Categories
ರಾಜ್ಯ

ಬೆಂಗಳೂರು : ಅಲೋವೇರಾ ಜ್ಯೂಸ್ ಎಂದು ವಿಷ ಕುಡಿದ ಬಾಲಕಿ ಸಾವು..!!

ಟಾಪ್ 4 ನ್ಯೂಸ್ ಕರ್ನಾಟಕ

ಬೆಂಗಳೂರು : ಅಲೋವೇರಾ ಜ್ಯೂಸ್ ಎಂದು ವಿಷ ಕುಡಿದ ಬಾಲಕಿ ಸಾವು..!!
– ಬೆಳಗಾವಿ : ಶಾಸಕ ರಾಜು ಸಹೋದರ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು..!!
– ಕಲಬುರಗಿ : ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ..!!
– ಮೈಸೂರು: ಬಸ್ ಚಾಲಕನಿಗೆ ಹೃದಯಾಘಾತದಿಂದ ಪಾದಚಾರಿ ಮಹಿಳೆಯೂ ಸಾವು..!!

NAMMUR EXPRESS NEWS
ಬೆಂಗಳೂರು : ಅಲೋವೇರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೀಪಾಂಜಲಿನಗರ ನಿವಾಸಿ ನಿಧಿಕೃಷ್ಣ (14) ಮೃತ ದುರ್ದೈವಿ. ನಿಧಿ ಮಾ.14ರಂದು ಮನೆಯಲ್ಲಿ ಅಲೋವೇರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಳಾಗಿದ್ದಳು. ಬಳಿಕ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.31ರ ಮುಂಜಾನೆ ಚಿಕಿತ್ಸೆ ಫಲಿಸದೆ ನಿಧಿ ಮೃತಪಟ್ಟಿದ್ದಾಳೆ. ಈ ಸಂಬಂಧ ಆಕೆಯ ಪೋಷಕರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ನಿಧಿ ದೀಪಾಂಜಲಿ ನಗರದಲ್ಲಿ ತಾಯಿ ಸುಜಾತಾ ಜತೆಗೆ ನೆಲೆಸಿದಳು. ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆರೋಗ್ಯ ಕಾಪಾಡಿಕೊಳ್ಳಲು ಆಗಾಗ ಅಲೋವೇರಾ ಜ್ಯೂಸ್ ಕುಡಿಯುತ್ತಿದ್ದಳು. ಆಲೋವೇರಾ ಜ್ಯೂಸ್ ಖಾಲಿಯಾದ ಹಿನ್ನೆಲೆಯಲ್ಲಿ ಆ ಬಾಟಲಿಯಲ್ಲಿ ಆಕೆಯ ತಾಯಿ ತರಕಾರಿ, ಹೂವಿಗೆ ಸಿಂಪಡಿಸುವ ಕ್ರಿಮಿನಾಶಕ ತುಂಬಿಸಿಟ್ಟಿದ್ದರು. ಇದನ್ನು ಗಮನಿಸದ ನಿಧಿ, ಮಾ.14ರಂದು ಅಲೋವೇರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಕೆಲವೇ ಕ್ಷಣದಲ್ಲಿ ಅಸ್ವಸ್ಥಗೊಂಡಿದ್ದಳು. ಕೂಡಲೇ ತಾಯಿ ಸುಜಾತಾ ಹಾಗೂ ಸ್ಥಳೀಯರೂ ನಿಧಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೆ ನಿಧಿ ಮೃತಪಟ್ಟಿದ್ದಾಳೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

– ಬೆಳಗಾವಿ : ಶಾಸಕ ರಾಜು ಸಹೋದರ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು..!!

ಬೆಳಗಾವಿ : ಬೆಳಗಾವಿಯಿಂದ ಕಿತ್ತೂರು ಕಡೆ ಬರುತ್ತಿದ್ದ ಬೈಕ್‌ಗೆ ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರ ಶ್ರೀಪ್ರಸಾದ ಸಿದ್ದನಗೌಡ ಯವರ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನೊಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗೋಕಾಕನ ಬಸವರಾಜ ಪುಡುಕಲಕಟ್ಟಿ (24) ಮೃತ ವ್ಯಕ್ತಿ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದರು ಎನ್ನಲಾಗಿದೆ. ಈ ಮೂವರು ತಿಗಡೊಳ್ಳಿಯ ರಸ್ತೆಯಲ್ಲಿ ಪ್ರಾರಂಭವಾಗಿರುವ ಕೆರೆ ತುಂಬುವ ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಕೆಲಸದ ಮೇಲೆ ಹಟ್ಟಿಹೊಳಿ ಗ್ರಾಮಕ್ಕೆ ತೆರಳಿದ್ದರು. ಮರಳಿ ಕಿತ್ತೂರು ಪಟ್ಟಣಕ್ಕೆ ಬರುತ್ತಿರುವಾಗ ಈ ಅವಘಡ ಸಂಭವಿಸಿದೆ.

– ಕಲಬುರಗಿ : ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ..!!

ಕಲಬುರಗಿ : ಆತ ಸರ್ಕಾರಿ ನೌಕರ. ಮದುವೆಯಾಗಿ ಸುಖಃ ಸಂಸಾರ ನಡೆಸುತ್ತಿದ್ದ. ಅದಕ್ಕೆ ಸಾಕ್ಷಿವೆಂಬಂತೆ ಎರಡು ಮಕ್ಕಳು ಸಹ ಇದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಡೆತ್​ನೋಟ್ ಬರೆದಿಟ್ಟು ತನ್ನ ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಗಾಬರೆ ಲೇಔಟ್​ನ ಅಪಾರ್ಟ್ಮೆಂಟ್​ನಲ್ಲಿ ಘಟನೆ ನಡೆದಿದೆ. ಈ ಘನಘೋರ ಕೃತ್ಯ ‌ಕಂಡು‌ ಇಡೀ ಕಲಬುರಗಿ ಬೆಚ್ಚಿಬಿದ್ದಿದೆ. ಸ್ಟೇಷನ್ ಬಜಾರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಲಬುರಿಗಿ ಘನಘೋರ ಮತ್ತು ಕರಳು ಹಿಂಡುವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಇಂತಹದೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದು, ಸಂತೋಷ್ ಕೊರಳಿ ಎಂಬ ವ್ಯಕ್ತಿ. ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್​ ಆಗಿದ್ದ ಸಂತೋಷ್​ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.‌ ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ‌ ಮಾಡಿರುವ ಸಂತೋಷ್ ಕೊನೆಗೆ‌ ತಾ‌ನೂ ಕೂಡ ಮನೆಯ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

– ಮೈಸೂರು: ಬಸ್ ಚಾಲಕನಿಗೆ ಹೃದಯಾಘಾತ ಪಾದಚಾರಿ ಮಹಿಳೆಯೂ ಸಾವು..!!

