Categories
ದಾವಣಗೆರೆ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ದಾವಣಗೆರೆಯಲ್ಲಿ ಕಾಂಗ್ರೆಸ್, ಚಿತ್ರದುರ್ಗದಲ್ಲಿ ಬಿಜೆಪಿ ಕಮಾಲ್..!

ದಾವಣಗೆರೆಯಲ್ಲಿ ಕಾಂಗ್ರೆಸ್, ಚಿತ್ರದುರ್ಗದಲ್ಲಿ ಬಿಜೆಪಿ ಕಮಾಲ್..!
– ದಾವಣಗೆರೆಯಲ್ಲಿ ಗೆಲುವು ಸಾಧಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ್
– ಕಾಂಗ್ರೆಸ್ ವಿಜಯಮಾಲೆ: ಸಚಿವರ ಪತ್ನಿ ಈಗ ಸಂಸದೆ!
– ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಗೆಲುವಿನ ಮಾಲೆ

NAMMUR EXPRESS NEWS
ದಾವಣಗೆರೆ/ ಚಿತ್ರದುರ್ಗ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯಭೇರಿ ಭಾರಿಸಿದೆ. ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜ್ಯ ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ವಿಜಯವಾಗಿದ್ದು. 42,474 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಗಾಯಿತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿದ್ದು, ಸಿದ್ದೇಶ್ವರ ಈ ಹಿಂದೆ ಕೇಂದ್ರ ಮಂತ್ರಿ ಆಗಿಯೂ ಕೂಡ ಕಾರ್ಯನಿರ್ವಹಿಸಿದ್ದರು. ಇದೀಗ ದಾವಣಗೆರೆ ಮತ್ತೆ ಕಾಂಗ್ರೆಸ್ ಪಾಲಾಗಿದೆ. ಶಾಮನೂರು ಶಿವಶಂಕರಪ್ಪ ಲಿಂಗಾಯಿತ ಸಮುದಾಯದ ಪ್ರಭಾವಿ ರಾಜಕಾರಣಿಯಾಗಿದ್ದು, ದಾವಣಗೆರೆಯಲ್ಲಿ ಮತ್ತೆ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಈ ಮೂಲಕ ಲೋಕಸಭೆ ಹಾಗೂ ವಿಧಾನಸಭೆ ಎರಡರಲ್ಲೂ ಕೂಡ ತಮ್ಮ ಗೆಲುವನ್ನು ಸಾಧಿಸಿದ್ದು, ಒಂದೇ ಕುಟುಂಬದ ಮೂವರಲ್ಲಿ ಇಬ್ಬರು ಶಾಸಕರಾಗಿ, ಮಗ ಮಲ್ಲಿಕಾರ್ಜುನ ಸಚಿವರಾಗಿ, ಸೊಸೆ ಸಂಸದೆಯಾಗಿ ಸೇವೆ ಸಲ್ಲಿಸಲಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರ- 2024

ಪ್ರಭಾ ಮಲ್ಲಿಕಾರ್ಜುನ್ – ಕಾಂಗ್ರೆಸ್ – 6,05,000 ಮತಗಳು
ಗಾಯಿತ್ರಿ ಸಿದ್ದೇಶ್ವರ – ಬಿಜೆಪಿ – 5,65,000 ಮತಗಳು
ವಿನಯ್ ಕುಮಾರ್ ಜಿ. ವಿ ( ಪಕ್ಷೇತರ) 1,25,000 ಮತಗಳು
ಇತರೆ ಪಕ್ಷೇತರರು – 20,746 ಮತಗಳು
ಚಲಾವಣೆಯಾದ ಮತಗಳು – 1, 315,74
ಕಾಂಗ್ರೆಸ್ ಗೆಲುವು 42,474 ಮತ

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಗೆಲುವು

ಚಿತ್ರದುರ್ಗದಲ್ಲಿ ಬಿಜೆಪಿ ಜಯ ಗಳಿಸಿದ್ದು, ಗೋವಿಂದ ಕಾರಜೋಳ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಚಿತ್ರದುರ್ಗದಲ್ಲಿ ಪರಭಾವ ಗೊಂಡಿದ್ದಾರೆ.

Categories
ಉಡುಪಿ ಚಿಕ್ಕಮಗಳೂರು ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಉಡುಪಿ-ಚಿಕ್ಕಮಗಳೂರಲ್ಲಿ ಬಿಜೆಪಿ ಪಾಸ್!

ಉಡುಪಿ-ಚಿಕ್ಕಮಗಳೂರಲ್ಲಿ ಬಿಜೆಪಿ ಪಾಸ್!
– ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಗೆಲುವು
– ಪ್ರಾಮಾಣಿಕ ರಾಜಕಾರಣಿಗೆ ಒಲಿದ ಸಂಸದ ಸ್ಥಾನ
– 1,82,151 ಮತಗಳ ಅಂತರದ ಭರ್ಜರಿ ಗೆಲುವು

NAMMUR EXPRESS
ಉಡುಪಿ/ ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು ಸಂಗಮ ಕ್ಷೇತ್ರ ಉಡುಪಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅಚ್ಚರಿಯ ಗೆಲುವು ದಾಖಲಿಸಿದ್ದಾರೆ. ಕೋಟ ಅವರು ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವವರು. ಹೀಗಾಗಿ ಜನ ಅವರ ಕೈ ಹಿಡಿದಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ಸೋಲುವ ಮೂಲಕ ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಿದೆ. ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು 1,,82,151 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಹಾಲಿ ಸಂಸದೆ ಶೋಭಾ ಅವರ ಮೇಲೆ ಬಿಜೆಪಿ ಕಾರ್ಯಕರ್ತರಿಗೆ ನೆಗೆಟೀವ್‌ ಆದ ಅಭಿಪ್ರಾಯವಿತ್ತು. ಅದೇ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ಶೋಭಾ ಅವರ ಬದಲಿಗೆ ಕೋಟ ಶ್ರೀನಿವಾಸ್‌ ಪೂಜಾರಿಯನ್ನು ಕಣಕ್ಕಿಳಿಸಲಾಗಿತ್ತು. ಆದರೆ ಕೋಟ ಅವರು ಈ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಉಳಿಸಿಕೊಂಡಿದ್ದು, ಜತೆಗೆ ಬಿಲ್ಲವ ಸಮುದಾಯ ಎನ್ನುವ ಕಾರಣಕ್ಕೆ ಜಾತಿ ಲೆಕ್ಕಾಚಾರಗಳು ಈ ಕ್ಷೇತ್ರದಲ್ಲಿ ಹೆಚ್ಚು ವರ್ಕೌಟ್‌ ಆಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾರಿಗೆ ಸೋಲು?

ಕಾಂಗ್ರೆಸ್‌ನಿಂದ ಕೆ.ಜಯಪ್ರಕಾಶ ಹೆಗ್ಡೆ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕ ಪಕ್ಷದ ಅಭ್ಯರ್ಥಿ ಶಬರೀಶ್ ಆರ್. ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೆ. ದಯಾನಂದ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಚಿನ್ ಬಿಕೆ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಮತ್ತು ವಿಜಯಕುಮಾರ್ ಕಣದಲ್ಲಿದ್ದು ಸೋಲು ಕಂಡಿದ್ದಾರೆ.

ಉಡುಪಿ -ಚಿಕ್ಕಮಗಳೂರು ಹಿಂದೇನಾಗಿತ್ತು?

ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಅಂತರ 3,49,599 ಮತಗಳು ಆಗಿತ್ತು.ಕಳೆದ ಲೋಕಸಭೆ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‌ನಲ್ಲಿದ್ದ ಪ್ರಮೋದ್‌ ಮಧ್ವರಾಜ್‌ ಅವರನ್ನು 3,49,599 ಮತಗಳಿಂದ ಸೋಲಿಸಿದ್ದರು. ಶೋಭಾ 7,18,916 ಮತಗಳನ್ನು ಗಳಿಸಿದ್ದರೆ, ಪ್ರಮೋದ್‌ 3,69,317 ಮತ ಗಳಿಸಿದ್ದರು.

ಯಾರಿಗೆ ಎಷ್ಟು ಮತ?

ಬಿಜೆಪಿ ಕೋಟಾ ಶ್ರೀನಿವಾಸ್ ಪೂಜಾರಿ: 6,34,746 ಮತ
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ -4,15,051 ಮತ
ನೋಟಾ- 9213
ಗೆಲುವಿನ ಅಂತರ: 1,82,151 ಮತಗಳ ಅಂತರದ ಭರ್ಜರಿ ಗೆಲುವು

Categories
ಬೆಂಗಳೂರು ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ದೇಶದಲ್ಲೇ ಗಮನ ಸೆಳೆದ ಡಾ.ಮಂಜುನಾಥ್ ಗೆಲುವು!

ದೇಶದಲ್ಲೇ ಗಮನ ಸೆಳೆದ ಡಾ.ಮಂಜುನಾಥ್ ಗೆಲುವು!
– ಡಿಸಿಎಂ ಶಿವಕುಮಾರ್ ಸಹೋದರ ಸುರೇಶ್ ಅವರಿಗೆ ಸೋಲಿನ ಇಂಜೆಕ್ಷನ್
– ಜನರ ಮನಸ್ಸು ಗೆದ್ದ ಡಾಕ್ಟರ್ ರಾಜಕೀಯದಲ್ಲೂ ಗೆದ್ರು!
– ಜನ ಮನಸ್ಸು ಮಾಡಿದ್ರೆ ಏನಾದ್ರು ಆಗುತ್ತೆ ಎನ್ನುವುದಕ್ಕೆ ನಿದರ್ಶನ

NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲೆ ಗಮನ ಸೆಳೆದಿದ್ದ, ಹೈ ವೋಲ್ಟೇಜ್ ಕಣವಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಹೃದಯ ತಜ್ಞ, ಪ್ರಾಮಾಣಿಕ ವ್ಯಕ್ತಿ ಎಂದೆ ಹೆಸರು ಪಡೆದಿರುವ ಸಿಂಪಲ್ ನಾಯಕ ಡಾ. ಮಂಜುನಾಥ್ ಗೆಲುವನ್ನು ಸಾಧಿಸಿದ್ದಾರೆ. ದೇವೇಗೌಡ ಅವರ ಅಳಿಯ ಗೆಲುವು ಸಾಧಿಸಿದ್ದಾರೆ. ಇಲ್ಲಿ ಸೋಲು ಖಚಿತ ಎನ್ನುವ ಸ್ಥಿತಿ ಇತ್ತು. ಏಕೆಂದರೆ ಗ್ರಾಮಾಂತರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಡಿಕೆಶಿ, ಡಿಕೆಸು ತಮ್ಮದೇ ಪ್ರಭಾವ ಹೊಂದಿದ್ದಾರೆ. 1.90 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಇದೀಗ ಭಾರೀ ಚರ್ಚೆ ಸೃಷ್ಟಿ ಆಗಿದೆ.

ಡಿ.ಕೆ.ಶಿವಕುಮಾರ್ ಅವರ ಸಹೋದರ, ಹಾಲಿ ಸಂಸದ, ಡಿಕೆ ಸುರೇಶ್ ಅವರಿಗೆ ಸೋಲಾಗುವ ಮೂಲಕ ಜನ ನಿರ್ಧರಿಸಿದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ. ಮತ ಎಣಿಕೆ ಮೊದಲಿನಿಂದಲೂ ಅಂತರವನ್ನು ಕಾಯ್ದುಕೊಂಡು ಬಂದಿದ್ದ ಮಂಜುನಾಥ್ ಇದೀಗ ಗೆಲುವನ್ನು ಸಾಧಿಸಿದ್ದು, ಎಲ್ಲೆಡೆ ಸಂಭ್ರಮ ವ್ಯಕ್ತವಾಗುತ್ತಿದೆ. ಜೊತೆಗೆ ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿ ಕೂಡ ಬೆಂಗಳೂರು ಗ್ರಾಮಾಂತರ ಹೊರಹೊಮ್ಮಿದೆ. ಡಾ. ಮಂಜುನಾಥ್ ಆರೋಗ್ಯ ತಜ್ಞರಾಗಿ, ಜಯದೇವ್ ಆಸ್ಪತ್ರೆಯ ಮುಖ್ಯಸ್ಥರಾಗಿ ಸಾವಿರಾರು ಜನರಿಗೆ ಅನುಕೂಲವಾಗಿತ್ತು.

ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲಿನ ವಲಯದಲ್ಲಿ ಹೃದಯ ಚಿಕಿತ್ಸೆಗಾಗಿ ಬರುವ ಸಾಮಾನ್ಯ ಜನರನ್ನು ಮಾತನಾಡಿಸಿ ಅವರಿಗೆ ಚಿಕಿತ್ಸೆ ನೀಡುವ ಮೂಲಕ ಸೇವೆ ನೀಡಿದ್ದರು. ಜನ ಸೇವೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ವ್ಯಕ್ತಿಗೆ ಜನ ಕೈಹಿಡಿದಿದ್ದಾರೆ. ಡಿ ಕೆ ಸುರೇಶ್ ಅವರಿಗೆ ಸೋಲಾಗಿದೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ದೇಶವೇ ಈಗ ಸಸ್ಪೆನ್ಸ್!

ದೇಶವೇ ಈಗ ಸಸ್ಪೆನ್ಸ್!
– ಮೋದಿ ಪ್ರಧಾನಿ ಓಕೆ, ಇನ್ನು ಸ್ಪಷ್ಟ ಇಲ್ಲ!
– ಪ್ರಧಾನಿ ರೇಸ್ ಅಲ್ಲಿ ಹೊಸ ಮುಖಗಳು!
– ಈಗ ಜೆಡಿಯು- ಟಿಡಿಪಿ ಕಿಂಗ್ ಮೇಕರ್ ಆಗುತ್ತಾ?
– ನಿತೀಶ್ ಕುಮಾರ್ ಪ್ರಧಾನಿ ಆಗ್ತಾರಾ?
– ಪಕ್ಷೇತರರಿಗೂ ಡಿಮ್ಯಾಂಡ್ ಸೆಟ್ ಆಗುತ್ತಾ?
– ಜೆಡಿಯು, ಟಿಡಿಪಿ ಜತೆ ಕಾಂಗ್ರೆಸ್-ಬಿಜೆಪಿ ಮಾತುಕತೆ
– ಪ್ರಧಾನಿ ಅಭ್ಯರ್ಥಿ ಬದಲಾವಣೆ?

NAMMUR EXPRESS NEWS
ನವದೆಹಲಿ: ದೇಶದ ರಾಜಕೀಯ ಸಸ್ಪೆನ್ಸ್ ಹಂತಕ್ಕೆ ತಲುಪಿದೆ. ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಇಕ್ಕಟ್ಟು ಸೃಷ್ಟಿ ಆಗಲಿದೆ. ಲೋಕಸಭಾ ಚುನಾವಣೆ 2024 ರ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದ್ದು, ಬಿಜೆಪಿಗೆ ಇನ್ನೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಇಂಡಿಯಾ ಮೈತ್ರಿಕೂಟ ಕಸರತ್ತು ಆರಂಭಿಸಿದೆ. ಸದ್ಯ ಎನ್‌ ಡಿಎ ಈ ಪೈಕಿ ಜೆಡಿಯು, ಟಿಡಿಪಿ ಒಟ್ಟು 30 ಕ್ಷೇತ್ರಗಳಲ್ಲಿ ಮುನ್ನಡೆ, ಇಬ್ಬರು ನಾಯಕರ ಜೊತೆಗೆ ಮಾತನಾಡಲು ಕಾಂಗ್ರೆಸ್‌ ನಾಯಕರು ಸಿದ್ದರಾಗಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಬಿಜೆಪಿ 238, ಕಾಂಗ್ರೆಸ್ 97, ಎಸ್‌ಪಿ 33, ಟಿಎಂಸಿ 29, ಡಿಎಂಕೆ 21, ಜೆಡಿಯು 15, ಎಸ್‌ಎಸ್ (ಉದ್ಧವ್ ಠಾಕ್ರೆ ಬಣ) 10, ಎಸ್‌ಎಸ್ ಶಿಂಧೆ 6, ಟಿಡಿಪಿ 16, ವೈಎಸ್‌ಆರ್‌ಸಿಪಿ 4, ಎಎಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಸದ್ಯದ ಸ್ಥಿತಿ ಏನಿದು?

ಎನ್. ಡಿ. ಎ ಒಕ್ಕೂಟ 290, ಇಂಡಿಯಾ ಒಕ್ಕೂಟ 230, ಪಕ್ಷೇತರರು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ಬಿಜೆಪಿ 236 ಸ್ಥಾನ ಪಡೆದಿದೆ.

ಪ್ರಧಾನಿ ರೇಸ್ ಅಲ್ಲಿ ಹೊಸ ಮುಖಗಳು!

ಕಳೆದ ಎರಡು ಅವಧಿಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇತ್ತು. ಆದರೆ ಈಗ ಗೊಂದಲ ಸೃಷ್ಟಿಯಾಗಿದೆ. ಏಕೆಂದರೆ ದೇಶದಲ್ಲಿ ರಾಜಕೀಯ ಭಾರೀ ಟ್ವಿಸ್ಟ್ ಪಡೆದಿದೆ. ನರೇಂದ್ರ ಮೋದಿ ಬಹುತೇಕ ಪಕ್ಕಾ. ಒಂದು ವೇಳೆ ಸರ್ಕಾರ ರಚನೆ ಮಾಡದಿದ್ರೆ ಅಚ್ಚರಿ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್, ಶರದ್ ಪಾವರ್, ಚಂದ್ರಬಾಬು ನಾಯ್ಡು, ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಧಾನಿ ರೇಸ್ ಬಂದಿದೆ.

Categories
ಮಲ್ನಾಡ್ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ರಾಘವೇಂದ್ರ ವಿನ್ನರ್: ವಿಜಯೋತ್ಸವ!

ರಾಘವೇಂದ್ರ ವಿನ್ನರ್: ವಿಜಯೋತ್ಸವ!
– ಶಿವಮೊಗ್ಗದಲ್ಲಿ ರಾಘವೇಂದ್ರ 4ನೇ ಬಾರಿಗೆ ಗೆಲುವು!
– ಗೀತಾ, ಈಶ್ವರಪ್ಪ ಅವರಿಗೆ ಮುಖಭಂಗ
– ಕೇಂದ್ರ ಮಂತ್ರಿಯಾಗುವ ದಾರಿ ಸಲೀಸು!

NAMMUR EXPRESS NEWS
ಶಿವಮೊಗ್ಗ: ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲೇ ಹೈವೋಲ್ಟೇಜ್ ಹಣಾಹಣಿಗೆ ವೇದಿಕೆಯಾಗಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಕೊನೆಗೂ ರಾಘವೇಂದ್ರ 4ನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಭಾರೀ ಸದ್ದು ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಸೋಲಾಗಿದೆ. ಜತೆಗೆ ಇಲ್ಲಿ ಈಶ್ವರಪ್ಪ ಮ್ಯಾಜಿಕ್ ಏನೂ ನಡೆಯದೆ ರಾಘವೇಂದ್ರ ಗೆಲುವು ಸಲೀಸಾಗಿದೆ. ರಾಘವೇಂದ್ರ 1.85,416 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 23 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಪ್ರಮುಖವಾಗಿ ಬಿಜೆಪಿಯ ಹಾಲಿ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ನ ಗೀತಾ ಶಿವರಾಜಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಮತದಾನ ಪೂರ್ವದಲ್ಲಿ ತ್ರಿಕೋನ ಹಣಾಹಣಿ ಲೆಕ್ಕಾಚಾರವಿತ್ತು. ಆದರೆ ಮತದಾನೋತ್ತರ ಚಿತ್ರಣ ಗಮನಿಸಿದರೆ, ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಫೈಟ್ ಏರ್ಪಟ್ಟಿತ್ತು.

ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಮುಖ ನಾಯಕರಿಗೆ ಪ್ರತಿಷ್ಠೆಯಾಗಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಶಿವಮೊಗ್ಗ ಕ್ಷೇತ್ರದ ರಿಸಲ್ಟ್ ಅತ್ಯಂತ ಮಹತ್ವದ್ದಾಗಿತ್ತು. ಪುತ್ರ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತ್ತೋರ್ವ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ, ಇವರ ಕುಟುಂಬದ ವಿರುದ್ದ ಮುನಿಸಿಕೊಂಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.ಈ ಎಲ್ಲ ಕಾರಣಗಳಿಂದ, ಬಿ.ವೈ.ರಾಘವೇಂದ್ರ ಗೆಲುವು ಬಿಎಸ್ವೈ ಕುಟುಂಬಕ್ಕೆ ಸಿಹಿ ತಂದಿದೆ.

ಬಂಗಾರಪ್ಪ ಕುಟುಂಬಕ್ಕೆ ಸತತವಾಗಿ ಸೋಲು!

ರಾಘವೇಂದ್ರ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮುಖಭಂಗವಾಗಿದೆ. ಸಹೋದರಿ ಗೀತಾ ಶಿವರಾಜಕುಮಾರ್ ಅವರಿಗೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಅವರು ಸೋಲು ಕಂಡಿದ್ದಾರೆ. ಗೀತಾ ಶಿವರಾಜಕುಮಾರ್ 2014 ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ಇದೀಗ ಸರಿಸುಮಾರು 10 ವರ್ಷಗಳ ನಂತರ, ಮತ್ತೆ ಚುನಾವಣಾ ಕಣಕ್ಕಿಳಿದಿದ್ದರು.

ಈಶ್ವರಪ್ಪಗೆ ಮುಖಭಂಗ!

ಯಡಿಯೂರಪ್ಪ ಕುಟುಂಬದ ವಿರುದ್ದ ಸಮರ ಸಾರಿ ಬಂಡಾಯ ಸ್ಪರ್ಧೆ ಮಾಡಿರುವ ಕೆ.ಎಸ್.ಈಶ್ವರಪ್ಪ ಸೋತು ಮುಖಭಂಗ ಅನುಭವಿಸಿದ್ದಾರೆ.

ಎಲ್ಲೆಡೆ ವಿಜಯೋತ್ಸವ: ಸಂಭ್ರಮ

ರಾಘವೇಂದ್ರ ವಿಜಯಶಾಲಿಯಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ವಿಜಯೋತ್ಸವ ಕಂಡು ಬಂತು. ನಾಯಕರು, ಮುಖಂಡರು, ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ದೇಶದಲ್ಲಿ ಸುಳ್ಳಾದ ಸಮೀಕ್ಷೆಗಳು..!

ದೇಶದಲ್ಲಿ ಸುಳ್ಳಾದ ಸಮೀಕ್ಷೆಗಳು..!
– ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ಸಮೀಕ್ಷೆಗಳು ಫೇಲ್
– ಜನರ ನಂಬಿಕೆ ಕಳೆದುಕೊಂಡ ಸಮೀಕ್ಷೆಗಳು
– ರಾಜ್ಯದಲ್ಲಿ ಕೂಡ ವಿಧಾನ ಸಭೆಯಲ್ಲಿ ಸುಳ್ಳಾಗಿತ್ತು!

NAMMUR EXPRESS NEWS
ಬೆಂಗಳೂರು/ನವದೆಹಲಿ: ದೇಶದಲ್ಲಿ ಚುನಾವಣಾ ರಾಜಕೀಯದ ಸಮೀಕ್ಷೆ ಈಗ ಸಂಸ್ಥೆಗಳ ವಿಶ್ವಾಸಾರ್ಹತೆ ಇದೀಗ ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ದೇಶದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದ ವಿವರವನ್ನು ನೋಡುವಾಗ ಈಗಾಗಲೇ ಸಮೀಕ್ಷೆಗಳು ಹೇಳಿದಂತೆ ಯಾವುದೇ ಸಮೀಕ್ಷೆ ಕೂಡ ಇಲ್ಲಿ ನಿಜವಾಗಿಲ್ಲ. ಅದೇ ರೀತಿಯಾಗಿ ಬಿಜೆಪಿ ಹಾಗೂ ಎನ್ ಡಿ ಎ, ಯುಪಿಎ ಸರ್ಕಾರಗಳ ಅಂಕಿ ಅಂಶಗಳಲ್ಲಿ ಭಾರಿ ಬದಲಾವಣೆಗಳಾಗಿದ್ದು, ಜನ ಕೊಟ್ಟ ಉತ್ತರ ವಿಭಿನ್ನವಾಗಿದೆ. ದೇಶದಲ್ಲಿ ನಡೆಸಿದ ಒಂದೇ ಒಂದು ನಿಜವಾಗದೇ ಇರುವುದು ಇದೀಗ ವಿಶ್ವಾಸಾರ್ಹತೆಗೆ ಪೆಟ್ಟು ಬಿದ್ದಿದೆ. ಈಗಾಗಲೇ ರಾಜಕೀಯ ವಿಚಾರದಲ್ಲಿ ಈ ಹಿಂದೆ ಕೂಡ ಕರ್ನಾಟಕ ರಾಜಕೀಯದಲ್ಲಿ ಸಮೀಕ್ಷೆಗಳು ಸಂಪೂರ್ಣ ಸುಳ್ಳಾಗಿದ್ದವು. ಈಗ ದೇಶ ರಾಜಕಾರಣದಲ್ಲೂ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ.

ಸಮೀಕ್ಷೆ ಹೇಳಿದ್ದು ಏನು?

ದೇಶ ಹಾಗೂ ರಾಜ್ಯದ ಎಲ್ಲಾ ಚುನಾವಣೆ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಎನ್.ಡಿ. ಎ 350ಕ್ಕೂ ಹೆಚ್ಚು ಸ್ಥಾನ, ಇಂಡಿಯಾ ಒಕ್ಕೂಟ 150, ಇತರೆ 30 ತೋರಿಸಿದ್ದವು.

ಸದ್ಯದ ಸ್ಥಿತಿ ಏನಿದೆ?

ಎನ್.ಡಿ.ಎ -295
ಇಂಡಿಯಾ ಒಕ್ಕೂಟ-227
ಇತರೆ -21

ರಾಜ್ಯದಲ್ಲಿ ಹೇಳಿದ್ದು?

ಬಿಜೆಪಿ-ಜೆಡಿಎಸ್ – 23 ಗರಿಷ್ಠ
ಕಾಂಗ್ರೆಸ್ -5

ಫಲಿತಾಂಶ ಆಗಿದ್ದು?

ಬಿಜೆಪಿ -ಜೆಡಿಎಸ್ -18
ಕಾಂಗ್ರೆಸ್ 10

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಹಾಸನ

ಪೆನ್ ಡ್ರೈವ್ ಪ್ರಜ್ವಲ್​​ಗೆ ಹಾಸನ ಮತದಾರರಿಂದ ಶಿಕ್ಷೆ.!

ಪೆನ್ ಡ್ರೈವ್ ಪ್ರಜ್ವಲ್​​ಗೆ ಹಾಸನ ಮತದಾರರಿಂದ ಶಿಕ್ಷೆ.!
– ಹೀನಾಯ ಸೋಲು: ಶ್ರೇಯಸ್​ ಪಟೇಲ್​ ಇತಿಹಾಸ ಸೃಷ್ಟಿ
– 25 ವರ್ಷದ ರಾಜಕೀಯ ಅಂತ್ಯ: ಜೆಡಿಎಸ್ ಮುಖಭಂಗ

NAMMUR EXPRESS NEWS
ಬೆಂಗಳೂರು: ದೇಶದ ಗಮನ ಸೆಳೆದಿದ್ದ, ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಹಗರಣ ಕೇಂದ್ರ ಸ್ಥಾನವಾಗಿದ್ದ ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಶ್ರೇಯಸ್​ ಪಟೇಲ್​ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸದ್ಯ ಎಸ್​ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್​ ರೇವಣ್ಣ ವಿರುದ್ಧ ಭಾರೀ ಅಂತರದ ಮತಗಳಿಂದ ಗೆಲವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದ ಜನತೆ ಪ್ರಜ್ವಲ್​ಗೆ ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಈ ಮೂಲಕ 25 ವರ್ಷಗಳ ಬಳಿಕ ಹಾಸನದಲ್ಲಿ ಕಾಂಗ್ರೆಸ್​​ ಪಕ್ಷ ಗೆಲುವು ಸಾಧಿಸಿದೆ. ದೇವೇಗೌಡರ ಕುಟುಂಬದ ಬಿಗಿ ಹಿಡಿತದಿಂದ ಹಾಸನ ಕ್ಷೇತ್ರ ಕೈತಪ್ಪಿದೆ. 2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು.

ಬಿಎಸ್ಪಿಯ ವಿನೋದ್ ರಾಜ್ ಕೆ.ಎಚ್ 38,761 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು..2019ರ ಚುನಾವಣೆಯಲ್ಲಿ ಜೆಡಿಎಸ್ ಶೇ.52.92ರಷ್ಟು ಮತಗಳನ್ನು ಪಡೆದಿತ್ತು. 2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 5,09,841 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಜೆಡಿಎಸ್ ಶೇ.44.44ರಷ್ಟು ಮತಗಳನ್ನು ಪಡೆದಿತ್ತು.

Categories
ಉಡುಪಿ ಕರಾವಳಿ ತೀರ್ಥಹಳ್ಳಿ ಮಲ್ನಾಡ್ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ಮಲೆನಾಡು, ಕರಾವಳಿ ಕಮಲ ನಗೆ!

ಮಲೆನಾಡು, ಕರಾವಳಿ ಕಮಲ ನಗೆ!
– ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಗೆಲುವಿನತ್ತ
– ರಾಘವೇಂದ್ರ, ಕೋಟಾ, ಚೌಟ ಗೆಲುವಿನ ಸನಿಹ

NAMMUR EXPRESS NEWS
ಮಂಗಳೂರು
ಬಿಜೆಪಿ ಅಭ್ಯರ್ಥಿ ಚೌಟಗೆ 365969 ಮತ.
ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 278286 ಮತ.
ಜಿಲ್ಲೆಯಲ್ಲಿ ನೋಟಕ್ಕೆ 11600 ಮತ
ಬಿಜೆಪಿ ಅಭ್ಯರ್ಥಿ ಚೌಟ 87683 ಅಂತರದಲ್ಲಿ ಮುನ್ನಡೆ.

ಉಡುಪಿ ಚಿಕ್ಕಮಗಳೂರು

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 4,29,797 ಲಕ್ಷ ಮತ
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಮತ 2,79,353 ಲಕ್ಷ ಮತಗಳು
ಬಿಜೆಪಿಗೆ 150444 ಮತಗಳ ಮುನ್ನಡೆ

ಶಿವಮೊಗ್ಗ

ಬಿ.ವೈ.ರಾಘವೇಂದ್ರ – 414618
ಗೀತಾ ಶಿವರಾಜ್ ಕುಮಾರ್ – 285391
ಕೆ.ಎಸ್.ಈಶ್ವರಪ್ಪ – 15747
ಬಿ.ವೈ.ರಾಘವೇಂದ್ರ 129227 ಮತಗಳ ಮುನ್ನಡೆಯಲ್ಲಿದ್ದಾರೆ.

Categories
ಮಲ್ನಾಡ್ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ

ರಾಘವೇಂದ್ರ ಅವರಿಗೆ 1.30 ಲಕ್ಷ ಮತ ಲೀಡ್: ಗೆಲುವು ಪಕ್ಕಾ!

ರಾಘವೇಂದ್ರ ಅವರಿಗೆ 1.30 ಲಕ್ಷ ಮತ ಲೀಡ್: ಗೆಲುವು ಪಕ್ಕಾ!
– ಗೀತಾ ಶಿವರಾಜ್ ಕುಮಾರ್ ಅವರಿಗೆ ಹಿನ್ನಡೆ
– 15, 747 ಸಾವಿರ ಮತ ಪಡೆದ ಈಶ್ವರಪ್ಪ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವು ಪಕ್ಕಾ ಆಗಿದೆ. ಹದಿಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಬಿ.ವೈ ರಾಘವೇಂದ್ರ ಭಾರಿ 1.30 ಲಕ್ಷ ಮತಗಳ ಅಂತರ ಪಡೆಯುವಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತ ಶಿವಮೊಗ್ಗದ ವಿನೋಬಾನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪರವರ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಸುತ್ತಿನಲ್ಲಿ ಲೀಡ್ ಹೆಚ್ಚಾಗುತ್ತಿರುವುದನ್ನು ಕಂಡು ರಾಘವೇಂದ್ರರನ್ನು ಹೆಗಲ ಮೇಲೆ ಹೊತ್ತು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಬಿ.ವೈ.ರಾಘವೇಂದ್ರ – 414618
ಗೀತಾ ಶಿವರಾಜ್ ಕುಮಾರ್ – 285391
ಕೆ.ಎಸ್.ಈಶ್ವರಪ್ಪ – 15747

ಬಿ.ವೈ.ರಾಘವೇಂದ್ರ 129227 ಮತಗಳ ಮುನ್ನಡೆಯಲ್ಲಿದ್ದಾರೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ರಾಜ್ಯದಲ್ಲಿ 16 ಬಿಜೆಪಿ, 10 ಕಾಂಗ್ರೆಸ್, 2 ಜೆಡಿಎಸ್ ಮುನ್ನಡೆ!

ರಾಜ್ಯದಲ್ಲಿ 16 ಬಿಜೆಪಿ, 10 ಕಾಂಗ್ರೆಸ್, 2 ಜೆಡಿಎಸ್ ಮುನ್ನಡೆ!
– ಕೋಲಾರ ಜೆಡಿಎಸ್, ಉತ್ತರ ಕನ್ನಡ, ತುಮಕೂರು ಬಿಜೆಪಿ ಗೆಲುವು
– ಎನ್ ಡಿಎ 280 ಸ್ಥಾನಗಳಲ್ಲಿ ಮುನ್ನಡೆ.: ಕಾಂಗ್ರೆಸ್ 100 ಸ್ಥಾನಗಳಲ್ಲಿ ಮುನ್ನಡೆ!
– ದೇಶದಲ್ಲಿ ಎನ್. ಡಿ. ಎ 294, ಇಂಡಿಯಾ 228, ಇತರೆ 21
– ಜೆಡಿಯು, ಟಿಡಿಪಿ ಜತೆ ಕಾಂಗ್ರೆಸ್ ಮಾತುಕತೆ: ಪ್ರಧಾನಿ ಅಭ್ಯರ್ಥಿ ಬದಲಾವಣೆ?
– ಗಾಂಧಿನಗರದಲ್ಲಿ ಅಮಿತ್ ಶಾ 5 ಲಕ್ಷ ಅಂತರದಲ್ಲಿ ಗೆಲುವು

NAMMUR EXPRESS NEWS
ನವದೆಹಲಿ: ಕರ್ನಾಟಕದಲ್ಲಿ 16 ಬಿಜೆಪಿ, 10 ಕಾಂಗ್ರೆಸ್, 2 ಜೆಡಿಎಸ್ ಮುನ್ನಡೆ ಸಾಧಿಸಿದೆ. ಎನ್ ಡಿಎ 280 ಸ್ಥಾನಗಳಲ್ಲಿ ಮುನ್ನಡೆ.: ಕಾಂಗ್ರೆಸ್ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈಗಾಗಲೇ ಕೋಲಾರದಲ್ಲಿ ಮಲ್ಲೇಶ್ ಬಾಬು ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದು, ತುಮಕೂರಲ್ಲಿ ಸೋಮಣ್ಣ, ಉತ್ತರ ಕನ್ನಡದಲ್ಲಿ ಕಾಗೇರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಮಂಗಳವಾರ 528 ಸ್ಥಾನಗಳಿಗೆ ಲಭ್ಯವಿರುವ ಪ್ರವೃತ್ತಿಗಳಲ್ಲಿ ಬಹುಮತವನ್ನು ದಾಟಲು 280 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಕೂಡ ಮುನ್ನಡೆಯ ವಿಷಯದಲ್ಲಿ 100ರ ಗಡಿ ದಾಟಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತಿಳಿಸಿವೆ.

ಬೆಳಿಗ್ಗೆ 10:30 ರ ವೇಳೆಗೆ ಬಿಜೆಪಿ 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಗುಜರಾತ್ನ ಸೂರತ್ ಸ್ಥಾನವನ್ನು ಅವಿರೋಧವಾಗಿ ಗೆದ್ದಿದೆ. ಕಾಂಗ್ರೆಸ್ ನೇತೃತ್ವದ ಎನ್ ಡಿಎ ಮೈತ್ರಿಕೂಟವು 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಇದು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಊಹಿಸಿದ್ದಕ್ಕಿಂತ ಉತ್ತಮವಾಗಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮುನ್ನಡೆ ಸಾಧಿಸಿದ್ದರೆ, ಒಡಿಶಾದಲ್ಲಿ ಬಿಜೆಡಿ ಹಿನ್ನಡೆ ಅನುಭವಿಸಿದೆ.