Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್

ಚಿಕ್ಕಮಗಳೂರು ಟಾಪ್ ನ್ಯೂಸ್

* ವಾಹನ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಚಾಲಕನ ಮೃತ ದೇಹ ಪತ್ತೆ
* ಕಾಡಾನೆಗಳ ಸೆರೆಗೆ ಸಕ್ರೇಬೈಲ್‌ನ ಕುಮ್ಕಿ ಆನೆಗಳಿಂದ ಹುಡುಕಾಟ,ಒಂದು ಆನೆಗೆ ಅರವಳಿಕೆ ಮದ್ದು
* ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಅಪಾರ ಹಾನಿ

NAMMMUR EXPRESS NEWS

* ವಾಹನ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಚಾಲಕನ ಮೃತ ದೇಹ ಪತ್ತೆ
ಕಳಸ: ಪಿಕಪ್ ವಾಹನದೊಂದಿಗೆ ಚಾಲಕ ಕೊಚ್ಚಿ ಹೋಗಿದ್ದ ಪ್ರಕರಣ ಸಂಬಂಧ ಐದು ದಿನಗಳ ಬಳಿಕ ಚಾಲಕ‌ ಶಮಂತ್ ಮೃತದೇಹ ಪತ್ತೆಯಾಗಿದೆ.
ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಧು ಹಿಂದಿರುಗುತ್ತಿದ್ದ ವೇಳೆ ಪಿಕಪ್ ವಾಹನ ಭಧ್ರಾ ನದಿ ತೀರದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು . ಚಾಲಕ ಶಮಂತ್ ನಿಯಂತ್ರಣ ತಪ್ಪಿದ ಪಿಕಪ್ ಭದ್ರಾ ನದಿಗೆ ಉರುಳಿತ್ತು. ಶಮಂತ್ ಕೂಡ ನದಿ ಪಾಲಾಗಿದ್ದ, ಮಗ ಶಮಂತ್ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆಯಿಂದ ನೊಂದಿದ್ದ ತಾಯಿ ರವಿಕಲಾ ಮನೆ‌‌ ಸಮೀಪದ‌ ಕೆರೆಗೆ ಹಾರಿ ಆತ್ಮಹತ್ತೆ ಮಾಡಿಕೊಂಡಿದ್ದರು.
ಘಟನೆ ನಡೆದ ಎರಡು ದಿನಗಳ ನಂತರ ನದಿಯಲ್ಲಿ‌ಪಿಕಪ್ ಪತ್ತೆಯಾಗಿದ್ದು, 5 ದಿನಗಳ ಬಳಿಕ ಶಮಂತ್ ಮೃತದೇಹ ಕಳಸ ಪಟ್ಟಣ ಸಮೀಪದ( ಕೋಟೆಹೊಳೆ)ಎಂಬಲ್ಲಿ ಪತ್ತೆಯಾಗಿದೆ.
ಪೊಲೀಸರು, ಸಾರ್ವಜನಿಕರು, ಅಗ್ನಿಶಾಮಕದಳ, ಮಂಗಳೂರಿನ‌ ಮುಳುಗು ತಜ್ಜರು 5 ದಿನಗಳಿಂದ ಶಮಂತ್ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದರು.

* ಕಾಡಾನೆಗಳ ಸೆರೆಗೆ ಸಕ್ರೇಬೈಲ್‌ನ ಕುಮ್ಕಿ ಆನೆಗಳಿಂದ ಹುಡುಕಾಟ,ಒಂದು ಆನೆಗೆ ಅರವಳಿಕೆ
ಬಾಳೆಹೊನ್ನೂರು: ನಾಲ್ಕು ದಿನದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡನೆ ಹಾಗೂ ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿರುವ ಎರಡು ಪುಂಡಾನೆಗಳ ಸೆರೆಗೆ ಸಕ್ರೇಬೈಲ್‌ನ ಕುಮ್ಕಿ ಆನೆಗಳ ತಂಡ ಆಗಮಿಸಿದ್ದು, ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ಸದ್ಯ ಕಾಡಾನೆ ಕಡಬಗೆರೆ ಹಾಗೂ ಬನ್ನೂರು ಭಾಗದಲ್ಲಿರುವ ಮಾಹಿತಿ ಇದ್ದು ಆನೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಅರವಳಿಕೆ ತಜ್ಞರು ಭಾಗವಹಿಸಿದ್ದಾರೆ. ಕುಂಬ್ರಕೋಡು ಭಾಗದಲ್ಲಿ ಒಂದು ಆನೆಗೆ ಅರವಳಿಕೆ ಮದ್ದು ನೀಡಿದ್ದು ವಿಪರೀತ ಮಳೆಯ ಕಾರಣ ಆನೆಗೆ ಮದ್ದು ನಾಟುತ್ತಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.ಸದ್ಯ ಮೂರ್ನಾಲ್ಕು ಬಾರಿ ಅರವಳಿಕೆ ನೀಡಿ ಆನೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

* ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಅಪಾರ ಹಾನಿ
ಚಿಕ್ಕಮಗಳೂರು: ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು,ಅನೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಮರಗಳು ಉರುಳಿದ್ದು,ವಿದ್ಯುತ್ ಕಂಬಗಳು ತುಂಡಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದಿಂದ ಅನೇಕ ಮನೆಗಳಿಗೆ ಹಾನಿಯಾಗಿದ್ದು,ದನಕರುಗಳು,ಸಾಕು ಪ್ರಾಣಿಗಳು ಮೃತಪಟ್ಟಿವೆ.

