Categories
ಕುಂದಾಪುರ

ಬದಲಾಗಲಿದೆ ಮೂಕಾಂಬಿಕಾ ಎಕ್ಸ್‌ಪ್ರೆಸ್ ರೈಲು!?

ಬದಲಾಗಲಿದೆ ಮೂಕಾಂಬಿಕಾ ಎಕ್ಸ್‌ಪ್ರೆಸ್ ರೈಲು!?
– ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಸಂಸದ ರಾಘವೇಂದ್ರ ಮನವಿ
– ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣಕ್ಕೆ ಪ್ಲಾನ್?

NAMMUR EXPRESS NEWS
ಕುಂದಾಪುರ: ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ವಾರಕ್ಕೊಮ್ಮೆ ಇರುವ ರೈಲು ಸಂಖ್ಯೆ 10215/10216 ರೈಲನ್ನು ಮೂಕಾಂಬಿಕಾ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿ ದಿನಂಪ್ರತಿ ಸೇವೆ ನೀಡುವಂತೆ ಮನವಿ ಮಾಡಲಾಯಿತು.
ಇದರೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಸೌಲಭ್ಯ ಅಭಿವೃದ್ಧಿ, ಬಿಜೂರು ರೈಲು ನಿಲ್ದಾಣ ಹಾಗೂ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕ ಮೆಮು, ಮತ್ಸ್ಯಗಂಧ ಹಾಗೂ ಪಂಚಗಂಗಾ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಮನವಿ ಮಾಡಲಾಯಿತು.
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ತಿಳಿಸಿದ್ದಾರೆ.

ಗಂಗೊಳ್ಳಿ- ಕುಂದಾಪುರ ‘ಸೇತುವೆ ಪುನ‌ರ್ ನಿರ್ಮಿಸಲು ಮನವಿ

ಕುಂದಾಪುರ: ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣ ಹಾಗೂ ಶಿಥಿಲವಾಗಿರುವ ಅರಾಟೆ ಸೇತುವೆ ಪುನರ್ ನಿರ್ಮಾಣ ಮಾಡುವಂತೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಗಂಗೊಳ್ಳಿಯಿಂದ ಕುಂದಾಪುರ ಕೂಗಳತೆಯ ದೂರದಲ್ಲಿದ್ದರೂ ಸೇತುವೆಯ ಸಂಪರ್ಕವಿಲ್ಲದೆ ಸುಮಾರು 18 ಕಿ.ಮೀ. ಸುತ್ತಿ ಬಳಸಿ ಕುಂದಾಪುರ ತಲುಪಬೇಕಾಗಿದೆ. ಗ್ರಾಮಸ್ಥರಿಗೆ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಸೇತುವೆಯ ನಿರ್ಮಾಣದಿಂದ ವಾಣಿಜ್ಯ ವಹಿವಾಟಿಗೂ ಅನುಕೂಲ. ಬಹುಕಾಲದ ಬೇಡಿಕೆಯಾದ ಗಂಗೊಳ್ಳಿ ಕುಂದಾಪುರ ಸೇತುವೆ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-66 ರಲ್ಲಿನ ಅರಾಟೆ ಸೇತುವೆ ಶಿಥಿಲಗೊಂಡಿದ್ದು, ಹಲವಾರು ತಿಂಗಳುಗಳಿಂದ ಚತುಷ್ಪಥದಲ್ಲಿ ಸಂಚರಿಸಬೇಕಾದ ವಾಹನಗಳು ದ್ವಿಪಥದಲ್ಲಿ ಸಂಚಾರ ಮಾಡುತ್ತಿವೆ. ಆದಷ್ಟು ಶೀಘ್ರ ಹಳೆಯ ಅರಾಟೆ ಸೇತುವೆ ಪುನ‌ರ್ ನಿರ್ಮಾಣ ಆಗಬೇಕು. ಬೈಂದೂರು ತಾಲ್ಲೂಕು ಕಚೇರಿ ಬಳಿ ಅಂಡ‌ರ್ ಪಾಸ್ ನಿರ್ಮಿಸಲು ಹಾಗೂ ಒತ್ತಿನೆಣೆ ರಾಘವೇಂದ್ರ ಮಠದವರೆಗೆ ಸರ್ವಿಸ್ ರಸ್ತೆ ನಿರ್ಮಿಸಲು ಕ್ರಮ ಎಂದು ಸಚಿವರು ಮನವಿ ಮಾಡಿದ್ದಾರೆ.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories
ಕೃಷಿ ಮಲ್ನಾಡ್

ಬಿಸಿಲು ಮುಖ ನೋಡಿದ ಜನ: ರೈತರು ಖುಷ್..!

