Categories
ಕ್ರಿಕೆಟ್ ಕ್ರೀಡಾ ಸುದ್ದಿ

ಕೊನೆ ಬಾಲ್ ಥ್ರಿಲ್ಲರ್ ಗೆದ್ದ ಗುಜರಾತ್ ಟೈಟಾನ್ಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಕೊನೆ ಬಾಲ್ ಥ್ರಿಲ್ಲರ್ ಗೆದ್ದ ಗುಜರಾತ್ ಟೈಟಾನ್ಸ್
* ಮತ್ತೆ ಅಗ್ರಸ್ಥಾನಕ್ಕೇರಿದ ಗುಜರಾತ್

NAMMMUR EXPRESS SPORTS NEWS
ಮುಂಬೈ: ಮಧ್ಯರಾತ್ರಿಯವರೆಗೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮಳೆಯಿಂದ ಬಾಧಿತ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಮತ್ತೆ ಅಗ್ರಸ್ಥಾನದಲ್ಲಿದೆ. ಗುಜರಾತ್ ತಂಡವು 132/6 ಅಂಕಗಳನ್ನು ಗಳಿಸಿತ್ತು, ಕೊನೆಯ ಎರಡು ಓವರ್‌ಗಳಲ್ಲಿ 24 ರನ್‌ಗಳ ಅಗತ್ಯವಿತ್ತು, ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಮಳೆ ಮರಳಿತು. ಆದಾಗ್ಯೂ, ಆಟ ಪುನರಾರಂಭವಾಗುತ್ತಿದ್ದಂತೆ, ಗುಜರಾತ್ ತಂಡಕ್ಕೆ 147 (6 ಎಸೆತಗಳಲ್ಲಿ 15) ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು, ಅದನ್ನು ಅವರು ಅಂತಿಮ ಎಸೆತದಲ್ಲಿ ಸಾಧಿಸಿದರು. ಇದಕ್ಕೂ ಮೊದಲು, ವಿಲ್ ಜ್ಯಾಕ್ಸ್ ಅರ್ಧಶತಕ ಗಳಿಸಿದರು ಆದರೆ ಗುಜರಾತ್‌ನ ಕ್ಲಿನಿಕಲ್ ಬೌಲಿಂಗ್ ಪ್ರದರ್ಶನದಿಂದ ಮುಂಬೈ ತಂಡವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು, ಇದನ್ನು 155/8 ಕ್ಕೆ ಸೀಮಿತಗೊಳಿಸಲಾಯಿತು. ರಯಾನ್ ರಿಕಲ್ಟನ್ ಔಟಾದ ನಂತರ ಜ್ಯಾಕ್ಸ್ ಬೇಗನೆ ಮಧ್ಯಕ್ಕೆ ನಡೆಯಬೇಕಾಯಿತು ಮತ್ತು ಮುಂಬೈ ಇಂಡಿಯನ್ಸ್ ಪರ ತನ್ನ ಮೊದಲ ಅರ್ಧಶತಕ ಗಳಿಸುವ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡರು. ಎರಡೂ ತಂಡಗಳು 14 ಅಂಕಗಳೊಂದಿಗೆ ಸಮಬಲ ಸಾಧಿಸಿವೆ ಆದರೆ ಗುಜರಾತ್ 10 ಪಂದ್ಯಗಳಿಗೆ ಹೋಲಿಸಿದರೆ ಮುಂಬೈ 11 ಪಂದ್ಯಗಳನ್ನು ಆಡಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದ್ರಾಬಾದ್‌ಗೆ ಮಳೆರಾಯ ಶಾಕ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದ್ರಾಬಾದ್‌ಗೆ ಮಳೆರಾಯ ಶಾಕ್
* ಪ್ಲೇ ಆಫ್‌ನಿಂದ ಹೊರಬಿದ್ದ 3 ನೇ ತಂಡ ಸನ್ ರೈಸರ್ಸ್ ಹೈದ್ರಾಬಾದ್

NAMMMUR EXPRESS SPORTS NEWS
ಹೈದ್ರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯವು ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದ್ದು, ಇದರೊಂದಿಗೆ ಹೈದ್ರಾಬಾದ್ ತಂಡವು ಅಧಿಕೃತವಾಗಿ ಐಪಿಎಲ್‌ 18ನೇ ಆವೃತ್ತಿಯಿಂದ ಹೊರಬಿದ್ದಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಖಾತೆಗೆ ಒಂದು ಅಂಕ ಸೇರ್ಪಡೆಯಾಗಿದ್ದು, 11 ಪಂದ್ಯಗಳ ನಂತರ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಂದ್ಯ ರದ್ದಾಗಿದ್ದು ಡೆಲ್ಲಿ ತಂಡಕ್ಕೆ ತುಸು ನಿಟ್ಟುಸಿರು ಬಿಡುವಂತಾಗಿದೆ. ಸೋಲುವ ಹಂತದಲ್ಲಿದ್ದ ಪಂದ್ಯ ರದ್ದಾಗಿದ್ದು ತಂಡಕ್ಕೆ ತುಸು ಲಾಭವಾಗಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ, ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವ ಮೂಲಕ 7 ವಿಕೆಟ್‌ ಕಳೆದುಕೊಂಡು ಕೇವಲ 133 ರನ್‌ ಮಾತ್ರ ಗಳಿಸಲು ಶಕ್ತವಾಯ್ತು. ಅಲ್ಪ ಮೊತ್ತವನ್ನು ಸುಲಭವಾಗಿ ಚೇಸಿಂಗ್‌ ಮಾಡುವ ಲೆಕ್ಕಾಚಾರ ಸನ್‌ರೈಸರ್ಸ್‌ ತಂಡದ್ದಾಗಿತ್ತು. ಆದರೆ, ಮೊದಲ ಇನ್ನಿಂಗ್ಸ್‌ ಮುಕ್ತಾಯವಾದ ನಂತರ ಹೈದರಾಬಾದ್‌ನಲ್ಲಿ ಜೋರಾಗಿ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಬೇಕಾಯ್ತು. ಕೊನೆಗೆ ಮಳೆ ನಿಂತರೂ, ಜೋರಾಗಿ ಸುರಿದ ಮಳೆಯಿಂದಾಗಿ ಮೈದಾನದೆಲ್ಲಡೆ ನೀರು ನಿಂತಿತ್ತು. ಸಕಾಲಕ್ಕೆ ಪಂದ್ಯ ಮರುಆರಂಭ ಮಾಡಲು ಸಾಧ್ಯವಾಗದ ಕಾರಣದಿಂದ ಪಂದ್ಯವನ್ನು ರದ್ದುಪಡಿಸಲಾಯ್ತು. ಚೇಸಿಂಗ್‌ನಲ್ಲಿ ಒಂದೂ ಓವರ್‌ ಎಸೆಯಲು ಸಾಧ್ಯವಾಗದ ಕಾರಣ, ಫಲಿತಾಂಶವಿಲ್ಲದೆ ಪಂದ್ಯ ರದ್ದು ಮಾಡಲಾಯ್ತು. ಹೀಗಾಗಿ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ಹಂಚಲಾಯ್ತು. ಸನ್ ರೈಸರ್ಸ್ ತಂಡದ ಖಾತೆಯಲ್ಲಿ ಒಟ್ಟು 7 ಅಂಕಗಳು ಮಾತ್ರವೇ ಬಿತ್ತು. ಇದರೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ಉಳಿದ ತಂಡವು ಟೂರ್ನಿಯಿಂದ ಹೊರಬಿದ್ದಿದೆ.

