Categories
ತೀರ್ಥಹಳ್ಳಿ

ಮಂಜುನಾಥ ಗೌಡರಿಗೆ ಜಾಮೀನು ಮಂಜೂರು

ಮಂಜುನಾಥ ಗೌಡರಿಗೆ ಜಾಮೀನು ಮಂಜೂರು
– ಇಡಿ ಬಂಧನದಲ್ಲಿದ್ದ ಮಂಜುನಾಥ ಗೌಡ
– ಹೈ ಕೋರ್ಟ್ ಅಲ್ಲಿ ಜಾಮೀನು ಮಂಜೂರು
– 15 ದಿನಗಳ ಬಳಿಕ ತೀರ್ಥಹಳ್ಳಿ ಆಗಮನ?

NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ಧುರೀಣ ಆರ್ ಎಂ ಮಂಜುನಾಥ ಗೌಡರಿಗೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಇಡಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಂಜುನಾಥ ಗೌಡರು ಈ ಸಂಬಂಧ ಜಾಮೀನು ಕೋರಿ ನ್ಯಾಯಾಲಯದ ಮೋರೆ ಹೋಗಿದ್ದರು. ಗೌಡರ ಜಾಮೀನು ಅರ್ಜಿ ಯನ್ನು ವಿಚಾರಣೆ ಕೈಗೊಂಡ ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಇಂದು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಇದೀಗ ಶಿವಮೊಗ್ಗ ಜಿಲ್ಲೆಯ ಅವರ ಅಭಿಮಾನಿ ವಲಯದಲ್ಲಿ ಭಾರಿ ಸಂತಸಕ್ಕೆ ಕಾರಣವಾಗಿದೆ.
ತೀರ್ಥಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಕೇಂದ್ರ ಬಿಜೆಪಿ ಮಂಜುನಾಥ ಗೌಡರ ವಿರುದ್ಧ ಇಡಿ ಮೂಲಕ ದಾಳಿ ಮಾಡಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಕಣ್ಣು ನೋವಿನಿಂದ ಬಳಲುತ್ತಿದ್ದ ಅವರು ಸುಮಾರು 15 ದಿನಗಳ ಕಾಲ ಬೆಂಗಳೂರಲ್ಲಿದ್ದು ಬಳಿಕ ಊರಿಗೆ ಬರುವ ಸಾಧ್ಯತೆ ಇದೆ.

Categories
ಮಂಗಳೂರು

ಅಕ್ರಮವಾಗಿ ಮದ್ಯ ಮಾರಾಟ ಪೊಲೀಸರ ದಿಢೀರ್ ದಾಳಿ

ಅಕ್ರಮವಾಗಿ ಮದ್ಯ ಮಾರಾಟ ಪೊಲೀಸರ ದಿಢೀರ್ ದಾಳಿ

NAMMUR EXPRESS NEWS
ಕಟಪಾಡಿ: ಇಲ್ಲಿನ ಪೇಟೆಯ ಶೆಡ್ ಒಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಕಾಪು ಎಸ್ಐ ತೇಜಸ್ವಿ ಟಿ.ಐ ನೇತೃತ್ವದಲ್ಲಿ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ.
ಈ ಸಂದರ್ಭ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಪ್ರವೇಶದ ಸಂದರ್ಭ ಮಾರಾಟ ಮಾಡುತ್ತಿದ್ದಾತ ಎಸ್ಕೇಪ್ ಆಗಿದ್ದಾನೆ.
ಇದೀಗ ಪೊಲೀಸರು ಅವನಿಗಾಗಿ ಬಲೆ ಬೀಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Categories
ಉಡುಪಿ

ಎಸ್.ಪಿ.ಬಿ.ಗೆ ಗೌರವ: ವಿಶ್ವ ದಾಖಲೆ ಸಾಧಕ ಯಶವಂತ್ ಎಂ.ಜಿ.ಗೆ ಪ್ರಹ್ಲಾದ್ ಜೋಶಿಯಿಂದ ಸನ್ಮಾನ

ಎಸ್.ಪಿ.ಬಿ.ಗೆ ಗೌರವ: ವಿಶ್ವ ದಾಖಲೆ ಸಾಧಕ ಯಶವಂತ್ ಎಂ.ಜಿ.ಗೆ ಪ್ರಹ್ಲಾದ್ ಜೋಶಿಯಿಂದ ಸನ್ಮಾನ

ಪದ್ಮಭೂಷಣ ಡಾ. ಎಸ್ .ಪಿ. ಬಾಲಸುಬ್ರಮಣ್ಯಂ ಅವರ ಜನ್ಮದಿನೋತ್ಸವದ ಪ್ರಯುಕ್ತ ನಿರಂತರ 24 ಗಂಟೆಗಳ ಕಾಲ ಅವರ ಗೀತೆಗಳನ್ನು ಹಾಡಿ ವಿಶ್ವ ದಾಖಲೆಯನ್ನು ಮಾಡಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಯಶವಂತ್ ಎಂಜಿ ಇವರಿಗೆ ಕೇಂದ್ರ ಗ್ರಾಹಕ ವ್ಯವಹಾರಗಳು , ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸನ್ಮಾನಿಸಿ ಗೌರವ ವಂದನೆಯನ್ನು ಸಲ್ಲಿಸಿ ,ಶುಭವನ್ನು ಹಾರೈಸಿದರು.

Categories
ವಿಶೇಷ ಸುದ್ದಿ

ಅಪರಿಮಿತ ಆನಂದದ ಹಸಿರು ಪಯಣ:

ಅಪರಿಮಿತ ಆನಂದದ ಹಸಿರು ಪಯಣ:
ಮಂಜು ಮುಸುಕಿದ ಬೆಟ್ಟಗಳ ನಡುವೆ ಕಣ್ಣು ಹಿತವಾಗಿಸುವ ಹಸಿರ ರಂಗೋಲಿ. ಪ್ರತಿ ಹಾರುವ ತಳಿರು ಒಂದು ನಗುಚಿದ್ದ ನಿಸರ್ಗದ ನುಡಿ, ಪ್ರತಿಯೊಂದು ಗಿಡದ ಮೇಲಿನ ನದಿ ಹನಿಯಂತೆ ಹಾರುವ ಮಂಜು ಮನಸ್ಸನ್ನು ಮಿಡಿಯಿಸುತ್ತದೆ. ಇದು ಕೇವಲ ದೃಶ್ಯವಲ್ಲ – ಅದು ಆತ್ಮಕ್ಕೆ ಮುಟ್ಟುವ ಅನುಭವ.
ಸಣ್ಣಸಣ್ಣ ಕಾಲುದಾರಿಗಳು ಹಾವಿನಂತೆ ಕತ್ತಲಲ್ಲಿ ಬಳುಕುತ್ತ ಸಾಗುತ್ತವೆ. ಎಡಬಿಡದೆ ಹರಿಯುವ ಗಾಳಿಯ ನಿನ್ನತೆ, ಹಸಿರು ರಾಶಿಗಳ ನಡುವೆ ಕಣ್ಣೆಳೆಯುವ ಚಿಕ್ಕಚಿಕ್ಕ ಹೂಗಳ ನಗೆ – ಈ ಎಲ್ಲವೂ ನಮ್ಮ ಭಾವನೆಗಳನ್ನು ಎದೆಗೂಡಿಸುತ್ತವೆ. ಕಾಲಿಗೆ ತಾಗುವ ತಾಜಾ ಹುಲ್ಲು, ಮೈಮುಗಿಯುವ ತಂಗಾಳಿ, ನಡುಗಲು ಹುಟ್ಟಿಸುವ ತಾರಾಟದ ವಾತಾವರಣ – ಇವೆಲ್ಲಾ ಏನೋ ಒಂದು ತಾತ್ವಿಕ ಶಾಂತಿಯನ್ನು ತುಂಬುತ್ತವೆ.
ಇಲ್ಲಿ ನಾವೆಲ್ಲರೂ ನಿಸರ್ಗದ ಭಾಗ. ಮರಗಳ ಕೆಳಗಿನ ನಿಶಬ್ದ, ಗುಡ್ಡಗಳ ಮಧ್ಯದ ಮೋಡದ ಹರಿವು, ಎಲ್ಲವೂ ನಮ್ಮೊಳಗಿನ ಆಲೋಚನೆಗಳನ್ನು ತಂಗಿಸುತ್ತ, ಆನಂದದ ತೀವ್ರತೆಯನ್ನು ಹೆಚ್ಚುಮಾಡುತ್ತವೆ. ತಿರುವು-ಮುರುವುಗಳ ದಾರಿಯಲ್ಲಿ ಸಾಗುವ ಪ್ರತಿ ಹೆಜ್ಜೆಗೂ ಹೊಸ ಅನುಭವ, ಹೊಸ ತೃಪ್ತಿ.
ಈ ಪಯಣ ಭೂದೃಶ್ಯವನ್ನು ನೋಡಲು ಅಲ್ಲ, ಅದನ್ನು ಅನುಭವಿಸಲು. ಇಲ್ಲಿ ಪ್ರತಿ ಕ್ಷಣವೂ ಕಾಲವನ್ನು ಮರೆಸಿಸುತ್ತದೆ, ಹೃದಯದ ತಾಳವನ್ನೇ ಬದಲಾಯಿಸುತ್ತದೆ. ಈ ಹಸಿರು ಲೋಕ, ಈ ಮಂಜು ಭೂಮಿ, ಈ ನೆಮ್ಮದಿಯ ದಾರಿ – ಎಲ್ಲವೂ ಜೀವಕ್ಕೆ ಹೊಸ ಉಸಿರಾಟ ನೀಡುವ ಪರಿ, ಅಪರಿಮಿತ ಆನಂದದ ಸಂಕೇತವಾಗಿದೆ.
ರಾಂ ಅಜೆಕಾರು

Categories
ಕಾರ್ಕಳ

ಕ್ರೈಸ್ಟ್ ಕಿಂಗ್ ಕಾಲೇಜಿನಿಂದ ವಾಣಿಜ್ಯ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ: ಗೋಶಾಲೆ ಮತ್ತು ವೃದ್ಧಾಶ್ರಮಕ್ಕೆ ನೆರೆದ ಭಾವಪೂರ್ಣ ಅನುಭವ

ಕ್ರೈಸ್ಟ್ ಕಿಂಗ್ ಕಾಲೇಜಿನಿಂದ ವಾಣಿಜ್ಯ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ: ಗೋಶಾಲೆ ಮತ್ತು ವೃದ್ಧಾಶ್ರಮಕ್ಕೆ ನೆರೆದ ಭಾವಪೂರ್ಣ ಅನುಭವ
* ಹೈನುಗಾರಿಕೆ ಅರಿವುಗಾಗಿ ಗೋಶಾಲೆ ಭೇಟಿ.
* ಮಾನವೀಯ ಮೌಲ್ಯಗಳಿಗಾಗಿ ವೃದ್ಧಾಶ್ರಮ ಭೇಟಿ.

NAMMUR EXPRESS NEWS
ಕಾರ್ಕಳ: ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಕ್ಷೇತ್ರದ ಕುರಿತು ಆಸಕ್ತಿ ಬೆಳೆಸುವುದು ಮತ್ತು ಹಿರಿಯ ನಾಗರೀಕರಿಗೆ ತೋರಬೇಕಾದ ಗೌರವ, ಪ್ರೀತಿ ಹಾಗೂ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪ್ರವಾಸದ ಭಾಗವಾಗಿ ವಿದ್ಯಾರ್ಥಿಗಳು ತೆಳ್ಳಾರು ರಸ್ತೆಯ ಶೇಷಾದ್ರಿ ನಗರದಲ್ಲಿರುವ ಶ್ರೀ ವೆಂಕಟರಮಣ ಗೋಶಾಲೆಗೆ ಭೇಟಿ ನೀಡಿ, ಹೈನುಗಾರಿಕೆಯ ಮಹತ್ವ ಮತ್ತು ವಿವಿಧ ಗೋವು ತಳಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಅಲ್ಲಿನ ವ್ಯವಸ್ಥಾಪಕರಾದ ಕೇಶವ ನಾಯಕ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಇದಲ್ಲದೆ, ವಿದ್ಯಾರ್ಥಿಗಳು ಗಜ್ರಿಯಾ ಆಸ್ಪತ್ರೆಗೆ ಸಮೀಪವಿರುವ ವಾತ್ಸಲ್ಯ ಸೇವಾ ಟ್ರಸ್ಟ್‌ನ ವೃದ್ಧಾಶ್ರಮಕ್ಕೆ ಭೇಟಿನೀಡಿದ್ದು, ಹಿರಿಯರ ಜೀವನದ ಅನುಭವಗಳು ಮತ್ತು ಪ್ರತಿದಿನದ ಚಟುವಟಿಕೆಗಳ ಬಗ್ಗೆ ಅರಿವು ಹೊಂದಿದರು. ವೃದ್ಧಾಶ್ರಮದ ವ್ಯವಸ್ಥಾಪಕರಾದ ಸಂದೀಪ್ ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಂಡರು.

ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾದ ಪ್ರಕಾಶ್ ಭಟ್, ಉಮೇಶ್ ಬೆಳ್ಳಿಪ್ಪಾಡಿ, ಕೃಷ್ಣ ಪ್ರಸಾದ್, ಶ್ರೀಮತಿ ಶಹನಾಝ್, ಶ್ರೀಮತಿ ಸುಕನ್ಯಾ ಮತ್ತು ಶ್ರೀಮತಿ ಶಿಜಿ ನೇತೃತ್ವ ನೀಡಿದರು. ಈ ರೀತಿಯ ಅಧ್ಯಯನಾತ್ಮಕ ಹಾಗೂ ಮಾನವೀಯ ಮೌಲ್ಯಗಳ ಸಾರವಿರುವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸದ್ಗುಣಗಳ ಬಿತ್ತನೆಗೈದು, ನಿಜವಾದ ಸಮಾಜದ ಬಗೆಗಿನ ಬುದ್ಧಿವಂತಿಕೆಯನ್ನು ಹೆಚ್ಚಿಸುವಂತೆ ಸೇವೆಸಲ್ಲಿಸಿತು.

Categories
ಶಿವಮೊಗ್ಗ

ಆರ್‌.ಎಂ.ಎಂ ಅಭಿಮಾನಿಗಳಿಂದ ದೇವರ ಮೊರೆ..!

ಆರ್‌.ಎಂ.ಎಂ ಅಭಿಮಾನಿಗಳಿಂದ ದೇವರ ಮೊರೆ..!
– ಡಾ.ಆರ್ ಎಂ ಮಂಜುನಾಥ ಗೌಡರಿಗೆ ಕಾನೂನು ಸಮರದಲ್ಲಿ ಶೀಘ್ರ ನ್ಯಾಯ ಸಿಗಲಿ ಎಂದು ಪ್ರಾರ್ಥನೆ
– ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿ ಅವರ ಆಶೀರ್ವಾದ ಪಡೆದ ಆರ್ ಎಂ ಎಂ ಶಿಷ್ಯರು

NAMMUR EXPRESS NEWS
ಶಿವಮೊಗ್ಗ : ಡಿಸಿಸಿ ಬ್ಯಾಂಕ್ ಅವ್ಯವಹಾರದ ಕೇಸಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಆರ್.ಎಂ ಮಂಜುನಾಥ ಗೌಡರಿಗೆ ಈ ಕಾನೂನು ಸಮರದಲ್ಲಿ ಶೀಘ್ರ ನ್ಯಾಯಸಿಗಲಿ. ಈ ಆರೋಪದಿಂದ ಶೀಘ್ರವಾಗಿ ನಮ್ಮ ನಾಯಕರು ಬಿಡುಗಡೆಯಾಗಲಿ ಎಂದು ಮಂಜುನಾಥ್ ಗೌಡರ ಶಿಷ್ಯಂದಿರು ಕಾಂಗ್ರೆಸ್ ನಾಯಕ ಶ್ರೀಕಾಂತ್ ಇವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಮಂಜುನಾಥ ಗೌಡರ ಶಿಷ್ಯರಾದ ನಾಗರಾಜ್ ಕುರುವಳ್ಳಿ, ಕಾರ್ತಿಕ್ ಸೇರಿ ಪ್ರಮುಖರು ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವರದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಅನ್ನದಾನ ಸೇವೆ ನಡೆಸಲಾಗಿದೆ. ಮಂಜುನಾಥ ಗೌಡರು ಶೀಘ್ರವಾಗಿ ಸಾರ್ವಜನಿಕರ ಸೇವೆಯಲ್ಲಿ ಪಾಲ್ಗೊಳ್ಳಲಿ ಎಂದು ಪ್ರಾರ್ಥಿಸಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿ ಅವರ ಆಶೀರ್ವಾದ ಪಡೆದರು. ಈ ಕಾರ್ಯದಲ್ಲಿ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಸಂಪೂರ್ಣ ಸಹಕಾರ ನೀಡಿದರು. ಇದೇ ಸಂದರ್ಭ ವಿಜಯ ನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ್ ಹಾಗೂ ಲೋಕೇಶ್ ಅವರ ನೇತೃತ್ವದಲ್ಲಿ ಕಾಲಭೈರೇಶ್ವರನ ದರ್ಶನ ಪಡೆದು ಪ್ರಾರ್ಥಿಸಲಾಯಿತು.

Categories
ಕುಂದಾಪುರ

ಎಕ್ಸಲೆಂಟ್, ಕುಂದಾಪುರ: ಸಿಎ, ಸಿಎಸ್ ಹಾಗೂ ಸಿಎಮ್‌ಎ ಫೌಂಡೇಶನ್ ತರಗತಿಯ ಉದ್ಘಾಟನೆ

ಎಕ್ಸಲೆಂಟ್, ಕುಂದಾಪುರ: ಸಿಎ, ಸಿಎಸ್ ಹಾಗೂ ಸಿಎಮ್‌ಎ ಫೌಂಡೇಶನ್ ತರಗತಿಯ ಉದ್ಘಾಟನೆ
* ಎಕ್ಸಲೆಂಟ್ ಸಂಸ್ಥೆ ಸಿಎ ಮತ್ತು ಸಿಎಸ್ ಪರೀಕ್ಷೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಶ್ರೇಷ್ಠತೆ ಸಾಧಿಸಿ ಹೆಸರು ಗಳಿಸಿದೆ.
* ಸಿಎ, ಸಿಎಸ್ ಮತ್ತು ಸಿಎಮ್‌ಎ ತರಗತಿಗಳ ಉದ್ಘಾಟನೆ ಖ್ಯಾತ ಮಾರ್ಗದರ್ಶಕರಾದ ನಾಗೇಂದ್ರ ಭಕ್ತ ಅವರಿಂದ ಜರುಗಿತು.

NAMMUR EXPRESS NEWS
೨೦೨೪-೨೫ನೇ ಸಾಲಿನಲ್ಲಿ ಎಕ್ಸಲೆಂಟ್ ಸಂಸ್ಥೆಯು ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಸಾಧಿಸಿ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟ ಹೆಮ್ಮೆಯ ಸಾಧನೆ ಮಾಡಿದೆ. ಅದೇ ರೀತಿ ೨೦೨೫ನೇ ಸಾಲಿನ ಸಿಎಸ್ ಪರೀಕ್ಷೆಯಲ್ಲಿಯೂ ನಿರೀಕ್ಷೆಗೂ ಮೀರಿ ಹೆಚ್ಚಿನ ಶೇಕಡಾವಾರು ತೇರ್ಗಡೆಯೊಂದಿಗೆ, ಉಡುಪಿ ಜಿಲ್ಲೆಯಲ್ಲಿ ಶ್ರೇಷ್ಠ ಸಾಧನೆಗೈದಿದೆ. ಈ ಸಾಧನೆಯ ಹಿಂದಿನ ಪ್ರಮುಖ ಕಾರಣವೆಂದರೆ, ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ಹಾಗೂ ಸಿಎಮ್‌ಎ ಫೌಂಡೇಶನ್ ತರಗತಿಗಳಲ್ಲಿ ಸತತವಾದ ತಯಾರಿ ಹಾಗೂ ಮಾರ್ಗದರ್ಶನ ನೀಡಿರುವುದು.

ಜೂನ್ ೩೦, ೨೦೨೫ರಂದು ಎಕ್ಸಲೆಂಟ್ ಸಂಸ್ಥೆಯ ಆವರಣದಲ್ಲಿ ಸಿಎ, ಸಿಎಸ್ ಮತ್ತು ಸಿಎಮ್‌ಎ ಫೌಂಡೇಶನ್ ತರಗತಿಯ ಅಧಿಕೃತ ಉದ್ಘಾಟನೆ ಜರುಗಿತು. ಈ ಕಾರ್ಯಕ್ರಮವನ್ನು ಖ್ಯಾತ ತರಬೇತುದಾರ ನಾಗೇಂದ್ರ ಭಕ್ತ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ಹಾಗೂ ಸಿಎಮ್‌ಎ ಕೋರ್ಸ್‌ಗಳ ಮಹತ್ವವನ್ನು ವಿವರಿಸಿ, ಯಶಸ್ಸಿಗಾಗಿ ಶ್ರದ್ಧೆ ಹಾಗೂ ಶಿಸ್ತು ಮುಖ್ಯವೆಂದು ಉಲ್ಲೇಖಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮಾತನಾಡಿ, ಪ್ರತಿ ವಿದ್ಯಾರ್ಥಿಗೂ ನಿರ್ದಿಷ್ಟ ಗುರಿ ಇರಬೇಕೆಂದು ತಿಳಿಸಿದರು. ಗುರಿಯೊಂದಿಗೆ ಪರಿಶ್ರಮದ ಮೂಲಕವೇ ಯಶಸ್ಸು ಸಾಧ್ಯ ಎಂಬುದನ್ನು ಒತ್ತಿಹೇಳಿದರು. ಪ್ರಾಂಶುಪಾಲ ನಾಗರಾಜ್ ಶೆಟ್ಟಿಯವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶಿಸ್ತು, ಸಂಯಮ ಹಾಗೂ ಸುದೀರ್ಘ ಅಧ್ಯಯನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಣೀತ್ ಮತ್ತು ಸುವಿತ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿದ್ಯಾರ್ಥಿನಿ ಚಿನ್ಮಯಿ ವಂದಿಸಿದರು.

Categories
ಕರಾವಳಿ

ಪುತ್ತೂರು: ನೂತನ ನ್ಯಾಯಾಲಯ ಲೋಕಾರ್ಪಣೆ

ಟಾಪ್ ನ್ಯೂಸ್ ಕರಾವಳಿ

* ಪುತ್ತೂರು: ನೂತನ ನ್ಯಾಯಾಲಯ ಲೋಕಾರ್ಪಣೆ
* ಮಂಗಳೂರು: ಜಯಾನಂದ ದೇವಾಡಿಗ ಇನ್ನಿಲ್ಲ
* ಹೆಬ್ರಿ: ಚತುಷ್ಪಥ ಶೀಘ್ರ ಕಾಮಗಾರಿಗೆ ಜೆಡಿಎಸ್ ಪಟ್ಟು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ತಾಲ್ಲೂಕಿನ ಬನ್ನೂರಿನ ಬಳಿ 55 ಕೋಟಿ ವೆಚ್ಚದ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿದ್ದು, ಇದರೊಂದಿಗೆ ವಕೀಲರ ಸಂಘದ ಕಟ್ಟಡವನ್ನೂ ಹೊಸದಾಗಿ ನಿರ್ಮಿಸಲಾಗಿದೆ. ಸಧ್ಯಕ್ಕೆ ಹಳೆಯ‌ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಾಗುತ್ತಿದ್ದು, ಉದ್ಘಾಟನೆ ಬಳಿಕ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗುವುದು. ಇದರ ನಿರ್ಮಾಣಕ್ಕಾಗಿ 2022ರಲ್ಲಿ ಶಿಲಾನ್ಯಾಸ ನೆರವೇರಿತ್ತು. ಮೊದಲು 25ಕೋಟಿ ರೂಪಾಯಿ ಬಿಡುಗಡೆಗೊಳಿಸಿ, 20ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಹಾಗೂ ಐದು ಕೋಟಿ ವೆಚ್ಚದಲ್ಲಿ ವಕೀಲರ ಸಂಘವನ್ನು ನಿರ್ಮಾಣದ ಯೋಜನೆಯನ್ನು ಕಲ್ಪಿಸಲಾಗಿತ್ತು. ಆದರೆ ಅಂದಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ
ಅಬ್ದೂಲ್ ನಜೀರ್ ಅವರು ಸಂಕೀರ್ಣ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೂ ಅವಕಾಶ ಇರಬೇಕೆಂದು ಹೇಳಿದುದರ ಪರಿಣಾಮವಾಗಿ 55 ಕೋಟಿ ರೂಪಾಯಿ ಬಿಡುಗಡೆಗೊಳಿಸಿ, 50 ಕೋಟಿ ವೆಚ್ಚದಲ್ಲಿ ನ್ಯಾಯಾಲಯವನ್ನೂ, ಐದು ಕೋಟಿ ವೆಚ್ಚದಲ್ಲಿ ವಕೀಲರ ಸಂಘವನ್ನೂ ನಿರ್ಮಿಸಲಾಯಿತು. ಇದೀಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ದಿನಾಂಕವನ್ನು ನಿಗದಿಪಡಿಸಿ, ಶಾಸಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಉದ್ಘಾಟನೆ ನೆರವೇರಿಸುವುದಷ್ಟೇ ಬಾಕಿ ಇದೆ ಎನ್ನಲಾಗಿದೆ.

ಮಂಗಳೂರು: ಜಯಾನಂದ ದೇವಾಡಿಗ ಇನ್ನಿಲ್ಲ

ಮಂಗಳೂರು: ಕರಾವಳಿ ಭಾಗದಲ್ಲಿ ದೇವಾಡಿಗ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಹಿಂದುಳಿದ ವರ್ಗಗಳ ನಾಯಕ ಜಯಾನಂದ ದೇವಾಡಿಗ ಅವರು ನಿಧನರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆತ್ಮೀಯರಾಗಿದ್ದ ಜಯಾನಂದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಚಿನ್ನಪ್ಪ ರೆಡ್ಡಿ ವರದಿ, ಮಂಡಲ ವರದಿಗಳನ್ನು ಜಾರಿಗೊಳಿಸಲು ಹೋರಾಟಗಳನ್ನು ಕೈಗೊಂಡಿದ್ದರು, ಗೋವಾ ವಿಮೋಚನಾ ಚಳುವಳಿಯಲ್ಲಿ ಕೂಡ ಭಾಗವಹಿಸಿದ್ದರು. ಜೊತೆಗೆ ಹಿಂದುಳಿದ ವರ್ಗಗಳ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಅವಿರತವಾಗಿ ಶ್ರಮಿಸಿದ್ದರು. ಜಯಾನಂದ ದೇವಾಡಿಗ ಅವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡು, ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು.

* ಹೆಬ್ರಿ ಚತುಷ್ಪಥ ಶೀಘ್ರ ಕಾಮಗಾರಿಗೆ ಒತ್ತಾಯ

ಹೆಬ್ರಿ: ಅರಣ್ಯ ಇಲಾಖೆಯವರ ನಿರ್ಧಾರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ರಿ ರಾಷ್ಟ್ರೀಯ ಹೆದ್ದಾರಿ ರಸ್ತೆ 169ಎ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಹೆಬ್ರಿಯ ವೃತ್ತದ ಮೂಲಕ ಪ್ರತಿದಿನ ಪ್ರಯಾಣಿಸಬೇಕಾದ ಅನಿವಾರ್ಯತೆ ಇರುವ ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ಇತರೆ ವಾಹನ ಚಾಲಕರಿಗೆ ಅಡಚಣೆಯಾಗುತ್ತಿದೆ, ಟ್ರಾಫಿಕ್ ಸಮಸ್ಯೆ, ಅದರಲ್ಲೂ ಮಳೆಯ ತೀವ್ರತೆಯಿಂದಾಗಿ ಮತ್ತಷ್ಟು ಕಿರಿಕಿರಿ ಉಂಟಾಗಿದೆ ಎಂದು ಜೆಡಿಎಸ್ ಮುಖಂಡ ಕುಚ್ಚೂರು ಶ್ರೀಕಾಂತ್ ಪೂಜಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವಿಷಯದತ್ತ ಗಮನಹರಿಸಿದ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Categories
ಜ್ಯೋತಿಷ್ಯ

ಶುಕ್ರವಾರ ಈ ರೀತಿ ವಿಶೇಷ ಶುಭ ಸೂಚನೆಗಳು ನೋಡಿದರೆ ಶಾಶ್ವತವಾಗಿ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುತ್ತಿರುತ್ತಾಳೆ.

ಶುಕ್ರವಾರ ಈ ರೀತಿ ವಿಶೇಷ ಶುಭ ಸೂಚನೆಗಳು ನೋಡಿದರೆ ಶಾಶ್ವತವಾಗಿ ಮಹಾಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುತ್ತಿರುತ್ತಾಳೆ.

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀ ಹಿಂದೂ ಮನೆಯಲ್ಲೂ ಕೂಡ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಲಕ್ಷ್ಮಿ ದೇವಿಯನ್ನು, ಆರಾಧಿಸುತ್ತಾರೆ ಹಾಗೂ ಮೆಚ್ಚುತ್ತಾರೆ ಕೂಡ. ಲಕ್ಷ್ಮಿ ದೇವಿಯನ್ನು ನಿತ್ಯವೂ ಪೂಜಿಸಲಾಗುತ್ತಿದ್ದು, ಶುಕ್ರವಾರದ ದಿನ ಅಂದರೆ ಇಂದು ಈಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ನಮ್ಮಲ್ಲಿರುವ ಪ್ರತಿಯೊಬ್ಬರಿಗೂ ಧನ ಸಂಪತ್ತಿನ ಮಹಾ ಲಕ್ಷ್ಮಿಯ ದೇವಿಯ ಆಶೀರ್ವಾದ ಬೇಕು.. ಆ ಮಹಾ ತಾಯಿ ನಮ್ಮ ಮನೆಯಲ್ಲಿ ಇರಲು ಬಯಸುತ್ತಾಳೆ. ಏಕೆಂದರೆ ಆ ಮಹಾಲಕ್ಷ್ಮಿ ಎಲ್ಲೆಲ್ಲಿ ಹೆಜ್ಜೆ ಹಾಕಿದರೂ ಶುಭ ಫಲಗಳು ಮತ್ತು ಶುಭ ಚಿಹ್ನೆಗಳು ಬರುತ್ತವೆ ಎಂದು ಅನೇಕರು ನಂಬುತ್ತಾರೆ.
ಲಕ್ಷ್ಮಿ ದೇವಿಯ ಮನೆಯಲ್ಲಿ ನೆಲೆಸಿದರೆ ಹಣದ ಕೊರತೆ ಇರುವುದಿಲ್ಲ. ಏಕೆಂದರೆ ಆ ತಾಯಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸುವ ಮೊದಲು ಕೆಲವು ಮಂಗಳಕರ ಚಿಹ್ನೆಗಳನ್ನು ಹೊಂದಿದ್ದಾಳೆ. ಈಗ ಆ ವೈಶಿಷ್ಟ್ಯಗಳು ಏನು ಎಂದು ತಿಳಿದುಕೊಳ್ಳೋಣ.

ಲಕ್ಷ್ಮಿ ದೇವಿಯೇ ಸಂಕೇತಗಳು..!
ಕಪ್ಪು ಇರುವೆಗಳು ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಬರಲು ಪ್ರಾರಂಭಿಸಿದರೆ ಮತ್ತು ಗುಂಪು ಗುಂಪಾಗಿ ಏನನ್ನಾದರೂ ತಿನ್ನಲು ಪ್ರಾರಂಭಿಸಿದರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ ಮತ್ತು ನಿಮಗೆ ಹೆಚ್ಚಿನ ಹಣ ಸಿಗುತ್ತದೆ ಎಂದು ಹಲವರು ನಂಬುತ್ತಾರೆ. ನಿಮ್ಮ ಮನೆಯಲ್ಲಿ ಯಾವುದೇ ಹಕ್ಕಿ ಬಂದು ಗೂಡುಕಟ್ಟಿದರೆ ಅದನ್ನು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ನೀವೂ ಕೆಲವು ಕಾರಣಗಳಿಂದ ಆ ಮರವನ್ನು ಕಡಿದರೆ ಅದು ನಿಮಗೆ ಅಶುಭ ಫಲಿತಾಂಶಗಳನ್ನು ನೀಡಬಹುದು.

ಈ ಶುಭ ಸಂಕೇತಗಳು ಕಂಡುಬಂದರೆ..
ನಿಮ್ಮ ಮನೆಯಲ್ಲಿ ಅಕಸ್ಮಾತ್ ಮೂರು ಹಲ್ಲಿಗಳು ಒಂದೇ ಜಾಗದಲ್ಲಿ ಕಂಡರೆ ಲಕ್ಷ್ಮಿ ದೇವಿ ಬರುತ್ತಾಳೆ ಎಂದರ್ಥ. ಇದು ಅತ್ಯಂತ ಮಂಗಳಕರ ಸಂಕೇತ ಎಂದು ಪರಿಗಣಿಸಲಾಗಿದೆ. ಅಲ್ಲದೆ, ದೀಪಾವಳಿಯಂದು ತುಳಸಿ ಗಿಡದ ಸುತ್ತಲೂ ಹಲ್ಲಿಗಳು ಕಾಣಿಸಿಕೊಂಡರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ತುಳಸಿ ಗಿಡದ ಸುತ್ತಲೂ ಪ್ರತಿದಿನ ಹಲವಾರು ಹಲ್ಲಿಗಳು ಕಾಣಿಸಿಕೊಂಡರೆ ಅದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇವುಗಳನ್ನು ಮುಂಜಾನೆ ನೋಡಿದರೆ..
ಬೆಳಗ್ಗೆ ಎದ್ದು ಮಹಾ ವಿಷ್ಣು ಶಂಖದ ಶಬ್ದ ಕೇಳಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಪ್ರವೇಶಿಸುವ ಸಂಕೇತ. ಹಾಗೆಯೇ ಮನೆಯಿಂದ ಹೊರಡುವಾಗ ಕಬ್ಬು ಕಂಡರೆ ಅದು ಸಂಪತ್ತಿನ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಮನೆಯಿಂದ ಹೊರಡುವಾಗ ದಾರಿಯಲ್ಲಿ ನಾಯಿ ಬಾಯಲ್ಲಿ ತರಕಾರಿ ಅಥವಾ ರೊಟ್ಟಿ ಹೊತ್ತುಕೊಂಡು ಹೋಗುವುದನ್ನು ಕಂಡರೆ ನೀವು ಹಣ ಗಳಿಸಲು ಹೊರಟಿದ್ದೀರಿ ಎಂದರ್ಥ.

ಇವುಗಳನ್ನು ಕನಸಿನಲ್ಲಿಯೂ ಕಂಡರೆ..
ನಿಮ್ಮ ಬಲಗೈ ನಿರಂತರವಾಗಿ ತುರಿಕೆ ಯಾಗುತ್ತಿದ್ದರೆ, ನೀವು ಹಣಕಾಸಿನ ವಿಷಯಗಳಲ್ಲಿ ಲಾಭ ಪಡೆಯುತ್ತೀರಿ ಎಂದರ್ಥ. ರಾತ್ರಿಯ ಕನಸಿನಲ್ಲಿ ಪೊರಕೆ, ಗೂಬೆ, ಹೂಜಿ, ಆನೆ, ಮುಂಗುಸಿ, ಶಂಖ, ಹಲ್ಲಿ, ನಕ್ಷತ್ರ, ಹಾವು, ಗುಲಾಬಿ ಕಂಡರೆ ಅದು ನಿಮ್ಮ ಸಂಪತ್ತನ್ನು ಹೆಚ್ಚಿಸುವ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564

Categories
ಚಿಕ್ಕಮಗಳೂರು

ಶಾನುವಳ್ಳಿ: ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಮಾದರಿಯಾದ ಸಹಾಯ

ಶಾನುವಳ್ಳಿ: ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಮಾದರಿಯಾದ ಸಹಾಯ 

ಶಾನುವಳ್ಳಿ ಗ್ರಾಮದ ಕೊಡೂರು ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಸ್ಪೂರ್ತಿದಾಯಕ ಸಹಾಯ ದೊರೆತಿದೆ. ಹಳೆ ವಿದ್ಯಾರ್ಥಿ ಮಹೇಶ್ ಎಸ್. ಟಿ. ಅವರು ಸುಮಾರು ₹18,000 ಮೌಲ್ಯದ ಶಾಲಾ ಯುನಿಫಾರ್ಮ್‌ಗಳನ್ನು ಶಾಲೆಗೆ ದಾನ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ, ಹಳೆ ವಿದ್ಯಾರ್ಥಿ ಶ್ರೀಧರ್ ಭಟ್ ಅವರ ಕುಟುಂಬ ಸದಸ್ಯರು ಎಲ್ಲಾ ಮಕ್ಕಳಿಗೆ ಶಾಲಾ ಬ್ಯಾಗ್‌ಗಳು ಹಾಗೂ ಪೆನ್‌ಗಳನ್ನು ವಿತರಿಸಿದರು. ಪ್ರೊ. ಉದಯ್ ಕುಮಾರ್ ಡಿ. ಎಸ್. ಅವರು ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕಾಗುವಷ್ಟು ನೋಟುಪುಸ್ತಕಗಳನ್ನು ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್ ಎಸ್.ಬಿ., ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅದಿತಿ ಶಾನುವಳ್ಳಿ, ಮುಖ್ಯಶಿಕ್ಷಕ ಓಂಕಾರಪ್ಪ ಹೆಚ್.ಎನ್., ಪೋಷಕರು ಹಾಗೂ ಗ್ರಾಮದ ಸ್ಥಳೀಯರು ಭಾಗವಹಿಸಿದ್ದರು.

ಹಳೆಯ ವಿದ್ಯಾರ್ಥಿ ಸಂಘ ಶಾಲೆಯ ಅಭಿವೃದ್ಧಿಗೆ ಪ್ರಮುಖ ಭೂಮಿಕೆ ವಹಿಸುತ್ತಿದ್ದು, ಸರ್ಕಾರ ಶಾಲೆಯ ಪ್ರಗತಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.