Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಹಿರಿಯ ಮುಖಂಡ ಡಿ ಲಕ್ಷ್ಮಣ್ ಇನ್ನಿಲ್ಲ

ಹಿರಿಯ ಮುಖಂಡ ಡಿ ಲಕ್ಷ್ಮಣ್ ಇನ್ನಿಲ್ಲ
– ಈಡಿಗ ಸಮಾಜದ ಪ್ರಮುಖ ಮುಖಂಡರಾಗಿದ್ದ ಲಕ್ಷ್ಮಣ್
– ಮೃತರಿಗೆ ಭಾವ ಪೂರ್ಣ ಶ್ರದ್ಧಾಂಜಲಿ

NAMMUR EXPRESS NEWS
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಿರಿಯ ರಾಜಕಾರಣಿ, ಈಡಿಗ ಸಮಾಜದ ಪ್ರಭಾವಿ ಮುಖಂಡರಾದ ಡಿ. ಲಕ್ಷ್ಮಣ್ ಶನಿವಾರ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯರಾಗಿದ್ದ ಡಿ ಲಕ್ಷ್ಮಣ್ ತೀರ್ಥಹಳ್ಳಿ ತಾಲೂಕಿಗೆ, ಈಡಿಗ ಸಮುದಾಯಕ್ಕೆ ವಿಶೇಷ ಸೇವೆ ನೀಡಿದ್ದರು. ಈಡಿಗ ಸಂಘದ ನಿರ್ದೇಶಕರಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಸಾವಿರಾರುಜನರು, ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಬೆಟ್ಟಮಕ್ಕಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇದ್ದು ಮಧ್ಯಾಹ್ನದ ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಕುಟುಂಬ ವರ್ಗವನ್ನು ಅವರು ಅಗಲಿದ್ದಾರೆ.

ಭಾವ ಪೂರ್ಣ ಶ್ರದ್ಧಾಂಜಲಿ


Categories
Uncategorized ತೀರ್ಥಹಳ್ಳಿ ಮಲ್ನಾಡ್ ರಾಜಕೀಯ ಶಿವಮೊಗ್ಗ

ಸ್ಥಳೀಯ ಚುನಾವಣೆ ಮುನ್ನವೇ ಆಪರೇಷನ್ ಕಮಲ!

ಸ್ಥಳೀಯ ಚುನಾವಣೆ ಮುನ್ನವೇ ಆಪರೇಷನ್ ಕಮಲ!
– ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆ
– ಮಂಗಳ ಗೋಪಿ, ಕಲ್ಲದ್ದೆ ರತ್ನಾಕರ್ ಸೇರಿ ಅನೇಕರು ಸೇರ್ಪಡೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಮುಖ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದಾರೆ. ಈ ಮೂಲಕ ಸ್ಥಳೀಯ ಚುನಾವಣೆ ಮುನ್ನವೇ ತೀರ್ಥಹಳ್ಳಿ ರಾಜಕೀಯ ಚುರುಕುಗೊಂಡಿದೆ.
ಕೋಣಂದೂರು ಭಾಗದ ಪ್ರಮುಖ ನಾಯಕರಾದ ಮಂಗಳ ಗೋಪಿ, ಕಲ್ಲದ್ದೆ ರತ್ನಾಕರ್ ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಬಿಜೆಪಿಯ ಸಿದ್ಧಾಂತ, ಹಾಗೂ ಪಕ್ಷ ನಿಷ್ಠೆ ಮತ್ತು ದೇಶಪ್ರೇಮ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಕಾರ್ಯವೈಖರಿ ಮತ್ತು ಕ್ಷೇತ್ರ,ಅಭಿವೃದ್ಧಿ ಮೆಚ್ಚಿಕೊಂಡು ಬಿಜೆಪಿಗೆ ಸೇರ್ಪಡೆ ಆಗಿರುವುದಾಗಿ ಸೇರ್ಪಡೆ ಆಗಿರುವ ಮಂಗಳ ಗೋಪಿ ಹೇಳಿದ್ದಾರೆ.

ಮಾಜಿ ಕೋಣಂದೂರು ಗ್ರಾಮ ಪಂಚಾಯತ್‌ ಅಧ್ಯಕ್ಷರುಗಳಾದ ಕಲಗದ್ದೆ ರತ್ನಾಕ‌ರ್ ಹಾಗೂ ಮಂಗಳ ಗೋಪಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರೂ ಕೂಡ ಅಗ್ರಹಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಯುವ ರಾಜಕಾರಣಿಗಳಾಗಿದ್ದಾರೆ. ಕಲ್ಲದ್ದೆ ರತ್ನಾಕರ್ ಮೂಲತಃ ಕಾಂಗ್ರೆಸ್ ಕಟ್ಟಾಳುವಾಗಿ ಗುರುತಿಸಿಕೊಂಡು ಕೋಣಂದೂರು ಗ್ರಾಮ ಪಂಚಾಯತ್‌ನಲ್ಲಿ ಸದಸ್ಯ ಬಳಿಕ ಅಧ್ಯಕ್ಷನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದ್ದರು. ಬಳಿಕ ಕಾಂಗ್ರೆಸ್ ಅವರಿಗೆ ತಾಲ್ಲೂಕು ಪಂಚಾಯತ್ ಹಾಗೂ ಅವರ ಪತ್ನಿ ವೀಣಾರವರಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿತ್ತು. ಬಂಟರ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ
ಶಾಸಕ ಆರಗ ಜ್ಞಾನೇಂದ್ರ ಮತ್ತು ಮಂಡಲದ ಅಧ್ಯಕ್ಷ ಹೆದ್ದೂರ್ ನವೀನ್, ಹಾಗೂ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷ ಸೇರಿದವರ ಪಟ್ಟಿ ರಾಮಚಂದ್ರ ಸಾಲೇ ಜಾನಗಲ್, ವಿಜೇಂದ್ರ ಮಂಗಳ, ರಮೇಶ್ ಮಂಗಳ, ಯೋಗೇಶ್ ಮಂಗಳ, ಸಚಿನ್ ಗೇರುಕಟ್ಟೆ, ದಿವಾಕರ ಹೊರಬೈಲು, ಶಶಿಶೇಖರ್ ಮಂಗಳ, ಗಣೇಶ್ ಕೋಣಂದೂರು, ರಮೇಶ್ ಗವಿಮಠ, ಪ್ರದೀಪ್ ಒಂಭತ್ತುಖಂಡಗ, ಚಂದ್ರು (ಡಿಶ್ ), ಬೋಜರಾಜು ಮಂಗಳ, ಶ್ರೀಕಾಂತ್ ಕಲ್ಗದ್ದೆ ಇನ್ನು ಅನೇಕರು ಸೇರ್ಪಡೆಗೊಂಡಿದ್ದಾರೆ.

