Categories
ದೈವಿಕ ಮಾಹಿತಿ ಸುದ್ದಿ

ಈ ಒಂದು ಗಿಡ ಮೂಲಿಕೆಯಿಂದ ನೀವು ಇಷ್ಟಪಟ್ಟಂತಹ ವ್ಯಕ್ತಿಗಳು ನಿಮ್ಮವರಾಗುತ್ತಾರೆ!

ಈ ಒಂದು ಗಿಡ ಮೂಲಿಕೆಯಿಂದ ನೀವು ಇಷ್ಟಪಟ್ಟಂತಹ ವ್ಯಕ್ತಿಗಳು ನಿಮ್ಮವರಾಗುತ್ತಾರೆ!

– ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ!

NAMMUR EXPRESS NEWS
ನಮಸ್ಕಾರ ಬಂಧುಗಳೇ ಪ್ರತಿಯೊಬ್ಬರಿಗೂ ಸಹ ತಾವು ಇಷ್ಟಪಡುವಂತಹ ವ್ಯಕ್ತಿಗಳು ಅದು ಯಾರೇ ಆಗಿರಬಹುದು ತಮ್ಮ ಪ್ರೀತಿಪಾತ್ರರಾಗಿರಬಹುದು ಅಥವಾ ಸಹೋದರ-ಸಹೋದರಿಯರು ಸ್ನೇಹಿತರು ಹೀಗೆ ಯಾರಾಗಿರಬಹುದು ನಿಮ್ಮ ಪ್ರೀತಿಪಾತ್ರರ ನಿಮ್ಮ ಮಾತನ್ನು ಕೇಳಬೇಕು ಎಂದರೆ ರಹಸ್ಯವಾಗಿ ಸಂದುಬಳ್ಳಿ ಅಥವಾ ಮಂಗರಬಳ್ಳಿ ಸಂಬಂಧಿಸಿದಂತೆ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನೀವು ಇಷ್ಟಪಟ್ಟಂತಹ ವ್ಯಕ್ತಿಗಳು ನಿಮ್ಮವರಾಗುತ್ತಾರೆ ಮತ್ತು ಅವರು ನಿಮ್ಮ ಮಾತನ್ನು ಕೇಳುತ್ತಾರೆ.
ಈ ವಸ್ತು ನಿಮ್ಮ ಬಳಿ ಇದ್ದರೆ ಯಾರು ಬೇಕಾದರೂ ನಿಮ್ಮ ವಶ ಆಗುತ್ತಾರೆ. ಈ ಪ್ರಪಂಚದಲ್ಲಿ ನಮಗೆ ತಿಳಿದುಕೊಳ್ಳುವ ವಿಷಯ ಬಹಳಷ್ಟು ಇದೆ ಹಾಗೂ ನಮ್ಮ ಅರಿವಿಗೆ ಬರದೆ ನಮ್ಮ ಕಣ್ಣಿಗೆ ಕಾಣದ ಹಾಗೆ ನಡೆಯುವ ಚಮತ್ಕಾರಗಳು ಬಹಳಷ್ಟು ಇವೆ.
ಕೆಲವೊಂದು ವಿಷಯಗಳ ಹಾಗೆ ಬರಿಗಣ್ಣಿಗೆ ಅದು ಗೋಚರಿಸುವುದಿಲ್ಲ ಆದರೆ ಅದರ ಫಲಿತಾಂಶದಿಂದ ನಾವು ಅದನ್ನು ನಂಬಬಹುದು.
ದೈವಭಕ್ತಿ ಉಳ್ಳವರಿಗೆ ದೇವರ ಪೂಜೆ, ಮಂತ್ರ ,ಯಾಗ-ಯಜ್ಞ ಇವುಗಳ ಮೇಲೆ ನಂಬಿಕೆ ಹೆಚ್ಚು ಎನ್ನುತ್ತಾರೆ ಹಾಗಾಗಿ ಇವರುಗಳು ಮಂತ್ರ ಶಕ್ತಿಯನ್ನು ಹೆಚ್ಚಾಗಿ ನಂಬುತ್ತಾರೆ. ಹಾಗೆಯೇ ಇನ್ನು ಕೆಲವು ರೀತಿಯ ಜನರು ಇರುತ್ತಾರೆ ಇವರಿಗೆ ತಂತ್ರ ಶಕ್ತಿಯ ಮೇಲೆ ಹೆಚ್ಚು ನಂಬಿಕೆ ಇರುತ್ತದೆ ಹಾಗಾಗಿ ಅವರು ತಂತ್ರ ವಿದ್ಯೆಗಳನ್ನು ಮಾಟ-ಮಂತ್ರಗಳನ್ನು ವಶೀಕರಣಗಳನ್ನು ನಂಬುತ್ತಾರೆ. ನಾವು ಈಗ 21ನೇ ಶತಮಾನದಲ್ಲಿ ಇದ್ದರೂ ಕೂಡ ಈ ಮಂತ್ರ ಹಾಗು ತಂತ್ರಗಳು ಕೆಲಸ ಮಾಡುತ್ತವೆ.ಈ ರೀತಿ ಯಾರಾದರೂ ಕೇಳಿದರೆ ಖಂಡಿತವಾಗಿಯೂ ಹೌದು ಎನ್ನಬಹುದು ಆದರೆ ಅದನ್ನು ನೀವು ನಂಬಬೇಕು ಅಷ್ಟೇ. ಹೀಗೆ ನಿಮ್ಮ ಮನೆ ಅಕ್ಕಪಕ್ಕಹಿತ್ತಲಲ್ಲಿ ಬೇಲಿಗಳಲ್ಲಿ ಬೆಳೆಯುವ ಸಂದುಬಳ್ಳಿ ಅಥವಾ ಮಂಗರಬಳ್ಳಿ ಎಂದು ಸಹ ಇದನ್ನು ಕರೆಯುತ್ತಾರೆ. ಇದರಿಂದ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.
ಹಾಗೂ ನಿಮಗೆ ಹೇಗೆ ಬೇಕೋ ಹಾಗೆ ಅವರು ನಡೆದುಕೊಳ್ಳುತ್ತಾರೆ. ಇದು ಸಾಧ್ಯವೇ ಎಂದರೆ ಹೌದು ಎನ್ನುತ್ತಾರೆ ಇದರ ಬಗ್ಗೆ ತಿಳಿದವರು. ನೀವು ಈ ಸಂದುಬಳ್ಳಿಯ ಒಂದು ಗಿಣ್ಣನ್ನು ತೆಗೆದುಕೊಂಡು ಅದನ್ನು ಸ್ವಚ್ಛಮಾಡಿ, ಆ ಗಿಣ್ಣು ನಾಲ್ಕು ಕಡೆ ಚಪ್ಪಟೆಯಾಗಿದ್ದು ಅರಗುಗಳು ಗೆರೆ ರೀತಿ ಇರುತ್ತದೆ. ಇದಕ್ಕೆ ನೀವು ಅರಿಶಿನ ಹಚ್ಚಿ ನಂತರ ಅದರ ಮೇಲೆ ಕುಂಕುಮ ಹಚ್ಚಿ ಮಧ್ಯದಲ್ಲಿ ಚಪ್ಪಟೆಯಾಗಿರುವ ಭಾಗದಲ್ಲಿ ತುಳಸಿ ಕಡ್ಡಿಯನ್ನು ಅಷ್ಟ ಗಂಧದ ಪೇಸ್ಟಿನಲ್ಲಿ ಕಲಿಸಿಕೊಂಡು ಅದರ ಸಹಾಯದಿಂದ
ನೀವು ವಶ ಮಾಡಿಕೊಳ್ಳಲು ಬಯಸುತ್ತೀರೋ ಅವರ ಹೆಸರನ್ನು ಬರೆಯಬೇಕು.
ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಈ ರೀತಿ ಹೆಸರು ಬರೆದು ಪೇಪರ್ನಲ್ಲಿ ಸುತ್ತಿ ರೇಷ್ಮೆ ದಾರ ಅಥವಾ ಹಸಿ ದಾರವನ್ನು ಸುತ್ತಲೂ ಕಟ್ಟಿ ಒಂದು ದಿನ ಯಾರಿಗೂ ತಿಳಿಯದ ಹಾಗೆ ಇಟ್ಟು ಕೊಳ್ಳಬೇಕು ನಂತರ ಮರುದಿನ ಅದನ್ನು ಹರಿವ ನೀರು ಇರುವ ಕಡೆ ಹೋಗಿ ಅದರಲ್ಲಿ ಹರಿಯಲು ಬಿಡಬೇಕು ನೀವು ಈ ರೀತಿ ಮಾಡುವುದರಿಂದ ನೀವು ಅದರಲ್ಲಿ ಯಾರ ಹೆಸರನ್ನು ಬರೆದಿರುವಿರೋ ಅವರು ನೀವು ಹೇಳಿದ ಹಾಗೆ ಕೇಳುತ್ತಾರೆ ಬೇಕಾದರೆ ಪರೀಕ್ಷಿಸಿ ನೋಡಿ.
ಎಚ್ಚರಿಕೆ ಈ ತಾಂತ್ರಿಕ ಪ್ರಯೋಗವು ಪುರಾತನ ತಾಳೆಗರಿಯಲ್ಲಿ ಉಲ್ಲೇಖ ಆಗಿರುವುದರಿಂದ ಈ ಪ್ರಯೋಗ ವಿಧಾನವನ್ನು ಒಳ್ಳೆಯ ಉದ್ದೇಶಕ್ಕೆ ಒಳ್ಳೆಯ ಕಾರ್ಯಕ್ಕೆ ಮಾತ್ರ ಬಳಸಬೇಕಾಗುತ್ತದೆ ಒಂದು ವೇಳೆ ದೂರುದ್ದೇಶಕ್ಕೆ ಕೆಟ್ಟ ಉದ್ದೇಶಕ್ಕೆ ಪ್ರಯೋಗ ಮಾಡಿದರೆ ನಿಮಗೆ ತೊಂದರೆ ಆಗುತ್ತದೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