ಮೈಸೂರು :ಬಸ್ ಚಾಲನೆ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ್ದು, ಬಳಿಕ ನಿಯಂತ್ರಣ ತಪ್ಪಿದ ಅದೇ ಬಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿ ಆಕೆಯೂ ಮೃತಪಟ್ಟ ಘಟನೆ ಎಚ್.ಡಿ. ಕೋಟೆ ತಾಲೂಕಿನ ಧಮ್ಮನಕಟ್ಟೆ ಸಮೀಪ ನಡೆದಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನಿಲ್‌ಕುಮಾರ್ ಮತ್ತು ಧಮ್ಮನಕಟ್ಟೆ ಗ್ರಾಮದ ಲಕ್ಷ್ಮಮ್ಮ ಮೃತಪಟ್ಟವರು. ಬಸ್ ಚಾಲಕನ ಸಹೋದರಿ ವಿವಾಹಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು ಮದುವೆ ಸಮಾರಂಭದಲ್ಲಿ ಸಂತಸದಿಂದಿರಬೇಕಾದ ಕುಟುಂಬದಲ್ಲಿ ಈಗ ದುಃಖ ಮಡುಗಟ್ಟಿದೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025

* ಟೈಟಾನ್ಸ್ ವಿರುದ್ಧ ತವರಲ್ಲೇ ಮುಗ್ಗರಿಸಿದ ಆರ್‌ಸಿಬಿ
* ಫೆವಿಲಿಯನ್ ಪರೇಡ್ ನಡೆಸಿದ ಆರ್‌ಸಿಬಿ

NAMMUR EXPRESS SPORTS NEWS
ಬೆಂಗಳೂರು: ಐಪಿಎಲ್ 2025ರ ಟೂರ್ನಿಯಲ್ಲಿ ಆರ್‌ಸಿ‌ಬಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿದೆ.
ಎಂ .ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ RCB ಗುಜರಾತ್ ಟೈಟಾನ್ಸ್ ವಿರುದ್ಧ 169 ರನ್‌ ಪೇರಿಸಿತ್ತು. ತಂಡವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿದ್ದು ಗುಜರಾತ್ ಟೈಟಾನ್ಸ್ ಗೆ 170 ರನ್ ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೈಟನ್ಸ್ 2 ವಿಕೆಟ್ ನಷ್ಟಕ್ಕೆ 170 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ.
ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ 49 ರನ್ ಗೆ ಔಟಾಗಿ ಅರ್ಧಶತಕ ವಂಚಿತರಾದರು. ಶುಭ್ಮನ್ ಗಿಲ್ 14 ರನ್ ಗಳಿಸಿ ಔಟಾದರು. ನಂತರ ಜೋಸ್ ಬಟ್ಲರ್ ಅಜೇಯ 73 ಮತ್ತು ಶೆರ್ಫೇನ್ ರುದರ್ಫೋರ್ಡ್ ಅಜೇಯ 30 ರನ್ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಫೆವಿಲಿಯನ್ ಪರೇಡ್ ನಡೆಸಿದ ಆರ್‌ಸಿಬಿ !!
ಆರಂಭಿಕ ಓವರ್‌ಗಳಲ್ಲಿ ಟೈಟಾನ್ಸ್ ಬೌಲರ್‌ಗಳಾದ ಅರ್ಷದ್ ಖಾನ್ ಮತ್ತು ಮೊಹಮ್ಮದ್ ಸಿರಾಜ್ ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌ನ್ನು ಧ್ವಂಸಗೊಳಿಸಿದರು. ಮೊದಲು ವಿರಾಟ್ ಕೊಹ್ಲಿ 7 ರನ್ ಗಳಿಸಿ ಔಟಾದರೆ, ದೇವದತ್ ಪಡಿಕ್ಕಲ್ ಕೂಡ 4 ರನ್ ಗಳಿಸಿ ಔಟಾದರು. ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪಾಟಿದಾರ್ ಸ್ವಲ್ಪ ಸಮಯ ತಂಡವನ್ನು ಮುನ್ನಡೆಸಿದರು, ಆದರೆ ಅವರು ಕೂಡ ಕ್ರಮವಾಗಿ 14 ಮತ್ತು 12 ರನ್ ಗಳಿಸಿ ಔಟಾದರು. ಕೇವಲ 42 ರನ್‌ಗಳಿಸುವಷ್ಟರಲ್ಲಿ ಆರ್‌ಸಿಬಿ ತನ್ನ ಮೋದಲ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಸೇರಿದಂತೆ ಎಲ್ಲಾ ಪ್ರಸಿದ್ಧ ಆಟಗಾರರು ವಿಫಲರಾದರು.
ಲಿಯಾಮ್ ಲಿವಿಂಗ್‌ಸ್ಟೋನ್ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಜಿತೇಶ್ ಶರ್ಮಾ ಅವರೊಂದಿಗೆ 52 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ಜಿತೇಶ್ 33 ರನ್‌ಗಳನ್ನು ಬಾರಿಸಿದರೆ, ಲಿವಿಂಗ್‌ಸ್ಟೋನ್ 54 ರನ್‌ಗಳ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ, ಟಿಮ್ ಡೇವಿಡ್ ಕೊನೆಯ ಓವರ್‌ನವರೆಗೂ ಕ್ರೀಸ್‌ನಲ್ಲಿಯೇ ಇದ್ದು 18 ಎಸೆತಗಳಲ್ಲಿ 32 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಇಂದು ಕೆಕೆಆರ್ ಹಾಗೂ ಸನ್ ರೈಸರ್ಸ್ ನಡುವೆ ಪಂದ್ಯ
ಇಂದು ಕೊಲ್ಕತ್ತಾದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಹಾಲಿ ರನ್ನರ್ ಅಪ್ ಹೈದ್ರಾಬಾದ್ ತಂಡಗಳ ನಡುವೆ ಪಂದ್ಯ ನಡೆಯಲಿದ್ದು,ಉಭಯ ತಂಡಗಳು ಗೆಲುವಿಗಾಗಿ ರೋಚಕ ಪೈಪೋಟಿ ನಡೆಸುವ ನಿರೀಕ್ಷೆಯಿದೆ.

