್ತುತಿ
– ಮಲೆನಾಡು, ಕರಾವಳಿ ಹಾಡುಗಾರರಿಗೆ ಅವಕಾಶ

NAMMUR EXPRESS NEWS
ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆಗೆ
ಗಾನಾಂಜಲಿ ಕೋಣಂದೂರು ಸಿದ್ಧತೆ ನಡೆಸುತ್ತಿದೆ. ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾಟ್ರಸ್ಟ್, ಕೋಣಂದೂರು ಶ್ರೀ ಸರ್ಜಾ ಚೆಸ್ ತರಬೇತಿ ಕೇಂದ್ರ, ಹಿರೇಸರ. ಶ್ರೀ ಲಕ್ಷ್ಮೀ ಕನ್ಸ್‌ಸ್ಟಕ್ಷನ್, ಕೋಣಂದೂರು ಇವರ ಸಹಯೋಗದಲ್ಲಿ ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ಸಂಗೀತ ಸ್ಪರ್ಧೆ ಸೀಸನ್-1 ನಡೆಯಲಿದೆ.

ಅಡಿಷನ್ ದಿನಾಂಕ : 12-01-2025 ಭಾನುವಾರ
ಸಮಯ ಬೆಳಿಗ್ಗೆ : 9-30 ರಿಂದ

ಸ್ಥಳ : ಶ್ರೀ ಶಂಕರ ಸಭಾಭವನ ಕೋಣಂದೂರು, ತೀರ್ಥಹಳ್ಳಿ ತಾ|

* ವಾಯ್ಸ್ ಆಫ್ ಮಲೆನಾಡು & ಕರಾವಳಿ*

ಪ್ರಥಮ ಬಹುಮಾನ : 10000/-
ದ್ವಿತೀಯ ಬಹುಮಾನ : 6000/-
ತೃತೀಯ ಬಹುಮಾನ : 3000/-

ವಿ.ಸೂ : ಆಡಿಷನ್‌ನಲ್ಲಿ ಕನ್ನಡ ಭಾಷೆಯ ಗೀತೆಗಳನ್ನು ಹಾಡಬೇಕು & ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಜನವರಿ 9

*ಪ್ರವೇಶ ಶುಲ್ಕ – 300ರೂ*

1. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಕೆ.ಜಿ ಶಶಿಕುಮಾರ ಕಾರಂತ ಗಾಯಕರು
8296735841, 9980768273

ಚಂದ್ರಕಾಂತ ಸರ್ಜಾ ಚೆಸ್ ತರಬೇತಿದಾರರು
9449540820

Categories
ರಾಜ್ಯ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ
– ಮೈಸೂರು: ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
– ಚಿಕ್ಕಬಳ್ಳಾಪುರ:- ಜೆಡಿಎಸ್ ಮುಖಂಡನ ಭೀಕರ ಹತ್ಯೆ
– ವಿಜಯಪುರ :-ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರುಪಾಲು
– ಗದಗ: ಲಾಡ್ಜ್​ನಲ್ಲಿ ಇಂಜಿನಿಯರ್ ಆತ್ಮಹತ್ಯೆ
– ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು

NAMMUR EXPRESS NEWS
ಮೈಸೂರು:
ಜಿಲ್ಲೆಯ ಹುಣಸೂರಿನ ಬೋಳನಹಳ್ಳಿಯ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥವಾದ ಘಟನೆ ನಡೆದಿದೆ. ಹೊಸ ವರ್ಷದ ದಿನದಂದು ಕೇಕ್ ಕಟ್ ಮಾಡಿ ಉಳಿದಿದ್ದ ಕೇಕ್ ಅನ್ನು ಎರಡು ದಿನದ ನಂತರ ಮಕ್ಕಳು ತಿಂದಿದ್ದಾರೆಂದು ಹೇಳಲಾಗಿದೆ. ಕೇಕ್ ಸೇವಿಸಿದ ನಂತರ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಬೋಳನಹಳ್ಳಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ನಿರ್ಲಕ್ಷ್ಯತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ಅಶ್ವತ್ಥ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

– ಚಿಕ್ಕಬಳ್ಳಾಪುರ:- ಜೆಡಿಎಸ್ ಮುಖಂಡನ ಭೀಕರ ಹತ್ಯೆ

ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡ ಹಾಗೂ ಕೆಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯನ್ನು ರಸ್ತೆ ಮಧ್ಯದಲ್ಲೆ ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ. ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಹತ್ಯೆಗೊಳಗಾದ ವ್ಯಕ್ತಿಯಗಿದ್ದಾರೆ. ಎಂದಿನಂತೆ ವೆಂಕಟೇಶ್ ರಾತ್ರಿ 9 ಗಂಟೆ ಸುಮಾರಿಗೆ ತಮ್ಮನಾಯಕನಹಳ್ಳಿ ಗೇಟ್‌ನಲ್ಲಿರುವ ಮೆಡಿಕಲ್ ಸ್ಟೋರ್‌ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಮನೆಯತ್ತ ಸ್ಕೂಟಿ ಮೂಲಕ ಹೊರಟಿದ್ದ ವೆಂಕಟೇಶ್‌ ಅವರಿಗೆ ಅಡ್ಡ ಬಂದು ಲಾಂಗ್‌ ಬೀಸಲಾಗಿದೆ. ಪರಿಣಾಮ ಎಡಗೈ ತೋಳಿನ ಭಾಗ ಕಟ್ ಆಗಿ, ಗಾಡಿ ಸಮೇತ ವೆಂಕಟೇಶ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಮನಸ್ಸೋ ಇಚ್ಛೆ ಮುಖ ಹೊಟ್ಟೆ ಭಾಗಕ್ಕೆ ಮಾರಕಾಸ್ತ್ರದಿಂದ ಕೊಚ್ಚಲಾಗಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಸೇರಿದಂತೆ ಸೋಕೋ ತಂಡ ಪರಿಶೀಲನೆ ನಡೆಸಿದೆ.