Categories
ಮಂಗಳೂರು

ವಿಟ್ಲ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ!

ವಿಟ್ಲ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ!

– ಕೃತ್ಯವನ್ನು ಮುಚ್ಚಿ ಹಾಕಲು ಆರೋಪಿ ಪ್ರಯತ್ನ!
– ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡನ ಮೇಲೆ ‘ಪೋಕ್ಸೋ ‘ ದಾಖಲು!

NAMMUR EXPRESS NEWS
ವಿಟ್ಲ: SSLC ಓದುತ್ತಿದ್ದ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಟ್ವಾಳ ಭಾಗದ ಬಿಜೆಪಿ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.
SSLC ಓದುತ್ತಿದ್ದ 16 ವರ್ಷದ ಬಾಲಕಿಗೆ ಸುಳ್ಳು ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾಗಿ ಆರೋಪಿ ಪ್ರಯತ್ನಿಸಿದ್ದ ಎಂಬ ಮಾಹಿತಿಯೂ ಕೇಳಿಬಂದಿದೆ. ಬಂಟ್ವಾಳ ಭಾಗದ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕನೂ ಆಗಿರುವ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬ ವ್ಯಕ್ತಿ ಜಿಲ್ಲಾ ವ್ಯಾಪ್ತಿಯಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದ.
ಆದರೆ ತಡವಾಗಿಯಾದರೂ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಆರೋಪಿತ ವ್ಯಕ್ತಿಯ ಹಿಡಿಯಲು ಶೋಧ ಕಾರ್ಯ ನಡೆದಿದೆ.
ಬಾಲಕಿಯ ಪೋಷಕರು ಆರೋಪಿಗೆ ಸೇರಿದ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಕಳೆದ ಜನವರಿ ತಿಂಗಳಲ್ಲಿ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗುತ್ತಿದೆ.
ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗಿರಲಿಲ್ಲ. SSLC ಪರೀಕ್ಷೆ ಇದ್ದರೂ ಯಾಕೆ ಶಾಲೆಗೆ ಬಂದಿಲ್ಲವೆಂದು ಶಾಲೆಯ ಶಿಕ್ಷಕರು ವಿಚಾರಿಸುವ ಸಲುವಾಗಿ ಆಕೆಯ ಮನೆಗೆ ತೆರಳಿದ್ದರು.
ಈ ವೇಳೆ, ಬಾಲಕಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಶಿಕ್ಷಕರನ್ನು ನೋಡಲು ಬಿಟ್ಟಿರಲಿಲ್ಲ. ಆರೋಪಿ ಮಹೇಶ್ ಭಟ್ ರಾಜಕೀಯ ಪ್ರಭಾವದ ಕಾರಣಕ್ಕೆ ಶಿಕ್ಷಕರಿಗೆ ಬಾಲಕಿಯ ಭೇಟಿಗೂ ಅವಕಾಶ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವಿಷಯ ಪೊಲೀಸ್‌ ಠಾಣೆಗೆ ತಿಳಿದು ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಈ ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಯಾಕೆಂದರೆ ಪೊಲೀಸರು ಪ್ರಕರಣ ದಾಖಲಿಸಿರುವುದೂ ಸಹ ತೀರಾ ಗಂಭೀರವಾಗಿ ವಿಷಯ ದಾಖಲಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
“ನೀನು ನನ್ನ ಜೊತೆ ಗುಡ್ಡಕ್ಕೆ ಬರ್ತೀಯಾ” ಎಂದಷ್ಟೇ ಆರೋಪಿ ಸಂತ್ರಸ್ತೆಯನ್ನು ಕೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಸಧ್ಯ ಈ ಬಗ್ಗೆ ಯಾವುದೇ ಸ್ಥಳೀಯ ನಾಯಕರೂ ದನಿ ಎತ್ತದಿರುವುದು ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ !!

ಚಿಕ್ಕಮಗಳೂರು ಟಾಪ್ ನ್ಯೂಸ್ !!

* ಡಿ.ಕೆ ಶಿವಕುಮಾರ್ ವಿರುದ್ಧ ಬೀದಿಗಳಿದ ಬಿಜೆಪಿ
* ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
* ಅಕ್ಷರ ದಾಸೋಹ ಕೊಠಡಿ ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ
* ಅಡಿಕೆ ಗೋದಾಮಿಗೆ ಬೆಂಕಿ ತಗುಲಿ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ
* ಪೋಕ್ಸೋ ಪ್ರಕರಣ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

NAMMUR EXPRESS NEWS
* ಡಿ.ಕೆ ಶಿವಕುಮಾರ್ ವಿರುದ್ಧ ಬೀದಿಗಳಿದ ಬಿಜೆಪಿ
ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿದಲ್ಲೇ ಸಿಎಂ ಹಾಗೂ ಡಿಸಿಎಂ ಭಾವಚಿತ್ರಕ್ಕೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಆಝಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಲು ಮುಂದಾದರು. ಅಲ್ಲದೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ ನಾಮಫಲಕಕ್ಕೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಮುಖಂಡರಾದ ಪುಷ್ಪರಾಜ್, ಕೋಟೆ ರಂಗನಾಥ್, ಜಸಿಂತಾ ಅನಿಲ್‌ಕುಮಾರ್, ರವೀಂದ್ರ ಬೆಳವಾಡಿ, ಸೋಮಶೇಖರ್, ವಿಜಯಕುಮಾರ್, ರಾಜಪ್ಪ, ಸೀತಾರಾಮ್ ಭರಣ್ಯ, ಸುಜಾತಾ ಶಿವಕುಮಾರ್, ಈಶ್ವರಹಳ್ಳಿ ಮಹೇಶ್,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

* ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
ಚಿಕ್ಕಮಗಳೂರು : ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಬಾರ್ಗಲ್ ಗ್ರಾಮದಲ್ಲಿ ನಡೆದಿದೆ.
ಬಾರ್ಗಲ್ ಗ್ರಾಮದ ತಿಮ್ಮಪ್ಪ ಎಂಬವವರ ಮಾಲಕತ್ವದ ನರ್ಸರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಾವೇರಿ ದಶರಥಕೊಪ್ಪ ಗ್ರಾಮದ ಸೋಮಪ್ಪ ಮಂಜಮ್ಮ ದಂಪತಿ ಪುತ್ರಿ ಕಾವ್ಯಾ (10) ಸೋಮವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದು, ಮಂಗಳವಾರ ಕೃಷಿಹೊಂಡದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
ನರ್ಸರಿ ಪಕ್ಕದಲ್ಲಿದ್ದ ಕೃಷಿಹೊಂಡದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ನೆರವಿನೊಂದಿಗೆ ಮೃತ ದೇಹವನ್ನು ಮಂಗಳವಾರ ಹೊರ ತೆಗೆಯಲಾಗಿದೆ.
ಮರಣೋತ್ತರ ಪರೀಕ್ಷೆಯನ್ನು ನಡೆಸಿ ಬಾಲಕಿಯ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಆಲ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

* ಅಕ್ಷರ ದಾಸೋಹ ಕೊಠಡಿ ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಹೊರಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹದ ನೂತನ ಕೊಠಡಿಯನ್ನು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹಾಗೂ ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಉದ್ಘಾಟನೆ ನೆರವೇರಿಸಿದರು.
ಈ ಹಿಂದೆ ಶಾಲೆಗೆ ಅಕ್ಷರ ದಾಸೋಹದ ಕೊಠಡಿ ಇಲ್ಲದ ಕಾರಣ ಬಿಸಿಯೂಟಕ್ಕೆ ಸಾಮಗ್ರಿಗಳನ್ನು ಶಾಲಾ ಕೊಠಡಿಗಳಲ್ಲಿ ದಾಸ್ತಾನು ಇಡಾಲಾಗುತ್ತಿತ್ತು. ಇದೀಗ ಕೊಠಡಿ ನಿರ್ಮಾಣ ಮಾಡಿರುವುದರಿಂದ ಶಾಲಾ ಶಿಕ್ಷಕರು ಬಿಸಿಯೂಟ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸಿದ್ದಾರೆ.

* ಅಡಿಕೆ ಗೋದಾಮಿಗೆ ಬೆಂಕಿ ತಗುಲಿ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ತರೀಕೆರೆ: ಅಡಿಕೆ ಗೋದಾಮಿಗೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿಯಲ್ಲಿ ಇಂದು ನಸುಕಿನಲ್ಲಿ ನಡೆದಿದೆ. ಗ್ರಾಮದ ನಾಗರಾಜ್ ಎಂಬುವವರಿಗೆ ಸೇರಿದ ಗೋದಾಮು ಇದಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಕೊಂಡಿದೆ ಎನ್ನಲಾಗಿದೆ.
ಅಗ್ನಿ ಅವಘಡಕ್ಕೆ ಲಕ್ಷಾಂತರ ಮೌಲ್ಯದ ಅಡಿಕೆ ಸುಲಿಯುವ ಯಂತ್ರ ಸೇರಿದಂತೆ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತರೀಕೆರೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು, ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

* ಪೋಕ್ಸೋ ಪ್ರಕರಣ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಚಿಕ್ಕಮಗಳೂರು : ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿ ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ಘನ ನ್ಯಾಯಾಲಯ ಆದೇಶಿಸಿದೆ.
ತಾಲೂಕಿನ ಆಲ್ಲೂರು ಸಮೀಪದ ಗ್ರಾಮವೊಂದರ ನೊಂದ ಬಾಲಕಿ ಪ್ರೌಢ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ 2023 ಹಾಗೂ 2024 ರ ರಜಾ ಅವಧಿಯಲ್ಲಿ ಆರೋಪಿಯು ದೈಹಿಕ ಸಂಪರ್ಕ ನಡೆಸಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ್ದು ನಂತರ ಬೆದರಿಕೆ ಹಾಕಿದ್ದ ಮೇರೆಗೆ ಜುಲೈ ತಿಂಗಳ 2024 ರಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 25 ಸಾವಿರ ದಂಡ ವಿಧಿಸಿದೆ. ಅಲ್ಲದೇ ಪ್ರಕರಣದಲ್ಲಿ ನೊಂದ ಬಾಲಕಿಗೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ, 2011 ರ ಅಡಿಯಲ್ಲಿ ರೂ. 3ಲಕ್ಷ ಪರಿಹಾರವನ್ನು ನೀಡುವಂತೆ ಘನ ನ್ಯಾಯಾಲಯವು ಸೂಚಿಸಿದೆ.

Categories
ಉಡುಪಿ

ಉಡುಪಿ: ಶಾಲೆಗಳಲ್ಲಿ ಲಕ್ಷಾಂತರ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

ಕರಾವಳಿ ಟಾಪ್ ನ್ಯೂಸ್

ಉಡುಪಿ: ಶಾಲೆಗಳಲ್ಲಿ ಲಕ್ಷಾಂತರ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

– ಪುತ್ತೂರು: ಊಟ ಮಾಡಿ ಮಲಗಿದ್ದಲ್ಲಿಗೆ, ಮಗು ಸಾವು!
– ಉಡುಪಿ: ಪಾಸ್ ಮಾಡಿ ಸಾಕು!, ಚೀಟಿ ಹುಂಡಿಗೆ ಹಾಕಿ ದೈವಕ್ಕೆ ಮನವಿ ಮಾಡಿದ ವಿದ್ಯಾರ್ಥಿ

NAMMUR EXPRESS NEWS
ಉಡುಪಿ: ಕಾರ್ಕಳ ತಾಲೂಕಿನ ಬೆಳ್ಮಣ್‌, ನಂದಳಿಕೆ ಮತ್ತು ಹಿರ್ಗಾನದ ಗೊರಟ್ಟಿ ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಂದೂರು ನಿವಾಸಿ ಅರ್ಷಿತ್ ಅವಿನಾಶ್ ದೋಡ್ರೆ (24) ಎಂದು ಗುರುತಿಸಲಾಗಿದೆ.
ಫೆ.21ರ ರಾತ್ರಿ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕಛೇರಿಯ ಬೀಗವನ್ನು ಒಡೆದು ಕಪಾಟು ಮತ್ತು ಮೇಜಿನ ಡ್ರಾವರನ್ನು ಒಡೆದು 1,50,000 ರೂ ಹಣ ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಲಾಗಿತ್ತು. ಅಲ್ಲದೆ ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಲಾಗಿತ್ತು.
ಮಾರ್ಚ್‌ 6ರ ಮಧ್ಯರಾತ್ರಿ ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಗೆ ಹಾಕಿದ್ದ ಬೀಗವನ್ನು ಮುರಿದು ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್ ಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಈ ಬಗ್ಗೆಯೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾರ್ಚ್‌ 4ರ ಮಧ್ಯರಾತ್ರಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾದ್ಯಮ ಶಾಲೆಯ ಕಛೇರಿಯ ಬೀಗ ಒಡೆದು ಒಳಪ್ರವೇಶಿಸಿ, ಕಪಾಟಿನನಲ್ಲಿದ್ದ 60 ಸಾವಿರ ರೂ ಹಣ, ಮತ್ತು ಐದು ಸಾವಿರ ರೂ ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಲಾಗಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಮಾರ್ಚ್‌ 20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಫ್ರೌಡ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ವಿಚಾರ ಬಾಯ್ಬಿಟ್ಟಿದ್ದ. ಆರೋಪಿ ಅರ್ಷಿತ್ ಅವಿನಾಶ್ ದೋಡ್ರೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್, ಮತ್ತು 84,500 ರೂ ನಗದನ್ನು ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

– ಪುತ್ತೂರು: ಊಟ ಮಾಡಿ ಮಲಗಿದ ಮಗು ಸಾವು!

