Categories
ಸಾಗರ

ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ದಿನಾಂಕ ನಿಗದಿ

ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ದಿನಾಂಕ ನಿಗದಿ
– ಇತಿಹಾಸ ಪ್ರಸಿದ್ಧ ಕರ್ನಾಟಕದ ಅತಿ ದೊಡ್ಡ ಜಾತ್ರೆ
– ಯಾವ್ಯಾವ ದಿನ ಏನೇನಿರುತ್ತೆ? ಇಲ್ಲಿದೆ ಮಾಹಿತಿ

NAMMUR EXPRESS NEWS
ಸಾಗರ: ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ 2026ರ ಫೆಬ್ರವರಿ 3ರಿಂದ ಆರಂಭವಾಗಲಿದೆ ಎಂದು ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

* ಫೆಬ್ರವರಿ 3ರಂದು ಮಂಗಳವಾರ ತವರು ಮನೆಯಲ್ಲಿ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.

* ಫೆಬ್ರವರಿ 4ರಂದು ಗಂಡನ ಮನೆಯಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ.

* ಫೆಬ್ರವರಿ 7ರಂದು ಗಾವು ಹಿಡಿಯಲಾಗುತ್ತದೆ. ಫೆಬ್ರವರಿ 11ರಂದು ಬುಧವಾರ ದೇವಿಯನ್ನು ವನಕ್ಕೆ ಬಿಡಲಾಗುತ್ತದೆ.

2026ರ ಜನವರಿ 27ಕ್ಕೆ ಮಾರಿಕಾಂಬ ಜಾತ್ರೆಗೆ ಅಂಕ ಹಾಕಲಾಗುವುದು ಎಂದು ಮಾರಿಕಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ.

Categories
ಕಾರ್ಕಳ

ಕ್ರೈಸ್ಟ್ ಕಿಂಗ್: ಶಗುನ್ ಎಸ್ ವರ್ಮ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರಿಯ ವಾಲಿಬಾಲ್ ತಂಡದ ಅರ್ಹತಾ ಶಿಬಿರಕ್ಕೆ ಆಯ್ಕೆ

ಕ್ರೈಸ್ಟ್ ಕಿಂಗ್: ಶಗುನ್ ಎಸ್ ವರ್ಮ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರಿಯ ವಾಲಿಬಾಲ್ ತಂಡದ ಅರ್ಹತಾ ಶಿಬಿರಕ್ಕೆ ಆಯ್ಕೆ

– ಕ್ರೈಸ್ಟ್ ಕಿಂಗ್: ಟೇಬಲ್ ಟೆನ್ನಿಸ್‌ನಲ್ಲಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆ

NAMMUR EXPRESS NEWS
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್ ವರ್ಮ ಹೆಗ್ಡೆ ರಾಷ್ಟ್ರಿಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ ೧೫ರ ವಯೋಮಿತಿಯ ಬಾಲಕಿಯರ ವಿಭಾಗದ ರಾಷ್ಟ್ರಿಯ ವಾಲಿಬಾಲ್ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಕರ್ನಾಟಕದ ಎಲ್ಲಾ ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದು ಅದರಲ್ಲಿ ಎಂಟು ಆಟಗಾರರು ಆಯ್ಕೆಯಾಗಿದ್ದರು. ಇದರಲ್ಲಿ ಉಡುಪಿ ಜಿಲ್ಲೆಯಿಂದ ಏಕೈಕ ಆಟಗಾರಳಾಗಿ ಶಗುನ್ ಆಯ್ಕೆಯಾಗಿದ್ದಾಳೆ. ಭಾರತವನ್ನು ಪ್ರತಿನಿಧಿಸುವ ರಾಷ್ಟೀಯ ತಂಡದ ಆಯ್ಕೆ ಪ್ರಕ್ರಿಯೆ ಮಹಾರಾಷ್ಟದ ಪುಣೆಯಲ್ಲಿ ನಡೆಯಲಿದ್ದು ಇಲ್ಲಿ ಆಯ್ಕೆಯಾದ ತಂಡವು ಮುಂದಿನ ಅಂತರಾಷ್ಟಿಯ ಪಂದ್ಯವನ್ನು ಚೀನಾದ ಶಾಂಗ್ಲೋದಲ್ಲಿ ಆಡಲಿದೆ. ಈಕೆ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮಾ ಹಾಗೂ ಶ್ರೀಮತಿ ಶ್ರುತಿರಾಜ್ ದಂಪತಿಗಳ ಪುತ್ರಿಯಾಗಿದ್ದಾಳೆ.

– ಕ್ರೈಸ್ಟ್ ಕಿಂಗ್: ಟೇಬಲ್ ಟೆನ್ನಿಸ್‌ನಲ್ಲಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ೧೪/೧೭ ರ ವಯೋಮಿತಿಯ ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಉಳಿದಂತೆ ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.

Categories
ಬೆಂಗಳೂರು

ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ..!!

ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ..!!
– HDKಗೆ ಅನಾರೋಗ್ಯ ಬಗ್ಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಬಿಗ್ ಅಪ್ಡೇಟ್
– ಕುಮಾರಸ್ವಾಮಿಯವರು ನನಗೆ ಪುನರ್ಜನ್ಮ ಸಿಕ್ಕಿದೆ ಎಂದಿದ್ದಾರೆ

NAMMUR EXPRESS NEWS
ಬೆಂಗಳೂರು : ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿದ್ದು, ಯಾರೂ ಆತಂಕ ಪಡಬೇಕಿಲ್ಲ. ಎಚ್‌ಡಿಕೆ ತಮ್ಮ ಕೊನೆ ಉಸಿರಿರುವವರೆಗೂ ಜನಸೇವೆಗೆ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದಂತಿದೆ. ಯಾಕಂದ್ರೆ ಅವರ ಫೋಟೋವನ್ನು ನೋಡುತ್ತಿದ್ದರೆ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿವೆ.

ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಸ್ವತಃ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿದೆ, ಯಾರೂ ಆತಂಕ ಪಡಬೇಕಿಲ್ಲ. ಕೊನೆ ಉಸಿರಿರುವವರೆಗೂ ಜನಸೇವೆಗೆ ಜೀವನ ಮುಡಿಪಿಟ್ಟಿದ್ದಾರೆ. ದೇವೇಗೌಡರು ಸಹ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಂಡಿಲ್ಲ. ದೇವೇಗೌಡರ ಕುಟುಂಬಕ್ಕೆ ಜನರೇ ರಾಜಕೀಯ ಶಕ್ತಿ ತುಂಬಿದ್ದಾರೆ. ಅದನ್ನ ಜನರಿಗೆ ವಾಪಸ್ ಧಾರೆ ಎರೆಯುವ ಕೆಲಸ ಮಾಡಬೇಕಿದೆ ಎಂದರು.
ಎಚ್​​​​​​​​​ಡಿಕೆ ಅವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದ್ದು ಸತ್ಯ. ಆದರೆ ಈಗ ಆರೋಗ್ಯ ಚೇತರಿಕೆಯಾಗುತ್ತಿದೆ. ಇದರ ಮಧ್ಯೆ ಪ್ರತಿನಿತ್ಯ ಇಲಾಖೆಯ ಸಭೆಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಒಪ್ಪಿಕೊಂಡರು.

ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು?
ಮೊನ್ನೆ ತಾನೇ ಕುಮಾರಸ್ವಾಮಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕೆಲವೊಂದು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕರೊಬ್ಬರು ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದು, ಇದಕ್ಕೆ ಪ್ರತಾಪ್ ಸಿಂಹ ರಿಯಾಕ್ಟ್‌ ಮಾಡಿದ್ದರು. ‘ಕೇಂದ್ರ ಸಚಿವರಾದ ಎಚ್.ಡಿ.ಕುಮಾರಣ್ಣ ಅವರನ್ನು ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದೆವು. ಕುಮಾರಣ್ಣ ಚಟುವಟಿಕೆಯಿಂದಿರುವುದು ದೊಡ್ಡ ಧೈರ್ಯ ಮತ್ತು ಬಲವಿದ್ದಂತೆ’ ಎಂದು ಪ್ರತಾಪ್ ಸಿಂಹ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಆ ಫೋಟೋವನ್ನು ನೋಡಿರುವ ಎಚ್‌.ಡಿ ಕುಮಾರಸ್ವಾಮಿಯವರ ಅಭಿಮಾನಿಗಳು ಯಾಕೋ ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾದಂತೆ ಕಾಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರುವ ಪ್ರತಾಪ್ ಸಿಂಹ, ಕುಮಾರಸ್ವಾಮಿ ಅವರು ‘ಆರಾಮಾಗಿ ಇದ್ದಾರೆ. Dont worry’ ಎಂದಿದ್ದರು.

ಪುನರ್ಜನ್ಮ ಸಿಕ್ಕಿದೆ ಎಂದಿದ್ದ ಕುಮಾರಸ್ವಾಮಿ
2023ರಲ್ಲಿ ಕುಮಾರಸ್ವಾಮಿಯವರಿಗೆ ಅನಾರೋಗ್ಯ ಕಾಡಿತ್ತು. ಪಾರ್ಶ್ವವಾಯುಗೆ ತುತ್ತಾಗಿದ್ದ ಕುಮಾರಸ್ವಾಮಿ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ‘ನನಗೆ ಪುನರ್ಜನ್ಮ ಸಿಕ್ಕಿದೆ. ದೇವರು, ವೈದ್ಯರು, ತಂದೆ ತಾಯಿಗಳ ಆಶೀರ್ವಾದವೇ ಇದಕ್ಕೆ ಕಾರಣ. ಗೋಲ್ಡನ್ ಅವರ್​ನಲ್ಲಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ನನಗೆ ಪುನರ್ಜನ್ಮ ಸಿಕ್ಕಿದೆ’ ಎಂದಿದ್ದರು.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾದೇವನ ದೆಸೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಈ ದಿನವು ಮೇಷ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ ಮತ್ತು ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯಮಿಗಳು ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು.

** ವೃಷಭ ರಾಶಿ :
ಇಂದು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಸಾಧ್ಯತೆಗಳಿವೆ. ವಿರೋಧಿಗಳು ಕಚೇರಿಯಲ್ಲಿ ಸಕ್ರಿಯರಾಗಿರುತ್ತಾರೆ, ಇದರಿಂದಾಗಿ ಸ್ವಲ್ಪ ತೊಂದರೆ ಹೆಚ್ಚಾಗಬಹುದು. ಒಂಟಿ ಜನರು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶವಿದೆ. ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.

** ಮಿಥುನ ರಾಶಿ :
ಇಂದು ಅದೃಷ್ಟವು ಪ್ರತಿ ಕೆಲಸದಲ್ಲೂ ಮಿಥುನ ರಾಶಿಯವರನ್ನು ಬೆಂಬಲಿಸುತ್ತದೆ. ನಿಮಗೆ ಹೊಸ ಕೆಲಸದ ಕೊಡುಗೆ ಸಿಗುತ್ತದೆ. ಕುಟುಂಬದ ಬೆಂಬಲದೊಂದಿಗೆ ನೀವು ಯಶಸ್ಸಿನ ಮೆಟ್ಟಿಲು ಹತ್ತುತ್ತೀರಿ. ಹಳೆಯ ಆಸ್ತಿಯನ್ನು ಮಾರಾಟ ಮಾಡುವ ಅಥವಾ ಬಾಡಿಗೆಗೆ ನೀಡುವ ಮೂಲಕ ನೀವು ಹಣವನ್ನು ಪಡೆಯುತ್ತೀರಿ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನ. ಬುದ್ಧಿವಂತಿಕೆಯಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣದ ಸಾಧ್ಯತೆ ಇರುತ್ತದೆ. ನೀವು ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತೀರಿ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತಾರೆ. ವೃತ್ತಿಪರ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ಮನೆಯಲ್ಲಿ ನಿಮಗೆ ಕುಟುಂಬದ ಬೆಂಬಲ ಸಿಗುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇರುತ್ತದೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ.

