Categories
ತೀರ್ಥಹಳ್ಳಿ ಮಲ್ನಾಡ್ ಹೊಸನಗರ

ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರ ಮನೆಯಲ್ಲಿ ಧರ್ಮಸ್ಥಳ ಯಕ್ಷಗಾನ

ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರ ಮನೆಯಲ್ಲಿ ಧರ್ಮಸ್ಥಳ ಯಕ್ಷಗಾನ
ಮಾ.16ಕ್ಕೆ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ
– ಸರ್ವರಿಗೂ ಸ್ವಾಗತಿಸಿದ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿಯ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು ಇವರ ಮನೆ ಶ್ರೀ ಗಾಯತ್ರಿಯಲ್ಲಿ ಮಾರ್ಚ್ 16ರ ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟದ ಸೇವೆಯನ್ನು ಆಯೋಜಿಸಲಾಗಿದೆ.

ಮಾ.16ನೇ ತಾರೀಕು ಬೆಳಿಗ್ಗೆ 8ಗಂಟೆಗೆ ಮನೆಗೆ ಶ್ರೀ ಕ್ಷೇತ್ರದ ದೈವ ದೇವರ ಆಗಮನವಾಗಲಿದೆ. 11 ಗಂಟೆಗೆ ಗಣ ಹೋಮ,ಫಲ ನೈವೇದ್ಯ ಸಮರ್ಪಣೆ ಶ್ರೀ ಮಹಾ ಗಣಪತಿ ದೇವರಿಗೆ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಮನೆಯಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಚಂಡೆ ವಾದನ, ಮಂಗಳ ವಾದ್ಯ ಗೋಷ್ಠಿ, ಭಜನಾ ಕುಣಿತ ಮತ್ತೆ ಊರಿನ ಸಮಸ್ತ ನಾಗರಿಕರ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರದ ದೈವ ದೇವರ ವೈಭವದ ರಾಜ ಬೀದಿ ಮೆರವಣಿಗೆಯು ಪೂರ್ಣಕುಂಭ ಸ್ವಾಗತದೊಂದಿಗೆ ತೀರ್ಥಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಯಕ್ಷಗಾನ ಚೌಕಿಯಲ್ಲಿ ವಿರಾಜಮಾನರಾದ ಮೇಲೆ ಮೆರವಣಿಗೆಯು ಸಂಪನ್ನವಾಗಲಿದೆ.

ಸಂಜೆ 6.30ರಿಂದ ಎಸ್.ಆರ್.ಆರ್ ಮಿಲ್ ಕೇರಿಯ ಸುಬ್ರಮಣ್ಯ ಅವರ ಜಾತ್ರಾ ಮೈದಾನದಲ್ಲಿ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಎಂಬ ಪ್ರಸಂಗವನ್ನು ಕ್ಷೇತ್ರದ ದಿಗ್ಗಜ ಕಲಾವಿದರು ಆಡಿ ರಂಜಿಸಲಿದ್ದಾರೆ. ಈ ಯಕ್ಷಗಾನ ಆಟವು ಕಾಲಮಿತಿಯದ್ದಾಗಿರುವುದರಿಂದ ಸಂಜೆ 6.30ಕ್ಕೆ ಪ್ರಾರಂಭಿಸಿ ರಾತ್ರಿ 12.30ಕ್ಕೆ ಮಂಗಳ ಹಾಡಲಿದ್ದಾರೆ. ಈ ಎಲ್ಲಾ ದೇವತಾ ಕಾರ್ಯಗಳಿಗೆ ನೀವೆಲ್ಲರೂ ಸಕುಟುಂಬ ಸಮೇತರಾಗಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಮ್ಮೆಲ್ಲರಿಗೂ ಆದರದಿಂದ ಸ್ವಾಗತ ಕೋರುವವರು

ಶ್ರೀಮತಿ ಮೋಹಿನಿ ಎ ಆಚಾರ್ಯ, ಶ್ರೀ ಅನಂತಪದ್ಮನಾಭ
ಆಚಾರ್ಯ ಮತ್ತು ಮಕ್ಕಳು
ಹಾಗೂ ಸಿಬ್ಬಂದಿಗಳು ಶ್ರೀ ಗಾಯತ್ರಿ ಜ್ಯೂವೆಲ್ಲರ್ಸ್, ತೀರ್ಥಹಳ್ಳಿ

