ವಾಟ್ಸ್‌ಆ್ಯಪ್‌ನಲ್ಲಿ ಈಗ ಸೈಬರ್ ಕಳ್ಳರ ಆಟ!
– ಪ್ರಧಾನಮಂತ್ರಿ ಕಿಸಾನ್ ಆಯಸ್ ಯೋಜನೆ ಹೆಸರಲ್ಲಿ ವಂಚನೆ
– ಹರಿದಾಡುತ್ತಿದೆ ಈ ಫೇಕ್ ಮೆಸೇಜ್: ತಪ್ಪಿಯೂ ಓಪನ್ ಮಾಡದಿರಿ
NAMMUR EXPRESS NEWS
ಬೆಂಗಳೂರು: ಫೇಸ್ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಬಳಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲೇ ಪ್ರತಿ ತಿಂಗಳು ವಾಟ್ಸ್ಆ್ಯಪ್ ಅನ್ನು 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಇದೆ ಕಾರಣದಿಂದ ಸೈಬರ್ ಖದೀಮರು ವಂಚನೆ ಎಸಗಲು ಈ ಆ್ಯಪ್ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ವಾಟ್ಸ್‌ಆ್ಯಪ್ ನಲ್ಲಿ ಫೇಕ್ ಮೆಸೇಜ್ ಒಂದು ಹರಿದಾಡುತ್ತಿದ್ದು ಓಪನ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿ ಕಳ್ಳರ ಕೈಸೇರುತ್ತದೆ.
ಪ್ರಧಾನಮಂತ್ರಿ ಕಿಸಾನ್ ಆಯಸ್ ಯೋಜನೆ ಎಂದು ಮೆಸೇಜ್ ಕಳುಹಿಸಿ ಲಿಂಕ್ ಕಳುಹಿಸುತ್ತಿದ್ದು ಸುಳ್ಳು ಸುದ್ದಿ ವಾಟ್ಸ್ಆ್ಯಪ್ ನಲ್ಲಿ ವೈರಲ್ ಆಗುತ್ತಿದೆ. ಲಿಂಕ್ ಓಪನ್ ಮಾಡಿದ ಕೂಡಲೇ ನಿಮ್ಮ ಅಕೌಂಟ್ ಹ್ಯಾಕ್ ಆಗುತ್ತದೆ. ಇಂತಹ ವಂಚನೆಯಿಂದ ಜಾಗರೂಕರಾಗಿರಿ ನಿಮ್ಮ ವಾಟ್ಸ್ಆ್ಯಪ್ ನಲ್ಲಿ ಇಂಥಹ ಮೆಸೇಜ್ ಬಂದರೆ ಮುಂದುವರೆಯದಿರಿ.