Categories
ಹೊಸನಗರ

ಹೊಸನಗರ ತಾಲೂಕಿನಲ್ಲಿ ರಾಮೋತ್ಸವ!

ಹೊಸನಗರ ತಾಲೂಕಿನಲ್ಲಿ ರಾಮೋತ್ಸವ!
– ಗರ್ತಿಕೆರೆ, ಸುಳುಗೋಡು, ಯಡೂರು, ಹುಲಿಕಲ್, ಮಾಸ್ತಿಕಟ್ಟೆಯಲ್ಲಿ ಸಂಭ್ರಮ

NAMMUR EXPRESS NEWS
ಹೊಸನಗರ ತಾಲೂಕಿನಲ್ಲಿ ರಾಮೋತ್ಸವವನ್ನು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಭ್ರಮ ಕಂಡಿತು. ಗರ್ತಿಕೆರೆ, ಸುಳುಗೋಡು, ಯಡೂರು, ಮಾಸ್ತಿಕಟ್ಟೆ, ಹುಲಿಕಲ್,ಮುಂತಾದ ಕಡೆಗಳಲ್ಲಿ ಸಂಭ್ರಮ ಕಂಡು ಬಂತು.

Categories
ಹೊಸನಗರ

ನಗರ ಮಾರಿಕಾಂಬ ಜಾತ್ರೆ ಸಂಭ್ರಮ ಶುರು!

ನಗರ ಮಾರಿಕಾಂಬ ಜಾತ್ರೆ ಸಂಭ್ರಮ ಶುರು!
– ಜ.23 ರಿಂದ 27ರವರೆಗೆ ಜಾತ್ರ ಮಹೋತ್ಸವ
– ಜಾತ್ರೆಯ ಪ್ರಯುಕ್ತ ವಿಶೇಷ ಮನೋರಂಜನಾ ಕಾರ್ಯಕ್ರಮ
– ಜಾತ್ರೆಗೆ ಬನ್ನಿ: ಸರ್ವರನ್ನು ಸ್ವಾಗತಿಸಿದ ಸಮಿತಿ

NAMMUR EXPRESS NEWS
ನಗರ: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಮಾರಿಕಾಂಬ ದೇವಿ ಜಾತ್ರೆಯನ್ನು ದಿನಾಂಕ 23-01-2024 ರ ಮಂಗಳವಾರದಿಂದ 27-01-2024 ರ ಶನಿವಾರದವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ಹಮ್ಮಿಕೊಳ್ಳಲಾಗಿದೆ. ಜಾತ್ರೆಯ ಪ್ರಯುಕ್ತ ವಿಶೇಷ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಜ.23 ರ ಮಂಗಳವಾರ ರಾತ್ರಿ 10 ರಿಂದ ಬತ್ತದ ಗದ್ದೆ ಮೈದಾನದಲ್ಲಿ ಕೃಷ್ಣ ಅರ್ಜುನ ಯಕ್ಷಗಾನ ನಡೆಯಲಿದೆ. ಜ.24 ರ ಬುಧವಾರ ರಾತ್ರಿ ಹತ್ತರಿಂದ ಮಲೆನಾಡಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀರಾಮ್ ಬಳಗ ಪುತ್ತೂರು, ಶ್ರೀಜಿತ್ ಸರಳಾಯ ಹಾಗೂ ಧನುಷ್ ಇವರಿಂದ ಕಾರ್ಯಕ್ರಮ ನಡೆಯಲಿದೆ. ಜ.25 ರ ಗುರುವಾರ ರಾತ್ರಿ 10 ರಿಂದ ಮನೆ ಒಕ್ಲ್ ಎಂಬ ನಾಟಕ ನಡೆಯಲಿದೆ. ಜ.26 ರ ಶುಕ್ರವಾರ ರಾತ್ರಿ ಹತ್ತರಿಂದ ಲೈವ್ ಮ್ಯೂಸಿಕ್ ನೈಟ್ ಆರ್ಕೆಸ್ಟ್ರಾ ನಡೆಯಲಿದೆ.

ನೂರಾರು ಅಂಗಡಿ, ಆಟಿಕೆ!

ಜಾತ್ರೆ ಪ್ರಯುಕ್ತ ನೂರಾರು ಅಂಗಡಿಗಳು ಆಗಮಿಸಲಿವೆ. ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.

Categories
ಹೊಸನಗರ

ಹೊಸನಗರದಲ್ಲಿ ಕೃಷಿ ಮೇಳದ ರಂಗು!

