Categories
ಅಡಿಕೆ-ದರ

ಇಂದಿನ ಅಡಿಕೆ ದರ ಎಷ್ಟಿದೆ?

ಇಂದಿನ ಅಡಿಕೆ ದರ ಎಷ್ಟಿದೆ?
– ಅಡಿಕೆ ದರ ಏರಿಕೆ ಏರಿಕೆಯಾಗುತ್ತಿದೆಯೋ? ಇಳಿಕೆಯಾಗುತ್ತಿದೆಯೋ?

NAMMUR EXPRESS NEWS

ಬೆಟ್ಟೆ: 50109 – 60239

ಸರಕು: 81300 – 96196

ಗೊರಬಲು: 17890 – 31111

ರಾಶಿ: 45009 – 57599

Categories
ಕೃಷಿ ಮಲ್ನಾಡ್

ಮಲೆನಾಡಲ್ಲಿ ಕೃಷಿ ಚಟುವಟಿಕೆ ಜೋರು!

ಮಲೆನಾಡಲ್ಲಿ ಕೃಷಿ ಚಟುವಟಿಕೆ ಜೋರು!
– ಮಲೆನಾಡಿನ ಗದ್ದೆಗಳಲ್ಲಿ ಸಸಿ ನಾಟಿ ಸೊಬಗು
– ಕಡಿಮೆಯಾದ ಮಳೆ: ಅಡಿಕೆ ತೋಟಗಳತ್ತ ಹೊರಟ ರೈತರು

NAMMUR EXPRESS NEWS
ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಭತ್ತದ ನಾಟಿ ಮಾಡುವ ಕಾರ್ಯ ಆರಂಭವಾಗಿದೆ. ಎಲ್ಲೆಲ್ಲೂ ಹಸಿರು ಕಾಣುತ್ತಿದೆ. ನಾಟಿ ಕೆಲಸಕ್ಕೆ ಆಗಮಿಸಿರುವ ಅನೇಕ ಮಹಿಳೆಯರು ನಾಟಿ ಮಾಡುವ ಜೊತೆಗೆ ಜನಪದ ಗೀತೆಗಳನ್ನು ಹಾಡುತ್ತಾ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಅಡಿಕೆ ಬೆಳೆ ಹೆಚ್ಚಾದಂತೆ ಭತ್ತದ ಬೆಳೆ ಕಡಿಮೆ ಆಗಿದೆ. ಆದರೂ ಅನೇಕ ಭಾಗದಲ್ಲಿ ನಾಟಿ ಶುರುವಾಗಿದೆ. ಮಳೆಯೂ ಕೂಡ ಹೆಚ್ಚಾಗಿದ್ದು ಮಳೆಯನ್ನು ಕೂಡ ಲೆಕ್ಕಿಸದೆ ಕೆಲಸಗಾರರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಅಡಿಕೆ ತೋಟಗಳತ್ತ ಹೊರಟ ರೈತರು

ಅಡಿಕೆ ತೋಟಗಳತ್ತ ಹೊರಟ ರೈತರುಭಾರೀ ಮಳೆ ಕಾರಣ ಈ ಬಾರಿ ಕೆಲವು ಕಡೆ 4-5 ಬಾರಿ ಆಡಿಕೆಗೆ ಔಷಧಿ ಹೊಡೆಯಲಾಗಿದೆ. ಭಾರೀ ಮಳೆ ಗಾಳಿ ಕಾರಣ ತೋಟಕ್ಕೆ ರೈತರು ಹೋಗುವುದಕ್ಕೂ ಕಷ್ಟವಾಗಿತ್ತು. ಇದೀಗ ಒಂದೆರಡು ದಿನಗಳಿಂದ ಮಳೆ ಬಿಟ್ಟ ಕಾರಣ ರೈತರು ತೋಟದ ಕಡೆಗೆ ಮುಖ ಮಾಡುತ್ತಿದ್ದಾರೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರು ಸವಾಲುಗಳನ್ನು ಸುಲಭವಾಗಿ ಜಯಿಸುತ್ತೀರಿ. ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯದಿಂದ ಮಾಡುವ ಕೆಲಸ ಯಶಸ್ವಿಯಾಗುತ್ತದೆ. ನಿಮ್ಮ ಮೇಲೆ ನಂಬಿಕೆ ಇಡಿ ಮತ್ತು ಜೀವನದ ಪ್ರತಿಯೊಂದು ಅಂಶದಲ್ಲೂ ಧೈರ್ಯವನ್ನು ಕಾಪಾಡಿಕೊಳ್ಳಿ. ನೀವು ಕೆಲಸದಲ್ಲಿ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಹಾದಿ ಸುಗಮವಾಗುತ್ತದೆ.

** ವೃಷಭ ರಾಶಿ :
ಇಂದು ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ, ಆದರೆ ಮನಸ್ಸು ತೊಂದರೆಗೊಳಗಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯ ಮಾಡಬಹುದು. ಕುಟುಂಬದಲ್ಲಿ ನಿಮಗೆ ಗೌರವ ಸಿಗುತ್ತದೆ. ವಾಹನ ಸೌಕರ್ಯ ಹೆಚ್ಚಾಗುತ್ತದೆ. ನೀವು ಶಕ್ತಿ ಮತ್ತು ಧೈರ್ಯದಿಂದ ತುಂಬಿರುತ್ತೀರಿ. ಪ್ರೇಮ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಇದು ಅತ್ಯುತ್ತಮ ಸಮಯ.

** ಮಿಥುನ ರಾಶಿ :
ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ತೊಂದರೆಗೊಳಗಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿವಿಧ ಆದಾಯದ ಮೂಲಗಳಿಂದ ಹಣಕಾಸಿನ ಲಾಭದ ಸಾಧ್ಯತೆ ಇರುತ್ತದೆ, ಆದರೆ ನಿಮ್ಮ ಖರ್ಚು ಮತ್ತು ಆದಾಯವನ್ನು ಸಮತೋಲನಗೊಳಿಸಲು ಪ್ರಯತ್ನಿಸಿ.

** ಕರ್ಕಾಟಕ ರಾಶಿ :
ಇಂದು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಕಟಕ ರಾಶಿಯವರು ಇಂದು ಸ್ನೇಹಿತರು ಮತ್ತು ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ನಿಮಗೆ ಲಾಭದ ಅವಕಾಶಗಳು ಸಿಗುತ್ತವೆ. ಕೆಲಸದ ಬಗ್ಗೆ ಅಸಡ್ಡೆ ಮಾಡಬೇಡಿ ಮತ್ತು ಕಠಿಣ ಪರಿಶ್ರಮದಿಂದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ. ಕಚೇರಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಿಂದ ಕೆಲವರು ನಷ್ಟವನ್ನು ಅನುಭವಿಸಬಹುದು.

** ಸಿಂಹ ರಾಶಿ :
ಮನಸ್ಸು ತೊಂದರೆಗೊಳಗಾಗುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳಿವೆ. ಸರ್ಕಾರದಿಂದ ನಿಮಗೆ ಬೆಂಬಲ ಸಿಗುತ್ತದೆ. ಆದಾಯ ಹೆಚ್ಚಾಗುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯದ ಬಗ್ಗೆ ಗಮನ ಕೊಡಿ. ಜಂಕ್ ಫುಡ್ ಅನ್ನು ತಪ್ಪಿಸಿ ಮತ್ತು ಒತ್ತಡದಿಂದ ದೂರವಿರಿ. ಸ್ವ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಯ ತೆಗೆದುಕೊಳ್ಳಿ.

