Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಗಾಳಿ ಮಳೆ!

ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಗಾಳಿ ಮಳೆ!
– ದಿನವಿಡೀ ಉರಿ ಬಿಸಿಲು: ತಂಪೆರೆದ ವರುಣ
– ತಾಲೂಕಿನ ಹಲವೆಡೆ ಧಾರಾಕಾರ ಮಳೆ: ಹಂಚು ಹಾರಿ ಹೋಯ್ತು!

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಉರಿ ಸೆಕೆ ಮುಂದುವರೆದಿದ್ದು, ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭಾರೀ ಗಾಳಿ ಸಹಿತ ಮಳೆಯಾಗಿದೆ. ಹಲವೆಡೆ ಮರಗಳು ಬಿದ್ದಿವೆ.
ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಬೆಳಗ್ಗೆ ಮಂಜು, ಮೋಡದಿಂದ ಕೂಡಿತ್ತು. ಇದರಿಂದಾಗಿ ತಾಪಮಾನದಲ್ಲೂ ಏರಿಳಿತವಾಗುತ್ತಿದ್ದು, ಮಧ್ಯಾಹ್ನ ವೇಳೆ ಹಲವೆಡೆ ಭಾರೀ ಮಳೆಯಾಗಿದೆ.
ಕೊಪ್ಪ ತೀರ್ಥಹಳ್ಳಿ ಗಡಿ ಭಾಗದಲ್ಲಿ ಭಾರೀ ಮಳೆಯಾಗಿದ್ದು ಅನೇಕ ಕಡೆ ಮರಗಳು ಧರೆಗೆ ಉರುಳಿವೆ. ಇನ್ನು ಅನೇಕ ಕಡೆ ಗಾಳಿಗೆ ಮನೆಗಳ ಹೆಂಚು ಹಾರಿ ಹೋಗಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿ ತುಂತುರು ಮಳೆ ಬಂದಿದ್ದು, ಇನ್ನೆರಡು ದಿನದಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ. ಬಿಸಿಲಿನ ಧಗೆಗೆ ಕಂಗೆಟ್ಟ ಜನತೆಗೆ ಮಳೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

Categories
ತೀರ್ಥಹಳ್ಳಿ

ಡಾ. ಪುನೀತ್ ರಾಜ್‌ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಯಕ್ಷಗಾನ

ಡಾ. ಪುನೀತ್ ರಾಜ್‌ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಯಕ್ಷಗಾನ
– ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ
– ಮಾರ್ಚ್ 27 ರಂದು ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆಯನ್ನು ಸೊಪ್ಪುಗುಡ್ಡೆಯ ಸಂಸ್ಕೃತಿ ಮಂದಿರದ ಮೈದಾನದಲ್ಲಿ ಆಯೋಜನೆ
– ಸರ್ವರಿಗೂ ಆದರದ ಸ್ವಾಗತವನ್ನು ಸಹಕಾರಿ ಸಂಘ ಕೋರಿದೆ.

NAMMUR EXPRESS NEWS
ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ, ವಿಶಾಲ್ ಕುಮಾರ್, ಮತ್ತು ಸಂಘದ ಅಧ್ಯಕ್ಷ ಹೊದಲ ಶಿವು, ಮಾತನಾಡಿ ಇದೊಂದು ಯಕ್ಷಗಾನ ಕಾರ್ಯಕ್ರಮ ನಮ್ಮ ಸಂಘಟನೆ ಮತ್ತು ಸಹಕಾರಿ ಸಂಘವನ್ನ ಬಲಪಡಿಸುವ ಸಲುವಾಗಿ ಈ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಕ್ಷೇತ್ರದ ರಾಜಕೀಯ ಗಣ್ಯರಾದ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮತ್ತು ಡಿಸಿಸಿ ಬ್ಯಾಂಕ್, ಅಧ್ಯಕ್ಷ ಮಂಜುನಾಥ ಗೌಡ ಈ ಮೂವರನ್ನು ಸನ್ಮಾನಿಸಲಾಗುವುದು ಎಂದರು.
ಈ ಕಾರ್ಯಕ್ರಮವು ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ಸೊಪ್ಪುಗುಡ್ಡೆ-ತೀರ್ಥಹಳ್ಳಿ. ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ತೀರ್ಥಹಳ್ಳಿ, ಇವರ ಆಶ್ರಯದಲ್ಲಿ ಡಾ|| ಪುನೀತ್ ರಾಜ್‌ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ 27-03-2025 ನೇ ಗುರುವಾರ ರಾತ್ರಿ 7-00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಸಂಸ್ಕೃತಿ ಮಂದಿರದ ಮೈದಾನದಲ್ಲಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಭೈದತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ಕಾಲಮಿತಿ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮ”
ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ. ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ, ಯಕ್ಷಗಾನ ವೀಕ್ಷಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ತಾಲೂಕು ಅಧ್ಯಕ್ಷ  ವಿಶಾಲ್ ಕುಮಾರ್, ಸಂಘದ ಅಧ್ಯಕ್ಷ
ಹೊದಲ ಶಿವು, ಸಂಘದ ನಿರ್ದೇಶಕರು, ಸೂರ್ಯ ನಾರಾಯಣ್ ಚಿಡುವ, ಮಹಿಳಾ ಘಟಕದ ಅಧ್ಯಕ್ಷರು ಶಾಲಿನಿ ನಾಗರಾಜ್,
ನಾರಾಯಣ ಗುರು ಜಿಲ್ಲಾ ಉಪಾಧ್ಯಕ್ಷರು ಗೀತಾ ರಾಘವೇಂದ್ರ, ಶ್ವೇತಾ ಶಬರೀಶ್, ಪುನೀತ್ ಬ್ರಿಗೇಡ್ ಸಂಚಾಲಕ ಕುಪ್ಪಳ್ಳಿ ಸುಧಾಕರ್, ಮಂಜುಳಾ ನಾಗೇಂದ್ರ, ಮಕ್ಕಿ ಕೊಪ್ಪ ಶ್ರೀಧರ, ಪ್ರಮೋದ್ ಪೂಜಾರಿ, ಪ್ರವೀಣ್ ಮಂಡಗದ್ದೆ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Categories
ಕ್ರಿಕೆಟ್ ವಿಶೇಷ ಸುದ್ದಿ

ಮೊದಲ ಮ್ಯಾಚ್​ನಲ್ಲೇ ಮಿಂಚಿಂಗ್ ಆಟೋ ಡ್ರೈವರ್ ಮಗ ವಿಘ್ನೇಶ್ ಪುತ್ತೂರು!