ಹೊಸನಗರದಲ್ಲಿ ಕೃಷಿ ಮೇಳದ ರಂಗು!
– ಕೃಷಿ ಪರಿಕರಗಳು ಕೃಷಿ ನಾವಿನ್ಯತೆಗಳ ಪ್ರಯೋಗ
– ಅತ್ಯಂತ ಯಶಸ್ವಿ ಕಾರ್ಯಕ್ರಮ: ನೀವು ಭೇಟಿ ನೀಡಿ
– ಜೆಸಿಐ ಹೊಸನಗರ, ಡಿಸಿಸಿ ಬ್ಯಾಂಕ್, ಕಿಲಂಬಿ ಸಂಸ್ಥೆ ಸಹಯೋಗ: ಪ್ರಾಣೇಶ್ ಕಾಮಿಡಿಗೆ ಜನರ ಫಿದಾ

NAMMUR EXPRESS NEWS
ಹೊಸನಗರ: ಹೊಸನಗರದಲ್ಲಿ ಜನವರಿ 12ರಿಂದ 14ರ ವರೆಗೆ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳ ಇದೀಗ ಅನೇಕ ಹೊಸತನಗಳಿಗೆ ಸಾಕ್ಷಿಯಾಗಿದೆ. ಕೃಷಿ ಪರಿಕರಗಳು, ಗಿಡಗಳು, ಅಲಂಕಾರಿಕ ವಸ್ತುಗಳು ಹಾಗೂ ಕೃಷಿ ಯಂತ್ರಗಳ ಪ್ರತಿಕ್ಷತೆಗಳು ಇಲ್ಲಿವೆ. ಇನ್ನೂ ಕೃಷಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಲೆನಾಡಿನ ಕೃಷಿಕರಿಗೆ ಇದೊಂದು ಅತ್ಯುತ್ತಮ ಅವಕಾಶವನ್ನ ಹೊಸನಗರ ಜೆ ಸಿ ಐ ಡೈಮಂಡ್ ಹಾಗೂ ಕಿಲಂಬಿ ಗ್ರೂಪ್ ಹಾಗೂ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಮಂದಿ ಮೊದಲ ದಿನ ಜನವರಿ 12ರಂದು ಭೇಟಿ ನೀಡಿದ್ದು ಸಚಿವ ಮಧು ಬಂಗಾರಪ್ಪ ಶಾಸಕರಾದ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ.

ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಂಗಾವತಿ ಪ್ರಾಣೇಶ್ ಅವರ ನಗೆ ಹಬ್ಬ, ಅತ್ಯಂತ ಜನಮನ ಸೆಳೆಯಿತು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಲೆನಾಡಿನ ತಂಡ ಮಾಡಿರುವ ಶಾಖಾಹಾರಿ ಸಿನಿಮಾದ ಪ್ರೊಮೋ ಕೂಡ ಕಂಡುಬಂದಿತ್ತು. ಜೊತೆಗೆ ಇಲ್ಲಿ ರಾಜ್ಯದ ವಿವಿಧ 150ಕ್ಕೂ ಹೆಚ್ಚು ಮಂದಿ ಸ್ಟಾಲ್ ಬಂದಿದೆ. ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಮಲೆನಾಡಿಗರು ಕಣ್ತುಂಬಿಕೊಳ್ಳಲು ಭೇಟಿ ನೀಡಿ ಕೃಷಿಯ ವಿವಿಧ ಮಜಲುಗಳನ್ನ ನೋಡಬಹುದಾಗಿದೆ. ಜ.14ರವರೆಗೆ ಈ ಕೃಷಿ ಮೇಳ ನಡೆಯಲಿದೆ.

ನಮ್ಮೂರ ಎಕ್ಸ್ಪ್ರೆಸ್ ಕೂಡ ಈ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತದೆ.

Categories
ಹೊಸನಗರ

ಜ.12,13,14ರಂದು ಹೊಸನಗರದಲ್ಲಿ ಕೃಷಿ ಮೇಳ

ಜ.12,13,14ರಂದು ಹೊಸನಗರದಲ್ಲಿ ಕೃಷಿ ಮೇಳ
– ಮಲೆನಾಡ ಕೃಷಿ ಕ್ಷೇತ್ರದ ಅನಾವರಣ
– ಟೀಂ ಆತ್ರೇಯ ಅವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ: ಶಾಖಾಹಾರಿ ಚಲನಚಿತ್ರದ ಸಾಂಗ್ ರಿಲೀಸ್

NAMMUR EXPRESS NEWS
ಹೊಸನಗರ: ಜೆಸಿಐ ಹೊಸನಗರ ಡೈಮಂಡ್, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ಹೊಸ ನಗರದ ನೆಹರೂ ಮೈದಾನದಲ್ಲಿ ಜನವರಿ 12,13,14ರಂದು 3 ದಿನಗಳ ಕಾಲ ‘ಸುಗ್ಗಿ ಹಬ್ಬ-2024’ ರಾಜ್ಯಮಟ್ಟದ ಕೃಷಿ ಮೇಳ ‘ವನ್ನು ಆಯೋಜಿಸಿದೆ. ಜ.12ರ ಸಂಜೆ 5 ಗಂಟೆಗೆ ಡಿಸಿಸಿಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಕೃಷಿ ಮೇಳವನ್ನು ಉದ್ಘಾಟಿಸುವರು. ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಗತಿಪರ ರೈತರನ್ನು ಸನ್ಮಾನಿಸುವರು.