ಉಪ್ಪಿನಂಗಡಿ: ಊಟ ಮಾಡಿ ಮಲಗಿದ ಎರಡೂವರೆ ವರ್ಷದ ಮಗು ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಕಾಯಿಲೆ ಉಲ್ಭಣಗೊಂಡು ಸಾವಿಗೀಡಾಗಿರುವುದಾಗಿ ತಾಯಿ ನೀಡಿದ ದೂರಿನ ಪ್ರಕಾರ ಉಪ್ಪಿನಂಗಡಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಮಾ.25 ರ ಬೆಳಿಗ್ಗೆ 11 ಗಂಟೆಗೆ ದಿವ್ಯಾಂಶಿ ಸಿಂಗ್‌ ಮಗುವಿಗೆ ಊಟ ಕೊಟ್ಟು ನಂತರ ಮಗುವಿನ ನಿದ್ದೆ ಬಂದ ಕಾರಣ ಮಲಗಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಹೋಗಿ ಮಗುವನ್ನು ಎಬ್ಬಿಸಿದಾಗ ಮಗು ಎದ್ದಿಲ್ಲ. ಕೂಡಲೇ ತಾಯಿ ತೋಟದ ಮಾಲಕ ಲಿಂಡೋರಾಜ್‌ ಗಮನಕ್ಕೆ ಬಂದಿದ್ದಾರೆ. ಕೂಡಲೇ ಅವರು ಕಾರಿನಲ್ಲಿ ಮಗುವನ್ನು ಕಡಬದ ಖಾಸಗಿ ಆಸ್ಪತ್ರೆಗೆ ತಂದಿದ್ದು, ಪರಿಶೀಲನೆ ಮಾಡಿದಾಗ ಮಗುವ ಮೃತ ಹೊಂದಿರುವುದಾಗಿ ತಿಳಿಸಿದ್ದಾರೆ.
ಮಗು ರುದ್ರಪ್ರತಾಪ್‌ ಆಹಾರ ಸಿಕ್ಕಿಕೊಂಡು ಅಥವಾ ಇನ್ಯಾವುದೋ ಕಾರಣಕ್ಕೆ ಮೃತ ಪಟ್ಟಿರುವುದಾಗಿದೆ. ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಮುಂದಿನ ಅಂತ್ಯ ಕ್ರಿಯೆಯ ಬಗ್ಗೆ ಬಿಟ್ಟುಕೊಡಬೇಕಾಗಿ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

– ಉಡುಪಿ: ಪಾಸ್ ಮಾಡಿ ಸಾಕು!, ಚೀಟಿ ಹುಂಡಿಗೆ ಹಾಕಿ ದೈವಕ್ಕೆ ಮನವಿ ಮಾಡಿದ ವಿದ್ಯಾರ್ಥಿ

ಉಡುಪಿ: ವಿದ್ಯಾರ್ಥಿಯೊಬ್ಬ ದೈವಕ್ಕೆ ಪತ್ರ ಬರೆದು ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು ಎಂದು ಮನವಿ ಮಾಡಿದ ಅಪರೂಪದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇಗುಲದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವ ಸಂದರ್ಭ ಈ ಪತ್ರ ಸಿಕ್ಕಿದೆ.
ಪರೀಕ್ಷೆ ಅಂದ್ರೆ ಭಯ ಯಾರಿಗಿಲ್ಲ ಹೇಳಿ, ಕಲಿಕೆಯಲ್ಲಿ ಮುಂದಿರುವ ಉತ್ತಮ ಅಂಕ ಬರಬೇಕು ಎಂಬ ಆಸೆ ಇದ್ದರೆ ಸೋಂಬೇರಿ ಜೊತೆಗೆ ಜಸ್ಟ್ ಪಾಸ್ ಆದರೆ ಸಾಕು ಎಂಬ ಯೋಚನೆ ಇರುತ್ತದೆ. ಆ ರೀತಿ ಯೋಚಿಸಿದ ವಿದ್ಯಾರ್ಥಿಯೋರ್ವ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳನ್ನು ಆಯ್ಕೆ ಕೊಟ್ಟು ಇಷ್ಟು ಕೊಡಿಸು ಸಾಕು ಅಂತ ಬೇಡಿಕೊಂಡಿದ್ದಾನೆ.
ಪತ್ರದಲ್ಲಿ ಪ್ರತಿಯೊಂದು ಪಠ್ಯ ವಿಷಯಕ್ಕೆ ಸಂಬಂಧಿಸಿ ಇಷ್ಟು ಅಂಕ ಬೇಕು ಎಂದು ಬರೆದಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ಎಂದು ಪ್ರಾರ್ಥಿಸಿದ್ದು ಇದೀಗ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದೆ.

Categories
ತೀರ್ಥಹಳ್ಳಿ

ಹುಲಿಕಲ್ ಘಾಟಿಯಲ್ಲಿ ಅಪಘಾತ: ಎಲ್ಲರೂ ಸೇಫ್!

ಹುಲಿಕಲ್ ಘಾಟಿಯಲ್ಲಿ ಅಪಘಾತ: ಎಲ್ಲರೂ ಸೇಫ್!
– ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ ವೈದ್ಯರು
– ಸಹಕಾರ ನೀಡಿದ ಕೊಡಚಾದ್ರಿ ವೇದಿಕೆ ಸದಸ್ಯರು
– ಊಟ, ಬಸ್ ವ್ಯವಸ್ಥೆ ಮಾಡಿದ ಸಹಕಾರ ನಾಯಕ ಡಾ. ಆರ್. ಎಂ.ಮಂಜುನಾಥ ಗೌಡ

NAMMUR EXPRESS NEWS
ತೀರ್ಥಹಳ್ಳಿ: ಮಾಸಿಕಟ್ಟೆ- ಕುಂದಾಪುರ ಘಾಟಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ತಕ್ಷಣ ಚಿಕಿತ್ಸೆ ಸಿಕ್ಕ ಕಾರಣ ಅನೇಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 20 ಮಂದಿಗೆ ಗಾಯವಾಗಿದ್ದು ಎಲ್ಲರೂ ಈಗ ಅರಾಮಾಗಿದ್ದಾರೆ. ಇಬ್ಬರು ಮಣಿಪಾಲಕ್ಕೆ ದಾಖಲಾಗಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಮಾಸ್ತಿಕಟ್ಟೆ ಆಸ್ಪತ್ರೆಯಲ್ಲಿ ಡಾ.ಪ್ರವೀಣ್ ಡೆಮ್ಲ್ಲೋಲ್ಲೋ ಸ್ಥಳದಲ್ಲಿ ಚಿಕಿತ್ಸೆ ನೀಡಿ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ಎಲ್ಲಾ ಗಾಯಾಳುಗಳನ್ನು ಕಳುಹಿಸಿ ಕೊಡಲಾಗಿತ್ತು. ಹೆಚ್ಚಿನ ಚಿಕಿತ್ಸೆಯ ಆಂಬುಲೆನ್ಸ್ ಹಾಗೂ ಬೇರೆ ವ್ಯವಸ್ಥೆಯನ್ನು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡ ಖುದ್ದು ಆಸ್ಪತ್ರೆಗೆ ಬಂದು ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ಊಟದ ವ್ಯವಸ್ಥೆ ಮಾಡಿಕೊಟ್ಟರು.
ಕೊಡಚಾದ್ರಿ ಯುವಕರ ಪಡೆಯ ಸಹಕಾರದೊಂದಿಗೆ ಚಿಕಿತ್ಸೆಗೆ ಸಹಕರಿಸಿ ಎಲ್ಲಾ ರೋಗಿಗಳಿಗೆ ಭೋಜನದ ವ್ಯವಸ್ಥೆ ನೀಡಿ ಮಕ್ಕಳು ಮಹಿಳೆಯರಿಗೆ ಮತ್ತು ರೋಗಿಗಳಿಗೆ ಅವರವರ ಊರಿಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಿದರು. ಈ ವೇಳೆ ಜನ ಸಹಕಾರ ನೀಡಿದ ವೈದ್ಯರು ಮತ್ತು ಮಂಜುನಾಥ ಗೌಡ ಅವರಿಗೆ ಧನ್ಯವಾದ ಅರ್ಪಿಸಿದರು.
ಜೆಸಿ ಆಸ್ಪತ್ರೆ ತೀರ್ಥಹಳ್ಳಿ ರಕ್ಷಾ ಸಮಿತಿ ಸದಸ್ಯರಾದ ಕುರುವಳ್ಳಿ ನಾಗರಾಜ್,ವಾಸುದೇವ ಕಾಮತ್,ಕಾರ್ತಿಕ್ ಗೌಡ,ಅನುಷ್ ಶೆಟ್ಟಿ ಪ್ರಜ್ವಲ್ ಪೂಜಾರಿ, ಆಲ್ವಿನ್ ಡೆಮಲ್ಲು ಮತ್ತು ಕೊಡಚಾದ್ರಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತಿ ಇದ್ದರು.