ಬಿಸಿಲು ಮುಖ ನೋಡಿದ ಜನ: ರೈತರು ಖುಷ್..!
– ಅಡಿಕೆ ಬೆಳೆಗಾರರಿಗೆ ಸಂತಸ : ಕೊಳೆ ರೋಗದಿಂದ ಪಾರು?
– ಎಲ್ಲಡೆ ಆವರಿಸಿದ ಕಾರ್ಮೋಡ: 2 ತಿಂಗಳು ದಿನ ಬಿಡದೆ ಮಳೆ!

NAMMUR EXPRESS NEWS
ಮಲೆನಾಡು: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ ಭಾರೀ ಮಳೆ ಆಗಿದ್ದು, ಜೂನ್ ಮತ್ತು ಜುಲೈ ತಿಂಗಳಲ್ಲಿ ಎಡೆಬಿಡದೆ ಮಳೆ ಸುರಿದಿದೆ. ಇದೀಗ ಕೊಂಚ ಬಿಸಿಲಿನ ಛಾಯೆ ಕಾಣುತ್ತಿದೆ.
ಆಗಸ್ಟ್ ತಿಂಗಳ ಆರಂಭದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ, ಬೇಸಿಗೆ ಬಿಸಿಲು ಬೀಳಲಾರಂಭಿಸಿದೆ.
ಎಲ್ಲ ಜಲಾಶಯಗಳು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿದೆ. ಹಲವೆಡೆ ಭಾರೀ ಮಳೆಯಿಂದ ಅತೀವೃಷ್ಟಿ ಭೀತಿ ಎದುರಾಗುವಂತಾಗಿತ್ತು. ತಾಲೂಕುಗಳಲ್ಲಿ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹದಲ್ಲಿ ತೀವ್ರ ಹೆಚ್ಚಳವಾಗಿದೆ.
ಮಳೆ ಕೊಂಚ ಕಡಿಮೆಯಾಗಿರುವುದರಿಂದ ರೈತರಿಗೆ ಒಂದು ರೀತಿಯ ಸಂತಸ ಎಂದೇ ಹೇಳಬಹುದು ಕೊಳೆ ರೋಗವನ್ನು ನಿಯಂತ್ರಣ ಮಾಡಬಹುದು ಎಂದು ರೈತರ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಾದರೂ ಕೂಡ ಮಳೆ ಕಡಿಮೆ ಆದರೆ ಔಷಧಿ ಸಿಂಪಡಣೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ಅನೇಕ ಅಡಿಕೆ ಮರಗಳಿಗೆ ಕೊಳೆ ರೋಗ ಆವರಿಸಿದೆ, ಇದರಿಂದ ರೈತರಿಗೆ ಕಂಗಾಲು ಕೂಡ ಎದುರಾಗಿದೆ. ಮತ್ತೊಂದೆಡೆ, ಮಳೆ ಕೊರೆತೆಯು ಭತ್ತದ ಬೆಳೆಯ ಮೇಲೆಯೂ ಪರಿಣಾಮ ಬೀರುವಂತೆ ಮಾಡಿದೆ. ಹಲವೆಡೆ ಭತ್ತ ನಾಟಿ ವಿಳಂಬವಾಗಿಸಿದೆ. ಮತ್ತೆ ಕೆಲವೆಡೆ ಕಡಿಮೆ ನೀರು ಬಯಸುವ ಬೆಳೆಗಳತ್ತ ರೈತರು ಗಮನ ಹರಿಸಲಾರಂಭಿಸಿದ್ದಾರೆ.

Categories
ಕಾರ್ಕಳ

ಕ್ರೈಸ್ಟ್ ಕಿಂಗ್ ಶಾಲೆ ಕ್ರೀಡೆಯಲ್ಲೂ ಕಿಂಗ್…!

ಕ್ರೈಸ್ಟ್ ಕಿಂಗ್ ಶಾಲೆ ಕ್ರೀಡೆಯಲ್ಲೂ ಕಿಂಗ್…!

– ಕಾಲೇಜಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟಕ್ಕೆ ಆಯ್ಕೆ: ಶಟಲ್ ಬ್ಯಾಡ್ಮಿಂಟನ್‌ ಕ್ರೀಡಾಪಟುಗಳ ಸಾಧನೆ
* ಕ್ರೈಸ್ಟ್ ಕಿಂಗ್ ಬಾಲಕಿಯರ ಹಾಗೂ ಬಾಲಕರ ತಂಡ ಶ್ರೇಷ್ಠ ಪ್ರದರ್ಶನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ.
* ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಪ್ರಾಬಲ್ಯ: ತಂಡಗಳ ಸಾಧನೆಗೆ ಅಭಿನಂದನೆ

NAMMUR EXPRESS NEWS
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಕಳ ಇವರ ಆಶ್ರಯದಲ್ಲಿ ಶ್ರೀ ಭುವನೇಂದ್ರ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ಬಾಲಕಿಯರ ಹಾಗೂ ಪ್ರೌಢಶಾಲಾ ಬಾಲಕರ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ.
ಪ್ರಾಥಮಿಕ ವಿಭಾಗದಲ್ಲಿ ಎಂಟನೇ ತರಗತಿಯ ಖುಷಿ ಶೆಟ್ಟಿ ಮತ್ತು ವಿಶ್ಮಿತಾ, ಆರನೇ ತರಗತಿಯ ತ್ರಿಷ್ಮ ಎಸ್ ಮತ್ತು ಕೆಟ್ಲಿನ್ ಏಂಜೆಲ್ ಪಿಂಟೊ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಹತ್ತನೇ ತರಗತಿಯ ಗೌರವ್ ಆರ್, ಪ್ರಥಮ್ ಶೆಟ್ಟಿ, ಶೋಭಿತ್ ಕೆ.ಎಚ್ ಮತ್ತು ಒಂಬತ್ತನೇ ತರಗತಿಯ ಗ್ಯಾಲ್ವಿನ್ ಜೋಯಲ್ ಪಿಂಟೊ (ವಿದ್ಯೋಪಾರ್ಜ್ ಗುರುಕುಲಂ) ಆಯ್ಕೆಯಾಗಿದ್ದಾರೆ.

ಈ ತಂಡಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣ ಪ್ರಸಾದ್, ಪ್ರಕಾಶ್ ನಾಯ್ಕ್ ಹಾಗೂ ಕು. ಲಾವಣ್ಯ ಮಾರ್ಗದರ್ಶನ ನೀಡಿದರು.  

Categories
ಚಿಕ್ಕಮಗಳೂರು

ಬಾಳೆಹೊನ್ನೂರು ಕಾಡಾನೆ ಆಪರೇಷನ್!

ಬಾಳೆಹೊನ್ನೂರು ಕಾಡಾನೆ ಆಪರೇಷನ್!
* ಹೇಗಿತ್ತು ಕಾಡಾನೆ ಸೆರೆ ಕಾರ್ಯಾಚರಣೆ…?
* ಸಕ್ರೇಬೈಲ್‌ನ ಕುಮ್ಕಿ ಆನೆ ತಂಡದಿಂದ ಒಂದು ಪುಂಡಾನೆ ಸೆರೆ
* ಮತ್ತೆರಡು ಕಾಡಾನೆ ಹಿಡಿಯೋದು ಯಾವಾಗ?

NAMMMUR EXPRESS NEWS
ಬಾಳೆಹೊನ್ನೂರು: ಮಲೆನಾಡು ಭಾಗದಲ್ಲಿ ಕಳೆದೊಂದು ವರ್ಷದಿಂದ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರ ಜಮೀನಿಗೆ ನುಗ್ಗಿ ರೈತ ಬೆಳೆದ ಬೆಳೆ ನಾಶ ಮಾಡುತ್ತಿವೆ. ಕಾಡಾನೆ ದಾಳಿಗೆ ಶೃಂಗೇರಿ ಕ್ಷೇತ್ರದಲ್ಲಿ ಕಳೆದ 8 ತಿಂಗಳಲ್ಲಿ 5 ಮಂದಿ ಬಲಿಯಾಗಿದ್ದು ಕಳೆದ ಕೇವಲ 4 ದಿನಗಳಲ್ಲಿ ಬಾಳೆಹೊನ್ನೂರು ಭಾಗದ ಬನ್ನೂರು ಹಾಗೂ ಅಂಡವಾನೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದಿತ್ತು. ಇದರಿಂದ ರೊಚ್ಚಿಗೆದ್ದ ಜನ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ರಾತ್ರೋರಾತ್ರಿ ಪ್ರತಿಭಟಿಸಿದರು,