ಶಾಸಕ ಆರಗ ಜ್ಞಾನೇಂದ್ರ ನಿವೃತ್ತ ಸೈನಿಕರನ್ನು ಗೌರವಿಸುವರು ತೋಟಗಾರಿಕಾ ಕುಲಪತಿ ಆರ್.ಸಿ. ಜಗದೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುಧೀರ್ ಜಿ.ಎನ್. ಎಂ.ಎಂ. ಪರಮೇಶ್, ಅಡಿಕೆ ಮಾರಾಟ ಸಹಕಾರ ಸಂಘ ನಿ., ಅಧ್ಯಕ್ಷ ಡಿ.ವಿ.ವಿನಯ್ ಕುಮಾರ್, ಮಾಮ್ ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಶಿಮುಲ್ ನಿರ್ದೇಶಕ ವಿದ್ಯಾಧರ ಹೆಚ್.ಎಸ್.ಡಿಆರ್‌ಸಿಎಸ್ ವ್ಯವಸ್ಥಾಪಕ ನಿರ್ದೇಶಕ ಜಿ.ವಾಸುದೇವ್, ಕ್ಲಾಸ್ ಒನ್ ಕಂಟ್ರಾಕ್ಟರ್ ಸಿ.ವಿ. ಚಂದ್ರಶೇಖರ್, ಪ.ಪಂ.ಮುಖ್ಯಾಧಿಕಾರಿ ಮಾರುತಿ, ಕೀಳೆಂಬಿ ಮೀಡಿಯಾ ಎಂ.ಡಿ. ರಾಜೇಶ್ ಕೀಳಂಬಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜ.12ರ ಸಂಜೆ ಸಭಾಕಾರ್ಯಕ್ರಮದ ನಂತರ ಗಂಗಾವತಿ ಪ್ರಾಣೇಶ್ ತಂಡದಿಂದ ”ನಗೆಹಬ್ಬ” ಹಾಗೂ ಜನವರಿ 13ರ ಸಂಜೆ ಐದು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಇದೇ ವೇದಿಕೆಯಲ್ಲಿ ಶಾಖಾಹಾರಿ ಚಿತ್ರತಂಡದಿಂದ ಚಲನಚಿತ್ರದ ಸಾಂಗ್ ರಿಲೀಸ್ ಕೂಡ ನಡೆಯಲಿದೆ.

ಟೀಂ ಆತ್ರೇಯ ಅವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಜರುಗುವುದು ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಾಜಿ ಸಚಿವ ಹರತಾಳು ಹಲಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜ.14ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೃಷಿ ವಿಚಾರ ಗೋಷ್ಟಿ ಜರುಗುವುದು. ಹೊಸನಗರ ಜೆಸಿಐ ಡೈಮಂಡ್ ಅಧ್ಯಕ್ಷ ಜೆಸಿ ಮಧುಸೂದನ ನಾವಡ ಮತ್ತು ಪದಾಧಿಕಾರಿಗಳು ಸರ್ವರನ್ನೂ 3 ದಿನಗಳ ಕೃಷಿ ಮೇಳಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

Categories
ಹೊಸನಗರ

ಒಟ್ಟಿಗೇ ವಿಧಿವಶರಾದ ವೃದ್ಧ ದಂಪತಿಗಳು!

ಒಟ್ಟಿಗೇ ವಿಧಿವಶರಾದ ವೃದ್ಧ ದಂಪತಿಗಳು!
– ಸಾವಿನಲ್ಲೂ ಒಂದಾದ ಅಜ್ಜ-ಅಜ್ಜಿ
– ಹೊಸನಗರದಲ್ಲಿ ಘಟನೆ