ಮೊದಲ ಮ್ಯಾಚ್​ನಲ್ಲೇ ಮಿಂಚಿಂಗ್ ಆಟೋ ಡ್ರೈವರ್ ಮಗ ವಿಘ್ನೇಶ್ ಪುತ್ತೂರು!

– ಸ್ಟೇಡಿಯಂನಲ್ಲೇ ವಿಘ್ನೇಶನ ಬೆನ್ನು ತಟ್ಟಿದ ಧೋನಿ!
– ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ!

NAMMUR EXPRESS NEWS
ವಿಘ್ನೇಶ್ ಪುತ್ತೂರು ಬಲಗೈ ಬ್ಯಾಟರ್‌, ಎಡಗೈ ಸ್ಪಿನ್ ಬೌಲರ್! ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕ. ತಾಯಿ ಕೆ.ಪಿ.ಬಿಂದು ಗೃಹಿಣಿ. ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಕ್ರಿಕೆಟ್​ ಭವಿಷ್ಯಕ್ಕಾಗಿ ಮಲಪ್ಪುರಂನಿಂದ ತ್ರಿಶೂರ್‌ಗೆ ಸ್ಥಳಾಂತರಗೊಂಡರು. ಕಾಲೇಜು ಮಟ್ಟದಲ್ಲಿ ಮೀಡಿಯಮ್ ಪೇಸರ್ ಆಗಿದ್ದ ವಿಘ್ನೇಶ್ ನಂತರ ಸ್ಪಿನ್ನರ್ ಆಗಿ ರೂಪುಗೊಂಡರು.
ತ್ರಿಶೂರ್​​ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಪರ್ಫಾಮ್​​ ಮಾಡಿ ಗಮನ ಸೆಳೆದಿದ್ದ ವೀಘ್ನೇಶ್, ಕೇರಳ ಪರ ಅಂಡರ್​​ -14, ಅಂಡರ್​​ -19 ಅಂಡರ್​​ -23 ತಂಡಗಳಲ್ಲಿ ಆಡಿದ್ದರು. ಇಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ವೀಘ್ನೇಶ್​, ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪಲ್ಸ್‌ ಆಡಿದರು.

ಬದುಕು ಬದಲಿಸಿದ ಕೇರಳ ಕ್ರಿಕೆಟ್ ಲೀಗ್!

ವೀಘ್ನೇಶ್​​ ಕ್ರಿಕೆಟ್ ಕರಿಯರ್​ಗೆ ತಿರುವು ನೀಡಿದ್ದೇ ಕೇರಳ ಕ್ರಿಕೆಟ್ ಲೀಗ್. ಈ ಟೂರ್ನಿಯನ್ನು ನೋಡಲು ಮುಂಬೈ ಇಂಡಿಯನ್ಸ್‌ ಸ್ಕೌಟಿಂಗ್ ಟೀಮ್ ತೆರಳಿತ್ತು. ಈತನ ಆಟ ನೋಡಿದ್ದ ಮುಂಬೈ ಸ್ಕೌಟಿಂಗ್ ಟೀಮ್, ಟ್ರಯಲ್ಸ್​ಗೆ ಬರುವಂತೆ ಹೇಳಿತ್ತು. ಬಳಿಕ ಟ್ರಯಲ್ಸ್​ಗೆ ಬಂದಿದ್ದ ವೀಘ್ನೇಶ್​​​​​​​​​​​​​​​​ ಬೌಲಿಂಗ್ ನೋಡಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಇಂಪ್ರೆಸ್ ಆಗಿದ್ದರು. ಅಂತಿಮವಾಗಿ ಮುಂಬೈ ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಯನ್ನೂ ಮಾಡಿತು.
ಡಿಸೆಂಬರ್​ನಲ್ಲಿ ನಡೆದಿದ್ದ ಹರಾಜಿನಲ್ಲಿ ವಿಘ್ನೇಶ್​ನ ಖರೀದಿಸಿದ್ದ ಮುಂಬೈ, 2025 ಜನವರಿಯಲ್ಲಿ ಸೌತ್ ಆಫ್ರಿಕಾಗೆ ಕಳುಹಿಸಿತ್ತು. ಸೌತ್ ಆಫ್ರಿಕಾ ಟಿ20 ಲೀಗ್​​ನ MI ಕೇಪ್ ಟೌನ್ ತಂಡದ ನೆಟ್ ಬೌಲರ್ ಆಗಿ ಸೇರಿದ ವೀಘ್ನೇಶ್ ಪುತ್ತೂರು, ಅಫ್ಘಾನ್ ಸ್ಪಿನ್ನರ್​ ರಶೀದ್ ಖಾನ್​ ಗರಡಿಯಲ್ಲಿ ಮತ್ತಷ್ಟು ಪಳಗಿದರು. ಇದೇ ಅನುಭವ ಐಪಿಎಲ್​ನಲ್ಲಿ ಕೈ ಹಿಡಿಯಿತು. ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡಿರುವ ವೀಘ್ನೇಶ್, ಮೊದಲ ಮ್ಯಾಚ್​ನಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್​ನ ಹೊಸ ಭರವಸೆಯಾಗಿ ಕಾಣಿಸಿಕೊಳ್ತಿರುವ ವೀಘ್ನೇಶ್, ಇದೇ ಆಟ ಮುಂದುವರೆಸಿದರೆ ಮುಂದೊಂದು ದಿನ ಟೀಮ್ ಇಂಡಿಯಾ ಸೇರೋದು ಪಕ್ಕಾ!…

ಸ್ಟೇಡಿಯಂನಲ್ಲೇ ವಿಘ್ನೇಶನ ಬೆನ್ನು ತಟ್ಟಿದ ಧೋನಿ!

