Categories
ಮಲ್ನಾಡ್ ರಾಜಕೀಯ ಹೊಸನಗರ

ಹೊಸನಗರ: ರಸ್ತೆ ಸಂಪೂರ್ಣ ಅಸ್ತವ್ಯಸ್ತ..!!

ಹೊಸನಗರ: ರಸ್ತೆ ಸಂಪೂರ್ಣ ಅಸ್ತವ್ಯಸ್ತ..!!
– ಮರು ಡಾಂಬರೀಕರಣಕ್ಕೆ ಇಟ್ಟ ಹಣ ಏನಾಯ್ತು?
– ಅಪಾಯಕಾರಿಯದಂತಹ ರಸ್ತೆಯಿಂದ ಸಾರ್ವಜನಿಕರಿಗೆ ತೊಂದರೆ

NAMMUR EXPRESS NEWS
ಹೊಸನಗರ ತಾಲೂಕು ತ್ರಿಣಿವೇ ಗ್ರಾಮ ಪಂಚಾಯತ್ ರಾಮಚಂದ್ರಪುರ ಮಠಕ್ಕೆ ಸಂಪರ್ಕವಾಗಿರುವ ರಸ್ತೆ ನೇರಳೆಯಿಂದ ಹೊಳೆಮತ್ತಿ, ಹೊಳೆಮತ್ತಿ – ಇಟ್ಟಕ್ಕಿಯಿಂದ ಬಿಲ್ಲೋಡಿವರೆಗಿನ ರಸ್ತೆಯ ಅಭಿವೃದ್ಧಿ 14 ವರ್ಷಗಳ ಹಿಂದೆ ಪೂರ್ಣಗೊಂಡಿತ್ತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಈ ರಸ್ತೆ 2014ರಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ರಸ್ತೆ ಅಭಿವೃದ್ಧಿಗೆ ಅಥವಾ ಮರು ಡಾಂಬರೀಕರಣಕ್ಕೆ ಆರು ವರ್ಷಕ್ಕೆ ಅವಧಿಯನ್ನು ನಿಗದಿಪಡಿಸಲಾಗಿತ್ತು ಆದರೆ ಹತ್ತು ವರ್ಷಗಳು ಪೂರ್ಣಗೊಂಡಿದ್ದರೂ ಕೂಡ ಯಾವುದೇ ರೀತಿಯ ಡಾಂಬರೀಕರಣ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಒಂದು ಕೋಟಿ ಹಣವನ್ನು ಕೂಡ ಈ ಡಾಂಬರೀಕರಣಕ್ಕಾಗಿ ಮೀಸಲಿಟ್ಟಿದ್ದಾರೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಆದ್ದರಿಂದ ಸ್ಥಳೀಯರು ಕೂಡ ಡಾಂಬರೀಕರಣ ಆಗಬೇಕು ಎಂದು ಅಗ್ರಹಿಸಿದ್ದಾರೆ ಯಾವುದೇ ರೀತಿಯಲ್ಲೂ ಕೂಡ ಅಭಿವೃದ್ಧಿಪಡಿಸುತ್ತಿಲ್ಲ.

ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಮೂರು ವರ್ಷಗಳ ನಂತರ ಕೂಡ ಅಭಿವೃದ್ಧಿ ಮಾಡುತ್ತೇವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು ಇನ್ನೂ ಕೂಡ ಯಾವುದೇ ರೀತಿಯ ರಸ್ತೆ ಡಾಂಬರೀಕರಣ ಮಾಡಿಲ್ಲ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ರೀತಿಯ ಸಮಸ್ಯೆ ಎದುರಾಗಿದೆ. ಎಲ್ಲಾ ರೀತಿಯಲ್ಲೂ ಕೂಡ ಅಧಿಕಾರಿಗಳಿಗೆ, ಶಾಸಕ ಆರಗ ಜ್ಞಾನೇಂದ್ರ ಎಲ್ಲರಿಗೂ ಕೂಡ ಈ ರಸ್ತೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯ ಸಮಸ್ಯೆಗಳು ಸಾರ್ವಜನಿಕರು ಎದುರಿಸುವಂತಹ ಆಗಿದೆ.

ತುಂಬಾ ಅಪಾಯಕಾರಿ ಆದಂತಹ ರಸ್ತೆಯಾಗಿದೆ, ಅದರಲ್ಲೂ ಕಾಡು ಪ್ರಾಣಿಗಳ ಸಂಚಾರ ತುಂಬಾ ಹೆಚ್ಚಾಗಿದೆ. ಸೇತುವೆ ಕೂಡ ಸಂಪೂರ್ಣ ಹದಗೆಟ್ಟಿದೆ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ರೀತಿಯ ನಷ್ಟ ಎದುರಾಗುತ್ತಿದೆ. ಸರಿಯಾದ ಬಸ್ಸಿನ ವ್ಯವಸ್ಥೆ ಕೂಡ ಇಲ್ಲ ಈ ರೀತಿಯ ರಸ್ತೆ ಹದಗೆಟ್ಟಿರುವುದರಿಂದ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಾರ್ವಜನಿಕರು ಪ್ರತಿಯೊಬ್ಬರಿಗೂ ಕೂಡ ಸಮಸ್ಯೆಗಳು ಎದುರಿಸುವಂತಾಗಿದೆ. ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೂ ಕೂಡ ಸ್ಥಳೀಯರಿಂದ ಮಾಹಿತಿಗಳನ್ನು ರವಾನೆ ಮಾಡಲಾಗಿದೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳು ಕೂಡ ನಡೆಯುತ್ತಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್ ಮಾಹಿತಿ ಸುದ್ದಿ ರಾಜ್ಯ ಶಿವಮೊಗ್ಗ ಸಾಗರ ಹಬ್ಬಗಳು ಹೊಸನಗರ

ಸಿಗಂದೂರಲ್ಲಿ ನವರಾತ್ರಿ ಸಂಭ್ರಮ ಶುರು!