Categories
ತೀರ್ಥಹಳ್ಳಿ

ಮುಂದಿನ 3 ವರ್ಷಕ್ಕೆ ತೀರ್ಥಹಳ್ಳಿ ನೂತನ ಬಿಜೆಪಿ ಮಂಡಲ

ಮುಂದಿನ 3 ವರ್ಷಕ್ಕೆ ತೀರ್ಥಹಳ್ಳಿ ನೂತನ ಬಿಜೆಪಿ ಮಂಡಲ
– ಮಂಡಲದ ಅಧ್ಯಕ್ಷರಾಗಿ ಹೆದ್ದೂರ್ ನವೀನ್ ಆಯ್ಕೆ
– ಜಿಲ್ಲಾಧ್ಯಕ್ಷರು, ಸಂಸದರು, ಎಲ್ಲಾ ಶಾಸಕರ ಸಮ್ಮುಖದಲ್ಲಿ ಘೋಷಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಭಾರತೀಯ ಜನತಾ ಪಾರ್ಟಿಯ ಮುಂದಿನ ಮೂರು ವರ್ಷಕ್ಕೆ ಜಾರಿಗೆ ಬರುವಂತೆ ರಚನೆ ಮಾಡಿ ಪಕ್ಷ ಘೋಷಣೆ ಮಾಡಿದೆ.
ತೀರ್ಥಹಳ್ಳಿ ಮಂಡಲ ಅಧ್ಯಕ್ಷರಾದ ಹೆದ್ದೂರು ನವೀನ್ ನೇತೃತ್ವದ ತೀರ್ಥಹಳ್ಳಿ ಮಂಡಲ ಪದಾಧಿಕಾರಿಗಳ ತಂಡವನ್ನು ಶಿವಮೊಗ್ಗ ಜಿಲ್ಲಾ ಬಿ.ಜೆ.ಪಿ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರು, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮಾಜಿ ಶಾಸಕರು ಹಾಗೂ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಘೋಷಣೆ ಮಾಡಲಾಯಿತು.

ನೂತನ ಮಂಡಲದಲ್ಲಿ ಯಾರು ಯಾರು..?

ಅಧ್ಯಕ್ಷರಾಗಿ ಹೆದ್ದೂರು ನವೀನ್, ಉಪಾಧ್ಯಕ್ಷರಾಗಿ ಮೋಹನ್ ಬಿ. ಆರ್
, ಉಪಾದ್ಯಕ್ಷರಾಗಿ ಕವಿರಾಜ್ ಬೇಗುವಳ್ಳಿ, ಉಪಾಧ್ಯಕ್ಷರಾಗಿ ಭಾರತಿ ಸುರೇಶ್, ಉಪಾಧ್ಯಕ್ಷರಾಗಿ ನಂದನ್ ಹಸಿರುಮನೆ, ಉಪಾಧ್ಯಕ್ಷರಾಗಿ ಸುಮಾ ರಾಮಚಂದ್ರ, ಉಪಾಧ್ಯಕ್ಷರಾಗಿ ಸವಿತಾ ಉಮೇಶ್,
ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಕುಮಾರ್ ವಿರೂಪಾಕ್ಷ,
ಪಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಮೇಗರವಳ್ಳಿ, ಕಾರ್ಯದರ್ಶಿ ಟಿ. ಮಂಜುನಾಥ್ ಜಯಪುರ, ಕಾರ್ಯದರ್ಶಿಯಾಗಿ ಶ್ರೀನಿವಾಸ್ ಕಾಸರವಳ್ಳಿ, ಕಾರ್ಯದರ್ಶಿಯಾಗಿ ಪದ್ಮಾ ನವೀನ್, ಕಾರ್ಯದರ್ಶಿಯಾಗಿ ಸುರೇಶ್ ನಾಯ್ಕ್ ಗಾಜನೂರು, ಕಾರ್ಯದರ್ಶಿಯಾಗಿ ಮಧುರಾಜ್ ಹೆಗ್ಡೆ ತೂದೂರು, ಕಾರ್ಯದರ್ಶಿಯಾಗಿ ಕವಿತಾ ರಮೇಶ್, ಖಜಾಂಚಿಯಾಗಿ ಜೆ. ಮಂಜುನಾಥ ಶೆಟ್ಟಿ, ಮಾಧ್ಯಮ ಪ್ರಮುಖ್ ರಾಗಿ ಸಂದೇಶ್ ಜವಳಿ,
ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಅನೂಪ್ ಉಪಾಧ್ಯಾಯರ ಹೆಸರನ್ನು ಘೋಷಣೆ ಮಾಡಲಾಗಿದೆ.

ತೀರ್ಥಹಳ್ಳಿ ನೂತನ ಬಿಜೆಪಿ ಮಂಡಲಕ್ಕೆ ಶುಭಾಶಯಗಳು

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಪತ್ರಕರ್ತರ ದಿನ!

