Categories
ರಾಜ್ಯ

ಬಿಜೆಪಿ ಆಯ್ತು, ಈಗ ಕಾಂಗ್ರೆಸ್ಸಲ್ಲೂ ಬಣ ರಾಜಕೀಯ!

ಬಿಜೆಪಿ ಆಯ್ತು, ಈಗ ಕಾಂಗ್ರೆಸ್ಸಲ್ಲೂ ಬಣ ರಾಜಕೀಯ!
– ಡಿಕೆಶಿ ವಿದೇಶ ಪ್ರವಾಸದಲ್ಲಿದ್ದಾಗಲೇ ಜಾರಕಿಹೊಳಿ ಮನೆಯಲ್ಲಿ ಔತಣಕೂಟ
– ಕೃಷಿ ಸಚಿವ ಚಲುವರಾಯಸ್ವಾಮಿ ನಿವಾಸದಲ್ಲಿ ಒಕ್ಕಲಿಗ ಶಾಸಕ, ಸಚಿವರ ಸಭೆ

NAMMUR EXPRESS NEWS
ಬೆಂಗಳೂರು:
ರಾಜ್ಯ ಕಾಂಗ್ರೆಸ್‌ನಲ್ಲಿ ‘ಡಿನ್ನರ್ ಪಾಲಿಟಿಕ್ಸ್’ ಮುಂದುವರಿದಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅಹಿಂದ ಸಚಿವರು, ಶಾಸಕರು ಸಭೆ ಸೇರಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಒಕ್ಕಲಿಗರ ಬಲಪ್ರದರ್ಶನಕ್ಕೆ ಒಕ್ಕಲಿಗ ನಾಯಕರು ಸಭೆ ನಡೆಸಿದ್ದಾರೆ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್‌ನಲ್ಲೂ ಬಣ ಗದ್ದಲ ಸದ್ದು ಮಾಡುತ್ತಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಔಪಚಾರಿಕ ಭೋಜನಕೂಟ ಆಯೋಜಿಸಲಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವಿದೇಶದಲ್ಲಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ಈ ಭೋಜನಕೂಟದಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿವೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ, ಕೃಷಿ ಚಲುವರಾಯ ಸ್ವಾಮಿ ನಿವಾಸದಲ್ಲಿ ಒಕ್ಕಲಿಗ ಶಾಸಕರು, ಸಚಿವರು ಸಭೆ ನಡೆಸುವ ಮೂಲಕ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಗೆ ಠಕ್ಕರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ಪ್ರತಿ ಶಾಸಕರು ನಿಲ್ಲಬೇಕು. ಮುಖ್ಯಮಂತ್ರಿ ಅಥವಾ ಅಧ್ಯಕ್ಷ ಸ್ಥಾನದ ವಿಷಯದಲ್ಲಿಯೂ ಡಿಕೆಶಿ ಪರವಾಗಿ ಬ್ಯಾಟ್ ಬೀಸಬೇಕು. ಅಹಿಂದ ಸಮುದಾಯದ ನಾಯಕರು ಒಂದಾಗಿರುವ ಈ ಸಮಯ ದಲ್ಲಿ ಡಿಕೆ ಬೆಂಬಲಕ್ಕೆ ಒಕ್ಕಲಿಗರು ನಿಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗುತ್ತದೆ ಎನ್ನುವ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಶಕ್ತಿ ಪ್ರದರ್ಶನದ ಸಭೆ

ಗುರುವಾರ ರಾತ್ರಿ ನಡೆದ ಡಿನ್ನರ್ ಮೀಟಿಂಗ್‌ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ, ಡಾ.ಜಿ. ಪರಮೇಶ್ವರ, ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ ಇದ್ದರು. ಇವರೊಂದಿಗೆ ಸುಮಾರು 30 ಶಾಸಕರೂ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಮಾತ್ರ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಹಿಂದ ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡಿದ ಶಾಸಕರಿಗೆ ತಿರುಗೇಟು ನೀಡಲು ಶುಕ್ರವಾರ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ನಿವಾಸದಲ್ಲಿ ಒಕ್ಕಲಿಗ ಶಾಸಕರು ಸಭೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಎಸ್.ಎಂ.ಕೃಷ್ಣ ಸ್ಮರಣಾರ್ಥ ಕಾರ್ಯಕ್ರಮ ರೂಪಿಸಲು ಸಭೆ ನಡೆಸಲಾಗಿದೆ ಎನ್ನಲಾಗುತ್ತಿದ್ದರೂ, ಅಹಿಂದ ಸಮುದಾಯದ ಡಿನ್ನರ್ ಮೀಟಿಂಗ್‌ನ ವಿಷಯಗಳೇ ಪ್ರಸ್ತಾಪವಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬೈಕ್ ಡಿಕ್ಕಿಗೆ ಮಹಿಳೆ ಬಲಿ!

ತೀರ್ಥಹಳ್ಳಿಯಲ್ಲಿ ಬೈಕ್ ಡಿಕ್ಕಿಗೆ ಮಹಿಳೆ ಬಲಿ!
– ಎಳ್ಳಮಾವಸ್ಯೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದವರ ಹೊಡೆದಾಟ!
– ಹೊಸನಗರ ತಾಲೂಕಿನ ಕಟ್ಟಿನಗದ್ದೆಯಲ್ಲಿ ವೃದ್ಧ ಕಾಣೆ

