Categories
ಬೆಂಗಳೂರು

ನಕಲಿ ನಕಲಿ.. ಈಗ ಬಾಲ್, ವಾಲಿಬಾಲ್ ಕೂಡ ನಕಲಿ!

ನಕಲಿ ನಕಲಿ.. ಈಗ ಬಾಲ್, ವಾಲಿಬಾಲ್ ಕೂಡ ನಕಲಿ!
– ಮಂಗಳೂರು ಸೇರಿ ಅನೇಕ ಕಡೆ ಬ್ರಾಂಡ್ ಹೆಸರಲ್ಲಿ ಕಳಪೆ ವಸ್ತು ಮಾರಾಟ
– ಮೆಜೆಸ್ಟಿಕ್ ಸೇರಿ ಜಿಲ್ಲಾ ಕೇಂದ್ರದ ಬಸ್ ಸ್ಟ್ಯಾಂಡ್ ಅಲ್ಲೇ ನಕಲಿ ನಕಲಿ

ವಿಶೇಷ ವರದಿ: ಅಮೃತಾ ಮಂಜುನಾಥ್

NAMMUR EXPRESS NEWS
ಬೆಂಗಳೂರು: ನಕಲಿ ನಕಲಿ ಈಗ ಎಲ್ಲೆಲ್ಲೂ ನಕಲಿ.. ಈಗ ಕ್ರೀಡಾ ವಸ್ತುಗಳ ಸರದಿ. ರಾಜ್ಯದ ಹಲವೆಡೆ ಇತ್ತೀಚಿನ ಕೆಲವು ದಿನಗಳ ಹಿಂದೆ, ಅಂಗಡಿಗಳಲ್ಲಿ ನಕಲಿ ಕ್ರೀಡಾ ಸಾಮಗ್ರಿಗಳು ಮಾರಾಟವಾಗುತ್ತಿವೆ ಎಂಬ ವಿಚಾರದ ಬಗ್ಗೆ ದೂರು ದಾಖಲಾಗಿದೆ. ಮಂಗಳೂರು ಸುತ್ತಮುತ್ತ ಇದಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆಗಸ್ಟ್ 18 ಮತ್ತು 19ರಂದು ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಎರಡು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಕೆಲವು ಸ್ಪೋರ್ಟ್ಸ್ ಅಂಗಡಿಗಳಲ್ಲಿ ಕಾಸ್ಕೊ, ನಿವಿಯಾ, ಯೋನೆಕ್ಸ್ ಎಂಬ ಉತ್ತಮ ಗುಣಮಟ್ಟದ ಬ್ರಾಂಡ್ ಗಳ‌ ಹೆಸರಿನಲ್ಲಿ ನಕಲಿ ಫುಟ್ ಬಾಲ್ ಗಳನ್ನು, ವಾಲಿಬಾಲ್ ಗಳನ್ನು ಮತ್ತು ಬ್ಯಾಡ್ಮಿಂಟನ್ ರಾಕೆಟ್ ಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸುಮಾರು ಮುನ್ನೂರು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಭಾಗಗಳಲ್ಲಿ ತನಿಖೆ ಇನ್ನು ಮುಂದುವರಿದಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಅನೇಕ ಭಾಗದಲ್ಲಿ ಕೂಡ ಗುಣಮಟ್ಟದ ಬ್ರಾಂಡ್ ಹೆಸರಲ್ಲಿ ಆಟಿಕೆ, ಸ್ಪೋರ್ಟ್ಸ್, ಕಾಸ್ಮೆಟಿಕ್ಸ್, ಚಾಕೊಲೇಟ್ ಸೇರಿ ಅನೇಕ ಪದಾರ್ಥ ಮಾರಾಟ ಮಾಡಲಾಗುತ್ತಿದೆ.

ಮೆಜೆಸ್ಟಿಕ್ ಸೇರಿ ಜಿಲ್ಲಾ ಕೇಂದ್ರದ ಬಸ್ ಸ್ಟ್ಯಾಂಡ್ ಅಲ್ಲೇ ನಕಲಿ ನಕಲಿ

ರಾಜ್ಯದ ರಾಜಧಾನಿ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ ಸುತ್ತ ಮುತ್ತ ಸೇರಿ ಪ್ರಮುಖ ಜಿಲ್ಲೆಗಳ ಬಸ್ ನಿಲ್ದಾಣ ಸುತ್ತಮುತ್ತ ಕೆಮಿಕಲ್ ಬಳಸಿ ನಕಲಿ ಚಾಕೊಲೇಟ್, ಆಹಾರ ಪದಾರ್ಥ ಕೂಡ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಎಂ ಅರ್ಪಿ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಆಯಾ ಇಲಾಖೆ ಅಧಿಕಾರಿಗಳು ಲಂಚ ತೆಗೆದುಕೊಂಡು ಜನರ ಜೀವನ ಜತೆ ಆಟ ಆಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.