ಸಿಗಂದೂರಲ್ಲಿ ನವರಾತ್ರಿ ಸಂಭ್ರಮ ಶುರು!
– ಸೆ. 22ರಿಂದ ಚೌಡಮ್ಮ ದೇವಾಲಯದಲ್ಲಿ ನವರಾತ್ರಿ ರಂಗು
– 9 ದಿನವೂ ವಿವಿಧ ಅಲಂಕಾರ: ಸಾವಿರಾರು ಭಕ್ತರ ಆಗಮನ

NAMMUR EXPRESS NEWS
ಸಾಗರ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ನವರಾತ್ರಿ ಉತ್ಸವ ನೆಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.

ಪ್ರತಿದಿನ ಮುಂಜಾನೆ ದೇವಿಗೆ ಪ್ರಾತಕಾಲ ಪೂಜೆ, ತೈಲಾಭಿಷೇಕ, ಶೈಲಪುತ್ರಿ ಆರಾಧನೆ, ಶುದ್ದಿ ಪುಣ್ಯಾಹ,ಗಣಹೋಮ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ವಿವಿಧ ಧ್ರವ್ಯಗಳಿಂದ ಅಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ ನೆಡೆಯಲಿದೆ. ನವರಾತ್ರಿ ಉತ್ಸವದ ಪ್ರಯುಕ್ತ ದೇವಿಗೆ ಪ್ರತಿನಿತ್ಯ ದುರ್ಗಾ ಹವನ, ಚಂಡಿಕಾ ಹೋಮ, ನವಚಂಡಿಕಾ ಹೋಮ, ಗುರುಗಳ ಆರಾಧನೆ ನೆಡೆಯಲಿದೆ. ಪ್ರತಿನಿತ್ಯ ಮಧ್ಯಾಹ್ನ 12:30ಕ್ಕೆ ನೈವೇದ್ಯ, ರಾತ್ರಿ 7:30 ರಿಂದ ದೀಪೋತ್ಸವ, 8ರಿಂದ ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನೆಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್ ರಾಮಪ್ಪನವರ ನೇತೃತ್ವದಲ್ಲಿ ನಡೆಯಲಿದೆ.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯಲಿದೆ. ನವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳಿಗೆ ವಸತಿ, ದರ್ಶನ, ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್ ತಿಳಿಸಿದ್ದಾರೆ.

Categories
ಕಾರ್ಯಕ್ರಮಗಳು ಕ್ರೀಡಾ ಸುದ್ದಿ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಯುವ ದಸರಾ, ಮಹಿಳಾ ದಸರಾ ರಂಗು!

ಯುವ ದಸರಾ, ಮಹಿಳಾ ದಸರಾ ರಂಗು!
– ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗಿರಗಿಟ್ಲೆ
– ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ/ಕಲಾ ತಂಡಗಳಿಂದ ಅರ್ಜಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ರಂಗು ಜೋರಾಗಿದೆ. ಈ ಬಾರಿ ಯುವುದೇ ಪಕ್ಷ ಭೇದ ಇಲ್ಲದೆ ಸಮಾನವಾಗಿ ದಸರಾ ಆಯೋಜಕರ ಆಯ್ಕೆ ಆಗಿದೆ. ಇದೇ ಮೊದಲು ಎಂಬಂತೆ ಯುವದಸರ / ಮಹಿಳಾ ದಸರಾ ಆಯೋಜಿಸಲಾಗಿದೆ.

ಪುರುಷರಿಗೆ ಮತ್ತು‌ ಮಹಿಳೆಯರಿಗೆ ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗಿರಗಿಟ್ಲೆ ಆಟವನ್ನು ಏರ್ಪಡಿಸಲಾಗಿದೆ, ಆಸಕ್ತರು 9+2 ಜನರ ತಂಡದ ಹೆಸರನ್ನು ಮೊದಲೆ ನೊಂದಾಯಿಸಬೇಕು, ಸೆಪ್ಟೆಂಬರ್ 28, ಭಾನುವಾರ, ಸ್ಥಳ ಕುರುವಳ್ಳಿ ಮಟನ್ ಶಾಪ್ ಎದುರಿನ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ.
ಹೆಸರು ನೊಂದಾಯಿಸಲು ಸಂಪರ್ಕಿಸಿ
ಮಹಿಳೆಯರು: ನಯನ ಶೆಟ್ಟಿ ಹಾಗೂ ಜ್ಯೋತಿ ದಿಲೀಪ್
ಪುರುಷರು: ಶಿವು ಹೊದಲ ಹಾಗೂ ಪ್ರೇಮ್ ಯಡೂರು, ಅಂಜೂರ ಕುಡುಮಲ್ಲಿಗೆ ಇವರಲ್ಲಿ ನೊಂದಾಯಿಸಲು ಕೋರಲಾಗಿದೆ.