23 ವರ್ಷದ ವಿಘ್ನೇಶ್ ಚೆನ್ನೈ ತಂಡಕ್ಕೆ 156 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ನಾಯಕ ರುತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 53 ರನ್ ಗಳಿಸಿದರು. ಆದರೆ ಮುಂಬೈ ತಂಡದ ವಿಘ್ನೇಶ್ ರುತುರಾಜ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಎಂಬ 3 ಪ್ರಮುಖ ವಿಕೆಟ್‌ಗಳನ್ನು ಪಡೆದು ಚೆನ್ನೈ ತಂಡ ಮತ್ತು ಅಭಿಮಾನಿಗಳಿಗೆ ಆಘಾತವನ್ನು ನೀಡಿದರು.
ಪಂದ್ಯದ ನಂತರ ಧೋನಿ ವಿಘ್ನೇಶ್ ಅವರನ್ನು ಹೊಗಳಿದರು. ಡಗೌಟ್‌ಗೆ ಹೋಗುವ ಮೊದಲು, ಧೋನಿ ವಿಘ್ನೇಶ್ ಅವರನ್ನು ಕರೆದು ಕೆಲವು ನಿಮಿಷಗಳ ಕಾಲ ಮಾತನಾಡಿದರು. ಈ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ವಿಘ್ನೇಶ್ ಸ್ನೇಹಿತ ಶ್ರೀರಾಕ್ ಧೋನಿ ಹೇಳಿದ್ದನ್ನು ಬಹಿರಂಗಪಡಿಸಿದರು.
ಶ್ರೀರಾಕ್, “ಧೋನಿ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು ಮತ್ತು ಐಪಿಎಲ್‌ಗೆ ಆಯ್ಕೆಯಾದ ನಂತರದ ತರಬೇತಿಯನ್ನು ಮುಂದುವರಿಸಲು ಸಲಹೆ ನೀಡಿದರು” ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ವಿಘ್ನೇಶ್ ಬೆನ್ನು ತಟ್ಟಿ ಧೋನಿ ಸಲಹೆ ನೀಡಿರುವ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ!

ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಿಘ್ನೇಶ್ ಪುತ್ತೂರು ಅವರಿಗೆ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ, ತಮಗೆ ತಂಡದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ಭಾಗವಾಗಿ ವಿಘ್ನೇಶ್ ಪುತ್ತೂರು ಅವರು ವಿನಮ್ರವಾಗಿ ನೀತಾ ಅಂಬಾನಿಯ ಕಾಲಿಗೆರದರು.

Categories
ಉಡುಪಿ

ಎಪ್ರಿಲ್1 ರಿಂದ 3ರವರೆಗೆ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ!

ಎಪ್ರಿಲ್1 ರಿಂದ 3ರವರೆಗೆ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ!

– 30 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ
– ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ: ಸರ್ವರಿಗೂ ಸ್ವಾಗತ

NAMMUR EXPRESS NEWS
ಕೋಟ: ಎಪ್ರಿಲ್1 ರಿಂದ 3ರವರೆಗೆ ಸಾಸ್ತಾನದ ಕಾರ್ತಿಕೇಯ ಎಸ್ಟೇಟಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಿರುಪತಿ ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳುವುದೆ ದೊಡ್ಡ ಭಾಗ್ಯ ಎಂಬoತೆ ಅದರ ಪೂರ್ವತಯಾರಿಗಳು ವೈಭವಪೂರಿತವಾಗಿ ನಡೆಯುತ್ತಿದೆ.
ಶ್ರೀನಿವಾಸ ಕಲ್ಯಾಣ ಎನ್ನುವ ಬಹುದೊಡ್ಡ ಕಾರ್ಯಕ್ರಮವನ್ನು ರೂಪಿಸುವುದೇ ದೊಡ್ಡ ಸವಾಲಿನ ಕಾರ್ಯವಾದರೂ ಭಗವಂತನ ಇಚ್ಛೆ ಎಂಬoತೆ ವಿದ್ವಾನ್ ಡಾ.ವಿಜಯ ಮಂಜರ್ ಮಾರ್ಗದರ್ಶನದಲ್ಲಿ ಉದ್ಯಮಿ ಎಂ.ಸಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ ಸಾರಥ್ಯ ತಂಡ ಈ ಕಾರ್ಯಕ್ರಮಕ್ಕಾಗಿ ಹಗಲಿರುಳು ವಿವಿಧ ಸಮಿತಿಗಳ ಮೂಲಕ ಕಾರ್ಯೋನ್ಮುಖವಾಗಿದೆ.
ಸುಮಾರು 30ಸಾವಿರಕ್ಕೂ ಅಧಿಕ ಮಂದಿ ಈ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು ಇದಕ್ಕೆ ಬೇಕಾದ ಸುಸಜ್ಜಿತ ವ್ಯವಸ್ಥೆಗಳು ರೂಪು ರೇಷೆ ಸಿದ್ಧಗೊಂಡಿದೆ. ಜಗತ್ತಿನ ಅತಿ ಶ್ರೀಮಂತ ಅಧಿದೇವ ಶ್ರೀನಿವಾಸ ಕಲ್ಯಾಣೋತ್ಸವ ಈ ಗ್ರಾಮೀಣ ಭಾಗದಲ್ಲಿ ಮೇಳೈಸುತ್ತಿದ್ದು ಗ್ರಾಮದ ಮನೆ ಮನೆಗಳಲ್ಲಿ ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಶ್ರೀನಿವಾಸನ ವಿವಾಹೋತ್ಸವದ ಆಮಂತ್ರಣ ಹಂಚಿಕೆ ಬರದಿಂದ ಸಾಗುತ್ತಿದೆ.