ತೀರ್ಥಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಪತ್ರಕರ್ತರ ದಿನ!
– ಸಾಧಕರು, ಪ್ರತಿಭಾವಂತರಿಗೆ ಸನ್ಮಾನ: ಪತ್ರಕರ್ತರ ಕೆಲಸ ಅವಲೋಕನ
– ಪತ್ರಿಕಾ ರಂಗ ಕಷ್ಟದಲ್ಲಿದೆ: ಪತ್ರಕರ್ತರು, ಗಣ್ಯರು,ಅಭಿಪ್ರಾಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಪತ್ರಿಕಾ ಧರ್ಮ ಸುದ್ದಿಗಾಗಿ ಅಥವಾ ಟಿಆರ್ಪಿಯ ಜನಪ್ರಿಯತೆಯ ಹಿಂದೆ ಓಡುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ತಪ್ಪಾಗಿ ಗ್ರಹಿಕೆ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಕೋಣಂದೂರು ಪ್ರಥಮ ದರ್ಜೆ ಕಾಲೇಜಿನ ಮಾನವ ಕುಲಶಾಸ್ತ್ರಜ್ಞ ಪಿ. ಆರಡಿಮಲ್ಲಯ್ಯ ಕಟ್ಟೀರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರ ಕುರಿತು ನಾಗರೀಕ ಪ್ರಪಂಚಕ್ಕೆ ಮಾಹಿತಿ ಇರಲಾದರು. ಅಂತವ ವ್ಯಕ್ತಿಗಳಿಗೆ ಹೆಸರು ಇರುವುದಿಲ್ಲ. ಜನಮನ್ನಣೆ ಇರುವುದಿಲ್ಲ. ಕಡೆಯದಾಗಿ ಸಂಬಳವೂ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಧ್ವನಿ ಇಲ್ಲದವರ ಧ್ವನಿಯಾಗುವುದಾದರು ಹೇಗೆ ಎಂದು ಪ್ರಶ್ನಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಪ್ರಾಮಾಣಿಕವಾಗಿ ಜನರ ಮುಂದಿಡುವ ಮತ್ತೊಂದು ಅಂಗವಾಗಿ ಮಾದ್ಯಮರಂಗ ಗುರುತಿಸಿಕೊಂಡಿದೆ. ಧೈರ್ಯವಾಗಿ ಪ್ರಭುತ್ವದ ವಿರುದ್ಧ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಟೀಕೆಗಳನ್ನು ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಅಪರಾಧ ಚಟುವಟಿಕೆ ಪ್ರಮಾಣವು ಅಧಿಕವಾಗುತ್ತಿದೆ. ಕ್ರೌರ್ಯದ ಬಗ್ಗೆ ದೃಶ್ಯ ಮಾದ್ಯಮಗಳು ತೋರಿಸುವ ರೀತಿ ಭಯ ಮೂಡಿಸುವಂತಿದೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಒಂದು ಕಡೆ ನಡೆಯುತ್ತಿದ್ದರೆ ಪತ್ರಕರ್ತರು ಒಂದು ವಿಚಾರದ ಬಗ್ಗೆ ಮಾತನಾಡದಂತೆ ಪೂರ್ವ ನಿರ್ಬಂಧ ಹೇರುತ್ತಿರುವ ಪ್ರಸಂಗಗಳು ಕರ್ನಾಟಕದಲ್ಲೇ ನಡೆಯುತ್ತಿದೆ ಎಂದು ಬೇಸರಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್, ಖಜಾಂಚಿ ರಂಜಿತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ತುಳುನಾಡು ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ, ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಸಾಹಿತಿ ಶಿವಾನಂದ ಕರ್ಕಿ ಕಾರ್ಯದರ್ಶಿ ಮುರುಘರಾಜ್ ಕೋಣಂದೂರು, ಜಿಲ್ಲಾ ಪ್ರತಿನಿಧಿ ಟಿ.ಜೆ.ಅನಿಲ್ ಮುಂತಾದವರು ಇದ್ದರು.

ತೀರ್ಥಹಳ್ಳಿ ತಾಲೂಕಿನ ಸಾಧಕರಿಗೆ ಸನ್ಮಾನ

ತೀರ್ಥಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ವಕೀಲ ಎಂ.ಎನ್.ರಮೇಶ್, ಮಕ್ಕಳ ತಜ್ಞ ಡಾ.ಪ್ರಭಾಕರ್, ಕ್ರೀಡಾ ಪೋಷಕ ಅಬ್ದುಲ್ ಕಲಾಂ ಆಜಾದ್, ಪಶು ವೈದ್ಯ ಡಾ.ಪಾವುಲ್ ಕ್ಯಾಸ್ತಲಿನೋ, ಹಿರಿಯ ಸಂಗೀತ ಕಲಾವಿದ ಕೃಷ್ಣದಾಸ್ ಹೆಜಮಾಡಿ, ಐಐಟಿ ಪ್ರವೇಶ ಪಡೆದ ಸುಶಾಂತ್ ಎಂ.ಪ್ರಭು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿರುವ ಆರ್.ದೀಕ್ಷಾ, ಆರ್. ನೇತ್ರಾ, ಶ್ರಮಜೀವಿ ಎಂ.ಕೆ.ಶ್ರೀನಿವಾಸ ಪೂಜಾರಿ, ಯುವ ಸಹಕಾರಿ ಉದ್ಯಮಿ ಕಂಪದಗದ್ದೆ ಸುರೇಶ್, ಕೋಣಂದೂರು ಅಬ್ಬಾಸ್ ಮತ್ತು ಪತ್ರಕರ್ತರ ಕುಟುಂಬದವರಾಗಿದ್ದು ಉನ್ನತ ಸಾಧನೆ ಮಾಡಿರುವ ಕೆ.ಆರ್.ದೀಕ್ಷಾ, ಜಿ.ಎಂ.ಶ್ರವಣ್, ಜಿ.ಎಂ.ಶ್ರೇಯನ್ ಇವರುಗಳನ್ನು ಸನ್ಮಾನಿಸಲಾಯಿತು.
ಪತ್ರಕರ್ತರ. ದಿನ, ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳಿಗೆ ಜನ ಸೇರಲ್ಲ ಎಂಬುದಕ್ಕೆ ಅಪವಾದ ಎಂಬಂತೆ 600ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Categories
ತೀರ್ಥಹಳ್ಳಿ

ಸ್ವಾತಂತ್ರ ದಿನದಂದು ರಾಷ್ಟ್ರಧ್ವಜದ ಅಪಮಾನ ಮಾಡಬೇಡಿ…!

ಸ್ವಾತಂತ್ರ ದಿನದಂದು ರಾಷ್ಟ್ರಧ್ವಜದ ಅಪಮಾನ ಮಾಡಬೇಡಿ…!
– ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಮಾಡುವ ಕುರಿತು ಆಡಳಿತಕ್ಕೆ ಮನವಿ
– ತೀರ್ಥಹಳ್ಳಿಯಲ್ಲಿ ಹಿಂದೂ ಜನ ಜಾಗೃತಿ ಸಮಿತಿಯಿಂದ ಮನವಿ ಪತ್ರ

NAMMUR EXPRESS NEWS
ತೀರ್ಥಹಳ್ಳಿ : ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಕಛೇರಿಯ ಶಿರಸ್ತೆದಾರ್ ಸತ್ಯಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈಎನ್, ಶ್ರೀ ನಾಗರಾಜ್ ಡಿ ಪಟ್ಟಣ ಪಂಚಾಯಿತಿ ಅಧಿಕಾರಿ, ಪೋಲಿಸ್ ಅಧೀಕ್ಷಕರ ಕಛೇರಿಗೆ ಮನವಿ ನೀಡಲಾಯಿತು.
ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ.ಈ ರಾಷ್ಟ್ರೀಯ ಧ್ವಜಗಳನ್ನು 15 ಆಗಸ್ಟ್ ಮತ್ತು 26  ಜನವರಿಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗುವುದಿಲ್ಲ. ಆದ್ದರಿಂದ ಈ ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಕಾಣಬೇಕಾಗಿದೆ. ರಾಷ್ಟ್ರಧ್ವಜದ ಈ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈ ಹೈಕೋರ್ಟ್‌ನಲ್ಲಿ PIL (103/2011) ಸಲ್ಲಿಸಲಾಗಿದೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕು.
ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆ ಕೂಡಲೇ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಎಂಬ ಉಪಕ್ರಮವನ್ನು ನಡೆಸಲು ಸೂಚನೆಗಳನ್ನು ನೀಡಿ ಎಂದು ವಿನಂತಿಸುತ್ತೇವೆ ಎಂದು ಯತಿರಾಜ್ ಪಟ್ಟಣ ಪಂಚಾಯಿತಿ ಸದಸ್ಯರು, ಶ್ರೀ ಸುರೇಂದ್ರ  ಶ್ರೀ ಚೌಡೇಶ್ವರಿ ದೇವಸ್ಥಾನ ಕಾರ್ಯದರ್ಶಿಗಳು. ಸೀಬಿನಕೆರೆ, ಉಪೇಂದ್ರ ಆಚಾರ್ ನಿರ್ದೇಶಕರು ತಾಲೂಕು ವಿಶ್ವಕರ್ಮ ಸಮಾಜ, ನಾರಾಯಣಗೌಡ ನಿವೃತ್ತ ಯೋಧರು, ಬಾಲ ಗೋಕುಲ ಜಿಲ್ಲಾ ಸಂಯೋಜಕರಾದ ಸಾವಿತ್ರಿ ಷಣ್ಮುಖ, ಶ್ರೀ. ಶ್ರೀನಿವಾಸ್ ತಾಲೂಕ್ ಪಂಚಾಯಿತಿ ಮಾಜಿ ಸದಸ್ಯರು, ಹಿಂದೂ ಜನ ಜಾಗೃತಿ ಸಮಿತಿಯ  ಶ್ರೀ ಸುಮಂತ್, ವಿಠ್ಠಲ್ ಆಚಾರ್, ಸೌ.ವಾರಿಜಾ, ಸೌ.ಸ್ವರ್ಣ ಸೇರಿದಂತೆ ಇನ್ನಿತರ ರಾಷ್ಟ್ರ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ಪ್ರಭಾಕರ್ ಹೊರಬೈಲು ಅವರಿಗೆ ಮೇಲಿನಕುರುವಳ್ಳಿ ಗ್ರಾ.ಪಂ ಸಾರಥ್ಯ

ಪ್ರಭಾಕರ್ ಹೊರಬೈಲು ಅವರಿಗೆ ಮೇಲಿನಕುರುವಳ್ಳಿ ಗ್ರಾ.ಪಂ ಸಾರಥ್ಯ
– ಅಧ್ಯಕ್ಷರಾಗಿ ಹೊರಬೈಲು ಪ್ರಭಾಕರ್ ಅವಿರೋಧ ಆಯ್ಕೆ
– ಕಿಮ್ಮನೆ ರತ್ನಾಕರ್ ಸೇರಿ ಅನೇಕ ನಾಯಕರಿಂದ ಶುಭ ಹಾರೈಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಗ್ರಾಮ ಪಂಚಾಯತ್ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಹೊರಬೈಲು ಪ್ರಭಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜುಲೈ 28ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಗ್ರಾ.ಪಂ.ನ 15 ಸದಸ್ಯರು ಒಮ್ಮತದಿಂದ ಪ್ರಭಾಕ‌ರ್ ಆಯ್ಕೆಗೆ ಸಹಮತಿಸಿದರು. ನೂತನ ಅಧ್ಯಕ್ಷ ಪ್ರಭಾಕರ್‌ರನ್ನು ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಅಭಿನಂದಿಸಿ ಶುಭ ಹಾರೈಸಿದರು.
ಬುಕ್ಲಾಪುರ ವಾರ್ಡ್ 2ರ ಸದಸ್ಯರು ಈ ಹಿಂದಿನಿಂದಲೂ
ಗ್ರಾಮ ಪಂಚಾಯ್ತಿಯ ಸದಸ್ಯರಾಗಿ ಅನುಭವವನ್ನ ಹೊಂದಿದ್ದಾರೆ
ಬುಕ್ಲಾಪುರ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಪದ್ಮನಾಭ ಹಾರೋಗೋಳಿಗೆ, ಕೆಳೆಕೆರೆ ದಿವಾಕರ್, ಮಾಜಿ ಅಧ್ಯಕ್ಷರಾದ ರವಿ, ಬಂಡೆ ವೆಂಕಟೇಶ್, ಪಟ್ಟಣ ಪಂಚಾಯಿತಿಯ ಸದಸ್ಯರಾದ ರಾಘವೇಂದ್ರ ಶೆಟ್ಟಿ, ಮುಖಂಡರಾದ ಅಮರಪಾಲಿ ಸುರೇಶ್, ಗ್ರಾಮ ಪಂಚಾಯಿತಿಯ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ ನಮ್ಮೂರ್ ಪ್ರಾಬ್ಲಮ್

ಸಿ.ಕೆ ರೋಡ್ ರಸ್ತೆ ಬಸ್ ನಿಲ್ದಾಣ ಯಾವಾಗ ಬೀಳುತ್ತೋ..?

ನಮ್ಮೂರ್ ಪ್ರಾಬ್ಲಮ್

ಸಿ.ಕೆ ರೋಡ್ ರಸ್ತೆ ಬಸ್ ನಿಲ್ದಾಣ ಯಾವಾಗ ಬೀಳುತ್ತೋ..?
– ಬಲಿಗಾಗಿ ಕಾದು ಕುಳಿತ ನಿಲ್ದಾಣವಾಯಿತೇ..?
– ಹಳೆಯ ಬಸ್ ನಿಲ್ದಾಣ ತೆಗೆದು ಹೊಸದು ಮಾಡಲು ಮನವಿ

ವಿಶೇಷ ವರದಿ: ಧೀರಜ್ ಇರುವತ್ತಿ
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮಾಳೂರು ಸಿ.ಕೆ ರೋಡ್ ಶಾಲೆ ಕಾಲೇಜು ರಸ್ತೆ ಮುಂಭಾಗ ಇರುವ ಬಸ್ ನಿಲ್ದಾಣ ಬಲಿಗಾಗಿ ಕಾದು ಕುಳಿತಿದೆ. ಯಾವುದೇ ನಿರ್ವಹಣೆ ಇಲ್ಲದೆ ಬಸ್ ನಿಲ್ದಾಣದ ಎರೆಡು ಬದಿಯ ಕಬ್ಬಿಣದ ಕಂಬ ಸoಪೂರ್ಣ ತುಕ್ಕು ಹಿಡಿದು ಮುಕ್ಕಾಲು ಭಾಗ ಈಗಾಗಲೇ ಶಿಥಿಲಗೊಂಡು ಬೀಳುವ ಹಂತ ತಲುಪಿದೆ. ಈ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ತಮ್ಮ ತಮ್ಮ ಊರಿಗೆ ಹೋಗಲು ದಿನಂ ಪ್ರತಿ ಈ ನಿಲ್ದಾಣದಲ್ಲಿ ನಿಲ್ಲುತ್ತಾರೆ. ಹಾಗೆ ಇತರ ಪ್ರಯಾಣಿಕರು ಸಹ ಇರುತ್ತಾರೆ ಬಹುಶಃ ಈ ನಿಲ್ದಾಣದ ಪರಿಸ್ಥಿತಿ ನೋಡಿದರೆ ಅದರ ಬಳಿ ಹೋಗಲು ಭಯ ವಾಗುತ್ತದೆ. ಪ್ರಯಾಣಿಕರ ತಂಗುದಾಣ ಪ್ರಾಣ ತೆಗೆಯುವ ತಂಗುದಾಣವಾಗಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೇಳಿ ಕೇಳಿ ಮಲೆನಾಡು ಭಾಗ ಈ ಸಮಯದಲ್ಲಿ ಗಾಳಿ ಮಳೆ ಹೆಚ್ಚು ವಿಧ್ಯಾರ್ಥಿಗಳು ಈ ಸಮಯದಲ್ಲಿ ನಿಲ್ದಾಣದಲ್ಲಿರುವಾಗ ಏನಾದ್ರೂ ಹೆಚ್ಚು ಕಮ್ಮಿ ಅದರೆ ಯಾರೂ ಜವಾಬ್ದಾರರು..?.ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಅಥವಾ PWD ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈ ನಿಲ್ದಾಣವನ್ನು ಬೇಗ ಸರಿ ಪಡಿಸಿ ಮಕ್ಕಳ ಹಾಗೂ ಪ್ರಯಾಣಿಕರ ಜೀವದ ಜೋತೆ ಚೆಲ್ಲಾಟ ಆಡುವ ಮುನ್ನ ಈ ನಿಲ್ದಾಣ ದುರಸ್ತಿಗೊಳಿಸಿ ಎಂಬ ಅಗ್ರಹ ವ್ಯಕ್ತವಾಗಿದೆ. ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲು ಜನತೆ ಅಗ್ರಹಿಸಿದ್ದಾರೆ.

Categories
ಕರಾವಳಿ

ಬೆಳ್ತಂಗಡಿ: ಬಸ್ ಸ್ಟಾಂಡ್ ಬಳಿ ನುಗ್ಗಿದ ಕಾಡು ಆನೆ: ಮಕ್ಕಳು ಅಪಾಯದಿಂದ ಪಾರು!

ಟಾಪ್ ನ್ಯೂಸ್ ಕರಾವಳಿ

ಬೆಳ್ತಂಗಡಿ: ಬಸ್ ಸ್ಟಾಂಡ್ ಬಳಿ ನುಗ್ಗಿದ ಕಾಡು ಆನೆ: ಮಕ್ಕಳು ಅಪಾಯದಿಂದ ಪಾರು!

* ಕಾಪು: ಮಂಗಳೂರು ಗೋವಾ ರೈಲು ನಿಲುಗಡೆ ಆರಂಭ
* ಮಂಗಳೂರು: ಬಾವಿಗೆ ಬಿದ್ದು ಚಿರತೆ ಸಾವು
* ಬೈಂದೂರು: ಮಳೆಯಿಂದಾಗಿ ಮನೆಗಳಿಗೆ ಹಾನಿ
* ಪುತ್ತೂರು: ಬೆಂಗಳೂರು ಮತ್ತು ಪುತ್ತೂರು ಅಂಬಾರಿ ಉತ್ಸವ್ ಬಸ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಮಕ್ಕಳು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಕಾಡು ಆನೆ ಬಂದಿದ್ದು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಬೊಳಿಯಾರ್ ಸಮೀಪ ಬಸ್ ನಿಲ್ದಾಣದಲ್ಲಿ ಮಕ್ಕಳು ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ, ಕಾಡಾನೆಯೊಂದು ನಿಲ್ದಾಣದ ಕಡೆಗೆ ಓಡಿ ಬಂದಿದೆ. ಮಕ್ಕಳು ಹತ್ತಿರ ಬರುತ್ತಿರುವ ಕಾಡಾನೆಯನ್ನು ಕಂಡು ಭಯಭೀತರಾಗಿ ಬಸ್ ನಿಲ್ದಾಣದ ಬಳಿಯಿದ್ದ ಅಂಗಡಿಗಳಿಗೆ ನುಗ್ಗಿ ರಕ್ಷಣೆ ಪಡೆದುಕೊಂಡಿದ್ದಾರೆ.‌ ಬಳಿಕ ಆನೆಯು ಕಾಡಿನತ್ತ ಧಾವಿಸಿದ್ದು, ಸುತ್ತಮುತ್ತಲ ಜನರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.‌ ಬೆಳ್ತಂಗಡಿಯಲ್ಲಿ ಅಧಿಕ ಮಳೆಯಾಗಿ ನಷ್ಟ ಅನುಭವಿಸುತ್ತಿರುವ ನಡುವೆಯೇ ಕಾಡಾನೆಯ ಸಮಸ್ಯೆಯು ತಲೆದೋರಿರುವುದು ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಶಾಲಾ ಮಕ್ಕಳು ಮತ್ತು ಹೈನುಗಾರಿಕೆ ನಡೆಸುವವರು ಭೀತಿಯಿಂದಲೇ ತಮ್ಮ ತಮ್ಮ ಸ್ಥಳಗಳಿಗೆ ಓಡಾಡುವಂತಾಗಿದೆ.‌ ಈ ಸಮಸ್ಯೆಯನ್ನು ಅರಣ್ಯ ಇಲಾಖೆಯವರು ಆದಷ್ಟು ಬೇಗ ಪರಿಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಕಾಪು: ಮಂಗಳೂರು ಗೋವಾ ರೈಲು ನಿಲುಗಡೆ ಆರಂಭ

ಕಾಪು: ಮಂಗಳೂರು ಗೋವಾ ನಡುವಿನ ಎಕ್ಸ್ ಪ್ರೆಸ್ ರೈಲು ಪಡುಬಿದ್ರೆ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವುದು ಸೋಮವಾರದಿಂದ ಪ್ರಾರಂಭಗೊಂಡಿದೆ. ಬೆಳಪು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ರೈಲು ನಿಲುಗಡೆ ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ದೇವಿಪ್ರಸಾದ ಶೆಟ್ಟಿ ಅವರ ನೇತೃತ್ವದಲ್ಲಿ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.. ಈ ಸುಸಂದರ್ಭದಲ್ಲಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ ಅವರು “ಬಹಳ ವರ್ಷಗಳಿಂದ ನಿಲುಗಡೆಗೆ ಮತ್ತು ಅಭಿವೃದ್ಧಿಗೆ ಬೇಡಿಕೆಯನ್ನು ಇಡುತ್ತಲೇ ಬಂದಿದ್ದೆವು. ಇದಕ್ಕಾಗಿ ಹಲವಾರು ಹೋರಾಟಗಳನ್ನು ಸಹ ನಡೆಸಿದೆವು. ನಮ್ಮ ಹೋರಾಟಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದು, ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವರಾದ ವಿ ಸೋಮಣ್ಣ ಅವರ ಮೂಲಕ ಇಂದು ನಮ್ಮ ಬಹು ವರ್ಷಗಳ ಪ್ರಯತ್ನಕ್ಕೆ ಫಲ ನೀಡಿದ್ದಾರೆ. ಆ ಮೂಲಕ ಬೇಡಿಕೆಯನ್ನು ಈಡೇರಿಸಿದ್ದಾರೆ” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಹೋರಾಟ ಸಮಿತಿಯ ರಾಕೇಶ್, ಗ್ರಾಮಸ್ಥರು, ರೈಲ್ವೆ ಸ್ಟೇಷನ್ ಮಾಸ್ಟರ್ ಆದ ಶಂಕರನ್ ಮತ್ತು ಸಿಬ್ಬಂದಿಗಳು, ಆಟೋ ಚಾಲಕರು ದೇವಿಪ್ರಸಾದ್ ಶೆಟ್ಟಿ ಅವರೊಂದಿಗೆ ಜೊತೆಗೂಡಿದರು.

ಮಂಗಳೂರು: ಬಾವಿಗೆ ಬಿದ್ದು ಚಿರತೆ ಸಾವು

ಮಂಗಳೂರು: ಕಿನ್ನಿಗೋಳಿಯ ರಾಬರ್ಟ್ ಎನ್ನುವವರ ಮನೆಯ ಬಾವಿಯೊಳಗೆ ಚಿರತೆಯೊಂದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ರಾಬರ್ಟ್ ಅವರು ನೀರನ್ನು ತುಂಬಿಸಲು ಪಂಪ್ ಹಾಕಿದಾಗ ನೀರು ಬರಲಿಲ್ಲ. ಇದಕ್ಕೆ ಕಾರಣ ಏನು ಎಂದು ಪರಿಶೀಲಿಸಲು ಬಾವಿಯ ಬಳಿ ಹೋದಾಗ, ಅದರೊಳಗೆ ಚಿರತೆಯೊಂದು ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ. ಕೂಡಲೇ ಪಂಪ್ ಸ್ವಿಚ್ ಅನ್ನು ಆಫ್ ಮಾಡಿ, ಸತ್ತ ಚಿರತೆಯನ್ನು ನೈಲಾನ್ ಹಗ್ಗದ ಮೂಲಕ ಮೇಲೆ ತರಲು ಪ್ರಯತ್ನ ನಡೆಸಲಾಯಿತು. ಚಿರತೆ ಬಿದ್ದ ರಭಸಕ್ಕೆ ಹಗ್ಗ ಮತ್ತು ಪೈಪ್ ತುಂಡಾಗಿದ್ದು, ಪಂಪ್ ಗೆ ಅಳವಡಿಸಲಾಗಿದ್ದ ವಿದ್ಯುತ್ ವಯರ್ ಅನ್ನು ಕಚ್ಚಿ, ಚಿರತೆ ಮೃತಪಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಬೈಂದೂರು: ಮಳೆಯಿಂದಾಗಿ ಮನೆಗಳಿಗೆ ಹಾನಿ

ಬೈಂದೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸುಮಾರು ಅರವತ್ತಕ್ಕೂ ಹೆಚ್ಚು ಮನೆಗಳು, ಕೊಟ್ಟಿಗೆಗಳು, ಕೃಷಿ ತೋಟ, ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೈಂದೂರಿನಲ್ಲಿ ಸುಮಾರು ಎಂಟು ಮನೆಗಳಿಗೆ ಹಾನಿ ಸಂಭವಿಸಿದ್ದು, ಇದರಿಂದಾಗಿ 5.60 ಲಕ್ಷದಷ್ಟು ರೂಪಾಯಿ ನಷ್ಟ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ನಿರೀಕ್ಷೆಗೂ ಮೀರಿದ ಮಳೆಯಿಂದಾಗಿ ಅಸ್ತವ್ಯಸ್ತವಾಗಿದೆ ಜನರ ಜೀವನ.

ಪುತ್ತೂರು: ಬೆಂಗಳೂರು ಮತ್ತು ಪುತ್ತೂರು ಅಂಬಾರಿ ಉತ್ಸವ್ ಬಸ್

ಪುತ್ತೂರು: ಪುತ್ತೂರಿನ ಪ್ರಯಾಣಿಕರ ಬಹು ದಿನಗಳ ಬಯಕೆ ಭಾನುವಾರದಂದು ಈಡೇರಿದಂತಾಗಿದೆ. ಪುತ್ತೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ಅಂಬಾರಿ ಉತ್ಸವ್ ಬಸ್ ಎಂಬ ನೂತನ ಬಸ್ ಅನ್ನು ಹೊರಡಿಸಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ.‌ ಪ್ರತಿದಿನ ರಾತ್ರಿ 10:30ಕ್ಕೆ ಮಂಗಳೂರಿನಿಂದ ಹೊರಡುವ ಈ ಸ್ಲೀಪರ್ ಕೋಚ್ ಬಸ್ ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು ಮಾರ್ಗವಾಗಿ ಹಾದು ಬೆಂಗಳೂರನ್ನು ತಲುಪಲಿದೆ. ಸಾರ್ವಜನಿಕರು ಈ ಹಿಂದೆ ಬಸ್ ಗಾಗಿ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಮನವಿ ಬಂದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಯಾಣಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.

Categories
ಶೃಂಗೇರಿ

ಶೃಂಗೇರಿ ಜಗದ್ಗುರು ಶ್ರೀಶ್ರೀವಿದುಶೇಖರ ಭಾರತೀ ಸ್ವಾಮಿಗಳ 33 ನೇ ವರ್ಧಂತಿ ಮಹೋತ್ಸವ

ಶೃಂಗೇರಿ ಜಗದ್ಗುರು ಶ್ರೀಶ್ರೀವಿದುಶೇಖರ ಭಾರತೀ ಸ್ವಾಮಿಗಳ 33 ನೇ ವರ್ಧಂತಿ ಮಹೋತ್ಸವ

* ಶೃಂಗೇರಿ ಶ್ರೀಶಾರದಾ ಪೀಠದ 37 ನೇ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳು
* ವರ್ಧಂತಿ ಪ್ರಯುಕ್ತ ಶ್ರೀಮಠದಲ್ಲಿ ವಿಶೇಷ ಪೂಜೆ,ಅಲಂಕಾರ

NAMMMUR EXPRESS NEWS
ಶೃಂಗೇರಿ: ಇಂದು ಶೃಂಗೇರಿ ಶ್ರೀ ಶಾರದಾ ಪೀಠದ 37 ನೇ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ 33 ನೇ ವರ್ಧಂತಿ ಮಹೋತ್ಸವ.ಇದರ ಅಂಗವಾಗಿ ನರಸಿಂಹವನದ ಗುರುನಿವಾಸದಲ್ಲಿ ಬೆಳಗ್ಗೆಯೇ ಕಿರಿಯ ಶ್ರೀಗಳು ಮಹಾಸನ್ನಿದಾನಂ ಶ್ರೀ ಭಾರತೀತೀರ್ಥ ಸ್ವಾಮಿಗಳ ಆಶೀರ್ವಾದ ಪಡೆದರು.
ನಂತರ 7 ಗಂಟೆಗೆ ಜಗದ್ಗುರುಗಳು ಭಕ್ತಾಧಿಗಳಿಗೆ ಆಹ್ನಿಕ ದರ್ಶನ ನೀಡಿದರು. ಬೆಳಿಗ್ಗೆ 10 ಗಂಟೆಗೆ ಗುರು ನಿವಾಸದಲ್ಲಿ ಜಗದ್ಗುರುಗಳು ಅನುಗ್ರಹ ಭಾಷಣ ಇರಲಿದ್ದು,ಜಗದ್ಗುರುಗಳ ದರ್ಶನ ಪಡೆಯಲು ಬೆಳಗ್ಗೆಯೇ ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತಾಧಿಗಳು ಆಗಮಿಸಿ,ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲಿದ್ದಾರೆ. ಬೆಳಿಗ್ಗೆ 11:30 ಕ್ಕೆ ಮಹಾರುದ್ರ ಮಹಾಯಾಗ ದಿಲ್ಲಿ ಶ್ರೀಗಳು ಪಾಲ್ಗೊಳ್ಳಲಿದ್ದಾರೆ. ರಾತ್ರಿ 8:30 ಕ್ಕೆ ಗುರುನಿವಾಸದಲ್ಲಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಪೂಜೆಯನ್ನು ಶ್ರೀಗಳು ಸಲ್ಲಿಸಲಿದ್ದಾರೆ.
ಶ್ರೀಮಠದಲ್ಲಿ ಕಿರಿಯ ಶ್ರೀಗಳ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಲಿದ್ದು,ವರ್ಧಂತಿ ಸಲುವಾಗಿ ಗುರು ನಿವಾಸವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದೆ.

Categories
ಕುಂದಾಪುರ

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಿಗೆ ಪ್ರಶಸ್ತಿಯ ಗರಿ

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಿಗೆ ಪ್ರಶಸ್ತಿಯ ಗರಿ
– ಗಣೇಶ್ ಮೊಗವೀರ ಅವರಿಗೆ ಡಾ. ಶ್ಯಾಮ್ ಸುಂದರ್ ಮುಖರ್ಜಿ ಪ್ರಶಸ್ತಿ
– ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

NAMMUR EXPRESS NEWS
ಕುಂದಾಪುರ: ಪ್ರತಿಷ್ಠಿತ ಟೊಪ್ನೆಟೆಕ್ ಫೌಂಡೇಶನ್ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಡಾ. ಶ್ಯಾಮ್ ಸುಂದರ್ ಮುಖರ್ಜಿ ಪ್ರಶಸ್ತಿಯನ್ನು, ಈ ಬಾರಿ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮತ್ತು ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರಿಗೆ ನೀಡಿ ಗೌರವಿಸಲಾಗಿದೆ.
ಮುಂಬೈನ ಪ್ರಸಿದ್ಧ ತಾಜ್ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ, 2025 ನೇ ಸಾಲಿನ ಈ ಪ್ರಶಸ್ತಿಯನ್ನು ಗಣೇಶ ಮೊಗವೀರ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಗಣೇಶ್ ಮೊಗವೀರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

Categories
ಕಾರ್ಕಳ

ಕ್ರಿಯೇಟಿವ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಾರ್ಯಾಗಾರ

ಕ್ರಿಯೇಟಿವ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಾರ್ಯಾಗಾರ
* ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
* ಅರ್ಥಶಾಸ್ತ್ರ ವಿಷಯದ ವಿಚಾರ ಮಂಡನೆ, ಪುರಸ್ಕಾರ ವಿತರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

NAMMUR EXPRESS NEWS
ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 28 ಜುಲೈ 2025 ರಂದು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು.
ಕಾರ್ಯಗಾರದ ಉದ್ಘಾಟನೆಯನ್ನು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಕಾರ್ಕಳದ ಉದ್ಯಮಿ ಸೂರಜ್ ಶೆಟ್ಟಿ ನೆರವೇರಿಸಿ ಉದ್ಘಾಟನಾ ಮಾತುಗಳನ್ನಾಡುತ್ತ ” ಮನೆ ಬಜೆಟ್ ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಶ್ಲೇಷಣಾ ಕೌಶಲ್ಯ, ಆರ್ಥಿಕ ತರ್ಕ ಮತ್ತು ನಿರ್ಣಾಯಕತೆ ಅಗತ್ಯ ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಮಾರುತಿ ರವರು ” ಅರ್ಥಶಾಸ್ತ್ರ ಮತ್ತು ಆರ್ಥಿಕತೆ ಎಂದರೆ ಕೇವಲ ಹಣದ ಚಲಾವಣೆ ಅಲ್ಲ, ಅದು ನಮ್ಮ ಆಯ್ಕೆಗಳು, ಆದ್ಯತೆಗಳು ಮತ್ತು ಜೀವನ ಪಾಠಗಳ ಚಿಹ್ನೆಯಾಗಿದೆ ” ಎಂದು ಹೇಳುತ್ತಾ ಜಾಗತಿಕ ಆರ್ಥಿಕತೆಯ ಪ್ರವಾಹದಲ್ಲಿ ಹೇಗೆ ಸಮತೋಲನ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರೂ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ಅರ್ಥಶಾಸ್ತ್ರದ ಮಹತ್ವ, ಅದರ ಪ್ರಾಯೋಗಿಕ ಬಳಕೆ ಹಾಗೂ ಅರ್ಥಶಾಸ್ತ್ರವನ್ನು ವೃತ್ತಿಯಾಗಿ ಹೇಗೆ ಆಚರಿಸಬಹುದು ಎಂಬುದರ ಕುರಿತು ಮಾತುಗಳನ್ನಾಡಿದರು.
ಕಾರ್ಯಗಾರದಲ್ಲಿ 2025 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ 2025 ನೇ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಶೇ. 100 ಫಲಿತಾಂಶ ಸಾಧಿಸಿದ ಕಾಲೇಜುಗಳ ಉಪನ್ಯಾಸಕರನ್ನು ಪುರಸ್ಕರಿಸಿ ಗೌರವಿಸಲಾಯಿತು.
2025 ರಲ್ಲಿ ಅರ್ಥಶಾಸ್ತ್ರ ವಿಷಯದಿಂದ ಪ್ರಾಂಶುಪಾಲರಾಗಿ ಮುಂಬಡ್ತಿ ಹೊಂದಿದ ಶ್ರೀ ವಿನ್ಸೆಂಟ್ ವಿನೋದ್ ಡಿಸೋಜಾ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ಬೆಳ್ಮಣ್ಣು ಇವರನ್ನು ಅಭಿನಂದಿಸಲಾಯಿತು.
2025 ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಶ್ರೀ ಗೋಪಾಲ್ ಭಟ್, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿ ಮತ್ತು ಶ್ರೀ ನಾಗರಾಜ್ ವೈದ್ಯ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಳಿಯಂಗಡಿ.ಇವರನ್ನು ಸನ್ಮಾನಿಸಲಾಯಿತು.
ಕಾರ್ಯಗಾರದಲ್ಲಿ ಪೂರ್ವಾಹ್ನ ” ಎರಡನೇ ವರ್ಷದ ಅರ್ಥಶಾಸ್ತ್ರದಲ್ಲಿ ಗಣಿತದ ಸಮಸ್ಯೆಗಳಿಗೆ ಪರಿಹಾರ ” ಎಂಬ ವಿಚಾರದ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದ ಅರ್ಥಶಾಸ್ತ್ರ ಉಪನ್ಯಾಸಕರಾದ ದಿನಕರ ಶೆಟ್ಟಿ ಇವರು ವಿಚಾರ ಮಂಡಿಸಿದರು.
ಅಪರಾಹ್ನ ” ಹೊಸ ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಕೆಗೆ ಸಂಬಂಧಿಸಿದ ಮಾಹಿತಿಗಳು ” ಎಂಬ ವಿಚಾರದ ಕುರಿತು ಸರ್ಕಾರಿ ಸ್ವತಂತ್ರ ಪಿ.ಯು. ಕಾಲೇಜು, ಹಾಸನದ ಅರ್ಥಶಾಸ್ತ್ರ ಉಪನ್ಯಾಸಕರಾದ ಧರ್ಮೇಂದ್ರ ಬಿ.ಜಿ ಇವರು ವಿಚಾರ ಮಂಡಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಗಾರದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಮಂಡಳಿ, ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರು, ಕ್ರಿಯೇಟಿವ್ ಕಾಲೇಜಿನ ಬೋಧಕ- ಬೋಧಕೇತರವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷೆ ಅನುರಾಧ. ಎಚ್. ರವರು ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ಕೊಲ್ಲೂರು ರವರು ವಂದಿಸಿದರು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಕ್ಷಯ ಹೆಗ್ಡೆ ಮೊಳಹಳ್ಳಿ ರವರು ಕಾರ್ಯಕ್ರಮ ನಿರ್ವಹಿಸಿದರು.