ದಸರಾ ಉತ್ಸವ ಸಮಿತಿ: ಸಾಂಸ್ಕೃತಿಕ ಸಮಿತಿ

ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಸಲು ಸಮಿತಿಯು ತೀರ್ಮಾನಿಸಲಾಗಿದೆ. ಕುಶಾವತಿ ನೆಹರು ಪಾರ್ಕ್‌ ನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ/ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಯಕ್ಷಗಾನ ಸೇರಿದಂತೆ ಮತ್ತಿತರ ನೃತ್ಯ ಕಲಾ ಪ್ರಕಾರದ ತಂಡಗಳು / ಕಲಾವಿದರು ಶ್ರೀಮತಿ ಆಶಾ ಡೇನಿಯಲ್‌ (9482009404), ಶ್ರೀ ಶಿವಕುಮಾರ್‌ ಟಿ. ಆರ್.‌ (9663500592) ಇವರಲ್ಲಿ ಹೆಸರು ನೋಂದಾಯಿಸಬೇಕು. ಜಾನಪದ ಸಂಗೀತ, ಶಾಸ್ರ್ತೀಯ ಸಂಗೀತ, ಸುಗಮ ಸಂಗೀತ ಸೇರಿದಂತೆ ಗಾಯನ ಕಾರ್ಯಕ್ರಮ ನೀಡುವ ಕಲಾವಿದರು ಶ್ರೀ ಅಂಬುತೀರ್ಥ ರಾಘವೇಂದ್ರ (7676415042) ಇವರಲ್ಲಿ ಹೆಸರು ನೋಂದಾಯಿಸಬೇಕು. ಕಾರ್ಯಕ್ರಮ ನೀಡಲು ಆಸಕ್ತಿ ಹೊಂದಿದ ಕಲಾ ತಂಡ / ಕಲಾವಿದರು ತಮ್ಮ ಕಲಾಪ್ರಕಾರದ ವಿಡಿಯೋ ತುಣುಕು, ಕಲಾವಿದರ ಮಾಹಿತಿ ಹಾಗೂ ಕಲಾ ಪ್ರಕಾರದ ಮಾಹಿತಿಯನ್ನು ಕಡ್ಡಾಯವಾಗಿ ನೀಡತಕ್ಕದ್ದು. ಹೆಸರು ನೋಂದಾಯಿಸಲು ಕಡೇಯ ದಿನಾಂಕ 23.09.2025. ಕಲಾ ತಂಡಗಳ/ಕಲಾವಿದರ ಆಯ್ಕೆಯ ವಿವರಗಳನ್ನು ದಿನಾಂಕ 24.09.2025ರಂದು ತಿಳಿಸಲಾಗುವುದು. ಗೀತಾ ರಮೇಶ್ , ಜ್ಯೋತಿ ಮೋಹನ್‌, ಚೇತನ್.‌ ಜಿ. ಇವರನ್ನು ಸಂಪರ್ಕಿಸಿ 8618893484.

Categories
ಉಡುಪಿ ಕರಾವಳಿ ಜ್ಯೋತಿಷ್ಯ ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ ಹೊಸನಗರ

ನಿಮ್ಮ ಕಳೆದುಕೊಂಡ ಆಸ್ತಿಯನ್ನು ಮರಳಿ ಪಡೆಯಲು ಈ ಕೆಲಸಗಳನ್ನು ಮಾಡಿ

ನಿಮ್ಮ ಕಳೆದುಕೊಂಡ ಆಸ್ತಿಯನ್ನು ಮರಳಿ ಪಡೆಯಲು ಈ ಕೆಲಸಗಳನ್ನು ಮಾಡಿ
– ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ

NAMMUR EXPRESS NEWS
ಪ್ರತಿಯೊಬ್ಬರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಅಥವಾ ನಿಮಗೆ ತಿಳಿದಿರುವ ವ್ಯಾಪಾರ ಅಥವಾ ವ್ಯಾಪಾರ ಮಾಡುವ ಮೂಲಕ ಸಂಪತ್ತನ್ನು ಗಳಿಸುತ್ತಾರೆ. ಅವರು ಗಳಿಸಿದ ಹಣವನ್ನು ತಮ್ಮನ್ನು ಮತ್ತು ತಮ್ಮ ಮುಂದಿನ ಪೀಳಿಗೆಗೆ ಸಹಾಯ ಮಾಡಲು ಹೂಡಿಕೆ ಮಾಡುತ್ತಾರೆ. ಆದರೆ ಕೆಲವರ ಕುತಂತ್ರದಿಂದ ನಮ್ಮ ಪೂರ್ವಜರು ನಮಗಾಗಿ ಖರೀದಿಸಿ ತಂದಿದ್ದ ಹಲವು ಆಸ್ತಿಗಳನ್ನು ಕಳೆದುಕೊಳ್ಳಬೇಕಾಗಿದೆ. ಮತ್ತು ನಮ್ಮ ಕೆಲವು ವಸ್ತುಗಳು ನಮಗೆ ತಿಳಿಯದೆ ಕಳ್ಳತನವಾಗುತ್ತವೆ.
ಇವೆಲ್ಲವುಗಳಿಗೆ ಕಾರ್ತವೀರ್ಯಾರ್ಜುನ ಹೋಮವೇ ಪರಿಹಾರ. ಕಾರ್ತವೀರ್ಯಾರ್ಜುನ ಹೋಮದ ವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬಹುದು.ಪುರಾಣಗಳ ಪ್ರಕಾರ ಕಾರ್ತವೀರ್ಯಾರ್ಜುನನು ಸಾವಿರ ತೋಳುಗಳನ್ನು ಹೊಂದಿರುವ ರಾಜನಾಗಿ ವಾಸಿಸುತ್ತಿದ್ದನು. ಕೆಲವರು ಅವನನ್ನು ದೇವತೆಯೆಂದು ಪರಿಗಣಿಸುತ್ತಾರೆ. ಈ ಕಾರ್ತವೀರ್ಯಾರ್ಜುನನು ದತ್ತಾತಿರೇಯ ಮಹರ್ಷಿಗಳ ಶಿಷ್ಯರಲ್ಲ ಒಬ್ಬ.