ಮಂಗಳ ಗೋಪಿ ಒಂದು ಕಾಲದಲ್ಲಿ ಕಟ್ಟಾ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡವರು. ಬಳಿಕ ಬಿಜೆಪಿಯಿಂದ ದೂರ ಸರಿದು ಕಿಮ್ಮನೆ ರತ್ನಾಕರ್ ಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್‌ ಸೇರಿದ್ದರು. ಬಳಿಕ ಅವರೂ ಕೂಡ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಇತ್ತೀಚಿಗೆ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ಹಾಗೂ ಸಹಕಾರ ಸಂಘದ ಚುನಾವಣೆಯಲ್ಲಿ ಇವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ಹೊಂದಾಣಿಕೆ ಕೊರತೆಯಿಂದ ಬಿರುಕು ಮೂಡಿತ್ತು. ಅದು ಈಗ ದೊಡ್ಡದಾಗಿ ಇಬ್ಬರೂ ಪಕ್ಷ ಬಿಡುವ ಹಂತ ತಲುಪಿದೆ. ಇನ್ನೇನು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಹತ್ತಿರದಲ್ಲಿ ಇರುವ ಸಮಯದಲ್ಲಿ ಈ ಬೆಳವಣಿಗೆ ಕ್ಷೇತ್ರದ ಜನರಲ್ಲಿ ಕುತೂಹಲ ಹುಟ್ಟಿಸಿದೆ.
ಪಕ್ಷ ಸೇರ್ಪಡೆ ವೇಳೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್, ಅಶೋಕ್ ಮೂರ್ತಿ, ಬೇಗುವಳ್ಳಿ ಸತೀಶ್, ಚಂದವಳ್ಳಿ , ಸೋಮಶೇಖರ್, ನಾಗರಾಜ್ ಶೆಟ್ಟಿ, ಕವಿರಾಜ್ ಬೇಗುವಳ್ಳಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

 

Categories
Uncategorized ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶೃಂಗೇರಿ

ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿಗೆ ವೈಭವದ ತೆರೆ

ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿಗೆ ವೈಭವದ ತೆರೆ

* ಅದ್ದೂರಿ ಶ್ರೀಶಾರದಾ ಮಹಾರಥೋತ್ಸವ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ
* ನೂರಾರು ಸ್ಥಬ್ಧಚಿತ್ರ,ಕಲಾತಂಡ,ಸಾವಿರಾರು ಭಕ್ತರು ಭಾಗಿ.

NAMMMUR EXPRESS NEWS
ಶೃಂಗೇರಿ: ವಿಶ್ವ ಪ್ರಸಿದ್ದ ಶೃಂಗೇರಿಯ ಶ್ರೀಶಾರದಾ ಶರನ್ನವರಾತ್ರಿಗೆ ಇಂದು ವೈಭವದ ತೆರೆ ಬಿದ್ದಿದೆ. ಇಂದು ಬೆಳಿಗ್ಗೆ ಶ್ರೀಶಾರದಾ ಮಹಾರಥೋತ್ಸವ ಹಾಗೂ ಜಗದ್ಗುರು ವಿದುಶೇಖರ ಭಾರತೀ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವು ಅತ್ಯಂತ ಸಂಭ್ರಮದಿಂದ ನೆರವೇರಿತು.
ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು,ನೂರಾರು ಆಕರ್ಷಕ ಸ್ಥಬ್ದ ಚಿತ್ರಗಳು,ಕಲಾ ತಂಡಗಳು ಪಾಲ್ಗೊಂಡು ಉತ್ಸವದ ಮೆರುಗು ಹೆಚ್ಚಿಸಿದವು.ಇದರೊಂದಿಗೆ ವೈಭವದ ಶ್ರೀಶಾರದಾ ಶರನ್ನವರಾತ್ರಿಗೆ ಸಂಭ್ರಮದ ತೆರೆಬಿದ್ದಿದೆ.ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಕಂಡು ಸಾವಿರಾರು ಭಕ್ತರು ಧನ್ಯರಾದರು.