NAMMUR EXPRESS NEWS
ತೀರ್ಥಹಳ್ಳಿ: ಹಾಲು ಮಾರಲು ಹೋಗಿದ್ದ ಮಹಿಳೆಗೆ ಬೈಕ್ ಅತೀ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇತ್ತೀಚಿಗೆ ತೀರ್ಥಹಳ್ಳಿ ಪಟ್ಟಣ ಸಮೀಪದ ಚಿಟ್ಟೆಬೈಲಿನಲ್ಲಿ ನಡೆದಿದೆ. ಜಾನಕಮ್ಮ ಮೃತ ಮಹಿಳೆ ಎಂದು ತಿಳಿದು ಬಂದಿದೆ
ಡಿ. 31ರಂದು ಚಿಟ್ಟೆಬೈಲಿನ ಜಾನಕಿ ಎಂಬವರು ತಮ್ಮ ಮನೆಯ ಮುಂಭಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.ಜನವರಿ 2ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೈಕ್ ಸವಾರನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮೃತ ಮಹಿಳೆ ಗ್ಯಾಸ್ ಗೋಪಾಲ ಅವರ ಸಹೋದರಿ ಎಂದು ಗುರುತಿಸಲಾಗಿದೆ. ಓರ್ವ ಪುತ್ರಿ, ಪುತ್ರ ಅಪಾರ ಬಂಧುವರ್ಗವನ್ನಗಲಿದ್ದಾರೆ.

ಹೊಸನಗರ ತಾಲೂಕಿನ ಕಟ್ಟಿನಗದ್ದೆಯಲ್ಲಿ ವೃದ್ಧ ಕಾಣೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಉಳುಕೊಪ್ಪ ಸಮೀಪದ ಕಟ್ಟಿನ ಗದ್ದೆಯ ವಾಸಿ ಶೇಷನಾಯ್ಕ 75 ವರ್ಷ ಇವರು ತಾರೀಕು 3-12-2024 ಮಧ್ಯಾನ ದಿಂದ ತಮ್ಮ ನಿವಾಸದಿಂದ ಕಾಣೆಯಾಗಿರುತ್ತಾರೆ ಬಿಳಿ ಬಣ್ಣದ ಶರ್ಟ್ ಹಾಗು ಪಂಚೆ ಧರಿಸಿರುತ್ತಾರೆ ಇವರು ಕಂಡುಬಂದಲ್ಲಿ ಈ ನಂಬರ್ ಗೆ ಸಂಪರ್ಕಿಸ ಬೇಕಾಗಿ ವಿನಂತಿ: 9481594873

ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದವರ ಹೊಡೆದಾಟ!

ತೀರ್ಥಹಳ್ಳಿ ರಾಮೇಶ್ವರ ಜಾತ್ರೆಗೆ ಬಂದಿದ್ದ ಬಯಲು ಸೀಮೆ ಭಾಗದ ಕೆಲವು ಚಿಲ್ಲರೆ ವ್ಯಾಪಾರಿಗಳು ದೇವಸ್ಥಾನದ ಮುಂದೆಯೇ ಶುಕ್ರವಾರ ರಾತ್ರಿ ಹೊಡೆದಾಟ ನಡೆಸಿದ ಘಟನೆ ನಡೆದಿದೆ. ಸ್ಥಳೀಯರು 112 ಮಾಹಿತಿ ನೀಡಿ ಪೊಲೀಸರು ಸ್ಥಳಕ್ಕೆ ಬಂದು ಬುದ್ದಿವಾದ ಹೇಳಿ ಲಾಟಿ ಏಟು ನೀಡಿದ್ದಾರೆ. ಬಳಿಕ ಗಲಾಟೆ ತಣ್ಣಗಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Categories
ಚಿಕ್ಕಮಗಳೂರು

ಕಟ್ಟಡ ಕಾರ್ಮಿಕರ ಸಂಘದಿಂದ ಶ್ರಮಿಕೋತ್ಸವ ಕಾರ್ಯಕ್ರಮ..!

ಕಟ್ಟಡ ಕಾರ್ಮಿಕರ ಸಂಘದಿಂದ ಶ್ರಮಿಕೋತ್ಸವ ಕಾರ್ಯಕ್ರಮ..!
– ಶ್ರೀಚಂಡಿಕಾ ಹೋಮ,ಸಮಾವೇಶ,ಸಂತರ್ಪಣೆ
– ಶ್ರೀಶಾರದಾಂಬ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದಿಂದ ಆಯೋಜನೆ
– ಕಾರ್ಮಿಕರ ಸಹಾಯಕ್ಕೆ ಟ್ರಸ್ಟ್ ಉದ್ಘಾಟಿಸಿದ ಜಗದ್ಗುರುಗಳು,ಶ್ರೀಮಠದಿಂದ ಧನಸಹಾಯ

NAMMUR EXPRESS NEWS
ಶೃಂಗೇರಿ: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಇದರ ವತಿಯಿಂದ ತಾಲೂಕಿನ ಗೌರೀಶಂಕರ್ ಸಭಾಂಗಣದಲ್ಲಿ ಮೂರನೇ ವರ್ಷದ ಶ್ರಮಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು.ಕಳೆದೆರಡು ಶ್ರಮಿಕೋತ್ಸವದಲ್ಲಿ ಸತ್ಯನಾರಾಯಣ ಪೂಜೆ,ಗಣಹೋಮ ನಡೆಸಿದ್ದ ಸಂಘ ಈ ಬಾರಿ ಶ್ರೀಚಂಡಿಕಾ ಹೋಮ ನಡೆಸಿತು. ಹೋಮದ ಪೂರ್ಣಾಹುತಿಯಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರು ಶ್ರೀಶ್ರೀ ವಿಧುಶೇಖರ ಮಹಾಸ್ವಾಮಿಗಳವರು ಭಾಗವಹಿಸಿ ಆಶೀರ್ವಚನ ನೀಡಿದರು.