– ಕಾರ್ಯಕ್ರಮಗಳ ವಿವರ ಹೇಗಿದೆ?

ಏಪ್ರಿಲ್ 1ರಂದು ಸಾಮೂಹಿಕ ದೇವತಾ ಪ್ರಾರ್ಥನೆ ಸ್ವಸ್ತಿವಾಚನ, ಪುಣ್ಯಾಹವಾಚನ, ದ್ವಾದಶ ನಾಳಿಕೆರ ಮಹಾ ಗಣಪತಿಯಾಗ’, ಮಧ್ಯಾಹ್ನ 12 ರಿಂದ ಪೂರ್ಣಾಹುತಿ ಪ್ರಸಾದ ವಿತರಣೆ ನಡೆಯಲಿದೆ.
ಇದೇ ದಿನ ಮಧ್ಯಾಹ್ನ 3 ರಿಂದ ಚಂಡೆ ಮತ್ತು ಮಂಗಳವಾದ್ಯಗಳೊoದಿಗೆ ಹೊರ ಕಾಣಿಕೆ ಮೆರವಣಿಗೆ ಮತ್ತು ಸಮರ್ಪಣೆ ಜರುಗಲಿದೆ.
ಏಪ್ರಿಲ್ 2ರಂದು ಬೆಳಿಗ್ಗೆ 9:00 ರಿಂದ ದೇವತಾ ಪ್ರಾರ್ಥನೆ ನವಗ್ರಹ ಹೋಮ ಮಧ್ಯಾಹ್ನ 12 ರಿಂದ ಪೂರ್ಣಾಹುತಿ ಪ್ರಸಾದ ವಿತರಣೆ, ಮಧ್ಯಾಹ್ನ 3 ರಿಂದ ಪ್ರವೀಣ್ ಪಡುಕೆರೆ ನೇತೃತ್ವದಲ್ಲಿ ವಿಶೇಷ ಕುಣಿತ ಭಜನೆ ಸಂಜೆ 5:30ರಿಂದ ಪುತ್ತೂರು ಜಗದೀಶ್ ಆಚಾರ್ ಮತ್ತು ತಂಡದವರಿoದ ಭಕ್ತಿರಸಮಂಜರಿ, ರಾತ್ರಿ 7 ರಿಂದ ವಿದ್ವಾನ್ ಡಾ.ವಿಜಯ ಮಂಜರ್ ಪಾಂಡೇಶ್ವರ ಇವರಿಂದ ಧಾರ್ಮಿಕ ಸಂದೇಶ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಎಂ.ಸಿ. ಚಂದ್ರಶೇಖರ್ ಪೂಜಾರಿ ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ , ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್. ಹೈದರಾಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ವಿದ್ವಾನ್ ಡಾ.ವಿಜಯಮಂಜರ್ ಪಾಂಡೇಶ್ವರ, ಕಾರ್ತಿಕೇಯ ಎಸ್ಟೇಟ್ ಇದರ ಆಡಳಿತ ಪಾಲುದಾರ ಸುರೇಶ್ ಬೆಟ್ಟಿನ್, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಎಸ್ . ಕಾರಂತ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಕನ್ಯ ಹೆಗ್ಡೆ ಭಾಗವಹಿಸಲಿದ್ದಾರೆ.
ಈ ಸಂದರ್ಭ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಐರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಕು ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಶೆಟಿ, ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಉಪಸ್ಥಿತರಿರಲಿದ್ದಾರೆ.

– ಏಪ್ರಿಲ್ 3ರಂದು “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ”

ಪುಣ್ಯಾಹವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12 ರಿಂದ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 3 ರಿಂದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ, ಸ್ತಬ್ದ ಚಿತ್ರ, ಚಂಡೆ ಹಾಗೂ ಸಕಲ ಮಂಗಳ ವಾದ್ಯಗಳೊoದಿಗೆ ಪದ್ಮಾವತಿ ಸಹಿತ ಶ್ರೀ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ ನಡೆಯಲಿದೆ.
ಸಂಜೆ 5ರಿಂದ ಶ್ರೀ ದೇವರ ವಿವಾಹ ಮಂಟಪ ಪ್ರವೇಶ, ಸೀಮಾಂತ ಪೂಜೆ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ6.30ಕ್ಕೆ ಓದಗುವ ಗೋಧೂಳಿ ಲಗ್ನ ಸುಮೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿಯು ಕನ್ಯಾದಾನ “ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ” ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚಾರಣೆ, ಮಹಾಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಪುಣ್ಯ ಕಾರ್ಯಕ್ರಮಕ್ಕೆ ಹೊರೆ ಕಾಣಿಕೆಯನ್ನು ಸಲ್ಲಿಸುವವರು ಏಪ್ರಿಲ್ 1ರಂದು ಮಂಗಳವಾರ ಮಧ್ಯಾಹ್ನ 3ರಿಂದ ಶ್ರೀನಿವಾಸ ಕಲ್ಯಾಣೋತ್ಸವದ ಉಗ್ರಾಣಕ್ಕೆ ಸಲ್ಲಿಸಬೇಕಾಗಿ ಕಾರ್ಯಕ್ರಮ ಸಂಘಟಕರು ವಿನಂತಿಸಿದ್ದಾರೆ.