** ಕನ್ಯಾ ರಾಶಿ :
ಇಂದು ಮನಸ್ಸು ಸಂತೋಷವಾಗಿರುತ್ತದೆ. ಆತ್ಮವಿಶ್ವಾಸವೂ ತುಂಬಿರುತ್ತದೆ. ತಾಯಿಯ ಆರೋಗ್ಯವನ್ನು ನೋಡಿಕೊಳ್ಳಿ. ಹೆಚ್ಚು ಓಡಾಟ ಇರುತ್ತದೆ. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಆಸ್ತಿ ಅಥವಾ ಷೇರುಗಳಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬಹುದು. ಹೊಸ ಹಣಕಾಸು ಯೋಜನೆಯನ್ನು ರೂಪಿಸಿ ಮತ್ತು ದೀರ್ಘಾವಧಿಯ ಹೂಡಿಕೆಯ ಮೇಲೆ ಕೇಂದ್ರೀಕರಿಸಿ.

** ತುಲಾ ರಾಶಿ :
ಇಂದು ಮನಸ್ಸು ಚಂಚಲವಾಗಿರುತ್ತದೆ. ಶಾಂತವಾಗಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಮಾಡಬಹುದು. ಆದಾಯ ಹೆಚ್ಚಾಗುತ್ತದೆ. ಪ್ರಣಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ ಮತ್ತು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಿ. ಇಂದು ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಸವಾಲುಗಳಿಲ್ಲ ಮತ್ತು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

** ವೃಶ್ಚಿಕ ರಾಶಿ :
ಇಂದು ವೃಶ್ಚಿಕ ರಾಶಿಯವರು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕಲೆ ಅಥವಾ ಸಂಗೀತದ ಕಡೆಗೆ ನಿಮ್ಮ ಒಲವು ಹೆಚ್ಚಾಗಬಹುದು. ವ್ಯವಹಾರವು ಬೆಳೆಯುತ್ತದೆ. ನಿಮಗೆ ಲಾಭದ ಅವಕಾಶಗಳು ಸಿಗುತ್ತವೆ. ವ್ಯವಹಾರದಲ್ಲಿ ಬಹಳಷ್ಟು ಓಡಾಟ ಇರುತ್ತದೆ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ. ಇಂದು, ವಿಶೇಷ ವ್ಯಕ್ತಿಯೊಬ್ಬರು ನಿಮ್ಮ ಜೀವನವನ್ನು ಪ್ರವೇಶಿಸಬಹುದು. ನೀವು ಹೊಸ ಪ್ರಣಯ ಪ್ರಯಾಣವನ್ನು ಪ್ರಾರಂಭಿಸಬಹುದು.

** ಧನಸ್ಸು ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ನಿಮ್ಮ ಮನಸ್ಸು ಕೂಡ ತೊಂದರೆಗೊಳಗಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಮನೆಯಲ್ಲಿ ಮತ್ತು ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬಹುದು. ಗೌರವ ಹೆಚ್ಚಾಗುತ್ತದೆ. ನಿಮಗೆ ಉಡುಗೊರೆಯಾಗಿ ಬಟ್ಟೆಗಳು ಸಿಗಬಹುದು. ಈ ವಾರ ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳು ಇರುವುದಿಲ್ಲ.

** ಮಕರ ರಾಶಿ :
ಇಂದು ಮನಸ್ಸು ಸಂತೋಷವಾಗಿರುತ್ತದೆ. ಮಾತಿನ ಪ್ರಭಾವ ಹೆಚ್ಚಾಗುತ್ತದೆ. ವ್ಯವಹಾರ ಬೆಳೆಯುತ್ತದೆ. ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇರುತ್ತದೆ. ಈ ವಾರ ಬಹಳ ಮುಖ್ಯವಾಗಿರುತ್ತದೆ. ಜೀವನದಲ್ಲಿ ಅನೇಕ ರೋಮಾಂಚಕಾರಿ ತಿರುವುಗಳು ಬರುತ್ತವೆ. ನೀವು ಏರಿಳಿತಗಳಿಂದ ತುಂಬಿದ ಕ್ಷಣಗಳನ್ನು ಎದುರಿಸುತ್ತೀರಿ.

** ಕುಂಭ ರಾಶಿ :
ಇಂದು ನಿಮಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸಿನಲ್ಲಿ ಏರಿಳಿತಗಳು ಇರುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ಕೆಲಸದಲ್ಲಿ ಅಧಿಕಾರಿಗಳ ಬೆಂಬಲ ನಿಮಗೆ ಸಿಗುತ್ತದೆ. ಪ್ರಗತಿಗೆ ಅವಕಾಶಗಳು ಇರುತ್ತವೆ. ಆದಾಯ ಹೆಚ್ಚಾಗುತ್ತದೆ. ಇಂದು ಕುಂಭ ರಾಶಿಯವರು ತಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು. ನೀವು ಆತುರದಿಂದ ಏನನ್ನೂ ಖರೀದಿಸಲು ನಿರ್ಧರಿಸಬಾರದು.

** ಮೀನ ರಾಶಿ :
ಇಂದು ನೀವು ಕೆಲವು ಅಪರಿಚಿತ ಭಯದಿಂದ ತೊಂದರೆಗೊಳಗಾಗಬಹುದು. ತಾಳ್ಮೆಯಿಂದಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ಕೆಲಸದ ಪ್ರದೇಶದಲ್ಲಿ ಬದಲಾವಣೆ ಇರಬಹುದು. ಹೊಸ ಬಜೆಟ್ ಮಾಡಿ. ಇದು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ.

Categories
ಕರಾವಳಿ

ಆಳ್ವಾಸ್ ಕಾಲೇಜಲ್ಲಿ ದೇಶದ ಅತೀ ದೊಡ್ಡ ಉದ್ಯೋಗ ಮೇಳ!

ಆಳ್ವಾಸ್ ಕಾಲೇಜಲ್ಲಿ ದೇಶದ ಅತೀ ದೊಡ್ಡ ಉದ್ಯೋಗ ಮೇಳ!
– ಆಗಸ್ಟ್ 1,2ರಂದು ಮೂಡಬಿದಿರೆಯಲ್ಲಿ ಆಳ್ವಾಸ್ ಪ್ರಗತಿ-2025
– 300+ ಕಂಪನಿಗಳು ಭಾಗಿ: ಸಾವಿರಾರು ಜನರಿಗೆ ಉದ್ಯೋಗ
– 15ರಿಂದ 20 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗಿ ಸಾಧ್ಯತೆ

