Categories
ತೀರ್ಥಹಳ್ಳಿ

ಗೀತಾ ಶಿವರಾಜ್ ಕುಮಾರ್ ಗೆಲುವು ಖಚಿತ

ಗೀತಾ ಶಿವರಾಜ್ ಕುಮಾರ್ ಗೆಲುವು ಖಚಿತ
– ಬಂಗಾರಪ್ಪ ಕೊಡುಗೆ ಶಿವಮೊಗ್ಗ ಜಿಲ್ಲೆಗೆ ಅಪಾರ
– ಈಶ್ವರಪ್ಪನವರ ಸ್ಪರ್ಧೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ: ಒಬಿಸಿ ಜಿಲ್ಲಾಧ್ಯಕ್ಷ ರಮೇಶ್‌

NAMMUR EXPRESS NEWS
ತೀರ್ಥಹಳ್ಳಿ: ಲೋಕ ಸಭಾ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರಿಗಿಂತ ಬಂಗಾರಪ್ಪನವರ ಕೊಡುಗೆ ಜಿಲ್ಲೆಗೆ ಇದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಖಚಿತ ಎಂದು ಕಾಂಗ್ರೆಸ್ ಒಬಿಸಿ ಜಿಲ್ಲಾಧ್ಯಕ್ಷರಾದ ರಮೇಶ್ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಮುಳುಗಡೆ ಪ್ರದೇಶಕ್ಕೆ ರಾಘವೇಂದ್ರ ಏನೂ ಕೊಡುಗೆ ನೀಡಿಲ್ಲ. ಬಿಜೆಪಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರಿಗೆ ಮೋಸ ಮಾಡಿದೆ. ಈ ಬಾರಿ ಜನ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದರು. ಶಿವಮೊಗ್ಗ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲ್ಲುವುದು ಖಚಿತ. ಹಸ್ತದ ಚಿಹ್ನೆ ಯಾವತ್ತೂ ಅವರನ್ನು ಕೈ ಬಿಡುವುದಿಲ್ಲ ಎಂದರು.

ಈಶ್ವರಪ್ಪನವರ ಸ್ಪರ್ಧೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ. ಆದರೆ ಇನ್ನು ನಾಮಪತ್ರ ವಾಪಾಸ್ ಪಡೆಯಲು ಸಮಯ ಇರುವುದರಿಂದ ವಾಪಾಸ್‌ ತೆಗೆದುಕೊಂಡರೂ ತೆಗೆದುಕೊಳ್ಳಬಹುದು. ಗೀತಾ ಅವರು ಎಂ ಪಿ ಆದ ನಂತರ ಜನರ ಜೊತೆಗೆ ಶಿವಮೊಗ್ಗದಲ್ಲೇ ಇರುತ್ತಾರೆ ಎಂದರು. ಪ. ಪಂ ಅಧ್ಯಕ್ಷೆ ಗೀತಾ ರಮೇಶ್, ಬಿ ಗಣಪತಿ, ಉದಯ್ ಬಸವಾನಿ, ರಾಮಚಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.