ಬಾಳೆಹೊನ್ನೂರು,ಖಾಂಡ್ಯ ಹೋಬಳಿ ಸಂಪೂರ್ಣ ಬಂದ್

ಬಾಳೆಹೊನ್ನೂರು,ಖಾಂಡ್ಯ ಹೋಬಳಿ ಸಂಪೂರ್ಣ ಬಂದ್ ಮಾಡಿ ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಕರೆ ಕೊಟ್ಟರು,ಎಲ್ಲಾ ರಾಜಕೀಯ ಪಕ್ಷಗಳು,ವಿವಿಧ ಸಂಘಟನೆ,ಸಂಘ ಸಂಸ್ಥೆಗಳು,ಸಾರ್ವಜನಿಕರೆಲ್ಲಾ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರು,ಮಾಜಿ ಶಾಸಕರು,ರಾಜ್ಯ ನಾಯಕರುಗಳೆಲ್ಲ ಭಾಗವಹಿಸಿ ಸ್ಥಳಕ್ಕೆ ಡಿ ಸಿ,ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್,ಅರಣ್ಯ ಸಚಿವ ಈಶ್ವರ್ ಖಂಡ್ರೆ ಬರುವಂತೆ ಪಟ್ಟು ಹಿಡಿದರು. ಕಾಡು ಪ್ರಾಣಿಗಳು ಮಾನವನ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ

ಪರಿಸ್ಥಿತಿಯ ತೀವ್ರತೆ ಅರಿತು ಹಾಗೂ ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ ತಕ್ಷಣವೇ ಕಾಡಾನೆ ಸೆರೆಗೆ ಆದೇಶಿಸಿ ಸಕ್ರೇಬೈಲ್ ಕುಮ್ಕಿ ಆನೆಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿ,ಅರವಳಿಕೆ ತಜ್ಞರು,ಕಾರ್ಯಾಚರಣೆಗೆ ವಿಶೇಷ ತಜ್ಞರನ್ನು ಕಳುಹಿಸಿತು. ಕಾರ್ಯಾಚರಣೆ ಆರಂಭವಾಗಿ ಒಂದು ದಿನದ ನಂತರ ಹವಾಮಾನ, ಭಾರೀ ಮಳೆಯಂತಹ, ಹಲವು ಸವಾಲುಗಳ ನಡುವೆ ಒಂದು ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದ್ದು,ಸೆರೆ ಹಿಡಿದ ಕಾಡಾನೆಯನ್ನು ಸಕ್ರೇಬೈಲ್‌ಗೆ ರವಾನಿಸಲಾಗಿದೆ. ಇನ್ನೊಂದು ಕಾಡಾನೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮೂರು ಆನೆ ಇವೆ…

ಸದ್ಯ ಇಲಾಖೆಯಿಂದ ಎರಡು ಕಾಡಾನೆಗಳ ಸೆರೆಗೆ ಆದೇಶವಿದ್ದು ಆದರೆ ಕ್ಷೇತ್ರದಲ್ಲಿ ಮೂರು ಕಾಡಾನೆಗಳಿಂದ ಉಪಟಳ ಹೆಚ್ಚಾಗಿದೆ. ಆ ಮೂರು ಕಾಡಾನೆಗಳನ್ನು ಸೆರೆಹಿಡಿಯ ಬೇಕೆಂಬ ಒತ್ತಾಯ ಮೊದಲಿನಿಂದಲೂ ಕೇಳಿ ಬಂದಿದೆ. ಸದ್ಯ ಸೆರೆ ಸಿಕ್ಕಿರುವುದು ಮರಿಯಾನೆಯಾಗಿದ್ದು ದಾಳಿ ಮಾಡಿ ಇಬ್ಬರನ್ನು ಬಲಿ ತೆಗೆದುಕೊಂಡ ಆನೆ ಬೇರೆಯದೇ ಇದೆ ಎಂಬ ಚರ್ಚೆಗಳು ಸ್ಥಳೀಯರಿಂದ ಕೇಳಿಬರುತ್ತಿದೆ. ಅದೇನೆ ಇರಲಿ ತೊಂದರೆ ಕೊಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿದು ರೈತರು,ಸಾರ್ವಜನಿಕರ ಜೀವ ಜೀವನವನ್ನು ಇಲಾಖೆ,ಸರ್ಕಾರ ರಕ್ಷಿಸಿಬೇಕಾಗಿದೆ ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ.

