Categories
ಬೆಂಗಳೂರು ರಾಜಕೀಯ ರಾಜ್ಯ

ಬೆಂಗಳೂರಿನಲ್ಲಿ ಶಿವಮೊಗ್ಗ ಬಿಜೆಪಿ ಸಮ್ಮಿಲನ

ಬೆಂಗಳೂರಿನಲ್ಲಿ ಶಿವಮೊಗ್ಗ ಬಿಜೆಪಿ ಸಮ್ಮಿಲನ
– ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಧುಗಳೊಂದಿಗೆ ಕಾರ್ಯಕ್ರಮ
– ಏಪ್ರಿಲ್ 14ರ ಭಾನುವಾರ ಸಂಜೆ ಆಯೋಜನೆ
– ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಘವೇಂದ್ರ ಅವರ ಜೊತೆ ಸಭೆ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಧುಗಳೊಂದಿಗೆ ಸಮ್ಮಿಲನ ಕಾರ್ಯಕ್ರಮವನ್ನು ಏಪ್ರಿಲ್ 14ರ ಭಾನುವಾರ ಸಂಜೆ 4:00 ಗೇಟ್ ನಂ.3 ವೈಟ್ ಪೆಟಲ್ಸ್ ತ್ರಿಪುರ ವಾಸಿನಿದ್ವಾರ ಅರಮನೆ ಮೈದಾನ ಬೆಂಗಳೂರಿನಲ್ಲಿ ನಡೆಸಲು ಸಿದ್ಧತೆ ನಡೆದಿದೆ. ಈಗಾಗಲೇ ಬಿಜೆಪಿ ಬೆಂಗಳೂರು ಮುಖಂಡರು ಈ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿ ನಡೆದಿದೆ. ಬೆಂಗಳೂರಿನಲ್ಲಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಜನರು ವಾಸವಾಗಿರುವ ನಿವಾಸಿಗರ ಸಭೆಗೆ ಸರ್ವರನ್ನು ಸ್ವಾಗತಿಸಲಾಗಿದೆ.

ಮಲೆನಾಡಿನ ಬಹುತೇಕ ನಾಯಕರು ಕಾರ್ಯಕ್ರಮದ ಆಯೋಜನೆಯಲ್ಲಿ ಸಿದ್ದರಾಗಿದ್ದಾರೆ. ಮಲೆನಾಡಿನ ಮೂಲದಲ್ಲಿರುವಂತಹ ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಕೂಡ ಆರಗ ಜ್ಞಾನೇಂದ್ರ ಹಾಗೂ ಹರತಾಳು ಹಾಲಪ್ಪ ಅವರು ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಗರ ಸಮಾವೇಶವನ್ನು ಮಾಡಿದ್ದು, ಈ ಸಂದರ್ಭದಲ್ಲಿ ಕೂಡ ಸಾವಿರಾರು ಮಂದಿ ಹಾಜರಾಗಿದ್ದರು. ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಘವೇಂದ್ರ ಅವರ ಜೊತೆಗೆ ಸಭೆ ನಡೆಯಲಿದೆ.

ಯಾರು ಯಾರು ಭಾಗವಹಿಸುತ್ತಾರೆ?

ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ, ಬೈಂದೂರು ಕ್ಷೇತ್ರದ ರಾಜಧಾನಿ ನಿವಾಸಿಗರು, ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ. ಹರತಾಳು ಹಾಲಪ್ಪ ಸೇರಿ ಅನೇಕ ನಾಯಕರು ಭಾಗಿಯಾಗಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.