Categories
ಬೆಂಗಳೂರು

ಆಗಸ್ಟ್ 4 ರಿಂದ ಮತ್ತೆ ಮುಂಗಾರು ಆರಂಭ..!!

ಆಗಸ್ಟ್ 4 ರಿಂದ ಮತ್ತೆ ಮುಂಗಾರು ಆರಂಭ..!!
– 8 ಜಿಲ್ಲೆಗೆ ಯೆಲ್ಲೋ ಅಲರ್ಟ್‌
– ಹವಾಮಾನ ಇಲಾಖೆಯ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಸೋಮವಾರದಿಂದ ಮತ್ತೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್‌ 4 ರಿಂದ 10 ರವೆರೆಗ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಮೊದಲ ಮತ್ತು ಕೊನೆಯ ಎರಡು ದಿನ ಯೆಲ್ಲೋ ಅಲರ್ಟ್‌, ಆಗಸ್ಟ್‌ 6 ರಿಂದ ಆಗಸ್ಟ್‌ 8 ರವರೆಗೆ ಆರೇಂಜ್‌ ಅಲರ್ಟ್‌ ನೀಡಲಾಗಿದೆ. ಇದೇ ವೇಳೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದ್ದು, ಆಗಸ್ಟ್‌ 4 ಮತ್ತು 5 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ತುಮಕೂರು ಮತ್ತು ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

– ಕೇರಳದಲ್ಲಿಯೂ 3 ದಿನ ಭಾರೀ ಮಳೆ

ವಾತಾವರಣದ ಮೇಲ್ಮಟ್ಟದಲ್ಲಿ(5.8 ಕಿ.ಮೀ) ಚಂಡಮಾರುತ ರೂಪುಗೊಂಡಿರುವುದರಿಂದ ಕೇರಳ ರಾಜ್ಯದಲ್ಲಿ ಮತ್ತೆ ಮಳೆಯ ಭೀತಿ ಎದುರಾಗಿದೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ. 5 ರಂದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾನಾ ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಸೋಮವಾರ ಕೇರಳದ ಇಡುಕ್ಕಿ, ಎರ್ನಾಕುಳಂ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಯ, ಕೊಟ್ಟಾಯಂ, ಪಾಲಕ್ಕಾಡ್‌, ಮಲಪ್ಪುರಂ, ಕೋಝಿಕೋಡ್‌, ವಯನಾಡ್‌, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಚಂಡಮಾರುತ ಎಚ್ಚರಿಕೆ : ದಕ್ಷಿಣ ತಮಿಳುನಾಡು ಮತ್ತು ಮನ್ನಾರ್‌ ಕೊಲ್ಲಿಮೇಲೆ ಮೇಲ್ಮಟ್ಟದಲ್ಲಿ(5.8 ಕಿ.ಮೀ.) ಚಂಡಮಾರುತ ಪರಿಚಲನೆ ರೂಪುಗೊಂಡಿದೆ. ಕೇರಳದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆ. 5ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.