Categories
ಕಾರ್ಕಳ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ “ಮುದ್ದು ಕೃಷ್ಣ ಮತ್ತು ಮುದ್ದು ರಾಧಾ” ಮಕ್ಕಳ ಫೋಟೋ ಸ್ಪರ್ಧೆ – 2025

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ “ಮುದ್ದು ಕೃಷ್ಣ ಮತ್ತು ಮುದ್ದು ರಾಧಾ” ಮಕ್ಕಳ ಫೋಟೋ ಸ್ಪರ್ಧೆ – 2025 

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆಯಾದ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಕಾರ್ಕಳವಲಯದಲ್ಲಿ “ಮುದ್ದು ಕೃಷ್ಣ ಹಾಗೂ ಮುದ್ದು ರಾಧಾ ಮಕ್ಕಳ ಫೋಟೋ ಸ್ಪರ್ಧೆ 2025” ಆಯೋಜಿಸಲಾಗಿದೆ.

ಸೂಚನೆಗಳು:
– ಸ್ಪರ್ಧೆ 1 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗಾಗಿ.
– ಭಾಗವಹಿಸುವ ಸ್ಪರ್ಧಾಳಿಗಳು ಪ್ರತಿ ಮಕ್ಕಳಿಗೆ 2 ಫೋಟೋಗಳನ್ನು ಕಳುಹಿಸಬಹುದು.
– ಕಡ್ಡಾಯವಾಗಿ ಫೋಟೋಗಳು ಎಸ್.ಕೆ.ಪಿ.ಎ ಗುರುತಿನ ಚೀಟಿ ಹೊಂದಿರುವ ಫೋಟೋಗ್ರಾಫರ್ ಕೈಯಿಂದ ತೆಗೆದ ಛಾಯಾಚಿತ್ರವಾಗಿರಬೇಕು.
– ಫೋಟೋ ಜೊತೆಗೆ ಮಗು ಹೆಸರು ಮತ್ತು ಹುಟ್ಟು ಸರ್ಟಿಫಿಕೇಟ್ ಪ್ರತಿ ಹಾಗೂ (ಎಸ್.ಕೆ.ಪಿ.ಎ) ಐಡಿ ಪ್ರತಿ ಸಲ್ಲಿಸಬೇಕು.
– ಫೋಟೋಗಳ ಅಳತೆ 6×9 ಇಂಚುಗಳ ಇರಬೇಕು.
– ಫೋಟೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 17 ಆಗಸ್ಟ್ 2025.
– ಫೋಟೋಗಳನ್ನು ಕಳುಹಿಸುವ ವಿಳಾಸ: KHUSHI DIGITAL, Mahalaxmi Prabha Complex, Market Road, Karkala 574104.
– ಸಂಪರ್ಕ ಸಂಖ್ಯೆ: 9845702860, 8885111996, 9900112204.

Categories
ಕಾರ್ಕಳ

ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಅರಿವು ಮೂಡಿಸಿದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ – ಶ್ರೀ ದುರ್ಗಾ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಅರಿವು ಮೂಡಿಸಿದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ – ಶ್ರೀ ದುರ್ಗಾ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸಹಯೋಗದಲ್ಲಿ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಡುರಸ್ತೆ, ಕುಕ್ಕುಂದೂರು ಇಲ್ಲಿ ದಿನಾಂಕ 26.07.2025 ಶನಿವಾರ ” ತಾಯಿ ಮತ್ತು ಮಗುವಿನ ಆರೋಗ್ಯ”ಎಂಬ ವಿಷಯದ ಕುರಿತು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ರೋಟರಿ ವಲಯ ಸೇನಾನಿ ರೋ. ಪ್ರಶಾಂತ ಬೆಳಿರಾಯ , ಕಾರ್ಯದರ್ಶಿಗಳಾದ ರೋ.ರಾಘವೇಂದ್ರ ಕಾಮತ್, ಪೂರ್ವಾಧ್ಯಕ್ಷರಾದ ರೋ ಸುರೇಶ್ ನಾಯಕ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿನ ಪ್ರಸೂತಿ ತಜ್ಞರಾದ ಡಾಕ್ಟರ್ ಕೃಷ್ಣಾನಂದ ಮಲ್ಯ, ಪ್ರಾಥಮಿಕ ಆರೋಗ್ಯ ಘಟಕ, ನಕ್ರೆ ಕುಕ್ಕುಂದೂರು ಇಲ್ಲಿನ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀವಿದ್ಯಾ ಎಸ್ ಕಿದಿಯೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾಕ್ಟರ್ ಕೃಷ್ಣಾನಂದ ಮಲ್ಯ ರವರು ಗರ್ಭಿಣಿ ಮಹಿಳೆಯರ ಆರೋಗ್ಯ, ಆಹಾರ ಪದ್ಧತಿ, ಪೌಷ್ಟಿಕಾಂಶಗಳ ಮಾಹಿತಿ, ಮಾನಸಿಕ ಆರೋಗ್ಯದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು . ಡಾಕ್ಟರ್ ಶ್ರೀವಿದ್ಯಾರವರು ಮಕ್ಕಳ ಆರೋಗ್ಯ, ಆಹಾರ ಪದ್ಧತಿ, ಪೌಷ್ಟಿಕತೆಯ ಅವಶ್ಯಕತೆಯ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳನ್ನು ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ವತಿಯಿಂದ ಗೌರವಿಸಲಾಯಿತು. ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿಯ ಅಧ್ಯಕ್ಷರಾದ ರೊಟೊರಿಯನ್ ಸುರೇಂದ್ರ ನಾಯಕ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಹಣ್ಣು ಹಂಪಲು ಗಳನ್ನು ಕ್ಲಬ್ ವತಿಯಿಂದ ವಿತರಿಸಲಾಯಿತು.

Categories
ಚಿಕ್ಕಮಗಳೂರು

ಶೃಂಗೇರಿ ತಾಲೂಕಿನಲ್ಲಿ ಯುವ ನಿಧಿ ವಿಶೇಷ ನೋಂದಣಿ ಹಾಗೂ ಪೋಸ್ಟರ್ ಬಿಡುಗಡೆ

ಶೃಂಗೇರಿ ತಾಲೂಕಿನಲ್ಲಿ ಯುವ ನಿಧಿ ವಿಶೇಷ ನೋಂದಣಿ ಹಾಗೂ ಪೋಸ್ಟರ್ ಬಿಡುಗಡೆ

* ಶ್ರೀಜೆಸಿಬಿಎಂ ಕಾಲೇಜು ಹಾಗೂ ಸರ್ಕಾರಿ.ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ
* ಯುವ ಜನತೆ ಈ ಯೋಜನೆ ಉಪಯೋಗ ಪಡೆದುಕೊಳ್ಳುವಂತೆ ಮಾಹಿತಿ

NAMMMUR EXPRESS NEWS
ಶೃಂಗೇರಿ: ನಿರುದ್ಯೋಗಿ ಯುವ ಜನತೆಗಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವ ನಿಧಿ ಯೋಜನೆಯ ಕುರಿತಾದ ಪೋಸ್ಟರ್ ಬಿಡುಗಡೆ ಹಾಗೂ ವಿಶೇಷ ನೋಂದಣಿ ಕಾರ್ಯಕ್ರಮವನ್ನು ತಾಲೂಕಿನ ಜೆ ಸಿ ಬಿ ಎಂ ಕಾಲೇಜು,ಶೃಂಗೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮೆಣಸೆ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರದ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ ಇದರ ಸದ್ಬಳಕೆಯನ್ನು ಯುವ ಜನತೆ ತಮ್ಮ ನಿರುದ್ಯೋಗದ ದಿನಗಳಲ್ಲಿ ಉಪಯೋಗಿಸಿಕೊಳ್ಳುವಂತೆ ಕೋರಲಾಯಿತು. ನಂತರ ಯೋಜನೆಯ ವಿಶೇಷ ನೋಂದಣಿಗೆ ಚಾಲನೆ ನೀಡಲಾಯಿತು.
ಜೆ ಸಿ ಬಿ ಎಂ ಕಾಲೇಜಿನಲ್ಲಿ ಪ್ರಾಂಶುಪಾಲರಾದ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದರೆ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೆಣಸೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಭಾರತೀ‌ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಉಳಿದಂತೆ ತಾಲೂಕಿನ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಕೆ.ಎಸ್ ರಾಜು,ಶೃಂಗೇರಿ ಪೊಲೀಸ್ ಠಾಣೆಯ ಎಎಸ್ಐ ಮೋಹನ್ ಕುಮಾರ್, ತಾಲೂಕು ಪಂಚಾಯ್ತಿ ಇ ಓ ಸುದೀಪ್,ಪ್ರವೀಣ್ ಸೇರಿದಂತೆ ಗ್ಯಾರಂಟಿ ಸದಸ್ಯರುಗಳಾದ ಇಂದ್ರಜಿತ್ ಹೆಗ್ಡೆ,ಅರುಣ್ ಗುಣಿತಲು,ಕೃಷ್ಣನ್ನ್,ಸುಹಿಲ್ ಬಾಷಾ,ಕಿರಣ್ ಹಾಲಂದೂರು,ಚಂದ್ರಮತಿ,ಧನಲಕ್ಷ್ಮಿ,ಸುಷ್ಮಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.