ವಿಶೇಷ ವರದಿ: ನಮಿತಾ ಶೆಟ್ಟಿ ಉಡುಪಿ

ನಮ್ಮೂರ್ ಎಕ್ಸ್ ಪ್ರೆಸ್ ಕರಾವಳಿ
ಮೂಡುಬಿದರೆ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ 15ನೇ ಅವೃತ್ತಿಯ ಬೃಹತ್ ಉದ್ಯೋಗ ಮೇಳ ” ಆಳ್ವಾಸ್ ಪ್ರಗತಿ”ಗೆ ಅಂತಿಮ ಹಂತದ ಸಿದ್ಧತೆ ನಡೆದಿದೆ.
ದಕ್ಷಿಣ ಭಾರತದ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದ್ದು ದೇಶ, ರಾಜ್ಯದ ವಿವಿಧ ಭಾಗದ 300+ ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಆಗಮಿಸಲಿದ್ದಾರೆ.
ಈಗಾಗಲೇ 15 ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಸಾವಿರಾರು ಮಂದಿ ಉದ್ಯೋಗ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದೆ.
ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 26 ವಿವಿಧ ಶಿಕ್ಷಣ ಸಂಸ್ಥೆಗಳನ್ನು ಆಳ್ವಾಸ್ ವಿದ್ಯಾ ಸಂಸ್ಥೆ ಹೊಂದಿದೆ. ಇದೀಗ ಆಗಸ್ಟ್ 1 ಮತ್ತು 2ರಂದು ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈಗಾಗಲೇ ಮೂಡಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ ಅಲ್ಲಿ ನೂರಾರು ಮಂದಿ ಸಿಬ್ಬಂದಿ ತಯಾರಿ ನಡೆಸುತ್ತಿದ್ದಾರೆ.

2024ರಲ್ಲಿ 10 ಸಾವಿರ ಮಂದಿಗೆ ಉದ್ಯೋಗ

2024ರಲ್ಲಿ ಸುಮಾರು 8 ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದ್ದು ಸುಮಾರು 258 ಕಂಪನಿಗಳು ಭಾಗವಹಿಸಿದ್ದವು. ಸುಮಾರು 2468 ಮಂದಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಿದ್ದು, 5953 ಮಂದಿ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಒಟ್ಟು 14,780 ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
2023ರಲ್ಲಿ ಸುಮಾರು 5000 ಮಂದಿಗೆ ಉದ್ಯೋಗ ಸಿಕ್ಕಿದ್ದು, ಒಟ್ಟು 10 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.

15 ವರ್ಷಗಳ ಹೆಜ್ಜೆ: ಸಾವಿರಾರು ಜನರ ಕನಸು ನನಸು

2011ರಿಂದ ಶುರುವಾದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಇದೀಗ 15ನೇ ವರ್ಷಕ್ಕೆ ಕಾಲಿಟ್ಟಿದೆ. ಈವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ಈ ಮೂಲಕ ಉದ್ಯೋಗ ಪಡೆದಿದ್ದಾರೆ.

ಡಾ. ಮೋಹನ್ ಆಳ್ವಾ ಮತ್ತು ವಿವೇಕ್ ಆಳ್ವಾ ಸಾರಥ್ಯ

ಆಳ್ವಾಸ್ ಸಂಸ್ಥೆ ಸಂಸ್ಥಾಪಕ ಡಾ. ಮೋಹನ್ ಆಳ್ವಾ ಅವರ ಕನಸಿನ ಕೂಸು ಈ ಆಳ್ವಾಸ್ ಪ್ರಗತಿ. ವಿದ್ಯೆ ಕಲಿತ ಯುವ ಜನತೆಗೆ ಉದ್ಯೋಗ ಸಿಗಬೇಕು ಎಂಬ ಕಾರಣಕ್ಕೆ ಪ್ರತಿ ವರ್ಷ ದೇಶದಲ್ಲೇ ಅತೀ ದೊಡ್ಡ ಉದ್ಯೋಗ ಮೇಳವನ್ನು ಸಂಸ್ಥೆ ಮಾಡುತ್ತಿದೆ. ಆಳ್ವಾ ಪುತ್ರ ವಿವೇಕ್ ಆಳ್ವಾ ಈ ಆಳ್ವಾಸ್ ಪ್ರಗತಿ ಜವಾಬ್ದಾರಿಯನ್ನು ತಮ್ಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ.

ರಿಜಿಸ್ಟರ್ ಹೇಗೆ…?
alvaspragati.com ವೆಬ್ ಮೂಲಕ ತಾವು ರಿಜಿಸ್ಟರ್ ಆಗಬಹುದು.
ಎಸ್ ಎಸ್ ಎಲ್ ಸಿಯಿಂದ ಹಿಡಿದು ಇಂಜಿನಿಯರಿಂಗ್ ಸೇರಿ ದೇಶ ವಿದೇಶದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ.

ಮಾಹಿತಿಗಾಗಿ:
Alvaspragati.com ವೆಬ್ಸೈಟ್ ವೀಕ್ಷಿಸಿ.
9741440490
9611750531
7975223865

ನೀವೂ ಭಾಗವಹಿಸಿ… ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…!

Categories
ಕಾರ್ಕಳ

ಪರಶುರಾಮ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಮುನಿಯಾಲು ಉದಯಕುಮಾರ್ ಶೆಟ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಅತ್ಯಂತ ಹಾಸ್ಯಾಸ್ಪದ – ನವೀನ್‌ ನಾಯಕ್

ಪರಶುರಾಮ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಮುನಿಯಾಲು ಉದಯಕುಮಾರ್ ಶೆಟ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಅತ್ಯಂತ ಹಾಸ್ಯಾಸ್ಪದ – ನವೀನ್‌ ನಾಯಕ್
ಜು:30- ಪರಶುರಾಮ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್  ಮುಖಂಡ ಉದಯಕುಮಾರ್ ಶೆಟ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದ್ದು, ಕೊಲೆಗಾರ ಶಾಂತಿಮಂತ್ರ ಪಠಿಸಿದಂತಾಗಿದೆ. ಪರಶುರಾಮ ಥೀಂ ಪಾರ್ಕ್ ಬಗ್ಗೆ ಇಲ್ಲಸಲ್ಲದ ಅಪಸ್ವರ ಎತ್ತಿ ಯೋಜನೆಯ ಅನುಷ್ಠಾನ ವಿಳಂಬವಾಗುವುದಕ್ಕೆ ಹಾಗೂ ಪ್ರವಾಸೋದ್ಯಮ ಕುಂಟಿತಗೊಳ್ಳುವುದಕ್ಕೆ ಉದಯಕುಮಾರ್ ಶೆಟ್ಟಿಯವರ ರಾಜಕೀಯ ಅವಕಾಶವಾದಿತನವೇ ಕಾರಣವಾಗಿದ್ದು, ಕಾರ್ಕಳದ ಜನತೆ ಈ ದ್ರೋಹವನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ.
ಪ್ರತಿಮೆ ವಿಚಾರದಲ್ಲಿ ದಾಖಲಾಗಿದ್ದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿ ಕಾರ್ಕಳ ನ್ಯಾಯಾಲಯದಲ್ಲಿ ಸಲ್ಲಿಸಿದ ಆರೋಪಪಟ್ಟಿ ಉದಯಕುಮಾರ್ ಶೆಟ್ಟಿ ಇದುವರೆಗೆ ಮಾಡಿಕೊಂಡು ಬಂದಿದ್ದ ಟೂಲ್ ಕಿಟ್ ರಾಜಕಾರಣವನ್ನು ಬಟಾಬಯಲು ಮಾಡಿದೆ. ಪೈಬರ್ ಪ್ರತಿಮೆ ಎಂಬ ಉದಯಕುಮಾರ್ ಶೆಟ್ಟಿ ಆರೋಪ ಶುದ್ಧಸುಳ್ಳು ಎಂಬುದು ಸಾಬೀತಾಗುತ್ತಿದ್ದಂತೆ ಉದಯಕುಮಾರ್ ಶೆಟ್ಟಿ ಈಗ ಸಾರ್ವಜನಿಕ ಹಿತಾಸಕ್ತಿಯ ನಾಟಕ ಪ್ರಾರಂಭಿಸಿದ್ದಾರೆ.
ಪರಶುರಾಮ ಪ್ರತಿಮೆ ಹಾಗೂ ಥೀಂ ಪಾರ್ಕ್ ವಿಚಾರದಲ್ಲಿ ಶಾಶಕ ಸುನೀಲ್ ಕುಮಾರ್ ಅವರ ನಿಲುವು ಪ್ರಾರಂಭದಿಂದಲೂ ಸ್ಥಿರವಾಗಿಯೇ ಇದೆ. ಪ್ರಾರಂಭದಿಂದಲೂ ಯೋಜನೆಗೆ ಹಣ ಬಿಡುಗಡೆ ಮಾಡಿ ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಿ ಎಂದೇ ಅವರು ಆಗ್ರಹಿಸುತ್ತಿದ್ದಾರೆ. ಆದರೆ ಉದಯಕುಮಾರ್ ಶೆಟ್ಟಿ ಪದೇ ಪದೇ ನಿಲುವು ಬದಲಾಯಿಸಿದ್ದಾರೆ. ಪ್ರಕರಣ ದಾಖಲಿಸಿದ್ದು, ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದೆಲ್ಲ ಆದ ಮೇಲೆ ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವುದೂ ಅನುಮಾನಾಸ್ಪದ ನಡೆಯೇ ಆಗಿದೆ.
ಪರಶುರಾಮ ಪ್ರತಿಮೆ ಸ್ಥಾಪನೆಯಾಗಬೇಕೆಂದು‌ ಉದಯಕುಮಾರ್ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶ ಶುದ್ದಿಯ ಬಗ್ಗೆ ಹಲವು ಅನುಮಾನಗಳಿವೆ. ಇವರಿಗೆ ಬೇಕಿರುವುದು ಪ್ರತಿಮೆಯೂ ಅಲ್ಲ, ಪ್ರವಾಸೋದ್ಯಮವೂ ಅಲ್ಲ. ರಾಜಕೀಯ ಲಾಭ ಹಾಗೂ ಮುಖ ಉಳಿಸಿಕೊಳ್ಳುವ ಪ್ತಯತ್ನ ಮಾತ್ರ ಇದರ ಹಿಂದೆ ಇದೆ.
ಪೈಬರ್ ಪ್ರತಿಮೆ ಎಂದು ಅಪಪ್ರಚಾರ ಮಾಡಿದ ಉದಯಕುಮಾರ್ ಶೆಟ್ಟಿ ಗ್ಯಾಂಗ್ ಥೀಂ ಪಾರ್ಕ್ ಗೆ ಕಳೆದ ಎರಡು ವರ್ಷದಿಂದ ನಯ್ಯಾಪೈಸೆ ಹಣ ಬಿಡುಗಡೆಯಾಗುವುದಕ್ಕೆ ಬಿಟ್ಟಿಲ್ಲ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಧಕ್ಕೆಯಾಗಿರುವುದು ಮಾತ್ರವಲ್ಲ ಕರಾವಳಿ ಜನರ‌ ನಂಬಿಕೆಯ ಮೇಲೂ ಗದಾಪ್ರಹಾರ ಉಂಟಾಗಿದೆ.
ಈ ಪ್ರತಿಮೆ ನಿರ್ಮಾಣ ಕಾರ್ಯ ಮುಂದಿನ ಚುನಾವಣೆಯವರೆಗೂ ಹೀಗೆ ಸ್ಥಗಿತವಾಗಿರಬೇಕು.ಇದೊಂದು ಚುನಾವಣಾ ಸರಕಾಗಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮೂಲಕ ಹೇಳಿಕೆ ಕೊಡಿಸಿದ್ದ ಉದಯಕುಮಾರ್ ಶೆಟ್ಟಿ ಈಗ ಇದ್ದಕ್ಕಿದ್ದಂತೆ ಪ್ರತಿಮೆ ಪರ ನಿಲ್ಲುತ್ತಾರೆಂದರೆ ನಂಬಲು ಸಾಧ್ಯವೇ ? ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿಂದೆ ಕಾರ್ಕಳ ಕಾಂಗ್ರೆಸ್ ಮುಖಂಡರ ಹಿತಾಸಕ್ತಿ ಅಡಕವಾಗಿದ್ದು ಇಂಥ ಅವಕಾಶವಾದಿ ರಾಜಕಾರಣವನ್ನು ಪ್ರಜ್ಞಾವಂತ‌ ಜನತೆ ಯಾವ ಮುಲಾಜು ಇಲ್ಲದೇ ತಿರಸ್ಕರಿಸುತ್ತಾರೆಂಬ ನಂಬಿಕೆ ಇದೆ. ಪ್ರತಿಮೆ ಹಾಗೂ ಯೋಜನೆ ವಿಚಾರದಲ್ಲಿ ಅಪಪ್ರಚಾರ ನಡೆಸಿದ ಉದಯಕುಮಾರ್ ಶೆಟ್ಟಿ ಹಾಗೂ ಆತನ ಪಟಾಲಂ ವಿರುದ್ಧ ಸುಳ್ಳು ಸುದ್ದಿ ಹಾಗೂ ದ್ವೇಷ ಹಂಚಿಕೆಯ ಪ್ರಕರಣ ದಾಖಲಿಸಿ ಕಾಂಗ್ರೆಸ್ ಸರ್ಕಾರ ಜೈಲಿಗಟ್ಟಬೇಕೆಂದು ಸಾರ್ವಜನಿಕರ ಆಗ್ರಹ.
ನವೀನ್‌ ನಾಯಕ್‌
ಕ್ಷೇತ್ರಾಧ್ಯಕ್ಷರು ಬಿಜೆಪಿ ಕಾರ್ಕಳ 
Categories
ಪುತ್ತೂರು

ಪುತ್ತೂರು ಮಾಳಿಗೆ ಡಾಕ್ಟರ್ ಇನ್ನಿಲ್ಲ..!

ಪುತ್ತೂರು ಮಾಳಿಗೆ ಡಾಕ್ಟರ್ ಇನ್ನಿಲ್ಲ..!
– ಬಡವರು, ನಿರ್ಗತಿಕರಿಗೆ ವೈದ್ಯಕೀಯ ಸೇವೆ ಉಚಿತವಾಗಿ ನೀಡಿದ ವೈದ್ಯ
– ಧಾರ್ಮಿಕ, ಕಲೆ, ಸಮಾಜ ಸೇವೆಯಲ್ಲಿ ಕೂಡ ಹೆಸರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಮಾಳಿಗೆ ಡಾಕ್ಟರ್ ಇದೀಗ ನೆನಪು ಮಾತ್ರ. ಪುತ್ತೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖ್ಯಾತಿ ಪಡೆದಿದ್ದ, ಶತಾಯುಷಿ ಡಾ. ಮುದ್ರಾಜೆ ರಾಮಚಂದ್ರ ಭಟ್ ಅವರು ಸೋಮವಾರ ರಾತ್ರಿ ಹೃದಯಘಾತದಿಂದ ನಿಧನನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನೂರು ವರ್ಷಗಳನ್ನು ಇವರು ಪೂರೈಸಿದ್ದರು.‌
ಉಪ್ಪಿನಂಗಡಿ ಸುತ್ತಮುತ್ತ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದ ಅವರು, ಹಿಂದಿನ ಕಾಲದಲ್ಲಿ ಸರ್ಕಾರದ ನಿಯಮದಂತೆ ಇಳಂತಿಲ್ಲ, ನೆಲ್ಯಾಡಿ, ಶಿರಾಡಿ ಮೊದಲಾದ ಕಡೆ ಪ್ರತಿವಾರ ಸೈಕಲ್ ನಲ್ಲಿ ತೆರಳಿ, ಅಲ್ಲಿನ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದರು. ಉಪ್ಪಿನಂಗಡಿಯ ಹಳೆ ಬಸ್ ಸ್ಟ್ಯಾಂಡ್ ಪಕ್ಕದ ಕಟ್ಟಡವೊಂದರ, ಮೊದಲ ಮಹಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದರಿಂದ ಜನರ ಬಾಯಲ್ಲಿ ಇವರು ಮಾಳಿಗೆ ಡಾಕ್ಟರ್ ಎಂದೇ ಹೆಸರುಗಳಿಸಿದರು. ಬಡಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷದೋಪಚಾರವನ್ನು ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಕೇವಲ ವೈದ್ಯರಾಗಿ ಅಷ್ಟೇ ಅಲ್ಲದೆ ಶ್ರೀಲಕ್ಷ್ಮೀ ನಾರಾಯಣ ಸಂಗೀತ ಶಾಲೆಯ ಅಧ್ಯಕ್ಷರಾಗಿ, ಶ್ರೀಸಹಸ್ರಲಿಂಗ ಮಹಾಕಾಳಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಇನ್ನು ಹಲವಾರು ಸಂಘ ಸಂಸ್ಥೆಗಳಿಗೆ ಸಹಕಾರವನ್ನು ನೀಡುವ ಮೂಲಕ, ಧಾರ್ಮಿಕ ಸೇವೆ ಮತ್ತು ಕಲಾ ಸೇವೆಯಲ್ಲೂ ನಿರತರಾಗಿದ್ದರು.

Categories
ಬೆಂಗಳೂರು

ಡಾ.ಆರತಿ ಕೃಷ್ಣ ಅವರಿಗೆ ವಿಶೇಷ ಗೌರವ

ಡಾ.ಆರತಿ ಕೃಷ್ಣ ಅವರಿಗೆ ವಿಶೇಷ ಗೌರವ
– ವಿಶ್ವ ಒಕ್ಕಲಿಗರ ವೀರ ವನಿತೆ ರತ್ನ ಪ್ರಶಸ್ತಿ ಪ್ರದಾನ
– ಕಾಂಗ್ರೆಸ್ ಪ್ರಚಾರ ಸಮಿತಿಗೆ ಕಿಮ್ಮನೆ, ಮುರೊಳ್ಳಿ

NAMMUR EXPRESS NEWS
ಬೆಂಗಳೂರು: ದುಬೈ ಒಕ್ಕಲಿಗರ ಸಂಘದಿಂದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣರವರಿಗೆ ವಿಶ್ವ ಒಕ್ಕಲಿಗರ ವೀರ ವನಿತೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಚೆಲುವರಾಯಸ್ವಾಮಿ, ಇಸ್ರೋ ಮಾಜಿ ಅಧ್ಯಕ್ಷ ಎಸ್ ಸೋಮನಾಥ್, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷೆ ಡಾ ರಶ್ಮಿ ನಂದಕಿಶೋರ್, ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್‌ನ ಕೆ ಟಿ ಚಂದ್ರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪ್ರಚಾರ ಸಮಿತಿಗೆ ಕಿಮ್ಮನೆ, ಮುರೊಳ್ಳಿ

– ಕಿಮ್ಮನೆ ಅವರಿಗೆ ಉಪಾಧ್ಯಕ್ಷ ಸ್ಥಾನ, ಸಂಯೋಜಕರಾಗಿ ಮುರೊಳ್ಳಿ

ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿಯನ್ನು ಘೋಷಣೆ ಮಾಡಿದೆ. ಈ ಸಮಿತಿಯಲ್ಲಿ ಸಹ ಅಧ್ಯಕ್ಷರಾಗಿ ಎಲ್ ಹನುಮಂತಯ್ಯ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಜೆ ಆರ್ ಲೋಬೋ, ಎಂ ಶಿವಣ್ಣ, ಜಲಜಾ ನಾಯಕ್, ವೀಣಾ ಅಚ್ಚಯ್ಯ, ಜೆ.ಡಿ ನಾಯಕ್, ಜಿ ಮಂಜುನಾಥ್, ಭೀಮಣ್ಣ ಮೇಟಿ, ಅಬ್ದುಲ್ ಮುನೀರ್ ಆಯ್ಕೆ ಆಗಿದ್ದು,
ಮುಖ್ಯ ಸಂಯೋಜಕರಾಗಿ ಪ್ರಕಾಶ್ ಕೆ ರಾಥೋಡ್ ಮಾಜಿ ವಿಧಾನ ಪರಿಷತ್ ಸದಸ್ಯರು, ಸಿ.ಎಸ್ ದ್ವಾರಕಾನಾಥ್, ಸುಧೀರ್ ಮುರೋಳ್ಳಿ, ಪ್ರಸಾದ್ ಬಾಬು, ಕೃಪಾ ಆಳ್ವಾ, ಆದರ್ಶ ಯಲ್ಲಪ್ಪ, ಎಸ್ ನಾರಾಯಣ್, ಯೋಗೀಶ್ವರಿ ವಿಜಯ್, ಜಾನ್ವಿ ಕಲ್ಗುಂಡಿ ಕೆ. ಪಿ, ಶರಣಪ್ಪ ಕೋಟಗಿ, ಶಂಭು ಶೆಟ್ಟಿ, ವಸಂತ್ ಲಾಡ್ವ ಇವರು ಆಯ್ಕೆಯಾಗಿದ್ದಾರೆ. ಮಲೆನಾಡ ಇಬ್ಬರಿಗೆ ರಾಜ್ಯ ಕಾಂಗ್ರೆಸ್ ಅಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಪ್ರಕಟಣೆ ಹೊರಡಿಸಿದೆ.

Categories
ಡೆಲ್ಲಿ

ಕಾಡಾನೆ ದಾಳಿ ಪ್ರಕರಣ: ಕೇಂದ್ರ ಸರ್ಕಾರ ಎಂಟ್ರಿ..?

ಕಾಡಾನೆ ದಾಳಿ ಪ್ರಕರಣ: ಕೇಂದ್ರ ಸರ್ಕಾರ ಎಂಟ್ರಿ..?
– ಮಲೆನಾಡ ಸಮಸ್ಯೆ ಬಗ್ಗೆ ಕೇಂದ್ರ ಸಚಿವರಿಗೆ ಸಂಸದ ಕೋಟಾ ಮನವಿ
* ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ
* ಮಾನವ ಪ್ರಾಣಿ ಸಂಘರ್ಷದಿಂದ ಜನ ಜೀವನಕ್ಕೆ ತೊಂದರೆ ಮನವರಿಕೆ

NAMMMUR EXPRESS NEWS
ದೆಹಲಿ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅದರಲ್ಲೂ ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡುಪ್ರಾಣಿಗಳ ಉಪಟಳ, ಕಾಡಾನೆ ದಾಳಿಯಿಂದ 5 ಜನ ಮೃತಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಶೃಂಗೇರಿ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಕಾಡಾನೆ ದಾಳಿಯಿಂದ 5 ಜನ ಬಲಿಯಾಗಿದ್ದು,ಕಳೆದೊಂದು ವಾರದಲ್ಲೇ ಬಾಳೆಹೊನ್ನೂರಿನಲ್ಲಿ ಅನಿತಾ ಮತ್ತು ಸುಬ್ಬೇಗೌಡ ಎಂಬ ಇಬ್ಬರು ಮೃತರಾಗಿದ್ದಾರೆ. ದಿನನಿತ್ಯ ಮಾನವ ಪ್ರಾಣಿ ಸಂಘರ್ಷದಿಂದ ಮಲೆನಾಡಿನಲ್ಲಿ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಆನೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು,ಕಾಡಾನೆಗಳು ರೈತಾಪಿ ವರ್ಗದ ಬೆಳೆ ಮಾತ್ರವಲ್ಲದೇ,ಕೃಷಿ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರ ಮೇಲೆ ದಾಳಿ ಮಾಡಿ ಹತ್ಯೆ ಮಾಡುತ್ತಿವೆ.ಈ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಅದರಲ್ಲೂ ಕಾಡಾನೆ ದಾಳಿಯಿಂದ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಇಂತಹ ಸಂಕಷ್ಟದ ಸಮಯದಲ್ಲಿ ಆನೆಗಳ ನಿಯಂತ್ರಣ ಹಾಗೂ ಆನೆ ದೊಡ್ಡಿಗಳ ನಿರ್ಮಾಣದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ ನೀಡಿ ಸೂಕ್ತ ವರದಿ ಪಡೆದು ಜಂಟಿ ಕಾರ್ಯ ಯೋಜನೆ ತಯಾರಿಸಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Categories
ಕರಾವಳಿ

ಬೆಲ್ಟ್ ನಿಂದ ವಿದ್ಯಾರ್ಥಿ ಆತ್ಮಹತ್ಯೆ!

ಕರಾವಳಿ ಟಾಪ್ 5 ನ್ಯೂಸ್

ಬೆಲ್ಟ್ ನಿಂದ ವಿದ್ಯಾರ್ಥಿ ಆತ್ಮಹತ್ಯೆ!
– ಉಡುಪಿಯಲ್ಲಿ ನಡೆದ ಘಟನೆ: ತಾಯಿಗೆ ಶಾಕ್…

* ಕಾಪು: ಜುಗಾರಿ ಆಡುತ್ತಿದ್ದ ಐವರು ಪೊಲೀಸರ ವಶ
* ಬ್ರಹ್ಮಾವರ: ಜಾತಿ ನಿಂದನೆ; ಗ್ರಾಮ ಪಂಚಾಯಿತಿ ಪಿಡಿಒ ಬಂಧನ
* ಮಂಗಳೂರು: ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ಕಿರುಕುಳ!
* ಸುಳ್ಯ: ಅಕ್ರಮ ಗೋಸಾಗಾಟ; ದುಷ್ಕರ್ಮಿಗಳು ಅರೆಸ್ಟ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸ್ವಸ್ತಿಕ್ ಎನ್ನುವ ಯುವಕ ಬೆಲ್ಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯಲ್ಲಿ ನಡೆದಿದೆ. ಮನೆಯ ಹಾಲಿನ ಕಿಟಕಿಗೆ ನೇಣು ಹಾಕಿಕೊಂಡು, ಸೋಫಾದ ಮೇಲೆ ಒರಗಿ ಬಿದ್ದಿರುವ ಸ್ಥಿತಿಯಲ್ಲಿದ್ದು, ಕೂಡಲೇ ತಾಯಿಯು ನೇಣು ಹಾಕಿಕೊಳ್ಳಲು ಬಳಸಿದ್ದ ಬೆಲ್ಟ್ ಅನ್ನು ಕತ್ತರಿಸಿ, ನೆರೆಮನೆಯವರ ಸಹಾಯದಿಂದ ಗೆರೊಟ್ಟಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಸ್ವಸ್ತಿಕ್ ತಾಯಿಯು ನೋಡುವ ಮೊದಲೇ ಮೃತಪಟ್ಟಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಜುಗಾರಿ ಆಡುತ್ತಿದ್ದ ಐವರು ಪೊಲೀಸರ ವಶ

ಕಾಪು: ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಉಚ್ಚಿಲದ ಸುಲೇಮಾನ್, ಮಿಥುನ್, ಅತ್ರಾಡಿಯ ಚಂದ್ರಶೇಖರ್, ಅಮಾನುಲ್ಲಾ, ಸುರೇಶ್ ಎನ್ನುವ ಐದು ಮಂದಿಯನ್ನು ಬಂಧಿಸಲಾಗಿದೆ.
ಜೊತೆಗೆ ಏಳು ಸಾವಿರದ ಐನೂರು ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಜಾತಿ ನಿಂದನೆ; ಗ್ರಾಮ ಪಂಚಾಯಿತಿ ಪಿಡಿಒ ಬಂಧನ

ಬ್ರಹ್ಮಾವರ: ಮಹಿಳೆಯೊಬ್ಬರು ಅವೈಜ್ಞಾನಿಕ ರಸ್ತೆ ಕಾಮಗಾರಿಯ ಪರಿಣಾಮದಿಂದಾಗಿ, ಜನರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಕುರಿತು ಚೇರ್ಕಾಡಿ ಗ್ರಾಮ ಪಂಚಾಯಿತಿಯ ಪಿಡಿಒ ಆದ ಸುಭಾಷ್ ಎನ್ನುವವರಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ವನಿತಾ ಅವರ ಹೈನುಗಾರಿಕೆ ಘಟಕಕ್ಕೂ ಸಹ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿತ್ತು. ಆದರೆ ಸುಭಾಷ್ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ತೋರದಿದ್ದಾಗ, ಸ್ವತಃ ವನಿತಾ ಅವರೇ ಇದನ್ನು ಕುರಿತು ವಿಚಾರಿಸಲು ಹೋದಾಗ, ಪಿಡಿಒ ಸುಭಾಷ್ ಅವರು ಸಿಟ್ಟುಗೊಂಡಿದ್ದಷ್ಟೇ ಅಲ್ಲದೆ, ವನಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆಯನ್ನು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕಾಗಿ ವನಿತಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವು ವಿಚಾರಣೆ ಹಂತದಲ್ಲಿದೆ.

ಮಂಗಳೂರು: ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ಕಿರುಕುಳ!

ಮಂಗಳೂರು: ಮಹೇಶ್ ಸಾಲಿಯಾನ್ ಎಂಬ ವ್ಯಕ್ತಿಯು ಆಟೋರಿಕ್ಷಾ ನಿಲ್ಲಿಸಿ, ಸಾರ್ವಜನಿಕರಿಗೆ ವಿನಾಕಾರಣ ಬೈಯುತ್ತಿದ್ದ ಆಧಾರದ ಮೇಲೆ, ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆತನನ್ನು ಬಂಧಿಸಿದ್ದಾರೆ. ಈ ರೀತಿ ವರ್ತಿಸಲು ಕಾರಣವೇನೆಂದು ತನಿಖೆ ನಡೆಸಿದಾಗ, ಮಹೇಶ್ ಗಾಂಜಾ ಸೇವನೆ ಮಾಡಿರುವ ಸಂಗತಿ ತಿಳಿದುಬಂದಿದೆ. ಅದರ ಅಮಲಿನಿಂದಾಗಿ ಈ ರೀತಿ ವರ್ತಿಸುತ್ತಿದ್ದಾನೆ ಎನ್ನುವ ಅನುಮಾನ ಪೊಲೀಸರಲ್ಲಿ ಮೂಡಿದೆ. ಮಹೇಶ್ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಪೊಲೀಸರ ಸಂದೇಹ ನಿಜವಾಗಿದೆ. ಮಾದಕ ವಸ್ತು ಸೇವನೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮೇರೆಗೆ ಕಂಕನಾಡಿ ಪೊಲೀಸರು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಸೆರೆಯಲ್ಲಿರಿಸಿದ್ದಾರೆ.

ಸುಳ್ಯ: ಅಕ್ರಮ ಗೋಸಾಗಾಟ; ದುಷ್ಕರ್ಮಿಗಳು ಅರೆಸ್ಟ್!

ಸುಳ್ಯ: ಸುಬ್ರಹ್ಮಣ್ಯದ ಸಮೀಪ ಪಂಜಾ, ಬೆಳ್ಳಾರೆ ಮತ್ತು ನೆಟ್ಟಾರು ಸಮೀಪ ಐದು ಎಮ್ಮೆಗಳನ್ನು ಪಿಕಪ್ ವೊಂದರಲ್ಲಿ ಹಾಕಿಕೊಂಡು, ಈಶ್ವರಮಂಗಲಕ್ಕೆ ಅಕ್ರಮವಾಗಿ ಸಾಗಾಟ ಮಾಡಲು ತಯಾರಿ ನಡೆಸಿರುವ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ, ಬೆಳ್ಳಾರೆ ಎಸ್ಐ ಸಂತೋಷ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕಾಸರಗೋಡಿನ ದೆಲಂಪಾಡಿ ಮುಜಾಮಿನ್, ಅಬ್ದುಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.‌ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Categories
ಸಿನಿಮಾ

ಮಹಾವತಾರ ನರಸಿಂಹ – ಆಧ್ಯಾತ್ಮಿಕ ಭಾವನೆಯಲ್ಲಿ ಬರುತ್ತಿರುವ ಪೌರಾಣಿಕ ಅನಿಮೇಷನ್ ಚಲನಚಿತ್ರ

ಮಹಾವತಾರ ನರಸಿಂಹ – ಆಧ್ಯಾತ್ಮಿಕ ಭಾವನೆಯಲ್ಲಿ ಬರುತ್ತಿರುವ ಪೌರಾಣಿಕ ಅನಿಮೇಷನ್ ಚಲನಚಿತ್ರ
* ಪ್ರಾಮಾಣಿಕ ಕಥಾ ತಳಹದಿಯೊಂದಿಗೆ ಆಧ್ಯಾತ್ಮಿಕ ಅನಿಮೇಷನ್‌ಗೆ ಹೊಸ ದಿಕ್ಕು ತೋರಿಸುವ ಪ್ರಯತ್ನ
* ಕ್ಲೀಮ್ ಪ್ರೊಡಕ್ಷನ್ಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಸಹಯೋಗದಲ್ಲಿ ನಿರ್ಮಿತವಾದ ಚಿತ್ರ

NAMMUR EXPRESS NEWS
ಭಾರತೀಯ ಪೌರಾಣಿಕ ಕಥಾವಸ್ತುಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ದೃಶ್ಯ ಕಲೆಗಳನ್ನು ಸಂಯೋಜಿಸುವ ಉದ್ದೇಶದಿಂದ ನಿರ್ಮಿಸಲಾದ “ಮಹಾವತಾರ ನರಸಿಂಹ” ಚಿತ್ರವು ಜುಲೈ 25, 2025 ರಂದು ಭಕ್ತಿಯ ಮತ್ತು ದೈವಿಕತೆಯ ಸ್ಪಂದನವನ್ನು ತೆರೆಮೇಲೆ ತರಲು ಮುಂದಾಗಿದೆ. ನಿರ್ದೇಶಕ ಅಶ್ವಿನ್ ಕುಮಾರ್ ಅವರ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್, ಮಹಾವತಾರ ಸರಣಿಯ ಮೊದಲ ಹಂತವಾಗಿದೆ. ಜಗತ್ತಿಗೆ ಭಾರತೀಯ ಪುರಾಣಗಳನ್ನು ವಿಶಿಷ್ಟ ಶೈಲಿಯಲ್ಲಿ ಪರಿಚಯಿಸುವ ಈ ಪ್ರಯತ್ನದಲ್ಲಿ ಕ್ಲೀಮ್ ಪ್ರೊಡಕ್ಷನ್ಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಒಂದಾಗಿ ಬಂದಿವೆ.
ಈ ಚಿತ್ರವು ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರಗಳಲ್ಲಿ ಒಂದಾದ ನರಸಿಂಹನ ಕಥೆಯನ್ನು ಆಧರಿಸಿದ್ದು, ಪ್ರಹ್ಲಾದನನ್ನು ರಕ್ಷಿಸಲು ಇಳಿಯುವ ಅರ್ಧ ಸಿಂಹ, ಅರ್ಧ ಮನುಷ್ಯನ ರೂಪದ ದೇವರ ಬಿಂಬವನ್ನು ಆಳವಾಗಿ ಚಿತ್ರಿಸುತ್ತದೆ. ಜ್ಞಾನ, ಶಕ್ತಿಯ ಮತ್ತು ಧರ್ಮದ ಸನ್ನಿವೇಶಗಳ ಮೂಲಕ ಸಂವೇದನಾತ್ಮಕ ಅನಿಮೇಷನ್‌ನ ಮೂಲಕ ಈ ಕಥೆ ಭಕ್ತಿಯ ಹೊಸ ಅರ್ಥವನ್ನೇ ನೀಡಲು ಯತ್ನಿಸುತ್ತದೆ.

ಈ ಚಿತ್ರದ ಮೊದಲ ಭಾಗದಲ್ಲಿ ಅನಿಮೇಷನ್ ಶೈಲಿ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಕಥಾನಕ ಮುಂದುವರಿದಂತೆ ದೃಶ್ಯಗಳ ಭಾವಪೂರ್ಣತೆ ಮತ್ತು ತಂತ್ರಜ್ಞಾನ ಬಳಕೆ ಸ್ಪಷ್ಟವಾಗಿ ಸುಧಾರಿಸುತ್ತದೆ. ಎರಡನೇ ಭಾಗದಲ್ಲಿ ನರಸಿಂಹನ ಆಗಮನವನ್ನು ದೃಶ್ಯಮಾಧ್ಯಮದಲ್ಲಿ ಪ್ರಭಾವಶಾಲಿಯಾಗಿ ಪ್ರಸ್ತುತಪಡಿಸಲಾಗಿದೆ. ದೇವತೆಗಳು, ರಾಕ್ಷಸರ ಯುದ್ಧಗಳು ಮತ್ತು ವಿಭಿನ್ನ ಲೋಕಗಳ ಚಿತ್ರಣ ಚಿತ್ರಕ್ಕೆ ದೃಶ್ಯ ವೈಭವವನ್ನು ನೀಡಿದರೂ, ಕೆಲವೊಂದು ಭಾಗಗಳಲ್ಲಿ ಸಂಭಾಷಣಾ ತೀವ್ರತೆ ಮತ್ತು ಭಾವನಾತ್ಮಕ ಅಳತೆಯ ಕೊರತೆಯು ತಿಳಿಯಬಹುದು. ಹಿಂದೂ ಪುರಾಣಗಳಲ್ಲಿ ಪರಿಚಿತವಾದ ಕಥೆಯಾದರೂ, ಚಿತ್ರವು ಅದನ್ನು ಹೊಸ ತಂತ್ರಜ್ಞಾನದಿಂದ ಕಟ್ಟಿಕೊಡುವ ಪ್ರಯತ್ನ ಮಾಡಿದೆ. ವಿಶೇಷವಾಗಿ ವರ್ಣನಾತ್ಮಕ ದೃಶ್ಯಗಳು ಹಾಗೂ ವರಾಹ, ನರಸಿಂಹ ಅವತಾರಗಳ ಕ್ರಿಯಾತ್ಮಕ ದೃಶ್ಯಾವಳಿಗಳು ಆನಂದಕಾರಿಯಾಗಿವೆ. ಆದರೆ, ದಿತಿ, ಭೂದೇವಿ ಮತ್ತು ಋಷಿಗಳಂತಹ ಕೆಲವು ಪಾತ್ರಗಳ ರೂಪಕಲ್ಪನೆಯು ಪಾಶ್ಚಾತ್ಯ ವ್ಯಂಗ್ಯಚಿತ್ರ ಶೈಲಿಗೆ ಹೋಲುತ್ತಿದ್ದು, ಪೌರಾಣಿಕ ಗಂಭೀರತೆಯನ್ನು ಕಡಿಮೆ ಮಾಡಿದೆ ಎನ್ನುವ ಅಭಿಪ್ರಾಯ ಸಹ ಮೂಡಬಹುದು.

ಹುಟ್ಟುಹಬ್ಬದ ಬಾಲಕನ ಪ್ರಭಾವಶಾಲಿ ಪಿತೃವಿರೋಧಿ ಧರ್ಮನಿಷ್ಠೆಯ ಕಥೆಯನ್ನು ಆಧಾರವಾಗಿ ತೆಗೆದುಕೊಂಡಿರುವ ಈ ಚಿತ್ರವು, ಮೊದಲ ಅಡಿಗೆ ಇಟ್ಟಂತೆ ಕಂಡರೂ, ಪ್ರಚೋದಕ ಭಾವನೆಗಳನ್ನು ಉತ್ತೇಜಿಸಲು ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಕಥೆ ಹೇಳುವಿಕೆಯಲ್ಲಿ ನಿರಂತರವಾದ ಭಾವದ ಹರಿವಿಲ್ಲದಿರುವುದು ನೋಡುವವರನ್ನು ಕೆಲವೊಂದು ಸಮಯಗಳಲ್ಲಿ ಸಂಪರ್ಕಕ್ಕೆ ತಲುಪದಂತೆ ಮಾಡಬಹುದು.
ಡಬ್ಬಿಂಗ್ ಮತ್ತು ಲಿಪ್-ಸಿಂಕ್‌ನಲ್ಲಿ ಕೆಲ ಸಾಂದರ್ಭಿಕ ದೋಷಗಳು ಕಂಡುಬಂದರೂ, ಶಕ್ತಿಯುತ ಹಿನ್ನೆಲೆ ಸಂಗೀತ, ಮೌನದ ಪ್ರಭಾವ ಹಾಗೂ ಧ್ವನಿಮುದ್ರಿಕೆಗಳು ಚಿತ್ರದ ಭಾವಚಿತ್ರವನ್ನು ಉಳಿಸಲು ಸಹಾಯ ಮಾಡಿವೆ. ಕೆಲವು ಗೀತೆಗಳು ಗಂಭೀರ ಉದ್ದೇಶದಿಂದ ರಚನೆಯಾದರೂ, ಬಹುದೊಡ್ಡ ಭಾವಾತ್ಮಕ ಪ್ರಭಾವವನ್ನು ಬಿಡುವಲ್ಲಿ ವಿಫಲವಾಗಿವೆ.

ಪ್ರೇಕ್ಷಕರ ನಿರೀಕ್ಷೆಗಳಿಗೆ ಹೋಲಿಕೆ ಮಾಡಿದಾಗ, ಜಾಗತಿಕ ಮಟ್ಟದ ಹೈ-ಕ್ವಾಲಿಟಿ ಅನಿಮೇಷನ್ ಅಥವಾ 1983ರ “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಮೌಲ್ಯಮಯ ಅಭಿನಯವನ್ನು ನೆನಪಿಸಿಕೊಳ್ಳುವ ಪ್ರೇಕ್ಷಕರಿಗೆ ಈ ಚಿತ್ರವು ನಿರೀಕ್ಷಿತ ತೃಪ್ತಿಯನ್ನು ನೀಡದು. ಆದರೆ, ಹೊಸ ತಲೆಮಾರಿಗೆ, ವಿಶೇಷವಾಗಿ ಮಕ್ಕಳಿಗೆ, ಇದು ಪೌರಾಣಿಕ ಕಥಾನಕವನ್ನು ತಾಜಾ ದೃಷ್ಟಿಕೋನದಲ್ಲಿ ಪರಿಚಯಿಸುವ ಉತ್ತಮ ಮಾಧ್ಯಮವಾಗಿದೆ. ಮಹಾವತಾರ ನರಸಿಂಹ ಚಿತ್ರದ ಮಹತ್ವ ಎಲ್ಲಿ ಲಭ್ಯವಿದೆ ಎಂಬುದಾದರೆ, ಅದು ತನ್ನ ಭಕ್ತಿಪೂರ್ವಕ ದೃಷ್ಟಿಕೋನ ಮತ್ತು ಮಹತ್ವಾಕಾಂಕ್ಷೆಯಲ್ಲಿಯೇ ಇದೆ. ಆಧ್ಯಾತ್ಮಿಕ ಚಿಂತನೆ ಮತ್ತು ಪೌರಾಣಿಕ ಕಥೆಗಳನ್ನು ವಿಸ್ತಾರಗೊಳಿಸಲು ಮತ್ತು ಹೊಸ ಮಾಧ್ಯಮಗಳಲ್ಲಿ ಪೈಪೋಟಿಗೆ ಇಳಿಯಲು ಇದು ಭಾರತೀಯ ಅನಿಮೇಷನ್‌ಗೆ ದಿಕ್ಕು ತೋರಿಸುವ ಸಾಹಸಿಕ ಪ್ರಯತ್ನವಾಗಿದೆ. ಇದು ಚಿತ್ರಮಂದಿರದಲ್ಲಿ ನೋಡಬಹುದಾದ ನಿಷ್ಠಾವಂತ ಮತ್ತು ದೃಶ್ಯಶಕ್ತಿಯಿಂದ ತುಂಬಿದ ಪ್ರಯೋಗಾತ್ಮಕ ಕಲಾಕೃತಿಯಾಗಿದೆ.