* ಪ್ಯಾಟ್‌ ಕಮಿನ್ಸ್‌ ಮಾರಕ ದಾಳಿ
ಪಂದ್ಯದಲ್ಲಿ ಡೆಲ್ಲಿ ಇನ್ನಿಂಗ್ಸ್‌ ಸಂಪೂರ್ಣವಾಗಿ ನಡೆಯಿತು. ಇನ್ನಿಂಗ್ಸ್‌ ಆರಂಭದಲ್ಲಿಯೇ ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ಔಟಾದರು. ಕರುಣ್‌ ನಾಯರ್‌ ಗೋಲ್ಡನ್‌ ಡಕ್‌ಗೆ ಬಲಿಯಾದರೆ, ಫಾಫ್ ಡುಪ್ಲೆಸಿಸ್‌ 3 ರನ್‌ ಮಾತ್ರ ಗಳಿಸಿದರು. ಅಭಿಷೇಕ್‌ ಪೊರೆಲ್‌ ಕೂಡಾ 8 ರನ್‌ ಗಳಿಸಿ ನಿರ್ಗಮಿಸಿದರು. ವಿಶೇಷವೆಂದರೆ, ಈ ಮೂರೂ ವಿಕೆಟ್‌ ಪಡೆದಿದ್ದು ಸನ್ ರೈಸರ್ಸ್ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌. ಇಷ್ಟೇ ಅಲ್ಲ, ಎಲ್ಲಾ ಮೂರು ಕ್ಯಾಚ್‌ ಪಡೆದಿದ್ದು ವಿಕೆಟ್‌ ಕೀಪರ್‌ ಇಶಾನ್‌ ಕಿಶನ್.‌ಡೆಲ್ಲಿ ನಾಯಕ ಅಕ್ಷರ್‌ ಪಟೇಲ್‌ 6 ರನ್‌ ಗಳಿಸಿದರೆ, ಕೆಎಲ್‌ ರಾಹುಲ್‌ ಆಟ 10 ರನ್‌ಗೆ ಅಂತ್ಯವಾಯ್ತು. ಕೊನೆಯಲ್ಲಿ ಅಬ್ಬರಿಸಿದ ಅಶುತೋಷ್‌ ಶರ್ಮಾ 41 ರನ್‌ ಸಿಡಿಸಿದರು. ಇವರಿಗೆ ಸಾಥ್‌ ನೀಡಿದ ಟ್ರಿಸ್ಟಾನ್ ಸ್ಟಬ್ಸ್‌ ಅಜೇಯ 41 ರನ್‌ ಪೇರಿಸಿದರು.
ಡೆಲ್ಲಿ ಇನ್ನಿಂಗ್ಸ್‌ ಮುಕ್ತಾಯವಾದ ಇನ್ನಿಂಗ್ಸ್‌ ಬ್ರೇಕ್‌ ವೇಳೆ ಮಳೆ ಸುರಿಯಲು ಆರಂಭವಾಯ್ತು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯ್ತು. ಉಭಯ ತಂಡಗಳು ತಲಾ ಒಂದು ಅಂಕಗಳನ್ನು ಪಡೆದಿವೆ. ಪಂದ್ಯವನ್ನು ಡೆಲ್ಲಿ ತಂಡ ಸೋಲುವ ಭೀತಿಯಲ್ಲಿತ್ತು, ಹೀಗಾಗಿ ಸಿಕ್ಕ ಒಂದು ಅಂಕ ಅಕ್ಷರ್‌ ಪಟೇಲ್‌ ಪಡೆಗೆ ಲಾಭವಾಗಲಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಕೆಕೆಅರ್‌ಗೆ ಒಂದು ರನ್‌ ಜಯ,ಪ್ಲೇ ಆಫ್ ಕನಸು ಜೀವಂತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್-2025
* ಕೆಕೆಅರ್‌ಗೆ ಒಂದು ರನ್‌ ಜಯ,ಪ್ಲೇ ಆಫ್ ಕನಸು ಜೀವಂತ
* ಪಂಜಾಬ್ ಆರ್ಭಟಕ್ಕೆ ಲಖನೌ ನಿರುತ್ತರ

NAMMMUR EXPRESS SPORTS NEWS
* ಕೆಕೆಅರ್‌ಗೆ ಒಂದು ರನ್‌ ಜಯ,ಪ್ಲೇ ಆಫ್ ಕನಸು ಜೀವಂತ
ಕೊಲ್ಕತ್ತಾ:ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್​ನಿಂದ ಜಯ ಸಾಧಿಸಿದೆ.ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೊನೆಯವರೆಗೂ ಹೋರಾಟ ನೀಡಿದ ರಾಜಸ್ಥಾನ ತಂಡ 205 ರನ್ ಕಲೆಹಾಕಿ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ಪರ ರಿಯಾನ್ ಪರಾಗ್ 95 ರನ್​ಗಳ ನಾಯಕನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಕೋಲ್ಕತ್ತಾ ತಂಡ ಆಡಿರುವ 11 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸಿದ್ದು, ತನ್ನ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

* ಪಂಜಾಬ್ ಆರ್ಭಟಕ್ಕೆ ಲಖನೌ ನಿರುತ್ತರ
ಪಂಜಾಬ್: ಕಿಂಗ್ಸ್​ ಲಖನೌ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ 37 ರನ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಧರ್ಮಾಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 236 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. 237 ರನ್​ಗಳ ಗುರಿ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ಆಯುಷ್ ಬದೋನಿ (74) ಹಾಗೂ ಅಬ್ದುಲ್ (45) ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ 20 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು 199 ರನ್​ಗಳಿಸಿದಷ್ಟೇ ಶಕ್ತವಾಯಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ರಣರೋಚಕ ಪಂದ್ಯದಲ್ಲಿ ಚೆನ್ನೈ ಫಿನೀಶ್ ಆರ್‌ಸಿಬಿ‌ಗೆ ಥ್ರಿಲ್ಲಿಂಗ್ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ರಣರೋಚಕ ಪಂದ್ಯದಲ್ಲಿ ಚೆನ್ನೈ ಫಿನೀಶ್ ಆರ್‌ಸಿಬಿ‌ಗೆ ಥ್ರಿಲ್ಲಿಂಗ್ ಜಯ
* ಕೊಹ್ಲಿ ದಾಖಲೆಗಳ ಸುರಿಮಳೆ,ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಟಾಪರ್