ಮಂಜುನಾಥ ಗೌಡ ಅವರ ಮಾನವೀಯತೆ

ಅಪಘಾತದ ಸುದ್ದಿ ಕೇಳುತ್ತಿದ್ದಂತೆ ಸಹಕಾರ ನಾಯಕ ಮಂಜುನಾಥ ಗೌಡ ಅವರು ಎಲ್ಲಾ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಅದೇಶಿಸಿದರು. ಜತೆಗೆ ಎಲ್ಲರಿಗೂ ಊಟ, ಇನ್ನಿತರ ವ್ಯವಸ್ಥೆ ಮಾಡಿದರು.

Categories
Uncategorized

ಹಕ್ಕಿಜ್ವರ ಆಯ್ತು ಇದೀಗ, ಬೆಕ್ಕಿಗೆ ಎಫ್‌ಪಿವಿ ಸೋಂಕಿನ ಆತಂಕ..!!

ಹಕ್ಕಿಜ್ವರ ಆಯ್ತು ಇದೀಗ, ಬೆಕ್ಕಿಗೆ ಎಫ್‌ಪಿವಿ ಸೋಂಕಿನ ಆತಂಕ..!!
– ರಾಯಚೂರಲ್ಲಿ 150 ಬೆಕ್ಕುಗಳಿಗೆ ಸೋಂಕು, 38 ಬೆಕ್ಕು ಸಾವು
– ಈ ಸೋಂಕು ಬೇರೆ ಪ್ರಾಣಿ ಹಾಗೂ ಮನುಷ್ಯರಿಗೆ ಹರಡುವುದಿಲ್ಲ

NAMMUR EXPRESS NEWS
ಹಕ್ಕಿಜ್ವರದ ಆತಂಕವನ್ನು ಎದುರಿಸಿದ ಜಿಲ್ಲೆಯ ಜನರು ಇದೀಗ ಬೆಕ್ಕುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಫಿಲೈನ್ ಪ್ಯಾನ್ ಲೀಕೊಪೇನಿಯಾ (ಎಫ್‌ಪಿವಿ) ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕಾಗಿ ಬಂದಿದೆ. ರಾಯಚೂರು ನಗರ ಸೇರಿ ಜಿಲ್ಲೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಬೆಕ್ಕುಗಳು ಎಫ್‌ಪಿವಿ ಸೋಂಕಿನಿಂದ ಬಳಲುತ್ತಿವೆ. ಕಳೆದ ಮಾ.1ರಿಂದ ಇಲ್ಲಿ ತನಕ ಸ್ಥಳೀಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್‌ನ ಹೊರರೋಗಿಗಳ ವಿಭಾಗಕ್ಕೆ ಆಗಮಿಸಿದ 62 ಬೆಕ್ಕುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಈ ಸೋಂಕಿನಿಂದಾಗಿ 38 ಬೆಕ್ಕುಗಳು ಸಾವನಪ್ಪಿರುವುದರ ಕುರಿತು ಇಲಾಖೆಗೆ ಮಾಹಿತಿ ಲಭ್ಯವಾಗಿದೆ.

ತೀವ್ರ ಬಾಧೆ: ಬೆಕ್ಕುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಎಫ್ ಪಿವಿ ಸೋಂಕು ಅವುಗಳಲ್ಲಿ ತೀವ್ರ ಬಾಧೆಯನ್ನುಂಟು ಮಾಡುತ್ತವೆ. ಸೋಂಕು ಕಾಣಿಸಿಕೊಂಡ ಬೆಕ್ಕುಗಳು ಜ್ವರದಿಂದ ನಿಶಕ್ತಿಗೊಳ್ಳುತ್ತವೆ. ಬೆಕ್ಕುಗಳಲ್ಲಿ ಎಫ್‌ ಪಿವಿ ರೋಗದ ಮುಂಜಾಗ್ರತೆ ಲಸಿಕೆ ಹಾಕಿಸದೇ ಇರುವುದರಿಂದ ರೋಗೋದ್ರೇಕ ಕಂಡು ಬರಲಿದ್ದು, ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣಕ್ಕೆ ಬೆಕ್ಕುಗಳು ಸಾವನಪ್ಪುತ್ತವೆ.

ಪತ್ತೆ-ಚಿಕಿತ್ಸೆ ಸವಾಲು: ಸಹಜವಾಗಿ ಈ ಭಾಗದಲ್ಲಿ
ಬೆಕ್ಕುಗಳನ್ನು ಸಾಕುವವರ ಸಂಖ್ಯೆಯೂ ಜಾಸ್ತಿಯಿಲ್ಲ. ಆದರೆ ಜಿಲ್ಲೆನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿಯಲ್ಲಿಯೇ ಬೆಕ್ಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವುದೇ ಸವಾಲಿನ ಕೆಲಸವಾಗಿದೆ. ಈ ಸೋಂಕು ಬೇರೆ ಪ್ರಾಣಿ ಹಾಗೂ ಮನುಷ್ಯರಿಗೆ ಹರಡುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ಹಾಗೂ ಸಾಕು ಪ್ರಾಣಿ ಮಾಲೀಕರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

IPL -2025
* ಪಂಜಾಬ್‌ಗೆ 11 ರನ್‌ಗಳಿಂದ ರೋಚಕ ಗೆಲುವು
* 3 ತಂಡಗಳನ್ನು ಮುನ್ನಡೆಸಿದ 5ನೇ ಆಟಗಾರ ಶ್ರೇಯಸ್ ಅಯ್ಯರ್
* ಐಪಿಎಲ್‌ ಇತಿಹಾಸದಲ್ಲಿ ಕೆಟ್ಟ ದಾಖಲೆಗೆ ಗುರಿಯಾದ ಮ್ಯಾಕ್ಸ್‌ವೆಲ್

NAMMUR EXPRESS SPORTS NEWS
ಅಹಮದಾಬಾದ್‌: ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಉತ್ತಮ ಬೌಲಿಂಗ್ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 11 ರನ್‌ಗಳಿಂದ ಗೆಲುವು ದಾಖಲಿಸಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 5ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 5 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು. ಬಿಗ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡವು 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಗುಜರಾತ್ ತಂಡದ ಪರ ಸಾಯಿ ಸುದರ್ಶನ್ 74 ರನ್, ನಾಯಕ ಶುಭನ್ ಗಿಲ್ 33 ರನ್, ಜೋಸ್ ಬಟ್ಲರ್ 54 ರನ್ ಹಾಗೂ ಶೆರ್ಫೇನ್ ರುದರ್ಫೋರ್ಡ್ 46 ರನ್ ಗಳಿಸಿದರು.
ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಪರ ತಂಡದ ಪರ ನಾಯಕ ಶ್ರೇಯಸ್ ಅಯ್ಯರ್ ಅಜೇಯ 97 ರನ್, ಪ್ರಿಯಾಂಶ್ ಆರ್ಯ 47 ರನ್ ಹಾಗೂ ಶಶಾಂಕ್ ಸಿಂಗ್ ಅಜೇಯ 44 ರನ್ ಗಳಿಸಿದ್ದರು. ಇನ್ನು ಗುಜರಾತ್ ಪರ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ,ಕಗಿಸೋ,ರಬಾಡ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

