Categories
ಕರಾವಳಿ

ಕರಾವಳಿಯಲ್ಲಿ ಹೆಚ್ಚಾಯ್ತು ದರೋಡೆ: ಅರೆಸ್ಟ್!

ಕರಾವಳಿ ಟಾಪ್ ನ್ಯೂಸ್

ಕರಾವಳಿಯಲ್ಲಿ ಹೆಚ್ಚಾಯ್ತು ದರೋಡೆ: ಅರೆಸ್ಟ್!

• ಕಾರ್ಕಳ: ಕಬ್ಬಿಣದ ರಾಡ್ ನಿಂದ ಹಲ್ಲೆ
•ಬಂಟ್ವಾಳ: ಸಿನಿಮಾ ಮಾದರಿಯಲ್ಲಿ ಆರೋಪಿ ಅರೆಸ್ಟ್!
• ಮಂಗಳೂರು: ಆಭರಣ ವ್ಯಾಪಾರಿಯ ಅಪಹರಣ ಮತ್ತು ದರೋಡೆ ಪೊಲೀಸರಿಗೆ ಸೆರೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಮಾಳ ಗ್ರಾಮದ ಮುಳ್ಳೂರು ಚೆಕ್ ಪೋಸ್ಟ್ ನ ಬಳಿ, ಅಂಗಡಿಯೊಂದರಲ್ಲಿ ಮಾತನಾಡುತ್ತಾ ನಿಂತಿದ್ದ ಸುಧಾಕರ್ ಶೆಟ್ಟಿ ಎನ್ನುವವರಿಗೆ ಸುಧಾಕರ್ ಮೇರ ಎಂಬ ವ್ಯಕ್ತಿಯು ಹಿಂದಿನಿಂದ ಬಂದು, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿರುವ ಘಟನೆ ನಡೆದಿದೆ. ಸುಧಾಕರ್ ಶೆಟ್ಟಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ನಿಟ್ಟೆಯ ಗಾರ್ಜಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬಂಟ್ವಾಳ: ಸಿನಿಮಾ ಮಾದರಿಯಲ್ಲಿ ಆರೋಪಿಯ ಬಂಧನ

ಬಂಟ್ವಾಳ: ದರೋಡೆ ಪ್ರಕರಣವೊಂದರ ಆರೋಪಿಯಾಗಿರುವ ಮಹಮ್ಮದ್ ರಾಜಿಕ್ ಪೊಲೀಸರಿಂದ ತಪ್ಪಿಸಿಕೊಂಡು, ಕಾರಿನಲ್ಲಿ ಬಂಟ್ವಾಳದತ್ತ ಬರುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದು, ಅಪಘಾತದ ಕಾರಣದಿಂದ ಪೊಲೀಸರ ಕೈಗೆ ಸೆರೆಸಿಕ್ಕ ಘಟನೆ ಮಂಜೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ರಾಜಿಕ್ ಶಿಬಿನ್ ಮತ್ತು ಸೈಯದ್ ಅಮೀನ್ ನೊಂದಿಗೆ ಮಂಜೇಶ್ವರದ ಗಡಿಭಾಗ ದಾಟಿ, ಮಂಚಿ ಮಾರ್ಗವಾಗಿ ತೆರಳುತ್ತಿದ್ದ ಸಮಯದಲ್ಲಿ, ವೇಗವಾಗಿ ಹೋಗುತ್ತಿದ್ದುದರಿಂದ ಮಾರುತಿ ಆಲ್ಟೊ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಆ‌ಗ ರಾಜಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.‌ ಕಾರಿನಲ್ಲಿದ್ದ ಶಿಬಿನ್ ಮತ್ತು ಸೈಯದ್ ಅಮೀನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಬಳಿಕ ರಾಜಿಕ್ ನನ್ನು ಕೂಡ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಎರಡೂ ಕಾರುಗಳಿಗೆ ಹಾನಿಯಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.‌ ವಾರೆಂಟ್ ಆರೋಪಿಯಾದ ರಾಜೀಕ್ ನನ್ನು ಪೊಲೀಸರು ಮಂಜೇಶ್ವರದಿಂದ ಬೆನ್ನಟ್ಟಿದ್ದರು ಎನ್ನಲಾಗಿದೆ.‌ ಬಂಟ್ವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

• ಮಂಗಳೂರು: ಆಭರಣ ವ್ಯಾಪಾರಿಯ ಅಪಹರಣ ಮತ್ತು ದರೋಡೆ; ಪೊಲೀಸರಿಗೆ ಸೆರೆ

ಮಂಗಳೂರು: ಆಗಸ್ಟ್ 13ರಂದು ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಹರಿ ಭಾನುದಾಸ್ ಥೋರಟ್ ಮಂಗಳೂರು ರೈಲ್ವೆ ನಿಲ್ದಾಣದ ಬಳಿ ಆಟೋಗಾಗಿ ಕಾಯುತ್ತಿದ್ದರು.‌ ಈ ಸಂದರ್ಭದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು, ತಮ್ಮನ್ನು ಕಸ್ಟಮ್ಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಥೋರಟ್ ಅವರ ವಿರುದ್ಧ ತಮ್ಮ ಬಳಿ ಮಾಹಿತಿ ಇದೆ ಎಂದು ಸುಳ್ಳು ಹೇಳಿ, ಅವರನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.‌ ಬಳಿಕ ಕುಮಟಕ್ಕೆ ಕರೆದೊಯ್ದು ಥೋರಟ್ ಅವರನ್ನು ಬೆದರಿಸಿ, ಅವರ ಬಳಿಯಿದ್ದ ಮೂವತ್ತೈದು ಲಕ್ಷ ರೂಪಾಯಿ ಮತ್ತು 350 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಕಸಿದುಕೊಂಡು, ಥೋರಟ್ ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಥೋರಟ್ ಅವರು ಕುಮಟ‌ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಜೀರೋ ಎಫ್ಐಆರ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಬಳಿಕ ಸರಹದ್ದಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಮಂಗಳೂರಿನಲ್ಲಿ ಅಪರಾಧ ಸಂಖ್ಯೆ 171/2025ರಲ್ಲಿ ಭಾರತೀಯ ನ್ಯಾಯ ಸಂಹಿತೆಯ ಐಪಿಸಿ ಸೆಕ್ಷನ್ 310 (2), 137(2), ಮತ್ತು 204ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.‌ ಆರೋಪಿಗಳನ್ನು ಈಗಾಗಲೇ ಪತ್ತೆಹಚ್ಚಿ ಬಂಧಿಸಲಾಗಿದ್ದು, ಮಂಗಳವಾರದಂದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಮತ್ತು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.