ನವರಾತ್ರಿ ಮಹೋತ್ಸವದಲ್ಲಿ ಜಗನ್ಮಾತೆಗೆ ಪ್ರತಿದಿನ ವೈವಿಧ್ಯ ಅಲಂಕಾರಗಳು,ಶ್ರೀಮಠದಲ್ಲಿ ನಡೆದ ವೇದಗಳ ಪಾರಾಯಣಗಳು,ಹೋಮ ಹವನಗಳು,ದರ್ಬಾರಿನಲ್ಲಿ ಬಂಗಾರ ದಿಂಡೀ ಉತ್ಸವ,ಅನಾದಿ ಕಾಲದಿಂದ ನಡೆದುಕೊಂಡು ಬಂದ ಪಾರಂಪರಿಕ ಮೌಲ್ಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ನಡೆದುಕೊಂಡ ಜಗದ್ಗುರು ಪರಂಪರೆ ಸನಾತನ ಧರ್ಮದ ಉನ್ನತೀಕರಣ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಯಶಸ್ಸುಗಳಿಸಿತು.ನಾಡಿನ ಎಲ್ಲಾ ವರ್ಗದ ಜನಸಾಮಾನ್ಯರಲ್ಲೂ ನಿರಂತರ ಧನ್ಯತಾ ಭಾವ ಮೂಡಿಸುವ ಶೃಂಗೇರಿ ಶರನ್ನವರಾತ್ರಿ ಸನಾತನ ಧರ್ಮದ ಉನ್ನತೀಕರಣದ ರೂಪಕ.
ಕಳೆದ 13 ದಿನಗಳಿಂದ ನಡೆದ ಅನೇಕ ಸಾಂಸ್ಕೃತಿಕ,ಧಾರ್ಮಿಕ ಆಚರಣೆಗಳು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು ಪಾಲ್ಗೊಂಡ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

Categories
ಉಡುಪಿ ಕರಾವಳಿ ಚಿಕ್ಕಮಗಳೂರು ಜ್ಯೋತಿಷ್ಯ ತೀರ್ಥಹಳ್ಳಿ ದಿನ ರಾಶಿ ಭವಿಷ್ಯ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಶುಭ ದಿನವಾಗಿರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಆದರೆ ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ವೃತ್ತಿಜೀವನದಲ್ಲಿ ಸವಾಲುಗಳ ಹೊರತಾಗಿಯೂ, ಎಲ್ಲಾ ಕಾರ್ಯಗಳು ಸುಲಭವಾಗಿ ಯಶಸ್ವಿಯಾಗಬಹುದು. ಕೆಲವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ಆದರೆ, ಇಂದು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಎದುರಾಗಬಹುದು.

** ವೃಷಭ ರಾಶಿ :
ಇಂದು ನಿಮ್ಮೆಲ್ಲಾ ಕೆಲಸಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟ ಉಂಟಾಗಬಹುದು. ಸೋಮಾರಿತನದಿಂದ ದೂರವಿರಿ. ಈ ಕಾರಣದಿಂದಾಗಿ, ನೀವು ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ವ್ಯವಹಾರ ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ.

** ಮಿಥುನ ರಾಶಿ :
ಇಂದು ನಿಮಗೆ ವೃತ್ತಿಯಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ಯಾವುದೇ ಅಡೆತಡೆಯಿಲ್ಲದೆ ಪ್ರತಿಯೊಂದು ಕೆಲಸವೂ ಪೂರ್ಣಗೊಳ್ಳಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹೊಸ ಹಣಕಾಸು ಯೋಜನೆಯನ್ನು ಮಾಡಿ.

** ಕರ್ಕಾಟಕ ರಾಶಿ :
ಇಂದು ನಿಮಗೆ ಅತ್ಯಂತ ಮಂಗಳಕರ ದಿನವಾಗಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗಬಹುದು. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ.

** ಸಿಂಹ ರಾಶಿ :
ಇಂದು ಜೀವನದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಿರಿ. ಹಣಕಾಸಿನ ವಿಷಯಗಳಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಇಂದು ಕೆಲಸದಲ್ಲಿ ಅಡಚಣೆಗಳು ಹೆಚ್ಚಾಗಬಹುದು. ಉದ್ಯಮಿಗಳು ಬಾಕಿ ಹಣವನ್ನು ಮರಳಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ವಾದಗಳನ್ನು ತಪ್ಪಿಸಿ.

** ಕನ್ಯಾ ರಾಶಿ :
ಇಂದು ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಇಂದು, ಸಹೋದ್ಯೋಗಿಗಳೊಂದಿಗೆ ಮಾಡುವ ಕೆಲಸದಲ್ಲಿ ಅಪಾರ ಯಶಸ್ಸು ಪಡೆಯಬಹುದು. ಆದರೆ, ಉದ್ಯೋಗದಲ್ಲಿ ವಾದಗಳನ್ನು ತಪ್ಪಿಸಿ. ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಬಹುದು.

** ತುಲಾ ರಾಶಿ :
ಇಂದು ತುಲಾ ರಾಶಿಯವರಿಗೆ ನ್ಯಾಯಾಲಯದ ಮೊಕದ್ದಮೆಗಳಿಂದ ಮುಕ್ತಿ ಸಿಗಬಹುದು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ, ಆದರೆ ಇಂದು, ಹಣದ ವಿಷಯದಲ್ಲಿ ಕುಟುಂಬ ಅಥವಾ ಸಂಬಂಧಿಕರೊಂದಿಗೆ ವಿವಾದಗಳು ಉಂಟಾಗಬಹುದು.

** ವೃಶ್ಚಿಕ ರಾಶಿ :
ಈ ದಿನ ನಿಮಗೆ ಆದಾಯ ಹೆಚ್ಚಾಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇಂದು ಶುಭ ದಿನವಾಗಿರುತ್ತದೆ. ಉದ್ಯೋಗಸ್ಥರು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಪಾಲುದಾರರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಹಾಗಾಗಿ ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಹಿಂಜರಿಯಬೇಡಿ, ಅವರ ಅಭಿಪ್ರಾಯಗಳನ್ನು ಗೌರವಿಸಿ.

** ಧನಸ್ಸು ರಾಶಿ :
ಇಂದು ನಿಮಗೆ ಧನಲಾಭವಾಗಬಹುದು. ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ. ನಿಮ್ಮ ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶಗಳು ದೊರೆಯಬಹುದು. ಆದರೆ, ವೃತ್ತಿಪರ ಜೀವನದಲ್ಲಿ ಕೆಲಸದ ಸವಾಲುಗಳು ಹೆಚ್ಚಾಗಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಿ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ.

** ಮಕರ ರಾಶಿ :
ಇಂದು ನಿಮಗೆ ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಇದರಿಂದಾಗಿ ನೀವು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು. ಉದ್ಯಮಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಲು ಹೊಸ ಅವಕಾಶಗಳನ್ನು ಪಡೆಯಬಹುದು. ಆದರೆ ಕೆಲಸಗಳಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ.

** ಕುಂಭ ರಾಶಿ :
ಇಂದು ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭಕ್ಕೆ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು. ಉತ್ತಮ ಪ್ಯಾಕೇಜ್‌ನೊಂದಿಗೆ ಹೊಸ ಉದ್ಯೋಗದ ಪ್ರಸ್ತಾಪ ಪಡೆಯಬಹುದು. ಆದರೆ, ಯಾವುದೇ ಕೆಲಸದಲ್ಲಿ ಹೆಚ್ಚು ಆತುರಪಡಬೇಡಿ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿ.

** ಮೀನ ರಾಶಿ :
ಇಂದು ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಕೆಲಸದ ಸ್ಥಳದಲ್ಲಿ ಸವಾಲುಗಳು ಎದುರಾಗಬಹುದು. ನಿಮ್ಮ ಗುರಿಗಳನ್ನು ಸಾಧಿಸಲು ಹೊಸ ಯೋಜನೆಯನ್ನು ಮಾಡಿ. ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ತೆಗೆದುಕೊಳ್ಳುವ ನಿರ್ಧಾರಗಳು ಲಾಭದಾಯಕವಾಗಿರುತ್ತದೆ.

Categories
Uncategorized ಅಡಿಕೆ-ದರ ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಲ್ನಾಡ್ ಶಿವಮೊಗ್ಗ ಶೃಂಗೇರಿ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ರಾಶಿ ಎಷ್ಟು?

NAMMUR EXPRESS NEWS

ಸರಕು
58099-68500-83159

ಬೆಟ್ಟೆ
67599-70019-68272

ರಾಶಿ
50000-63800-64329

ಗೊರಬಲು
21089-39600-41699

ಹೊಸ ರಾಶಿ
60699-61199

ಹಸಿಕಾಯಿ ಅಡಿಕೆ:-7700

Categories
Uncategorized ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಶೃಂಗೇರಿ ಸಿನಿಮಾ

ಮಲೆನಾಡಿನಲ್ಲಿ ಕಾಂತಾರ-1 ಹವಾ..!

ಮಲೆನಾಡಿನಲ್ಲಿ ಕಾಂತಾರ-1 ಹವಾ..!
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಬಿದ ಪ್ರದರ್ಶನ
– ತೀರ್ಥಹಳ್ಳಿ, ಕೊಪ್ಪ, ಬಾಳೆಹೊನ್ನೂರಿನಲ್ಲಿ ಪ್ರದರ್ಶನ

NAMMUR EXPRESS NEWS
ದೇಶ ವಿದೇಶಗಳಲ್ಲಿ ಹೆಸರು ಮಾಡುತ್ತಿರುವ ಕಾಂತಾರ-1 ಸಿನಿಮಾ ಇದೀಗ ಎಲ್ಲೆಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ಇತ್ತ ಕರ್ನಾಟಕದಲ್ಲಿ ಸಿನಿಮಾ ಟ್ರೆಂಡ್ ಸೆಟ್ ಮಾಡಿದೆ.
ಮಲೆನಾಡಿನ ಅನೇಕ ಚಿತ್ರ ಮಂದಿರಗಳನ್ನು ಅನೇಕ ವರ್ಷಗಳ ನಂತರ ತುಂಬಿ ತುಳುಕುವಂತೆ ಮಾಡಿದ ಚಿತ್ರ ಕಾಂತಾರ ಬಳಿಕ ಕಾಂತಾರ-1 ಈಗ ಸದ್ದು ಮಾಡುತ್ತಿದೆ.
ಸಿನಿ ರಸಿಕರ ಕಾತುರವನ್ನು ಸುಮಾರು 2 ವರ್ಷಗಳ ಹಿಡಿದಿಟ್ಟಿದ್ದ ಈ ಚಿತ್ರವು ಮಲೆನಾಡಿನ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಮಲೆನಾಡಿನ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಸಿನಿಮಾ ತೆರೆ ಕಂಡಿದೆ.

ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರ

ಬೆಳಿಗ್ಗೆ 11:15, ಮಧ್ಯಾಹ್ನ 2:30, ಸಂಜೆ 6:30, ರಾತ್ರಿ 9:30

 

ಕೊಪ್ಪ ಜೆ.ಎಂ.ಜೆಯಲ್ಲಿ ಯಾವಾಗ ಪ್ರದರ್ಶನ?

ಕೊಪ್ಪದ ಜೆ.ಎಮ್.ಜೆಯಲ್ಲಿ ಪ್ರದರ್ಶನ ಸಮಯ
ಪ್ರತಿದಿನ ಮಧ್ಯಾಹ್ನ 1:30, 4:30, ಸಂಜೆ 7:30
ಪ್ರತಿ ಭಾನುವಾರ ಬೆಳಿಗ್ಗೆ 10:30 ಕ್ಕೆ ಮಾರ್ನಿಂಗ್ ಶೋ
ಬಾಲ್ಕನಿ 140 ರೂ. ಫಸ್ಟ್ ಕ್ಲಾಸ್ 80 ರೂ. ಮೂರು ವರ್ಷ ಮೇಲ್ಪಟ್ಟವರಿಗೆ ಪೂರ್ತಿ ಚಾರ್ಜ್ ಇರುತ್ತದೆ.

 

ಬಾಳೆಹೊನ್ನೂರು ಸುದರ್ಶಿನಿಯಲ್ಲಿ ಯಾವಾಗ ಪ್ರದರ್ಶನ?

ಬಾಳೆಹೊನ್ನೂರು ಸುದರ್ಶಿನಿಯಲ್ಲಿ ಪ್ರದರ್ಶನ ಸಮಯ
ಪ್ರತಿದಿನ 11.00, 2.00, 6:00, 9.00
ಬಾಲ್ಕನಿ 200 ರೂ. ಫಸ್ಟ್ ಕ್ಲಾಸ್ 150 ರೂ
ಮೂರು ವರ್ಷ ಮೇಲ್ಪಟ್ಟವರಿಗೆ ಪೂರ್ತಿ ಚಾರ್ಜ್ ಇರುತ್ತದೆ.

ಪ್ರತಿ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಪ್ರದರ್ಶನ ಇರುತ್ತದೆ..

Categories
dasara ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ಮಂಗಳೂರು ಮುಲ್ಕಿ

ಕರಾವಳಿಯಲ್ಲಿ ಅದ್ದೂರಿ ದಸರಾಗೆ ತೆರೆ!

ಕರಾವಳಿಯಲ್ಲಿ ಅದ್ದೂರಿ ದಸರಾಗೆ ತೆರೆ!
– ಕುದ್ರೋಳಿ, ಉಚ್ಚಿಲ ಸೇರಿ ಎಲ್ಲೆಡೆ ಹಬ್ಬದ ವಾತಾವರಣ
– ಪ್ರತಿ ತಾಲೂಕಲ್ಲೂ ವಿಜಯ ದಶಮಿ ಸಡಗರ
– ಹುಲಿ ವೇಷ, ವಿವಿಧ ಕಲಾ ತಂಡಗಳ ಮೆರವಣಿಗೆ

ವಿಶೇಷ ವರದಿ: ರಚನಾ ಕಾಮತ್
NAMMUR EXPRESS NEWS
ಉಡುಪಿ/ ಮಂಗಳೂರು: ದಸರಾಗೆ ಗುರುವಾರದಂದು ತೆರೆ ಬಿದ್ದಿದ್ದು, ನಾಡಹಬ್ಬವನ್ನು ರಾಜ್ಯದ್ಯಂತ ವೈಭವಯುತವಾಗಿ ಆಚರಿಸಲಾಯಿತು. ಹಾಗೆಯೇ ದೇವರ ನಾಡು ಕರಾವಳಿಯಲ್ಲೂ ದಸರಾವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಭವ್ಯ ಮೆರವಣಿಗೆಯಲ್ಲಿ ಭಕ್ತಿ ಮತ್ತು ಸಂಭ್ರಮದ ಭಾವಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕೇಂದ್ರದ ಮಾಜಿ ಸಚಿವರಾದ ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ನಡೆದ, ದಸರಾ ಪ್ರಯುಕ್ತ ನಡೆದ ಈ ಮೆರವಣಿಗೆಯಲ್ಲಿ ಪೂಜಿಸಲ್ಪಟ್ಟ ಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಗಳನ್ನು ನಗರದ ಜನರು ಕಣ್ತುಂಬಿಕೊಂಡರು. ಗೋಕರ್ಣನಾಥೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆಯು, ಲೇಡಿ ಹಿಲ್, ಹಂಪನಕಟ್ಟೆ, ಗಣಪತಿ ಪ್ರೌಢಶಾಲೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿ ಶ್ರೀಕ್ಷೇತ್ರವನ್ನು ತಲುಪಿತು. ಸುಮಾರು ಒಂಭತ್ತು ಕಿಲೋಮೀಟರ್ ನಷ್ಟು ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಲಂಕೃತ ಕೊಡೆಗಳು, ವಿವಿಧ ಜಾನಪದ ಕಲಾತಂಡಗಳು, ಭಜನಾ ತಂಡ, ದೇಶದ ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೋಗಳು, ಕರಾವಳಿಯ ಪ್ರಮುಖ ಕಲೆ ಹುಲಿವೇಷದ ತಂಡ ಮೊದಲಾದವುಗಳು ನಗರದ ಜನರ ಕಣ್ಮನ ಸೆಳೆಯಿತು. ಇದಕ್ಕೂ ಮೊದಲು ಕುದ್ರೋಳಿಯ ಶ್ರೀಶಾರದಾ ದೇವಿಯ ಸನ್ನಿಧಾನದಲ್ಲಿ ಸೇವಾಕಾರ್ಯಕರ್ತರಿಗೆ ಕ್ಷೇತ್ರದ ಪರವಾಗಿ ಗೌರವವನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್, ಸೋಮಸುಂದರಂ, ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್, ಕಾರ್ಯದರ್ಶಿಗಳಾದ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಪೂಜಾರಿ ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಉಡುಪಿಯಲ್ಲೂ ವಿಜೃಭಣೆಯಿಂದ ನಡೆಯಿತು ದಸರಾ

ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ, ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಾಲಯದಲ್ಲಿ ನಾಲ್ಕನೇ ವರ್ಷದ ದಸರಾ ಆಚರಣೆಯು ವೈಭವಯುತವಾಗಿ ಜರುಗಿತು. ಉಡುಪಿ-ಉಚ್ಚಿಲ ದಸರಾದ ರೂವಾರಿ ಜಿ.ಶಂಕರ್ ಅವರ ನೇತೃತ್ವದಲ್ಲಿ, ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿದ ಬಳಿಕ, ದೇವಾಲಯದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಅವರು ಮಂಗಳಾರತಿಯನ್ನು ಬೆಳಗಿ, ಶಾರದಾ ಮಾತೆಯ ವಿಗ್ರಹವನ್ನು ಸೇರಿದಂತೆ, ನವದುರ್ಗೆಯರ ವಿಗ್ರಹಗಳನ್ನು ಟ್ಯಾಬ್ಲೋ ವಾಹನಕ್ಕೆ ಸ್ಥಳಾಂತರಿಸಲಾಯಿತು. ಮಹಾಲಕ್ಷ್ಮೀಯನ್ನು ಹೊತ್ತ ಆನೆಗೆ ದಸರಾ ರೂವಾರಿಗಳಾದ ಜಿ. ಶಂಕರ್ ಮತ್ತು ಶಾಲಿನಿ ದಂಪತಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ರಥಬೀದಿಯ ಮಾರ್ಗವಾಗಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿದ ಬಳಿಕ, ನಗರದ ತುಂಬಾ ಮೆರವಣಿಗೆ ನಡೆಯಿತು. ಬಳಿಕ ರಾಜಗೋಪುರದ ಬಳಿಗೆ ವಿಗ್ರಹಗಳನ್ನು ತರಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಗಪೂರ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಗಿರಿಧರ ಸುವರ್ಣ, ದಸರಾ ಸಮಿತಿಯ ಅಧ್ಯಕ್ಷರಾದ ವಿನಯ್ ಕರ್ಕೇರ ಮೊದಲಾದವರು ಪಾಲ್ಗೊಂಡಿದ್ದರು. ಐವತ್ತಕ್ಕೂ ಹೆಚ್ಚು ಟ್ಯಾಬ್ಲೋಗಳು, ಹದಿನೈದಕ್ಕೂ ಹೆಚ್ಚು ಕುಣಿತ ಭಜನಾ ತಂಡಗಳು, ವಾದ್ಯ ಬ್ಯಾಂಡ್, ಕೊಂಬು ಕಹಳೆ ತಂಡಗಳು ಮೆರವಣಿಗೆಯ ರಂಗನ್ನು ಹೆಚ್ಚಿಸಿತು. ಬಳಿಕ ಶಾರದಾಮಾತೆಯ ವಿಗ್ರಹ ಮತ್ತು ನವದುರ್ಗೆಯರ ವಿಗ್ರಹಗಳನ್ನು ಕಾಪು ಕಡಲ ತಡಿಗೆ ತೆಗೆದುಕೊಂಡು ಹೋಗಿ, ಜಲಸ್ತಂಭನ ಮಾಡಲಾಯಿತು. ಸಂಜೆ ಹೊರಟ ಮೆರವಣಿಗೆಗೆ, ವಿಗ್ರಹಗಳ ಜಲಸ್ತಂಭನದ ಮೂಲಕ ಮಧ್ಯರಾತ್ರಿ ತೆರೆ ಬಿದ್ದಿತು.

Categories
Uncategorized ಉಡುಪಿ ಕರಾವಳಿ ಕಾರ್ಕಳ ಪುತ್ತೂರು ಮಂಗಳೂರು ಮುಲ್ಕಿ ಶಿಕ್ಷಣ

ಎನ್. ಡಿ.ಎ ಫಲಿತಾಂಶ : ಎಕ್ಸೆಲ್ ಗುರುವಾಯನಕೆರೆ ದಾಖಲೆ

ಎನ್. ಡಿ.ಎ ಫಲಿತಾಂಶ : ಎಕ್ಸೆಲ್ ಗುರುವಾಯನಕೆರೆ ದಾಖಲೆ
– ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಎಕ್ಸೆಲ್ ಕಾಲೇಜಿನ 11 ಜನ ವಿದ್ಯಾರ್ಥಿಗಳು ಉತ್ತೀರ್ಣ
– ಸಾಧಕ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಭಿನಂದನೆ

NAMMUR EXPRESS NEWS
ಗುರುವಾಯನಕೆರೆ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಯೆನಿಸಿಕೊಂಡ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ಫೇಸ್ ಟೂ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ.
ಎನ್ ಡಿ ಎ ಪರೀಕ್ಷೆ ಬರೆದ ವಿದ್ಯಾರ್ಥಿಗಳ ವಿವರ
ಸಮ್ಯಕ್ ವಿಜಯ್
ಸ್ವಸ್ತಿಕ್ ಎಂ ಜೈನ್
ಅಕ್ಷಯ್ ಎ
ಯತಿನ್ ಬಿ ಎಸ್
ಪ್ರಜ್ವಲ್ ಗೌಡ ಆರ್ ಎಸ್
ಶಶಾಂಕ್ ಗೌಡ ಆರ್
ಅಭಿಷೇಕ್ ಅಡಪ್ಪ
ಲಕ್ಷ ಮಹಾಜನ್
ತೇಜಸ್ ವಿ
ಅಮೃತ ನಾಯಕ್
ಶಮಿತ್ ಗೌಡ ಎ ಎಸ್

ಇವರು ಎನ್ ಡಿ ಎ ಎಕ್ಸಾಂ ಫೇಸ್ ಟೂ ಅನ್ನು ಯಶಸ್ವಿಯಾಗಿ ಬರೆದು, ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ನಿರಂತರವಾಗಿ ದೊಡ್ಡ ಮೊತ್ತದ ಸ್ಟೈಫಂಡ್ ಸಿಗುವ , ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ,ರಾಷ್ಟ್ರ ಮಟ್ಟದಲ್ಲಿ ಕೇವಲ 400 ಸೀಟ್ ಗಳಿರುವ ಈ ಪರೀಕ್ಷೆಗೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಿಸುತ್ತಾರೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಆಯ್ಕೆ ಎನ್ ಡಿ ಎ ಆಗಿರುತ್ತದೆ. ಅತ್ಯುತ್ತಮ ಟೀಚಿಂಗ್ – ಕೋಚಿಂಗ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ಎನ್ ಡಿ ಎ ಯನ್ನು ಕ್ಲಿಯರ್ ಮಾಡಲು ಸಾಧ್ಯ. ಎಕ್ಸೆಲ್ ಕಾಲೇಜಿನ 11 ಜನ ವಿದ್ಯಾರ್ಥಿಗಳು ಒಂದೇ ಬಾರಿಗೆ ಎನ್ ಡಿ ಎ ಕ್ಲಿಯರ್ ಮಾಡಿರುವುದು ನಿಜಕ್ಕೂ ಅಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಎಕ್ಸೆಲ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ,ಪ್ರಾಂಶುಪಾಲರು, ಪ್ರಾಧ್ಯಾಪಕರು,ಸಂಯೋಜಕರಾದ ಜೋಸ್ಟಮ್ ಎ ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

 

 

Categories
Uncategorized

ತೀರ್ಥಹಳ್ಳಿಯಲ್ಲಿ ಇತಿಹಾಸ ಸೃಷ್ಟಿಸಿದ ಹುಲಿ ವೇಷ ಸ್ಪರ್ಧೆ!

ತೀರ್ಥಹಳ್ಳಿಯಲ್ಲಿ ಇತಿಹಾಸ ಸೃಷ್ಟಿಸಿದ ಹುಲಿ ವೇಷ ಸ್ಪರ್ಧೆ!
– ಹುಲಿ ವೇಷ ಸ್ಪರ್ಧೆ ಪ್ರಥಮ, ದ್ವಿತೀಯ ಬಹುಮಾನ ಯಾರಿಗೆ?
– ಸಾವಿರಾರು ಜನರ ಆಕರ್ಷಣೆ: ಮದನ್ ಅಭಿಮಾನಿ ಬಳಗ, ದಸರಾ ಸಮಿತಿ ಉಸ್ತುವಾರಿಯಲ್ಲಿ ಆಯೋಜನೆ
– 25 ಕೆಜಿ ಕುರಿ ಕಚ್ಚಿ ಎಸೆದ ಸೀಬಿನ ಕೆರೆ ಹುಲಿ ಸಚಿನ್!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಅಂಗವಾಗಿ ಹುಲಿ ವೇಷ ಕಾರ್ಯಕ್ರಮ ತುಂಬಾ ರೋಮಾಂಚನಕಾರಿ ಹಾಗೂ ಅದ್ದೂರಿಯಾಗಿ ನಡೆಯಿತು. ಇಡೀ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಈ ಬಾರಿ ಹುಲಿ ವೇಷದ ಸದ್ದು ಕೇಳಿ ಬಂದಿತು.
ಕಾರ್ಯಕ್ರಮವನ್ನು ಆರ್ ಮದನ್ ಅವರ ನೇತೃತ್ವದಲ್ಲಿ ದಸರಾ ಸಮಿತಿ ಸಂಚಾಲಕರಾದ ಸಂದೇಶ್ ಜವಳಿ, ಅಮರನಾಥ ಶೆಟ್ಟಿ, ದೇವಸ್ಥಾನ ಸಮಿತಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಹುಲಿ ವೇಷ ಸ್ಪರ್ಧೆ ಸಂಚಾಲಕರಾದ ಮಹೇಶ್ ಗೌಡ, ಜಾವೀದ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಆಗಮಿಸಿದ್ದರು ಹಾಗೆಯೇ ಸ್ಪರ್ಧೆ ಕೂಡ ತುಂಬಾ ಆಕರ್ಷಣೀಯವಾಗಿ ಜನರ ಗಮನ ಸೆಳೆಯಿತು. ಸಾವಿರಾರು ಮಂದಿ 15ಕ್ಕೂಹೆಚ್ಚು ಮಂದಿ ಸ್ಪರ್ಧೆ ಮಾಡಿದ್ದರು.

ಗೆದ್ದವರು ಯಾರು ಯಾರು?

ಹುಲಿ ಕುಣಿತ ಸ್ಪರ್ಧೆಯಲ್ಲಿ ಮೊದಲನೆಯದಾಗಿ ವಸಂತ ಸಿದ್ದೇಶ್ವರ ಬಡಾವಣೆ, ಧನು ಮಿಲ್ಕೇರಿ ಮೊದಲ ಸ್ಥಾನವನ್ನು ಇಬ್ಬರಿಗೆ ನೀಡಲಾಯಿತು. 40,000 ನಗದು ಹಾಗೂ ಪಾರಿತೋಷಕ ಹಾಗೂ ಪ್ರಶಸ್ತಿಯನ್ನು ನೀಡಿದರು. ತಾಸೆಯಲ್ಲಿ ಮೊದಲ ಸ್ಥಾನ ಕಿರಣ್ ಸಿದ್ದೇಶ್ವರ ಬಡಾವಣೆ, ದ್ವಿತೀಯ ಸ್ಥಾನ ಜ್ಞಾನೇಂದ್ರ ಸಂಕದ ಹೊಳೆ 7500 ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಲಾಯಿತು.
ಗೆಳೆಯರ ಬಳಗ ದಸರಾ ಸಮಿತಿ ಆರ್ ಮದನ್ ಅವರ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ನಡೆದ ಹುಲಿ ವೇಷ ಸ್ಪರ್ಧೆ ಸ್ಪರ್ಧೆಯಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರು. ಭಾಗವಹಿಸಿದ ಪ್ರತಿಯೊಂದು ಹುಲಿಗೂ ಕೂಡ ಪ್ರೋತ್ಸಾಹ ಧನ 15000, ಬಣ್ಣದ ಖರ್ಚು ಒಂದು ಸಾವಿರ, ಪಾರಿತೋಷಕ ಹಾಗೂ ಪ್ರಶಸ್ತಿಯನ್ನು ನೀಡಿದರು.

25 ಕೆಜಿ ಕುರಿ ಕಚ್ಚಿ ಎಸೆದ ಸೀಬಿನ ಕೆರೆ ಹುಲಿ ಸಚಿನ್!

ಸೀಬಿನ ಕೆರೆಯಲ್ಲಿ ಸೀಬಿನಕೆರೆ ಗೆಳೆಯರ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹುಲಿ ವೇಷ ಧರಿಸಿ ಸಚಿನ್ 25 ಕೆಜಿ ಕುರಿಯನ್ನು ಕಚ್ಚಿ ಎಸೆದ ಘಟನೆ ಎಲ್ಲೆಡೆ ವೈರಲ್ ಆಗಿದೆ.

 

Categories
Uncategorized ಕೊಪ್ಪ ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ಶ್ರೀ ಚನ್ನಮ್ಮದೇವಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆ!

ಶ್ರೀ ಚನ್ನಮ್ಮದೇವಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆ!
– ಶ್ರೀ ವಿಶ್ವನಾಥ್ ಗದ್ದೆಮನೆ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣ
– ವಿಜಯ ದಶಮಿಯಂದು ಗಣಹೋಮದೊಂದಿಗೆ ಪೂಜೆ

NAMMUR EXPRESS NEWS
ನರಸಿಂಹರಾಜಪುರ: ಶ್ರೀ ಕ್ಷೇತ್ರ ಕೂಸ್ಕಲ್ ಶ್ರೀ ರಂಗನಾಥಸ್ವಾಮಿ ಮತ್ತು ಶ್ರೀ ಚನ್ನಮ್ಮದೇವಿ ದೇವಸ್ಥಾನ ಸಾರ್ಯ ಗ್ರಾಮ, ನರಸಿಂಹರಾಜಪುರ ತಾಲ್ಲೂಕು ಇಲ್ಲಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆ ನೆರವೇರಿತು.
ದಾನಿಗಳಾದ ವಿಶ್ವನಾಥ್ ಗದ್ದೆಮನೆ ಅವರು ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ಚನ್ನಮ್ಮದೇವಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆಯನ್ನುಗುರುವಾರ ವಿಜಯದಶಮಿಯ ದಿನದಂದು ಬೆಳಿಗ್ಗೆ ಗಣಹೋಮದೊಂದಿಗೆ ನೆರವೇರಿಸಲಾಯಿತು.
ಶ್ರೀ ಕ್ಷೇತ್ರದ ಎಲ್ಲಾ ಭಕ್ತಾದಿಗಳು, ಗ್ರಾಮಸ್ಥರು, ಹಾಗೂ ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ಸದಸ್ಯರುಗಳು ಈ ಶುಭ ಕಾರ್ಯದಲ್ಲಿ ಎಲ್ಲರೂ ಕೂಡ ಭಾಗವಹಿಸಿದ್ದರು. ಹಾಗೆಯೇ ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.

ಬಾಳೆಹೊನ್ನೂರಿನಲ್ಲಿ ವಿಶ್ವನಾಥ್ ಅವರಿಗೆ ಸನ್ಮಾನ

ಬಾಳೆಹೊನ್ನೂರಿನ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ 16ನೇ ನವರಾತ್ರಿ ಮಹೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ವಿಶ್ವನಾಥ ಗದ್ದೆಮನೆ ಅವರನ್ನು ಸನ್ಮಾನಿಸಲಾಯಿತು.