– ವಿಜಯಪುರ :-ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರುಪಾಲು

ವಿಜಯಪುರ : ನಗರದ ಹೊರ ಭಾಗದಲ್ಲಿರುವ ಬೇಗಂ ತಾಲಾಬ್ ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರಲ್ಲಿ ಮುಳಗಿ ಮೃತಪಟ್ಟಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿರುವ ಕಾರಣ ಸಾರ್ವತ್ರಿಕ ರಜೆ ಘೋಷಣೆ ಹಿನ್ನಲೆ ನಗರದ ಅನಿರುದ್ದ ಸಾಮ್ರಾಣಿ ಹಾಗೂ ಇತರರು ಬೇಗಂ ತಾಲಾಬ್ ಕೆರೆಯ ಬಳಿ ತೆರಳಿದ್ದರು. ಆಗ ಅನಿರುದ್ದ ಸಾಮ್ರಾಣಿ (20) ಈಜಾಡಲು ಕೆರೆಯಲ್ಲಿ ಇಳಿದಿದ್ದಾನೆ. ಆಗ ಜೊತೆಗಿದ್ದ ಅನಿರುದ್ದ ಸಹೋದರ ಅನಿಕೇತ ಸಾಮ್ರಾಣಿ ಹಾಗೂ ಇತರರು ನೀರಿಗೆ ಇಳಿಯಬೇಡಾ ಎಂದು ಹೇಳಿದರೂ ಅನಿರುದ್ದ ಮಾತ್ರ ನೀರಿಗೆ ಇಳಿದಿದ್ದಾನೆ. ಕೆಲ ಕಾಲ ಈಜಾಡಿದ ಬಳಿಕ ನೀರಲ್ಲಿ ಮುಳುಗಿದ್ದಾನೆ. ದಡದಲ್ಲಿದ್ದವರು ಎಷ್ಟೇ ಕೂಗಿ ಕರೆದರೂ ಅನಿರುದ್ದ ಮಾತ್ರ ನೀರಿನಿಂದ ಮೇಲೆ ಏಳಲೇ ಇಲ್ಲವಂತೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದಿ ಅಗ್ನಿಶಾಮಕ ದಳ ಸಿಬ್ಬಂದಿ ಅನಿರುದ್ದ ಶವಕ್ಕಾಗಿ ಶೋಧ ನಡೆಸಿದ್ದರು. ಸ್ಥಳದಲ್ಲಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿತ್ತು.

– ಗದಗ: ಲಾಡ್ಜ್​ನಲ್ಲಿ ಇಂಜಿನಿಯರ್ ಆತ್ಮಹತ್ಯೆ

ಗದಗ: ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಪಲ್ಲವಿ ಲಾಡ್ಜ್​ನಲ್ಲಿ ನಡೆದಿದೆ.
ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಡಿ. 03ರಂದು ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್ ನಗರದ ಪಲ್ಲವಿ ಲಾಡ್ಜ್​ನ ರೂಮ್ ನಂಬರ್ 513ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಗೌಡ ಪಾಟೀಲ್ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದು, ಈ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಮೃತ ಸಹೋದರ ಕೃಷ್ಣಗೌಡ ಪ್ರತಿಕ್ರಿಯಿಸಿದ್ದು, ನೇಣು ಹಾಕಿ‌ ಕೊಲೆ ಮಾಡಿದ್ದಾರೆ. ಸಾಲ‌ ಇಲ್ಲ. ಸಾಕಷ್ಟು ಆಸ್ತಿ ಇದೆ. ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಲ್ಲ. ಸಾಲಕ್ಕೆ ಜಾಮೀನು ಆಗಿದ್ದ ಆ ವಿಷಯಕ್ಕಾದರೂ ಆಗಿರಬಹುದು. ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ‌ ಮಾಡುತ್ತಿದ್ದ. ಅಲ್ಲಿ ಪ್ರಮೋಶನಕ್ಕೆನಾದರೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಈ‌ ಮೂರು ವಿಷಯಕ್ಕೆ ಸಾವು ಅಂತ ಅನುಮಾನ ಇದೆ ಎಂದಿದ್ದಾರೆ.

– ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು

ವಿಜಯಪುರ : ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮತ್ತು ಗಂಡು ಮಕ್ಕಳಿಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ. ಗೀತಾ ಬಡಗಿ(28), ಮಕ್ಕಳಾದ ಶ್ರವಣ್(6), ಶರಣ್(4) ನೀರುಪಾಲಾದವರು. ಮೃತ ಗೀತಾ ತಂದೆ ರಾಮಪ್ಪ ನಾಯ್ಕೋಡಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ. ಯಾಳವಾರ ಗ್ರಾಮದ ನಿವಾಸಿ ಶ್ರೀಶೈಲ ಜೊತೆಗೆ ಮದುವೆಯಾಗಿದ್ದ ಗೀತಾ, ಗಂಡನ ಜೊತೆ ಜಗಳವಾಡಿ ತವರು ಮನೆಗೆ ಬಂದಿದ್ದರು. ಈ ವೇಳೆ ಮಕ್ಕಳ ಜತೆ ಕೃಷಿ ಹೊಂಡದ ಬಳಿ ಹೋಗಿದ್ದಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಸದ್ಯ ತಾಯಿ ಮತ್ತು ಗಂಡು ಮಕ್ಕಳಿಬ್ಬರ ಶವಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ವಿಟ್ಲ: ಇಡಿ ಅಧಿಕಾರಿಗಳ ಹೆಸರಲ್ಲಿ 30 ಲಕ್ಷ ದೋಚಿ ಪರಾರಿ!
– ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಜೀವಾವಧಿ ಶಿಕ್ಷೆ
– ಮಂಗಳೂರು: ಗಾಂಜಾ ಮಾರಾಟ – ಇಬ್ಬರು ಅರೆಸ್ಟ್!

NAMMUR EXPRESS NEWS
ಮಂಗಳೂರು: ಬಾಲಿವುಡ್ ಸಿನೆಮಾ ಸ್ಪೆಷಲ್ 26 ಮಾದರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ತಂಡವೊಂದು ಬರೋಬ್ಬರಿ 30 ಲಕ್ಷ ಲೂಟಿ ಮಾಡಿದೆ. ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ಸಿಂಗಾರಿ ಬೀಡಿ ಸಂಸ್ಥೆ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಜ. 3ರಂದು ಅವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡವೊಂದು ದಿಡೀರ್ ದಾಳಿ ನಡೆಸಿ ಇಡಿ ಅಧಿಕಾರಿಗಳು ‘ ಎಂದು ನಂಬಿಸಿ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿಂಗಾರಿ ಬೀಡಿ ಸಂಸ್ಥೆಯ ಮಾಲಕ ಬೋಳಂತೂರು ಸಮೀಪದ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಮನೆಯಲ್ಲಿ ಕೃತ್ಯ ನಡೆದಿದೆ.
ಮೂಲಗಳ ಪ್ರಕಾರ ಜ. 3ಕ್ಕೆ ತಡರಾತ್ರಿ 7 ಜನರ ತಂಡ ಮಾರುತಿ ಕಾರಿನಲ್ಲಿ ಬಂದು ಸುಲೈಮಾನ್ ಅವರ ಮನೆಯ ಕದ ತಟ್ಟಿದ್ದಾರೆ. ತಮ್ಮನ್ನು ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಈ ಖದೀಮರು, ತಮ್ಮ ಆಸ್ತಿ ಹಾಗೂ ಬ್ಯಾಂಕ್‌ ವಹಿವಾಟಿನ ಲೆಕ್ಕ ಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಇದಲ್ಲದೇ ತನಿಖೆಗೆ ಸಹಕರಿಸದಿದ್ದರೇ, ಬಂಧಿಸುವುದಾಗಿ ಹೆದರಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಈ ತಂಡ ತನಿಖೆಯ ನಾಟಕವಾಡಿದೆ. ಮುಂಜಾನೆ ಸಮಯ ಅವರು ಮನೆಯಿಂದ ಸುಮಾರು 30 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿ ಕಾರಿನಲ್ಲಿ ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ. ಇವರು ಹಿಂದಿ ಇಂಗ್ಲೀಷ್ ಹಾಗೂ ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

* ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; 10 ಮಂದಿಗೆ ಅವಳಿ ಜೀವಾವಧಿ ಶಿಕ್ಷೆ

ಕಾಸರಗೋಡು: ಪೆರಿಯ ಕಲ್ಯೋಟ್‌ನಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಮಂದಿಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಿ ಕೊಚ್ಚಿಯ ಪ್ರತ್ಯೇಕ ಸಿಬಿಐ ನ್ಯಾಯಾಲಯವು ತೀರ್ಪನ್ನು ನೀಡಿದೆ. ಹಾಗೂ ಉಳಿದ ನಾಲ್ವರಿಗೆ ಐದು ವರ್ಷ ಸಜೆ, ತಲಾ 10 ಸಾವಿರ ರೂ. ದಂಡವನ್ನು ವಿಧಿಸಿದೆ.
ಫೆ.2,2023 ರಂದು ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. 292 ಮಂದಿ ಸಾಕ್ಷಿಗಳ ಪೈಕಿ 154 ಮಂದಿಯ ವಿಚಾರಣೆ ನಡೆದಿದ್ದು 20 ತಿಂಗಳ ನಂತರ ತೀರ್ಪು ಬಂದಿದೆ.

* ಮಂಗಳೂರು: ಗಾಂಜಾ ಮಾರಾಟ – ಇಬ್ಬರು ಅರೆಸ್ಟ್

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ದಕ್ಷಿಣ ಉಪವಿಭಾಗದ ಮಾದಕ ದ್ರವ್ಯ ನಿಗ್ರಹ ತಂಡ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿಗಳನ್ನು ಮೂಡ ಗ್ರಾಮದ ಮೊಹಮ್ಮದ್ ಅಸಿಫ್ (34), ನಿಯಾಜ್(40) ಎಂದು ಗುರುತಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯ ಪಿಲಿಕುಳದ ಬಳಿಯಿರುವ ದೂರದರ್ಶನ ಕೇಂದ್ರದ ಮುಂಭಾಗದ ಗೇಟ್ ಬಳಿ ಆರೋಪಿಗಳು ಗಾಂಜಾ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹಲವರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತರಿ0ದ ಸುಮಾರು 958 ಗ್ರಾಂ ಗಾಂಜಾ, ಮೊಬೈಲ್ ಫೋನ್ ಸ್ವಾಧೀನ ಪಡಿಸಿಲಾಗಿದೆ.ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಅವರ ಮಾರ್ಗದರ್ಶದಂತೆ , ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್ ಐಪಿಎಸ್, ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಕೆ ರವಿಶಂಕರ್ ನಿದೇರ್ಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕರವರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಕೆ.ಆರ್ ಶಿವಕುಮಾರ್, ಪಿಎಸ್‌ಐ ಅರುಣ್ ಕುಮಾರ್ ಡಿ. ಮತ್ತು ಮಾದಕ ದ್ರವ್ಯ ನಿಗ್ರಹ ತಂಡದ ಪಿಎಸ್‌ಐ ಪುನೀತ್ ಹಾಗೂ ಸಿಬ್ಬಂದಿಯವರಾದ ಸಾಜುನಾಯರ್, ಮಹೇಶ್, ಅಕ್ಬರ್ ಮತ್ತು ತಿರುಮಲೇಶ್‌ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.

Categories
ರಾಜ್ಯ

ಸಹ್ಯಾದ್ರಿ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಸ್ವಾಗತ!

ಸಹ್ಯಾದ್ರಿ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಸ್ವಾಗತ!
– ಸುಂಕದ ಕಟ್ಟೆಯಲ್ಲಿ ನಡೆಯಲಿದೆ ಮಲೆನಾಡಿಗರ ಸಮಾಗಮ
– ಜ. 5ರ ಭಾನುವಾರ ಬಿಡುವು ಮಾಡಿಕೊಂಡು ಭಾಗವಹಿಸಿ!

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿರ ಪ್ರಾತಿನಿಧಿಕ ಸಂಸ್ಥೆ ‘ಸಹ್ಯಾದ್ರಿ ಸಂಘ’ವು ಜನವರಿ 5ರ ಭಾನುವಾರ ಬೆಳಿಗ್ಗೆ 10ರಿಂದ 21ನೆಯ ವಾರ್ಷಿಕ ಕ್ರೀಡಾಕೂಟವನ್ನು ಸುಂಕದ ಕಟ್ಟೆಯ ಒಕ್ಕಲಿಗರ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದೆ. ಐದು ವರ್ಷದಿಂದ ಅರವತ್ತೈದು ವರ್ಷದವರೆಗಿನ ಮಲೆನಾಡಿಗರು ಈ ಸ್ಪರ್ಧೆಗಳಲ್ಲಿ ಭಾಗವಹಿಸ ಬಹುದಾಗಿದ್ದು ಕಬ್ಬಡ್ಡಿ, ವಾಲಿಬಾಲ್ ಥ್ರೋಬಾಲ್ ಗಳ ತಂಡ ಸ್ಪರ್ಧೆ ಕೂಡ ಇರುತ್ತದೆ. ಮಲೆನಾಡಿಗರಿಗಾಗಿಯೇ ಕೆಲವು ವಿಶೇಷ ಸ್ಪರ್ಧೆಗಳೂ ಕೂಡ ಏರ್ಪಾಟಾಗಿವೆ. ಸಂಜೆ 6ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸೈಬರ್ ಕ್ರೈಂ ವಿಭಾಗದ ಸೂಪರಿಡೆಟೆಂಟ್ ಆಫ್ ಪೋಲೀಸ್ ಎಂ.ಡಿ.ಶರತ್, ಖ್ಯಾತ ಚಿತ್ರನಟಿ ಅಂಕಿತಾ ಅಮರ್, ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲೆಯ ನಿರ್ದೇಶಕರಾದ ಧರ್ಮೇಶ್ ಸಿರಿಬೈಲ್, ಚಿಕ್ಕಮಗಳೂರು ಜಿಲ್ಲೆ ನಿರ್ದೇಶಕರಾದ ಪೂರ್ಣೇಶ್, ಅಧ್ಯಾತ್ಮಿಕ ಚಿಂತಕರಾದ ಡಾ.ಸುಬ್ರಹ್ಮಣ್ಯ ಉಡುಪ ಭಾಗವಹಿಸಿಲಿದ್ದಾರೆ. ಮಲೆನಾಡಿನವರೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸ ಬೇಕೆಂದು ಸಂಘದ ಗೌರವಾಧ್ಯಕ್ಷರಾದ ಜಿ.ಎ.ಪುರುಷೋತ್ತಮ ಗೌಡ ಮತ್ತು ಕಾರ್ಯದರ್ಶಿ ಎಚ್.ಸಿ.ಜಯಪ್ರಕಾಶ್ ವಿನಂತಿಸಿ ಕೊಂಡಿದ್ದಾರೆ.

