Categories
ತೀರ್ಥಹಳ್ಳಿ

ಕಟ್ಟೆಹಕ್ಕಲು ಶಾಲೆಯ ಅಮೃತ ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಟ್ಟೆಹಕ್ಕಲು ಶಾಲೆಯ ಅಮೃತ ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
– ಪ್ರಥಮ ಸ್ಥಾನವನ್ನು ಪಡೆದು ಆಯ್ಕೆ ಆಗಿರುವುದು ಹೆಮ್ಮೆ

NAMMUR EXPRESS NEWS
ಸರ್ಕಾರಿ ಪ್ರೌಢಶಾಲೆ ಮೇಳಿಗೆಯಲ್ಲಿ ನಡೆದ ತಾಲ್ಲೂಕು ಮಟ್ಟದ U-17 ಯೋಗಾಸನ ಸ್ಪರ್ಧೆ ಯಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟೆಹಕ್ಕಲು ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅಮೃತ ಹೆಚ್.ಡಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.‌

ಕಟ್ಟೆಹಕ್ಕಲು ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ ಯೋಗಾಸನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಅಮೃತ ಇವಳ ಈ ಸಾಧನೆಗೆ ಮತ್ತು ಸಹಕರಿಸಿದ ಪೋಷಕರಿಗೆ, ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಶಾಲಾ ಎಸ್.ಡಿ.ಎಂ.ಸಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Categories
ಮಂಗಳೂರು

ಧರ್ಮಸ್ಥಳ ಬುರುಡೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ದಾಳಿ

ಧರ್ಮಸ್ಥಳ ಬುರುಡೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ದಾಳಿ

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ವಿಶೇಷ ತನಿಖಾ ತಂಡ (SIT) ಇಂದು ದಾಳಿ ನಡೆಸಿದೆ.

ಸಾಕ್ಷಿದಾರನಾಗಿ ಹಾಜರಾದ ನಂತರ ಇದೀಗ ಆರೋಪಿಯಾಗಿರುವ ಚಿನ್ನಯ್ಯ ನೀಡಿದ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದು ತಿಮರೋಡಿಗೆ ಆಗಮಿಸಿದ್ದಾರೆ.

ಚಿನ್ನಯ್ಯ ನೀಡಿದ ಮಾಹಿತಿಯ ಪ್ರಕಾರ, ಆತ ತಿಮರೋಡಿ ನಿವಾಸದಲ್ಲಿ ತಂಗಿದ್ದು, ಅಲ್ಲೊಂದು ಕೊಠಡಿ ನೀಡಲಾಗಿತ್ತು. ಆ ಕೊಠಡಿಯಲ್ಲಿ ತನ್ನ ಬಟ್ಟೆ ಮತ್ತು ಬ್ಯಾಗ್ ಇಟ್ಟಿದ್ದನೆಂದು ಹೇಳಿದ್ದಾನೆ. ಜೊತೆಗೆ, ಆತ ಮೊಬೈಲ್ ಬಳಸದಿದ್ದು, ತನ್ನ ಮೊಬೈಲ್ ತಿಮರೋಡಿ ಕುಟುಂಬದವರ ಬಳಿಯೇ ಇತ್ತು ಎಂದು ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ನಡೆಸಿ, ಸಂಬಂಧಿತ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಪೊಲೀಸ್ ವಾಹನಗಳೊಂದಿಗೆ ಮಾಧ್ಯಮ ಪ್ರತಿನಿಧಿಗಳ ವಾಹನಗಳೂ ತಿಮರೋಡಿಗೆ ತೆರಳಿದ್ದರೂ, ಮನೆಗೆ ತಲುಪುವ ಮುನ್ನ ಸುಮಾರು 1 ಕಿ.ಮೀ ದೂರದಲ್ಲೇ ಪೊಲೀಸರೇ ಮಾಧ್ಯಮ ವಾಹನಗಳನ್ನು ತಡೆದಿದ್ದಾರೆ.

Categories
ಕಾರ್ಕಳ

ಕಾರ್ಕಳ: ಕುಂಟಲ್ಪಾಡಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಕಾರ್ಕಳ: ಕುಂಟಲ್ಪಾಡಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಕಾರ್ಕಳ: ಕುಂಟಲಪಾಡಿ ರಸ್ತೆಯಲ್ಲಿರುವ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಮಂಗಳೂರು ಮೂಲದ ನವೀನ್ ಪೂಜಾರಿ (50) ಅವರನ್ನು ಗುರುತಿಲ್ಲದ ವ್ಯಕ್ತಿಗಳು ಇರಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಮಂಗಳವಾರ (ಆ.26) ಬೆಳಕಿಗೆ ಬಂದು, ಮಾಹಿತಿ ದೊರಕುತ್ತಿದ್ದಂತೆಯೇ ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.

ಮೂಲಗಳ ಪ್ರಕಾರ, ಮೃತ ನವೀನ್ ಪೂಜಾರಿ ಕಾರ್ಕಳದಲ್ಲೇ ನೆಲೆಸಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಕೊಲೆಯ ಹಿಂದೆ ನಿಖರವಾದ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪೊಲೀಸರು ಪ್ರಕರಣ ದಾಖಲಿಸಿ, ವಿವಿಧ ಕೋನಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಎಎಸ್‌ಪಿ ಡಾ. ಹರ್ಷಪ್ರಿಯಂವದ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗೌರಿ ಹಬ್ಬದ ದಿನ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗಾಗಿ ಓಡಾಡುವ ದಿನವಾಗಿರುತ್ತದೆ, ನೀವು ನಿಷ್ಪ್ರಯೋಜಕ ಕೆಲಸದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ನಿಮ್ಮ ಆರೋಗ್ಯ ಹದಗೆಡಬಹುದು. ವ್ಯವಹಾರದಲ್ಲಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಕುಟುಂಬದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ, ಆಸ್ತಿ ವಿವಾದಗಳು ಮುನ್ನೆಲೆಗೆ ಬರುತ್ತವೆ. ನಿಮ್ಮ ಮಾತನ್ನು ನಿಯಂತ್ರಿಸಿ, ಚರ್ಚೆಯಿಂದ ದೂರವಿರಿ. ವ್ಯವಹಾರ ಪರಿಸ್ಥಿತಿ ಉತ್ತಮವಾಗಿರುತ್ತದೆ.

** ವೃಷಭ ರಾಶಿ :
ಇಂದು ನಿಮ್ಮ ಆರೋಗ್ಯದಲ್ಲಿ ಕುಸಿತವನ್ನು ಅನುಭವಿಸುವಿರಿ. ಇಂದು ಕೆಲವು ನಿರ್ದಿಷ್ಟ ವಿಷಯದ ಬಗ್ಗೆ ಮಾನಸಿಕವಾಗಿ ಅಸಮಾಧಾನವಾಗಬಹುದು. ಇಂದು ವ್ಯವಹಾರದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ, ಅಥವಾ ವ್ಯವಹಾರದಲ್ಲಿ ಯಾವುದೇ ದೊಡ್ಡ ಅಪಾಯವನ್ನು ತೆಗೆದುಕೊಳ್ಳಬೇಡಿ. ಕುಟುಂಬದಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು.