ಶ್ರೀಶಾರದಾಂಬ ಶ್ರಮಿಕಾ ಸೇವಾ ಟ್ರಸ್ಟ್ ಉದ್ಘಾಟನೆ..
ತಾಲೂಕಿನ ಕಾರ್ಮಿಕರ ಸಂಕಷ್ಟದಲ್ಲಿ ನೆರವಾಗಲು ಶ್ರೀಶಾರದಾಂಬ ಶ್ರಮಿಕಾ ಸೇವಾ ಟ್ರಸ್ಟ್‌ನ್ನು (ರಿ) ಶ್ರೀಜಗದ್ಗುರು ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು. ಉದ್ಘಾಟಿಸಿ ಶ್ರೀಮಠದಿಂದ ಟ್ರಸ್ಟ್‌ಗೆ 3 ಲಕ್ಷ ರೂ.ಗಳ ಸಹಾಯಧನ ನೀಡಿ ಅಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮುನಿಸ್ವಾಮಿ.ಕೆ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ,ಪಟ್ಟಣ ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರು ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾಗಬಹುದು. ಮಕ್ಕಳಿಂದ ಬೆಂಬಲ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ತರಲಿದೆ.

** ವೃಷಭ ರಾಶಿ :
ಇಂದು ವೃಷಭ ರಾಶಿಯ ಜನರು ಇಂದು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಕ್ಕಾಗಿ ನೀವು ನಿಮ್ಮ ತಂದೆಯಿಂದ ಹಣವನ್ನು ಪಡೆಯಬಹುದು. ಕುಟುಂಬಗಳಲ್ಲಿ ಹೆಚ್ಚಳವಾಗಲಿದೆ. ಶಕ್ತಿಯ ಮಟ್ಟ ಹೆಚ್ಚುತ್ತಲೇ ಇರುತ್ತದೆ. ಆತ್ಮೀಯರೊಂದಿಗೆ ಇರುತ್ತದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಸಾಧನೆಗಳ ಪೂರ್ಣ ದಿನವಾಗಲಿದೆ. ಕೆಲಸದ ವ್ಯಾಪ್ತಿ ಹೆಚ್ಚಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಆದರೆ ತಾಳ್ಮೆಯ ಕೊರತೆ ಇರಬಹುದು. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ನೀವು ಹಣ ಗಳಿಸಲು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಇಂದು ನೀವು ತೆಗೆದುಕೊಂಡ ಯಾವುದೇ ಆತುರದ ನಿರ್ಧಾರಕ್ಕೆ ನೀವು ವಿಷಾದಿಸುತ್ತೀರಿ.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಆದರೆ, ಕೆಲಸದ ಸ್ಥಳದಲ್ಲಿ ಕೆಲಸದ ಹೊರೆಯಿಂದಾಗಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಕೂಡ ವಿಚಲಿತವಾಗಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಉದ್ಯೋಗಕ್ಕಾಗಿ ಪ್ರಯತ್ನ ಮಾಡುವ ಜನರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ಸಂತೋಷದ ದಿನವಾಗಿರುತ್ತದೆ. ಇಂದು ಆದಾಯ ಹೆಚ್ಚಾಗುವ ದಿನ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು. ಪೂರ್ಣ ವಿಶ್ವಾಸ ಇರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಆದಾಯ ಹೆಚ್ಚಲಿದೆ. ನಿಮ್ಮ ಯಾವುದೇ ಹಳೆಯ ವಹಿವಾಟು ಇತ್ಯರ್ಥವಾಗುತ್ತದೆ.

** ಕನ್ಯಾ ರಾಶಿ :
ಕನ್ಯಾ ರಾಶಿಯ ಜನರು ಇಂದು ಆರ್ಥಿಕ ಸ್ಥಿರತೆಯನ್ನು ಪಡೆಯಬಹುದು. ಕುಟುಂಬದವರ ಬೆಂಬಲದಿಂದ ಮನಸ್ಸು ಸಂತೋಷವಾಗಿರುವುದು. ಉದ್ಯೋಗದಲ್ಲಿ ಬದಲಾವಣೆಯೊಂದಿಗೆ ಪ್ರಗತಿಯ ಅವಕಾಶಗಳು ಉಂಟಾಗಬಹುದು. ಆದಾಯ ಹೆಚ್ಚಲಿದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಘರ್ಷಣೆಯನ್ನು ತಪ್ಪಿಸಿ.

** ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಏರಿಳಿತಗಳ ಪೂರ್ಣ ದಿನವಾಗಲಿದೆ. ಹಣಕಾಸಿನ ವಿಷಯಗಳ ಬಗ್ಗೆಯೂ ನೀವು ಚಿಂತಿತರಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಸ್ಥರಿಗೆ ದಿನವು ಸಾಮಾನ್ಯವಾಗಿರುತ್ತದೆ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಮೇಲೆ ನಿಗಾ ಇರಿಸಿ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ ಕೆಲವರಿಗೆ ಇಂದು ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಹಿರಿಯ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗಲಿದೆ. ಬಡ್ತಿ ಮತ್ತು ಆದಾಯದಲ್ಲಿ ಹೆಚ್ಚಳದ ಲಕ್ಷಣಗಳಿವೆ. ನೀವು ವ್ಯಾಪಾರಕ್ಕಾಗಿ ನಿಮ್ಮ ತಂದೆಯಿಂದಲೂ ಹಣವನ್ನು ಪಡೆಯಬಹುದು. ಇದರಿಂದ ಆದಾಯವೂ ಹೆಚ್ಚುತ್ತದೆ. ಕೆಲವು ಕೆಲಸದ ಕಾರಣ ನೀವು ಇದ್ದಕ್ಕಿದ್ದಂತೆ ಪ್ರವಾಸಕ್ಕೆ ಹೋಗಬೇಕಾಗಬಹುದು.

** ಧನಸ್ಸು ರಾಶಿ :
ಧನು ರಾಶಿ ಜನರು ಇಂದು ತಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಆದರೆ ನೀವು ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಬಲಿಯಾಗಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆಗಳಿರಬಹುದು. ಪೂರ್ಣ ವಿಶ್ವಾಸ ಇರುತ್ತದೆ. ನಿಮ್ಮ ಸಂಗಾತಿ ಮತ್ತು ಆರೋಗ್ಯದ ಮೇಲೆ ನಿಗಾ ಇರಿಸಿ. ಹಣದ ಒಳಹರಿವು ಹೆಚ್ಚಾಗುತ್ತದೆ.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಮಿಶ್ರ ಫಲ ಸಿಗಲಿದೆ. ವ್ಯಾಪಾರದ ವಿಷಯದಲ್ಲಿ ಏರಿಳಿತಗಳ ದಿನವಾಗಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದಿಂದ ಹೊಸ ಗುರುತನ್ನು ಪಡೆಯುತ್ತಾರೆ. ನೀವು ಯಾವುದೇ ಒಪ್ಪಂದವನ್ನು ಬಹಳ ಚಿಂತನಶೀಲವಾಗಿ ಅಂತಿಮಗೊಳಿಸಬೇಕು. ನಿಮ್ಮ ಯಾವುದೇ ಆಸೆ ಈಡೇರಬಹುದು, ಅದು ನಿಮಗೆ ಸಂತೋಷವನ್ನು ನೀಡುತ್ತದೆ.

** ಕುಂಭ ರಾಶಿ :
ಇಂದು ಕುಂಭ ರಾಶಿಯ ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಹೊರಗಿನ ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮವು ಫಲ ನೀಡುತ್ತದೆ. ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದ ವಿಷಯಗಳಲ್ಲಿ ಜಾಗರೂಕರಾಗಿರಿ. ನೀವು ಹಣದ ವ್ಯವಹಾರಗಳನ್ನು ಬಹಳ ಚಿಂತನಶೀಲವಾಗಿ ಮಾಡಬೇಕಾಗುತ್ತದೆ.

** ಮೀನ ರಾಶಿ :
ಮೀನ ರಾಶಿಯ ಜನರು ಇಂದು ಕೆಲವು ಅಪರಿಚಿತ ಭಯದಿಂದ ತೊಂದರೆಗೊಳಗಾಗಬಹುದು. ಕುಟುಂಬದಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳವಾಗಬಹುದು. ಭೂಮಿ, ಕಟ್ಟಡ ಮತ್ತು ವಾಹನ ಖರೀದಿಯ ಸೂಚನೆಗಳು ಇವೆ, ಆದರೆ ಕೆಲವು ಅಡೆತಡೆಗಳು ಉಂಟಾಗಬಹುದು. ನಿಮ್ಮ ಹೆತ್ತವರ ಆರೋಗ್ಯದ ಮೇಲೆ ನಿಗಾ ಇರಿಸಿ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ನಂಬಿಕೆಯನ್ನು ಹೊಂದಿರುತ್ತೀರಿ, ಅದನ್ನು ನೋಡಿ ನಿಮ್ಮ ಕುಟುಂಬ ಸದಸ್ಯರು ಸಹ ಸಂತೋಷವಾಗಿರುತ್ತಾರೆ

Categories
ಬೆಂಗಳೂರು ಮಲ್ನಾಡ್

ಜ.5ಕ್ಕೆ ರಾಜಧಾನಿಯಲ್ಲಿ ಸಹ್ಯಾದ್ರಿ ಸಂಘದಿಂದ ಕ್ರೀಡಾಕೂಟ!

ಜ.5ಕ್ಕೆ ರಾಜಧಾನಿಯಲ್ಲಿ ಸಹ್ಯಾದ್ರಿ ಸಂಘದಿಂದ ಕ್ರೀಡಾಕೂಟ!
– ಬೆಂಗಳೂರಿನಲ್ಲಿರುವ ಮಲೆನಾಡಿಗರ ವಾರ್ಷಿಕ ಕ್ರೀಡಾಕೂಟ
– ಪುರುಷರು, ಮಹಿಳೆಯರು, ಚಿಕ್ಕ ಮಕ್ಕಳಿಗೂ ಆಟೋಟ
– ಕಾರ್ಯಕ್ರಮದ ವಿಶೇಷ ವರದಿ ನಮ್ಮೂರ್ ಎಕ್ಸ್ಪ್ರೆಸ್ ಅಲ್ಲಿ ವೀಕ್ಷಿಸಿ