Categories
ಮೈಸೂರು ಹಾಸನ

ದ್ವೇಷ ರಾಜಕಾರಣ ಸುಡೋ ಕಾಲ ಬರಲಿದೆ…!

ದ್ವೇಷ ರಾಜಕಾರಣ ಸುಡೋ ಕಾಲ ಬರಲಿದೆ…!
– ರಾಜ್ಯ ಸರ್ಕಾರ-ಶ್ರೇಯಸ್ ಪಟೇಲ್ ವಿರುದ್ಧ ಎಂಎಲ್‌ಸಿ ಸೂರಜ್‌ ರೇವಣ್ಣ ವಾಗ್ದಾಳಿ
– ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ…

NAMMUR EXPRESS NEWS
ಚನ್ನರಾಯಪಟ್ಟಣ: ಸೂರ್ಯ ಹುಟ್ಟುವುದು ಒಂದೇ ಅಲ್ಲ ಸೂರ್ಯ ಪ್ರಜ್ವಲಿಸುತ್ತಾನೆ, ನಿಮ್ಮ ಪ್ರಜ್ವಲ್ ಅಣ್ಣನೂ ಅಷ್ಟೇ, ನಿಮ್ಮ ಸೂರಜ್ ಅಣ್ಣನೂ ಅಷ್ಟೆ, ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದ್ದಾರೆ. ತಮ್ಮ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು. ಕೆಲ ಅಧಿಕಾರಿಗಳು, ಕೆಲವು ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡ್ತಿದ್ದಾರೆ ನೋಡುತ್ತಿದ್ದೇವೆ. ಯಾವುದೂ ಶಾಶ್ವತವಲ್ಲ, ಯಾವ ಸರ್ಕಾರವೂ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂತೆಂಥವರೋ ಏನೇನೋ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಸೂಚ್ಯವಾಗಿ ಹೇಳಿದರು. ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತೆ, ಈ ದ್ವೇಷದ ರಾಜಕಾರಣ ಉಳಿಯಲ್ಲ ಎಂದರು.ನಿಮಗೆ ೧೩೫ ಸೀಟ್ ಕೊಟ್ಟಿರೋದು ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಅಂತ, ಅದನ್ನು ಬಿಟ್ಟು ದಿನ ಬೆಳಿಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬವನ್ನು ಹೇಗೆ ಮುಗಿಸೋದು ಬರಿ ಇದೇ ಆಗೋಯ್ತು ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು, ಯಾವ ರೈತರಿಗೆ ಒಳ್ಳೆಯದಾಗಿದೆ ಹೇಳಲಿ ಎಂದ ಸೂರಜ್, ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ ಎಂದರು. ಮತ್ತೆ ನಿಮ್ಮ ಸೂರಜ್ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕೆಲವರು ಕುಣಿಯುತ್ತಿದ್ದಾರೆ ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು. ಇದೇ ವೇಳೆ ಸಂಸದ ಶ್ರೇಯಸ್ ಪಟೇಲ್ ವಿರುದ್ಧವೂ ಕಿಡಿಕಾರಿದ ಸೂರಜ್, ನಿನ್ನೆ ಮೊನ್ನೆ ಪೆನ್‌ಡ್ರೈವ್ ಹಂಚಿ ನಾನು ಎಂಎಲ್‌ಸಿ ಆಗಿಲ. ನಿಮ್ಮ ತಾತನ ತರ ಕುತಂತ್ರ ಮಾಡಿ ಎಂಎಲ್‌ಸಿ ಆಗಿದ್ದಲ್ಲ. ದೇವೇಗೌಡರು, ರೇವಣ್ಣನ ಕುಟುಂಬ ಮುಗಿಸುತ್ತಾರಂತೆ ಎಂದು ವಾಗ್ದಾಳಿ ನಡೆಸಿದರು. ಇದೇ ೨೫ ವರ್ಷದ ಹಿಂದೆ, ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆಯೋ ಅವರ ತಾತ, ನಮ್ಮ ಅಜ್ಜಿ, ತಾಯಿ ಮೇಲೆ ಆಸಿಡ್ ಎರಚಿಸಿದ್ದನ್ನ ಯಾರೂ ಮರೆಯಬಾರದು. ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತೆ. ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತ ಅವರ ತಮ್ಮನ ಮಕ್ಕಳಿಂದ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಆಸಿಡ್ ದಾಳಿ ಮಾಡಿಸಿದ್ರು. ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತೂ ಕೂಡ ಸಂಕಷ್ಟ ಇತ್ತು, ಅಂದೂ ಕಾಂಗ್ರೆಸ್ ಸರ್ಕಾರ ಇತ್ತು. ಈಗ ೧೩೫ ಸೀಟ್, ಆಗ ೧೩೦ ಸೀಟ್ ಗೆದ್ದಿದ್ದರು. ಇವರಿಗೆ ದೇವೇಗೌಡರು, ರೇವಣ್ಣ ಕುಟುಂಬ ಮುಗಿಸಬೇಕು ಎಂಬುದು ಒಂದೇ ಉದ್ದೇಶ. ೨೫ ವರ್ಷದ ಹಿಂದೆ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು, ನಂತರ ಏನಾಯ್ತು ಸ್ವಾಮಿ, ಇದು ಅದೇ ರೀತಿಯ ಒಂದು ಅನುಭವ ಎಂದು ಹೇಳಿದರು.