** ಕನ್ಯಾ ರಾಶಿ :
ಇಂದು ನೀವು ಹೊಸ ಯೋಜನೆಯ ಜವಾಬ್ದಾರಿಯನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ, ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಮತ್ತು ಯಾರನ್ನೂ ಕುರುಡಾಗಿ ನಂಬಬೇಡಿ. ಇದು ನಷ್ಟಕ್ಕೆ ಕಾರಣವಾಗಬಹುದು.

** ತುಲಾ ರಾಶಿ :
ಇಂದು ತುಲಾ ರಾಶಿಯವರಿಗೆ ತುಂಬಾ ಶುಭವಾಗಲಿದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ, ಆದರೆ ನೀವು ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದ ಸದಸ್ಯರ ಮಾತುಗಳಿಂದ ನಿಮ್ಮ ಮನಸ್ಸು ನೋಯಬಹುದು. ಆದರೆ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶಗಳಿವೆ.

** ವೃಶ್ಚಿಕ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ಏರಿಳಿತಗಳು ಇರುತ್ತವೆ. ಕೆಲಸದ ಬಗ್ಗೆ ಅಸಡ್ಡೆ ಮಾಡಬೇಡಿ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಹಣವನ್ನು ಎಚ್ಚರಿಕೆಯಿಂದ ವಹಿವಾಟು ಮಾಡಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಪ್ರಮುಖ ಸಾಧನೆಗಳನ್ನು ಸಾಧಿಸಲಾಗುತ್ತದೆ. ಆದಾಗ್ಯೂ, ಕೆಲಸದ ಒತ್ತಡವೂ ಹೆಚ್ಚಾಗುತ್ತದೆ.

** ಧನಸ್ಸು ರಾಶಿ :
ಇಂದು ಧನು ರಾಶಿಯವರಿಗೆ ಸಾಮಾನ್ಯವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಕೆಲಸದ ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ಕೆಲವು ಜನರು ಸವಾಲಿನ ಕೆಲಸಗಳನ್ನು ನಿರ್ವಹಿಸುವಲ್ಲಿ ತೊಂದರೆಗಳನ್ನು ಎದುರಿಸಬಹುದು. ಇಂದು ನೀವು ಅಗತ್ಯ ಗೃಹೋಪಯೋಗಿ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಯೋಜಿಸಬಹುದು.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಅದೃಷ್ಟವಿರುತ್ತದೆ. ಹಣದ ಲಾಭಕ್ಕಾಗಿ ಅನೇಕ ಅವಕಾಶಗಳಿವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನ. ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ಜನರು ನಿಮ್ಮ ಕೆಲಸದಿಂದ ಪ್ರೇರಿತರಾಗುತ್ತಾರೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ.

** ಕುಂಭ ರಾಶಿ :
ಇಂದು ನಿಮ್ಮ ಮನಸ್ಸು ಅತಿಯಾದ ಖರ್ಚಿನ ಬಗ್ಗೆ ಚಿಂತಿತವಾಗಿರುತ್ತದೆ. ಮಹಿಳೆಯರು ಅತ್ತೆ-ಮಾವರಿಂದ ತೊಂದರೆ ಅನುಭವಿಸಬಹುದು. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನ ಕೊಡಿ. ನೀವು ನಿಮ್ಮ ಸಂಗಾತಿಯೊಂದಿಗೆ ಪ್ರಣಯ ಭೋಜನವನ್ನು ಯೋಜಿಸಬಹುದು. ಇದು ಪ್ರೇಮ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ.

** ಮೀನ ರಾಶಿ :
ಇಂದು ಮೀನ ರಾಶಿಯವರಿಗೆ ಹಣಕಾಸಿನ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗುತ್ತವೆ. ಸಂಪತ್ತು ಮತ್ತು ಆಸ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ನಿಮಗೆ ಸಿಗುತ್ತದೆ. ಆಸ್ತಿ ಸಂಬಂಧಿತ ವಿವಾದಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಇಂದು ನೀವು ಕುಟುಂಬದೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಸಮಾಜದಲ್ಲಿ ನೀವು ಮೆಚ್ಚುಗೆ ಪಡೆಯುತ್ತೀರಿ.

Categories
ಕರಾವಳಿ

ಕರಾವಳಿಯಲ್ಲೂ ಹುಡುಗಿಯರ ಫೋಟೋ ಬಳ್ಸಿ ಬ್ಲಾಕ್ ಮೇಲ್!

ಕರಾವಳಿ ಟಾಪ್ ನ್ಯೂಸ್

ಕರಾವಳಿಯಲ್ಲೂ ಹುಡುಗಿಯರ ಫೋಟೋ ಬಳ್ಸಿ ಬ್ಲಾಕ್ ಮೇಲ್!

• ಬೈಂದೂರು: ಫೇಸ್ ಬುಕ್ ನಲ್ಲಿ ಕೋಮು ಪ್ರಚೋದಿಸುವ ಸಂದೇಶ; ವ್ಯಕ್ತಿಯ ವಿರುದ್ಧ ದೂರು

• ಬಂಟ್ವಾಳ: ಪಡಿತರ ಅಕ್ಕಿ ಅಕ್ರಮ ದಾಸ್ತಾನುಕರಾವಳಿಯಲ್ಲೂ ಹುಡುಗಿಯರ ಫೋಟೋ ಬಳ್ಸಿ ಬ್ಲಾಕ್ ಮೇಲ್!