** ಮಿಥುನ ರಾಶಿ :
ಇಂದು ನೀವು ನಿಮ್ಮ ಕುಟುಂಬದೊಂದಿಗೆ ದೂರ ಪ್ರಯಾಣ ಮಾಡಬಹುದು. ಆರೋಗ್ಯವು ಉತ್ತಮವಾಗಿರುತ್ತದೆ, ವ್ಯವಹಾರದಲ್ಲಿ ನಿಮಗೆ ಆರ್ಥಿಕ ಲಾಭಗಳು ಸಿಗುತ್ತವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ನೀವು ಹೊಸ ವಾಹನ ಅಥವಾ ಮನೆಯನ್ನು ಖರೀದಿಸಬಹುದು. ಇಂದು ನಿಮ್ಮ ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗುತ್ತವೆ. ಹಣದ ಪರಿಸ್ಥಿತಿ ಸುಧಾರಿಸುತ್ತದೆ.

** ಕರ್ಕಾಟಕ ರಾಶಿ :
ಇಂದು ಕಟಕ ರಾಶಿಯ ಜನರಿಗೆ ತುಂಬಾ ಒಳ್ಳೆಯ ದಿನವಾಗಲಿದೆ. ಕೆಲವು ವಿಶೇಷ ಕೆಲಸಕ್ಕಾಗಿ ನೀವು ಹೊರಗೆ ಪ್ರವಾಸಕ್ಕೆ ಹೋಗಬಹುದು. ನ್ಯಾಯಾಲಯದಲ್ಲಿ ನೀವು ಗೆಲ್ಲುತ್ತೀರಿ. ವ್ಯವಹಾರದಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ ಮತ್ತು ಕುಟುಂಬದ ಹಿತದೃಷ್ಟಿಯಿಂದ ನೀವು ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.

** ಸಿಂಹ ರಾಶಿ :
ಇಂದು ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ. ನೀವು ಆರೋಗ್ಯದಲ್ಲಿ ಕ್ಷೀಣತೆಯನ್ನು ಅನುಭವಿಸುವಿರಿ, ನಿಮ್ಮ ವ್ಯಾಪಾರ ಪಾಲುದಾರರಿಂದ ನೀವು ಮೋಸ ಹೋಗಬಹುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಅದರಲ್ಲಿ ಅಡಚಣೆ ಉಂಟಾಗಬಹುದು. ಕುಟುಂಬದಲ್ಲಿನ ಜನರು ನಿಮ್ಮ ವಿರುದ್ಧ ಬರಬಹುದು, ಇದರಿಂದಾಗಿ ವ್ಯತ್ಯಾಸಗಳು ಹೆಚ್ಚಾಗಬಹುದು.

** ಕನ್ಯಾ ರಾಶಿ :
ಇಂದು ನಿಮ್ಮ ಮನಸ್ಸು ಪ್ರಕ್ಷುಬ್ಧವಾಗಿರುತ್ತದೆ, ಮನಸ್ಸಿನಲ್ಲಿ ಕೆಲವು ಅಪರಿಚಿತ ಭಯ ಉಳಿಯುತ್ತದೆ. ಕುಟುಂಬದಲ್ಲಿ ನಿಮಗೆ ಹತ್ತಿರವಿರುವ ಯಾರೊಬ್ಬರ ಆರೋಗ್ಯ ಹದಗೆಡಬಹುದು. ವ್ಯವಹಾರದಲ್ಲಿ ನಷ್ಟವಾಗಬಹುದು. ನಿಮಗೆ ಹತ್ತಿರವಿರುವ ಯಾರೊಬ್ಬರ ವರ್ತನೆಯಿಂದ ನೀವು ಅಸಮಾಧಾನಗೊಳ್ಳಬಹುದು. ಕುಟುಂಬದಲ್ಲಿನ ವಾತಾವರಣವು ನಿಮ್ಮ ವಿರುದ್ಧವಾಗಿರುತ್ತದೆ. ಯಾವುದೇ ವ್ಯವಹಾರ ಮಾಡುವುದನ್ನು ತಪ್ಪಿಸಿ.

** ತುಲಾ ರಾಶಿ :
ಇಂದು ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಿ ಮತ್ತು ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ. ಹಳೆಯ ಸ್ನೇಹಿತ ಇಂದು ನಿಮ್ಮಿಂದ ಆರ್ಥಿಕ ಸಹಾಯ ಕೇಳಬಹುದು. ಮನೆಕೆಲಸಗಳಿಂದಾಗಿ ನೀವು ಇಂದು ಕಾರ್ಯನಿರತರಾಗಿರುತ್ತೀರಿ. ಉದ್ಯೋಗ ಹುಡುಕುತ್ತಿರುವವರಿಗೆ ಇಂದು ಒಳ್ಳೆಯ ದಿನ. ಉದ್ಯೋಗದಲ್ಲಿ ಬಡ್ತಿ ಜೊತೆಗೆ ಆದಾಯದಲ್ಲಿ ಹೆಚ್ಚಳವನ್ನು ಪಡೆಯಬಹುದು. ಬಾಕಿ ಇರುವ ಯಾವುದೇ ಕೆಲಸ ಇಂದು ಪೂರ್ಣಗೊಳ್ಳುತ್ತದೆ.

** ವೃಶ್ಚಿಕ ರಾಶಿ :
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನೀವು ಬಹಳ ದಿನಗಳಿಂದ ಯೋಚಿಸುತ್ತಿದ್ದ ಕೆಲಸ, ಇಂದು ವಿಶೇಷ ವ್ಯಕ್ತಿಯ ಮೂಲಕ ಪೂರ್ಣಗೊಳ್ಳುತ್ತದೆ. ವ್ಯವಹಾರದಲ್ಲಿ ಆರ್ಥಿಕ ಲಾಭ ಇರುತ್ತದೆ. ಹೊಸ ಕ್ರಿಯಾ ಯೋಜನೆ ರೂಪಿಸಲಾಗುವುದು, ನಿಮ್ಮ ಕುಟುಂಬ ಸದಸ್ಯರ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.