Categories
ತೀರ್ಥಹಳ್ಳಿ

ಸರಕಾರಿ ಶಾಲೆ ಹೊರೆಯಲ್ಲ, ಜವಾಬ್ದಾರಿ!

ಸರಕಾರಿ ಶಾಲೆ ಹೊರೆಯಲ್ಲ, ಜವಾಬ್ದಾರಿ!
– ಸರ್ಕಾರಿ ಶಾಲೆ ಸೀಬಿನಕೆರೆಗೆ ಆಗಮಿಸಿದ ಶಿವಮೊಗ್ಗ ಉಪವಿಭಾಗ ಅಧಿಕಾರಿಗಳು!
– ಮಕ್ಕಳಿಗೆ ಉಡುಗೊರೆ ನೀಡಿ ಸಂಭ್ರಮಿಸಿದ ಅಧಿಕಾರಿ

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಸೀಬಿನಕೆರೆಯಲ್ಲಿ ಪ್ರಾರಂಭದ ದಿನ ಬರೀ 17 ಮಕ್ಕಳನ್ನು ಹೊಂದಿದ್ದು, ಇದೀಗ ಸುಮಾರು 230 ಮಕ್ಕಳನ್ನು ಹೊಂದಿರುವ ಶಾಲೆಯಾಗಿದೆ. ಜ. 2ರಂದು ಶಾಲೆಗೆ ಶಿವಮೊಗ್ಗ ಉಪವಿಭಾಗ ಅಧಿಕಾರಿಗಳು (ಅಸಿಸ್ಟೆಂಟ್ ಕಮಿಷನರ್) ಸತ್ಯನಾರಾಯಣರವರು ದಿಢೀರ್ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ನೀಡಿ ಸಂಭ್ರಮಿಸಿದರು. ತೀರ್ಥಹಳ್ಳಿ ತಾಲ್ಲೂಕು ತಹಸೀಲ್ದಾರ್ ರಂಜಿತ್, ಕರ್ನಾಟಕ ರಾಜ್ಯ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರು ರಾಘವೇಂದ್ರ, ತಾಲ್ಲೂಕು ನೌಕರರ ಸಂಘದ ಕಾರ್ಯದರ್ಶಿ ಪವಿತ್ರ, ತಾಲ್ಲೂಕು ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಸುಷ್ಮಾ, ಉಪಾಧ್ಯಕ್ಷರಾದ ರಮೇಶ್ ಡಿ, ಸೀಬಿನಕೆರೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್, ತಾಲ್ಲೂಕು ಕಂದಾಯ ನಿರೀಕ್ಷಕರಾದ ಸುಧೀರ್, ವಿಲೇಜ್ ಅಕೌಂಟೆಂಟ್ ಲೋಕೇಶ್, ಪತ್ರಿಕಾ ವರದಿಗಾರರಾದ ಡಾನ್ ರಾಮಣ್ಣ, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಸಿಸ್ಟೆಂಟ್ ಕಮಿಷನರ್ ಆದ ಸತ್ಯನಾರಾಯಣರವರು ಎಲ್ಲಾ ಮಕ್ಕಳಿಗೂ ನೋಟ್ ಬುಕ್, ಜಾಮೀಟ್ರಿ ಬಾಕ್ಸ್, ಸ್ಕೆಚ್ ಪೆನ್, ಚಾಕೋಲೇಟ್ ಗಳನ್ನು ಮಕ್ಕಳಿಗೆ ನೀಡಿದರು. ಸಭೆಯಲ್ಲಿ CRP ಪೂರ್ಣೇಶ್ ಅವರು ನಿರೂಪಿಸಿದರು. ಮುಖ್ಯಉಪಾಧ್ಯಾಯರು, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಾಮುಂಡೇಶ್ವರಿ ನಾಗರಾಜ್, ಖಜಾಂಚಿ ನಾಗಭೂಷಣ್ ಮತ್ತು ಪೋಷಕರು ಸಭೆಯಲ್ಲಿ ನೆರೆದಿದ್ದರು. ಶಾಲೆಯ ಈ ಬೆಳವಣಿಗೆ ಗೆ ಸಹಕರಿಸಿದ ಹಿರಿಯ ವಿದ್ಯಾರ್ಥಿಗಳನ್ನು ಸ್ಮರಿಸಿ, ಸರ್ಕಾರಿ ಶಾಲೆಗಳ ಬಗ್ಗೆ ಇದ್ದ ಅಭಿಮಾನ, ಮತ್ತು ಶಾಲಾ ಮಕ್ಕಳಿಗೆ ನೀಡಿದ ಕೊಡುಗೆಗೆ ಕೃತಜ್ಞತೆ ಅರ್ಪಿಸಿ ಸನ್ಮಾನಿಸಿ ಗೌರವಿಸಲಾಯಿತು.

Categories
ತೀರ್ಥಹಳ್ಳಿ

ಬಿಡ್ಡಿಂಗ್ ವಾರ ಬದಲು: ಮಲೆನಾಡು ಅಡಕೆ ಬೆಳೆಗಾರರಿಗೆ ಮೋಸ?!

ಬಿಡ್ಡಿಂಗ್ ವಾರ ಬದಲು: ಮಲೆನಾಡು ಅಡಕೆ ಬೆಳೆಗಾರರಿಗೆ ಮೋಸ?!
– ಬಯಲುಸೀಮೆ ಫಸಲಿಗೆ ಬೇಡಿಕೆ ಸೃಷ್ಟಿಸುವ ಯತ್ನ
– ಮಲೆನಾಡು ಬೆಳೆಗಾರರಲ್ಲಿ ಆತಂಕ: ಕೆಲ ಅಧಿಕಾರಿಗಳ ಕೈವಾಡ?

NAMMUR EXPRESS NEWS
ತೀರ್ಥಹಳ್ಳಿ /ಕೊಪ್ಪ /ಸಾಗರ:
ವಿಶ್ವದಲ್ಲೇ ಪಾರಂಪರಿಕವಾಗಿ ಮಲೆನಾಡಿನಲ್ಲಿ ಬೆಳೆಯುವ ಅಡಕೆ ದೇಶ, ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಅಡಕೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮಲೆನಾಡಿನ ಅಡಕೆಗೆ ಪೆಟ್ಟುಕೊಡುವಂತಿದೆ. ಅಡಕೆ ಖರೀದಿಸುವ ಟ್ರೇಡರ್‌ಗಳನ್ನೇ ಬಯಲುಸೀಮೆ ಜಿಲ್ಲೆಗಳತ್ತ ಮುಖ ಮಾಡುವ ಪ್ರಯತ್ನ ನಡೆದಿದೆ.
ಅದರಲ್ಲೂ ಅಡಿಕೆ ಬಿಡ್ ವಾರ ಬದಲು ಮಾಡುವ ಮೂಲಕ ಅಧಿಕಾರಿಗಳು ಕೂಡ ತಮ್ಮ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ.
ಹಲವು ದಶಕಗಳಿಂದ ಭಾನುವಾರ ನಡೆಯುತ್ತಿದ್ದ ಬಿಡ್ ಕಳೆದ ಕೆಲ ತಿಂಗಳಿಂದ ಶನಿವಾರ ನಡೆಯುತ್ತಿದೆ.

ಶನಿವಾರ ಏಕೆ…? ಭಾನುವಾರ

ಮಲೆನಾಡು ತಾಲೂಕುಗಳಾದ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ತೀರ್ಥಹಳ್ಳಿ ಭಾಗದ ಅಡಕೆಗೆ ಹೆಚ್ಚು ಬೇಡಿಕೆ ಇತ್ತು. ಜತೆಗೆ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಡಕೆಯಲ್ಲಿ ಕಾಣಿಸಿಕೊಂಡ ರೋಗ ರೈತರಿಗೆ ದೊಡ್ಡ ಘಾಸಿ ಉಂಟುಮಾಡಿತ್ತು. ಜತೆಯಲ್ಲಿ ಕೆಲ ತಿಂಗಳಿನಿಂದ ಅಡಕೆ ಕೊಳ್ಳಲು ಟ್ರೇಡರ್ಸ್ ಕೂಡ ಮುಂದೆ ಬರಲು ಹಿಂದೇಟು ಹಾಕುತ್ತಿರುವುದು ಅಡಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆ ಎಪಿಎಂಸಿ ಮಾರುಕಟ್ಟೆಯ ವಿಸ್ತೀರ್ಣ ಹಾಗೂ ಬರೀ ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡು ತೆಗೆದುಕೊಳ್ಳುವ ನಿರ್ಧಾರ ಕಾರಣ ಎನ್ನಲಾಗುತ್ತಿದೆ. ಎಪಿಎಂಸಿ ತೆಗೆದುಕೊಳ್ಳುವ ನಿರ್ಧಾರದ ಹಿಂದೆ ಮ್ಯಾಮ್ ಕೋಸ್ ಪಾಲೂ ಇದೆ ಎಂಬುದು ಅಡಕೆ ಬೆಳೆಗಾರರ ಆರೋಪ. ಅಡಕೆಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಬಯಲುಸೀಮೆಯಲ್ಲೂ ಬೆಳೆ ವಿಸ್ತರಿಸಿಕೊಂಡಿದೆ.
ತರೀಕೆರೆ, ಕಡೂರು, ಚನ್ನಗಿರಿ, ಶಿಕಾರಿಪುರ, ಹೊಳೆಹೊನ್ನೂರಿನಿಂದ ದಾವಣಗೆರೆಯವರೆಗೂ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮಲೆನಾಡು ಅಡಕೆಗೆ ಬೇಡಿಕೆ ಕಡಿಮೆಯಾಗಿಲ್ಲ. ಈ ಬೇಡಿಕೆಯನ್ನು ಕುಸಿತಗೊಳಿಸುವ ಸಲುವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸ್ವಹಿತಾಸಕ್ತಿಯ ತಂಡವೊಂದು ಇನ್ನಿಲ್ಲದ ಪ್ರಯತ್ನದ ಜತೆಯಲ್ಲಿ ಕಾರ್ಯಾಚರಣೆಯನ್ನೂ ಮಾಡುತ್ತಿದೆ ಎಂಬ ದೂರು ಕೇಳಿಬಂದಿದೆ.
ಮಲೆನಾಡಿನ ಅಡಕೆಯನ್ನು ರೈತರು ಮಂಡಿಗಳಿಗೆ ವ್ಯಾಪಾರ ಮಾಡುತ್ತಾರೆ. ಶಿವಮೊಗ್ಗದ ಮಂಡಿಗೆ ನೇರವಾಗಿ ಅಡಕೆಯನ್ನು ಒಂದಷ್ಟು ರೈತರು ನೀಡಿದರೆ, ಸ್ಥಳೀಯವಾಗಿ ಇರುವ ಖಾಸಗಿ ಮಂಡಿ ಮತ್ತು ಮ್ಯಾಮಕೋಸ್ ಮೂಲಕ ಹೆಚ್ಚಿನ ರೈತರು ವಹಿವಾಟು ನಡೆಸುತ್ತಾರೆ. ಈ ಮಂಡಿಗಳಲ್ಲಿರುವ ಅಡಕೆಯನ್ನು ಕೊಳ್ಳಲು ಟ್ರೇಡರ್‌ಗಳು ವಾರಕ್ಕೊಮ್ಮೆ ಬಂದು ಬಿಡ್ಡಿಂಗ್ ನಡೆಸುತ್ತಾರೆ. ಈ ವಹಿವಾಟಿನಲ್ಲಿ ಸ್ಥಳೀಯ ಎಪಿಎಂಸಿಗೆ ಸೆಸ್, ಜಿಎಸ್‌ಟಿಗಳನ್ನು ಸ್ಥಳೀಯವಾಗಿಯೇ ಪಾವತಿ ಮಾಡಲಾಗುತ್ತದೆ. ಆದರೆ ಈ ವಾರ ಬದಲು ಮಾಡಿ ಇಲ್ಲಿಗೆ ಬಿಡ್ ದಾರರು ಬರದಂತೆ ನೋಡಿಕೊಳ್ಳಲಾಗುತ್ತಿದೆ.