NAMMMUR EXPRESS NEWS
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಓವರ್‌ನಲ್ಲಿ ರೋಚಕ ಎರಡು ರನ್‌ಗಳಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಸಿಎಸ್ ಕೆ ತಂಡಕ್ಕೆ ಪಂದ್ಯವನ್ನು ಗೆಲ್ಲಲು 214 ರನ್ ಗಳ ಸವಾಲು ನೀಡಿತು.ಆರ್‌ಸಿಬಿ ಪರವಾಗಿ ಗಮನ ಸೆಳೆದಿದ್ದು ತಂಡದ ಮಧ್ಯಮ ಕ್ರಮಾಂಕದ, ವಿಂಡೀಸ್ ಆಟಗಾರ ರೊಮಾರಿಯೊ ಶೆಫರ್ಡ್. ಇನಿಂಗ್ಸ್ ನ 18ನೇ ಓವರ್ ನಲ್ಲಿ ತಂಡವು ಐದು ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಕಾಲಿಟ್ಟಿದ್ದ ಶೆಪರ್ಡ್, ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ ಗಳನ್ನು ತೀವ್ರವಾಗಿ ದಂಡಿಸಿದರು. ಕೇವಲ 14 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ಅವರು, ತಂಡದ ಮೊತ್ತವು 213 ರನ್ ಗಳಿಗೆ ಏರಿಸಲು ಸಹಾಯ ಮಾಡಿದರು. 6ನೇ ವಿಕೆಟ್‌ಗೆ ಅವರು ಟೀಮ್ ಡೇವಿಡ್ ಜೊತೆಗೆ ನೀಡಿದ 56 ರನ್ ಗಳ ಮುರಿಯದ ಜೊತೆಯಾಟ ಅದ್ಭುತವಾಗಿತ್ತು.ಆರಂಭಿಕರಾದ ಜಾಕೋಬ್ ಬೆಥೆಲ್ (55 ರನ್, 33 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (62 ರನ್, 33 ಎಸೆತ, 5 ಬೌಂಡರಿ, 5 ಸಿಕ್ಸರ್) ಮೊದಲ ವಿಕೆಟ್ ಗೆ 97 ರನ್ ಗಳ ಜೊತೆಯಾಟ ನೀಡಿ ತಂಡದ ಇನ್ನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಬೆಥೆಲ್ ಅವರು ವಿಕೆಟ್ ಒಪ್ಪಿಸಿದರೂ ಕೊಹ್ಲಿ ತಂಡಕ್ಕೆ ರನ್ ಹೊಳೆ ಹರಿಸುತ್ತಾ ಇನಿಂಗ್ಸ್ ಮುನ್ನಡೆಸಿದರು. ಆದರೆ, ಮಧ್ಯಮ ಕ್ರಮಾಂಕದಿಂದ ದೊಡ್ಡ ಮಟ್ಟದ ಸಾಥ್ ಸಿಕ್ಕಲಿಲ್ಲ. ಪಡಿಕ್ಕಲ್ (17), ನಾಯಕ ಪಾಟಿದಾರ್ (11) ಜಿತೇಶ್ ಶರ್ಮಾ (7) ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ, ಇನಿಂಗ್ಸ್ ಕೊನೆಯೆರಡು ಓವರ್ ಗಳಲ್ಲಿ ಜೊತೆಯಾದ ಟಿಮ್ ಡೇವಿಡ್ (ಅಜೇಯ 2) ಹಾಗೂ ರೊಮಾರಿಯೊ ಶೆಪರ್ಡ್ (53 ರನ್, 14 ಎಸೆತ, 4 ಬೌಂಡರಿ, 6 ಸಿಕ್ಸರ್) ತಂಡದ ಮೊತ್ತ 200 ರನ್ ಗಡಿ ದಾಟಲು ನೆರವಾದರು.
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಐಪಿಎಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ನಂಬಿ ಮೈದಾನಕ್ಕೆ ಆಗಮಿಸದೇ ಮನೆಯಲ್ಲೇ ಕುಳಿತ ಅಭಿಮಾನಿಗಳು ಕೈ ಕೈ ಹಿಚಕಿಕೊಂಡರು. ಏಕೆಂದರೆ ವರುಣನ ಬಿಡುವಿನಿಂದ ಆರ್‌ಸಿಬಿ ತಂಡ ಪ್ರವಾಸಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅದ್ಬುತ ಆಟವಾಡಿತು. ಮಳೆಯ ಭೀತಿಯಲ್ಲೂ ಮೈದಾನಕ್ಕೆ ಬಂದ 25 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕೊಹ್ಲಿ, ಬಾಥೆಲ್, ಶೆಪರ್ಡ್ ಆಟವನ್ನು ಕಣ್ತುಂಬಿಕೊಂಡರು.
ಚಿನ್ನಸ್ವಾಮಿಯಲ್ಲಿ ಇಲ್ಲಿನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಗೆದ್ದ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್‌ ಆರಂಭಿಸಿದ ಬೆಂಗಳೂರು ತಂಡ, ಕೊಹ್ಲಿ ಮತ್ತು ಜಾಕೋಬ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆಯಿತು. ಖಲೀಲ್‌ ಅಹ್ಮದ್‌ ಎಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್‌ ಫೋರ್‌ ಸಿಡಿಸಿದ ಜಾಕೋಬ್‌, ಬ್ಯಾಟಿಂಗ್‌ ರಸದೌತಣವಿತ್ತರು.

* ಗೇಲ್‌ ದಾಖಲೆ ಮುರಿದ ಕೊಹ್ಲಿ
ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ಸಿಕ್ಸರ್‌ ಸಿಡಿಸಿದ ವಿರಾಟ್‌ ಕೊಹ್ಲಿ(62; 33 ಎಸೆತ, 5 ಫೋರ್‌, 5 ಸಿಕ್ಸರ್‌), ಟಿ20 ಮಾದರಿಯಲ್ಲಿ ಒಂದೇ ತಾಣದಲ್ಲಿ ಅತ್ಯಧಿಕ ಸಿಕ್ಸರ್‌ ದಾಖಲಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. 3 ಸಿಕ್ಸರ್‌ ಸಿಡಿಸಿದ ವೇಳೆ ಅವರು, ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಸ್‌ ಗೇಲ್‌ ದಾಖಲಿಸಿದ್ದ 151 ಸಿಕ್ಸರ್‌ಗಳ ದಾಖಲೆಯನ್ನು ಅಳಿಸಿ ಹಾಕಿದರು. ಸದ್ಯ ಕೊಹ್ಲಿ ಬೆಂಗಳೂರಿನಲ್ಲಿ 154 ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ಮಧ್ಯೆ, ಕೊಹ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ಅರ್ಧ ಶತಕ ಗಳಿಸಿದ್ದ ಡೇವಿಡ್‌ ವಾರ್ನರ್‌(61) ಅವರ ದಾಖಲೆಯನ್ನು ಸರಿಗಟ್ಟಿದರು. ಚೆನ್ನೈ ವಿರುದ್ಧ 62 ರನ್‌ ಗಳಿಸಿದ ಕೊಹ್ಲಿ, ಐಪಿಎಲ್‌ನಲ್ಲಿ ಒಟ್ಟಾರೆ 62 ಅರ್ಧ ಶತಕ ಹಾಗೂ 8 ಶತಕ ಗಳಿಸಿದ್ದಾರೆ.