** ಧನಸ್ಸು ರಾಶಿ :
ಇಂದು ಧನು ರಾಶಿಯ ಜನರು ನೀವು ಕೆಲವು ಅನುಪಯುಕ್ತ ಗೊಂದಲದಲ್ಲಿ ಸಿಲುಕಿಕೊಳ್ಳಬಹುದು. ನೀವು ಕೆಲವು ಪಿತೂರಿಗೆ ಬಲಿಯಾಗಬಹುದು, ಎದುರಾಳಿ ವರ್ಗವು ಸಕ್ರಿಯವಾಗಿರುತ್ತದೆ. ಇಂದು ನೀವು ಆರೋಗ್ಯದಲ್ಲಿ ಕುಸಿತವನ್ನು ಅನುಭವಿಸುವಿರಿ. ವ್ಯವಹಾರದಲ್ಲಿ ಅಡಚಣೆ ಇರುತ್ತದೆ. ಅಪರಿಚಿತ ವ್ಯಕ್ತಿಗೆ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡಬೇಡಿ. ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ವಿವಾದವಿರಬಹುದು. ಇಂದು ನೀವು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

** ಮಕರ ರಾಶಿ :
ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ. ವಾಹನಗಳನ್ನು ಚಾಲನೆ ಮಾಡುವಾಗ ಜಾಗರೂಕರಾಗಿರಿ, ದೀರ್ಘ ಪ್ರಯಾಣಗಳಿಗೆ ಹೋಗುವುದನ್ನು ತಪ್ಪಿಸಿ. ಇಂದು ವ್ಯವಹಾರದಲ್ಲಿ ಯಾವುದೇ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಕೆಲಸದ ಸ್ಥಳವನ್ನು ಬದಲಾಯಿಸುವುದು ಇಂದು ನಿಮಗೆ ಒಳ್ಳೆಯದಲ್ಲ. ಕುಟುಂಬದ ಜನರು ನಿಮ್ಮ ವಿರುದ್ಧ ಬರಬಹುದು. ಗೌರವ ಕಡಿಮೆಯಾಗುತ್ತದೆ.

** ಕುಂಭ ರಾಶಿ :
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ, ನಿಮಗೆ ಆರೋಗ್ಯದ ಲಾಭಗಳು ದೊರೆಯುತ್ತವೆ. ಮನಸ್ಸು ಸಂತೋಷವಾಗಿರುತ್ತದೆ, ಬಾಕಿ ಇರುವ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ವಿಶೇಷ ವ್ಯಕ್ತಿಯ ಮೂಲಕ ನೀವು ವ್ಯವಹಾರದಲ್ಲಿ ದೊಡ್ಡ ವ್ಯವಹಾರವನ್ನು ಪಡೆಯಬಹುದು. ಕುಟುಂಬದಲ್ಲಿ ಶುಭ ಘಟನೆಗಳು ನಡೆಯುತ್ತವೆ. ಕುಟುಂಬ ಸದಸ್ಯರು ನಿಮಗೆ ಅನುಕೂಲಕರವಾಗಿರುತ್ತಾರೆ.

** ಮೀನ ರಾಶಿ :
ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನೀವು ಇಂದು ನಿಮ್ಮ ಜೀವನದಲ್ಲಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು, ಭವಿಷ್ಯದಲ್ಲಿ ನೀವು ಅದರ ಪ್ರಯೋಜನಗಳನ್ನು ನೋಡುತ್ತೀರಿ. ನಿಮ್ಮ ಮಾತನ್ನು ನಿಯಂತ್ರಿಸಿ, ವಾದಗಳಿಂದ ದೂರವಿರಿ. ವ್ಯವಹಾರದಲ್ಲಿ ನೀವು ಭಾರಿ ಲಾಭವನ್ನು ಪಡೆಯುತ್ತೀರಿ, ನೀವು ಸಿಲುಕಿಕೊಂಡ ಹಣವನ್ನು ಪಡೆಯುತ್ತೀರಿ. ನೀವು ಇಂದು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಸರಕು
55009-78000-96896

ಬೆಟ್ಟೆ
50069-64600-66140

ರಾಶಿ
49669-59000-60911

ಗೊರಬಲು
23209-33600-36039

Categories
ಹಬ್ಬಗಳು

ಗೌರಿ ಹಬ್ಬದ ಸಂಭ್ರಮ.. ಸಡಗರ..!

ಗೌರಿ ಹಬ್ಬದ ಸಂಭ್ರಮ.. ಸಡಗರ..!
– ಮನೆ ಮನೆಯಲ್ಲಿ ಆಚರಣೆ ಸಿದ್ಧತೆ ಜೋರು
– ಗೌರಿ ಹಬ್ಬದ ವಿಶೇಷ ಏನು? ಆಚರಣೆ ಹೇಗೆ?