NAMMUR EXPRESS NEWS
ಬೆಂಗಳೂರು/ ಮಲೆನಾಡು: ಮಲೆನಾಡು ಮೂಲದವರ ರಾಜಧಾನಿ ಸಂಘಟನೆ ಸಹ್ಯಾದ್ರಿ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಜನವರಿ 5 – 2025 ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ಒಕ್ಕಲಿಗರ ಸಂಘ ಪ್ರೌಢಶಾಲಾ ಆವರಣ ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಮಲೆನಾಡಿಗರು ಒಟ್ಟಿಗೆ ಸೇರಲು ಒಂದು ಸುವರ್ಣ ಅವಕಾಶ ಆಗಲಿದೆ.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಜಿ. ಎ ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಪುರುಷರು, ಮಹಿಳೆಯರು ಎಲ್ಲರೂ ಕೂಡ ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಬಹುದು. ಅನೇಕ ರೀತಿಯ ಕ್ರೀಡೆಯನ್ನ ಏರ್ಪಡಿಸಲಾಗಿದೆ. ಬಕೆಟ್ ಒಳಗೆ ಚೆಂಡು, ಪ್ರಾಗ್ ಜಂಪ್ , ಮ್ಯೂಸಿಕಲ್ ಚೇರ್, ತೆಂಗಿನಕಾಯಿ ಒಡೆಯುವ ಸ್ಪರ್ಧೆ, ಕಬಡ್ಡಿ, ವಾಲಿಬಾಲ್, ತ್ರೋಬಾಲ್ , ರನ್ನಿಂಗ್ ರೇಸ್ ಸೇರಿದಂತೆ ಅನೇಕ ಆಟಗಳು ಆಯೋಜನೆ ಮಾಡಲಾಗಿದೆ. ಪುರುಷರು, ಮಹಿಳೆಯರು, ಮಕ್ಕಳು ಆಟ ಆಡಿ ಎಲ್ಲರೂ ಒಟ್ಟಿಗೆ ಕಾಲ ಕಳೆಯಬಹುದು. ಸಂಜೆ 4:00 ನಂತರ ವೇದಿಕೆ ಕಾರ್ಯಕ್ರಮ ಕೂಡ ನೆರವೇರುತ್ತದೆ ನೃತ್ಯ, ಮಲೆನಾಡಿನ ಅದೃಷ್ಟವಂತ ಹುಡುಗ- ಹುಡುಗಿ, ಅದೃಷ್ಟವಂತ ದಂಪತಿಗಳು ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸಂಜೆ 6 ಗಂಟೆಯ ನಂತರ ಸಮಾರೋಪ ಸಮಾರಂಭ ಕೂಡ ನೆರವೇರುತ್ತದೆ. ಈ ಕಾರ್ಯಕ್ರಮಕ್ಕೆ ಮಲೆನಾಡಿನ ಸರ್ವರನ್ನು ಕೂಡ ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಶ್ರೀಧರ್ ಮತ್ತು ಕಾರ್ಯದರ್ಶಿ ಜಯಪ್ರಕಾಶ್ ಸೇರಿ ಎಲ್ಲಾ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.
ಕ್ರೀಡಾಕೂಟ ಮತ್ತು ಸಭಾ ಕಾರ್ಯಕ್ರಮವನ್ನು ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ಅಲ್ಲಿ ನೇರ ಪ್ರಸಾರ ಕೂಡ ಮಾಡಲಿದೆ..

Categories
ತೀರ್ಥಹಳ್ಳಿ

5ನೇ ದಿನವು ಜಾತ್ರೆಯ ರಂಗು..!

5ನೇ ದಿನವು ಜಾತ್ರೆಯ ರಂಗು..!
– ಸಾವಿರಾರು ಜನರು ಇಂದು ಕೂಡ ಜಾತ್ರೆಗೆ ಭೇಟಿ
– ತುಂಗಾ ನದಿಯಲ್ಲಿ ಗಮನ ಸೆಳೆದ ಬೋಟಿಂಗ್ ಉತ್ಸವ
– ಜಾತ್ರೆಯಲ್ಲಿ ಜೂಜಾಡುತ್ತಿದ್ದ ಇಬ್ಬರು ಅರೆಸ್ಟ್!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವ್ಯಾಸೆ ಜಾತ್ರೆ ಮುಗಿದಿದ್ದರೂ ಕೂಡ ಎಂದಿನಂತೆ ಜನ ಜಾತ್ರೆಯ ರಂಗನ್ನು ಹೆಚ್ಚಿಸುತ್ತಿದ್ದಾರೆ. 5ನೇ ದಿನವೂ ಕೂಡ ಜಾತ್ರೆಯಲ್ಲಿ ಜನವೋ ಜನ, ಎಂದಿನಂತೆ ಜನ ಅಂಗಡಿಗಳಲ್ಲಿ ಖರೀದಿ ಮಾಡುವುದು ಇನ್ನಷ್ಟು ಜೋರಾಗಿದೆ. ಎಲ್ಲಡೆ ಜಾತ್ರೆಯ ಸಂಭ್ರಮ ಇನ್ನಷ್ಟು ಹೆಚ್ಚಾದಂತೆ ಇದೆ. ಜಾತ್ರೆಯಲ್ಲಿ ಜಾಯಿಂಟ್ ವಿಲ್, ಕೊಲಂಬಸ್, ಬ್ರೇಕ್ ಡ್ಯಾನ್ಸ್, ಹೀಗೆ ಮಕ್ಕಳ ಆಟೋಪಕರಣಗಳಲ್ಲಿ ಹೆಚ್ಚು ಜನರು ಹಾಗೂ ಮಕ್ಕಳು ಆಟವಾಡಿ ಸಂಭ್ರಮ ಪಡುತ್ತಿದ್ದಾರೆ. ಜಾತ್ರೆಯ ಸಂಭ್ರಮ ಇನ್ನೂ ಹೆಚ್ಚಾದಂತೆ ಇದೆ. ಇಂದು ಕೂಡ ಜಾತ್ರೆಯಲ್ಲಿ ಜನ ಹೆಚ್ಚಾದಂತೆ ಇದೆ.

– ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಇಂದು ಕೂಡ ಬೋಟಿಂಗ್ ಉತ್ಸವ

ತೀರ್ಥಹಳ್ಳಿ : ಎಳ್ಳಮಾವ್ಯಾಸೆ ಜಾತ್ರೆ ಸಂದರ್ಭದಲ್ಲಿ ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಬೋಟಿಂಗ್ ಉತ್ಸವದಲ್ಲಿ ಸಾವಿರಾರು ಜನರು ಈ ಬೋಟಿಂಗ್ ನಲ್ಲಿ ಸಮಯ ಕಳೆದಿದ್ದಾರೆ ಮತ್ತು ಸಾಕಷ್ಟು ರೀತಿಯ ಸಂತೋಷವನ್ನು ಕೂಡ ಪಡೆದುಕೊಂಡಿದ್ದಾರೆ. ಸಾವಿರಾರು ಜನರ ಗಮನ ಸೆಳೆದಿರುವ ತುಂಗಾ ನದಿಯಲ್ಲಿರುವ ಬೋಟಿಂಗ್ ಶುಕ್ರವಾರ ಕೂಡ ಗಮನ ಸೆಳೆಯಿತು. ಜನರಿಂದ ಉತ್ತಮ ಸ್ಪಂದನೆ ಕೂಡ ಸಿಕ್ಕಿದೆ.