ಶ್ರೀಮತಿ ನಾಗವೇಣಿ
ಶ್ರೀ ರಾಜಗೋಪಾಲ ಆಚಾರ್ಯ ಮತ್ತು ಶೀರೂರು ಕುಟುಂಬಸ್ಥರು

ಶ್ರೀ ದಾಮೋಧರ ರಾವ್ ಮತ್ತು ಮಕ್ಕಳು ಹಾಗು ಪಡುಬಿದ್ರೆ ಕುಟುಂಬಸ್ಥರು

ಸರ್ವರಿಗೂ ಸುಸ್ವಾಗತ

Categories
ತೀರ್ಥಹಳ್ಳಿ ಮಲ್ನಾಡ್ ಹೊಸನಗರ

ನಾಗರಹಳ್ಳಿಯಲ್ಲಿ ನಾಗ ದೇವರಿಗೆ ವಿಶೇಷ ಪೂಜೆ

ನಾಗರಹಳ್ಳಿಯಲ್ಲಿ ನಾಗ ದೇವರಿಗೆ ವಿಶೇಷ ಪೂಜೆ
– ಮಾ. 12ರಿಂದ ಮಾ.16ರವರೆಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ನಾಗ ದರ್ಶನ
– ಸರ್ವರನ್ನು ಸ್ವಾಗತಿಸಿದ ಅರ್ಚಕ ವೃಂದ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಪ್ರತಿ ವರ್ಷದಂತೆ ಸರ್ಪದೋಷ ನಿವೃತ್ತಿಗೆ ನಾಗರಹಳ್ಳಿಯ ಶ್ರೀನಾಗೇಂದ್ರ ಸ್ವಾಮಿ ದೇವಾಲಯದಲ್ಲಿ ದಿನಾಂಕ 12 ಮಾರ್ಚ್ 2026ರಿಂದ ದಿನಾಂಕ 16 ಮಾರ್ಚ್ 2026ರವರೆಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ನಾಗದರ್ಶನ ಮತ್ತು ಶ್ರೀಸ್ವಾಮಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾ.12ರ ಗುರುವಾರದಂದು ಸರ್ಪ ಸಂಸ್ಕಾರ ಕ್ರಿಯೆ ಆರಂಭಗೊಳ್ಳಲಿದ್ದು, ದಿನಾಂಕ 16ರ ಸೋಮವಾರದಂದು ಪ್ರತಿಷ್ಠಾಹೋಮ ಪೂರ್ವಕ ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಬ್ರಾಹ್ಮಣ ಆರಾಧನೆ, ಶ್ರೀಸ್ವಾಮಿಗೆ ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ನಾಗದರ್ಶನವನ್ನು ಏರ್ಪಡಿಸಿದ್ದಾರೆ. ಸರ್ವರನ್ನು ಸ್ವಾಗತಿಸಲಾಗಿದೆ.

Categories
ಕೊಪ್ಪ ಮಲ್ನಾಡ್ ಶಿವಮೊಗ್ಗ ಹೊಸನಗರ

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಕೊಪ್ಪ: ಚೀಲಗಳಲ್ಲಿ ಗೋವಿನ ಕಳೆಬರ ಪತ್ತೆ: ಪ್ರತಿಭಟನೆ
– ಶಿವಮೊಗ್ಗ: ಕೊಲೆಯಾದ ಬಾಲಕನ ಕುಟುಂಬಕ್ಕೆ ವಿಜಯೇಂದ್ರ ಸಾಂತ್ವನ
– ಹೊಸನಗರ: ಕಳೆ ನಾಶಕ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ರಸ್ತೆಯ ಪಕ್ಕದಲ್ಲಿ ನಾಲ್ಕು ಚೀಲಗಳಲ್ಲಿ ಗೋವಿನ ಕಳೆಬರ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ಮತ್ತು ಕೊಪ್ಪ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಶಿವಪುರದಲ್ಲಿ ನಡೆದಿದೆ. ಎರಡು ತಿಂಗಳ ಹಿಂದೆ ಕೂಡ ಇದೇ ರೀತಿ ಗೋವಿನ ಕಳೆಬರವನ್ನು ಹಾಕಲಾಗಿತ್ತು ಎನ್ನುವ ಸಂಗತಿ ಕೂಡ ಈ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದೆ.

ಇಂತಹ ಘಟನೆಯಿಂದಾಗಿ ತೀವ್ರ ಆಕ್ರೋಶಗೊಂಡಿರುವ ಭಜರಂಗದಳದವರು ಸೋಮವಾರ ರಾಷ್ಟ್ರೀಯ ಹೆದ್ದಾರಿಯ ನಡುವೆ ಕುಳಿತು ಅರ್ಧ ಗಂಟೆಗಳಿಗೂ ಹೆಚ್ಚಿನ ಕಾಲ ಪ್ರತಿಭಟನೆಯನ್ನು ನಡೆಸಿದರು. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೊಪ್ಪ ಪೊಲೀಸರು, ರಸ್ತೆಯನ್ನು ತಡೆಗಟ್ಟಿ ಪ್ರತಿಭಟನೆಯನ್ನು ನಡೆಸುವುದರಿಂದ ಮುಂದಾಗುವ ಪರಿಣಾಮದ ಕುರಿತು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಸುವ ಮೂಲಕ, ಸಮಾಧಾನಪಡಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು “ಪದೇ ಪದೇ ಇದೇ ರೀತಿಯ ಘಟನೆ ನಡೆಯುತ್ತಿರುವುದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪೊಲೀಸರಿಗೆ ಆಗ್ರಹಪಡಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.

ಕಳೆ ನಾಶಕ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಹೊಸನಗರ: ರಿಪ್ಪನ್‌ಪೇಟೆ ಸಮೀಪದ ಕಗ್ಗಲಿ ಗ್ರಾಮದ ಯುವಕ ರಾಕೇಶ್ ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ. ಫೆಬ್ರವರಿ 24ರಂದು ಮನೆ ಸಮೀಪದ ಅಡಿಕೆ ತೋಟದಲ್ಲಿ ರಾಕೇಶ್ ವಿಷ ಸೇವಿಸಿ ಕುಸಿದುಬಿದ್ದಿದ್ದನ್ನು ಗಮನಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣವೇ ಅವರನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 2ರ ರಾತ್ರಿ 1.20ರ ಸುಮಾರಿಗೆ ರಾಕೇಶ್ ಮೃತಪಟ್ಟಿದ್ದಾರೆ. ದೂರಿನ ಪ್ರಕಾರ, ರಾಕೇಶ್ ಸುಮಾರು ಒಂದೂವರೆ ತಿಂಗಳ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು.