NAMMUR EXPRESS NEWS
ಗೌರಿ ಎಂಬ ಹೆಸರು ಹೆಣ್ಣು ಮಕ್ಕಳಲ್ಲಿ ಒಂದು ರೀತಿಯ ಭಕ್ತಿ ಪ್ರೀತಿಯ ಜೊತೆಗೆ ಸಂಭ್ರಮವನ್ನು ತಂದುಕೊಡುತ್ತದೆ. ಈ ಬಾರಿಯ ಗೌರಿ ಹಬ್ಬ ದೇವಿಯ ವಾರವಾದ ಮಂಗಳವಾರದಂದು ಬಂದಿರುವುದು ಮತ್ತೊಂದು ವಿಶೇಷ. ಗೌರಿ ಪೂಜೆಗೆ ಹೆಣ್ಣು ಮಕ್ಕಳು ಸಡಗರದಿಂದ ತಯಾರಿ ನಡೆಸುತ್ತಿದ್ದಾರೆ.
ಗೌರಿಯನ್ನು ಭಕ್ತಿಯಿಂದ, ಪ್ರೀತಿಯಿಂದ ಪೂಜಿಸಿ, ಆರಾಧಿಸಿದರೆ ಮುತ್ತೈದೆತನ ಶಾಶ್ವತವಾಗಿರುವಂತೆ ಮತ್ತು ಯುವತಿಯರಿಗೆ ಶಿವನ ಅರ್ಧನಾರೀಶ್ವರ ಸ್ವರೂಪನಾದ ಅಂದರೆ ಹೆಣ್ಣನ್ನು ತನ್ನ ಸಮಾನವಾಗಿ ಕಾಣುವ ಉತ್ತಮ ಗುಣವುಳ್ಳ, ಹೃದಯವಂತ ಪತಿಯಾಗಿ ದೊರೆಯುವಂತೆ ಮಾಡುತ್ತಾಳೆ ಎನ್ನುವ ಅಗಾಧ ನಂಬಿಕೆ ಇದೆ. ಪಾರ್ವತಿಯು ತಪಸ್ಸನ್ನು ಕೈಗೊಂಡು, ರುದ್ರ ಸ್ವರೂಪಿಯಾದ ಶಿವನನ್ನು ತನ್ನ ಪ್ರೀತಿಗೆ ಮಣಿಸಿ ತನ್ನ ಕೈ ಹಿಡಿಯುವಂತೆ ಮಾಡುತ್ತಾಳೆ. ಪಾರ್ವತಿಯ ಪ್ರೀತಿಗೆ ಸೋತ ಶಿವನು, ಭೂಲೋಕಕ್ಕೆ ಬಂದು ಆಕೆಯನ್ನು ಪರಿಣಯಿಸಿ, ತನ್ನ ನಿವಾಸವಾದ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಪ್ರತಿ ವರ್ಷ ಗೌರಿಯು ಒಂದು ಬಾರಿ ಭೂಲೋಕಕ್ಕೆ ಬಂದು ಹೋಗುತ್ತಾಳೆ ಎನ್ನಲಾಗಿದೆ. ಇನ್ನು ಜನಪದರು ಗೌರಿಯನ್ನು ನೋಡುವ ರೀತಿಯೇ ಬೇರೆ. ಅವರ ಪಾಲಿಗೆ ಗೌರಿ ದೇವರಲ್ಲ, ಬದಲಿಗೆ ನಮ್ಮಂತೆ ಓರ್ವ ಸಾಮಾನ್ಯ ಹೆಣ್ಣು. ಗೌರಿಯು ಭೂಲೋಕದ ಮನೆಮಗಳು. ಪತಿಯಾದ ಶಿವನು ನೆಲೆನಿಂತಿರುವ ಅಂದರೆ ಗಂಡನ ಮನೆಯಾದ ಕೈಲಾಸದಿಂದ, ಭೂಲೋಕ ಎಂಬ ತವರುಮನೆಗೆ ಬಂದು ಬಾಗಿನ ಪಡೆದುಕೊಂಡು ಹೋಗುತ್ತಾಳೆ ಎನ್ನುವುದು ಇವರ ಮಾತು. ಹೆಣ್ಣು ಮಕ್ಕಳು ವರ್ಷಕ್ಕೊಮ್ಮೆ ತವರು ಮನೆಗೆ ಹೋಗಿ, ಹಿಂತಿರುಗುವಾಗ ಉಡಿ, ಬಾಗಿನ ತೆಗೆದುಕೊಂಡು ಹೋಗುವಂತೆ, ಗೌರಿಯು ಭೂಲೋಕದಲ್ಲಿರುವ ತನ್ನ ತವರಿಗೆ ಪ್ರತಿ ವರ್ಷ ಬಂದು ಬಾಗಿನ ತೆಗೆದುಕೊಂಡು ಹೋಗುತ್ತಾಳೆ ಎನ್ನುತ್ತಾರೆ ಜನಪದರು. ಈ ಕಾರಣದಿಂದಾಗಿ ಗೌರಿ ಹಬ್ಬ ಎನ್ನುವುದು ವಿವಾಹಿತ ಮಹಿಳೆಯರ ಪಾಲಿಗೆ ತವರು ಮನೆ ಹಬ್ಬವಾಗಿದೆ.
ಗಂಡನ ಮನೆಯಲ್ಲಿದ್ದೇ ಬಾಗಿನದ ಪೂಜೆಯನ್ನು ನೆರವೇರಿಸಿದರೂ ಕೂಡ, ಅವರಿಗೆ ತವರುಮನೆಯಿಂದ ಸೀರೆ, ರವಿಕೆ ಕಣ, ಅರಿಶಿಣ, ಕುಂಕುಮ, ಹೂವು, ಬಳೆ, ಹಣ, ಒಡವೆಗಳು ಬಾಗಿನದ ರೂಪದಲ್ಲಿ ತಂದೆ ಅಥವಾ ಅಣ್ಣ ತಮ್ಮಂದಿರ ಮೂಲಕ ಬರುವುದನ್ನು ನೋಡಬಹುದಾಗಿದೆ. ಹಬ್ಬದ ನಂತರ ಹೆಣ್ಣು ಮಕ್ಕಳು ತವರಿಗೆ ಬಂದು ತಾಯಿಗೆ ಮತ್ತು ತನಗಿಂತ ಹಿರಿಯರಾಗಿರುವ ಕುಟುಂಬದಲ್ಲಿನ ಮಹಿಳೆಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದುಕೊಂಡು ಸಹ ಹೋಗುತ್ತಾರೆ. ಇನ್ನು ಗೌರಿ ಹಬ್ಬಕ್ಕೂ ಗಂಗೆ ಗೌರಿ ಜಗಳಕ್ಕೂ ನಂಟಿದೆ ಎನ್ನಲಾಗಿದೆ. ಒಮ್ಮೆ ಗಂಗೆ ಗೌರಿಯರ ನಡುವೆ ಯಾವುದೋ ಕಾರಣಕ್ಕೆ ಕಲಹ ಏರ್ಪಡುತ್ತದೆ. ಆಗ ಗೌರಿಯು ಮುಟ್ಟಾಗಿರುತ್ತಾಳೆ. ಕೋಪದಲ್ಲಿದ್ದ ಗಂಗೆಯು ಗೌರಿಗೆ ಮೈ ತೊಳೆದುಕೊಳ್ಳಲು, ಆಕೆಯ ಮಕ್ಕಳಿಗೆ ಅಡುಗೆ ಮಾಡಿ ಹಾಕಲು, ಶಿವನ ಪೂಜೆಗೆ ನೀರಿಲ್ಲದಂತೆ ಮಾಡುತ್ತಾಳೆ. ಆಗ ಗೌರಿಯು ಗಂಗೆಗೆ ಆಕೆಯ ಮೂಲವನ್ನು ತಿಳಿಸಿ ನಿಂದಿಸುತ್ತಾಳೆ, ಅದೇ ರೀತಿ ಗಂಗೆಯು ಗೌರಿಯನ್ನು ನಿಂದಿಸುತ್ತಾಳೆ. ಇಬ್ಬರ ಜಗಳದ ನಡುವೆ ರಾಜಿ ಸಂಧಾನಕ್ಕೆ ಬಂದ ಶಿವನು, ಇಬ್ಬರ ಶ್ರೇಷ್ಠತೆಯನ್ನು ಮನವರಿಕೆ ಮಾಡಿ, ಗಂಗೆಯು ಭೂಲೋಕದಲ್ಲಿ ಜಾತ್ರೆಯ ಸಮಯದಲ್ಲಿ ಮಾರಿಯ ರೂಪದಲ್ಲಿ ಮಾಂಸಾಹಾರ ನೈವೇದ್ಯ ಸ್ವೀಕರಿಸಿ, ಪೂಜಿತಳಾಗುವಂತೆ ಮತ್ತು ಪಾರ್ವತಿಯು ಭೂಲೋಕದಲ್ಲಿ ಭಾದ್ರಪದ ಮಾಸದಲ್ಲಿ ಗೌರಿ ಎಂಬ ಹೆಸರಿನಲ್ಲಿ ಸಿಹಿ ಪದಾರ್ಥದ ನೈವೇದ್ಯ ಸ್ವೀಕರಿಸಿ ಭೂಲೋಕದಲ್ಲಿ ಪೂಜಿತಳಾಗುವಂತೆ ಹರಸಿದನು ಎಂಬ ಉಲ್ಲೇಖ ಕೂಡ ಇದೆ.

Categories
ಶೃಂಗೇರಿ

ಶೃಂಗೇರಿಯಲ್ಲಿ ಯಶಸ್ವಿ ಉದ್ಯೋಗ ಮೇಳ..!