* 2ನೇ ಅತಿ ವೇಗದ ಅರ್ಧ ಶತಕ
ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ ರೊಮಾರಿಯೊ ಶೆಫರ್ಡ್‌, ಐಪಿಎಲ್‌ ಇತಿಹಾಸದಲ್ಲಿ 2ನೇ ಜಂಟಿ ಅತಿ ವೇಗದ ಅರ್ಧ ಶತಕ ಗಳಿಸಿದರು. ಚೆನ್ನೈ ವಿರುದ್ಧ ಕೇವಲ 14 ಎಸೆತಗಳಲ್ಲಿ4 ಬೌಂಡರಿ, 6 ಸಿಕ್ಸರ್‌ ಒಳಗೊಂಡ ಅಜೇಯ 53 ರನ್‌ ಗಳಿಸಿ ಈ ಸಾಧನೆ ಮಾಡಿದರು. 2023ರಲ್ಲಿ ರಾಜಸ್ಥಾನ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್‌, ಕೆಕೆಆರ್‌ ವಿರುದ್ಧ 13 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಆದರೆ 30 ವರ್ಷದ ಶೆಫರ್ಡ್‌ ಅವರ ಅರ್ಧ ಶತಕ ಹಾಲಿ ಟೂರ್ನಿಯಲ್ಲಿ ದಾಖಲಾದ ಅತಿ ವೇಗದ ಅರ್ಧ ಶತಕವಾಗಿದೆ.
ಖಲೀಲ್‌ ಸೇರಿದಂತೆ ನಿರಾಶಾದಾಯಕ ಬೌಲಿಂಗ್‌ ಪರ್ದರ್ಶಿಸಿದ ಚೆನ್ನೈ, ಆರ್‌ಸಿಬಿ ಎದುರಿನ ಪಂದ್ಯ ಸೇರಿದಂತೆ 11 ಪಂದ್ಯಗಳಲ್ಲಿ 2ನೇ ಬಾರಿ ಪವರ್‌ ಪ್ಲೇ ಅವಧಿಯಲ್ಲಿವಿಕೆಟ್‌ ಪಡೆಯಲು ವಿಫಲಗೊಂಡಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬಯಿ ವಿರುದ್ಧ ಇಂತಹ ಸ್ಥಿತಿ ಎದುರಿಸಿತ್ತು. 29 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಕೊಹ್ಲಿ ಹಾಲಿ ಟೂರ್ನಿಯಲ್ಲಿ7ನೇ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದರು. 2016ರಲ್ಲಿ ಆರ್‌ಸಿಬಿ ಪರ ಸಸತ ನಾಲ್ಕು ಬಾರಿ ಅರ್ಧಶತಕಕ್ಕೂ ಅಧಿಕ ರನ್‌ ಗಳಿಸಿದ್ದ ಕೊಹ್ಲಿ, ಪ್ರಸಕ್ತ ಸಾಲಿನಲ್ಲಿ ಹಿಂದಿನ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಹೈದ್ರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಗುಜರಾತ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್-2025
* ಹೈದ್ರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಗುಜರಾತ್
* ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಗುಜರಾತ್
* ಇಂದು ಬೆಂಗಳೂರಲ್ಲಿ ಆರ್‌ಸಿಬಿ ಚೆನ್ನೈ ತಂಡಗಳ ನಡುವೆ ಪಂದ್ಯ

NAMMMUR EXPRESS NEWS
ಹೈದ್ರಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್​ನ್ನು 38 ರನ್‌ಗಳಿಂದ ಸೋಲಿಸಿದೆ. ಗುಜರಾತ್ ಪರ ನಾಯಕ ಶುಭಮನ್ ಗಿಲ್ 76 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಹೈದರಾಬಾದ್​ಗೆ 225 ರನ್​ಗಳ ದೊಡ್ಡ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ಗಳನಷ್ಟೇ ಗಳಿಸಲು ಸಾಧ್ಯವಾಯಿತು . ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಆರ್​ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನ ತಲುಪಿದೆ. ಗುಜರಾತ್ 10 ಪಂದ್ಯಗಳಲ್ಲಿ ಏಳು ಗೆಲುವುಗಳೊಂದಿಗೆ 14 ಅಂಕಗಳನ್ನು ಹೊಂದಿದೆ.
ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಆರಂಭಿಕವಾಗಿ ಕಣಕ್ಕಿಳಿಸಿದರು. ಸುದರ್ಶನ್ 48 ರನ್ ಮತ್ತು ಗಿಲ್ 76 ರನ್ ಗಳಿಸಿದರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಜೋಸ್ ಬಟ್ಲರ್ ಎಂದಿನಂತೆ ವೇಗವಾಗಿ 37 ಎಸೆತಗಳಲ್ಲಿ 67 ರನ್ ಗಳಿಸಿ ಮಿಂಚಿದರು.
ವಾಷಿಂಗ್ಟನ್ ಸುಂದರ್ 21 ಮತ್ತು ಶಾರುಖ್ ಖಾನ್ 6 ರನ್ ಗಳಿಸಿದರು. ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಸನ್‌ರೈಸರ್ಸ್ ಹೈದರಾಬಾದ್ ಪರ ಜಯದೇವ್ ಉನಾದ್ಕಟ್ ಗರಿಷ್ಠ ಮೂರು ವಿಕೆಟ್ ಕಬಳಿಸಿದರು. ಅವರಲ್ಲದೆ, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಜೀಶನ್ ಅನ್ಸಾರಿ ತಲಾ ಒಂದು ವಿಕೆಟ್​ ಪಡೆದರು.
ಬೃಹತ್​ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್​ಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಟ್ರಾವಿಸ್ ಹೆಡ್ 4.3 ಓವರ್‌ನಲ್ಲಿ ತಂಡದ ಮೊತ್ತ 49 ರನ್​ ಆಗಿದ್ದಾಗ 20 ರನ್ ಗಳಿಸಿದ್ದ ಹೆಡ್​​ ಔಟಾಗುವ ಮೂಲಕ ತಂಡಕ್ಕೆ ಆರಂಭಿಕ ಹೊಡೆತ ಬಿತ್ತು. ಮತ್ತೊಂದೆಡೆ, ಅಭಿಷೇಕ್ ಶರ್ಮಾ 4 ಬೌಂಡರಿ ಮತ್ತು 6 ಅಮೋಘ ಸಿಕ್ಸರ್‌ಗಳು ಸಹಿತ 74 ರನ್ ಬಾರಿಸಿದರು. ಆದರೆ, ಅವರಿಗೆ ತಕ್ಕ ಸಾಥ್​ ಸಿಗಲಿಲ್ಲ.
ಹೆಡ್​​ ವಿಕೆಟ್​ ಪತನದ ಬಳಿಕ ಬಂದ​​ ಇಶಾನ್ ಕಿಶನ್ 13, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್​ ಬ್ಯಾಟರ್​ ಹೆನ್ರಿಚ್​ ಕ್ಲಾಸೆನ್ 23 ಮತ್ತು ತದನಂತರ ಅನಿಕೇತ್ ವರ್ಮಾ 3 ರನ್ ಮಾತ್ರ ಗಳಿಸಿದರು. ಈ ನಡುವೆ, ಕಮಿಂದು ಮೆಂಡಿಸ್ ಖಾತೆ ತೆರೆಯದೇ ಪೆವಿಲಿಯನ್‌ಗೆ ಮರಳಿದರು. ಕೊನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ 21 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 19 ರನ್ ಬಾರಿಸಿ ಹೋರಾಟ ತೋರಿದರು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುಲಾಗಲಿಲ್ಲ.
ನಿಗದಿತ 20 ಓವರ್‌ಗಳಲ್ಲಿ ಹೈದ್ರಾಬಾದ್ ಆರು ವಿಕೆಟ್‌ಗಳಿಗೆ 186 ರನ್‌ ಮಾತ್ರ ಗಳಿಸಿ 38 ರನ್‌ಗಳ ಸೋಲುಂಡಿತು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರೆ, ಕೋಟ್ಜೆ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

* ಇಂದು ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ
ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಪಂದ್ಯ ನಡೆಯಲಿದೆ. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಚೆನ್ನೈ ಕಡೆಯ ಪಂದ್ಯಗಳಲ್ಲಿ ಗೆಲ್ಲಲು ಹಾಗೂ ತವರಿನಲ್ಲಿ ಪಂದ್ಯ ಗೆದ್ದು ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತ ಪಡಿಸುವ ತವಕದಲ್ಲಿರುವ ಆರ್‌ಸಿಬಿ ತಂಡಗಳು ಗೆಲುವಿಗಾಗಿ ರೋಚಕ ಕಾದಾಟದ ನಡೆಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿ ಎದುರಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮುಂಬೈ ಹರಿಸಿದ ರನ್ ಮಳೆಯಲ್ಲಿ ಕೊಚ್ಚಿಹೋದ ರಾಜಸ್ಥಾನ್
* ಸತತ 6 ಜಯದೊಂದಿಗೆ ಮುಂಬೈ ಪಾಯಿಂಟ್ ಟೇಬಲ್ ಟಾಪರ್, ಪ್ಲೇ ಆಫ್‌ನಿಂದ ರಾಜಸ್ಥಾನ ಹೊರಕ್ಕೆ

NAMMMUR EXPRESS SPORTS NEWS
ಜೈಪುರ:ರಯಾನ್ ರಿಕೆಲ್ಟನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ನಾಯಕ ಹಾರ್ದಿಕ್‌ ಪಾಂಡ್ಯ ಅವರ ರನ್‌ ಮಳೆಯ ಆಟದಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಕೇವಲ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತು. ಕಠಿಣ ಗುರಿನ್ನು ಬೆನ್ನಟ್ಟಿದ ರಾಜಸ್ಥಾನ 16.1 ಓವರ್‌ಗಳಲ್ಲಿ 117 ರನ್‌ ಗಳಿಸಿ ಆಲೌಟ್‌ ಆಯಿತು. ಸತತ 6 ಜಯದೊಂದಿಗೆ ಉತ್ತಮ ರನ್‌ ರೇಟ್‌ ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ, ಅಷ್ಟೇ ಅಂಕ ಪಡೆದಿರುವ ಆರ್‌ಸಿಬಿ ಎರಡನೇ ಸ್ಥಾನಕ್ಕೆ ಜಾರಿದೆ.
ರಾಜಸ್ಥಾನ್‌ ತಂಡವು ಆರಂಭಿಕ ಹಂತದಲ್ಲೇ ಆಘಾತ ಅನುಭವಿಸಿತು. ಗುಜರಾತ್‌ ವಿರುದ್ಧ ಆಡಿದ ಪಂದ್ಯದಲ್ಲಿ ಆರಂಭಿಕರಾದ ಯಶಸ್ವಿ ಜೆಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಅದೇ ಆಟದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಜೋಡಿ ನಿರಾಸೆ ಮೂಡಿಸಿತು. ಮೊದಲೇ ಓವರ್‌ನಲ್ಲೇ ದೀಪಕ್‌ ಚಹರ್‌ ಬೌಲಿಂಗ್‌ ದಾಳಿಗೆ ವೈಭವ್‌ ಸೂರ್ಯವಂಶಿ ಓಟಾಗಿ, ಪೆವಿಯನ್‌ನತ್ತ ಮುಖ ಮಾಡಿದರು. ಯಶಸ್ವಿ ಜೈಸ್ವಾಲ್‌ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರದೇ ಬೋಲ್ಟ್‌ಗೆ ಕ್ಲೀನ್‌ ಬೋಲ್ಡ್‌ ಆದರು. ಅದಾಗಲೇ ರಾಜಸ್ಥಾನ ತಂಡ 2 ಓವರ್‌ಗೆ 18 ರನ್‌ನಷ್ಟಕ್ಕೆ 2 ವಿಕೆಟ್‌ ಕಳೆದುಕೊಂಡಿತ್ತು.
ಬಳಿಕ ಬಂದ ನಿತೀಶ್‌ ರಾಣಾ ಕೂಡ 11 ಎಸೆತಗಳಲ್ಲಿ 9 ರನ್‌ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. 8 ಎಸೆತಗಳಲ್ಲಿ 16 ರನ್‌ ಬಾರಿಸಿದ್ದ ತಂಡದ ನಾಯಕ ರಿಯಾನ್‌ ಪರಾಗ್‌ರನ್ನು ಜಸ್ಪ್ರೀತ್‌ ಬುಮ್ರಾ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಬಂದ ಜುರೇಲ್‌ 11 ಎಸೆತಕ್ಕೆ 11ರನ್‌ ಕಲೆಹಾಕಿದರೆ, ಹೆಟ್ಮೆಯರ್‌ ಶೂನ್ಯಕ್ಕೆ ಔಟಾದರು.
ಅಷ್ಟರಲ್ಲಾಗಲೇ 4 ಓವರ್‌ನಲ್ಲೇ ರಾಜಸ್ಥಾನ ತಂಡವು 5 ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ಕ್ರೀಸ್‌ಗೆ ಬಂದ ಜೋಫ್ರಾ ಆರ್ಚರ್‌ 27 ಎಸೆತಗಳಲ್ಲಿ 30 ರನ್‌ ಬಾರಿಸಿ, ಮುಂಬೈ ಬೌಲರ್ಸ್‌ಗಳ ದಾಳಿಗೆ ಬಲಿಯಾದರು. ಬಳಿಕ ಬಂದ ಮಹೀಶ್‌ ತೀಕ್ಷಣ ಹಾಗೂ ಕುಮಾರ್‌ ಕಾರ್ತಿಕೇಯ ಒಂದಕ್ಕಿಗೆ ಮುಂಬೈ ಬೌಲರ್ಸ್‌ಗೆ ಶರಣಾದರು. ಮುಂಬೈ ಬೌಲರ್ಸ್‌ಗಳ ದಾಳಿಗೆ ರಾಜಸ್ಥನ ಧೂಳಿಪಟವಾಯ್ತು.
ಮುಂಬೈ ಪರ ಬೋಲ್ಟ್‌ ಹಾಗೂ ಕರಣ್‌ ಶರ್ಮಾ ತಲಾ 3 ವಿಕೆಟ್‌ ಪಡೆದರು. ಬುಮ್ರಾ 2 ವಿಕೆಟ್‌, ದೀಪಕ್‌ ಚಹರ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ 1 ವಿಕೆಟ್‌ ಪಡೆದರು.
ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ, ರಯಾನ್‌ ರಿಕಲ್ಟನ್‌ ಭರ್ಜರಿ ಜೊತೆಯಾಟವಾಡಿ ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಆರ್‌ ತಂಡದ ಬೌಲರ್‌ಗಳು ವಿಫಲರಾದರು.ಪವರ್ ಪ್ಲೇನಲ್ಲಿ ಇವರಿಬ್ಬರ ಜೊತೆಯಾಟವು ಸ್ಟೇಡಿಯಂನಲ್ಲಿ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮುಂಬೈ ಇಂಡಿಯನ್ಸ್‌ ಮೊದಲ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಸಿಡಿಸಿತು.ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದು, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಓಟಾದರು.
ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿ, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಔಟಾದರು.
ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತೊಮ್ಮೆ ಅರ್ಧಶತಕ ಬಾರಿಸಿ ಮಿಂಚಿದರು. ಇವರು 36 ಎಸೆತಗಳಲ್ಲಿ 53 ರನ್‌ (9 ಬೌಂಡರಿ) ಬಾರಿಸಿ 12ನೇ ಓವರ್‌ನ 4ನೇ ಎಸೆತದಲ್ಲಿ ರಿಯಾನ್‌ ಪರಾಗ್‌ಗೆ ವಿಕಟ್‌ ಒಪ್ಪಿಸಿದರು. ಅದಾಗಲೇ ಮುಂಬೈ ತಂಡ 2 ವಿಕೆಟ್‌ ನಷ್ಟಕ್ಕೆ 123 ರನ್‌ ಕಲೆ ಹಾಕಿತ್ತು.
ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಮ್ಮ ಪವರ್‌ ಫುಲ್‌ ಹೊಡೆತಗಳಿಂದ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಿತು. ಈ ಜೋಡಿ ಕಟ್ಟಿ ಹಾಕುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಸವಾಲಾಯಿತು.
ಫಜಲ್‌ ಫರೂಕಿ ಅವರ 18ನೇ ಓವರ್ ಒಂದರಲ್ಲೇ 21 ರನ್‌ಗಳು ಹರಿದು ಬಂದಿದೆ. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 48 ರನ್‌ ಸಿಡಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಅಜೇಯ 48 ರನ್‌ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತ್ತು. ರಾಜಸ್ಥಾನ್‌ ಬೌಲರ್ಸ್‌ಗಳಾದ ಮಹೀಶ್ ತೀಕ್ಷಣ್‌, ರಿಯಾನ್‌ ಪರಾಗ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