• ಇಬ್ಬರು ಅರೆಸ್ಟ್: ವಿಡಿಯೋ ಕಾಲ್ ಮಾಡಿ ವಂಚನೆ

NAMMUR EXPRESS NEWS
ಉಡುಪಿ: ಆನ್‌ಲೈನ್‌ನಲ್ಲಿ ವೀಡಿಯೋ ಕರೆ ಮಾಡಿ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಸೇರಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಸೊತ್ತುಗಳು, ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ರಾಜಸ್ಥಾನದ ಮೂಲದ ಜೈದ್ ಮೊಹಮ್ಮದ್ ಅಲಿಯಾಸ್ ಜೈದ್ ಖಾನ್ (19) ಮತ್ತು ಒಬ್ಬ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳಿಂದ 5 ಮೊಬೈಲ್ ಫೋನ್ ಮತ್ತು 2 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕ‌ರ್ ತಿಳಿಸಿದ್ದಾರೆ.
ದೂರುದಾರರೊಬ್ಬರಿಗೆ ಫೇಸ್ ಬುಕ್‌ನಲ್ಲಿ ಯುವತಿಯ ಪರಿಚಯವಾಗಿ ದೂರುದಾರರಿಗೆ ವೀಡಿಯೋ ಕರೆ ಮಾಡಿದ್ದು, ವೀಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಅವರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವೀಡಿಯೋವನ್ನು ದೂರುದಾರರಿಗೆ ವಾಟ್ಸಾಪ್‌ಗೆ ಕಳುಹಿಸಿದ್ದರು. ಅಪರಿಚಿತ ವ್ಯಕ್ತಿಗೆ ಹಣ ನೀಡದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿ ಹಂತ-ಹಂತವಾಗಿ ಒಟ್ಟು 4,44,999 ರೂ. ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಪಿ.ಎಸ್.ಐ. ಹರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿತ್ತು. ಆರೋಪಿಯನ್ನು ಗೋವಾದ ಮಡಗಾಂವ್ ರೈಲು ನಿಲ್ದಾಣದ ಬಳಿ ಬಂಧಿಸಲಾಗಿದೆ.

• ಬೈಂದೂರು: ಜಗದೀಶ್ ಉಡುಪ ಎನ್ನುವವನ ವಿರುದ್ಧ, ಕೋಮುಸೌಹಾರ್ದಕ್ಕೆ ಧಕ್ಕೆಯನ್ನುಂಟುಮಾಡುವ ಸಂದೇಶವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ನಿರ್ವಹಣಾ ಸಿಬ್ಬಂದಿಯಾಗಿರುವ ಸಂತೋಷ್ ಕುಲಾಲ್ ಅವರು ಆಗಸ್ಟ್ 22ರ ಸಂಜೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಜಗದೀಶ್ ಉಡುಪ ಎನ್ನುವ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ, ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಸಂದೇಶವನ್ನು ಹಾಕುವ ದುಷ್ಕೃತ್ಯವನ್ನು ಎಸಗಿದ್ದಾರೆ. ಇದರ ಆಧಾರದ ಮೇಲೆ ದುಷ್ಕರ್ಮಿಯ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

• ಬಂಟ್ವಾಳ: ಪಡಿತರ ಅಕ್ಕಿ ಅಕ್ರಮ ದಾಸ್ತಾನು

ಬಂಟ್ವಾಳ: ಕಲ್ಲಡ್ಕ ಸಮೀಪದ ಪಟ್ಟೆಕೋಡಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಖಚಿತವಾದ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ, ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ನಗರದ ಪೊಲೀಸರು ಶನಿವಾರದಂದು ಆಹಾರ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 80 ಸಾವಿರ ರೂಪಾಯಿ ಮೌಲ್ಯದ 25 ಕ್ವಿಂಟಾಲ್ ಅಕ್ಕಿಯನ್ನು, ತೂಕ ಮಾಪನ ಯಂತ್ರವನ್ನು, ಗೋಣಿಚೀಲ ಮತ್ತು ಅಕ್ಕಿ ಸಾಗಾಟಕ್ಕಾಗಿ ಬಳಸಲಾದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.‌ ಉಮ್ಮರಬ್ಬ ಎಂಬ ವ್ಯಕ್ತಿಯು ತನ್ನ ಗೋದಾಮಿನಲ್ಲಿ ಪಡಿತರ ವಿತರಣೆಗೆ ಮೀಸಲಾಗಿದ್ದ 21.4 ಕ್ವಿಂಟಾಲ್ ಬೆಳ್ತಿಗೆ ಮತ್ತು 4.67 ಕ್ವಿಂಟಾಲ್ ಕುಚಲಕ್ಕಿಯನ್ನು ದಾಸ್ತಾನು ಇರಿಸಿದ್ದು ಕಂಡುಬಂದಿದೆ. ಆರೋಪಿಗಳಾದ ಉಮ್ಮರಬ್ಬ ಮತ್ತು ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಿಗೆ ಪಡಿತರ ಅಕ್ಕಿ ಹೇಗೆ ಲಭಿಸಿತು ಎನ್ನುವುದು ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ.

• ಉಡುಪಿ: ಸಾಲಬಾಧೆಯಿಂದ ವ್ಯಕ್ತಿ ಆತ್ಮಹತ್ಯೆ

ಉಡುಪಿ: ಮಟ್ಟಾರು ಮಾಣಿಬೆಟ್ಟು ನಿವಾಸಿಯಾದ ಸಂತೋಷ್ ಎನ್ನುವವರು, ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಟೆಂಪೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಅವರು, ಕಳೆದ ಕೆಲವು ದಿನಗಳ ಹಿಂದೆ ತಮ್ಮ ಮನೆಗೆ ಆಗಮಿಸಿದ್ದರು. ವಾಹನಕ್ಕೆ ಸಂಬಂಧಿಸಿದಂತೆ ಸಾಲ ಮಾಡಿರುವ ಅವರನ್ನು ಆಗಸ್ಟ್ 21ರಂದು ಫೈನಾನ್ಸ್ ನವರು ಮನೆಗೆ ಬಂದು ವಿಚಾರಣೆ ನಡೆಸಿ ಹೋಗಿದ್ದಾರೆ.‌ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗರ ಪಾದೆ ಬಳಿಯ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂತೋಷ್ ಅವರ ಸಹೋದರರಾದ ಪ್ರಸಾದ್ ಶೇರಿಗಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು

ಆ.31ಕ್ಕೆ ವರ್ಡ್‌ ಕ್ಯಾಂಪ್ ಬೆಂಗಳೂರು 2025

ಆ.31ಕ್ಕೆ ವರ್ಡ್‌ ಕ್ಯಾಂಪ್ ಬೆಂಗಳೂರು 2025
* ಸಮುದಾಯ, ತಂತ್ರಜ್ಞಾನ ಮತ್ತು ಸಂವಾದಗಳ ಸಡಗರ
* ಡೆವಲಪರ್‌ಗಳು, ವಿನ್ಯಾಸಕಾರರು, ಬ್ಲಾಗರ್‌ಗಳು, ಉದ್ಯಮಿಗಳಿಗೆ ಸ್ವಾಗತ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ, ವಿಶ್ವದ ಅತಿ ಹೆಚ್ಚು ಬಳಸಲಾಗುವ ವೆಬ್ ಪ್ಲಾಟ್‌ಫಾರ್ಮ್‌ನಾದ ವರ್ಡ್‌ಪ್ರೆಸ್ ಪ್ರಿಯ ಸಮುದಾಯ ಮತ್ತೊಮ್ಮೆ ಮಹತ್ವದ ಒಂದು ದಿನದ ಉತ್ಸವಕ್ಕೆ ಸಜ್ಜಾಗಿದೆ. ವರ್ಡ್‌ಕ್ಯಾಂಪ್ ಬೆಂಗಳೂರು 2025 ಅನ್ನು ಭಾನುವಾರ, ಆಗಸ್ಟ್ 31, 2025 ಅನ್ನು ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಸೆಂಟ್ ಜೋಸೆಫ್ ಬಾಯ್ಸ್ ಹೈ ಸ್ಕೂಲ್, ಮ್ಯೂಸಿಯಂ ರೋಡಿನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಡೆವಲಪರ್‌ಗಳು, ವಿನ್ಯಾಸಕಾರರು, ಬ್ಲಾಗರ್‌ಗಳು, ಉದ್ಯಮಿಗಳು ಮತ್ತು ಎಲ್ಲ ವರ್ಡ್‌ಪ್ರೆಸ್ ಪ್ರಿಯರಿಗೆ ಒಂದು ದಿನದ ಕಲಿಕೆ, ಸಂವಾದ ಮತ್ತು ಸಹಕಾರದ ವೇದಿಕೆಯಾಗಿರುತ್ತದೆ.

*ಸೃಜನಶೀಲತೆ ಮತ್ತು ಜ್ಞಾನವಂತಿಕೆಯ ಸಮ್ಮೇಳನ*

ಸ್ಥಳೀಯ ಸ್ವಯಂಸೇವಕರಿಂದ ಸಂಪೂರ್ಣವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ನಾನಾ ಸೆಷನ್ ಒಳಗೊಂಡಿರುತ್ತದೆ:

– ಅಲ್ಪಕಾಲಿಕ ಪ್ರೇರಣಾದಾಯಕ ಉಪನ್ಯಾಸಗಳು
– ವಿಸ್ತೃತ ಉಪನ್ಯಾಸಗಳು ಮತ್ತು ಪ್ರಶ್ನೋತ್ತರಗಳು
– ಕಾರ್ಯಾಗಾರಗಳು (ವರ್ಕ್‌ಶಾಪ್‌ಗಳು) – ನೈಪುಣ್ಯ ತರಬೇತಿಗಾಗಿ
– ಪ್ಯಾನೆಲ್ ಚರ್ಚೆಗಳು – ತಜ್ಞರೊಂದಿಗೆ ಸಂವಾದ
– ಸಮುದಾಯ ಚಟುವಟಿಕೆಗಳು – ನೈಜ ಸಂಪರ್ಕ ಮತ್ತು ಸಹಯೋಗ

*ಸ್ಥಳದ ಆಯ್ಕೆ ಮತ್ತು ಅನುಕೂಲತೆಗಳು*

ಕಾರ್ಯಕ್ರಮದ ವೇದಿಕೆಯಾಗಿರುವ ಸೆಂಟ್ ಜೋಸೆಫ್ ಬಾಯ್ಸ್ ಹೈ ಸ್ಕೂಲ್‌ನ ಆಡಿಯಟೋರಿಯಂ ಉತ್ತಮ ಧ್ವನಿವ್ಯವಸ್ಥೆ ಮತ್ತು ಏರ್‌ಕಂಡೀಷನಿಂಗ್ ಹೊಂದಿದ್ದು, ನಗರ ಹೃದಯ ಭಾಗದಲ್ಲಿದೆ. ಸ್ಥಳವು ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮುಂತಾದ ಪ್ರಮುಖ ಪ್ರದೇಶಗಳಿಗೆ ನಡೆದುಕೊಂಡು ಹೋಗಬಹುದು, ಮೆಟ್ರೋ, ಬಸ್, ಆಟೋ, ಕ್ಯಾಬ್ ಮತ್ತು ವಿಮಾನ ನಿಲ್ದಾಣ ಬಸ್‌ ಸೇವೆಗಳು ಲಭ್ಯವಿವೆ. ಹತ್ತಿರದ ವಸತಿ ಹಾಗೂ ಹೋಟೆಲ್ ಕೂಡ ಇದೆ.

*ಟಿಕೆಟ್ ವಿವರಗಳು*

1. ಸಾಮಾನ್ಯ ಪ್ರವೇಶ ಟಿಕೆಟ್ – ₹700
➤ ಪೂರ್ಣ ದಿನದ ಪ್ರವೇಶ, ಉಪನ್ಯಾಸಗಳು, ಕಾರ್ಯಾಗಾರಗಳು, ಸ್ಮರಣಿಕೆ, ಆಹಾರ/ಪಾನೀಯಗಳು ಮತ್ತು ನೆಟ್‌ವರ್ಕಿಂಗ್

2. ವರ್ಡ್‌ಕ್ಯಾಂಪ್ ಗೆ ಸ್ನೇಹಿತ ಪಾಸ್ – ₹5,000
➤ ಮೇಲಿನ ಎಲ್ಲ ಸೌಲಭ್ಯಗಳಿಗೆ ಜೊತೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರಿನ ಉಲ್ಲೇಖ ಮತ್ತು ವಿಶೇಷ ಭೋಜನಕ್ಕೆ ಆಹ್ವಾನ

ಟಿಕೆಟ್‌ಗಳನ್ನು ಕೇವಲ https://bengaluru.wordcamp.org/2025
ನಲ್ಲಿ ಆನ್‌ಲೈನ್ ಮೂಲಕ ಖರೀದಿಸಬಹುದು. ಸ್ಥಳದಲ್ಲಿ ಟಿಕೆಟ್‌ ಮಾರಾಟವಿಲ್ಲ. ಟಿಕೆಟ್‌ಗಳು ರಿಫಂಡ್‌ ಆಗುವುದಿಲ್ಲ, ಆದರೆ ಪರಸ್ಪರ ವರ್ಗಾಯಿಸಬಹುದು.

*ಭಾಗವಹಿಸಲು ನಿಮ್ಮ ಅವಕಾಶ*
ಈಗಾಗಲೇ ಅರ್ಜಿ ಆಹ್ವಾನಗಳು ತೆರೆಯಲ್ಪಟ್ಟಿವೆ:
– ಉಪನ್ಯಾಸಕರು – ತಾಂತ್ರಿಕ ವಿಷಯಗಳು, ಪ್ರೇರಣಾದಾಯಕ ಕಥೆಗಳು ಅಥವಾ ಕಾರ್ಯಾಗಾರಗಳ ಮೂಲಕ ನಿಮ್ಮ ಶಬ್ದ ಹಂಚಿಕೊಳ್ಳಿ
– ಪ್ರಾಯೋಜಕರು – ಸಮುದಾಯದೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಇದು ಸುವರ್ಣಾವಕಾಶ

ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ https://bengaluru.wordcamp.org/2025 ಗೆ ಭೇಟಿ ನೀಡಿ.

*ಸಮುದಾಯದ ಭಾಗವಾಗಿರಿ – ಕೇವಲ ಪ್ರೇಕ್ಷಕನಲ್ಲ*
ವಿಶ್ವದಾದ್ಯಾಂತ ನಡೆಯುವ WordCamp‌ಗಳು ಸಮಾನತೆ, ಸಹಕಾರ ಮತ್ತು ಜ್ಞಾನ ಹಂಚಿಕೆಗೆ ಹೆಸರುವಾಸಿ. ಬೆಂಗಳೂರು ಈ ಸಂಪ್ರದಾಯಕ್ಕೆ ತನ್ನದೇ ಆದ ತಾಳಮೇಳವನ್ನು ಸೇರಿಸುತ್ತದೆ — ಫಿಲ್ಟರ್ ಕಾಫಿಯ ಸಿಹಿ ಸವಿಯುತ್ತಾ, ನೀವು ಒಗ್ಗಟ್ಟಿನ ಅನುಭವವನ್ನು ಒದಗಿಸುವ ಸಮುದಾಯದ ಭಾಗವಾಗುತ್ತೀರಿ.

*ವರ್ಡ್‌ಕ್ಯಾಂಪ್ ಬೆಂಗಳೂರು ಬಗ್ಗೆ*
ವರ್ಡ್‌ಕ್ಯಾಂಪ್ ಬೆಂಗಳೂರು ಎಂಬುದು WordPress Foundation ಬೆಂಬಲಿತ ಸಮುದಾಯ ಆಧಾರಿತ ಸಮ್ಮೇಳನವಾಗಿದೆ. ಇದು WordPress ಬಳಕೆದಾರರು ಮತ್ತು ತಯಾರಕರಿಗೆ ಕಲಿಕೆ, ಹಂಚಿಕೆ ಮತ್ತು ಸಹಕಾರದ ವೇದಿಕೆಯಾಗಿದ್ದು, ಲಾಭರಹಿತ, ಸಂಪೂರ್ಣವಾಗಿ ಸ್ವಯಂಸೇವಕರಿಂದ ಆಯೋಜಿಸಲ್ಪಡುವ ಕಾರ್ಯಕ್ರಮವಾಗಿದೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಬೆಂಬಲ ನಿಮಗೆ ಸಿಗುತ್ತದೆ. ಮೇಷ ರಾಶಿಯ ಜನರು ಇಂದು ಸಾಲದಿಂದ ಮುಕ್ತರಾಗಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳು ಚಿಂತೆಗೆ ಕಾರಣವಾಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಬಹಳ ದಿನಗಳಿಂದ ಬರಬೇಕಿದ್ದ ಹಣ ವಾಪಸ್ ಬರುತ್ತದೆ.

** ವೃಷಭ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಆದಾಯವನ್ನು ಹೆಚ್ಚಿಸಲು ಅನೇಕ ಅವಕಾಶಗಳಿವೆ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಹಾರವನ್ನು ಯೋಜಿಸಬಹುದು. ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ. ಕಚೇರಿಯಲ್ಲಿ ಹೊಸ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯದಿರಿ. ಗಡುವಿನ ಮೊದಲು ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.

** ಮಿಥುನ ರಾಶಿ :
ಇಂದು ನೀವು ಸಾಲದಿಂದ ಮುಕ್ತರಾಗುತ್ತೀರಿ. ಇಂದು ವೃತ್ತಿ ಜೀವನದಲ್ಲಿ ಹೆಚ್ಚಿನ ಗೌರವವನ್ನು ಗಳಿಸುವಿರಿ. ನಿಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡಿ. ಹೊಸ ಬದಲಾವಣೆಗಳಿಗೆ ಸಿದ್ಧರಾಗಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲವರು ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಇಂದು ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ.