– ತೀರ್ಥಹಳ್ಳಿ : ಜಾತ್ರೆಯಲ್ಲಿ ಜೂಜಾಡುತ್ತಿದ್ದ ಇಬ್ಬರು ಅರೆಸ್ಟ್

ಪ್ರಸಿದ್ಧ ತೀರ್ಥಹಳ್ಳಿ ರಾಮೇಶ್ವರ ಜಾತ್ರೆಯಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಬಾಲ್ ಆಟವನ್ನು ಹಣದ ಮೂಲಕ ಜೂಜಾಡುತ್ತಿದ್ದ ಇಬ್ಬರನ್ನ ತೀರ್ಥಹಳ್ಳಿ ಪೊಲೀಸರು ಮಹಜರು ಮಾಡಿ ವಶಕ್ಕೆ ಪಡೆದಿದ್ದಾರೆ. ಇನ್ಸ್ಪೆಕ್ಟರ್ ಪೊಲೀಸ್ ಸಿಬ್ಬಂದಿ ದೀಪಕ್, ಇವರ ತಂಡ ಇಬ್ಬರನ್ನು ಬಂಧಿಸಿ ಹಣ ಮತ್ತು ಜೂಜಿಗೆ ಬಳಸುತ್ತಿದ್ದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

Categories
ಚಿಕ್ಕಮಗಳೂರು

ಶಾಸಕ ರಾಜೇಗೌಡಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ..!!

ಶಾಸಕ ರಾಜೇಗೌಡಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ..!!
– ಚುನಾವಣಾ ಏಣಿಕೆ ಕುರಿತ ಅರ್ಜಿ ವಜಾ ಮಾಡುವಂತೆ ಸಲ್ಲಿಸಿದ್ದ ಅರ್ಜಿ
– ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ ಅರ್ಜಿ ವಿಚಾರಣೆಯಾಗಬೇಕು – ಸುಪ್ರೀಂ ಕೋರ್ಟ್
– ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ ಅರ್ಜಿ ಪುರಸ್ಕೃತ

NAMMUR EXPRESS NEWS
ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಮಾಜಿ ಶಾಸಕ ಡಿ.ಎನ್ ಜೀವರಾಜ್ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯು ತಿರಸ್ಕೃತಗೊಂಡಿದೆ. ಈ ಮೂಲಕ ಶಾಸಕ ರಾಜೇಗೌಡರಿಗೆ ತೀವ್ರ ಹಿನ್ನಡೆಯಾಡಿದೆ. ಈ ಹಿಂದೆ ಕೂಡ ಕರ್ನಾಟಕ ಹೈಕೋರ್ಟ್‌ನಲ್ಲಿ ಮಾಜಿ ಶಾಸಕ ಜೀವರಾಜ್ ಸಲ್ಲಿಸಸಿದ್ದ ಚುನಾವಣೆ ಅರ್ಜಿಯನ್ನು ವಜಾ ಮಾಡಬೇಕೆಂದು ಶಾಸಕ ರಾಜೇಗೌಡ ಅವರು ಮೊದಲ ಬಾರಿ ಕೋರಿದ್ದ ಅರ್ಜಿ ಕೂಡ ಹೈ ಕೋರ್ಟ್ ತಿರಸ್ಕರಿಸಿ ವಜಾಗೊಳಿಸಿತ್ತು. ಇದನ್ನು ಮತ್ತೆ ಪ್ರಶ್ನಿಸಿ ಶಾಸಕ ರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಂದು ಪ್ರಸಿದ್ಧ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಗ್ವಿ ಮತ್ತು ಕಪಿಲ್ ಸಿಬಲ್‌ರವರು ಶಾಸಕ ರಾಜೇಗೌಡ ಪರ ವಾದ ಮಂಡಿಸಿ ಹಿನ್ನಡೆ ಅನುಭವಿಸಿದ್ದರು.
ನಂತರ ಶಾಸಕ ರಾಜೇಗೌಡ ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ Striking of Pleading ಅರ್ಜಿಯನ್ನ ಕೂಡ 29/11/2024 ರಂದು ಉಚ್ಚನ್ಯಾಯಲಯವು ಎರಡನೇ ಬಾರಿಗೆ ವಜಾ ಮಾಡಿತ್ತು. ಪುನಃ ಶೃಂಗೇರಿ ಶಾಸಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು ಸುಪ್ರೀಂ ಕೋರ್ಟ್ ಮತ್ತೆ ಈ ಅರ್ಜಿಯನ್ನು ಬಾರಿಗೆ ವಜಾ ಮಾಡಿ ಡಿ.ಎನ್ ಜೀವರಾಜ್ ಸಲ್ಲಿಸಸಿದ್ದ ಚುನಾವಣೆ ಅರ್ಜಿ ತನಿಖೆಯಾಗಬೇಕು ಎಂದು ತೀರ್ಪು ನೀಡಿದೆ. ಇಂದು ಪ್ರಸಿದ್ಧ ಹಿರಿಯ ವಕೀಲರಾದ ಶಾಮ್ ದಿವನ್ ಮತ್ತು ದೇವದತ್ತ್ ಕಾಮತ್ ರವರುಗಳು ಶಾಸಕ ರಾಜೇಗೌಡ ಪರ ವಾದ ಮಂಡಿಸಿ ಹಿನ್ನಡೆ ಅನುಭವಿಸಿದ್ದಾರೆ. ಈ ಮೂಲಕ ಡಿ.ಎನ್ ಜೀವರಾಜ್‌ಗೆ ನ್ಯಾಯಾಂಗ ಹೋರಾಟದಲ್ಲಿ ಮತ್ತೊಂದು ಜಯ ಲಭಿಸಿದಂತಾಗಿದೆ.