* ಪಿಂಕ್‌ ಜೆರ್ಸಿ ಧರಿಸಿದ್ದ ರಾಜಸ್ಥಾನ್ ರಾಯಲ್ಸ್
ವಿಶೇಷವಾಗಿ ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣದ ಕಡೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಫ್ರಾಂಚೈಸಿ ಈ ಕ್ರಮ ತೆಗೆದುಕೊಂಡಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ ತಂಡದ ಆಟಗಾರರು ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಸತತ ಎಂಟನೇ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಸತತ ಎಂಟನೇ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್
* ಚಹಲ್ ಹ್ಯಾಟ್ರಿಕ್ – ಚೆನ್ನೈ ಪ್ಲೇ ಆಫ್‌ನಿಂದ ಔಟ್

NAMMMUR EXPRESS SPORTS NEWS
ಚೆನ್ನೈ: ಚೆಪಾಕ್ ಕ್ರೀಡಾಂಗಣದಲ್ಲಿ ಮಿಸ್ಟರಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರ ಮ್ಯಾಜಿಕ್ ಸ್ಪೆಲ್‌ಗೆ ಕುಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳಿಂದ ಸೋಲೊಪ್ಪಿಕೊಳ್ಳುವುದರೊಂದಿಗೆ ಐಪಿಎಲ್ ನ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 2 ಪಂದ್ಯವನ್ನು ಮಾತ್ರ ಗೆದ್ದಿರುವ ಚೆನ್ನೈ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಿದಲ್ಲೇ ಉಳಿದಿದೆ. ಹೀಗಾಗಿ ಇನ್ನು ಉಳಿದಿರುವ 4 ಪಂದ್ಯಗಳಲ್ಲಿ 4ನ್ನು ಗೆದ್ದರೂ ಪ್ಲೇ ಆಫ್ ಹಂತಕ್ಕೇರುವುದು ಅಸಾಧ್ಯ. ಇದೇವೇಳೆ ಪಂಜಾಬ್ ಕಿಂಗ್ಸ್ ಇದೀಗ ಆಡಿರುವ 10 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 13 ಅಂಕಗಳನ್ನು ಕಲೆ ಹಾಕಿ 2ನೇ ಸ್ಥಾನಕ್ಕೇರಿದೆ.
ಗೆಲ್ಲಲು 191 ರನ್ ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ಪ್ರಯಾಸಪಟ್ಟು ಕೇವಲ 2 ಚೆಂಡುಗಳಿರುವಾಗ ಗುರಿ ತಲುಪಿತು. ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಿಂದ 72 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಆರಂಭಿಕ ಪ್ರಭ್ ಸಿಮ್ರಾನ್ ಸಿಂಗ್ ಅವರು 36 ಎಸೆತಗಳಿಂದ 54 ರನ್ ಗಳಿಸಿದರು.ಚೆನ್ನೈ ಪರ ಖಲೀಲ್ ಅಹ್ಮದ್ ಮತ್ತು ಪತಿರಣ ಅವರು ತಲಾ 2 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಮತ್ತು ನೂರ್ ಅಹ್ಮದ್ ಉಳಿದೆರಡು ವಿಕೆಟ್‌ಗಳನ್ನು ಕಿತ್ತರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ಕೆ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಮಾರ್ಕೋ ಯಾನ್ಸನ್ ಆರಂಭದಲ್ಲೇ ಆಘಾತ ನೀಡಿದರು. ಶೇಖ್ ರಶೀದ್ (11) ಆಯುಷ್ ಮಾತ್ರೆ(7) ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡ ಚೆನ್ನೈಸಂಕಷ್ಟದಲ್ಲಿ ಸಿಲುಕಿತು. ದೊಡ್ಡ ಮೊತ್ತ ಗಳಿಸುವ ಸೂಚನೆ ನೀಡಿದ ಆಲ್ರೌಂಡರ್ ರವೀಂದ್ರ ಜಡೇಜಾ(17) ಅವರು ಸಹ ತಂಡದ ಮೊತ್ತ 48 ಆಗಬೇಕಾದರೆ ಪೆವಿಲಿಯನ್ ಸೇರಿಕೊಂಡದ್ದು ಚೆನ್ನೈಗೆ ದೊಡ್ಡ ಹೊಡೆತ ನೀಡಿತು. ಈ ಮಧ್ಯೆ ತಂಡವನ್ನು ಮೇಲೆತ್ತಿದ್ದು ಸ್ಯಾಮ್ ಕುರ್ರನ್ ಅವರ ಇನ್ನಿಂಗ್ಸ್ ಕೇವಲ 47 ಎಸೆತಗಳಿಂದ 88 ರನ್ ಗಳಿಸಿದ ಅವರು ಸಣ್ಣಪುಟ್ಟ ಜೊತೆಯಾಟಗಳೊಂದಿಗೆ ತಂಡದ ಮೊತ್ತವನ್ನು ದೊಡ್ಡ ಮೊತ್ತದೆಡೆಗೆ ಕೊಂಡೊಯ್ಯುವ ಉತ್ಸಾಹದಲ್ಲಿದ್ದರು. ಆದರೆ ಮಾರ್ಕೋ ಯಾನ್ಸನ್ ಅವರು ಈ ಯತ್ನಕ್ಕೆ ತಣ್ಣೀರೆರಚಿದರು. 9 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದ ಅವರು ಕೀಪರ್ ಇಂಗ್ಲಿಸಗೆ ಕ್ಯಾಚಿತ್ತು ಔಟಾದರು.
ನಂತರ ಯುಜುವೇಂದ್ರ ಚಹಲ್ ಆಡಿದ್ದೇ ಆಟವಾಯಿತು. ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಭೀತಿ ಹುಟ್ಟಿಸಿದ್ದ ಮಹೇಂದ್ರ ಸಿಂಗ್ ಧೋನಿ(11) ಅವರನ್ನು 19ನೇ ಓವರ್ ನ ಎರಡನೇ ಎಸೆತದಲ್ಲಿ ಔಟ್ ಮಾಡಿದ ಚಹಲ್ 4ನೇ ಎಸೆತದಲ್ಲಿ ದೀಪಕ್ ಹೂಡಾ), 5ನೇ ಎಸೆತದಲ್ಲಿ ಅನ್ಶುಲ್ ಕಾಂಭೋಜ್ ಮತ್ತು 6ನೇ ಎಸೆತದಲ್ಲಿ ನೂರ್ ಅಹ್ಮದ್ ಅವರನ್ನು ಬಲಿ ಪಡೆವ ಮೂಲಕ ಈ ಸೀಸನ್ ನ ಮೊದಲ ಹ್ಯಾಟ್ರಿಕ್ ಗಳಿಸಿದರು. ಇಡೀ ಓವರ್ ನಲ್ಲಿ ಅವರು ನಾಲ್ಕು ವಿಕೆಟ್ ಕಬಳಿಸಿದರು. ಇದಾದ ಬಳಿಕ ಕೊನೆಯವರಾಗಿ ಶಿವಂ ದುಬೆ ಅವರು ಅರ್ಶದೀಪ್ ಸಿಂಗ್ ಅವರ ಬೌಲಿಂಗ್ ನಲ್ಲಿ ಔಟಾದರು. ಕೇವಲ 6 ರನ್ ಗಳ ಅಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ 5 ವಿಕೆಟ್ ಗಳು ಉರುಳಿದವು.
ಪಂಜಾಬ್ ಕಿಂಗ್ಸ್ ಪರ ಚಹಲ್ 4 ವಿಕೆಟ್, ಅರ್ಶದೀಪ್ ಸಿಂಗ್ ಮತ್ತು ಮಾರ್ಕೋ ಯಾನ್ಸನ್ ತಲಾ 2 ವಿಕೆಟ್ ಪಡೆದರು. ಒಮರಾಜೈ ಮತ್ತು ಹರ್ ಪ್ರೀತ್ ಬ್ರಾರ್ ತಲಾ 1 ವಿಕೆಟ್ ಪಡೆದರು. ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಡೆಲ್ಲಿ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಕನಸು ಜೀವಂತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಡೆಲ್ಲಿ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
* ಪಂದ್ಯ ಗೆದ್ದು ಮೊದಲ ಸ್ಥಾನಕ್ಕೇರುವ ಡೆಲ್ಲಿ ಕನಸು ಭಗ್ನ