NAMMUR EXPRESS NEWS
ಹೊಸನಗರ : – ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ಪತಿಯ ಸಾವಿನ ಸುದ್ದಿ ತಿಳಿಯುತಿದ್ದಂತೆ ಪತ್ನಿಯೂ ನಿಧನರಾಗಿದ್ದಾರೆ. ತುಂಬು ಜೀವನ ನಡೆಸಿದ ಸತಿ-ಪತಿಗಳಿಬ್ಬರು ಸಾವಿನಲ್ಲೂ ಒಂದಾಗಿರುವ ಚಿತ್ರಣವೊಂದು ಕಂಡು ಬಂದಿದೆ. ಹೊಸನಗರ ತಾಲೂಕು ಮುಂಬಾರು ಗ್ರಾಮ ಪಂಚಾಯಿತಿ ಸಾವಂತೂರು ಗ್ರಾಮ ಸಾಲತೋಡೆಯ ಕೃಷಿ ಕಾರ್ಮಿಕ ದಂಪತಿಗಳಾದ 90ರ ಹರೆಯದ ಹೊಳೆಯಪ್ಪ ಹಾಗೂ 84ರ ಗಂಗಮ್ಮ ದಂಪತಿಗಳು ಗುರುವಾರ ಬೆಳಗಿನ ಜಾವ ಒಂದು ಗಂಟೆಯ ಅಂತರದಲ್ಲಿ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ.

ಪತಿ ಹೊಳೆಯಪ್ಪನವರು ಅನಾರೋಗ್ಯದಿಂದ ಮೃತಪಟ್ಟ ವಿಷಯ ತಿಳಿಯುತಿದ್ದಂತೆ ಪತ್ನಿ ಗಂಗಮ್ಮ ತೀವ್ರ ಹೃದಯಘಾತದಿಂದ ಗಂಡನೊಂದಿಗೆ ಇಹಲೋಕ ತ್ಯಜಿಸಿರುವುದಾಗಿ ತಿಳಿದು ಬಂದಿದೆ. ಮೃತ ದಂಪತಿಗಳು, ಇಬ್ಬರು ಗಂಡು ಮತ್ತು ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ. ಮೃತ ದಂಪತಿಗಳ ನಿಧನಕ್ಕೆ ಮುಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

Categories
ಹೊಸನಗರ

ಮಂಗನ ಕಾಯಿಲೆಗೆ ಒಂದು ಬಲಿ

ಮಂಗನ ಕಾಯಿಲೆಗೆ ಒಂದು ಬಲಿ
– ಹೊಸನಗರ ತಾಲೂಕಿನ ಯುವತಿ ಮರಣ!
– ಜಿಲ್ಲೆಯಾದ್ಯಂತ ಮಂಗನ ಕಾಯಿಲೆ ಹಾವಳಿ! ಹುಷಾರ್!

ಹೊಸನಗರ : ಹೆಚ್ಚುತ್ತಿರುವ ಕೊರೋನಾ ಹಾವಳಿಯ ನಡುವೆ ಅಲ್ಲಲ್ಲಿ ಮಂಗನ ಕಾಯಿಲೆಯೂ ಶುರುವಾಗಿ ಜನ ಕಂಗಾಲಾಗುವಂತಾಗಿದೆ. ಇದೀಗ ಈ ಕಾಯಿಲೆಗೆ ಹೊಸನಗರ ತಾಲೂಕಿನ 18 ವರ್ಷದ ಯುವತಿ ಬಲಿಯಾಗಿದ್ದಾಳೆ. ತಾಲೂಕಿನ ಅರಮನೆಕೊಪ್ಪದ ಗ್ರಾಮದ ವ್ಯಾಪ್ತಿಯ ಯುವತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್‌, ಎರಡನೇ ಬಾರಿ ಆರ್‌ಟಿಸಿಪಿಆ‌ರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.

ಇದುವರೆಗೂ ಮೂರು ಕೆ ಎಫ್ ಡಿ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೊಸನಗರ ತಾಲೂಕಿನಲ್ಲಿ ಈ ವರ್ಷದ ಮೊದಲ ಪ್ರಕರಣ ಇದಾಗಿದ್ದು, ಅರಮನೆಕೊಪ್ಪ ವ್ಯಾಪ್ತಿಯಲ್ಲಿ ಈ ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಈ ಬಾರಿ ಶರಾವತಿ ಹಿನ್ನೀರು ತಗ್ಗಿದ ಹಿನ್ನೆಲೆ ಪ್ರಾಣಿಗಳ ಮೂಲಕ ವೈರಸ್‌ಗಳು ವರ್ಗಾವಣೆಯಾಗಿರಬಹುದು ಎನ್ನಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಜನತೆ ಜಾಗೃತರಾಗಿರುವಂತೆ ಕೋರಲಾಗಿದೆ.

Categories
ಹೊಸನಗರ

ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ

ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ
– ಹೊಸನಗರದ ನಾಗರಹಳ್ಳಿಯಲ್ಲಿರುವ ಐತಿಹಾಸಿಕ ಕ್ಷೇತ್ರ
– ಜ.28 ಹಾಗೂ 31ರಂದು ಧಾರ್ಮಿಕ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ಹೊಸನಗರ: ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸರ್ಪದೋಷ ನಿವೃತ್ತಿಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ ಆಶ್ಲೇಷ ಬಲಿ, ನಾಗದರ್ಶನ, ಶ್ರೀ ಸ್ವಾಮಿಗೆ ವಿಶೇಷ ಪೂಜೆಯು ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಜ.28 ಹಾಗೂ 31ರಂದು ನಡೆಯಲಿದೆ. ದಿನಾಂಕ :28-01-2024 ರಂದು ಸರ್ಪ ಸಂಸ್ಕಾರ ಕ್ರಿಯಾರಂಭ, ದಿನಾಂಕ : 31-01-2024 ರಂದು ಪ್ರತಿಷ್ಠಾಹೋಮ ಪೂರ್ವಕ ಹರಕೆ ನಾಗಶಿಲಾ ಪ್ರತಿಷ್ಠೆ ಆಶ್ಲೇಷ ಬಲಿ, ಬ್ರಹ್ಮಚಾರಿ ಬ್ರಾಹ್ಮಣ ಆರಾಧನೆ, ಶ್ರೀ ಸ್ವಾಮಿಗೆ ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ, ನಾಗದರ್ಶನ ಏರ್ಪಡಿಸಿಸಲಾಗಿದೆ.

ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ. ನಾಗರಹಳ್ಳಿ ಇವರು ಸಮಸ್ತ ಭಕ್ತರನ್ನು ಆಹ್ವಾನಿಸಿದ್ದಾರೆ.

ಸಂಪರ್ಕ ವಿಳಾಸ
ಶ್ರೀ ಬಿ. ಲಕ್ಷ್ಮೀನಾರಾಯಣಭಟ್, ಆರ್ಚಕರು, ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನ, ನಾಗರಹಳ್ಳಿ-ಕಡಸೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ – 577 436
ಮೊ : 9481210962, 9481770962
ಕಿರಣ್ ಎಲ್. ಭಟ್ 8762289079

Categories
ಹೊಸನಗರ

ಹೊಸ ನಗರದ ಲೋಹಿತ್ ನಾಯ್ಕ್ ಅವರಿಗೆ ಮಹತ್ವದ ಹುದ್ದೆ!

ಹೊಸ ನಗರದ ಲೋಹಿತ್ ನಾಯ್ಕ್ ಅವರಿಗೆ ಮಹತ್ವದ ಹುದ್ದೆ!
– ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ನೇಮಕ
– ಕನ್ನಡ ನಾಡು ನುಡಿಯ ಸೇವೆಗೆ ಸಿದ್ಧವಾದ ಹುಡುಗ

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ಬುಕ್ಕಿವರೆಯ ಯುವಕ ಲೋಹಿತ್ ನಾಯ್ಕ್ ಅವರು ಕರ್ನಾಟಕ ರಾಜ್ಯ ಯುವ ರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ್ದು, ರಾಜ್ಯ ಅಧ್ಯಕ್ಷರಾದ ಸುನೀಲ್ ಎಂ.ಎಸ್., ರಾಜ್ಯ ಸಹ ಸಂಚಾಲಕರಾದ ಭರತ ಚಿತ್ರದುರ್ಗ ಅಧಿಕಾರ ಹಸ್ತಾಂತರ ಮಾಡಿದರು.

ಯುವ ಸಂಘಟಕನಿಗೆ ಒಲಿದ ಹುದ್ದೆ

ಹೊಸನಗರ ತಾಲೂಕಿನ ಬುಕ್ಕಿವರೆ ಸಮೀಪದ ಲೋಹಿತ್ ನಾಯ್ಕ್ ಅವರು ಹಳ್ಳಿಯಿಂದ ತಮ್ಮ ಸಂಘಟನೆ ಆರಂಭಿಸಿದ್ದು, ಈಗಾಗಲೇ ರಕ್ತದಾನಿಯಾಗಿ ಸೇವೆ ಮಾಡಿದ್ದಾರೆ. ದರ್ಶನ್ ತೂಗುದೀಪ ಅಭಿಮಾನಿ ಬಳಗ ಹೊಸನಗರ ತಾಲೂಕು ಅಧ್ಯಕ್ಷರಾಗಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಕನ್ನಡ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅಕ್ಕಸಾಲಿಗದ್ದೆ ದೋಬೈಲ್ ಗ್ರಾಮದ ತಂದೆ ಸುರೇಶ ನಾಯ್ಕ್, ತಾಯಿ ರೇಣುಕಾ ನಾಯ್ಕ್ ಅವರ ಪುತ್ರ.

ಹೊಸನಗರ ತಾಲೂಕಿನ ಅನೇಕ ಜನಪರ ಹೋರಾಟಗಳಲ್ಲಿ, ಸಾಮಾಜಿಕ ಕೆಲಸಗಳಲ್ಲಿ, ಸಂಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಯುವಕರಿಗೆ ಸ್ಪಂದನೆ ನೀಡಿ ಪ್ರೇರಣೆಯಾಗುತ್ತಿರುವ ಲೋಹಿತ್ ನಾಯ್ಕ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟನೆಗಳನ್ನು ಕಟ್ಟುವ ಮತ್ತು ಬಲಪಡಿಸುವ ಜವಾಬ್ದಾರಿ ಮತ್ತು ಇಚ್ಛೆಯನ್ನು ಹೊಂದಿದ್ದಾರೆ. ನೂತನವಾಗಿ ಆಯ್ಕೆಯಾದ ಇವರಿಗೆ ಸ್ನೇಹಿತರು ಮತ್ತು ಬಂಧುಗಳು ಶುಭಾಶಯಗಳನ್ನು ಕೋರಿದ್ದಾರೆ

Categories
ಶಿವಮೊಗ್ಗ ಹೊಸನಗರ

ಯಡೂರು ಸೊಸೈಟಿಗೆ ದಾಖಲೆಯ ಸಾಧನೆ ಹೆಜ್ಜೆ!

ಯಡೂರು ಸೊಸೈಟಿಗೆ ದಾಖಲೆಯ ಸಾಧನೆ ಹೆಜ್ಜೆ!
– ಯಡೂರು ಸೊಸೈಟಿ ನೂತನ ಕಟ್ಟಡ ಉದ್ಘಾಟನೆ
– ಸಚಿವ ಮಧು ಬಂಗಾರಪ್ಪ, ಆರಗ, ಕಿಮ್ಮನೆ, ಆರ್.ಎಂ ಸಾಥ್
– ಸೊಸೈಟಿ ಸಾಧನೆಗೆ ಗಣ್ಯರ ಮೆಚ್ಚುಗೆ: ಅರ್ಥಪೂರ್ಣ ಕಾರ್ಯಕ್ರಮ

NAMMUR EXPRESS NEWS
ಯಡೂರು /ಹೊಸನಗರ: ಯಡೂರಿನ ಕೃಷಿ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡ ಶನಿವಾರ ಉದ್ಘಾಟನೆಗೊಂಡಿದೆ. ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಿದ್ದು ಈ ಸಂದರ್ಭದಲ್ಲಿ ಪ್ರಮುಖ ನಾಯಕರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ , ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ್ ಗೌಡ ಸೇರಿದಂತೆ ಬಹುತೇಕ ನಾಯಕರು, ಸೊಸೈಟಿ ಅಧ್ಯಕ್ಷರು, ಸ್ಥಳೀಯರು ಹಾಜರಿದ್ದರು. ಇದು ಯಡೂರು ಸೊಸೈಟಿಯ ಸಾಧನೆಗೆ ಮೈಲಿಗಲ್ಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಬಳಿಕ ಶ್ರೀ ಗುತ್ತಿರೇಣುಕಾಂಬ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸೊಸೈಟಿ ಕಟ್ಟಡಕ್ಕೆ ಅಂದಿನ ಸಹಕಾರ ಸಚಿವರು ನನ್ನ ಮಾತನ್ನು ಸ್ವೀಕರಿಸಿ ತಕ್ಷಣ ಹಣ ಮಂಜೂರು ಆದೇಶ ನೀಡಿದ್ದರು. ಅದರಿಂದ ಅನುಕೂಲವಾಗಿದೆ ಎಂದರು. ಆರಗ ಜ್ಞಾನೇಂದ್ರ ಮಾತನಾಡುತ್ತಾ, ವ್ಯವಹಾರವನ್ನು ಸರಿಯಾಗಿ ನೋಡಿಕೊಂಡರೆ ಅದರಿಂದ ಆಗುವ ಅನುಕೂಲಗಳನ್ನು ನಾವೇ ಪಡೆಯಬಹುದು. ಸಾಲ ತೆಗೆದುಕೊಳ್ಳುವ ಮತ್ತು ಕಟ್ಟುವ ಕ್ರಮ ಸರಿಯಾಗಿದ್ದಷ್ಟೂ ಒಳ್ಳೆಯದು ಎಂದಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡರು, ಮೂರು ಲಕ್ಷಗಳವರೆಗೆ ಇದ್ದಂತಹ ಬಡ್ಡಿರಹಿತ ಸಾಲವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ಲಕ್ಷಕ್ಕೆ ಏರಿಸುವ ಜೊತೆಗೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರೈತ ಸಹಕಾರಿ ಯೋಜನೆಗಳನ್ನು ಕಲ್ಪಿಸುವ ಮೂಲಕ ಚುನಾವಣೆಯ ಭರವಸೆಗಳನ್ನು ಈಡೇರಿಸಿದ್ದಾರೆ. ಇವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಜಿಪಂ ಸಿಇಒ ಲೋಖಂಡೆ, ಸೊಸೈಟಿ ಅಧ್ಯಕ್ಷರಾದ ಶಶಾಂಕ್ ಕೊಳವಾಡಿ, ಪ್ರಮುಖರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಎಂ. ಪರಮೇಶ್ವರ್, ಜೆ. ಎನ್ ಸುಧೀರ್, ಡಿಸಿಸಿ ಬ್ಯಾಂಕ್ ಪ್ರಭಾರ ಸಿಇಒ ವಾಸುದೇವ್, ಸುಳುಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರುತಿ ಶೇಷಾದ್ರಿ, ಯಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ್, ಮಾಸ್ತಿಕಟ್ಟೆ ಖೈರಗುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಬಿ. ಕೃಷ್ಣಮೂರ್ತಿ, ನಿರ್ದೇಶಕರಾದ ನಾಗೇಶ್ ಗೌಡ, ಮಂಜುನಾಥ ಹೊಸಗದ್ದೆ, ಟೀಕಪ್ಪ ಗೌಡ ಹುಮ್ಮಡಗಲ್ಲು , ಪುರುಷೋತ್ತಮ ಜಗನಕೊಪ್ಪ, ರಮೇಶ್ ಅಚ್ಚುಮನೆ, ಪ್ರಶಾಂತ ಹಂದಿಗೆಮನೆ, ವಿನೋದ ರಾಜಶೇಖರ ಗಿಣಿಕಲ್ಲು, ಸತ್ಯ ಪ್ರೇಮ ಯೋಗೇಂದ್ರ ಮೇಲಿನಬೈಸೆ, ಸರಸ್ವತಿ ರತ್ನಾಕರ್ ಕೊಳವಾಡಿ, ಯಶೋದ ಚಂದ್ರಶೇಖರ್ ಸುಳಗೋಡು, ಶಿವಕುಮಾರ್ ಎಸ್ ಕ್ಷೇತ್ರ ಅಧಿಕಾರಿಗಳು, ವೃತ್ತಿಪರ ನಿರ್ದೇಶಕರು, ಸೊಸೈಟಿ ಮಾಜಿ ಅಧ್ಯಕ್ಷರಾದ ಮಹೇಶ್ ಮಾಗಲು, ನಿರ್ದೇಶಕರಾದ ಮಹಮ್ಮದ್ ಶರೀಫ್, ಸೊಸೈಟಿ ಸಿಇಒ ಸಂತೋಷ್ ಹೊಸಗದ್ದೆ, ಕೆ ಆರ್ ಚೇತನ,, ವಿಜೇತ್ ಗೌಡ ಕೊಳೂರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಸಹಕಾರ ರಂಗದಲ್ಲಿ ರಾಜಕೀಯ ಮಾಡಬಾರದು

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನೂತನ ಕಟ್ಟಡ ಉದ್ಘಾಟನೆ ಮಾಡಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇನ್ನೂ ರೈತರು ಉಳಿದಿರುವುದಕ್ಕೆ ಕಾರಣವೇ ಈ ಸಹಕಾರಿ ಸಂಘಗಳು. ಜಾಗ ಮಂಜೂರಾತಿಗೆ ಕಾರಣರಾದ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸಹಕಾರವನ್ನು ಸ್ಮರಿಸುತ್ತಾ, ರಾಜಕಾರಣ ಮಾಡದೇ ಸಂಘಗಳನ್ನು ಉಳಿಸಿಕೊಂಡ ಬಂದಿರುವ ಬಗ್ಗೆ, ಈ ಸಂಘಗಳು ಒದಗಿಸುವ ಸಹಕಾರಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಶಾಲಾ ಸೌಲಭ್ಯ ಮತ್ತು ನಿರ್ವಹಣೆಯ ಬಗ್ಗೆಯೂ ಹೆಚ್ಚಿನ ಒತ್ತು ಕೊಡುವುದಾಗಿ ಹೇಳುತ್ತಾ ಶುಭ ಕೋರಿದರು.

Categories
ಹೊಸನಗರ

ಹೊಸನಗರ ಮಾರಿಕಾಂಬಾ ದೇವಿಅದ್ಧೂರಿ ಜಾತ್ರೆ

ಹೊಸನಗರ ಮಾರಿಕಾಂಬಾ ದೇವಿಅದ್ಧೂರಿ ಜಾತ್ರೆ
– ಫೆಬ್ರವರಿ 6ರಿಂದ ಫೆಬ್ರವರಿ 14ರವರೆಗೆ ಜಾತ್ರೆ
– ವಿಶೇಷ ಪೂಜೆ…ಮನರಂಜನೆಗಳ ಹಬ್ಬ

