Categories
ಕ್ರಿಕೆಟ್ ಕ್ರೀಡಾ ಸುದ್ದಿ

ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ
* ಸೇಡಿನ ಚಾಲೆಂಜ್‌ನಲ್ಲಿ ರಾಯಲ್ ಜಯಗಳಿಸಿದ ಬೆಂಗಳೂರು

NAMMMUR EXPRESS SPORTS NEWS
* ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ
ಮುಂಬೈ : ವೇಗಿ ಜಸ್‌ಪ್ರಿತ್‌ ಬುಮ್ರಾ ಅವರ ಮಾರಕ ದಾಳಿಗೆ ನಲುಗಿದ ಲಖನೌ ಸೂಪರ್‌ ಜೈಂಟ್ಸ್‌ ತಂಡ, ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ 54 ರನ್‌ಗಳ ಅಂತರದಿಂದ ಸೋಲು ಕಂಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿ ಎದುರಾಳಿ ತಂಡಕ್ಕೆ 216 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಲಖನೌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಿ 54 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅತಿಥೇಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬೃಹತ್‌ ಮೊತ್ತ ಪೇರಿಸಲು ರಿಕೆಲ್ಟನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಸಹಕರಿಸಿದರು.
ರಿಕೆಲ್ಟನ್‌ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಹಿತ 58 ರನ್‌ ಬಾರಿಸಿದರೇ, ಸೂರ್ಯಕುಮಾರ್‌ ಯಾದವ್‌ 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ 54 ರನ್‌ ಚಚ್ಚಿದರು.
ಉಳಿದಂತೆ ರೋಹಿತ್‌ ಶರ್ಮಾ 12(5), ವಿಲ್‌ ಜಾಕ್‌ 29(21), ತಿಲಕ್‌ ವರ್ಮಾ 6(5), ನಾಯಕ ಹಾರ್ದಿಕ್‌ ಪಾಂಡ್ಯ 5(7), ಕಾರ್ಬಿನ್‌ 20(10) ರನ್‌ ಗಳಿಸಿದರೇ, ನಮನ್‌ ಧಿರ್‌ ಔಟಾಗದೇ 25(11) ಹಾಗೂ ದೀಪಕ್‌ ಚಾಹರ್‌ ಒಂದು ರನ್‌ ಗಳಿಸಿ ಸ್ಕ್ರೀಜ್‌ನಲ್ಲಿಯೇ ಉಳಿದರು.
ಲಖನೌ ಪರ ಮಯಾಂಕ್‌ ಯಾದವ್‌ ಹಾಗೂ ಆವೇಶ್‌ ಖಾನ್‌ ತಲಾ ಎರಡು ವಿಕೆಟ್‌, ಪ್ರಿನ್ಸ್‌ ಯಾದವ್‌, ಬಿಷ್ಣೋಯ್‌ ಹಾಗೂ ದಿಗ್ವೇಶ್‌ ತಲಾ ಒಂದೊಂದು ವಿಕೆಟ್‌ ಪಡೆದರು.
ಮುಂಬೈ ನೀಡಿದ ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಲಖನೌಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಐಡೆನ್‌ ಮಾರ್ಕ್ರಂ 9(11) ವಿಕೆಟ್‌ ಬೇಗನೇ ಕಳೆದುಕೊಂಡಿತು. ಅಬ್ಬರದ ಬ್ಯಾಟಿಂಗ್‌ ಮಾಡುತ್ತಿದ ಮಿಚೆಲ್‌ ಮಾರ್ಷ್‌ 34(24), ನಿಕೋಲಸ್‌ ಪೂರನ್‌ 27(15) ರನ್‌ ಕಲೆಹಾಕಿದರು.
ಬಳಿಕ ಬಂದ ನಾಯಕ ರಿಷಬ್‌ ಪಂತ್‌ ಕೇವಲ ನಾಲ್ಕು ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಆಯೋಷ್‌ ಬದೋನಿ 35(22) ಹಾಗೂ ಡೇವಿಡ್‌ ಮಿಲ್ಲರ್‌ 24(16) ಕೊಂಚ ಅಬ್ಬರಿಸಿ ಮರೆಯಾದರು. ಈ ಜೋಡಿಯ ವಿಕೆಟ್‌ ಪತನದೊಂದಿಗೆ ಲಖನೌಗೆ ಸೋಲು ಕಂಡಿತು.
ಉಳಿದಂತೆ ಅಬ್ದುಲ್ ಸಮದ್‌ 2(4), ಬಿಷ್ಟೋಯ್‌ 13(14), ಆವೇಶ್‌ ಖಾನ್‌ ಡಕ್‌ ಔಟ್‌ ಆದರೇ, ಪ್ರಿನ್ಸ್‌ ಯಾದವ್‌ ನಾಲ್ಕು, ದಿಗ್ವೇಶ್‌ ಒಂದು ರನ್‌ ಗಳಿಸಿ ಔಟಾಗದೇ ಉಳಿದರು.
ಮುಂಬೈ ಪರ ಬುಮ್ರಾ ಪ್ರಮುಖ ನಾಲ್ಕು ವಿಕೆಟ್, ಟ್ರೆಂಟ್‌ ಬೌಲ್ಟ್‌ ಮೂರು ವಿಕೆಟ್‌, ವಿಲ್‌ ಜಾಕ್‌ ಎರಡು ವಿಕೆಟ್‌ ಪಡೆದು ಗಮನಸೆಳೆದರು.

* ಸೇಡಿನ ಚಾಲೆಂಜ್‌ನಲ್ಲಿ ರಾಯಲ್ ಜಯಗಳಿಸಿದ ಬೆಂಗಳೂರು
ಡೆಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರನಲ್ಲಿ ಡೆಲ್ಲಿ ವಿರುದ್ಧದ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಕಳೆದ ಬಾರಿ ತವರು ನೆಲದಲ್ಲಿ ಸೋತಿದ್ದ ಬೆಂಗಳೂರು ತಂಡ, ಈ ಬಾರಿ ಎದುರಾಳಿಯ ನೆಲದಲ್ಲಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ದೆಹಲಿ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ್ದ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪವರ್​ ಪ್ಲೇನಲ್ಲೇ 26 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್​ ಜೇಕಬ್​ ಬೆಥೆಲ್​ (12 ರನ್​) ನಿರ್ಗಮಿಸಿದ ಬೆನ್ನಲ್ಲೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​​ಗೆ ಬಂದ ಪಡಿಕ್ಕಲ್​ ಶೂನ್ಯಕ್ಕೆ ಪೆವಿಲಿಯನ್​ ಸೇರಿದರೆ, ರಜತ್​ ಪಾಟಿದಾರ್​ (6 ರನ್)​ ನಿರಾಸೆ ಮೂಡಿಸಿದರು. ಇದರಿಂದ ತಂಡದ ಮೇಲೆ ಒತ್ತಡ ಹೆಚ್ಚಿತು.ಆದರೆ ಈ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ಕೃನಾಲ್​ ಪಾಂಡ್ಯ ತಮ್ಮ ಅಮೋಘ ಬ್ಯಾಟಿಂಗ್​ ಪ್ರದರ್ಶನ ದಿಂದ ವಿರಾಟ್​ ಕೊಹ್ಲಿ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಇಬ್ಬರು 84 ಎಸೆತಗಳಲ್ಲಿ 119ರನ್​ ಬಾರಿಸಿದರು. ಕೊಹ್ಲಿ 47 ಎಸೆತಗಳಲ್ಲಿ 51 ರನ್​ ಬಾರಿಸಿ ನಿರ್ಗಮಿಸಿದರೇ, ಕೃನಾಲ್​ ಪಾಂಡ್ಯ 47 ಎಸೆತಗಳಲ್ಲಿ ಅಜೇಯವಾಗಿ 5 ಬೌಂಡರಿ ಮತ್ತು 4 ಸಿಕ್ಸರ್​ ಸಹಾಯದಿಂದ ಅಜೇಯವಾಗಿ 73ರನ್​ ಬಾರಿಸಿದರು. ಕೊಹ್ಲಿ ಬಿಳಿಕ ಬ್ಯಾಟಿಂಗ್​ಗೆ ಬಂದ ಟಿಮ್​ ಡೇವಿಡ್​ ಕೂಡ5 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್​ ಸಿಡಿಸಿದ ಅಜೇಯವಾಗಿ 19 ರನ್​ ಕಲೆಹಾಕಿದರು. ಇದರಿಂದಾಗಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಬೆಂಗಳೂರು ಪಡೆ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಕೆ.ಎಲ್. ರಾಹುಲ್ (41 ರನ್​) ಮತ್ತು ಟ್ರಿಸ್ಟಾನ್ ಸ್ಟಬ್ಸ್ (38 ರನ್​) ಹೊರತು ಪಡಿಸಿ ಉಳಿದ ಆಟಗಾರರು ಆರ್​ಸಿಬಿಯ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ ಬಹುಬೇಗ ಕ್ರೀಸ್​ ತೊರೆದರು. ಬೆಂಗಳೂರು ಪರ ಭುವನೇಶ್ವರ್ 3 ವಿಕೆಟ್ ಪಡೆದರೇ, ಹೆಜೆಲ್​ವುಡ್​ 2, ಯಶ್​ ದಯಾಲ್​, ಸುಯೇಶ್​ ಶರ್ಮಾ, ಕೃನಾಲ್​ ಪಾಂಡ್ಯ ತಲಾ ಒಂದು ವಿಕೆಟ್​ ಉರುಳಿಸಿದರು. ಈ ಗೆಲುವಿನೊಂದಿಗೆ ಬೆಂಗಳೂರು ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಕೋಲ್ಕತ್ತಾ ಹಾಗೂ ಪಂಜಾಬ್ ನಡುವಿನ ಪಂದ್ಯ ಮಳೆಗೆ ಬಲಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್-2025
* ಕೋಲ್ಕತ್ತಾ ಹಾಗೂ ಪಂಜಾಬ್ ನಡುವಿನ ಪಂದ್ಯ ಮಳೆಗೆ ಬಲಿ
* ಇತ್ತಂಡಗಳಿಗೂ ಒಂದೊಂದು ಅಂಕ, ಯಾರಿಗೆ ಲಾಭ,ಯಾರಿಗೆ ಕಷ್ಟ

NAMMMUR EXPRESS SPORTS NEWS
ಕೊಲ್ಕತ್ತಾ: ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯವು ಕೇವಲ 21 ಓವರ್​ಗಳಿಗೆ ಸೀಮಿತವಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪಡೆ ಕಷ್ಟಕರವಾಗಿದ್ದ ಪಿಚ್​ನಲ್ಲಿ 201 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು.
ಆ ಬಳಿಕ ಇನಿಂಗ್ಸ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ಒಂದು ಓವರ್​ನಲ್ಲಿ 7 ರನ್​ ಕಲೆಹಾಕಿತು. ಈ ವೇಳೆ ಸುರಿಯಾಲಾರಂಭಿಸಿದ ಭಾರೀ ಮಳೆಗೆ ಇಡೀ ಪಂದ್ಯವನ್ನು ರದ್ದುಗೊಳಿಸಲಾಯಿತು. ಪಂದ್ಯ ರದ್ದಾದ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.
ಒಂದು ವೇಳೆ ಈ ಪಂದ್ಯವು ನಡೆದಿದ್ದರೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿತ್ತು. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಬೃಹತ್ ಮೊತ್ತವನ್ನು ಚೇಸ್ ಮಾಡಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಮಳೆಯಿಂದಾಗಿ ಪಂಜಾಬ್ ಪಡೆ ಒಂದು ಅಂಕವನ್ನು ಕಳೆದುಕೊಂಡಿದೆ.

* ಪಂದ್ಯ ರದ್ದಾಗಿದ್ದು ಯಾರಿಗೆ ಲಾಭ?
ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯ ರದ್ದಾಗಿದ್ದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು,ಏಕೆಂದರೆ ಇತ್ತ ಪಂಜಾಬ್ ಕಿಂಗ್ಸ್ ತಂಡವು 9 ಪಂದ್ಯಗಳಿಂದ 11 ಅಂಕಗಳನ್ನು ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ 9 ಪಂದ್ಯಗಳಿಂದ 10 ಅಂಕಗಳನ್ನು ಗಳಿಸಿದೆ.
ಈ ಎರಡು ತಂಡಗಳಿಗೆ ಮುಂದಿನ ಪಂದ್ಯಗಳ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಲು ಉತ್ತಮ ಅವಕಾಶವಿದೆ. ಅಂದರೆ ಪ್ರಸ್ತುತ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 4ನೇ ಸ್ಥಾನದಲ್ಲಿದ್ದರೆ, ಮುಂಬೈ ಹಾಗೂ ಲಕ್ನೋ ಕ್ರಮವಾಗಿ 5ನೇ ಮತ್ತು 6ನೇ ಸ್ಥಾನಗಳಲ್ಲಿದೆ.
ಇಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೆಟ್ ರನ್ ರೇಟ್ +0.177 ಇದ್ದು, ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್ ರೇಟ್ +0.673 ಇದೆ. ಒಂದು ವೇಳೆ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದಿದ್ದರೆ ನೆಟ್ ರನ್ ರೇಟ್ ಉತ್ತಮಗೊಳ್ಳುತ್ತಿತ್ತು. ಆದರೆ ಇದೀಗ ಪಂಜಾಬ್ ಕಿಂಗ್ಸ್ ತಂಡವನ್ನು ಮುಂದಿನ ಪಂದ್ಯಗಳ ಮೂಲಕ ಹಿಂದಿಕ್ಕುವಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಉತ್ತಮ ಅವಕಾಶವಿದೆ.
ಏಕೆಂದರೆ ಉಭಯ ತಂಡಗಳು ಮುಂದಿನ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನೇ ಎದುರಿಸಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪ್ಲೇಆಫ್ ತಲುಪುವ ಸಾಧ್ಯತೆಗಳು ಹೆಚ್ಚಿವೆ.

* ಪಂಜಾಬ್​​ಗೆ ಪ್ಲಸ್ ಪಾಯಿಂಟ್ !!
ಒಂದು ವೇಳೆ ಪಂಜಾಬ್ ಕಿಂಗ್ಸ್ ತಂಡವು ಮುಂದಿನ 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿದರೆ 17 ಅಂಕಗಳೊಂದಿಗೆ ಸೇಫ್ ಹಂತ ತಲುಪುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಅಂದರೆ ಐಪಿಎಲ್​ನ ಪ್ಲೇಆಫ್ ಕಟ್ ಆಫ್ ಪಾಯಿಂಟ್ 16 ಅಂಕಗಳು. ಇದೀಗ 11 ಅಂಕಗಳನ್ನು ಹೊಂದಿರುವ ಪಂಜಾಬ್ ಪಡೆ ಮುಂದಿನ ಮೂರು ಪಂದ್ಯಗಳಲ್ಲಿ ಜಯಗಳಿಸಿದರೆ 17 ಅಂಕಗಳನ್ನು ಪಡೆದು ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.
ಒಂದು ವೇಳೆ ಮುಂದಿನ 5 ಮ್ಯಾಚ್‌ಗಳಲ್ಲಿ 2 ಗೆಲುವು ದಾಖಲಿಸಿದೂ ಪಂಜಾಬ್ ಕಿಂಗ್ಸ್ ಸೇಫ್ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಅಂದರೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ತಂಡ 14 ಅಂಕಗಳನ್ನು ಪಡೆಯುವಂತಹ ಸಂದರ್ಭ ಎದುರಾದರೆ, ಇತ್ತ ಪಂಜಾಬ್ ಕಿಂಗ್ಸ್ ತಂಡವು 15 ಅಂಕಗಳೊಂದಿಗೆ ಪ್ಲೇಆಫ್​ಗೆ ಪ್ರವೇಶಿಸಲು ಅವಕಾಶ ಇರುತ್ತದೆ.
ಆದರೆ ಎಲ್ಲಾ ತಂಡಗಳಿಗೆ ಇನ್ನೂ 5 ಪಂದ್ಯಗಳಿದ್ದು, ಹೀಗಾಗಿ ಪ್ಲೇಆಫ್​ಗೆ ಪ್ರವೇಶಿಸಲು ಪ್ರತಿಯೊಂದು ತಂಡಕ್ಕೂ ಉತ್ತಮ ಅವಕಾಶವಿದೆ. ಈ ಅವಕಾಶಗಳ ಮೂಲಕ ಯಾವ ತಂಡ ಯಾರನ್ನು ಹಿಂದಿಕ್ಕಿ ಮುಂದಿನ ಹಂತಕ್ಕೇರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಬದಲಾಗದ ಚೆನ್ನೈ ಹಣೆಬರಹ,ಹೈದ್ರಾಬಾದ್ ವಿರುದ್ಧ ಸೋಲು

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಬದಲಾಗದ ಚೆನ್ನೈ ಹಣೆಬರಹ,ಹೈದ್ರಾಬಾದ್ ವಿರುದ್ಧ ಸೋಲು
* ಪ್ಲೇ ಆಫ್ ಹಾದಿಯಿಂದ ಬಹುತೇಕ ಔಟ್ !

NAMMMUR EXPRESS SPORTS NEWS
ಚೆನ್ನೈ: ನಾಯಕ ಬದಲಾದರೂ, ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ಹಣೆಬರಹ ಮಾತ್ರ ಬದಲಾಗಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧವೂ ಸೋಲುವ ಮೂಲಕ ಧೋನಿ ಬಳಗದ ಪ್ಲೇ ಆಫ್ ಕನಸು ಬಹುತೇಕ ಕಮರಿದೆ. ಆಡಿರುವ 9 ಪಂದ್ಯಗಳಲ್ಲಿ 7 ಸೋಲು ಕಂಡಿರುವ ಚೆನ್ನೈ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಇನ್ನುಳಿದ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್ ತಲುಪುವುದು ಅಸಾಧ್ಯ ಎಂಬ ಪರಿಸ್ಥಿತಿಗೆ ಬಂದಿದೆ. ಇದೇ ವೇಳೆ 9ನೇ ಸ್ಥಾನಿಯಾಗಿದ್ದ ಸನ್ ರೈಸರ್ಸ್ ತಂಡ ಈ ಗೆಲುವಿನೊಂದಿಗೆ 6 ಅಂಕಗಳನ್ನು ಕೂಡಿಸಿದಂತಾಗಿದ್ದು 8ನೇ ಸ್ಥಾನಕ್ಕೇರಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 155 ರನ್‌ಗಳ ಸುಲಭ ಗುರಿ ಪಡೆದ ಹೈದರಾಬಾದ್ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಸನ್ ರೈಸರ್ಸ್ ಪರ ಇಶಾನ್ ಕಿಶನ್ 44, ಕಮಿಂಡು ಮೆಂಡಿಸ್ ಅಜೇಯ 32 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರು ಔಟಾಗದೆ 19 ರನ್ ಗಳಿಸಿದರು. ಇನ್ನು ಚೆನ್ನೈ ಬೌಲರ್‌ಗಳು 15 ರನ್‌ಗಳನ್ನು ಇತರೆ ರೂಪದಲ್ಲಿ ನೀಡಿದ್ದು ಹೈದರಾಬಾದ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಆ 15 ಇತರೆ ರನ್‌ಗಳಲ್ಲಿ 11 ವೈಡ್ ಗಳಿದ್ದವು. ಚೆನ್ನೈ ಪರ ನೂರ್ ಅಹ್ಮದ್ ಅವರು 42 ರನ್ ಗೆ 2 ವಿಕೆಟ್ ಗಳಿಸಿದರು.