Categories
ಕಾರ್ಕಳ

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಮತ್ತು ಲಿಯೋ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಇದರ ಜಂಟಿ ಆಶ್ರಯದಲ್ಲಿ ಉಚಿತ ಯೋಗ ಶಿಬಿರ

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಮತ್ತು ಲಿಯೋ ಕ್ಲಬ್‌
ಕಾರ್ಕಳ ಕ್ರಿಯೇಟಿವ್‌ ಇದರ ಜಂಟಿ ಆಶ್ರಯದಲ್ಲಿ ಉಚಿತ ಯೋಗ ಶಿಬಿರ

ಆ. 1-15 : ಉಚಿತ ಯೋಗ ಶಿಬಿರ

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಮತ್ತು ಲಿಯೋ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಇದರ ಜಂಟಿ ಆಶ್ರಯದಲ್ಲಿ ಉಚಿತ 15 ದಿನಗಳ ಉಚಿತ ಯೋಗ ಶಿಬಿರವನ್ನು ಆ. 1 ರಿಂದ 15ರವರೆಗೆ ಆಯೋಜಿಸಲಾಗಿದೆ. ಖ್ಯಾತ್‌ ಯೋಗ ಗುರು ಮುಂಬೈ ಮಂಜುನಾಥ ಪೂಜಾರಿಯ ಅವರ ತರಬೇತಿಯಲ್ಲಿ ಈ ಯೋಗ ಶಿಬಿರವು ನಡೆಸಲಾಗುವುದು. ಕಾರ್ಕಳದ ಜೋಡುರಸ್ತೆಯ ಶ್ರೀನಿಧಿ ಸಂಕೀರ್ಣದ ಮೊದಲ ಮಹಡಿ ಕುಂಭಶ್ರೀ ಸೊಸೈಟಿ ಬಳಿ ಯೋಗ ತರಬೇತಿಯು ನಡೆಸಲಾಗುವುದು. ಉಚಿತ ಯೋಗ ಶಿಬಿರದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬೇಕಾಗಿ ಅಧ್ಯಕ್ಷ ಗೋಪಾಲ್‌ ಅಂಚನ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9980255418, 7676401958, 9110450964 ದೂರವಾಣಿಗೆ ಸಂಪರ್ಕಿಸಬಹುದಾಗಿದೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಶುಭ ದಿನವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಹಣಕಾಸಿನ ಲಾಭ ದೊರೆಯುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣದ ಸಾಧ್ಯತೆ ಇರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ವೃತ್ತಿಜೀವನಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿ ನಿಮಗೆ ಸಿಗುತ್ತದೆ.

** ವೃಷಭ ರಾಶಿ :
ಈ ದಿನವು ವೃಷಭ ರಾಶಿಯವರ ಜೀವನದಲ್ಲಿ ಹೊಸ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಕೆಲಕವರು ದುಬಾರಿ ಆಭರಣಗಳನ್ನು ಖರೀದಿಸಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ, ಆದರೆ ಮನೆಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಕುಟುಂಬ ಸದಸ್ಯರೊಂದಿಗೆ ಸಂಭಾಷಣೆಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ. ಇಂದು ನಿಮಗೆ ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ದಿನದ ಆರಂಭದಲ್ಲಿ ಆದಾಯ ಹೆಚ್ಚಳಕ್ಕೆ ಅವಕಾಶಗಳಿವೆ.

** ಮಿಥುನ ರಾಶಿ :
ಇಂದು ತುಂಬಾ ಶುಭ ದಿನವಾಗಲಿದೆ. ಹೊಸ ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆಗಳಿವೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭಗಳು ದೊರೆಯುತ್ತವೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಸರ್ಕಾರಿ ನೌಕರರು ಹೊಸ ಸ್ಥಳಗಳಿಗೆ ವರ್ಗಾವಣೆಯಾಗಬಹುದು. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುತ್ತೀರಿ.