* 3 ತಂಡಗಳನ್ನು ಮುನ್ನಡೆಸಿದ 5ನೇ ಆಟಗಾರ ಶ್ರೇಯಸ್ ಅಯ್ಯರ್
ಐಪಿಎಲ್ 2025 ರಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್, ಲೀಗ್ ಇತಿಹಾಸದಲ್ಲಿ ಮೂರು ತಂಡಗಳನ್ನು ಮುನ್ನಡೆಸಿದ ಐದನೇ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಮಂಗಳವಾರ ಗುಜರಾತ್ ವಿರುದ್ಧ ಪಿಬಿಕೆಎಸ್ ನಾಯಕತ್ವಕ್ಕೆ ಪಾದಾರ್ಪಣೆ ಮಾಡುವ ಮೊದಲು, ಅಯ್ಯ‌ರ್ ಐಪಿಎಲ್‌ನಲ್ಲಿ 41 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ಅನ್ನು 29 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ, ಸ್ಟೀವ್ ಸ್ಮಿತ್ ಮತ್ತು ಅಜಿಂಕ್ಯ ರಹಾನ ಐಪಿಎಲ್‌ನಲ್ಲಿ ತಲಾ ಮೂರು ತಂಡಗಳನ್ನು ಮುನ್ನಡೆಸಿದ್ದಾರೆ.

* ಐಪಿಎಲ್‌ ಇತಿಹಾಸದಲ್ಲಿ ಕೆಟ್ಟ ದಾಖಲೆಗೆ ಗುರಿಯಾದ ಮ್ಯಾಕ್ಸ್‌ವೆಲ್
ಪಂಜಾಬ್ ಕಿಂಗ್ಸ್‌ನ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ ಇತಿಹಾಸದಲ್ಲಿ ಕೆಟ್ಟ ದಾಖಲೆಯೊಂದಕ್ಕೆ ಗುರಿಯಾಗಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 5ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ದ ಗೋಲ್ಡನ್‌ ಡಕ್‌ಗೆ ಔಟಾದರು. ಇದು ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಅವರ 19ನೇ ಡಕ್ ಆಗಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಬ್ಬ ಬ್ಯಾಟ‌ರ್ ದಾಖಲಿಸಿದ ಅತಿ ಹೆಚ್ಚು ಡಕ್ ಆಗಿದೆ. ಅವರ ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ತಲಾ 18 ಡಕ್‌ಗಳನ್ನು ದಾಖಲಿಸಿದ್ದಾರೆ.

Categories
ಮಂಗಳೂರು

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರುದ್ಧ ಜಾನ್ ಡೋ ಆದೇಶ ಜಾರಿ!

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರುದ್ಧ ಜಾನ್ ಡೋ ಆದೇಶ ಜಾರಿ!

– ಈಗಾಗಲೇ ಹರಡಿರುವ ವರದಿಗಳ ಅಳಿಸಿ ಹಾಕುವಂತೆ ಸೂಚನೆ!
– ಆದೇಶ ಉಲ್ಲಂಘಿಸಿದ್ರೆ ಕಠಿಣ ಕ್ರಮ ಗ್ಯಾರಂಟಿ!

NAMMUR EXPRESS NEWS
ಮಂಗಳೂರು: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗಡೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ , ಜಾನ್ ಡೋ ಆದೇಶ ಹೊರಡಿಸಿದೆ.
ಸಂಬಂಧ ಹಿರಿಯ ನ್ಯಾಯವಾದಿ ಎಸ್ ರಾಜಶೇಖರ್ ಹಿಳಿಯಾರು ವಾದ ಮಂಡಿಸಿದ್ದು ದಾವೆಯನ್ನು ವಿಚಾರಣೆ ನಡೆಸಿದ ಸಿಸಿಎಚ್-11ನೇ ನ್ಯಾಯಾಲಯ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆ ಅವರ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾನ್ ಡೋ ಆದೇಶದ ಅನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ-ಟ್ಯೂಬ್, ಟಿ ವಿ ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು ಎಂದು ನಿರ್ಬಂಧ ಹೇರಿದೆ.

– ಏನಿದು ಜಾನ್ ಡೋ ಆದೇಶ?

ಅಜ್ಞಾತ ಅಥವಾ ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಜಾರಿಯಾಗುವ ಕಾನೂನು ಕ್ರಮ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ-ಟ್ಯೂಬ್ ಹಾಗೂ ದೃಶ್ಯ ಮಾಧ್ಯಮ ಸೇರಿದಂತೆ ಮತ್ತಿತ್ತರ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರಕ್ಕೆ ಕಡಿವಾಣ ಹಾಕಲಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧ ಮಾಡುವುದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ.

– ಆದೇಶ ಉಲ್ಲಂಘಿಸಿದ್ರೆ ಕಠಿಣ ಕ್ರಮ ಗ್ಯಾರಂಟಿ!

ನ್ಯಾಯಾಲಯ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೇ ಸಾಮಾಜಿಕ ಜಾಲತಾಣಗಳು ಮತ್ತು ಇತರೆ ಮಾಧ್ಯಮ ಸಂಸ್ಥೆಗಳು ಮಾಡಿರುವ ಅಥವಾ ಮಾಡುವ ಅವಹೇಳನಕಾರಿ ವರದಿಗಳ ಮೇಲೆ ನಿರ್ಬಂಧನೆ ಹೇರಿ ಕೂಡಲೇ ಅಳಿಸಿ ಹಾಕುವಂತೆ ಆದೇಶಿಸಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳ ಹಾಗೂ ಅವರ ಕುಟುಂಬದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ತಡೆಯುವಲ್ಲಿ ಈ ಆದೇಶ ಪ್ರಮುಖ ಪಾತ್ರವಹಿಸಲಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕನ ಪೂರ್ಣ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರ ಮನಸ್ಸು ಚಂಚಲವಾಗಿರುತ್ತದೆ. ನೀವು ವ್ಯವಹಾರದಲ್ಲಿ ಹೆಚ್ಚು ಓಡಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ನೀವು ಅಡೆತಡೆಗಳನ್ನು ಎದುರಿಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಆದಾಯ ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ವಿಯಾಗಲು ನೀವು ಮಾಡುವ ಪ್ರಯತ್ನವು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

** ವೃಷಭ ರಾಶಿ :
ವೃಷಭ ರಾಶಿ ಜನರು ಇಂದು ತಮ್ಮ ಮಾನಸಿಕ ಸ್ಥಿತಿಯಲ್ಲಿ ಏರಿಳಿತಗಳನ್ನು ಹೊಂದಿರಬಹುದು. ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಆರ್ಥಿಕವಾಗಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ವ್ಯವಹಾರದ ಯಶಸ್ಸು ಉತ್ತಮ ಆರೋಗ್ಯದಿಂದ ಬೆಂಬಲಿತವಾಗಿದೆ.

** ಮಿಥುನ ರಾಶಿ :
ಮಿಥುನ ರಾಶಿಚಕ್ರದ ಜನರಲ್ಲಿ ಇಂದು ಸಂತೋಷ ಹೆಚ್ಚಾಗಬಹುದು. ಅತಿಯಾದ ಖರ್ಚು ಮನಸ್ಸನ್ನು ತೊಂದರೆಗೊಳಿಸುತ್ತದೆ. ಆದರೆ ಇಂದು ಉದ್ಯೋಗ ಬದಲಾವಣೆಯೊಂದಿಗೆ ಬಡ್ತಿಗೆ ಅವಕಾಶಗಳು ಇರಬಹುದು. ಆದಾಯ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗುತ್ತವೆ. ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದೆ.