NAMMMUR EXPRESS SPORTS NEWS
ಡೆಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ 14 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ ಕನಸು ಜೀವಂತವಾಗಿದೆ. ಕೆಕೆಆರ್ ತಂಡ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಸೋಲನ್ನು ಎದುರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಿಗದಿತ 20 ಓವರ್‌ಗಳಲ್ಲಿ ಕೋಲ್ಕತ್ತಾ 9 ವಿಕೆಟ್ ಕಳೆದುಕೊಂಡರೂ 204 ರನ್‌ ಗಳಿಸಿತು. ಈ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕೆಕೆಆರ್ 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

* 7 ವರ್ಷಗಳ ಬಳಿಕ ಜಯಗಳಿಸಿದ ಕೆಕೆಆರ್
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 2017 ರ ನಂತರ ಕೆಕೆಆರ್ ತಂಡವು ಡೆಲ್ಲಿಯನ್ನು ಸೋಲಿಸಿದೆ. ಕೆಕೆಆರ್ ತಂಡ ಡೆಲ್ಲಿಗೆ 205 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಚೇಸಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯುವ ಬ್ಯಾಟರ್ ಅಭಿಷೇಕ್ ಪೊರೆಲ್ ಕೇವಲ 4 ರನ್ ಗಳಿಸಿ ಔಟಾದರು. ಬಳಿಕ ಬಂದ ಕರುಣ್ ನಾಯರ್ ಅವರು ಫಾಫ್ ಡು ಪ್ಲೆಸಿಸ್ ಜೊತೆಯಾದರು. ಈ ಜೋಡಿ ಡೆಲ್ಲಿ ತಂಡಕ್ಕೆ ಚೇತರಿಕೆ ನೀಡಿತು. ಉತ್ತಮವಾಗಿ ಆಡುತ್ತಿದ್ದ ಕರುಣ್ ನಾಯರ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, ಕೆಎಲ್ ರಾಹುಲ್ 7 ರನ್ ಗಳಿಸಿದಾಗ ದುರದೃಷ್ಟಕರ ರನೌಟ್‌ಗೆ ಬಲಿಯಾದರು.
ಡೆಲ್ಲಿ ತಂಡ 60 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಡು ಪ್ಲೆಸಿಸ್‌ಗೆ ನಾಯಕ ಅಕ್ಸರ್ ಪಟೇಲ್ ಬೆಂಬಲವಾಗಿ ನಿಂತು 23 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ಕೆಕೆಆರ್‌ ತಂಡಕ್ಕೆ ಸೋಲಿನ ಭಯ ಕಾಣಿಸಿದರು. ಆದರೆ ಇದಾದ ನಂತರ, ಸುನಿಲ್ ನರೈನ್ ಅವರ ಓವರ್ ಮಹತ್ವದ ತಿರುವು ನೀಡಿತು.
ಸುನಿಲ್ ನರೈನ್ ಒಂದೇ ಓವರ್‌ನಲ್ಲಿ ಅಕ್ಸರ್ ಪಟೇಲ್ (43) ಮತ್ತು ಟ್ರಿಸ್ಟಾನ್ ಸ್ಟಬ್ಸ್ (1) ಅವರ ವಿಕೆಟ್ ಕೆಡವಿದರು. ಇದಾದ ಬಳಿಕವೂ ನರೈನ್ ಡು ಪ್ಲೆಸಿಸ್ ಅವರನ್ನು 62 ರನ್‌ಗಳಿಗೆ ಔಟ್ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಮತ್ತೊಂದೆಡೆ ವರುಣ್ ಚಕ್ರವರ್ತಿ ಕೂಡ ತಮ್ಮ ಓವರ್‌ನಲ್ಲಿ ಸತತ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಡೆಲ್ಲಿ ಆಲ್‌ರೌಂಡರ್ ವಿಪ್ರಜ್ ನಿಗಮ್ 19 ಎಸೆತಗಳಲ್ಲಿ 38 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಕೆಕೆಆರ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಆದರೆ ಕೊನೆಯ ಓವರ್‌ನಲ್ಲಿ 5 ಎಸೆತಗಳಲ್ಲಿ 24 ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕೆಕೆಆರ್ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

14ರ ಹುಡುಗ ವಿಶ್ವ ಕ್ರಿಕೆಟ್ ಹೀರೋ!

14ರ ಹುಡುಗ ವಿಶ್ವ ಕ್ರಿಕೆಟ್ ಹೀರೋ!
– ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ
– ಶತಕ ಹೊಡೆದು ದೇಶದಲ್ಲಿ ಇತಿಹಾಸ ನಿರ್ಮಿಸಿದ 9ನೇ ಕ್ಲಾಸ್ ಹುಡುಗ

NAMMUR EXPRESS NEWS
ಜೈಪುರ: ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸ್‌ ಸಿಡಿಸುವ ಮೂಲಕ ರಾಜಸ್ಥಾನ 14 ವರ್ಷದ ಯುವ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದು ಇದೀಗ ಶತಕ ಹೊಡೆಯುವ ಮೂಲಕ ವಿಶ್ವ ಕ್ರಿಕೆಟ್ ಹೀರೋ ಆಗಿ ಮೆರೆಯುತ್ತಿದ್ದಾರೆ.
14 ವರ್ಷ, 23 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರವಾಗಿದ್ದಾರೆ. ಇದರ ಜೊತೆ ಮೊದಲ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ಸಿಕ್ಸ್‌ ಸಿಡಿಸಿದ ಕಿರಿಯ ಆಟಗಾರ ಎಂಬ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ರಾಜಸ್ಥಾನ ರಾಯಲ್ಸ್‌ ತಂಡದ ಯುವ ಬ್ಯಾಟರ್‌ 14 ವರ್ಷದ ವೈಭವ್ ಸೂರ್ಯವಂಶಿ IPLನಲ್ಲಿ ಅಬ್ಬರಿಸಿದ್ದಾನೆ. ‘ಈ ಬಾಲಕ ಐಪಿಎಲ್‌ನಲ್ಲಿ ಏನು ಮಾಡಬಲ್ಲʼ ಎಂಬ ಪ್ರಶ್ನಿಸಿದ್ದವರಿಗೆ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಉತ್ತರಿಸಿದ್ದಾನೆ. ಐಪಿಎಲ್‌ನಲ್ಲಿ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಮಿಂಚಿದ ವೈಭವ್‌, ಇದೀಗ 101 ರನ್ ಗಳಿಸಿ ಅತಿ ಕಿರಿಯ ವಯಸ್ಸಿನಲ್ಲೇ ಶತಕ ಸಿಡಿಸಿದ ದಾಖಲೆ ಬರೆದಿದ್ದಾನೆ. ವೈಭವ್‌ ಸೂರ್ಯವಂಶಿಯ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಬಾಲ್ಯದ ಕೋಚ್ ಮನೀಶ್ ಓಜಾ ಅವರ ಮಾರ್ಗದರ್ಶನ ಮತ್ತು ರಾಹುಲ್ ದ್ರಾವಿಡ್ ಅವರ ಬೆಂಬಲ ವೈಭವ್ ಯಶಸ್ಸಿಗೆ ಕಾರಣವಾಗಿದೆ.
14 ವರ್ಷ 32 ದಿನಗಳಲ್ಲಿ ಐಪಿಎಲ್‌ ಆಡಿದ್ದಲ್ಲದೆ, ಶತಕ ಸಿಡಿಸಿ ಮಿಂಚಿದ್ದಾರೆ. ಗುಜರಾತ್‌ ಟೈಟನ್ಸ್‌ ವಿರುದ್ಧದ ಶತಕ ಸಾಧನೆಯ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು. ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಶೀದ್ ಖಾನ್ ಮತ್ತು ಕರೀಂ ಜನತ್ ಅವರಂತಹ ಅಂತಾರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನು ದಂಡಿಸುವ ಮೂಲಕ ವೈಭವ್‌ ಎಲ್ಲರನ್ನೂ ಚಕಿತಗೊಳಿಸಿದರು.

– 5ನೇ ವಯಸ್ಸಿನಲ್ಲೇ ಕ್ರಿಕೆಟಿಗೆ ಕಾಲಿಟ್ಟಿದ್ದ ವೈಭವ್!

5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್, 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿದ್ದಾರೆ. 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.
2023 ರಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಸಿಡಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದರು.
ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ. ಇದರಿಂದಲೇ ವೈಭವ್ ಹೆಸರು ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಇದೀಗ ವಿಶ್ವದ ಗಮನ ಸೆಳೆದಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಜೈಪುರದಲ್ಲಿ ರನ್ ಮಳೆ – 14 ರ ಪೋರ ವೈಭವ್ ದಾಖಲೆಯ ಶತಕ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಜೈಪುರದಲ್ಲಿ ರನ್ ಮಳೆ – 14 ರ ಪೋರ ವೈಭವ್ ದಾಖಲೆಯ ಶತಕ
* ಗುಜರಾತ್ ಟೈಟಾನ್ಸ್ ವಿರುದ್ಧ ಜಯಗಳಿಸಿದ ರಾಜಸ್ಥಾನ್ ರಾಯಲ್ಸ್

NAMMMUR EXPRESS SPORTS NEWS
ಜೈಪುರ್: ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ರನ್ ಮಳೆಯೇ ಹರಿದಿದ್ದು,ಎರಡೂ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ರನ್‌ಗಾಗಿ ನಾ ಮುಂದು ತಾ ಮುಂದು ಎಂಬಂತೆ ಹಠಕ್ಕೆ ಬಿದ್ದಂತಿತ್ತು,ಈ ಪಂದ್ಯದಲ್ಲಿ ಕೊನೆಗೆ ರಾಜಸ್ಥಾನ್ ರಾಯಲ್ಸ್ ಬೃಹತ್ ಮೊತ್ತ ಚೇಸ್ ಮಾಡಿ ಗೆದ್ದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 210 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿರುವ ರಾಜಸ್ಥಾನಕ್ಕೆ ಯುವ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಅದರಲ್ಲೂ ಮೊದಲ ಐಪಿಎಲ್ ಸೀಸನ್ ಆಡುತ್ತಿರುವ 14 ವರ್ಷದ ವೈಭವ್ ತಮ್ಮ ಹೊಡಿಬಡಿ ಆಟದ ಮೂಲಕ ಗುಜರಾತ್ ಬೌಲರ್​ಗಳ ಬೆವರಿಳಿಸುವುದರೊಂದಿಗೆ ಕೇವಲ 17 ಎಸೆತಗಳಲ್ಲಿ ಅರ್ಧಶತಕ, ಕೇವಲ 35 ಬಾಲ್‌ಗಳಲ್ಲಿ ಶತಕ ಪೂರೈಸಿ ಈ ಸೀಸನ್​ನ ಅತಿ ವೇಗದ ಅರ್ಧಶತಕ,ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಗುಜರಾತ್ ಉತ್ತಮ ಮೊತ್ತ ಕಲೆಹಾಕಿತು. ಶುಭಮನ್ ಗಿಲ್, ಸಾಯ್ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಮತ್ತೆ ಮಿಂಚಿದರು. ಗಿಲ್ 50 ಎಸೆತಕ್ಕೆ 84 ರನ್ ಸಿಡಿಸಿದರೆ, ಬಟ್ಲರ್ 26 ಎಸೆತಗಳಲ್ಲಿ ಔಟಾಗದೆ 50 ರನ್ ಬಾರಿಸಿದರು. ಸಾಯ್ ಸುದರ್ಶನ್ 39 ರನ್ ಕೊಡುಗೆ ನೀಡಿದರು.

14 ರ ಪೋರ ಸೂರ್ಯವಂಶಿ ದಾಖಲೆಯ ಸುರಿಮಳೆ !!
14 ವರ್ಷದ ವೈಭವ್ ಸೂರ್ಯವಂಶಿ ಗುಜರಾತ್ ವಿರುದ್ದ ಕೇವಲ 35 ಎಸೆತಗಳಲ್ಲೇ ಶತಕ ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ. ಅವರಿಗೆ ಈಗ 14 ವರ್ಷ, 32 ದಿನ ವಯಸ್ಸು, 2013ರಲ್ಲಿ ಮಹಾರಾಷ್ಟ್ರದ ವಿಜಯ್ ಜೋಲ್ ತಮಗೆ 18 ವರ್ಷ 118 ದಿನಗಳಾಗಿದ್ದಾಗ
ಮುಂಬೈ ವಿರುದ್ಧ ಶತಕ ಬಾರಿಸಿದ್ದರು. ಅಲ್ಲದೆ ಐಪಿಎಲ್‌ನಲ್ಲಿ 2ನೇ ಅತಿ ವೇಗದ ಸೆಂಚುರಿ ದಾಖಲೆಯನ್ನೂ ಬರೆದಿದ್ದಾರೆ. ಐಪಿ ಎಲ್‌ನಲ್ಲಿ ಅತಿ ವೇಗದ ಶತಕದ ದಾಖಲೆ ಇರುವುದು ಕ್ರಿಸ್ ಗೇಲ್ ಹೆಸರಿನಲ್ಲಿ, ಅವರು 30 ಎಸೆತಗಳಲ್ಲೇ ಈ ಸಾಧನೆ ಮಾಡಿದ್ದರು.