ಶೃಂಗೇರಿಯಲ್ಲಿ ಯಶಸ್ವಿ ಉದ್ಯೋಗ ಮೇಳ..! 
* 30 ಕಂಪನಿಗಳು ಭಾಗಿ: ನೂರಾರು ಜನರಿಗೆ ಉದ್ಯೋಗ
* ನೂರಾರು ನಿರುದ್ಯೋಗಿ ಯುವ ಜನತೆಗೆ ನೆರವಾದ ಸುಧಾಕರ್ ಶೆಟ್ಟಿ 

NAMMMUR EXPRESS NEWS
ಶೃಂಗೇರಿ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಅವರ ಅಮ್ಮ ಫೌಂಡೇಶನ್ ವತಿಯಿಂದ ಶೃಂಗೇರಿ ಶ್ರೀಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯದ 5ನೇ ಹಾಗೂ ಶೃಂಗೇರಿ ಕ್ಷೇತ್ರದ 2 ನೇ ಉದ್ಯೋಗ ಮೇಳವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಉದ್ಯೋಗ ಮೇಳದಲ್ಲಿ 30 ಕಂಪನಿಗಳು ಭಾಗವಹಿಸಿದ್ದು, ಸಾವಿರಾರು ಜನ ನಿರುದ್ಯೋಗಿ ಯುವಕ ಯುವತಿಯರು ಪಾಲ್ಗೊಂಡಿದ್ದರು. ನೂರಾರು ಜನರಿಗೆ ಉದ್ಯೋಗ ದೊರಕಿದೆ. ಜತೆಗೆ ಉದ್ಯೋಗ ಪಡೆಯೋದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳ ಸಂದರ್ಶನದಲ್ಲಿ ಪಾಲ್ಗೊಂಡು ಅನುಭವಪಟ್ಟರು.
ಶೃಂಗೇರಿ ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅಮ್ಮ ಫೌಂಡೇಷನ್ ಸುಧಾಕರ್ ಎಸ್ ಶೆಟ್ಟಿ ಸೇರಿದಂತೆ,ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಕರ್ನಾಟಕ ಸಣ್ಣ ಕೈಗಾರಿಕೆ ಮಾಜಿ ಅಧ್ಯಕ್ಷರಾದ ಕೆ ಎಂ ನರಸಿಂಹ ಮೂರ್ತಿ,ಜೆಡಿಎಸ್ ಕಾರ್ಯಕಾರಿಣಿ ಸದಸ್ಯ ಮಂಜುನಾಥ್ ಗಂಡಘಟ್ಟ,ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ ಸಿ ಶಂಕರಪ್ಪ,ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲಾ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು.

ಅಮ್ಮ ಫೌಂಡೇಷನ್ ಸೇವೆಗೆ ಎಲ್ಲರ ಮೆಚ್ಚುಗೆ

ಉದ್ಯೋಗ ಮೇಳ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಅಮ್ಮ ಫೌಂಡೇಷನ್ ಮೂಲಕ ಸುಧಾಕರ್ ಶೆಟ್ಟಿಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಮಾಜಮುಖಿ ಕಾರ್ಯದಲ್ಲಿ ತನ್ನೊಂದಿಗೆ ಸಹಕರಿಸಿದ ಪಕ್ಷದ ಎಲ್ಲಾ ಪ್ರಮುಖರಿಗೂ ಭಾಗವಹಿಸಿದ ಕಂಪನಿಯವರಿಗೂ ಧನ್ಯವಾದ ತಿಳಿಸಿದ ಸುಧಾಕರ್ ಶೆಟ್ಟಿ, ಯುವಜನತೆ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಜತೆಗೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ, ಉದ್ಯೋಗ ಕೊಡಿಸುವುದು ನನ್ನ ಕನಸು ಎಂದು ಹೇಳಿದರು.

Categories
ಜ್ಯೋತಿಷ್ಯ

ಹಣ ಮರಳಿ ಪಡೆಯಲು ಏಲಕ್ಕಿ ಪರಿಹಾರ

ಹಣ ಮರಳಿ ಪಡೆಯಲು ಏಲಕ್ಕಿ ಪರಿಹಾರ 
– ಗುರುವಾರ ಏಲಕ್ಕಿಯೊಂದಿಗೆ ಇದನ್ನು ಪ್ರಯತ್ನಿಸಿ
– ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದವರು ಸಹ ತಮ್ಮ ಮನಸ್ಸನ್ನು ಬದಲಾಯಿಸಿ ಹಣ ನೀಡಲು ಪ್ರಾರಂಭಿಸುತ್ತಾರೆ.

NAMMUR EXPRESS NEWS
ಸಾಲವು ಎಂದಿಗೂ ಜೀವನದಲ್ಲಿ ಬರಬಾರದು. ಅದು ಸಾಲ ತೆಗೆದುಕೊಳ್ಳುವುದಾಗಲಿ ಅಥವಾ ಇತರರಿಗೆ ಸಾಲ ನೀಡುವುದಾಗಲಿ. “ಋಣ” ಎಂಬ ಮೂರು ಅಕ್ಷರಗಳು ನಮ್ಮ ಜೀವನದಲ್ಲಿ ಬಂದರೆ, “ಶಾಂತಿ” ಎಂಬ ನಾಲ್ಕು ಅಕ್ಷರಗಳು ನಮ್ಮ ಜೀವನವನ್ನು ಬಿಟ್ಟು ಹೋಗುತ್ತವೆ ಎಂದು ಹೇಳಬಹುದು. ಶಾಂತಿ ಮಾತ್ರವಲ್ಲ, ಸಂತೋಷವೂ ನಮ್ಮನ್ನು ಬಿಟ್ಟು ಹೋಗುತ್ತದೆ. ಒಬ್ಬ ವ್ಯಕ್ತಿಯು ಸಾಲ ತೆಗೆದುಕೊಳ್ಳುತ್ತಾನೋ ಅಥವಾ ಸಾಲ ನೀಡುತ್ತಾನೋ ಅದು ಅವನ ಕರ್ಮ ಕ್ರಿಯೆಗಳನ್ನು ಅವಲಂಬಿಸಿರುತ್ತದೆ.

ಇದಲ್ಲದೆ, ನಾವು ಸಾಲ ನೀಡಿದ ಹಣವನ್ನು ಮರಳಿ ಪಡೆಯಲು ಮತ್ತು ಸಾಲ ಪಡೆದ ಹಣವನ್ನು ಹಿಂದಿರುಗಿಸಲು ನಮ್ಮ ಕರ್ಮ ಕ್ರಿಯೆಗಳು ಬಹಳ ಮುಖ್ಯವಾದ ಕಾರಣ. ಅನೇಕ ಜನರು ತಮ್ಮ ಸಾಲಗಳನ್ನು ಮರುಪಾವತಿಸುವಲ್ಲಿ ತೊಂದರೆ ಅನುಭವಿಸುತ್ತಾರೆ. ಕರ್ಮ ಕ್ರಿಯೆಗಳು ಇದಕ್ಕೆ ಕಾರಣವಾಗಿರುವಂತೆಯೇ, ನಾವು ಸಾಲ ನೀಡಿದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗದಿರಲು ಸಹ ಕಾರಣವಾಗಿದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಅಂತಹ ಹಣಕ್ಕೆ ಸಂಬಂಧಿಸಿದ ಕರ್ಮ ಕ್ರಿಯೆಗಳನ್ನು ಪರಿಹರಿಸಲು ಮತ್ತು ನಾವು ಸಾಲ ನೀಡಿದ ಹಣವನ್ನು ಮರಳಿ ಪಡೆಯಲು ಏಲಕ್ಕಿಯನ್ನು ಬಳಸಿ ಮಾಡಬಹುದಾದ ಪರಿಹಾರವನ್ನು ನಾವು ನೋಡಲಿದ್ದೇವೆ .

ಹಣವನ್ನು ಮರಳಿ ಪಡೆಯಲು ಪರಿಹಾರ
ನಮಗೆ ಹಣ ಬೇಕಾದರೆ, ಅದು ಕೂಡ ಶಾಶ್ವತವಾಗಿ ಬೇಕಾದರೆ, ನಮಗೆ ಹಣದ ಮಂತ್ರ ಬೇಕು. ಯಾರಾದರೂ ಹಣದ ಮಂತ್ರವನ್ನು ಹೊಂದಿದ್ದರೆ, ಅವರು ಎಷ್ಟೇ ಖರ್ಚು ಮಾಡಿದರೂ, ಅವರು ಖರ್ಚು ಮಾಡಿದ ಹಣಕ್ಕಿಂತ ಅನೇಕ ಪಟ್ಟು ಹೆಚ್ಚು ಹಣ ಅವರಿಗೆ ಹಿಂತಿರುಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಜನರು ನೀಡಿದ ಹಣವನ್ನು ಸಹ ಮರಳಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಅಂತಹ ಹಣದ ಮಂತ್ರವನ್ನು ರಚಿಸಲು ಮತ್ತು ನೀಡಿದ ಹಣವನ್ನು ಮರಳಿ ಪಡೆಯಲು ಏಲಕ್ಕಿ ಅತ್ಯುತ್ತಮ ತಾಂತ್ರಿಕ ವಸ್ತುವಾಗಿದೆ. ಅಂತಹ ಏಲಕ್ಕಿಯನ್ನು ಬಳಸಿ ಮಾಡಬೇಕಾದ ಪರಿಹಾರವನ್ನು ನೋಡೋಣ.

ಈ ಪರಿಹಾರವನ್ನು ಗುರುವಾರದಿಂದಲೇ ಪ್ರಾರಂಭಿಸಬೇಕು. ಗುರುವಾರ ರಾತ್ರಿ ಮಲಗುವ ಮುನ್ನ, 11 ಏಲಕ್ಕಿ ಕಾಳುಗಳನ್ನು ತೆಗೆದುಕೊಂಡು, ಒಂದು ಲೋಟ ನೀರಿನಲ್ಲಿ ಹಾಕಿ, ಮುಚ್ಚಿ, ನಿಮ್ಮ ತಲೆಯ ಮೇಲೆ ಇಟ್ಟು ಮಲಗಿ. ನಿಮಗೆ ಹಣ ನೀಡಿದ ವ್ಯಕ್ತಿ ಮಾತ್ರ ಈ ಪರಿಹಾರವನ್ನು ಮಾಡಬೇಕು. ಬೇರೆ ಯಾರೂ ಇದನ್ನು ಮಾಡಬಾರದು. ಮರುದಿನ ಬೆಳಿಗ್ಗೆ, ನೀವು ಎದ್ದಾಗ, ಹಲ್ಲುಜ್ಜಿ ಮತ್ತು ಈ ಏಲಕ್ಕಿ ನೆನೆಸಿದ ನೀರನ್ನು ಕುಡಿಯಿರಿ. ನಂತರ, ಎಂದಿನಂತೆ, ನಿಮ್ಮ ದೈನಂದಿನ ಕೆಲಸಗಳನ್ನು ಮುಗಿಸಿದ ನಂತರ, ನೀವು ಹಣವನ್ನು ನೀಡಿದ ವ್ಯಕ್ತಿಯ ಬಳಿಗೆ ಹೋಗಿ ಹಣವನ್ನು ಮರಳಿ ಕೇಳಿ.

ನಾವು ಈ ರೀತಿ ಏಲಕ್ಕಿ ನೀರು ಕುಡಿದು ಹಣ ನೀಡಿದ ವ್ಯಕ್ತಿಯಿಂದ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ನಮಗೆ ಹಣ ನೀಡದೆ ಮೋಸ ಮಾಡುತ್ತಿದ್ದೇವೆ ಎಂದು ಭಾವಿಸಿದವರು ಸಹ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ತೆಗೆದುಕೊಂಡ ಹಣವನ್ನು ಹಿಂತಿರುಗಿಸಲು ಪ್ರಾರಂಭಿಸುತ್ತಾರೆ. ಪ್ರತಿ ಗುರುವಾರ ರಾತ್ರಿ ಏಲಕ್ಕಿಯನ್ನು ಈ ರೀತಿ ನೀರಿನಲ್ಲಿ ನೆನೆಸಿ, ಶುಕ್ರವಾರ ಆ ನೀರನ್ನು ಕುಡಿದು ಹಣ ಕೇಳಲು ಹೋದರೆ, ನಾವು ಬೇಗನೆ ಹಣವನ್ನು ಮರಳಿ ಪಡೆಯಬಹುದು. ಇಷ್ಟು ವಾರಗಳವರೆಗೆ ಇದನ್ನು ಮಾಡುವ ಅಗತ್ಯವಿಲ್ಲ. ನಮ್ಮ ಹಣ ಮರಳಿ ಬರುವವರೆಗೆ ನಾವು ಈ ಪರಿಹಾರವನ್ನು ಮಾಡಬಹುದು.

ದೇವರ ಪೂಜೆ ಮತ್ತು ಪರಿಹಾರಗಳು ನಮ್ಮ ಕರ್ಮ ಕ್ರಿಯೆಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಬಹುದು. ನಾವು ಯಾವುದೇ ಪೂಜೆ ಅಥವಾ ಪರಿಹಾರವನ್ನು ಮಾಡಿದಾಗ, ಮೊದಲು ನಮ್ಮ ಕರ್ಮ ಕ್ರಿಯೆಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ನಂತರ ಮಾತ್ರ ನಮಗೆ ಬೇಕಾದುದನ್ನು ಪಡೆಯುತ್ತೇವೆ. ಆದರೆ ತಾಂತ್ರಿಕ ಪರಿಹಾರಗಳು ಕರ್ಮ ಕ್ರಿಯೆಗಳನ್ನು ಮೀರಿವೆ. ಆದ್ದರಿಂದ, ನೀಡಿದ ಹಣವನ್ನು ಮರಳಿ ಪಡೆಯಲು, ನಾವು ಈ ತಾಂತ್ರಿಕ ಪರಿಹಾರವನ್ನು ಪೂರ್ಣ ಹೃದಯದಿಂದ ಮಾಡಬಹುದು ಮತ್ತು ಹಣವನ್ನು ಮರಳಿ ಪಡೆಯಬಹುದು ಎಂದು ಹೇಳುವ ಮೂಲಕ ನಾವು ಈ ಪೋಸ್ಟ್ ಅನ್ನು ಮುಕ್ತಾಯಗೊಳಿಸುತ್ತೇವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564  

Categories
ಬೆಂಗಳೂರು

ಗೌರಿ ಗಣೇಶ ಹಬ್ಬಕ್ಕೆ ವಿಶೇಷ ಆಫರ್..!!

ಗೌರಿ ಗಣೇಶ ಹಬ್ಬಕ್ಕೆ ವಿಶೇಷ ಆಫರ್..!!
– ಬೆಂಗಳೂರಿನಿಂದ KSRTC ವಿಶೇಷ ಬಸ್‌ಗಳ ಸೇವೆ ಆರಂಭ
– ಮುಂಗಡ ಬುಕ್ಕಿಂಗ್‌ಗೆ ಶೇ 10 ರಷ್ಟು ರಿಯಾಯಿತಿ

NAMMUR EXPRESS NEWS
ಬೆಂಗಳೂರು: ಗೌರಿ – ಗಣೇಶ ಹಬ್ಬದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ಸೋಮವಾರದಿಂದಲೇ ಓಡಾಟ ಆರಂಭಿಸಿವೆ. ಬರೋಬ್ಬರಿ 1500 ಬಸ್‌ಗಳು ಆಗಸ್ಟ್‌ 25, 26, 27 ಹಾಗೂ 31 ರಂದು ಸಂಚಾರ ನಡೆಸಲಿವೆ. ಈ ಬಗ್ಗೆ ಕೆಎಸ್‌ಆರ್‌ಟಿಸಿಯಿಂದ ಮಾಹಿತಿ ನೀಡಿದ್ದು, ಆಗಸ್ಟ್‌ 26 ರಂದು ಸ್ವರ್ಣಗೌರಿ ವ್ರತ, 27 ರಂದು ಗಣೇಶ ಚತುರ್ಥಿ ಹಬ್ಬವಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆಗಸ್ಟ್ 25, 26 ರಂದು ಬೆಂಗಳೂರಿನಿಂದ 1500 ಹೆಚ್ಚುವರಿ ಬಸ್‌ಗಳು ರಾಜ್ಯ, ಹೊರರಾಜ್ಯಕ್ಕೆ ಸಂಚಾರ ನಡೆಸಲಿವೆ. ಆಗಸ್ಟ್‌ 27 ಹಾಗೂ 31 ರಂದು ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬಸ್‌ ಸಂಚರಿಸಲಿವೆ.

ಯಾವ ನಿಲ್ದಾಣದಿಂದ ಎಲ್ಲಿಗೆ ಬಸ್‌?

* ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್‌) – ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ.

* ಮೈಸೂರು ರಸ್ತೆ ಬಸ್ ನಿಲ್ದಾಣ – ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ.

* ಶಾಂತಿನಗರ ಬಿಎಂಟಿಸಿ ನಿಲ್ದಾಣ – ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಕಾರ್ಯಾಚರಣೆ.

ಬುಕ್ಕಿಂಗ್ ಆರಂಭಿಸಿದ ಕೆಎಸ್‌ಆರ್‌ಟಿಸಿ
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇ-ಟಿಕೇಟ್ ಬುಕಿಂಗ್‌ನ್ನು KSRTC.IN ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ – ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟç ಹಾಗೂ ಪುದುಚೆರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

Categories
ಕರಾವಳಿ

ಮಾಸ್ಕ್ ಮ್ಯಾನ್ ಈಗ ಪ್ರಮುಖ ಆರೋಪಿ!

ಕರಾವಳಿ ಟಾಪ್ ನ್ಯೂಸ್

ಮಾಸ್ಕ್ ಮ್ಯಾನ್ ಈಗ ಪ್ರಮುಖ ಆರೋಪಿ!
– ಚಿನ್ನಯ್ಯ ಹತ್ತು ದಿನಗಳ ಕಾಲ ಕಸ್ಟಡಿಗೆ
– ಬುರುಡೆಗೂ ಅಲ್ಲಿನ ಮಣ್ಣಿಗೂ ಸಾಮ್ಯತೆ ಇಲ್ಲ!

• ಪುತ್ತೂರು: ಚರಂಡಿಗೆ ಬಿದ್ದ ಸ್ಕಾರ್ಪಿಯೋ
• ಹೆಬ್ರಿ: ಕೋಳಿ ಅಂಕದ ಮೇಲೆ ದಾಳಿ
• ಮಂಗಳೂರು: ಮೊಬೈಲ್ ಸಿಕ್ಕಿ ಹಣದ ವಂಚನೆ
• ಕಾಪು: ರಸ್ತೆ ದಾಟಲು ನಿಂತ ವ್ಯಕ್ತಿಗೆ ಯಮನಾದ ಕಾರು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವಗಳನ್ನು ಹೂತಿರುವುದಾಗಿ ಭಾರೀ ಸಂಚಲನ ಸೃಷ್ಟಿಸಿದ ಮುಸುಕುಧಾರಿ ಅನಾಮಿಕ ವ್ಯಕ್ತಿಯು ಚಿನ್ನಯ್ಯ ಎಂಬ ಹೆಸರಿನ ವ್ಯಕ್ತಿ ಎಂದು ಗುರುತಿಸಲಾಗಿದ್ದು, ದಿನ ಬೆಳಗಾಗುವುದರೊಳಗಾಗಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾನೆ.
ಚಿನ್ನಯ್ಯನ ಪರ ಬಂದಿದ್ದ ವಕೀಲರನ್ನು ಎಸ್ಐಟಿ ತಂಡದವರು ಹಿಂದಕ್ಕೆ ಕಳುಹಿಸಿದ್ದು, ಶುಕ್ರವಾರ ರಾತ್ರಿ ತನಿಖಾಧಿಕಾರಿಗಳೆ ಆತನ ವಿಚಾರಣೆ ನಡೆಸಿದ್ದು, ಆ ಸಂದರ್ಭದಲ್ಲಿ ಉತ್ತರಗಳನ್ನು ಗೊಂದಲ ಸೃಷ್ಟಿಸುವಂತೆ ನೀಡಿದ್ದನು. ಮರಳಿ ಅದೇ ಪ್ರಶ್ನೆಗಳನ್ನು ಕೇಳಿದಾಗ ಹೊಸ ಕಥೆಯೊಂದನ್ನು ಸೃಷ್ಟಿಸಿದ ಎನ್ನಲಾಗಿದೆ. ತನ್ನನ್ನು ಇಲ್ಲಿಗೆ ಕರೆದುಕೊಂಡು ಬಂದವರು ಯಾರು, ಹಣವನ್ನು ನೀಡುವುದಾಗಿ ಆಸೆ ತೋರಿಸಿದವರು ಯಾರು, ಸುಳ್ಳು ಹೇಳುವಂತೆ ಮಾರ್ಗದರ್ಶನ ನೀಡಿದವರು ಯಾರು, ಬುರುಡೆಗಳನ್ನು ತಂದುಕೊಟ್ಟವರು ಯಾರು ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಇವುಗಳನ್ನು ಎಸ್ಐಟಿ ತನಿಖಾಧಿಕಾರಿಗಳು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ನೀಡಿದ್ದಾರೆ. ಮತ್ತು ಎಸ್ಐಟಿ ತಂಡದವರ ಕೋರಿಕೆಯ ಮೇರೆಗೆ ನ್ಯಾಯಾಧೀಶರು ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅನನ್ಯ ಭಟ್ ಪ್ರಕರಣದಂತೆ ಇದು ಇನ್ನೊಂದು ರೂಪ ಇರಬಹುದು ಎನ್ನುವುದು ಹಲವರಲ್ಲಿ ಅನುಮಾನ ವ್ಯಕ್ತವಾಗಿದೆ.