** ಕರ್ಕಾಟಕ ರಾಶಿ :
ಇಂದು ಕಟಕ ರಾಶಿಚಕ್ರದ ಜನರು ಇಂದು ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಬಹುದು. ತಾಳ್ಮೆಯಿಂದಿರಿ. ಉದ್ಯೋಗದಲ್ಲಿ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತವೆ. ನಿಮಗೆ ಸರ್ಕಾರದಿಂದ ಬೆಂಬಲ ಸಿಗುತ್ತದೆ. ಆದಾಯ ಹೆಚ್ಚಾಗಲಿದೆ. ನಿಮಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಭಾವನಾತ್ಮಕ ಮನಸ್ಸಿನಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

** ಸಿಂಹ ರಾಶಿ :
ಸಿಂಹ ರಾಶಿಚಕ್ರದ ಜನರಿಗೆ ಇಂದು ಅದೃಷ್ಟದ ಬೆಂಬಲ ಸಿಗುತ್ತದೆ. ಅದೃಷ್ಟವಶಾತ್ ಇಂದು ಕೆಲವು ಕೆಲಸಗಳು ಸಹ ಮುಗಿಯುತ್ತವೆ. ಹಿರಿಯರಿಂದ ಆಶೀರ್ವಾದವೂ ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ ಕ್ಷೇತ್ರದಲ್ಲಿಯೂ ಬದಲಾವಣೆಯಾಗಬಹುದು. ವ್ಯವಹಾರದಲ್ಲಿ ವಿಸ್ತರಣೆ ಇರಬಹುದು.

** ಕನ್ಯಾ ರಾಶಿ :
ಇಂದು ಮನೆಯ ಹಿರಿಯರು ನಿಮ್ಮನ್ನು ಹೊಗಳಬಹುದು. ಉದ್ಯೋಗದಲ್ಲಿ ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗಬಹುದು. ಬಡ್ತಿಯೊಂದಿಗೆ ಆದಾಯ ಹೆಚ್ಚಾಗುವ ಸೂಚನೆಗಳಿವೆ. ಹಣಕಾಸಿನ ಬಜೆಟ್ ತಯಾರಿಸಿ, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನದ ಮೊದಲಾರ್ಧದಲ್ಲಿ ಉತ್ಪಾದಕತೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ, ನೀವು ಗಡುವನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ.

** ತುಲಾ ರಾಶಿ :
ತುಲಾ ರಾಶಿಚಕ್ರದ ಜನರು ಇಂದು ತಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತಪ್ಪಿಸಿ. ಅಜ್ಞಾತ ಭಯ ನಿಮ್ಮನ್ನು ಕಾಡುತ್ತದೆ. ಪರಿಸ್ಥಿತಿಗಳು ಪ್ರತಿಕೂಲವಾಗಿವೆ, ಎಚ್ಚರಿಕೆಯಿಂದ ಅವುಗಳನ್ನು ದಾಟಿ. ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ಕಡಿಮೆ ಆದಾಯ ಮತ್ತು ಹೆಚ್ಚಿನ ಖರ್ಚು ಇರುವ ಪರಿಸ್ಥಿತಿ ಬರಬಹುದು. ಕುಟುಂಬಕ್ಕೆ ಬೆಂಬಲ ನೀಡಿ.

** ವೃಶ್ಚಿಕ ರಾಶಿ :
ಇಂದು ಕೆಲಸದ ಸ್ಥಳದ ಸವಾಲುಗಳನ್ನು ನಿವಾರಿಸಲು ತಂಡದ ಕೆಲಸ ಸಹಾಯಕವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಕಳೆದ ಕ್ಷಣಗಳು ಅದ್ಭುತವಾಗಿರುತ್ತವೆ. ಬಹಳ ದಿನಗಳಿಂದ ಬಾಕಿ ಇರುವ ಪಾವತಿಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ.

** ಧನಸ್ಸು ರಾಶಿ :
ಧನು ರಾಶಿ ಜನರು ಇಂದು ಮಾತಿನಲ್ಲಿ ಸೌಮ್ಯವಾಗಿರಬೇಕು. ಮನಸ್ಸು ತೊಂದರೆಗೊಳಗಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬೌದ್ಧಿಕ ಕೆಲಸದಿಂದ ಆದಾಯ ಹೆಚ್ಚಾಗಬಹುದು. ಇಂದು ಯಶಸ್ಸು ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಬರುತ್ತದೆ. ನಿಮ್ಮ ಸಂಬಂಧದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯನ್ನು ಇಂದು ಪರಿಹರಿಸಿ.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಹಠಾತ್ ಆರ್ಥಿಕ ಲಾಭ ಸಿಗಬಹುದು. ಪ್ರಯಾಣದ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಾಗಲಿದೆ. ಆತ್ಮವಿಶ್ವಾಸ ತುಂಬಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ವೃತ್ತಿಪರ ಸಮಸ್ಯೆಗಳನ್ನು ನೋಡಿಕೊಳ್ಳಿ. ನಿಮಗೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ನೀವು ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಬಹುದು.

** ಕುಂಭ ರಾಶಿ :
ಕುಂಭ ರಾಶಿಯ ಜನರು ಇಂದು ಚಂಚಲ ಮನಸ್ಸನ್ನು ಹೊಂದಿರಬಹುದು. ತಾಳ್ಮೆಯಿಂದಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಹಣಕಾಸು ಮತ್ತು ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು. ಶೈಕ್ಷಣಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಕಾರ್ಯನಿರತತೆ ಹೆಚ್ಚಾಗುತ್ತದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ವಿದೇಶಕ್ಕೆ ಹೋಗಬಹುದು.

** ಮೀನ ರಾಶಿ :
ಇಂದು ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಎಂದಿಗಿಂತಲೂ ಬಲವಾಗಿರುತ್ತದೆ. ನೀವು ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಅಲ್ಲಿಗೆ ಭೇಟಿ ನೀಡಲು ಯೋಜಿಸಬಹುದು. ಹಣಕಾಸಿನ ಶಾರ್ಟ್‌ಕಟ್‌ಗಳನ್ನು ತಪ್ಪಿಸಿ, ಏಕೆಂದರೆ ಸ್ಥಿರ ಪ್ರಯತ್ನಗಳ ಮೂಲಕ ಸ್ಥಿರತೆಯನ್ನು ಉತ್ತಮವಾಗಿ ಸಾಧಿಸಬಹುದು. ನೀವು ಶೈಕ್ಷಣಿಕವಾಗಿ ಯಶಸ್ವಿಯಾಗುತ್ತೀರಿ.

Categories
ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ಟಾಪ್ ನ್ಯೂಸ್ ತೀರ್ಥಹಳ್ಳಿ

ಜಿಪಂ, ತಾಪಂ ಚುನಾವಣೆಗೆ ಕಾಂಗ್ರೆಸ್ ಸಜ್ಜು! 
– ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯಕರ್ತರ ಸಭೆ
– ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನ

ತೀರ್ಥಹಳ್ಳಿ: ಮಠದ ವಿರುದ್ದ ರೈತ ಸಂಘದ ಹೋರಾಟ
– ರೈತರ ಕೃಷಿ ಭೂಮಿಯನ್ನು ಕಬಳಿಸಲು ಸಂಚು ಆರೋಪ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ಪಕ್ಷ ಸಂಘಟನೆ ಕಡೆ ಮುಖ ಮಾಡಿದೆ. ಜಿಪಂ, ತಾಪಂ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.
ಒಕ್ಕಲಿಗರ ಭವನದ( ಕೆ,ಟಿ ಕೆ,) ಸಭಾಂಗಣದಲ್ಲಿ ಮಾರ್ಚ್ 23, ಭಾನುವಾರದಂದು ಕಾಂಗ್ರೆಸ್ ಪಕ್ಷದ ಸಂಘಟನೆಯ ಕಾರ್ಯಕರ್ತರ ಸಭೆ ನಡೆದಿದ್ದು, ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಪಕ್ಷದ ಸಂಘಟಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಂಘಟನೆ ಬಗ್ಗೆ ಚರ್ಚೆ ಮಾಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಎಲ್ಲಾ ನಾಯಕರು, ಮುಖಂಡರು ಸಭೆ ನಡೆಸಿದ್ದಾರೆ.
ಸಲಹೆ ಸೂಚನೆ ನೀಡಿದ ಪಕ್ಷದ ಮುಖಂಡರು ಮುಂದಿನ ದಿನದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಲಾಯಿತು.
ಪಕ್ಷದ ಪ್ರಮುಖ ಮುಖಂಡರಾದ ಪ್ರಸನ್ನ ಕುಮಾರ್, ಬಲ್ಕಿಷ್ ಬಾನು,
ಕೆಸ್ತೂರು ಮಂಜುನಾಥ್, ಮುಡಬ ರಾಘವೇಂದ್ರ,ಕಡ್ತೂರು ದಿನೇಶ್, ಸುಂದರೇಶ್, ನಾರಾಯಣ್ ರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ತೀರ್ಥಹಳ್ಳಿಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಸಚಿಂದ್ರ ಹೆಗಡೆ, ಹುಂಚದಕಟ್ಟೆ ಆದರ್ಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್, ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್, ಅಮರನಾಥ್ ಶೆಟ್ಟಿ, ಮತ್ತು ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತಿರಿದ್ದರು.

ತೀರ್ಥಹಳ್ಳಿ: ಮಠದ ವಿರುದ್ದ ರೈತ ಸಂಘದ ಹೋರಾಟ
– ರೈತರ ಕೃಷಿ ಭೂಮಿಯನ್ನು ಕಬಳಿಸಲು ಸಂಚು ಆರೋಪ

ತೀರ್ಥಹಳ್ಳಿ: ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಕೆಲವು ಮಠಗಳು, ವಕ್ಫ್ ಬೋರ್ಡ್ ಇತ್ಯಾದಿ ಧಾರ್ಮಿಕ ಸಂಸ್ಥೆಗಳು ಜನಸಾಮಾನ್ಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ತಲ ತಲಾಂತರದಿಂದ ರೂಢಿಸಿಕೊಂಡು ಬಂದ ಸಾಮಾನ್ಯ ಜನರ ವಾಸದ ಜಾಗಗಳನ್ನು, ರೈತರ ಕೃಷಿ ಭೂಮಿಯನ್ನು ಕಬಳಿಸಲು ಸಂಚು ನಡೆಸಿವೆ. ಅಸಂಬದ್ಧ ಮತ್ತು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಜನ ಸಾಮಾನ್ಯರನ್ನು ನ್ಯಾಯಾಲಯಗಳಿಗೆ, ಸರ್ಕಾರಿ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಿವೆ. ಇದಕ್ಕೀಗ ಇಂದು ಒಂದು ಹೊಸ ಸೇರ್ಪಡೆ ನೋಡಿದೆವು. ಈ ದಿನ ದಿನಾಂಕ 24-03-2025 ರಂದು ತೀರ್ಥಹಳ್ಳಿ ತಾಲ್ಲೂಕಿನ ದಿಂಡ ಮತ್ತು ಕೊಳಿಗೆಬೈಲು ಗ್ರಾಮಗಳ ಬಹುತೇಕ ದಲಿತರ ಕುಟುಂಬಗಳ ಸಾಗುವಳಿ ಭೂಮಿ, ಮನೆ, ಕಣ, ಕೊಟ್ಟಿಗೆ, ಹಿತ್ತಲುಗಳನ್ನು ಮೋಜಣಿಗೆ ಒಳಪಡಿಸಲಾಯಿತು. ಈ ಮೂಲಕ ಅಲ್ಲಿಯ ಸುಮಾರು ಮೂವತ್ತು ಕುಟುಂಬಗಳು ಭಯಭೀತರಾಗಿದ್ದಾರೆ. ಈ ಭಾಗದ ಮಠವೊಂದು ಈ ಜನರ ಬದುಕು ಕಿತ್ತುಕೊಳ್ಳಲು ಸಂಚು ರೂಪಿಸಿದೆ. ಕರ್ನಾಟಕ ರಾಜ್ಯ ಸರ್ಕಾರವಂತೂ ಈ ಮಠ, ಮಸೀದಿಗಳು ಓಟು ತರುವ ಮೆಷಿನ್ಗಳೆಂದು ಇವುಗಳ ಮುಂದೆ ದೊಗ್ಗು ಸಲಾಮು ಹೊಡೆದು ಮಂಡಿಯೂರಿದೆ. ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಮಠವೊಂದರ ವಿರುದ್ಧ ದಾಖಲೆ ಸಮೇತ ಸರ್ಕಾರಕ್ಕೆ ದೂರು ಸಲ್ಲಿಸಿದ್ದರೂ ಸರ್ಕಾರರದ ಅನೇಕ ಅಂಗಗಳ ಹತ್ತಿರದವರೆಲ್ಲ ಆ ಮಠದ ಸ್ವಾಮಿಯ ಕಾಲಿಗೆ ಡೈವ್ ಹೊಡೆದೂ ಹೊಡೆದು ಗಿನ್ನಿಸ್ ದಾಖಲೆಗೆ ಸೇರಲು ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಅಂಧಶ್ರದ್ಧೆಯ ವಿರೋಧಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತ ನಾಯಕ ಪ್ರೊ ನಂಜುಂಡಸ್ವಾಮಿಯವರು ನನ್ನ ಗುರುಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಮಠ, ಮಸೀದಿ, ಇಗರ್ಜಿಗಳಿಂದ ಜನಸಾಮಾನ್ಯರಿಗೆ – ರೈತರಿಗೆ ತೊಂದರೆಯಾದರೆ ಮಂಕು ಬಡಿದವರಂತೆ ಕುಳಿತು ಬಿಡುತ್ತಾರೆ. ಮಡೆ ಸ್ನಾನ, ಕುಂಬುಸ್ನಾನ, ಕರಾಳ ಆರತಿ, ಇಫ್ತಿಹಾರ ಕೂಟಗಳಂತಹ ಅಲೌಕಿಗಳನ್ನು ಬದಿಗಿಟ್ಟು ಆಡಳಿತ ನಡೆಸಬೇಕು. ಸರ್ಕಾರಗಳನ್ನು ನಡೆಸುವವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದೆ ಎಂದು ಸಾಬೀತುಪಡಿಸಲಾದರೂ ಈ ಮಠಗಳ, ಮಸೀದಿಗಳ, ಮಂದಿರಗಳ, ಚರ್ಚುಗಳ ಆಸ್ತಿಗಳ ಹೆಸರಿನಲ್ಲಿ ರೈತರ ಹಕ್ಕುಗಳನ್ನು ಕಿತ್ತುಕೊಳ್ಳವ ಕರಾಳ ದಂಧೆಯನ್ನು ಬಯಲಿಗೆಳೆಯಲು ದಕ್ಷರನ್ನು ಒಳಗೊಂಡ ಒಂದು ‘ವಿಶೇಷ ತನಿಖಾ ತಂಡ’ ರಚಿಸಿಬೇಕು. ಜನಸಾಮಾನ್ಯರಿಂದ ಮಾಹಿತಿ ಪಡೆದು ತನಿಖೆಯಾದರೆ ಈಗಾಗಲೇ ಜೈಲಲ್ಲಿರಬೇಕಾದವರು ತಡವಾಗಿಯಾದರೂ ಜೈಲು ಸೇರುತ್ತಾರೆ. ಈ ಮೂಲಕ ಸಂಬಂಧಪಟ್ಟವರು ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದ್ದವರೆಂದು ತೋರಿಸಿಕೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಅಧ್ಯಕ್ಷರಾದ ಕೋಡ್ಲು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ
ಹೊರಬೈಲು ರಾಮಕೃಷ್ಣ ಹೇಳಿದ್ದಾರೆ.