Categories
ಕಾರ್ಕಳ

ಕಾರ್ಕಳದಲ್ಲಿ ಮತ್ತೆ ಗಾಳಿ ಮಳೆ!

ಕಾರ್ಕಳದಲ್ಲಿ ಮತ್ತೆ ಗಾಳಿ ಮಳೆ!

– ಜಿಲ್ಲೆಯಲ್ಲಿ ದಿನವಿಡೀ ಉರಿ ಬಿಸಿಲಿನಿಂದ ಕೂಡಿದ್ದು, ಇದೀಗ ತಂಪೆರೆದ ವರುಣ
– ತಾಲೂಕಿನ ಹಲವೆಡೆ ಧಾರಾಕಾರ ಮಳೆ

NAMMUR EXPRESS NEWS
ಮಂಗಳೂರು: ಕರಾವಳಿಯಾದ್ಯಂತ ಉರಿ ಸೆಕೆ ಮುಂದುವರೆದಿದ್ದು, ಕಾರ್ಕಳ ತಾಲೂಕಿನ ವಿವಿಧೆಡೆ ಮಾ. 25 ಅಂದರೆ ಇಂದು ಗಾಳಿ ಸಹಿತ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಉರಿ ಬಿಸಿಲು ಸೆಕೆಯ ವಾತಾವರಣ ಇದ್ದು, ಕೆಲವು ಕಡೆ ಬೆಳಗ್ಗೆ ಮಂಜು, ಮೋಡದಿಂದ ಕೂಡಿತ್ತು. ಇದರಿಂದಾಗಿ ತಾಪಮಾನದಲ್ಲೂ ಏರಿಳಿತವಾಗುತ್ತಿದ್ದು, ಇದೀಗ ಕಾರ್ಕಳದ ಹಲವೆಡೆ ಮಳೆಯಾಗಿದೆ.
ವಿವಿಧೆಡೆ ಮಳೆ ಮುಂದುವರಿದಿದ್ದು, ಸಂಜೆಯ ವೇಳೆ ಹಲವೆಡೆ ಸ್ವಲ್ಪ ಹೊತ್ತು ಧಾರಾಕಾರ ಮಳೆ ಸುರಿಯುತ್ತಿದೆ.
ಕಾರ್ಕಳ ಪೇಟೆ ಭಾಗ, ಕುಕ್ಕುಂದೂರು, ಮಿಯ್ಯಾರು, ರೆಂಜಾಲ, ಬಜಗೋಳಿ, ದಿಡಿಂಬಿರಿ, ಮಾಳ, ನೆಲ್ಲಿಕಾರು, ಕೆರ್ವಾಶೆಯಲ್ಲಿ ಮಳೆಯಾಗಿದೆ.

Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ಎಲ್ಲಾ ವಾಹನಗಳಿಗೆ ಸಿಗಲ್ಲ ಪೆಟ್ರೋಲ್, ಡೀಸೆಲ್!

ಇನ್ಮುಂದೆ ಎಲ್ಲಾ ವಾಹನಗಳಿಗೆ ಸಿಗಲ್ಲ ಪೆಟ್ರೋಲ್, ಡೀಸೆಲ್!

– ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ!
– ವಾಯು ಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರದ ಮಹತ್ವದ ನಿರ್ಧಾರ

NAMMUR EXPRESS NEWS
ನವದೆಹಲಿ: ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ನಿಮ್ಮ ವಾಹನಗಳು 15 ವರ್ಷಕ್ಕೂ ಹಳೆಯದಾಗಿದ್ದರೆ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಅಷ್ಟೇ ಅಲ್ಲದೆ ಅವುಗಳಿಗೆ ಪೆಟ್ರೋಲ್ ಡೀಸೆಲ್ ಕೂಡ ಸಿಗುವುದಿಲ್ಲ.
ಹೌದು, ನಿಮ್ಮ ವಾಹನವು 15 ವರ್ಷಗಳ ಮಾರ್ಕ್ ದಾಟಿದ್ರೆ, ರಸ್ತೆಗೆ ಇಳಿಸುವಂತಿಲ್ಲ. ಒಂದು ವೇಳೆ ರಸ್ತೆಗೆ ಇಳಿಸಿದರೂ ಯಾವುದೇ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಅಥವಾ ಪೆಟ್ರೋಲ್‌ ತುಂಬಿಸುವುದಿಲ್ಲ.
ಈ ಹೊಸ ಇಂಧನದ ನಿಯಮದ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್ ನೀಡುವುದಿಲ್ಲ.
ದೆಹಲಿಯಲ್ಲಿ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಇಂಧನ ನಿಷೇಧ ಮಾಡಲಾಗಿದೆ. ಏಪ್ರಿಲ್ 1 ರಿಂದ ಈ ನಿಯಮ ಜಾರಿಗೊಳ್ಳಲಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಹಳೆಯ ವಾಹನಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. NGT ಸೂಚನೆಗಳ ಪ್ರಕಾರ, ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್ ಸಿಗುವುದಿಲ್ಲ. ಮಾಲೀಕರು ಈ ಬಗ್ಗೆ ಅಲರ್ಟ್ ಆಗಿರಬೇಕು.

Categories
ಉಡುಪಿ

ಬೈಂದೂರು, ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಡಿಜಿಟಲ್ ಕ್ಲಾಸ್ ಉದ್ಘಾಟನೆ!

ಬೈಂದೂರು, ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಡಿಜಿಟಲ್ ಕ್ಲಾಸ್ ಉದ್ಘಾಟನೆ!

– ಡಿಜಿಟಲ್ ಕ್ಲಾಸನ್ನು ಕೊಡುಗೆಯಾಗಿ ನೀಡಿದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್!
– ಶಾಸಕರಾದ ಗುರುರಾಜ್ ಗಂಟಿಹೊಳೆ ಅವರಿಂದ ಉದ್ಘಾಟನೆ

NAMMUR EXPRESS NEWS
ಬೈಂದೂರು: ಬೈಂದೂರು ಕ್ಷೇತ್ರದ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕೊಡುಗೆಯಾಗಿ ನೀಡಿದ ಡಿಜಿಟಲ್ ಕ್ಲಾಸ್‌ ಅದ್ದೂರಿಯಾಗಿ ಉದ್ಘಾಟನೆ ಮಾಡಲಾಯಿತು.
ಶಾಲೆ ದತ್ತು ಸ್ವೀಕರಿಸಿದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅವರು ಶಾಲೆಗೆ ಡಿಜಿಟಲ್ ಕ್ಲಾಸನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರಿಂದ ನೂತನ ಡಿಜಿಟಲ್ ಕ್ಲಾಸ್ ಉದ್ಘಾಟನೆಯನ್ನು ಮಾಡಲಾಯಿತು.

– ಒಂದು ಶಾಲೆಯ ಅಭಿವೃದ್ಧಿಗೆ ತ್ರಿಮೂರ್ತಿಗಳ ಸಹಕಾರ ಅತ್ಯಗತ್ಯ: ಗೋವಿಂದ ಬಾಬು ಪೂಜಾರಿ

ಬೈಂದೂರಿನಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಬೇರೆ ಬೇರೆ ಸೇವೆಗಳನ್ನು ನೀಡುತ್ತಾ ಬಂದಿದ್ದೇವೆ. ಹಳೆ ವಿದ್ಯಾರ್ಥಿಗಳ ಮೂಲಕವೇ ಈ ಶಾಲೆ ಅಭಿವೃದ್ಧಿಯತ್ತ ಸಾಗಬೇಕು. ಯಾವುದೇ ಶಾಲೆಯಲ್ಲಿ ಅಭಿವೃದ್ಧಿಯತ್ತ ಚಲಿಸಲು ತ್ರಿಮೂರ್ತಿಗಳ ಸಹಕಾರ ಅತ್ಯಗತ್ಯ.
ಎಸ್.ಡಿ. ಎಂ. ಸಿ, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಈ ತ್ರಿಮೂರ್ತಿಗಳು ಒಟ್ಟಾಗಿದ್ದರೆ ಆ ಶಾಲೆಯ ಅಭಿವೃದ್ಧಿಗೆ ಇತರರ ಅವಶ್ಯಕತೆ ಬರುವುದಿಲ್ಲ.
ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಮಾಡುವ ಜವಾಬ್ದಾರಿ ನಮ್ಮದು ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್. ರಿ. ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್. ರಿ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರು, ಎಸ್. ಡಿ. ಎಂ. ಸಿ, ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿ, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಧರ್ಮಸ್ಥಳ ಯೋಜನೆಯ ವಾತ್ಸಲ್ಯ ಮನೆ ಭಾಗ್ಯ!

ಧರ್ಮಸ್ಥಳ ಯೋಜನೆಯ ವಾತ್ಸಲ್ಯ ಮನೆ ಭಾಗ್ಯ!
– ಮನೆ ಪ್ರವೇಶಿಸುವುದರ ಮೂಲಕ ತಹಶೀಲ್ದಾರ್ ರಂಜಿತ್ ಉದ್ಘಾಟನೆ
– ಅಸಹಾಯಕ ಮಹಿಳೆಯರಿಗೆ ನೂತನ ಮನೆ ನಿರ್ಮಾಣ.
– ರಾಜ್ಯದಾದ್ಯಂತ 778 ಮನೆಗಳು ಮಂಜೂರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಶೆಟ್ಟಿಗಳ ಕೊಪ್ಪ ಗ್ರಾಮದ ನಿರ್ಗತಿಕರಾದ ಶ್ರೀಮತಿ ಚೆನ್ನಮ್ಮ ಹೆಗ್ಡೆ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ತಾಲೂಕಿನ ತಹಶೀಲ್ದಾರ್ ರಂಜಿತ್ ಮನೆಯ ಒಳ ಪ್ರವೇಶಿಸುವುದರ ಮೂಲಕ ಉದ್ಘಾಟನೆ ಮಾಡಿ ಹಸ್ತಾಂತರ ಮಾಡಿದರು.
ಕಾರ್ಯಕ್ರಮವನ್ನು ನೆರವೇರಿಸಿ ಗ್ರಾಮಾಭಿವೃದ್ಧಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳ ಜೊತೆ ಈ ಒಂದು ಕಾರ್ಯಕ್ರಮದ ಮೂಲಕ ನಿರ್ಗತಿಕ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿ ಅವರ ಜೀವನಕ್ಕೆ ಭದ್ರತೆಯನ್ನು ನೀಡುವ ಉತ್ತಮ ಕೆಲಸದ ಬಗ್ಗೆ ಶ್ಲಾಘಿಸಿ ಫಲಾನುಭವಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ಶ್ರೀ ವಿಠಲ್ ಪೂಜಾರಿರವರು ಭಾಗವಹಿಸಿ ವಾತ್ಸಲ್ಯ ಕಾರ್ಯಕ್ರಮಗಳ ಮೂಲ ಉದ್ದೇಶ ಮತ್ತು ಮಹತ್ವಗಳ ಜೊತೆಗೆ ಮಾಸಾಶನ, ವಾತ್ಸಲ್ಯ ಕಿಟ್, ವಾತ್ಸಲ್ಯ ಮಿಕ್ಸ್, ವಾತ್ಸಲ್ಯ ಮನೆಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನ ಮಾಡುವ ವಿಧಾನಗಳ ಬಗ್ಗೆ ತಿಳಿಸಿದರು, ಈ ಸಂದರ್ಭದಲ್ಲಿ ಪೂಜ್ಯವಾದ ಚಿಕಿತ್ಸಾಲಯದ ವೈದ್ಯರಾದ ಶ್ರೀ ಜೀವಂಧರ್ ಜೈನ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಘವೇಂದ್ರ ಸೊಪ್ಪುಗುಡ್ಡೆ, ತಾಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಮಾಲತಿ ದಿನೇಶ್, ಕೇಂದ್ರ ಕಛೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ಸಂಗೀತಾ, ಚಿತ್ರದುರ್ಗ ಪ್ರಾದೇಶಿಕ ಕಛೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ರತ್ನಾ ಮೈಪಾಲ್, ಒಕ್ಕೂಟದ ಅಧ್ಯಕ್ಷರಾದ ಶ್ರೀ ನರೇಶ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಶ್ರೀಮತಿ ಲಲಿತಾ, ವಲಯದ ಮೇಲ್ವಿಚಾರಕರಾದ ಶ್ರೀಮತಿ ಹೇಮಾ ಮತ್ತು ಸೇವಾಪ್ರತಿನಿಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ರಾಜ್ಯದಲ್ಲಿ 778 ಮನೆಗಳು ಮಂಜೂರು

ರಾಜ್ಯದಾದ್ಯಂತ 778 ಮನೆಗಳು ಮಂಜೂರಾಗಿದ್ದು ಇದುವರೆಗೆ 650 ಮನೆ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಸಹಾಯಕ ಮಹಿಳೆಯರಿಗೆ ನೂತನ ಮನೆ ನಿರ್ಮಾಣ. ಒಂದು ಮನೆ ನಿರ್ಮಾಣ ಮಾಡಲು 94,000 ವೆಚ್ಚದಲ್ಲಿ ನಿರ್ಮಿಸಲಾಗಿದೆ.

Categories
ತೀರ್ಥಹಳ್ಳಿ

ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ, ಹೊಸನಗರದಲ್ಲಿ ಯಕ್ಷಗಾನ

ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ, ಹೊಸನಗರದಲ್ಲಿ ಯಕ್ಷಗಾನ
– ಮಾರ್ಚ್ 25ಕ್ಕೆ ಹೊಸನಗರ, ಮಾ 27ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ 
– ಸರ್ವರಿಗೂ ಆದರದ ಸ್ವಾಗತ ಕೋರಿದ ಆಯೋಜಕರು

NAMMUR EXPRESS NEWS
ಹೊಸನಗರ/ ತೀರ್ಥಹಳ್ಳಿ: ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ತೀರ್ಥಹಳ್ಳಿ, ಹೊಸನಗರದಲ್ಲಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ಕಾಲಮಿತಿ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆಯಲಿದೆ.
ಮಾರ್ಚ್ 25ಕ್ಕೆ ಹೊಸನಗರ, ಮಾ 27ರಂದು ತೀರ್ಥಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ. ಆಯೋಜಕರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ಸೊಪ್ಪುಗುಡ್ಡೆ-ತೀರ್ಥಹಳ್ಳಿ. ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ತೀರ್ಥಹಳ್ಳಿ, ಇವರ ಆಶ್ರಯದಲ್ಲಿ ಡಾ|| ಪುನೀತ್ ರಾಜ್‌ ಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ 27-03-2025 ನೇ ಗುರುವಾರ ರಾತ್ರಿ 7-00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಸಂಸ್ಕೃತಿ ಮಂದಿರದ ಮೈದಾನದಲ್ಲಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಭೈದತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ಕಾಲಮಿತಿ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮ”
ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ. ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ, ಯಕ್ಷಗಾನ ವೀಕ್ಷಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ತೀರ್ಥಹಳ್ಳಿ,ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ನಾರಾಯಣ ಗುರು ವಿಚಾರ ವೇದಿಕೆ. ತೀರ್ಥಹಳ್ಳಿ ಇವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ

ಶ್ರೀ ಹೊದಲ ಶಿವು
ಅಧ್ಯಕ್ಷರು, ಸಂತ ಶ್ರೀ ನಾರಾಯಣ ಗುರು
ಸೌಹಾರ್ದ ಸಹಕಾರಿ ಸಂಘ, ತೀರ್ಥಹಳ್ಳಿ,
ಮೊ : 7019405132

ಶ್ರೀ ವಿಶಾಲ್ ಕುಮಾರ್
ಅಧ್ಯಕ್ಷರು, ಶ್ರೀ ನಾರಾಯಣ ವಿಚಾರ ವೇದಿಕೆ
ತೀರ್ಥಹಳ್ಳಿ,
ಮೊ : 8618034400

 