Categories
ತೀರ್ಥಹಳ್ಳಿ

ಬೇಗುವಳ್ಳಿ ಸತೀಶ್ ನೇತೃತ್ವದಲ್ಲಿ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಬೇಗುವಳ್ಳಿ ಸತೀಶ್ ನೇತೃತ್ವದಲ್ಲಿ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
– ಬೇಗುವಳ್ಳಿ ಸತೀಶ್ ಅವರ ಕುಟುಂಬದಿಂದ ಮಾತಾ-ಪಿತೃರ ಸ್ಮರಣಾರ್ಥ ಮಾದರಿ ಕಾರ್ಯಕ್ರಮ
– ಉಚಿತ ನೇತ್ರ ತಪಾಸಣಾ ಶಿಬಿರ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಮಾತಾ-ಪಿತೃಗಳ ಸ್ಮರಣಾರ್ಥ ಬಿಜೆಪಿ ನಾಯಕರು, ಈಡಿಗ ಸಮುದಾಯದ ಪ್ರಮುಖರೂ ಆದ ಬೇಗುವಳ್ಳಿ ಸತೀಶ್ ಅವರು ಜ.5 ರಂದು ತೀರ್ಥಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಬೇಗುವಳ್ಳಿ ಸತೀಶ್ ಅವರ ಮಾತಾ ಪಿತೃರಾದ ಶ್ರೀಮತಿ ರುಕ್ಮಿಣಿ ಮತ್ತು ಶ್ರೀ ಹೆಚ್ ಕೆ ರಮಾನಂದ ಅವರ ಸ್ಮರಣಾರ್ಥ ಬೇಗುವಳ್ಳಿ ಸತೀಶ್ ಹಾಗೂ ಕುಟುಂಬದವರು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಈಡಿಗ ಹಾಗೂ ಇತರೆ ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನವನ್ನು ಏರ್ಪಡಿಸಿದ್ದು, ದಿನಾಂಕ :05- 01-2025ರ ಭಾನುವಾರ, ಬೆಳಗ್ಗೆ 10-00 ಗಂಟೆಗೆ, ಸುವರ್ಣ ಸಹಕಾರ ಭವನ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ, ಸಾಗರದ ಶ್ರೀ ಕಾರ್ತಿಕೇಯ ಕ್ಷೇತ್ರದ, ಶ್ರೀ ಶ್ರೀ ಯೋಗೇಂದ್ರ ಅವಧೂತರ ಹಾಗೂ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಮಾಜಿ ಲೋಕಸಭಾ ಸದಸ್ಯರಾದ ಶಿವಕುಮಾರ್ ಉದಾಸಿ ಇವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಗುವಳ್ಳಿ ಸತೀಶ್ ವಹಿಸಲಿದ್ದು, ಪ್ರತಿಭಾ ಪುರಸ್ಕಾರವನ್ನು ಮಾಜಿ ಗೃಹ ಸಚಿವರು,ತೀರ್ಥಹಳ್ಳಿ ಕ್ಷೇತ್ರದ ಹಾಲಿ ವಿಧಾನಸಭಾ ಸದಸ್ಯರೂ ಆದ ಆರಗ ಜ್ಞಾನೇಂದ್ರ ನಡೆಸಿಕೊಡಲಿದ್ದಾರೆ. ವಿಶೇಷ ಕಾರ್ಯಕ್ರಮವಾಗಿ ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಹಾಗೂ ಮಂಡಗದ್ದೆ ರೈತ ಉತ್ಪಾದಕ ಕಂಪನಿ, ಬೆಜ್ಜವಳ್ಳಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನ ಹಮ್ಮಿಕೊಂಡಿದ್ದು ಬೆಳಿಗ್ಗೆ – 9.00 ರಿಂದ ಈ ಶಿಬಿರ ಆರಂಭಗೊಳ್ಳುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಕುಲ, ಒಂದೇ ಮತ, ಒಂದೇ ದೇವರು ಎಂಬ ಸಮಾನತೆಯ ಸಂದೇಶವನ್ನು ಸಾರುತ್ತ, ಬನ್ನಿ ನಿಮ್ಮೂರಿನ ಪ್ರತಿಭಾವಂತ ಮಕ್ಕಳು ಉನ್ನತ ಮಟ್ಟಕ್ಕೇರಲು ಹಾಗೂ ಉತ್ತಮ ನಾಗರೀಕರಾಗಲು ಸಹಕರಿಸೋಣ ಎಂದು ತೀರ್ಥಹಳ್ಳಿ ತಾಲೂಕಿನ ಸಹೃದಯ ನಾಗರೀಕರು, ಬಂದು ಮಿತ್ರರಿಗೆ ತುಂಬು ಹೃದಯದಿಂದ ಬೇಗುವಳ್ಳಿ ಸತೀಶ್, ಹೆಚ್. ಆರ್. ವೆಂಕಟೇಶ್, ಹೆಚ್. ಆರ್. ದಿನೇಶ್, ಮತ್ತು ಕುಟುಂಬ ವರ್ಗದವರು ಸ್ವಾಗತಿಸಿದ್ದಾರೆ ಹಾಗೂ ವಿವಿಧ ಕಾರ್ಯಕ್ರಮಗಳು ಕೂಡ ನೆರವೇರಲಿದೆ.

Categories
ತೀರ್ಥಹಳ್ಳಿ

ಚೆಸ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ವಾಗ್ದೇವಿ ವಿದ್ಯಾರ್ಥಿಗಳು!

ಚೆಸ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ವಾಗ್ದೇವಿ ವಿದ್ಯಾರ್ಥಿಗಳು!
– ಆದ್ಯ ಎ.ಹೆಚ್, ಪ್ರಥಮ್ ಟಿ.ಎನ್ ರಾವ್ ಕ್ರೀಡಾ ಸಾಧನೆ
– ವಾಗ್ದೇವಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು

NAMMUR EXPRESS NEWS
ತೀರ್ಥಹಳ್ಳಿ: ಹಾಸನದಲ್ಲಿ ನಡೆದ ರಾಜ್ಯಮಟ್ಟದ ಯು-14 ಚೆಸ್ ಪಂದ್ಯಾವಳಿಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ 7ನೆಯ ತರಗತಿಯ ಆದ್ಯ ಎ.ಹೆಚ್ (ತೀರ್ಥಹಳ್ಳಿಯ ಶ್ರೀಮತಿ ಆಶಾ ಹಾಗೂ ಶ್ರೀ ಅನಿಲ್ ಪಿ.ಹೆಚ್ ದಂಪತಿಗಳ ಪುತ್ರಿ) ಹಾಗೂ 8ನೆಯ ತರಗತಿಯ ಪ್ರಥಮ್ ಟಿ.ಎನ್ ರಾವ್ (ರಥಬೀದಿಯ ಶ್ರೀಮತಿ ರೂಪಾ ಟಿ.ಎನ್ ಹಾಗೂ ಶ್ರೀ ನಟರಾಜ್ ದಂಪತಿಗಳ ಪುತ್ರ) ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.
ಒಂದೇಶಾಲೆಯ 02 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಆಡಿರುವುದು ಸಂತಸದ ಸಂಗತಿಯಾಗಿದೆ ಮತ್ತು ಶಿವಮೊಗ್ಗ ಜಿಲ್ಲೆಯಿಂದ 03 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದರಲ್ಲಿ ವಾಗ್ದೇವಿ ಶಾಲೆಯ 02 ವಿದ್ಯಾರ್ಥಿಗಳು ಎಂಬುದು ತಾಲ್ಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ತರಬೇತುದಾರರಾದ ಶ್ರೀ ನಾಗರಾಜ್ ರವರನ್ನು ಈ ಸುಸಂದರ್ಭದಲ್ಲಿ ಅಭಿನಂದಿಸುವುದರ ಜೊತೆಗೆ ಪೋಷಕರಿಗೆ, ತಾವು ಓದುತ್ತಿರುವ ಶಾಲೆಗೆ, ತಾಲ್ಲೂಕಿಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿರುವ ವಿದ್ಯಾರ್ಥಿಗಳನ್ನು ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದದವರು ಅಭಿನಂದಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Categories
ರಾಜ್ಯ

ಇನ್ನು ಮುಂದೆ ಒಂದು ಜತೆ ಕೋಣ ಓಡಿಸಲು ಮಾತ್ರ ಅವಕಾಶ?

ಇನ್ನು ಮುಂದೆ ಒಂದು ಜತೆ ಕೋಣ ಓಡಿಸಲು ಮಾತ್ರ ಅವಕಾಶ?
– ಕೋಣ ಹೊಡೆದ ಪ್ರಕರಣ ಸಾಬೀತಾದದಲ್ಲಿ ಮುಂದಿನ 2 ಕಂಬಳ ನಿಷೇಧ
– ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆ, ನಿಯಮ ಉಲ್ಲಂಘಿಸಿದರೆ ಕಂಬಳವೇ ನಿಷೇಧ?

NAMMUR EXPRESS NEWS
ಮೂಡುಬಿದಿರೆ: ಕಂಬಳಗಳಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡುವ, ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವ ಪ್ರಕರಣಗಳು ಸಾಬೀತಾದದಲ್ಲಿ ಅಂಥವರಿಗೆ ಮುಂದಿನ ಎರಡು ಕಂಬಳಗಳಿಗೆ ನಿಷೇಧ ವಿಧಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ ನೀಡಿದೆ.
ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿರುವ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣ ಸಮೀಪದ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಬೆಳಪು
ಡಾ. ದೇವಿಪ್ರಸಾದ್‌ ಅಧ್ಯಕ್ಷತೆಯಲ್ಲಿ ಜ. 2ರಂದು ಗುರುವಾರ ಜರುಗಿದ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ಸುದೀರ್ಘ‌ವಾಗಿ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. 24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬಗೊಳ್ಳುತ್ತಿದ್ದು, ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಉಲ್ಲಂಘನೆ ಸೂಕ್ತವಾದುದಲ್ಲ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೇವಿಪ್ರಸಾದ್‌ ಶೆಟ್ಟಿ ಹೇಳಿದರು.
ಸಮಯ ಪರಿಪಾಲನೆಯನ್ನು ಕಟ್ಟುನಿಟ್ಟು ಮಾಡಲು ನಿಯಮಗಳನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಒಬ್ಬ ಓಟಗಾರರನಿಗೆ ಪ್ರತಿ ವಿಭಾಗದಲ್ಲೂ ಒಂದು ಜತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಅನಿವಾರ್ಯ ಸಂದರ್ಭದಲ್ಲಿ ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ಅನುಮತಿ ಪಡೆದ ಬಳಿಕ ಮಾತ್ರ ಎರಡು ಜತೆ ಕೋಣಗಳನ್ನು ಓಡಿಸಬಹುದು. ಉಳಿದಂತೆ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದು ಅವರು ವಿವರಿಸಿದರು. ಸಮಿತಿ ಅಧ್ಯಕ್ಷರು ತ್ರಿಶಾಲ್‌ ಪೂಜಾರಿ, ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಶೆಟ್ಟಿ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್‌ ಕಂಗಿನಮನೆ, ಮಾಜಿ ಅಧ್ಯಕ್ಷ ರೋಹಿತ್‌ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷ ರಶ್ಮಿತ್‌ ಶೆಟ್ಟಿ, ತೀರ್ಪುಗಾರ ರಾಜೀವ್‌ ಶೆಟ್ಟಿ ಎಡೂರು, ಅಡ್ವೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.