Categories
ಕೊಪ್ಪ

ಕೊಪ್ಪದ ಹುಲ್ಲುಮಕ್ಕಿಯಲ್ಲಿ ಜಾತ್ರಾ ರಂಗು!

ಕೊಪ್ಪದ ಹುಲ್ಲುಮಕ್ಕಿಯಲ್ಲಿ ಜಾತ್ರಾ ರಂಗು!
– ಶ್ರೀ ದುರ್ಗಾಪರಮೇಶ್ವರಿ ಶ್ರೀ ಗುತ್ಯಮ್ಮ, ದೇವಿಯ ವಿಜೃಂಭಣೆಯ ಜಾತ್ರಾ ಮಹೋತ್ಸವ
– ದೇವಿ ಜಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರು ಜನ

NAMMUR EXPRESS NEWS
ಕೊಪ್ಪ: ನೂರಾರು ವರ್ಷಗಳ ಪುರಾಣ ಪ್ರಸಿದ್ಧ ದೇವಾಲಯ ಎಂದು ಕೀರ್ತಿ ಇರುವ ಕೊಪ್ಪ ಪಟ್ಟಣ ಸಮೀಪದ ಹುಲ್ಲುಮಕ್ಕಿಯ ಶ್ರೀ ದುರ್ಗಾಪರಮೇಶ್ವರಿ ಶ್ರೀ ಗುತ್ಯಮ್ಮ ಹಾಗೂ ಮಾರಿಯಮ್ಮ ಮತ್ತು ಪರಿವಾರ ದೇವತೆಗಳ ದೇವಸ್ಥಾನದಲ್ಲಿ ಜಾತ್ರೆ ಸಂಭ್ರಮದಿಂದ ನಡೆಯಿತು.
ಬುಧವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಮಧ್ಯಾಹ್ನ 12:30 ಕ್ಕೆ ಶ್ರೀ ಅಮ್ಮನವರ ರಥೋತ್ಸವ ಅದ್ದೂರಿಯಾಗಿ ಜರುಗಿತು. ಕೊಪ್ಪ ತಾಲೂಕಿನ ಭಕ್ತ ಜನ ಸಾಗರವೇ ತುಂಬಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಶ್ರೀ ದೇವಿಯನ್ನು ಕೂರಿಸಿದ ತೇರನ್ನು ಎಳೆದು ಶ್ರೀದೇವಿಗೆ ಹಣ್ಣು ಕಾಯಿ, ಮಂಗಳಾರತಿ ವಿವಿಧ ಸೇವೆಗಳನ್ನು ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಸ್ಥಳೀಯರು, ದೇವಸ್ಥಾನ ಸಮಿತಿ ಈ ಜಾತ್ರೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ರಾತ್ರಿಯ ಸಹ ರಥೋತ್ಸವ ನೆರವೇರಿದ್ದು ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಇಡೀ ದೇವಾಲಯ ಅಲಂಕಾರ ಮಾಡಲಾಗಿತ್ತು. ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಸೀತೂರು, ಇವರಿಂದ ಯಕ್ಷಗಾನ ರಾತ್ರಿ ಯಕ್ಷಗಾನ ನಡೆಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕೌರಿ ಪ್ರಕಾಶ್, ಹಾಗೂ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಹಾಗೂ ಭಕ್ತಾದಿಗಳ ಸೇವೆಯಿಂದ ಜಾತ್ರೆ ಸಂಪನ್ನಗೊಂಡಿತು.
ಕೊಪ್ಪದ ಎಲ್ಲಾ ಸುದ್ದಿಗಳಿಗಾಗಿ ನಮ್ಮೂರ್ ಎಕ್ಸ್ ಪ್ರೆಸ್ ವೀಕ್ಷಿಸಿ.

Categories
ಹೆಲ್ತ್ ಎಕ್ಸ್ಪ್ರೆಸ್

– ದೀರ್ಘಕಾಲದ ಕಾಯಿಲೆಗಳಿಂದ ಬಚಾವಾಗಲು ಬೀಜಗಳಿಂದಲೂ ಸಾಧ್ಯ!

ಆರೋಗ್ಯ ಎಕ್ಸ್ ಪ್ರೆಸ್

ಈ ಬೀಜಗಳು ಸಿಕ್ಕಿದ್ರೆ ಕಳ್ಕೋಬೇಡಿ!

NAMMUR EXPRESS NEWS
ಕುಂಬಳಕಾಯಿ ಬೀಜಗಳು

ಸಾಮಾನ್ಯವಾಗಿ ದೊರಕುವ ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮಿನಿಂದ ಸಮೃದ್ಧವಾಗಿದೆ. ಇದು ಮೂಳೆ ಆರೋಗ್ಯ, ಹೃದಯದ ಆರೋಗ್ಯ ಮತ್ತು ಸ್ನಾಯುವಿನ ಕಾರ್ಯಕ್ಕೆ ಮುಖ್ಯವಾಗಿದೆ. ಜೊತೆಗೆ ಇವುಗಳಲ್ಲಿರುವ ವಿಟಮಿನ್ ಇ ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುವ ಒಮೆಗಾ 3 ಕೊಬ್ಬಿನಾಮ್ಲಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕುಂಬಳಕಾಯಿ ಬೀಜ ಸೇವನೆಯು ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರಲ್ಲಿರುವ ಸತುವಿನ ಅಂಶವು ರೋಗನಿರೋಧಕತೆ, ಗಾಯದ ಚಿಕಿತ್ಸೆ ಮತ್ತು ಪ್ರೋಟೀನ್ ಸಂಶ್ಲೇಷಣೆಗೆ ಅವಶ್ಯಕವಾಗಿದೆ.

– ಸೂರ್ಯಕಾಂತಿ ಬೀಜಗಳು

ಸೂರ್ಯಕಾಂತಿ ಬೀಜಗಳು ವಿಟಮಿನ್ ಇ ಯ ಅತ್ಯುತ್ತಮ ಮೂಲ. ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ಬೀಜಗಳಲ್ಲಿರುವ ಫೈಟೊಸ್ಟೆರಾಲ್‌ಗಳು ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂರ್ಯಕಾಂತಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಕುಂಬಳಕಾಯಿ ಬೀಜಗಳಂತೆಯೇ ಸೂರ್ಯಕಾಂತಿ ಬೀಜಗಳು ಸಹ ಮೆಗ್ನೀಸಿಯಮಿನ ಉತ್ತಮ ಮೂಲವಾಗಿ ವಿವಿಧ ದೈಹಿಕ ಕಾರ್ಯಗಳು ಸುಗಮವಾಗಿ ನಡೆಯಲು ಸಹಾಯ ಮಾಡುತ್ತವೆ. ಇವುಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದು.