ಈ ಹಿನ್ನೆಲೆ ಅವರಿಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ಹಾಗೂ ಮಂಗಳೂರಿನ ಏನಪೋಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಪಘಾತ ಸ್ವತಃ ಸಂಭವಿಸಿದ್ದರಿಂದ ಈ ಕುರಿತು ಯಾವುದೇ ದೂರು ದಾಖಲಾಗಿರಲಿಲ್ಲ. ಚಿಕಿತ್ಸೆಯ ಬಳಿಕ ರಾಕೇಶ್ ಮನೆಗೆ ಮರಳಿದ್ದರೂ, ಮಾನಸಿಕವಾಗಿ ಮಂಕಾಗಿದ್ದು, ಹೆಚ್ಚಿನ ಸಮಯ ಮೌನವಾಗಿಯೇ ಕಳೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಮನೆಯ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಮತ್ತೆ ತಲೆಗೆ ಏಟು ಮಾಡಿಕೊಂಡಿದ್ದ ಘಟನೆ ಕೂಡ ನಡೆದಿದೆ ಎನ್ನಲಾಗಿದೆ. ಈ ಎಲ್ಲ ಘಟನೆಗಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ರಾಕೇಶ್ ಫೆಬ್ರವರಿ 24ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಕೊಲೆ: ಕುಟುಂಬಕ್ಕೆ ಸಾಂತ್ವನ ಹೇಳಿದ ವಿಜಯೇಂದ್ರ

ಶಿವಮೊಗ್ಗ: ಶಿವಮೊಗ್ಗದ ಸೂಳೆಬೈಲಿನಲ್ಲಿ ಅಪ್ರಾಪ್ತ ದುಷ್ಕರ್ಮಿಗಳಿಂದ ಹತ್ಯೆಯಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಂಕೇತ್ ಅವರ ಮನೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ತೆರಳಿ, ಇನ್ನೂ ತೀವ್ರ ಆಘಾತದಲ್ಲಿರುವ ಅವರ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಹಲ್ಲೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಮತ್ತೋರ್ವ ವಿದ್ಯಾರ್ಥಿ ಗಿರೀಶ್ ಅವರ ಮನೆಗೂ ತೆರಳಿ, ಆತನಿಗೂ, ಆತನ ಕುಟುಂಬದವರಿಗೂ ಧೈರ್ಯ ತುಂಬಲಾಯಿತು. ನಾಗರಿಕ ಸಮಾಜ ಬೆಚ್ಚಿ ಬೀಳುವಂತೆ, ಅಪ್ರಾಪ್ತರೇ ಕೊಲೆ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದ್ದು, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ, ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಪೊಲೀಸ್ ಮತ್ತು ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಅಗ್ರಹಿಸಿದ್ದಾರೆ.

Categories
ಮಲ್ನಾಡ್ ಶಿವಮೊಗ್ಗ ಹೊಸನಗರ

ಘಾಟಿಯಲ್ಲಿ ಮತ್ತೊಂದು ಬಸ್ಸಿಗೆ ಬೆಂಕಿ!

ಘಾಟಿಯಲ್ಲಿ ಮತ್ತೊಂದು ಬಸ್ಸಿಗೆ ಬೆಂಕಿ!
– ಬಸ್ ಸಂಪೂರ್ಣ ಬೆಂಕಿಗೆ ಆಹುತಿ: ಅಪಾಯದಿಂದ ಪಾರು
– ಹೊಸನಗರದಲ್ಲಿ ಎರಡನೇ ಘಟನೆ: ಎಚ್ಚರಿಕೆ ಕರೆ ಗಂಟೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಕುಂದಾಪುರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿ ಅವಘಡಕ್ಕೆ ಒಳಗಾದ ಘಟನೆ ಶನಿವಾರದಂದು ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ನಡೆದಿದೆ.

ಕುಂದಾಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಮಾಲಿಕತ್ವದ ಬಸ್ ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತ ಚಾಲಕರು ನಿರ್ವಾಹಕರು ಮತ್ತು ಪ್ರಯಾಣಿಕರು ಬಸ್ ನಿಂದ ಕೆಳಗೆ ಇಳಿದುದರ ಪರಿಣಾಮವಾಗಿ ಎಲ್ಲರೂ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಗೆ ಬಸ್ ಸಂಪೂರ್ಣವಾಗಿ ಆಹುತಿಯಾಗಿದೆ. ಎಲ್ಲರೂ ಅಪಾಯದಿಂದ ಪಾರು ಆಗಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ಶನಿವಾರ ಮಧ್ಯಾಹ್ನ ಕುಂದಾಪುರದಿಂದ ಶಿವಮೊಗ್ಗ ಹೋಗುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸಂಪೂರ್ಣ ಬಸ್ ಗೆ ಬೆಂಕಿ ಆವರಿಸಿದೆ. ಬಸ್ ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ 30 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಆರಂಭದಲ್ಲಿ ಇಂಜಿನ್ ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡು ನಂತರ ಬಸ್ ಗೆ ಸಂಪೂರ್ಣ ಬೆಂಕಿ ಹತ್ತಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಬೆಂಕಿ ಬಿದ್ದಿತ್ತು!

ಕಳೆದ ಕೆಲವು ತಿಂಗಳುಗಳ ಹಿಂದೆ ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಕೂಡ ಬೆಂಕಿಗೆ ಆಹುತಿಯಾಗಿ ಹಲವರು ಗಾಯಗೊಂಡ ಘಟನೆ ಇನ್ನೂ ಮಾಸಿಲ್ಲ. ಅದರ ಬೆನ್ನಲ್ಲೇ ಈ ಘಟನೆ ಜನರಲ್ಲಿ ಆತಂಕವನ್ನು ಮೂಡಿಸಿದೆ.

ಪ್ರಯಾಣಿಕರಿಗೆ ಸುರಕ್ಷತೆ ಹೇಗೆ..?

ದೂರದ ಪ್ರಯಾಣಕ್ಕೆ ಖಾಸಗಿ ಬಸ್ ಗಳನ್ನು ಚಾಲನೆಗೆ ಸಿದ್ಧಗೊಳಿಸುವ ಮೊದಲು ತಾಂತ್ರಿಕವಾಗಿ ಸೇರಿದಂತೆ ಕೆಲವು ಪರಿಶೀಲನೆಗಳನ್ನು ನಡೆಸುವ ಮೂಲಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಗತ್ಯ. ಇಲ್ಲದಿದ್ದಲ್ಲಿ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ಪ್ರಾಣಾಪಾಯಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಬೆಂಕಿ ಸಂಪೂರ್ಣ ಬಸ್ ಗೆ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲು ಆಗಿದೆ.

‎
‎

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಯಡೂರು ಕ್ರಿಕೆಟ್ ಲೀಗ್ ರಂಗು: ಮಾದರಿಯಾದ ಟೂರ್ನಿ!

ಯಡೂರು ಕ್ರಿಕೆಟ್ ಲೀಗ್ ರಂಗು: ಮಾದರಿಯಾದ ಟೂರ್ನಿ!
– 2 ದಿನಗಳ ಕಾಲ ಕ್ರಿಕೆಟ್ ಮಹಾ ಹಬ್ಬ: ಆಟದ ಜತೆ ಸಮಾಜಸೇವೆ
– ಯಡೂರಿಗೆ ಬರಲಿದ್ದಾರೆ ಗಣ್ಯರ ದಂಡು: ಸರ್ವರಿಗೂ ಸ್ವಾಗತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ/ತೀರ್ಥಹಳ್ಳಿ: ಹೊಸನಗರ ತೀರ್ಥಹಳ್ಳಿ ತಾಲೂಕುಗಳ ಗಡಿ ಭಾಗ ಯಡೂರಿನಲ್ಲಿ ಯಡೂರು ಕ್ರಿಕೆಟ್ ಲೀಗ್ ಸೀಸನ್ 8 ಫೆ. 21, 22ರಂದು ಸುಳುಗೋಡು-ಯಡೂರು ಗ್ರಾಮದ ವಿ.ಟಿ. ಮೈದಾನದಲ್ಲಿ ನಡೆದಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯಿತು. ಯಡೂರು ಸುಳುಗೋಡು ಗ್ರಾಮ ಪಂಚಾಯತ್ ಅನ್ನು ಹೊಸನಗರ ತಾಲೂಕಿನಿಂದ ತೀರ್ಥಹಳ್ಳಿ ತಾಲೂಕಿಗೆ ಸೇರಿಸಿ ಎಂಬ ಅಗ್ರಹ ಇದೇ ವೇದಿಕೆಯಲ್ಲಿ ವ್ಯಕ್ತವಾಯಿತು.

ಫೆ. 21ರ ಶನಿವಾರ ಟೂರ್ನಿಯನ್ನು ಉದ್ಘಾಟನೆ ಮಾಡಲಾಯಿತು. ಎರಡು ದಿನಗಳ ವೇದಿಕೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆದಿದ್ದು, ಭಾಗವಹಿಸಿದ ಎಲ್ಲರೂ ವೈ.ಸಿ.ಎಲ್ ತಂಡದ ಸಾಮಾಜಿಕ ಸೇವೆ ಬಗ್ಗೆ ಮೆಚ್ಚುಗೆ ಮಾತನಾಡಿದರು. ಉದ್ಘಾಟನೆ ವೇಳೆ ಸತೀಶ್ ಈರೇಗೌಡ, ಡಾಕ್ಟರ್ ಸುನೀಲ್ , ಶ್ರುತಿ ಡಾಕಪ್ಪ, ಲೋಹಿತ್ಇದ್ದರು.

ಸಮಾರೋಪದಲ್ಲಿ ಊರಿನ ಪ್ರಮುಖರಾದ ಭಾಸ್ಕರ ಜೋಯ್ಸ, ಶಂಕರಪ್ಪ ಗೌಡ, ಸಹ್ಯಾದ್ರಿ ಪಾಲಿಟೆಕ್ನಿಕ್ ಅನಿತಾ ನಾಗರಾಜ್, ವಕೀಲ ಶಶಾಂಕ ಕೊಳವಾಡಿ, ಉದ್ಯಮಿಗಳಾದ ಆದಿತ್ಯ ಕಿಮ್ಮನೆ, ಯುವ ಸಹಕಾರಿ ಅಜಿತ್ ಗೌಡ, ಕೃಷಿಕರಾದ ಮೂರ್ತಿಗೌಡ , ರಾಘವೇಂದ್ರ ( ನಮ್ಮೂರ್ ಎಕ್ಸ್ಪ್ರೆಸ್ ಮುಖ್ಯಸ್ಥರು ), ಶ್ರುತಿ ಡಾಕಪ್ಪ ನ್ಯೂಸ್ 18,  ರಾಜುಗೌಡ ಕೋಣಂದೂರು, ಕಲ್ಪನಾ ಖುಷಿ, HG, ಡಾ ಸುನೀಲ್, ಡಾ ಪ್ರತೀಕ್, ಸಂದೀಪ್ ಈಚಲಬೈಲ್, ಅನಿಲ್ ಗೋವಿನ ಹಳ್ಳಿ, YCL ನ ಹತ್ತು ತಂಡದ ಮಾಲೀಕರು ಹಾಜರಿದ್ದರು. ಆಯೋಜಕರಾದ ಪ್ರೇಮ್ ಯಡೂರು, ಸುಂದರೇಶ್ ಯಡೂರು, ಚಿದಾನಂದ್, ವಿನಯ್ ಸೇರಿ ಸರ್ವರೂ ಇದ್ದರು.

ಸಾಧಕರಿಗೆ ಸನ್ಮಾನ: ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿಷ್ಠಿತ ರೋಲ್ಸ್ ರಾಯ್ ಕಂಪನಿಯಲ್ಲಿ ಕೆಲಸ ಪಡೆದುಕೊಂಡ ಹೆಮ್ಮೆಯ ಕನ್ನಡತಿ ಕುಮಾರಿ ರಿತುಪರ್ಣ ಸುರೇಶ್, ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದುಕೊಂಡ ಬಂಗ್ಲಗಲ್ಲು ಕುಮಾರಿ ನಿಧಿ ಬಿ.ಕೆ ಅವರನ್ನು ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ವಿ ರಾಕ್ಸ್ ತಂಡದ ನೃತ್ಯ ಕಾರ್ಯಕ್ರಮ ನಡೆಯಿತು. ಪಟಾಕಿ ಪ್ರದರ್ಶನ ಗಮನ ಸೆಳೆಯಿತು.

ಗೆದ್ದವರು ಯಾರು..?
– ಪ್ರಥಮ ಸ್ಥಾನವನ್ನು ಮಲ್ನಾಡ್ ಫಾರ್ಮರ್ಸ್ ತಂಡ
– ಎರಡನೇ ಸ್ಥಾನ ಪಡೆದ ಯಡೂರು ಲಯನ್ಸ್ ತಂಡ
– ಮೂರನೇ ಸ್ಥಾನ ಪಡೆದ ಲಚ್ಚಿ ಬ್ರದರ್ಸ್ ತಂಡ
– ನಾಲ್ಕನೇ ಸ್ಥಾನ ಪಡೆದ ಹನಿ ಸ್ಟ್ರೈಕರ್ ತಂಡ

ಅಚ್ಚುಕಟ್ಟಿನ ಆಯೋಜನೆಗೆ ಹೆಸರು!

ಕ್ರಿಕೆಟ್ ಜತೆಗೆ ಸಾಮಾಜಿಕ ಸೇವೆ ಕೆಲಸ ಮಾಡುವ ಕೆಲಸವನ್ನು ಈ ಯಡೂರು ಹುಡುಗರು 8 ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ. ಬರೀ ಕ್ರಿಕೆಟ್ ಸೀಮಿತವಾಗದೆ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಯಡೂರು ಪ್ರೇಮ್, ಸುಂದರೇಶ್ ಸೇರಿ 25ಕ್ಕೂ ಹೆಚ್ಚು ಮಂದಿ ಸ್ನೇಹಿತರು ಈ ಕೆಲಸ ಮಾಡುತ್ತಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ತೀರ್ಥಹಳ್ಳಿ, ಕೋಣಂದೂರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕು!

ತೀರ್ಥಹಳ್ಳಿ, ಕೋಣಂದೂರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕು!
– ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ
– ಕೋಣಂದೂರಲ್ಲಿ ಹೊಸ ಬಸ್ ನಿಲ್ದಾಣ: ಸ್ಥಳೀಯ ಪ್ರಮುಖರ ಸಾಥ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣ ಮತ್ತು ಕೋಣಂದೂರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡಲಾಯಿತು.
ಮಲೆನಾಡು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಚಾಲನೆ ನೀಡಿ, 15 ಲಕ್ಷ ರೂಪಾಯಿಯಲ್ಲಿ ಒಳ್ಳೆಬಸ್ ನಿಲ್ದಾಣ ನಿರ್ಮಾಣ ಆಗಲಿದೆ. ತೀರ್ಥಹಳ್ಳಿ ಸುಂದರವಾದ ಊರು. ಅದು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡೋಣ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಸಹಕಾರ ನಾಯಕ ವಿಜಯದೇವ, ಉಪಾಧ್ಯಕ್ಷೆಯಾದ ಗೀತಾ ರಮೇಶ್, ಮುಖ್ಯ ಅಧಿಕಾರಿ ನಾಗರಾಜ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರಹಮತ್ ಉಲ್ಲಾ ಅಸಾದಿ, ಜ್ಯೋತಿ ಮೋಹನ್, ಸುಶೀಲಾ ಶೆಟ್ಟಿ, ಮಂಜುಳಾ ನಾಗೇಂದ್ರ, ಶಬನಮ್, ಸಂದೇಶ್ ಜವಳಿ, ರಾಘವೇಂದ್ರ ಶೆಟ್ಟಿ,, ಜಿನಾ ವಿಕ್ಟರ್, ಸುಂದರೇಶ್ ಮೊದಲಾದವರು ಉಪಸ್ಥಿತರಿದ್ದರು.

ಕೋಣಂದೂರಲ್ಲಿ ಬಸ್ ನಿಲ್ದಾಣಕ್ಕೆ ಚಾಲನೆ

ಕೋಣಂದೂರು: ತೀರ್ಥಹಳ್ಳಿ ಬಳಿಕ ಅತೀ ವೇಗವಾಗಿ ಬೆಳೆಯುತ್ತಿರುವ ತಾಲೂಕಿನ ಪ್ರಮುಖ ಪಟ್ಟಣ ಕೋಣಂದೂರಿನಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ 10 ಲಕ್ಷ ಮೊತ್ತದಲ್ಲಿ ಬಸ್ ನಿಲ್ದಾಣ ಮಂಜೂರು ಆಗಿದೆ. ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಶಾಸಕ ಜ್ಞಾನೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಉದ್ಯಮಿಗಳಾದ ಪ್ರಕಾಶ್ ಅವರು ವಹಿಸಿದ್ದರು . ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ರುಕ್ಮಣ್ ಗೌಡ ಸಹಕಾರ ಸಂಘದ ಅಧ್ಯಕ್ಷರಾದ ಸುರೇಶ್ ಕಂಪ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಅಸಾದಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗಳಾದ ಪೂರ್ಣೇಶ್ ಕೆ ಸಿ ರತ್ನಾಕರ್ ಕಲಗದ್ದೆ ವಿಶಾಲಾಕ್ಷಿ ಪ್ರಪುಲ್ ಚಂದ್ರ ಹಾಗೂ ಎಲ್ಲಾ ಗೌರವಾನ್ವಿತ ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತಿ ಇದ್ದರು.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

45 ಯಕ್ಷಗಾನ ಪ್ರಸಂಗ ಪ್ರದರ್ಶನ.. 700 ಕಲಾವಿದರು!

45 ಯಕ್ಷಗಾನ ಪ್ರಸಂಗ ಪ್ರದರ್ಶನ.. 700 ಕಲಾವಿದರು!
– ಪಟ್ಲ ಫೌಂಡೇಶನ್ ಆಶ್ರಯದಲ್ಲಿ ಹೊಸ ನಗರದಲ್ಲಿ ವಿಶೇಷ ಕಾರ್ಯಕ್ರಮ
– ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸನ್ಮಾನ: ನಗರ ರಾಘವೇಂದ್ರ ಅವರಿಂದ ಆಯೋಜನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಪಟ್ಲ ಫೌಂಡೇಶನ್ ಆಶ್ರಯದಲ್ಲಿ ಶನಿವಾರದಂದು ಗಾಯಿತ್ರಿ ಮಂದಿರದಲ್ಲಿ, ರಾಮಶೇಟ್ ಮತ್ತು ಮಾರ್ಕೊಡು ಸುಬ್ರಾಯ ಆಚಾರ್ಯ ವೇದಿಕೆಗಳಲ್ಲಿ 45 ಪ್ರಸಂಗಗಳ ಯಕ್ಷಗಾನವು ಸುಮಾರು 700ಕ್ಕೂ ಹೆಚ್ಚು ಕಲಾವಿದರಿಂದ ಪ್ರದರ್ಶನ ಕಂಡಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ಕಳೆದ ಎರಡು ವರ್ಷಗಳಿಂದ 50 ಶಾಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಪಟ್ಲ ಫೌಂಡೇಶನ್ ಮುಖಾಂತರ ಯಕ್ಷ ಶಿಕ್ಷಣ ನೀಡಿ, ಅವರ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಕಲಾವಿದರ ಭವಿಷ್ಯಕ್ಕೆ ಆಶಾಕಿರಣವಾಗಿದ್ದಾರೆ ಎಂದರು.

ಆರ್.ಎಂ.ಮಂಜುನಾಥಗೌಡ, ಶ್ರೀರಾಮಕೃಷ್ಣ ವಿದ್ಯಾಸಂಸ್ಥೆ, ಇತರ ಶಾಲೆಗಳು ಮತ್ತು ಸಂಘ-ಸಂಸ್ಥೆಗಳ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

5500 ಮಕ್ಕಳಿಗೆ ಉಚಿತ ಶಿಕ್ಷಣ

ಪಟ್ಲ ಫೌಂಡೇಶನ್ ವಿಶೇಷ ಕಲಾ ಸೇವೆ ಬಗ್ಗೆ ಮಾತನಾಡಿದ ಪತ್ರಕರ್ತರಾದ ನಗರ ರಾಘವೇಂದ್ರ ಅವರು “ಪಟ್ಲ ಫೌಂಡೇಶನ್ ನ ಆಶ್ರಯದಲ್ಲಿ ಹೊಸನಗರ, ಸಾಗರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 5500 ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಹೊಸನಗರದ ಯಕ್ಷಗಾನ ಕಲಾವಿದರಿಗೆ ನಾಲ್ಕು ಆಶ್ರಯ ಮನೆಯನ್ನು ವಿತರಣೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ 15 ಜನ ಕಲಾವಿದರಿಗೆ 30,000 ರೂಪಾಯಿ ಪ್ರೋತ್ಸಾಹ ಧನ, 500 ಮಕ್ಕಳಿಗೆ ಒಂದು ದಿನದ ಪ್ರವಾಸವನ್ನು ಮಾಡಿಸಿದ್ದೇವೆ” ಎಂದರು.