ಕಾರ್ತವೀರ್ಯಾರ್ಜುನನಿಗೆ ಎಲ್ಲಾ ದುಷ್ಟ ಶಕ್ತಿಗಳನ್ನು ನಾಶಮಾಡುವ ಶಕ್ತಿಯಿದೆ. ಆ ಕಾರ್ತವೀರ್ಯಾರ್ಜುನನ ಕೃಪೆಗೆ ಪಾತ್ರರಾಗಲು ಮಾಡುವ ಹೋಮವೇ ಕಾರ್ತವೀರ್ಯಾರ್ಜುನನ ಹೋಮ. ನಿಮ್ಮ ಜನ್ಮ ನಕ್ಷತ್ರಕ್ಕೆ ಅನುಗುಣವಾದ ದಿನದಂದು, ತಿಥಿಯಂದು ಯಾಗಕುಂಡವನ್ನು ಸ್ಥಾಪಿಸಿ ಮತ್ತು ವೈದಿಕರು ಅನೇಕ ವರ್ಷಗಳ ಅನುಭವದೊಂದಿಗೆ ಕಾರ್ತವೀರ್ಯಾರ್ಜುನ ಮಂತ್ರವನ್ನು ಪಠಿಸುವುದು, ಯಾಗಾಗ್ನಿ ಎತ್ತುವುದು ಮತ್ತು ಹೋಮವನ್ನು ಸರಿಯಾಗಿ ನಡೆಸುವುದು ನಮಗೆ ನಿಶ್ಚಿತ ಫಲಿತಾಂಶವನ್ನು ನೀಡುತ್ತದೆ.

ಕಾರ್ತವೀರ್ಯಾರ್ಜುನ ಹೋಮದ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ಅನ್ನಸಂತರ್ಪಣೆ ಮಾಡದೆ ಹೋಮ ಪೂಜೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಪೂಜೆಯ ನಂತರ, ದೇವರಿಗೆ ಅರ್ಪಿಸಿದ ವಸ್ತುಗಳ ಪವಿತ್ರ ಭಸ್ಮ ಮತ್ತು ಹೋಮಕುಂಡದ ಪವಿತ್ರ ಭಸ್ಮವನ್ನು ನಮಗೆ ಪ್ರಸಾದವಾಗಿ ನೀಡಲಾಗುತ್ತದೆ.

ಕಾರ್ತವೀರ್ಯಾರ್ಜುನ ಹೋಮವನ್ನು ಮಾಡುವುದರ ಮುಖ್ಯ ಉದ್ದೇಶವೆಂದರೆ ಕಳೆದುಹೋದ ನಮ್ಮ ಸ್ಥಳೀಯ ಆಸ್ತಿ ಮತ್ತು ಆಸ್ತಿಯನ್ನು ಮರಳಿ ಪಡೆಯುವುದು. ವೇದಗಳನ್ನು ತಿಳಿದ ವೈದಿಕರು ಈ ಹೋಮವನ್ನು ಮಾಡುವುದರಿಂದ, ಇತರರು ನಮಗೆ ಮೋಸ ಮಾಡಿದ ಆಸ್ತಿಗಳು ಮತ್ತು ನಮಗೆ ತಿಳಿಯದೆ ನಾವು ಕಳೆದುಕೊಂಡ ಅಥವಾ ಕದ್ದ ವಸ್ತುಗಳು ಶೀಘ್ರದಲ್ಲೇ ನಮಗೆ ಮರಳುತ್ತವೆ. ಕಳೆದುಹೋದ ವಸ್ತುಗಳು, ಆಸ್ತಿ ಇತ್ಯಾದಿಗಳನ್ನು ನಮಗೆ ಹಿಂತಿರುಗಿಸಲು ಸಾಧ್ಯವಾಗದಿದ್ದರೂ, ಅದು ನಮಗೆ ಅನುಗುಣವಾದ ಸಂಪತ್ತನ್ನು ಒದಗಿಸುತ್ತದೆ. ಅದೇ ರೀತಿ, ಕೆಲವು ಕುಟುಂಬಗಳಲ್ಲಿ ಕೆಲವು ಸದಸ್ಯರು ಚಿಕ್ಕ ವಯಸ್ಸಿನಲ್ಲಿಯೇ ಕಣ್ಮರೆಯಾಗುತ್ತಾರೆ ಅಥವಾ ವಿವಿಧ ಕಾರಣಗಳಿಂದಾಗಿ ಪ್ರತ್ಯೇಕತೆ ಉಂಟಾಗುತ್ತದೆ.
ಕಾರ್ತವೀರ್ಯಾರ್ಜುನ ಹೋಮವು ಶಕ್ತಿಯುತವಾದ ಹೋಮ ಪೂಜೆಯಾಗಿದ್ದು, ಅಂತಹ ಜನರನ್ನು ಅವರ ಕಳೆದುಹೋದ ಸಂಬಂಧಗಳೊಂದಿಗೆ ಮತ್ತೆ ಒಂದುಗೂಡಿಸುತ್ತದೆ.

ಒಂದು ವೇಳೆ ಯಾರಾದರೂ ನಿಮಗೆ ತಿಳಿಯದೆ ಮೋಸವನ್ನು ಮಾಡಿ ಆಸ್ತಿಯನ್ನು ತೆಗೆದುಕೊಂಡಿದ್ದರೆ, ಯಾರಾದರೂ ನಿಮ್ಮ ವಿರುದ್ಧ ಆಸ್ತಿಯ ವಿಚಾರವಾಗಿ ಕೋರ್ಟ್ ಅಲ್ಲಿ ಕೇಸ್ ಹಾಕಿದ್ದರೆ ಹಾಗೂ ಅದರಿಂದ ನಿಮಗೆ ಏನಾದರೂ ನ್ಯಾಯ ದೊರಕುತ್ತಿಲ್ಲ ಎಂದರೆ ಕಾರ್ತವೀರ್ಯಾರ್ಜುನ ಮಂತ್ರದಿಂದ ನೀವು ಕಳೆದುಕೊಂಡ ಆಸ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು.

ಕಾರ್ತವೀರಾರ್ಜುನ ಮಂತ್ರ

ಓಂ ಕಾರ್ತವೀರ ಖಲದ್ವೇಷೀಕೃತ ವೀರಂ ಸಂತೋಬಲಿ ಸಹಸ್ರಬಾಹೋ ಘೋ ರಕ್ತವಾಸಾಧನಧರಿ, ರಕ್ತಗಂಧೋರಕ್ತಮಾಲೋರಾಜಾನ‌ುರಭೀ ಪದ) ಓ೦ ಕಹ ಕಹ ಕಾರ್ತವೀರಂ ಕನಕ ದೇದೀಪ್ಯಗಾತ್ರಂ ಕ್ಲಾಂ ಕ್ಲೋಂ ಕ್ಲೈಂ ಹೂಂ ಕೌಂಕ: ಹೋ ಹೌಂ ಪ್ಲಂ ಪ್ಲಂ ಖುಖಂ ಶ್ರೀ ಕಾರ್ತವೀರಾರ್ಜುನ ಬಾಹು ಬಲಾಯ ಸಹಸ್ರ ಬಾಹು ಪ್ರಚಂಡ ವೀರಾಯ ಮಾಂ ರಕ್ಷ ರಕ್ಷ ನಮಃ ಸ್ವಾಹಾ ||

ಕಾರ್ತವೀರ್ಯಾರ್ಜುನ ಸ್ತೋತ್ರ ಅಥವಾ ಕರ್ತ ವೀಯಾರ್ಜುನ ದ್ವಾದಶ ನಾಮ ಸ್ತೋತ್ರವು ಶಕ್ತಿಯುತವಾದ ಸ್ತೋತ್ರವಾಗಿದ್ದು, ಕದ್ದ, ತಪ್ಪಿದ ಅಥವಾ ಕಳೆದುಹೋದ ವಸ್ತುಗಳನ್ನು

ಮರುಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಭಗವಾನ್ ವಿಷ್ಣುವಿನ ಸುದರ್ಶನ ಚಕ್ರದ ಅವತಾರವಾದ ಕಾರ್ತ ವೀರ್ಯಾರ್ಜುನನು ಹೇಹಯ ರಾಜವಂಶದ ರಾಜನಾಗಿದ್ದನು. ಕಾರ್ತವೀರ್ಯಾರ್ಜುನ ಸ್ತೋತ್ರದ ಸಾಹಿತ್ಯ

ಓಂ ಕಾರ್ತವೀರ್ಯಾರ್ಜುನೋ ನಾಮ ರಾಜ ಬಾಹು ಸಹಸ್ರವಾನ್ ಥಾಸ್ಯ ಸ್ಮರಣ ಮಾತ್ರೇಣ

ಕಾರ್ತವೀರ್ಯಾರ್ಜುನನಿಗೆ ನಮಸ್ಕಾರಗಳು, ಅವನನ್ನು ನೆನಪಿಸಿಕೊಂಡರೆ, ಸಂಭವಿಸಿದ ನಷ್ಟವು ಸಿಗುತ್ತದೆ.

ಕರ್ತ ವೀರ್ಯಃ, ಖಲ ದ್ವೇಷಿ, ಕೃತ, ವೀರಯೋ ಸುತೋ, ಬಲಿ, ಸಹಸ್ರ ಬಹು, ಶತ್ರುಘ್ನ, ರಕ್ತವಾಸ ಧನುರ್ಧರ

ಕರ್ತ ವೀರ, ದುಷ್ಟರ ದ್ವೇಷಿ, ಕೃತ ವೀರ್ಯನ ಮಗ, ಬಲಿಷ್ಠ ಸಹಸ್ರಾರು, ಶತ್ರುಗಳನ್ನು ಕೊಲ್ಲುವ, ರಕ್ತಸಿಕ್ತ ಯುದ್ಧಗಳಲ್ಲಿ ವಾಸಿಸುವ ಬಿಲ್ಲು ಹಿಡಿದವನು.

ರಕ್ತ ಗಂಧೋ, ರಕ್ತ ಮಾಲ್ಯ, ರಾಜಾ, ಸ್ಮರ್ತು‌, ಅಭೀಷ್ಟದಾ, ದಸಾಯಿತಾನಿ ನಾಮಾನಿ ಕರ್ತಾ ವೀರಸ್ಯಯಾ ಪಾದೇತ್, ಸಂಪದ್ ಸ್ಥಾತ್ರ ಜಯಂತೇ ಜನ ಸ್ಥಾತ್ರ ವಾಸಮಗತ, ಅನಯಥಾಯಾಸು ದೂರಸ್ಥಂ ಕ್ಷೇಮ ಲಾಭ ಯುತಂ ಪ್ರಿಯಂ ರಕ್ತದ ವಾಸನೆಯುಳ್ಳವನು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ರಕ್ತದ ಮಾಲೆಯನ್ನು ಧರಿಸಿದವನು.

ಈ ಕಾರ್ತವೀರ್ಯಾರ್ಜುನ ಮಂತ್ರವನ್ನು 5 ಸಾವಿರ ಬಾರಿ ಜಪಿಸಬೇಕು. 108 ಸಲ ಪಂಚದಾರದಲ್ಲಿ ಹೋಮ ಮಾಡಿದರೆ ಶರೀರವು ಶುದ್ದಿಯಾಗುತ್ತದೆ. ನೆನೆಸಿದ ಅಕ್ಕಿz ನೆನೆಸಿದ ಅವಲಕ್ಕಿ, ಹಸಿ ಕಡಲೆ ಕಾಳು, ಗೋಧಿಯ ರೊಟ್ಟಿ, ಜೇನುತುಪ್ಪ ಕಲಿಸಿದ ಹಾಲಿನಲ್ಲಿ ಪ್ರತಿದಿನವೂ 108 ಬಾರಿ ಹೋಮ ಮಾಡಬೇಕು. ಕೆಂಪು ಹೂವಿನಿಂದ ಮೂರು ದಿನಗಳ ಕಾಲ ಈ ರೀತಿಯಾಗಿ ಹೋಮವನ್ನು ಮಾಡಿದರೆ ಕಳೆದುಕೊಂಡ ಆಸ್ತಿ ಮತ್ತೆ ಹಿಂತಿರುಗಿ ಬರುತ್ತದೆ.

Categories
ಅಡಿಕೆ-ದರ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಲ್ನಾಡ್ ಮಾಹಿತಿ ಸುದ್ದಿ ಶಿವಮೊಗ್ಗ ಶೃಂಗೇರಿ ಸಾಗರ ಹೊಸನಗರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು?

NAMMUR EXPRESS NEWS

ಸರಕು
50069-92696-89240

ಬೆಟ್ಟೆ
55299-66899-65319

ರಾಶಿ
46009-60499-60899

ಗೊರಬಲು
19010-38069

Categories
ಹೊಸನಗರ

ಶ್ರೀ ನಾಗೇಂದ್ರ ಸ್ವಾಮಿ ದೇಗುಲದಲ್ಲಿ ನಾಗರಪಂಚಮಿ ಜಾತ್ರೋತ್ಸವ..!

ಶ್ರೀ ನಾಗೇಂದ್ರ ಸ್ವಾಮಿ ದೇಗುಲದಲ್ಲಿ ನಾಗರಪಂಚಮಿ ಜಾತ್ರೋತ್ಸವ..!
– ಜುಲೈ 29 ರಂದು ನಾಗರ ಪಂಚಮಿಯ ವಿಶೇಷ ಪೂಜೆ

NAMMUR EXPRESS NEWS
ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಾಗರಪಂಚಮಿಯ ಜಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಭಕ್ತ ಮಹಾಶಯರು ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಜುಲೈ 29 ರಂದು ಮಂಗಳವಾರದಂದು, ಶ್ರೀ ಸ್ವಾಮಿಗೆ ನಾಗರ ಪಂಚಮಿ ಅಂದು ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಮುಜರಾಯಿ ಅಧಿಕಾರಿಗಳು ಹೊಸನಗರ ತಾಲೂಕು, ವ್ಯವಸ್ಥಾಪಕ ಸಮಿತಿ, ಅರ್ಚಕರು, ಸರ್ವ ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಾಗರಹಳ್ಳಿ ಸ್ವಾಮಿಯ ವಿಶೇಷ ಪೂಜೆಗೆ ಸರ್ವರಿಗೂ ಕೂಡ ಸ್ವಾಗತವನ್ನು ಕೋರಿದ್ದಾರೆ.

Categories
ಹೊಸನಗರ

ರಸಗೊಬ್ಬರ ಬೆಲೆ ಏರಿಕೆ: ರಿಪ್ಪಿನಪೇಟೆಯಲ್ಲಿ ರಸ್ತೆ ತಡೆ

ರಸಗೊಬ್ಬರ ಬೆಲೆ ಏರಿಕೆ: ರಿಪ್ಪಿನಪೇಟೆಯಲ್ಲಿ ರಸ್ತೆ ತಡೆ 
– ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ
– ಸಾಗರ-ಹೊಸನಗರ ಕ್ಷೇತ್ರದ ಯುವ ಕಾಂಗ್ರೆಸ್ ಹೋರಾಟ

NAMMUR EXPRESS NEWS
ರಿಪ್ಪನ್‌ಪೇಟೆ( ಹೊಸನಗರ): ಕೇಂದ್ರದ ಬಿಜೆಪಿ ಸರ್ಕಾರ ರಸಗೊಬ್ಬರ ಬೆಲೆ ಏರಿಸಿರುವುದನ್ನು ವಿರೋಧಿಸಿ ಸೋಮವಾರ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಮಾತನಾಡಿ, ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಗೊಬ್ಬರ, ಗ್ಯಾಸ್ ಇಂಧನ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುವಂತಾಗಿದೆ. ಈ ಕೂಡಲೇ ಕೇಂದ್ರ ಸರ್ಕಾರ ಬೆಲೆ ಇಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೊಸನಗರ-ಸಾಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸ ಚಂದ್ರಪ್ಪ, ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ ಮಳವಳ್ಳಿ, ಸದ್ದಾಂ ದೊಡ್ಮನೆ, ಶಾಸಕರ ಆಪ್ತ ಸಣ್ಣಕ್ಕಿ ಮಂಜು, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಮುಖಂಡರಾದ ಡಿ.ಈ.ಮಧುಸೂದನ್, ಆಶೀಫ್‌ಭಾಷಾ, ಎನ್.ಚಂದ್ರೇಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಸಾಕಮ್ಮ, ಪ್ರಕಾಶಪಾಲೇಕರ್, ಗಣಪತಿ ಗವಟೂರು, ಬಿ.ಎಸ್.ಎನ್.ಎಲ್. ಶ್ರೀಧರ, ನವೀನ್‌ ಕೆರೆಹಳ್ಳಿ, ಹರ್ಷಕುಮಾರ್, ಉಬೇದುಲ್ಲಾ ಹೊಸನಗರ, ನವೀನ ಹಾರೋಹಿತ್ತಲು, ಖಲೀಲ್ ಷರೀಫ್‌ ಗಾಳಿಬೈಲು, ಮೋಹಿದ್ದೀನ್ ರಿಪ್ಪನ್‌ಪೇಟೆ, ಪ್ರತಿಭಟನೆಯ ನಂತರ ಉಪತಹಶೀಲ್ದಾರ್ ಗೌತಮ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Categories
ಹೊಸನಗರ

ಹುಲಿಕಲ್ ಘಾಟ್ ರಸ್ತೆ ಜಾಮ್ ಜಾಮ್..!

ಹುಲಿಕಲ್ ಘಾಟ್ ರಸ್ತೆ ಜಾಮ್ ಜಾಮ್..!
– ಹೊಸನಗರ, ಕರಾವಳಿ ಸಂಪರ್ಕ ಬೆಸೆಯುವ ಘಾಟಿ
– ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವರೇ?

NAMMUR EXPRESS NEWS
ಮಳೆಗಾಲ ಎಂದರೆ ಘಾಟಿಗಳಲ್ಲಿ ಪ್ರಯಾಣ ಅಪಾಯಕಾರಿ… ಮರಗಳು ಅಡ್ಡಲಾಗಿ ಬೀಳುವುದು, ಗುಡ್ಡ ಕುಸಿತವಾಗುವುದು, ಅದರ ನಡುವೆ ಭಾರೀ ಗೂಡ್ಸ್ ವಾಹನಗಳು ಸಂಚಾರಿಸುವ ಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಕೆಟ್ಟು ನಿಂತರೆ ರಾತ್ರಿಯೆಲ್ಲಾ ಬಹುದೂರದ ಊರಿಗೆ ಹಾಗೂ ಆಸ್ಪತ್ರೆಗಳಿಗೆ ನೂರಾರು ಬಸ್ಸುಗಳಲ್ಲಿ ಓಡಾಡುವ ಜನರ ಸ್ಥಿತಿ ಹೇಳತೀರದು.
ಸೋಮವಾರ ರಾತ್ರಿ ಸುಮಾರು ಹನ್ನೊಂದು ಘಂಟೆ ಸುಮಾರಿಗೆ ಭಾರೀ ವಾಹನವೊಂದು ಮಧ್ಯ ರಸ್ತೆಯಲ್ಲಿ (ದೇವಸ್ಥಾನದ ಹತ್ತಿರದ ತಿರುವು )ಕೆಟ್ಟು ನಿಂತು ರಸ್ತೆ ಜಾಮ್ ಆದ ಪರಿಣಾಮ ನೂರಾರು ವಾಹನಗಳು ರಸ್ತೆ ಮದ್ಯೆ ನಿಲ್ಲುವಂತಾಗಿ ಸಂಚಾರ ಅಸ್ತವ್ಯಸ್ತವಾಗಿ ಅಲ್ಲಿಯವರೆಗೂ ರಸ್ತೆ ಮಧ್ಯೆ ನಿಂತ ಪ್ರಯಾಣಿಕರ ಪಾಡು ಹೇಳತೀರದು.ಪ್ರಸ್ತುತ ಹುಲಿಕಲ್ ಘಾಟಿಗೆ ಮುಂಚಿತವಾಗಿ ಒಂದು ಚೆಕ್ ಪೋಸ್ಟ್ ಇದೆ. ಹಾಗೆಯೇ ಮುಗಿದ ತಕ್ಷಣ ಹೊಸಂಗಡಿಯಲ್ಲಿ ಚೆಕ್ ಪೋಸ್ಟ್ ಇದೆ.
ಆದರೆ ಇಷ್ಟೆಲ್ಲಾ ಅವ್ಯವಸ್ಥೆ, ಸಾವಿರಾರು ಪ್ರಯಾಣಿಕರು ರಾತ್ರಿಯೆಲ್ಲಾ ಪರದಾಡು ವಂತಾದರೂ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ ಎಂಬುದು ನೊಂದ ಪ್ರಯಾಣಿಕರ ಮತ್ತು ಸ್ಥಳೀಯರ ಪ್ರಶ್ನೆ.ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚುವರಿ ಸಿಬ್ಬಂದಿಗಳನ್ನು ರಾತ್ರಿ ಪಾಳಯಕ್ಕೆ ನೇಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಅಗ್ರಹ.

ವರದಿ: ಹೆಚ್. ವಾಸಪ್ಪ

Categories
ಹೊಸನಗರ

ಜೇನುಕಲ್ಲಮ್ಮ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ

ಜೇನುಕಲ್ಲಮ್ಮ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ
– ಐತಿಹಾಸಿಕವಾಗಿ ಪ್ರಸಿದ್ಧಿಯನ್ನು ಪಡೆದ ದೇವಸ್ಥಾನ
– ರಾಘವೇಂದ್ರ ಅವರಿಂದ 108 ಶಾಶ್ವತ ಮೆಟ್ಟಿಲು ನಿರ್ಮಾಣಕ್ಕೆ ಶಿಲಾನ್ಯಾಸ
– ಹೊಸನಗರ ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ

NAMMUR EXPRESS NEWS
ಹೊಸನಗರ: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಅಮ್ಮನ ಘಟ್ಟ ಕೂಡ ಒಂದು. ಹೊಸನಗರ ತಾಲ್ಲೂಕು ಕೋಡೂರು ಗ್ರಾಮದಲ್ಲಿರುವ ನಾಡಿನ ಇತಿಹಾಸ ಪ್ರಸಿದ್ದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಒಂದು ಸುಂದರ ತಾಣ. ಇದೀಗ ಈ ದೇವಾಲಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಅರಣ್ಯದ ನಡುವೆ ಇರುವ ಬಂಡೆಗಳ ಗುಹೆಯೊಂದರಲ್ಲಿ ರೇಣುಕಾಂಬೆಯು ಜೇನುಕಲ್ಲಮ್ಮ ಎಂಬ ಹೆಸರಿನಲ್ಲಿ ನೆಲೆ ನಿಂತಿದ್ದಾಳೆ. ಜೇನುಗಳು ಗೂಡುಕಟ್ಟಿಕೊಂಡಿರುವ ಕಲ್ಲು ಬಂಡೆಗಳ ನಡುವೆ ದೇವಿ ನೆಲೆಸಿರುವುದರಿಂದ ರೇಣುಕಾಂಬೆಯ ಮತ್ತೊಂದು ರೂಪವಾದ ಈ ಅಮ್ಮನಿಗೆ ‘ಜೇನುಕಲ್ಲಮ್ಮ’ ಎಂಬ ಹೆಸರು.
ಹೊಸನಗರ ತಾಲ್ಲೂಕು ಕೋಡೂರು ಗ್ರಾಮದಲ್ಲಿರುವ ನಾಡಿನ ಇತಿಹಾಸ ಪ್ರಸಿದ್ದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ದೇವಿಯ ಗರ್ಭಗುಡಿಗೆ ನಿರ್ಮಿಸಲು ಉದ್ದೇಶಿಸಿರುವ 108 ಶಾಶ್ವತ ಮೆಟ್ಟಿಲು ನಿರ್ಮಾಣಕ್ಕೆ ಶಿಲಾನ್ಯಾಸ ಇತ್ತೀಚಿಗೆ ನೆರವೇರಿಸಲಾಯಿತು.
ನಾಲ್ಕು ಮಠಗಳ ಸ್ವಾಮೀಜಿಗಳ ಸಾನಿಧ್ಯ ಹಾಗೂ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ. ಅಲ್ಲದೆ ವೃದ್ಧರು, ವಿಶೇಷಚೇತನರಿಗೆ ದೇವಿಯ ದರ್ಶನಕ್ಕೆ ಅನುಕೂಲವಾಗಲೆಂದು ಲಿಫ್ಟ್ ವ್ಯವಸ್ಥೆ ಮಾಡಲಾಗಿದ್ದು ಇದರ ವೆಚ್ಚವನ್ನು ಬಿ. ಸ್ವಾಮಿರಾವ್ ಅವರ ಪತ್ನಿ ಜೇನುಕಲ್ಲಮ್ಮನ ಭಕ್ತರಾದ ಶ್ರೀಮತಿ ಪುಣ್ಯವತಿ ಅವರು ಭರಿಸಲಿದ್ದಾರೆ. ವೀರೇಶ್ ಆಲವಳ್ಳಿ, ಬಿ ವೈ ರಾಘವೇಂದ್ರ ,ಸುರೇಶ್ ಸ್ವಾಮಿ ರಾವ್ ಅವರು ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Categories
ಹೊಸನಗರ

ರಾಜಕೀಯ ಮುಖಂಡರಾದ, ಆರ್ಯ ಈಡಿಗ ಸಂಘದ ಕಾರ್ಯದರ್ಶಿ, ಲೇಖನ ಮೂರ್ತಿ ಇನ್ನಿಲ್ಲ!

ರಾಜಕೀಯ ಮುಖಂಡರಾದ, ಆರ್ಯ ಈಡಿಗ ಸಂಘದ ಕಾರ್ಯದರ್ಶಿ, ಲೇಖನ ಮೂರ್ತಿ ಇನ್ನಿಲ್ಲ!

– ಮುಂಬಾರ್ ಸೊಸೈಟಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾಗಿದ್ದ ಲೇಖನ ಮೂರ್ತಿ ಇಂದು ನಿಧನ!
– ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಧೀಮಂತ

NAMMUR EXPRESS NEWS
ಹೊಸನಗರ ತಾಲೂಕು ಆರ್ಯ ಈಡಿಗ ಸಂಘದ ಕಾರ್ಯದರ್ಶಿಗಳು, ಮುಂಬಾರ್ ಸೊಸೈಟಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಹಾಗೂ ರಾಜಕೀಯ ಮುಖಂಡರು ಆದ ಲೇಖನ ಮೂರ್ತಿ(71) ಸಾವಂತೂರ್ ಅವರು ಮಾ. 31ರಂದು (ಇಂದು) ಬೆಳಗಿನ ಜಾವ 3 ಘಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಕಳೆದ ಹತ್ತು ವರ್ಷಕ್ಕೂ ಹೆಚ್ಚು ಕಾಲ ಹೊಸನಗರ ತಾಲೂಕು ಆರ್ಯ ಈಡಿಗ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯಾಗಿದ್ದು, ತಾಲೂಕಿನ ಮುಂಬಾರ್ ಗ್ರಾಮದ ಸಾವಂತೂರಿನ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಮಾ.31 ಅಂದರೆ ಇಂದು ಅವರ ಸ್ವಂತ ಊರು ಸಾವಂತೂರಿನಲ್ಲಿ ನಡೆಸಲಾಗುತ್ತದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಆತ್ಮಕ್ಕೆ ದೇವರು ಚಿರ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಪರಮಾತ್ಮ ನೀಡಲಿ.