* ಸೂಪರ್ ಕಿಂಗ್ಸ್‌ನ ಫ್ಲಾಪ್ ಶೋ
ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮೊಹಮ್ಮದ್ ಶಮಿ ಎಸೆದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಶೇಖ್ ರಶೀದ್(0) ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಸ್ಯಾಮ್ ಕುರ್ರನ್(9) ಅವರು ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಆಯುಷ್ ಮಾತ್ರೆ(30) ಮತ್ತು ರವೀಂದ್ರ ಜಡೇಜಾ(21) ಅವರು ಸ್ವಲ್ಪ ತಂಡದ ಚೇತರಿಕೆಗೆ ಸಹಕರಿಸಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಡಿವಾಲ್ಡ್ ಡೇವಿಸ್ (42) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್‌ಗಳೂ ಉತ್ತಮ ಪ್ರದರ್ಶನ ನೀಡಲಿಲ್ಲ. ಶಿವಂ ದುಬೆ(12), ನಾಯಕ ಧೋನಿ(6) ತಂಡದ ಸ್ಕೋರ್ ಏರಿಸುವಲ್ಲಿ ಸಂಪೂರ್ಣ ವಿಫಲರಾದರು. ದೀಪಕ್ ಹೂಡಾ 22 ರನ್ ಹೊಡೆದರೂ ಅದಕ್ಕಾಗಿ ತೆಗೆದುಕೊಂಡ ಎಸೆತ 22. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಸಾಧಾರಣ ಮೊತ್ತಕ್ಕೆ ಕುಸಿಯಿತು. ಸನ್ ರೈಸರ್ಸ್ ಪರ ಹರ್ಷಲ್ ಪಟೇಲ್ 4 ಮತ್ತು ಪ್ಯಾಟ್ ಕಮಿನ್ಸ್ ಮತ್ತು ಉನದ್ಕತ್ ತಲಾ 2 ವಿಕೆಟ್ ಪಡೆದರು. ಹರ್ಷಲ್ ಪಟೇಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಕೊನೆಗೂ ತವರಲ್ಲಿ ಗೆಲುವಿನ ಚಾಲೆಂಜ್ ಗೆದ್ದ ಆರ್‌ಸಿಬಿ
* ಕೊಹ್ಲಿ ಅದ್ಭುತ ಬ್ಯಾಟಿಂಗ್,ಹೇಜಲ್ ವುಡ್ ಮಾಂತ್ರಿಕ ಬೌಲಿಂಗ್

NAMMMUR EXPRESS SPORTS NEWS
ಬೆಂಗಳೂರು: ತವರಲ್ಲಿ ಒಂದೂ ಪಂದ್ಯ ಗೆಲ್ಲದೇ ಗೆಲುವಿಗಾಗಿ ಹಾತೊರೆಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ 11 ರನ್‌ಗಳ ರೋಚಕ ಗೆಲುವು ಸಾಧಿಸಿ ತವರಿನಲ್ಲಿ ಗೆಲುವಿನ ಬರ ನೀಗಿಸಿಕೊಂಡಿತು.
ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 70 ರನ್ ಮತ್ತು ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ 50 ರನ್‌ಗಳ ಅದ್ಭುತ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 205 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಎರಡನೇ ವಿಕೆಟ್‌ಗೆ ಈ ಜೋಡಿ 95 ರನ್‌ಗಳ ಅದ್ಭುತ ಜೊತೆಯಾಟವಾಡಿತು. ರಾಜಸ್ಥಾನ್ ಪರ ಸಂದೀಪ್ ಶರ್ಮಾ 45 ರನ್ ನೀಡಿ 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಹಲವು ಬಾರಿ ಪಂದ್ಯದ ಮೇಲೆ ಹಿಡಿತ ಸಾಧಿಸಿತಾದರೂ, ಆರ್‌ಸಿಬಿ ಬೌಲರ್‌ಗಳಾದ ಜೋಶ್ ಹೇಜಲ್ ವುಡ್ (4/33) ಮತ್ತು ಕೃನಾಲ್ ಪಾಂಡ್ಯ (2/31) ಅವರ ಶಿಸ್ತುಬದ್ಧ ಬೌಲಿಂಗ್ ರಾಜಸ್ಥಾನ್‌ ತಂಡವನ್ನು 194 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.
ಈ ಗೆಲುವು ಆರ್‌ಸಿಬಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ತಂಡವು ಮುಂದಿನ ಪಂದ್ಯಗಳಲ್ಲಿ ಇದೇ ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮುಂಬೈ ಆರ್ಭಟಕ್ಕೆ ತವರಲ್ಲೇ ನಲುಗಿದ ಹೈದ್ರಾಬಾದ್
* ಪಾಯಿಂಟ್ ಟೇಬಲ್‌ನಲ್ಲಿ ಆರ್‌ಸಿಬಿ ಹಿಂದಿಕ್ಕಿದ ಮುಂಬೈ

NAMMMUR EXPRESS SPORTS NEWS
ಹೈದ್ರಾಬಾದ್: ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ ಗಳಿಂದ ಬಗ್ಗು ಬಡಿದಿದೆ. ಸತತ ನಾಲ್ಕನೇ ಗೆಲುವು ಕಂಡಿರುವ ಮುಂಬೈ ಪಡೆ ಇದೀಗ ಅಂಕಪಟ್ಟಿಯಲ್ಲೂ ವ್ಯಾಪಕ ಜಿಗಿತ ಕಂಡಿದೆ. 6ನೇ ಸ್ಥಾನದಲ್ಲಿದ್ದ ಹಾರ್ದಿಕ್ ಪಾಂಡ್ಯ ಬಳಗ ಇದೀಗ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲಿನೊಂದಿಗೆ 10 ಅಂಕಗಳನ್ನು ಕಲೆ ಹಾಕಿದ್ದು 3ನೇ ಸ್ಥಾನಕ್ಕೇರಿದೆ. ಹೀಗಾಗಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 3ರಿಂದ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಂಬೈ ವಿರುದ್ಧ ಪರಾಭವಗೊಂಡ ಸನ್ ರೈಸರ್ಸ್ ತಂಡ ಆಡಿರುವ 8 ಪಂದ್ಯಗಳಿಂದ 2 ಗೆಲುವಿನೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 144 ರನ್ ಗಳ ಗುರಿ ಪಡೆದ ಮುಂಬೈ ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 26 ಎಸೆತಗಳು ಬಾಕಿ ಇರುವಂತೆ ಜಯಶಾಲಿಯಾಯಿತು. ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ರಾನ್ ರಿಕಲ್ಟನ್ ಅವರು ಬೇಗನೇ ಔಟಾದರೂ ರೋಹಿತ್ ಶರ್ಮಾ(70) ಮತ್ತು ವಿಲ್ ಜಾಕ್ಸ್(22) ತಂಡದ ಇನ್ನಿಂಗ್ಸ್ ಕಟ್ಟಿದರು. ವಿಲ್ ಜಾಕ್ಸ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ (40) ಅವರು ರೋಹಿತ್ ಶರ್ಮಾ ಅವರ ಜೊತೆ ಸೇರಿ ಹೈದರಾಬಾದ್ ಬೌಲರ್ ಗಳನ್ನು ಗೋಳು ಹೊಯ್ದುಕೊಂಡರು. ಈ ಸೀಸನ್ ನಲ್ಲಿ 2ನೇ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ 46 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 70 ರನ್ ಗಳನ್ನು ಚಚ್ಚಿದರು. ಇನ್ನು ಸೂರ್ಯಕುಮಾರ್ ಅವರು 19 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 40 ರನ್ ಗಳಿಸಿ ಅಜೇಯರಾಗುಳಿದರು.

* ಸನ್ ರೈಸರ್ಸ್ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ
ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಅಗ್ರಕ್ರಮಾಂಕದ ಟ್ರಾವಿಸ್ ಹೆಡ್ (0), ಇಶಾನ್ ಕಿಶನ್(1), ಅಭಿಷೇಕ್ ಶರ್ಮಾ(8)), ನಿತೀಶ್ ಕುಮಾರ್ ರೆಡ್ಡಿ(2), ಅನಿಕೇತ್ ವರ್ಮಾ(12) ಮೊದಲಾದ ಘಟಾನುಘಟಿ ಬ್ಯಾಟರ್‌ಗಳು ಮುಂಬೈ ಬೌಲರ್‌ಗಳ ದಾಳಿಯ ಮುಂದೆ ತರಗೆಲೆಗಳಂತೆ ಉದುರಿದರು ಪರಿಣಾಮ ಹೈದರಾಬಾದ್ ತಂಡ ಕೇವಲ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.
ಈ ಸಂದರ್ಭದಲ್ಲಿ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸನ್ ಜೊತೆ ಸೇರಿ ಕರ್ನಾಟಕದ ಅಭಿನವ್ ಮನೋಹರ್ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಇವರಿಬ್ಬರು 6ನೇ ವಿಕೆಟ್ ಗೆ ಮಹತ್ವದ 99 ರನ್ ಗಳ ಜೊತೆಯಾಟವಾಡಿದರು. ಹೆನ್ರಿಚ್ ಕ್ಲಾಸನ್ ಅವರು 44 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 71 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಅಭಿನವ್ ಮನೋಹರ್ ಅವರು 37 ಎಸೆತಗಳಿಂದ 2 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 43 ರನ್ ಗಳಿಸಿ ಬೌಲ್ಟ್ ಬೌಲಿಂಗ್ ನಲ್ಲಿ ಹಿಟ್ ವಿಕೆಟ್ ಆದರ. ಅಂತಿಮವಾಗಿ ಸನ್ ರೈಸರ್ಸ್ 8 ವಿಕೆಟ್ ನಷ್ಟಕ್ಕೆ 143 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 26 ರನ್ ಗೆ 4 ವಿಕೆಟ್ ಮತ್ತು ದೀಪರ್ ಚಾಹಲ್ 12 ರನ್ ಗಳಿಗೆ 2 ವಿಕೆಟ್ ಕಹಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಹಂಚಿಕೊಂಡರು. ಟ್ರೆಂಟ್ ಬೌಲ್ಟ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು

* ಇಂದಾದರು ತವರಲ್ಲಿ ಗೆಲ್ಲುತ್ತಾ ಆರ್‌ಸಿಬಿ
ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ಹಾಗೂ ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿದೆ. ತವರಿನಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯದಲ್ಲಿ ಸೋತಿರುವ ಆರ್‌ಸಿಬಿ ಇಂದಾದರೂ ತವರಲ್ಲಿ ಗೆಲ್ಲಲಿದೆಯಾ ಎಂಬ ಕುತೂಹಲವಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಲಕ್ನೋದಲ್ಲಿ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ
* ಮಿಂಚಿದ ರಾಹುಲ್,ಪೊರೆಲ್ , ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಭದ್ರ

NAMMMUR EXPRESS SPORTS NEWS
ಲಕ್ನೋ: ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕೆ.ಎಲ್ ರಾಹುಲ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಐಡೆನ್ ಮಾಕ್ರಂ 33 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ಉತ್ತಮ ಫಾರ್ಮ್‌ ಮುಂದುವರೆಸಿದರು. ಮಿಚೆಲ್ ಮಾರ್ಷ್ 45 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 87 ರನ್ ಕಲೆಹಾಕಿತು.
ನಂತರ ಬಂದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳು ಸತತವಾಗಿ ವಿಕೆಟ್ ಪಡೆಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕಟ್ಟಿಹಾಕಿದರು. ಕೊನೆಯ ಓವರ್ ಗಳಲ್ಲಿ ಆಯುಶ್ ಬದೋನಿ 21 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 159 ರನ್ ಗಳಿಸಲು ಕೊಡುಗೆ ನೀಡಿದರು.
ಅಚ್ಚರಿ ಎನ್ನುವಂತೆ ರಿಷಬ್ ಪಂತ್‌ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಎರಡು ಎಸೆತ ಎದುರಿಸಿದ ಅವರು ರನ್ ಗಳಿಸದೆ ಔಟಾದರು. ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಮುಕೇಶ್ ಕುಮಾರ್ 4 ಓವರ್‌ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಮತ್ತು ದುಷ್ಮಂತ್ ಚಮೀರಾ ತಲಾ 1 ವಿಕೆಟ್ ಪಡೆದರು.

* ಉತ್ತಮ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಪೊರೆಲ್, ಕೆ.ಎಲ್ ರಾಹುಲ್
160 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಸಾಧಾರಣ ಆರಂಭ ಪಡೆಯಿತು. ಕರುಣ್ ನಾಯರ್ 9 ಎಸೆತಗಳಲ್ಲಿ 15 ರನ್ ಗಳಿಸಿ ಬೇಗನೆ ಫೆವಿಲಿಯನ್ ಸೇರಿದರು. ಬಳಿಕ ಬಂದ ಕೆ.ಎಲ್ ರಾಹುಲ್ ಅಭಿಷೇಕ್ ಪೊರೆಲ್ ಜೊತೆ ಎರಡನೇ ವಿಕೆಟ್‌ಗೆ 69 ರನ್ ಕಲೆಹಾಕುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
ಅಭಿಷೇಕ್ ಪೊರೆಲ್ 36 ಎಸೆತಗಳಲ್ಲಿ 51 ರನ್ ಗಳಿಸಿ ಮಿಂಚಿದರು. ಕೆಎಲ್ ರಾಹುಲ್ ಕೂಡ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ 42 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 57 ರನ್ ಗಳಿಸಿ ಡೆಲ್ಲಿಗೆ ದಯ ತಂದುಕೊಟ್ಟರು. ನಾಯಕ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 34 ರನ್ ಗಳಿಸಿ ಮಿಂಚಿದರು.
ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಲಿದ್ದು ಪ್ಲೇಆಫ್ ಹಾದಿಯನ್ನು ಸುಲಭವಾಗಿಸಿಕೊಂಡಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಗುಜರಾತ್ ಟೈಟಾನ್ಸ್ ವಿರುದ್ಧ 39 ರನ್‌ಗಳಿಂದ ಸೋತ ಕೊಲ್ಕತ್ತಾ
* ಕೋಲ್ಕತ್ತಾ ಪ್ಲೇ ಆಫ್ ಹಾದಿ ಕಠಿಣ – ನಂ.1 ಸ್ಥಾನದಲ್ಲಿ ಗುಜರಾತ್

NAMMMUR EXPRESS SPORTS NEWS
ಕೋಲ್ಕತ್ತಾ: ಶುಭಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್ ಗಳ ಸಂಘಟಿತ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಅನ್ನು 39 ರನ್‌ಗಳಿಂದ ಸೋತಿದೆ. ಈ ಮೂಲಕ ಆಡಿರುವ 8 ಪಂದ್ಯಗಳಿಂದ 6 ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿರುವ ಗಿಲ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡ ಕೇವಲ 6 ಅಂಕಗಳೊಂದಿಗೆ 7ನೇ ಸ್ಥಾನದಲ್ಲೇ ಮುಂದುವರಿದಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 199 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ನೈಟ್ ರೈಡರ್ಸ್ ತಂಡ 8 ವಿಕೆಚ್ ಕಳೆದುಕೊಂಡು 159 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನಾಯಕ ಅಜಿಂಕ್ಯ ರಹಾನೆ ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ರಹಾನೆ ಅವರು 36 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 50 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾಗ ವಾಶಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮ ಹಂತದಲ್ಲಿ ರಿಂಕು ಸಿಂಗ್ ಮತ್ತು ಅಂಗರಿಕ್ಷ್ ರಘುವಂಶಿ ಕೆಲ ಉತ್ತಮ ಹೊಡೆತಗಳನ್ನು ಹೊಡದರೂ ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಗುಜರಾತ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ನರ್ ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು. ಇಶಾಂತ್ ಶರ್ಮಾ, ವಾಶಿಂಗ್ಟನ್ ಸುಂದರ್, ಸಾಯಿ ಕಿಶೋರ್ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ ಜೈಂಟ್ಸ್ ತಂಡ ಆರಂಭಿಕರಾದ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಅವರು ಶತಕದ ಜೊತೆಯಾಟ ಆಡುವುದರೊಂದಿಗೆ ಇನ್ನಿಂಗ್ಸ್ ಗೆ ಭದ್ರ ಬುನಾದಿ ಕಟ್ಟಿದರು. ಪವರ್ ಪ್ಲೇನಲ್ಲಿ ಎಚ್ಚರಿಕೆಯಿಂದ ಆಟವಾಡಿದ ಇವರಿಬ್ಬರು ಆ ಬಳಿಕ ವಿಕೆಟ್ ಉಳಿಸಿಕೊಂಡು ವೇಗದ ಆಟವಾಡಿದ ಪರಿಣಾಮ 12.2 ಓವರ್ ಗಳಲ್ಲಿ 114 ರನ್ ಗಳ ಜೊತೆಯಾಟವಾಡಿದರು. ಈ ವೇಳೆ 52 ರನ್ ಗಳಿಸಿದ್ದ ಸಾಯಿ ಸುದರ್ಶನ್ ಅವರು ರಸೆಲ್ ಬೌಲಿಂಗ್ ನಲ್ಲಿ ಕೀಪರ್ ಗುರ್ಬಾಝ್ ಗೆ ಕ್ಯಾಚಿತ್ತು ಔಟಾದರು. 36 ಎಸೆಚಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಆ ಬಳಿಕ ಜಾಸ್ ಬಟ್ಲರ್ ಅವರನ್ನು ಸೇರಿಕೊಂಡ ಶುಭ್ಮನ್ ಗಿಲ್ ಅವರೊಂದಿಗೂ 58 ರನ್ ಗಳ ಜೊತೆಯಾಟವಾಡಿದರು. ತಂಡದ ಮೊತ್ತ 172 ಆಗಿದ್ದಾಗ 90 ರನ್ ಗಳಿಸಿ ಶತಕದ ಕಡೆಗೆ ಹೊರಟಿದ್ದ ಗಿಲ್ ಅವರು ವೈಭವ್ ಆರೋರಾ ಎಶೆತದಲ್ಲಿ ರಿಂಕೂ ಸಿಂಗ್ ಗೆ ಕ್ಯಾಚಿತ್ತು ವೆಲಿವಿಯನ್ ಸೇರಿಕೊಂಡರು. 55 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದರು. ಈ ವಿಕೆಟ್ ಪತನದ ಬಳಿಕ ಕ್ರೀಸಿಗೆ ಆಗಮಿಸಿದ ರಾಹುಲ್ ತೆವಾಟಿಯಾ ಅವರು ಖಾತೆ ತೆರೆಯುವ ಮುನ್ನವೇ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜಾಸ್ ಬಟ್ಲರ್ ಮತ್ತು ಶಾರುಖ್ ಖಾನ್ ಅವರು ವಿಕೆಟ್ ಬೀಳದಂತೆ ನೋಡಿಕೊಂಡು ಸವಾಲಿನ ಮೊತ್ತಕ್ಕೆ ಕಾರಣರಾದರು. ಬಟ್ಲರ್ 23 ಎಸೆತಗಳಿಂದ 41 ರನ್ ಗಳಿಸಿದರೆ ಶಾರುಖ್ ಖಾನ್ 5 ಎಸೆತದಿಂದ 11 ರನ್ ಗಳಿಸಿದರು. ಕೋಲ್ಕತಾ ಪರ ವೈಭವ್ ಅರೋರಾ, ಹರ್ಷಿತ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ತಲಾ ಒಂದು ವಿಕೆಟ್ ಉರುಳಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಪಂಜಾಬ್ ತವರಲ್ಲೇ ಸೇಡು ತೀರಿಸಿಕೊಂಡ ಆರ್‌ಸಿಬಿ
* ಮುಂಬೈ ಎದುರು ಮಂಡಿಯೂರಿದ ಚೈನ್ನೈ

NAMMMUR EXPRESS SPORTS NEWS
* ಪಂಜಾಬ್ ತವರಲ್ಲೇ ಸೇಡು ತೀರಿಸಿಕೊಂಡ ಆರ್‌ಸಿಬಿ
ಪಂಜಾಬ್: ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳ ನಡುವೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಆರ್‌ಸಿಬಿ ತಂಡವು ಸುಲಭ ಗೆಲುವು ಸಾಧಿಸಿ ಪಂಜಾಬ್ ವಿರುದ್ಧ ತವರಲ್ಲಿ ಸೋತಿದ್ದ ಸೇಡು ತೀರಿಸಿಕೊಂಡಿತು. ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಪಂಜಾಬ್‌ಗೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ 18.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಆರ್​ಸಿಬಿಗೆ 7 ವಿಕೆಟ್​ಗಳ ಜಯ ತಂದುಕೊಟ್ಟರು.

* ಮುಂಬೈ ಎದುರು ಮಂಡಿಯೂರಿದ ಚೈನ್ನೈ
ಮುಂಬೈ: ಪ್ರಾರಂಭದಲ್ಲಿ ನಿರಂತರವಾಗಿ ಸೋಲುತ್ತಿದ್ದ ಮುಂಬೈ ಇಂಡಿಯನ್ಸ್ ಇದೀಗ ಗೆಲುವಿನ ಹಳಿಗೆ ಮರಳಿದ್ದು ಪ್ಲೇ ಆಫ್ ಮಾರ್ಗದಲ್ಲಿ ಉಳಿದ ತಂಡಗಳಿಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳನ್ನು ಕಾಣುತ್ತಿದೆ. ಇದೇವೇಳೆ ಕಳೆದ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟಾರೆ ಟೂರ್ನಿಯಲ್ಲಿ 6ನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲೂ ಕೊನೆ ಸ್ಥಾನದಲ್ಲಿ ಉಳಿದಿದೆ. ಭಾನುವಾರ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು 2ನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿ ಚೆನ್ನೈ ಕೈಯಿಂದ ಗೆಲುವನ್ನು ಕಸಿದುಕೊಂಡರು.

MI Vs CSK – ರೋಹಿತ್ ಶರ್ಮಾ ಘರ್ಜನೆಗೆ ಬೆಚ್ಚಿಬಿದ್ದ ಚೆನ್ನೈ: ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲೂ ಮೇಲಕ್ಕೇರಿದ ಮುಂಬೈ
ಪ್ರಾರಂಭದಲ್ಲಿ ನಿರಂತರವಾಗಿ ಸೋಲುತ್ತಿದ್ದ ಮುಂಬೈ ಇಂಡಿಯನ್ಸ್ ಇದೀಗ ಗೆಲುವಿನ ಹಳಿಗೆ ಮರಳಿದ್ದು ಪ್ಲೇ ಆಫ್ ಮಾರ್ಗದಲ್ಲಿ ಉಳಿದ ತಂಡಗಳಿಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳನ್ನು ತೋರಿದೆ. ಇದೇವೇಳೆ ಕಳೆದ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟಾರೆ ಟೂರ್ನಿಯಲ್ಲಿ 6ನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲೂ ಕೊನೇ ಸ್ಥಾನದಲ್ಲಿ ಉಳಿದಿದೆ. ಭಾನುವಾರ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು 2ನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿ ಚೆನ್ನೈ ಕೈಯಿಂದ ಗೆಲುವನ್ನು ಕಸಿದುಕೊಂಡರು.
ಗೆಲುವಿಗೆ 177 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನೂ 26 ಎಸೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ(76) ಮತ್ತು ಸೂರ್ಯಕುಮಾರ್ ಯಾದವ್ (68) ಅವರು ಮುರಿಯದ 2ನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರೋಹಿತ್ ಶರ್ಮಾ ಅವರು 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಗಳನ್ನು ಒಳಗೊಂಡ ಅಜೇಯ 76 ರನ್ ಬಾರಿಸಿದರು. ಅದೇ ರೀತಿ ಸೂರ್ಯಕುಮಾರ್ ಯಾದವ್ ಅವರು 30 ಎಸೆತಗಳಿಂದ 6 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಒಳಗೊಂಡ ಅಜೇಯ 68 ರನ್ ಬಾರಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಡೆಲ್ಲಿ ಮತ್ತು ರಾಜಸ್ಥಾನ್ ಪಂದ್ಯ ಟೈ – ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ
* ಗಾಯದಿಂದ ಅರ್ಧಕ್ಕೆ ತೆರಳಿದ ಸಂಜು ಸ್ಯಾಮ್ಸನ್

NAMMMUR EXPRESS SPORTS NEWS
ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಟೈ ಆಗಿದ್ದು, ನಂತರ ನಡೆದ ಸೂಪರ್ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್​ಗುರ್ಕ್ 9 ರನ್ ಗಳಿಸಿದಾಗ ಜೈಸ್ವಾಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಭಿಷೇಕ್ ಪೊರೆಲ್ 1 ಸಿಕ್ಸರ್, 5 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 49 ರನ್ ಗಳಿಸಿದಾಗ ಹಸರಂಗ ಬೌಲಿಂಗ್‌ನಲ್ಲಿ ಕ್ಯಾಚ್ ನೀಡುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. ಕರುಣ್ ನಾಯರ್ ಶೂನ್ಯಕ್ಕೆ ರನ್ ಔಟಾದರೆ,ನಂತರ ಬಂದ ಕೆಎಲ್ ರಾಹಲ್ ಎರಡು ಸಿಕ್ಸರ್,ಎರಡು ಬೌಂಡರಿಗಳೊಂದಿಗೆ 32 ಎಸೆತಗಳಲ್ಲಿ 38 ಮತ್ತು ನಾಯಕ ಅಕ್ಸರ್ ಪಟೇಲ್ 34 ರನ್ ಗಳಿಸಿದರು. ನಂತರ ತ್ರಿಸ್ಟನ್ ಸ್ಟುಬ್ಸ್ ಹಾಗೂ ಅಶುತೋಷ್ ಶರ್ಮಾ ಔಟಾಗದೆ ಕ್ರಮವಾಗಿ 34 ಮತ್ತು 15 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಸೇರಿಸಿತು. ರಾಜಸ್ಥಾನ ರಾಯಲ್ಸ್ ಪರ ಜೋಪ್ರಾ ಅರ್ಚರ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷ್ಣ ಮತ್ತು ವನಿದು ಹಸರಂಗ ತಲಾ ಒಂದೊಂದು ವಿಕೆಟ್ ಕಿತ್ತರು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 189 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 4 ಸಿಕ್ಸರ್, 3 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 51 ರನ್ ಮಾಡಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್ 31 ರನ್‌ಗಳಿಸಿದಾಗ ಗಾಯಗೊಂಡು ಅರ್ಧಕ್ಕೆ ಪಂದ್ಯದಿಂದ ರಿಟೈರ್ಡ್ ಹರ್ಟ್ ತೆಗೆದುಕೊಂಡರು. ಬಳಿಕ ಬಂದ ರಿಯಾನ್ ಪರಾಗ್ 8, ನಿತೀಶ್ ರಾಣಾ 51, ಧ್ರುವ ಜುರೆಲ್ 26 ಮತ್ತು ಶಿಮ್ರಾನ್ ಹೆಟ್ಮೆಯರ್ ಔಟಾಗದೇ 15 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್‌ಗಳಿಸಿ ಪಂದ್ಯ ಟೈ ಆಯಿತು.ನಂತರ ನಡೆದ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ 11ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡಿತು, ಡೆಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 13 ರನ್‌ಗಳಿಸಿ ಗೆಲುವು ಸಾಧಿಸಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ ನ್ಯೂಸ್

ಐಪಿಎಲ್ -2025

* ಲೋ ಸ್ಕೋರ್ ಚೇಸ್ ಮಾಡಲಾಗದೇ ಸೋತ ಕೆಕೆಆರ್
* ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ರನ್ ಮಾಡಿ ಗೆದ್ದ ಪಂಜಾಬ್
* ಚಹಲ್ ಚಮತ್ಕಾರಕ್ಕೆ ಕೆಕೆಆರ್ ಉಡೀಸ್

NAMMMUR EXPRESS SPORTS NEWS
ಮುಲ್ಲಾನ್ ಪುರ:ಕಳೆದ ವರ್ಷ ಐಪಿಎಲ್‌ನ ಈಡನ್ ಗಾರ್ಡನ್ ಕ್ರೀಡಾಂಗಡದಲ್ಲಿ ಕೆಕೆಆರ್ ವಿರುದ್ಧ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದು ದಾಖಲೆ ಬರೆದಿದ್ದ ಪಂಜಾಬ್ ಈ ಬಾರಿ ಅತಿ ಕಡಿಮೆ ಸ್ಕೋರ್ ಮಾಡಿ ರಕ್ಷಿಸಿಕೊಂಡ ದಾಖಲೆ ನಿರ್ಮಿಸಿದೆ.
18ನೇ ಆವೃತ್ತಿಯ ಐಪಿಎಲ್​ ಮತ್ತೊಂದು ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ.ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕೆಕೆಆರ್ ಬೌಲರ್‌ಗಳು ಪಂಜಾಬ್ ಬ್ಯಾಟ್ಸ್‌ಮನ್‌ಗಳ ಮೇಲೆ ಮಾರಕ ದಾಳಿ ಮಾಡಿದರು.ಇದರಿಂದ ತತ್ತರಿಸಿದ ಪಂಜಾಬ್ ತಂಡ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು. ಪಂಜಾಬ್ ಬ್ಯಾಟ್ಸ್‌ಮನ್‌ಗಳ ಪೈಕಿ ಪ್ರಭು ಸಿಮ್ರಾನ್ ಸಿಂಗ್ 30, ಪ್ರಿಯಾಂಶ್ ಆರ್ಯ 22 ಮತ್ತು ಶಶಾಂಕ್ ಸಿಂಗ್ 18 ರನ್ ಗಳಿಸಿದರು. ಕೆಕೆಆರ್ ಪರ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು.
ಸೂಪರ್ ಫಾರ್ಮ್‌ನಲ್ಲಿದ್ದ ಕೋಲ್ಕತ್ತಾ ತಂಡ ಈ ಕಡಿಮೆ ಸ್ಕೋರ್​ ಅನ್ನು ಸುಲಭವಾಗಿ ಚೇಸ್ ಮಾಡಿ ಗೆಲ್ಲುವ ನಿರೀಕ್ಷೆಯಲ್ಲಿತ್ತು, ಆದರೆ ಪಂಜಾಬ್ ತಂಡ ಅದ್ಭುತ ಬೌಲಿಂಗ್ ಮೂಲಕ ಕೆಕೆಆರ್​ ತಂಡವನ್ನು ಚಿಂದಿ ಉಡಾಯಿಸಿತು.ಕೆಕೆಆರ್​ನ ಆರಂಭಿಕ ಬ್ಯಾಟರ್​ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಸಿಂಗಲ್​ ಡಿಜಿಟ್​ಗೆ ಔಟಾದರೆ, ಅಂಗ್‌ಕ್ರಿಶ್, ರಘುವಂಶಿ 37 ರನ್‌ಗಳ ಇನ್ನಿಂಗ್ಸ್ ಪಂದ್ಯಕ್ಕೆ ಜೀವ ತುಂಬಿತು. ರಹಾನೆ ಕೂಡ 17 ರನ್ ಗಳಿಸಿದರು. ಆದರೆ ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಪಂಜಾಬ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು.ಬಳಿಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​ ಉರುಳಿದ ಪರಿಣಾಮ ಕೆಕೆಆರ್​ ಸೋಲನುಭವಿಸಿತು. ಪಂಜಾಬ್​ ಪರ ಯುಜುವೇಂದ್ರ ಚಹಲ್ ತನ್ನ ಚಮತ್ಕಾರಿ ಬೌಲಿಂಗ್‌ನಿಂದ 4 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಇದರೊಂದಿಗೆ ಪಂಜಾಬ್​ ಕಡಿಮೆ ಮೊತ್ತದ ಸ್ಕೋರ್​ ರಕ್ಷಿಸಿಕೊಂಡ ತಂಡವಾಗಿ ದಾಖಲೆ ಬರೆದಿದೆ.
ಇದಕ್ಕೂ ಮೊದಲು, ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತವನ್ನು ರಕ್ಷಿಸಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. 2009ರ ಐಪಿಎಲ್‌ನಲ್ಲಿ ಸಿಎಸ್‌ಕೆ 116/9 ಸ್ಕೋರ್ ಗಳಿಸಿತ್ತು. ಈಗ ಪಂಜಾಬ್ ಈ ದಾಖಲೆಯನ್ನು ಮುರಿದಿದೆ.