** ಕರ್ಕಾಟಕ ರಾಶಿ :
ಇಂದು ನೀವು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯುತ್ತವೆ. ಇಂದು ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಇಂದು, ಹೊಸ ಆಲೋಚನೆಗಳೊಂದಿಗೆ ಕಚೇರಿ ಸಭೆಗಳಲ್ಲಿ ಭಾಗವಹಿಸಿ. ವೃತ್ತಿಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ. ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಿ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರು ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ತರಾತುರಿಯಲ್ಲಿ ಹಣವನ್ನು ಖರ್ಚು ಮಾಡಲು ನಿರ್ಧರಿಸಬೇಡಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಕೆಲವರಿಗೆ ಹೊಸ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುವುದು. ಸಂಬಂಧಿಕರೊಂದಿಗೆ ಕೆಲವು ಕುಟುಂಬ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯ ಜನರು ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಕಚೇರಿಯಲ್ಲಿ ಬಾಸ್ ನಿಮ್ಮ ಕೆಲಸವನ್ನು ಹೊಗಳುತ್ತಾರೆ. ಭಾವನೆಗಳಲ್ಲಿ ಏರುಪೇರು ಸಾಧ್ಯ. ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಅತಿಯಾದ ಕೋಪವನ್ನು ತಪ್ಪಿಸಿ. ಇಂದು ನೀವು ಶೈಕ್ಷಣಿಕ ಕೆಲಸದಲ್ಲಿ ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತೀರಿ.

** ತುಲಾ ರಾಶಿ :
ಇಂದು ತುಲಾ ರಾಶಿಯ ಜನರು ವ್ಯಾಪಾರದಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ. ಕೆಲವರನ್ನು ವರ್ಗಾವಣೆ ಮಾಡಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಸಾಕಷ್ಟು ನಿದ್ರೆ ಪಡೆಯಿರಿ. ಕೆಲಸದ ಒತ್ತಡವನ್ನು ಮನೆಗೆ ತರಬೇಡಿ.

** ವೃಶ್ಚಿಕ ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವಂತರು. ಚಿಂತನಶೀಲವಾಗಿ ಮಾಡಿದ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಆದರೆ ಮಾನಸಿಕ ಅಶಾಂತಿ ಇರುತ್ತದೆ. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಕೆಲವರಿಗೆ ಆಸ್ತಿ ವಿಚಾರದಲ್ಲಿ ವಿವಾದಗಳಿರಬಹುದು. ರಾತ್ರಿ ವೇಳೆ ಜಾಗರೂಕತೆಯಿಂದ ವಾಹನ ಚಲಾಯಿಸಿ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ.

** ಧನಸ್ಸು ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಕೆಲವು ಜನರು ಉತ್ತಮ ಪ್ಯಾಕೇಜ್‌ನೊಂದಿಗೆ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಪ್ರಗತಿಗೆ ಅನೇಕ ಅವಕಾಶಗಳಿವೆ. ಕೆಲವರಿಗೆ ಚರ್ಮದ ಅಲರ್ಜಿ ಸಮಸ್ಯೆಗಳಿರಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ.

** ಮಕರ ರಾಶಿ :
ಇಂದು ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ನೀವು ಭೂಮಿ ಮತ್ತು ವಾಹನದ ಆನಂದವನ್ನು ಪಡೆಯುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮಾತಿನಲ್ಲಿ ಮಾಧುರ್ಯ ಇರುತ್ತದೆ. ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ.

** ಕುಂಭ ರಾಶಿ :
​ಕುಂಭ ರಾಶಿಯ ಜನರು ಇಂದು ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುವಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆದರೆ ಕೆಲಸಗಳು ವಿಳಂಬವಾಗಲಿದೆ. ಎಲ್ಲಾ ಕೆಲಸಗಳು ಮಧ್ಯಂತರವಾಗಿ ನಡೆಯುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ.

** ಮೀನ ರಾಶಿ :
ಇಂದು ಮೀನ ರಾಶಿಯವರಿಗೆ ಆರ್ಥಿಕ ಲಾಭಕ್ಕಾಗಿ ಅನೇಕ ಅವಕಾಶಗಳು ಸಿಗುತ್ತವೆ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುವಿರಿ. ಸಹೋದ್ಯೋಗಿಗಳು ಕಚೇರಿಯಲ್ಲಿ ಬೆಂಬಲವನ್ನು ಪಡೆಯುತ್ತಾರೆ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಇಂದು, ಸೃಜನಶೀಲತೆ ಮತ್ತು ನವೀನ ಆಲೋಚನೆಗಳೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕಚೇರಿಯಲ್ಲಿ ಬಾಸ್ ನಿಮ್ಮ ಕೆಲಸವನ್ನು ಹೊಗಳುತ್ತಾರೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗಾಧವಾದ ಯಶಸ್ಸನ್ನು ಪಡೆಯುತ್ತಾರೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS
ಸರಕು
58859-68600-88410

ಬೆಟ್ಟೆ
53724-58700-60919

ರಾಶಿ
48009-56400-57599

ಗೊರಬಲು
18010-29200-32199