• ಪುತ್ತೂರು: ಕಾಂಚನ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ಗಾಡಿ, ಹೆದ್ದಾರಿ ಬದಿಯಲ್ಲಿದ್ದ ಚರಂಡಿಗೆ ಬಿದ್ದಿರುವ ಘಟನೆ ಬಜತ್ತೂರು ಗ್ರಾಮದ ಬಳಿ ನಡೆದಿದೆ. ಸ್ಕಾರ್ಪಿಯೋ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂಬ ಸಂಗತಿ ತಿಳಿದುಬಂದಿದೆ.

• ಹೆಬ್ರಿ: ಕೋಳಿ ಅಂಕದ ಮೇಲೆ ದಾಳಿ

ಹೆಬ್ರಿ: ಬೆಳಂಜೆ ಗ್ರಾಮದ ಹಾಡಿಯೊಂದರಲ್ಲಿ ಅಕ್ರಮ ಕೂಟವೊಂದನ್ನು ಏರ್ಪಡಿಸಿ, ಹಣವನ್ನು ಬಾಜಿಕಟ್ಟಿ ಕೋಳಿ ಅಂಕವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಆರೋಪಿಗಳು ಪರಾರಿಯಾಗಿದ್ದು, ರೋಹಿತ್ ಶೆಟ್ಟಿ, ಚರಣ್ ರಾಜ್, ದಿನೇಶ್ ರಾವ್, ಅರ್ಜುನ್, ಮಂಜುನಾಥ, ಪ್ರಶಾಂತ, ದಯಾನಂದ ಪೂಜಾರಿ, ಸಂತೋಷ್ ಶೆಟ್ಟಿ ಎನ್ನುವವರನ್ನು ಬಂಧಿಸಿದ್ದಾರೆ.‌ ಅಲ್ಲದೆ ಮೂವತ್ತು ಸಾವಿರ ರೂಪಾಯಿ ಬೆಲೆಬಾಳುವ ಮೂವತ್ತು ಕೋಳಿಗಳನ್ನು, 10.630 ರೂಪಾಯಿ ನಗದು ಹಣವನ್ನು, ಆರು ಮೊಬೈಲ್ ಗಳನ್ನು, ಆರೋಪಿಗಳ ಕಾರು ಮತ್ತು ಬೈಕ್ ಗಳನ್ನು ಸೇರಿ ಸುಮಾರು 34 ವಾಹನಗಳನ್ನು ಜೊತೆಗೆ ಕೋಳಿ ಅಂಕವನ್ನು ನೋಡಲು ಬಂದ ಜನರ ಕಾರು ಬೈಕ್ ಸೇರಿ 44 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲವೂ ಸೇರಿ ಒಟ್ಟು 43,45, 630ರಷ್ಟು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣದಲ್ಲಿ ಪ್ರಕರಣ ದಾಖಲಾಗಿದೆ.

• ಮಂಗಳೂರು: ಮೊಬೈಲ್ ನಂಬರ್ ಬಳಸಿ ವಂಚನೆ!

ಮಂಗಳೂರು: ಮಹಿಳೆಯೊಬ್ಬರು ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಮೊಬೈಲ್ ಅನ್ನು ಈ ಸಂದರ್ಭದಲ್ಲಿ ಕಳೆದುಕೊಂಡಿದ್ದಾರೆ. ತನ್ನ ಸಂಖ್ಯೆಗೆ ಕರೆ ಮಾಡಿ ನೋಡಿದಾಗ ಸ್ವಿಚ್ ಆಫ್ ಎಂದು ಬಂದಿದೆ. ಕೂಡಲೇ ತಮ್ಮ ಬ್ಯಾಂಕ್ ಮತ್ತು ಸಿಮ್ ಕಂಪನಿಯ ಗ್ರಾಹಕರ ಸೇವೆಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ಕೆಲವು ದಿನಗಳ ಬಳಿಕ ಮತ್ತೆ ತಮ್ಮ ಸಂಖ್ಯೆಗೆ ಕರೆ ಮಾಡಿ ನೋಡಿದಾಗ ರಿಂಗ್ ಆಗಿದ್ದು, ಅಪರಿಚಿತ ವ್ಯಕ್ತಿ ರಾಜೇಶ್ ಎಂದು ಪರಿಚಯಿಸಿಕೊಂಡಿದ್ದು, ಮೊಬೈಲ್ ಕೊಯಮತ್ತೂರು ಮತ್ತು ಸೇಲಂ ನಡುವಿನ ಮಾರ್ಗದಲ್ಲಿ ಲಭಿಸಿದ್ದು, ಮೊಬೈಲ್ ಅನ್ನು ಕೊಯಮತ್ತೂರು ರೈಲ್ವೆ ಪೊಲೀಸ್ ಠಾಣೆಗೆ ನೀಡುವುದಾಗಿ ತಿಳಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಮಹಿಳೆಯು ಸಂಜೆಯವರೆಗೂ ಅಲ್ಲಿ ಹೋಗಿ ಕಾದಿದ್ದು, ಅಪರಿಚಿತ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯು ಕಣ್ಣೂರಿನ ಇರಿಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಹೊಸ ಮೊಬೈಲ್ ಮತ್ತು ಸಿಮ್ ಅನ್ನು ಖರೀದಿಸಿ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪರಿಶೀಲಿಸಿ ನೋಡಿದಾಗ, ಎರಡು ದಿನಗಳಿಗೆ ಒಮ್ಮೆಯಂತೆ ಒಟ್ಟು 4.09.000 ರೂಪಾಯಿಯಷ್ಟು ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ. ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ನೋಡಿದಾಗ ಮೊದಲು ತನ್ನ ಖಾತೆಗೆ ಒಂದು ಲಕ್ಷ ಹಣ ಹಾಕಿ, ಬಳಿಕ ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಿಂತೆಗೆದುಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ.‌

•ಕಾಪು: ರಸ್ತೆ ದಾಟಲು ನಿಂತ ವ್ಯಕ್ತಿಗೆ ಯಮನಾದ ಕಾರು!

ಕಾಪು: ಕೊಪ್ಪಲಂಗಡಿಯ ಪೀರು ಸಾಹೇಬ್ ಎಂಬ ವ್ಯಕ್ತಿಯು ರಸ್ತೆ ದಾಟಲು ನಿಂತಿದ್ದ ಸಂದರ್ಭದಲ್ಲಿ, ಮಂಗಳೂರಿನಿಂದ ಉಡುಪಿಯತ್ತ ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಢಿಕ್ಕಿ ಹೊಡೆದು ವ್ಯಕ್ತಿಯು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪೀರು ಸಾಹೇಬ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಎಸ್ ಡಿಪಿ ಐ ಆ್ಯಂಬುಲೆನ್ಸ್ ಮೂಲಕ ಸಾಗಿಸುತ್ತಿದ್ದಾಗಲೇ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.‌ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆಯನ್ನು ನಡೆಸಿದರು.