ಮಾ.25ಕ್ಕೆ ಹೊಸನಗರದಲ್ಲಿ ಗೆಜ್ಜೆಗಿರಿ ಮೇಳದವರಿಂದ ಯಕ್ಷಗಾನ

ಹೊಸನಗರ: ದೇಶ ವಿದೇಶಗಳಲ್ಲಿ ಪ್ರದರ್ಶನಗೈದು ಯಕ್ಷಾಭಿಮಾನಿಗಳಿಂದ ಪ್ರಶಂಸೆ ಗಳಿಸಿದ ತೆಂಕುತಿಟ್ಟಿನ ಬಲಿಷ್ಠ ಶ್ರೀ ಗೆಜ್ಜೆಗಿರಿ ಮೇಳದವರಿಂದ ಹೊಸನಗರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನದ ರಸದೌತಣ ನಡೆಯಲಿದೆ.
ಡಾ.ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಪುನೀತ್ ನಮನ ಕಾರ್ಯಕ್ರಮ ಸಂಜೆ: 6-45 ಕ್ಕೆ ನಡೆಯಲಿದೆ.
ಶ್ರೀ ನಾರಾಯಣ ಗುರು ವಿಚಾರ ವೇದಿಕೆ (SNGV) ಹೊಸನಗರ ಮಹಿಳಾ ಘಟಕ(SNGV) ಹೊಸನಗರ, ಆರ್ಯ ಈಡಿಗರ ಸಂಘ ಹಾಗೂ ಬಿಲ್ಲವ ಸಂಘ ಹೊಸನಗರ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಮತ್ತು ಪ್ರಮುಖ ದಾನಿಗಳ ಪ್ರಾಯೋಜಕತ್ವದಲ್ಲಿ, ಯಕ್ಷಗಾನ ಪ್ರೇಮಿಗಳ ಸಹಭಾಗಿತ್ವದಲ್ಲಿ ದಿನಾಂಕ 25-03-2025 ಮಂಗಳವಾರದಂದು ನೆಹರೂ ಮೈದಾನ ಹೊಸನಗರದಲ್ಲಿ ಸಂಜೆ 6:30 ಚೌಕಿ ಪೂಜೆ, ರಾತ್ರಿ 7 ಘಂಟೆಯಿಂದ ವಿಶ್ವ ವಿಖ್ಯಾತ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಕಾರಣಿಕವನ್ನು ಸಾರುವ ಐತಿಹಾಸಿಕ ಕನ್ನಡದಲ್ಲಿ
ಪ್ರಸಂಗ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ.

Categories
ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!

IPL 2025
* ಲಕ್ನೋ ಗೆಲುವಿನ ಕನಸನ್ನು ಭಗ್ನಗೊಳಿಸಿದ ಅಶುತೋಷ್- ಡೆಲ್ಲಿಗೆ ರೋಚಕ ಗೆಲುವು
* ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಋತುರಾಜ್,ಖಲೀಲ್ ??

NAMMUR EXPRESS SPORTS NEWS
ವಿಶಾಖಪಟ್ಟಣಂ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ಎಸೆತಗಳು ಬಾಕಿ ಇರುವಂತೆ 1 ವಿಕೆಟ್‌ನಿಂದ ಗೆಲುವು ಸಾಧಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ನಿನ್ನೆ ನಡೆದ IPL 2025ರ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡವು 8 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತ್ತು. 210 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 19.3 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 211 ರನ್ ಗಳಿಸಿ ಗೆಲುವು ಸಾಧಿಸಿದೆ.
ಡೆಲ್ಲಿ ತಂಡದ ಪರ ಅಶುತೋಷ್ ಶರ್ಮಾ ಅಜೇಯ 66 ರನ್ ಬಾರಿಸಿದರೆ, ವಿಪ್ರಜ್ ನಿಗಮ್ 39 ರನ್ ಹಾಗೂ ಟ್ರಿಸ್ಟಾನ್ ಸ್ಟಬ್ 34 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಲಕ್ಕೋ ತಂಡದ ಪರ ಮಿಚೆಲ್ ಮಾರ್ಷ್ 72 ರನ್ (36 ಎಸೆತ, 6 ಬೌಂಡರಿ, 6 ಸಿಕ್ಸ್), ನಿಕೋಲಸ್ ಪೂರನ್ 75 ರನ್ (30 ಎಸೆತ, 6 ಬೌಂಡರಿ, 7 ಸಿಕ್ಸ್ ಹಾಗೂ ಡೇವಿಡ್ ಮಿಲ್ಲರ್ 27 ರನ್ ಬಾರಿಸಿದ್ದರು. ಆದರೆ ನಾಯಕ ರಿಷಬ್ ಪಂತ್ 6 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್‌ ಪ್ರಮುಖ 3 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ 2 ವಿಕೆಟ್, ಮುಖೇಶ್ ಕುಮಾರ್ ಹಾಗೂ ವಿಪ್ರಜ್ ನಿಗಮ್ ತಲಾ 1 ವಿಕೆಟ್ ಪಡೆದುಕೊಂಡಿದ್ದರು.

* ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಋತುರಾಜ್,ಖಲೀಲ್ ??
ಚೆನ್ನೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫಿಕಿಂಗ್ಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಸಿಎಸ್‌ಕೆ ತಂಡ ಬ್ಯಾನ್ ಆಗುತ್ತಾ? ಎಂಬ ಕುತೂಹಲ ಮೂಡಿಸಿದೆ.
ಹೌದು.. IPL 2025ರ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಈ ಪಂದ್ಯದಲ್ಲಿ ಸೆರೆಯಾದ ವಿವಾದಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಿಎಸ್‌ಕೆ ತಂಡದ ಆಟಗಾರರಾದ ಖಲೀಲ್ ಅಹ್ಮದ್ ಮತ್ತು ನಾಯಕ ಋತುರಾಜ್ ಗಾಯಕ್ವಾಡ್ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಹೊರಿಸಲಾಗಿದೆ. ಈ ಘಟನೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ತಂಡದ ಸಾಧನೆಯ ಮೇಲೆ ಪ್ರಶ್ನೆಗಳನ್ನು ಕೇಳಿಬರುತ್ತಿವೆ.
ಐಪಿಎಲ್ ಅಧಿಕಾರಿಗಳು ಸಿಎಸ್‌ಕೆ ತಂಡಕ್ಕೆ ನೋಟಿಸ್‌ ಜಾರಿ ಮಾಡಿ ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿದೆ. ಅಲ್ಲದೇ ಐಪಿಎಲ್‌ನಿಂದ ಸಿಎಸ್‌ಕೆ ತಂಡವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಇಂದಿನ ಪಂದ್ಯ :
ಗುಜರಾತ್ ಟೈಟಾನ್ಸ್ ತಂಡವು ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಸಂಜೆ 7:30 ಕ್ಕೆ ಪಂದ್ಯ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿದೆ.