Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮೂಲದ ಮುಂಬೈ ಹುಡುಗನಿಗೆ ಐಐಟಿ ಸೀಟು!

ತೀರ್ಥಹಳ್ಳಿ ಮೂಲದ ಮುಂಬೈ ಹುಡುಗನಿಗೆ ಐಐಟಿ ಸೀಟು!
– ತೀರ್ಥಹಳ್ಳಿ ಭೀಮನ ಕಟ್ಟೆ ಮೂಲದ ನಿಶಾಂತ್, ಸ್ಮಿತಾ ಪುತ್ರ ಸಮರ್ಥ್ ಅವರಿಗೆ ಜೆಇಇಯಲ್ಲಿ 5623ನೇ ರ‍್ಯಾಂಕ್‌
– ದೇಶದ ಪ್ರತಿಷ್ಠಿತ IIT ಇಂದೋರ್ ನಲ್ಲಿ ಅರ್ಹತೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆ ಮೂಲದ ನಿಶಾಂತ್ ಮತ್ತು ಸ್ಮಿತಾ ಇವರ ಪುತ್ರ ಸಮರ್ಥ್ ಈ ಬಾರಿಯ ಜೆಇಇಯಲ್ಲಿ 5623 ರ‍್ಯಾಂಕ್‌ ಪಡೆದು IIT ಇಂದೋರ್ ನಲ್ಲಿ ಅರ್ಹತೆ ಪಡೆದಿದ್ದಾರೆ. ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆ ಮೂಲದ ದಿ|| ಶ್ರೀನಿವಾಸ್ ಎಂ ಜಿ, ತಾಯಿ ಕಮಲಮ್ಮ ಅವರ ಪುತ್ರರಾಗಿರುತ್ತಾರೆ. ಇವರ ಪತ್ನಿ ಸ್ಮಿತಾ ಅವರು ಗುಡ್ಡೇಕೊಪ್ಪ ಮೂಲದ ದಿ|| ಸ್ಕಂದಮೂರ್ತಿ ಹಾಗೂ ಜಯಶ್ರೀ ಅವರ ಪುತ್ರಿ ಆಗಿರುತ್ತಾರೆ. ನಿಶಾಂತ್ ಅವರು ಈಗ ಮುಂಬೈನಲ್ಲಿ ಆಕ್ಸಿಸ್ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಪುತ್ರ ಇದೀಗ ದೇಶದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ತೀರ್ಥಹಳ್ಳಿ ಹಾಗೂ ಮಲೆನಾಡಿಗೆ ಹೆಮ್ಮೆ ತಂದಿದ್ದಾರೆ. ಇವರು ದ್ವಿತೀಯ ಪಿಯುಸಿಯನ್ನು ಇಂಟಿಗ್ರೇಟೆಡ್ ಕೋರ್ಸ್ ನಲ್ಲಿ ಮಹಾರಾಷ್ಟ್ರ ರಾಜ್ಯದ ಪಿಯುಸಿ ಬೋರ್ಡ್ ಮೂಲಕ ವಿದ್ಯಾಭ್ಯಾಸ ಮಾಡಿದ್ದಾರೆ. ಸಮರ್ಥ್ ಅವರಿಗೆ ಸಾನ್ವಿ ಎಂಬ ಸಹೋದರಿ ಕೂಡ ಇದ್ದಾರೆ.

ಸಾಧಕ ವಿದ್ಯಾರ್ಥಿ ಸಮರ್ಥ್ ಅವರಿಗೆ ಅಭಿನಂದನೆಗಳು

– ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರ್ನಾಟಕ

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಸರಕು
53009-83000-97396

ಬೆಟ್ಟೆ
51000-57900-62159

ರಾಶಿ
47700-53200-56911

ಗೊರಬಲು
18189-26900-29400

Categories
ಉಡುಪಿ

ರೋಹಿಣಿ ಸಿಂಧೂರಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕ

ರೋಹಿಣಿ ಸಿಂಧೂರಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕ

ಉಡುಪಿ, ಜು.2: ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿದ್ದು, ಈ ಕುರಿತಾದ ಅಧಿಕೃತ ಆದೇಶವನ್ನು ಜಾರಿ ಮಾಡಲಾಗಿದೆ.

ರಾಜ್ಯ ಸರಕಾರದ ಆಡಳಿತಾತ್ಮಕ ತೀರ್ಮಾನದಂತೆ ಈ ನೇಮಕಾತಿ ಜರುಗಿದ್ದು, ಜಿಲ್ಲೆಯ ಪ್ರಗತಿ ಕಾರ್ಯಗಳ ಮೇಲ್ವಿಚಾರಣೆ ಹಾಗೂ ಸರಕಾರದ ಯೋಜನೆಗಳ ಅನುಷ್ಟಾನಕ್ಕೆ ಅವರು ಜವಾಬ್ದಾರರಾಗಲಿದ್ದಾರೆ.

ಹಿಂದೆ ವಿವಿಧ ಜಿಲ್ಲೆಗಳ ಡಿಸಿ ಹಾಗೂ ವಿಭಿನ್ನ ಇಲಾಖೆಗಳ ನಿರ್ದೇಶಕೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ರೋಹಿಣಿ ಸಿಂಧೂರಿ ಅವರು ಆಡಳಿತದಲ್ಲಿಯಲ್ಲೂ ಪರಿಣಾಮಕಾರಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಭೂ ಬ್ಯಾಂಕ್ ಜಿಲ್ಲೆಗೆ ನಂ. 1

ತೀರ್ಥಹಳ್ಳಿ ಭೂ ಬ್ಯಾಂಕ್ ಜಿಲ್ಲೆಗೆ ನಂ. 1
– ಬಸವಾನಿ ವಿಜಯದೇವ್ ಸಾರಥ್ಯದಲ್ಲಿ ಒಟ್ಟು 54.73 ಲಕ್ಷ ಲಾಭ
– ಚೀಟಿ ನಿಧಿ – ಗ್ಯಾಸ್ – ಪೆಟ್ರೋಲ್ ಬಂಕ್ ಮುಂದಿನ ಅವಧಿಗೆ ಹೊಸ ಸೇರ್ಪಡೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಭೂ ಬ್ಯಾಂಕ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಚೀಟಿ ನಿಧಿ – ಗ್ಯಾಸ್- ಪೆಟ್ರೋಲ್ ಬಂಕ್ ಮುಂದಿನ ಅವಧಿಗೆ ಹೊಸ ಉದ್ಯಮಗಳು ಸೇರ್ಪಡೆ ಆಗಲಿದೆ.
ಪಿ ಎಲ್ ಡಿ ಬ್ಯಾಂಕ್ ಆವರಣದಲ್ಲಿ ಬ್ಯಾಂಕಿನ ಅಧ್ಯಕ್ಷ ವಿಜಯದೇವ್, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್‌ಗಳು ನಬಾರ್ಡ್‌ ಆರ್ಥಿಕ ನೆರವು ಕಡಿಮೆಯಾಗಿರುವುದರಿಂದ ಸೊರಗಿ ಹೋಗಿವೆ. ಅದರೆ ತೀರ್ಥಹಳ್ಳಿಯ ಭೂ ಬ್ಯಾಂಕ್ ಮಾತ್ರ ವ್ಯವಹಾರ, ಸಾಲ ವಿತರಣೆ, ಲಾಭಾಂಶ ಹಂಚಿಕೆ, ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಸುಮಾರು 85 ವರ್ಷಗಳ ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ಅತ್ಯುತ್ತಮ ವ್ಯವಹಾರವನ್ನು ನಡೆಸಿ, ಈ ವರ್ಷವೂ ಸುಮಾರು 54 ಲಕ್ಷದ 73 ಸಾವಿರ ರೂಪಾಯಿ ಲಾಭಗಳಿಸಿ ಬ್ಯಾಂಕಿನ ಷೇರುದಾರರ ವಿಶ್ವಾಸವನ್ನು ಮತ್ತೊಮ್ಮೆ ದಾಖಲಿಸಿಕೊಂಡಿದೆ. ಅಲ್ಲದೆ ಈ ವರ್ಷವೂ ಸಹ ಶೇಕಡ 10ರ ಲಾಭಾಂಶವನ್ನು ಷೇರುದಾರ ಸದಸ್ಯರಿಗೆ ಹಂಚಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.

85 ವರ್ಷಕ್ಕೂ ಹಿಂದೆ ಸ್ಥಾಪನೆಯಾದ ಬ್ಯಾಂಕ್

ಸುಮಾರು 85 ವರ್ಷಕ್ಕೂ ಹಿಂದೆ ತೀರ್ಥಹಳ್ಳಿಯ ಅನೇಕ ಹಿರಿಯ ಸಹಕಾರಿಗಳ ನೆರವು, ಸಹಕಾರ ಹಾಗೂ ಪರಿಶ್ರಮದಿಂದ ಪ್ರಾರಂಭಗೊಂಡ ತೀರ್ಥಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಭಿವೃದ್ಧಿ ಬ್ಯಾಂಕ್ ತಾಲ್ಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲವನ್ನು ನೀಡಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಭದ್ರತೆ ನೀಡಿದೆ. ಹೊಸ ತೋಟ ನಿರ್ಮಿಸಲು, ಹಳೆಯ ತೋಟಗಳ ಅಭಿವೃದ್ಧಿ ಬೇಲಿ ನಿರ್ಮಿಸಲು ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ಒದಗಿಸುವಲ್ಲಿ ಮುಂಚೂಣಿಯಲ್ಲಿತ್ತು. ತಾಲ್ಲೂಕಿನ ರೈತ ಸಮುದಾಯ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತೀರ್ಥಹಳ್ಳಿ ಭೂ ಬ್ಯಾಂಕ್ ಕೊಡುಗೆ ಬಹು ದೊಡ್ಡದಾಗಿದೆ.
ಶಿವಮೊಗ್ಗ ಜಿಲ್ಲೆಯ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಬ್ಯಾಂಕ್, ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕುಗಳಲ್ಲಿ ಒಂದಾಗಿದ್ದು ನಬಾರ್ಡ್ ಪುರಸ್ಕೃತ ಪ್ರಾಥಮಿಕ, ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ
ಕಳೆದ ಸುಮಾರು 10 ವರ್ಷಗಳಿಂದ ತೀರ್ಥಹಳ್ಳಿ ಭೂ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಬಸವಾನಿ ವಿಜಯದೇವ್ ಸರ್ಕಾರದ ಆರ್ಥಿಕ ನೆರವು ಇಲ್ಲದಿದ್ದರೂ ಆರ್ಥಿಕ ಸಂಕಷ್ಟದಿಂದ ಬ್ಯಾಂಕ್ ಅನ್ನು ಮೇಲೆತ್ತುವಲ್ಲಿ ಅಪಾರ ಶ್ರಮ ತೋರಿದ್ದಾರೆ. ತೀರ್ಥಹಳ್ಳಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಮಾತ್ರ ಉತ್ತಮ ವ್ಯವಹಾರ, ಲಾಭ ಹಂಚಿಕೆ, ಸಾಲ ವಿತರಣೆ, ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ವಿಶೇಷ ಶ್ರಮ ತೋರಿದ್ದಾರೆ. ಇಂದು ಬಸವಾನಿ ವಿಜಯದೇವ್‌ರವರ ಬ್ಯಾಂಕಿನ ಬಗೆಗಿನ ಕಾಳಜಿ ಬದ್ಧತೆ ಕಾರಣವಾಗಿದೆ. ಪ್ರಕೃತಿ ವೈಪರೀತ್ಯ, ಅನಾವೃಷ್ಟಿ, ಕೊಳೆರೋಗ ಮತ್ತು ಎಲೆಚುಕ್ಕಿ ರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದ ಕೆಲವೇ ಲಾಭ ಗಳಿಸಿರುವ ಬ್ಯಾಂಕ್‌ಗಳಲ್ಲಿ ಒಂದಾಗಿ ಗಮನ ಸೆಳೆದಿದೆ. ಒಟ್ಟು 5392 ಮಂದಿ ಷೇರುದಾರರಿರುವ ಈ ಬ್ಯಾಂಕ್ ವಿವಿಧ ಯೋಜನೆಗಳಿಂದ ಬಹುಪಾಲು ಷೇರುದಾರರಿಗೆ ದೀರ್ಘಾವದಿ ಮತ್ತು ಮದ್ಯಮಾವಧಿ ಸಾಲ ನೀಡುತ್ತಾ ಬಂದಿದೆ. ಕಳೆದ 9 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ “ಎ” ಗ್ರೇಡ್ ಪಡೆದಿರುವ ತೀರ್ಥಹಳ್ಳಿ ಭೂ ಬ್ಯಾಂಕ್ ಕಳೆದ ಆರ್ಥಿಕ ವರ್ಷದ ಅಂದರೆ 31-03-2025 ರ ಮಾರ್ಚ್ ತಿಂಗಳ ಅಂತ್ಯಕ್ಕೆ ಮೊದಲ ಬಾರಿಗೆ ಲೆಕ್ಕ ಪತ್ರ ಕಡ್ಡಾಯವಾಗಿ ಅಂತ್ಯಗೊಂಡಿದ್ದು ಶೇ. 84.57 ವಸೂಲಾತಿ ಮಾಡಿ ಸುಮಾರು 46 ಕೋಟಿ 28 ಲಕ್ಷದ ಆರ್ಥಿಕ ವ್ಯವಹಾರ ನಡೆಸಿದೆ. ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿ ಮಾಡದೆ ನಿರಂತರ ಸುಸ್ತಿದಾರರಾದ ಸಾಲಗಾರ ಸದಸ್ಯರ ಮೇಲೆ ದಾವೆ ಹೊಡಲಾಗಿದೆ.

ಬಸವಾನಿ ವಿಜಯದೇವ್ ಅವರ ದೂರದೃಷ್ಟಿ

ಹಿರಿಯ ಸಹಕಾರಿ ಶ್ರೀ ಬಸವಾನಿ ವಿಜಯದೇವ್ ಅಧ್ಯಕ್ಷರಾದ ನಂತರ ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆ ಆದಿಯಲ್ಲಿ ನಿರಂತರ ಶ್ರಮಿಸಲಾಗುತ್ತಿದ್ದು, ವಿವಿದ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕಾರವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿ ಸರ್ವಸದಸ್ಯರ ಮಹಾಸಭೆ

ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿ ಸರ್ವಸದಸ್ಯರ ಮಹಾಸಭೆ ನಡೆಯಲಿದ್ದು, ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಅಧ್ಯಕ್ಷರು ವಿನಂತಿಸಿದ್ದಾರೆ. ಈ ವರ್ಷವೂ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ಹಸ್ತ ಚಾಚುವ ಪ್ರಯತ್ನ ಮುಂದುವರೆಸಿದೆ. ಮಾಜಿ ಅಧ್ಯಕ್ಷರು ಹಾಗೂ ರಾಜ್ಯದ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ದಿ| ಬಿ.ಎಸ್. ವಿಶ್ವನಾಥರವರು ಯಾವತ್ತು ತೀರ್ಥಹಳ್ಳಿ ಭೂ ಬ್ಯಾಂಕಿಗೆ ನೀಡಿದ ನೆರವನ್ನು ಸ್ಮರಿಸಿರುವ ಅಧ್ಯಕ್ಷರಾದ ಶ್ರೀ ಬಸವಾನಿ ವಿಜಯದೇವ್ ರವರು ಬ್ಯಾಂಕಿನ ಆಡಳಿತ ಮಂಡಳಿಯ ಉಪಧ್ಯಕ್ಷರಾದ ಶ್ರೀ ಹಿರೇಗೋಡು ಶ್ರೀಧರಮೂರ್ತಿ, ವ್ಯವಸ್ಥಾಪಕರಾದ ಸಂಜಯ್, ಬ್ಯಾಂಕಿನ ನಿರ್ದೇಶಕರು, ನೌಕರ ಬಳಗ ಮುಖ್ಯವಾಗಿ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ಪತಿಷ್ಠಿತ ಸ್ಥಾನ ಪಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ.

Categories
ರಾಜ್ಯ

5 ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ!

ಟಾಪ್ 3 ನ್ಯೂಸ್ ಕರ್ನಾಟಕ

5 ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ!
* ಚಿಕ್ಕಬಳ್ಳಾಪುರದಲ್ಲಿ ಸಿದ್ಧರಾಮಯ್ಯ ಹೇಳಿಕೆ

– ಹೃದಯಾಘಾತದ ಹೆಚ್ಚಳ ; ಜನರಲ್ಲಿ ಆತಂಕ: ಆಸ್ಪತ್ರೆ ಎದುರು ಸಾಲು!
– • ಹುಲಿಗಳ ಸಾವಿನ ಬೆನ್ನಲ್ಲೇ ಈಗ ಕೋತಿಗಳ ಮಾರಣ ಹೋಮ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಬಳ್ಳಾಪುರ: ನಂದಿ ಗ್ರಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ” ಬಿಜೆಪಿ ಅವರು ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಬದಲಿಗೆ ಹಗಲುಗನಸು ಕಾಣುತ್ತಿದ್ದಾರೆ. ಸರ್ಕಾರದ ನಿರ್ಧಾರ ಹೈಕಮಾಂಡಿಗೆ ಬಿಟ್ಟ ವಿಚಾರ. ವಿರೋಧ ಪಕ್ಷದವರು ನಮ್ಮ ಹೈಕಮಾಂಡ್ ಅಲ್ಲ. ಎಲ್ಲೆಡೆ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ ” ಎಂದು ಟೀಕಿಸಿದ್ದಾರೆ. ಐದು ವರ್ಷಗಳ ಕಾಲ ನಮ್ಮ ಪಕ್ಷ ಆಡಳಿತ ನಡೆಸಲಿದ್ದು, ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂಬ ಘೋಷಣೆಯನ್ನು ಮಾಡಿದ್ದಾರೆ.

ಹೃದಯಾಘಾತದ ಹೆಚ್ಚಳ ; ಜನರಲ್ಲಿ ಆತಂಕ: ಆಸ್ಪತ್ರೆ ಎದುರು ಸಾಲು!

ಮೈಸೂರು: ಹಾಸನದಲ್ಲಿ ಹೃದಯಾಘಾತ ಹೆಚ್ಚಳವಾದ ಹಿನ್ನೆಲೆಯಲ್ಲಿ ಮೈಸೂರಿನ ಜಯದೇವ ಆಸ್ಪತ್ರೆಯ ಮುಂದೆ ತಪಾಸಣೆ ಮಾಡಿಸಲು ಬಂದ ಹೊರರೋಗಿಗಳ ಸಂಖ್ಯೆ ಅಧಿಕವಾಗಿದೆ. ಮೈಸೂರು ಸೇರಿದಂತೆ ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಜನರು ಮುಗಿಬಿದ್ದು, ತಪಾಸಣೆಗೆ ಒಳಪಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರತಿದಿನ 150-200 ಜನ ಹೊರರೋಗಿಗಳು ಆಸ್ಪತ್ರೆಗೆ ಆಗಮಿಸಿ, ತೋರಿಸಿಕೊಳ್ಳುತ್ತಿದ್ದರು. ಆದರೆ, ಕಳೆದೆರಡು ದಿನಗಳಿಂದ ಈ ಸಂಖ್ಯೆ ಅಧಿಕಗೊಂಡಿದ್ದು ದಿನಕ್ಕೆ ಐನೂರರಿಂದ ಸಾವಿರ ಜನ ಆಗಮಿಸಿ, ಪರೀಕ್ಷೆಗೆ ಒಳಪಡುತ್ತಿದ್ದಾರೆ ಎನ್ನಲಾಗಿದೆ. ವಿಚಾರವನ್ನು ಕುರಿತು ಮಾತನಾಡಿದ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ/ ಸದಾನಂದ ಅವರು ” ಕಳೆದೆರಡು ದಿನಗಳಿಂದ ಹೊರರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಅದರಲ್ಲೂ ಹಾಸನ ಜಿಲ್ಲೆಯಿಂದ ಬರುವವರೇ ಅಧಿಕ ಪ್ರಮಾಣದಲ್ಲಿದ್ದಾರೆ. ಇದರಲ್ಲಿ ಶೇಕಡಾ ತೊಂಭತ್ತು ಮಂದಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ.‌ ಕೇವಲ ಭಯಕ್ಕೆ ಒಳಪಟ್ಟು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

* ಹುಲಿಗಳ ಸಾವಿನ ಬೆನ್ನಲ್ಲೇ ಈಗ ಕೋತಿಗಳ ಮಾರಣ ಹೋಮ

ಚಾಮರಾಜನಗರ: ಕಳೆದ ಕೆಲವು ದಿನಗಳ ಹಿಂದೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದು. ಇದೀಗ ಕೋತಿಗಳ ಸರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲದ ಕೊಡೆಸೋಗೆ ರಸ್ತೆಯಲ್ಲಿ ಕೋತಿಗಳ ರಾಶಿ ರಾಶಿ ಕಳೇಬರ ಕಂಡುಬಂದಿದೆ. ವಿವಿಧ ಭಾಗಗಳಲ್ಲಿ ಸೆರೆಹಿಡಿದು ತಂದ ಕೋತಿಗಳಿಗೆ ವಿಷವಿಕ್ಕಿ ಕೊಂದಿರಬಹುದಾದ ಅನುಮಾನ ವ್ಯಕ್ತವಾಗಿದೆ. ಸುಮಾರು ಇಪ್ಪತ್ತೈದು ಕೋತಿಗಳು ಮೃತಪಟ್ಟಿದ್ದು, ಕಳೆಬರವನ್ನು ಒಂದೆಡೆ ಹಾಕಲಾಗಿದ್ದು, ಎರಡು ಕೋತಿಗಳು ಬದುಕುಳಿದ ಸಂಗತಿ ತಿಳಿದುಬಂದಿದೆ. ಸ್ಥಳಕ್ಕೆ ಬಫರ್ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Categories
ಕಾರ್ಕಳ

ಬಿಜೆಪಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಸಮಿತಿಗಳಿಗೆ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಜವಾಬ್ದಾರಿ ಹಂಚಿಕೆ

ಬಿಜೆಪಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಸಮಿತಿಗಳಿಗೆ
ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಜವಾಬ್ದಾರಿ ಹಂಚಿಕೆ

ಬಿಜೆಪಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಈ ಕೆಳಗಿನ ಗ್ರಾಮ ಸಮಿತಿಗಳಿಗೆ ನೂತನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ. ಮಾಹಿತಿ ಈ ಕೆಳಗಿಂನಂತಿದೆ.

Categories
ಕಾರ್ಕಳ

ಅಜೆಕಾರು: ಪಡಿತರ ಅಕ್ಕಿ ಅಕ್ರಮ ಸಾಗಣೆ – ಅಂಗಡಿ ಮೇಲೆ ದಾಳಿ,ಸುಮಾರು 100 ಚೀಲ ಅಕ್ಕಿ ವಶ

ಅಜೆಕಾರು: ಪಡಿತರ ಅಕ್ಕಿ ಅಕ್ರಮ ಸಾಗಣೆ – ಅಂಗಡಿ ಮೇಲೆ ದಾಳಿ,ಸುಮಾರು 100 ಚೀಲ ಅಕ್ಕಿ ವಶ

ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 100 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಅಜೆಕಾರು ಗ್ರಾಪಂ ವ್ಯಾಪ್ತಿಯ ಮನೋಜ್ ಟ್ರೇಡರ್ಸ್ ಅಂಗಡಿ ಮಾಲೀಕರಾದ ಮಂಜುನಾಥ ಹೆಗ್ಡೆ ಅವರು ಪಡಿತರ ಅಕ್ಕಿಯನ್ನು ಗ್ರಾಹಕರಿಂದ ಅತೀ ಕಡಿಮೆ ಬೆಲೆಗೆ ಖರೀದಿಸಿ, ಬಳಿಕ ದುಪ್ಪಟ್ಟು ಬೆಲೆಗೆ ರೈಸ್ ಮಿಲ್ ಮತ್ತು ಇತರೆ ಖಾಸಗಿ ರಖಂ ಖರೀದಿದಾರರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯಲ್ಲಿ ಅಕ್ರಮವಾಗಿ ಅಕ್ಕಿಯನ್ನು ದಾಸ್ತಾನು ಮಾಡಿದ್ದರೆಂದು ತಿಳಿದುಬಂದಿದೆ.

ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಕಳ ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಸುಮತಿ ಅವರ ನೇತೃತ್ವದ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದು, ಅಂಗಡಿಗೆ ಅಂಟಿಕೊಂಡಿರುವ ಗೋಡೌನ್‌ನಲ್ಲಿ ಪಡಿತರ ಅಕ್ಕಿಯ 100 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ನಡೆದ ತಕ್ಷಣ ಅಂಗಡಿ ಮಾಲೀಕ ಮಂಜುನಾಥ ಹೆಗ್ಡೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಆಹಾರ ನಿರೀಕ್ಷಕಿ ಸುಮತಿ ಅವರು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಪಡಿತರ ವ್ಯವಸ್ಥೆಯ ದುರೂಪಯೋಗವನ್ನು ತಡೆಗಟ್ಟುವ ಹಾಗೂ ದೋಷಿಗಳಿಗೆ ಕಠಿಣ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ತನಿಖೆ ಮುಂದುವರಿದಿದೆ.

Categories
ಉಡುಪಿ

ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನಾಚರಣೆ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭ

ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನಾಚರಣೆ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭ

ಉಡುಪಿ :-ಪ್ರತಿ ದಿನ ಹೊಸತನ್ನು ತಿಳಿಯಲು, ಕಲಿಯುವ ನಿಟ್ಟಿನಲ್ಲಿ ನಾವು ಬದುಕಿನುದ್ದಕ್ಕೂ ನಾವು ನಿರಂತರ ವಿದ್ಯಾರ್ಥಿಗಳಾಗಬೇಕುದಾನದಿಂದ ಸಿಗುವ ತೃಪ್ತಿ ಬದುಕಿನ ಶ್ರೇಷ್ಠ ಅಂಶ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನದಂಗವಾಗಿ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯಲ್ಲಿ ಮಂಗಳವಾರ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ,
ಚಾಲಕ ವೃತ್ತಿ, ಕೂಲಿ ಕಾರ್ಮಿಕ, ವೈದ್ಯ, ಸರಕಾರಿ ನೌಕರ ಸಹಿತ ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆಯಿಂದ ದುಡಿವ -ವ್ಯಕ್ತಿ ಆರೋಗ್ಯವಂತ ಸಮಾಜ ನಿರ್ಮಾಣದ ಜತೆಗೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಲು ಸಾದ್ಯ
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ವಿಶೇಷ ಕಾರ್ಯಕ್ರಮದಿಂದ ರಾಜ್ಯದಲ್ಲಿಡೆ ಗುರುತಿಸಿದೆ ಇದು ಅಭಿನಂದನೀಯ ಎಂದರು.

ಸಂಘ ಸಂಸ್ಥೆಗಳು ನಾನಾ ಕ್ಷೇತ್ರದ ಸಾಧಕರನ್ನು ಗುರುತಿಸಿದಾಗ ಅವರು ಮತ್ತಷ್ಟು ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ
ಮಲಬಾರ್ ವೈದ್ಯ ಪುರಸ್ಕಾರ: ಡಾ. ಅಶೋಕ್ ಕುಮಾರ್ ವೈ.ಜಿ., ಡಾ. ಛಾಯಾ ಲತಾ. ಮಲಬಾರ್ ವಿಶ್ವ ಲೆಕ್ಕ ಪರಿಶೋಧಕರ ಪುರಸ್ಕಾರ: ಕೆ.ಸುರೇಂದ್ರ ನಾಯಕ್, ಪಿ.ಚಂದ್ರ ಮೋಹನ್ ಹಂದೆ, ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರ: ಸುಭಾಷ್ ಚಂದ್ರ ವಾಗ್ಲೆ, ನಜೀರ್ ಪೋಲ್ಯ ಗೌರವ ಪುರಸ್ಕಾರ 2025 ಸ್ವೀಕರಿಸಿದರು.

ಸನ್ಮಾನಿತರನ್ನು ರಂಜಿನಿ ವಸಂತ್, ಸಿದ್ಧಬಸಯ್ಯ ಚಿಕ್ಕಮಠ, ಉಮೇಶ್ ಆಚಾರ್ಯ, ವಿದ್ಯಾ ಸರಸ್ವತಿ, ಸುಮಿತ್ರಾ ಕೆರೆಮಠ ಪರಿಚಯಿಸಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ,ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆ ವ್ಯವಸ್ಥಾಪಕ ಹಫೀಜ್ ರೆಹಮಾನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಉಪಸ್ಥಿತರಿದ್ದರು.

ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಗೌರವ ಪುರಸ್ಕಾರ ಸಮಿತಿಯ ಸಂಚಾಲಕ ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಜೋಶಿ ವಂದಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ಛಾಯಾ ಗ್ರಾಹಕ ಆಸ್ಟ್ರೋ ಮೋಹನ್ ಹಾಗೂ ಡಾ. ಗಣೇಶ್ ಪ್ರಸಾದ್ ನಾಯಕ್ ಅವರನ್ನು ಅಂತಾರಾಷ್ಟ್ರೀಯ ಪ್ರಶಸ್ತಿ, ಪಿ.ಎಚ್ ಡಿ ಸಾಧನೆಗಾಗಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪತ್ರಕರ್ತರನ್ನು ಲೆಕ್ಕಪರಿಶೋಧಕರನ್ನು ಮತ್ತು ವೈದ್ಯರನ್ನು ಗುರುತಿಸಲಾಯಿತು

Categories
ಉಡುಪಿ

ವಿದ್ಯಾರ್ಥಿ ನಾಯಕತ್ವ ಉತ್ತೇಜಿಸುವ ಕಾರ್ಯಕ್ರಮ: ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿದ್ಯಾರ್ಥಿ ನಾಯಕತ್ವ ಉತ್ತೇಜಿಸುವ ಕಾರ್ಯಕ್ರಮ: ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಹೆಬ್ರಿ, ಜುಲೈ 2: ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲ್ ಹಾಗೂ ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025–26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಭಾವಗತವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ್ ಆಚಾರ್ಯ, ಕೋಆರ್ಡಿನೇಟರ್ ಅಕ್ಷಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕ ಹಾಗೂ ಇತರರು ಉಪಸ್ಥಿತರಿದ್ದು ವಿದ್ಯಾರ್ಥಿಗಳಲ್ಲಿ ನೇತೃತ್ವ ಗುಣಗಳನ್ನು ಬೆಳೆಸುವ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿ ನಾಯಕನಾಗಿ ನಿತೀನ್ ಗೌಡ ಆರ್, ವಿದ್ಯಾರ್ಥಿ ನಾಯಕಿಯಾಗಿ ಸಿಂಚನಾ ಎಸ್ ಶೆಟ್ಟಿ ಆಯ್ಕೆಯಾಗಿದ್ದು, ದೀಪಕ್ ಬಿ.ಎಸ್ ಸಹ ನಾಯಕನಾಗಿ, ಎಸ್.ಜಿ. ತೇಜಸ್ ಆರೋಗ್ಯ ಮಂತ್ರಿಯಾಗಿ, ಯಶವಂತ್ ಎಲ್.ನಾಯ್ಕ್ ಮತ್ತು ಪಂಚಮಿ ಆರ್ ಶೆಟ್ಟಿ ಶಿಸ್ತಿನ ಮಂತ್ರಿಗಳಾಗಿ, ಸುಮಂತ್ ವಿ.ಎಚ್ ಮತ್ತು ಸಮೃದ್ಧಿ ಶೆಟ್ಟಿ ಸಾಂಸ್ಕೃತಿಕ ಮಂತ್ರಿಗಳಾಗಿ, ವರ್ಷಾ ಎಂ ಪೂಜಾರಿ ಮತ್ತು ಐಶ್ವರ್ಯ ಎಸ್ ನಾಯ್ಕ್ ಕ್ರೀಡಾ ಮಂತ್ರಿಗಳಾಗಿ ಪದಗ್ರಹಣ ಮಾಡಿದರು.

ಕಾರ್ಯಕ್ರಮ ನಿರೂಪಣೆಯನ್ನು ಜಾಹ್ನವಿ, ಸ್ವಾಗತವನ್ನು ನಿರೀಕ್ಷಾ ಮತ್ತು ವಂದನೆಯನ್ನು ಋತ್ವಿ ಶೆಟ್ಟಿ ನಿರ್ವಹಿಸಿದರು.

ಈ ಕಾರ್ಯವು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ನೇತೃತ್ವ ಮತ್ತು ಸಂಘಟನಾ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಉತ್ತಮ ವೇದಿಕೆಯಾಗಿ ರೂಪುಗೊಂಡಿತು.

Categories
ಕುಂದಾಪುರ

200 ರೂ ಮೋಸ ಮಾಡಿ 30 ವರ್ಷದ ಬಳಿಕ ಸಿಕ್ಕಿಬಿದ್ದ!

200 ರೂ ಮೋಸ ಮಾಡಿ 30 ವರ್ಷದ ಬಳಿಕ ಸಿಕ್ಕಿಬಿದ್ದ!
– ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ದೂರು ದಾಖಲು
– ಏನಿದು ಇಂಟರೆಸ್ಟ್ ಸ್ಟೋರಿ… ಓದಿ…!

NAMMUR EXPRESS NEWS
ಕುಂದಾಪುರ : ವಿದ್ಯಾರ್ಥಿಯೊಬ್ಬನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಕೇವಲ 200 ರೂಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನು ಬರೋಬ್ಬರಿ 30 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ಮೂಲದ ಪ್ರಸ್ತುತ ಬೆಂಗಳೂರಿನ ಬಳೆಪೇಟೆ ಯಲ್ಲಿ ನೆಲಸಿರುವ ಬಿ.ಕೆ.ರಾಮಚಂದ್ರರಾವ್ ಬಂಧಿತ ಆರೋಪಿ. ಈತನಿಗೆ ಸರಿಸುಮಾರು 30 ವರ್ಷಗಳ ಹಿಂದೆ ನೀಲಕಂಠ ಹೆಗಡೆ ಎಂಬವನ ಮೂಲಕ ಶಿರಸಿಯಲ್ಲಿ ಪದವಿ ಓದುತ್ತಿದ್ದ ಬಿಳಿಗಿರಿ ಕೊಪ್ಪ ವೆಂಕಟೇಶ ವೈದ್ಯ ಎಂಬಾತನ ಪರಿಚಯವಾಗಿತ್ತು. ವೆಂಕಟೇಶ್ ಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಆತನಿಂದ 200 ರೂ. ಗಳನ್ನು ಪಡೆದ ರಾಮಚಂದ್ರರಾವ್ ವಂಚಿಸಿ ಪರಾರಿಯಾಗಿದ್ದ.
ಈ ಕುರಿತು ಶಿರಸಿ ಠಾಣೆಯಲ್ಲಿ ವೆಂಕಟೇಶ್ ವೈದ್ಯ ದೂರು ದಾಖಲಿಸಿದ್ದರು. ಆದರೆ ಆರೋಪಿ ಪತ್ತೆಯಾಗಿರಲಿಲ್ಲ. ಹಿಂದಿನ ಪ್ರಕರಣಗಳ ವಿಚಾರಣೆಗಳನ್ನು ಕೈಗೆತ್ತಿಗೊಂಡ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಮಾರ್ಗದರ್ಶನ ಮತ್ತು ಪಿಎಸ್‌ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ಅವರ ತಂಡ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಿ ಶಿರಸಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಂತೆ ಆತನನ್ನು ಕಾರವಾರ ಜೈಲಿಗೆ ಹಾಕಲಾಗಿದೆ. ಕೋಟ್ಯಾಂತರ ರೂಪಾಯಿಗಳನ್ನು ತಿಂದುತೇಗಿ ಬಿಂದಾಸ್ ಆಗಿರುವ ಈ ಕಾಲದಲ್ಲಿ ಕೇವಲ 200ರೂಪಾಯಿ ವಂಚನೆ ಮಾಡಿ ಅದೂ 30 ವರ್ಷಗಳ ನಂತರ ಆರೋಪಿ ಜೈಲು ಪಾಲಾಗಿರುವುದು ಅಚ್ಚರಿ. ಅಲ್ಲದೆ ಕೋಟಿ ಕೋಟಿ ಮೋಸ ಮಾಡಿದವರ ಹಿಡಿಯದೆ ಇವರ ಹಿಡಿದು ಸಾಧನೆ ಎಂದು ಹೇಳುವುದು ಸರಿಯೇ ಎಂಬ ಚರ್ಚೆ ಕೂಡ ಎದ್ದಿದೆ.