ಚಿಯಾ ಬೀಜಗಳು!

ಚಿಯಾ ಬೀಜಗಳಲ್ಲಿ ನಾರಿನಂಶ ಅಧಿಕವಾಗಿದೆ. ನಾರು ಆಹಾರದ ಜೀರ್ಣಕ್ರಿಯೆಯನ್ನು ಸದೃಢಗೊಳಿಸುತ್ತದೆ. ಚಿಯಾ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳ ಅತ್ಯುತ್ತಮ ಸಸ್ಯ-ಆಧಾರಿತ ಮೂಲಗಳಲ್ಲಿ ಒಂದಾಗಿವೆ. ಜೊತೆಗೆ ಮೆದುಳಿನ, ಹೃದಯದ ಆರೋಗ್ಯಕ್ಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಮುಖ್ಯವಾಗಿದೆ. ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ಚಿಯಾ ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿವೆ. ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ. ಚಿಯಾ ಬೀಜಗಳು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ನಮ್ಮ ದೇಹದಲ್ಲಿ ಮೂಳೆಗಳು ಮತ್ತು ಸ್ನಾಯುಗಳು ಸದೃಡವಾಗಿರಲು ಕ್ಯಾಲ್ಸಿಯಂ ಬಹಳ ಅವಶ್ಯಕ.

– ಎಳ್ಳು ಬೀಜಗಳು

ವಿಶಿಷ್ಟ ಸುವಾಸನೆಗೆ ಹೆಸರುವಾಸಿಯಾಗಿರುವ ಎಳ್ಳು ಬೀಜಗಳು ರುಚಿಕರ ಮಾತ್ರವಲ್ಲದೇ ಪೌಷ್ಟಿಕಾಂಶದ ಸಂಯೋಜನೆಯಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಎಳ್ಳು ಬೀಜಗಳು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಮ್ಯಾಂಗನೀಸ್, ಸತು, ವಿಟಮಿನ್ ಬಿ 1 (ಥಯಾಮಿನ್), ವಿಟಮಿನ್ ಇ ಮತ್ತು ಆಹಾರದ ಫೈಬರ್ ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ತುಂಬಿವೆ. ಈ ಪೋಷಕಾಂಶಗಳು ಒಟ್ಟಾರೆ ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಮೂಳೆಯ ಶಕ್ತಿ, ಚಯಾಪಚಯ ಕ್ರಿಯೆ ಮತ್ತು ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ. ಎಳ್ಳು ಬೀಜಗಳು ದೇಹವನ್ನು ಬಲಗೊಳಿಸುವ ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ.
ಕೆಲವು ಅಧ್ಯಯನಗಳು ಎಳ್ಳು ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಾರಿವೆ. ಎಳ್ಳು ಕರುಳಿನ ನಿಯಮಿತ ಚಲನೆಗೆ ಕಾರಣವಾಗುವ ಮೂಲಕ ಆಹಾರದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ. ಇದರಲ್ಲಿರುವ ನಾರಿನಂಶವು ಇದನ್ನು ಸೇವಿಸಿದ ನಂತರ ತೃಪ್ತಿಯ ಅನುಭವ ನೀಡುತ್ತದೆ.

– ಅಗಸೆ ಬೀಜಗಳು

ಅಗಸೆ ಬೀಜಗಳಲ್ಲಿ ಮ್ಯಾಂಗನೀಸ್, ಥಯಾಮಿನ್, ಮೆಗ್ನೀಸಿಯಮ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ಸಕ್ಕರೆ ಕಡುಬಯಕೆಗಳನ್ನು ಕಡಿಮೆ ಮಾಡಲು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಗಸೆ ಬೀಜಗಳಲ್ಲಿ ಪ್ರೋಟಿನ್, ಫೈಬರ್, ತಾಮ್ರ ಮತ್ತು ಸತು ಸಮೃದ್ಧವಾಗಿದೆ. ಅಗಸೆ ಬೀಜಗಳಲ್ಲಿರುವ ಪ್ರೋಟಿನ್ ಆಯಾಸವನ್ನು ಹೋಗಲಾಡಿಸಲು ಮತ್ತು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ಮತ್ತು ಚುರುಕುಗೊಳಿಸಲು ಸಹಾಯಕಾರಿ. ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯಕ.

ಕರಬೂಜ ಬೀಜಗಳು!

ಕರಬೂಜ ಬೀಜಗಳಲ್ಲಿರುವ ಪೊಟ್ಯಾಸಿಯಂ, ಮೆಗ್ನೀಸಿಯಂ ಅಂಶಗಳು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ. ಈ ಬೀಜಗಳ ಸೇವನೆಯು ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಬಿಳಿ ರಕ್ತ ಕಣಗಳ ಹೆಚ್ಚಳವು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಕಫ, ಶೀತ ಮತ್ತು ಜ್ವರದಂತಹ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇವುಗಳಲ್ಲಿರುವ ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ರಂಜಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರುರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರು ತಮ್ಮ ಬಗ್ಗೆ ಗಮನ ಹರಿಸಬೇಕು. ನಿಮ್ಮ ಮಾತಿನ ಮೇಲೆ ನಿಯಂತ್ರಣವಿಲ್ಲದ ಕಾರಣ ಯಾರೊಂದಿಗಾದರೂ ವಾದ ಅಥವಾ ಜಗಳವಾಡುವ ಸಾಧ್ಯತೆ ಇದೆ. ಮಹಿಳೆಯರಿಂದ ನಿಮಗೆ ಲಾಭವಾಗಲಿದೆ. ಮನಸ್ಸಿನ ದುಃಖವು ನಿಮ್ಮಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತರುತ್ತದೆ. ಇಂದು ಬಹಳಷ್ಟು ಹಣ ಖರ್ಚಾಗಲಿದೆ. ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ.

** ವೃಷಭ ರಾಶಿ :
ಇಂದು ಆದಾಯ ಹೆಚ್ಚಾಗುತ್ತದೆ. ಕೌಟುಂಬಿಕ ಬಂಧಗಳು ಬಲವಾಗಿದ್ದರೂ, ಜೀವನ ಸಂಗಾತಿಯನ್ನು ಹುಡುಕುವಲ್ಲಿ ನೀವು ನಿರಾಶೆಯನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಅವಕಾಶಗಳು ಸಿಗಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ಉತ್ತಮವಾಗಿರಲಿದೆ. ಬಟ್ಟೆ, ಆಭರಣ, ಸೌಂದರ್ಯವರ್ಧಕಗಳು ಮತ್ತು ಮನರಂಜನೆಗಾಗಿ ಖರ್ಚುಗಳು ಇರುತ್ತವೆ.

** ಮಿಥುನ ರಾಶಿ :
ಇಂದು ಹೊಸ ಆಸ್ತಿ ಖರೀದಿಸುವ ಸಾಧ್ಯತೆಗಳಿವೆ. ದಿನವು ಏರಿಳಿತಗಳಿಂದ ತುಂಬಿರಬಹುದು. ನಿಮ್ಮ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ವ್ಯವಹರಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಅನಾರೋಗ್ಯ ಅಥವಾ ಅಪಘಾತದ ಸಾಧ್ಯತೆ ಇದೆ, ಆದ್ದರಿಂದ ಆ ವಿಷಯದಲ್ಲಿ ಜಾಗರೂಕರಾಗಿರಿ.

** ಕರ್ಕಾಟಕ ರಾಶಿ :
ಆರ್ಥಿಕ ವಿಷಯಗಳಿಗೆ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಒಳ್ಳೆಯ ದಿನ. ವ್ಯಾಪಾರ, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ ಮತ್ತು ಆದಾಯದ ಮೂಲಗಳಲ್ಲಿನ ಹೆಚ್ಚಳದಿಂದಾಗಿ ನೀವು ಬಹಳಷ್ಟು ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುವಿರಿ. ಸ್ನೇಹಿತರು, ಪತ್ನಿ, ಮಗ ಮುಂತಾದವರಿಂದ ನಿಮಗೆ ಶುಭ ಸುದ್ದಿ ಸಿಗುತ್ತದೆ. ಶುಭ ಘಟನೆಗಳು ನಡೆಯಲಿವೆ.

** ಸಿಂಹ ರಾಶಿ :
ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಇಂದು ಲಾಭದಾಯಕ ಮತ್ತು ಯಶಸ್ವಿ ದಿನವಾಗಿರುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಪ್ರಾಬಲ್ಯ ಮತ್ತು ಪ್ರಭಾವವನ್ನು ಪಡೆಯಲು ಸಾಧ್ಯವಾಗುತ್ತದೆ. ಪೂರ್ಣ ವಿಶ್ವಾಸ ಮತ್ತು ಬಲವಾದ ಮನೋಸ್ಥೈರ್ಯದಿಂದ, ನಿಮ್ಮ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ. ನಿಮ್ಮ ಕೆಲಸವನ್ನು ಉನ್ನತ ಅಧಿಕಾರಿಗಳು ಮೆಚ್ಚುತ್ತಾರೆ. ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ತಂದೆಯಿಂದ ಲಾಭ ದೊರೆಯಲಿದೆ.

** ಕನ್ಯಾ ರಾಶಿ :
ಇಂದು ನಿಮಗೆ ಯಾವುದಾದರೂ ತೀರ್ಥಯಾತ್ರೆಯ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ವಿದೇಶ ಪ್ರಯಾಣಕ್ಕೆ ಅವಕಾಶಗಳು ಸೃಷ್ಟಿಯಾಗಲಿವೆ. ನಿಮ್ಮ ಸಹೋದರರಿಂದ ನಿಮಗೆ ಲಾಭವಾಗುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ನಿಮಗೆ ಆರ್ಥಿಕ ಲಾಭಗಳು ಸಿಗುತ್ತವೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉಳಿಯುತ್ತದೆ.

** ತುಲಾ ರಾಶಿ :
ಇಂದು ನಿಮಗೆ ಅನಿರೀಕ್ಷಿತ ಆರ್ಥಿಕ ಲಾಭದ ದಿನ. ದಿನವು ನಿಮಗೆ ಶುಭಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಆದರೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಆಧ್ಯಾತ್ಮಿಕ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಲು ಮತ್ತು ಸಾಧನೆಗಳನ್ನು ಸಾಧಿಸಲು ಇದು ಒಳ್ಳೆಯ ದಿನ. ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸುತ್ತಾರೆ.

** ವೃಶ್ಚಿಕ ರಾಶಿ :
ಇಂದು ಕೆಲವು ಸವಾಲುಗಳು ಎದುರಾಗಬಹುದು, ಅದನ್ನು ನೀವು ಸುಲಭವಾಗಿ ಜಯಿಸುವಿರಿ. ಇಂದು ನೀವು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಬೆಂಬಲ ಪಡೆಯುತ್ತೀರಿ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಹೊಸ ಬಟ್ಟೆ ಮತ್ತು ವಾಹನ ಸಿಗಲಿದೆ. ಪಾಲುದಾರಿಕೆಯಿಂದ ಲಾಭ ದೊರೆಯಲಿದೆ. ನೀವು ವೈವಾಹಿಕ ಜೀವನದ ಅತ್ಯುತ್ತಮ ಕ್ಷಣಗಳನ್ನು ಅನುಭವಿಸುವಿರಿ.

** ಧನಸ್ಸು ರಾಶಿ :
ಇಂದು ನಿಮಗೆ ಲಾಭದಾಯಕ ದಿನ. ಆರ್ಥಿಕ ಲಾಭದ ಸಾಧ್ಯತೆ ಇದೆ. ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ಸಹೋದ್ಯೋಗಿಗಳು ನಿಮಗೆ ಸಹಾಯಕರಾಗುತ್ತಾರೆ. ನಿಮ್ಮ ಕೆಲಸದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನುಗಳಿಸುವಿರಿ. ವಿರೋಧಿಗಳು ಮತ್ತು ಶತ್ರುಗಳು ತಮ್ಮ ಯೋಜನೆಗಳಲ್ಲಿ ವಿಫಲರಾಗುತ್ತಾರೆ. ಇಂದು ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ ಮತ್ತು ಪ್ರವಾಸಗಳಿಗೆ ಹೋಗಿ.

** ಮಕರ ರಾಶಿ :
ಇಂದು ನೀವು ಸಕಾರಾತ್ಮಕ ಬದಲಾವಣೆಗಳನ್ನು ನೋಡಬಹುದು. ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ವ್ಯವಹಾರ ವಿಷಯಗಳಲ್ಲಿ ಸಂಯಮ ವಹಿಸುವ ಅವಶ್ಯಕತೆಯಿದೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಜನರು ಇಂದು ತಮ್ಮ ಕಾರ್ಯಕ್ಷೇತ್ರದಲ್ಲಿ ವಿಶೇಷ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ.

** ಕುಂಭ ರಾಶಿ :
ಇಂದು ನಿಮ್ಮ ಸ್ವಭಾವತಃ ಅತಿಯಾದ ಭಾವನಾತ್ಮಕತೆಯಿಂದಾಗಿ ಮಾನಸಿಕ ಚಡಪಡಿಕೆ ಇರುತ್ತದೆ. ಹಠಮಾರಿತನವೂ ಇರುತ್ತದೆ. ಸಾರ್ವಜನಿಕವಾಗಿ ಮಾನಹಾನಿಯಾಗದಂತೆ ಎಚ್ಚರ ವಹಿಸಿ. ಪ್ರಣಯ ಜೀವನದಲ್ಲಿ ಗೊಂದಲ ಉಂಟಾಗಬಹುದು. ಕುಟುಂಬ ಸದಸ್ಯರೊಂದಿಗೆ ಮಾಧುರ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

** ಮೀನ ರಾಶಿ :
ಕೆಲಸದಲ್ಲಿ ಯಶಸ್ಸು ಪಡೆಯಲು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಅತ್ಯುತ್ತಮ ದಿನ. ನಿಮ್ಮ ಆಲೋಚನೆಗಳಲ್ಲಿ ಸ್ಥಿರತೆ ಇರುತ್ತದೆ, ಇದರಿಂದಾಗಿ ಯಾವುದೇ ಕೆಲಸವನ್ನು ಚೆನ್ನಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಬಹುದು.

Categories
ಮಂಗಳೂರು

ಮಂಗಳೂರಲ್ಲಿ ತಂಪೆರೆದ ಮಳೆರಾಯ!

ಮಂಗಳೂರಲ್ಲಿ ತಂಪೆರೆದ ಮಳೆರಾಯ! 

– ಸುಳ್ಯ, ಬಂಟ್ವಾಳ, ಪುತ್ತೂರಿನಲ್ಲೂ ಧಾರಾಕಾರ ಮಳೆ
– ಮುಂದಿನ ನಾಲ್ಕೈದು ದಿನ ಮಳೆ ಬರುವ ಸಂಭವ

NAMMUR EXPRESS NEWS
ಮಂಗಳೂರು: ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಕರಾವಳಿಗರಿಗೆ ವರುಣ ಕೊನೆಗೂ ತಂಪೆರೆದಿದ್ದಾನೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಭೂಮಿಯೂ ತಂಪಾಗಿದೆ.
ಉಡುಪಿ, ಕಾಪು, ಕಾರ್ಕಳದ ಕಡೆ ತುಂತುರು ಮಳೆಯಾಗಿದ್ದು ಸುಳ್ಯ, ಪುತ್ತೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ.
ಬಂಟ್ವಾಳ ತಾಲ್ಲೂಕು, ಬಿಸಿರೋಡು, ಗುರುಪುರ ಎಲ್ಲೆಡೆ
ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಇದ್ದಕಿದ್ದಂತೆ ಮಳೆ ಸುರಿದಿದೆ. ಕಡುಬಿಸಿಲಿನಲ್ಲಿ ಜನ ಹೊರಗೆ ಬರಲು ಇಷ್ಟವಾಗದ ವಾತಾವರಣ ಏರ್ಪಟ್ಟಿತ್ತು. ಇದೀಗ ಭೂಮಿ ತಂಪಾಗಿದೆ.
ಮುಂದಿನ ನಾಲ್ಕೈದು ದಿನ ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Categories
ಬೆಂಗಳೂರು

ಚಿನ್ನದ ಬೆಲೆ ದಿಢೀರ್ ಭಾರೀ ಏರಿಕೆ!!

ಚಿನ್ನದ ಬೆಲೆ ದಿಢೀರ್ ಭಾರೀ ಏರಿಕೆ!!

– 10 ಗ್ರಾಂ ಚಿನ್ನಕ್ಕೆ 95,000 ರೂ
– ಇನ್ಮುಂದೆ ಚಿನ್ನ ಖರೀದಿಯೂ ಕಷ್ಟ ಕಷ್ಟ!

NAMMUR EXPRESS NEWS
ಬೆಂಗಳೂರು: ಚಿನ್ನದ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ದಿನಗಳ ಹಿಂದೆ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಆದರೆ ಈಗ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. ಆಶ್ಚರ್ಯ ಏನಂದ್ರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇದೀಗ 2000 ದಿಢೀರ್ ಏರಿಕೆ ಕಂಡಿದ್ದು, ಈ ಮೂಲಕ 10 ಗ್ರಾಂ ಚಿನ್ನಕ್ಕೆ ಒಟ್ಟು 95,000 ರೂ.
ಏ. 1ರಂದು ಮಂಗಳವಾರ ಒಂದೇ ದಿನ 10 ಗ್ರಾಂ ಚಿನ್ನದ ಎರಡು ಸಾವಿರ ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 94,000 ರೂ., ಬೆಂಗಳೂರಿನಲ್ಲಿ 95,000 ರೂ.ಗೆ ತಲುಪಿ ಹೊಸ ದಾಖಲೆ ಬರೆದಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಪರಿಶುದ್ಧ ಚಿನ್ನದ ಗಟ್ಟಿಯ ದರ 95,890 ರೂಪಾಯಿಗೆ ತಲುಪಿದೆ. ಸರಾಸರಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 94,150 ರೂಪಾಯಿಗೆ ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಚಿನ್ನದ ದರದಲ್ಲಿ ಶೇಕಡ 35ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಈ ಸಮಯದಲ್ಲಿ 68,000 ರೂ.ಇದ್ದ ಚಿನ್ನದ ದರ ಈಗ 95,000 ರೂ.ಗೆ ತಲುಪಿದೆ, 27 ಸಾವಿರ ರೂಪಾಯಿ ಏರಿಕೆಯಾಗಿದೆ.

Categories
ಹಾಸನ

ಎಚ್ಚರ ಎಚ್ಚರ ಹೆಚ್ಚಾಗ್ತಿದೆ ಕಾಡಾನೆಗಳ ಹಾವಳಿ!

ಎಚ್ಚರ ಎಚ್ಚರ ಹೆಚ್ಚಾಗ್ತಿದೆ ಕಾಡಾನೆಗಳ ಹಾವಳಿ!

– E. T. F ಕಂಟ್ರೋಲ್ ರೂಮ್, ಅರಣ್ಯ ಇಲಾಖೆ ಹಾಸನದಿಂದ ಪ್ರಕಟಣೆ!
– ಗ್ರಾಮಸ್ಥರೇ ಎಚ್ಚರಿಕೆ, ತುರ್ತು ಸಹಾಯವಾಣಿ ಬಿಡುಗಡೆ

NAMMUR EXPRESS NEWS
ಹಾಸನ: ಸಕಲೇಶಪುರ ತಾಲ್ಲೂಕಿನ ಮೈಲಹಳ್ಳಿ ಎಸ್ಟೇಟ್ ಹಾಗೂ ನಂದಿವನ ಎಸ್ಟೇಟ್ ಉದಯವರ, ರಾಮಚಂದ್ರ ಅವರ ತೋಟ ಇಬ್ಬಡಿ ಶಾಂತಪುರ, ಕಲ್ಲರಲ್ಲಿ ಗ್ರಾಮದ ಎಬಿಸಿ ಎಸ್ಟೇಟ್ ಸುತ್ತಮುತ್ತ ಕಾಡಾನೆಗಳು ಕಂಡುಬರುತ್ತಿದೆ.
ಹೆತ್ತೂರು, ಯಸಳೂರು, ಹೋಬಳಿಯ
ಮೊದಲಮಕ್ಕಿ ಬೆಟ್ಟಕುಮಾರಿ, ಎಡಕುಮಾರಿ ಗ್ರಾಮದ ರೈಲ್ವೆ ಟನಲ್ ರೋಡ್, ಕೆಳ ಹಾಡ್ಯ ಗ್ರಾಮದ ಲೋಕೇಶ್ ಅವರ ಕಾಡು ಮತ್ತು ರಮೇಶ ಅವರ ತೋಟ, ಮೆಕ್ಕಿರ ಮನೆ ಗ್ರಾಮದ ಹಳೆದಿಣ್ಣೆ ಫಾರೆಸ್ಟ್, ಬಾಣಗೇರಿ ಬೆಟ್ಟ, ಮೆಕ್ಕಿರ ಮನೆ ಗ್ರಾಮದ ಶೆಟ್ಟಿ ಕಾಡು ಮತ್ತು ಮಠದ ಕಾಡು, ಬೋರನಮನೆ ಕಡಚಲು, ದೊಡ್ಡಗದ್ದೆ ಹೊರಟಿ ಗ್ರಾಮದ ಸುತ್ತಮುತ್ತ ಕಾಡಾನೆಗಳದ್ದೇ ಹಾವಳಿ.
ಬೇಲೂರು ತಾಲ್ಲೂಕಿನ ಕಾನಳ್ಳಿ ಫಾರೆಸ್ಟ್ , ಜಾಕನಹಳ್ಳಿ ಎಸ್ಟೇಟ್ ಚಾಕನಹಳ್ಳಿ ಮತ್ತು ಶಿರಗೂರ, ಲತೀಫ್ ಅವರ ಕಾಡು ಬಕ್ಕರವಳ್ಳಿ ಸುತ್ತಮುತ್ತ, ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಬೈಸೂರು ಫಾರೆಸ್ಟ್ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಿರುತ್ತವೆ.
ಆದ್ದರಿಂದ ಈ ಜಿಲ್ಲೆಯಲ್ಲಿನ ಗ್ರಾಮಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾಗಿ E. T. F. ಕಂಟ್ರೋಲ್ ರೂಮ್, ಅರಣ್ಯ ಇಲಾಖೆ ಹಾಸನ ಈ ಮೂಲಕ ವಿನಂತಿಕೊಂಡಿದೆ. ಹಾಗೂ ಈ ಸಂದರ್ಭದಲ್ಲಿ ತುರ್ತು ಸಹಾಯವಾಣಿ 9480817460ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಕಾರ್ಕಳ

ಅಜೆಕಾರಿನಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪ್ರಕರಣ, ಆರೋಪಿಗೆ ಜಾಮೀನು!

ಅಜೆಕಾರಿನಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪ್ರಕರಣ, ಆರೋಪಿಗೆ ಜಾಮೀನು!

– ಪ್ರಿಯಕರ ದಿಲೀಪ್ ಹೆಗ್ಡೆಗೆ ಬಿಗ್ ರಿಲೀಫ್!
– ರಾಜ್ಯ ಹೈಕೋರ್ಟ್ ಜಾಮೀನು ನೀಡಿ ಆದೇಶ!

NAMMUR EXPRESS NEWS
ಕಾರ್ಕಳ: ಕಾರ್ಕಳದ ಅಜೆಕಾರಿನಲ್ಲಿ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆಗೈದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಲಕೃಷ್ಣ ಎಂಬವರನ್ನು ಅವರ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಹತ್ಯೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಇಲ್ಲಿಯವರೆಗೆ ಅವರು ಹಾಕುತ್ತಿದ್ದ ಜಾಮೀನು ಅರ್ಜಿಯನ್ನು ಕೂಡಾ ನ್ಯಾಯಾಲಯ ರಿಜೆಕ್ಟ್ ಮಾಡುತ್ತಿತ್ತು. ಆದರೆ ಇದೀಗ ಆರೋಪಿ ದಿಲೀಪ್ ಹೆಗ್ಡೆಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ದಿಲೀಪ್ ಹೆಗ್ಡೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆ ಆತ ಹೈಕೋರ್ಟ್ ಗೆ ಅರ್ಜಿ ಹಾಕಿದ್ದನು.
ಆರೋಪಿ ಪರವಾಗಿ ವಕೀಲರು ನಿಶ್ಚಿತ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದು ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರ ಏಕಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.

Categories
ಹೆಲ್ತ್ ಎಕ್ಸ್ಪ್ರೆಸ್

ಫ್ಯಾಟಿ ಲಿವರ್, ಚರ್ಮದ ಕ್ಯಾನ್ಸರ್, ಹೃದಯದ ಆರೋಗ್ಯಕ್ಕೆ ಉಪಯುಕ್ತ ಸೀಮೆ ಬದನೆಕಾಯಿ!

ಆರೋಗ್ಯ ಎಕ್ಸ್ ಪ್ರೆಸ್

ಪಾಸಿಟಿವ್ ಲೈಫ್

ಫ್ಯಾಟಿ ಲಿವರ್, ಚರ್ಮದ ಕ್ಯಾನ್ಸರ್, ಹೃದಯದ ಆರೋಗ್ಯಕ್ಕೆ ಉಪಯುಕ್ತ ಸೀಮೆ ಬದನೆಕಾಯಿ!

NAMMUR EXPRESS NEWS
ಸೋರೆಕಾಯಿ ಜಾತಿಗೆ ಸೇರಿದ ಸೀಮೆ ಬದನೆಕಾಯಿಯಲ್ಲಿ ಸಾಕಷ್ಟು ಆರೋಗ್ಯಕಾರಿ ಅಂಶಗಳಿದ್ದು, ಮಾರಣಾಂತಕ ಚರ್ಮದ ಕ್ಯಾನ್ಸರ್, ಬೊಜ್ಜಿಗೆ ಕಾರಣವಾಗುವ ಫ್ಯಾಟಿ ಲಿವರ್ ಮತ್ತು ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಪ್ರಭಾವಕಾರಿಯಾಗಬಲ್ಲದು. ಸೋರೆಕಾಯಿ ಜಾತಿಗೆ ಸೇರಿದ ಸೀಮೆ ಬದನೆಕಾಯಿಯಲ್ಲಿ ಸಾಕಷ್ಟು ಆರೋಗ್ಯಕಾರಿ ಅಂಶಗಳಿದ್ದು, ಮಾರಣಾಂತಕ ಚರ್ಮದ ಕ್ಯಾನ್ಸರ್, ಬೊಜ್ಜಿಗೆ ಕಾರಣವಾಗುವ ಫ್ಯಾಟಿ ಲಿವರ್ ಮತ್ತು ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಪ್ರಭಾವಕಾರಿಯಾಗಿದೆ.

ಚರ್ಮದ ಕ್ಯಾನ್ಸರ್ ಸಮಸ್ಯೆಗೆ ಉಪಯುಕ್ತ ಸೀಮೆ ಬದನೆಕಾಯಿ!

ವೈದ್ಯರ ಪ್ರಕಾರ ಸೀಮೆಬದನೆಕಾಯಿ ತನ್ನಲ್ಲಿ ಎರಡು ಪ್ರಭೇದದ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಸಪೋನಿನ್ ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿದೆ. ಇವುಗಳು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ ನೀಡುತ್ತವೆ. ಸೀಮೆ ಬದನೆಕಾಯಿಯ ಒಳ ಭಾಗದಲ್ಲಿ ಹಾಗೂ ಮೇಲ್ಭಾಗದ ಸಿಪ್ಪೆಯಲ್ಲಿ ಮಾರಕ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡುವ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಇದು ಚರ್ಮದ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣಾತ್ಮಕ ಹಾಗೂ ಪರಿಣಾಮಕಾರಿ ಪ್ರಭಾವ ಬೀರುತ್ತದೆ.

ಗರ್ಭಿಣಿಯರಿಗೆ

ಗರ್ಭಿಣಿಯಾಗಿರುವ ಅಥವಾ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಫೋಲೇಟ್ ಅತ್ಯಗತ್ಯ ಪೋಷಕಾಂಶವಾಗಿದೆ. ವಿಟಮಿನ್ B9 ಎಂದೂ ಕರೆಯಲ್ಪಡುವ ಫೋಲೇಟ್ ಭ್ರೂಣದ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ಫೋಲೇಟ್ ಮಗುವಿನ ಅಕಾಲಿಕ ಜನನವನ್ನು ತಡೆಯಲು ಸಹಾಯ ಮಾಡುತ್ತದೆ.ಯಕೃತ್ತಿನ ಆರೋಗ್ಯ (ಲಿವರ್)
ಚಯೋಟ್ ಅಥವಾ ಸೀಮೆಬದನೆಕಾಯಿ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯ ವಿರುದ್ಧ ರಕ್ಷಿಸುವ ಸಂಯುಕ್ತಗಳನ್ನು ಹೊಂದಿದೆ. ಸೀಮೆ ಬದನೆಕಾಯಿಯ ಪಲ್ಯ ಪಿತ್ತಜನಕಾಂಗದಲ್ಲಿ ಕೊಬ್ಬಿನಾಮ್ಲಗಳನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರವು ದೇಹದ ಚಯಾಪಚಯ ಮತ್ತು ಕೊಬ್ಬನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ಸೀಮೆ ಬದನೆಕಾಯಿಯಲ್ಲಿರುವ ಫೈಟೊಕೆಮಿಕಲ್‌ಗಳು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಸೀಮೆಬದನೆಕಾಯಿಯಲ್ಲಿ ಮೈರಿಸೆಟಿನ್ ಸೇರಿದಂತೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಕೆಲವು ಕಾಯಿಲೆಗಳ ಅಭಿವೃದ್ಧಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಸೀಮೆಬದನೆಕಾಯಿ ಕಾರ್ಬೋಹೈಡ್ರೇಟ್‌ಗಳಲ್ಲಿ ತುಲನಾತ್ಮಕವಾಗಿ ಕಡಿಮೆ ಮತ್ತು ಯಥೇಚ್ಛ ಫೈಬರ್‌ ಅಧಿಕವಾಗಿ ಹೊಂದಿದೆ. ಇದು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪೌಷ್ಟಿಕಾಂಶದ ಸಂಯೋಜನೆಯಾಗಿದೆ. ಇದರಲ್ಲಿನ ಹೆಚ್ಚಿನ ಪ್ರಮಾಣದ ಫೈಬರ್‌ನ ಅಂಶವು ಕಡಿಮೆ ತಿಂದರೂ ನೀವು ಹೊಟ್ಟೆ ತುಂಬ ತಿಂದ ಅನುಭವ ನೀಡುತ್ತದೆ. ಇದರಲ್ಲಿನ ಫೈಬರ್ ನಿಮ್ಮ ದೇಹದ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ನಿಯಂತ್ರಣ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೀಮೆ ಬದನೆಕಾಯಿಯಲ್ಲಿನ ರಾಸಾಯನಿಕ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಟೈಪ್ 2 ಡಯಾಬಿಟಿಸ್ ಇರುವವರಿಗೆ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ವಯಸ್ಸಾಗುವಿಕೆ ನಿಧಾನಗೊಳಿಸುತ್ತದೆ

ಸೀಮೆಬದನೆಕಾಯಿ ತಿನ್ನುವುದರಿಂದ ಉರಿಯೂತ ಮತ್ತು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸೀಮೆಬದನೆಕಾಯಿ ಮೆಟಬಾಲಿಕ್ (ಚಾಯಾಪಚಯಕ್ರಿಯೆ) ಸಿಂಡ್ರೋಮ್‌ನ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಯಂತಹ ಸೀಮೆ ಬದನೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ನಿಮ್ಮ ದೇಹವನ್ನು ಜೀವಕೋಶದ ಹಾನಿಯಿಂದ ರಕ್ಷಿಸಲು ಮತ್ತು ದೇಹದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.