** ಕರ್ಕಾಟಕ ರಾಶಿ :
ಇಂದು ವೃತ್ತಿ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡುವಿರಿ. ಆರ್ಥಿಕ ಲಾಭಕ್ಕೆ ಹಲವು ಅವಕಾಶಗಳು ದೊರೆಯಲಿವೆ. ಹೂಡಿಕೆಗೆ ಇಂದು ಉತ್ತಮ ದಿನವಾಗಿದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಇಂದು ನೀವು ಭೂಮಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು. ಸಂಬಂಧಿಕರೊಂದಿಗೆ ಕೆಲವು ಕುಟುಂಬ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯ ಜನರು ನಿಮ್ಮ ಎಲ್ಲಾ ಕೆಲಸಗಳಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ. ಬಾಸ್ ನಿಮ್ಮ ಕೆಲಸವನ್ನು ಹೊಗಳುತ್ತಾರೆ. ಪೂರ್ವಿಕರ ಆಸ್ತಿ ನಿಮ್ಮ ಹೆಸರಿಗೆ ಇರುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ತುಂಬಾ ಬಿಡುವಿಲ್ಲದ ವೇಳಾಪಟ್ಟಿ ಇರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹಲವು ಸುವರ್ಣಾವಕಾಶಗಳು ದೊರೆಯಲಿವೆ. ವ್ಯಾಪಾರವು ವಿಸ್ತರಿಸುತ್ತದೆ ಮತ್ತು ಹೊಸ ಆದಾಯದ ಮೂಲಗಳು ಸಹ ಸೃಷ್ಟಿಯಾಗುತ್ತವೆ.

** ಕನ್ಯಾ ರಾಶಿ :
ಇಂದು ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಇಂದಿನಿಂದ ಜಿಮ್ ಆರಂಭಿಸಬಹುದು. ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣವಿರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪ್ರಾರಂಭವಾಗಲಿವೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭ ತರಲಿದೆ. ಆದರೆ ಸಂಶೋಧನೆ ಮಾಡದೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ.

** ತುಲಾ ರಾಶಿ :
ಇಂದು ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಆರೋಗ್ಯದ ಕಡೆ ಗಮನ ಕೊಡಿ. ಹೊಸ ಫಿಟ್ನೆಸ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇಂದು ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲವು ಆಸಕ್ತಿದಾಯಕ ವ್ಯಕ್ತಿಗಳು ಒಂಟಿ ಜನರ ಜೀವನದಲ್ಲಿ ಪ್ರವೇಶಿಸುತ್ತಾರೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ.

** ವೃಶ್ಚಿಕ ರಾಶಿ :
ಇಂದು ಕೆಲಸ ಕಾರ್ಯನಿರ್ವಹಣೆ ಅತ್ಯುತ್ತಮವಾಗಿರುತ್ತದೆ. ಬಾಸ್ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ನೀವು ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ. ನೀವು ಕುಟುಂಬ ಅಥವಾ ಪ್ರೀತಿಪಾತ್ರರ ಜೊತೆ ವಿಹಾರವನ್ನು ಯೋಜಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ.

** ಧನಸ್ಸು ರಾಶಿ :
ಇಂದು ತುಂಬಾ ಶುಭ ದಿನವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುತ್ತೀರಿ. ಇಂದು ಎಲ್ಲಾ ಕಛೇರಿ ಕಾರ್ಯಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಆಸ್ತಿ ಖರೀದಿ ಸಾಧ್ಯತೆ.

** ಮಕರ ರಾಶಿ :
ಮಕರ ರಾಶಿಯ ಜನರಿಗೆ ಇಂದು ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸದ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಹೊಸ ಸ್ಥಳದಲ್ಲಿ ವ್ಯಾಪಾರವನ್ನು ವಿಸ್ತರಿಸಲು ಹಲವು ಅವಕಾಶಗಳಿವೆ. ಕುಟುಂಬ ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಭೂಮಿ ಅಥವಾ ವಾಹನ ಖರೀದಿ ಸಾಧ್ಯ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೀವು ಕೆಲವು ದೊಡ್ಡ ಸುದ್ದಿಗಳನ್ನು ಪಡೆಯಬಹುದು.

** ಕುಂಭ ರಾಶಿ :
ಇಂದು ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ನಿಮ್ಮ ಕೆಲಸದ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಜೀವನದಲ್ಲಿ ನೀವು ಏನು ಬಯಸುತ್ತೀರೋ ಅದು ಲಭ್ಯವಾಗುತ್ತದೆ. ಹೊಸ ಜನರನ್ನು ಭೇಟಿ ಮಾಡಲು ಮತ್ತು ನಿಮ್ಮ ನೆಟ್‌ವರ್ಕಿಂಗ್ ಅನ್ನು ಹೆಚ್ಚಿಸಲು ಇದು ಸೂಕ್ತ ಸಮಯ. ಕುಟುಂಬದ ಸದಸ್ಯರೊಂದಿಗೆ ಯಾವುದೇ ಕುಟುಂಬ ಸಮಾರಂಭದಲ್ಲಿ ಭಾಗವಹಿಸಬಹುದು. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.

** ಮೀನ ರಾಶಿ :
ಇಂದು ನೀವು ಕುಟುಂಬ ಅಥವಾ ಸ್ನೇಹಿತರ ಸಹಾಯದಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಬೆಳವಣಿಗೆಗೆ ಅನೇಕ ಸುವರ್ಣ ಅವಕಾಶಗಳು ಇರುತ್ತವೆ. ಕೌಟುಂಬಿಕ ಜವಾಬ್ದಾರಿಯೂ ಹೆಚ್ಚಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕಚೇರಿ ಕಾರ್ಯಗಳನ್ನು ನಿಭಾಯಿಸಿ.

Categories
ಕಾರ್ಕಳ

‘ಪುಸ್ತಕ ಮನೆ’ಯ ಮಹಾ ಓದು ವಿಶೇಷ ಕೊಡುಗೆ – 50% ರಿಯಾಯಿತಿ : ಕೇವಲ ಎರಡು ದಿನ ಮಾತ್ರ

‘ಪುಸ್ತಕ ಮನೆ’ಯ ಮಹಾ ಓದು ವಿಶೇಷ ಕೊಡುಗೆ – 50% ರಿಯಾಯಿತಿ:ಕೇವಲ ಎರಡು ದಿನ ಮಾತ್ರ

ಕಾರ್ಕಳ : ಓದುಗರಿಗೆ ಸುವರ್ಣಾವಕಾಶವನ್ನು ನೀಡಲು ‘ಪುಸ್ತಕ ಮನೆ’ ಹಾಗೂ ‘ಅನು ಕ್ರಿಯೇಷನ್ಸ್ ಪಬ್ಲಿಕೇಷನ್ಸ್’ ವಿಶೇಷ ಆಫರ್ ಘೋಷಿಸಿದೆ. ಆಗಸ್ಟ್ 23 ಮತ್ತು 24 ರಂದು ಕೇವಲ ಎರಡು ದಿನಗಳ ಕಾಲ ನಡೆಯುವ ಈ ಆಫರ್‌ನಲ್ಲಿ ಆಯ್ಕೆ ಮಾಡಿದ ಪುಸ್ತಕಗಳ ಖರೀದಿಗೆ 50% ರಿಯಾಯಿತಿ ಲಭ್ಯವಿರಲಿದೆ.