ಹೊಸ ನಗರ ಗಣ್ಯರು ಹಾಜರ್

ರಾಮಕೃಷ್ಣ ವಿದ್ಯಾಸಂಸ್ಥೆಯ ಡಿ.ದೇವರಾಜ್, ಬೆಂಗಳೂರಿನ ಉದ್ಯಮಿಗಳಾದ ಮಾವಿನಕೊಪ್ಪ ಸುರೇಶ್ ಎನ್, ಹೊಸನಗರ ತಾಲ್ಲೂಕಿನ ಆರೋಗ್ಯ ಭಾರತೀಯ ಅಧ್ಯಕ್ಷರು ಹಾಗೂ ಸುವರ್ಣಶ್ರೀ ಕ್ಲಿನಿಕ್ ವೈದ್ಯರಾದ ಡಾ.ಚೈತನ್ಯ ಕಳೂರು, ಸೊಸೈಟಿ ಅಧ್ಯಕ್ಷರಾದ ದುಮ್ಮ ವಿನಯ್, ಎನ್ .ಆರ್.ದೇವಾನಂದ್, ಸಾಹಿತಿಗಳಾದ ಸುಧೀಂದ್ರ ಭಂಡಾರ್ಕರ್, ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಕೆ.ವೆಂಕಟೇಶ್ ಮೂರ್ತಿ, ಗೌತಮ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಕಾರ್ಯಕ್ರಮವನ್ನು ಸುಜಾತ ಸುರೇಶ್ ಅವರು, ಕಾರ್ಯಕ್ರಮದ ನಿರೂಪಣೆಯನ್ನು ಸುದೀಂದ್ರ ಪಂಡಿತ್ ಅವರು ನಡೆಸಿಕೊಟ್ಟರು.

Categories
ಜಿಲ್ಲಾ ವಾರ್ತೆ ತೀರ್ಥಹಳ್ಳಿ ಮಲ್ನಾಡ್ ರಾಜಕೀಯ ಶಿವಮೊಗ್ಗ ಹೊಸನಗರ

ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ ಶುರು!

ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ ಶುರು!
– ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಹೋರಾಟ ಜೋರು
– ಸಮಸ್ತ ಜನತೆಗೆ ಆಹ್ವಾನ ನೀಡಿದ ಸ್ವಾಮೀಜಿ, ಪ್ರಮುಖರು

ನಮ್ಮ ಕ್ಷೇತ್ರ.. ನಮ್ಮ ಹಕ್ಕು..!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಹೊಸನಗರ ವಿಧಾನ ಸಭಾ ಕ್ಷೇತ್ರಕ್ಕಾಗಿ ಹೋರಾಟ ಇದೀಗ ಶುರುವಾಗಿದೆ. ಮೂಲ ಭೂತ ಸೌಕರ್ಯ ಇಲ್ಲದೆ ತಾಲೂಕು ಸತತವಾಗಿ 5 ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತ ಬಂದಿದೆ.
ಹೊಸನಗರ ತಾಲೂಕು ಕೇಂದ್ರವು ಈ ಹಿಂದೆ ವಿಧಾನಸಭಾ ಕ್ಷೇತ್ರದ ಮಾನ್ಯತೆ ಸಹ ಹೊಂದಿತ್ತು. ಅದರೆ ಇಂದು ಎರಡು ಹೋಬಳಿ ಸಾಗರ ಕ್ಷೇತ್ರಕ್ಕೆ ಎರಡು ಹೋಬಳಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಹಂಚಿಕೆಯಾಗಿ ಇಂದಿಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿವೆ. ಈ ಹಿನ್ನಲೆಯಲ್ಲಿ ತಾಲೂಕಿನ ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗಾಶ್ರಮದ ಪೀಠಾಧ್ಯಕ್ಷ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೊಸನಗರ ಪಟ್ಟಣದ ಕೇಂದ್ರ ಸ್ಥಾನದಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ.
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಹಾಗೂ ಮಾಜಿ ಕಿಮ್ಮನೆ ರತ್ನಾಕರ್ ಅವರು ಸಹಾ ಈ ವಿಚಾರವಾಗಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ಹೋರಾಟದ ದನಿ ಇಂದಿನದಲ್ಲ.!

ಹೊಸನಗರ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿರಾವ್ ರವರು ಕ್ಷೇತ್ರ ಮರುಸ್ಥಾಪನೆಗೆ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ನಗರ ಗ್ರಾಮ ಪಂಚಾಯತಿ ಸದಸ್ಯರಾದ ಕರುಣಾಕರ ಶೆಟ್ಟಿಯವರು ತಾಲ್ಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಸೈಕಲ್ ಜಾಥದ ಮೂಲಕ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ.
ಹೋರಾಟದ ಪೂರ್ವಭಾವಿ ಸಭೆಯನ್ನು ಫೆಬ್ರವರಿ 12 ಗುರುವಾರ ಬೆಳಗ್ಗೆ 10: 30 ಗಂಟೆಗೆ ಸರಿಯಾಗಿ ಹೊಸನಗರದ ಶ್ರೀ ಗಾಯತ್ರಿ ಮಂದಿರದಲ್ಲಿ ಮೂಲೆಗದ್ದೆ ಮಠದ ಶ್ರೀಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಎಲ್ಲಾ ಸಂಘ ಸಂಸ್ಥೆಗಳು ಅದರ ಪದಾಧಿಕಾರಿಗಳು, ಎಲ್ಲಾ ಜನಪ್ರತಿನಿಧಿಗಳು, ಮಹಿಳಾ ಸಂಘಗಳು ಹಾಗೂ ತಾಲೂಕಿನ ಸಮಸ್ತ ಜನತೆ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಆಗಮಿಸಿ ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಹಾಗು ಹೋರಾಟದ ಮುಂದಿನ ರೂಪುರೇಷೆ ಕುರಿತು ಚರ್ಚಿಸಲು ಹೋರಾಟ ಸಮಿತಿ ಆಹ್ವಾನ ನೀಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು, ಸಂಘಟನೆಗಳು, ಪ್ರಮುಖರು e ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಕೂಡ ಈ ಹೋರಾಟಕ್ಕೆ ಬೆಂಬಲ ನೀಡಿದೆ.

Categories
Uncategorized ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಶೃಂಗೇರಿ ಹೊಸನಗರ

ವಿಜಯದೇವ್, ವಿಶ್ವನಾಥ್ ಗದ್ದೆಮನೆ ಅವರಿಗೆ ಮಲೆನಾಡು ರತ್ನ ಪ್ರಶಸ್ತಿ

ವಿಜಯದೇವ್, ವಿಶ್ವನಾಥ್ ಗದ್ದೆಮನೆ ಅವರಿಗೆ ಮಲೆನಾಡು ರತ್ನ ಪ್ರಶಸ್ತಿ
– ರಾಜಧಾನಿಯಲ್ಲಿ ಅ.12ರಂದು ಮಲೆನಾಡು ಹಿತರಕ್ಷಣಾ ಸಮಿತಿಯಿಂದ ಪ್ರಶಸ್ತಿ
– ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ವಿನಯ್‌ ಗುರೂಜಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿನ ಮಲೆನಾಡು ಹಿತ ರಕ್ಷಣಾ ಸಮಿತಿಯು ಪ್ರದಾನ ಮಾಡುವ ‘ ಮಲೆನಾಡು ರತ್ನ’ ಪ್ರಶಸ್ತಿಗೆ ತೀರ್ಥಹಳ್ಳಿ ತಾಲೂಕಿನ ಹಿರಿಯ ಸಹಕಾರಿ, ಸಹ್ಯಾದ್ರಿ ಸಂಸ್ಥೆಗಳ ಸಂಸ್ಥಾಪಕರಾದ ಬಸವಾನಿ ವಿಜಯದೇವ ಹಾಗೂ ಯುವ ಉದ್ಯಮಿ,ವಕೀಲರು,ಸಮಾಜ ಸೇವಕರೂ ಆದ ವಿಶ್ವನಾಥ್ ಗದ್ದೆಮನೆಯವರು ಆಯ್ಕೆಗೊಂಡಿದ್ದಾರೆ.
ಅಕ್ಟೋಬರ್ 12ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಡಾ|| ರಾಜಕುಮಾ‌ರ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಜರುಗಲಿರುವ ತನ್ನ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಸಮಾರಂಭದಲ್ಲಿ ಡಿಸಿಎಂ. ಡಿಕೆ ಶಿವಕುಮಾ‌ರ್, ಅವಧೂತ ವಿನಯ ಗುರೂಜಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮಹಾಲಕ್ಷ್ಮಿಪುರ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ| ಆರತಿ ಕೃಷ್ಣ ಭಾಗವಹಿಸುವರು.

ಮಲೆನಾಡ ಹಿರಿಯ ಸಹಕಾರಿ ವಿಜಯ್ ದೇವ್

ಮಲೆನಾಡು ಹಿತ ರಕ್ಷಣಾ ಸಮಿತಿಯು ಪ್ರತಿ ವರ್ಷವೂ ಕೊಡಮಾಡುವ ಮಲೆನಾಡು ರತ್ನ ಪ್ರಶಸ್ತಿಗೆ ತೀರ್ಥಹಳ್ಳಿಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರೂ,ತೀರ್ಥಹಳ್ಳಿ ಸಹ್ಯಾದ್ರಿ ಸಮೂಹ ಸಂಸ್ಥೆಗಳ ಅಧ್ಯಕ್ಷರೂ, ರಾಜ್ಯ ಭೂ ಬ್ಯಾಂಕ್ ನಿರ್ದೇಶಕರೂ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರೂ, ತೀರ್ಥಹಳ್ಳಿ ಭೂ ಬ್ಯಾಂಕ್ ಅಧ್ಯಕ್ಷರೂ ಆದ ಬಸವಾನಿ ವಿಜಯದೇವ್ ಆಯ್ಕೆಗೊಂಡಿದ್ದಾರೆ. ಅವರಿಗೆ ಶುಭಾಶಯಗಳು.

ಸಮಾಜ, ಶಿಕ್ಷಣ ಸೇವೆ ಮೂಲಕ ಜನರ ಮನಗೆದ್ದ ಯುವ ಉದ್ಯಮಿ!

ಮಲೆನಾಡಿನಲ್ಲಿ ವಿಶ್ವನಾಥ್‌ ಗದ್ದೆಮನೆಯವರು ತಮ್ಮ ಸಮಾಜ ಸೇವೆಯ ಮೂಲಕ ಬಡ,ಮಧ್ಯಮ ವರ್ಗದ ಜನರಿಗೆ ಸಹಕಾರಿಯಾಗಿದ್ದು, ಸಾವಿರಾರು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಯುವ ಉದ್ಯಮಿ ವಿಶ್ವನಾಥ್ ಅವರು ಮಲೆನಾಡ ಹೆಮ್ಮೆ. ಅವರಿಗೆ ಪ್ರತಿಷ್ಠಿತ ಮಲೆನಾಡು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

 

 

Categories
Uncategorized ಅಡಿಕೆ-ದರ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ ಹೊಸನಗರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS

ಸರಕು
60009-70800-98096

ಬೆಟ್ಟೆ
62069-69800-70899

ರಾಶಿ
52159-64600-65699

ಗೊರಬಲು
21189-40100-43209

ಹೊಸ ರಾಶಿ
54099-64200-65611