ಬಿಡ್ಡಿಂಗ್ ವಾರವೇ ಬದಲು ಮಾಡಿದರು!

ಟ್ರೇಡರ್‌ಗಳು ಒಂದೊಂದು ಭಾಗಕ್ಕೆ ಒಂದೊಂದು ದಿನ ಭೇಟಿ ನೀಡಿ ಅಡಕೆ ಪರಿಶೀಲನೆ ನಡೆಸಿ ಬಿಡ್ಡಿಂಗ್ ಮಾಡುತ್ತಾರೆ. ಒಂದು ತಿಂಗಳಿನಿಂದ ಎಪಿಎಂಸಿಯೂ 60-70 ವರ್ಷಗಳಿಂದ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿದ್ದ ಪದ್ಧತಿಯನ್ನು ಬದಲಾಯಿಸಿದೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾನುವಾರ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿತ್ತು. ಅಗ 10 ರಿಂದ 15 ಟ್ರೇಡರ್‌ಗಳು ಬಿಡ್ಡಿಂಗ್ ನಡೆಸುತ್ತಿದ್ದರು. ಭಾನುವಾರ ನಡೆಯುತ್ತಿದ್ದ ಬಿಡ್ಡಿಂಗ್ ಶನಿವಾರಕ್ಕೆ ವರ್ಗಾಯಿಸಿದ ಕಾರಣ ನಾಲೈದು ಬಿಡ್ಡರ್ಸ್ ಮಾತ್ರ ಮಲೆನಾಡ ಕಡೆ ಮುಖಮಾಡುತ್ತಾರೆ. ಹೀಗಾಗಿ ಹಿಂದಿನಷ್ಟು ಬೇಡಿಕೆ ಅಡಕೆಗೆ ಬರುತ್ತಿಲ್ಲ. ಇದು ಮಲೆನಾಡಿನ ಅಡಕೆಯ ಬೇಡಿಕೆಯನ್ನು ಕಡಿಮೆ ಮಾಡಲು
ಹೂಡಿರುವ ತಂತ್ರ ಎನ್ನಲಾಗುತ್ತಿದೆ. ಇದರಿಂದ ರೈತರು. ಮಲೆನಾಡ ವರ್ತಕರ ಮೇಲೆ ಪರಿಣಾಮ ಬೀರಿದೆ. ಇದನ್ನು ಅರಿತ ಮ್ಯಾಮ್ಮೋಸ್ ಕೂಡ ಸುಮ್ಮನಿದೆ.

ರೈತ ಸಂಘ, ಜನ ಪ್ರತಿನಿಧಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ?

ಮಲೆನಾಡ ಅಡಿಕೆ ಬೆಲೆ ಕುಸಿತದ ಜತೆಗೆ ಅಡಿಕೆ ಅವ್ಯವಹಾರಕ್ಕೆ ಕಾರಣರಾದ ಕೆಲವು ಅಧಿಕಾರಿಗಳ ನಡೆ ಇದೀಗ ಅನುಮಾನಕ್ಕೆ ಕಾರಣವಾಗಿದೆ. ರೈತ ಸಂಘ, ಜನ ಪ್ರತಿನಿಧಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಇದೀಗ ರೈತ ವಲಯದಲ್ಲಿ ಕೇಳಿ ಬರುತ್ತಿದೆ.