‘ಮಹಾ ಓದು’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಈ ಆಫರ್‌ನಲ್ಲಿ ಓದುಗರು ಕನಿಷ್ಠ ಐದು ಪುಸ್ತಕಗಳನ್ನು ಖರೀದಿಸಿದರೆ ಮಾತ್ರ ರಿಯಾಯಿತಿಯ ಸೌಲಭ್ಯ ಪಡೆಯಬಹುದು. MAHA50 ಎಂಬ ಕೂಪನ್ ಕೋಡ್ ಬಳಸಿ ಆನ್‌ಲೈನ್ ಖರೀದಿ ಮಾಡುವವರಿಗೆ ರಿಯಾಯಿತಿ ಅನ್ವಯವಾಗಲಿದೆ.

‘ಪುಸ್ತಕ ಮನೆ’ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ಮಾಡಲು ಅವಕಾಶ ಕಲ್ಪಿಸಿದ್ದು, ಗ್ರಾಹಕರು http://www.pustakamane.com
ಮೂಲಕ ನೇರವಾಗಿ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ವಾಟ್ಸಪ್ ಮೂಲಕವೂ (+91 96064 74289) ತಮ್ಮ ಆರ್ಡರ್ ಅನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

Buy 5 or More & Get 50% OFF!
(Applies only to Pustaka Mane and Anu Creations publications)

Use Code: MAHA50
⏳ Offer valid till: 24-03-2025

Shop Now: https://pustakamane.com/product-category/pustakamane/

Categories
ಉಡುಪಿ

ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು

ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕೆಲವು ದಿನಗಳ ಹಿಂದೆ ತಿಮರೋಡಿ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ ಅವರು, ಇಂದು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿದೆ.

ಈ ಪ್ರಕರಣವು ಸ್ಥಳೀಯ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ತಿಮರೋಡಿಗೆ ಜಾಮೀನು ದೊರೆತಿರುವುದು ಬೆಂಬಲಿಗರಲ್ಲಿ ತೃಪ್ತಿಯನ್ನುಂಟುಮಾಡಿದರೆ, ವಿರೋಧ ಪಕ್ಷದ ವಲಯದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Categories
ಚಿಕ್ಕಮಗಳೂರು

ಗೋವಿಂದೇಗೌಡರ ಮನೆಯಲ್ಲಿ ದರೋಡೆ: 24 ಗಂಟೆಯೊಳಗೆ ಅರೆಸ್ಟ್!

ಗೋವಿಂದೇಗೌಡರ ಮನೆಯಲ್ಲಿ ದರೋಡೆ: 24 ಗಂಟೆಯೊಳಗೆ ಅರೆಸ್ಟ್!
* 3 ಆರೋಪಿಗಳನ್ನ ಬಂಧಿಸಿ ಕರೆತಂದ ಕೊಪ್ಪ ಪೊಲೀಸರು
* ಮನೆ ಕೆಲಸಕ್ಕಾಗಿ ದಂಪತಿಗಳೆಂದು ಬಂದ ನೇಪಾಳಿಗಳಿಂದ ಕಳ್ಳತನ
* ಕೊಪ್ಪ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಭಾರೀ ಮೆಚ್ಚುಗೆ

NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ,ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಕೊಪ್ಪ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. 24 ಗಂಟೆಯೊಳಗೆ ಕಳ್ಳರನ್ನು ಮಹಾರಾಷ್ಟ್ರದಿಂದ ಹಿಡಿದು ತಂದಿದ್ದು ಕೊಪ್ಪ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಪ್ಪ ತಾಲೂಕಿನ ಹಂರಂದೂರು ಗ್ರಾಮದ ಅಚ್ಚರಡಿಯಲ್ಲಿರುವ ಮಾಜಿ ಶಿಕ್ಷಣ ಸಚಿವರಾದ ಗೋವಿಂದೇಗೌಡರ ಪುತ್ರ ಹೆಚ್ ಜಿ ವೆಂಕಟೇಶ್ ಅವರ ಮಣಿಪುರ ಎಸ್ಟೇಟ್ ಮನೆಯಲ್ಲಿ ಆ. 21 ರ ಗುರುವಾರ ಬೆಳಗಿನ ಜಾವ ಸುಮಾರು 1:30 ರಿಂದ 3:00 ಗಂಟೆಯ ಸುಮಾರಿಗೆ ಮನೆಯ ಹಿಂಬದಿಯ ಬಾಗಿಲು ಒಡೆದು ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳುವು ಮಾಡಲಾಗಿತ್ತು. ಬಂಧಿತರಿಂದ ಅಪಾರ ಪ್ರಮಾಣದ ಚಿನ್ನ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

1.8 ಕೆಜಿ ಚಿನ್ನ, 2 ಕಾರು, 1.2 ಕೆಜಿ ಬೆಳ್ಳಿ ವಶ

1.8 ಕೆಜಿ ಚಿನ್ನ, 2 ಕಾರು, 1.2 ಕೆಜಿ ಬೆಳ್ಳಿ, ಮೊಬೈಲ್ ಸೇರಿ ಅನೇಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಪ್ಪ ಎಸ್ ಐ ಬಸವರಾಜ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಈ ಕಾರ್ಯಾಚರಣೆ ಮಾಡಿದ್ದಾರೆ. ಕೊಪ್ಪ ಪೊಲೀಸರು ಭೇದಿಸಿದ ಅತೀ ದೊಡ್ಡ ಪ್ರಕರಣ ಇದಾಗಿದೆ.