NAMMUR EXPRESS NEWS
ಹೊಸನಗರ: ಹೊಸನಗರ ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬದೇವಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವವನ್ನು 2024ರ ಫೆಬ್ರವರಿ 6ರಿಂದ ಫೆಬ್ರವರಿ 14ರವರೆಗೆ ಅದ್ಧೂರಿಯಾಗಿ ನಡೆಸಲು ಜಾತ್ರಾಸಮತಿ ನಿರ್ಧರಿಸಿದೆ. ಗ್ರಾಮ ದೇವತೆಯಾದ ಶ್ರೀದೇವಿ ಮಾರಿಕಾಂಬ ಅಮ್ಮನವರಿಗೆ ಫೆಬ್ರವರಿ 6ರಂದು ತವರುಮನೆ ಹಳೆಯ ಸಾಗರ ರಸ್ತೆಯ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ವಿಶೇಷ ಪ್ರತಿಷ್ಠಾಪನಾ ಪೂಜೆ ಹಾಗೂ ಫೆಬ್ರವರಿ 14ರಂದು ರಾತ್ರಿ ಗಂಡನ ಮನೆಯಾದ ಮಾರಿಗುಡ್ಡದ ಈ ಮಾರಿಕಾಂಬ ದೇವಸ್ಥಾನದಲ್ಲಿ ರಾತ್ರಿ 12:00 ಗಂಟೆಗೆ ವಿಶೇಷ ವಿಸರ್ಜನಾ ಪೂಜೆಯ ನಂತರ ಜಾತ್ರೆಯು ಸಂಪನ್ನಗೊಳ್ಳಲಿದೆ. ಈ ಅದ್ಧೂರಿ ಜಾತ್ರೆ ಪ್ರಯುಕ್ತ ಮನರಂಜನೆಗಾಗಿ, ಅಮ್ಯೂಸ್ಮೆಂಟ್ ಅವರಿಂದ ಜಾಯಿಂಟ್ ವೀಲ್ ಕೊಲಂಬಸ್ ಬ್ರೇಕ್ ಡ್ಯಾನ್ಸ್, ಡ್ಯೂಮ್ ಡ್ರ್ಯಾಗನ್ ಟ್ರೈನ್ ಮಕ್ಕಳ ರೈಲು ನೃತ್ಯ ಸಂಗೀತ, ನಾಟಕ, ಆರ್ಕೆಸ್ಟ್ರಾ ಮೊದಲಾದ ವಿಶೇಷ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದಾಗಿ ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ಹೊಸನಗರದಲ್ಲಿ ಹೊಸ ವರ್ಷದ ಫೆಬ್ರುವರಿ 6ರ ಮಂಗಳವಾರದಿಂದ ಆರಂಭವಾಗುವ ಪೂಜೆ ಮತ್ತು ಜಾತ್ರೆ, ಫೆಬ್ರವರಿ 14ರ ಬುಧವಾರದವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಶ್ರೀದೇವಿಗೆ ವಿಶೇಷ ಪೂಜೆ ಪುರಸ್ಕಾರ ಸೇವೆಗಳು ನಡೆಯಲಿವೆ.‌ ಜಾತ್ರೆ ಪೂರ್ವಭಾವಿ ಸಮಿತಿಯ ಸಭೆಯು ಡಿ.27ರಂದು ನಡೆದಿದ್ದು ಈ ಮೇಲಿನ ತೀರ್ಮಾನ ಕೈಗೊಂಡಿರುತ್ತಾರೆ. ಈ ಸಭೆಯಲ್ಲಿ ಜಾತ್ರಾ ಸಮಿತಿಯ ಹೆಚ್ ಜಿ ಲಕ್ಷ್ಮಿ, ನಾರಾಯಣ ರಾವ್ ಪಿ, ಮನೋಹರ ಟಿ ಆರ್, ಸುನಿಲ್ ಎಚ್, ಶ್ರೀನಿವಾಸ ಕಾಮತ್ ಎಚ್ಎನ್, ಶ್ರೀಪತಿ ರಾವ್ ಎನ್, ಶ್ರೀಧರ್ ಉಡುಪ ಎನ್, ವಿಜೇಂದ್ರ ಶೇಟ್, ವಾದಿರಾಜ್ ಕೆ ಎಸ್, ಗುರುರಾಜ ಡಿ ಎಂ, ಸದಾಶಿವ ಶೆಟ್ಟಿ ಟಿ ಎನ್, ಪ್ರಕಾಶ್ ಕುಮಾರ ಗೌಡ ಹೆಚ್, ಆರ್ ವಿಜಯಾನಂದ, ನಿತ್ಯಾನಂದ ಎಚ್ ಎಲ್, ದತ್ತಾತ್ರೇಯ ನಾಗರಾಜ, ದತ್ತಾತ್ರೀ ಉಡುಪ ಏವಿ, ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು.